Thursday 28 December 2017

ದೊಡ್ಡವರ ದಾರಿ : 29- ನನಗೆ ಸಂಸ್ಕೃತ ಕಲಿಸಿದ ಯಶೋದಾ ಭಗಿನಿ© ಡಾ.ಲಕ್ಷ್ಮೀ ಜಿ ಪ್ರಸಾದ

ದೊಡ್ಡವರ ದಾರಿ : 29- ನನಗೆ ಸಂಸ್ಕೃತ ಕಲಿಸಿದ ಯಶೋದಾ ಭಗಿನಿ© ಡಾ.ಲಕ್ಷ್ಮೀ ಜಿ ಪ್ರಸಾದ

ಸಾವಿರಾರು ಮಂದಿಗೆ ಸಂಸ್ಕೃತ ಕಲಿಸಿದ  ಯಶೋದಾ ಭಗಿನಿ ಸಂಸ್ಕೃತ ಭಾರತಿ? ಯಿಂದ ಸಂಸ್ಕೃತ ಕಲಿಸಲು ನೇಮಿಸಲ್ಪಟ್ಟ ಸಂಸ್ಕೃತ ಶಿಕ್ಷಕಿ.ಮಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಗೆ ಶಾಲಾ ಕಾಲೇಜುಗಳಿಗೆ ಹೋಗಿ ಹತ್ತು ದಿನದ ಸಂಸ್ಕೃತ ಸಂಭಾಷಣಾ ಶಿಬಿರ ನಡೆಸುವುದು ,ಸಂಸ್ಕೃತ ಪ್ರಚಾರ ಮಾಡುವ ಕೆಲಸ ಅವರದು.ಯಶೋದಾ ಭಗಿನಿಯಂತೆ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಪ್ರಶಿಕ್ಷಕರನ್ನು ನೇಮಿಸಿದ್ದರು.ಆದರೆ ಯಶೋದಾ ಭಗಿನಿಯ ಸಂಸ್ಕೃತ ಪ್ರೀತಿ,ಅದನ್ನು ಪ್ರಚುರ ಪಡಿಸಲು ಯತ್ನಿಸಿದ ಪರಿ ಅನನ್ಯವಾದುದು.
ಭಾಷೆಯನ್ನು ಹೇಳಿಕೊಡುವುದೊಂದು ಕೌಶಲ್ಯ. ಇದು ಎಲ್ಲರಿಗೆ ಒಲಿಯುವುದಿಲ್ಲ.ಮತ್ತು ಇದನ್ನು ಯತ್ನ ಪೂರ್ವಕವಾಗಿ ಕಲಿಯಬೇಕಾಗುತ್ತದೆ.ಕಲಿಸುವ ಶಿಕ್ಷಕರಿಗೂ ಆ ಕೌಶಲ್ಯವಿರಬೇಕು.
ನಾನು ಪಿಯುಸಿ ,ಡಿಗ್ರಿಯಲ್ಲಿ ಸಂಸ್ಕೃತ ವನ್ನು ಒಂದು ಭಾಷೆಯಾಗಿ ಕಲಿತಿದ್ದೆ.ಸಂಸ್ಕೃತ ಎಂಎ ಪದವಿಯನ್ನು ಕೂಡ ಮೊದಲ ರ‍್ಯಾಂಕ್ ಮತ್ತು ಸುವರ್ಣ ಪದಕಗಳೊಂದಿಗೆ ಪಡೆದಿದ್ದೆ.ಆದರೂ ಸಂಸ್ಕೃತ ಭಾಷೆಯಲ್ಲಿ ವ್ಯವಹರಿಸಲು,ಮಾತನಾಡಲು ತಿಳಿದಿರಲಿಲ್ಲ. ಯಾಕೆಂದರೆ  ಪಿಯುಸಿ ಮತ್ತು ಪದವಿಯ ಸಂಸ್ಕೃತ ಭಾಷೆಯ ಪರೀಕ್ಷೆ ಯಲ್ಲಿ ಹೆಚ್ಚಿನ ಭಾಗವನ್ನು ಕನ್ನಡದಲ್ಲಿ ಉತ್ತರಿಸಲು ಅವಕಾಶವಿತ್ತು.ಸಂಸ್ಕೃತ ಎಂಎ ಯಲ್ಲಂತೂ ಪೂರ್ತಿಯಾಗಿ ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ಬರೆಯಲು ಅವಕಾಶವಿತ್ತು. ಇಲ್ಲೆಲ್ಲೂ ನಮಗೆ ಭಾಷೆಯನ್ನು ಕಲಿಸುವ ಯತ್ನ ನಡೆಯಲೇ ಇಲ್ಲ.ಕೇವಲ ಪಠ್ಯ ಓದಿ ಉತ್ತರಿಸಿದರೆ ಭಾಷೆ ಒಲಿಯುವುದಿಲ್ಲ .ಉದಾಹರಣೆಗೆ ಹೇಳುವುದಾದರೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಯುವ  ಹೆಚ್ಚಿನ ಮಕ್ಕಳಿಗೆ ಹತ್ತನೇ ತರಗತಿ ಕಳೆದರೂ,ಪಿಯುಸಿ,ಡಿಗ್ರಿ, ಎಂಎ ಆದರೂ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ.ಕಾರಣವೇನೆಂದರೆ ಇಲ್ಲೆಲ್ಲೂ ಇಂಗ್ಲಿಷ್ ಮಾತನಾಡಲು ,ವ್ಯವಹರಿಸಲು ಹೇಳಿಕೊಡುವುದಿಲ್ಲ
ಅದೇ ಪರಿಸ್ಥಿತಿ ಸಂಸ್ಕೃತ ಎಂಎ ಓದಿದವರದ್ದು.
ಯಶೋದಾ ಭಗಿನಿ ನನಗೆ ಸಂಸ್ಕೃತದಲ್ಲಿ ಮಾತನಾಡಲು ,ಸಂಭಾಷಣಾ ಶಿಬಿರವನ್ನು ನಡೆಸಲು  ಅತ್ಯಂತ ಪ್ರೀತಿಯಿಂದ ತಾಳ್ಮೆಯಿಂದ  ಹೇಳಿಕೊಡದೆ ಇದ್ದರೆ ನಾನು ಕೂಡ ಹಾಗೆಯೇ ಇರುತ್ತಿದ್ದೆನೋ ಏನೋ.
ನಾವು ಸಂಸ್ಕೃತ ಎಂಎ ಅಂತಿಮ ಪರೀಕ್ಷೆ ಬರೆದ ನಂತರ ಎರಡು ವಾರಗಳ ಕಾಲ ನಮಗೆ ಸಂಸ್ಕೃತ ಭಾರತಿಯಿಂದ ಪ್ರಶಿಕ್ಷಣ ಶಿಬಿರ ನಡೆಸಿದರು.ಇದರ ಸಂಚಾಲಕಿ ಯಶೋದಾ ಭಗಿನಿ ಆಗಿದ್ದರು.ಎರಡು ವಾರಗಳಲ್ಲಿ ನಾವುಗಳು ಸಂಸ್ಕೃತ ಭಾಷೆಯಲ್ಲಿ ವ್ಯವಹರಿಸುವುದನ್ನು ಕಲಿತೆವು .ಇಲ್ಲಿ ಬೇರೆಯವರಿಗೆ ಸಂಸ್ಕೃತ ಸಂಭಾಷಣಾ ಶಿಬಿರ ಮಾಡಿ ಸಂಸ್ಕೃತ ಕಲಿಸುವ ವಿಧಾನವನ್ನು ಹೇಳಿಕೊಟ್ಟರು‌.ಯಶೋದಾ ಭಗಿನಿಯ ಮಾರ್ಗದರ್ಶನದಂತೆ ನಾನು ಕೂಡ ಅನೇಕ ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು  ಉಚಿತವಾಗಿ ನಡೆಸಿದೆ.ಯಶೋದಾ ಭಗಿನಿ ಮಂಗಳೂರಿನಲ್ಲಿದ್ದ ಎರಡು ಮೂರು ವರ್ಷಗಳಲ್ಲಿ ಸುಮಾರು  ಮುನ್ನೂರು  ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ಮಾಡಿ ಸಾವಿರಾರು ಮಂದಿಗೆ ಸಂಸ್ಕೃತ ವನ್ನು ಹೇಳಿಕೊಟ್ಟಿದ್ದರು.ನಿಜಕ್ಕೂ ಅವರು ಸಂಸ್ಕೃತದ ಸೇವೆಯನ್ನು ನಿರ್ವಂಚನೆಯಿಂದ ಮಾಡಿದ್ದರು.
ನಮ್ಮ ಸಂಸ್ಕೃತ ಪ್ರಶಿಕ್ಷಣ ಶಿಬಿರದ ಕೊನೆಯ ಸಮಾರೋಪ ಸಮಾರಂಭದಲ್ಲಿ ಸ್ವಾಗತ,ಧನ್ಯವಾದ,ಕಾರ್ಯಕ್ರಮ ನಿರೂಪಣೆಗಳ ಜವಾಬ್ದಾರಿಯನ್ನು ಪ್ರಶಿಕ್ಷಣಾರ್ಥಿಗಳಾದ ನಮಗೇ ನೀಡಿದ್ದರು.ನಾನು ನಿರೂಪಣೆ ಮಾಡುತ್ತೇನೆ ಎಂದಾಗ ನಮ್ಮಂತೆಯೇ ಪ್ರಶಿಕ್ಷಣಾರ್ಥಿಗಳಾಗಿ ಬಂದಿದ್ದ ನಮ್ಮ ಎಂ ಎ ತರಗತಿ ಉಪನ್ಯಾಸಕರೊಬ್ಬರು ಲಕ್ಷ್ಮೀ ಸ್ವಾಗತ ಮಾಡಲಿ,ನಿರೂಪಣೆ ಗಜಾನನ ಮರಾಠೆ ( ನನ್ನ ಸಹಪಾಠಿ)ಮಾಡಲಿ ಎಂದು ಹೇಳಿದರು‌.ಆಗ ಯಶೋದಾ ಭಗಿನಿ ಯಾಕೆ ಸ್ತ್ರೀಯರು ನಿರೂಪಣೆ ಮಾಡಿದರೆ ಆಗುವುದಿಲ್ಲವಾ ?ಎಂದು ಪ್ರಶ್ನಿಸಿದ್ದರು.
ನಂತರ ನಾನು ಸ್ವಾಗತ ನಿರೂಪಣೆ ಎರಡೂ ಬೇಡವೆಂದು ಹೇಳಿ ,ಪ್ರಶಿಕ್ಷಣ ಶಿಬಿರದ ಕುರಿತಾಗಿ ಅಭಿಪ್ರಾಯ ಮಂಡನೆಯ ಜವಾಬ್ದಾರಿಯನ್ನು ಪಡೆದೆ.
ಆಗಿನ್ನೂ ನನಗೆ ಇಪ್ಪತ್ತ ಮೂರು ವರ್ಷ.ಪ್ರೌಢಿಮೆ ತಾಳ್ಮೆ ಇಲ್ಲದ ವಯಸ್ಸದು‌ಮೊದಲೇ ಸ್ವಲ್ಪ ಕೋಪಿಷ್ಟೆ ನಾನು.ನಿರೂಪಣೆಯನ್ನು ನಾನು ಮಾಡುವುದು ಬೇಡವೆಂದು ಆ ಉಪನ್ಯಾಸಕರು ಹೇಳಿದ್ದು ನನ್ನ ಆತ್ಮಾಭಿಮಾನಕ್ಕೆ ಧಕ್ಕೆ ಆಗಿತ್ತು. ನನ್ನ ಅಭಿಪ್ರಾಯ ಹೇಳುವಾಗ ಇದರ ಛಾಯೆ ಸ್ವಲ್ಪ ಮಾತಿನಲ್ಲಿ ಕಾಣಿಸಿತ್ತು!
ಪೂರ್ಣ ಕುಂಭ ಸದ್ದು ಮಾಡುವುದಿಲ್ಲ .ಅಪೂರ್ಣಕುಂಭಗಳು  ಸದ್ದು ಮಾಡುತ್ತವೆ ಎಂದು ಹೇಳಿ ನನ್ನ ಕೋಪವನ್ನು ಹೊರ ಹಾಕಿದ್ದೆ. ಈ ಕಾರ್ಯಕ್ರಮದ ನಂತರ ಈ ಬಗ್ಗೆ ಪ್ರಸ್ತಾಪಿಸಿದ ಯಶೋದಾ ಭಗಿನಿ ಲಕ್ಷ್ಮೀ ನಿಮಗೆ ಅವಮಾನವಾಗಿದ್ದರೆ ಅದಕ್ಕೆ ಮಾತಿನಲ್ಲಿ ಉತ್ತರಕೊಡಬಾರದು.ಕೃತಿಯ ಮೂಲಕ ಉತ್ತರ ಕೊಡಬೇಕು, ನಿಮ್ಮಲ್ಲಿ ಅಪಾರ ಉತ್ಸಾಹವಿದೆ,ಸಾಮರ್ಥ್ಯವಿದೆ.ಇದನ್ನು ಬಳಸಿಕೊಂಡು ಬದುಕಿನಲ್ಲಿ ಯಶಸ್ಸು ಪಡೆಯಬೇಕು.ಸ್ತ್ರೀ ಯರು ಇಂತಹ ನೂರಾರು ಅವಮಾನಗಳನ್ನು ಎದುರಿಸುವುದು ಅನಿವಾರ್ಯ, ಯಾಕೆಂದರೆ ನಮ್ಮದು  ಪುರುಷ ಪ್ರಧಾನ ಸಮಾಜ,ಇಲ್ಲಿ ಮಹಿಳೆಯರಿಗೆ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಕೂಡ ಹೋರಾಡಬೇಕಾಗುತ್ತದೆ.ಧೈರ್ಯದಿಂದ ಮುಂದಡಿ ಇಡಿ,ನಿಮ್ಮ ಒಳ್ಳೆಯ ಕಾರ್ಯಕ್ಕೆ ದೇವರ ಬೆಮಬಲ ಇರುತ್ತದೆ.ಎಲ್ಲೆಡೆ ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ಮಾಡಿ ,ಸಂಸ್ಕೃತ ಭಾಷೆ ನಿಮ್ಮ ಕೈ ಹಿಡಿಯುತ್ತದೆ,ಸ್ಥಾನಕ್ಕೆ ಚ್ಯುತಿ ಬರಬಹುದು ಆದರೆ ಜ್ಞಾನಕ್ಕೆ ಎಂದೂ ಚ್ಯುತಿ ಬರಬಾರದು  ಎಂದು ತಿಳುವಳಿಕೆಯನ್ನು ನೀಡಿದ್ದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಂಸ್ಕೃತ ಭಾರತಿಯ ಮೀಟಿಂಗ್ ಒಂದರಲ್ಲಿ ಅದರ ನಿರ್ದೇಶಕರೊಬ್ಬರು " ಅವರು ಉಪನ್ಯಾಸಕರು, ಅವಳು ಯಃಕಶ್ಚಿತ್ ಲಕ್ಷ್ಮೀ, ನೀನು ಲಕ್ಷ್ಮೀ ಪರವಾಗಿ ನಿಂತದ್ದು ಸರಿಯಲ್ಲ ಎಂದು ಹೇಳಿದರಂತೆ.ಇದು ತಿಳಿದಾಗ ಯಶೋದಾ ಭಗಿನಿ ನನ್ನಿಂದಾಗಿ ಅವರ ಮೇಲಧಿಕಾರಿಗಳಿಂದ ಹೇಳಿಸಿಕೊಳ್ಳುವ ಹಾಗಾಯ್ತಲ್ಲಾ ಎಂದು ತುಂಬಾ ಬೇಸರವಾಗಿತ್ತು ನನಗೆ.ಅದರೆ ಯಶೋದಾ ಭಗಿನಿ ನನಗೆ ಈ ಬಗ್ಗೆ ಬೇಸರವಿಲ್ಲ ಯಾಕೆಂದರೆ ನಾನು ನ್ಯಾಯದ ಪರ ನಿಂತಿರುವೆ.ಆದರೂ ರ‍್ಯಾಂಕ್ ತೆಗೆಯುವ ಸಂಭವನೀಯ ವಿದ್ಯಾರ್ಥಿನಿ ನಿಮ್ಮ ಬಗ್ಗೆ ಯಃಕಶ್ಚಿತ್ ಲಕ್ಷ್ಮೀ ಎಂದು ಹೇಳಿ ನಿಮಗೆ ಹಿಂದಿನಿಂದ ಅವಹೇಳನ ಮಾಡಿದ್ದು ನನಗೆ ತುಂಬಾ ಬೇಸರವಾಗಿದೆ.ಲಕ್ಷ್ಮೀ ನೀವು ಪ್ರತಿಭಾವಂತರು. ನನ್ನಂತಾಗಬೇಡಿ.ಸ್ವ ಸಾಮರ್ಥ್ಯದಿಂದ,ಪ್ರಯತ್ನದಿಂದ ಮೇಲೆ ಬನ್ನಿ, ಇಂದು ನಿಮ್ಮನ್ನು ಯಃಕಶ್ಚಿತ್ ಅಂದವರೇ ಭೇಷ್ ಎಂದು ಮೆಚ್ಚುವಂತೆ ಸಾಧನೆ ಮಾಡಿ ತೋರಿಸಬೇಕು ಎಂದು ನನ್ನನ್ನು ಸಾಧನೆಯ ಹಾದಿಯತ್ತ ಹುರಿದುಂಬಿಸಿದ್ದರು‌.
ನಂತರ ಇದೇ ಪ್ತಕರಣದ ಕಾರಣ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿದರಂತೆ.ನಂತರ ಅವರು ಅದನ್ನು ಬಿಟ್ಟು ಯೋಗ್ಯ ವರನನ್ನು ಮದುವೆಯಾಗಿ ಇಬ್ಬರು ಅವಳಿ ಮಕ್ಕಳ ತಾಯಿಯಾಗಿ ಸಂತಸದ ಬದುಕನ್ನು ನಡೆಸುತ್ತಿದ್ದಾರೆ ಎಂದು ಯಾರೋ ಹೇಳಿದರು.ಅವರ ಪತಿ ವಿಧಾನ ಸೌಧದಲ್ಲಿ ಉದ್ಯೋಗಿಯಂತೆ.ಆದರೆ ಅವರನ್ನು ಈ ಇಪ್ಪತ್ತು ವರ್ಷಗಳಿಂದ ನನಗೆ ಭೇಟಿಯಾಗಲು ಅಗಿಲ್ಲ,ಅವರೆಲ್ಲಿದ್ದಾರೆ ಎಂದು ತಿಳಿದಿಲ್ಲ ನನಗೆ.
ಅವರಂದಂತೆ ನನ್ನನ್ನು ತುಂಬಿದ ಸಭೆಯಲ್ಲಿ ಯಃಕಶ್ಚಿತ್ ಎಂದು ಹೀಯಾಳಿಸಿದವರ ಬಾಯಿಂದಲೇ ಮೆಚ್ಚುಗೆಯ ಮಾತುಗಳನ್ನು ಪಡೆದಿದ್ದೇನೆ.
ಅವರನ್ನು ಭೇಡಿಯಸಗಬೇಕೆಂಬ ಆಸೆ ಇದೆ ಆದರೆ ಅವರು ಎಲ್ಲಿದ್ದಾರೆ ಎಂದು ತಿಳಿಯದಾಗಿದೆ.
ನಾಡಿದ್ದು ಶನಿವಾರ ಭಾಸ ಮಹಾಕವಿಯ ಪ್ರತಿಜ್ಞಾ ಯೌಗಂಧರಾಯಣಂ ಎಂಬ ಸಂಸ್ಕೃತ ನಾಟಕದ ಬಗ್ಗೆ ಉಪನ್ಯಾಸ ಕೊಡಲು ದಾಕ್ಷಾಯಿಣಿ ಭಟ್ ಅವರು ಕೇಳಿದ್ದಾರೆ.
‌ನಾನು 1997-2003 ತನಕ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದೆ.ನಂತರ  ಕಳೆದ ಹದಿನಾಲ್ಕು ವರ್ಷಗಳಿಂದ ನಾನು ಕನ್ನಡ ಉಪನ್ಯಾಸಕಿ ಯಾಗಿ ಕೆಲಸ ಮಾಡುತ್ತಿದ್ದೇನೆ,ಹಾಗಾಗಿ ಸಂಸ್ಕೃತ ದ ಸಂಸರ್ಗವೇ ತಪ್ಪಿ ಹೋಗಿದೆ. ನನಗೆ ಸಂಸ್ಕೃತ ಭಾಷೆ ಮರೆತು ಹೋಗಿರಬಹುದೇನೋ ಎಂಬ ಸಂಶಯ ಕಾಡಿತ್ತು.ಆದರೆ ಭಾಸನ ಪ್ರತಿಜ್ಞಾ ಯೌಗಂಧರಾಯಣಂ ಓದುತ್ತಿದ್ದಂತೆ ನನಗೆ ಸಂಸ್ಕೃತ ಮರೆತು ಹೋಗಿಲ್ಲ ಎಂದು ಸ್ಪಷ್ಟವಾಯಿತು. ಬಹುಶಃ ಸಂಸ್ಕೃತ ಇಷ್ಟು ಗಟ್ಟಿಯಾಗಿ ನನ್ನಲ್ಲಿ ಉಳಿಯಲು ಯಶೋದಾ ಭಗಿನಿಯೆ ಕಾರಣವೆನಿಸಿ ಅವರ ನೆನಪಾಯಿತು.ಅವರನ್ನು ಎಂದಿಗೂ ಮರೆಯಲಾಗದು ನನಗೆ.

Sunday 24 December 2017

ದೊಡ್ಡವರ ದಾರಿ 27 ಸ್ವಸಾಮರ್ಥ್ಯದಿಂದ ಉತ್ತುಂಗಕ್ಕೇರಿದ ಡಾ.ವೆರೋನಿಕಾ ಜೂಡಿ ಕಾರ್ಲೋ ಪಿಂಟೋ © ಡಾ.ಲಕ್ಷ್ಮೀ ಜಿ ಪ್ರಸಾದ

ದೊಡ್ಡವರ ದಾರಿ: 27 - ಸ್ವ ಸಾಮರ್ಥ್ಯದಿಂದ ಉತ್ತುಂಗಕ್ಕೇರಿದ ಡಾ.ವೆರೋನಿಕಾ ಜೂಡಿ ಕಾರ್ಲೋ ಪಿಂಟೋ

  ಕ್ರಿಸ್ಮಸ್ ಹಬ್ಬ ಬಂದಾಗ ತಕ್ಷಣಕ್ಕೆ ನೆನಪಾದವರು ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ  ಮಾದರಿ ಮಹಿಳೆ  ಜೂಡಿ ಮೇಡಂ.( ಡಾ.ವೆರೋನಿಕಾ ಜೂಡಿ ಕಾರ್ಲೋ ಪಿಂಟೋ)ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ನನಗೆ ಜೂಡಿ ಮೇಡಂ ಅವರ ಪರಿಚಯ ಆಯಿತು.1996 ನೇ ಇಸವಿಯಲ್ಲಿ ನನ್ನ ಸಂಸ್ಕೃತ ಎಂಎ ಪದವಿ ಮುಗಿದಿತ್ತು.ಫಲಿತಾಂಶ ಬತುವ ಮೊದಲೇ ಶ್ರೀ ರಾಮ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕೆಲಸ ಸಿಕ್ಕಿತ್ತು. ಆದರೆ ಆಗ ನಮ್ಮ ಮನೆ ಮಂಗಳೂರಿನಲ್ಲಿ ಇತ್ತು.ಅಷ್ಟು ದೂರದಿಂದ ಕಲ್ಲಡ್ಕಕ್ಕೆ ಹೋಗಿ ಬರುವುದು ಬಹಳವೇ ಕಷ್ಟದ ವಿಚಾರವಾಗಿತ್ತು.ಆದರೂ ಕೆಲಸ ಬೇಕೇ ಬೇಕು ಎಂಬ ಛಲದಿಂದ ಕೆಲಸಕ್ಕೆ ಹೋಗಿ ಬರುತ್ತಿದ್ದೆ.ಅಲ್ಲಿ ಸೇರಿದ ಎರಡು ಮೂರು ತಿಂಗಳಲ್ಲಿ ನನ್ನ ಎಂಎ ಫಲಿತಾಂಶ ಬಂತು.ಮೊದಲ ರ‍್ಯಾಂಕ್ ಕೂಡ ಬಂತು.ಆ ಸಮಯದಲ್ಲಿ ಶಿಕ್ಷಕ ದಿನಾಚರಣೆ ಕೂಡ ಬಂತು.ಸಾಮಾನ್ಯವಾಗಿ ಶಿಕ್ಷಕ ದಿನಾಚರಣೆಯಂದು ಸಾಧಕ ಶಿಕ್ಷಕರನ್ನು  ಗುರುತಿಸುವ ಸಂಪ್ರದಾಯ ಎಲ್ಲೆಡೆ ಇರುತ್ತದೆ.ಹಾಗಾಗಿ ನನ್ನನ್ನು ಕರೆದು ಒಂದು ಹೂ ಗುಚ್ಛ ನೀಡಿ ಗುರುತಿಸಿಯಾರು ಎಂದು ನಾನು ಭಾವಿಸಿದ್ದೆ.ಆದರೆ ಅಂತಹದ್ದೇನೂ ನಡೆಯಲಿಲ್ಲ. ಸ್ತ್ರೀ ಯರ ಸಾಧನೆಯನ್ನು ಗುರುತಿಸಲು ಅಪಾರ ಔದಾರ್ಯ ಬೇಕು.
ಇದಾಗಿ ಸ್ವಲ್ಪ ಸಮಯದಲ್ಲಿ ಮಂಗಳೂರಿನ ಪ್ರಖ್ಯಾತ ಸಂತ ಅಲೋಶಿಯಸ್ ಕಾಲೇಜಿನಲ್ಲಿ  ಸಂಸ್ಕೃತ ಉಪನ್ಯಾಸಕಿಯಾಗಿದ್ದ ಶಶಿಕಲಾ ಅವರಿಗೆ ಅವರ ಸ್ವಂತ ಊರಿನಲ್ಲಿ ಕೆಲಸ ಸಿಕ್ಕು ಅಲ್ಲಿಒಂದು ಸಂಸ್ಕೃತ ಹುದ್ದೆ ಖಾಲಿಯಾಗುವ ಬಗ್ಗೆ ಅವರು ತಿಳಿಸಿದರು.ತಕ್ಷಣವೇ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ.ಶಿಕಾರಿಪುರ ಕೃಷ್ಣ ಮೂರ್ತಿ ಯವರನ್ನು ಕಂಡು ,ಕಾಲೇಜಿಗೆ ಹೋಗಿ ಆಗ ಪ್ರಾಂಶುಪಾಲರಾಗಿದ್ದ ಪ್ರಶಾಂತ್ ಮಾಡ್ತಾ ಅವರಿಗೆ ಅರ್ಜಿ ಸಲ್ಲಿಸಿದೆ.ನನ್ನ ಬಗ್ಗೆ ಅಪಾರ ಪ್ರೀತಿ ಅಭಿಮಾನ ಹೊಂದಿದ್ದ ಶಿಕಾರಿಪುರ ಅವರು ಯಾವುದೇ ಸಂದರ್ಶನ ಮಾಡದೆ ನೇರವಾಗಿ ಆಯ್ಕೆ ಮಾಡಿದರು.
ಮರುದಿನವೇ ಕೆಲಸಕ್ಕೆ ಹಾಜರಾಗಿ ವರದಿಮಾಡಿಕೊಳ್ಳಲು ಪ್ರಾಂಶುಪಾಲರು ತಿಳಿಸಿದರು.ಅಂತೆಯೇ ಮರುದಿನ ಹೋದೆ.ಅಲ್ಲಿ ಸಂಸ್ಕೃತ ವಿಭಾಗ ಮತ್ತು ಹಿಂದಿ ವಿಭಾಗ ಒಟ್ಟಿಗೆ ಒಂದು ಕೊಠಡಿಯಲ್ಲಿ ಇತ್ತು.
ಆ ದಿನ ಶಿಕಾರಿಪುರ ಕೃಷ್ಣ ಮೂರ್ತಿಯವರು ರಜೆ ಹಾಕಿದ್ದರು.ದೇಶದಲ್ಲಿ ಅತ್ಯುತ್ತಮ ಐದು ಕಾಲೇಜುಗಳಲ್ಲಿ ಒಂದಾಗಿರುವ ಅಲೋಶಿಯಸ್ ಕಾಲೇಜು ಬಹಳ ಪ್ರತಿಷ್ಠಿತ ಸಂಸ್ಥೆ. ನನಗೋ ಮೂರು ನಾಲ್ಕು ತಿಂಗಳು ಕಲ್ಲಡ್ಕ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡಿದ ಅನುಭವ ಬಿಟ್ಟರೆ ಕಾಲೇಜಿನಲ್ಲಿ ಪಾಠ ಮಾಡಿದ ಅನುಭವ ಇರಲಿಲ್ಲ. ಹಾಗಾಗಿ ನಾನು ತೀರಾ ಆತಂಕಕ್ಕೆ ಒಳಗಾಗಿದ್ದೆ.ಹತ್ತು ಹದಿನೈದು ಎಕ್ಕರೆ ಜಾಗದಲ್ಲಿ ಹರಡಿರುವ ಈ ಸಂಸ್ಥೆಯಲ್ಲಿ ಕೊಠಡಿ ಹುಡುಕುವುದು ಕೂಡ ಸಾಹಸದ ವಿಚಾರ.ಹಾಗಾಗಿ ನನಗೆ ಎಲ್ಲಿ ಹೋಗಬೇಕು, ಏನು ಮಾಡಬೇಕೆಂದು ತಿಳಿಯದೆ ದಿಕ್ಕು ತೋಚದೆ ಕಂಗಾಲಾಗಿ ನಿಂತಿದ್ದೆ.ಆಗ ನನ್ನ ಆತಂಕವನ್ನು ಗಮನಿಸಿದವರು.ಅಲ್ಲಿನ ಹಿಂದಿ ಉಪನ್ಯಾಸಕಿ ಜೂಡಿ ಮೇಡಂ. "ಗಾಭರಿಯಾಗಬೇಡಿ,ನೀವೊಬ್ಬ ರ‍್ಯಾಂಕ್ ವಿಜೇತೆ ಎಂಬುದನ್ನು ನೆನಪಿಸಿಕೊಳ್ಳಿ.ಧೈರ್ಯವಾಗಿ ತರಗತಿಗೆ ಹೋಗಿ "ಎಂದು ಹೇಳಿ ನಾನು ಹೋಗ ಬೆಕಾದ ತರಗತಿಯ ಕೊಠಡಿ ಸಂಖ್ಯೆ ತಿಳಿಸಿದರು..ಆ ಸಂಖ್ಯೆಯ ಕೊಠಡಿ ಎಲ್ಲಿದೆಯೆಂದು ಓರ್ವ ವಿದ್ಯಾರ್ಥಿಯಲ್ಲಿ ಕೇಳಿದಾಗ ಆತ ತೋರಿಸಿದ ದಾರಿಯಲ್ಲಿ ಹೋದಾಗ ಗಂಡಸರ ಟಾಯ್ಲೆಟ್ ಸಿಕ್ಕಿತ್ತು. ಆಗ ಅವನು ತಪ್ಪು ದಾರಿ ಹೇಳಿ ತಮಾಷೆ ನೋಡುತ್ತಿದ್ದಾನೆಂದು ತಿಳಿಯಿತು.ಮತ್ತೆ ಹೋದ ದಾರಿಯಲ್ಲಿ ಹಿಂದೆ ಬಂದಾಗ ಜೂಡಿ ಮೇಡಂ ಎದುರಾಗಿ ನನಗೆ ತರಗತಿ ಎಲ್ಲಿದೆ ಎಂಬುದು ಗೊತ್ತಾಗಿಲ್ಲ ಎಂದು ತಿಳಿದು ನನ್ನ ಜೊತೆಗೆ ಬಂದು ವಿದ್ಯಾರ್ಥಿಗಳಿಗೆ ನನ್ನ ಪರಿಚಯವನ್ನು ಮಾಡಿ ಕೊಟ್ಟರು.
ಮಕ್ಕಳು ಅಲೋಶಿಯಸ್ ನಲ್ಲಿದ್ದರೂ ಮಕ್ಕಳೇ,ಸರ್ಕಾರಿ ಕಾಲೇಜಿನಲ್ಲಿ ಇದ್ದರೂ ಮಕ್ಕಳೇ,ಸಹಜವಾಗಿ ಮಕ್ಕಳೊಂದಿಗೆ ಬೆರೆತರೆ ಪ್ರೀತಿಯಿಂದ ಮಾತನಾಡಿದರೆ ಎಳೆಗರುಗಳಂತೆ ನಮಗೆ ಪ್ರೀತಿ ತೋರುತ್ತಾರೆ.ನಮ್ಮನ್ನು ಹಿಂಬಾಲಿಸುತ್ತಾರೆ.ಹಾಗಾಗಿ ನನಗೆ ಮಕ್ಕಳ ‌ಮನಸು ಗೆಲ್ಲುವುದು ಅಷ್ಟೇನೂ ಕಷ್ಟದ ವಿಚಾರವಾಗಲಿಲ್ಲ.ಆದರೂ ವಿದ್ಯಾರ್ಥಿಗಳಿಗೆ ನನ್ನ ಬಗ್ಗೆ ಗೌರವ ಮೂಡಲು ನಾನು ರ‍್ಯಾಂಕ್ ವಿಜೇತೆ ,ಹಾಗೂ ಲೇಖಕಿ ಎಂದು ಪರಿಣಾಮಕಾರಿಯಾಗಿ ಜೂಡಿ ಮೇಡಂ ನನ್ನನ್ನು ಪರಿಚಯಿಸಿರುವುದೇ ಕಾರಣವಾಗಿತ್ತು ಎಂಬುದು ಕೂಡ ಮುಖ್ಯವಾದುದು.
ನಾನಲ್ಲಿ ಸೇರಿದ ಒಂದು ತಿಂಗಳ ಒಳಗೆ ಕಾಲೇಜು ಡೇ ಆಯಿತು.ಅಲ್ಲಿ ಕಾಲೇಜು ಡೇಯಲ್ಲಿ  ಸಾಧನೆ ಮಾಡಿದ ಉಪನ್ಯಾಸಕರನ್ನು ಗೌರವಿಸುವ ಪದ್ಧತಿ ಇತ್ತು. ಆಗ ಅಲ್ಲಿನ  ನನಗೆ ರ‍್ಯಾಂಕ್ ಬಂದಿರುವ ಬಗ್ಗೆ ಪ್ರಾಂಶುಪಾಲರಿಗೆ ತಿಳಿಸಿ ಕಾಲೇಜು ಡೇ ಯಲ್ಲಿ ಗೌರವಿಸುವಂತೆ ಜೂಡಿ ಮೇಡಂ ಮಾಡಿದರು.ವಾಸ್ತವವಾಗಿ ನಾನು ಆ ಕಾಲೇಜಿಗೆ ಸೇರುವ ಮೊದಲೇ ನನ್ನ ಫಲಿತಾಂಶ ಬಂದಿದ್ದು ರ‍್ಯಾಂಕ್ ಕೂಡ ಘೋಷಣೆ ಆಗಿತ್ತು. ಹಾಗಾಗಿ ನನ್ನನ್ನು ಗುರುತಿಸುವ ಅಗತ್ಯವೇನೂ ಇರಲಿಲ್ಲ. ಆದರೆ ಅರ್ಹತೆಯನ್ನು ಗುರುತಿಸುವ ಉದಾರತೆ ಜೂಡಿ ಮೇಡಂ ಅವರಲ್ಲಿ ಇತ್ತು.ಸ್ವಲ್ಪ ಸಮಯದಲ್ಲಿಯೇ ನನಗೆ ಅವರು ತುಂಬಾ ಆತ್ಮೀಯರಾದರು.ಅವರು ನನ್ನನ್ನು ಅವರ ಪರಿಚಿತರಿಗೆ ಪರಿಚಯಿಸುವಾಗಲೆಲ್ಲ ಲಕ್ಷ್ಮೀ ತುಂಬಾ ಪ್ರತಿಭಾವಂತೆ,ಮೊದಲ ರ‍್ಯಾಂಕ್ ಪಡೆದಿದ್ದಾರೆ. ಜೊತೆಗೆ ಒಳ್ಳೆಯ ಬರಹಗಾರ್ತಿ ಎಂದು ಹೇಳುತ್ತಿದ್ದರು.ಇದು ನನ್ನಲ್ಲಿ ಅಪಾರ ಆತ್ಮವಿಶ್ವಾಸ ಬೆಳೆಯಲು ಕಾರಣವಾಯಿತು.
ಅಲ್ಲಿ ಸಂಸ್ಕೃತಕ್ಕೆ ಅರೆಕಾಲಿಕ ತಾತ್ಕಾಲಿಕ ಹುದ್ದೆ ಇತ್ತು. ಹಾಗಾಗಿ ನನಗೆ ಕೆಲಸ ಖಾಯಂ ಆಗಲು ಕಷ್ಟವಿತ್ರು.ಅಂತಹ ಸಂದರ್ಭದಲ್ಲಿ ನನಗೆ ಹಿಂದಿ ಎಂಎ ಮಾಡುವಂತೆ ಜೂಡಿ ಮೇಡಂ ನನಗೆ ಸಲಹೆ ನೀಡಿದರು.ಹಾಗಾಗಿ ನಾನು ಹಿಂದಿ ಎಂಎ ಗೆ ಖಾಸಗಿಯಾಗಿ ಕಟ್ಟಿದೆ.ನನಗೆ ಅರ್ಥವಾಗದ ವಿಷಯಗಳನ್ನು ಜೂಡಿ ಮೇಡಂ ನನಗೆ ತಿಳಿಸಿಕೊಟ್ಟರು.
ಸ್ವಲ್ಪ ಸಮಯಕ್ಕೆ ಸಮಾನ ಕಾರ್ಯಭಾರ ಎಂಬ ನಿಯಮ ಜಾರಿಯಾಗಿ ಅಲ್ಲಿದ್ದ ತಾತ್ಕಾಲಿಕ ಅರೆಕಾಲಿಕ ಹುದ್ದೆಯೂ ರದ್ದಾಯಿತು. ಆಗ ನಾನು ಚಿನ್ಮಯ ಹೈಸ್ಕೂಲಿನಲ್ಲಿ ಸಂಸ್ಕೃತ ಶಿಕ್ಷಕಿಯಾಗಿ  ಸೇರಿದೆ.ಜೊತೆಗೆ ಅಲೋಷಿಯಸ್ ಸಂಜೆ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡಿದೆ.  ಮತ್ತೆ ಎರಡು ಮೂರು ವರ್ಷ ಕಳೆದಾಗ ಅಲೋಶಿಯಸ್ ಪಿಯು ಕಾಲೇಜಿನಲ್ಲಿ ಒಂದು ಸಂಸ್ಕೃತ ಹುದ್ದೆ ಖಾಲಿ ಯಾಯಿತು. ಆಗ ಆಗಿನ ಪ್ರಾಂಶುಪಾಲರಾದ ಸ್ವಿಬರ್ಟ್ ಡಿ ಸಿಲ್ವಾ ಅವರು ನನಗೆ ಫೋನ್ ಮಾಡಿ ನನ್ನನ್ನು ಬರಹೇಳಿ ನನಗೆ ಅಲ್ಲಿ ಸಂಸ್ಕೃತ ಉಪನ್ಯಾಸಕಿ ಹುದ್ದೆಯನ್ನು ಸಂದರ್ಶನ ಮಾಡದೆ ನೀಡಿದರು.ಇದಕ್ಕೂ ಕಾರಣ ಜೂಡಿ ಮೇಡಂ ಮತ್ತು ಅಲೋಶಿಯಸ್ ಸಂಜೆ ಶಾಲೆಯ ಮುಖ್ಯೋಪಾಧ್ಯಾಯರಾದ ಫಾದರ್ ಪ್ರಾನ್ಸಿಸ್ ಅವರು ನನ್ನ ಬಗ್ಗೆ ತುಂಬಾ ಒಳ್ಳೆಯ ಅಭಿಪ್ರಾಯ ನೀಡಿದ್ದು ಕಾರಣವೆಂದು ನನಗೆ ಆನಂತರ ತಿಳಿಯಿತು.
ಆ ಸಮಯಕ್ಕಾಗುವಾಗ ನಾನು ಕನ್ನಡ ಎಂಎ ಪಡೆದಿದ್ದೆ.ಇದನ್ನು ಜೂಡಿ ಮೇಡಂ ಎಲ್ಲರ ಬಳಿ ಹೇಳುತ್ತಾ "ನೋಡುತ್ತಿರಿ ಲಕ್ಷ್ಮೀ ಒಂದಿನ ದೊಡ್ಡ ಸಾಧನೆ ಮಾಡುತ್ತಾರೆ" ಎಂದು ಅಭಿಮಾನದಿಂದ ಹೇಳುತ್ತಿದ್ದರು.
ಅವರ ನಿರೀಕ್ಷೆಯಂತೆ ಬಹು ದೊಡ್ಡ ಸಾಧನೆಯನ್ನು ಮಾಡಲು ನನಗೆ ಸಾಧ್ಯವಾಗಿಲ್ಲ ಆದರೂ ಮಾಡಿದ್ದಷ್ಟಕ್ಕೆ ಅವರ ಬೆಂಬಲದ,ಪ್ರೋತ್ಸಾಹದ,ಅಭಿಮಾನದ ನುಡಿಗಳು ಕೂಡ ಕಾರಣವಾಗಿದೆ ಎಂಬುದನ್ನು ನಾನು‌ ಮರೆಯಲಾರೆ.
ಹೌದು,ಜೂಡಿ ಮೇಡಂ ಅವರಿಗೆ ಬೇರೆಯವರ ಅರ್ಹತೆಯನ್ನು ಗುರುತಿಸುವ ಉದಾರತೆ ಎಲ್ಲಿಂದ ಬಂತು ? ವಜ್ರವನ್ನು ಗುರುತಿಸಲು ವಜ್ರದ ವ್ಯಾಪಾರಿಗೆ ಮಾತ್ರ ಸಾಧ್ಯ,ಗುಜರಿ ಅಂಗಡಿಯವನಿಗೆ ವಜ್ರ ಮತ್ತು ಗಾಜಿನ ತುಂಡು ಎರಡೂ ಒಂದೇ ಆಗಿ ಕಾಣಿಸುತ್ತದೆ.
ಜೂಡಿ ಮೇಡಂ ಅಪೂರ್ವ ಪ್ರತಿಭಾವಂತರು.ಬಡಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಅವರು ಮೊದಲಿಗೆ ಟಿಸಿಎಚ್ ಮಾಡಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು.ಹದಿನೈದು ವರ್ಷಗಳ ಕಾಲ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದುಕೊಂಡು ,ಕೆಲಸ ಮಾಡುತ್ತಲೇ,ಇಬ್ಬರು ಪುಟ್ಟ ಮಕ್ಕಳ ತಾಯಿಯಾಗಿ ಸಂಸಾರವನ್ನು ನಿಭಾಯಿಸುತ್ತಲೇ ಓದಿದರು.ಬಿ ಎ ಮಾಡಿದರು.ನಂತರ ಹಿಂದಿ ಎಂಎಯನ್ನು ರ‍್ಯಾಂಕ್ ಹಾಗೂ ಸುವರ್ಣ ಪದಕಗಳೊಂದಿಗೆ ಪಡೆದರು.ಯುಜಿಸಿ ನಡೆಸುವ National eligibility for lectureship ಮತ್ತು junior fellowship ಪರೀಕ್ಷೆ ಯಲ್ಲಿ ಉತ್ತೀರ್ಣರಾದರು.
ಸ್ವಂತ ಸಾಮರ್ಥ್ಯ ದಿಂದ ಪ್ರತಿಷ್ಠಿತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕಿ ಯಾಗಿ ನಿಯುಕ್ತಿಗೊಂಡರು.ಜೊತೆಗೆ  ಕೌನ್ಸಿಲಿಂಗ್ ನೀಡುವ ಬಗ್ಗೆ ತರಬೇತಿ ಪಡೆದು  ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನೀಡತೊಡಗಿದರು.ಬೇರೆ ಕಡೆ ಕೌಟುಂಬಿಕ ಕೌನ್ಸಿಲಿಂಗ್ ಕೂಡ ನೀಡಿ ಅನೇಕರ ಬಾಳನ್ನು ಹಸನುಗೊಳಿಸಿದರು. ವೈಯುಕ್ತಿಕವಾಗಿ ಕೂಡ ಐವತ್ತರ ಹರೆಯದಲ್ಲಿ  ಮಾನವೀಯ ಸಂಬಂಧಗಳ ಕುರಿತು ಸಂಶೋಧನಾತ್ಕ ಅಧ್ಯಯನ ಮಾಡಿ ಮಹಾ ಪ್ರಬಂಧ ಸಲ್ಲಿಸಿ ಡಾಕ್ಟರೇಟ್ ಪದವಿಯನ್ನು ಕೂಡ ಪಡೆದರು.
ತನ್ನ ವೃತ್ತಿ ಜೀವನದ ಕೊನೆಯ ಐದು ವರ್ಷಗಳ ಕಾಲ ಅತ್ಯಂತ ಪ್ರತಿಷ್ಠಿತ ಸಂತ ಅಲೋಶಿಯಸ್ ಕಾಲೇಜಿನ ಉಪಪ್ರಾಂಶುಪಾಲರಾಗಿ ಕೆಲಸ ಮಾಡಿ ಎಲ್ಲರ ಒಲವನ್ನು ಗಳಿಸಿದರು.ಸಂಸ್ಥೆಗೆ ಅನನ್ಯ ಕೊಡುಗೆಯನ್ನು ನೀಡಿದರು
ಇವರು ಉತ್ತಮ ಬರಹಗಾರ್ತಿ  ಕೂಡ ಅಗಿದ್ದು ಕೊಂಕಣಿ ಭಾಷೆಯ ರಾಖ್ಣೋ ಎಂಬ ಪತ್ರಿಕೆಯ ಅಂಕಣಗಾರರು ಆಗಿದ್ದಾರೆ.ಅನೇಕ ಕಥೆಗಳನ್ನು ಬರೆದಿದ್ದು ಇವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.ಕಥಾಸಂಕಲನಗಳು ಕೂಡ ಪ್ರಕಟವಾಗಿವೆ.
ಶಾರೀರಿಕವಾಗಿ ತೀವ್ರವಾದ ನೋವಿನ ವಾತದ ಸಮಸ್ಯೆಯನ್ನು ಎದುರಿಸುತ್ತಲೇ ಇವರು ಮಾಡಿದ ಸಾಧನೆ ಅತ್ಯದ್ಭುತ ವಾದುದು.ಓರ್ವ ಮಹಿಳೆಯಾಗಿ ಯಾವುದೇ ಬೆಂಬಲವಿಲ್ಲದೆಯೆ,ಯಾರದೇ ಪ್ರಭಾವವೂ ಇಲ್ಲದೆ  ಪ್ರಾಥಮಿಕ ಶಾಲೆಯಿಂದ  ದೇಶದಲ್ಲಿಯೇ ಪ್ರತಿಷ್ಠಿತವಾಗಿರುವ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾಗಿ ನಿಯುಕ್ತರಾಗುವಷ್ಟರ ಮಟ್ಟಿನ ಉನ್ನತ ಮಟ್ಟಕ್ಕೆ ಏರಿದ  ಇವರ ಸ್ವ ಸಾಮರ್ಥ್ಯ ,ತಾಳ್ಮೆ,,ಪರಿಶ್ರಮ, ಶ್ರದ್ಧೆ ಯಾರು ಕೂಡ ಮೆಚ್ಚುವಂಥಹಾದ್ದೇ ಆಗಿದೆ.ಎಲ್ಲಕ್ಕಿಂತ ಹೆಚ್ಚು ನನ್ನಂತಹ ಸಾಮಾನ್ಯಳನ್ನೂ ಗುರುತಿಸಿ ಉತ್ತೇಜಿಸುವ ಅವರು ಉದಾರ ಅಂತಃಕರಣಕ್ಕೆ ಸಾಟಿಯೇ ಇಲ್ಲ .

http://shikshanaloka.blogspot.in/2017/12/27.html?m=1

ಕ್ರಿಸ್ಮಸ್ ಹಬ್ಬ ಬಂದಾಗ ತಕ್ಷಣಕ್ಕೆ ನೆನಪಾದವರು ಜೂಡಿ ಮೇಡಂ.( ಡಾ.ವೆರೋನಿಕಾ ಜೂಡಿ ಕಾರ್ಲೋ ಪಿಂಟೋ)ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ನನಗೆ ಜೂಡಿ ಮೇಡಂ ಅವರ ಪರಿಚಯ ಆಯಿತು.1996 ನೇ ಇಸವಿಯಲ್ಲಿ ನನ್ನ ಸಂಸ್ಕೃತ ಎಂಎ ಪದವಿ ಮುಗಿದಿತ್ತು.ಫಲಿತಾಂಶ ಬತುವ ಮೊದಲೇ ಶ್ರೀ ರಾಮ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕೆಲಸ ಸಿಕ್ಕಿತ್ತು. ಆದರೆ ಆಗ ನಮ್ಮ ಮನೆ ಮಂಗಳೂರಿನಲ್ಲಿ ಇತ್ತು.ಅಷ್ಟು ದೂರದಿಂದ ಕಲ್ಲಡ್ಕಕ್ಕೆ ಹೋಗಿ ಬರುವುದು ಬಹಳವೇ ಕಷ್ಟದ ವಿಚಾರವಾಗಿತ್ತು.ಆದರೂ ಕೆಲಸ ಬೇಕೇ ಬೇಕು ಎಂಬ ಛಲದಿಂದ ಕೆಲಸಕ್ಕೆ ಹೋಗಿ ಬರುತ್ತಿದ್ದೆ.ಅಲ್ಲಿ ಸೇರಿದ ಎರಡು ಮೂರು ತಿಂಗಳಲ್ಲಿ ನನ್ನ ಎಂಎ ಫಲಿತಾಂಶ ಬಂತು.ಮೊದಲ ರ‍್ಯಾಂಕ್ ಕೂಡ ಬಂತು.ಆ ಸಮಯದಲ್ಲಿ ಶಿಕ್ಷಕ ದಿನಾಚರಣೆ ಕೂಡ ಬಂತು.ಸಾಮಾನ್ಯವಾಗಿ ಶಿಕ್ಷಕ ದಿನಾಚರಣೆಯಂದು ಸಾಧಕ ಶಿಕ್ಷಕರನ್ನು  ಗುರುತಿಸುವ ಸಂಪ್ರದಾಯ ಎಲ್ಲೆಡೆ ಇರುತ್ತದೆ.ಹಾಗಾಗಿ ನನ್ನನ್ನು ಕರೆದು ಒಂದು ಹೂ ಗುಚ್ಛ ನೀಡಿ ಗುರುತಿಸಿಯಾರು ಎಂದು ನಾನು ಭಾವಿಸಿದ್ದೆ.ಆದರೆ ಅಂತಹದ್ದೇನೂ ನಡೆಯಲಿಲ್ಲ. ಸ್ತ್ರೀ ಯರ ಸಾಧನೆಯನ್ನು ಗುರುತಿಸಲು ಅಪಾರ ಔದಾರ್ಯ ಬೇಕು.
ಇದಾಗಿ ಸ್ವಲ್ಪ ಸಮಯದಲ್ಲಿ ಮಂಗಳೂರಿನ ಪ್ರಖ್ಯಾತ ಸಂತ ಅಲೋಶಿಯಸ್ ಕಾಲೇಜಿನಲ್ಲಿ  ಸಂಸ್ಕೃತ ಉಪನ್ಯಾಸಕಿಯಾಗಿದ್ದ ಶಶಿಕಲಾ ಅವರಿಗೆ ಅವರ ಸ್ವಂತ ಊರಿನಲ್ಲಿ ಕೆಲಸ ಸಿಕ್ಕು ಅಲ್ಲಿಒಂದು ಸಂಸ್ಕೃತ ಹುದ್ದೆ ಖಾಲಿಯಾಗುವ ಬಗ್ಗೆ ಅವರು ತಿಳಿಸಿದರು.ತಕ್ಷಣವೇ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ.ಶಿಕಾರಿಪುರ ಕೃಷ್ಣ ಮೂರ್ತಿ ಯವರನ್ನು ಕಂಡು ,ಕಾಲೇಜಿಗೆ ಹೋಗಿ ಆಗ ಪ್ರಾಂಶುಪಾಲರಾಗಿದ್ದ ಪ್ರಶಾಂತ್ ಮಾಡ್ತಾ ಅವರಿಗೆ ಅರ್ಜಿ ಸಲ್ಲಿಸಿದೆ.ನನ್ನ ಬಗ್ಗೆ ಅಪಾರ ಪ್ರೀತಿ ಅಭಿಮಾನ ಹೊಂದಿದ್ದ ಶಿಕಾರಿಪುರ ಅವರು ಯಾವುದೇ ಸಂದರ್ಶನ ಮಾಡದೆ ನೇರವಾಗಿ ಆಯ್ಕೆ ಮಾಡಿದರು.
ಮರುದಿನವೇ ಕೆಲಸಕ್ಕೆ ಹಾಜರಾಗಿ ವರದಿಮಾಡಿಕೊಳ್ಳಲು ಪ್ರಾಂಶುಪಾಲರು ತಿಳಿಸಿದರು.ಅಂತೆಯೇ ಮರುದಿನ ಹೋದೆ.ಅಲ್ಲಿ ಸಂಸ್ಕೃತ ವಿಭಾಗ ಮತ್ತು ಹಿಂದಿ ವಿಭಾಗ ಒಟ್ಟಿಗೆ ಒಂದು ಕೊಠಡಿಯಲ್ಲಿ ಇತ್ತು.
ಆ ದಿನ ಶಿಕಾರಿಪುರ ಕೃಷ್ಣ ಮೂರ್ತಿಯವರು ರಜೆ ಹಾಕಿದ್ದರು.ದೇಶದಲ್ಲಿ ಅತ್ಯುತ್ತಮ ಐದು ಕಾಲೇಜುಗಳಲ್ಲಿ ಒಂದಾಗಿರುವ ಅಲೋಶಿಯಸ್ ಕಾಲೇಜು ಬಹಳ ಪ್ರತಿಷ್ಠಿತ ಸಂಸ್ಥೆ. ನನಗೋ ಮೂರು ನಾಲ್ಕು ತಿಂಗಳು ಕಲ್ಲಡ್ಕ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡಿದ ಅನುಭವ ಬಿಟ್ಟರೆ ಕಾಲೇಜಿನಲ್ಲಿ ಪಾಠ ಮಾಡಿದ ಅನುಭವ ಇರಲಿಲ್ಲ. ಹಾಗಾಗಿ ನಾನು ತೀರಾ ಆತಂಕಕ್ಕೆ ಒಳಗಾಗಿದ್ದೆ.ಹತ್ತು ಹದಿನೈದು ಎಕ್ಕರೆ ಜಾಗದಲ್ಲಿ ಹರಡಿರುವ ಈ ಸಂಸ್ಥೆಯಲ್ಲಿ ಕೊಠಡಿ ಹುಡುಕುವುದು ಕೂಡ ಸಾಹಸದ ವಿಚಾರ.ಹಾಗಾಗಿ ನನಗೆ ಎಲ್ಲಿ ಹೋಗಬೇಕು, ಏನು ಮಾಡಬೇಕೆಂದು ತಿಳಿಯದೆ ದಿಕ್ಕು ತೋಚದೆ ಕಂಗಾಲಾಗಿ ನಿಂತಿದ್ದೆ.ಆಗ ನನ್ನ ಆತಂಕವನ್ನು ಗಮನಿಸಿದವರು.ಅಲ್ಲಿನ ಹಿಂದಿ ಉಪನ್ಯಾಸಕಿ ಜೂಡಿ ಮೇಡಂ. ಗಾಭರಿಯಾಗಬೇಡಿ,ನೀವೊಬ್ಬ ರ‍್ಯಾಂಕ್ ವಿಜೇತೆ ಎಂಬುದನ್ನು ನೆನಪಿಸಿಕೊಳ್ಳಿ.ಧೈರ್ಯವಾಗಿ ತರಗತಿಗೆ ಹೋಗಿ ಎಂದು ಹೇಳಿ ನಾನು ಹೋಗ ಬೆಕಾದ ತರಗತಿಯ ಕೊಠಡಿ ಸಂಖ್ಯೆ ತಿಳಿಸಿದರು..ಆ ಸಂಖ್ಯೆಯ ಕೊಠಡಿ ಎಲ್ಲಿದೆಯೆಂದು ಓರ್ವ ವಿದ್ಯಾರ್ಥಿಯಲ್ಲಿ ಕೇಳಿದಾಗ ಆತ ತೋರಿಸಿದ ದಾರಿಯಲ್ಲಿ ಹೋದಾಗ ಗಂಡಸರ ಟಾಯ್ಲೆಟ್ ಸಿಕ್ಕಿತ್ತು. ಆಗ ಅವನು ತಪ್ಪು ದಾರಿ ಹೇಳಿ ತಮಾಷೆ ನೋಡುತ್ತಿದ್ದಾನೆಂದು ತಿಳಿಯಿತು.ಮತ್ತೆ ಹೋದ ದಾರಿಯಲ್ಲಿ ಹಿಂದೆ ಬಂದಾಗ ಜೂಡಿ ಮೇಡಂ ಎದುರಾಗಿ ನನಗೆ ತರಗತಿ ಎಲ್ಲಿದೆ ಎಂಬುದು ಗೊತ್ತಾಗಿಲ್ಲ ಎಂದು ತಿಳಿದು ನನ್ನ ಜೊತೆಗೆ ಬಂದು ವಿದ್ಯಾರ್ಥಿಗಳಿಗೆ ನನ್ನ ಪರಿಚಯವನ್ನು ಮಾಡಿ ಕೊಟ್ಟರು.
ಮಕ್ಕಳು ಅಲೋಶಿಯಸ್ ನಲ್ಲಿದ್ದರೂ ಮಕ್ಕಳೇ,ಸರ್ಕಾರಿ ಕಾಲೇಜಿನಲ್ಲಿ ಇದ್ದರೂ ಮಕ್ಕಳೇ,ಸಹಜವಾಗಿ ಮಕ್ಕಳೊಂದಿಗೆ ಬೆರೆತರೆ ಪ್ರೀತಿಯಿಂದ ಮಾತನಾಡಿದರೆ ಎಳೆಗರುಗಳಂತೆ ನಮಗೆ ಪ್ರೀತಿ ತೋರುತ್ತಾರೆ.ನಮ್ಮನ್ನು ಹಿಂಬಾಲಿಸುತ್ತಾರೆ.ಹಾಗಾಗಿ ನನಗೆ ಮಕ್ಕಳ ‌ಮನಸು ಗೆಲ್ಲುವುದು ಅಷ್ಟೇನೂ ಕಷ್ಟದ ವಿಚಾರವಾಗಲಿಲ್ಲ.ಆದರೂ ವಿದ್ಯಾರ್ಥಿಗಳಿಗೆ ನನ್ನ ಬಗ್ಗೆ ಗೌರವ ಮೂಡಲು ನಾನು ರ‍್ಯಾಂಕ್ ವಿಜೇತೆ ,ಹಾಗೂ ಲೇಖಕಿ ಎಂದು ಪರಿಣಾಮಕಾರಿಯಾಗಿ ಜೂಡಿ ಮೇಡಂ ನನ್ನನ್ನು ಪರಿಚಯಿಸಿರುವುದೇ ಕಾರಣವಾಗಿತ್ತು ಎಂಬುದು ಕೂಡ ಮುಖ್ಯವಾದುದು.
ನಾನಲ್ಲಿ ಸೇರಿದ ಒಂದು ತಿಂಗಳ ಒಳಗೆ ಕಾಲೇಜು ಡೇ ಆಯಿತು.ಅಲ್ಲಿ ಕಾಲೇಜು ಡೇಯಲ್ಲಿ  ಸಾಧನೆ ಮಾಡಿದ ಉಪನ್ಯಾಸಕರನ್ನು ಗೌರವಿಸುವ ಪದ್ಧತಿ ಇತ್ತು. ಆಗ ಅಲ್ಲಿನ  ನನಗೆ ರ‍್ಯಾಂಕ್ ಬಂದಿರುವ ಬಗ್ಗೆ ಪ್ರಾಂಶುಪಾಲರಿಗೆ ತಿಳಿಸಿ ಕಾಲೇಜು ಡೇ ಯಲ್ಲಿ ಗೌರವಿಸುವಂತೆ ಜೂಡಿ ಮೇಡಂ ಮಾಡಿದರು.ವಾಸ್ತವವಾಗಿ ನಾನು ಆ ಕಾಲೇಜಿಗೆ ಸೇರುವ ಮೊದಲೇ ನನ್ನ ಫಲಿತಾಂಶ ಬಂದಿದ್ದು ರ‍್ಯಾಂಕ್ ಕೂಡ ಘೋಷಣೆ ಆಗಿತ್ತು. ಹಾಗಾಗಿ ನನ್ನನ್ನು ಗುರುತಿಸುವ ಅಗತ್ಯವೇನೂ ಇರಲಿಲ್ಲ. ಆದರೆ ಅರ್ಹತೆಯನ್ನು ಗುರುತಿಸುವ ಉದಾರತೆ ಜೂಡಿ ಮೇಡಂ ಅವರಲ್ಲಿ ಇತ್ತು.ಸ್ವಲ್ಪ ಸಮಯದಲ್ಲಿಯೇ ನನಗೆ ಅವರು ತುಂಬಾ ಆತ್ಮೀಯರಾದರು.ಅವರು ನನ್ನನ್ನು ಅವರ ಪರಿಚಿತರಿಗೆ ಪರಿಚಯಿಸುವಾಗಲೆಲ್ಲ ಲಕ್ಷ್ಮೀ ತುಂಬಾ ಪ್ರತಿಭಾವಂತೆ,ಮೊದಲ ರ‍್ಯಾಂಕ್ ಪಡೆದಿದ್ದಾರೆ. ಜೊತೆಗೆ ಒಳ್ಳೆಯ ಬರಹಗಾರ್ತಿ ಎಂದು ಹೇಳುತ್ತಿದ್ದರು.ಇದು ನನ್ನಲ್ಲಿ ಅಪಾರ ಆತ್ಮವಿಶ್ವಾಸ ಬೆಳೆಯಲು ಕಾರಣವಾಯಿತು.
ಅಲ್ಲಿ ಸಂಸ್ಕೃತಕ್ಕೆ ಅರೆಕಾಲಿಕ ತಾತ್ಕಾಲಿಕ ಹುದ್ದೆ ಇತ್ತು. ಹಾಗಾಗಿ ನನಗೆ ಕೆಲಸ ಖಾಯಂ ಆಗಲು ಕಷ್ಟವಿತ್ರು.ಅಂತಹ ಸಂದರ್ಭದಲ್ಲಿ ನನಗೆ ಹಿಂದಿ ಎಂಎ ಮಾಡುವಂತೆ ಜೂಡಿ ಮೇಡಂ ನನಗೆ ಸಲಹೆ ನೀಡಿದರು.ಹಾಗಾಗಿ ನಾನು ಹಿಂದಿ ಎಂಎ ಗೆ ಖಾಸಗಿಯಾಗಿ ಕಟ್ಟಿದೆ.ನನಗೆ ಅರ್ಥವಾಗದ ವಿಷಯಗಳನ್ನು ಜೂಡಿ ಮೇಡಂ ನನಗೆ ತಿಳಿಸಿಕೊಟ್ಟರು.
ಸ್ವಲ್ಪ ಸಮಯಕ್ಕೆ ಸಮಾನ ಕಾರ್ಯಭಾರ ಎಂಬ ನಿಯಮ ಜಾರಿಯಾಗಿ ಅಲ್ಲಿದ್ದ ತಾತ್ಕಾಲಿಕ ಅರೆಕಾಲಿಕ ಹುದ್ದೆಯೂ ರದ್ದಾಯಿತು. ಆಗ ನಾನು ಚಿನ್ಮಯ ಹೈಸ್ಕೂಲಿನಲ್ಲಿ ಸಂಸ್ಕೃತ ಶಿಕ್ಷಕಿಯಾಗಿ  ಸೇರಿದೆ.ಮತ್ತೆ ಎರಡು ಮೂರು ವರ್ಷ ಕಳೆದಾಗ ಅಲೋಶಿಯಸ್ ಪಿಯು ಕಾಲೇಜಿನಲ್ಲಿ ಒಂದು ಸಂಸ್ಕೃತ ಹುದ್ದೆ ಖಾಲಿ ಯಾಯಿತು. ಆಗ ಆಗುನ ಪ್ರಾಂಶುಪಾಲರಾದ ಸ್ವಿಬರ್ಟ್ ಡಿ ಸಿಲ್ವಾ ಅವರು ನನಗೆ ಫೋನ್ ಮಾಡಿ ನನ್ನನ್ನು ಬರಹೇಳಿ ನನಗೆ ಅಲ್ಲಿ ಸಂಸ್ಕೃತ ಉಪನ್ಯಾಸಕಿ ಹುದ್ದೆಯನ್ನು ಸಂದರ್ಶನ ಮಾಡದೆ ನೀಡಿದರು.ಇದಕ್ಕೂ ಕಾರಣ ಜೂಡಿ ಮೇಡಂ ಮತ್ತು ಅಲೋಶಿಯಸ್ ಸಂಜೆ ಶಾಲೆಯ ಮುಖ್ಯೋಪಾಧ್ಯಾಯರಾದ ಫಾದರ್ ಪ್ರಾನ್ಸಿಸ್ ಅವರು ನನ್ನ ಬಗ್ಗೆ ತುಂಬಾ ಒಳ್ಳೆಯ ಅಭಿಪ್ರಾಯ ನೀಡಿದ್ದು ಕಾರಣವೆಂದು ನನಗೆ ಆನಂತರ ತಿಳಿಯಿತು.
ಆ ಸಮಯಕ್ಕಾಗುವಾಗ ನಾನು ಕನ್ನಡ ಎಂಎ ಪಡೆದಿದ್ದೆ.ಇದನ್ನು ಜೂಡಿ ಮೇಡಂ ಎಲ್ಲರ ಬಳಿ ಹೇಳುತ್ತಾ "ನೋಡುತ್ತಿರಿ ಲಕ್ಷ್ಮೀ ಒಂದಿನ ದೊಡ್ಡ ಸಾಧನೆ ಮಾಡುತ್ತಾರೆ" ಎಂದು ಅಭಿಮಾನದಿಂದ ಹೇಳುತ್ತಿದ್ದರು.
ಅವರ ನಿರೀಕ್ಷೆಯಂತೆ ಬಹು ದೊಡ್ಡ ಸಾಧನೆವಮಾಡಲು ನನಗೆ ಸಾಧ್ಯವಾಗಿಲ್ಲ ಆದರೂ ಮಾಡಿದ್ದಷ್ಟಕ್ಕೆ ಅವರ ಬೆಂಬಲದ,ಪ್ರೋತ್ಸಾಹದ,ಅಭಿಮಾನದ ನುಡಿಗಳು ಕೂಡ ಕಾರಣವಾಗಿದೆ ಎಂಬುದನ್ನು ನಾನು‌ ಮರೆಯಲಾರೆ.
ಹೌದು,ಜೂಡಿ ಮೇಡಂ ಅವರಿಗೆ ಬೇರೆಯವರ ಅರ್ಹತೆಯನ್ನು ಗುರುತಿಸುವ ಉದಾರತೆ ಎಲ್ಲಿಂದ ಬಂತು ? ವಜ್ರವನ್ನು ಗುರುತಿಸಲು ವಜ್ರದ ವ್ಯಾಪಾರಿಗೆ ಮಾತ್ರ ಸಾಧ್ಯ,ಗುಜರಿ ಅಂಗಡಿಯವನಿಗೆ ವಜ್ರ ಮತ್ತು ಗಾಜಿನ ತುಂಡು ಎರಡೂ ಒಂದೇ ಆಗಿ ಕಾಣಿಸುತ್ತದೆ.
ಜೂಡಿ ಮೇಡಂ ಅಪೂರ್ವ ಪ್ರತಿಭಾವಂತರು.ಬಡಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಅವರು ಮೊದಲಿಗೆ ಟಿಸಿಎಚ್ ಮಾಡಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು.ಹದಿನೈದು ವರ್ಷಗಳ ಕಾಲ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದುಕೊಂಡು ,ಕೆಲಸ ಮಾಡುತ್ತಲೇ,ಇಬ್ಬರು ಪುಟ್ಟ ಮಕ್ಕಳ ತಾಯಿಯಾಗಿ ಸಂಸಾರವನ್ನು ನಿಭಾಯಿಸುತ್ತಲೇ ಓದಿದರು.ಬಿ ಎ ಮಾಡಿದರು.ನಂತರ ಹಿಂದಿ ಎಂಎಯನ್ನು ರ‍್ಯಾಂಕ್ ಹಾಗೂ ಸುವರ್ಣ ಪದಕಗಳೊಂದಿಗೆ ಪಡೆದರು.ಯುಜಿಸಿ ನಡೆಸುವ National eligibility for lectureship ಮತ್ತು junior fellowship ಪರೀಕ್ಷೆ ಯಲ್ಲಿ ಉತ್ತೀರ್ಣರಾದರು.
ಸ್ವಂತ ಸಾಮರ್ಥ್ಯ ದಿಂದ ಪ್ರತಿಷ್ಠಿತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕಿ ಯಾಗಿ ನಿಯುಕ್ತಿಗೊಂಡರು.ಜೊತೆಗೆ  ಕೌನ್ಸಿಲಿಂಗ್ ನೀಡುವ ಬಗ್ಗೆ ತರಬೇತಿ ಪಡೆದು  ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನೀಡತೊಡಗಿದರು.ಬೇರೆ ಕಡೆ ಕೌಟುಂಬಿಕ ಕೌನ್ಸಿಲಿಂಗ್ ಕೂಡ ನೀಡಿ ಅನೇಕರ ಬಾಳನ್ನು ಹಸನುಗೊಳಿಸಿದರು. ವೈಯುಕ್ತಿಕವಾಗಿ ಕೂಡ ಐವತ್ತರ ಹರೆಯದಲ್ಲಿ  ಮಾನವೀಯ ಸಂಬಂಧಗಳ ಕುರಿತು ಸಂಶೋಧನಾತ್ಕ ಅಧ್ಯಯನ ಮಾಡಿ ಮಹಾ ಪ್ರಬಂಧ ಸಲ್ಲಿಸಿ ಡಾಕ್ಟರೇಟ್ ಪದವಿಯನ್ನು ಕೂಡ ಪಡೆದರು.
ತನ್ನ ವೃತ್ತಿ ಜೀವನದ ಕೊನೆಯ ಐದು ವರ್ಷಗಳ ಕಾಲ ಅತ್ಯಂತ ಪ್ರತಿಷ್ಠಿತ ಸಂತ ಅಲೋಶಿಯಸ್ ಕಾಲೇಜಿನ ಉಪಪ್ರಾಂಶುಪಾಲರಾಗಿ ಕೆಲಸ ಮಾಡಿ ಎಲ್ಲರ ಒಲವನ್ನು ಗಳಿಸಿದರು.ಸಂಸ್ಥೆಗೆ ಅನನ್ಯ ಕೊಡುಗೆಯನ್ನು ನೀಡಿದರು
ಇವರು ಉತ್ತಮ ಬರಹಗಾರ್ತಿ  ಕೂಡ ಅಗಿದ್ದು ಕೊಂಕಣಿ ಭಾಷೆಯ ರಾಖ್ಣೋ ಎಂಬ ಪತ್ರಿಕೆಯ ಅಂಕಣಗಾರರು ಆಗಿದ್ದಾರೆ.ಅನೇಕ ಕಥೆಗಳನ್ನು ಬರೆದಿದ್ದು ಇವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.ಕಥಾಸಂಕಲನಗಳು ಕೂಡ ಪ್ರಕಟವಾಗಿವೆ.
ಶಾರೀರಿಕವಾಗಿ ತೀವ್ರವಾದ ನೋವಿನ ವಾತದ ಸಮಸ್ಯೆಯನ್ನು ಎದುರಿಸುತ್ತಲೇ ಇವರು ಮಾಡಿದ ಸಾಧನೆ ಅತ್ಯದ್ಭುತ ವಾದುದು.ಓರ್ವ ಮಹಿಳೆಯಾಗಿ ಯಾವುದೇ ಬೆಂಬಲವಿಲ್ಲದೆಯೆ,ಯಾರದೇ ಪ್ರಭಾವವೂ ಇಲ್ಲದೆ  ಪ್ರಾಥಮಿಕ ಶಾಲೆಯಿಂದ  ದೇಶದಲ್ಲಿಯೇ ಪ್ರತಿಷ್ಠಿತವಾಗಿರುವ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾಗಿ ನಿಯುಕ್ತರಾಗುವಷ್ಟರ ಮಟ್ಟಿನ ಉನ್ನತ ಮಟ್ಟಕ್ಕೆ ಏರಿದ  ಇವರ ಸ್ವ ಸಾಮರ್ಥ್ಯ ,ತಾಳ್ಮೆ,,ಪರಿಶ್ರಮ, ಶ್ರದ್ಧೆ ಯಾರು ಕೂಡ ಮೆಚ್ಚುವಂಥಹಾದ್ದೇ ಆಗಿದೆ.ಎಲ್ಲಕ್ಕಿಂತ ಹೆಚ್ಚು ನನ್ನಂತಹ ಸಾಮಾನ್ಯಳನ್ನೂ ಗುರುತಿಸಿ ಉತ್ತೇಜಿಸುವ ಅವರು ಉದಾರ ಅಂತಃಕರಣಕ್ಕೆ ಸಾಟಿಯೇ ಇಲ್ಲ .

Friday 15 December 2017

ಉದಾತ್ತ ಮನಸಿನ ಪೂಜಾ ತಿಂಡಿ ಮನೆಯ ಸದಾಶಿವ ಶೆಟ್ಟಿ - ಡಾ.ಲಕ್ಷ್ಮೀ ಜಿ ಪ್ರಸಾದ

ಬೆಂಗಳೂರು ಯುನಿವರ್ಸಿಟಿ ಕ್ವಾರ್ಟರ್ಸ್ ಬಳಿ ಉಳ್ಳಾಲು ಮುಖ್ಯ ರಸ್ತೆಯ ಆರಂಭದಲ್ಲಿ ಒಂದು ಚಿಕ್ಕ ಹೋಟೆಲ್ ಇದೆ.ಹೆಸರು ಪೂಜಾ ತಿಂಡಿ ಮನೆ.ಇದು ಇತ್ತೀಚೆಗೆ ಎರಡು ಮೂರು ತಿಂಗಳ ಮೊದಲು ಆರಂಭವಾಯಿತು.ಇಲ್ಲಿ ಶುಚಿ ರುಚಿಯಾದ ಊಟ ತಿಂಡಿಗಳು ಕೈಗೆಡಕುವ ಬೆಲೆಯಲ್ಲಿ ಲಭ್ಯವಿವೆ.ರುಚಿ ಜೊತೆಗೆ ಶುಚಿತ್ವಕ್ಕೂ ಇಲ್ಲಿ ಆದ್ಯತೆ ಕೊಡುತ್ತಾರೆ. ನನಗೆ ಇಲ್ಲಿನ ತಿಂಡಿಗಳು ಇಷ್ಟವಾಗಿವೆ.ನಾನು ಇಲ್ಲಿನ ಖಾಯಂ ಗ್ರಾಹಕಿ  .ಊಟ ತಿಂಡಿಗಳನ್ನು ಶುಚಿ ರುಚಿಯಾಗಿ ನೀಡುವ ಹಲವು ಉಪಾಹಾರ ಮಂದಿರಗಳಿವೆ. ಆದರೆ ಇಲ್ಲಿ  ನನ್ನ ಗಮನ ಸೆಳೆದದ್ದು  ಇದರ ಮಾಲಿಕರ ವ್ಯಕ್ತಿತ್ವ,ಉದಾರತೆ.
ಒಂದು ದಿನ ಶನಿವಾರ ಮಧ್ಯಾಹ್ನ ನಾನು ಪೂಜಾ ತಿಂಡಿ‌ಮನೆಗೆ ತಿಂಡಿ ಕಟ್ಟಿಸಿಕೊಂಡು ಹೋಗಲು ಬಂದಿದ್ದೆ.ಆಗ ಅಲ್ಲಿಗೆ ವಯಸ್ಸಾದ ಓರ್ವ ಭಿಕ್ಷುಕಿ ಬಂದಳು.ಅವಳಲ್ಲಿ ಊಟ ಮಾಡುತ್ತೀಯಾ ಎಂದು ಸದಾಶಿವ ಶೆಟ್ಟಿ ಅವರು ಕೇಳಿ ಅವರಿಗೆ ಅನ್ನ ಸಾಂಬಾರ್ ಕಟ್ಟಿ ಕೊಟ್ಟು ಎರಡು ಬಜ್ಜಿಯನ್ನು ಕೂಡ ನೀಡಿದರು.ಆಕೆಯ ಕೈಯಿಂದ ದುಡ್ಡು ತಗೊಂಡಿರಲಿಲ್ಕ.ಆಗ ನಾನು ನಾನು ಯಾವಾಗಲೂ ಇವರಿಗೆ ಹೀಗೆ ಉಚಿತವಾಗಿ ಊಟ ಕೊಡುತ್ತೀರಾ ಎಂದು  ಕೇಳಿದೆ.ಆಗ ಅವರು ಹೌದು,ಇವರಿಗೆ ಮಾತ್ರವಲ್ಲ, ಹೀಗೆ ವಯಸ್ಸಾಗಿ ಭಿಕ್ಷೆ ಬೇಡುವವರು ಬಂದರೆ ಅವರಿಗೆಲ್ಲರಿಗೂ ಉಚಿತವಾಗಿ ಊಟ ನೀಡುತ್ತೇವೆ ಎಂದು ಹೇಳಿದರು.ಪ್ರತಿ ದಿನ  ಕನಿಷ್ಟ ಮೂರು  ನಾಲ್ಕು  ಇಂತಹವರು ಬರುತ್ತಾರೆ.ಅವರಿಗೆಲ್ಲರಿಗೂ ಇವರು ಉಚಿತವಾಗಿ ಊಟ ನೀಡುತ್ತಾರೆ.
ನಾನು ಯಾರಿಗೂ ದುಡ್ಡಿನ ರೂಪದಲ್ಲಿ ಭಿಕ್ಷೆ ನೀಡುವುದಿಲ್ಲ. ಆದರೆ ಊಟದ ಸಮಯದಲ್ಲಿ ಬಂದ ಯಾರಿಗೇ ಆದರೂ ಊಟ ನೀಡುತ್ತೇನೆ.ಎಷ್ಟೇ ಜನ ಬಂದರೂ ನೀಡುತ್ತೇನೆ " ಎಂದವರು ಹೇಳುತ್ತಾರೆ.
ಆದರ್ಶದ ಸಾವಿರ ಮಾತುಗಳನ್ನು ಆಡಬಹುದು. ಆದರೆ ಕಾರ್ಯರೂಪಕ್ಕೆ ತರುವುದು ಕಷ್ಟದ ವಿಚಾರ. ಕಟ್ಟದ ಮೇಲೆ ಕಟ್ಟದ ಮನೆ ಮೇಲೆ ಮನೆ ,ಸೈಟ್ ಗಳ ಕೊಂಡು ಕಟ್ಟುತ್ತಾ ಹತ್ತು ತಲೆಮಾರು ಉಂಡರೂ ಕರಗದಷ್ಟು ಆಸ್ತಿ ಕೂಡಿಟ್ಟರೂ ಇನ್ನೂ ಸಾಲದೆಂದು ದುಡ್ಡಿನ ಹಿಂದೆ ಸಾಗುವ ಜನರ ನಡುವೆ ಸದಾ ಶಿವ ಶೆಟ್ಟಿ ಯವರು ತಮ್ಮ ಉದಾರತೆಯಿಂದಾಗಿ ವಿಶಿಷ್ಟರಾಗಿ ಕಾಣುತ್ತಾರೆ.

ಮೋಜು ಮಸ್ತಿ ಯಲ್ಲಿ ಮುಳುಗಿರುವ ,ಗೊತ್ತು ಗುರಿಯಿಲ್ಲದೆ ಸಾಗುತ್ತಿರುವ ಇಂದಿನ ಯುವ ಜನಾಂಗಕ್ಕೆ ಇವರೊಂದು ಮಾದರಿಯಾಗಿ ನಿಲ್ಲುತ್ತಾರೆ.

Wednesday 6 December 2017

ನಾನು ಕೂಡ ಕಾದಂಬರಿಯ ಜೀವಂತ ಪಾತ್ರವಾದೆ - ಡಾ.ಲಕ್ಷ್ಮೀ ಜಿ ಪ್ರಸಾದ

ಲಕ್ಷ್ಮೀ ಪೊದ್ದಾರ್ c/o ಲಕ್ಷ್ಮಿ ಪ್ರಸಾದ್

ಡಾ ಕೆ ಎನ್ ಗಣೇಶಯ್ಯ ಅವರು ನಿಮಗೆ ಗೊತ್ತು.. ಅವರ ಬರವಣಿಗೆಯ ಶೈಲಿಯೂ ಗೊತ್ತು
ಕನ್ನಡಕ್ಕೆ ಹೊಸದೇ ಆದ ಬರವಣಿಗೆಯ ತಂತ್ರ ಪರಿಚಯಿಸಿದ ಹೆಮ್ಮೆ ಅವರದ್ದು
ನಾಗೇಶ್ ಹೆಗಡೆ ಅವರ ಶಹಭಾಷ್ ಗಿರಿಯಿಂದಾಗಿ ಹೊಸದೇ ಶೈಲಿಯೊಂದನ್ನು ರೂಢಿಸಿಕೊಂಡ ಗಣೇಶಯ್ಯ ಅವರು ಹೇಗೆ ಬರೆಯುತ್ತಾರೆ ಎನ್ನುವುದಕ್ಕೆ ಒಂದು ಉದಾಹರಣೆ ಇಲ್ಲಿದೆ.
ಇತ್ತೀಚಿಗೆ ಹೊರಬಂದ ‘ಬಳ್ಳಿಕಾಳ ಬಳ್ಳಿ’ ಕೃತಿಯಲ್ಲಿ ತುಳು ಸಂಸ್ಕೃತಿಯ ಸಂಶೋಧಕಿ ಡಾ ಲಕ್ಷ್ಮಿ ಜಿ ಪ್ರಸಾದ್ ಅವರ ಪಾತ್ರ ಬದಲಾಗಿರುವ ರೀತಿ ನೋಡಿ.

ಡಾ ಲಕ್ಷ್ಮಿ ಜಿ ಪ್ರಸಾದ್ ಹೇಳುತ್ತಾರೆ-
ನಾನೆಂದೂ ಕಾದಂಬರಿ ಬರೆದಿಲ್ಲ
ಆದರೆ ಖ್ಯಾತ ಸಾಹಿತಿ ಕಾದಂಬರಿಗಾರ ಕೃಷಿ ವಿಜ್ಞಾನಿ ಡಾ.ಗಣೇಶಯ್ಯ ಅವರ ಪತ್ತೆದಾರಿ ಶೈಲಿಯ ಐತಿಹಾಸಿಕ ಕಾದಂಬರಿ “ಬಳ್ಳಿ ಕಾಳ ಬಳ್ಳಿ”ಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಬಂದಿದ್ದೇನೆ
ಇಲ್ಲಿ ನನ್ನ ಪಾತ್ರ ಲಕ್ಷ್ಮೀ ಪೊದ್ದಾರ್ ಎಂಬ ತುಳು ಜಾನಪದ ಸಂಶೋಧಕಿಯದು
ನಾನು ಎಂದಾದರು ಒಂದು ದಿನ ಒಂದು ಕತೆ ಕಾದಂಬರಿಯ ಪಾತ್ರವಾಗಬಹುದು ಕನಸಲ್ಲಿ ಕೂಡ ಊಹಿಸಿರಲಿಲ್ಲ .
ನಾನು ಗಣೇಶಯ್ಯ ಅವರನ್ನು ಭೇಟಿಯಾಗಿದ್ದಾಗ ನನ್ನ ಪಾತ್ರ ಅವರ ಕಾದಂಬರಿಯಲ್ಲಿ ಬರುತ್ತೆ ಎಂದಾಗ ಒಂದೆಡೆ ತುಳುವಿನಿಂದ ಕನ್ನಡಕ್ಕೆ ಒಂದು ಪದ್ಯವನ್ನು ಅನುವಾದ ಮಾಡಿಕೊಡುವ ಚಿಕ್ಕ ಪಾತ್ರ ಇರಬಹುದು ಎಂದುಕೊಂಡಿದ್ದೆ
ಆದರೆ ಇಲ್ಲಿ ಲಕ್ಷ್ಮೀ ಪೋದ್ದಾರ್ ಗೆ ಪ್ರಮುಖ ಪಾತ್ರವಿದೆ
ನಾನು ಭೂತಾರಾಧನೆ ಬಗ್ಗೆ ಹೇಳುವ ವಿಚಾರಗಳನ್ನು ಲಕ್ಷ್ಮಿ ಪೋದ್ದಾರ್ ಮೂಲಕ ಕವಿ ಜನತೆಯ ಎದುರು ಇಟ್ಟಿದ್ದಾರೆ ಭೂತಾರಾಧನೆಯಲ್ಲಿ ಅಡಕವಾಗಿರುವ ಐತಿಹಾಸಿಕ ವಿಚಾರಗಳು ಕೂಡ ಕಾದಂಬರಿಗೆ ಆಕರವಾಗಬಲ್ಲವು ಎಂಬುದನ್ನು ಅವರು ತೋರಿಸಿಕೊಟ್ಟಿದಾರೆ.
ಅದಕ್ಕಾಗಿ ಗಣೇಶಯ್ಯ ಅವರಿಗೆ ಧನ್ಯವಾದಗಳು
ಈ ಹಿಂದೆ ಡಾ .ಅಮೃತ ಸೋಮೇಶ್ವರ ಅವರು ತುಳುವರ ಪಾಡ್ದನ ಹಾಗೂ ಭೂತಾರಾಧನೆ ಕುರಿತು ತಿಳಿಸಲು ನಾಟಕ ಕಾದಂಬರಿ ಕಥೆಗಳನ್ನು ರಚಿಸಿ ಜನರ ಮುಂದಿಡಬೇಕು ಎಂದು ಹೇಳಿದ್ದರು.
ಈಜೋ ಮಂಜೊಟ್ಟಿ ಗೋಣ ಪಾಡ್ದನ ಹಾಗೂ ಉರವ, ಎರಡು ಬಂಟ ದೈವಗಳ ಕಥಾನಕವನ್ನು ಆಧರಿಸಿ ನಾನು ಒಂದು ಸಣ್ಣ ನಾಟಕ ಬರೆದಿದ್ದು ನಮ್ಮ ವಿದ್ಯಾರ್ಥಿಗಳ ಮೂಲಕ ಪ್ರದರ್ಶನ ಮಾಡುವ ಯತ್ನ ಮಾಡಿದ್ದೆ
ಆದರೆ ಇವೆಲ್ಲ ತುಳು ಸಂಸ್ಕೃತಿ ಯ ಅರಿವಿರುವವರಿಗೆ‌ ಮಾತ್ರ ಸ್ಪಷ್ಟವಾಗಿ ಅರ್ಥವಾಗಲು ಸಾಧ್ಯ ಯಾಕೆಂದರೆ ಅಲ್ಲಿ‌ ತುಳುವಿನ ಭೂತ‌ಪದಕ್ಕೆ‌ಇರುವ ಅರ್ಥ ಆರಾಧನಾ ಸ್ವರೂಪದ ಬಗ್ಗೆ ಹೇಳಿಲ್ಲ ಬಹುಶಃ ‌ಮೊದಲ ಬಾರಿಗೆ ತುಳುನಾಡಿನ ಭೂತಾರಾಧನೆ ಬಗ್ಗೆ ಕನ್ನಡ ‌ಕಾದಂಬರಿಯಲ್ಲಿ ಈ ರೀತಿಯ ಮಾಹಿತಿಯನ್ನು ನೀಡಿದವರು ಡಾ. ಗಣೇಶಯ್ಯ ಅವರೇ ಇರಬೇಕು
ಈ ಕಾದಂಬರಿಯಲ್ಲಿ ಚೌಂಡಿ ಮತ್ತು ಜಟ್ಟಿಗ/ ಜತ್ತಿಂಗ ದೈವಗಳ ಕಥಾನದಲ್ಲಿ ಚೆನ್ನ ಭೈರಾದೇವಿಯ ಇತಿಹಾಸದ ಎಳೆಯನ್ನು ಕಂಡುಕೊಂಡದ್ದು ಅವರ ತೀವ್ರ ವಿಚಕ್ಷಣಾ ಗುಣಕ್ಕೆ ಸಾಕ್ಷಿಯಾಗಿದೆ
ಮೆಣಸಿನ ರಾಣಿ ಚೆನ್ನ ಭೈರಾದೇವಿಯ ಕುರಿತಾಗಿ ಸಾಕಷ್ಟು ಇತಿಹಾಸದ ಮಾಹಿತಿ ಇದೆ. ನಿಧಿ ಶೋಧದ ಕಥಾನಕ ಬಿಟ್ಟರೆ ಉಳಿದೆಲ್ಲವೂ ಅದರಲ್ಲಿ ಇರುವುದು ನಡೆದು ಹೋದ ಸತ್ಯ ಘಟನೆಗಳು

https://www.google.co.in/amp/avadhimag.com/%3fp=173110&amp=1