Sunday, 19 November 2017

ದೊಡ್ಡವರ ದಾರಿ 25 ಹೂ ಮನಸಿನ ಹುಡುಗಿ ಸುಮನ್© ಡಾ ಲಕ್ಷ್ಮೀ ಜಿ ಪ್ರಸಾದ
ಸುಮನ್ ಚಿತ್ರ ಒದಗಿಸಿದವರು ವಿದ್ಯಾ  

ಕಾಲೇಜು ಡೇ ಸಮಯದಲ್ಲಿ ತೆಗೆದ ಫೋಟೋವನ್ನು ಗೆಳತಿ ಪೂರ್ಣಿಮಾ ಕಳಹಿಸಿಕೊಟ್ಟಿದ್ದಾರೆ( ಎಡಭಾಗದಿಂದ ಮೊದಲಿನವಳು ಸಲೀಲಾ,ನಂತರ ವೀಣಾ,ಪೂರ್ಣಿಮಾ, ನಾನು,ವಿದ್ಯಾ,ಸಂಧ್ಯಾ,ಸುಮನ್
ದೊಡ್ಡವರ ದಾರಿ25 ಹೂ ಮನಸಿನ  ಹುಡುಗಿ ಸುಮನ್
ದೊಡ್ಡವರು ಎಂದರೆ ವಯಸ್ಸಾದವರು ಮಾತ್ರವಲ್ಲ, ದೊಡ್ಡ ಗುಣವನ್ನು ಪ್ರದರ್ಶಿಸಿದ ಎಳೆಯರೂ ದೊಡ್ಡವರೇ.ಅಂತಹ ಓರ್ವ ಹೂ ಮನಸಿನ ಹುಡುಗಿ ಸುಮನ್.ಃಃಉವರಳಿ ಪರಿಮಳವ ಪಸರಿಸುವ ಮೊದಲೇ ಭಗವಂತನ ಪಾದ ಸೇರಿದ ಪ್ರತಿಭಾನ್ವತೆ ಅವಳು
ಆಗಷ್ಟೇ ಪಿಯುಸಿಯನ್ನು ಮುಗಿಸಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯಲ್ಲಿ ಬಿಎಸ್ ಸಿ ಗೆ ಸೇರಿದ್ದೆ.ಹಾಸ್ಟೆಲ್ ನಲ್ಲಿ ಸೀಟು ಸಿಗದ ಕಾರಣ ಅದೇ ಸಂಸ್ಥೆಯ ಪ್ರೌಢಶಾಲೆಯ ಇಂಗ್ಲಿಷ್ ಮಾಸ್ಟ್ರು  ವೆಂಕಟರಮಣ ಭಟ್ ಮನೆಯಲ್ಲಿ ನಡೆಸುತ್ತಿದ್ದ ಮೆಸ್ ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಅಲ್ಲಿ ನನಗೆ ಸೀಟು ಕೊಡಿಸಿದ ಭೌತ ಶಾಸ್ತ್ರ ಉಪನ್ಯಾಸಕರಾದ ನಮ್ಮ ಸಂಬಂಧಿಕರೂ ಆದ ಗಣಪಯ್ಯ ಭಟ್ ಮಾಡಿ ಕೊಟ್ಟಿದ್ದರು.
ಅಲ್ಲಿ ನನ್ನಂತೆ ಏಳೆಂಟು ಬಡ ಮಧ್ಯಮ ವರ್ಗದಿಂದ ಬಂದ ಕಾಲೇಜು ಓದುವ  ಹುಡುಗಿಯರು ಇದ್ದರು.ಇವರಲ್ಲಿ ವಿದ್ಯಾ ನಾಪೋಕ್ಲು ನಿಂದ ಬಂದ ಹುಡುಗಿ ಎರಡನೇ ವರ್ಷ ಬಿಕಾಮ್ ಓದುತ್ತಿದ್ದು ನಮಗಿಂತ ಒಂದು ವರ್ಷ ಸೀನಿಯರ್ ಆಗಿದ್ದರು.ಸಂಧ್ಯಾ ಮತ್ತು ಸಲೀಲ ನಮಗಿಂತ ಚಿಕ್ಕವರು ಪಿಯುಸಿ ಓದುತ್ತಾ ಇದ್ದರು‌
ನಾನು ಪೂರ್ಣಿಮ,ವೀಣಾ ,ಸುಮನ್ ಪದವಿ ಮೊದಲ ವರ್ಷ ಓದುವ ಹುಡುಗಿಯರು.ನಾನು ವೀಣಾ ಪೂರ್ಣಿಮಾ ವಿಜ್ಞಾನ ಪದವಿಗೆ ಸೇರಿದ್ದರೆ ಸುಮನ್ ಪತ್ರಿಕೋದ್ಯಮ ವಿಭಾಗ ಕ್ಕೆ ಸೇರಿದ್ದಳು.
ಸುಮನ್ ತಂದೆ ತಾಯಿ ಒಳ್ಳೆಯ ಉದ್ಯೋಗದಲ್ಲಿ ಇದ್ದು ಸಾಕಷ್ಟು ಸಿರಿವಂತರಾಗಿದ್ದರು.ವಿದ್ಯಾವಂತರು ಕೂಡ. ಉಳಿದವರೆಲ್ಲ  ಮಧ್ಯಮ ವರ್ಗದವರೇ ಆಗಿದ್ದೆವು.ಒಂದು ಪೆಟ್ಟಿಗೆಯಲ್ಲಿ ನಮ್ಮ ಕೆಲವು ಬಟ್ಟೆ ಬರೆಗಳನ್ನು ತುಂಬಿ ತಂದಿದ್ದ ನಾವುಗಳು
ಸುಮನ್ ಜೊತೆಗೆ ತಂದ ಡನ್ ಲಪ್(?) ಹಾಸಿಗೆಯನ್ನು ಚೆಂದದ ಸೂಟ್ ಕೇಸನ್ನು ನೋಡಿ ನಾವೆಲ್ಲರೂ ಬೆರಗಾಗಿದ್ದೆವು.
ಸಿರಿವಂತರ ಮಗಳಾದರೂ ಸುಮನ್ ಅತ್ಯಂತ ನಿಗರ್ವಿಯಾಗಿದ್ದಳು.ಹಳ್ಳಿ ಹುಡುಗಿಯಾದ ನನಗೆ ಪಟ್ಟಣದ ನಯ ನಾಜೂಕು ತನದ ಬಗ್ಗೆ ತಿಳಿಸಿಕೊಟ್ಟವಳು ಅವಳು.ಹಳ್ಳಿ ಹುಡುಗಿಯಾದ ನನಗೆ ಪೀರಿಯಡ್ ಸಮಯದಲ್ಲಿ ಬಳಕೆ ಮಾಡುವ ಸ್ಯಾನಿಟರಿ ಪ್ಯಾಡ್ ಗಳ ಬಳಕೆ ತಿಳಿದಿರಲಿಲ್ಲ. ಅದನ್ನು ಬಳಕೆ ಮಾಡಲು ಹೇಳಿ ಕೊಟ್ಟ ಸುಮನ್ ನನ್ನನ್ನು ದೊಡ್ಡ ಕಷ್ಟದಿಂದ ಪಾರು ಮಾಡಿದ್ದಳು.ಅಷ್ಟರ ತನಕ ನಾನು ಅನುಭವಿಸಿದ ನೋವು ಅಸಹ್ಯ ಕೆರೆತಗಳ ಬಗ್ಗೆ ಹೇಳಲು ಸಾಧ್ಯವಿಲ್ಲ.
ಸುಮನ್ ತುಂಬಾ ಜಾಣ ವಿದ್ಯಾರ್ಥಿನಿ .ಕಲಿಕೆಯ ಭಾಷಣ,ನಾಟಕ, ಚರ್ಚೆ ಮೂಕಾಭಿನಯ ಮೊದಲಾದ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದು ,ಕಾಲೇಜು ಸೇರಿದ ಕೆಲವೇ ವಾರಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿ ನಿಯಾಗಿ ಗುರುತಿಸಿ ಕೊಂಡಿದ್ದಳು.
ಆಗ ಉಜಿರೆಯಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾಗಿದ್ದ ನಿರಂಜನ ವಾನಳ್ಳಿಯವರು ವಿದ್ಯಾರ್ಥಿಗಳ ಅಭಿವ್ಯಕ್ತಿ ಗಾಗಿ ಭಿತ್ತಿ ಪತ್ರಿಕೆ ನಡೆಸುತ್ತಾ ಇದ್ದರು.ನಮ್ಮ ಸುಮನ್ ಕೂಡ ಅದಕ್ಕೆ ಬರೆಯುತ್ತಾ ಇದ್ದಳು.ನಮ್ಮಲ್ಲೂ ಬರೆಯಲು ಹೇಳಿದ್ದಳು.ಹಾಗೆ ನಾನೂ ಒಂದು ಲೇಖನ (  ಕನ್ನಡದ ಬಗ್ಗೆ ಎಂದು ನೆನಪು)ಬರೆದು ನೀಡಿದೆ.ಅದನ್ನು ತೆಗೆದುಕೊಂಡು ಹೋಗಿ ಅವಳು ಉಪನ್ಯಾಸಕರಿಗೆ ಅಥವಾ ಪತ್ರಿಕೆಯ ಜವಾಬ್ದಾರಿ ಹೊತ್ತಿದ್ದ ಹಿರಿಯ ವಿದ್ಯಾರ್ಥಿಗಳಿಗೆ ನೀಡಿ ಭಿತ್ತಿ ಪತ್ರಿಕೆಯಲ್ಲಿ ಪ್ರಟಸಿಸಲು ಕೋರಿದ್ದಳು.ಆ ಲೇಖನ ಭಿತ್ತಿ ಪತ್ರಿಕೆಯಲ್ಲಿ ಪ್ರಕಟವಾಗಲಿಲ್ಲ .ಆಗ ಅವಳು "ನಿನ್ನ ಲೇಖನ ಚೆನ್ನಾಗಿದೆ ಆದರೆ ಅದು ಕನ್ನಡದ ಬಳಕೆ ಕುರಿತಾಗಿದ್ದು ನವೆಂಬರ್ ತಿಂಗಳಲ್ಲಿ ಆಗಿದ್ದರೆ ಭಿತ್ತಿ ಪತ್ರಿಕೆಯಲ್ಲಿ ಹಾಕುತ್ತಿದ್ದರು" ಎಂದು ಸಮಾಧಾನ ಹೇಳಿದ್ದಳು.
ಅವಳು ಶ್ರೀಮಂತ ಮನೆಯ ,ವಿದ್ಯಾವಂತ ಕುಟುಂಬದ ಹುಡುಗಿಯಾಗಿದ್ದದು ಮಾತ್ರವಲ್ಲದೆ ಬಹುಮುಖಿ ಪ್ರತಿಭಾವಂತೆಯಾದ ಕಾರಣ ನಮ್ಮ ಮೆಸ್ ನಲ್ಲಿ ಅವಳಿಗೆ ಸಹಜವಾಗಿಯೇ ಹೆಚ್ಚಿನ ಮನ್ನಣೆ ಇತ್ತು. ಜೊತೆಗೆ ಎಲ್ಲರಲ್ಲೂ ಹೊಂದಿಕೊಳ್ಳುವ ಅವಳ ಸ್ವಭಾವ ಕೂಡ ‌ಮನಸೆಳೆಯುವದ್ದೇ ಆಗಿತ್ತು. ಅವಳು ಕಥೆ ಕವನ ಲೇಖನಗಳನ್ನು ಬರೆದು ಭಿತ್ತಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು‌.ಒಂದೆರಡು ಲೇಖನ ಹೊಸದಿಗಂತ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿಯೂ ಪ್ರಕಟವಾದವು.
ನಾನು ಏಳನೇ ತರಗತಿ ಓದುತ್ತಿದ್ದಾಗಲೇ ಒಂದು ಹವ್ಯ ಭಾಷೆಯಲ್ಲಿ ಸುಬ್ಬಿ ಇಂಗ್ಲಿಷ್ ಕಲ್ತದು ಎಂಬ ನಾಟಕ ಬರೆದಿದ್ದೆ.ನಂತರ ಒಂಬತ್ತನೇ ತರಗತಿ ಓದುವಾಗ ಒಂದು ಕಥೆಯನ್ನು ಬರೆದು ಅಮ್ಮನಿಗೆ ತೋರಿಸಿ ಮೆಚ್ಚುಗೆ ಪಡೆದಿದ್ದೆ.ಹತ್ತನೇ ತರಗತಿ ತನಕ ಕನ್ನಡ ಮಾಧ್ಯಮದಲ್ಲಿ ಓದಿದ ನಾನು ತರಗತಿಯಲ್ಲಿ ಜಾಣೆ ಹುಡುಗಿಯಾಗಿ ಗುರುತಿಸಿಕೊಂಡಿದ್ದೆ.
ಪಿಯುಸಿಗೆ ಸೇರಿ ವಿಜ್ಞಾನ ವಿಭಾಗದಲ್ಲಿ ಓದುವಾಗ ಇಂಗ್ಲಿಷ್ ಭಾಷೆಯಲ್ಲಿ ಮಾಡಿದ ಪಾಠ ಅರ್ಥವಾಗದೆ ಕಲಿಕೆಯಲ್ಲಿ ಹಿಂದೆ ಬಿದ್ದು ಮೊದಲ ಬೆಂಚಿನ ಹುಡುಗಿಯಾಗಿದ್ದವಳು ಹಿಂದಿನ ಬೆಂಚಿನ ಹುಡುಗಿಯಾಗಿದ್ದೆ.ಇಲ್ಲಿ ನಾನು ಆತ್ಮವಿಶ್ವಾಸವನ್ನು ಕಳೆದು ಕೊಂಡಿದ್ದೆ.ಅಂತೂ ಇಂತೂ ಪಿಯುಸಿ ಪಾಸ್ ಆಗಿ ಬಿಎಸ್ ಸಿಗೆ ಸೇರಿದ್ದೆ.ಅಲ್ಲಿಯೂ ನಾನು ಕೊನೆ ಬೆಂಚಿನ ಹುಡುಗಿಯೇ ಆಗಿದ್ದೆ( ಹಾಗಾಗಿಯೆ ಏನೋ ಈಗಲೂ ನನಗೆ ಕಲಿಕೆಯಲ್ಲಿ ಹಿಂದೆ ಬಿದ್ದಿರುವ ಕೊನೆ ಬೆಂಚಿನ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಪ್ರೀತಿ).
ಸುಮನ್ ಬರೆಯುತ್ತಾ ಇದ್ದ ಕಥೆ ಕವನ ಬರಹಗಳನ್ನು ಓದುತ್ತಾ ನಾನೂ ಇಂತಹ ವನ್ನು ಬರೆಯಬಲ್ಲೆ ಎಂದೆನಿಸಿ ನಾನು ನನ್ನಷ್ಟಕ್ಕೆಸಣ್ಣ ಪುಟ್ಟ  ಕಥೆ ಕವನ ಲೇಖನ  ಬರೆದು ಯಾರಿಗೂ ತೋರಿಸದೆ ನನ್ನೊಳಗೆ ಅಡಗಿಸಿ ಇಟ್ಟಿದ್ದೆ.ಅದನ್ನು ಬೇರೆಯವರಿಗೆ ಅಥವಾ ಸ್ನೇಹಿತೆಯರಾದ ವೀಣಾ,ಪೂರ್ಣಿಮಾ, ಸುಮನ್ ಗೆ ತೋರಿಸುವಷ್ಟು ಆತ್ಮವಿಶ್ವಾಸ ನನ್ನಲ್ಲಿ ಇರಲಿಲ್ಲ. ತನ್ನ ಬರವಣಿಗೆಯ ಕಾರಣಕ್ಕೆ ಗಮನ ಸೆಳೆವ ವ್ಯಕ್ತಿತ್ವ ಹೊಂದಿದ್ದ ಸುಮನ್ ಬರೆಯಲು ನನಗೆ ಪ್ರೇರಣೆಯಾಗಿದ್ದಳು.ಅವಳ ಬಗ್ಗೆ ಒಳಗಿನಿಂದ ಕಾಡುತ್ತಿದ್ದ ಮತ್ಸರ ಕೂಡ ಇದಕ್ಕೆ ಕಾರಣವಾಗಿರಬಹುದು ಎಂದು ನನಗೆ ಈಗ ಅನಿಸುತ್ತದೆ.ಸುಮನ್ ಸಿರಿವಂತರ ಮನೆಯ ಜಾಣ ಹುಡುಗಿಯಾಗಿದ್ದರೂ ಯಾವುದೇ ಅಹಂಕಾರ ಅವಳಿಗಿರಲಿಲ್ಲ .ಕಲಿಕೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯುತ್ಸಾಹದಿಂದ ಭಾಗವಹಿಸುತ್ತಿದ್ದಳು.ಅವಳಿಗೆ ಸಿಕ್ಕ ಬಹುಮಾನ,ಮನ್ನಣೆಗಳು ನನಗೂ ಏಕಪಾತ್ರಾಭಿನಯ,ಭಾಷಣ ಮೊದಲಾದವುಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯಲು ಪ್ರೇರಣೆಯಾಯಿತು.
ಮುಂದೆ ಸುಮನ್ ದೊಡ್ಡ ಪತ್ರಕರ್ತೆಯಾಗಬಹುದು ಇಲ್ಲವೇ ತುಂಬಾ ಓದಿ ಒಳ್ಳೆಯ ಕೆಲಸ ಪಡೆದು ಉನ್ನತ ಸ್ಥಾನಮಾನವನ್ನು ಪಡೆಯಬಹುದು ಎಂದೇ ನಾವೆಲ್ಲರೂ ಊಹಿಸಿದ್ದೆವು.
ಆದರೆ ಬದುಕು ನಾವಂದುಕೊಂಡಂತೆ ಇರುವುದಿಲ್ಲ. ಅವಳಿಗೆ ಮೊದಲ ವರ್ಷ ಪದವಿ  ಪರೀಕ್ಷೆ ಮುಗಿಯುತ್ತಿದ್ದಂತೆ ದೊಡ್ಡ ಕಾಫಿ ಎಸ್ಟೇಟ್ ಉದ್ಯಮಿ ಜೊತೆಗೆ ಮದುವೆಯಾಯಿತು. ಮುಂದೆ ರೆಗುಲರ್ ಆಗಿ ಓದು ಮುಂದುವರಿಸಲಾಗಲಿಲ್ಲ .ಖಾಸಗಿಯಾಗಿ ಓದಿರಬಹುದೇನೋ ಗೊತ್ತಿಲ್ಲ, ನಂತರ ಅವಳ ಕಥೆ ಕವನಗಳು ಬರಹಗಳು ಪ್ರಕಟವಾಗಿದೆಯೋ ಇಲ್ಲವೋ ನನಗೆ ತಿಳಿಯದು ಆದರೂ ಅವಳಿಗೆ ಹೆಚ್ಚೇನು ಬರೆಯಲಾಗಿಲ್ಲ ಎಂದು ಅನಂತರ ತಿಳಿಯಿತು. ಅವಳ ಮದುವೆಯಾದ ಕೆಲ ತಿಂಗಳಲ್ಲಿ ಪೂರ್ಣಿಮಾ ಕೂಡ ಮದುವೆಯಾಗಿ ಶ್ರೀಮಂತರ ಮನೆ ಸೇರಿದಳು‌ .ನಂತರ ಎರಡನೇ ವರ್ಷ ಪೂರ್ವ ಸಿದ್ದತಾ ಪರೀಕ್ಷೆ ಆಗುತ್ತಿದ್ದಂತೆ ನನಗೂ ಮದುವೆಯಾಯಿತು, ನಾನು ವಿವಾಹಾನಂತರವೂ ಮನೆ ಮಂದಿ ಸಮಾಜವನ್ನು ಎದುರು ಹಾಕಿಕೊಂಡು ಓದಿದೆ..ಬಿಎಸ್ಸಿ ‌ಮುಗಿಯುತ್ತಲೇ ವಿಜ್ಞಾನ ವನ್ನು ಬಿಟ್ಟು ಸಂಸ್ಕೃತ ಎಂಎ ಗೆ ಸೇರಿ ಮತ್ತೆ ಮೊದಲ ಬೆಂಚಿನ ವಿದ್ಯಾರ್ಥಿನಿಯಾಗಿ ಮೊದಲ ರ‌್ಯಾಂಕ್ ಪಡೆದು ನಂತರದ ದಿನಗಳಲ್ಲಿ ಉಪನ್ಯಾಸಕಿಯಾದೆ.
ಎಷ್ಟೋ ವರ್ಷಗಳ ನಂತರ ಉಜಿರೆಯಲ್ಲಿ ವಿಶ್ವ ತುೞು ಸಮ್ಮೇಳನದಲ್ಲಿ ಭಾಗವಹಿಸಲು ಹೋದವಳು ನಾನಿದ್ದ ಮೆಸ್ ಗೂ ಹೋಗಿದ್ದೆ.ಅವರ ಮೂಲಕ ಸುಮನ್ ಗೆ ಕ್ಯಾನ್ಸರ್ ಬಂದಿದ್ದು ತಿಳಿದು ಫೋನ್ ಮಾಡಿ ಮಾತಾಡಿದ್ದೆ.ಆಗ ಅವಳಿಗೆ ಮೊದಲಿಗೆ ಬ್ರೆಸ್ಟ್ ಕ್ಯಾನ್ಸರ್ ಬಂದು ಗುಣವಾಗಿ ಮತ್ತೆ ಎಲುಬಿನಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿತ್ತು‌.ಅವಳಿಗೆ ಮಕ್ಕಳಾಗದ ಕಾರಣ ಒಂದು ಮಗುವನ್ನು ದತ್ತು ಪಡೆದು ಸಾಕುತ್ತಿದ್ದು ಆ ಮಗುವಿಗೆ ಮೂರು ನಾಲ್ಕು ವರ್ಷ ಅಗಿದೆ ಎಂದು ತಿಳಿಸಿದ್ದಳು.ತುಂಬಾ ನಿರಾಶೆಯಲ್ಲಿದ್ದ ಅವಳಿಗೆ ಏನೆಂದು ಧೈರ್ಯ ಹೇಳಬೇಕೋ ನನಗೂ ಗೊತ್ತಾಗಲಿಲ್ಲ. ಆದರೂ ನಾವು ಎಷ್ಟು ಸಮಯ ಬದುಕುತ್ತೇವೆ ಎಂಬುದು ಮುಖ್ಯವಲ್ಲ ಹೇಗೆ ಬದುಕಿದ್ದೇವೆ ಹೇಳುವುದು ಮುಖ್ಯ. ಯಾರ ಆಯುಷ್ಯ ಕ್ಕೂ ಗ್ಯಾರಂಟಿ ಇಲ್ಲ,ಸಾಯಲು ಕ್ಯಾನ್ಸರ್ ಇರಬೇಕೆಂದೇನೂ ಇಲ್ಲ .ರಸ್ತೆ ಆಕ್ಸಿಡೆಂಟ್ ನಲ್ಲು ಜನರು ಸಾಯುತ್ತಾರೆ.ಏನೂ ಸಮಸ್ಯೆ ಇಲ್ಲದೆ ಇರುವ ಜನರೂ ಇದ್ದಕ್ಕಿದ್ದಂತೆ ಕುಸಿದು ಕುಳಿತು ಸಾಯುತ್ತವೆ. ಹೃದಯ ಕಾಯಿಲೆ, ಏಡ್ಸ್ ,ಕ್ಯಾನ್ಸರ್ ನಂತ ರೋಗಗಳು ಬಂದರೂ ನೂರು ವರ್ಷ ಬದುಕಿದವರು ಇದ್ದಾರೆ.ನೀನು ಸಾಧ್ಯವಾದರೆ ಪುಸ್ತಕ ಪ್ರಕಟಿಸು ಎಂದು ಹೇಳಿ ಧೈರ್ಯ ಹೇಳಿದ್ದೆ.ಇದಾಗಿ ಕೆಲವು ತಿಂಗಳ ನಂತರ ಕ್ಯಾನ್ಸರ್ ಗುಣಮುಖ ವಾಗಿದೆ, ಎರಡು ಪುಸ್ತಕ ಪ್ರಕಟಿಸಲು ಸಿಧ್ದ ಮಾಡುತ್ತಿದ್ದೇನೆ,ಪ್ರಕಟವಾದ ಮೇಲೆ ಕಳಹಿಕೊಡುತ್ತೇನೆ ಎಂದು ನನ್ನ ವಿಳಾಸ ಪಡೆದುಕೊಂಡಿದ್ದಳು.
ಅದಾಗಿ ಕೆಲ ತಿಂಗಳ ನಂತರ ಅವಳ ಸಾವಿನ ದಾರುಣೆ ವಾರ್ತೆ ಸಿಕ್ಕಿ ಮನಸ್ಸು ಭಾರವಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದೆ.ಅವಳಿಗೆ ಮತ್ತೆ ಮೆದುಳಿಗೆ ಕ್ಯಾನ್ಸರ್ ಹರಡಿತಂತೆ. ಯಮರಾಯ ಇಂತಹ ಪ್ರತಿಭಾನ್ವಿತೆ ಸ್ವರ್ಗದಲ್ಲಿರಲಿ ಎಂದು ಎಳೆದೊಯ್ದು ಸ್ವರ್ಗ ಕ್ಕೆ ಸೇರಿಸಿಬೇಕು. ಅವಳ ಎರಡು ಪುಸ್ತಕಗಳು ಅವಳಿದ್ದಾಗಲೇ ಪ್ರಕಟವಾಗಿವೆ ಎಂದು ಸ್ನೇಹಿತೆ ವಿದ್ಯಾ ತಿಳಿಸಿದ್ದರು.

ಅವಳ ನೇತೃತ್ವದಲ್ಲಿ ನಾವು ಕಾಲೇಜು ಡೇಯಲ್ಲಿ "ನೋಡವಳಂದಾವಾ ಮುತ್ತಿನ ಮಾಲೆ ಚಂದಾವಾ" ಹಾಡಿಗೆ ಸಮೂಹ ನೃತ್ಯ ಮಾಡಿದ್ದೆವು‌. ಅವಳನ್ನು ಹೇಗೆ ತಾನೇ ಮರೆಯಲಿ?
ಒಂದು ದಿನ ಸಂಜೆ  ಅವಳು ಬೇಕರಿಯಿಂದ ಪಪ್ಸ್ ತಂದು ತಿನ್ನೋಣವಾ ಎಂದು ಕೇಳಿದಳು.ಹಾಗೆಂದರೇನು ಎಂದು ನಾವು ಕೇಳಿದೆವು.ಅದು ಬ್ರೆಡ್ ಒಳಗಡೆ ಪಲ್ಯ ಹಾಕಿ ಹುರಿದು ಮಾಡುತ್ತಾರೆ.ತುಂಬಾ ರುಚಿಯಿರುತ್ತದೆ ಎಂದು ಹೇಳಿದಳು.ಹಾಗೆ ನಾವೆಲ್ಲಾ ಉಜಿರೆ ಪೇಟೆಗೆ ಬಂದು ಅಲ್ಲಿದ್ದ ಒಂದೇ ಒಂದು ಬೇಕರಿಯಲ್ಲಿ ಪಪ್ಪ್ ಬೇಕೆಂದು ಕೇಳಿದೆವು‌. ಹಳ್ಳಿಯ ಬೇಕರಿ ಮಾಲಕನಿಗೆ ಪಪ್ಸ್ ದು ಹೆಸರು ಕೂಡ ಕೇಳಿ ಗೊತ್ತಿರಲಿಲ್ಲ.! ವರು ನಾವು ಕೇಳಿದ ವಸ್ತುವೇನೆಂದು ತಿಳಿಯದೆ ಮಿಕ ಮಿಕ ನೋಡಿದ್ದರು! ಅಲ್ಲಂದ ನಾನು ಪಪ್ಸ್ ತಿನ್ಬಲೇ ಬೇಕೆಂದು ಕೊಂಡಿದ್ದೆ.ಇದಾಗಿ ಸುಮಾರು ಒಂದು ವರ್ಷದ ನಂತರ ನನಗೆ ಮದುವೆಯಾಯಿತು, ಪ್ರಸಾದ್ ಆಗಲೂ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು ನಾನು ರಜೆಯಲ್ಲಿ ಬೆಂಗಳೂರಿಗೆ ಬಂದೆ.ಆಗ ಪ್ರಸಾದ್ ನಿನಗೇನು  ತಿನ್ನಲು ತರಬೇಕು ಎಂದು  ಕೇಳಿದಾಗ ನಾನು ಪಪ್ ಬೇಕೆಂದು ಹೇಳಿದೆ! ಆರಂಭದಲ್ಲಿ ಅವರಿಗೆ ನಾನೇನು ಕೇಳುತ್ತಿದ್ದೇನೆ ಗೊತ್ತಾಗಲಿಲ್ಲ, ನಂತರ ಸುಮನ್ ಹೇಳಿದ್ದನ್ನು ನೆನಪಿಸಿಕೊಂಡು ಬ್ರೆಡ್ ಒಳಗೆ ಪಲ್ಯ ಹಾಕಿ ಹುರಿದ ತಿಂಡಿ ಎಂದು ವಿವರಿಸಿದೆ,ಓ ಅದಾ ಅದು ಪಪ್ಸ್ ಮಾರಾಯ್ತಿ ಈಗ ತಂದೆ ಎಂದು ಹೇಳಿ ಐದು ನಿಮಿಷದಲ್ಲಿ ಬೇಕರಿಯಂದ ತಂದು ಕೊಟ್ಟರು‌ಹೌದು ಸುಮನ್ ಹೇಳಿದ್ದು ನಿಜ ಅದು ತುಂಬಾ ರುಚಿಕರ, ನನಗೆ ಈಗಲೂ ಅದು ತುಂಬಾ ಇಷ್ಟ!

Tuesday, 14 November 2017

ಬದುಕೆಂಬ ಬಂಡಿಯಲಿ 2 ಮುನಿಯಮ್ಮ

ಮುನಿಯಮ್ಮನ ಕಥೆಯಲ್ಲ ವ್ಯಥೆ ಇದು

ಪರೀಕ್ಷಾ ಕಾರ್ಯ ಮುಗಿಸಿ ನಾನು ಮತ್ತು ನನ್ನ ಸಹೋದ್ಯೋಗಿಗಳಾದ ಶ್ರೀಶ ,ಗೀತಾ ಬೇಗನೆ ಬಸ್ ನಿಲ್ದಾಣಕ್ಕೆ ಬಂದು ಆಗಷ್ಟೇ ಹೊರಟು ನಿಂತ ಬಸ್ ಗೆ ಹತ್ತಿದೆವು.ಮುಂದೆ ಸೀಟ್ ಇಲ್ಲದ ಕಾರಣ ಬಸ್ ನ ಹಿಂದಿನ ಸೀಟ್ ಗಳಲ್ಲಿ ಕುಳಿತಿದ್ದೆವು.ಜಾಲ ಹಳ್ಳಿ ಕ್ರಾಸ್ ಸಮೀಪ ಬಂದಾಗ ಮುಂದೆ ಒಂದೆರಡು ಸೀಟ್ ಗಳು ಖಾಲಿಯಾದವು.ನಾನು ಮುಂದೆ ಬಂದು ಒಬ್ಬ ಅಜ್ಜಿಯ ಪಕ್ಕ ಖಾಲಿ ಸೀಟಿನಲ್ಲಿ ಕುಳಿತೆ.ಅಜ್ಜೆ ಕಡೆ ನೋಡಿ  ನಗು ಬೀರಿದೆ.ಅಜ್ಜಿ ಮಾತನಾಡಲು ಶುರು ಮಾಡಿದರು.ಅವರ ಹೆಸರು ಮುನಿಯಮ್ಮ .ಗಂಡ ಮಕ್ಕಳು ಯಾರೂ ಇಲ್ಲ. ಇವರ ಗಂಡನ ಹೊಲವನ್ನು ಯಾರೋ ಸಂಬಂಧಿಗಳು ಒಳಗೆ ಹಾಕಿಕೊಂಡು ಮಾರಾಟ ಮಾಡಿದ್ದಾರೆ.ಕೂಲಿ‌ಕೆಲಸ ಮಾಡಿ ಬದುಕುತ್ತಾ ಇದ್ದರು.ಈಗ ವಯಸ್ಸಾಗಿ ಕೂಲಿ ಕೆಲಸ ಮಾಡಲು ಶಕ್ತಿ ಇಲ್ಲ‌.ಇದರಿಂದಾಗಿ ಈಗ ಇವರಿಗೆ ಊಟಕ್ಕೆ ಗತಿಯಿಲ್ಲದಾಗಿ ಭಿಕ್ಷೆ ಬೇಡುತ್ತಾರಂತೆ.ಏನೋ ಚಿಕಿತ್ಸೆ ಗಾಗಿ ನೆಲಮಂಗಲ ದಿಂದ ಎಂಟು‌ಮೈಲು ದೂರದ ಎಣ್ಸಿಗೇರಿ ಯಿಂದ ಬೆಂಗಳೂರಿಗೆ ಬಸ್ ನಲ್ಲಿ ಹೋಗುತ್ತಿದ್ದೇನೆ ಎಂದು ಹೇಳಿ ಕಣ್ಣೀರು ಹಾಕಿದರು.ನನ್ನ ಪರ್ಸ್ ನಲ್ಲಿ ಇದ್ದ ಐನೂರು ರುಪಾಯಿ ದುಡ್ಡು ಕೊಟ್ಟು ಇನ್ನೇನಾದರು ಸಹಾಯ ಬೇಕಾದರೆ ಕಾಲೇಜಿಗೆ ಬರುವಂತೆ ಹೇಳಿ ಒಂದು ಕಾಗದದಲ್ಲಿ ನನ್ನ ಮೊಬೈಲ್ ನಂಬರ್ ಕಾಲೇಜು ವಿಳಾಸ ಬರೆದು ನೀಡಿದೆ.
ಇಂತಹ ಎಷ್ಟು ಮುನಿಯಮ್ಮರು ನಮ್ಮ ದೇಶದಲ್ಲಿ ಒಂದು ಹೊತ್ತಿನ ಊಟಕ್ಕಿಲ್ಲದೆ ಒದ್ದಾಡುತ್ತಿದ್ದಾರೋ ಏನೋ,ದೇವರೇ ಬಲ್ಲ

Sunday, 12 November 2017

ದೊಡ್ಡವರ ದಾರಿ 24ಅನಾಥ ಮಕ್ಕಳ ಪೊರೆವ ತಾಯಿ ಪದ್ಮಾ ಭಟ್ ©ಡಾ.ಲಕ್ಷ್ಮೀ ಜಿ ಪ್ರಸಾದ

 ದೊಡ್ಡವರ ದಾರಿ24 - ಅನಾಥ ಮಕ್ಕಳ ಪೊರೆವ ತಾಯಿ ಪದ್ಮಾ ಭಟ್ ©ಡಾ ಲಕ್ಷ್ಮೀ ಜಿ ಪ್ರಸಾದ
ಸಾಲು ಸಾಲು  ಸೈಟ್ ಗಳು, ಮನೆಯ ಮೇಲೆ ಮನೆ ಕಟ್ಟುಸುತ್ತಾ ಈ ಜನ್ಮದಲ್ಲಿ ಮಾತ್ರವಲ್ಲ ಮುಂದಿನ ಹತ್ತು ಜನ್ಮದಲ್ಲೂ ಉಂಡು ಮುಗಿಯದಷ್ಟು ಸಂಪತ್ತನ್ನು ಅಡ್ಡ ಮಾರ್ಗದಲ್ಲಿ ಅಥವಾ ನೇರ ಮಾರ್ಗದಲ್ಲಿ ಗಳಿಸಿ ಇನ್ನೂ ಇನ್ನೂ ಸಾಲದು  ಸಾಲದೆಂದು ತುಂಬಿಡುವ ಜನರೇ ತುಂಬಿದ ಸ್ವಾರ್ಥಿಗಳ ಜಗತ್ತಿನಲ್ಲಿ , ತಮ್ಮ ಮನೆ  ಸೈಟನ್ನು ಮಾರಾಟ ಮಾಡಿ ಅನಾಥ ಮಕ್ಕಳನ್ನು ವೃದ್ಧರನ್ನು ಪೊರೆಯುವ ಮಹತ್ಕಾರ್ಯ ಮಾಡುತ್ತಿರುವ ಪದ್ಮಾ ಭಟ್ ಬಲು ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ

ಫೇಸ್ ಬುಕ್ ನನಗೆ ಹೊರ ಜಗತ್ತಿನ ಅನೇಕ ಮಹನೀಯರನ್ನು ಪರಿಚಯಿಸಿದೆ.ಗುಡ್ಡೆಯಿಂದ ಗುಡ್ಡೆ ಅಡ್ಡ ಎಂಬಂತೆ ವಿಶಿಷ್ಠವಾದ ಸಾಧನೆ ಮಾಡಿದವರ ಬಗ್ಗೆ ನನಗೆ ತಿಳಿದದ್ದು ಫೇಸ್ ಬುಕ್ ಮೂಲಕ.ಅನೇಕರು ಪೇಸ್ ಬುಕ್ ಸೇರಿದಂತೆ ಅಂತರ್ಜಾಲ ಬಳಕೆ ಬಹಳ ಕೆಡುಕುಂಟು ಮಾಡುತ್ತದೆ ಎಂದು ಹೇಳುವುದು ಕೇಳಿದ್ದೆ.ಆದರೆ ನನಗೇನೂ ಅದು ಕೆಟ್ಟದು ಎನಿಸಿಲ್ಲ ಅದೆಲ್ಲ ನಾವು ಹೇಗೆ ಬಳಕೆ ಮಾಡುತ್ತೇವೆ ಎಂಬುದರ ಮೇಲೆ ನಿಂತಿದೆ.
ಅದಿರಲಿ.ನನಗೆ ಪೇಸ್ ಬುಕ್ ಮೂಲಕ ಪರಿಚಿತರಾಗಿ‌ನಂತರ ಬಹಳ ಆತ್ಮೀಯರಾಗಿರುವ ಪದ್ಮಾ ಭಟ್ ಅವರ ಮಹತ್ತರ ಕಾರ್ಯದ ಬಗ್ಗೆ ಇಲ್ಲಿ ಹೇಳಲು ಹೊರಟಿರುವೆ.ಅಲ್ಲೊಂದು ಇಲ್ಲೊಂದು ಪತ್ರಿಕೆಗಳಲ್ಲಿ ಅನಾಥ ಮಕ್ಕಳನ್ನು ಸಾಕಿ ಬದುಕು ಕೊಟ್ಟ ಮಹನೀಯರ ಸೇವೆಯ ಬಗ್ಗೆ ಓದಿ ಅಬ್ಬಾ ಅವರು ನಿಜಕ್ಕೂ ಗ್ರೇಟ್ ಎಂದು ಕೊಳ್ಳುತ್ತೇವೆ.ಆದರೆ ನಮ್ಮ ಸುತ್ತ ಮುತ್ತಲೂ ಅಂತಹ ಕೆಲವರು ಇದ್ದಾರೆ.ಅಂತಹವರ ಸಾಧನೆಯನ್ನು ಗುರುತಿಸಲು ಆಂತರ್ಯದ ಕಣ್ಣು ತೆರೆದಿರಬೇಕು ಅಷ್ಟೇ.
ಬೆಂಗಳೂರಿನ ನಾಗದೇವನಹಳ್ಳಿಯಲ್ಲಿ ಒಂದು  ಚಿಕ್ಕ ಮನೆಯಲ್ಲಿ ವಾಸಿಸುವ ಪದ್ಮಾ ಭಟ್ ಹೆಚ್ಚಾಗಿ ಇರುವುದು ಅವರೇ ಸ್ಥಾಪಿಸಿರುವ  ಸತ್ಯ ಭಾರತಿ  ಆಶ್ರಮದಲ್ಲಿ.
ಪಿಯುಸಿ ಆಗಿ  telecommunicationsಡಿಪ್ಲೋಮಾ ಮುಗಿಸಿ ಬೆಂಗಳೂರಿಗೆ ಬಂದು ಸಣ್ಣ ವಯಸಿನಲ್ಲಿಯೇ ಸ್ವಂತ ಇಂಡಸ್ಟ್ರಿ ಪ್ರಾರಂಭ ಮಾಡಿದ ಪದ್ಮಾ ಭಟ್ ಸಾಗಿದ ಹಾದಿ ಕಲ್ಲುಮುಳ್ಳಿನದು.ಆದರೆ ನೀಡಿದ್ದು ಅಮೃತ .
ಎಲ್ಲಾ ಸವಾಲುಗಳನ್ನು ಎದುರಿಸುತ್ತಾ ಅವರು ಮಾಡಿದ ಮಹತ್ಕಾರ್ಯ ಅತ್ಯಂತ ಶ್ಲಾಘನೀಯ. ಚಿಕ್ಕಂದಿನಲ್ಲಿ ತಮ್ಮ ಓರ್ವ ತಂಗಿಯ ಅಸಹಜ ಸಾವು,ಹಾಗೂ ತಂಗಿಯರಿಗೆ  ಬೇರೆಯವರ ಮನೆಯಲ್ಲಿದ್ದು ಓದಬೇಕಾಗಿ ಬಂದ ಸಂದರ್ಭದಲ್ಲಿ ಕಾಡಿದ ಅಭದ್ರತೆ ಅವರಿಗೆ ಈ ಕಾರ್ಯ ಮಾಡಲು ಪ್ರೇರಣೆ ಎಂದು ಅವರು ಹೇಳುತ್ತಾರೆ.  ಬೇರೆ ಬಡ ಹೆಣ್ಣು ಮಕ್ಕಳಿಗೆ ಅಭದ್ರತೆ ಕಾಡಬಾರದೆಂಬ ಸದುದ್ದೇಶದಿಂದ ಅವರು ಅನಾಥ ಮಕ್ಕಳ ಆಶ್ರಮ ತೆರೆದಿದ್ದಾರೆ
ಬೆಂಗಳೂರಿನ ಚಳ್ಳೆಕೆರೆಯಲ್ಲಿ  ಸುಮಾರು ನಲುವತ್ತು ಅನಾಥ ಬಡ ಮಕ್ಕಳಿಗೆ ಉಚಿತ  ಊಟ ವಸತಿ  ಶಿಕ್ಷಣ ಒದಗಿಸುವ ಮಹತ್ಕಾರ್ಯ ಮಾಡುತ್ತಿದ್ದಾರೆ. ಜೊತೆಗೆ ಕೆಂಗೇರಿಯ ನಾಗದೇವನ ಹಳ್ಳಿಯಲ್ಲಿ ಒಂದು ಉಚಿತ ವೃದ್ಧಾಶ್ರಮವನ್ನು ನಡೆಸುತ್ತಿದ್ದಾರೆ.ಇಲ್ಲಿ ಒಂಬತ್ತು ಜನ ಹಿರಿಯರು ಇದ್ದಾರೆ.
ಇಷ್ಟಕ್ಕೂ ಪದ್ಮ ಭಟ್ ಕೋಟ್ಯಧಿಪತಿಯಲ್ಲ ,ದುಡ್ಡು ಹೆಚ್ಚಾಗಿ ಅಥವಾ ಕಪ್ಪು ಹಣವನ್ನು ಬಿಳಿ ಮಾಡಲು ಆಶ್ರಮ ತೆರೆದವರಲ್ಲ.ಯಾವುದೇ ಸರಕಾರದ ಸೌಲಭ್ಯ ಪಡೆಯುವುದಕ್ಕಾಗಿಯೂ ಇದನ್ನು ಮಾಡಿಲ್ಲ .
ಅವರ ಆಂತರ್ಯದ ಉದಾರ ಹೃದಯ ಬಡ ಮಕ್ಕಳ ಕಡೆಗಿರುವ ಒಲವೇ ಅವರನ್ನು ಈ ಮಹತ್ಕಾರ್ಯದಲ್ಲಿ ತೊಡಗಿಸಿದೆ.
ಇವರಿಗೆ ದಿನಕ್ಕೆ ಕಡಿಮೆ ಎಂದರೆ ಹನ್ನೆರಡು ಸಾವರ ರುಗಳಷ್ಟು ಖರ್ಚು ಬರುತ್ತದೆ.ಕೆಲವು ದಾನಿಗಳು ಆಗಾಗ ತಮ್ಮ ಮಕ್ಕಳ ಹುಟ್ಟು ಹಬ್ಬದ ಸಂದರ್ಭದಲ್ಲಿ ಅಥವಾ ಇನ್ ಯಾವುದೋ ಸಂದರ್ಭದಲ್ಲಿ ಇಲ್ಲಿನ ಮಕ್ಕಳಿಗೆ ಅನ್ನದಾನದ ಕಾರ್ಯ ಮಾಡುತ್ತಾರೆ.ಆದರೆ ಬೇರೆ ಯಾವುದೇ ರೀತಿಯ ಸಹಾಯ ಧನ ಸಿಗದೆ ಇರುವ ಕಾರಣ ಪದ್ಮ ಭಟ್ ಅವರೇ ಈ ಎಲ್ಲ ಖರ್ಚನ್ನು ನಿಭಾಯಿಸುತ್ತಾರೆ.ಇದಕ್ಕಾಗಿ ತನ್ನ ಒಂದು ಮನೆ ಮತ್ತು ಎರಡು ಸೈಟುಗಳನ್ನು ಮಾರಾಟ ಮಾಡಿದ್ದಾರೆ.
ಸೈಟಿನ‌ಮೇಲೆ ಸೈಟ್ ಮನೆಯ ಮೇಲೆ ಮನೆ ಕಟ್ಟುಸುತ್ತಾ ಈ ಜನ್ಮದಲ್ಲಿ ಮಾತ್ರವಲ್ಲ ಮುಂದಿನ ಹತ್ತು ಜನ್ಮದಲ್ಲೂ ಉಂಡು ಮುಗಿಯದಷ್ಟು ಸಂಪತ್ತನ್ನು ಅಡ್ಡ ಮಾರ್ಗದಲ್ಲಿ ಅಥವಾ ನೇರ ಮಾರ್ಗದಲ್ಲಿ ಗಳಿಸಿ ಇನ್ನೂ ಇನ್ನೂ ಸಾಲದು  ಸಾಲದೆಂದು ತುಂಬಿಡುವ ಜನರೇ ತುಂಬಿದ ಸ್ವಾರ್ಥಿಗಳ ಜಗತ್ತಿನಲ್ಲಿ , ತಮ್ಮ ಮನೆ  ಸೈಟನ್ನು ಮಾರಾಟ ಮಾಡಿ ಅನಾಥ ಮಕ್ಕಳನ್ನು ವೃದ್ಧರನ್ನು ಪೊರೆಯುವ ಮಹತ್ಕಾರ್ಯ ಮಾಡುತ್ತಿರುವ ಪದ್ಮಾ ಭಟ್ ಬಲು ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ( ಲತಿಕಾ ಭಟ್ ಎಂಬ ಇನ್ನೋರ್ವ ಫೇಸ್ ಬುಕ್ ಸ್ನೇಹಿತರು ಕೂಡ ಇಂತಹ ಮಹತ್ಕಾರ್ಯ ಆರಂಭಿಸಿದ್ದಾರೆ ).ಅವರ ಈ ಮಹತ್ಕಾರ್ಯ ದಲ್ಲಿ ನಾವೂ ಸ್ವಲ್ಪ ಅಳಿಲ ಸೇವೆ ಮಾಡಿ ಕೃತಾರ್ಥರಾಗೋಣ ಏನಂತೀರಾ ?
(ಸ್ನೇಹಿತರೇ.. ನಮ್ಮ ಮಕ್ಕಳ ಆಶ್ರಮದ ಕಟ್ಟಡದ ಮುಂಭಾಗದ 1000 ಚ ಅಡಿ ವಿಸ್ತೀರ್ಣದ ಹಾಲ್ ಪ್ರಸ್ತುತ ಶೀಟ್ ಹಾಸಿದೆ . ಪೂರ್ಣವಾಗಿ ಟೇರೆಸ್ ಮಾಡಬೇಕಿದ್ದರೆ ಮೂವತ್ತು ನಲವತ್ತು ಲಕ್ಷ ಖರ್ಚಿದೆ.
ನಿಮ್ಮಲ್ಲಿ ಯಾರಿಗಾದರೂ ಈ ಪುಣ್ಯಕಾರ್ಯದಲ್ಲಿ ಭಾಗಿಯಾಗುವ ಮನಸ್ಸಿದ್ದಲ್ಲಿ ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬಹುದು. ಖುದ್ದಾಗಿ ಭೇಟಿ ನೀಡಿಯೂ ಸಹಾಯ ಮಾಡಬಹುದು. ನಿಮ್ಮ ದೇಣಿಗೆಗೆ ಆದಾಯ ತೆರಿಗೆ ಕಾಯ್ದೆ 80g ಪ್ರಕಾರ ತೆರಿಗೆ ವಿನಾಯಿತಿ ಇದೆ.
ನಿಮ್ಮ ಸಹಕಾರದ ನಿರೀಕ್ಷೆಯಲ್ಲಿ.
..ಪದ್ಮಾ ಭಟ್

Sri Satya Sai Mahila Charitable Trust (R)
SB a/c no..520101021856601
IFSC Code: CORP0000744
Corporation Bank, KS Town Branch
Bangalore-560060.
Web: www.srisaimahila.org
Email: smct189@gmail.com

Mobile: 9986014189/9844540380 Sri Satya Bharathi Ashrama vidyalaya, behind Ekadantha layout, Saibaba temple road, Challagatta)
 http://shikshanaloka.blogspot.in/2017/11/24.html?m=1
)

Saturday, 4 November 2017

ದೊಡ್ಡವರ ದಾರಿ 23 ಜೀವನ್ಮುಖಿ ಗೆಳತಿ ನಿರ್ಮಲ © ಡಾ.ಲಕ್ಷ್ಮೀ ಜಿ ಪ್ರಸಾದ

ಬದುಕಿನಲ್ಲಿ ನಾವು ಬೇರೆ ಬೇರೆ ಕಾರಣಗಳಿಗಾಗಿ ಹಲವಾರು ಜನರನ್ನು ಭೇಟಿ ಮಾಡುತ್ತೇವೆ.ಅಂತೆಯೇ ನನ್ನ ಮತ್ತು ನಿರ್ಮಲಾ ಭೇಟಿ ಆಕಸ್ಮಿಕ. ನಿರ್ಮಲಾ ಸುಮಾರಾಗಿ ನನ್ನದೇ ವಯಸ್ಸಿನ ಮಹಿಳೆ .ಆದರೆ ನನಗಿಂತ ಹೆಚ್ಚು ಅನುಭವ ಇದ್ದವರು.ಯಾರದೇ ಬೆಂಬಲ ಇಲ್ಲದೇ ಇದ್ದರೂ ಕೂಡ ಸಾಲ ಮಾಡಿ ಕಂಪ್ಯೂಟರ್ ತೆಗೆದು ಡಿಟಿಪಿ ಮಾಡಿಕೊಡುವ ಸ್ವ ಉದ್ಯೋಗ ಮಾಡುತ್ತಿದ್ದರು.ಈಗ ಅವರು ಮಿಥಿಕ್ ಸೊಸೈಟಿಯ ಉದ್ಯೋಗಿಯಾಗಿದ್ದಾರೆ.ಬಿಡುವಿನ ವೇಳೆಯಲ್ಲಿ ಡಿಟಿಪಿ ಮಾಡಿ ಕೊಡುತ್ತಾರೆ.ಈಗಿವರು ನನಗೆ ಒಳ್ಳೆಯ ಸ್ನೇಹಿತೆ.
ನಾವು ಆಗಷ್ಟೇ ಬೆಂಗಳೂರಿಗೆ ಮನೆ ಬದಲಾಯಿಸಿದ್ದೆವು.ಅದೇ ಸಮಯದಲ್ಲಿ ನನಗೆ ಬೆಂಗಳೂರಿನ ಬಿಎಂಶ್ರೀ ಪ್ರತಿಷಟಾನದ ಮೂಲಕ ಹಂಪಿ ಯುನಿವರ್ಸಿಟಿ ಯಲ್ಲಿ ಪಿಎಚ್ ಡಿ ಅಧ್ಯಯನಕ್ಕೆ ಅವಕಾಶ ದೊರೆತಿತ್ತು.ಆಗ ನನಗೆ ಕಂಪ್ಯೂಟರ್ ನ ಗಂಧ ಗಾಳಿ ಗೊತ್ತಿರಲಿಲ್ಲ. ನಮ್ಮ ಪ್ರಬಂಧವನ್ನು ಡಿಟಿಪಿ ಯಾರಲ್ಲಿ ಮಾಡಿಸುವುದು ಹೇಳಿ ಆಲೋಚಿಸುವಾಗ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಉದ್ಯೋಗಿಯಾಗಿದ್ದ ರಾಜಮ್ಮ ಅವರು ನನಗೆ ನಿರ್ಮಲಾರನ್ನು ಪರಿಚಯಿಸಿದರು.
ನಿರ್ಮಲಾ ಅದಾಗಲೇ ಅನೇಕರ‌ ಪಿಎಚ್ ಡಿ ಪ್ರಬಂಧಗಳನ್ನು ಡಿಟಿಪಿ ಮಾಡಿದ್ದರು.ಹಾಗಾಗಿ ಸಂಶೋಧನಾ ವಿದಿವಿಧಾನಗಳ ಬಗ್ಗೆ ಅವರಿಗೆ ಸಾಕಷ್ಟು ತಿಳುವಳಿಕೆ ಇತ್ತು.ಅವರು ಇತಿಹಾಸ ಅಕಾಡೆಮಿಯ ಸಕ್ರಿಯ ಸದಸ್ಯೆಯಾಗಿದ್ದು ಅವರಿಗೆ ಇತಿಹಾಸಕ್ಕೆ ಸಂಬಂಧಿಸಿದ ಸಂಶೋಧನಾ ವಿಚಾರಗಳ ಬಗ್ಗೆ ತುಂಬಾ ತಿಳುವಳಿಕೆ ಇತ್ತು
ಪಿಎಚ್ ಡಿ ಪ್ರಬಂಧಗಳನ್ನು ಡಿಟಿಪಿ ಮಾಡುವಾಗ ಫಾಂಟ್ ಸೈಜ್ ಉದ್ದ ಅಗಲಗಳ ಬಗ್ಗೆ ಅವರಿಗೆ ಗೊತ್ತಿತ್ತು.
ಅದೆಷ್ಟೋ ದಿನಗಳು ಅವರ ಮನೆಯಲ್ಲಿ ರಾತ್ರಿ ಉಳಿದುಕೊಂಡು ನನ್ನ ಪ್ರಬಂಧದ ತಿದ್ದುವಿಕೆಯ ಕಾರ್ಯವನ್ನು ನಾನು ಮಾಡಿದ್ದೆವು.ಅದರಲ್ಲೂ ನನ್ನ ಪ್ರಬಂಧ ದಲ್ಲಿ ನೂರರಷ್ಟು ಭಾವಚಿತ್ರಗಳಿದ್ದವು.ಇವನ್ನು ಫೋಟೋ ಶಾಪ್ ಮಾಡಿ ಹಾಕಲು ಅವರ ಕಂಪ್ಯೂಟರ್ ನಲ್ಲಿ ಕಷ್ಟವಾದಾಗ ಅವರ ಸ್ನೇಹಿತರಾದ ಹರಿಹರ ಶ್ರೀನಿವಾಸರ ಮನೆಗೆ ಹೋಗಿ ರಾತ್ರಿ ಇಡೀ ಕುಳಿತು ಈ ಕೆಲಸವನ್ನು ಮುಗಿಸಿದ್ದೆವು.
ನನ್ನ ಮೊದಲ ಪಿಎಚ ಡಿ ಪ್ರಬಂಧ ತುಳು ನಾಡಿನ ನಾಗ ಬ್ರಹ್ಮ ಮತ್ತು ಕಂಬಳ - ಒಂದು ವಿಶ್ಲೇಷಣಾತ್ಮಕ ಅಧ್ಯಯನ ತುಂಬಾ ಪರಿಶ್ರಮವನ್ನು ಕೇಳುವ ವಿಷಯ .ಇದಕ್ಕಾಗಿ ವ್ಯಾಪಕ ಕ್ಷೇತ್ರ ಕಾರ್ಯ ಮಾಡಬೇಕಿತ್ತು.ಕಾಲೇಜಿನ ಕೆಲಸದೊಂದಿಗೆ ಸಮಯ ಹೊಂದಾಣಿಕೆಯೂ ಸಮಸ್ಯೆಯದೇ ಆಗಿತ್ತು
ನನ್ನ ಮಾರ್ಗದರ್ಶಕರಾದ ಡಾ.ಎಸ್ ನಾಗರಾಜು ಅವರು ನನ್ನಿಂದ ಉತೃಷ್ಟ ಮಟ್ಟದ ಸಂಶೋಧನಾ ಪ್ರಬಂಧ ವನ್ನು ನಿರೀಕ್ಷಿಸುತ್ತಾ ಇದ್ದರು.ಅವರು ತುಂಬಾ ದೊಡ್ಡ ಸಂಶೋಧಕರು.ಅವರ ಮಟ್ಟಕ್ಕೆ ಏರುವುದು ನನಗೆ ಸುಲಭಸಾಧ್ಯವಾಗಿರಲಿಲ್ಲ ಅವರಿಗೆ ತೃಪ್ತಿ ಆಗದಿದ್ದರೆ ಅವರು ನನ್ನ ವಾರ್ಷಿಕ ವರದಿಗೆ ಸಹಿ ಮಾಡುತ್ತಾ ಇರಲಿಲ್ಲ. ಮೊದಲು ವರದಿಯನ್ನು ಕೈಯಲ್ಲಿ ಬರೆದು ನಿರ್ಮಲಾ ಮನೆಗೆ ಬಂದು ಡಿಟಿಪಿ ಮಾಡಿ ಗುರುಗಳ‌ಮನೆಗೆ ಹೋಗಿ ನನ್ನ ಅಧ್ಯಯನ ವನ್ನು ತಿಳಿಸಿ ಅದರ ಸಾರವನ್ನು ಬರೆದಿರುವ ವರದಿಯನ್ನು ನೀಡುತ್ತಿದ್ದೆ.ಅವರು ಅದರಲ್ಲಿ ಅನೇಕ ಬದಲಾವಣೆಗಳನ್ನು ಸೂಚಿಸುತ್ತಾ ಇದ್ದರು.ಮತ್ತೆ ನಿರ್ಮಲಾ ಮನೆಗೆ ಬಂದು ವರದಿಯನ್ನು ‌ತಿದ್ದಿ ಮತ್ತೆ ಗುರುಗಳ‌ಮನೆಗೆ ಹೋಗುತ್ತಾ ಇದ್ದೆ.ಕೆಲವೊಮ್ಮೆ ಮೂರು ನಾಲ್ಕು ಬಾರಿ ತಿದ್ದು ಪಡಿ ಆಗುತ್ತಾ ಇತ್ತು
ನನ್ನ ಮನೆಯಿಂದ ನಿರ್ಮಲಾ ‌ಮನೆಗೆ ಸುಮಾರು ಅರೇಳು‌ ಕಿಮೀ ದೂರು.ನಿರ್ಮಲಾ ‌ಮನೆಯಿಂದ  ಗುರುಗಳ ಮನೆಗೆ ಹತ್ತು ಕಿಮೀ ನಷ್ಟು ದೂರ..ನನ್ನಲ್ಲಿ ಒಂದು ಸ್ಕೂಟಿ ಇದ್ದ ಕಾರಣ ಹೇಗೋ ನಡೆಯುತ್ತಾ ಇತ್ತು
ಕೆಲವೊಮ್ಮೆ ನನಗೂ ಗುರುಗಳಿಗೂ ಅಭಿಪ್ರಾಯ ವ್ಯತ್ಯಾಸ ಬರುತ್ತಾ ಇತ್ತು.ಒಂದು ಬಾರಿ ವರದಿ ತಯಾರು ಮಾಡಿ ನಿರ್ಮಲಾ ಮನೆಗೆ ಹೊಗಿ ಡಿಟಿಪಿ ಮಾಡಿಸಿ ತಿದ್ದು ಪಡಿ ಮಾಡಲು ಬರುತ್ತೇನೆ ಎಂದು ಹೇಳಿ ಗುರುಗಳ‌ಮನೆಗೆ ಹೋಗಿದ್ದೆ  ಗುರುಗಳ ಮನೆಗೆ ಹೋದಾಗ ಕೆಲವು ತಿದ್ದು ಪಡಿ ಹೇಳಿದ್ದರು ಅದರಲ್ಲಿ ಕೆಲವನ್ನು ನಾನು ಒಪ್ಪಲು ತಯಾರಿರಲಿಲ್ಲ
ಅವರು ಹೇಳಿದಂತೆ ಬದಲಾವಣೆ ಮಾಡದಿದ್ದರೆ ಅವರು ವರದಿಗೆ ಸಹಿ ಹಾಕುವುದಿಲ್ಲ ( ವರ್ಷಕ್ಕೆ ಎರಡು ಬಾರಿ ವರದಿ ಸಲ್ಲಿಸಲು ಇದೆ)
ಹೇಗೋ ಒಂದು ಪಿಎಚ್ ಡಿ ಪದವಿ ಪಡೆಯುವ ಉದ್ದೇಶ ನನಗಿರಲಿಲ್ಲ .ನಾನು ಮಾಡಿತ್ತಿರುವ ಅಧ್ಯಯನ ಸರಿ ಇದೆಯೇ ಎಂಬುದನ್ನು ನಾನು ಡಾ.ಅಮೃತ ಸೋಮೇಶ್ವರರಲ್ಲಿ ಚರ್ಚಿಸಿ ನಂತರ ಬರೆಯಿತ್ತಾ ಇದ್ದೆ.ಹಾಗಾಗಿ ಕೆಲವು ನನ್ನದೇ ಆದ ನಿಲುವುಗಳನ್ನು ಬದಲಾಯಿಸಲು ಸಾಧ್ಯಗುವುದಿಲ್ಲ ನನಗೆ.
ಮೊದಲೇ ಕಾಲೇಜು ಕೆಲಸ ,ಆಗ ಮಗ ಚಿಕ್ಕವನಿದ್ದು ಇವನ ಓದು ಹೋಂ್ ವರ್ಕ್ ,ಜೊತೆಗೆ ಕ್ಷೇತ್ರ ಕಾರ್ಯ ಇವೆಲ್ಲದರ ನಡುವೆ ನನಗೂ ಗುರುಗಳಿಗೂ ಅಭಿಪ್ರಾಯ ವ್ಯತ್ಯಾಸ ಎಲ್ಲದರಿಂತ ಸೋತು ಸೊರಗಿ ಹೋಗಿದ್ದ ನನಗೆ ಪಿಎಚ ಡಿ ಪದವಿಯು ಬೇಡ ಏನೂ ಬೇಡ ಎನಿಸಿತ್ತು.ಗುರುಗಳಲ್ಲಿ ತಿದ್ದು ಪಡಿ ಮಾಡಿ ತರುತ್ತೇನೆ ಎಂದು ಹೇಳಿದವಳು ನಿರ್ಮಲಾ ಮನೆಗೆ ಹೋಗದೆ ಸೀದಾ ನನ್ನ ‌ಮನೆಗೆ ಬಂದು ಬರೆದ ಅಧ್ಯಯನ ದ ವರದಿಯನ್ನೆಲ್ಲಾ ಅಲ್ಲೆ ಮೆಜಿನ‌ಮೇಲೆ ಎಸೆದು ಟೇರೆಸ್ ಹತ್ತಿ ಆಕಾಶ ನೋಡುತ್ತಾ ದಿಙ್ಮೂಢಳಾಗಿ ಕುಳಿದಿದ್ದೆ.ಹಾಗೆಯೇ ಎಷ್ಟು ಹೊತ್ತು ಕುಳಿತಿದ್ದನೋ ಗೊತ್ತಿಲ್ಲ. ಪೋನ್ ರಿಂಗಾಗಿ ಇಹ ಲೋಕಕ್ಕೆ ಬಂದೆ .ನಿರ್ಮಲಾ ಪೋನ್ ಮಾಡಿ ಡಿಟಿಪಿ ಮಾಡಿಸಲು ಯಾಕೆ ಬಂದಿಲ್ಲ ಎಂದು ಕೇಳಿದರು.
ಅಯ್ಯೋ ಬಿಡಿ ನಿರ್ಮಲಾ ನಾನಿನ್ನು ಬರೋದಿಲ್ಲ ಪಿಎಚ್ ಡಿ ಮಾಡಿ ಉದ್ಧಾರ ಆಗ್ಲಿಕೆ ಏನಿದೆ ? ಜಗತ್ತಿನಲ್ಲಿ ಪಿಎಚ್ ಡಿ ಮಾಡದ ಯಾರೂ ಬದುಕುತ್ತಾ ಇಲ್ಲವಾ ? ಇತ್ಯಾದಿಯಾಗಿ ಹೇಳುತ್ತಾ ಹೋದೆ ಎಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಂಡ ಅವರು " ಎಂತ ಲಕ್ಷ್ಮೀ ಇದು ? ಈಗಾಗಲೇ ಕ್ಷೇತ್ರ ಕಾರ್ಯ ಮುಗಿದಿದೆ ಪ್ರಬಂಧ ಕೂಡ ಎಂಬತ್ತು ಶೇಕಡಾ ಸಿದ್ದವಾಗಿದೆ.ಈ ಹಂತದಲ್ಲಿ ಕೈ ಬಿಟ್ಟರೆ ನೀವು ಇಷ್ಟು ಸಮಯ ಕಷ್ಟ ಬಂದದ್ದಕ್ಕೆ ಏನು ಸಿಕ್ಕಂತಾಯಿತು.ಎಂತೆಂಥವರೆಲ್ಲಾ ಪಿಎಚ್ ಡಿ ಮಾಡಿದ್ದಾರೆ ಗೊತ್ತಾ ? ನಾಳೆ ಬೆಳಿಗ್ಗೆ ಬನ್ನಿ ,ಡಿಟಿಪಿ ಮಾಡಿ‌ಕೊಡುತ್ತೇನೆ ಗೈಡ್ ಮನೆಗೆ ಹೋಗಿ ಸಹಿ ಹಾಕಿಸಿವರದಿ ಸಲ್ಲಿಸಿ ಫೀಸ್ ಕಟ್ಟಿ, ಎಲ್ಲರಿಗೂ ಪಿಎಚ್ ಡಿ ಮಾಡಲು ಅವಕಾಶ ಸಿಗುವುದಿಲ್ಲ ಸಿಕ್ಕ ಅವಕಾಶ ಬಿಟ್ಟರೆ ಅದಕ್ಕಿಂತ ದೊಡ್ಡ ಮೂರ್ಖತನ ಬೇರೆ ಇಲ್ಲ ಎಂದು ಹಿತ ನುಡಿದರು.ಸ್ವಲ್ಪ ಸಮಾಧಾನವಾಗಿ ಮನೆಯೊಳಗೆ ಬಂದೆ.ಚಕ್ ದೇ ಇಂಡಿಯಾ ಸಿನಿಮಾ ಟಿವಿ ಯಲ್ಲಿ ಬರ್ತಾ ಇತ್ತು.
ಅದೊಂದು ಅದ್ಭುತ ಸಿನಿಮಾ. ಅದು ಮುಗಿಯುವಷ್ಟರಲ್ಲಿ ಹತಾಶೆಯನ್ನು ತೊಡೆದು ಹಾಕಿ ಎಂದಿನ ಲಕ್ಷ್ಮೀ ಆದೆ.ಒಂದಿನಿತು ಗುರುಗಳು ಹೇಳಿದಂತೆ ತಿದ್ದುಪಡಿ ಪಡಿ ಮಾಡಿ ಬರೆದೆ.ಕೆಲವನ್ನು ಬದಲಾಯಿಸದೆ ಹಾಗೆಯೇ ಬಿಟ್ಟೆ.ಮರು ದಿನ ಬೆಳಗ್ಗಿನ ಜಾವವೇ ನಿರ್ಮಲಾ ‌ಮನೆಗೆ ಹೋಗಿ ಟೈಪ್ ಮಾಡಿಸಿ ಗುರುಗಳ ಮನೆಗೆ ಹೋದೆ.ಕೆಲವನ್ನು ತಿದ್ದುಪಡಿ ಮಾಡದೆ ಹಾಗೆ ಬಿಟ್ಟದ್ದೇಕೆ ಎಂದು ಕೇಳಿದರು.ಅದು ನಾನು ಬರೆದದ್ದು ಸರಿ ಎಂದು ವಾದಿಸಿದೆ.ಸಾಕಷ್ಟು ಚರ್ಚೆ ಆಯಿತು. ಕೊನೆಗೆ ಅಮೃತ ಸೋಮೇಶ್ವರರಿಗೆ ಪೋನ್ ಮಾಡಿ ವಿಷಯ ತಿಳಿಸಿ ನನ್ನ ಗುರುಗಳ ಕೈಗೆ ಕೊಟ್ಟೆ.ಅಮೃತ ಸೋಮೇಶ್ವರರು ನಾನು ಹೇಳಿರುವುದನ್ನು ಸಮರ್ಥಿಸಿ ಮನವರಿಕೆ ಮಾಡಿದರು.
ಗುರುಗಳು ಸಹಿ ಮಾಡಿದರು ನಾನು ವರದಿ ಸಲ್ಲಿಸಿ ಪೀಸ್ ಕಟ್ಟಿದೆ ಅಂತೂ ಇಂತೂ ಪಿಎಚ್ ಡಿ ಪದವಿ ಸಿಕ್ತು

ಈ ನಡುವೆ ನಾನು ಒಂದಷ್ಟು ಕಥೆಗಳನ್ನು ಬರೆದಿದ್ದು ಪತ್ರಿಕೆಗಳಲ್ಲಿ ಪ್ರಕಟವಾಗಿವದ್ದವು.ಅದೇ ರೀತಿ ಅನೇಕ ಲೇಖನಗಳು ಪ್ರಕಟವಾಗಿದ್ದವು. ಹಾಗಾಗಿ ಇವನ್ನು ಸೇರಿಸಿ ಕಥಾ ಸಂಕಲನ ‌ಮತ್ತು ಲೇಖನ ಸಂಕಲನ ಪ್ರಕಟಿಸಬೇಕೆಂಬ ಕನಸು ನನಗಿತ್ತು.ಆದರೆ ಹೇಗೆ ಏನು ಎತ್ತ ಎಂಬುದು ಗೊತ್ತಿರಲಿಲ್ಲ. ಅದೇ ಸಮಯದಲ್ಲಿ ನಿರ್ಮಲಾ ಅವರು ಯಾವುದೋ ಒಂದು ಪುಸ್ತಕ ವನ್ನು( ಬಹುಶ ಹಾವನೂರು ಅವರದಿರಬೇಕು) ಜವಾಬ್ದಾರಿ ವಹಿಸಿ ಪ್ರಕಟಿಸಿಕೊಟ್ಟದ್ದು ಗೊತ್ತಾಯಿತು. ಹಾಗಾಗಿ ಅವರಲ್ಲಿ ನನ್ನ ಎರಡು ಪುಸ್ತಕಗಳನ್ನು ಪ್ರಕಟಮಾಡುವುದು ಹೇಗೆ ? ಪ್ರಿಂಟರ್ ಅನ್ನು ಪರಿಚಯಿಸಿ ಎಂದು ಕೇಳಿದೆ.ಆರಂಭದಲ್ಲಿ ಪುಸ್ತಕ ಪ್ತಕಟಣೆಯ ಬವಣೆ ಗಳನ್ನು ಅವರು ತಿಳಿಸಿದರು.ಆದರೆ ನನಗೆ ಪುಸ್ತಕ ಪ್ರಕಟಿಸಬೇಕೆಂಬ‌ ಮರ್ಲು ತುಂಬಾ ಇತ್ತು.
ಸರಿ ನಿರ್ಮಲಾ ನನ್ನ ಆಯ್ದ ಕಥೆ ಲೇಖನಗಳನ್ನು ಡಿಟಿಪಿ ಮಾಡಿ ಶಾರದಾ ಪ್ರೆಸ್ ಮಾಲಕರ ಬಳಿಗೆ ಕರೆದುಕೊಂಡು ಹೋಗಿ ಅವರಲ್ಲಿ ಚರ್ಚಿಸಿ ನನಗೆ ಸಾಧ್ಯವಾದಷ್ಟು ಕಡಿಮೆ ಖರ್ಚಿನಲ್ಲಿ ಪುಸ್ತಕ ಪ್ರಿಂಟ್ ಮಾಡಲು ಸಹಾಯ ಮಾಡಿದರು.ಇಲ್ಲಿಂದ ಪುಸ್ತಕ ಪ್ರಕಟಿಸು ಬಗ್ಗೆ ನನಗೆ ಗೊತ್ತಾಯಿತು.ನನ್ನ ಪುಸ್ತಕಗಳ ಪ್ರಕಟಣೆಗೆ ಇವರು ಭದ್ರ ಬುನಾದಿಯನ್ನು ಹಾಕಿ ಕೊಟ್ಟರು ಈಗ ಇಪ್ಪತ್ತು ಪುಸ್ತಕಗಳು ಪ್ರಕಟವಾಗಿವೆ ಇವುಗಳಲ್ಲಿ ನನ್ನ ಹದಿನಾಲ್ಕು ಪುಸ್ತಕಗಳನ್ನು ನಾನು ಸ್ವತಃ ಪ್ರಕಟಿಸಿರುವೆ
ನಿರ್ಮಲಾ ಜೀವನೋತ್ಸಾಹಿ ಮತ್ತು ತನ್ನಿಂದ ಆದ ಸಹಾಯವನ್ನು ಮಾಡುವ ಸಹೃದಯಿ,ನನ್ನ ಕಷ್ಟದ ಸಮಯದಲ್ಲಿ ನನಗೆ ಪೂರ್ಣ ಬೆಂಬಲ ನೀಡಿರುವುದನ್ನು ನಾನೆಂದಿಗೂ ಮರೆಯಲಾರೆ.
ಅನೇಕರ ಪಿಎಚ್ ಡಿ ಪ್ರಬಂಧಗಳನ್ನು ಡಿಟಿಪಿ ಮಾಡಿ ಸೆಟ್ ಮಾಡಿ‌ಕೊಟ್ಟಿರುವ ನಿರ್ಮಲಾ ಈಗ ಸ್ವತಃ ಪಿಎಚ್ ಡಿ ಅಧ್ಯಯನ ಮಾಡುತ್ತಿದ್ದಾರೆ.ಹಲವು ಅಡ ತಡೆಗಳ ನಡುವೆಯೂ ಅವರ ಕಲಿಕೆಯ ಉತ್ಸಾಹ ಮೆಚ್ಚುವದ್ದು.ಆದಷ್ಟು ಬೇಗನೆ ಅವರಿಗೆ ಪಿಎಚ್ ಡಿ ಪದವಿ ಸಿಗಲೆಂದು ಹಾರೈಸುವೆ.

Sunday, 8 October 2017

ದೊಡ್ಡವರ ದಾರಿ -22 ಉದಾರ ಹೃದಯದ ರಾಜಗೋಪಾಲ ಕನ್ಯಾನ

ದೊಡ್ಡವರ ದಾರಿ -22   ಉದಾರ ಹೃದಯದ ರಾಜಗೋಪಾಲ ಕನ್ಯಾನ
ದೂರದ ನಕ್ಷತ್ರಕ್ಕಿಂತ ಮನೆಯ ಜಗಲಿಯ ಹಣತೆ ಹೆಚ್ಚು ಬೆಳಕು ಕೊಡುತ್ತದೆ.ಮಹಾತ್ಮರನ್ನು ಎಲ್ಲೋ ಹುಡುಕುವುದರಲ್ಲಿ ನನಗೆ ನಂಬಿಕೆ ಇಲ್ಲ.ಅಂತಹವರು ನಮ್ಮ ಸುತ್ತ ಮುತ್ತ ಅನೇಕರಿರುತ್ತಾರೆ.
 ಸ್ಥಾನ ಮಾನ ಉದ್ಯೋಗ ಸಿರಿವಂತಿಕೆಯಿಂದ ದೊಡ್ಡವರು ದೊಡ್ಡವರೆಂದು ಕರೆಸಿಕೊಳ್ಳುವುದಿಲ್ಲ,,ತಮ್ಮ ಉದಾರತೆಯಿಂದ ಗಾರೆ ಕೆಸ ಮಾಡುವ ರವಿ ಹನ್ನೊಂದು ಲಕ್ಷವನ್ನು ಕಷ್ಟದಲ್ಲಿ ಇರುವವರಿಗೆ ದಾನ ಮಾಡಿ ದೊಡ್ಡವರಾಗುತ್ತಾರೆ.ಬುಟ್ಟಿಯಲ್ಲಿ ಬಾಳೆ ಹಣ್ಣು ಇಟ್ಟುಕೊಂಡು ರಸ್ತೆ ಬದಿಯ ಮರದಡಿಯಲ್ಲಿ ಕುಳಿತು ಮಾರಾಟ ಮಾಡುವ ರಾಜು ಕೂಡ ತಮ್ಮ ಔದಾರ್ಯತೆಯಿಂದಾಗಿ ದೊಡ್ಡವರಾಗಿ ಬಿಟ್ಟಿದ್ದಾರೆ.
ದೊಡ್ಡವರೆನಿಸಿಕೊಂಡವರು ಅವರದೇ ಆದ ಕಾರಣಕ್ಕಾಗಿ ದೊಡ್ಡವರೆನಿಸಿಕೊಳ್ಳುತ್ತಾರೆ.ಆ ಅಭಿವ್ಯಕ್ತಿ ಅವರಿಗೆ ಪ್ರಕೃತಿ ಸಹಜವಾದ ಸ್ವಭಾವ ಆಗಿರುತ್ತದೆ.ಪ್ರಶಸ್ತಿ ಪುರಸ್ಕಾರ ಗಳಿಗಾಗಲೀ,ದುಡ್ಡು ಹೆಸರಿಗಾಗಲೀ ಅಂತಹವರುಔದಾರ್ಯವನ್ನು ತೋರುವುದಿಲ್ಲ.
ಇಂತಹ ನಮ್ಮ ನಿಮ್ಮೊಳಗೆ ಇರುವ ಒಬ್ಬರ ಬಗ್ಗೆ ನನಗನಿಸಿದ ನನ್ನ ಅಂತರಾಳದ ಕೆಲವು ಮಾತುಗಳನ್ನು ಇಲ್ಲಿ ಬರೆಯುತ್ತೇನೆ.
ಸುಮಾರು ಹತ್ತು ವರ್ಷಗಳ ಹಿಂದಿನ ವೃತ್ತಾಂತವಿದು
 ಆಗಿನ್ನೂ ನಾನು ಸಂಶೋಧನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದೆ.ಎಂ ಫಿಲ್ ಆಗಿದ್ದು ಪಿಎಚ್ ಡಿ ಅಧ್ಯಯನ ಆರಂಭಿಸಿದ್ದೆ.ಅದಕ್ಕಾಗಿ ಹಿರಿಯ ವಿದ್ವಾಂಸರಾದ ಡಾ.ಅಮೃತ ಸೋಮೇಶ್ವರ, ಡಾ.ಬಿಎ ವಿವೇಕ ರೈ,ಡಾ.ಚಿನ್ನಪ್ಪ ಗೌಡ,ಡಾ.ವಾಮನ ನಂದಾವರ,ಇಂದಿರಾ ಹೆಗಡೆ ಮೊದಲಾದವರ ಸಂಶೋಧನಾ ಕೃತಿಗಳನ್ನು ಓದಿ ಅರ್ಥ ಮಾಡಿಕೊಳ್ಳಲು ಯತ್ನ ಮಾಡುತ್ತಾ ಇದ್ದೆ. ನನಗೇನೋ ಪಿಎಚ್ ಡಿ ಮಾಡಬೇಕು,ಹೆಸರಿನ ಮುಂದೆ ಡಾ.ಎಂದು ಹಾಕಿಕೊಳ್ಳ ಬೇಕೆಂಬ ಕನಸಿತ್ತು .ಆದರೆ ಧೈರ್ಯ ಇರಲಿಲ್ಲ .
ಇವರೆಲ್ಲರ ಮಹಾನ್ ಗ್ರಂಥಗಳನ್ನು ಓದಿದಾಗ ಧೈರ್ಯ ಬರುವ ಬದಲು ಇಂತಹ ಗ್ರಂಥ ರಚಿಸಲು ನನ್ನಿಂದ ಆಗದೇನೋ ಎಂಬ ಆತಂಕ ಕಾಡುತ್ತಾ ಇತ್ತು.

ಇಂತಹ ಸಮಯದಲ್ಲಿ ಒಂದು ದಿನ ಸಂಜೆ ನನ್ನ ಹಳೆಯ ನೋಕಿಯಾ ಮೊಬೈಲ್ ಗೆ ಕರೆಯೊಂದು ಬಂತು.ಕರೆ ಸ್ವೀಕರಿಸಿ ಹಲೋ ಎಂದೆ,ಆ ಕಡೆಯಿಂದ ನೀವು ಲಕ್ಷ್ಮೀ ಯವರ ಎಂದು ಕೇಳಿದರು.ಯಾಕಪ್ಪಾ ದೇವರೆ ? ಯಾರಿದು ಫೋನ್ ಮಾಡಿರೋದು ? ನಾನು ವಿದ್ಯಾರ್ಥಿಗಳ ಕಲಿಕೆ ಮತ್ತು ಶಿಸ್ತಿನ ವಿಚಾರದಲ್ಲಿ ಸ್ವಲ್ಪ ಬಿಗಿಯಾಗಿದ್ದು ,ಓದಿ ಬರೆಯದೆ ಇದ್ದರೆ ಕಲಿಯದೆ ಇದ್ದರೆ ಅಶಿಸ್ತು ತೋರಿದರೆ ಮಕ್ಕಳನ್ನು ಸ್ವಲ್ಪ ಮಟ್ಟಿಗೆ ಜೋರು ಮಾಡುತ್ತಿದ್ದೆ.
‌ಹಾಗೆ ಯಾರಾದರೂ ವಿದ್ಯಾರ್ಥಿ ನನ್ನ ಮೇಲೆ ಹೆತ್ತವರಿಗೇನಾದರೂ ದೂರು ಕೊಟ್ಟರೇನೋ ? ಎಂದು ಆತಂಕವಾಯಿತು.ಆದರೂ ನನ್ನ ನಂಬರ್ ವಿದ್ಯಾರ್ಥಿಗಳಿಗೆ ಸಿಗಲು ಸಾಧ್ಯವಿಲ್ಲ, ಅಪರಿಚಿತರಿಗೆ ಯಾರಿಗೂ ನನ್ನ ಫೋನ್ ನಂಬರ್ ಸಿಗುವ ಸಾಧ್ಯತೆ ಇಲ್ಲ.ಹಾಗಿದ್ದರೂ ಇದಾರು ಅಪರಿಚಿತ ಸಂಖ್ಯೆ ಯಿಂದ ಫೋನ್ ಮಾಡಿ ನೀವು ಲಕ್ಷ್ಮೀ ಯವರ ಎಂದು ಕೇಳುತ್ತಿರುವುದು ಎಂದು ಆತಂಕ ಆಯಿತು.ಏನೊಂದು ಉತ್ತರಿಸದೆ ತಡವರಿಸಿದೆ.ಆಗ ಅವರು ನೀವು ಲಕ್ಷ್ಮೀ ಜಿ ಪ್ರಸಾದ ತಾನೇ ಎಂದು ಕೇಳಿದರು.ಆಗಿನ್ನೂ ನಾನು ಬರವಣಿಗೆಯ ಕ್ಷೇತ್ರದಲ್ಲಿ ಅಂಬೆಗಾಲಿಕ್ಕುವ ಮಗು( ಈಗಲೂ ಅಷ್ಟೇ ಮುಂದೆ ಬೆಳೆಯಲೇ‌ಇಲ್ಲ ಅದು ಬೇರೆ ವಿಚಾರ),ಹಾಗಿರುವಾಗ ನನ್ನ ಕಾವ್ಯ ನಾಮ ಕೂಡ ಇವರಿಗೆ ಗೊತ್ತಾಗಿದೆ ,ಇವರ್ಯಾರಪ್ಪ ಎಂದು ಕುತೂಹಲ ಆಯಿತು.ಹೌದು ಎಂದು ಹೇಳಿದೆ.ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕ ನೀವೇ ಬರೆದದ್ದು ತಾನೇ ? ಎಂದು ಕೇಳಿದರು.ಓಹ್! ನಾನು ಎಷ್ಟೋ ವರ್ಷಗಳ ಹಿಂದೆ ಏಳನೇ ತರಗತಿಯಲ್ಲಿ ಓದುತ್ತಿದ್ದಾಗ ಬರೆದ ನಾಟಕದ ಬಗ್ಗೆ ಇವರಿಗೆ ಹೇಗೆ ಗೊತ್ತಾಯಿತು ಎಂದು ಆಶ್ಚರ್ಯವೂ ಆಯಿತು.ಅಷ್ಟರಲ್ಲಿ ಅವರೇ ಮುಂದುವರಿದು
ಆಗ ಅವರು ತಾನು ರಾಜಗೋಪಾಲ ಕನ್ಯಾನ,ನೀವು ಪಿಎಚ್ ಡಿ ಅಧ್ಯಯನ ಮಾಡುತ್ತಿರುವ ಬಿ ಎಂ ಶ್ರೀ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಪ್ರೊ.ಗೀತಾಚಾರ್ಯ ನಿಮ್ಮ ಫೋನ್ ನಂಬರ್ ಕೊಟ್ಟರು.ನಿಮ್ಮ ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕ ಬಗ್ಗೆ ಮಾತಾಡಬೇಕಿತ್ತು.ನಿಮ್ಮ ಮನೆಗೆ ಬರಬಹುದಾ ಎಂದು ಕೇಳಿದರು.
‌ಗೀತಾಚಾರ್ಯರು ನಂಬರ್ ಕೊಟ್ಟ ಕಾರಣ ನಾನು ನಿರಾಳವಾದೆ.ಅವರು ಹಾಗೆಲ್ಲ ಯಾರ್ಯಾರಿಗೋ ತಮ್ಮ ಸಂಸ್ಥೆಯ ವಿದ್ಯಾರ್ಥಿನಿಯ ನಂಬರ್ ಕೊಡುವವರಲ್ಲ ,ಹಾಗಾಗಿ ಸರಿ ಮನೆಗೆ ಬನ್ನಿ ಎಂದು ಮನೆ ವಿಳಾಸ ತಿಳಿಸಿದೆ.
‌ಸ್ವಲ್ಪ ಹೊತ್ತಿನಲ್ಲಿ ನಮ್ಮ ಮನೆಗೆ ಬಂದರು.ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕ ರಚನೆಯಾದ ಕಾಲ ,ಕಥಾ ವಸ್ತು ಬಗ್ಗೆ ಮಾಹಿತಿ ಕೇಳಿದರು. ನಾನು 1984ರಲ್ಲಿ ಏಳನೇ ತರಗತಿಯಲ್ಲಿ ಬರೆದು ಅಭಿನಯಿಸಿ ಬಹುಮಾನ ಪಡೆದ ನಾಟಕ ಅದಾಗಿತ್ತು. ಅನಂತರವೂ ಅದನ್ನು ಅಭಿನಯಿಸಿ ನಾನು ಶಾಲಾ ಕಾಲೇಜುಗಳಲ್ಲಿ ಬಹುಮಾನ ಪಡೆದಿದ್ದೆ.ನನ್ನ ಸ್ನೆಹಿತೆಯರು ಬೇರೆ ಕಡೆ ಕೂಡ ಪ್ರದರ್ಶನ ಮಾಡಿದ್ದರು. ಅದು ಹವ್ಯಕ ಕನ್ನಡದಲ್ಲಿ ಬರೆದ ನಾಟಕವಾಗಿದ್ದು ಅದನ್ನು 1997 ರಲ್ಲಿ ಮಂಗಳೂರು ಹವ್ಯಕ ಸಭಾದ ವಾರ್ಷಿಕೋತ್ಸವದಲ್ಲಿ   ರಾಜಿ ಬಾಲಕೃಷ್ಣ,ರಾಜೇಶ್ವರಿ,ಪುಷ್ಪಾ ಖಂಡಿಗೆ ನಾನುಮೊದಲಾದ ಕೆಲವು ಮಹಿಳೆಯರು ಸೇರಿಕೊಂಡು ಅಭಿನಯಿಸಿದ್ದೆವು.ಅದು ಆಗಿನ ಹವ್ಯಕ ವಾರ್ತೆ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
‌ಹವ್ಯಕ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ನಾರಾಯಣ ಶಾನುಭಾಗರು ಹವ್ಯಕ ಸಾಹಿತ್ಯ ಚರಿತ್ರೆಯ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದ್ದು ಹಳೆಯ  ಹವ್ಯಕ ವಾರ್ತೆ ಪತ್ರಿಕೆಗಳಲ್ಲಿ ದಾಖಲೆಗಳನ್ನು ಹುಡುಕುತ್ತಾ ಇರುವಾಗ ಅಂದು ನಾವು ಅಭಿನಯಿಸಿದ ನಾಟಕದ ವರದಿಯನ್ನು ಓದಿದರು.2006 ರ ತನಕ ಹವ್ಯಕ ಮಹಿಳೆಯರು ನಾಟಕ ರಚಿಸಿದ್ದು ಆ ತನಕ ಅವರ ಗಮನಕ್ಕೆ ಬಂದಿರಲಿಲ್ಲ, ಅ ವರದಿಯನ್ನು ಓದಿದಾಗ ನಾನು ರಚಿಸಿದ ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕ ವೇ ಮಹಿಳೆ ರಚಿಸಿದ ಮೊದಲ ಹವ್ಯಕ ನಾಟಕ ಎಂಬುದನ್ನು ಸ್ಪಷ್ಟವಾಗಿ ತಿಳಿದು ಆ ನಾಟಕವನ್ನು ಪ್ರಕಟಿಸುವ ಸಲುವಾಗಿ ಅದರ ಹಸ್ತಪ್ರತಿ ಸಂಹ್ರಹಿಸುವ ಜವಾಬ್ದಾರಿ ಯನ್ನು ರಾಜಗೋಪಾಲ ಕನ್ಯಾನ ಅವರಿಗೆ ವಹಿಸಿದ್ದರು. ಹಾಗಾಗಿ ಅವರು ಲಕ್ಷ್ಮೀ ಜಿ ಪ್ರಸಾದ ಯಾರೆಂದು ಹುಡುಕುತ್ತಾ ಇದ್ದರು.ಆ ನಾಟಕ ಮಂಗಳೂರು ಹವ್ಯಕ ಸಭೆಯಲ್ಲಿ ಪ್ರದರ್ಶನ ಮಾಡಿದ ಸಮಯದಲ್ಲಿ ನಾನು ಮಂಗಳೂರಿನಲ್ಲಿ ಇದ್ದೆ.ನಂತರ ನಾನು ಪ್ರಸಾದ ಉದ್ಯೋಗಕ್ಕಾಗಿ ಎಲ್ಲೆಲ್ಲೋ ಅಲೆದಾಡುತ್ತಾ ಬೆಂಗಳೂರು ಸೇರಿದ್ದೆವು.ಮಂಗಳೂರು ಹವ್ಯಕ ಸಭೆಯಲ್ಲಿ ವಿಚಾರಿಸಿದಾಗ ಅವರು  ಮೂಲತಃ ಹೊಸಂಗಡಿ ಸಮಿಪದ  ಮೀಯಪದವು,ಕೋಳ್ಯೂರು ಸಮೀಪದವರು.ಈಗ ಬೆಂಗಳೂರು ನಲ್ಲಿ ಎಲ್ಲೋ ಇರಬೇಕು ಎಂದು ತಿಳಿಸಿದರಂತೆ.
‌ನನ್ನ ಮನೆ ಹೆಸರು ವಿದ್ಯಾ ಎಂದು. ನಮ್ಮ ಊರ ಕಡೆ ನಮ್ಮ ಕುಟುಂಬದವರಿಗೆ ಬಿಟ್ಟು ಬೇರೆ ಯಾರಿಗೂ ನನಗೆ ಲಕ್ಷ್ಮೀ ಎಂಬ ಹೆಸರು ಇರುವುದಾಗಲೀ ,ಲಕ್ಷ್ಮೀ ಜಿ ಪ್ರಸಾದ ಎಂಬ ಹೆಸರು ಇರುವುದಾಗಲಿ ಗೊತ್ತೇ ಇಲ್ಲ.ಹಾಗಾಗಿ ನಮ್ಮ ಊರ ಕಡೆ ಲಕ್ಷ್ಮೀ ಜಿ ಪ್ರಸಾದ ಯಾರು ಎಲ್ಲಿದ್ದಾರೆ ಎಂದು ವಿಚಾರಿಸಿದಾಗ ಅಂತ ಹೆಸರಿನವರು ಇಲ್ಲಿ ಯಾರೂ ಇಲ್ಲ ಎಂದು ಹೇಳಿದರಂತೆ.
‌ ರಾಜಗೋಪಾಲ ಕನ್ಯಾನ ಅವರು ಯಕ್ಷಗಾನ ಪ್ರೇಮಿಯಾಗಿದ್ದು ಈ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದವರು.ಕಲಾ ಪೋಷಕರಾಗಿದ್ದುಹಲವಾರು ಸಂಘ ಸಂಸ್ಥೆಗಳೊಂದಿಗೆ ಕೆಲಸ ಮಾಡಿದವರು,ಸಂಪರ್ಕ ಇದ್ದವರು .ಹಾಗಾಗಿ ಅವರು ತಮ್ಮ ಪರಿಚಯದ ಜನರಲ್ಲಿ ಲಕ್ಷ್ಮೀ ಜಿ ಪ್ರಸಾದ ಯಾರು ಎಲ್ಲಿದ್ದಾರೆ ಎಂದು ವಿಚಸರಿಸುತ್ತಾ ಇದ್ದರು.
‌ಹಾಗೆಯೇ ಒಂದು ದಿನ ಬಿ ಎಂ ಶ್ರೀ ಪ್ರತಿಷ್ಠಾನ ದ ಗೌರವ ಕಾರ್ಯದರ್ಶಿಗಳಾಗಿದ್ದ ಗೀತಾಚಾರ್ಯ ಸಿಕ್ಕಾಗ ನನ್ನ ಬಗ್ಗೆ ಮಾಹಿತಿಗಾಗಿ ವಿಚಾರಿಸಿದರಂತೆ.ಆಗ ಅವರು ನಮ್ಮಲ್ಲಿ ಪಿಎಚ್ ಡಿ ಅಧ್ಯಯನ ಮಾಡುತ್ತಿರುವ ಲಕ್ಷ್ಮೀ ವಿ ಎಂಬವರು ಇದ್ದಾರೆ.ಅವರಿಗೆ ಬರವಣಿಗೆಯ ಹವ್ಯಾಸವೂ ಇದೆ.ಅವರೇ ಲಕ್ಷ್ಮೀ ಜಿ ಪ್ರಸಾದ ಇರಲೂ ಸಾಕು ಎಂದು ಹೇಳಿ ನನ್ನ ಫೋನ್ ನಂಬರ್ ನೀಡಿದ್ದರು.
‌ನಮ್ಮ ಮನೆಗೆ ಬಂದ ರಾಜಗೋಪಾಲ ಅವರು ನನ್ನ ನಾಟಕದ ಹಸ್ತ ಪ್ರತಿ ಇದೆಯಾ ,ಹವ್ಯಕ ಅಧ್ಯಯನ ಕೇಂದ್ರದ ಮೂಲಕ ಪ್ರಕಟಿಸುತ್ತೇವೆ ಎಂದು ತಿಳಿಸಿದರು..ಇದೆ,ಎಲ್ಲಿದೆ ಎಂದು ಹುಡುಕಬೇಕು  ಒಂದು ವಾರ ಸಮಯ ಕೊಡಿ ಎಂದು ಹೇಳಿದೆ.ನನ್ನ ಎಂ ಫಿಲ್ ಸಂಶೋಧನಾ ಪ್ರಬಂಧದ ಒಂದು ಪ್ರತಿ ಅಲ್ಲಿಯೇ ಮೆಜಿನ ಮೇಲೆ ಇತ್ತು.
‌ಅದನ್ನು ನೋಡಿ ತೆರೆದು ಮೇಲೆ ಮೇಲಿನಿಂದ ಓದಿ ತುಂಬಾ ಚೆನ್ನಾಗಿದೆ, ಪ್ರಕಟ ಮಾಡಿ ಎಂದು ಹೇಳಿದರು.ಏನೋ   ಎಂ ಫಿಲ್ ಪದವಿಗಾಗಿ ಒಂದಷ್ಟು ಬರೆದಿದ್ದೆ.ಅದು ಪ್ರಕಟಮಾಡಲು ಯೋಗ್ಯವಾದುದು ಎಂದು ನಾನು ಕನಸುಮನಸಿನಲ್ಲೂ ಯೋಚಿಸಿರಲಿಲ್ಲ.ರಾಜ ಗೋಪಾಲ ಕನ್ಯಾನ ತುಂಬಾ ತಿಳಿದವರು.ಅವರು ಹೇಳಿದ ಕಾರಣ ಅದು ಪ್ತಕಟ ಮಾಡಲು ಯೋಗ್ಯವಾಗಿರಬಹುದು ಎಂದು ನನಗೂ ಅನಿಸಿತು.
‌ಅದಕ್ಕೆ ಸ್ವಲ್ಪ ಮೊದಲು ಮನೆಯಂಗಳದಿ ಹೂ ಎಂಬ ಕಥಾ ಸಂಕಲನ ಮತ್ತು ಅರಿವಿನಂಗಳದ ಸುತ್ತ ಎಂಬ ಶಿಕ್ಷಣ ಸಂಬಂಧಿಸಿದ ಲೇಖನಗಳ ಸಂಕಲನವನ್ನು ಪ್ರಕಟಿಸಿ ಮಾರಾಟ ಮಾಡಲು ಅಂಗಡಿ ಅಂಗಡಿ ಅಲೆದರೂ ಅಗದೆ  ನಷ್ಟ ಮಾಡಕೊಂಡಿದ್ದೆ.( ನಂತರ ಗ್ರಂಥಾಲಯಕ್ಕೆ ಈ ಪುಸ್ತಕಗಳು ಅಯ್ಕೆ ಯಾಗಿ ಅವರು ಮುನ್ನೂರು ಮುನ್ನೂರು ಪುಸ್ತಕಗಳನ್ನು ತೆಗೆದುಕೊಂಡ ಕಾರಣ ಹಾಕಿದ ಅಸಲು ಹಿಂದೆ ಬಂದಿತ್ತು)
‌ಹಾಗಾಗಿ ನನಗೆ ಸ್ವಂತ ಪ್ರಕಟಿಸಲು ಸಾಧ್ಯವಿಲ್ಲ ಎಂದು ಹೇಳಿದೆ.ಆಗ ಅವರು ಯಾರಾದರೂ ಪ್ರಕಾಶಕರಲ್ಲಿ ಮಾತಾಡಿ ಪ್ತಕಟ ಮಾಡಿ ಕೊಡುತ್ತೇನೆ ಎಂದು ಹೇಳಿದರು.ಮತ್ತೆ ಕೆಲವೇ ತಿಂಗಳುಗಳಲ್ಲಿ ನನ್ನ ಬಳಿಯಿಂದ ಅದರ ಮುಲಪ್ರತಿಯನ್ನು ತೆಗೆದುಕೊಂಡು ಹೋಗಿ ಅವರು ಸ್ವತಃ ಮುತುವರ್ಜಿ ವಹಿಸಿ  ನನ್ನ ಈಜೋ ಮಂಜೊಟ್ಟಿಗೋಣ ಪಾಡ್ದನ- ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬ ಎಂ ಫಿಲ್ ಪ್ರಬಂಧವನ್ನು  ದೈವಿಕ ಕಂಬಳ ಕೋಣ ಎಂಬ ಹೆಸರಿನಲ್ಲಿ ಹರೀಶ್ ಎಂಟರ್ ಪ್ರೈಸಸ್ ಎಂಬ ಪ್ರಕಾಶಕರ ಮೂಲಕ ಪ್ರಕಟಮಾಡಿ ಹವ್ಯಕ ಸಭೆಯ ಕಾರ್ಯಕ್ರಮ ಒಂದರಲ್ಲಿ ಮಲ್ಲೇಪುರಂ ವೆಂಕಟೇಶ್ ಅವರ ಕೈಯಿಂದ ಬಿಡುಗಡೆ ಕೂಡ ಮಾಡಿಕೊಟ್ಟರು.
‌ಹೀಗೆ ನನ್ನ ಸಂಶೋಧನಾ ಪ್ರಕಟನೆಗೆ ಭದ್ರವಾದ ತಳಪಾಯ ಹಾಕಿ ಕೊಟ್ಟರು  .ಈ ಕೃತಿಯನ್ನು ಓದಿದ ಅಮೃತ ಸೋಮೇಶ್ವರ ಅವರು ಇದು ಒಂದು ಮಹತ್ವದ ಸಂಶೋಧನೆ ಆಗಿದೆ.ಇದೇ ರೀತಿ ಮುಂದುವರಿಯಿರಿ ಎಂದು ಹೇಳಿ ಪ್ರೋತ್ಸಾಹ ನೀಡಿದರು.
‌ಬಹುಷ ಅದೊಂದು ಪುಸ್ತಕ ವನ್ನು ರಾಜ ಗೋಪಾಲ ಕನ್ಯಾನ ಅವರು ಪ್ತಕಟಿಸಿ ಕೊಡದೆ ಇದ್ದರೆ ನನ್ನ ಮುಂದಿನ ಯಾವುದೇ ಸಂಶೋಧನಾ ಕೃತಿಗಳು ಪ್ರಕಟವಾಗುತ್ತಿರಲಿಲ್ಲ ಹೆಚ್ಚೇಕೆ ಅ ಪುಸ್ತಕ ಓದಿ ಅಮೃತ ಸೋಮೇಶ್ವರರು ಪ್ರೋತ್ಸಾಹ ನೀಡದೆ ಇರುತ್ತಿದ್ದರೆ ನಾನು ಭೂತಾರಾಧನೆ, ತುಳು ಸಂಸ್ಕೃತಿ ಕುರಿತಾದ ಅಧ್ಯಯನ ಮುಂದುವರಿಸುತ್ತಿರಲಿಲ್ಲ ಖಂಡಿತಾ. ಈಗ ನನ್ನ ಹದಿನೇಳು ಸಂಶೋಧನಾತ್ಮಕ ಕೃತಿಗಳು  ,ಒಂದು ಕಥಾ ಸಂಕಲನ, ಒಂದು ಲೇಖನ ಸಂಕಲನ ಒಂದು ನಾಟಕ ಸಂಕಲನ ಪ್ರಕಟವಾಗಿವೆ.ಇದಕ್ಕೆಲ್ಲ ಪ್ರೇರಣೆ ರಾಜಗೋಪಾಲ ಕನ್ಯಾನ ಅವರು ಅಂದು ನನ್ನ ಪ್ರಬಂಧ ಓದಿ ಪ್ರಕಟಿಸಿಕೊಟ್ಟಿರುವುದೇ ಆಗಿದೆ.ಮತ್ತು ನನ್ನ ನಾಟಕ ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕ ಮಹಿಳೆ ರಚಿಸಿದ ಮೊದಲ ಹವ್ಯಕ ಕನ್ನಡ ನಾಟಕ ಎಂಬ ಚಾರಿತ್ರಿಕ ಮಹತ್ವ ಪಡೆಯಲು ತನ್ಮೂಲಕ ಹವ್ಯಕ ಸಾಹಿತ್ಯ ಚರಿತ್ರೆಯಲ್ಲಿ ನನಗೊಂದು ಚಾರಿತ್ರಿಕ ದಾಖಲೆ ಸಿಗಲು ಅವರೇ ಕಾರಣರಾಗಿದ್ದಾರೆ.
‌ಇವರು ನನಗೆ ಮಾತ್ರ ಈ ರೀತಿಯ ಬೆಂಬಲ ನೀಡಿದ್ದಲ್ಲ.ನನ್ನಂತೆ ಇರುವ ಅನೇಕರ ಅಜ್ಞಾತ ಕೃತಿಗಳು ಬೆಳಕಿಗೆ ಬರುವಂತೆ ಮಾಡಿದ್ದಾರೆ.
‌ಪದ್ಯಾಣ ಗೋಪಾಲಕೃಷ್ಣ ಎಂಬ ಅಪ್ರತಿಮ ಪತ್ರಕರ್ತರ ಆತ್ಮ ಕಥನಾತ್ಮಕ ಅಂಕಣ ಬರಹಗಳನ್ನು ಸಂಗ್ರಹಿಸಿ ವಿಚಿತ್ರ ಸೃಷ್ಟಿ ಗಳ ಲೋಕದಲ್ಲಿ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಹಾಗೆಯೇ ಅನೇಕ ಯಕ್ಷಗಾನಪ್ರಸಂಗಗಳ ಕೃತಿಗಳನ್ನು, ಯಕ್ಷಗಾನ ಸಂಬಂಧಿಸಿದಂತೆ ಬೇರೆ ಬೇರೆಯವರು ರಚಿಸಿದ ಕೃತಿಗಳು ಬೆಳಕಿಗೆ ಬರುವಂತೆ ಮಾಡಿದ್ದಾರೆ. ಆದರೆ ಇದಕ್ಕಾಗಿ ಅವರು ಯಾವುದೇ ಪ್ರತಿಫಲ ಬಯಸಿಲ್ಲ.ನಿಷ್ಕಾಮ ಕರ್ಮ ಅವರದು.
‌ವೃತ್ತಿಯಲ್ಲಿ ಅಕೌಂಟ್ ಆಫೀಸರ್ ಅಗಿರುವ ಅವರು ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದರು,ಅರ್ಥಧಾರಿಗಳು.ಕಲಾ ಪೋಷಕರು.ಯಕ್ಷ ಕರ್ದಮ ಎಂಬ ಸಂಸ್ಥೆಯ ಮೂಲಕ ಅನೇಕ ಕಾರ್ಯಕ್ರಮ ಗಳನ್ನು ಆಯೋಜನೆ ಮಾಡಿದ್ದಾರೆ. ಯಾವುದೇ ಹೆಸರು ದುಡ್ಡಿಗಾಗಿ ಇವನ್ನು ಮಾಡಿಲ್ಲದೇ ಇದ್ದರೂ ಅನೇಕ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿವೆ.
ಪದ್ಯಾಣ ಗೋಪಾಲ ಕೃಷ್ಣರ ಕುರಿತಾಗಿ ಚಿದಂಬರ ಬೈಕಂಪಾಡಿ ರಚಿಸಿದ   ಪ.ಗೋ ಪ್ರಪಂಚ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಪ.ಗೋ ಅವರ ಮಕ್ಕಳು ರಾಜಗೋಪಾಲ ಕನ್ಯಾನ ಅವರನ್ನು ಗುರುತಿಸಿ ಗೌರವಿಸಿದ್ದಾರೆ.
ಗಾನ ಸೌರಭ ಯಕ್ಷಗಾನ ಶಾಲೆ ವತಿಯಿಂದ ಯಕ್ಷಾಭಿವಂದನಮ್ ಪುರಸ್ಕಾರ ವನ್ನು ನೀಡಿ ಗೌರವಿಸಿದ್ದಾರೆ.ಇನ್ನೂ ಅನೇಕ ಸಂಘ ಸಂಸ್ಥೆಗಳು ಗೌರವಿಸಿವೆ.
ಬೇರೆಯವರ ಪ್ರತಿಭೆಯನ್ನು ಗುರುತಿಸಿ ,ಪ್ರೋತ್ಸಾಹ ನೀಡುವ ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೆ ಅವರ ಕೃತಿಗಳ ಪ್ರಕಟನೆಗೆ ಸಹಾಯ ಮಾಡುವ ,ಎಲೆಮರೆಯ ಕಾಯಿಗಳನ್ನು ಬೆಳಕಿಗೆ ತಂದು ತಾವು ತೆರೆಮರೆಯಲ್ಲಿ ನಿಲ್ಲುವ ಇವರ ಔದಾರ್ಯ,ಉದಾತ್ತ ಹೃದಯವನ್ನು ಯಾರೂ ಕೂಡ ಮೆಚ್ಚ ಬೇಕಾದ್ದೇ ಸರಿ
ಇಂತಹವರ ಸಂಖ್ಯೆ ತೀರಾ ಕಡಿಮೆ ಇದೆ.ನನಗೆ ರಾಜಗೋಪಾಲ ಕನ್ಯಾನ ಈಗ  ಸಹೋದರನ ಸ್ಥಾನದಲ್ಲಿ ನಿಂತು ಬೆಂಬಲ ನೀಡುತ್ತಿರುವ ರಾಜಗೋಪಾಲಣ್ಣ ಆಗಿದ್ದಾರೆ.
ಇಂತಹವರ ಸಂಖ್ಯೆ ಹೆಚ್ಚಾಗಲಿ ಎಂದು ಆಶಿಸುವೆ
© ಡಾ.ಲಕ್ಷ್ಮೀ ಜಿ ಪ್ರಸಾದ


Monday, 2 October 2017

ನಂಬಿದರೆ ನಂಬಿ ಇಲ್ಲವೇ ಬಿಡಿ ಆದರೆ ಇದು ನಡೆದದ್ದು ಸತ್ಯ

ಸುಮಾರು ಒಂದೂವರೆ ವರ್ಷದ ಹಿಂದೆ ಒಂದು ದಿನ ನಾನು ರೈಲು ಮೂಲಕ ಮಂಗಳೂರಿಗೆ ಹೋಗುವಾಗ ರೈಲಿನಲ್ಲಿ ಓರ್ವ ಚೆನ್ನೈ ಹೈಕೋರ್ಟ್ ವಕೀಲರು ಮಾತಿಗೆ ಸಿಕ್ಕರು,ಮಾತಿನ ನಡುವೆ ನನ್ನ ಆಸಕ್ತಿ ಯ ಕ್ಷೇತ್ರ ಭೂತಾರಾಧನೆ ಬಗ್ಗೆ ಹೇಳಿದೆ.ಕುತೂಹಲ ದಿಂದ ಅನೇಕ ಪ್ರಶ್ನೆ ಗಳನ್ನು ಕೇಳಿದರು.ನಂತರ ಅವರ ಮನೆಯಲ್ಲಿ ಕೆಲವು ಅಮುಲ್ಯ ವಸ್ತುಗಳು ಕಾಣೆಯಾದ ಬಗ್ಗೆ ತಿಳಿಸಿ ಇದನ್ನು ಹಿಂದೆ ಪಡೆಯಲು,ಕಳ್ಳ ಯಾರೆಂದು ತಿಳಿಯಲು ಯಾವ ದೈವಕ್ಕೆ ಹರಸಿಕೊಳ್ಳಬೇಕು ಎಂದು ಕೇಳಿದರು.ನಾವೆಲ್ಲರೂ  ಯಾವುದಾದರೂ ವಸ್ತು ಕಾಣೆಯಾದರೆ ಕೊರಗಜ್ಜ ದೈವಕ್ಕೆ ಹರಸಿಕೊಳ್ಳುತ್ತೇವೆ ಎಂದು ಹೇಳಿದೆ.ಹಾಗಾದರೆ ನಾನೂ ಕೊರಗಜ್ಜನಿಗೆ ಹರಿಕೆ ಹೇಳುತ್ತೇನೆ.ನಿಮ್ಮ ದೈವದ ಬಗ್ಗೆ ನನಗೆ ನಂಬಿಕೆ ಇದೆ ಎಂದು ಹೇಳಿದರು, ನನ್ನ ಫೋನ್ ನಂಬರ್  ಇ ಮೇಲ್ ಅಡ್ರೆಸ್ ತಗೊಂಡಿದ್ದರು.
ನಂತರ ನನಗೆ ಈ ವಿಚಾರ ಮರೆತುಹೋಗಿತ್ತು.ಸುಮಾರು ಐದಾರು ತಿಂಗಳ ನಂತರ ಅವರಿಂದ ಒಂದು ಮೇಲ್ ಬಂತು.ಅದರಲ್ಲಿ ಅವರ ಮನೆಯಲ್ಲಿ ಕಳವು ಮಾಡಿದ ವ್ಯಕ್ತಿ ಯಾರೆಂದು ತಿಳಿಯಿತು.ನೀವು ಕೊರಗಜ್ಜ ದೈವದ ಬಗ್ಗೆ ಹೇಳಿದ್ದೆಲ್ಲವೂ ಸತ್ಯ ಎಂದು  ತಿಳಿಸಿದರು
ಭೂತಾರಾಧನೆ ಬಗ್ಗೆ ತಿಳಿಯದೇ ಇರುವ ದೂರದ ಚೆನ್ನೈ ಯ ವಕೀಲರು ಭಕ್ತಿಯಿಂದ ಪ್ರಾರ್ಥನೆ ಮಾಡಿದಾಗ ಅವರ ಕಷ್ಟವನ್ನು ದೂರ ಮಾಡಿದ ದೈವ ಕೊರಗಜ್ಜನ ಬಗ್ಗೆ ಏನು ಹೇಳಲಿ
ತುಳುವರ ಜನಾನುರಾಗಿ ದೈವ ಕೊರಗಜ್ಜ ©ಡಾ.ಲಕ್ಷ್ಮೀ ಜಿ ಪ್ರಸಾದ

Thursday, 7 September 2017

ಬದುಕೆಂಬ ಬಂಡಿಯಲಿ ಅಚ್ಚರಿಯ ತಿರುವುಗಳು

ಇಂದು ಕಾಲೇಜಿನಿಂದ ಮನೆಗೆ ಬರುತ್ತಿರ ಬೇಕಾದರೆ ಬಸ್ಸಿನಲ್ಲಿ ನಾನು ಕುಳಿತ ಸೀಟಿಗಿಂತ ಎರಡು ಸೀಟು ಮುಂದೆ ಕುಳಿತಿದ್ದ ಯುವತಿ ಹಿಂತಿರುಗಿ ನೋಡಿ ಮುಗುಳು ನಕ್ಕರು.ನನ್ನ ಹಿಂದಿನ ಸೀಟ್ ನಲ್ಲಿ ಯಾರಾದರೂ ಅವರ ಪರಿಚಿತರು ಕುಳಿತಿರಬಹುದು.ಅವರನ್ನು ನೋಡಿ ಪರಿಚಯದ ನಗು ಬೀರಿರಬಹುದು ಎಂದು ಕೊಂಡೆ.ಅವರು ಮತ್ತೊಮ್ಮೆ ನೋಡಿ‌ಮುಗುಳು ನಕ್ಕರು ಯಾರಾದರೂ ನನ್ನ ಪರಿಚಿತರಿದ್ದು ನಾನು ಮರೆತಿರಬಹುದೇನೋ ಎಂದು ಕೊಂಡು ನಾನು ಪ್ರತಿನಗು ಬೀರಿದೆ. ಮುಂದಿನ ಸ್ಟಾಪ್ ನಲ್ಲಿ ಅವರ ಪಕ್ಕದ ಸೀಟ್ನಲ್ಲಿದ್ದವರು ಇಳಿದು ಹೋದರು.ಆಗ ಅವರು ನನ್ನನ್ನು ಇಲ್ಲಿಗೆ ಬರ್ತೀರಾ ಮೇಡಂ pls ಎಂದು ‌ಕರೆದರು.ಯಾಕೆಂದು ಗೊತ್ತಾಗದಿದ್ದರೂ ಎದ್ದು ಅವರ ಪಕ್ಕ ಕುಳಿತೆ." ನಿಮ್ಮಲ್ಲಿ ಮಾತಾಡಲು ಯುನಿವರ್ಸಿಟಿಗೆ ಬರಬೇಕೆಂದಿದ್ದೆ " ಎಂದು ಹೇಳಿದರು.ಯುನಿವರ್ಸಿಟಿಯಾ ? ಯಾವ ಯುನಿವರ್ಸಿಟಿ ? ನೀವು ನನ್ನನ್ನು ಬೇರೆ ಯಾರೋ ಎಂದು ತಪ್ಪಾಗಿ ಭಾವಿಸಿರಬೇಕು ಎಂದು ಹೇಳಿದೆ."ನೀವು ಬೆಂಗಳೂರು ಯುನಿವರ್ಸಿಟಿ ಯ ಕನ್ನಡ ಪ್ರೊಫೆಸರ್ ಅಲ್ವಾ ? ಎಂದು ಕೇಳಿದರು
ಅಲ್ಲ ನಾನು ನೆಲಮಂಗಲ ಪಿಯು ಕಾಲೇಜು ಉಪನ್ಯಾಸಕಿ ಎಂದು ಉತ್ತರಿಸಿದೆ .ನೀವು ಲಕ್ಷ್ಮೀ ಜಿ ಪ್ರಸಾದ್ ತಾನೇ ? ಎಂದು ಕೇಳಿದರು.ಹೌದು ಎಂದೆ."ಗಣೇಶಯ್ಯ ಕಾದಂಬರಿಯಲ್ಲಿನ ಲಕ್ಷ್ಮೀ ಪೋದ್ದಾರ್ ನೀವೆ ತಾನೆ ? ನಿಮ್ಮ ಫೋಟೋ ಕೂಡಾ ಅದರಲ್ಲಿ ಇದೆ" ಎಂದು ಹೇಳಿದರು.ಆಗ ನನಗೆ ವಿಷಯವೇನೆಂದು ತಲೆಗೆ ಹೋಯಿತು. ಕೆ ಎನ್ ಗಣೇಶಯ್ಯ ಅವರು ಅವರ ಬಳ್ಳಿ ಕಾಳ ಬೆಳ್ಳಿ ಕಾದಂಬರಿಯಲ್ಲಿ  ನನ್ನನ್ನು ಒಂದು ಮುಖ್ಯ ಪಾತ್ರವಾಗಿ ಚಿತ್ರಿಸಿದ್ದಾರೆ. ಅಲ್ಲಿಯೂ ತುಳು ಸಂಶೋಧಕಿಯ ಪಾತ್ರ ನನ್ನದು.ಅ ಕಾದಂಬರಿಯಲ್ಲಿ ಲಕ್ಷ್ಮೀ ಪೋದ್ದಾರ್ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಪ್ರೊಫೆಸರ್. ಆ ಕಾದಂಬರಿಯ ಕೊನೆಯಲ್ಲಿ ಡಾ.ಗಣೇಶಯ್ಯ ಅವರೊಂದಿಗಿನ ಫೋಟೋ ಹಾಕಿ ಲಕ್ಷ್ಮೀ ಜಿ ಪ್ರಸಾದ ಪೋದ್ದಾರ್ ಆದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ್ದರು .ಅವರ ಕಾದಂಬರಿ ಓದಿರುವ ಸುನೀತಾ ಅವರು ಅಲ್ಲಿ ಹಾಕಿರುವ ನನ್ನ ಫೋಟೋ ನೋಡಿದ್ದು ಬಸ್ ನಲ್ಲಿ ಗುರುತಿಸಿ ಮಾತನಾಡಿದರು.ಗಣೇಶಯ್ಯ ಅವರ ಕಾದಂಬತಿಗಳ ಬಗ್ಗೆ  ಮಾತನಾಡಿದರು ಭೂತಾರಾಧನೆ ತುಳು ಸಂಸ್ಕೃತಿಯ ಕುರಿತಾಗಿಯೂ ಕುತೂಹಲದಿಂದ ಹಲವಾರು ಪ್ರಶ್ನೆಗಳನ್ನು ಕೇಳಿದರು .ನನ್ನ ಪೋನ್ ನಂಬರ್ ತಗೊಂಡರು.ಅವರೊಂದಿಗೆ ಸೆಲ್ಫಿ ತಗೊಳ್ಳಬೇಕು ಅನ್ನುವಷ್ಟರಲ್ಲಿ ನಾನು ಇಳಿಯುವ ಸ್ಟಾಪ್ ಬಂತು.ಅಂದ ಹಾಗೆ ಆ ಅಂದದ ಯುವತಿ ಕಾನ್ಪುರದ ಐಐಟಿಯಲ್ಲಿ ಎಂ ಟೆಕ್ ಓದ್ತಿದ್ದಾರೆ.ಅವರಿಗೆ ಕನ್ನಡ ಕಥೆ ಕಾದಂಬರಿಗಳನ್ನು ಓದುವ ಹವ್ಯಾಸವಿದೆ.ಉತ್ತರ ಕಾಂಡ ಸೇರಿದಂತೆ ಭೈರಪ್ಪನವರ ಎಲ್ಲಾ ಕಾದಂಬರಿಗಳನ್ನು ಓದಿದ್ದಾರೆ.ಕೆ ಎನ್ ಗಣೇಶಯ್ಯ ಅವರ ಎಲ್ಲಾ ಕಾದಮಬರಿಗಳನ್ನೂ ಓದಿದ್ದಾರೆ.ವಸುಧೇಂದ್ರ ಕೂಡ ಅವರಿಗೆ ತುಂಬಾ ಅಚ್ಚುಮೆಚ್ಚು ಅಂತೆ.ಎ ಅರ್ ಮಣಿಕಾಂತ್ ಅವರ ಅಮ್ಮ ಹೇಳಿದ ಎಂಟು ಸುಳ್ಳುಗಳು ಅನ್ನು ಇಪ್ಪತ್ತು ಮೂವತ್ತು ಬಾರಿ ಓದಿದ್ದಾರಂತೆ.ಅವರ ಮಾತೃಭಾಷೆ ತೆಲುಗು ಅಂತೆ ಅದರೆ ಹುಟ್ಟಿ ಬೆಳೆದದ್ದು ಎಲ್ಲಾ ಬೆಂಗಳೂರಿನಲ್ಲಿ .ಅವರ ಸಾಹಿತ್ಯದೆಡೆಗಿನ ಒಲವು ನೋಡಿ ತುಂಬಾ ಸಂತಸವಾಯಿತು
https://www.google.co.in/amp/avadhimag.com/%3fp=173110&amp=1

Sunday, 18 June 2017

ನಾನು ಅಳುವುದನ್ನು ಮರೆತು ನೋಡುತ್ತಾ ನಿಂತಿದ್ದೆ- -ಡಾ.ಲಕ್ಮೀ ಜಿ ಪ್ರಸಾದ

ಧೋ ಎಂದು ಮಳೆ ಸುರಿಯುವ ಸದ್ದಿಗೆ ಗಾಢ ನಿದ್ರೆ ಆವರಿಸಿತ್ತು. ನಿರಂತರವಾಗಿ  ಮೊಬೈಲ್‌ ಪೋನ್ ರಿಂಗಾಗುತ್ತಾ ಇತ್ತು.ಕೊನೆಗೂ ಹೇಗೋ ಕಣ್ಣು ತೆರೆದು ಕರೆ ಸ್ವೀಕರಿಸಿದೆ.ಆ ಕಡೆಯಿಂದ ಅಕ್ಕನ ಧ್ವನಿ ಕೇಳಿಸಿತು.ನಡುರಾತ್ರಿ ಒಂದೂವರೆ ಗಂಟೆಗೆ ಅಕ್ಕ ಫೋನ್ ನೋಡಿ ಮೊದಲೇ ದುರಂತದ ಸೂಚನೆ ಸಿಕ್ಕಿ ಮನಸು ಅಳುಕಿತ್ತು.ತಂದೆಗೆ ಸೀರಿಯಸ್ ನೀನು ಆದಷ್ಟು ಬೇಗ ಮನೆಗೆ ಬಾ ಎಂದು ಹೇಳಿ ಅಕ್ಕ ಫೋನ್ ಕತ್ತರಿಸಿದಳು.ಅವಳ ಧ್ವನಿ ನಡುಗುತ್ತಾ ಇತ್ತು ಅದರಿಂದಲೇ ತಂದೆಯವರು ಬದುಕಿರಲಾರರು ಎಂದು ಅನಿಸಿತು.ಆದರೂ ಒಂದು ದೂರದ ಆಸೆಯಿಂದ ತಂದೆ ಮನೆಗೆ ಫೋನ್ ಮಾಡಿದೆ.ಪೋನೆತ್ತಿದ ಸೀಮಾ( ತಮ್ಮನ ಮಡದಿ) ತಂದೆಯವರನ್ನು ಆಸ್ಪತ್ರೆ ಯಿಂದ ಮನೆಗೆ ಕರೆ ತರುತ್ತಿದ್ದಾರೆ ಎಂದು ತಿಳಿಸಿದಾಗ ತಂದೆಯವರು ಇನ್ನಿಲ್ಲ ಎಂಬ ವಾಸ್ತವ ಅರಿವಾಗಿ ದುಃಖ ಉಮ್ಮಳಿಸಿ ಬಂತು.
ರಾತ್ರಿ ಹನ್ನೊಂದು ಗಂಟೆಗೆ ನಾನುಲಗುವ ಮೊದಲು ಮನೆಗೆ ಪೋನ್ ಮಾಡಿದ್ದೆ.ತಂದೆಯವರೇ ಫೋನ್ ಎತ್ತಿದ್ದರು.ಹೇಗಿದ್ದೀರಿ ? ಎಂದು ಕುಶಲ ವಿಚಾರಿಸಿದಾಗ ಆರಾಮಿದ್ದೇನೆ ಸ್ವಲ್ಪ ಧೂಳಿಗೆ ಕಫ ಆಗಿದೆ ಎಂದು ಹೇಳಿ ಉಪ್ಪರಿಗೆ ಮೇಲೆ ಟಿವಿನೋಡುತ್ತಿದ್ದ ಅಮ್ಮನನ್ನು ಕರೆದು ಪೋನ್ ನೀಡಿದ್ದರು.ಅಮ್ಮನ ಹತ್ತಿರ ಹತ್ತು ನಿಮಿಷ ಮಾತನಾಡಿ ನಾನು ಮಲಗಿದ್ದೆ.
ಅಮ್ಮ ಮಲಗಲೆಂದು ಬಾಗಿಲು ಹಾಕಿ ಚಾವಡಿಗೆ ಬರುವಾಗ ತಂದೆ ಕೆಮ್ಮುತ್ತಾ ಇದ್ದರು.ಆ ದಿನ ಅಡಿಕೆಯನ್ನು ಆಯುವ ಕೆಲಸ ಮಾಡಿದ ಕಾರಣ ಅಡಿಕೆ ಧೂಳಿಗೆ ಕೆಮ್ಮು ಬಂದಿದೆ ಎಂದು ತಿಳಿದು ಅಮ್ಮ ಕಫದ ಸಿರಪ್ ಅನ್ನು ನೀಡಿದರು ಕೆಮ್ಮು ಕಡಿಮೆಯಾಯಿತು.ಸ್ವಲ್ಪ ಉಸಿರು ಕಟ್ಟಿದ ಹಾಗೆ ಆಗುತ್ತದೆ ಎಂದು ಹೇಳಿದಾಗ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಸಮಿಪದ ವೈದ್ಯರಾದ ಐಕೆ ಭಟ್ಟರ ಮನೆಗೆ ಹೊರಟ.ನಮ್ಮ ಮನೆ ಹಿಂಭಾಗದ ಸಣ್ಣ ಗುಡ್ಡೆ ಯ ದಾರಿಯಲ್ಲಿ ಕಾರು ಹತ್ತುತ್ತಿದ್ದಂತೆ ತಮ್ಮ ತಂದೆಯವರಲ್ಲಿ ಏನಾಗುತ್ತಿದೆ ಎಂದು ಕೇಳಿದಾಗ ಏನಾಗಿಲ್ಲ ಆರಾಮಿದ್ದೇನೆ ಎಂದು ತಿಳಿಸಿ ಕಾರಿನ ಹಿಂಭಾಗಕ್ಕೆ ಒರಗಿ ತಂದೆಯವರು ನಿದ್ರೆಗೆ ಜಾರಿದ್ದರು.ನಿದ್ರೆಯಲ್ಲಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎಪ್ಪತ್ತ ಮೂರು ವರ್ಷದ ಅವರ ನೋವು ನರಳಿಕೆಒಂದಿನಿತೂ ಇಲ್ಲದ ಸುಖಮರಣ ಅವರು ಬಾಳಿಮದ ಸರಳ ಪ್ರಾಮಾಣಿಕ ನಿಸ್ವಾರ್ಥ ಬದುಕಿಗೆ ಹಿಡಿದ ಕೈಗನ್ನಡಿಯಾಗಿತ್ತು.ಶರಣರಬಾಳನ್ನು ಮರಣದಲ್ಲಿ ನೋಡು ಎಂಬ ಗಾದೆಮಾತಿಗೆ ನಿದರ್ಶನವಾಗಿದ್ದರು ಅವರು.ಯಾರೊಬ್ಬರಿಗೂ ಒಂದಿನಿತು ನೋವು ಮಾಡಿದವರಲ್ಲ ಮೋಸ ವಂಚನೆ ಏನೆಂದೇ ತಿಳಿಯದ ಮುಗ್ದ ಸ್ವಭಾವ ಅವರದು.ಬಿಳಿಯಾದದ್ದೆಲ್ಲಾ ಹಾಲೆಂದು ನಂಬುವ ಅವರಿಗೆ ಅನೇಕರು ಮೋಸ ಮಾಡಿದ್ದರು. ಅವರಿಂದ ಸಹಾಯ ಪಡೆದವರೇ ಹಿಂದಿನಿಂದ ದ್ರೋಹ ಮಾಡಿದ್ದರೂ ಅವರನ್ನು ಉದಾರವಾಗಿಕ್ಷಮಿಸಿವರು ನನ್ನ ತಂದೆ.ಕಷ್ಟದಲ್ಲಿ ಇರುವರನ್ನು ಕಂಡರೆ ಅಪಾರ ಅನುಕಂಪ ತನಗಾದ ಸಹಾಯ ಮಾಡುತ್ತಿದ್ದರು.
 ಸ್ನೇಹಿತೆ ವಿದ್ಯಾ ಮತ್ತು ಅವರ ಪತಿಯ ಸಹಾಯದಿಂದ ಒಂದು ಕಾರನ್ನು ಬಾಡಿಗೆಗೆ ಹಿಡಿದು ಸುರಿವ ಮಳೆಯ ಕಾರ್ತ್ತಗಲಿನಲ್ಲಿ ಮಗನೊಂದಿಗೆ ಬೆಳ್ಳಾರೆಯಿಂದ ತಂದೆ ಮನೆ ಕೋಳ್ಯೂರಿಗೆ ಹೊರಟೆ.ದಾರಿಯಲ್ಲಿ ಅಕ್ಕ ಭಾವನನ್ನೂ ಹತ್ತಿಸಿಕೊಂಡು ಮನೆ ತಲುಪುವಾಗ ಬೆಳಗಿನಜಾವ ಐದೂವರೆ ಆಗಿತ್ತು. ಬೆಳಕು ಹರಿಯುವಮುನ್ನವೇ ಸುದ್ದಿ ತಿಳಿದು ಸಂಬಂಧಿಕರು ಊರವರು ತಂದೆಯ ಶಿಷ್ಯ ವರ್ಗದರು ಬಂದು ಸೇರಿದ್ದರು.
ನನ್ನ ತಂದೆ ವಾರಣಾಸಿ ನಾರಾಯಣ ಭಟ್ಟರು ಪುರೋಹಿತ ರಾಗಿದ್ದರು. ಹವ್ಯಕರಲ್ಲಿ ಪುರೋಹಿರಿಗೆ ಗುರುಗಳ ಸ್ಥಾನಮಾನವಿದೆ.ಆದ್ದರಿಂದ ತಂದೆಯವರಿಗೆ ಅಪಾರ ಶಿಷ್ಯವರ್ಗದವರು ಇದ್ದರುಅವರಲ್ಲಿ ಅನೇಕ ಮಂದಿ ಡಾಕ್ಟರ್ ಗಳು, ಇಂಜಿನಿಯರ್‌ಗಳು, ಬ್ಯುಸಿನೆಸ್‌ ಮ್ಯಾನ್ಗಳು ಹೀಗೆ ನಾನಾ ವೃತ್ತಿಯ ಹಿರಿ ಕಿರಿಯರುಇದ್ದರು..ನನ್ನ ತಂದೆಯವರನ್ನು ಕಿರಿಯರೆಲ್ಲರೂ ಭಟ್ಟಮಾವ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ನನ್ನ ತಂದೆಯ ಶಿಷ್ಯ ವರ್ಗದವರು ತಂದೆಯವರಿಗೆ ಮನೆ ಮಂದಿಯಂತೆ ಆತ್ಮೀಯ ರಾಗಿದ್ದರು. ತಂದೆಯ ಸರಳ ಮುಗ್ದ ವ್ಯಕ್ತಿತ್ವ ಎಲ್ಲರನ್ನೂ ಹತ್ತಿರ ತಂದಿತ್ತು.
ಮನೆ ಅಂಗಳಕ್ಕೆ ಕಾಲಿಡುತ್ತಲೇ ತಂದೆಯ ನೆನಪು ಬಂದು ದುಃಖ ಉಮ್ಮಳಿಸಿ ಬಂದು ಅಳುತ್ತಲೇ ಮನೆ ಒಳಗೆ ಪ್ರವೇಶ ಮಾಡಿದೆ.ತಂದೆಯ ಶಿಷ್ಯ ವರ್ಗದವರುತುಂಬಾ ಮಂದಿ ತಂದೆಯವರ ದೇಹದ  ಕಾಲಬದಿಯಲ್ಲಿ ಕುಳಿತು ಅಳುತ್ತಾ ಇದ್ದರು.ಅವರಲ್ಲಿ ಕೆಲವರು ಡಾಕ್ಟರ್ ಗಳೂ ಇದ್ದರು.ದಿನನಿತ್ಯ ಸಾವು ನೋವುಗಳನ್ನು ನೋಡುವ ದೊಡ್ಡ ದೊಡ್ಡ ಡಾಕ್ಟರ್ ಗಳೂ ಅಳುವಂತೆ ಮಾಡಿದ್ದ ನನ್ನ ತಂದೆಯ ಔನ್ನತ್ಯಕ್ಕೆ ಬೆರಗಾಗಿ ನಾನು ಅಳುವುದನ್ನು ಮರೆತು ಅವರೆಲ್ಲ ಅಳುವುದನ್ನು ನೋಡುತ್ತಾ ನಿಂತಿದ್ದೆ.
ನನ್ನ ತಂದೆಯವರು ಪುರೋಹಿತರಾಗಿದ್ದರೂ ನಮಗೆ ಮನೆಯಲ್ಲಿ ಯಾವುದೇ ಕಟ್ಟು ಕಟ್ಟಳೆವಿಧಿಸಿರಲಿಲ್ಲ.ನಮಗೆ ಬೇಕಾದುದನ್ನು ಓದುವವೇಷಭೂಷಣ ಧರಿಸುವ ಸ್ವಾತಂತ್ರ್ಯ ಇತ್ತು.ಜೀವನ ಇಡೀ ಮಕ್ಕಳ ಏಳಿಗೆಗಾಗಿ ದುಡಿದ ಅವರುಒಂದು ದಿನ ಕೂಡ ತಾನು ದುಡಿದು ತಂದು ಹಾಕಿದ್ದೇನೆ ತನ್ನ ದುಡ್ಡು ದುಡಿಮೆ ಎಂದು ಹೇಳಿಲ್ಲ.
ಮಕ್ಕಳು ಪ್ರಥಮ ಸ್ಥಾನ ಪಡೆಯಬೇಕು ಎಂದು ಅವರ ಆಸೆಯಾಗಿತ್ತು.
ಪ್ರತಿ ಸಲ ಮಾರ್ಕ್ಸ್ ಕಾರ್ಡ್ ಸಿಕ್ಕಿದಾಗ"ಫಸ್ಟಾ .?ಎಂದು ಕೇಳುತ್ತಿದ್ದರು. ಅಲ್ಲವೆಂದಾದರೂ ಬೈಯುತ್ತಿರಲಿಲ್ಲ  ಮಾತಾಡದೆ ಸಹಿಹಾಕಿಕೊಡುತ್ತಿದ್ದರು.ಮೊದಲ ಸ್ಥಾನ ಗಳಿಸಿದ್ದರೆ ತುಂಬಾ ಸಂತೋಷ ಪಡುತ್ತಿದ್ದರು.ನಾನು ಸಂಸ್ಕೃತ ಎಂಎ ಯಲ್ಲಿ ಮೊದಲ ರಾಂಕ್ ಗಳಿಸಿದಾಗ ಸ್ವರ್ಗ ಸಿಕ್ಕಂತೆ ಸಂಭ್ರಾಮಿಸಿದ್ದರು
ತೀರಾ ಕಷ್ಟ ಇದ್ದಾಗಲೂ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಓದಿಸಿದರು.ಹೆಚ್ಚಾಗಿ ಎಲ್ಲೆಡೆ ಬರಿಗಾಲಿನಲ್ಲಿ ನಡೆದುಕೊಂಡೇ ಹೋಗುತ್ತಿದ್ದರು.ಒಂದು ದಿನ‌ಕೂಡ ಹುಷಾರಿಲ್ಲವೆಂದು ಮಲಗಿರಲಿಲ್ಲ
ಸಾಯುವ ದಿನ ಕೂಡ ರಾತ್ರಿ ಹನ್ನೊಂದು ಗಂಟೆಯ ವರೆಗೆ ಅಡಿಕೆ ಆಯುವಕೆಲಸ ಮಾಡಿದ್ದರು.ಆರೋಗ್ಯ ವಾಗಿದ್ದ ಅವರು ಹೀಗೆ ಯಾವುದೇ ಸೂಚನೆ ಇಲ್ಲದೆ ಮರಣವಪ್ಪಬಹುದು ಎಂದು ನಾವ್ಯಾರೂ ಊಹಿಸಿರಲಿಲ್ಲ.ಮಕ್ಕಳೆಲ್ಲ ಒಳ್ಳೆಯ ಕೆಲಸ ಹಿಡಿದು ಸಂಮೃದ್ದವಾಗಿದ್ದಾಗ ಅವರು ದೇವನೆಡೆಗೆ ಸದ್ದಿಲ್ಲದೆ ನಡೆದಿದ್ದರು.ದಿನನಿತ್ಯ ‌ಮಲಗುವ ಮೊದಲು ದೇವರಲ್ಲಿ ಅವರು ಅನಾಯಾಸೇನೆ ಮರಣಂ ವಿನಾ ದೈನ್ಯೇನ ಜೀವನಂ...ಅನಾಯಾಸವಾದ ಮರಣವನ್ನು ದೈನ್ಯ ರಹಿತವಾದ ಜೀವನವನ್ನು ಕೊಡು ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಇದ್ದರು .ದೇವರು ಅವರ ಪ್ರಾರ್ಥನೆ ಯನ್ನು ಮನ್ನಿಸಿ ಅದನ್ನು ಅವರಿಗೆ ಕರುಣಿಸಿದ್ದ.

Sunday, 11 June 2017

ಮದುವೆಗೆ ಬೇಕಾದ ಹೂವಿನ ಹಾರ ನಾನೇ ತಂದಿದ್ದೆ © ಡಾ ಲಕ್ಷ್ಮೀ ಜಿ ಪ್ರಸಾದ
ಚಿತ್ರ ಕೃಪೆ:  ಕನ್ನಡ ಕನ್ನಡತಿ
ಅಂದು ೧೯೯೩ ರ ಪೆಬ್ರವರಿ ಹದಿಮೂರನೇ ತಾರೀಕು,ನಾನು ಮತ್ತು ಗೆಳತಿ ಅನುಪಮಾ ಉಜಿರೆ ( ಖ್ಯಾತ ಕಥಾಗಾರ್ತಿ ಅನುಪಮಾ  ಪ್ರಸಾದ್) ಜೊತೆ ಬೆಳಗ್ಗೆ ಸುಮಾರು ಏಳು ಗಂಟೆ ಹೊತ್ತಿಗೆ ಉಜಿರೆಯಿಂದ ಮಂಗಳೂರಿಗೆ ಹೋಗಲು  ಬಸ್ ಹತ್ತಿದ್ದೆ .ಮರು ದಿನ  ಹದಿನಾಲ್ಕನೇ ತಾರೀಕಿಗೆ  ನನ್ನ ಮದುವೆ.
ನಾನು ಏಳನೇ ತರಗತಿ ಓದುತ್ತಿದ್ದಾಗಲೇ ಅಕ್ಕನ ಮದುವೆ ಆಗಿತ್ತು. ಅಣ್ಣ ದೂರದ ಕುಂಭಕೋಣಂ ನಲ್ಲಿ ಓದುತ್ತಾ ಇದ್ದಹಾಗಾಗಿ‌ ಮನೆಯಲ್ಲಿ ಹಿರಿಯಳಾಗಿ ನಾನೇ ಇದ್ದೆ. ತಮ್ಮಂದಿರು ಚಿಕ್ಕವರು .  ಹಾಗಾಗಿಮನೆಗೆ ಬೇಕಾದ ಸಾಮಾನುಗಳನ್ನು ತರುವುದು,ಬಟ್ಟೆ ಬರಹಗಳನ್ನು ತರುವುದು ಮೊದಲಾದ ವ್ಯವಹಾರವನ್ನು ಮಾಡಿ ಅನುಭವವಾಗಿತ್ತು.
 ವಾರದ ಮೊದಲು ಉಜಿರೆಯಲ್ಲಿ ದ್ವಿತೀಯ ವಿಜ್ಞಾನ ಪದವಿ ಓದುತ್ತಿದ್ದ ನಾನು ಊರಿಗೆ ನಾಂದಿಗಾಗಿ  ಬಂದಿದ್ದೆ . ( ಹವ್ಯಕರಲ್ಲಿ ಮದುಮಗ ಮತ್ತು ಮದುಮಗಳಿಗೆ ಮದುವೆ ದಿನ ಅಥವಾ ಅದಕ್ಕಿಂತ ಹಿಂದೆ ಹತ್ತು ದಿನಗಳ ಒಳಗೆ ಒಂದು ನಾಂದಿ ಎಂಬ ಶುಭಕಾರ್ಯವಿದೆ . ನಾಂದಿಯ ನಂತರ ಸೂತಕ ಬಂದರೆ ಮದುವೆ ತನಕ ತಂದೆ ತಾಯಿ ಮತ್ತು ಮದುಮಕ್ಕಳಿಗೆ ಸೂತಕ ತಾಗುವುದಿಲ್ಲ ) ಅದಕ್ಕೂ ಕೆಲ ದಿನಗಳ ಮೊದಲು ಮದುವೆಗೆ ಬೇಕಾದ ಚಿನ್ನವನ್ನು ಮಂಗಳೂರಿನ ಭಂಡಾರ್ಕರ್ ಮಳಿಗೆಗೆ ಹೋಗಿ ಮಾಡಿಸಲು ಹೇಳಿ ದುಡ್ಡು ಕೊಟ್ಟು ಬಂದಿದ್ದೆವು .
ಕಾಲೇಜಿನಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಿದ್ದ ಕಾರಣ ರಜೆ ಹಾಕುವಂತಿರಲಿಲ್ಲ .ಹಾಗಾಗಿ ನಾಂದಿ ಮರುದಿನ ಉಜಿರೆಗೆ ಹೋಗಿದ್ದೆ.ಹನ್ನೆರಡನೇ ತಾರೀಖಿನಂದು ಕೊನೆಯ ಪೂರ್ವ ಸಿದ್ಧತಾ ಪರೀಕ್ಷೆ ಬರೆದು‌ ಮರುದಿನ ಎಂದರೆ ಮದುವೆ ಹಿಂದಿನ ದಿನ ಊರಿಗೆ ಬರುತ್ತೇನೆ ಎಂದು ಹೇಳಿದ್ದೆ.ಆಗ ಅಮ್ಮ ಊರಿಗೆ ಬರುವಾಗ ಮಂಗಳೂರಿಗೆ ಬಮದು ಭಂಡಾರ್ಕರ್ ಚಿನ್ನದ ಮಳಿಗೆಗೆ ಹೋಗಿ ಮಾಡಿಸಲು ಹಾಕಿದ ಒಡವೆಗಳನ್ನು ತಂದು ಬಿಡು ಎಂದು ಹೇಳಿದರು.ಜೊತೆಗೆ ಮರುದಿನ ಮದುವೆಗೆ ಬೇಕಾದ ಹೂವಿನ ಹಾರ,ಹೂ ಮೊದಲಾದವುಗಳನ್ನು ತರುತ್ತೇನೆ ಎಂದು ಒಪ್ಪಿ ಕೊಂಡೆ .
ಮಂಗಳೂರಿಗೆ ತಲುಪಿದಾಗ ಸುಮಾರು ಹತ್ತು ಗಂಟೆ ಆಗಿತ್ತು .ಮೊದಲಿಗೆ ಚಿನ್ನದ ಮಳಿಗೆಗೆ ಹೋದೆವು.ಅಲ್ಲಿ ಒಡವೆಗಳು ಇನ್ನೂ ಸಿದ್ಧವಾಗಿರಲಿಲ್ಲ.ಒಂದು ಗಂಟೆ ಬಿಟ್ಟು ಬನ್ನಿ ಎಂದು ಹೇಳಿದರು .ಸರಿ ಎಂದು ಅಲ್ಲಿಯೇ ಸಮೀಪದ ಹೂವಿನ ಮಾರುಕಟ್ಟೆಗೆ ಹೋದೆವು .ಅಲ್ಲಿ ಚರ್ಚೆ ಮಾಡಿ ಎರಡು ಹೂವಿನ ಹಾರ ಹಾಗೂ ಬೇಕಾದ ಇತರ ಬಿಡು ಹೂ,ಕಟ್ಟಿದ ಹೂವು,ಮಲ್ಲಿಗೆ,ಗುಲಾಬಿ ಸೇವಂತಿಗೆ ಗಳನ್ನು ಖರೀದಿಸಿ ಮತ್ತೆ ಚಿನ್ನದ ಮಳಿಗೆಗೆ ಬಂದೆವು .ಇಷ್ಟೆಲ್ಲಾ ಆಗುವಾಗ ಹನ್ನೊಂದೂವರೆ ಆಗಿತ್ತು. ಅಲ್ಲಿಂದ ಒಡವೆಗಳನ್ನು ತೆಗೆದುಕೊಂಡು ಲೇಡಿಗೋಷನ್ ಗೆ ಬಂದು ಬಸ್ ಹಿಡಿದು ತಲಪಾಡಿಗೆ ಬಂದು ಅಲ್ಲಿಂದ ನಮ್ಮ ಊರಿಗೆ ಹೋಗುವ ಬಸ್ ಹತ್ತಿದೆ.ಬಸ್ ನಲ್ಲಿ ಬಾಲ್ಯ ಸ್ನೇಹಿತೆ ಶೋಭಿತಾಳನ್ನು ನೋಡಿ ನಾಳೆ ನನ್ನ ಮದುವೆ ಬಾ ಎಂದು ಆಹ್ವಾನ ಪತ್ರಿಕೆ ನೀಡಿದೆ .ಮಂಗಳೂರಿನಲ್ಲಿ ಸುತ್ತಿ ಸುಸ್ತಾಗಿದ್ದ  ನನ್ನನ್ನು ಅಪನಂಬಿಕೆಯಿಂದ ನೋಡಿ ಏ ಸುಳ್ಳುಹೇಳಿ ತಮಾಷೆಮಾಡುತ್ತಿದ್ದೀಯ ? ಎಂದು ಕೇಳಿದಳು.ಸುಳ್ಳು ಹೇಳುತ್ತಾ ಇಲ್ಲ ಅದು ಸತ್ಯ ಎಂದು ಒಪ್ಪಿಸಲು ನಾನು ಹೆಣಗಾಡಬೇಕಾಯಿತು.  ಅವಳು ಸಾಮನ್ಯ ವೇಷ ಭೂಷಣ ದಲ್ಲಿದ್ದ ನನ್ನನ್ನು ಮದುಮಗಳು ಎಂದು ಅವಳು ಎಂದು ಭಾವಿಸಲು ಅವಳಿಗೆ ಕಷ್ಟಕರ ವಾಗಿತ್ತು .ಅಂತೂ ಇಂತು  ತಲುಪಿದಾಗ ಸಂಜೆ ಮೂರಾಗಿತ್ತು. ಗಂಟೆ ಮೂರಾದರೂ ಮದುಮಗಳು ಬಾರದ ಕಾರಣ ಮನೆಯಲ್ಲಿ ಗಡಿಬಿಡಿ ಆರಂಭವಾಗಿತ್ತು .ಅಣ್ಣನನ್ನು ಕಾರು ಮಾಡಿಕೊಂಡು ಉಜಿರೆಗೆ ಕಳಹಿಸಲು ಏರ್ಪಾಡು ಮಾಡುತ್ತಾ ಇದ್ದರು.ಅಷ್ಟರಲ್ಲಿ ನಾವು ತಲುಪಿದೆವು .ಎಲ್ಲರೂ ನಿರಾಳರಾದರು .ನಾವು ಊಟ ಮಾಡಿದೆವು.ಹತ್ತಿರದ ಬಂಧುಗಳು ಹಿಂದಿನ ದಿವಸವೇ ಬಂದಿದ್ದು ಪಟ್ಟಾಂಗ ಹೊಡೆದೆವು .ಹವ್ಯಕರಲ್ಲಿ ನಾಂದಿ ಬಿಟ್ಟರೆ ಮದುವೆಗೆ ಮೊದಲು ಯಾವುದೇ ಸಂಪ್ರದಾಯ ದ ಕಾರ್ಯಕ್ರಮ ಇರುವುದಿಲ್ಲ ಹಾಗಾಗಿ ನಾನು ಪೂರ್ವ ಸಿದ್ಧತಾ ಪರೀಕ್ಷೆ ಗಳನ್ನು ಬರೆದು ಮದುವೆ ಹಿಂದಿನ ದಿನ ಬಂದಿದ್ದೆ .ಇಂದು ಪೇಸ್ ಬುಕ್ ‌ನಲ್ಲಿ ಸ್ನೇಹಿತರೊಬ್ಬರು ಹೂವಿನ ಹಾರಕ್ಕಾಗಿ ಅಲೆದಾಡಿದ ಬಗ್ಗೆ ಬರೆದಿರುವುದನ್ನು ಓದಿದಾಗ ತಕ್ಷಣವೇ ನಾನೂ ಹೂವಿನ ಹಾರಕ್ಕಾಗಿ ಅಲೆದಾಡಿದ ವಿಚಾರ ನೆನಪಿಗೆ ಬಂತು 

Sunday, 4 June 2017

ಸೂಕ್ತವಲ್ಲದ ಲಿಪಿ ಬಳಸಿ ತುಳುಭಾಷೆಯನ್ನು ಹಾಳುಗೆಡವದಿರಿ © ಡಾ ಲಕ್ಷ್ಮೀ ಜಿ ಪ್ರಸಾದ

ಸೂಕ್ತವಲ್ಲದ ಲಿಪಿ ಬಳಸಿ ತುಳುಭಾಷೆಯನ್ನು ಹಾಳುಗೆಡವದಿರಿ © ಡಾ ಲಕ್ಷ್ಮೀ ಜಿ ಪ್ರಸಾದ

ಅನೇಕರು ತಿಗಳಾರಿ/ ತುಳು ಲಿಪಿ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ ಮೆಸೆಂಜರ್ ಮೂಲಕ ಹೆಚ್ಚಿನ ವರಿಗೆ ಬ್ಲಾಗ್ ಲಿಂಕ್ ಓಪನ್ ಅಗುತ್ತಿಲ್ಲವಂತೆ ಹಾಗಾಗಿ ಬ್ಲಾಗ್ ಬರಹವನ್ನು ಕಾಪಿ ಮಾಡಿ ಹಾಕಿರುವೆ

ಎಂಥ ಅವಸ್ಥೆ .ಯಾರಿಗೆ ಹೇಳೋಣ .ಕೇಳೋರು ಯಾರು ?

ತಿಗಳಾರಿ ಮತ್ತು ತುಳು ಲಿಪಿ ಎರಡೂ ಒಂದೇ ಹೊರತು ಬೇರೆ ಬೇರೆಯಲ್ಲ © ಡಾ ಲಕ್ಷ್ಮೀ ಜಿ ಪ್ರಸಾದ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಯ ವೆಬ್ ನಲ್ಲಿ ತುಳು ವರ್ಣ ಮಾಲೆಯಲ್ಲಿಯೇ ದೋಷಗಳು ಇಲ್ಲಿ ಇದು ತಿಗಳಾರಿ ಲಿಪಿ ಎಂದು ಹೊರಗಡೆ ಪ್ರಸಿದ್ಧವಾಗಿದೆ ತುಳುನಾಡಿನ ಕೆಲವೆಡೆ ತುಳು ಲಿಪಿ ಎಂದು ಕರೆಯುತ್ತಾರೆ ಎಂಬ ಸತ್ಯವನ್ನು  ಮುಚ್ಚಿಟ್ಡು ತುಳು ಲಿಪಿ ಎಂದು ಮಾತ್ರ ಹೇಳಲಾಗಿದೆ  .

ಅದಿರಲಿ ತಿಗಳಾರಿ ಅಥವಾ ತುಳು ವರ್ಣಮಾಲೆಯಲ್ಲಿ ಹ್ರಸ್ವ ಎ ಒ ಸ್ವರಗಳಿಲ್ಲ ಇಲ್ಲಿ ತಿಗಳಾರಿ / ತುಳು ಲಿಪಿ ಯಲ್ಲಿ ರುವ ದೀರ್ಘ ಏ ಓ ಗಳನ್ನು ಬರೆದು ಅದರ ಕೆಳಗಡೆ ಹ್ರಸ್ವ ಎ ಒ ಎಂದು ಕನ್ನಡ ದಲ್ಲಿ ಬರೆದಿದ್ದಾರೆ ಕಳೆದ ವರ್ಷ ಏಳೆಂಟು ಲಿಪಿ ತಜ್ಞರು ಬಂದು ಏನೋ ವಿಚಾರ ಮಾಡಿದ್ದಾರಂತೆ ಆದರೂ ತುಳು ಅಕಾಡೆಮಿ ವೆಬ್ ನಲ್ಲಿ ಆದ ಇಷ್ಟು ದೊಡ್ಡ ಪ್ರಮಾದವನ್ನೇ ತಿದ್ದಿಲ್ಲ ,ತುಳು ಲಿಪಿ/ ತಿಗಳಾರಿ ಲಿಪಿ ಬಗ್ಗೆ ಒಂದು ಸಾಲಿನ ಮಾಹಿತಿ ಕೂಡಾ ಇಲ್ಲ ಇರುವ ವರ್ಣಮಾಲೆಯಲ್ಲಿ ಇಷ್ಟು ದೊಡ್ಡ ತಪ್ಪು ಯಾರಿಗೆ ಹೇಳೋಣ ? ರಿಜಿಸ್ಟ್ರಾರ್ ಗೆ ಈ ಬಗ್ಗೆ ಪೋನ್ ಮಾಡಿದರೆ ಬರೆದು ತಿಳಿಸಿ ಎಂಬ ಉತ್ತರ ಸಿಕ್ಕಿದೆ.
ಹಾಗಾಗಿ ಈ ಲಿಪಿ ಬಗ್ಗೆ ಮಾಹಿತಿ ಗೆ ಇಲ್ಲಿ ಓದಿ

ತುಳು ಭಾಷೆಯನ್ನು ಅಪಭ್ರಂಶಗೊಳಿಸಿ ವಿರೂಪ ಗೊಳಿಸಬೇಡಿ

ಭಾಷೆಯೊಂದಕ್ಕೆ ಲಿಪಿ ಇರಲೇ ಬೇಕೆಂದೇನೂ ಇಲ್ಲ ಜಗತ್ತಿನ ಹೆಚ್ಚಿನ ಭಾಷೆಗಳಿಗೆ ಸ್ವಂತ ಲಿಪಿಯಿಲ್ಲ ನಮ್ಮ ರಾಷ್ಟ್ರೀಯ ಭಾಷೆ ಹಿಂದಿ ಪ್ರಾಚೀನ ಭಾಷೆ ಸಂಸ್ಕೃತ ಜನಪ್ರಿಯ ಭಾಷೆ ಇಂಗ್ಲಿಷ್ ಗೂ ಸ್ವಂತ ‌ಲಿಪಿಯಿಲ್ಲ ಹಿಂದಿ ಸಂಸ್ಕೃತ ಸೇರಿದಂತೆ ಉತ್ತರ ಭಾರತದ ಹೆಚ್ಚಿನ ಭಾಷೆಗಳಿಗೆ ನಾಗರಿ ಲಿಪಿಯನ್ನು ಬಳಸುತ್ತಾರೆ ಇಂಗ್ಲಿಷ್ ಗೆ ರೋಮ್ ಲಿಪಿ ಬಳಸುತ್ತಾರೆ
ಈ ಹಿಂದೆ ಸಂಸ್ಕೃತ ಬರೆಯಲು ತಿಗಳಾರಿ ಲಿಪಿಯನ್ನು ಬಳಕೆ ಮಾಡುತ್ತಿದ್ದು ಅದನ್ನು  ತುಳುನಾಡಿನಲ್ಲಿ ಯೂ ಸಂಸ್ಕೃತ ದ ವೇದ ಮಂತ್ರಗಳನ್ನು ಬರೆಯಲು  ತುಳುನಾಡಿನ ಹವ್ಯಕ ,ಕೋಟ ಚಿತ್ಪಾವನ ಕರಾಡ ಬ್ರಾಹ್ಮಣರು ಬಳಕೆ ಮಾಡಿದ್ದಾರೆ  ಜೊತೆಗೆ ಉತ್ತರ ಕನ್ನಡದ ಶಿವಮೊಗ್ಗ ಕೆಳದಿ ತಮಿಳುನಾಡಿನ ತಂಜಾವೂರು ಕಂಚಿಯ ಬ್ರಾಹ್ಮಣರು ಬಳಕೆಗೆ ತಂದಿದ್ದಾರೆ ತುಳು ಬ್ರಾಹ್ಮಣರು ಸಂಸ್ಕೃತ ವೇದ ಮಂತ್ರಗಳನ್ನು ಬರೆಯಲು ಬಳಸಿದ್ದಾರೆ ಇದಕ್ಕೆ ಮೊದಲಿನಿಂದಲೂ ತಿಗಳಾರಿ ಲಿಪಿ ಎಂದು ಕರೆಯುತ್ತಾ ಇದ್ದರು ತುಳು ಲಿಪಿ ಎಂಬ ಹೆಸರೂ ಕೆಲವರು ಬಳಸಿದ್ದಾರೆ   ಆದರೆ ಪ್ರಸ್ತುತ  ತುಳು ಭಾಷೆಯ ಬರವಣಿಗೆಗೆ ಸೂಕ್ತವಾಗಿಲ್ಲ  ಯಾಕೆಂದರೆ ಇದರಲ್ಲಿ ತುಳು ಭಾಷೆಯಲ್ಲಿ ಇರುವ ಹ್ರಸ್ವ ಎ ಒ ಗಳು ಇಲ್ಲ ಇದರಿಂದಾಗಿ ಈ ಲಿಪಿಯಲ್ಲಿ ತುಳು ಭಾಷೆ ಎಂದು ಬರೆಯಲು ಸಾಧ್ಯವೇ ಇಲ್ಲ ಬದಲಿಗೆ ತುಳು ಭಾಷೇ ಎಂದು ಬರೆಯಬೇಕಾಗುತ್ತದೆ ಎಣ್ಣೆ ಬದಲು ಏಣ್ಣೆ ಪೊಣ್ಣು ಬದಲು ಪೋಣ್ಣು ಡೆನ್ನಾನ ಬದಲು ಡೇನ್ನಾನ ಎಡ್ಡೆ ಬದಲು ಏಡ್ಡೆ ತೆನೆ ಬದಲು ತೇನೆ ಕೊರಳು ಬದಲು ಕೋರಳು ಕೊಪ್ಪ ಬದಲು ಕೋಪ್ಪ ಕೊರಗಜ್ಜ ಬದಲು ಕೋರಗಜ್ಜ ಕೆರೆ ಬದಲು ಕೇರೆ  ಬರೆಯಬೇಕಾಗುತ್ತದೆ ಕೆರೆ ಕೇರೆಯಾದಾಗ ಕೆಬಿ ಕೇಬಿಯಾಗಿ,ಕೆಪ್ಪೆ ಕೇಪ್ಪೆಯಾಗಿ ಕೊಡಿ ಕೋಡಿಯಾಗಿ ,ಎರು ಏರು ಅಗಿ ,ಎರ್ಮ್ಮೆ ಏರ್ಮ್ಮೆಯಾಗಿ ಎಣ್ಮೆ ಏಣ್ಮೆಯಾಗಿ ಕೆಸರ್ ಕೇಸರ್ ಆಗಿ ರಾಮೆ ರಾಮೇ ಆಗಿ ಕೃಷ್ಷಪ್ಪೆ ಕೃಷ್ಣಪ್ಪೇ ಆಗಿ , ಪೊಸತು ಪೋಸತು ಪೊರ್ಲು ಬದಲು‌ ಪೋರ್ಲು ಆಗಿ ,ಬೆರ್ಮರ್ ಬೇರ್ಮರ್ ಆಗಿ ,ಪೊಡಿ ಬದಲು ಪೋಡಿಯಾಗಿ ಬೊಂಡ ಬದಲು ಬೋಂಡ ಅಗಿ ಕೊಡೆ ಕೋಡೆಯಾಗಿ ಬೆಲೆ ಬೇಲೆಯಾಗಿ ,ಕೆದು ಕೇದುವಾಗಿ ,ಕೆಮ್ಮು ಕೇಮ್ಮುವಾಗಿ ,ಎಡೆ ಏಡೆಯಾಗಿ ಅರ್ಥ ಅನರ್ಥವಾಗಿಬಿಡುತ್ತದೆ  ಯಾಕೆಂದರೆ ಈ ಲಿಪಿಯಲ್ಲಿ ಹ್ರಸ್ವ ಎ ಒ ಗಳು ಇಲ್ಲ‌ ಹೀಗೆ ಬಳಸಿದರೆ  ತುಳು ಭಾಷೆ ತನ್ನ ಮೂಲ ರೂಪವನ್ನು ಕಳೆದುಕೊಂಡು ಅಪಭ್ರಂಶ ಗೊಳ್ಳುತ್ತದೆ ಹಾಗಾಗಿ ಈಗ ಸಂಸ್ಕೃತ ವೇದ ಮಂತ್ರಗಳ ಬಳಕೆಗಾಗಿ ರೂಪುಗೊಂಡ ತಿಗಳಾರಿ ಲಿಪಿ/ ತುಳುಲಿಪಿ ಯನ್ನು ಪರಿಷ್ಕರಿಸಿ ಕಲಿಸುವ ಬಳಸುವ ಅಗತ್ಯವಿದೆ

ಈ ಲಿಪಿಯನ್ನು ಕೇವಲ ತುಳು ಬ್ರಾಹ್ಮಣರು ಮಾತ್ರ ಬಳಕೆಗೆ ತಂದದ್ದಲ್ಲ ಹವ್ಯಕ ಚಿತ್ಪಾವನ ಕರಾಡ ಕೋಟ ಬ್ರಾಹ್ಮಣರು ಉತ್ತರ ಕನ್ನಡ ಶಿವಮೊಗ್ಗ ಕೆಳದಿಯ ಕನ್ನಡ ಬ್ರಾಹ್ಮಣರು,ಮೈಸೂರಿನ ಬೆಂಗಳೂರಿನ‌ಕೆಲವು ಬ್ರಾಹ್ಮಣ ಸಮುದಾಯಗಳು  ತಂಜಾವೂರು ಕಂಚಿಯ  ಬ್ರಾಹ್ಮಣರು ಬಳಕೆಗೆ ತಂದಿದ್ದಾರೆ ಧರ್ಮಸ್ಥಳ ದಲ್ಲಿ ಸಂಗ್ರಹವಾಗಿರುವ ಒಂದೂವರೆ ಸಾವಿರದಷ್ಟು ತಿಗಳಾರಿ / ತುಳು ಲಿಪಿ ಹಸ್ತಪ್ರತಿ ಗಳಲ್ಲಿ ಅನೇಕ ಹವ್ಯಕ ಕೋಟ ಚಿತ್ಪಾವನ ಕರಾಡ ಬ್ರಾಹ್ಮಣರು ಬರೆದ ಅವರುಗಳ ಮನೆಯಲ್ಲಿ ಸಿಕ್ಕ ಹಸ್ತಪ್ರತಿ ಗಳಿವೆ ನಮ್ಮ ( ನಾವು ಹವ್ಯಕ ರು) ಮನೆಯಲ್ಲಿಯೂ ಅನೇಕ ತಿಗಳಾರಿ ಲಿಪಿ ಯ ಹಸ್ತಪ್ರತಿ ಗ್ರಂಥಳಿದ್ದು ಇವರಲ್ಲವು ಮಂತ್ರ ಪ್ರಯೋಗಗಳಾಗಿವೆ ಹವ್ಯಕರಲ್ಲಿ ಈ ಲಿಪಿಯಲ್ಲಿ ಹವ್ಯಕ ಭಾಷೆಯಲ್ಲಿ ಪತ್ರ ವ್ಯವಹಾರ ಕಡತ ನಿರ್ವಹಣೆಗಳಿದ್ದು ಹವ್ಯಕರ ರಾಮಚಂದ್ರಾಪುರ ಮಠದಲ್ಲಿ ಈ ಲಿಪಿಯಲ್ಲಿ ಬರೆದ ಹವ್ಯಕ ಕನ್ನಡ ದ ಪತ್ರಗಳು ನೂರಕ್ಕಿಂತ ಹೆಚ್ಚು ಇವೆ
ಇನ್ನು ಅದು ಬ್ರಾಹ್ಮಣರು ಬಳಕೆಗೆ ತಂದ ಲಿಪಿ ಎಂಬುದಕ್ಕೆ ಅದರಲ್ಲಿ ಸಿಕ್ಕ ಎಲ್ಲಾ ಕೃತಿಗಳನ್ನು ಬ್ರಾಹ್ಮಣರು ಬರೆದಿದ್ದು ಒಂದೇ ಒಂದು ಕೃತಿ ಬೇರೆಯವರು ಬರೆಯದಿರುವವುದು ಈಗಲೂ ಅದನ್ನು ಹೇಳಿಕೊಟ್ಟವರು ಬ್ರಾಹ್ಮಣರು ಎಂಬ ಆಧಾರವೇ ಸಾಕು
ಲಿಪಿ ರೂಪಿಸಲು ಎಷ್ಟು ಜನ ಇದ್ದಾರೆ ಎಂಬುದು ಮುಖ್ಯವಲ್ಲ ಅದನ್ನು ಯಾರು ಯಾಕೆ ಬಳಸಿದ್ದಾರೆ ಎಂಬುದು ಮುಖ್ಯ ವಾಗುತ್ತದೆ
ಇದರಲ್ಲಿ ತುಳು ಭಾಷೆಯ ಹ್ರಸ್ವ ಎಒ  ಇಲ್ಲ ಇದರಲ್ಲಿ  ಸಂಸ್ಕೃತ ಭಾಷೆಯಲ್ಲಿ ಮಾತ್ರ ಇರುವ ದೀರ್ಘ ಋ ಇದೆ
ಅಲ್ಲದೆ ತುಳು ಭಾಷೆಯ ಏಳು ಕೃತಿಗಳು ಮಾತ್ರ ಆ ಲಿಪಿ ಯಲ್ಲಿ ಇರುವುದು ಅದರಲ್ಲಿ ಯೂ ಹ್ರಸ್ವ ಎ ಒ ಗಳು ಇಲ್ಲದ ಕಾರಣ ತುಂಬಾ ದೋಷಗಳಿವೆ ತುಳು ಕರ್ಣ ಪರ್ವ ವನ್ನು ಪುಣಿಚಿತ್ತಾಯ ರು ಈ ಹಿಂದೆ ನನಗೆ ಗೌರವ ಪ್ರತಿ ನೀಡಿದ್ದು ಅದರಲ್ಲಿ ಈ ದೋಷಗಳಿರುವುದನ್ನು ಅವರೂ ಹೇಳಿದ್ದಾರೆ
ಲಿಪಿಯೊಂದು ಇದ್ದಕ್ಕಿದ್ದಂತೆ ರೂಪು ಗೊಳ್ಳುವುದಿಲ್ಕ ಇದು ತಮಿಳಿನ ಗ್ರಂಥ ಲಿಪಿಯನ್ನು ಹೋಲುತ್ತಿದ್ದು ಅದರಿಂದ ರೂಪುಗೊಂಡಿದೆ ಗ್ರಂಥ ಲಿಪಿ ತುಳುನಾಡಿನಲ್ಲಿ ಇರಲಿಲ್ಲ ದಕ್ಷಿಣ ಭಾರತದ ್ಲ್ಲಿ ವೇದಾಧ್ಯಯನ ಕೇಂದ್ರ ಇದ್ದದ್ದು ತಮಿಳುನಾಡಿನ ತಂಜಾವೂರು ಮತ್ತು ಕಂಚಿಗಳಲ್ಲಿ
ಅಲ್ಲಿನ ತಮಿಳು ಲಿಪಿಯಲ್ಲಿ ಮುವತ್ತಾರು ಅಕ್ಷರಗಳು ಮಾತ್ರ ಇದ್ದು ಅದು ಸಂಸ್ಕೃತ ವೇದಾ ಮಂತ್ರಗಳ ಬರವಣಿಗೆಗೆ ಸೂಕ್ತ ವಾಗಿರಲಿಲ್ಲ ಹಾಗಾಗಿ ಅವರು ತಮಿಳು ಲಿಪಿ ಯನ್ನು ಪರಿಷ್ಕರಿಸಿ ಸಂಸ್ಕೃತ ಕ್ಕೆ ಸೂಕ್ತ ವಾದ ಗ್ರಂಥ ಲಿಪಿ ರೂಪಿಸಿದರು ಅಲ್ಲಿ ನಾಗರಿ ಲಿಪಿ ಪರಿಚಿತವಾಗಿರಲಿಲ್ಲಅಲ್ಲಿಗೆ ವೇದಾಧ್ಯಯನ ಮಾಡಲು ಹೋದ ದಕ್ಷಿಣ ಕನ್ನಡ ಉತ್ತರ ಕನ್ನಡ ದ  ಬ್ರಾಹ್ಮಣ ರು ಅಲ್ಲಿನ ಗುರುಗಳಿಂದ ಗ್ರಂತ ಲಿಪಿ ಕಲಿತು ವೇದ ಮಂತ್ರಗಳ ನ್ನು ಅದರಲ್ಲಿ ಬರೆದರು ನಂತರ ಕಾಲಾಂತರದಲ್ಲಿ ಅದು ಬದಲಾಗುತ್ತಾ ತಿಗಳಾರಿ ಲಿಪಿ ಆಯಿತು ಹಾಗಾಗಿ ಅದನ್ನು ತಿಗಳರ ಎಂದರೆ ತಮಿಳರ ಆರ್ಯ ಎಂದರೆ ಸಂಸ್ಕೃತ ಲಿಪಿ ಎಂದು ಕರೆದರು ಅದು ಹ್ರಸ್ವ ಗೊಂಡು ತಿಗಳಾರಿ ಅಯಿತು ಇದನ್ನು ಬಳಕೆ ಮಾಡಿದವರಲ್ಲಿ ಕೋಟ ಹವ್ಯಕ ಚಿತ್ಪಾವನ ತುಳು  ಕರಾಡ ಬ್ರಾಹ್ಮಣರು ಶಿವಮೊಗ್ಗ ಕೆಳದಿ ಉತ್ತರ ಕನ್ನಡ ದ ಕನ್ನಡ ಬ್ರಾಹ್ಮಣರು ತಂಜಾವೂರು ಕಂಚಿಯ ಬ್ರಾಹ್ಮಣರು  ಸೇರಿದ್ದಾರೆ ಇವರಲ್ಲಿ ತುಳು ಬ್ರಾಹ್ಮಣರು ಕೇರಳಕ್ಕೆ ದೇವಸ್ಥಾನ ಗಳ ಪೂಜೆಗೆ ಹೋದಾಗ ತಿಗಳಾರಿ ಲಿಪಿ ಅಲ್ಲಿ ಹರಡಿ ಅಲ್ಲಿ ನವರು ಅದನ್ನು ಮಲೆಯಾಳ ಭಾಷೆಗೆ ಸೂಕ್ತ ವಾಗುವಂತೆ ಪರಿಷ್ಕರಿಸಿ ಬಳಸಿದರು ಅವರು ಆರಂಭದಲ್ಲಿ ಅದನ್ನು ತುಲುವನತ್ತಿಲ್ ಎಂದರೆ ತುಲುವರ ಲಿಪಿ ಎಂದು ಕರೆದಿದ್ದು ಅವರು ರೂಪಿಸಿದ ಲಿಪಿ ಯನ್ನು ತುಲು ಮಲೆಯಾಳ ಲಿಪಿ ಎಂದು ಕರೆದು ಕಾಲಾಂತರದಲ್ಲಿ ಮಲೆಯಾಳ ಲಿಪಿ ಎಂದು ಮಾತ್ರ ಹೆಸರು ಉಳಿಯಿತು
ಆದರೆ ಇದು ತುಲು ಭಾಷೆಯ ಲಿಪಿ ಅಲ್ಲ
ಸಂಸ್ಕೃತ ಭಾಷೆಗೆ ಸ್ವಂತ ಲಿಪಿ ಇಲ್ಲ ಉತ್ತರದಲ್ಲಿ ನಾಗರಿ ಲಿಪಿ ತಮಿಳುನಾಡಿನಲ್ಲಿ ಗ್ರಂಥ ಲಿಪಿ ತೆಲುಗರು ತೆಲುಗು ಲಿಪಿ ಯನ್ನು ಸಂಸ್ಕೃತ ಕ್ಕೆ ಬಳಸುತ್ತಾ ಇದ್ದರು
ಅಕಾಡೆಮಿ ಗೆ ಹೇಳಿ ಲಿಪಿ ಯ ಇತಿಹಾಸವನ್ನು ತಿಳಿಸಿ ಪರಿಷ್ಕರಿಸಿ ಬಳಕೆಗೆ ತರುವ ಕೆಲಸ ಆಗಬೇಕಿದೆ ಅಕಾಡೆಮಿ ವೆಬ್ ಹಾಕಿದ ತುಳು ವರ್ಣ ಮಾಲೆ ಚಾರ್ಟ್ ನಲ್ಲಿ ತಪ್ಪಿದೆ ಹಾಗೆ ನೋಡಿದರೆ ವಿದ್ಯಾ ಶ್ರೀ ಅವರು ಪ್ರಕಟಿಸಿದ ವರ್ಣಮಾಲೆ ಸರಿ ಇದೆ .ತಪ್ಪನ್ನು ತಿದ್ದಿ ಪರಿಷ್ಕರಿಸದೆ ಬಳಸಿದರೆ ತುಳು ಭಾಷೆ ಅಪಭ್ರಂಶ ಗೊಂಡು ವಿರೂಪ ಗೊಳ್ಳುತ್ತದೆ

1 ತುಳುನಾಡಿನ ವ್ಯಾಪ್ತಿ ಉಡುಪಿ ಕಾಸರಗೋಡು ದ.ಕ ಜಿಲ್ಲೆ ತಿಗಳಾರಿ ಲಿಪಿ ತಮಿಳುನಾಡಿನ ತಂಜಾವೂರು ಕಂಚಿ ಧರ್ಮ ಪುರ ಕೃಷ್ಣ ಪುರ ಗಳಲ್ಲಿ ಬಳಕೆಇದೆ ಕರ್ನಾಟಕ ದಲ್ಲಿ ಉತ್ತರ ಕನ್ನಡ ಶಿವಮೊಗ್ಗ ಮಲೆನಾಡಿನಲ್ಲಿ ಬಳಕೆ ಇತ್ತು ತುಳು ಭಾಷೆ ಮತ್ತು  ತುಳುವರು ಇಲ್ಲದ ಕಡೆಯೂ ಬಳಕೆಯಲ್ಲಿತ್ತು

2, ಈ ಲಿಪಿಯಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಕೃತಿಗಳು ಸಿಕ್ಕಿದ್ದು ಅವೆಲ್ಲವೂ ಸಂಸ್ಕೃತ ವೇದ ಮಂತ್ರಗಳಾಗಿವೆ  ಕೇವಲ ಏಳು‌ ತುಳು ಕೃತಿಗಳು ಮಾತ್ರ ಈ ಲಿಪಿಯಲ್ಲಿ ಇವೆ

3 ಇದು ತುಳು ಭಾಷೆಗೆ ಸೂಕ್ತ ವಾಗಿಲ್ಲ ಇದರಲ್ಲಿ  ತುಳುವಿನ ಎಲ್ಲ ಅಕ್ಷರಗಳು ಇಲ್ಲ ಇದರಲ್ಲಿ ತುಳುವಿನಲ್ಲಿ ಇರುವ ಹ್ರಸ್ವ ಎ ಒ ಗಳು ಇಲ್ಲ ತುಳುವಿನಲ್ಲಿ ಇಲ್ಲದೆ ಇರುವ ಸಂಸ್ಕೃತ ಭಾಷೆಯಲ್ಲಿ ಮಾತ್ರ ಇರುವ ದೀರ್ಘ ಋ ಇದೆ

4 ಇದು ಸಂಸ್ಕೃತ ವನ್ನು ಬರೆಯಲು ರೂಪುಗೊಂಡ ಲಿಪಿಯಾಗಿದ್ದು ಸಂಸ್ಕೃತ ದ ಎಲ್ಲ ಅಕ್ಷರಗಳು ಇವೆ ಉದಾ ಸಂಸ್ಕೃತ ದಲ್ಲಿ ದೀರ್ಘ ಋ ಇದೆ ಇದರಲ್ಲೂ ಇದೆ ಲೃ ಅನ್ನುವ ವಿಶಿಷ್ಠವಾದ ಅಕ್ಷರ ಸಂಸ್ಕೃತ ದಲ್ಲಿದೆ ಇದರಲ್ಲೂ ಅದು ಇದೆ ಸಂಸ್ಕೃತ ದಲ್ಲಿ ಹ್ರಸ್ವ ಎ ಒ ಗಳು ಇಲ್ಲ ಹಾಗಾಗಿ ಇದರಲ್ಲೂ ಇಲ್ಲ

5 ಇದರಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಕೃತಿಗಳು ಸಂಸ್ಕೃತ ದಲ್ಲಿವೆ ಅವುಗಳಲ್ಲಿ 99 .9% ಶೇಕಡ ವೇದ ಮಂತ್ರಗಳು

6 ಒಂದು ಲಿಪಿ ತನ್ನಿಂದ ತಾನೇ ಸೃಷ್ಟಿ ಯಾಗುವುದಿಲ್ಲ ಬಳಕೆಯಲ್ಲಿರುವ ಒಂದು ಲಿಪಿ ಬದಲಾಗುತ್ತಾ ಕಾಲಾಂತರದಲ್ಲಿ ಇನ್ನೊಂದು ಲಿಪಿ ಯಾಗುತ್ತದೆ ಮೂಲ ಲಿಪಿಗೂ ಹೊಸ ಲಿಪಿಗೂ 50- 60% ವ್ಯತ್ಯಾಸ ಉಂಟಾದಾಗ ಅದನ್ನು ಇನ್ನೊಂದು ಲಿಪಿಯಾಗಿ ಗುರುತಿಸುತ್ತಾರೆ ಆ ಲಿಪಿ ಬೆಳೆದ ಪರಿಸರದಲ್ಲಿ ಅದಕ್ಕೆ ಮೂಲವಾಗಿರುವ ಲಿಪಿ ಇರಲೇ ಬೇಕು ತಿಗಳಾರಿ ಲಿಪಿ ಗೆ ಮೂಲವಾದ ಆರ್ಯ ಎಳತ್ತು /ಗ್ರಂಥ ಲಿಪಿ ತಮಿಳುನಾಡಿನ ಪರಿಸರದಲ್ಲಿ ಪ್ರಚಲಿತವಿದೆ ತುಳುನಾಡಿನಲ್ಲಿ ಇಲ್ಲ

7 ತುಳು ಲಿಪಿಯನ್ನು ವಿದ್ಯಾ ಶ್ರೀ ಅವರಿಗೆ ಹೇಳಿಕೊಟ್ಟ ಲಿಪಿ ತಜ್ಞ ಡಾ.ವಿಘ್ನರಾಜ ಭಟ್ ಅವರು ತಿಗಳಾರಿ ಲಿಪಿ ಮತ್ತು ತುಳು ಲಿಪಿ ಎರಡೂ ಒಂದೇ, ಬೇರೆ ಬೇರೆಯಲ್ಲ ತಿಗಳಾರಿ ಎಂದು ಬರೆದುಬ್ರಾಕೆಟ್ ಒಳಗೆ ತುಳು ಲಿಪಿ ಎಂದು ಅಥವಾ ತುಳು ಲಿಪಿ ಎಂದು ಬರೆದು ಬ್ರಾಕೆಟ್ ಒಳಗೆ ತಿಗಳಾರಿ ಲಿಪಿ ಎಂದು ಬರೆಯಬೇಕು ಎಂದು ತಿಳಿಸಿದ್ದಾರೆ. (ಅವರು ಹೀಗೆ ಹೇಳಿದ ಬಗ್ಗೆ ದಾಖಲೆ ಇದೆ)ಆದರೆ ಇವರಿಂದ ಲಿಪಿ ಕಲಿತು ಪ್ರಚಾರ ಮಾಡುವ ತರಗತಿ ಮಾಡುವ ವಿದ್ಯಾ ಅವರು‌ ತುಳು ಮತ್ತು ತಿಗಳಾರಿ ಲಿಪಿ ಬೇರೆ ಎಂದು ತಪ್ಪು ಮಾಹಿತಿ ಹರಡುತ್ತಿದ್ದಾರೆ ಜೊತೆಗೆ ಬ್ರಾಹ್ಮಣರು ತುಳು ಲಿಪಿಯನ್ನು ತಿಗಳಾರಿ ಎಂದು ಕರೆದು ಅಡಗಿಸಿ ಇಟ್ಟು ತುಳುವರಿಗೆ ಸಿಗದ ಹಾಗೆ ಮಾಡಿದರು ಎಂದು ಹೇಳುತ್ತಾ ಜನರಲ್ಲಿ ಬ್ರಾಹ್ಮಣ ದ್ವೇಷ ಬಿತ್ತಿ ಸಾಮಾಜಿಕ ಸ್ವಾಸ್ಥ್ಯ ವನ್ನು ಹಾಳುಗೆಡವುತ್ತಾ ಇದ್ದಾರೆ
8 ಲಿಪಿ ತಜ್ಞರಾದ ಡಾ .ಪದ್ಮನಾಭ ಕೇಕುಣ್ಣಾಯ ಅವರು ತುಳುವಿಗೆ ಲಿಪಿ ಇರುವುದಾದರೂ ಅದು ಮೂಲತ ತಿಗಳಾರಿ ಲಿಪಿ ಹೊರಗಡೆ ಅದು ತಿಗಳಾರಿ ಎಂದು ಪ್ರಸಿದ್ದಿ ಪಡೆದಿದೆ ಹಾಗಾಗಿ ತುಳು ಮತ್ತು ತಿಗಳಾರಿ ಲಿಪಿ ಬೇರೆ ಎಂದು ಹೇಳುವುದು ಸರಿಯಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದನ್ನು ತುಳು ಲಿಪಿ ಎಂದು ಮೊದಲಿಗೆ ಗುರುತಿಸಿದ ಡಾ.ವೆಂಕಟ್ರಟಜ ಪುಣಿಚಿತ್ತಾಯರು ಕೂಡ ತಿಗಳಾರಿ ಲಿಪಿ ಮತ್ತು ತುಳು ಲಿಪಿ ಎರಡೂ ಒಂದೇ ಎಂದು ಹೇಳಿದ್ದಾರೆ ಎಂದು ಅವರಿಗೆ ಆತ್ಮೀಯ ರಾಗಿದ್ದ ಡಾ.ಪದ್ಮನಾಭ ಕೇಕುಣ್ಣಾಯ ತಿಳಿಸಿದ್ದಾರೆ.
9 ಲಿಪಿ ತಜ್ಞರಾದ ಡಾ.ಗೀತಾಚಾರ್ಯ ತುಳುವಿಗೆ ಲಿಪಿ ಇರಲಿಲ್ಲ, ಡಾ.ವಿಘ್ನರಾಜ ಭಟ್ ಅವರು ತಿಗಳಾರಿ ಲಿಪಿ ಯನ್ನು ತುಸು ಮಾರ್ಪಡಿಸಿ ತುಳು ಲಿಪಿ ರೂಪಿಸಿದರು ಎಂದು ಹೇಳಿದ್ದಾರೆ
10 ಲಿಪಿ ತಜ್ಞರಾದ ಡಾ.ಗುಂಡಾ ಜೋಯಿಸ್ ಕೆಳದಿ ವೆಂಕಟೇಶ ಜೋಯಿಸ್ ಡಾ.ಪಿವಿ ಕೃಷ್ಣ ಮೂರ್ತಿ ಮೊದಲಾದವರು ಅದು ತಿಗಳಾರಿ ಲಿಪಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ
11  ಇದರಲ್ಲಿ  ಉಳು ಭಾಷೆಯ ಹ್ರಸ್ವ ಎ ಒ ಗಳಿಗೆ ಅಕ್ಷರ ಇಲ್ಲ   ಸಂಸ್ಕೃತ ದಲ್ಲಿ ಮಾತ್ರ ಇರುವ ದೀರ್ಘ ಋ ಇದೆ ಅಲ್ಲದೆ ತುಳುವಿನ ವಿಶಿಷ್ಟ ಉಚ್ಚಾರಣೆ ಗಳಿಗೆ ರೇಖಾ ಸಂಕೇತ ಅಥವಾ ಅಕ್ಷರಗಳು ಇಲ್ಲ
12 ಪ್ರಸ್ತುತ ತಿಗಳಾರಿ ಲಿಪಿಯ ಸುಮಾರು ಹತ್ತು  ಸಾವಿರದ ಹಸ್ತ ಪ್ರತಿಗಳು ಸಿಕ್ಕಿದ್ದು ಇವುಗಳು ತಮಿಳುನಾಡಿನ  ತಂಜಾವೂರು, ಕಂಚಿ ,ಧರ್ಮಪುರಿ,ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ,,ಕಾಸರಗೋಡು ಉಡುಪಿ ದಕ್ಷಿಣ ಕನ್ನಡ ಜಿಲ್ಲೆ, ಕೆಳದಿ ಮೊದಲಾದ ಕಡೆ ಸಿಕ್ಕಿದವುಗಳಾಗಿವೆ ಇವುಗಳಲ್ಲಿ ಏನಿದೆ ಎಂದು ತಿಗಳಾರಿ ಬಲ್ಲವರು ಓದಿದ್ದು .ಇವೆಲ್ಲವೂ ಸಂಸ್ಕೃತ ಭಾಷೆಯಲ್ಲಿಬರೆದ ವೇದ ಮಂತ್ರ ಪುರಾಣ ಕೃತಿಗಳು ಆಗಿವೆ ಎಂದು ತಿಳಿಸಿದ್ದಾರೆ
 13 ತುಳುನಾಡಿನಲ್ಲಿ ಸಿಕ್ಕ ಹಸ್ತ ಪ್ರತಿಗಳು ಸುಮಾರು ಒಂದೂವರೆ ಸಾವಿರ ಇವುಗಳನ್ನು ಕೂಡ ತೆರೆದು ಓದಿದ್ದು ಇವುಗಳಲ್ಲಿ ಏಳು ತುಳು ಭಾಷೆಯ ಕೃತಿಗಳು ,ಒಂದು ಕನ್ನಡ ಭಾಷೆಯ ಜನಪದ ಹಾಡುಗಳು ಬಿಟ್ಟರೆ ಉಳಿದವುಗಳೆಲ್ಲ ಸಂಸ್ಕೃತ ವೇದ ಮಂತ್ರಗಳ ಕೃತಿಗಳು ಎಂದು ಧರ್ಮಸ್ಥಳದ ಹಸ್ತ ಪ್ರತಿ ಅಧ್ಯಯನ ಕೇಂದ್ರದ ಮುಖ್ಯಸ್ಥ ರಾದ ಡಾ ವಿಘ್ನರಾಜ ಭಟ್ ತಿಳಿಸಿದ್ದಾರೆ
15 ತಿಗಳಾರಿ ಲಿಪಿ ತೀರ ಇತ್ತೀಚಿನ ವರೆಗೂ ಬಳಕೆಯಲ್ಲಿತ್ತು ಹಾಗಾಗಿ ಅದರಲ್ಲಿನ ಹತ್ತು ಸಾವಿರಕ್ಕಿಂತ ಹೆಚ್ಚಿನ ಸಂಸ್ಕೃತ ಹಸ್ತಪ್ರತಿ ಗಳು ಲಭ್ಯವಾಗಿವೆ ಆದರೆ ತುಳು ಭಾಷೆಯ ಕೃತಿಗಳು ಲಭಿಸಿದ್ದು ಕೇವಲ ಏಳು
16 ತುಳುನಾಡಿನಲ್ಲಿ ಈ ಲಿಪಿಯ ಒಂದೂವರೆ ಸಾವಿರದಷ್ಟು ಸಂಸ್ಕೃತ ಹಸ್ತಪ್ರತಿ ಗ್ರಂಥಗಳು ಸಿಕ್ಕಿದೆ ಆದರೆ ತುಳುವಿನದ್ದು ಸಿಕ್ಕಿದ್ದು ಏಳು ಮಾತ್ರ ಒಂದೊಮ್ಮೆ ಇದು ತುಳು ಭಾಷೆ ಬರೆಯಲು ಬಳಕೆಗೆ ಇದ್ದಿದ್ದರೆ  ಲಿಪಿ ಆಗಿರುತ್ತಿದ್ದರೆ ಕೊನೆಯ ಪಕ್ಷ ತುಳುನಾಡಿನಲ್ಲಿ ಸಿಕ್ಕ ಹಸ್ತಪ್ರತಿ ಗಳಲ್ಲಿಯಾದರೂ ಹೆಚ್ಚಿನ ಕೃತಿಗಳು ತುಳುಭಾಷೆಯದು ಆಗಿರುತ್ತಿತ್ತು ,ತಿಗಳಾರಿ ಇತ್ತೀಚಿನ ವರೆಗೂ ಬಳಕೆಯಲ್ಲಿದ್ದ ಕಾರಣ ತುಳುವಿನ  ಎಲ್ಲಾ ಹಸ್ತಪ್ರತಿ ಗಳು ಕಳೆದು ಹೋಗಿರುವ ಸಾಧ್ಯತೆ ಇಲ್ಲ ಹಾಗೆ ಕಳೆದು ಹೋಗುತ್ತಿದ್ದರೆ ಇದೇ ಲಿಪಿಯ ಲ್ಲಿ ಬರೆದ ಸಂಸ್ಕೃತ ವೇದ ಮಂತ್ರಗಳ ಹಸ್ತ ಪ್ರತಿಗಳು  ಕೂಡ ಉಳಿಯುತ್ತಿರಲಿಲ್ಲ ಹಾಗಾಗಿ  ಈ ಲಿಪಿಯಲ್ತುಲಿ ಳುಭಾಷೆಯಲ್ಲಿ ಲಿಖಿತ ಸಾಹಿತ್ಯ ರಚನೆ ಆದದ್ದು ತೀರಾ ತೀರಾ ಕಡಿಮೆ  ಎಂದು ಹೇಳಬಹುದು .ಬನ್ನಂಜೆ ಗೋವಿಂದ ಆಚಾರ್ಯರು ತೌಳವ ಬ್ರಾಹ್ಮಣರು ಇದನ್ನು ಬಳಕೆಗೆ ತಂದ ಕಾರಣ ಇದಕ್ಕೆ  ತುಳು ಲಿಪಿ ಎಂದು ಹೆಸರು ಇದನ್ನು ಬೇರೆಕಡೆ ತಿಗಳಾರಿ ಎಂದು ಕರೆಯುತ್ತಾರೆ. ಇದು ತುಳು ಭಾಷೆಯ ಲಿಪಿ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

17 ಈ ಎಲ್ಲಾ ಆಧಾರಗಳು  ತಿಗಳಾರಿ ಮತ್ತು ತುಲು ಲಿಪಿ ಎರಡೂ ಒಂದೇ ಬೇರೆ ಬೇರೆಯಲ್ಲ  ಎಂದು ಪ್ರೂವ್ ಮಾಡುತ್ತವೆ ಇದು ಮೂಲತ ತಿಗಳಾರಿ ಲಿಪಿ ತುಳುನಾಡಿನ ಕೆಲವೆಡೆ ಮಾತ್ರ ಇದನ್ನು ತುಳು ಲಿಪಿ ಎಂದು ಕರೆದಿದ್ದಾರೆ
18 "ತಿಗಳಾರಿ ಲಿಪಿ ಯನ್ನು ತಮಿಳು ನಾಡಿನ ತಂಜಾವೂರು ಕಂಚಿಗಳಲ್ಲಿ ವೇದಾಧ್ಯಯನ ‌ಮಾಡಲು ಹೋದ ತುಳುನಾಡು ಹಾಗೂ ಮಲೆನಾಡಿನ ಬ್ರಾಹ್ಮಣರು ಕಲಿತು ಬಳಕೆಗೆ ತಂದ ಕಾರಣ ಅದು ತುಳು ನಾಡು ಮಲೆನಾಡಿನ ಪರಿಸರದಲ್ಲಿಯೂ ಹರಡಿತು ,ತುಳುನಾಡಿನ ಕೆಲವೆಡೆ ಅದನ್ನು ತುಳು ಲಿಪಿ ಎಂದು ಕರೆದಿದ್ದಾರೆ "ಎಂದು ಡಾ ವಿಘ್ನರಾಜ ಭಟ್ ಡಾ ವೆಂಕಟೇಶ ಜೋಯಿಸ್ ಡಾ ಗುಂಡಾ ಜೋಯಿಸ್ ಡಾ ದೇವರ ಕೊಂಡಾ ರೆಡ್ಡಿ ಡಾ ಪದ್ಮನಾಭ ಕೇಕುಣ್ಣಾಯ ಡಾ ವೆಂಕಟ್ರಾಜ ಪುಣಿಚಿತ್ತಾಯ ,ಡಾ ಬನ್ನಂಜೆ ಗೋವಿಂದಾಚಾರ್ಯರ ಮೊದಲಾದ ಲಿಪಿ ತಜ್ಞರು, ವಿದ್ವಾಂಸರು ಅಭಿಪ್ರಾಯಪಡುತ್ತಾರೆ
19 ಈ ಲಿಪಿಯನ್ನು ಕೇವಲ ತುಳು ಬ್ರಾಹ್ಮಣರು ಬಳಕೆಗೆ ತಂದದ್ದು ಅಲ್ಲ ತುಳುನಾಡ ಹವ್ಯಕ ಬ್ರಾಹ್ಮಣರು ಕೋಟ ಕರಾಡ ಚಿತ್ಪಾವನ ಬ್ರಾಹ್ಮಣರು, ಶಿವಮೊಗ್ಗ ಉತ್ತರ ಕೆಳದಿ ಯ ಬ್ರಾಹ್ಮಣರು ಈ ಲಿಪಿಯನ್ನು ಬಳಕೆ ಮಾಡುತ್ತಿದ್ದರು ತಂಜಾವೂರು ಕಂಚಿಯ ಬ್ರಾಹ್ಮಣರು ಬಳಕೆ ಮಾಡುತ್ತಿದ್ದರು ತುಳುನಾಡಿನಲ್ಲಿ ಸುಮಾರು ಒಂದೂವರೆ ಸಾವಿರ ಸಂಸ್ಕೃತ ಹಸ್ತ ಪ್ರತಿ ಗಳು ಈ ಲಿಪಿಯಲ್ಲಿ ಸಿಕ್ಕಿದ್ದು ಅದರಲ್ಲಿ ಹವ್ಯಕ ಕೋಟ ಚಿತ್ಪಾವನ ಕರಾಡ ಮರಾಠಿ ಬ್ರಾಹ್ಮಣರು ಬರೆದ ಕೃತಿಗಳು ಇವೆ ಇವುಗಳಲ್ಲಿ ತುಳುಭಾಷೆಯಲ್ಲಿ ಇರುವ ಕೃತಿಗಳು ಕೇವಲ ಏಳು ಮಾತ್ರ .ಈ ಲಿಪಿಯ ಹತ್ತ ಸಾವಿರಕ್ಕಿಂತ ಹೆಚ್ಚು ಹಸ್ತಪ್ರತಿ ಸಂಸ್ಕೃತ ವೇದ ಮಂತ್ರಗಳ ಕೃತಿಗಳು ಸಿಕ್ಕಿದ್ದು ಇವು ಶಿವಮೊಗ್ಗ ಕೆಳದಿ ರಾಮಚಂದ್ರಾಪುರ ಉತ್ತರ ಕರ್ನಾಟಕ ದ ತುಳುವೇತರ ಬ್ರಾಹ್ಮಣ ರ ಮನೆಯಲ್ಲಿ ಸಿಕ್ಕಿವೆ ಮೈಸೂರು ನಲ್ಲೂ ಬೆಂಗಳೂರಿನಲ್ಲಿ ತಮಿಳುನಾಡಿನ ತಂಜಾವೂರು  ಕಂಚಿ ಯ ತುಳುವರಲ್ಲದ ಇತರ ಬ್ರಾಹ್ಮಣರ ಮನೆಗಳು ಬರೆದಿರುವುದು ಸಿಕ್ಕಿವೆ. ಹವ್ಯಕ ಬ್ರಾಹ್ಮಣರು ಹವ್ಯಕರ ಕನ್ನಡ ಭಾಷೆಯಲ್ಲಿ ಪತ್ರ ವ್ಯವಹಾರ ಮಾಡುತ್ತಿದ್ದು ಹವ್ಯಕರ ರಾಮಚಂದ್ರಾಪುರ ಮಠದಲ್ಲಿ ಇಂಥಹ ನೂರಕ್ಕಿಂತ ಹೆಚ್ಚಿನ ಪತ್ರಗಳಿವೆ ಹಾಗಾಗಿ ಇದನ್ನು ಕೇವಲ ತುಳು ಬ್ರಾಹ್ಮಣರು ಬಳಕೆಗೆ ತಂದರು ಎನ್ನುವುದು ಸರಿಯಲ್ಲ

20 ವಿದ್ಯಾ ಶ್ರೀ ಯವರು ತಿಗಳಾರಿ ಲಿಪಿ ಮತ್ತು ತುಳು ಲಿಪಿ ಬೇರೆ ಬೇರೆ ಎಂಬುದಕ್ಕೆ ಆಧಾರವಾಗಿ ದೇವರಾಜ ಸ್ವಾಮಿ ಅವರ ಕೃತಿಯಲ್ಲಿನ ತಿಗಳಾರಿ ಮತ್ತು ತುಳು ವರ್ಣಮಾಲೆ ಚಿತ್ರ ಚಿತ್ರವನ್ನು ಪೇಸ್ ಬುಕ್ ನಲ್ಲಿ ಹಾಕಿದ್ದು ಅದರಲ್ಲಿನ ತಿಗಳಾರಿ ಲಿಪಿಯನ್ನು ವಿದ್ಯಾ ಶ್ರೀ ಅವರು ಹೇಳಿಕೊಡುವ ಲಿಪಿ ಹೋಲುತ್ತದೆ ಹೊರತು ತುಳು ವರ್ಣ ಮಾಲೆಯಲ್ಲಿ ಇರುವ ಹಾಗೆ ಇಲ್ಲ ಅವರು ಅವರು ಹಾಕಿದ ತಿಗಳಾರಿ ಲಿಪಿ ಚಿತ್ರ ದಲ್ಲಿ ಸಂಸ್ಕೃತ ಭಾಷೆಯಲ್ಲಿ ಮಾತ್ರ ಇರುವ   ದೀರ್ಘ ಋ ಇದೆ ವಿದ್ಯಾ ಅವರು ಹೇಳಿಕೊಡುವ ಲಿಪಿ ಯಲ್ಲೂ ಇದೆ ಅವರು ಪ್ರೂಫ್ ಗಾಗಿ ಹಾಕಿದ ತುಳು ವರ್ಣಮಾಲೆಯ ಲ್ಲಿ ದೀರ್ಘ ಋ ಇಲ್ಲ ಅದೇ ರೀತಿಯಲ್ಲಿ ವಿದ್ಯಾ ಶ್ರೀ ಹೇಳಿಕೊಡುವ ಎಲ್ಲಾ ಅಕ್ಷರಗಳು ಅವರೇ ಪ್ರೂಫ್ ಗಾಗಿ ನೀಡಿದ ತಿಗಳಾರಿ ಮತ್ತು ತುಳು ವರ್ಣಮಾಲೆ ಗಳಲ್ಲಿ ತಿಗಳಾರಿ ಲಿಪಿ ಯನ್ನು ಹೋಲುತ್ತವೆ ಇದನ್ನು ಕೇಳಿದಾಗ ನಮ್ಮ ಗುರುಗಳು ತುಳು ಎಂದು ಹೇಳಿದ್ದಾರೆ ಎನ್ನುತ್ತಾರೆ. ಅವರ ಗುರುಗಳಾದ ವಿಘ್ನರಾಜ ಭಟ್ ತಿಗಳಾರಿ ಲಿಪಿ ಮತ್ತು ತುಳು ಎರಡೂ ಒಂದು ಎಂದು ಹೇಳಿದ್ದಾರೆ ಆದರೆ ಇವರು ತಿಗಳಾರಿ ಮತ್ತು ತುಳು ಬೇರೆ ಎಂದು ಹೇಳುತ್ತಿದ್ದಾರೆ
ಇವರು ಹೇಳಿಕೊಡುವ ಲಿಪಿ ತುಳ ವರ್ಣಮಾಲೆ ಬದಲಿಗೆ ತಿಗಳಾರಿ ಲಿಪಿ ಯಂತೆ ಇದೆ ಎಂದಾಗ ಗುರುಗಳು ಹೇಳಿದ್ದಾರೆ ಎಂದು ಹೇಳಿದ್ದಾರೆ
ಯಾವುದೇ ಲಿಪಿಯನ್ನು ಯಾರು ಕೂಡ ಬಳಕೆ ಮಾಡಬಹುದು ಆದರೆ  ಅದು ತಿಗಳಾರಿ ಲಿಪಿ ಎಂಬ ಸತ್ಯವನ್ನು ಮುಚ್ಚಿಟ್ಟು ಅದು ತುಳು ಭಾಷೆಯ ಸ್ವಂತ ಲಿಪಿ ಎಂದು ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವುದು ಸರಿಯಲ್ಲ ಮತ್ತು ಅದನ್ನು ತುಳು ಭಾಷೆಗೆ ಸೂಕ್ತ ವಾ್ಉವಂತೆ ಪರಿಷ್ಕರಿಸದೆ ಇದ್ದ ಹಾಗೆ ಬಳಸಿ ತುಳು ಭಾಷೆಯನ್ನು ಅಪಭ್ರಂಶ ಗೊಳಿಸುವುದು ಸರಿಯಲ್ಲ  ©ಡಾ.ಲಕ್ಷ್ಮೀ ಜಿ ಪ್ರಸಾದ,ಕನ್ನಡ ಉಪನ್ಯಾಸಕಿ ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ

(ಲಿಪಿ ತಜ್ಞರಾದ ಜಮದಗ್ನಿ ಅಗ್ನಿ ಹೋತ್ರಿಯವರು ಇದು ತಿಗಳಾರಿ ಲಿಪಿ ಎಂದು ತಿಳಿಸಿ ,ವಿದ್ಯಾ ಅವರು ಹೇಳಿಕೊಡುತ್ತಾ ಇರುವ ತಿಗಳಾರಿ (ತುಳು) ಲಿಪಿಯಲ್ಲಿ ಅನೇಕ ದೋಷಗಳು ಇರುವುದನ್ನು ಗಮನಿಸಿ ಪೇಸ್ ಬುಕ್ ಮೂಲಕ  ವಿದ್ಯಾ ಅವರಿಗೆ  ನೀಡಿದ ಸೂಚನೆಗಳು--


Vidya Shree S Shetty ನಾವು ದಕ್ಷಿಣ ಕನ್ನಡದವರಲ್ಲ ,ತುಳು ಬರುವುದಿಲ್ಲ .ಲಿಪಿಯ ದೃಷ್ಟಿಯಿಂದ ಸಲಹೆಗಳನ್ನು ಕೊಡಬಲ್ಲೆ. ನೀವು ಪ್ರಸ್ತುತ ಹೇಗೆ ಕಲಿಸುತ್ತಿದ್ದೀರೋ ನನಗೆ ತಿಳಿಯದು. ನೀವು ಕಲಿಸುವ chart ಕೊಟ್ಟರೆ ಸಲಹೆ ನೀಡಬಲ್ಲೆ.ಉಕಾರ,ಉಕಾರದ ಕಾಗುಣಿತಕ್ಕೆ special forms ಇದೆ.ಕು,ಗು,ಜು ಇತ್ಯಾದಿಗಳಿಗೆ circle ಕೆಳಗೆ ಬರೆಯಬಾರದು. ಕೆಲವು ಅಕ್ಷರಗಳಾದ ಐ,ಖ,ಙ,ಞ,ಛ,ಟ,ಝ ಇತ್ಯಾದಿಯಲ್ಲಿ ಮಾರ್ಪಾಡು ಬೇಕು. ಇಲ್ಲಿ ಸಂಯುಕ್ತಾಕ್ಷರ ಕನ್ನಡದಂತೆ ಬರೆಯುವುದಿಲ್ಲ. ಎರಡೂ ಒಂದೇ size ಇರಬೇಕು,ಚಿಕ್ಕದು ದೊಡ್ಡದು ಇರಬಾರದು.ಯ,ರ,ಲ,ವ,ಮ ಇವುಗಳಿಗೆ ಸ್ಪೇಸಿಯಲ್ ರೂಪಗಳು ಇವೆ, ವ್ಯಂಜನಕ್ಕೆ ಜೋಡಿಸಿ ಬರೆಯಬೇಕು ಬಿಡಿಸಿ ಬರೆಯಬಾರದು,ಸಾಮಾನ್ಯದ ತರಹ ಬರೆಯಬಾರದು. ವ್ಯಂಜನದ ಹಿಂದೆ ಅನುಸ್ವಾರ ಬಳಸುವುದಿಲ್ಲ,ಮಲಯಾಳದಂತೆ ಅಂದ ಬದಲು ಅನ್ದ ಎಂದೇ ಬರೆಯುತ್ತಾರೆ. ನನಗೆ ತಿಳಿದಿರುವ ಮಟ್ಟಿಗೆ ಪ್ರತ್ಯೇಕ ಅಂಕಿಗಳು ಇಲ್ಲ,ಕನ್ನಡ ಸಂಖ್ಯೆಗಳನ್ನೇ ಬಳಸುತ್ತಾರೆ. ಪ್ರತ್ಯೇಕ ಸಂಖ್ಯೆ ಎನ್ನುವ ಹಸ್ತಪ್ರತಿಗಳ ಲಿಪಿ ಮಲಯಾಳ ಲಿಪಿ. ವ್ಯಂಜನಗಳ ಸಂಯುಕ್ತಾಕ್ಷರ ಬಹಳ ಕ್ಲಿಷ್ಟ ಕನ್ನಡದಂತೆ ಸುಲಭವಲ್ಲ.ಕ್ಕ,ತ್ತ,ತ್ಕ,ದ್ಧ,ತ್ಮ,ಕ್ಷ ,ರ್ಯ,ರ್ವ,ಸ್ಥetc ಗಳಲ್ಲಿ ಎರಡು ಅಕ್ಷರಗಳನ್ನು ಹೊಂದಿಸಿ ಅಕ್ಷರ ಬರೆಯುತ್ತಾರೆ, ಕೆಳಗೆ ಸಾಮಾನ್ಯವಾಗಿ ಬರೆಯುವುದಿಲ್ಲ.ಇ ,ಈ,ಉ ಸ್ವಲ್ಪ ಬೇರೆ ತರಹ ಬರೆಯುತ್ತಾರೆ.ಟ್ ,ತ್ ,ಕ್ ,ನ್ ಇವುಗಳು ವಿಶಿಷ್ಟವಾಗಿ ಬರೆಯುತ್ತಾರೆ,ಹಲಂತವನ್ನು ಸಾಮನ್ಯವಾಗಿ ಹಾಕುವುದಿಲ್ಲ.ಹೀಗೆ ಅನೇಕ ಕಲಿಕೆಯಲ್ಲಿ ಬದಲಾವಣೆಗಳು ಆವಶ್ಯಕ.ನಿಮ್ಮ ಪತ್ರಿಕೆಯ font ನಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ನಾಲ್ಕೈದು ಹಸ್ತಪ್ರತಿಗಳನ್ನು ಗಮನಿಸಿದರೆ ಸರಿಯಾದ ರೂಪಗಳು ರೂಪಗಳು ಯಾವುವು ಎಂದು ನಮಗೆ ಗೊತ್ತಾಗುವುದು.ನಮ್ಮ ಉದ್ದೇಶ ಇಷ್ಟೇ ಜನರು ಸರಿಯಾಗಿ ಕಲಿಯಲಿ.)

Thursday, 1 June 2017

ಕಾಲೇಜಿನಲ್ಲಿ ನನ್ನ ಮೊದಲ ದಿನದ ಪೇಚಾಟ © ಡಾ ಲಕ್ಷ್ಮೀ ಜಿ ಪ್ರಸಾದ

ಮೂರು ದಶಕಗಳ ಹಿಂದೆ ನಮ್ಮ ಸಮಾಜದಲ್ಲಿ ಸ್ತ್ರೀ ಶಿಕ್ಷಣಕ್ಕೆ ಯಾವುದೇ ರೀತಿಯ ಪ್ರಾಧಾನ್ಯತೆ ಇರಲಿಲ್ಲ. ನಮ್ಮ ಹವ್ಯಕರಲ್ಲಿ ಅಂತೂ ಹುಡುಗಿಯರು ಓದುವುದು ನಿಷ್ಪ್ರಯೋಜಕ ಎಂದು ಹೇಳುವ ಬಗ್ಗೆ   ಕೂಸು ಎಂತ ಓದಿದರೆಂತ ಒಲೆ ಬೂದಿ ಒಕ್ಕುದು ತಪ್ಪ ಎಂಬ ಮಾತು ಪ್ರಚಲಿತವಿತ್ತು .ಹುಡುಗಿಯರು ಏನು ಓದಿದರೇನು ? ಒಲೆಉ ಬೂದಿ ಗೋರುವುದು ತಪ್ಪದು ಎಂದು ಈ ಮಾತಿನ ಅರ್ಥ.
ಹುಡುಗಿಯರು ಓದುವುದು ವ್ಯರ್ಥ .ಏನೇ ಓದಿದರೂ ಅವರು ಅಡುಗೆ ಮಾಡಲು ಲಾಯಕ್ಕು ಎಂಬ ರೀತಿಯ ಅವಜ್ಞೆ ಆ ಕಾಲದಲ್ಲಿ ಇತ್ತು.
ಆದರೂ ಆ ಕಾಲದಲ್ಲಿ ನನ್ನ ಅಮ್ಮ ನನ್ನ ಓದಿಗೆ ಬೆಂಬಲ ನೀಡಿದರು.ತನ್ನ ಮಗಳು ಓದಿ ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬುದು ಅಮ್ಮನ ಆಶಯವಾಗಿತ್ತು.
ಆಗ ನಮಗೆ ಮಂಗಳೂರಿನಲ್ಲಿ ಕಾಲೇಜುಗಳು ಇರುವುದು ಗೊತ್ತಿತ್ತಾದರೂ ಸೈಂಟ್ ಅಲೋಶಿಯಸ್, ಕೆನರಾ,ಆಗ್ನೆಸ್ ಎಂಬ ಮೂರು ಪ್ರತಿಷ್ಠಿತ ಕಾಲೇಜುಗಳು ಬಿಟ್ಟರೆ ಉಳಿದವುಗಳ ಹೆಸರು ಕೂಡ ತಿಳಿದಿರಲಿಲ್ಲ .

ಫಲಿತಾಂಶಕ್ಕೆ ಮೊದಲೇ ನಾವು ಅರ್ಜಿ ತಂದಿರಿಸಬೇಕು ಇತ್ಯಾದಿ ಯಾಗಿ ಪ್ರವೇಶ ಪ್ರಕ್ರಿಯೆ ಬಗ್ಗೆ ಯೂ ತಿಳಿದಿರಲಿಲ್ಲ .ಹಾಗಾಗಿ ನನ್ನ ಫಲಿತಾಂಶ ಬರುವ ತನಕ ನಾವು ಯಾವುದೇ ಕಾಲೇಜಿನಿಂದ ಅರ್ಜಿ ತಂದು ಇಡಲಿಲ್ಲ.ಫಲಿತಾಂಶ ಬಂದ ತಕ್ಷಣವೇ ನನ್ನ ಭಾವ ( ದೊಡ್ಡಮ್ಮನ ಮಗಳ ಗಂಡ) ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು ಅವರಲ್ಲಿ ಅರ್ಜಿ ತಂದು ಕೊಡಲು ಕೇಳಿದೆವು.ಅವರು ಮಂಗಳೂರು ಸರ್ಕಾರಿ ಕಾಲೇಜಿನ( ಈಗಿನ ವಿಶ್ವವಿದ್ಯಾಲಯ ಕಾಲೇಜು) ಅರ್ಜಿ ತಂದು ಕೊಟ್ಟರು .ಉಳಿದೆಲ್ಲ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಗಳು ಮುಗಿದಿದ್ದವು ( ಪ್ರವೇಶ ಪ್ರಕ್ರಿಯೆ ಗಳ ಬಗ್ಗೆ ಮುಂದೆ ಓದಬಹುದಾದ ಕೋರ್ಸ್ ಪದವಿಗಳ ಬಗ್ಗೆ ನಮಗೆ ನಾನು ಓದಿದ ಶಾಲೆಯ ಶಿಕ್ಷಕರು ಯಾವುದೇ ಒಂದು ರೀತಿಯ ಮಾಹಿತಿ ನೀಡಿರಲಿಲ್ಲ ಅದು ಯಾಕೆ ? ಈ ಹಳ್ಳಿ ಮಕ್ಕಳು ಓದಿ ಏನು ಉದ್ದಾರ ಆದಾರು ಎಂಬ ಉಪೇಕ್ಷೆ ಇತ್ತೇ ಅಥವಾ ಅವರಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲವೇ ? ನನಗೆ ಈ ಪ್ರಶ್ನೆ ಆಗಾಗ ಕಾಡುತ್ತದೆ)
ಆದರೂ ನಾನು ತಂದೆಯವರ ಜೊತೆ ಮಂಗಳೂರಿಗೆ ಹೋಗಿ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಒಂದು ಸೀಟು ಕೊಡುವಂತೆ ,ಓದಲು ಅವಕಾಶ ಕೊಡುವಂತೆ ವಿನಂತಿ ಮಾಡಿದೆವು.ಆಗ ಅಲ್ಲಿ ನನ್ನ ಮಾರ್ಕ್ಸ್ ನೋಡಿ ಇದು ಒಳ್ಳೆಯ ಮಾರ್ಕ್ಸ್ ಆದರೂ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಇಲ್ಲಿ ಇಂಗ್ಲಿಷ್ ಮೀಡಿಯಂ ನಲ್ಲಿ ಓದುವುದು ಕಷ್ಟ ಅಲ್ಲದೆ ಅಡ್ಮಿಶನ್ ಮುಗಿದಿದೆ ಎಂದು ಹೇಳಿದರು.
ಅದೇ ದಿನ ಸರ್ಕಾರಿ ಕಾಲೇಜಿನಲ್ಲಿ ನನಗೆ ಸೀಟ್ ಸಿಕ್ಕಿತು.
ಅದಾಗಿ ಹದಿನೈದು ದಿನಗಳ ನಂತರ ಕಾಲೇಜು ಆರಂಭ.ಮೊದಲ ದಿನ ಚಿಕ್ಕಪ್ಪನ ಮಗಳು ಅಕ್ಕ ಸಂಧ್ಯಾ ಜೊತೆ ಬಹಳ ಸಂಭ್ರಮದಿಂದ ಜೊತೆ ಕಾಲೇಜಿಗೆ ಹೊರಟೆ.ತಲಪ್ಪಾಡಿ ತಲುಪಿದಾಗ ಕರ್ನಾಟಕ ದಲ್ಲಿ ಯಾವುದೋ ಕಾರಣಕ್ಕೆ ಆ ದಿನ ಬಸ್ ಸ್ಟ್ರೈಕ್ ಹಾಗಾಗಿ ಅರ್ಧ ದಾರಿ ಹೋಗಿ ಹಿಂದೆ ಬಂದೆವು.ಮರು ದಿನ ಮಂಜೇಶ್ವರದಿಂದ ರೈಲು ಹತ್ತಿ ಹೋದೆವು .ಸಂಧ್ಯಾ ಅಕ್ಕ ನನ್ನನ್ನು ಮಂಗಳೂರು ಕಾಲೇಜಿಗೆ ಹೋಗುವವರ ಜೊತೆ ಸೇರಿಸಿ ಅವಳು ಓದುವ ಗಣಪತಿ ಕಾಲೇಜಿಗೆ ಹೋದಳು.ಮತ್ತು ಸಂಜೆ ಐದಯ ಗಂಟೆಗೆ ರೈಲು ಇದೆ ಅದಕ್ಕೆ ಬಾ ಎಂದು ಹೇಳಿದಳು.

ಅಂತೂ ಕಾಲೇಜು ತಲುಪಿದೆ.ಮೊದಲ ಎರಡು ಅವಧಿ ಯಾರೂ ಕ್ಲಾಸ್ ತೆಗೆದುಕೊಳ್ಳಲಿಲ್ಲ ಮಧ್ಯಾಹ್ನ ಮೇಲೆ ಮೂವರು ತರಗತಿ ತೆಗೆದುಕೊಂಡರು .ನಮ್ಮ ತರಗತಿಯಲ್ಲಿ ಇದ್ದವರೆಲ್ಲ ಕನ್ನಡ ಮಾಧ್ಯಮ ದಲ್ಲಿ ಓದಿದವರು.ಆದರೂ ಒಂದಕ್ಷರ ಕನ್ನಡ ದಲ್ಲಿ ಯಾವುದೇ ಒಬ್ಬ ಉಪ‌್ಯಾಸಕರು ಮಾತಾಡಲಿಲ್ಲ .ಇಂಗ್ಲಿಷ್ ತರಗತಿ ತೆಗೆದು ಕೊಂಡ ಓರ್ವ ಉಪನ್ಯಾಸಕಿ " ಏನೋ ಒಂದಷ್ಟು ಹೇಳಿ ವಿದೇಶಿ ಯರು ಮಸತಾಡುವ ರೀತಿಯ ಇಂಗ್ಲಿಷ್ ನಲ್ಲಿ ಎರಡು ನಿಮಿಷ  ಮಾತಾಡಿ ಬೋರ್ಡ್ ನಲ್ಲಿ If the boys learns to cook " ಎಂದು ಬರೆದು ಇಡೀ ಅವಧಿಯಲ್ಲಿ ಬೊಂಬೆ ತರಹ ನಿಂತಿದ್ದರು.ಬಾಬ್ ಕಟ್ ಮಾಡಿದ ಕೇಶ ಶೈಲಿಯ ಅವರೂ ನನಗೆ ಒಂದು ಬೊಂಬೆಯ ಹಾಗೆ ಕಾಣುತ್ತಿದ್ದರು .ನಾನು ಅವರ ಮುಖ ನೋಡುತ್ತಾ ಕುಳಿತೆ .ಅಲ್ಲಿನ ಇಂಗ್ಲಿಷ್ ವಾತಾವರಣದಲ್ಲಿ ನನ್ನ ಸಂಭ್ರಮವೆಲ್ಲ ಆತಂಕವಾಗಿ ಮಾರ್ಪಾಡಾಗಿತ್ತು. ತರಗತಿಯಲ್ಲಿ ಇದ್ದ    ಇಂಗ್ಲಿಷ್ ಮಾಧ್ಯಮ ದಲ್ಲಿ ಓದಿದ್ದ  ಒಬ್ಬಿಬ್ಬರು ಏನೋ ಬರೆದಿದ್ದು ಗಂಟೆ ಬಾರಿಸಿದಾಗ ಅದನ್ನು ತಗೊಂಡು ಅವರು ಹೋದರು .ಅವರು ಹಾಗೆ ಬೋರ್ಡ್ ನಲ್ಲಿ ಬರೆದದ್ದು ಏನಿರಬಹುದು ಎಂದು ನಾನು ಶಿಕ್ಷಕಿ ಯಾಗುವ ತನಕ ತಿಳಿದೆ ಇರಲಿಲ್ಲ. ನಾನು ಶಿಕ್ಷಕಿಯಾದ ಮೇಲೆ ಸಾಮಾನ್ಯವಾಗಿ ಮೊದಲ ಒಂದೆರಡು ದಿನ‌ಮಕ್ಕಳಿಗೆ ನಾವು ಪರಿಚಯ ದ ನಂತರ ಸರಳವಾದ ಪ್ರಬಂಧ ಗಳನ್ನು ಬರೆಯಲು ಹೇಳುತ್ತೇವೆ.ಆಗ ನನಗೆ ತಲೆಗೆ ಹೋದದ್ದು ನಾನು ಕಾಲೆಜಿಗೆ ಹೋದ ಮೊದಲ ದಿನ ಆ ಉಪನ್ಯಾಸಕಿ ಪ್ರಬಂಧ ಬರೆಯಲು ಹೇಳಿರಬಹುದೆಂದು ತಿಳಿಯಿತು.ಅದರೆ ನೂರರಷ್ಟು ಇದ್ದ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರೂ ಅವರು ನೀಡಿದ ಪ್ರಬಂಧ ಬರೆಯದೆ ಇದ್ದಾಗಲೂ ನಮಗೆ ಸರಳವಾಗಿ ಅರ್ಥವಾಗು ರೀತಿಯಲ್ಲಿ ಹೇಳಿ ನಾಲ್ಕು ಸಾಲು ಹೇಳಿಕೊಟ್ಟು ಬರೆಯಿಸುವ ಪ್ರಯತ್ನ ಮಾಡಲೇ ಇಲ್ಲ .ಆಗ ಈಗಿನಂತೆ ಫಲಿತಾಂಶ ಕಡಿಮೆ ಬಂದರೆ ಇವರನ್ನು ಯಾರೂ ಕೇಳುವವರು ಇರಲಿಲ್ಲವೇ ? ಬಹುಶಃ ಇರಲಿಲ್ಲ ಇದ್ದರೆ ಈಗ ನಾವೆಲ್ಲಾ ಮಾಡುವಂತೆ    ಕಲಿಸುವ ಯತ್ನ ಮಾಡುತ್ತಿದ್ದರು ಖಂಡಿತಾ

 ಕೊನೆಯ ಅವಧಿ ಸಂಜೆ ನಾಲ್ಕರಿಂದ ಐದು ಗಂಟೆ ತನಕ ಇತ್ತು .ರೈಲಿಗೆ ಹೋಗುವ ವಿದ್ಯಾರ್ಥಿ ಗಳಿಗೆ ಕೇಳಿದರೆ ಐದು ನಿಮಿಷ ಮೊದಲೇ ಬಿಡುತ್ತಾರೆ ಎಂದು ನನಗೆ ಮೊದಲೇ ಆ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯರು ತಿಳಿಸಿದ್ದರು .ಕೊನೆಯ ಅವಧಿ ಗಣಿತದ್ದು ಆಗಿತ್ತು. ಅವರೂ ಒಂದಕ್ಷರ ಕನ್ನಡ ಪದ ಹೇಳಿರಲಿಲ್ಲ .ಹಾಗಿರುವಾಗ ಅವರಲ್ಲಿ ನಾನು ರೈಲಿಗೆ ಹೋಗಲು ಐದು ನಿಮಿಷ ಬೇಗ ಬಿಡಿ ಎಂದು ಕೇಳುವುದು ಹೇಗೆ ಅಂತ ಗೊತ್ತಾಗಲಿಲ್ಲ. ಐದು ಗಂಟೆಗೆ ಐದು ನಿಮಿಷ ಇರುವಾಗ ಬೇರೆ ದಾರಿ ಇಲ್ಲದೆ ಎದ್ದು ನಿಂತು ಕನ್ನಡ ದಲ್ಲಿಯೇ ಬೇಗ ಹೋಗಲು ಅನುಮತಿ ಕೇಳಿದೆ .ನನ್ನನ್ನು ಯಾವುದೋ ಅನ್ಯ ಗ್ರಹ ಜೀವಿ ಎಂಬಂತೆ ನೋಡಿ ಗೋ ಎಂದು ಹೇಳಿ ಹೋಗಲು ಅನುಮತಿ ನೀಡಿದರು .ಅಲ್ಲಿಂದ ಒಂದೇ ಉಸಿರಿಗೆ ಓಡಿಕೊಂಡು ರೈಲ್ವೇ ಸ್ಟೇಷನ್ ಗೆ ಬಂದೆ .ಅಲ್ಲಿ ಒಂದು ರೈಲು ನಿದಾನವಾಗಿ ಚಲಿಸಲು ಆರಂಭಿಸಿತ್ತು .ಓಡಿ ಹೋಗಿ ಕೊನೆಯ ಭೋಗಿಗೆ ಹತ್ತಿದೆ .ಅದೃಷ್ಟವಶಾತ್ ಅದು ನಾನು ಹೋಗ ಬೇಕಾಗಿದ್ದ ರೈಲು ಆಗಿತ್ತು .ನಾನು ಟಿಕೆಟ್ ಕೂಡ ತೆಗೆದುಕೊಂಡು ಇರಲಿಲ್ಲ. ಒಂದೊಮ್ಮೆ ಅದು ಬೇರೆಡೆಗೆ ಹೋಗು ರೈಲಾಗಿರುತ್ತಿದ್ದರೆ ? ಅಥವಾ ನಾನು ಬರುವಷ್ಟರಲ್ಲಿ ಅದು ಹೋಗಿರುತ್ತಿದ್ದರೆ ? ನನಗೆ ನೆನೆದರೆ ಈಗಲೂ ಭಯವಾಗುತ್ತದೆ.ಯಾಕೆಂದರೆ ನನಗೆ ಮಂಗಳೂರಿನಲ್ಲಿ ಓಡಾಡಿ ಅಭ್ಯಾಸ ಇರಲಿಲ್ಲ ಯಾರ ಪರಿಚಯವೂ ಇಲ್ಲದೆ ರೈಲ್ವೆ ಸ್ಟೇಷನ್ ನಲ್ಲಿ ಏನು ಮಾಡುತ್ತಿದ್ದೆನೋ ? ದೇವರೇ ಬಲ್ಲ!
ಸದ್ಯ ಹಾಗಾಗಲಿಲ್ಲ.
ಅದರ ಮರುದಿನಕ್ಕೆ ಆಗುವಾಗ ಬಸ್ ಸ್ಟ್ರೈಕ್ ನಿಂತಿದ್ದು ನಾನು ಅಕ್ಕನ ಜೊತೆ ನನ್ನ ತಂದೆ ಮನೆ ಕಾಸರಗೋಡು ಜಿಲ್ಲೆಯ ಕೋಳ್ಯೂರಿನಿಂದ ಮಂಗಳೂರಿಗೆ ಬಂದೆ.ನನ್ನನ್ನು ಕಾಲೇಜು ತಲುಪಿಸಿ ಅಕ್ಕ ಅವಳ ಕಾಲೇಜಿಗೆ ಹೋದಳು.
ಆ ದಿನವೂ ಒಂದೆರಡು ಅವಧಿ ತರಗತಿ ಯನ್ನು ಯಾರೋ ತೆಗೆದುಕೊಂಡರು.ಯಾವ ವಿಷಯ ಅಂತ ನನಗೆ ಗೊತ್ತಾಗಲಿಲ್ಲ ಯಾಕೆಂದರೆ ಅವರೆಲ್ಲರೂ ಸಾಕ್ಷಾತ್ ಇಂಗ್ಲೆಂಡಿಂದ ಉದುರಿದವರಂತೆ ಇಂಗ್ಲಿಷ್ ಅನ್ನು ವಿದೇಶಿ ಶೈಲಿಯಲ್ಲಿ  ಬಾಯಿಯಲ್ಲಿ ಕಲ್ಲು ಇಟ್ಟುಕೊಂಡವರಂತೆ ಮಾತಾಡುತ್ತಾ ಇದ್ದರು.ಅಂತೂ ಸಂಜೆ ಐದು  ಗಂಟೆಗೆ ಎಲ್ಲರೂ ಮನೆಗೆ ಹೊರಟೆವು .
ಈಗ ಬಂತು ನನಗೆ ಪೇಚಾಟ.ಬೆಳಗ್ಗೆ ಕಾಲೇಜಿಗೆ ಬಂದ ರಸ್ತೆ ವನ್ ವೇ ಆಗಿತ್ತು. ಈಗ ಹಿಂದೆ ಹೋಗುವುದು ಹೇಗೆ ತಿಳಿಯಲಿಲ್ಲ. ಆಗ ಸಹಾಯಕ್ಕೆ ಬಂದವಳು ನನಿ ಸಹಪಾಠಿ ಶಾಲಿನಿ.ಅವಳಿಗೆ ಮಂಗಳೂರು ಸರಿಯಾಗಿ ಪರಿಚಯ ಇದ್ದು ನನ್ನನ್ನು ರಸ್ತೆ ದಾಟಿಸಿ ಲೇಡಿ ಗೋಷನ್ ಆಸ್ಪತ್ರೆ ಬಳಿ ಕರೆದುಕೊಂಡು ಬಂದು ತಲಪ್ಪಾಡಿಗೆ ಹೋಗುವ 42 ಎಂಬ ಸಂಖ್ಯೆ ಯ ಬಸ್ ಗೆ ಹತ್ತಿಸಿದಳು ಅಂತೂ ಅವಳ ಸಹಾಯದಿಂದ ಮನೆ ಸೇರಿದೆ.ಇಂದು ನಮಗೆ ಕಾಲೇಜು ಆರಂಭ .ಹಾಗಾಗಿಯೇ ನನ್ನ ಕಾಲೇಜಿನ ಮೊದಲ ದಿನದ ನೆನಪು ಆಯಿತು
ಅಂದು ನನಗೆ ಕಲಿಯಲು ಅವಕಾಶ ಸಿಗದ ಪ್ರತಿಷ್ಠಿತ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ನಾನು ನಂತರ ಸಂಸ್ಕೃತ ಉಪನ್ಯಾಸಕಿಯಾಗಿ ನಾಲ್ಕು ವರ್ಷ ಕೆಲಸ ಮಾಡಿದ್ದೇನೆ .ಕಲಿಯಲು ಅವಕಾಶ ಸಿಗದೇ ಇದ್ದರೂ ಕಲಿಸಲು ಅವಕಾಶ ಸಿಕ್ಕಿತ್ತು © ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕಿ ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ.   

Sunday, 28 May 2017

ದೊಡ್ಡವರ ದಾರಿ: ನಮ್ಮ ಕಾರಂತ ಮಾವ ©ಡಾ ಲಕ್ಷ್ಮೀ ಜಿ ಪ್ರಸಾದ್

ನಮ್ಮ ಬದುಕಿನಲ್ಲಿ ಬಹು ದೊಡ್ಡ ಆತ್ಮೀಯತೆಯನ್ನು  ತೋರಿಸಿದವರು ನಮ್ಮ ಆತ್ಮೀಯರಾದ ನಮ್ಮ ತಂದೆ ಮನೆ ಪಕ್ಕದ ಮನೆಯ ಕಾರಂತ ಮಾವ ಎಂದೇ ನಾವು ಕರೆಯುತ್ತಾ ಇದ್ದ ಕೋಳ್ಯೂರು ಆನಂದ ಕಾರಂತರದು.ನನ್ನ ತಂದೆ ಮತ್ತು ಅವರ ನಡುವಿನ ಸ್ನೇಹ ಎಲ್ಲ ಉಪಮೆಗಳನ್ನು ಮೀರಿದ್ದು ಅದನ್ನು ಬಣ್ಣಿಸಲು ಪದಗಳಿಲ್ಲ .ಅದರಲ್ಲಿ ಹೊಟ್ಟೆಕಿಚ್ಚು ಮತ್ಸರದ ಲವಲೇಶವೂ ಇರಲಿಲ್ಲ.
1978 ರಲ್ಲಿ ಎಂದರೆ ಮೂವತ್ತೊಂಬತ್ತು ವರ್ಷಗಳ ಹಿಂದೆ ನನ್ನ ತಂದೆಯ ಹಿರಿ ಮನೆಯಲ್ಲಿ ಆಸ್ತಿ ಪಾಲಾಗಿ ಅಲ್ಲಿಂದ ಒಂದು ಪರ್ಲಾಂಗು ದೂರದಲ್ಲಿ ಕೋಳ್ಯೂರು ದೇವಾಲಯದ ಸಮೀಪ ಹೊಸ ಮನೆ ಕಟ್ಟಿ ನೆಲೆಯಾದಾಗ ಬೆಂಬಲ ಕೊಟ್ಟವರು ನಮ್ಮ ನೆರೆ ಮನೆಯವರಾದ ಆನಂದ ಕಾರಂತರು .ನಮ್ಮ ತಂದೆ ತುಂಬಾ ಮುಗ್ದ ರು ಜನರು ಸಾಕಷ್ಟು ಮೋಸ ವಂಚನೆ ಮಾಡುತ್ತಿದ್ದರೆ ನಮ್ಮ ರಕ್ಷಣೆಗೆ ನಿಂತವರು ಕಾರಂತ ಮಾವ .
ಅವರ ತೋಟದ ಪಕ್ಕದಲ್ಲಿ ನಮ್ಮ ಸಣ್ಣ ತೋಟ ಇದ್ದು ಅದರಲ್ಲಿ ಅಡಿಕೆ ತೆಂಗು ಕಳ್ಳರ ಪಾಲಾಗದೆ ಒಂದಿನಿತು ನಮಗೆ ಉಳಿದಿದ್ದರೆ ಅದಕ್ಕೆ ಕಾರಣ ಕಾರಂತ ಮಾವ.ಅವರ ಮನೆಯಿಂದಲೇ ನಮ್ಮ ತೋಟ ಗದ್ದೆ ಅವರಿಗೆ ಕಾಣಿಸುತ್ತಾ ಇತ್ತು .ಅಲ್ಲಿಂದಲೇ ಒಂದು ಅವಾಜ್ ಹಾಕಿದರೆ ಅಡಿಕೆ ತೆಂಗು‌ಕದಿಯಲು ಬಂದವರು ಓಡಿ ಹೋಗುತ್ತಿದ್ದವರು ಮತ್ತೆ ವರ್ಷ ಕಳೆದರೂ ಆ ಕಡೆಗೆ ತಲೆ ಇಟ್ಟು ಮಲಗುತ್ತಿರಲಿಲ್ಲ .
ನಮ್ಮ ತಂದೆ ಹೊಸ ಮನೆ ಕಟ್ಟ ಹೊರಟಾಗ ಒಂದು ನಯಾ ಪೈಸೆ ದುಡ್ಡು ಅವರಲ್ಲಿ ಇರಲಿಲ್ಲ. ಪೂರ್ತಿಯಾಗಿ ಸಾಲದಿಂದ ಮನೆ ಕಟ್ಟುವಾಗ ದುಡ್ಡು ಕೊರತೆಯಾಗಿ ಮನೆಗೆ ಬಾಗಿಲು ಇರಿಸಲೇ ಸಾಧ್ಯವಾಗಿರಲಿಲ್ಲ. ಇನ್ನು ಸ್ನಾನದ ಮನೆ ಕಟ್ಟುವುದು ಎಲ್ಲಿಂದ ಬಂತು ? ಈ ಸಂದರ್ಭದಲ್ಲಿ ನನ್ನ ತಂದೆ ಹಾಗೂ ಅಣ್ಣ ತಮ್ಮಂದಿರು ತೆರೆದ ಬಯಲಿನಲ್ಲಿ ಮರದ ಅಡಿಯಲ್ಲಿ ನೀರು ಕಾಸಿ ಬಿಸಿ ಮಾಡಿ ಸ್ನಾನ ಮಾಡುತ್ತಿದ್ದರು ನನ್ನ ಅಮ್ಮ ಅಕ್ಕ ನನಗೆ ಸ್ನಾನದ ಮನೆ ಇಲ್ಲದ್ದು ದೊಡ್ಡ ಸಮಸ್ಯೆ ಆಗಿತ್ತು .ಆಗ ನಮಗೆ ಬೆಂಬಲ ನೀಡಿದವರು ಆನಂದ ಕಾರಂತ ಮಾವ ಮತ್ತು ಅವರ ಮಡದು.ನಮಗೆ ಅವರ ಬಚ್ಚಲು ಮನೆಯಲ್ಲಿ ಸ್ನಾನ ಮಾಡಲು ಅವರು ತಿಳಿಸಿದರು ನಮ್ಮ ಮನೆಯಲ್ಲಿ ಸ್ವಲ್ಪ ದುಡ್ಡು ಹೊಂದಿಸಿ ಬಚ್ಚಲು ಮನೆ ಕಟ್ಟುವ ತನಕ ನಾವು ಕಾರಂತ ಮಾವನ ಮನೆಯ ಬಚ್ಚಲಯ ಮನೆಯಲ್ಲಿ ಅವರು ಕಾಯಿಸಿ ಇಟ್ಟ ನೀರಿನಲ್ಲಿ ಸ್ನಾನ ಮಾಡುತ್ತಿದ್ದೆವು ಅದಲ್ಲದೇ ಆ ಕಾಲದಲ್ಲಿ ನಮ್ಮ ಊರಿನ ಯಾರ ಮನೆಯಲ್ಲಿ ಯೂ ಶೌಚಾಲಯ ಇರಲಿಲ್ಲ. ಎಲ್ಲರೂ ಚೆಂಬು ಹಿಡಿದುಕೊಂಡು ಗುಡ್ಡೆಗೆ ಹೋಗ ಬೇಕಾಗಿತ್ತು. ಹೊಸ ಮನೆ ಕಟ್ಟಿ ಬಂದ ನಮಗೆ ಒಂದು ಅಂಗೈ ಅಗಲದಷ್ಟು ಕೂಡ ಗುಡ್ಡೆ ಅಥವಾ ಬೇರೆ ಜಾಗ ಇರಲಿಲ್ಲ ಆಗ ನಾವೆಲ್ಲರೂ ಹೋದದ್ದು ಅವರ ಗುಡ್ಡೆಗೆ.ಅವರೂ ಏನು ತುಂಬಾ ಜಾಗ ಇರುವ ಸಿರಿವಂತ ರಲ್ಲ ಆದರೆ ಅವರ ಹೃದಯ ಶ್ರೀಮಂತಿಗೆ ಯಾವುದೇ ಕೊರತೆ ಇರಲಿಲ್ಲ .ಬೇರೆ ಯಾರೇ ಆದರೂ ನಮ್ಮ ಜಾಗಕ್ಕೆ ಬರಬೇಡಿ ಎಂದು ಹೇಳುತ್ತಿದ್ದರು.ಆದರೆ ಒಂದೇ ಒಂದು ಮಾತು ಕೂಡಾ ಅವರು ಆ ಬಗ್ಗೆ ಹೇಳಿರಲಿಲ್ಲ.
ಇದಾಗಿ ಕಾಲಚಕ್ರ ತಿರುಗತೊಡಗಿತು.ನನ್ನ ಅಣ
 ಅಮೇರಿಕಕ್ಕೆ ಹೋದ ಮೇಲೆ ನಮ್ಮ ಮನೆಯ ಪರಿಸ್ಥಿತಿ ಸುಧಾರಣೆ ಆಯಿತು.ನಮ್ಮ ಮನೆಗೆ ರಸ್ತೆ ಇಲ್ಲದ್ದು ದೊಡ್ಡ ಕೊರತೆ ಆಗಿತ್ತು. ರಸ್ತೆ ಬರಬೇಕಾದರೆ ಕಾರಂತ ಮಾವ ರಸ್ತೆಗೆ ಜಾಗ ಬಿಡಬೇಕಿತ್ತು .ಬುಲ್ ಡೋಜರ್ ತಂದು ರಸ್ತೆ ಮಾಡಲು ಹೊರಟಾಗ ಎಲ್ಲರೂ ನಮಗೆ ಹೊಟ್ಟೆ ಕಿಚ್ಚಿನಿಂದ  ಅಡ್ಡಿ ಮಾಡಿದವರೇ.ಆದರೂ ಆಗಲೂ ಜಾಗ ಬಿಟ್ಟು ಕೊಟ್ಟು ಪೂರ್ಣ ಬೆಂಬಲ ನೀಡಿದವರು ಕಾರಂತ ಮಾವ ಅದರಿಂದಾಗಿ ಅವರ ಮನೆಗೂ ರಸ್ತೆ ಬಂತು ಇಂದು ನಾವುಗಳು ಈ ರಸ್ತೆಯಲ್ಲಿ ಕಾರು ಬೈಕು ಅಟೋಗಳಲ್ಲಿ ಹೋಗುವಂತಾಗಲು ಕ ಅಂದಿನ ಅವರ ಔದಾರ್ಯತೆಯೇ ಕಾರಣ.ಅವರು ಬೆಂಬಲ ಕೊಡದೆ ಇದ್ದರೆ ರಸ್ತೆ ನಿರ್ಮಾಣ ಅಸಾಧ್ಯವಾಗಿರುತ್ತಿತ್ತು.ರಸ್ತೆ ಇಲ್ಲದೇ ಇದ್ದರೆ ನನ್ನತಮ್ಮ ಹಾಗೂ ಕಾರಂತ ‌ಮಾವನ ಮಕ್ಕಳು ಕಾರು ತೆಗೆಯಲು ಸಾಧ್ಯವೇ ಇರುತ್ತಿರಲಿಲ್ಲ


 ಕಾರಂತ ಮಾವನಿಗೆ ಚಿಕ್ಕಂದಿನಿಂದಲೇ ಪೋಲಿಯೋ ಪೀಡಿತರಾದ ಅವರ ಒಂದು ಕಾಲೂ ಊನ ಗೊಂಡಿದ್ದರೂ ಅವರು ತೆಂಗಿನ ಮರ ಹತ್ತುತ್ತಾ ಇದ್ದರು .ಮೊದಲ ವರ್ಷ ನಮ್ಮ ತಂದೆಯವರಿಗೆ ಬೈ ಹುಲ್ಲಿನ ಮುಟ್ಟೆ / ಬಣವೆ ಹಾಕಲು ತಿಳಿಯದೆ ಇದ್ದಾಗ ಸ್ವತಃ ಕಾರಂತ ಮಾವನೇ ಬಂದು ನಿಂತು ಹಾಕಿಸಿಕೊಟ್ಟಿದ್ದರು.
ಆ ಮನೆಗೆ ಬಂದಾಗ ನನ್ನ ಸಣ್ಣ ತಮ್ಮ  ಗಣೇಶ ಎರಡು ತಿಂಗಳ ಸಣ್ಣ  ಮಗು.ಒಂದು ದಿನ ರಾತ್ರಿ ಹುಷಾರಿಲ್ಲದೆ ಆದಾಗ ನಡು ರಾತ್ರಿ ನಮ್ಮ ಮನೆಗೆ ಬಂದು ಔಷದ ಮಾಡಿ ಕೊಟ್ಡದ್ದು ಈಗಲೂ ನೆನಪಿದೆ .ಅದೇ ರೀತಿ ಒಂದು ದಿನ ಈ ನನ್ನ ಸಣ್ಣ ತಮ್ಮ ಎರಡು ವರ್ಷದ ಮಗು ಇದ್ದಾಗ ಮನೆಯಿಂದ ಕಾಣೆಯಾದಾಗ ಮನೆ ಮಂದಿ ಎಲ್ಲ ಗಾಭರಿಕೊಂಡು ಹುಡುಕಾಡಿದೆವು.ಆಗ ಕೂಡ ಕಾರಂತ ಮಾವ ಮತ್ತು ಅವರ ಕುಟುಂಬ ದವರೆಲ್ಲರೂ ಕಾಣೆಯಾದ ನನ್ನ ತಮ್ಮನನ್ನು ಗಾಭರಿಯಿಂದ ಹುಡುಕಾಡಿದ್ದರು.ಕೊನೆಗೆ ಹತ್ತಿರದ ಕೆರೆ ಭಾವಿ ನೋಡಿಯೂ ಮಗು ಸಿಗದೆ ಕೊನೆಗೆ ನಮ್ಮ ಅಜ್ಜನ ಮನೆಗೆ ಹೋಗುವ ದಾರಿಯಲ್ಲಿ ಅವನು ಪತ್ತೆಯಾದ ಅದು ಬೇರೆ ವಿಚಾರ.ಆದರೆ ಮನೆಯವರಂತೆಯೇ ಕಾಳಜಿ ವಹಿಸಿದ ಕಾರಂತ ಮಾವನ ಪ್ರೀತಿ ಅಪಾರವಾದುದು.

ಗಾಂಧಿಯವರ ಕಾಲಕ್ಕೆ ಎಲ್ಲೆಡೆ ಚರಕದ ಚಕ್ರ ತಿರುಗುವುದು ನಿಂತು ಹೋಯಿತು. ಆದರೆ ನಮ್ಮ ಕಾರಂತ ಮಾವ ಈಗ ಕೂಡ ಚರಕವನ್ನು ತಿರುಗಿಸಿ ಹತ್ತಿಯಿಂದ ನೂಲು ಮಾಡಿ ಉತ್ತಮ ಗುಣಮಟ್ಟದ ಜನಿವಾರ ತಯಾರಿ ಮಾಡುತ್ತಿದ್ದರು.ಇವರು ತಯಾರಿಸಿದ ತುಂಬಾ ಶುದ್ಧಾವಾಗಿದ್ದು ಉತ್ತಮ ಗುಣಮಟ್ಟ ಹೊಂದಿದ್ದು ಅವರು ತಯಾರಿಸಿದ  ಜನಿವಾರಕ್ಕೆ ಸಾಕಷ್ಟು ಬೇಡಿಕೆ ಇದೆ .
ಅವರು ರುದ್ರ ಚಮೆ ಪವಮಾನ ಮತ್ತು ದೇವರ ಪೂಜೆಯ ಮಂತ್ರಗಳನ್ನು ಊರಿನ ಎಲ್ಲರಿಗೂ ಉಚಿತವಾಗಿ ಹೇಳಿಕೊಡುತ್ತಾ ಇದ್ದರು.ಹಾಗಾಗಿ ಎಲ್ಈಲಿಗೆ ಗುರು ಸದೃಶರಾಗಿದ್ದರು .ಈಗ ಕೋಳ್ಯೂರು ದೇವಾಲಯದ ಅರ್ಚಕರಾಗಿರುವ ರವಿ ಹೊಳ್ಳರೂ ಕೂಡಾ ಇವರ ವಿದ್ಯಾರ್ಥಿ ಯೇ .
ಅವರಿಗೆ ಮೂರು ಗಂಡು ಮಕ್ಕಳು ಮತ್ತು ಒಬ್ಬಳು ‌ಮಗಳು .ನಾನು ನನ್ನ ಅಣ್ಣ ತಮ್ಮಂದಿರು ಅವರ ಜೊತೆ ಆಡಿ ಬೆಳೆದವರು.ಅಲ್ಲಿಯೇ ಪಕ್ಕದಲ್ಲಿ ದೇವಸ್ಥಾನದ ದೊಡ್ಡ ಕೆರೆ ಇದ್ದು ಬೇಸಿಗೆ ಕಾಲ ಚಳಿಗಾಲ ಮಳೆಗಾಲ ಎಂಬ ಬೇಧ ವಿಲ್ಲ ದೆ ನಾವು ಅದರಲ್ಲಿ ಈಜಾಡಿ ಆನಂದಿಸುತ್ತಾ ಇದ್ದೆವು.ಎರಡು ತೆಂಗಿನ ಕಾಯಿಯನ್ನು ಕಟ್ಟಿ ಅದರ ಸಹಾಯದಿಂದ ಈಜಲು ಕಲಿಸಿದವರೂ ನಮಗೆ ಕಾರಂತ ಮಾವನೇ.
ಕೋಳ್ಯೂರು ದೇವಾಲಯದ ಇತಿಹಾಸದ ಬಗ್ಗೆ ಕೂಡ ನನಗೆ ಮಾಹಿತಿ ನೀಡಿದವರು ಅವರೇ
ಪ್ರಸ್ತುತ ಅವರ ಅರೋಗ್ಯ ಹಾಳಾಗಿದ್ದು ಅವರು ಗುಣಮುಖರಾಗಿ ನೂರು ವರ್ಷ ಬಾಳಲಿ ಎಂದು ಹಾರೈಸುವೆ 

Thursday, 25 May 2017

ದೊಡ್ಡವರ ದಾರಿ : ಎಲ್ಲರಂತವರಲ್ಲ ನನ್ನಮ್ಮ © ಡಾ ಲಕ್ಷ್ಮೀ ಜಿ ಪ್ರಸಾದ

         

ಎಲ್ಲರವರಂತಲ್ಲ ನನ್ನಮ್ಮ, ಬಾಗಿಲಿಲ್ಲದ ಮನೆಯಲ್ಲಿ ತಲೆ ಯಡಿಯಲ್ಲಿ ಕತ್ತಿ ಇಟ್ಟುಕೊಂಡು ಮಲಗಿದೆ ಧೀರೆ ನನ್ನ ಅಮ್ಮ ಹಾಗಾಗಿ ಸುಮಾರು    ದಿನಗಳಿಂದ ನನ್ನಮ್ಮ ನ ಬಗ್ಗೆ ಬರೆಯಬೇಕೆಂದು‌ಕೊಂಡಿದ್ದೆ .ನನ್ನಮ್ಮ ಶ್ರೀ ಮತಿ ಸರಸ್ವತಿ ಅಮ್ಮ ವಾರಣಾಸಿ ಮೂಲತಃ ಮೀಯಪದವು ಸಮಿಪದ ಹೊಸಮನೆ ಈಶ್ವರ ಭಟ್ ಅವರ ಎರಡನೇ ಮಗಳು . ನಮ್ಮ ಅಜ್ಜನಿಗೆ ಇದ್ದಿದ್ದು ಇಬ್ಬರು ಹೆಣ್ಣು ಮಕ್ಕಳು ಮಾತ್ರ ನನ್ನ ಅಮ್ಮ ಚಿಕ್ಕವರು ನನ್ನ ದೊಡ್ಡಮ್ಮ ಶ್ರೀ ಮತಿ ಗೌರಮ್ಮ ದೊಡ್ಡಮಗಳು
ಅಜ್ಜನಿಗೆ ಗಂಡು ಮಕ್ಕಳಿರಲಿಲ್ಲ ಜೊತೆಗೆ ಸಾಕಷ್ಟು ಶತ್ರುಗಳು ಇದ್ದರು ಆರೋಗ್ಯ ವೂ ಚೆನ್ನಾಗಿರಲಿಲ್ಲ ಹಾಗಾಗಿ ಕಲಿಕೆಯಲ್ಲಿ ನನ್ನ ಅಮ್ಮ ತುಂಬಾ ಜಾಣೆಯಾಗಿದ್ದರೂ ಮುಂದೆ ಓದಿಸದೆ ತನ್ನ ಅಕ್ಕನ ಮಗನಿಗೆ ತೀರಾ ಚಿಕ್ಕ ವಯಸ್ಸಿನಲ್ಲಿ ಎಂದರೆ ಹದಿನಾಲ್ಕು ಹದಿನೈದು ವರ್ಷದಲ್ಲೇ ಮದುವೆ ಮಾಡಿ ಕೊಟ್ಟರು.ತೀರಾ ಸಣ್ಣ ವಯಸ್ಸಿನಲ್ಲಿ ಮದುವೆಯಾದ ನನ್ನ ಅಮ್ಮ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ನಮ್ಮ ತಂದೆ ಮನೆಯವರೇನು ತೀರ ಬಡವರಲ್ಲ .ನನ್ನ ತಂದೆ ಪುರೋಹಿತ ರಾಗಿದ್ದು ಹೊಟ್ಟೆಗೆ ಬಟ್ಟೆಗೆ ಸಾಕಾಗುವಷ್ಟು ವರಮಾನವಿತ್ತು
ಆದರೂ ಅಣ್ಣ ತಮ್ಮಂದಿರು ಇಲ್ಲದ ನನ್ನ ಅಮ್ಮ ಅಲ್ಲಿ ತೀರಾ ಕಷ್ಟ ವನ್ನು  ತಿರಸ್ಕಾರವನ್ನೂ  ಎದುರಿಸಬೇಕಾಯಿತು.
ಅಂತೂ ಇಂತೂ ಅಮ್ಮ ನಿಗೆ ಇಪ್ಪತ್ತೆಂಟು ವರ್ಷವಾಗುವಾಗ ನಾವು ಐದು ಜನ ಮಕ್ಕಳು ಹುಟ್ಟಿದ್ದೆವು ಆ ಕಾಲಘಟ್ಟದಲ್ಲಿ ನಮ್ಮ ಹಿರಿಯ ಮನೆಯಲ್ಲಿ ಆಸ್ತಿ ಪಾಲು ಆಯಿತು ಅಲ್ಲಿದ್ದದ್ದು ಎಲ್ಲವೂ ನನ್ನ ತಂದೆಯವರ ಸ್ವಾರ್ಜಿತ ಆಸ್ತಿಯೇ ಆಗಿತ್ತು.ಅವರ ತಂದೆ ಎಂದರೆ ನನ್ನ ಅಜ್ಜ ತೀರಿ ಹೋಗುವಾಗ ನನ್ನ ತಂದೆಗೆ ಹದಿನಾರು ವರ್ಷ ಇಬ್ಬರು ಅಕ್ಕಂದಿರು ಒಬ್ಬಳು ತಂಗಿ ಮೂರು ಜನ ತಮ್ಮಂದಿರು ಎಲ್ಲರೂ ಚಿಕ್ಕ ವಯಸಿನವರೇ
ತಂದೆಯ ಚಿಕ್ಕ ತಮ್ಮ ನಿಗೆ  ಆಗಿನ್ನೂ ಮೂರು ವರುಷ .ನನ್ನ ತಂದೆ ಪೌರೋಹಿತ್ಯ ಮಾಡಿ ಎಲ್ಲರನ್ನೂ ಸಾಕಿದರು.ತಂದೆಯ ತಂದೆಯವರಿಗೆ ಸಣ್ಣ ತೋಟವೂ ಇತ್ತು ಆದರೆ ಅದರಿಂದ ಬರುವ ಆದಾಯದಿಂದ ದೊಡ್ಡ ಕುಟುಂಬ ವನ್ನು ಪೊರೆಯಲು ಅಸಾಧ್ಯ ವಾಗಿತ್ತು .
ನಂತರ ತಂದೆ ದುಡಿದ ದುಡ್ಡಿನಲ್ಲಿ ಸ್ವಲ್ಪ ಜಾಗ ಖರೀದಿ ಮಾಡಿದ್ದರೂ ಅದನ್ನು ಅಜ್ಜಿಯ ಹೆಸರಿನಲ್ಲಿ ಮಾಡಿದ್ದರು .
ನನ್ನ ತಂದೆ ತೀರಾ ಸಾಧು ಸ್ವಭಾವದ ಮುಗ್ದರು.
ಹಾಗಾಗಿ ಆಸ್ತಿ ಪಾಲಾಗಿ ಹಿರಿ ಮನೆ ಬಿಟ್ಟು ಹೊಸಮನೆ ಕಟ್ಟಲು ಅವರ ಕೈಯಲ್ಲಿ ಕವಡೆ ಕಾಸಿನ ದುಡ್ಡೂ ಇರಲಿಲ್ಲ. ಸ್ವಲ್ಪ ಸಹಾಯ ಅಮ್ಮನ ತಂದೆ ಅಜ್ಜನಿಂದ ಸಿಕ್ಕಿತು ಮತ್ತೆ ಸಾಲ ಮಾಡಿ ಹೇಗೋ ಒಂದು ಮನೆ ಕಟ್ಟಿ ಒಕ್ಕಲಾದರು.
ಹಾಗಾಗಲಿಲ್ಲ.
ಮೊದಲು ಹಿರಿಯ ಮನೆಯಲ್ಲಿ ಸಾಕಷ್ಟು ಇದ್ದರೂ ಕೃತಕ ಬಡತನವಿತ್ತು ಹೊಸಮನೆಗೆ ಬಂದಾಗ ನಿಜವಾದ ಬಡತನ ಉಂಟಾಯಿತು.ಜೋರಾಗಿ ಸುರಿವ ಮಳೆಗಾಲದಲ್ಲಿ ಮಮೆ ಕಟ್ಟುವಾಗಲೂ ಮುಗ್ದ ಸ್ವಭಾವದ ನನ್ನ ತಂದೆ ಸಾಕಷ್ಟು ಮೋಸ ಹೋಗಿದ್ದರು .ಅಲ್ಲದೆ ಮನೆ ಕಟ್ಟಲು ಮಾಡಿದ ಸಾಲದ ಹೊರೆ ದೊಡ್ಡದಿತ್ತು ಜೊತೆಗೆ ನಾವು ಐದು ಜನ ಮಕ್ಕಳ ವಿದ್ಯಾಭ್ಯಾಸ, ಪಾಲನೆಯ ಖರ್ಚು ಇತ್ತು

ಈ ಮನೆಯ ಹಿಂಭಾಗದಲ್ಲಿ ದೊಡ್ಡ ಬರೆ/ ಗುಡ್ಡ ಇತ್ತು ಇದು ಜರಿದು ಬಿದ್ದು ಇವರಾರು ಉಳಿಯಲಾರೆಂದು ಹೆಚ್ಚಿನ ವರು ಭಾವಿಸಿದ್ದರು .ಜೊತೆಗೆ ಅಪ್ಪನ ಮುಗ್ಧ ಸಾಧು ಗುಣದಿಂದಾಗಿ ಇವರು ಎಲ್ಲವನ್ನೂ ಕಳೆದು ಕೊಂಡ ದೇಶಾಂತರ ಹೋಗಬಹುದು ಎಂದು ಜನರು ಭಾವಿಸಿದ್ದರು

ಆದರೆ ಹಾಗಾಗಲಿಲ್ಲ. ಅನೇಕ ಸಮಸ್ಯೆ ಗಳ ಹಾಗೂ

ಬಡತನದ ನಡುವೆಯೂ ತಲೆಯೆತ್ತಿ ನಿಲ್ಲುವ ಕೆಚ್ಚು ನನ್ನ ಅಮ್ಮನಿಗಿತ್ತು .
ನನ್ನ ಅಮ್ಮ ತುಂಬಾ ಸುಂದರಿಯಾಗಿದ್ದರು .ನಾವು ಹಿರಿ ಮನೆಯಿಂದ ಪಾಲಾಗಿ ಬಂದು ಕಟ್ಟಿ ದ ಮನೆಗೆ ಬಾಗಿಲು ಇರಲಿಲ್ಲ ಬಾಗಿಲು ಮಾಡಿಸಲು ದುಡ್ಡು ಕೊರತೆ ಯಾಗಿತ್ತು.
ನಾನು ಆಗ ಅಜ್ಜನ ಮನೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದೆ .ಅಕ್ಕ ಆರನೇ ಅಥವಾ ಏಳನೆಯ ತರಗತಿಯಲ್ಲಿ ಓದುತ್ತಿದ್ದಿರಬೇಕು.ಅಕ್ಕ ಕೂಡ ತುಂಬಾ ಚೆನ್ನಾಗಿ ಇದ್ದಳು ಜೊತೆಗೆ  ವಯಸ್ಸಿಗೆ ಮೀರಿದ ಬೆಳವಣಿಗೆ ಇದ್ದು ಅವಳು ದೊಡ್ಡವಳಂತೆ ಕಾಣಿಸುತ್ತಾ ಇದ್ದಳು.
ತಂದೆ ಪುರೋಹಿತ ರಾಗಿದ್ದು ಒಂದು ಮನೆಯಲ್ಲಿ ಪೂಜೆ ಪುರಸ್ಕಾರ ಮುಗಿಸಿ ಅಲ್ಲಿಂದಲೇ ಇನ್ನೊಂದು ಕಡೆ ಹೋಗುತ್ತಾ ಇದ್ದರು .ವಾರಕ್ಕೊಮ್ಮೆ ಅಥವಾ ಹತ್ತು ದಿನಗಳಿಗೊಮ್ಮೆ ಮನೆಗೆ ಬರುತ್ತಾ ಇದ್ದರು ಆಗ ಈಗಿನಂತೆ ಬಸ್ ಸಂಚಾರ ಎಲ್ಲೆಡೆಗೆ ಇರಲಿಲ್ಲ ಹಾಗಾಗಿಯೇ ಎಲ್ಲೆಡೆಗೆ ಕಾಲ್ನಡಿಗೆಯಿಂದಲೇ ಹೋಗಬೇಕಾಗಿತ್ತು ಅಲ್ಲದೆ ದುರ್ಗಾ ಪೂಜೆ ತ್ರಿಕಾಲ ಪೂಜೆ ಆಶ್ಲೇಷಾ ಬಲಿ   ಮೊದಲಾದವು ರಾತ್ರಿಯೇ ಆಗುವ ಪೂಜೆಗಳು
ಇಂತಹ ಸಂದರ್ಭದಲ್ಲಿ ತನ್ನ ಐದು ಜನ ಮಕ್ಕಳನ್ನು ರಕ್ಷಿಸುವ ಜವಾಬ್ದಾರಿ ಯೂ ಅಮ್ಮನಿಗೇ ಇತ್ತು ಜೊತೆಗೆ ಅಪ್ರತಿಮ ಸುಂದರಿಯಾದ ಅಮ್ಮನಿಗೆ ಕಾಮುಕರ ಕಾಟವೂ ಅಷ್ಟೇ ಇತ್ತು.ಮಣ್ಣಿನ ನೀರೊಸರುವ ಬಾಗಿಲಿಲ್ಲದ ಮನೆಯಲ್ಲಿ ಎದೆಯೆತ್ತರಕ್ಕೆ ಬೆಳೆದು ನಿಂತ ಅಕ್ಕ ಚಿಕ್ಕವರಾದ ನಾನು‌ಮತ್ತು ತಮ್ಮಂದಿರ ಜೊತೆ ಚಾಪೆ ಹಾಸಿ ಹಳೆಯ ಹರಿದ ಸೀರೆಯನ್ನು ಹಾಸಿ ಹೊದ್ದು ಮಲಗುವ ಪರಿಸ್ಥಿತಿ. ಬಾಗಿಲಿಲ್ಲದ ಮನೆಯಲ್ಲಿ ಭದ್ರತೆಯೇ ಒಂದು ಪ್ರಮುಖ ಸಮಸ್ಯೆ ಆದರೆ ನನ್ನಮ್ಮ ಇದಕೆಲ್ಲ ಎದೆಗುಂದಲಿಲ್ಲ ಸದಾ ದೊಡ್ಡ ಕತ್ತಿಯೊಂದನ್ನು ತಲೆ ಅಡಿಯಲ್ಲಿ ಇಟ್ಟುಕೊಂಡು ಅಕ್ಕನನ್ನು ನಮ್ಮನ್ನು ಬಗ್ಗಲಿನಲ್ಲಿ ಮಲಗಿಸಿ ಕೊಂಡ ರಕ್ಷಣೆ ನೀಡಿದ್ದಳು .ನಮಗೆ ಆಸ್ತಿ ಪಾಲಾದಾಗ ಸ್ವಲ್ಪ ಗದ್ದೆ ತೋಟ ನಮ್ಮ ಪಾಲಿಗೆ ಬಂದಿತ್ತು.ಈ ಗದ್ದೆ ತೋಟಕ್ಕೆ ಸಮೀಪದಲ್ಲಿ ಹರಿಯುವ ತೊರೆಯಿಂದ ಪಾಲಿನ ನೀರಿನ ವ್ಯವಸ್ಥೆ ಇತ್ತು ಇಲ್ಲೂ ಜನರು ನಮ್ಮ ತಂದೆಯ ಸಾಧು ಗುಣವನ್ನು ದುರುಪಯೋಗ ಮಾಡಿಕೊಂಡು ಸರಿಯಾಗಿ ನೀರು ಬಿಡುತ್ತಿರಲಿಲ್ಲ
ಇಂತಹ ಸಂದರ್ಭದಲ್ಲಿ ಅಮ್ಮನಿಗೆ ಬೇರೆಯವರೊಂದಿಗೆ ಜಗಳಾಡುವುದು ಜಗಳಾಡಿ ನೀರು ಬಿಡಿಸಿಕೊಂಡು ಬರುವುದು ಅನಿವಾರ್ಯ ಆಗಿತ್ತು .ಗದ್ದೆಗೆ ನೀರು ಒಡ್ಡಿಸಿ ಬಂದರೆ ರಾತ್ರಿ ಹೊತ್ತಿನಲ್ಲಿ ಯಾರೋ ಹೋಗಿ ಅದನ್ನು ಕಟ್ಟಿ ಗದ್ದೆಗೆ ಬಾರದಂತೆ ಮಾಡುತ್ತಿದ್ದರು
ಹಾಗಾಗಿ ನಡು ರಾತ್ರಿ ಎದ್ದು ಟಾರ್ಚ್ ಹಿಡಿದುಕೊಂಡು ಹೋಗಿ ನೀರು ಗದ್ದೆಗೆ ಬರುತ್ತಿದೆಯಾ ಎಂದು ನೋಡಿ ಬರುತ್ತಿದ್ದರು ನನ್ನ ಅಮ್ಮ ಇಲ್ಲವಾದರೆ ನೀರಿಲ್ಲದೆ ಬೆಳೆ ಕರಡಿ ಹೋಗುತ್ತಾ ಇತ್ತು ಮೋಸ ವಂಚನೆ ಮಾಡ ಹೊರಟ ಅನೇಕ ರಲ್ಲಿ ಜಗಳಾಡಿ ನಮ್ಮನ್ನು ಪಾರು ಮಾಡುವ ಅನಿವಾರ್ಯ ಆಗಿತ್ತು.ಅಮ್ಮನ ಬದುಕಿಗಾಗಿ ಮಕ್ಕಳ ಭವಿಷ್ಯಕ್ಕಾಗಿ ಹೋರಾಡಿದ ಕಥೆ ಬರೆಯ ಹೊರಟರೆ ದೊಡ್ಡ ಕಾದಂಬರಿ ಆಗಿ ಬಿಡಬಹುದು
ಇದರಲ್ಲಿ ಒಂದು ಮುಖ್ಯ ವಾದ್ದು ಅಮ್ಮ ತನ್ನ ತಂದೆಯವರ ಎಂದರೆ ನನ್ನ ಅಜ್ಜನ  ಆಸ್ತಿ ಪಾಲಿಗಾಗಿ ಕೋರ್ಟ್ ಗೆ ಹೋಗಬೇಕಾಯಿತು .ನಾನು ಮೊದಲೇ ಹೇಳಿದಂತೆ ಇಬ್ಬರು ಹೆಣ್ಣು ಮಕ್ಕಳು ಮಾತ್ರ .ಅಜ್ಜನ ಜೊತೆಯಲ್ಲಿ ದೊಡ್ಡಮ್ಮ ನ ಕುಟುಂಬ ಇತ್ತು ,ದೊಡ್ಡಮ್ಮನ ಮನೆ ಆಸ್ತಿ ಮಾರಾಟ ಮಾಡಿದಾಗ ಸ್ವಲ್ಪ ದುಡ್ಡು ನನ್ನ ಅಮ್ಮನಿಗೆ ಕೊಟ್ಟಿದ್ದರು ಆದರೆ ಅಜ್ಜನ ಪಾಲು ಪಂಚಾಯತಿ ಪ್ರಕಾರ ಅಮ್ಮನಿಗೆ ಮತ್ತೆ ಯ
 ದುಡ್ಡು ಬರಬೆಕಿತ್ತು .ಅಜ್ಹನ ಮರಣಾನಂತರ ಇದು ವಿವಾದಕ್ಕೆ ಎಡೆಯಾಗಿ ಆಸ್ತಿ ಪಾಲಿಗಾಗಿ ಅಮ್ಮ ಕೋರ್ಟ್ ಗೆ ಹೋದರು ಅಲ್ಲಿ ಗೆದ್ದರೂ ಕೂಡ ಆದರೂ ಕೋರ್ಟ್ ನಲ್ಲಿ ಗೆಲುವು ಬರುವ ಕಾಲಕ್ಕೆ ಅಮ್ಮನಿಗೆ  ನಾವು ಮಕ್ಕಳು ಎಲ್ಲರೂ ಒಂದು ಹಂತಕ್ಕೆ ತಲುಪಿದ್ದೆವು  ಅಣ್ಣ ಮತ್ತು ಒಬ್ಬ ತಮ್ಮ ಅಮೇರಿಕಾದಲ್ಲಿ ಕೆಲಸ ಮಾಡುತ್ತಾ ಇದ್ದರು ಊರಿನಲ್ಲಿ ಬೇರೆ ಆಸ್ತಿ ಖರೀದಿಸಿದ್ದರು ಈಗ ಅಜ್ಜನ ಆಸ್ತಿ ಯ ಅಗತ್ಯ ನಮಗಾರಿಗೂ ಇರಲಿಲ್ಲ ಹಾಗಾಗಿ ಕೋರ್ಟ್ ನಲ್ಲಿ ಗೆದ್ದರೂ ಕೂಡ ನನ್ನ ಅಮ್ಮ ಗೆದ್ದ ಭೂಮಿಯನ್ನು ಪೂರ್ತಿಯಾಗಿ ತನ್ನ ಅಕ್ಕನಿಗೆ ಎಂದರೆ ನನ್ನ ದೊಡ್ಡಮ್ಮನಿಗೆ ಬಿಟ್ಟು ಕೊಟ್ಟು ಉದಾರತೆ ಮೆರೆದರು.ಇಂತಹದ್ದು ಅನೇಕ ಇವೆ. ಅದಿರಲಿ

ಅಮ್ಮ ಗದ್ದೆ ತೋಟಕ್ಕೆ ಹೋಗುವಾಗ ಮಾತ್ರವಲ್ಲ ಮನೆ ಅಂಗಳಕೆ ಇಳಿಯುವಾಗ ಕೂಡ ಕೈಯಲ್ಲಿ ಒಂದು ಕತ್ತಿಯನ್ನು ಹಿಡಿದುಕೊಂಡು ಇರುತ್ತಿದ್ದರು .ನನ್ನ ಅಕ್ಕ ಹಾಗೂ ನನಗೆ  ಗದ್ದೆ ತೋಟಕ್ಕೆ ಹೋಗುವಾಗಲೂ ಒಂದು ಕತ್ತಿ ಹಿಡಿದುಕೊಂಡು ಹೋಗಿ ಎಂದು ಸದಾ ಹೇಳುತ್ತಿದ್ದರು.ಆಗ ಅದು ಯಾಕೆಂದು ಅರ್ಥ ಮಾಡಿಕೊಳ್ಳುವ ವಯಸ್ಸು ನನ್ನದಲ್ಲ ಆದರೆ ಈಗ ಅದು ನಮ್ಮ ಭದ್ರತೆ ಗಾಗಿಯೇ ಅಮ್ಮ ಹಾಗೆ ಹೇಳುತ್ತಿದ್ದರು ಎಂದು ಅರ್ಥವಾಗಿದೆ.
ಗದ್ದೆಯಲ್ಲಿ ಭತ್ತ ಬೆಳೆಯುತ್ತಾ ಇದ್ದೆವು ಸಾಧ್ಯವಾದಷ್ಟು ಕೆಲಸವನ್ನು ಅಮ್ಮನೇ ಮಾಡುತ್ತಿದ್ದರು.ಯಾಕೆಂದರೆ ಕೆಲಸದವರಿಗೆ ಕೊಡಲು ದುಡ್ಡಿಲ್ಲ ಜೊತೆಗೆ ಮನೆ ಕಟ್ಟಲು ಮಾಡಿದ ಸಾಲ ಕಟ್ಟಬೇಕಾಗಿತ್ತು.ತಂದೆಯ ಪೌರೋಹಿತ್ಯ ಹಾಗೂ ಗದ್ದೆ ತೋಟದಿಂದ ಸಿಕ್ಕ ತುಸು ಆದಾಯದಲ್ಲಿ ಒಂದೊಂದು ಪೈಸೆಯನ್ನೂ ಜೋಡಿಸಿ ಹೇಗೋ ಮನೆ ಕಟ್ಟಲು ಮಾಡಿದ ಸಾಲವನ್ನು ತೀರಿಸಿ ಬಿಟ್ಟರು.
ಅಷ್ಟರಲ್ಲಿ ಅಕ್ಕ ಬೆಳೆದು ನಿಂತಿದ್ದಳು .ಆಗ ನಮ್ಮಲ್ಲಿ ಇನ್ನೂ ವರದಕ್ಷಿಣೆಯ ಅನಿಷ್ಟ ಪದ್ದತಿ ಇತ್ತು .ಅಕ್ಕ ತುಂಬಾ ಚಂದ ಇದ್ದರೂ ಅವಳ ಮದುವೆ ಬಗ್ಗೆ ಆತಂಕ .ಯಾರ್ಯಾರೋ ಅವಲಕ್ಕಿ ಜಗಿಯಲು ಹಲ್ಲಿಲ್ಲದ ವರನನ್ನು ಕರೆತರುವುದು .ಅಕ್ಕನಿಗೆ ಸೀರೆ ಉಡಿಸಿ ಕ್ಷೀರ ಮಾಡಿ ಬಡಿಸುವುದು ಇದು ಅನೇಕ ಬಾರಿ ನಡೆಯಿತು. ಅಕ್ಕ ಮನೆಕೆಲಸ ಸೇರಿದಂತೆ ಎಲ್ಲಾ ವಿಚಾರಗಳಲ್ಲಿ ತುಂಬಾ ಜಾಣೆಯಾಗಿದ್ದರೂ ಹೊಟ್ಟೆ ಕಿಚ್ಚಿನ ಕೆಲವರು ಅವಳಿಗೆ ಯಾವ ಕೆಲಸವೂ ತಿಳಿದಿಲ್ಲ ಎಂದು ಅಪಪ್ರಚಾರ ಬೇರೆ ಮಾಡಿದ್ದರು.ಕೊನೆಗೂ ಒಳ್ಳೆಯ ಹುಡುಗ ಸಿಕ್ಕಿ ಅಕ್ಕನ ಮದುವೆಯಾಯಿತು. ತನಗೆ ತನ್ನ ತಂದೆ ಎಂದರೆ ಅಜ್ಜ ಕೊಟ್ಟ ಚಿನ್ನದ ಆಭರಣಗಳನ್ನು ಅಮ್ಮ ಅಕ್ಕನಿಗೆ ಕೊಟ್ಟು ಯಾವುದೇ ಕೊರತೆಯಾಗದಂತೆ ನೋಡಿಕೊಂಡರು.
ಮುಂದೆ ನಮ್ಮೆಲ್ಲರ ವಿದ್ಯಾಭ್ಯಾಸ ದ ಖರ್ಚು ನನ್ನ ಮದುವೆ ಖರ್ಚು ಎಲ್ಲವನ್ನೂ ಹೇಗೋ ಚಾಣಾಕ್ಷತನದಿಂದ ನಿಭಾಯಿಸಿದರು.ನನ್ನ ಮದುವೆ ಕಾಲಕ್ಕಾಗುವಾಗ ನಮ್ಮ ಹವ್ಯಕರಲ್ಲಿ ವರ ದಕ್ಷಿಣೆ ಪದ್ದತಿ ಹೆಚ್ಚು
ಕಡಿಮೆ ಇಲ್ಲವಾಗಿತ್ತು ಈಗ ಅಮ್ಮನ ಮಕ್ಕಳು ನಾವೆಲ್ಲರೂ ತಲೆಯೆತ್ತಿ  ಸ್ವಾಭಿಮಾನ ದಿಂದ ನಡೆಯುವಂತೆ ಮಾಡಿದವರು ನನ್ನಮ್ಮ .ಈಗ ನನ್ನ ಅಣ್ಣ ಕೃಷ್ಣ ಭಟ್ ವಾರಣಾಸಿ  ಮತ್ತು ಒಬ್ಬ ತಮ್ಮ ಈಶ್ವರ ಭಟ್ ವಾರಣಾಸಿ ಸಾಫ್ಟ್ವೇರ್ ಕಂಪೆನಿಗಳಲ್ಲಿ ಕೆಲಸ ಮಾಡುತ್ತಾ ಅಮೇರಿಕಾದಲ್ಲಿ ಇದ್ದಾರೆ .ಅಕ್ಕನ ಮಗ ವಿಜ್ಞಾನಿಯಾಗಿ ಹಾರ್ವರ್ಡ್ ಯುನಿವರ್ಸಿಟಿ ಯಲ್ಲಿ ಸಂಶೋಧನೆ ಮಾಡುತ್ತಾ ಇದ್ದಾನೆ . ಅಕ್ಕನ ಸೊಸೆ ವೈದ್ಯೆಯಾಗಿದ್ದು ಅಲ್ಲಿ ಕೆಲಸ ಮಾಡುತ್ತಿದ್ದಾರೆ ಮಗಳು ಅಳಿಯನೂಅಮೇರಿಕಾದಲ್ಲಿ ಇದ್ದಾರೆ
 ನನ್ನ ಅಣ್ಣ ತಮ್ಮಂದಿರು ಅಮ್ಮನಿಗೆ ಬೇಕು ಬೇಕಾದುದನ್ನು ಎಲ್ಲವನ್ನೂ ಮಾಡಿ‌ಕೊಟ್ಟಿದ್ದಾರೆ.ಎಲ್ಲ ಸೌಲಭ್ಯಗಳನ್ನು ಮಾಡಿ ಕೊಟ್ಟಿದ್ದಾರೆ .ಹಿಂದೆ ಅಮ್ಮನನ್ನು ಜೋರು ಎಂದು ದೂಷಿಸಿದವರೇ ಮೆಚ್ಚುಗೆ ಮಾತಾಡುತ್ತಿದ್ದಾರೆ.ಕಾಲೆಳೆದವರ ಅವಮಾನ ಮಾಡಿದವರ ಎದುರು ಇಂದು ಹೆಮ್ಮೆಯಿಂದ ನಾವೆಲ್ಲರೂ   ಎದೆಯುಬ್ಬಿಸಿ ನಡೆತಯುವಂತೆ ಮಾಡಿದ್ದಾರೆ
ನನ್ನ ಅಮ್ಮ .ನನ್ನ ಅಮ್ಮ ಸದಾ ಆಶಾವಾದಿ ಯಾವುದೇ ಸಮಸ್ಯೆ ಬಂದರೂ ಕಂಗಾಲು ಆಗುತ್ತಾ ಇರಲಿಲ್ಲ ಬದಲಿಗೆ ಅದಕ್ಕೆ ಪರಿಹಾರೋಪಾಯಗಳನ್ನು ಕಂಡು ಹಿಡಿಯುತ್ತಾ ಇದ್ದರು
ಈಗ ನಮ್ಮ ತಂದೆಯವರು ತೀರಿ ಹೋಗಿದ್ದಾರೆ ಎಂಬ ನೋವು ಬಿಟ್ಟರೆ ಅಮ್ಮನಿಗೆ ಬೇರೆ ಯಾವುದೇ ರೀತಿಯ ಕೊರಗಿಲ್ಲ .ತಂದೆಯವರು ತೀರಿ ಹೋದ ನೋವಿದ್ದರೂ ಅಮ್ಮ  ಹಣೆಗೆ ಕೆಂಪು ಬೊಟ್ಟು ಇಟ್ಟು, ಮುಡಿಗೆ ಹೂ ಮುಡಿದು ಎಲ್ಲರಂತೆ ಇದ್ದಾರೆ.ಯಾವುದೇ ಗೊಡ್ಡು ಸಂಪ್ರದಾಯ ವನ್ನು ಅನುಸರಿಸದೆ ಮಹಿಳೆಯರಿಗೆ ಮಾದರಿಯಾಗಿದ್ದಾರೆ.
ನನ್ನ ಅಮ್ಮ ಉದಾರಿ ಕೂಡ .ಅನೇಕರಿಗೆ ಕಲಿಯಲು, ಚಿಕಿತ್ಸೆ ಗೆ ಸಹಾಯ ಮಾಡಿದ್ದಾರೆ.ಕೇರಳದಲ್ಲಿ ಎಲ್ಲ ಕೃಷಿಕರಿಗೆ ಅರುವತ್ತು ವರ್ಷ ದ ನಂತರ ಪಿಂಚಣಿ ಕೊಡುತ್ತಾರೆ .ಹೀಗೆ ಬಂದ ದುಡ್ಡನ್ನೂ ಅಮ್ಮ ಅಗತ್ಯ ಇರುವವರಿಗೆ ನೀಡಿದ್ದಾರೆ .ಮನೆ ಕೆಲಸಕ್ಕೆ ಬರುವವರಿಗೂ ಅವರ ಮಕ್ಕಳ ಮದುವೆ ,ಮನೆ ಕಟ್ಟುವ ಸಮಯದಲ್ಲಿ, ಅವರ ಮಕ್ಕಳ ವಿದ್ಯಾಭ್ಯಾಸ ಕ್ಕೆ ಹೀಗೆ ನಾನಾ ಸಂದರ್ಭದಲ್ಲಿ ಧನ ಸಹಾಯ ಮಾಡಿದ್ದಾರೆ
ನನ್ನ ಗಿಳಿ ಬಾಗಿಲು ಬ್ಲಾಗ್ ನಲ್ಲಿ ನೀಡಿರುವ ಹವ್ಯಕ ನುಡಿಗಟ್ಟು ಗಳ ಮಾಹಿತಿಯನ್ನು ನನಗೆ ನೀಡಿದವರು ನನ್ನ ಅಮ್ಮ
ಕಳೆದ ಜುಲೈನಲ್ಲಿ ನಾನು ಆತ್ಮ ಹತ್ಯೆಗೆ ಯತ್ನ ಮಾಡಿದ ಸಂದರ್ಭದಲ್ಲಿ ಮಾನಸಿಕವಾಗಿ ಕುಗ್ಗಿ ಹೋದಾಗ ಧೈರ್ಯ ತುಂಬಿದವರೂ ನನ್ನ ಅಮ್ಮ ಆ ಸಮಯದಲ್ಲಿ ತುಳು ಸಮ್ಮೇಳನ ಆಯೋಜನೆಯಾಗಿದ್ದು ನನ್ನನ್ನು ಸನ್ಮಾನ ಮಾಡುತ್ತೇವೆ ಬನ್ನಿ ಎಂದು ಕರೆದಿದ್ದರು .ಆದರೆ ಮಾನಸಿಕವಾಗಿ ಕುಗ್ಗಿ ಹೋಗಿದ್ದ ನನಗೆ ಅದನ್ನು ಸ್ವೀಕರಿಸುವ ಮನಸ್ಸು ಇರಲಿಲ್ಲ .ಎಲ್ಲಕಿಂತ ಹೆಚ್ಚು ಜನರನ್ನು ಹೇಗೆ ಎದುರಿಸಲಿ ಎಂಬುದೇ ನನ್ನ ಸಮಸ್ಯೆ ಆಗಿತ್ತು. ಭ್ರಷ್ಟಾಚಾರ ,ಕೊಲೆ ಮಾಡಿದವರೇ ತಲೆಯೆತ್ತಿ ಓಡಾಡುತ್ತಾರೆ ಹಾಗಿರುವಗ ನೀನು ಯಾಕೆ ಅಳುಕಬೇಕು ಇಷ್ಟಕ್ಕೂ ನೀನು ನಿನಗೆ ಹಾನಿ ಮಾಡಿಕೊಳ್ಳಲು ಹೊರಟದ್ದೇ  ಹೊರತು ಬೇರೆಯವರನ್ನು ಕೊಲ್ಲಲು ಹೊರಟಿಲ್ಲ .ತುಳು ಸಮ್ಮೇಳನಕ್ಕೆ ಹೋಗಿ ಅಲ್ಲಿ ಅವರಿಂದ ಅಭಿನಂದನೆ ಸ್ವೀಕರಿಸು.ನಾನೂ ಬರುತ್ತೇನೆ ಯಾರು ಏನು ಬೇಕಾದರೂ ಹೇಳಲಿ ತಲೆಕೆಡಿಸಿಕೊಳ್ಳಬೇಡ ಎಂದು ಧೈರ್ಯ ತುಂಬಿ ನನ್ನೊಂದಿಗೆ ಮೂಲ್ಕಿಯಲ್ಲಿ ನಡೆದ ತುಳು ಸಮ್ಮೇಳನ ಕ್ಕೆ ನನ್ನ ಜೊತೆ ಬಂದಿದ್ದಾರೆ
ಎಲ್ಲಾ ಅಮ್ಮಂದಿರೂ ತಮ್ಮ ಮಕ್ಕಳಿಗಾಗಿ ತುಂಬಾ ತ್ಯಾಗ ಮಾಡುತ್ತಾರೆ ನನ್ನ ಅಮ್ಮನೂ ಅದಕೆ ಹೊರತಲ್ಲ ಜೊತೆಗೆ ಸ್ವಾಭಿಮಾನ ದಿಂದ ಬದುಕುವುದನ್ನೂ ಆಶಾವಾದವನ್ನೂ ,ಧನಾತ್ಮಕ ಚಿಂತನೆಗಳನ್ನೂನನ್ನ ಅಮ್ಮ ನಮಗೆ   ಹೇಳಿಕೊಟ್ಟಿದ್ದಾರೆ
ಇನ್ನೂ ಸಾವಿರ ಜನ್ಮ ಇದ್ದರೂ ನಾನು ಈ ಅಮ್ಮನ ಮಗಳಾಗಿಯೇ ಹುಟ್ಟಲು ಬಯಸಿದ್ದೇನೆ
ತಕ್ಕ ಮಟ್ಟಿಗೆ ಆರೋಗ್ಯ ವಾಗಿಯೇ ಇದ್ದ ನನ್ನ ಅಮ್ಮನಿಗೆ
ವಾರದ ಹಿಂದೆ ಎದೆನೋವು ಕಾಣಿಸಿಕೊಂಡಿದ್ದು ಲಘು ಹೃದಯಾಘಾತಕ್ಕೆ ಒಳಗಾಗಿದ್ದು ಆಂಜಿಯೋಪ್ಲ್ಯಾಸ್ಟಿ ಮೂಲಕ ಮೂರು ಬ್ಲಾಕ್ ಗಳನ್ನು ಸರಿ ಪಡಿಸಿ ಮೂರು ಸ್ಟಂಟ್ಗಳನ್ನು ಅಳವಡಿಸಿದ್ದಾರೆ .ಇಲ್ಲೂ ಯಮನನ್ನು ಹಿಮ್ಮೆಟ್ಟಿಸಿ ನಮಗಾಗಿ ಬದುಕಿ ಉಳಿದಿದ್ದಾಳೆ ನನ್ನಮ್ಮ

ದೊಡ್ಡವರ ಹಾದಿ : ಬ್ಲಾಗ್ ಕನಸಿಗೆ ಇಂಬು ಕೊಟ್ಟ ಪ್ರೊ. ಮುರಳೀಧರ ಉಪಾಧ್ಯ
ಬ್ಲಾಗ್ ಬರೆಯುವ ನನ್ನ ಕನಸು(MY DREAM OF WRITING BLOG) ಮುರಳೀಧರ ಉಪಾಧ್ಯರಿಗೆ ನಾನು ಸದಾ ಋಣಿ
                          ಬ್ಲಾಗ್  ಬರೆಯುವ ನನ್ನ ಕನಸು
ನನ್ನ ಮಗ ಅರವಿಂದ ಬಹಳ ವಾಚಾಳಿ . ವಯೋ ಸಹಜವಾಗಿ ಎಲ್ಲ ವಿಷಯಗಳ ಬಗ್ಗೆ ವಿಪರೀತ ಕುತೂಹಲ . ಕಂಪ್ಯೂಟರ್  ಬಗ್ಗೆ ಇಂಟರ್ನೆಟ್ ಬಗ್ಗೆಯೂ ಯಾವಾಗಲೂ ಹರಟುತ್ತಾ ಇರುತ್ತಾನೆ. ನನಗೋ  ಕಂಪ್ಯೂಟರ್ ,ಇಂಟರ್ನೆಟ್ ಕುರಿತು  ಒಂದಿನಿತೂ ಗೊತ್ತಿರಲಿಲ್ಲ . ಆದರೆ ಬ್ಲಾಗ್,ಫೇಸ್ ಬುಕ್ ,ಟ್ವಿಟ್ಟರ್ ,ಮೊದಲಾದವುಗಳ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೆ. ಒಮ್ಮೊಮ್ಮೆ  ನನಗು ಬ್ಲಾಗ್ ಬರೆಯ ಬೇಕು ಅನಿಸುತ್ತಿತ್ತು . ಆ ಅನಿಸಿಕೆ ಹೆಚ್ಚು ದೂರ ಸಾಗುತ್ತಿರಲಿಲ್ಲ .ಯಾಕೆಂದರೆ  ನನ್ನ ಕಂಪ್ಯೂಟರ್ ಜ್ಞಾನ ದೊಡ್ಡ ಸೊನ್ನೆ ಜ಼ೊತೆಗೆ ಇಂಗ್ಲಿಷ್ ಭಾಷೆ ಮೇಲೂ ತೀರ ಎನೂ  ದೊಡ್ಡ ಹಿಡಿತ ಇರಲಿಲ್ಲ. ಬ್ಲಾಗ್  ಫೇಸ್ ಬುಕ್ ಗಳಲ್ಲಿ ಕನ್ನಡ ಬಳಕೆ ಇದೆ ಅಂತ ಗೊತ್ತಿರಲಿಲ್ಲ .
ಕಳೆದ ವರ್ಷ ಸುಮಾರು ಈ ಸಮಯದಲ್ಲಿ ಮಗ ಹಠ ಹಿಡಿದು ನನ್ನ ಮೊಬೈಲ್ ಗೆ ಇಂಟರ್ನೆಟ್  ಸಂಪರ್ಕ ಹಾಕಿಸಿದ . ಯಾವಾಗಲು ಸಂಜೆ ಶಾಲೆಯಿಂದ ಬಂಧ ತಕ್ಷಣ ನನ್ನ ಮೊಬೈಲ್ ತಗೊಂಡು ಏನೋ ಡಬ್ಲ್ಯೂ ಡಬ್ಲ್ಯೂ ಯಫ಼್. ,ಜೋನ್ಸೀನ  ಕಾಳಿ  , ಕ್ರಿಕೆಟ್ ಅದು ಇದು ನೋಡಿ ನಂಗೆ ಹೇಳುತ್ತಿದ್ದ .ನಂಗೆ ಆಸಕ್ತಿ ಇಲ್ಲದಿದ್ದರೂ ಅವನ ಉತ್ಸಾಹಕ್ಕೆ ಭಂಗ ಬರಬಾರದಂತೆ  ಹೂಂಗುಟ್ಟುತಿದ್ದೆ. ಒಂದಿವಸ ನನ್ನ ಹತ್ರ ಅಮ್ಮ ನೋಡು ಇಂಟರ್ನೆಟ್ ನಲ್ಲಿ ಇಲ್ಲದ  ವಿಚಾರವೇ ಇಲ್ಲ ಎಲ್ಲವು ಇದರಲ್ಲಿ ಸಿಗುತ್ತೆ ಅಂತ ಹೇಳಿದ. ಯಾವಾಗಲು ಹೂಂಗುತ್ತಿ ಸುಮ್ಮನಾಗುತ್ತಿದ್ದ ನಾನು ಅವನನ್ನು ಸುಮ್ಮನೆ  ಕಿಚಾಯಿಸುವುದಕ್ಕಾಗಿ  "ನಾನು ಸಿಗುತ್ತೇನ ನಿನ್ನ   ಇಂಟರ್ನೆಟ್ ನಲ್ಲಿ ?"(ಸಿಗಲು ಅಸಾಧ್ಯವೆಂದು ತಿಳಿದಿದ್ದೂ ) ಕೇಳಿದೆ .ಒನ್ದು ಕ್ಷಣ ವಿಚಲಿತನಾದ ಅವನು  ನಾನು ನೋಡುತ್ತೇನೆ ಎಂದು ಹೇಳಿ ಮೊಬೈಲ್ ತಗೊಂಡು ಏನೋ ಗುರುಟಲು ಆರಂಬಿಸಿದ . ನಾನು ಏನೋ ಸಂಜೆ ತಿಂಡಿ ತಯಾರು ಮಾಡುತ್ತಿದ್ದೆ . ಅಡುಗೆ ಕೋಣೆಗೆ ಓಡಿ ಬಂದ  ಮಗ ಅರವಿಂದ "ಅಮ್ಮಾ ಅಮ್ಮ  ನೋಡು ಇಲ್ಲಿ ನೋಡು ನೀನು ಇದರಲ್ಲಿ ಇದ್ದೀಯ "ಎಂದು ಏನೋ ಸಾಧಿಸಿದ ಗೆಲುವಿನ ಧ್ವನಿಯಲ್ಲಿ ಹೇಳಿದ . ಹೌದು !! ಅವನು ಹೇಳಿದ್ದು ನಿಜ . ಡಾ . ಲಕ್ಷ್ಮಿ ಜಿ ಪ್ರಸಾದ್ ಎಂದು ಗೂಗಲ್ ಸರ್ಚ್ ಗೆ ಹಾಕಿದಾಗ ಅದರಲ್ಲ್ಲಿ ಅಜ್ಜಿ ಭೂತ ಮತ್ತು ಕೂಜಿಲು -ಡಾ . ಲಕ್ಷ್ಮಿ ಜಿ ಪ್ರಸಾದ್  ಎಂದಿತ್ತು .   ಉಡುಪಿ ಗೋವಿಂದ  ಪೈ ಸಂಶೋಧನಾ ಕೇಂದ್ರ ಪ್ರಕಟಿಸುವ "  ತುಳುವ  " ಪತ್ರಿಕೆಯಲ್ಲಿ ಪ್ರಕಟಗೊಂಡ ನನ್ನ  ಲೇಖನವನ್ನು ತಮ್ಮ ಬ್ಲಾಗ್ ನಲ್ಲಿ ಹಾಕಿ  ನನ್ನ ಲೇಖನ ವನ್ನು ಇಂಟರ್ನೆಟ್ ಮೂಲಕವೂ  ಸಿಗುವಂತೆ  ಮಾಡಿದ್ದರು ಹಿರಿಯ ವಿಮರ್ಶಕರಾದ ಎಂ ಜಿ ಎಂ  ಕಾಲೇಜ್ ಉಪನ್ಯಾಸಕರಾದ  ಸಹೃದಯಿ  ಪ್ರೊ। ಮುರಳೀಧರ ಉಪಾಧ್ಯರು
ಇಲ್ಲಿಂದ ನನ್ನ ಬ್ಲಾಗ್ ಬರೆಯುವ ಕನಸು ಗರಿ ಬಿಚ್ಚಿಕೊಂಡಿತು . ಮೊದಲಿಗೆ  ನುಡಿ ಹಾಗು ಬರಹದ ಮೂಲಕ   ಕನ್ನಡ ಬರೆಯುವುದು ಹೇಗೆ ಎಂದು ತಿಳಿದುಕೊಂಡೆ ಜ಼ೊತೆಗೆ ಮಗನ ಸಹಾಯದಿಂದ   ಮೊಬೈಲ್ ನಲ್ಲಿ  ಇಂಟರ್ನೆಟ್ ಮೂಲಕ ಬೇಕಾದ್ದನ್ನು ಹುಡುಕಲು  ಕಲಿತೆ. ಅದಕ್ಕೆ ಸರಿಯಾಗಿ ನನಗೆ ಬೆಂಗಳೂರಿಗೆ ನಿಯೋಜನೆ ಸಿಕ್ಕಿತು. ತುಂಬಾ ಸಮಯದಿಂದ ನನ್ನ ಪತಿ ಗೋವಿಂದ ಪ್ರಸಾದ್  ಮನೆಗೊಂದು  ಕಂಪ್ಯೂಟರ್ ತರುವ  ಎಂದು ಹೇಳುತ್ತಿದ್ದರು . ಬೇಡ ಎಂದು ನಾನು ಹೇಳುತ್ತಿದ್ದೆ . ಈಗ ನಾನಾಗಿಯೇ ಕಂಪ್ಯೂಟರ್ ತರುವ ಹೇಳಿದೆ . ನಾನು ಹೇಳಿದ ದಿವಸ ಸಂಜೆಯೇ ಮನೆಗೆ  ಲೆನೆವೋ ಕಂಪ್ಯೂಟರ್  ಅನ್ನು ತಂದೇ ಬಿಟ್ಟರು ನಾನೆಲ್ಲಿ ಇನ್ನು ಮನಸ್ಸು ಬದಲಾಯಿಸಿ ಬೇಡ ಅಂತ ಹೇಳಿ ಬಿಟ್ರೆ ಅಂತ !
ಸರಿ; ಅಂತು ಮೊನ್ನೆ ಜನವರಿ 2 4  ಕ್ಕೆ ಮನೆಗೆ ಕಂಪ್ಯೂಟರ್  ತಂದ ತಕ್ಷಣವೇ ಮಗನಲ್ಲಿ ನಂಗೆ ಬ್ಲಾಗ್ ಅಕೌಂಟ್  ತೆರೆದು ಕೊಡು ಎಂದು ಹೇಳಿದೆ . ತಂದೆ ಮಗ ಸೇರಿಕೊಂಡು ಏನೋ ಮಾಡಿಕೊಂಡು ಪೇಚಾಡಿ  ನನ್ನ ಹೆಸರಿನಲ್ಲಿ   ಬ್ಲಾಗ್ ತೆರೆದು ಕೊಟ್ಟರು . ಜೊತೆಗೆ ಕಂಪ್ಯೂಟರ್ ಆನ್  ಆಫ್  ಮಾಡುವುದನ್ನು ಗೂಗಲ್ ಸರ್ಚ್ ಮೂಲಕ ಬ್ಲಾಗ್ ನೋಡಲು  ಬ್ಲಾಗ್ ಗೆ ಪ್ರವೇಶಿಸಿ ಬರೆಯುವುದನ್ನು ಹೇಳಿಕೊಟ್ಟರು . ಮೊದಲಿಗೆ  ನನ್ನ ಕುರಿತಾದ ಸಂಕ್ಷಿಪ್ತ ಮಾಹಿತಿ ಹಾಕಿದೆ . ನಂತರ ನನ್ನಲ್ಲಿರುವ ಕೆಲವು ಅಪರೂಪದ ಭೂತಗಳ ಫೋಟೋ  ಹಾಕಿದೆ .ನೀರು ಇಂಗಿಸ ಬೇಕಾದ ಅನಿವಾರ್ಯತೆಯ ಕುರಿತು ನೆಲ ಜಲ ಎಂಬ ಶೀರ್ಷಿಕೆಯಡಿಯಲ್ಲಿ ಒಂದು ಲೇಖನ ಬರೆದೆ .ಸ್ತ್ರೀ  ಸಂವೇದನೆ ಕುರಿತು ಒಂದು ಲೇಖನ ಬರೆದು ಹಾಕಿದೆ . ಈ ನಡುವೆ ಉಡುಪಿ ಗೋವಿಂದ ಪೈ ಸಂಶೋಧನಾ ಕೇಂದ್ರದ ನಿರ್ದೆಶಕರಾದ  ಹೆರಂಜೆ  ಕೃಷ್ಣ ಭಟ್ಟರನ್ನು ಸಂಪರ್ಕಿಸಿ ಮುರಳಿಧರ ಉಪಾಧ್ಯರ ಸಂಪರ್ಕ ಸಂಖ್ಯೆಯನ್ನು ಪಡೆದು  ಅವರನ್ನು ಸಂಪರ್ಕಿಸಿ ಬ್ಲಾಗ್ ಬರೆಯುವ  ನನ್ನ ಆಸಕ್ತಿಯ ಬಗ್ಗೆ ತಿಳಿಸಿದೆ ಅವರು ತುಂಬು ಮನಸಿನಿಂದ ಸೂಕ್ತ ಸಲಹೆ ನೀಡಿದರು . ಅಂತು ಇಂತೂ ಒಂದೆರಡು ಲೇಖನ ಬರೆದು  ಬ್ಲಾಗ್ ಗೆ ಹಾಕಿದ ನಂತರ ಕಂಪ್ಯೂಟರ್  ಬಳಸುವ ನನ್ನ ಅನೇಕ ಸ್ನೇಹಿತರಿಗೆ ಹಾಗು ನನ್ನ ಹಿತೈಷಿಗಳಾದ ಕೆಲವು ವಿದ್ವಾಂಸರಿಗೆ ಮೊಬೈಲ್ ಮೂಲಕ  ನಾನು ಬ್ಲಾಗ್ ಬರೆಯುತ್ತಿರುವುದನ್ನು ತಿಳಿಸಿ ಓದಿ ನೋಡಿ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಸಲಹೆ ನೀಡುವಂತೆ ವಿನಂತಿ ಮಾಡಿದೆ . ಎಲ್ಲೆರಿಂದ ನನಗೆ ತುಂಬು ಮನದ ಪ್ರೋತ್ಸಾಹ ಸಿಕ್ಕಿತು. ಮುರಳಿಧರ ಉಪಾಧ್ಯರಿಗು ಮೆಸೇಜ್ ಮಾಡಿದ್ದೆ .ಅದೇ ದಿವಸ ನನ್ನ ಬ್ಲಾಗನ್ನು ನೋಡಿ ಅವರು "ನಾನು ನಿಮ್ಮ ಬ್ಲಾಗ್ ನ ಹೊರ ಆವರಣವನ್ನು  ಚಂದ ಮಾಡಿ ಕೊಡಬಲ್ಲೆ .ನಿಮ್ಮ  ಇಮೇಲ್ ಅಡ್ರೆಸ್ ಮತ್ತು ಪಾಸ್ ವರ್ಡ್ ಕೊಡಿ . ನಂತರ ಪಾಸ್  ವರ್ಡ್ ಬದಲಾಯಿಸಿ "ಎಂದು ಮೆಸೇಜ್  ಮಾಡಿದರು.ಇಂತಹ ಸಹೃದಯತೆಯನ್ನು  ಡಾ . ಅಮೃತ ಸೋಮೆಶ್ವರರನ್ನು ಬಿಟ್ಟು  ಬೇರೆ  ಯಾರಲ್ಲೂ  ಆ ತನಕ ಕಂಡಿರಲಿಲ್ಲ ನಾನು. !
{  ಸಂಶೋಧನೆ ,ಸಾಹಿತ್ಯ ಕ್ಷೇತ್ರದಲ್ಲಿ  ಇನ್ನೂ ಅಂಬೆಗಾಲು ಇಡುತ್ತಿರುವ ನನ್ನ ಕುರಿತು ನೀವು ತೋರಿದ  ಪ್ರೀತಿ ಅಭಿಮಾನ ನನ್ನನ್ನು ನಿಬ್ಬೆರಗಾಗಿಸಿ ಮೂಕ ವಿಸ್ಮಿತಳನ್ನಾಗಿಸಿದೆ   ಸರ್ (ಮುರಳೀಧರ  ಉಪಾಧ್ಯ )! ನೀವು ನಿಜವಾಗಿಯೂ ಗ್ರೇಟ್  ಸರ್ !)  ಅವರು ಹೇಳಿದಂತೆ  ಇಮೇಲ್ ಅಡ್ರೆಸ್  ಮತ್ತು ಪಾಸು ವರ್ಡ್  ಮೆಸೇಜ್ ಮಾಡಿ ಆವರ  ಮೊಬೈಲ್ ಗೆ ಕಳುಹಿಸಿದೆ  ಫೆಬ್ರುವರಿ ೨  ರಂದು  ಮಧ್ಯಾಹ್ನ .ಅದೇ ದಿವಸ  ಸಂಜೆ ಅವುರು ನನ್ನ ಬ್ಲಾಗ್ ಅನ್ನು ನೇರ್ಪು ಗೊಳಿಸಿ ಬೇರೆ ಬ್ಲಾಗ್ಗಳಿಗೆ ಲಿಂಕ್ ಕೊಟ್ಟು  ಫೀಡ್ ಜೆಟ್ ಅಳವಡಿಸಿ  ಒಂದು ಸುಂದರವಾದ  ಚೌಕಟ್ಟು ಅನ್ನು  ಹಾಕಿ ತುಂಬಾ ಆಕರ್ಷಕವಾಗಿಸಿ  ಕೊಟ್ಟು  ನನಗೆ  ಪಾಸ್ ವರ್ಡ್  ಚೇಂಜ್ ಮಾಡಿ ಎಂದು ಜತನದಿಂದ  ಮೆಸೇಜ್ ಮಾಡಿದರು . ನನ್ನ ಬ್ಲಾಗ್ ತೆರೆದು ನೋಡಿ ರೋಮಾಂಚನವಾಯಿತು ನನಗೆ  ಅಷ್ಟು  ಚಂದ  ಮಾಡಿ ಕೊಟ್ಟಿದ್ದರು ಅವರು .ಹೀಗೆ ನನ್ನ ಬ್ಲಾಗ್ ಬರೆಯುವ ಕನಸು ನನಸಾಗಿದೆ ಗೆಳೆಯರೆ !

  ನಾನು   ಬ್ಲಾಗ್ ತೆರದು  ನಾಲ್ಕು ವರ್ಷಗಳು ಕಳೆದವು .ಸುಮಾರು ಆರುನೂರು  ಬರಹಗಳನ್ನು  ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ . ಎರಡು ಲಕ್ಷದ ಎಂಟುಸಾವಿರ  ದೇಶ ವಿದೇಶಗಳ ಜನರು ನನ್ನ ಬ್ಲಾಗನ್ನು ಇಣುಕಿ  ನೋಡಿದ್ದಾರೆ  ಅನೇಕರು  ಪ್ರೋತ್ಸಾಹಿಸಿದ್ದಾರೆ .ಭೂತಗಳ ಅದ್ಭುತ ಜಗತ್ತು ಬ್ಲಾಗ್ ಅಲ್ಲದೆ ಶಿಕ್ಷಣ ಲೋಕ ಮತ್ತು ಗಿಳಿ ಬಾಗಿಲು ಎಂಬ ಹೆಸರಿನ ಇನ್ನೂ ಎರಡು ಬ್ಲಾಗ್ ತೆರೆದು ಬರೆಯುತ್ತಿರುವೆ  ನನ್ನ ಬ್ಲಾಗಿಗೆ ಕನ್ನಡ ಬ್ಲಾಗ್ ಕೊಂಡಿಗೆ ಜೋಡಿಸಿದ್ದಲ್ಲದೆ  ನನ್ನ ಹೆಚ್ಚು ಕಡಿಮೆ ಎಲ್ಲ ಬರಹ (ಪೋಸ್ಟ್ )ಗಳನ್ನು ತಮ್ಮ  ಬ್ಲಾಗಿನಲ್ಲಿ  ಹಂಚಿಕೊಂಡು  ನನ್ನ ಬ್ಲಾಗ್ ಇಷ್ಟು ಬೇಗನೆ ಪ್ರಸಿದ್ಧಿಗೆ  ಬರುವಂತೆ  ಮಾಡಿದ್ದಾರೆ ಮುರಳೀಧರ ಉಪಾಧ್ಯರು .
ಮುರಳೀಧರ ಉಪಾಧ್ಯರಿಗೆ  ನಾನು ಸದಾ ಋಣಿ.  ಬೆಂಬಲ ನೀಡಿದ  ಓದಿ ಪ್ರೋತ್ಸಾಹಿಸಿದ ಎಲ್ಲರಿಗು ಧನ್ಯವಾದಗಳು

Wednesday, 24 May 2017

ದೊಡ್ಡವರ ದಾರಿ :ಉದಾರ ಹೃದಯದ ಡಾ ಶಿಕಾರಿಪುರ ಕೃಷ್ಣ ಮೂರ್ತಿ

         

ಕೆಲವರು ತಮ್ಮ ಉದಾರ ನಡೆಯಿಂದಲೇ ದೊಡ್ಡವರಾಗಿ ಬಿಡುತ್ತಾರೆ.ಅಂತಹವರಲ್ಲಿ ನಾನು ಕಂಡ ವಿಶಿಷ್ಠವಾದ ವ್ಯಕ್ತಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ   ಡಾ.ಶಿಕಾರಿಪುರ ಕೃಷ್ಣ ಮೂರ್ತಿ.
ಇವರನ್ನು ಮೊದಲು ಭೇಟಿ ಮಾಡಿದ್ದು ನಾನು ಸಂಸ್ಕೃತ ಎಂಎ ಓದುತ್ತಿರುವಾಗ.ನಮ್ಮ ಕಟೀಲಕಾಲೇಜಿನ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಅತಿಥಿ ಉಪನ್ಯಾಸಕರಾಗಿ ಬಂದಿದ್ದರು ಅವರು. ಆ ದಿನ ಅವರು ಯಾವ ವಿಷಯಕ್ಕೆ ಸಂಬಂಧಿಸಿದಂತೆ ಉಪನ್ಯಾಸ ನೀಡಿದರೆಂಬುದು ನನಗೆ ಈಗ ಮರೆತುಹೋಗಿದೆ ಆದರೆ ಮಾತಿನ ನಡುವೆ ಅವರು ಕೃಷ್ಣ ನನ್ನು ಮ್ಯಾನುಪುಲೇಟರ್ ಎಂದು ಹೇಳಿದರು .ನಮ್ಮ ಸಂಸ್ಕೃತ ಎಂಎ ತರಗತಿಯಲ್ಲಿ ಇಪ್ಪತ್ತು ಜನ ವಿದ್ಯಾರ್ಥಿ ಗಳು ಓದುತ್ತಾ ಇದ್ದೆವುನಾವು ಬಿಟ್ಟರೆ ಎರಡನೇ ವರ್ಷದಲ್ಲಿ ಓದುತ್ತಾ ಇದ್ದವರು ಕೇವಲ ಐದು ಜನ .ಇವರಲ್ಲಿ ನನ್ನನ್ನು ಹೊರತು ಪಡಿಸಿ ಬೇರೆ ಯಾರೂ ವಿವಾಹಿತರಿರಲಿಲ್ಲ .ನನಗೆ ಎರಡನೇ ವರ್ಷ ಪದವಿ ಓದುತ್ತಿರುವಾಗಲೇ ವಿವಾಹವಾಗಿದ್ದು ಸಂಸ್ಕೃತ ಎಂಎ ಗೆ ಸೇರುವಾಗಲೇ ನಾನು ವಿವಾಹಿತಳು.ವಯಸ್ಸು ಅಲ್ಲಿ ಓದುವ ವಿದ್ಯಾರ್ಥಿ ಗಳಷ್ಟೇ ಆಗಿದ್ದರೂ ನನಗೆ ನಾನು ಉಳಿದವರಿಗಿಂತ ಪ್ರೌಢಳು ಎಂಬ ಭಾವ ಇತ್ತು ಹಾಗಾಗಿ ಸ್ವಲ್ಪ ಪ್ರೌಢಳಂತೆ ತೋರಿಸಿ ಇತರರಿಗಿಂತ ಭಿನ್ನವಾಗಿ ಕಾಣಿಸುವ ಸಲುವಾಗಿ ನಾನು ಅದೇಗೆ ಕೃಷ್ಣ ಮ್ಯಾನುಪುಲೇಟರ್ ಆಗುತ್ತಾನೆ ಎಂದು ಚರ್ಚೆಗೆ ನಿಂತೆ ಅದಕ್ಕೆ ಅವರೂ ಏನೇನೋ ಸ್ಪಷ್ಟೀಕರಣ ನೀಡಲು ಯತ್ನ ಮಾಡಿದರೂ ಅದು ಎಲ್ಲರಿಗೂ ಒಪ್ಪಿಗೆಯಾಗಲಿಲ್ಲ
ಆ ಸಮಯದಲ್ಲಿ ನನ್ನ ತಮ್ಮ ಈಶ್ವರ ಭಟ್ ಅಲೋಶಿಯಸ್ ಕಾಲೇಜಿನಲ್ಲಿ ದ್ವಿತೀಯ ವಿಜ್ಞಾನ ಪದವಿ ಓದುತ್ತಿದ್ದು ಅವನಿಗೆ ಶಿಕಾರಿಪುರ ಅವರು ಸಂಸ್ಕೃತ ಮೇಷ್ಟ್ರು ಆಗಿದ್ದರು.
ಕಟೀಲಿನಲ್ಲಿ ನಡೆದ ಚರ್ಚೆ ಬಗ್ಗೆ ತರಗತಿಯಲ್ಲಿ ಅವರು ಹೇಳಿ " ಏನೋ ಎಂಎ ಸ್ಟೂಡೆಂಟ್ಸ್ ಇಂಟರ್ನಲ್  ಅಸೆಸ್ಮೆಂಟ್ ಮಾರ್ಕ್ಸ್ ಎಲ್ಲಾ ಉಪನ್ಯಾಸಕರ ಹಿಡಿತದಲ್ಲಿ ಇರೋದ್ರಿಂದ ಏನು ಹೇಳಿದರೂ ಕೇಳಿಸ್ಕೋತಾರೆ ಅಂತ ಅಂದುಕೊಂಡು ಸಾಕಷ್ಟು ತಯಾರಿ ಇಲ್ಲದೆ ಉಪನ್ಯಾಸ ಕೊಡಲು ಹೋಗಿ ಸಿಕ್ಕಿ ಹಾಕಿಕೊಂಡೆ .ಅಲ್ಲಿ ಒಬ್ಬಾಕೆ ವಿವಾಹಿತ ವಿದ್ಯಾರ್ಥಿನಿ  ಇದ್ದರು ನನ್ನ ಲ್ಲಿ ಸಾಕಷ್ಟು ಚರ್ಚೆಮಾಡಿ ನನ್ನ ಕಂಗಾಲು ಮಾಡಿದರು ಅಂತೂ ಹೇಗೋ ಒಂದು ಸಮಜಾಯಿಸಿ ಕೊಟ್ಟು ಬಂದೆ "ಎಂದು ಹೇಳಿದರಂತೆ .ಆಗ ಆ ವಿವಾಹಿತ ವಿದ್ಯಾರ್ಥಿನಿ ನನ್ನ ಅಕ್ಕ ಎಂದು ಈಶ್ವರ ಭಟ್ ತಿಳಿಸಿದರಂತೆ
ಮತ್ತೆ ಕೂಡಾ ಅವರು ಅನೇಕ ಉನ್ನತ ಮಟ್ಟದ ಉಪನ್ಯಾಸ ನೀಡಿದ್ದರು ಆಗ ನನಗೆ ಅವರ ಪರಿಚಯವಾಯಿತು .ನಮ್ಮ  ಬಾಡಿಗೆ ಮನೆ ಅವರ ಮನೆಗೆ ಹೋಗುವ ರಸ್ತೆಯಲ್ಲಿ ಇತ್ತು ಒಂದು ದಿನ ನನ್ನ ತಮ್ಮ ಹಾಗೂ ನನ್ನ ಆಹ್ವಾನದ ಮೇರೆಗೆ   ನಮ್ಮ ಮನೆಗೂ ಬಂದಿದ್ದರು .ಅಷ್ಟು ಬಿಟ್ಟರೆ ಬೇರೇನೂ ಪರಿಚಯ ಇರಲಿಲ್ಲ.
ಅದು 1996 ನೇ ಇಸವಿಯ ಆಗಷ್ಟ್ ತಿಂಗಳು ಎರಡನೇ ವಾರ ಇರಬೇಕು.ಆ ದಿನ ಕೈಯಲ್ಲಿ ಸಿಹಿ ತಿಂಡಿ ಹಿಡಿದುಕೊಂಡು ಶಿಕಾರಿಪುರ ಕೃಷ್ಣ ಮೂರ್ತಿ ಮತ್ತು ಅವರ ಮಡದಿ ರತ್ನಕ್ಕ ನಮ್ಮ ಮನೆಗೆ ಬಂದು ಸಿಹಿ ನೀಡಿ "ಒಂದು ಸಂತೋಷ ದ ವಿಚಾರ ನಿಮ್ಮ ಎಂಎ ಫಲಿತಾಂಶ ಬಂದಿದೆ .ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದೀರಿ ಮತ್ತು ನಿಮಗೆ ಒಬ್ಬರಿಗೆ ಮಾತ್  ಡಿಸ್ಟಿಂಕ್ಷನ್ ಬಂದಿದೆ ಹಾಗಾಗಿ ಮೊದಲ ರಾಂಕ್ ಕೂಡ ನಿಮಗೇ ಬಂದಿದೆ" ಎಂದು ತಿಳಿಸಿದರು.ನನಗೆ ಸಂತಸದಲ್ಲಿ ಏನು ಹೇಳಬೇಕೋ ತಿಳಿಯಲಿಲ್ಲ .ಕೊನೆಗೂ ನನ್ನ ತಂದೆಯವರ ಕನಸು ನನಸಾಗಿತ್ತು .ನನ್ನ ತಂದೆಯವರಿಗೆತಮ್ಮ ಮಕ್ಕಳು ರಾಂಕ್ ತೆಗೆಯಬೇಕೆಂಬ ಕನಸಿತ್ತು ಅದು ನನ್ನ ಕನಸು ಕೂಡಾ ಆಗಿತ್ತು ಅಂದು ಅದು ನನಸಾಗಿತ್ತು.ಏನು ಹೇಳಬೇಕೆಂದು ತೋಚದೆ ಅತ್ತು ಬಿಟ್ಟೆ ಆ ದಿನ
ನಂತರ ನಾನು ಸಂತ ಅಲೋಶಿಯಸ್ ಕಾಲೇಜು ನಲ್ಲಿ ಉಪನ್ಯಾಸಕಿ ಯಾಗಿ ಶಿಕಾರಿಪುರ ಕೃಷ್ಣ ಮೂರ್ತಿ ಅವರ ಜೂನಿಯರ್ ಆಗಿ ಕೆಲಸ ಮಾಡಿದೆ .ಬಹು ಪ್ರತಿಷ್ಠಿತ ಕಾಲೇಜು ಸಂತ ಅಲೋಶಿಯಸ್. ಅಲ್ಲಿ ಉಪನ್ಯಾಸಕರಾಗಿ ಆಯ್ಕೆ ಆಗುವುದು ,ಸಮರ್ಪಕವಾಗಿ ಕೆಲಸ ಮಾಡುವುದು  ಸುಲಭ ಮಾತಲ್ಲ.ಮೊದಲ ದಿನವೇ ಒಂದು ಕಿವಿ ಮಾತು ಹೇಳಿದರು " ಈಗ ನಿಮ್ಮ ಮುಂದೆ ಕುಳಿತಿರುವವರು ವಿದ್ಯಾರ್ಥಿ ಗಳು ಆದರೆ ಇವರು ಮುಂದಿನ ದೊಡ್ಡ ದೊಡ್ಡ ಡಾಕ್ಟರ್, ಇಂಜಿನಿಯರ್, ಬ್ಯುಸಿನೆಸ್‌ ಮ್ಯಾನ್ ಗಳು.ಇದನ್ನು ನೀವು ಅರ್ಥ ಮಾಡಿಕೊಂಡರೆ ಸಾಕು,ಇಲ್ಲಿನ ಮಕ್ಕಳಿಗೆ ಪಾಠವನ್ನು ಮಾಡುವ ಸಾಮರ್ಥ್ಯ ನಿಮಗಿದೆ ಹಾಗಾಗಿ ಆತಂಕ ಬೇಡ "ಎಂದು ಧೈರ್ಯ ತುಂಬಿದ್ದರು.ಅವರ ಜೂನಿಯರ್ ಆಗಿ ನಾನು ತುಂಬಾ ಕಲಿತೆ ಇಂದು ನನಗೆ ಶಿಕ್ಷಕಿಯಾಗಿ ಯಶಸ್ಸು ಪಡೆಯಲು ಅವರ ಮಾರ್ಗ ದರ್ಶನ ಕೂಡ ಒಂದು ಕಾರಣವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ
ನಂತರ ನಾನು ಗರ್ಭಿಣಿ ಯಾದಾಗ   ಪ್ರಿನ್ಸಿಪಾಲ್ ಹತ್ತಿರ ಮಾತಾಡಿ  ಸುಪರ್ವಿಶನ್,ಮೌಲ್ಯಮಾಪನ ಮೊದಲಾದ ಕಾರ್ಯಗಳಿಂದ ನನಗೆ ವಿನಾಯಿತಿ ಕೊಡಿಸಿದ್ದರು.ಅವರು ಒಂದು ದಿನ ಕೂಡಾವಿಭಾಗದ ಮುಖ್ಯಸ್ಥರಾಗಿ    ಒಂದು ದಿನ ಕೂಡಾ ನನ್ನ ಮೇಲೆ ದಬ್ಬಾಳಿಕೆ ಮಾಡಿಲ್ಲ ಬದಲಿಗೆ ಅವರಿಗೆ ಸಮಾನರಾಗಿ ಕಂಡು ಗೌರವ ನೀಡಿದ್ದರು ಇಂತಹ ಹವರನ್ನು ನಾನು ಹೇಗೆ ತಾನೆ ಮರೆಯಲು ಸಾಧ್ಯ? ಸಾಮಾನ್ಯವಾಗಿ ವಿದ್ಯಾರ್ಥಿ ಗಳು ಸಿಹಿ ತಿಂಡಿಯನ್ನು ತಮ್ಮ ಗುರುಗಳಿಗೆ ಕೊಡುವ ಕ್ರಮ ಇದೆ ಆದರೆ ಇಲ್ಲಿ ಶಿಕಾರಿಪುರ ಅವರು ತಮ್ಮ ವಿದ್ಯಾರ್ಥಿನಿಗೆ ಸ್ವೀಟ್   ನೀಡಿ ಫಲಿತಾಂಶ ವನ್ನು ತಿಳಿಸಿ ತಮ್ಮ ಉದಾರತೆ ಮೆರೆದಿದ್ದರು.ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಸರ್
ಇವರು 2011 ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ ಕೂರ್ಮಾವತಾರ ಚಲನಚಿತ್ರದ ಒಂದು ಮುಖ್ಯ ಪಾತ್ರವಾದ ಗಾಂಧೀಜಿಯವರ ಪಾತ್ರವನ್ನು ಮಾಡಿದ್ದು ಇವರ ಅಭಿನಯ ಎಲ್ಲರ ಪ್ರಶಂಶೆಗೆ ಪಾತ್ರವಾಗಿದೆ ಈ ಚಲನ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಬಂದಿದೆ ಇದು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ
  © ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕಿ ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ  

Monday, 22 May 2017

ದೊಡ್ಡವರ ದಾರಿ : ಮಾದರಿ ವ್ಯಕ್ತಿತ್ವದ ಡಾ.ಜಿ ಎನ್ ಭಟ್

                   

ಯಾರು ಡಾ.ಜಿ ಎನ್ ಭಟ್ ? ಕರ್ನಾಟಕದ ಸಂಸ್ಕೃತ   ವಿಶ್ವ ವಿದ್ಯಾಲಯ ಆರಂಭವಾದಾಗ ವಿ ಸಿ ಹುದ್ದೆಗೆ ಇವರ ಹೆಸರು ಉಲ್ಲೇಖವಾದಾಗ ಜನರಿಗೆ ಅವರು ಯಾರು ಅಂತ ತಿಳಿಯಿತು.
ಮಂಗಳೂರಿನಲ್ಲಿ ರುವ ಪ್ರತಿಷ್ಠಿತ ಕೆನರಾ ಕಾಲೇಜಿನ ಸಂಸ್ಕೃತ ಉಪನ್ಯಾಸಕರು ಇವರು.ವಿದ್ಯಾರ್ಥಿಗಳ ಮೆಚ್ಚಿನ ಮೇಷ್ಟ್ರು ಇವರು .ಅಷ್ಟೇ ಆಗಿದ್ದರೆ ನಾನು ಅವರ ಬಗ್ಗೆ ಬರೆಯುತ್ತಾ ಇರಲಿಲ್ಲ.
ಮಂಗಳೂರು ವಿಶ್ವವಿದ್ಯಾನಿಲಯದ ದಲ್ಲಿ ಸಂಸ್ಕೃತ ಎಂ ಎ ಓದಲು ಅವಕಾಶವಿರಲಿಲ್ಲ .ಸಂಸ್ಕೃತ ಕಲಿಯುವ ಆಸಕ್ತಿ ಇದ್ದರೂ ದೂರದ ಬೆಂಗಳೂರು, ದಾರವಾಡ ಮೈಸೂರಿಗೆ ಹೋಗಿ ಕಲಿಯವುದು ಕಷ್ಟದ ವಿಚಾರ ವಾಗಿತ್ತು .ಜೊತೆಗೆ ಇಲ್ಲಿನ ಶಾಲಾ ಕಾಲೇಜುಗಳ ಲ್ಲಿ ಸಂಸ್ಕೃತ ಕಲಿಸಲು ಅಧ್ಯಾಪಕರ ಕೊರತೆ ಕಾಡಿತ್ತು .ಅನೇಕ ಸಂಸ್ಥೆ ಗಳು ಕಲಿಸುವ ಶಿಕ್ಷಕರು ಸಿಗದ ಕಾರಣ ಸಂಸ್ಕೃತ ವನ್ನು ತೆಗೆದು ಹಾಕುತ್ತಾ ಇದ್ದರು.
ಸಂಸ್ಕೃತ ದ ಮೇಲೆ ಅಪಾರ ಅಭಿಮಾನ ಪ್ರೀತಿ ಇದ್ದ ಡಾ.ಜಿ ಎನ್ ಭಟ್ ಅವರಿಗೆ ಇದು ತುಂಬಾ ನೋವಿನ ವಿಚಾರವಾಗಿತ್ತು .ಹಾಗಾಗಿ ಕಟೀಲ ಕಾಲೇಜಿನಲ್ಲಿ ಹರ ಸಾಹಸ ಮಾಡಿ ಸಂಸ್ಕೃತ ಎಂ ಎ ತರಗತಿ ಆರಂಭಿಸಿದರು.ಐದು ವರ್ಷದ ಒಪ್ಪಂದ ದ ಮೇರೆಗೆ ಅವರು ಕಟೀಲು ಕಾಲೇಜಿಗೆ ಪ್ರಿನ್ಸಿಪಾಲ್ ಆಗಿ ಬಂದರು ಕಟೀಲು ಡಿಗ್ರಿ ಕಾಲೇಜಿನಲ್ಲಿ ಮೊದಲಿಗೆ ಸಂಸ್ಕೃತ ವನ್ನು ಐಚ್ಛಿಕ ವಿಷಯವಾಗಿ ಕಲಿಯಲು ಅವಕಾಶ ಮಾಡಿದರು.ನಂತರ ಎಂ ಎ ತರಗತಿ ಅಲ್ಲಿಯೇ ಆರಂಭ ಮಾಡಿದರು.ಸಂಸ್ಕೃತ ಎಂ ಎ ತರಗತಿ ಏನೋ ಶುರು ಆಯ್ತು ಆದರೆ ಅದನ್ನು ಓದಲು ವಿದ್ಯಾರ್ಥಿಗಳ ಕೊರತೆ ಕಾಡಿತು.ಮೊದಲ ಬ್ಯಾಚ್ ನಲ್ಲಿ ಕೇವಲ  ಜನ ವಿದ್ಯಾರ್ಥಿಗಳು. ವರ್ಷಾಂತ್ಯ ವಾಗುತ್ತಿದ್ದರೂ ಮಂಗಳೂರು ಯುನಿವರ್ಸಿಟಿ ಯಿಂದ ಸಂಸ್ಕೃತ ಎಂ ಎ ಗೆ ಅಧಿಕೃತ ಪರವಾನಗಿ ಸಿಕ್ಕಿರಲಿಲ್ಲ ಜೊತೆಗೆ ಪಠ್ಯ ಏನು ಎತ್ತ ಎಂಬ ಬಗ್ಗೆ ಯೂ ಆತಂಕ‌! ಅಂತು ಇಂತು ಅನುಮತಿ ಸಿಕ್ಕಿ ಮೊದಲ ಬ್ಯಾಚ್ ನವರು ಪರೀಕ್ಷೆ ಬರೆದರು.ಎರಡನೆಯ ವರ್ಷಕ್ಕೂ ಐದು ವಿದ್ಯಾರ್ಥಿಗಳು.
ಮೂರನೇ ಬ್ಯಾಚ್ ನಮ್ಮದು .ಅದರಲ್ಲಿ ಇಪ್ಪತ್ತು ಜನ  ವಿದ್ಯಾರ್ಥಿಗಳ ಗಳು ಇದ್ದೆವು .ಇದರಲ್ಲಿ ಅಲ್ಲಿನ ಡಿಗ್ರಿ ಕಾಲೇಜಿ ನಲ್ಲಿ ಸಂಸ್ಕೃತ ವನ್ನು ಐಚ್ಛಿಕವಗಿ ಓದಿ ಬಂದ ಅನೇಕರು ಇದ್ದರು.ಅವರನ್ನು ನೋಡಿ ಕೊನೆ ಬೆಂಚಿನ ಹುಡುಗಿಯಾಗಿದ್ದ ನಮಗೆ ಆತಂಕವಾಗದೇ ಇದ್ದೀತೆ?
ಆ ಕಾಲ ನಮಗೂ ಕಷ್ಟದ ದಿನಗಳು. ಪ್ರಸಾದ್ ಗೆ ಸರಿಯಸದ ಕೆಲಸ ಇರಲಿಲ್ಲ. ನಾನು ಸಂಸ್ಕೃತ ಎಂಎ ಗೆ ಸೇರಲು ಹೋದಾಗ ಜಿ ಎನ್ ಭಟ್ಟರನ್ನು ಮೊದಲಬಾರಿಗೆ ನೋಡಿದೆ ಆಗ ಅವರಿಗೆ ಸುಮಾರು ನಲವತ್ತು ನಲುವತ್ತೈದರ ವಯಸು .ನೋಡಲು ಚೆನ್ನಾಗಿ ಇದ್ದರು ಮಾತು ಕೂಡ ಅಷ್ಟೇ ಚಂದ  ನಾನು ಸಂಸ್ಕೃತ ಎಂಎ ಸೇರಲು ಬಂದಿರುವೆನೆಂದು ತಿಳಿಸಿದಾಗ ಅಲಂಕಾರಶಾಸ್ತ್ರ  ಮತ್ತು ವೇದಾಂತ ಮತ್ತು ಅಲಂಕಾರ ಶಾಸ್ತ್ರ ಐಚ್ಛಿಕ ವಿಷಯಗಳಿವೆ ಯಾವುದು ಬೇಕು ಎಂದು ಕೇಳಿದರು.ಆ ಎರಡೂ ಶಬ್ದಗಳ  ಹೆಸರನ್ನು ಕೂಡ ಆ ತ‌ನಕ ನಾನು ಕೇಳಿಯೇ ಇರಲಿಲ್ಲ. ಬಹಳ‌ಗಾಬರಿಯಾಯಿತು    ಆಗ ನಮಗೆ ತುಂಬಾ ಕಷ್ಟದ ಸಮಯ ಪ್ರಸಾದ್ ಇದ್ದ ಒಳ್ಳೆಯ ಕೆಲಸ ಬಿಟ್ಟು ಊರಿಗೆ ಬಂದಿದ್ದರು ಮನೆ ಮಂದಿಯಿಂದ ಓದುವುದಕ್ಕೆ ಪ್ರಬಲ ವಿರೋಧ .ಹಾಗಾಗಿ ಬೇರೆ ಮನೆ ಮಾಡುವುದು ಅನಿವಾರ್ಯವಾಗಿತ್ತು ಪ್ರಸಾದ್ ನಂತರ ಮಂಗಳೂರಿನಲ್ಲಿ ಸಣ್ಣ ಕೆಲಸಕ್ಕೆ ಸೇರಿಕೊಂಡರು.ಹಾಗಾಗ  ಸಂಸ್ಕೃತ ಎಂ ಎ ಓದಲು ಹೊರಟಾಗ ಇದ್ದಿದ್ದು ಒಳ್ಳೆಯ ಕೆಲಸ ಹಿಡಿಯುವುದು ಮಾತ್ರ .ಹಾಗಾಗಿ ಕೆಲಸ ಸಿಗಲು ಯಾವುದು ಒಳ್ಳೆಯ ದು ಎಂದು ಕೇಳಿದೆ ಆಗ ಅವರು ಅಲಂಕಾರ ಶಾಸ್ತ್ರ ತೆಗೆದುಕೊಳ್ಳಿ ಎಂದು ಹೇಳಿದರು .( ನಾನು ಮಾತ್ರ ಮುಂದೆ ವೇದಾಂತ ವನ್ನೇ ಆಯ್ಕೆ ಮಾಡಿದೆಅದು ಬೇರೆ ವಿಚಾರ)   ಶುಲ್ಕ 700ರೂ ತುಂಬ ಬೇಕಾಗಿತ್ತು ಅಷ್ಟು ದುಡ್ಡು ನಮ್ಮಲ್ಲಿ ಇರಲಿಲ್ಲ. ಆಗ ಅದನ್ನು ಅರ್ಥ ಮಾಡಿಕೊಂಡ ಅವರು ನಿಮ್ಮ ಫೀಸ್ ಅನ್ನು ನಾನು ಕಟ್ಟುತ್ತೇನೆ.ಮುಂದೆ ನೀವು ದುಡ್ಡು ಆದಾಗ ಕೊಡಿ ಎಂದು ಹೇಳಿದರು .ಮತ್ತೆ ಒಂದು ವಾರದಲ್ಲಿ ನಾವು ಹೇಗೋ ದುಡ್ಡು ಹೊಂದಿಸಿ ಅವರಿಗೆ ತಂದು ಕೊಟ್ಟೆವು.
ಈ ನಡುವೆ ಸಂಸ್ಥೆ ಬೆಳೆಯುತ್ತಾ ಇದ್ದಂತೆ ಅನೇಕ ಸಮಸ್ಯೆ ಗಳು ಹುಟ್ಟಿಕೊಂಡವು ಜಿ ಎನ್ ಭಟ್ ಅವರು ತಮಗೆ ನ್ಯಾಯಯುತವಾಗಿ ಬರಬೇಕಿದ್ದ ಭಡ್ತಿ ಗಾಗಿ ನ್ಯಾಯಾಲಯದ ಮೆಟ್ಟಿಲನ್ನು ಹತ್ತಬೇಕಾಯಿತು .ನೇರವಾ್ಇ ಇದ್ದುದನ್ನು ಇದ್ದ ಹಾಗೆ ಹೇಳುವ ನನಗೆ ಅಂತರ್ ಮೌಲ್ಯಮಾಪನ ಅಂಕ ನೀಡುವ ವಿಚಾರದಲ್ಲಿ ನನಗು ಅಲ್ಲಿನ ಉಪನ್ಯಾಸಕರಾದ ನಾಗರಾಜ್ ಅವರಿಗೂ ತಗಾದೆ ಹುಟ್ಟಿಕೊಂಡಿತು ಇಲ್ಲಿ ಪಕ್ಷ ಪಾತ ರಹಿತವಾಗಿ ಜಿ ಎನ್ ಭಟ್ ಅವರಯ ನನ್ನ ಪರವಾಗಿದ್ದರು.
ಅಂತೂ ಇಂತೂ ಸಂಸ್ಕೃತ ಎಂಎ ಯನ್ನು ಮೊದಲ ರಾಂಕ್ ಹಾಗೂ ಚಿನ್ನದ ಪದಕಗಳೊಂದಿಗೆ ಪಡೆದೆ.
ಮತ್ತೆ ಕೆಲಸದ ಹುಡುಕಾಟ.ಹತ್ತು ಜನ ಸಂಸ್ಥಾಪಕರಲ್ಲಿ  ಜಿ ಎನ್ಒ ಭಟ್ಬ್ಬ ಒಬ್ಬರಾಗಿದ್ದ ಶಾರದಾ ಶಾಲೆಯಲ್ಲಿ ಸಂಸ್ಕೃತ ಟೀಚರ್ ಕೆಲಸಕ್ಕೆ ಅರ್ಜಿ ಆಹ್ವಾನಿಸಿದ್ದು ನಾವೆಲ್ಲರೂ ಅರ್ಜಿ ಸಲ್ಲಿಸಿದೆವು.ನಾನು ರಾಂಕ್ ವಿಜೇತೆಯಾಗಿದ್ದೆ.ಆದರೆ ಆ ಕೆಲಸ ನನ್ನ ಸಹಪಾಠಿ ರಮಿತಾಳಿಗೆ ಸಿಕ್ಕಿತು .ಮುಂದಿನ ಸಲ ನಿಮಗೆ ಕೊಡಿಸುವೆ ಎಂದು ಜಿ ಎನ್ ಭಟ್ ಅವರು ಹೇಳಿದರು .ಆದರೂ ರಾಂಕ್ ಬಂದ ನನ್ನನ್ನು ಬಿಟ್ಟ ಬೇರೆಯವರಿಗೆ ಕೊಟ್ಟದ್ದು ತುಂಬಾ ನೋವಾಗಿತ್ತು ನನಗೆ.ಮುಂದೆ ಕೆಲವೇ ದಿನಗಳಲ್ಲಿ ಕಲ್ಲಡ್ಕ ಶ್ರೀ ರಾಮ ವಿದ್ಯಾಲಯದಲ್ಲಿ  ಕೆಲಸ ಸಿಕ್ತು  . ನಂತರದ ಒಂದೆರಡತ ತಿಂಗಳಲ್ಲಿ ಮಂಗಳೂರಿನ ಪ್ರತಿಷ್ಠಿತ ಕಾಲೇಜು ಸಂತ ಅಲೋಶಿಯಸ್ ಕಾಲೇಜ್ ನಲ್ಲಿ ಉಪನ್ಯಾಸಕಿ ಹುದ್ದೆ ದೊರೆಯಿತು ಮತ್ತೆಂದೂ ನಾನು ಹಿಂದೆ ನೋಡಲಿಲ್ಲ ಕೆಲವು ವರ್ಷ ಅಲ್ಲಿ ಕೆಲಸ ಮಾಡಿ 2005 ರಲ್ಲಿ ಬೆಂಗಳೂರು ಬಂದೆ 2009 ರಲ್ಲಿ ಸರಕಾರಿ ಪಿಯು ಕಾಲೇಜಿಗೆ ಕನ್ನಡದ ಉಪನ್ಯಾಸಕಿ ಯಾಗಿ ಬೆಳ್ಳಾರೆಗೆ ಬಂದೆ .ಒಳ್ಳೆಯ ಶಿಕ್ಷಕಿಯಾಗಿ, ಲೇಖಕಿಯಾಗಿ ಸಂಶೋಧಕಿಯಾಗಿ ಜನ ಗುರುತಿಸಿದರು
ಇದೆಲ್ಲದರ ಗಿಂದೆ ಒಂದು ಗುಟ್ಟು ಇದೆ ಈಗ ರಟ್ಟು ಮಾಡುವೆ .ನಾನು ಜಿ ಎನ್ ಭಟ್ ಅವರನ್ನು ನೋಡಿದ ಮೊದಲ ದಿನವೇ ನನಗೆ ಅವರಷ್ಟು    ವಯಸ್ಸ್ ಆದಾಗ ನಾನೂ ಅವರಂತೆ ಆಗಬೇಕು ಎಂದು ಕೊಂಡಿದ್ದೆ ಅವರಷ್ಟು ಸಾಧಿಸಲು ಆಗಿಲ್ಲ ಆದರೆ ಭೂತಾರಾಧನೆಯ ಅಧ್ಯಯಯನ ಕ್ಷೇತ್ರದಲ್ಲಿ  ನನ್ನದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸುವ ನಂಬಿಕೆ ಇದೆ
ಮಂಗಳೂರು ವಿಶ್ವವಿದ್ಯಾನಿಲಯದ ನೇಮಕಾತಿ ಯಲ್ಲಿ ನನಗೆ ಅನ್ಯಾಯವಾದಾಗ ಕೋರ್ಟಿಗೆ ಹೋಗಿ writ petitionಹಾಕಿ ಎಂದು ಸಲಹೆ ನೀಡಿದವರು ಕೂಡ ಅವರೇ.2012ರಲ್ಲಿ  ಕೆನರಾ ಮಹಾ ವಿದ್ಯಾಲಯ ದಲ್ಲಿ ಸಂಸ್ಕೃತ ಕುರಿತು ಅಂತರರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಹೋಗುವಾಗ ನನಗೆ ಸ್ವಲ್ಪ ಅಳುಕು ಇತ್ತು ವಿದ್ಯಾರ್ಥಿನಿಯಾಗಿದ್ದಾಗ  ಮತ್ತು ನಂತರ ಎಲ್ಲೋ ಯಾವುದೋ ಸಂಸ್ಕೃತ ಕ್ಕೆ ಸಂಬಂಧ ಪಟ್ಟ ಮೀಟಿಂಗ್ ಒಂದರಲ್ಲಿ ಜಿ ಎನ್ ಭಟ್ ಅವರು ನನ್ನ ಬಗ್ಗೆ " ಅವಳು ಯಾರು ? ಯಃಕಶ್ಚಿತ್ ಲಕ್ಷ್ಮೀ, ಮರಾಠೆ ಉಪನ್ಯಾಸಕರುನೀವೇಕೆ ಲಕ್ಷ್ಮೀ ಪರ ಮಾತನಾಡಿದಿರಿ ( ಇವರು ಎಂಎ ಮೊದಲ ಬ್ಯಾ ಚ್ ವಿದ್ಯಾರ್ಥಿಯಾಗಿದ್ದು    ಕಟೀಲಿನಲ್ಲಿ ನಮಗೆ ಉಪನ್ಯಾಸಕ ರಾಗಿದ್ದರು)  " ಎಂದು ಹೇಳಿದರಂತೆ .ಹಾಗಾಗಿ ಸುಮಾರು ಹದಿನೈದು ವರ್ಷಗಳ ಕಾಲ ನಾನು ಅವರನ್ನು ಭೇಟಿಯಾಗಿರಲಿಲ್ಲ .ಹಾಗಾಗಿ ಸೆಮಿನಾರ್ ಗೆ ಹೋಗುವಾಗ ಅಳುಕಿತ್ತು .ಆದರೆ 'ಇವಾವುದು  ಸತ್ಯವಲ್ಲ ,ಯಾರದೋ ಚಾಡಿ ಮತುಗಳು 'ಎಂದು ತಮ್ಮ ಉದಾರ ಉನ್ನತ ವ್ಯಕ್ತಿತ್ವ ದಿಂದ ತೋರಿಸಿಕೊಟ್ಟರು ಅವರು.ದೊಡ್ಡವರುಯಾಕೆ ದೊಡ್ಡವರು ಎನಿಸಿಕೊಳ್ಳುತ್ತಾರೆ ಎಂಬುದಕ್ಕೆ ಪ್ರತ್ಯಕ್ಷ ನಿದರ್ಶನ ವಾಗಿ ನನಗೆ ಕಂಡವರು ಡಾ ಜಿ ಎನ್ ಭಟ್ ಅವರು. ಸಭಾಂಗಣದಲ್ಲಿ ಹಿಂಭಾಗ ಕುಳಿತಿರುವುದನ್ನು ನೋಡಿ ಅವರನ್ನು ಅವಾಯ್ಡ್ ಮಾಡುವ ಸಲುವಾಗಿ ಎದುರಿನ ಬಾಗಿಲಿನಿಂದ ಹೋಗಿ ಜಾಗ ಇರುಬ
ವಲ್ಲಿ ಕುಳಿತೆ.ಆದಾಗ್ಯೂ ಅವರು ನಾನಿದ್ದಲ್ಲಿಗೆ ಬಂದು ಅಲ್ಲಿ ಖಾಲಿ  ಕುರ್ಚಿ ಇಲ್ಲದೆ ಇದ್ದರೂ ಬೇರೆ ಕಡೆ ಇದ್ದ ಕಾಲಿ ಕುರ್ಚಿ ತಂದು ನನ್ನ ಬಳಿ  ಹಾಕಿ ಕುಳಿತುಕೊಂಡು" ಲಕ್ಷ್ಮೀ ಒಳ್ಳೆಯ ಕೆಲಸ ಮಾಡುತ್ತಿದ್ದಿ‌ .ನಿನ್ನ ಬರಹಗಳನ್ನು ಓದುತ್ತಿರುತ್ತೇನೆ ಅದನ್ನು ಮುಂದು ವರಿಸು  .ನಿನ್ನ ಬಗ್ಗೆ    ಪ್ರಜಾವಾಣಿಯಲ್ಲಿ " ತುಳು ಜಾನಪದ ಸಂಶೋಧಕಿ - ಡಾ ಲಕ್ಷ್ಮೀ ಜಿ ಪ್ರಸಾದ ಎಂಬ    ಲೇಖನ ಓದಿರುವೆ.  ಒಳ್ಳೆಯ ಭವಿಷ್ಯ ವಿದೆ ನಿನಗೆ ಶುಭವಾಗಲಿ ಎಂದು ಹೆಳಿದರು .ಬರವಣಿಗೆ ಮುಂದುವರಿಸುಎಂದು ಹಿತ ನುಡಿದರು  ಆ ಬ್ಯುಸಿ ಕೆಲಸಗಳ ನಡುವೆಯೂ ನನ್ನ ಬಳಿಗೆ ಬಂದು ಮಾತಾಡಿದ ಪ್ರೌಢ ವ್ಯಕ್ತಿ ಯನ್ನು ನನ್ನ  ಗುರುಗಳನ್ನು. ಹೇಗೆ ತಾನೇ  ಮರೆಯಲಿ ?