Sunday 14 April 2019

ನನ್ನೊಳಗೂ ಒಂದು ಆತ್ಮವಿದೆ..ಭರವಸೆಯ ಕೈ ಹಿಡಿದು ಇಲ್ಲಿ ತನಕ ಬಂದೆ

ಹೌದು ..ಇದು ಸಕಾಲ..ನನ್ನ ಆತ್ಮಕಥೆ ಬರೆಯಲು ಆರಂಭಿಸಲು..
ಇನ್ನೂ ಮುಂದೆ ಹಾಕಿದರೆ ನನ್ನ ಭಾವಗಳು ಬತ್ತಿ ಹೋದಾವು..ಘಟನೆಗಳು ಮರೆತು ಹೋದಾವು..ನನ್ನದಲ್ಲದ ತಪ್ಪಿಗೆ ಅದೆಷ್ಟು ಶಿಕ್ಷೆ ಅನುಭವಿಸಿರುವೆ... ನನಗೇ ಮರೆತು ಹೋಗುತ್ತಿದೆ..( ಒಂದನ್ನು ಈವತ್ತು ನನ್ನ ಸಹಪಾಠಿಯೊಬ್ಬರು ನೆನಪಿಸಿದರು)ತಮ್ಮ ತಪ್ಪನ್ನು ಮುಚ್ಚಿ ಹಾಕಲು ನನ್ನ ಮೇಲೆ ಅರೋಪ ಹೊರಿಸಿದವರೂ ಅನೇಕ ಮಂದಿ..ಅಲ್ಲೆಲ್ಲ ನನ್ನ ನಿರಪರಾಧಿತ್ವವನ್ನು ಸಾಧಿಸಲು ನನಗೆ ಸಾಧ್ಯವಾಗಿರಲಿಲ್ಲ.. ಆಗ ನನ್ನಲ್ಲೇ ನಾನು ನನ್ನ ಬಡತನಕ್ಕೆ ,ಇನ್ಫ್ಲೂಯೆನ್ಸ್ ದುಡ್ಡು ಇಲ್ಲದ ಬದುಕಿನ ಬಗ್ಗೆ ಎಷ್ಟು ಚಿಂತಿಸಿದೆನೊ ..ಇದರಿಂದ ಪಾರಾಗುವ ಬಗೆಗಾಗಿ ಹಲವಾರು ರಾತ್ರೆಗಳನ್ನು ಚಿಂತಿಸುತ್ತಾ ಕಳೆದಿರುವೆ... ಕೊನೆಗೂ ನಾನು ದ್ವೇಷ ಸಾಧನೆಯ ದಾರಿಯನ್ನು ಬಿಟ್ಟು ಬರವಣಿಗೆ ಅಧ್ಯಯನದ ದಾರಿಯನ್ನು ಹಿಡಿದೆ..ಅವೆಂದೂ ನನಗೆ ಮೊಸಮಾಡಲಿಲ್ಲ..ಕೊನೆಗೂ ನನಗೊಂದು ಅಸ್ಮಿತೆಯನ್ನು ತಂದು ಕೊಟ್ಟವು ..ಆದರೂ ಆಗ ಅನುಭವಿಸಿದ ನೋವು...ಅದನ್ನು ಹೇಗೆ ಹೇಳಲಿ? ಸಾಮಾನ್ಯವಾಗಿ ಹೆಣ್ಣು ಮಕ್ಕಳು ಅತ್ತು ಸಮಾಧಾನ ಮಾಡಿಕೊಳ್ಳುತ್ತಾರೆ.ಗಂಡು ಮಕ್ಕಳು ಬೈದು ಕಿತ್ತಾಡಿ ಸಮಾಧಾನ ತಂದುಕೊಳ್ಳುತ್ತಾರೆ..ಇವೆರಡೂ ನನಗಿರಲಿಲ್ಲ ..ಒಂದಿನ ಗೆದ್ದೇ ಗೆಲ್ಲುತ್ತೇನೆ ಎಂಬ ಭರವಸೆಯೇ ನನ್ನನ್ನು ಕೈ ಹಿಡಿದು ಇಲ್ಲಿ ತನಕ ಕರೆ ತಂದಿದೆ ..

No comments:

Post a Comment