Saturday 27 April 2019

ನನ್ನೊಳಗೂ ಒಂದು ಆತ್ಮವಿದೆ8. ನನಗೂ ಗರ್ಭಿಣಿಯರಿಗೆ ಸಹಜವಾದ ಬಯಕೆ ಇತ್ತು © ಡಾ.ಲಕ್ಷ್ಮೀ ಜಿ ಪ್ರಸಾದ

ನನ್ನೊಳಗೂ ಒಂದು ಆತ್ಮವಿದೆ..8
ನನಗೂ ಗರ್ಭಿಣಿಯರಿಗೆ ಸಹಜವಾದ  ಬಯಕೆ ಇತ್ತು..
ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದಿನ ಘಟನೆ ಇದು.
ಅದಕ್ಕಿಂತ ನಾಲ್ಕು ಐದು ವರ್ಷಗಳ ಮೊದಲು ನನ್ನ ಕಲಿಕೆಯ ಕಾರಣಕ್ಕೆ ಜಗಳವಾಗಿ ನಾವು ಮನೆ ಬಿಟ್ಟು ಹೊರಗಡೆ ನಡೆದಿದ್ದರೂ ನಂತರ ನಮಗೆ ರಾಜಿಯಾಗಿತ್ತು.ವರ್ಷದಲ್ಲಿ ಒಂದೆರಡು ಸಲ ಮನೆಗೆ ಬಂದು ಹೋಗುತ್ತಿದ್ದೆವು.ಏನಾದರೂ ಪೂಜೆ ಪುನಸ್ಕಾರ, ಅಜ್ಜ ಅಜ್ಜಿಯ ತಿಥಿಗಳಿಗೂ ಬಂದು ಹೋಗುತ್ತಿದ್ದೆವು.
ಹಾಗೆಯೆ ಒಂದು ದಿನ ಪ್ರಸಾದ್  ಅಜ್ಜಂದೋ ಅಜ್ಜಿದೋ ತಿಥಿ ಇತ್ತು. ನಮ್ಮ ಮದುವೆಯಾಗಿ ನಾಲ್ಕೈದು ವರ್ಷ ಗಳಾಗಿದ್ದವು.ನನಗೆ ಎರಡು ಮೂರು ಸಲ ಮೂರು ನಾಲ್ಕು ತಿಂಗಳಾಗಿ ಗರ್ಭ ಹೋಗಿತ್ತು.ಮತ್ತೆ ನಿಪುಣ ವೈದ್ಯರ ಚಿಕಿತ್ಸೆ ಪಡೆಯುತ್ತಾ ಇದ್ದೆ.
ಆ ದಿನ ಅಜ್ಜನ  ತಿಥಿಯ ದಿನಕ್ಕಾಗುವಾಗ ನನಗೆ ಪೀರಿಯಡ್ ನ  ದಿನ ಮುಂದೆ ಹೋಗಿ ಐದು ದಿನಗಳಾಗಿದ್ದವು.ನನಗೆ ಸಣ್ಣಗೆ ವಾಂತಿ ಬರುವ ಹಾಗೆ ಹಿಂಸೆ ಶುರುವಾಗಿತ್ತು.ಹಾಗಾಗಿ ಮತ್ತೆ ನನ್ನ ‌ಮಡಿಲಲ್ಲಿ ಒಂದು ಚಿಗುರು ಕುಡಿ ಹುಟ್ಟುವುದೇನೋ ಎಂಬ ಸಂಶಯ ಉಂಟಾಗಿತ್ತು.ಹಾಗಾಗಿ  ಬಸ್ ಪ್ರಯಾಣ ಮಾಡಿ ಊರಿಗೆ ಹೋಗಿ ಬರುವುದು ಬೇಡ ಎನಿಸಿತ್ತು.
ಅದಕ್ಕೂ ಹದಿನೈದು ದಿನ ಮೊದಲು ಪ್ರಸಾದರಿಗೆ ಫೋನ್ ಮಾಡಿದ ಅತ್ತೆಯವರು "ಸುಮನಿಗೆ ( ಮೈದುನನ ಹೆಂಡತಿ) ದಿನ ತಪ್ಪಿದೆ "  ಎಂದು ಹೇಳಿದ್ದರು.ಹಾಗೆಂದರೇನೆಂದು ಪ್ರಸಾದ್ ನನ್ನಲ್ಲಿ ಕೇಳಿದಾಗ ಅವಳು ಒಂದೂವರೆ ತಿಂಗಳ ಸಣ್ಣ ಗರ್ಭಿಣಿ ಇರಬಹುದು ಎಂದು ನನಗೆ ಅರ್ಥವಾಗಿದ್ದು ಅದನ್ನೇ ಪ್ರಸಾದ್ ಗೆ ಹೇಳಿದ್ದೆ.
ಇದಾಗಿ ತಿಥಿಗೆ ಬಾ ಎಂದು ಅತ್ತೆ ಪ್ರಸಾದರನ್ನು ಫೋನ್ ಮೂಲಕ ಕರೆದಿದ್ದು,ಆಗ ಫೋನ್ ನಲ್ಲಿ ಮಾತನಾಡುವಾಗ ಸುಮ ಸಣ್ಣ ಗರ್ಭಿಣಿ( ಎರಡು ತಿಂಗಳ) ಎಂದು ಹೇಳಿದ್ದರು.
ನಾನು ಪ್ರಯಾಣ ಬೇಡ ಎಂದು ನಿರ್ಧರಿಸಿದ ಕಾರಣ ಪ್ರಸಾದ್ ಒಬ್ಬರೇ ಊರಿಗೆ ಅಜ್ಜ/ ಅಜ್ಜಿ ತಿಥಿಗೆ ಹೋಗಿದ್ದರು. ಅದು ಜುಲೈ ಅಗಸ್ಟ್  ತಿಂಗಳು ಇರಬೇಕು. ಹಲಸಿನ ಹಣ್ಣಿನ ಕಾಲ ಮುಗಿಯತ್ತಾ ಬರುವ ಸಮಯ.ಮನೆಯಲ್ಲಿ ಆ ವರ್ಷದ ಕೊನೆಯ  ಒಂದು ಹಲಸಿನ ಹಣ್ಣು ಇತ್ತಂತೆ.ಸುಮ "ನಾನು ನಂತರ ಆದರೆ ತಿನ್ನುವೆ " ಎಂದು ಹೇಳಿದಳಂತೆ.ಅದಕ್ಕೆ ಆ ಹಣ್ಣನ್ನು ತುಂಡು ಮಾಡಲಿಲ್ಲ .ಅಪರೂಪಕ್ಕೆ ಬಂದ ಮಗ ಪ್ರಸಾದ್ ಗೂ ಸಿಗಲಿಲ್ಲ. ನಾವು ಮಂಗಳೂರಿನಲ್ಲಿ ಇದ್ದ ಕಾರಣ ನಮಗೂ ಹಲಸಿನ ಹಣ್ಣು ಸಿಗುವುದು ಅಪರೂಪ ಆಗಿತ್ತು. ಊರಲ್ಲಿ ರುಚಿಯಾದ ಹಣ್ಣನ್ನು ತಿಂದು ಅಭ್ಯಾಸವಾದ ನಮಗೆ ಪೇಟೆಯಲ್ಲಿ ಕೊರೆದು ಮಾರುವ ಹಲಸಿನ ತೊಳೆಯ ಬಗ್ಗೆ ಒಲವಿರಲಿಲ್ಲ .ಹಾಗಾಗಿ ನಾವು ಹಲಸಿನ ಹಣ್ಣು ಇಷ್ಟವೇ ಆಗಿದ್ದರೂ ಪೇಟೆಯಲ್ಲಿ ಮಾರುವುದನ್ನು ತೆಗೆದುಕೊಳ್ಳುತ್ತಿರಲಿಲ್ಲ.ನಾನು ಎಪ್ರಿಲ್ ಮೇ ರಜೆಯಲ್ಲಿ ಅಮ್ಮನ ಮನೆಗೆ  ಹೋಗಿದ್ದಾಗ ಯಥೇಚ್ಛವಾಗಿ ಹಲಸಿನ ಹಣ್ಣು ತಿನ್ನುತ್ತಿದ್ದೆ‌.ಬರುವಾಗ ನಮಗೆ ಅಮ್ಮ ಹಲಸಿನ ಹಣ್ಣಿನ ಕೊಟ್ಟಿಗೆ ಮಾಡಿ ಕೊಡುತ್ತಿದ್ದರು.ಮಂಗಳೂರಿನ ಮನೆಗೆ ತಂದಾಗ ಪ್ರಸಾದರಿಗೆ ಹಲಸಿನ ಹಣ್ಣು ಮತ್ತು ಕೊಟ್ಟಿಗೆ( ಗಟ್ಟಿ) ಸಿಗುತ್ತಾ ಇತ್ತು ಅಷ್ಟೇ, ಹಾಗಾಗಿ ಹಲಸಿನ ಹಣ್ಣು ಅವರಿಗೆ ಇನ್ನೂ ಅಪರೂಪ.
ತಿಥಿ ‌ಮುಗಿಸಿ ಅದೇ ದಿನ ರಾತ್ರಿಯೇ ಮಂಗಳೂರಿನ ನಮ್ಮ ಮನೆಗೆ ಬಂದವರು " ಮನೆಯಲ್ಲಿ ವರ್ಷದ ಕೊನೆ ಹಲಸಿನ ಹಣ್ಣು ಇದ್ದದ್ದು.ಅದನ್ನು ಚೊಚ್ಚಲ ಗರ್ಭಿಣಿ ಸುಮಳಿಗಾಗಿ ಮೀಸಲಿರಿಸದ್ದು ಕೂಡ ಹೇಳಿದರು.
ಮಗನಿಗೆ ಹಲಸಿನ ಹಣ್ಣು ಬಹಳ ಇಷ್ಟ ಎಂದೂ ಗೊತ್ತಿದ್ದು ಅದರಿಂದ ಒಂದು ತುಂಡು ಕತ್ತರಿಸಿ ತೆಗೆದು ಪ್ರಸಾದರಿಗೆ ಕೊಡಬಹುದಿತ್ತು..ಒಬ್ಬರಿಗೇ ಇಡೀ ಹಣ್ಣು ಬೇಕಾಗುತ್ತಾ..ಅಂತ ನನಗೂ ಅನಿಸಿತು. ನಮಗೆ ಮಕ್ಕಳಾಗುವಲ್ಲಿ ನಿದಾನ ಆದದ್ದು ಮತ್ತು ಎರಡು ಮೂರು ಬಾರಿ ಗರ್ಭ ಹೋಗಿದ್ದು ಗೊತ್ತಿರುವ ಕಾರಣ ಮನೆ ಮಂದಿಗೆ ಮೈದುನನ ಮಡದಿ ಗರ್ಬಿಣಿಯಾದದ್ದು ತುಂಬಾ ಸಂಭ್ರಮದ ವಿಷಯವಾಗಿ ಇದ್ದಿರಬಹುದು.ಹಾಗಾಗಿ ಹಲಸಿನ ಹಣ್ಣನ್ನು ಅವಳಿಗಾಗಿ ಮೀಸಲಿರಿಸಿದ್ದು ತಪ್ಪೇನೂ ಅಲ್ಲ..ಆದರೆ ನನಗೆ ಯಾಕೋ ತಕ್ಷಣವೇ ಹಲಸಿನ ಹಣ್ಣು ಬೇಕೆನಿಸಿತು.ತುಂಬಾ ಆಶೆ ಅಯಿತು.ಮನೆಯಲ್ಲಿ ಹಲಸಿನ ಹಣ್ಣನ್ನು ಒಂದೊಮ್ಮೆ ಕೊರೆದಿದ್ದರೆ ಪ್ರಸಾದರಿಗೆ ನಾಲ್ಕು ಸೊಳೆ ಸಿಗುತ್ತಿತ್ತೇ ಹೊರತು ನನಗೆ ಸಿಗುತ್ತಿರಲಿಲ್ಲ.
ಆಗ ಫೋನ್ ನಮ್ಮಲ್ಲಿ ಇರಲಿಲ್ಲ. ಅಮ್ಮನಿಗೆ ಹೇಳಿದ್ದರೆ ಮನೆಯ ಮರದಲ್ಲಿ ಉಳಿದಿದ್ದರೆ ಹಲಸಿನ ಹಣ್ಣನ್ನು ತಮ್ಮನ ಮೂಲಕ ಕಳುಹಿಸಿಕೊಡುತ್ತಾ ಇದ್ದರು ಖಂಡಿತಾ.
ಆದರೆ ಫೋನ್ ಇಲ್ಲದ ನಾನು ಅಮ್ಮನಲ್ಲಿ ಕೇಳುವುದು ಹೇಗೆ? ಮರುದಿನವೇ ತಾಯಿ ‌ಮನೆಗೆ ಹೋಗ ಬೇಕು ಅನಿಸಿತು.
ಮತ್ತೆ  ಪೀರಿಯಡ್ ಮುಂದೆ ಹೋಗಿ ಐದು ದಿನ ಗಳಾಗಿವೆ ,ಪ್ರಯಾಣ ಒಳ್ಳೆಯದಲ್ಲ ಎಂದು ನೆನಪಾಗಿ ಆಸೆಗೆ ತಡೆ ಹಾಕಿಕೊಂಡೆ.
ಹೌದು ನಮ್ಮ ನಿರೀಕ್ಷೆ ನಿಜವಾಗಿತ್ತು.ಮಗ ಅರವಿಂದ ನ್ನ ಮಡಿಲಲ್ಲಿ ಕುಡಿಯೊಡೆದಿದ್ದ.ನಲುವತ್ತು ದಿನವಾದ ಮೇಲೆ ವೈದ್ಯರಲ್ಲಿ ಹೋದೆ. ಲ್ಯಾಬ್ ನಿಂದ ಬಂದ ವರದಿ ನೋಡಿ ಪರೀಕ್ಷಿಸಿದ ವೈದ್ಯೆ ಡಾ.ಮಾಲತಿ ಭಟ್ ಗರ್ಭಿಣಿಯಾಗಿರುವುದನ್ನು ಧೃಢ ಪಡಿಸಿದರು.ಇ ಮೊದಲು ಮೂರು ಬಾರಿ ಗರ್ಭಪಾತವಾದ ಕಾರಣ ಈ ಬಾರಿ  ತುಂಬಾ ಜಾಗ್ರತೆಯಿಂದ ಇರಬೇಕು. ಬೆಡ್ ರೆಸ್ಟ್ ತೆಗೆದುಕೊಳ್ಳಬೇಕೆಂದು ತಿಳಿಸಿದರು.ಅಷ್ಟಾಗುವಾಗ ನನಗೆ ತುಂಬಾ ವಾಂತಿ ಹಿಂಸೆ ಶುರುವಾಗಿತ್ತು.ನಮ್ಮ ಬಾಡಿಗೆ ಮನೆಯ ಓನರ್ ಮನೆಯಲ್ಲಿ ಫೋನ್ ಇತ್ತು.ಯಾವಾಗಲಾದರೊಮ್ಮೆ ಅಮ್ಮ ಅಲ್ಲಿಗೆ ಕರೆ ಮಾಡಿದರೆ ಓನರ್ ಮಡದಿ ಶೈಲಜಾ( ನನಗೆ ಒಳ್ಳೆಯ ಸ್ನೆಹಿತೆಯಾಗಿದ್ದರು) ನಮಗೆ ಫೋನ್ ಬಂದದ್ದನ್ನು ತಿಳಿಸುತ್ತಿದ್ದರು.ಅವರ ಮನೆಗೆ ( ಅವರ ಮನೆ ನಮ್ಮ ‌ಬಾಡಿಗೆ ಮನೆಯ ಪಕ್ಕದಲ್ಲಿ ಇತ್ತು) ಹೋಗಿ ಅಮ್ಮನಲ್ಲಿ ಮಾತನಾಡುತ್ತಾ ಇದ್ದೆ.
ಹೀಗೆ ಕೆಲವು ದಿನ ಕಳೆದಾಗ ಅಮ್ಮನ ಫೋನ್ ಬಂತು. ಆಗ ನಾನು ಅಮ್ಮನಿಗೆ ವಿಷಯ ತಿಳಿಸಿದೆ.ಮತ್ತು ನಮ್ಮ ‌ಮನೆಯಲ್ಲಿ ( ಅತ್ತೆ ಮನೆಯಲ್ಲಿ) ಸುಮಳಿಗಾಗಿ ಹಲಸಿನ ಹಣ್ಣನ್ನು ತೆಗೆದಿರಿಸಿದ ಬಗ್ಗೆಯೂ ಹೇಳಿದೆ.ಆಗ ಅಮ್ಮ ನಮ್ಮ ಮನೆ ತೋಟದ ಹಲಸಿನ ಮರದಲ್ಲಿ ಕೊನೆಯ ಒಂದು ಹಣ್ಣು ಇದೆ .ನಾಳೆಯೆ ಕೊಟ್ಟಿಗೆ ( ಕಡುಬು/ ಗಟ್ಟಿ) ಮಾಡಿ ನಿನಗೆ ಕಳುಹಿಸುತ್ತೇನೆ,ಸ್ವಲ್ಪ ಹಣ್ಣಿನ ಸೊಳೆಗಳನ್ನು ಕೂಡ ಗಣೇಶನ( ನನ್ನ ಸಣ್ಣ ತಮ್ಮ ,ಮಂಗಳೂರಿನ ರೋಷನಿ ನಿಲಯ ಕಾಲೇಜಿನಲ್ಲಿ ಎಂ ಎಸ್ ಡಬ್ಯೂ ಓದುತ್ತಾ ಇದ್ದರು) ಎಂದು ಹೇಳಿದರು.ಅಮ್ಮ ಹೇಳಿದಂತೆ ಮಾಡಿದರು.ಅಮ್ಮ ಕಳುಹಿಸುವ ಹಲಸಿನ ಹಣ್ಣಿನ ಕೊಟ್ಟಿಗೆ ಮತ್ತು ಹಲಸಿನ ಹಣ್ಣಿಗಾಗಿ ಜಾತಕ ಪಕ್ಷಿಯಂತೆ ಕಾದಿದ್ದೆ.ತಮ್ಮ ತಂದ ತಕ್ಷಣವೇ ತಿನ್ನಲು ಹೊರಟೆ..ಆದರೆ ನನಗೆ ಬಹಳ ಇಷ್ಟವಾಗಿದ್ದ ಹಲಸಿನ ಹಣ್ಣಿನ ಪರಿಮಳಕ್ಕೆ ಹೊಟ್ಟೆ ತೊಳಸಿ ಬಂತು. ವಾಂತಿ ಆಯಿತು. ತಿನ್ನಲಾಗಲಿಲ್ಲ.
. ಹಲಸಿನ ಹಣ್ಣು ತಿನ್ನಬೇಕೆನಿಸಿದರೂ ತಿನ್ನಲಾಗದ ಹಿಂಸೆ.
ಹೆಣ್ಣಿನ ಬದುಕೇ ವಿಚಿತ್ರ. ಮಗು ಬೇಕೆಂದು ಬಯಸಿ ಚಿಕಿತ್ಸೆ ಪಡೆದು ಗರ್ಭ ಧರಿಸಿದ್ದರೂ ಒಡಲಲ್ಲಿ ಕುಡಿ ಹುಟ್ಟಿದಾಗ ದೇಹಕ್ಕೆ ಒಗ್ಗದೆ ಆಗುವ ಹಿಂಸೆಯೇ ವಾಂತಿ.
ಅಂತೂ ಇಂತೂ ನಾಲ್ಕು ತಿಂಗಳಾಗುವಾಗ ವಾಂತಿ ಕಡಿಮೆಯಾಗಿತ್ತು.ನಂತರ ತಿನ್ನುವ ಚಪಲ / ಬಯಕೆ ಶುರು ಆಯ್ತು.
ನನಗೆ ಬೆಡ್ ರೆಸ್ಟ್ ಇತ್ತು.ಹಾಗಾಗಿ ಬೇಕಾದದ್ದನ್ನು ಮಾಡಿ ತಿನ್ನುವಂತೆ ಇರಲಿಲ್ಲ. ಪ್ರಸಾದರಿಗೆ ಮಾಮೂಲಿ‌ ಅನ್ನ ಸಾರು, ಸಾಂಬಾರ್ ಮಾಡಲು ಮಾತ್ರ ಬರುತ್ತಿತ್ತು. ನನಗೆ ಬೇಕು ಬೇಕಾದ ತಿಂಡಿಗೇನು ಮಾಡುದು? ಅಮ್ಮ ಆಗಾಗ ತಮ್ಮನ ಮೂಲಕ ಅದು ಇದು ಮಾಡಿ ಕಳಹಿಸುತ್ತಾ ಇದ್ದರು.ನನ್ನ ಅತ್ತೆ ಮನೆಯಲ್ಲಿ ಯಾವಾಗಲೂ ಸ್ವೀಟ್ ತಿಂಡಿ ಮಾಡುತ್ತಲೇ ಇರುತ್ತಿದ್ದರು.
ಪ್ರಸಾದ್ ಹೋಟೆಲಿನಿಂದ ಆಗಾಗ ತಂದು ಕೊಡುತ್ತಾ ಇದ್ದರು‌.ನನಗೆ ಬೇಕೆನಿಸಿದ ಸಿಹಿ ತಿಂಡಿಗಳನ್ನು ಬೇಕರಿಯಿಂದ ತಂದು ಕೊಡುತ್ತಾ ಇದ್ದರು.ಆದರೂ ನನಗೆ ವಿಪರೀತ ತಿನ್ನುವ ಚಪಲ ಆಗ. ಅತ್ತೆಯವರದು ದೊಡ್ಡ ಕೈ ..ಊರಿನರಿಗೆಲ್ಲಾ ಕರೆದು ಕರೆದು ಕೊಡುತ್ತಾ ಇದ್ದರು.ಹಾಗೆ ನನಗೂ  ಕಳುಹಿಸಿಯಾರೆಂದು ಒಂದು ದೂರದ ಆಸೆ ಇತ್ತು .ಮಾವ ಮೈದುನ ಆಗಾಗ ಮಂಗಳೂರಿಗೆ ಮಂಗಳೂರಿಗೆ ಏನೋ ಕೆಲಸದಲ್ಲಿ ಬರ್ತಾ ಇದ್ದರು‌.ಆಗೆಲ್ಲ ಮಂಗಳೂರಿನಲ್ಲಿ ಮನೆ ಮಾಡಿ ಇದ್ದ ಅತ್ತೆಯ ತಮ್ಮನ ಮನೆಗೆ( ಪ್ರಸಾದರ ಸೋದರ ಮಾವನ ಮನೆ) ಮನೆಯಲ್ಲಿ ಅತ್ತೆ ಮಾಡಿದ ಸ್ವೀಟ್,ಚಕ್ಕುಲಿ ತಿಂಡಿ ತಿನಿಸುಗಳನ್ನು ಕಳುಹಿಸುತ್ತಾ ಇದ್ದರು. ನಾನು ಗರ್ಭಿಣಿ ಎಂದು ಅತ್ತೆಗೆ ಮನೆ ಮಂದಿಗೆ ತಿಳಿದಿತ್ತು..ಹಾಗಾಗಿ ನನಗೂ ತಿಂಡಿ  ಕಳುಹಿಸಿ ಯಾರೆಂದು ಕಾಯುತ್ತಾ ಇದ್ದೆ.ಕಾದದ್ದೇ ಬಂತು ಅಷ್ಟೇ..
ಪ್ರಸಾದರ ದೊಡ್ಡ ಸೋದರ ಮಾವನ ಮನೆ ಮಂಗಳೂರಿನ ನಮ್ಮ ಮನೆಯ ಹತ್ತಿರವೇ ಇತ್ತು.ಅರ್ಧ ಕಿಲೋಮೀಟರ್ ದೂರ ಕೂಡ ಇರಲಿಲ್ಲ ಮತ್ತು ಸೋದರ ಮಾವ ಮತ್ತು ಅವರ ಮಡದಿ ದಿನ ನಿತ್ತ ನಮ್ಮ ಮನೆ ಎದುರಿಗಿನ ರಸ್ತೆಯಲ್ಲಿಯೇ ಓಡಾಡುತ್ತಿದ್ದರು.ಪ್ರಸಾದರ ಸೋದರ ಮಾವನ ಹೆಂಡತಿಗೆ ನಾನಾಬಗೆಯ ತಿಂಡಿ ತಿನಿಸುಗಳನ್ನು ಮಾಡಲು ಬರುತ್ತಿತ್ತು.. ಯಾವಾಗಲೂ ಮಾಡುತ್ತಿದ್ದರು ಕೂಡ.ಹಾಗೆ ನನಗೆ ಒಂದು ದಿನವಾದರೂ ತಂದು ಕೊಟ್ಟಾರೆಂದು ಕಾಯತ್ತಾ ಇದ್ದೆ..ಅಲ್ಲೂ ಅಷ್ಟೇ ಕಾದದ್ದೇ ಬಂತು .. ಒಂದು ತುಂಡು ತಿಂಡಿ ಕೂಡ ಒಂದು ದಿನವೂ ಬರಲಿಲ್ಲ ‌.ನಮ್ಮ ‌ಮನೆ ಓನರ್‌ ಮಡದಿ ಶೈಲಜಾ ನನಗಾಗಿ ಬೇರೆ ಬೇರೆ ತಿಂಡಿ ಮಾಡಿ ನನಗೆ ತಂದು‌ಕೊಡುತ್ತಾ ಇದ್ದರು.ಸ್ವಂತ ಅಕ್ಕ ತಂಗಿಯಂತೆ ನನ್ನನ್ನು ನೋಡಿಕೊಂಡಿದ್ದರು ಅವರು.ನನಗೆ ಇದ್ದ ಬಯಕೆ ಅವರ ಮೂಲಕ ಈಡೇರುತ್ತಾ ಇತ್ತು.ಜೊತೆಗೆ ಅಮ್ಮನ ಮನೆಯಿಂದ ಆಗಾಗ ತಿಂಡಿ ತಿನಿಸುಗಳು ತಮ್ಮನ ಮೂಲಕ ಬರ್ತಾ ಇತ್ತು.ಪ್ರಸಾದ್ ದಿನಾಲು ಆಫೀಸಿಂದ ಬರುವಾಗ ನನಗಾಗಿ  ಮಸಾಲೆ ದೋಸೆ, ಪಪ್ಸ್,ಗೋಭಿ ಮಂಚೂರಿ ಲಡ್ಡು ಹೋಳಿಗೆ ಮೊದಲಾದವನ್ನು ಕಟ್ಟಿಸಿಕೊಂಡು ಬರುತ್ತಾ ಇದ್ದರು.ಸಂಜೆಯಾದರೆ ಪ್ರಸಾದರ ಬರುವನ್ನೇ ಕಾಯುತ್ತಾ ಇದ್ದೆ.ನಾನು ಎದ್ದು ಓಡಾಡುವಂತೆ ಇದ್ದರೆ ಅದು ಮಾಡಿ ತಿನ್ನಬಹುದಿತ್ತು..ಇದು‌ಮಾಡಿ ತಿನ್ನಬಹುದಿತ್ತು ಎಂದು ಮನದಲ್ಲಿಯೇ ಮಂಡಿಗೆ ಮೆಲ್ಲುತ್ತಾ ಇದ್ದೆ..ಏನು ಮಾಡುದು..ಎಂಟು ತಿಂಗಳು ತುಂಬುವವರೆಗೂ ವೈದ್ಯರು ಬೆಡ್ ಹೇಳಿದ್ದರು.ದಿನ ಬಿಟ್ಟು ದಿನ ಏನೋ ಇಂಜೆಕ್ಷನ್ ತಗೊಳ್ಳಬೇಕಿತ್ತು. ನಮ್ಮ ಮನೆಗೆ ತುಂಬಾ ಹತ್ತಿರದಲ್ಲಿ ನಮ್ಮ ಆತ್ಮೀಯರಾದ  ಬಡೆಕ್ಕಿಲ ಡಾಕ್ಟರ್ ಅವರ ಮನೆ ಇತ್ತು.ಅವರು ಮನೆಗೆ ಬಂದು ನನಗೆ ಇಂಜೆಕ್ಷನ್ ಕೊಟ್ಟು ಹೋಗುತ್ತಿದ್ದರು.ಒಮ್ಮೊಮ್ಮೆ ಅವರ ಮಡದಿ ಲಲಿತಕ್ಕ ಮಾಡಿ ಕೊಟ್ಟ ತಿಂಡಿಯನ್ನು ಜೊತೆಯಲ್ಲಿ ತಂದು ಕೊಡುತ್ತಿದ್ದರು. ಆರು ತಿಂಗಳಾದಾಗ ನನಗೆ ವೈದ್ಯರು ನಿದಾನಕ್ಕೆ ಒಂದರೆಡು ನಿಮಿಷ ನಡೆಯಲು ಅನುಮತಿ ಕೊಟ್ಟಿದ್ದರು.ಹಾಗಾಗಿ ನಂತರ ನಾನೇ ಅವರ ಮನೆಗೆ ಹೋಗಿ ಇಂಜೆಕ್ಷನ್ ಹಾಕಿಸಿಕೊಂಡು ಮನೆಗೆ ಬರುತ್ತಿದ್ದೆ.ಹೀಗೆ ಏಳು ತಿಂಗಳ ಕಾಲ ದಿನ ಬಿಟ್ಟು ದಿನ ಇಂಜೆಕ್ಷನ್ ತಗೊಂಡಿದ್ದೆ‌.ಇಂಜೆಕ್ಷನ್ ‌ಮತ್ತು ಸಿರಿಂಜನ್ನು ಪ್ರಸಾದ್ ಮೆಡಿಕಲ್ ಶಾಪ್ ನಿಂದ ತಂದು‌ಕೊಡುತ್ತಿದ್ದರು..
ಏಳು ತಿಂಗಳ ಕಾಲ ಎರಡು ದಿನಕ್ಕೊಮ್ಮೆ ನನಗೆ ಇಂಜೆಕ್ಷನ್ ನೀಡಿದ ಬಡೆಕ್ಕಿಲ ಡಾಕ್ಟರ್ ನನ್ನಿಂದ ಒಂದು ನಯಾ ಪೈಸೆ ಪೀಸ್ ಕೂಡ ತೆಗೆದುಕೊಂಡಿಲ್ಲ..ಕಷ್ಟಕಾಲದಲ್ಲಿ ನೆರವಾದ ಅವರನ್ನು ಯಾವತ್ತಿಗೂ ನಾನು‌ ಮರೆಯಲಾರೆ.ಅವರ ಮಗ ನಂದ ಕಿಶೋರ್ ಈಗ ಖ್ಯಾತ ಯೂರೋಲಜಿಷ್ಟ್ ಆಗಿದ್ದಾರೆ‌.
ನಾನು ತಿಂಗಳಿಗೊಮ್ಮೆ  ಗೈನಕಾಲಜಿಷ್ಟ್  ಡಾ.ಮಾಲತಿ ಭಟ್ ಅವರನ್ನು  ಕಾಣಬೇಕಿತ್ತು.ಆಗೆಲ್ಲ ನನಗೆ ಜೊತೆಯಾದವರು  ಓನರ್ ಮಡದಿ ಸ್ನೇಹಿತೆ ಶೈಲಜಾ. ಬಾಡಿಗೆ ಕಾರಿನಲ್ಲಿ ಹೋಗಿ ಬರುತ್ತಿದ್ದೆವು.ಮನೆಯಿಂದ ಮಾಲತಿ ಭಟ್ ಅವರ ಭಟ್ಸ್ ನರ್ಸಿಂಗ್ ಹೋಮಿಗೆ ಎರಡು ಮೂರು ಕಿಮೀ ದೂರ  ಅಷ್ಟೇ, ಆದರೆ ಬೆಡ್ ರೆಸ್ಟ್ ಇದ್ದ ಕಾರಣ ಆಟೋ ದಲ್ಲಿ ಹೋಗುವಂತಿರಲಿಲ್ಲ..ದುಬಾರಿ ದುಡ್ಡು ನೀಡಿ ಕಾರಿನಲ್ಲಿ ಹೋಗಬೇಕಾಗಿತ್ತು‌.ಆದರೆ ಶೈಲಜಾ ಅವರ ಪರಿಚಯದ ಓರ್ವ  ಬಾಡಿಗೆಗೆ ಕಾರು ಓಡಿಸುವ  ಕಾರ್ ಡ್ರೈವರ್ ನಮಗೆ ಸ್ವಲ್ಪ  ಕಡಿಮೆ ಬಾಡಿಗೆ  ತಗೊಳ್ಳುತ್ತಾ ಇದ್ದರು.
ಹಾಗಾಗಿ ಅವರಿಗೆ ಶೈಲಜಾ ತಮ್ಮ ‌ಮನೆಯ ಲ್ಯಾಂಡ್‌ ಲೈನ್ ಪೋನ್ ನಿಂದ ಫೋನ್ ಮಾಡಿ ಬರಹೇಳುತ್ತಿದ್ದರು‌.ನಾವಿಬ್ಬರು ಹೋಗಿ ಬರುತ್ತಾ ಇದ್ದೆವು.
ಎಂಟು ತಿಂಗಳು ತುಂಬಿದ ನಂತರ ನನಗೆ ಕಾರಿನಲ್ಲಿ ಆಯಾಸವಾಗದಂತೆ ಮೂವತ್ತು ನಲುವತ್ತು ಕಿಮೀ ಪ್ರಯಾಣ ಮಾಡಬಹುದು, ಮನೆಯಲ್ಲೂ ಜಾಗರೂಕತೆಯಿಂದ ಓಡಾಡಬುದು ಎಂದು ಡಾಕ್ಟರ್ ತಿಳಿಸದ್ದರು.ನಮ್ಮಲ್ಲಿ ಗರ್ಬಿಣಿಗೆ ಗಂಡನ ಮನೆಯಲ್ಲಿ ಏಳು ತಿಂಗಳಿನಲ್ಲಿ ಕೋಡಿ ಹೋಮ/ ಸೀಮಂತ ಮಾಡುವ ಪದ್ಧತಿ ಇದೆ.ನಾನು ಈ ಬಗ್ಗೆ ಅತ್ತೆಯವರಲ್ಲಿ ಹೇಳಿದಾಗ ಅವರು ಅದಕ್ಕೆ ಒಪ್ಪಲಿಲ್ಲ. ಯಾಕೆಂದರೆ ಅವರ ಸಂಬಂಧಿಕರಲ್ಲಿ ಯಾರಿಗೋ ಒಬ್ಬರಿಗೆ ಸೀಮಂತ ಮಾಢಿದ ನಂತರ ಗರ್ಭಪಾತ ಆಯಿತಂತೆ! ಹಾಗೆ ನನಗೂ ಆದರೆ ಅವರಿಗೆ ಅವಮಾನವಂತೆ!
ನನ್ನ ಮೈದುನನ ಮಡದಿ ಕೂಡ ಚೊಚ್ಚಲ ಗರ್ಭಿಣಿ ಆಗಿದ್ದಳು ಎಂದು ಹೇಳಿದ್ದೆನಲ್ಲ
ಅವಳಿಗೆ ಮನೆಯಲ್ಲಿ ಭಾರೀ ವಿಜೃಂಭಣೆಯಿಂದ ಕೋಡಿ ಹೋಮ/ ಸೀಮಂತ ಮಾಡಿದರು.ಪ್ರಸಾದ್ ಹೋಗಿದ್ದರು.ಅವರ ಕೈಯಲ್ಲಿ ಕೂಡ ಮಾಡಿದ ಒಂದು ತುಂಡು ಸ್ವಿಟ್ ನನಗೆ ಕಳುಹಿಸಿರಲಿಲ್ಲ. ಗರ್ಭ ಪಾತವಾಗಿ ಅವಮಾನ ಪಡುವವರಿಗೆ ಸ್ವಿಟ್ ಕೊಡುವುದು ವೇಸ್ಟ್ ಎಂದು ಭಾವಿಸಿರಬಹುದು.
ನಂತರ ನನ್ನ ತಂದೆಯವರು ಅತ್ತೆ ಮಾವನ ಮನೆಗೆ ಹೋಗಿ ಮಗಳಿಗೆ ಕೋಡಿ ಹೋಮ ಮಾಡಿ ನಮ್ಮ ಮನೆಗೆ ( ತಮದೆ ಮನೆಗೆ) ಕಳುಹಿಸಿಕೊಡಿ ಎಂದು ಕ್ರಮಪ್ರಕಾರ ಕೇಳಿದಾಗ ಬೇರೆ  ವಿಧಿಯಿಲ್ಲದೆ ಕಾಟಾಚಾರಕ್ಕೆ ಯಾವ ಸಂಬಂಧಿಕರಿಗೂ ತಿಳಿಸದೆ ಸಣ್ಣಕೆ ಮನೆಯಲ್ಲಿ ಕೋಡಿ ಹೋಮ ಮಾಡಿದರು.ಹುಟ್ಟುವ ಮಸರಿಯಾಗಿ ಸ್ವೀಟ್  ಕೂಡ ಮಾಡಲಿಲ್ಲ. ನಂತರ ನಾನು ತಂದೆ ಮನೆಗೆ ಹೋಗಿ ಎರಡು ದಿನ ಇದ್ದು ಕಾರಿನಲ್ಲಿ ಮಂಗಳೂರಿನ ನಮ್ಮ ಮನೆಗೆ ಬಂದೆ.ಪ್ರಸವದ ನಂತರ ತಂದೆ ಮನೆಗೆ ಹೊಗುವುದು ಎಂದು ನಿರ್ಧರಿಸಿದೆ.
1998 ರ ಮೇ ತಿಂಗಳಿನ 14-15 ರ ಒಳಗೆ ಪ್ರಸವ ಆಗಬಹುದು, ಸಿಸೇರಿಯನ್ ಆಗಬೇಕು ಎಂದು ವೈದ್ಯರು ಮೊದಲೇ ಹೇಳಿದ್ದರು.ಮರುದಿವಸದಿಂದ ಅಮ್ಮ ನನ್ನ ಜೊತೆಯಲ್ಲಿ ಬಂದು ಇರುತ್ತೇನೆ ಎಂದು ಹೇಳಿದ್ದರು.
1998 ಎಪ್ರಿಲ್ 28 ರಂದು ಬೆಳಗಿನಿಂದ ನನಗೆ ಏನೋ ಹಿಂಸೆ ,ಪ್ರಸಾದ್ ಆ ದಿನ ಆಫೀಸ್ ಕೆಲಸದಲ್ಲಿ ಮಣಿಪಾಲ್  ಹೋಗಿದ್ದರು. ನಾನು ಶೈಲಜಾ ರಲ್ಲಿ ನನಗೆ ಏನೊ ಹಿಂಸೆ ಅಗುತ್ತಿದೆ ಎಂದು ಹೇಳಿದೆ.ಆಗ ಅವರು ನಾವು ಆಸ್ಪತ್ರೆಗೆ ಹೋಗಿ ಬರುವ ಎಂದು ಹೇಳಿ ಬಾಡಿಗೆ  ಕಾರಿನ ಡ್ರೈವರ್ ಗೆ ಫೋನ್ ಮಾಡಿ ಬರಲು ಹೇಳಿದರು.ಕಾರು ಬರುವಷ್ಟರಲ್ಲಿ  ಶೈಲಜಾ ಮನೆಗೆ ಯಾರೋ ನೆಂಟರು ಬಂದರು.ಆಗ ಶೈಲಜಾ ನೀವು ಕಾರಲ್ಲಿ ಹೋಗಿ ,ಸ್ವಲ್ಪ ಹೊತ್ತು ಬಿಟ್ಟು ( ಬಂದನೆಂಟರಲ್ಲಿ ಮಾತನಾಡಿ ಅವರಿಗೆ ಕಾಫಿ ಮಾಡಿ ಕೊಟ್ಟು ಅವರು ಹೋದ ಕೂಡಲೇ )  ನಾನು ಅಟೋದಲ್ಲಿ  ಆಸ್ಪತ್ರೆಗೆ ಬರುತ್ತೇನೆ ಎಂದು ನನ್ನನ್ನು ಕಾರು ಹತ್ತಿಸಿ ಕಳುಹಿಸಿದರು .
ನಾನು ಕಾರು ಇಳಿಯುತ್ತಿದ್ದಂತೆ ವೈದ್ಯರಾದ ಡಾ.ಮಾಲತಿ ಭಟ್ ಹೊರಗೆ ಹೋಗಲು ಅವರ ಕಾರಿನ ಬಳಿಗೆ ಬರುತ್ತಾ ಇದ್ದರು‌.ಪರಿಣತ ವೈದ್ಯರಾದ ಅವರು ನನ್ನನ್ನು ಒಂದು ಕ್ಷಣ ದಿಟ್ಟಿಸಿ ನೋಡಿದರು‌.ಮತ್ತೆ ಅವರು ಕಾರು ಹತ್ತದೆ ಒಳಗೆ ಬಾ ಎಂದು ನನ್ನನ್ನು ಕರೆದು  ಪರೀಕ್ಷಾ ಕೊಠಡಿಗೆ ಹೋದರು.ನನ್ನನ್ನು ಪರೀಕ್ಷೆ ಮಾಡಿದ  ತಕ್ಷಣವೇ ಅಲ್ಲಿನ ಮುಖ್ಯ ನರ್ಸಿಗೆ ಏನೋ ಹೇಳಿದರು‌, ಮಗುವಿನ ಹಾರ್ಟ್ ಬೀಟ್ ನಿದಾನವಾಗಿದೆ ..ಕೂಡಲೇ ಸಿಸೇರಿಯನ್  ಮಾಡಬೇಕು ಎಂದು ಹೇಳಿದರು.ಅಷ್ಟರಲ್ಲಿ ಶೈಲಜಾ ಬಂದಿದ್ದರು. ಅವರು ಸಹಿ ಮಾಡಿದರು. ಮುಖ್ಯ ನರಸ್ ನನ್ನನ್ನು ಅಪರೇಷನ್ ಕೊಠಡಿಗೆ ಕರೆದುಕೊಂಡು ಹೋದರು‌.ಏನೇನೋ ಇಂಜೆಕ್ಷನ್ ಕೊಟ್ಟರು.ಅಪರೇಷನ್ ಸಮಯದಲ್ಲಿ ಹಾಕುವ ಹಸಿರು ಗೌನ್ ಹಾಕಿದರು‌.ಅಪರೇಷನ್ ಟೇಬಲ್ ನಲ್ಲಿ ಮಲಗಿಸಿದರು‌.ಕಣ್ಣಗೆ ಮಂಪರು ಆವರಿಸಿ ಕಣ್ಣು‌ಮುಚ್ಚಿದೆ.ಪೂರ್ತಿಯಾಗಿ ಎಚ್ಚರ ತಪ್ಪಿರಬೇಕು..ಇದ್ದಕ್ಕಿದ್ದಂತೆ ಉಸಿರಾಟಕ್ಕೆ ತುಂಬಾ ಕಷ್ಟವಾಯಿತು ಎಚ್ಚರವಾಯಿತು.ಕಣ್ಣು ತೆರೆದು ನೋಡಿದಾಗ ಹಸಿರು ಬಟ್ಟೆ ತೊಟ್ಟಿದ್ದ ವೈದ್ಯರು ಮಸುಕು ಮಸುಕಾಗಿ ಕಾಣಿಸಿದರು.‌ಬೆನ್ನಲ್ಲಿಯೇ ತೀವ್ರ ಹೊಟ್ಟೆ ನೋವಾಗಿ ಅಮ್ಮಾ ಎಂದು ದೊಡ್ಡಕೆ ಬೊಬ್ಬೆ ಹಾಕಿದೆ..ಆಗ ವೈದ್ಯರು ನನ್ನ ಬಾಯಿಯನ್ನು ಬಲವಂತವಾಗಿ ತೆರೆದು  ಏನೋ ಟ್ಯೂಬನ್ನು ತುರುಕಿದರು‌ ತೀವ್ರ ನೋವಾಗುತ್ತಾ ಇತ್ತು.ನನ್ನನ್ನು ಒಂದಿನಿತು ಮಿಸುಕಾಡದಂತೆ ಸಿಸ್ಟರ್ ಗಳು ಗಟ್ಟಿಯಾಗಿ ಹಿಡಿದಿದ್ದರು. ಅವಳಿಗೆ ಎಚ್ಚರ ಅಗಿದೆ ಅನಾಸ್ತೇಶಿಯಾ ಜಾಸ್ತಿ ಮಾಡಿ ಅಂತ ಏನೋ ಹೇಳಿದು ಕೇಳಿಸಿತು..ಜೊತೆಗೆ ಉಸಿರಾಟಕ್ಕೆ  ಸ್ವಲ್ಪ ಅರಾಮ ಎನಿಸಿತು.ಇಷ್ಟೆಲ್ಲಾ ಹತ್ತು ಹದಿನೈದು ಸೆಕುಂಡ್ ಗಳ ಕಾಲದಲ್ಲಿ ಅಗಿತ್ತು‌.ಮತ್ತೆ ನನಗಡ ಮಂಪರು ಅವರಿಸಿ ನಿದ್ದೆ ಬಂತು..
ಮತ್ತೆ ಯಾರೋ ಒಬ್ಬರು ನನ್ನನ್ನು ಕುಲುಕಿ,ತಲೆಗೆ ಬಡಿದು ,ಕೈಗೆ ಚಿವುಟಿ ಲಕ್ಷ್ಮೀ ಕಣ್ಣು ತೆರೆಯಿರಿ..ಅಪರೇಷನ್ ಆಯಿತು. ನಿಮಗೆ‌ಮಗ ಹುಟ್ಟಿದ್ದಾನೆ ನೋಡಿ ಎಂದು ಮತ್ತೆ ಮತ್ತೆ ಹೇಳುತ್ತಾ ಇದ್ದರು..ಹೇಗೋ ಕಣ್ಣು ತೆರೆದೆ..ಮತ್ತೆ ಹಸಿರು ಗೌನ್ ತೊಟ್ಟ ವೈದ್ಯರು ಕಾಣಿಸಿದರು.ನಾನು ಹೇಳುದು ಕೇಳಿಸ್ತಿದೆಯಾ ? ನಿಮಗೆ  ಗಂಡು ಮಗು ಹುಟ್ಟಿದೆ ..ಕಣ್ಣು ‌ಮುಚ್ಚಬೇಡಿ..ನಿಮ್ಮ ಹೆಸರು ಹೇಳಿ ಎಂದು ಹೇಳಿದರು..ನಾಲಗೆ ತೊದಲುತ್ತಾ ಇತ್ತು..ಹೇಗೋ ಲಕ್ಷ್ಮೀ ಎಂದು ನನ್ನ ಹೆಸರು ಹೇಳಿದೆ.. ನನಗೆ ಉಸಿರಾಡಲು ತುಂಬಾ ಕಷ್ಟ ಅಗುತ್ತಾ ಇತ್ತು‌.ಅಲ್ಲಿ ಆ ವೈದ್ಯರು ಇನ್ಯಾರಿಗೋ ಅವರಿಗೆ ಎಚ್ಚರಾಗಿದೆ. ಆಕ್ಸಿಜನ್ ಕಂಟಿನ್ಯೂ ಮಾಡಿ‌..ಅವರಿಗೆ ಉಸಿರಾಟದ ತೊಂದರೆ ಇದೆ ಅಂತ ಮೊದಲೇ ಹೇಳ್ಬೇಕಿತ್ತು..ಎಂದೇನೋ ಹೇಳುತ್ತಾ ಇದ್ದರು.ಮತ್ತೆ  ನನ್ನ ಮುಖಕ್ಕೆ ಏನನ್ನೋ ಗಟ್ಟಿಯಾಗಿ ಹಿಡಿದರು( ಶ್ವಾಸಕೋಶಕ್ಕೆ ಆಕ್ಸಿಜನ್ ಟ್ಯೂಬ್  ಹಾಕಿದ್ದನ್ನು ತೆಗೆದು ಆಕ್ಸಿಜನ್  ಮಾಸ್ಕ್ ಹಾಕಿದ್ದು ಎಂದು ನನಗೆ ನಂತರ ಸಿಸ್ಟರ್ ಹೇಳಿ ತಿಳಿಯಿತು) ಮಂಪರು ಅವರಿಸಿ ಮತ್ತೆ ಕಣ್ಣು‌ಮುಚ್ಚಿದೆ.
ಈ ನಡುವೆ ಶೈಲಜಾ ಪ್ರಸಾದ್ ಆಪೀಸ್ ಗೆ ಫೋನ್ ಮಾಡಿ ಅವರನ್ನು ಬರಲು ಹೇಳಿದ್ದರು ನನ್ನ ಅಮ್ಮನ ಮನೆಗೂ ಪೋನ್ ಮಾಡಿ ವಿಷಯ ತಿಳಿಸಿದ್ದರು..ಪ್ರಸಾದ್ ಬಂದ ಮೇಲೆ (ಅವರ ಮನೆಗೆ ಯಾರೋ ಬಂದ ಕಾರಣ) ಮನೆಗೆ ಹೋಗಿದ್ದರು. ಸಿಸೇರಿಯನ್ ಮುಗಿಯುವಷ್ಟರಲ್ಲಿ ಪ್ರಸಾಸ್ ಆಸ್ಪತ್ರೆಗೆ ಬಂದಿದ್ದರು. ನನ್ನ ‌ಮಗ ಮುದ್ದು ಬೊಮ್ಮಟೆಯನ್ನು ಬಿಳ ಬಟ್ಟೆಯಲ್ಲಿ  ಬೆಚ್ವನೆ ಸುತ್ತಿ ಪ್ರಸಾದ್ ಕೈಗೆ ಸಿಸ್ಟರ್ ತಂದು ಕೊಟ್ಟಿದ್ದರು. ನನಗೆ ಉಸಿರಾಟದ ತೊಂದರೆ ಕಾಣಿಸಿದ ಕಾರಣ ಐಸಿಯುವಿಗೆ ಶಿಪ್ಟ್ ಮಾಡಿದ್ದರು.
ಪ್ರಸಾದ್ ಅವರ ಜೀವನದಲ್ಲಿ ಮೊದಲ ಬಾರಿಗೆ ಆಗಷ್ಟೇ ಹುಟ್ಟಿದ ಮಗುವನ್ನು ನೋಡಿದ್ದು ಮತ್ತು ಎತ್ತಿಕೊಂಡದ್ದು.ಅವರಿಗೆ ಮೊದಲು ಇವನು ಅತ್ತರೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲವಂತೆ.
ರಾತ್ರಿ ಅಗುವಷ್ಟರಲ್ಲಿ ಅಮ್ಮ ಮತ್ತು ತಮ್ಮ ಗಣೇಶ ಬಂದರು.
ನನ್ನ ಉಸಿರಾಟ ಸುಮಾರಾಗಿ ತಹಬದಿಗೆ ಬಂದು ಆಕ್ಸಿಜನ್ ಮಾಸ್ಕ್ ನೊಂದಿಗೆ  ನನ್ನನ್ನು ರಾತ್ರಿ ವಾರ್ಡ್ ಗೆ ಶಿಪ್ಟ್ ಮಾಡಿದರು‌.ಆಗಲೂ ಮಂಪರು ನನಗೆ. ಅಮ್ಮ ಮಗನನ್ನು ನನ್ನ ಮಗ್ಗುಲಲ್ಲಿ ಮಲಗಿಸಿದರು..ಮುದ್ದು ಬೊಮ್ಮಟೆ ಕಣ್ಣು ಮುಚ್ಚಿ ನಿದ್ರೆ ಮಾಡುತ್ತಾ ಇತ್ತು..
ನಾಳೆ ಮತ್ತೆ ಇಪ್ಪತ್ತು ವರ್ಷಗಳ ನಂತರದ ಎಪ್ರಿಲ್ 28 ಬರುತ್ತಿದೆ ..ಮಗನ ಬರ್ತ್ ಡೇ ನಾಳೆ....ಸಹೃದಯಿ ಮಗನನ್ನು ನನಗೆ ದಯಪಾಲಿಸಿ ಅಮ್ಮನ ಪದವಿಯನ್ನು ಕೊಟ್ಟ ದೇವರಿಗೆ ನಾನು ಆಭಾರಿಯಾಗಿದ್ದೇನೆ ಜೊತೆಗೆ ನೋಟ ಮಾತ್ರದಲ್ಲಿಯೇ ನನಗೆ ಏನೋ ಸಮಸ್ಯೆ ಆಗಿದೆ ಎಂಬುದನ್ನು ಗಮನಿಸಿ ಹೊರಗೆ ಹೋಗಲು ಕಾರಿನ ಬಳಿ ಬಂದು ,ಹಿಂದೆ ಹೋಗಿ ನನ್ನನ್ನು ಕರೆದು ಪರೀಕ್ಷಿಸಿ ತಕ್ಷಣವೇ ಸಿಸೇರಿಯನ್ ಮಾಡಿ ನನ್ನನ್ನು ನನ್ನ ಮಗನನ್ನು ಬದುಕಿಸಿ ಕೊಟ್ಟ ಡಾ.ಮಾಲತಿ ಭಟ್ ಅವರನ್ನು ಕೂಡ ಸದಾ ನೆನೆಯುತ್ತೇನೆ.
ಆದರೆ ನನಗೆ ಇಂದಿಗೂ ಒಂದು ಅರ್ಥವಾಗದ ವಿಚಾರ ಒಂದಿದೆ. ಮೈದುನನ ಮಡದಿಗಾಗಿ ಅಪರೂಪಕ್ಕೆ ಬಂದ ಮಗನಿಗೂ ಹಲಸಿನ ಹಣ್ಣನ್ನು ಕೊಡದೆ ಮೀಸಲಿರಿಸಿದ ಅತ್ತೆ ನನಗೂ ಬಯಕೆ ಇದೆ ಎಂಬುದನ್ನೇಕೆ ಮರೆತರು? ನನ್ನ ಅತ್ತೆಯವರು ನಮ್ಮ ಸಂಬಂಧಿಕರಲ್ಲಿ ಯಾರೇ ಬಸುರಿಯಾದರೂ ಅವರನ್ನು ಮನೆಗೆ  ಕರೆದು ಔತಣದ ಊಟ ತಯಾರು ಮಾಡಿ ಬಡಿಸುತ್ತಿದ್ದರು‌‌.ತಮ್ಮ ತಂಗಿಯರಿಗೆ ನೀಡದ ತಿಂಡಿ ತಿನಿಸುಗಳೇ ಇಲ್ಲ ..ಆದರೂ ಆ ಸಂಬಂಧಿಕರಿಗೆ  ಅತ್ತೆಯ ಸೊಸೆಗೆ( ನನಗೆ) ಏನಾದರೂ ತಿಂಡಿ ಮಾಡಿ  ಕೊಡಬೇಕೆಂದು ಅನಿಸಲಿಲ್ಲ..ಅತ್ತೆಯ ತಮ್ಮ ತಮ್ಮನ ಮಡದಿಯ ಮನೆ ನಮ್ಮ ಮನೆ ಹತ್ತಿರದಲ್ಲಿ ಇದ್ದು ದಿನಾಲೂ ಮನೆ ಮುಂದಿನ ರಸ್ತೆಯಲ್ಲಿ ಓಡಾಡುತ್ತಿದ್ದರೂ ಒಂದು ದಿನವಾದರೂ ತಮ್ಮ ಮನೆಗೆ ಒಂದು ಹೊತ್ತಿನ ಊಟಕ್ಕೆ ಕರೆಯಬೇಕೆನಿಸಲಿಲ್ಲ..? ತಿಂಡಿ ತಂದು ಕೊಡಬೇಕೆನಿಸಲಿಲ್ಲ ಯಾಕೆ ? ಅದಕ್ಕಿಂತ ಮೊದಲು ನನಗೆ ಎರಡು ಮೂರು ತಿಂಗಳಾಗಿ ಗರ್ಭ ಹೋಗಿತ್ತು.. ಹಾಗಾಗಿಯೂ ಈ ಬಾರಿಯೂ ಉಳಿಯಲಾರದೆಂಬ ತಾತ್ಸಾರ ಇತ್ತೇ ? ಒಂದೊಮ್ಮೆ ಗರ್ಭಪಾತವೇ ಅಗುವುದಾದರೂ ಕೂಡ ಸಹಜವಾದ ಬಯಕೆ ಆಗ ಕೂಡ ಇರುತ್ತದಲ್ಲ...ಅದಿವರಿಗೆ ಅರ್ಥವಾಗಿಲ್ಲವೇಕೆ? ಹೇಗೂ ಗರ್ಭ ಹೋಗುತ್ತದೆ,ಹಾಗಾಗಿ ಇವಳಿಗೆ ತಿಂಡಿ ತಿನಿಸುಗಳು ಕೊಟ್ಟರೆ ವೇಸ್ಟ್  ಎಂದು ಕೊಂಡರೇ ? ನನಗೆ ಇಂದಿಗೂ ಅರ್ಥವಾಗಿಲ್ಲ..ನನ್ನ  ಅಮ್ಮ ಅಕ್ಕನ ಹೊರತಾಗಿ ಯಾರೂ ನನಗ ಬಸುರಿ ಸಮ್ಮಾನ( ಔತಣ) ಬದಲಿಗೆ ತಿಂಡಿ ತಿನಿಸುಗಳನ್ನು ತಂದು ಕೊಟ್ಟದ್ದಿಲ್ಲ.
ಇರಲಿ ,ಕೊಡದಿದ್ದುದೇ ಒಳ್ಳೆಯದಾಯಿತು.
ಕೊಟ್ಟವರ ಕೈ ಯಾವಾಗಲೂ ಮೇಲೆ,ತಗೊಂಡವರ ಕೈ ಯಾವಾಗಲೂ ಕೆಳಗೆ ಇರುತ್ತದೆ.ಇವರುಗಳು ಕೊಡದ ಕಾರಣ ನನ್ನ ಕೈ ಕೆಳಗಾಗಲಿಲ್ಲ .ಹಾಗಾದಂತೆ ದೇವರು ಕಾದಿರಬೇಕು.ಈವತ್ತು ಹವ್ಯಕಾಂಗಣ ವಾಟ್ಸಪ್ ಗ್ರೂಪಿನಲ್ಲಿ  ಹಲಸಿನ ಹಣ್ಣಿನ ಚಿತ್ರ ಹಾಕಿದ್ಷರು.ನೋಡುತ್ತಲೇ ಇವೆಲ್ಲ ನೆನಪಾಗಿ ಬರೆದೆ..ಕಾಕತಾಳೀಯ ಎಂಬಂತೆ ಮಗನ ಹುಟ್ಟು ಹಬ್ಬ ನಾಳೆಯೇ ಇದೆ.
ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕಿ ,ಸರ್ಕಾರಿ ಪದವಿ ಪೂರ್ವ ಕಾಲೇಜು ,ನೆಲಮಂಗಲ

Wednesday 24 April 2019

ನನ್ನೊಳಗೂ ಒಂದು ಆತ್ಮವಿದೆ 7: ಒಂದೇ ಒಂದು ಬಾರಿ ಅತ್ತೆಯವರಿಂದ ಮೆಚ್ಚುಗೆ ಪಡೆದಿದ್ದೆ © ಡಾ.ಲಕ್ಷ್ಮೀ ಜಿ ಪ್ರಸಾದ

ನನಗೆ ಎರಡನೇ ವರ್ಷ ಬಿಎಸ್ಸಿ ಓದುತ್ತಿದ್ದಾಗಲೇ ಸುಮಾರಾಗಿ ಅಡಿಗೆ ಮಾಡಲು ಬರ್ತಾ ಇತ್ತು.ತಂದೆ ಮನೆಯಲ್ಲಿ ತುಂಬಾ ಶುದ್ಧದ ಆಚರಣೆ ಇದ್ದ ಕಾರಣ ಅಮ್ಮ ಹೊರಗೆ ಕುಳಿತಾಗ ತಿಂಗಳಲ್ಲಿ ಮೂರು ದಿನ ಅಡುಗೆ ಮಾಡುವುದು ನನಗೆ ಇಷ್ಟ  ಇಲ್ಲದೇ ಇದ್ದರೂ ಅನಿವಾರ್ಯ ಆಗಿತ್ತು.ರುಚಿಯಾಗದಿದ್ದರೆ ಬೇರೆಯವರ ಸಂಗತಿ ಬಿಡಿ,ನನಗೇ ಮೊದಲಿಗೆ ಊಟ ತಿಂಡಿ ಸೇರದೆ ಸೋಲುವವಳು ನಾನೇ..ಹಾಗಾಗಿ ಅಮ್ಮನಲ್ಲಿ ಕೇಳಿ ಕೇಳಿ ಮಾಡಿ ಮಾಡಿ ಸುಮಾರಾಗಿ ಚೆನ್ನಾಗಿಯೇ ಅಡುಗೆ ಮಾಡಲು ಬರ್ತಾ ಇತ್ತು..ಮದುವೆ ಆಗಿ ಬಂದ ಮೇಲೂ ನನಗೆ ಅಡುಗೆ ಮಾಡಲು ಇಷ್ಟ ಇತ್ತು..ಆದರೆ ಮನೆ ಮಂದಿ ಯಾಕೋ ನನ್ನನ್ನು ಗುಡಿಸಿ ಒರಸಲು,ತೋಟದಿಂದ ಸೋಗೆ ಎಳೆದು ತರಲು ,ಹುಲ್ಲು ಕಿತ್ತು ತರಲು ನೇಮಿಸಿದ ಹೆಣ್ಣಾಳಿನ ಹಾಗೆ ಸೊಸೆ ,ಹೆಣ್ಣಾಳಿಗೆ ಸಂಬಳ ಕೊಡಬೇಕು, ಇವಳಿಗೆ ಅದೂ ಅಗತ್ಯ ಇಲ್ಲ ಎಂದು ಭಾವಿಸಿದ್ದರು  ಕಾಣಬೇಕು.ನನ್ನನ್ನು ಅದೇ ರೀತಿಯ ಕೆಲಸಕ್ಕೆ ಹಚ್ಚುತ್ತಾ ಇದ್ದರು..ಜೊತೆಗೆ ಅತ್ತಿಗೆಯ ಹರಿದ ರವಕೆ ,ಹರಿದ ಚೂಡಿದಾರ್ ಪ್ಯಾಂಟ್ ಹೊಲಿಯಲು,ಅವಳ ತಲೆಯ ಹೇನು ಹೆಕ್ಕಿ ತೆಗೆದು  ಕುಟ್ಟುವ ಕೆಲಸವೂ ನನಗೆ ಮೀಸಲಾಗಿತ್ತು..ನಾನು ಚಿಕ್ಕಂದಿನಲ್ಲೇ ಅತ್ಯತ್ಸಾಹದ ಸ್ವಭಾವ.. ಹಾಗಾಗಿ ಚೆನ್ನಾಗಿ ಕೆಲಸ ಮಾಡಿ ಅತ್ತೆ ಮಾವ ಮನೆ ಮಂದಿಯಿಂದ ಮೆಚ್ಚುಗೆ ಪಡೆಯ ಬೇಕೆಂಬ ಹುಚ್ಚು ಬೇರೆ..ಆದರೆ ನನಗೆ ತಂದೆಯ ಮನೆಯಲ್ಲಿ ನಾನಾಗಿ ಸ್ವಂತ ಆಸಕ್ತಿಯಿಂದ ಯಾವಾಗಲಾದರೊಮ್ಮೆ,ಸೋಗೆ ಎಳೆದು ತರುವುದು,ಅಡಿಕೆ ಹೆಕ್ಕುವುದು ಹುಲ್ಲು ತರುವುದು ಬಿಟ್ಟರೆ ಹೆಚ್ಚು ಕಡಿಮೆ ಬೇರೆ ಮನೆ ಕೆಲಸವನ್ನು ಮಕ್ಕಳಲ್ಲಿ ನಮ್ಮ ತಂದೆ ತಾಯಿ ಮಾಡಿಸುತ್ತಾ ಇರಲಿಲ್ಲ.ದನದ ಹಾಲು ಕರೆಯುವ ಕೆಲಸವೂ ಅಷ್ಟೇ, ಯಾವಗಲಾದರೊಮ್ಮೆ ನನ್ನ ಆಸಕ್ತಿಯಿಂದ ನಾನಾಗಿ ಮಾಡುತ್ತಿದ್ದೆನೇ ಹೊರತು ಮನೆಯಲ್ಲಿ ಹೆಚ್ಚೇನೂ ಕೆಲಸವನ್ನು ಅಮ್ಮ ನಮ್ಮಲ್ಲಿ ಮಾಡಿಸುತ್ತಾ ಇರಲಿಲ್ಲ.. ನಮ್ಮ ಮದುವೆಯಾದ ನಾಲ್ಕನೇ ದಿನಕ್ಕೆ ಗಂಡನ ಮನೆಯಲ್ಲಿ ದಿಂಡು ಕಾರ್ಯ ಆಯಿತು ( ಒಂದು ಹೋಮ ಪೂಜೆ ಬಹುಶಃ ಶೋಭನಕ್ಕೆ ಸಂವಾದಿ ಕಾರ್ಯ )
ಅದಕ್ಕೆ ಮೊದಲೇ ನನ್ನಲ್ಲಿ ಅತ್ತೆಯವರು ಹಸು ಕರೆಯಲು ( ಹಾಲು ಹಿಂಡಲು) ಬರುತ್ತಾ ಎಂದು ಕೇಳಿದ್ದರು.. ತಂದೆ ಮನೆಯಲ್ಲಿ ನನಗೆ ಇಷ್ಟ ಬಂದ ದಿನ ಚಂದದ ಕರುವಿನಲ್ಲಿ ಆಟವಾಡುವ ಸಲುವಾಗಿ ಅಥವಾ ಹಸುವಿನ ಮೇಲೆ ಏನೋ ಒಂದು ಪ್ರೀತಿಗೆ ಹಾಲು ಹಿಂಡುತ್ತಿದ್ದೆನಲ್ಲ..ಅತ್ತೆ ಕೇಳಿದ್ದೇ ತಡ ಹ್ಹು ಬರುತ್ತೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದೆ..ಹೇಳಿದ್ದೇ ತಡ ಅಂತ ದಿಂಡಿನ ಮರುದಿನ ನನ್ನ ಅತ್ತೆಯವರು ಬೆಳಗ್ಗೆ ಬೇಗ ಎಬ್ಬಿಸಿ ದೊಡ್ಡ ಚೊಂಬು (ಅಥವಾ ಸಣ್ಣ ಕೊಡಪಾನ ಅನ್ನಬಹುದೋ ಏನೋ) ಹಸುಗಳ ಹಾಲು ಹಿಂಡಲು ಹೇಳಿದರು..ಆ ಚೊಂಬನ್ನು ನೋಡಿಯೇ ನನಗೆ ಗಾಭರಿ ಆಗಿತ್ತು..ನಮ್ಮ ತಂದೆ ಮನೆಯಲ್ಲಿ ಕರುವಾಗಿದ್ದನಿಂದ ನಾನೇ ಎತ್ತಿ ಮುದ್ದಾಡಿದ ಕರುವೇ ಗಡಸಾಗಿ( ಹೆಣ್ಣು ಹಸುವಾಗಿ ) ಕರು ಹಾಕಿದ ಹಸುಗಳ ಹಾಲನ್ನು ಹಿಂಡುತ್ತಿದ್ದೆ.ಊರ ಹಸುಗಳು ಹೆಚ್ಚು ಹಾಲುಕೊಡುವುದಿಲ್ಲ..ಮೂರು ನಾಲ್ಕು ಕುಡ್ತೆ ಹೆಚ್ಚಂದರೆ ಆರು ಕುಡ್ತೆ( ಒಂದು ಲೀಟರ್ ಅ ) ಹಾಲು ಕೊಡುತ್ತಾ ಇದ್ದವು.ಮತ್ತು ನಮ್ಮ ತಂದೆ ಮನೆಯಲ್ಲಿ ಏಕ ಕಾಲಕ್ಕೆ ಹಾಲು ಕೊಡುವ ಎರಡು ಮೂರು ಹಸುಗಳು ಇರುತ್ತಿರಲಿಲ್ಲ.. ಅಕಸ್ಮಾತ್ ಎಲ್ಲ ಗಡಸುಗಳೂ ಒಂದೇ ಸಮಯದಲ್ಲಿ ಅಪರೂಪಕ್ಕೆ ಒಂದಕ್ಕಿಂತ ಹೆಚ್ಚು ಹಾಲು ಕರೆಯುವ( ಹಿಂಡುವ) ಹಸು  ಇದ್ದರೂ ಇದ್ದರೂ ನಾನು ಕರೆಯತ್ತಾ ( ಹಾಲು ಹಿಂಡುತ್ತಾ ) ಇದ್ದಿದ್ದು  ಒಂದನ್ನು ಮಾತ್ರ..ಅದೂ ಅಮ್ಮ ಹಸುವನ್ನು ಹಟ್ಟಿಯಿಂದ ಹೊರಗಡೆ ತಂದು ಜಗಲಿಯಲ್ಲಿ ಕಟ್ಟಿದಾಗ ಮಾತ್ರ..ನನಗೋ ಸೆಗಣಿ ಅಂದರೆ ಆಗ ಮಾತ್ರವಲ್ಲ ಈಗ ಕೂಡ ತುಂಬಾ ಅಸಹ್ಯ..ಅದರ ವಾಸನೆ ಬಣ್ಣ ಎರಡೂ ನನಗಾಗಗದು..ಹಾಗಾಗಿ ಹೊರಗೆ ಜಗಲಿಯಲ್ಲಿ ಕಟ್ಟಿದಾಗ ಹಸುವಿನ ಸೆಗಣಿ ಮೆಟ್ಟಬೇಕಾಗಿ ಬರುವುದಿಲ್ಲ.. ಹಟ್ಟಿಯಲ್ಲಿ ಹಸುಗಳ ಸೆಗಣಿ ಇರುತ್ತದೆ..ಅದರ ಮೇಲೆ ಸ್ವಲ್ಪ ಸೊಪ್ಪು ಹಾಕಿ ಕಾಲಿಗೆ ಬಟ್ಟೆಗೆ ತಾಗದಂತೆ ಮಾಡಿ ಹಾಲು ಹಿಂಡುತ್ತಾರೆ.
ಅತ್ತಯವರು ನನಗೆ ದೊಡ್ಡ ಚೊಂಬು ಕೊಟ್ಟಾಗಲೇ ಹಸು ಅಷ್ಟು ಹಾಲು ಕೊಡುತ್ತೆ ಅಂತ ನನಗೆ ಅಂದಾಜು ಆದ್ದು. ಜರ್ಸಿ ಹಸುಗಳು ಮೂರು ನಾಲ್ಕು ಲೀಟರ್ ಹಾಲು ಕೊಡುತ್ತವೆ‌.ಅತ್ತೆ ಮನೆಯಲ್ಲಿ ಇದ್ದದ್ದು ಇಂತಹ ನಾಲ್ಕಾರು ದೊಡ್ಡ ಜಾತಿಯ ಜರ್ಸಿ ಹಸುಗಳು..ಹಾಲು ಹಿಂಡಲು ಬರುತ್ತೆ ಎಂದು ಒಪ್ಪಿಕೊಂಡು ಆಗಿತ್ತಲ್ಲಾ..ಬೇರೆ ವಿಧಿ ಇಲ್ಲದೆ ಸೆಗಣಿಯ ಮೇಲೆ ಹೇಗೋ ಕುಳಿತು ಹಾಲು ಹಿಂಡಲು ಶುರು ಮಾಡಿದೆ..ನಿಯಮಿತವಾಗಿ ಹಾಲು ಹಿಂಡಿ ಅಭ್ಯಾಸವಿಲ್ಲದ ನನಗೆ ದೊಡ್ಡ ಚೊಂಬಿ‌ನ. ಕಾಲಂಶದಷ್ಟು ಹಾಲು ಹಿಂಡುವಷ್ಟರಲ್ಲಿ ಕೈಗಳು ಸೋತು ಹೋದವು..ಪೂರ್ತಿ ಹಿಂಡಲು ಸಾಧ್ಯವಾಗದೆ ಕರುವನ್ನು ಹಾಲು ಕುಡಿಯಲು ಬಿಟ್ಟು ನಾನು ಎದ್ದು ನಾನು ಹಟ್ಟಿಯಿಂದ ಮನೆಗೆ ಬಂದೆ..(ಹಟ್ಟಿಗೂ ಮನೆಗೂ ಐವತ್ತು ಮೀಟರ್ ಗಳಷ್ಟು ಅಂತರ ಇತ್ತು ) ಇಷ್ಟು ಬೇಗ ಆಯ್ತಾ ? ಎಂದು ಅತ್ತೆ ತುಸು ಆಶ್ಚಯ್ರದಿಂದ  ಕೇಳಿ ನನ್ನ ಕೈಲ್ಲಿದ್ದ ಹಾಲಿನ ಚೊಂಬನ್ನು ತೆಗೆದುಕೊಂಡು ನೋಡಿದರು..ಹಾಲು ಇಷ್ಟೇ ಸಿಕ್ಕಿದ್ದಾ ಕೇಳಿದರು..ಕೈ  ನೋವಾಗಿ ಅರ್ಧದಲ್ಲೇ ಬಿಟ್ಟು ಬಂದೆ ಎಂದು ಹೇಳಲು ನನ್ನ ಸ್ವಾಭಿಮಾನಕ್ಕೆ ಪೆಟ್ಟಾಗಿ ( ನನಗೆ ಹಾಲು ಹಿಂಡಲು ಬರುತ್ತೆ ಎಂದು ಹಿಂದಿನ ದಿನವಷ್ಟೇ ಬಹಳ ಆತ್ಮವಿಶ್ವಾಸದಿಂದ ಹೇಳಿ ಕೊಂಡಿದ್ಸೆನಲ್ಲ)  ಹ್ಹೂ ಎಂದು ಹೂಗುಟ್ಟಿದೆ..ಅತ್ತೆ ತಕ್ಷಣವೇ ಕರುವನ್ನು ಹಾಲು ಕುಡಿಯಲು ಬಿಟ್ಟು ಬಂದೆಯಾ ? ಎಂದು ಗಾಭರಿ ಯಿಂದ ಕೇಳಿದರು.ಹೌದು ಎಂದು ಹೇಳಿದೆ. ಗಡಿಬಿಡಿಯಿಂದ ಅದೇ ಹಾಲಿನ ಚೊಂಬು ಹಿಡಿದುಕೊಂಡು ಹಟ್ಟಿಗೆ ಓಡಿದರು.. ಓಡಿ ಎಂತ ಪ್ರಯೋಜನ? ಕರು ಚಂದಕ್ಕೆ ಬಾಲ ಎತ್ತಿ ಯಥೇಚ್ಛವಾಗಿ ಹಾಲು ಕುಡಿದು ಸಂಭ್ರಮಿಸುತ್ತಾ ಇತ್ತು..ಆಗ ನನ್ನ ಅತ್ತೆಯವರ ಮುಖದ ಭಾವ ಈಗ ನೆನೆಸಿದರೆ ನಗು ಬರುತ್ತದೆ.😀 ನನ್ನ ಅತ್ಯುತ್ಸಾಹದ ಮಾತು ಕೇಳಿ ನನ್ನನ್ನು ನಾಲ್ಕು ಐದು ಲೀಟರ್ ಹಾಲು ಕೊಡುವ ಹಸುವಿನ ಹಾಲು ಹಿಂಡಲು ಹೇಳಿದ ತನ್ನ ಮೂರ್ಖತನಕ್ಕೆ ಪೆಚ್ಚಾದರೋ..ಹಾಲು ಸಿಗದ ಬಗ್ಗೆ ಚಿಂತೆ ಆಯಿತೋ( ದಿನ ನಿತ್ಯ ಕೆ ಎಮ್ ಸಿಗೆ ನಿಗಧಿತ ಪ್ರಮಾಣದ ಹಾಲು ಮಾರಾಟ ಮಾಡಬೇಕಾದ ನಿರ್ಬಂಧ ಇತ್ತು ,ಅಥವಾ ಇವರುಗಳು ಹಾಗೆ ನಿರ್ಬಂಧ ಹಾಕಿ ಕೊಂಡಿದ್ದರೋ ಗೊತ್ತಿಲ್ಲ!),ಕರುವಿಗೆ ಅಜೀರ್ಣ ಆದರೆ ಎಂದು ಭಯಪಟ್ಟರೋ..ಹಾಲು ಹಿಂಡಲು ಬರುತ್ತೆ ಎಂದ ನನ್ನ ಮೂರ್ಖತನಕ್ಕೆ ಮರುಕ ಉಂಟಾಯಿತೋ..ಸಂಬಂಧಿಕರೆಲ್ಲ ಸೊಸೆಗೆ ಹಾಲು ಹಿಂಡಲು ಬರುತ್ತಾ ಎಂದು ಕೇಳಿದರೆ ಹೇಗೆ ಉತ್ತರಿಸುವುದು ಎಂದು ಆತಂಕವಾಯಿತಾ..ಮನೆ ಮಂದಿಗೆ ಏನು ಹೇಳುವುದೆಂದು ತೋಚಲಿಲ್ಲವಾ ಗೊತ್ತಿಲ್ಲ.. ಅವರ ಮುಖದಲ್ಲಿ ಏಕ ಕಾಲದಲ್ಲಿ ಹರಡಿದ ಭಾವನೆಗಳನ್ನು ಊಹಿಸಲು ನನಗೆ ಆಗ ಮಾತ್ರವಲ್ಲ ಈಗಲೂ ಸಾಧ್ಯವಾಗುತ್ತಾ ಇಲ್ಲ..
ಅದಾಗಿ ನಾವು  ಒಂದೆರಡು ಅಲ್ಲಿ ಇಲ್ಲಿ ಔತಣಕ್ಕೆ ಹೋಗಿ ಬಂದೆವು.ನಂತರ ನಾನು ಕಾಲೇಜಿಗೆ ಹೊರಟು ನಿಂತೆ.ಇಂಗ್ಲಿಷ್ ಪರೀಕ್ಷೆ ಪ್ರಿಪರೇಟರಿ ಬರೆಯಲು ಬಾಕಿ ಇತ್ತು..ಒಂಚೂರು ಓದಿದ ಹಾಗೆ ಮಾಡಿ ಕಾಲೇಜಿಗೆ ಬಂದೆ.ಆಗ ನಾನು ಮತ್ತು ತಮ್ಮ ಈಶ್ವರ ಭಟ್ ಉಜಿರೆಯಲ್ಲಿ  ಪೆಜತ್ತಾಯರು ಓದುವ ಮಕ್ಕಳಿಗಾಗಿಯೇ ಕಟ್ಟಿಸಿದ ಸಾಲು ಕೊಠಡಿಗಳಲ್ಲಿ ಒಂದು ಸಣ್ಣ ಕೊಠಡಿಯಲ್ಲಿ ಬಾಡಿಗೆಗೆ ಇದ್ದು ಸ್ವತಃ ಅಡಿಗೆ ಮಾಡಿಕೊಂಡು ಕಾಲೇಜಿಗೆ ಹೋಗುತ್ತಿದ್ದೆವು.. .ಮೊದಲ ವರ್ಷ. ಮೆಸ್ ನಲ್ಲಿ ಇದ್ದೆವು..ಆದರೆ ತಿಂಗಳು ತಿಂಗಳು ಇನ್ನೂರು ಮುನ್ನೂರು ರೂಗಳಷ್ಟು ಮೆಸ್ ಗೆ ಕಟ್ಟಬೇಕಿತ್ತು .ಇಪ್ಪತ್ತೆಂಟು ವರ್ಷಗಳ ಹಿಂದಿನ ಸಂಗತಿ ಇದು.ನಮ್ಮಿಬ್ಬರ ಮೆಸ್ ಬಿಲ್ ಕೊಡಲು ನಮ್ಮ ತಂದೆ ತಾಯಿ ತುಂಬಾ ಕಷ್ಟಪಡಬೇಕಾಗುತ್ತದೆ ಎಂಬ ಅರಿವು ನಮಗಿತ್ತು..ಹಾಗಾಗಿ ಎರಡನೇ ಬಿಎಸ್ಸಿ ಯ ಆರಂಭದಲ್ಲೇ ಪೆಜತ್ತಾಯರ ಬಾಡಿಗೆ ಕೋಣೆಗೆ ನಾನು ಮತ್ತು ತಮ್ಮ ಬಂದಿದ್ದೆವು.ನಾನೇ ಸೀಮೆ ಎಣ್ಣೆ ಸ್ಟವ್ ನಲ್ಲಿ ಸಾರು ಪಲ್ಯ ಏನಾದರೂ ಮಾಡುತ್ತಿದ್ದೆ.ಅಕ್ಕಿಯನ್ನು ತೊಳೆದು ಕುದಿ ಬರಿಸಿ ನಾವೇ ರಟ್ಟಿನ ಪೆಟ್ಟಿಗೆಯಲ್ಲಿ ಬೈಹುಲ್ಲಿನ ಹಾಸಿಗೆ ತುಂಬಿ ತಯಾರು ಮಾಡಿದ  ದೇಶಿ  ಸ್ವಮೇಕ್ ಚೈನಾ ಪಾಟ್ ? 😀 ನಲ್ಲಿ ಇಟ್ಟು ಅನ್ನ ಬೇಯಿಸುತ್ತಾ ಇದ್ದೆವು.ವಾರಕ್ಕೊಮ್ಮೆ ಪೆಜತ್ತಾಯರ ಮನೆಗೆ ಹೋಗಿ   ಅವರ ತುರಿ ಮಣೆಯಲ್ಲಿ  ತೆಂಗಿನ ಕಾಯಿ ತುರಿದು( ನಮ್ಮ ತಂದೆ ಮನೆಯ ಸಣ್ಣ ತೋಟದಲ್ಲಿ ಕೆಲವು ತೆಂಗಿನ ಮರ ಇದ್ದು ನಾವು ರೂಮಿಗೆ ಸುಲಿದ ನಾಲ್ಕಾರು ತೆಂಗಿನ ಕಾಯಿ ತಗೊಂಡು ಹೋಗುತ್ತಾ ಇದ್ದೆವು) ಅವರ ರುಬ್ಬುವ ಕಲ್ಲಿನಲ್ಲಿ ರುಬ್ಬಿ ತಂದು ಸಾಂಬಾರ್ ಮಾಡುತ್ತಾ ಇದ್ದೆ‌.ಎರಡು ಮೂರು ದಿವಸ ಬೆಳಗ್ಗೆ ಸಂಜೆ ಕುದಿಸಿ ಬಳಸುತ್ತಾ ಇದ್ದೆವು..
ಉಜಿರೆಗೆ ಬಂದು ಈ ಕೊಠಡಿಗೆ ಪ್ರಸಾದ್ ಜೊತೆ ಬಂದೆ..ಅಷ್ಟೇ.. ಪ್ರಸಾದ್ ಮುಖ ನೋಡಬೇಕಿತ್ತು..😀 ಪ್ರಸಾದ್ ಮನೆಯವರು ಆಗಿನ ಕಾಲಕ್ಕೆ ಸಾಕಷ್ಟು ಸ್ಥಿತಿ ವಂತರಾಗಿದ್ದರು(  ಸಾಕಷ್ಟು ಸಿರಿವಂತರಾಗಿದ್ದರು) ಅತ್ತೆ ಮದುವೆ ಆಗಿ ಬಂದಾಗ ಹೆಚ್ಚೇನೂ ಇರಲಿಲ್ಲವಂತೆ..ಅತ್ತೆ ಮತ್ತು ಮಾವ ಸ್ವತಃ ಕೊಟ್ಟು ಪಿಕ್ಕಾಸು( ಹಾರೆ ಗುದ್ದಲಿ) ಹಿಡಿದು ಮಣ್ಣು ಸಮತಟ್ಟು ಮಾಡಿ ಅಡಕೆ ಬಾಳೆ ತೆಂಗು ಬೆಳೆಸಿದ್ದರಂತೆ( ಅತ್ತೆಯವರು ಯಾವಾಗಲೋ ಮಾತಿನ ನಡುವೆ ಹೇಳಿದ್ದರು).ಪ್ರಸಾದರಿಗೆ  ಹಾಗಾಗಿ ನಮ್ಮಷ್ಟು ಬಡತನವನ್ನು ಅನುಭವಿಸಿ ಗೊತ್ತಿರಲಿಲ್ಲ.. ಹಳೆಯ ಹೆಂಚಿನ ಸಣ್ಣ ಕೊಠಡಿ, ಒಂದೆಡೆ ನನ್ನ ಮತ್ತು ತಮ್ಮನ ಬಟ್ಟೆಗಳು ಚಾಪೆ,ಮತ್ತೊಂದೆಡೆ ನಮ್ಮ ಸ್ವಮೇಕ್ ದೇಸಿ ಚೈನಾಪಾಟ್..ಇನ್ನೊಂದು ಕಡೆ ಸೀಮೆ ಎಣ್ಣೆಯ ಸ್ಟೌ..
ಈ ಸಾಮಾನುಗಳ ನಡುವೆ ಮಲಗಲು ತೀರಾ ಕಡಿಮೆ ಜಾಗ ಇತ್ತು..ಒಂದು ವಾರ ನಾನು ತಮ್ಮ ಹೇಗೋ ಕೈಕಾಲು ಸುರುಟಿಕೊಂಡು ಮಲಗಿದ್ದೆವು..ನಂತರ ಪಕ್ಕದ ಕೊಠಡಿಯಲ್ಲಿ ನಮ್ಮ ಹಾಗೇ ಬಂದ ಹುಡುಗ ಇದ್ದ.( ಅವನ ಹೆಸರು ಮರೆತು ಹೋಗಿದೆ ಈಗ)ಅವನಿಗೆ ಮತ್ತು ನನ್ನ ತಮ್ಮನಿಗೆ ಸ್ನೇಹವಾಗಿ ಅವರಿಬ್ಬರೂ ಅವನ ಕೊಠಡಿಯಲ್ಲಿ ಮಲಗುತ್ತಿದ್ದರು..ಹಾಗಾಗಿ ನನಗೆ ಸ್ವಲ್ಪ ಆರಾಮವಾಗಿತ್ತು.
ಈ ಕೊಠಡಿ ನೋಡಿ ನಮ್ಮ ಪರಿಸ್ಥಿತಿ ಪ್ರಸಾದರಿಗೆ ಅರ್ಥವಾಗಿದ್ದಿರಬೇಕು.ನನ್ನ ಕೈಗೆ ಸ್ವಲ್ಪ ದುಡ್ಡು ಕೊಟ್ಟು ಅವರು ಹಿಂದೆ ಮನೆಗೆ ಬಂದು ‌ಮರುದಿನವೇ ಉದ್ಯೋಗ ನಿಮಿತ್ತ ಬೆಂಗಳೂರು ನಡೆದರು..
ಅಂತೂ ಇಂತೂ ಎರಡನೇ ಬಿಎಸ್ಸಿ ಅಂತಿಮ ಪರೀಕ್ಷೆಗಳನ್ನು ಬರೆದು ನಾನು ಅತ್ತೆ ಮನೆಗೆ ಬಂದೆ..ಮತ್ತೆ ಒಂದೆರಡು ದಿನದ ಒಳಗೆ ಪ್ರಸಾದ್ ಬಂದು ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಬಂದರು..ಅವರು ಹನುಮಂತ ನಗರದಲ್ಲಿ ಚಿಕ್ಕದೊಂದು ಮನೆ ಬಾಡಿಗೆಗೆ ಹಿಡಿದಿದ್ದರು.ರಾತ್ರಿ ಬಸ್ಸಿನಲ್ಲಿ ಬರುವಾಗ ಘಾಟಿ ಹತ್ತುವಾಗ ತುಂಬಾ ವಾಂತಿಯಾಗಿ ನನಗೆ ಬೆಳಗಿನ ಜಾವ ಮನೆಗೆ ತಲುಪುವಷ್ಟರಲ್ಲಿ ಸುಸ್ತಾಗಿ ಕಣ್ಣು ಕತ್ತಲಿಟ್ಟಿತ್ತು..ಬಂದು ಮುಖವನ್ನು ತೊಳೆದ ಹಾಗೆ ಮಾಡಿ ಬರುವಷ್ಟರಲ್ಲಿ ಪ್ರಸಾದ್ ಹಾಸಿಗೆ ಬಿಡಿಸಿ ಕೊಟ್ಟರು.. ನಾನು ಮಲಗಿದೆ..ಎಷ್ಟು ಹೊತ್ತಾಯಿತೋ ಗೊತ್ತಿಲ್ಲ.. ರೈಲು ಕೂ ಹಾಕಿದ ಹಾಗೆ ಭಯಾನಕ ಸದ್ದಾಗಿ ಗಾಭರಿಕೊಂಡು ಎಚ್ಚರಗೊಂಡೆ.ನನ್ನ ಗಾಭರಿ ನೋಡಿ ಪ್ರಸಾಸರಿಗೂ ಗಾಭರಿ ಏನಾಯ್ತು ಅಂತ..ಮತ್ತೆ ಪುನಃ ಅದೇ ಸದ್ದು..ಅಮ್ಮಾ ಎಂದು ಕಿರುಚಿದೆ..ಪ್ರಸಾದ್ ಓಡಿಕೊಂಡು ಬಂದು ಎಂತ ಎಂತಾಯಿತು ಎಂದು ಸಮಾಧಾನಿಸಿ ಕೇಳುವಷ್ಟರಲ್ಲಿ ಮತ್ತೆ ಅದೇ ಸದ್ದು.. ಮತ್ತೆ ಗಾಭರಿಯಾಗಿ ಆ ಕಡೆ ಈ ಕಡೆ ನೋಡಿದೆ..ಇರು ಕುಕ್ಕರ್ ಆಫ್ ಮಾಡಿ ಬರುತ್ತೇನೆ ಎಂದು ಪ್ರಸಾದ್ ಅಡಿಗೆ ರೂಮಿನ ಕಡೆ ಹೋದರು! ತಕ್ಷಣವೇ ಎಚ್ ಜಿ ರಾಧಾದೇವಿ,ಸಾಯಿಸುತೆ ಮೊದಲಾದವರ ಕಾದಂಬರಿಗಳಲ್ಲಿ ಕುಕ್ಕರ್ ಕೂ ಹಾಕಿದ ಬಗ್ಗೆ  ಓದಿದ್ದು ನೆನಪಾಯಿತು..ಹ್ಹಾ..ಹಾಗಾದರೆ ಆ ನನ್ನನ್ನು ಗಾಭರಿಗೊಳಿಸಿದ ಸದ್ದು ಅದೆಂದು ಅರ್ಥವಾಯಿತು..ಕುಕ್ಕರ್,ಮಿಕ್ಸಿ,ಗ್ಯಾಸ್ ಸ್ಟವ್,ಟಿವಿ ಡಿಶ್ ಇತ್ಯಾದಿ ಪದಗಳನ್ನು ಇವರುಗಳ ಕಾದಂಬರಿಗಳಲ್ಲಿ ಓದಿದ್ದೆ‌ಇವು ಶ್ರೀಮಂತರ ಮನೆಗಳಲ್ಲಿ ಇರುತ್ತದೆ ಅಂತ ಕೂಡ ಗೊತ್ತಿತ್ತು..ಆದರೆ ಅವು ಹೇಗಿರುತ್ತವೆ,ಕುಕ್ಕರ್ ಕೂ ಹಾಕುವುದೆಂದರೆ ಅಷ್ಟು ಜೋರಾದ ಸದ್ದು ಇರುತ್ತದೆ ಎಂಬ ಊಹೆ ಕೂಡ ನನಗಿರಲಿಲ್ಲ.. ಇನ್ನು ಉಪಯೋಗಿಸುವ ಬಗ್ಗೆ ಹೇಗೆ ಗೊತ್ತಿರುತ್ತದೆ ?ಹಾಗಾಗಿ  ಪ್ರಸಾದ್ ಬೆಳಗ್ಗೆಯೇ ಅಡಿಗೆ ಮಾಡಿಟ್ಟು ಗ್ಯಾಸ್ ಸ್ಟವ್ ಮುಟ್ಟಬೇಡ,ಗೊತ್ತಾಗದೆ ಬೆಂಕಿ ಹಿಡುದರೆ ಕಷ್ಟ, ನಾನು ಸಂಜೆ ಬರುವಾಗ ತಿಂಡಿ ಕಟ್ಟಿಸಿಕೊಂಡು  ಬರುತ್ತೇನೆ,ಈಗ ಮತ್ತು ಮಧ್ಯಾಹ್ನ ಊಟ ಮಾಡು ಎಂದು ಹೇಳಿ ಕುಕ್ಕರ್ ಮುಚ್ಚಳ ತೆರೆದು ಇಟ್ಟು ಹೋಗಿದ್ದರು‌..ಸಂಜೆ ಬೇಗನೇ ಬಂದರು.ಬರುವಾಗ ಎರಡು ಮಸಾಲೆ ದೋಸೆ ಕಟ್ಟಿಸಿಕೊಂಡೇ ಬಂದಿದ್ದರು.ಬಂದು ನನಗೆ ಕಾಫಿ ಮಾಡಿ ಕೊಟ್ಟು,( ನನ್ನ ತಾಯಿ ಮನೆಯಲ್ಲಿ ನಮಗೆಲ್ಲರಿಗೂ ಬೆಲ್ಲದ ಕಾಫಿ ಕುಡಿದು ಅಭ್ಯಾಸ) ಅವರು ಚಹಾ ಮಾಡಿಕೊಂಡು ಕುಡಿದರು. ಅಮೇಲೆ ನಿನಗೆ ತಿನ್ನಲು ಎಂತಾದರೂ ಬೇಕ? ಎಲ್ಲ ಇಲ್ಲಿ ಹತ್ರವೇ ಸಿಗುತ್ತದೆ..ಏನಾದರೂ ಬೇಕಿದ್ದರೆ ಹೇಳು ಎಂದರು..ತಕ್ಷಣವೇ ನಾನು ಮೊದಲ ವರ್ಷ ಬಿಎಸ್ಸಿ ಓದುವಾಗ ನಮ್ಮ ಮೆಸ್ ನಲ್ಲಿ ಇದ್ದ ಸಹಪಾಠಿ ಸಿರಿವಂತರ ಮನೆ ಮಗಳು ಸುಮನ್ ಪಪ್ಸ್ ಬಗ್ಗೆ ಹೇಳಿದ್ದು ನೆನಪಾಯಿತು. ಅವಳೊಂದು ಆದಿತ್ಯವಾರ  ನಾವೆಲ್ಲ ಉಜಿರೆ ಪೇಟೆಗೆ ಹೋಗಿ ಪಪ್ಸ್ ತಿಂದು ಬರುವ ಎಂದು ಹೇಳಿದ್ದಳು.ಅವಳನ್ನು ಹೊರತು ಪಡಿಸಿ ನಾನೂ ಸೇರಿದಂತೆ ಇತರೆ ಮೆಸ್ ನಲ್ಲಿ ಇದ್ದ ಹುಡುಗಿಯರಿಗೆ ಆ ಶಬ್ದವನ್ನೇ ಕೇಳಿ ಗೊತ್ತಿರಲಿಲ್ಲ.. ಅದೇನೆಂದು ಕೇಳಿದೆವು..ಅದು ಒಂತರಾ ಪಲ್ಯವನ್ನು ನಡುವೆ ಹಾಕಿ ಬ್ರೆಡ್ ಅನ್ನು ಹುರಿದ ಹಾಗೆ ಇರುತ್ತದೆ‌.ತುಂಬಾ ರುಚಿ ಇರುತ್ತದೆ ಎಂದು ಹೇಳಿದ್ದಳು. ಹಾಗೆ ನಾವೆಲ್ಲ‌ ಮೆಸ್ಸಿನ
ಕಾವೇರಿ ಆಂಟಿಯ ಅನುಮತಿ ಪಡೆದು ಕೈಯಲ್ಲಿ ಸ್ವಲ್ಪ ದುಡ್ಡು ಹಿಡಿದುಕೊಂಡು ಉಜಿರೆ ಪೇಟೆಯಲ್ಲಿ ಇದ್ದ ಒಂದೇ ಒಂದು ಬೇಕರಿಗೆ ಬಂದೆವು.ಅಲ್ಲಿ ಸುಮನ್ ಪಪ್ಸ್  ಕೊಡಿ ಎಂದು ಅಲ್ಲಿದ್ದವರಲ್ಲಿ ಕೇಳಿದವರು..ಬಹುಶಃ ಅಲ್ಲಿದ್ದವರು ಕೂಡ ಮೊದಲ ಬಾರಿಗೆ ಆ ಪದ ಕೇಳಿದ್ದರೋ ಏನೋ ಗೊತ್ತಿಲ್ಲ.. ಒಂಚೂರು ಪೆಚ್ಚು ಪೆಚ್ಚಾಗಿ ನಮ್ಮಲ್ಲಿ ಅದಿಲ್ಲ ,ಬೇರೆ ಏನು ಬೇಕು ಕೇಳಿದರು..ಹಾಗೆಲ್ಲ ಬೇಕರಿ ತಿಂಡಿ ತಿನ್ನುವಷ್ಟು ದುಡ್ಡು ನನ್ನಲ್ಲಿ ಇರಲಿಲ್ಲ, ನನ್ನ ತಂದೆ ತಾಯಿ ನನ್ನನ್ನು ಬಹಳ ಕಷ್ಟ ಪಟ್ಟು ಓದಿಸುತ್ತಿದ್ದಾರೆ ಎಂಬ ಅರಿವು ನನಗಿತ್ತು..ಹಾಗಾಗಿ ತಕ್ಷಣವೇ ನಾನು ಬೇರೇನು ಬೇಡವೆಂದೆ..ಸುಮನ್ ,ಸಲೀಲ,ಸಂಧ್ಯಾ ಬಿಟ್ಟರೆ ಉಳೊದವರೆಲ್ಲರ ಪರಿಸ್ಥಿತಿ ನನಗಿಂತ ಬೇರೆಯಾಗಿ ಇರಲಿಲ್ಲ.. ಹಾಗಾಗಿ ಅವರುಗಳು ಕೂಡ ಬೇಕರಿ ತಿಂಡಿ ಇಷ್ಟವಿದ್ದರೂ ಕೂಡ ನನ್ನಂತೆ ಬೇಡ ಎಂದರು‌.ನಾವ್ಯಾರೂ ಏನನ್ನೂ ತೆಗೆದುಕೊಳ್ಳದ ಕಾರಣ ಸುಮನ್ ಕೂಡ ಏನನ್ನು ತೆಗೆದುಕೊಳ್ಳದೆ ನಮ್ಮ ಜೊತೆ ಹಿಂತಿರುಗಿದಳು..ಸಾಕಷ್ಟು ವಿದ್ಯಾವಂತರ,ಸರ್ಕಾರಿ ಉದ್ಯೋಗದಲ್ಲಿದ್ದು ಸಿರಿವಂತರ ‌ಮಗಳಾದರೂ ಸುಮನ್ ನಮ್ಮೊಂದಿಗೆ ಹೊಂದಿಕೊಂಡಿದ್ದಳು..ಒಂದು ದಿನ ಕೂಡ ತಾನು ಸಿರಿವಂತೆ ಎಂಬಂತೆ ನಡೆದುಕೊಂಡಿರಲಿಲ್ಲ.. ಕಾಲೇಜಿಗೆ ಸೇರಿ ಒಂದೆರಡು ತಿಂಗಳುಗಳಲ್ಲಿಯೇ  ಚುರುಕಿನ ಹುಡುಗಿಯಾಗಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿ ಗುರುತಿಸಿಕೊಂಡಿದ್ದಳು.ಅವಳು ಪದವಿಯಲ್ಲಿ ಪತ್ರಿಕೋದ್ಯಮ ತೆಗೆದು ಕೊಂಡಿದ್ದು ನಿರಂಜನ ವಾನಳ್ಳಿಯವರು ಶುರು ಮಾಡಿದ,ಅಥವಾ ಮೊದಲೇ ಇದ್ದುದನ್ನು ಮುಂದುವರಿಸುತ್ತಾ ಇದ್ದ ಕೈ ಬರಹದ   ಕಾಲೇಜು ವಾಲ್ ಮ್ಯಾಗಜಿನ್ ( ಕೈ ಬರಹದ ಭಿತ್ತಿ ಪತ್ರಿಕೆ) ನಲ್ಲಿ ಲೇಖನಗಳನ್ನು ಬರೆಯುತ್ತಿದ್ದಳು.ಕವನಗಳನ್ನು ಬರೆಯುತ್ತಿದ್ದಳು.ಶ್ರೀಮಂತಿಕೆಯ ಜೊತೆಗೆ ಪ್ರತಿಭೆ,ಸಜ್ಜನಿಕೆ ಸೇರಿ ನಮ್ಮ ‌ಮೆಸ್ ನಲ್ಲಿ ಒಂದು ತನ್ನದೇ ಆದ ವಿಶಿಷ್ಠವಾದ ಸ್ಥಾನವನ್ನು ಗಳಿಸಿದ್ದಳು.ಬಹುಶಃ ಏಳನೆಯ ತರಗತಿಯಲ್ಲಿ ಇದ್ದಾಗ ನಾನು ನಾಟಕ ಬರೆದದ್ದು ಬಿಟ್ಟರೆ ಒಂಬತ್ತನೇ ತರಗತಿಯಲ್ಲಿ ಇದ್ದಾಗ ಒಂದು ಕಥೆ ಬರೆದು ಅಮ್ಮನಿಗೆ ಓದಿ ಹೇಳಿದ್ದೆ.ಚೆನ್ನಾಗಿದೆ ..ಆಗಾಗ ಬರೆಯುತ್ತಿರು ಎಂದು ಅಮ್ಮ ತುಂಬು ಪ್ರೋತ್ಸಾಹ ನೀಡಿದ್ದರೂ ಕೂಡ ನಂತರ ನಾನೇನನ್ನೂ ಬರೆದಿರಲಿಲ್ಲ..ಮೆಸ್ ನಲ್ಲಿ ಸುಮನ್ ನ ಕವಿತೆಗಳಿಗೆ ಬರಹಗಳಿಗೆ ಸಿಗುತ್ತಾ ಇದ್ದ ಮೆಚ್ಚುಗೆ ನನ್ನನ್ನು ಮತ್ತೆ ಬರೆಯಲು ಪ್ರೇರೇಪಿಸಿದೆವು.ನಾನು ನನ್ನಷ್ಟಕ್ಕೆ ರಫ್ ಪುಸ್ತಕದಲ್ಲಿ ಕಥೆಗಳನ್ನು, ಕವಿತೆಗಳನ್ನು ಬರೆಯತೊಡಗಿದೆ‌. ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡಿ ಇಂಗ್ಲಿಷ್ ಗೆ ಆದ್ಯತೆ ಕೊಡುವ ಬಗ್ಗೆ ಒಂದು ಒಂದು ಪುಟ್ಟ ಬರಹ ಬರೆದು ಸುಮನ್ ಗೆ ಕೊಟ್ಟಿದ್ದೆ.ಅದನ್ನು ಓದಿ ಚೆನ್ನಾಗಿದೆ ಎಂದ ಅವಳು ಅದನ್ನು ಕಾಲೇಜಿನ ಭಿತ್ತಿ ಪತ್ರಿಕೆಗೆ ನೀಡಿದ್ದಳು..ಆದೇ ಯಾಕೋ ಅದನ್ನು ನಿರಂಜನ ವಾನಳ್ಳಿ ಅಥವಾ ಇನ್ಯಾರೋ ಆ ಪತ್ರಿಕೆಯ ಜವಾಬ್ದಾರಿ ವಹಿಸಿದವರು ಅದನ್ನು ರಿಜೆಕ್ಟ್ ಮಾಡಿದರು.ಅದನ್ನು ತಿಳಿಸಿದ ಸುಮನ್ " ಇದು ನವೆಂಬರ್ ತಿಂಗಳು ಆಗಿದ್ದರೆ ಖಂಡಿತಾ ವಾಲ್ ಮ್ಯಾಗಜೀನ್ ನಲ್ಲಿ ಹಾಕುತ್ತಿದ್ದರು.ಈಗ ಸಕಾಲ ಅಲ್ಲ ಹಾಗಾಗಿ ಅದನ್ನು ರಿಜೆಕ್ಟ್ ಮಾಡಿರಬಹುದು..ಆದರೂ ಬರಹ ಚೆನ್ನಾಗಿದೆ " ಎಂದು ಹೇಳಿ ಬರೆಯುವ ನನ್ನ ಉತ್ಸಾಹ ಬತ್ತಿ ಹೋಗದಂತೆ ಮೆಚ್ಚುಗೆಯ ಮಾತನ್ನು ಆಡಿದ್ದಳು.ಬಹುಶಃ ಅವಳಿಗೆ ಅವಳ ವಯಸ್ಸನ್ನು ಮೀರಿದ ಪ್ರೌಢತೆ ಇತ್ತೆನಿಸುತ್ತದೆ ನನಗೆ.ಆದರೆ ಮೊದಲ ವರ್ಷ ಬಿಎ ಪರೀಕ್ಷೆ ಆಗುತ್ತಿದ್ದಂತೆ ಅವಳ ಮದುವೆ ಆಯಿತು.. ಅದಾಗಿ ಎಷ್ಟೋ ವರ್ಷಗಳ ನಂತರ ನಾನು 2009 ರಲ್ಲಿ ಬೆಳ್ಳಾರೆ ಯ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕಿಯಾದ ನಂತರ ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನಕ್ಕೆ ಹೋಗಿದ್ದೆ‌.ಆಗ ನನಗೆ ಉಳಿದುಕೊಳ್ಳಲು ಪ್ರಕೃತಿ ಚಿಕಿತ್ಸೆ ಕಾಲೇಜಿನ. ಹಾಸ್ಟೆಲ್  ಮೆಸ್ ಗೆ ಹತ್ತಿರವಾಗಿತ್ತು.ಆಗ ನಾನು ಮೆಸ್ ಗೆ ಹೋಗಿ ಕಾವೇರಿ ಆಂಟಿ ಮತ್ತು ಮಾವ( ಆಗಷ್ಟೇ ಉಜಿರೆ ಹೈಸ್ಕೂಲ್ ನ ಇಂಗ್ಲಿಷ್ ಶಿಕ್ಷಕರಾಗಿ  ಸೇವೆಯಿಂದ ನಿ ವೃತ್ತಿ ಹೊಂದಿದ ವೆಂಕಟರಮಣ ಭಟ್ ಮಾಷ್ಟ್ರು) ಅವರನ್ನು ಭೇಟಿಯಾಗಿದ್ದೆ .ಆಗ ನನಗೆ ಸುಮನ್ ಗೆ ಕ್ಯಾನ್ಸರ್ ಆಗಿ ಗುಣ ಆಗಿ ಮತ್ತೆ ಪುನಃ  ಮರುಕಳಿಸಿದೆ ಎಂದು ಗೊತ್ತಾಯಿತು. ಅವಳ ನಂಬರ್ ತಗೊಂಡು ಫೋನ್ ಮಾಡಿ ಮಾತಾಡಿದೆ.ಎರಡನೇ ಬಾರಿಗೆ ಕ್ಯಾನ್ಸರ್ ಬಂದ ಬಗ್ಗೆ ಬಹಳ ಬೇಸರದಿಂದ ಹೇಳಿದಳು.ಮೊದಲ ಬಾರಿ ಬಂದದ್ದು ಗುಣ ಆಗಿದೆ ತಾನೇ ? ಈ ಬಾರಿಯೂ ಗುಣ ಆಗುತ್ತದೆ, ಸರಿಯಾಗಿ ಚಿಕಿತ್ಸೆ ಪಡೆ ಎಂದು ಧೈರ್ಯ ಹೇಳಿ ನೀನು ಉಜಿರೆಯಲ್ಲಿ ಮೊದಲ ವರ್ಷ ಬಿಎ ಓದುತ್ತಿದ್ದಾಗ ಕತೆ ಕವಿತೆಗಳನ್ನು ಬರೆಯುತ್ತಿದ್ದೆಯಲ್ಲ..ಈಗಲೂ ಬರೆಯುತ್ತಿದ್ದೀಯಾ ಎಂದು ಕೇಳಿದೆ.ಅಪರೂಪಕ್ಕೆ ಮೂಡ್ ಚೆನ್ನಾಗಿದ್ದಾಗ ಬರೆಯುತ್ತೇನೆ ಎಂದು ಹೇಳಿದಳು..

ಪುಸ್ತಕವಾಗಿ ಪ್ರಕಟವಾಗಿವೆಯಾ ಎಂದು  ಕುತೂಹಲದಿಂದ ಕೇಳಿದೆ..ಇಲ್ಲ.. ಪತ್ರಿಕೆಗಳಲ್ಲಿ ನಿನ್ನ ಲೇಖನಗಳು ಪ್ರಕಟವಾಗುತ್ತಿವೆಯಾ ?  ಲಕ್ಷ್ಮೀ ಜಿ ಪ್ರಸಾದ ಎನ್ನುವ ಹೆಸರಿನಲ್ಲಿ ಬರೆಯುತ್ತಿರುವುದು ನೀನಾ ಎಂದು ಕೇಳಿದಳು.ಹೌದು..ನಿನಗೆ ಹೇಗೆ ಗೊತ್ತಾಯಿತು ಎಂದು ಕೇಳಿದಾಗ " ನೀನು ಅಂದು‌ಮೆಸ್ ನಲ್ಲಿ ಇದ್ದಾಗ ಕನ್ನಡ ಭಾಷೆಯ ನಿರ್ಲಕ್ಷ್ಯ ದ ಬಗ್ಗೆ ಒಂದು ಸಣ್ಣ ಲೇಖನ ಬರೆದಿದ್ದೆಯಲ್ಲ..ಅದರ ವಿಸ್ತೃತ ರೂಪದ ಲೇಖನವನ್ನು ನಾನು ವಿಜಯ ಕರ್ನಾಟಕದಲ್ಲಿ ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಶಿಕ್ಷಣ ಎಂಬ ಲೇಖನದಲ್ಲಿ ನೋಡಿದೆ.ಅದರಲ್ಲಿ ಲೇಖಕರ ಹೆಸರು ಲಕ್ಷ್ಮೀ ಜಿ ಪ್ರಸಾದ ಎಂದಿತ್ತು.ಬಹುಶಃ ಅದು ನಿನ್ನ ಲೇಖನವೇ ಇರಬೇಕೆಂದು ಊಹಿಸಿದೆ.ನಿನ್ನ ಬೇರೆ ಲೇಖನಗಳನ್ನು ಓದಿದ್ದೇನೆ,ಚೆನ್ನಾಗಿ ಬರೀತೀಯ..ನನಗೆ ಮದುವೆ ನಂತರ ಹೆಚ್ಚು ಬರೆಯಲಾಗಲಿಲ್ಲ‌‌.ಮಕ್ಕಳಾಗಲಿಲ್ಲ ಅದೇ ಕೊರಗಿನಲ್ಲಿ ಇದ್ದೆ .ನಂತರ ನಾವೊಂದು ಮಗುವನ್ನು ದತ್ತು ಪಡೆದು ಹ್ಯಾಪಿ ಆಗಿದ್ದೆವು‌ ಅಷ್ಟರಲ್ಲಿ ಕ್ಯಾನ್ಸರ್ ಬಂತು..ಅದು ಗುಣ ಆಗಿದೆ ಎಂದು ಉಸಿರುಬಿಡುವಷ್ಟರಲ್ಲಿ ಮತ್ತೆ ಈಗ ಕ್ಯಾನ್ಸರ್ ಕಾಣಿಸಿಕೊಂಡಿದೆ ಎಂದು ಹೇಳಿದಳು..ಆಗ ನೀನು ಚಿಕಿತ್ಸೆ ಪಡೆದು ಗುಣ ಪಡಿಸಿಕೋ ಜೊತೆಗೆ ನಿನ್ನ ಕವಿತೆಗಳನ್ನು ಪ್ರಕಟಿಸು..ನಾವಿದ್ದಾಗಲೂ ಇಲ್ಲದೇ ಇದ್ದಾಗಲೂ ನಾವು ಬರೆದ ಪುಸ್ತಕಗಳು ನಮ್ಮನ್ನು ಚಿರಸ್ಥಾಯಿಯಾಗಿಸುತ್ತವೆ‌.ಬರವಣಿಗೆಗೆ ಅಂತಹ ಶಕ್ತಿ ಇದೆ ಎಂದು ಹೇಳಿದೆ.ಆಗ ಅವಳು ನಿನ್ನ ಪುಸ್ತಕಗಳು ಪ್ರಕಟವಾಗಿದೆಯಾ ಎಂದು ಕೇಳಿದಳು.ಹೌದು ಎಂದು ಹೇಳಿ ಮೂರು ಪುಸ್ತಕಗಳು ಪ್ರಕಟವಾಗಿವೆ, ಈಗ ಐದು ಪುಸ್ತಕಗಳು ಅಚ್ಚಿನಲ್ಲಿ ಇವೆ ಎಂದು ತಿಳಿಸಿದೆ.ಬಹಳ ಸಂತೋಷಗೊಂಡ ಅವಳು " ಲಕ್ಷ್ಮೀ ನಿನಗೆ ಸರ್ಕಾರಿ ಉದ್ಯೋಗ ಸಿಕ್ಕಿದ್ದು ಪುಸ್ತಕಗಳು ಲೇಖನಗಳು ಪ್ರಕಟವಾಗಿದ್ದು ಕೇಳಿ ತುಂಬಾ ಖುಷಿ ಆಯ್ತು..ನಾನು ಕೂಡ ನನ್ನ ಕವಿತೆಗಳನ್ನು ಪ್ತಕಟಿಸುತ್ತೇನೆ ಮತ್ತೆ ಕಳಹಿಸಿಕೊಡುತ್ತೇನೆ ಎಂದು ಉತ್ಸಾಹದಿಂದ ಹೇಳಿದಳು.ನಂತರ ಅವಳ ಕವನ ಸಂಕಲನ ಮತ್ತು ರಂಗೋಲಿ ಅಥವಾ ಚಿತ್ತಾರದ ಒಂದು ಪುಸ್ತಕ ಪ್ರಕಟವಾದ ಬಗ್ಗೆ  ಉಜಿರೆಯ ಇನ್ನೋರ್ವ ಮೆಸ್ ಮೇಟ್ ನಾಪೋಕ್ಲಿನ ವಿದ್ಯಾಳಿಂದ ತಿಳಿಯಿತು (  ಅವರು ಮತ್ತು ಅವರ ಪತಿ ಸುರೇಶ್ ಭಟ್ ( ಉಪನ್ಯಾಸಕರು) ಇಬ್ಬರೂ ಲೇಖಕರಾಗಿದ್ದು ಅವರ ಬರಹ ಗಳು ಪತ್ರಿಕೆಗಳಲ್ಲಿ ಆಗಾಗ ಪ್ರಕಟವಾಗುತ್ತಿರುತ್ತವೆ,ವಿದ್ಯಾ ಮತ್ತೆ ನನಗೆ ಫೇಸ್ ಬುಕ್ ಸ್ನೇಹಿತೆಯಾಗಿದ್ದಾರೆ)
ನಂತರ ಒಂದೆರಡು ವರ್ಷದ ಬಳಿಕೆ  ಹೂ‌ ಮನಸಿನ ಹುಡುಗಿ ದೇವರ ಪಾದವನ್ನು ಸೇರಿದ್ದು ತಿಳಿದು ತುಂಬಾ ಸಂಕಟವಾಯಿತು.
ಅದಿರಲಿ ನನ್ನ ಕಥೆ ಎಲ್ಲಿಂದೆಲ್ಲಿಗೋ ಸಾಗಿದೆ ..ಮತ್ತೆ ಹಿಂದೆ ಬರುತ್ತೇನೆ‌.
ಬೇಸಗೆ ರಜೆ ಮುಗಿಯುತ್ತಿದ್ದಂತೆ ಅಂತಿಮ ವರ್ಷದ ಬಿಎಸ್ಸಿ ಪದವಿ ತರಗತಿಗಳು ಆರಂಭವಾದವು.ನಾನು ಬೆಂಗಳೂರಿನಿಂದ ಮನೆಗೆ ಬಂದು ಪುಸ್ತಕ ಬಟ್ಟೆ ಬರೆ ತೆಗೆದುಕೊಂಡು ಕಾಲೇಜು ಹೊರಟೆ,ಪ್ರಸಾದ್ ನನ್ನನ್ನು ಕಾಲೇಜು ಹಾಸ್ಟೆಲ್ ಗೆ ಸೇರಿಸಿದರು‌.ಹತ್ತನೇ ತರಗತಿ ತನಕ ಜಾಣ ವಿದ್ಯಾರ್ಥಿನಿ ಆಗಿದ್ದ ನಾನು ನಂತರ ಕಲಿಕೆಯಲ್ಲಿ ಹಿಂದೆ ಬಿದ್ದಿದ್ದೆ.ಇಂಗ್ಲಿಷ್ ನಲ್ಲಿ ಮಾಡುವ ಪಾಠ ನನಗೆ ಅರ್ಥವಾಗದೇ ಇದ್ದದು ಇದಕ್ಕೆ ಪ್ರಮುಖ ಕಾರಣವಾಗಿತ್ತು.ಅಂತೂ ಇಂತೂ ಬಿಎಸ್ಸಿ ಪದವಿ ಅಂತಿಮ ವರ್ಷದ ಅಂತಿಮ ಪರೀಕ್ಷೆಗಳು ಮುಗಿದು ಮನೆಗೆ ಬಂದೆ.ಆಗಾಗಲೇ ಪ್ರಸಾದ್ ಬೆಂಗಳೂರಿನ ಕೆಲಸ ಬಿಟ್ಟು ಬಿಟ್ಟಿದ್ದರು‌.ಮನೆಯಲ್ಲಿ ಕೃಷಿ ನೋಡಿಕೊಳ್ಳಲು ಜನ ಸಾಕಾಗುತ್ತಿಲ್ಲ..ನೀನು ಕೆಲಸ ಬಿಟ್ಟು ಬಂದು ಬಿಡು ಎಂದು ಮಾವ ಹೇಳಿದ್ದರಂತೆ.ಅದಕ್ಕೆ ನನ್ನಲ್ಲಿ ಒಂದು ಮಾತು ಕೂಡ ತಿಳಿಸದೆ ಬೆಂಗಳೂರಿನಲ್ಲಿ ಇದ್ದ ಒಳ್ಳೆಯ ಕೆಲಸ ಬಿಟ್ಟು ಬಂದಿದ್ದರು.
ಈಗಂತೂ ನಾನು ಸಂಪೂರ್ಣವಾಗಿ ಮನೆ ಕೆಲಸದ ಆಳಾಗಿ ಬಿಟ್ಟೆ‌.ಬೆಳಗಾಗೆದ್ದು ಮನೆ ಗುಡಿಸಿ ಒರಸಿ ತೋಟಕ್ಕೆ ಹೋಗಿ ಹುಲ್ಲು ತಂದು ಸೋಗೆ ಎಳೆದು, ಗುಡ್ಡದಿಂದ ಒಣ ಕಟ್ಟಿಗೆ ತರುವ,ಹಸು ಕರೆಯುವ ಕೆಲಸಕ್ಕೆ ಮೀಸಲಾದೆ‌.ನನಗೆ ಒಂದು ಲೋಟ ಕಾಫಿ ಮಾಡಿಕೊಳ್ಳುವ ಸ್ವಾತಂತ್ರ್ಯ ವೂ ಇರಲಿಲ್ಲ. ಒಮ್ಮೆ ಅಣ್ಣ ಮತ್ತು ಚಿಕ್ಕಪ್ಪ ನಮ್ಮ ಮನೆಗೆ ಬಂದಿದ್ದರು.ಆ ದಿವಸ ನನಗೆ ಇತರೆ ಕೆಲಸದಿಂದ ವಿನಾಯತಿ ನೀಡಿ ಅಣ್ಣ ಚಿಕ್ಕಪ್ಪಂದಿರ ಹತ್ತಿರ ಮಾತನಾಡಲು ಬಿಟ್ಟು ಉದಾರತೆ ಮೆರೆದಿದ್ದರು ಮನೆ ಮಂದಿ.ಮಧ್ಯಾಹ್ನ  ಊಟ ಆದ ಮೇಲೆ ಅತ್ತೆ ಮಾವ ಮಲಗಿದ್ದರು.ಪ್ರಸಾದ್ ಮತ್ತು ಮೈದುನ ತೋಟದ ಕೆಲಸಕ್ಕೆ ಹೋಗಿದ್ದರು.ಆಗ ಚಿಕ್ಕಪ್ಪ "ಎನಗೊಂದು ಅರ್ಧ ಲೋಟೆ ಚಾಯ ಮಾಡಿ‌ಕೊಡು ಮಗಳೋ,ತಲೆ ಬೇನೆ ಅವುತ್ತು( ನನಗೆ ಅರ್ಧ ಲೋಟ ಚಹಾ ಮಾಡಿ ಕೊಡು ಮಗಳೇ,ತಲೆ ನೋವಾಗುತ್ತಿದೆ) ಎಂದು ಹೇಳಿದರು.ಆಗ ಅಣ್ಣನೂ ನನಗೂ ಒಂದು ಲೋಟ ಇರಲಿ ಎಂದ.ನಾನು ಮನೆ ಮಂದಿ ಏನು ಹೇಳುವರೋ ಎಂದು  ಹೆದರುತ್ತಾ ಹೋಗಿ ಗ್ಯಾಸ್ ಸ್ಟೌ ಹಚ್ಚಿ( ಆಗ ನಾನು ಸರಿಯಾಗಿ ಗ್ಯಾಸ್ ಸ್ಟೌ ,ಮಿಕ್ಸ್,ಕುಕ್ಕರ್ ಗಳ ಬಳಕೆಯನ್ನು ಪ್ರಸಾದರಿಂದ ಕಲಿತಿದ್ದೆ) ಅಲ್ಲೇ ಸಮೀಪದಲ್ಲಿ ಇದ್ದ ಹಾಲಿನ ಪಾತ್ರೆಯಿಂದ ಸ್ವಲ್ಪ ಹಾಲು ತೆಗೆದುಕೊಂಡು ಸ್ವಲ್ಪ ನೀರು ಹಾಕಿ ಸಕ್ಕರೆ ಚಹಾ ಪೌಡರ್ ಹಾಕಿ ಕುದಿಸಿ ಅಣ್ಣ ಮತ್ತು ಚಿಕ್ಕಪ್ಪನಿಗೆ ಚಹಾ ಮಾಡಿ ಕೊಟ್ಟೆ.
ಅತ್ತೆ ಯವರು ನಿದ್ರೆ ಮಾಡಿ ಎದ್ದು ಹೊರಗೆ  ಬರುವಾಗ ಅಣ್ಣ ಚಿಕ್ಕಪ್ಪ ಚಹಾ ಕುಡಿಯುತ್ತಾ ಇದ್ದರು..ಆಗ ನನ್ನ ಕಡೆ ಅವರು ಬೀರಿದ ದೃಷ್ಟಿ ನೆನೆದರೆ ಈಗಲೂ ನನಗೆ ಎದೆ ಡವ ಡವ ಆಗುತ್ತಿದೆ.ಅಣ್ಣ ಚಿಕ್ಕಪ್ಪ ಹೋಗುವ ತನಕ ಏನೂ ಹೇಳಲಿಲ್ಲ..
ಅವರು ಆ ಕಡೆ ಹೋಗುತ್ತಲೇ ಚಹಾ ಮಾಡುವ ಮೊದಲು ಕೇಳಿಲ್ಲ ಯಾಕೆ ? ಎಷ್ಟು ಹಾಲು ಇದೆ ಅಂತ ನೋಡಿಕೊಂಡು ಬಳಕೆ ಮಾಡಬೇಕು.. ಉಳಿದವರಿಗೆ ಚಹಾ ಮಾಡಲು ಹಾಲೆಲ್ಲಿದೆ..ಇತ್ಯಾದಿಯಾಗಿ ಹಲವಾರು ಆಖ್ಷೇಪಗಳನ್ನು ಮಾಡಿದರು.ಅದರ ನಂತರ ನಾನು ಅಡುಗೆ ಮನೆ ಕಡೆ ಕಾಲಿಡುವುದನ್ನೇ ಬಿಟ್ಟು ಬಿಟ್ಟಿದ್ದೆ.ನೀವೆಲ್ಲ ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ, ಈಗ ಇಷ್ಟು ಜೋರಿರುವ ನಾನು ನನ್ನ ಅತ್ತೆ ಮನೆಯಲ್ಲಿ ಹೆದರಿ ಇಲಿ ಮರಿಯ ಹಾಗೆ 😀
ಇದಾದ ನಂತರ ಒಂದು ದಿನ ಹಸು ಕರೆಯುವಾಗ ( ಆಗ ನನಗೆ ನಾಲ್ಕು ಐದು ಲೀಟರ್ ಹಾಲು ಹಿಂಡುವುದು ಅಭ್ಯಾಸ ಆಗಿತ್ತು) ಒಂದು ದೊಡ್ಡ ಹಸುವಿಗೆ ನನ್ನ ‌ಮೆಲೆ ಏನು ಕೋಪ ಬಂತೋ ಗೊತ್ತಿಲ್ಲ.. ಹಾಲು ಕರೆಯುವಾಗ ಒದೆದು ನನ್ನನ್ನು ಬೀಳಿಸಿತು.ಆಗ ಸಹಜವಾಗಿ ನಾನು ನೋವಿನಿಂದ ಚೀತ್ಕರಿಸಿದೆ.ಪ್ರಸಾದ್ ಅಲ್ಲೇ ಹತ್ತಿರ ಇದ್ದವರು ಓಡಿ ಬಳಿಗೆ ಬಂದರು.ಹಸುವಿಗೆ ಗಾಬರಿ ಆಗಿ ಅದರ ಎರಡೂ ಕೈಗಳನ್ನು ನನ್ನ ಎದೆ ಮೆಲೆ ಮೆಟ್ಟಿ ನಿಂತಿತು.ಪ್ರಸಾದ್ ಅದನ್ನು ಹೋಗೋ ದೂಡಿ ನನ್ನನ್ನು ಎಬ್ಬಿಸಿ ಹೊರಗೆ ಕರೆತಂದರು..ನನಗೆ ತುಂಬಾ ನೋವಾಗಿತ್ತು..ಅದಕ್ಕಿಂತ ಹೆಚ್ಚಾಗಿ ಸೆಗಣಿ ಮೈಗೆ ಹತ್ತಿಕೊಂಡದ್ದು ತುಂಬಾ ಹೇಸಿಗೆ ಆಗಿತ್ತು.ಕೈಯಲ್ಲಿ ಇದ್ದ ಚೊಂಬು ಬಿದ್ದು ಹೋಗಿ ಕರೆದ ಹಾಲು ಹಟ್ಟಿಗೆ ಚೆಲ್ಲಿತ್ತು‌.
ನಾನು ಬಂದು ಸೀದಾ ಬೆಸ್ನೀರು ಕೊಟ್ಟಗಗೆ( ಸ್ನಾನದ ಮನೆ) ಹೊಕ್ಕು ಸ್ನಾನ ಮಾಡಿ ಬೇರೆ ಸೀರೆ ಉಟ್ಟುಕೊಂಡು ಬಂದೆ( ಮದುವೆಯಾದ ಮೇಲೆ ನನಗೆ ಸೀರೆ ಕಡ್ಡಾಯವಾಗಿತ್ತು )
ಹೊರಗೆ ಬರುವಾಗ ನನ್ನ ಬಗ್ಗೆ "  ಏನೂಂತ ಇವಳನ್ನು ಬೆಳೆಸಿದ್ದಾರೋ ಇವಳ ತಂದೆ ತಾಯಿ.. ಒಂದು ನಯವಿನಯ ಇಲ್ಲ.. ನೆಟ್ಟಗೆ ಒಂದು ದನ ಕರೆಯಲು( ಹಾಲು ಹಿಂಡಲು) ಬರುವುದಿಲ್ಲ.. ನಾಲ್ಕು ಲೀಟರ್ ಹಾಲು ಹಾಳಾಯ್ತು. ಹೀಗೆಮನೆಯನ್ನು ‌ಮುಳುಗಿಸಿ ಬಿಡ್ತಾಳೆ.ಬಹಳ ಉಷಾರಿ( ಜಾಣೆ) ಅಂತ ಹೊಗಳುತ್ತಾರೆ.ಆದರೆ ಏನೊಂದೂ ಮಾಡಲು ಸೋಮಾರಿತನ ,ಏನೂ ಬಾರದ ದಡ್ಡಿ ಇದು ,ಶಂಖ ಕೂಡ ಊದಲು ಬರುವುದಿಲ್ಲ" ಇತ್ಯಾದಿಯಾಗಿ ನನ್ನ ಬಗ್ಗೆ ಅತ್ತೆ ಮಾವ ಬೈಯುತ್ತಾ ಇರುವುದು ಕೇಳಿಸಿತು..
ಆ ಕ್ಷಣ ನಾನು ನಿರ್ಧರಿಸಿ ಬಿಟ್ಟೆ..ಮುಂದೆ ನಾನು ಓದಬೇಕು ಎಂದು.. ನನ್ನನ್ನು ಅದು ತನಕ ಯಾರೂ
ದಡ್ಡಿ ಎಂದು ಹೇಳಿರಲಿಲ್ಲ..ಇಷ್ಟಕ್ಕೂ ನನ್ನದೇ ವಯಸ್ಸಿನ ಅತ್ತಿಗೆ ವೀಣಾಳಿಗೆ( ಪ್ರಸಾದ ತಂಗಿಗೆ) ಏನೂ ಬರುತ್ತಾ ಇರಲಿಲ್ಲ..
ತಕ್ಷಣವೇ ನಾನು ಅತ್ತೆ ಮಾವನ ಎದುರು ಹೋಗಿ ಹೇಳಿದೆ.ನಾನು  ಇನ್ನು ಹಸು‌ ಕರೆಯುವುದಿಲ್ಲ..ಹುಲ್ಲು ತರುವುದಿಲ್ಲ..ನಾನು ಮುಂದೆ ಸಂಸ್ಕೃತ ಎಂಎ ಓದುತ್ತೇನೆ " ಎಂದು ಸ್ಥಿರವಾಗಿ ಹೇಳಿದೆ‌.
ಇಲ್ಲಿ ಕೆಲಸ ಮಾಡುದು ಯಾರು ? ಎಂದು ಮಾವ ಕೋಪದಿಂದ ಕೇಳಿದರು.ಯಾರು ಬೇಕಾದರೂ ಮಾಡಿ ನನಗೆ ಗೊತ್ತಿಲ್ಲ.. ನಾನು ಮುಂದೆ ಓದುತ್ತೇನೆ ಎಂದು ಹೇಳಿದೆ.ನಾವು ಓದಿಸಿದರೆ ತಾನೇ ನೀನು ಓದುವುದು ಎಂದು ಅತ್ತೆ ಹೇಳಿದರು.
ನಾನು ಪ್ರಸಾದ್ ಹತ್ತರ ಕಡಾ ಖಂಡಿತವಾಗಿ ನಾನು ಮುಂದೆ ಓದಲೇ ಬೇಕು..ನೀವು ಓದಿಸಿದರೆ ಸರಿ..ಇಲ್ಲವಾದಲ್ಲಿ ತಂದೆ ಮನೆಗೆ ಹೋಗಿ ಓದುತ್ತೇನೆ ಎಂದು ನಿರ್ಧಾರಾತ್ಮಕವಾಗಿ ಹೇಳಿದೆ.ಅದಾಗಲೇ ಪ್ರಸಾದ್ ಕೂಡ ಮತ್ತೆ ಕೆಲಸಕ್ಕೆ ಸೇರುವ ನಿರ್ಧಾರ ಮಾಡಿದ್ದರು‌.ಮಂಗಳೂರಿನಲ್ಲಿ ಒಂದು ವೆಟರ್ನರಿ ಮೆಡಿಕಲ್ ಶಾಪ್ ನಲ್ಲಿ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿದರು. ತೀರಾ ಕಡಿಮೆ (ಎಂಟು ನೂರು ರುಪಾಯಿ ಎಂದು ನೆನಪು) ಸಂಬಳ .ಈ ಸಂಬಳದಲ್ಲಿ ಬೇರೆ ಮನೆ ಬಾಡಿಗೆ ಹಿಡಿದು ಬದುಕಲು ಅಸಾಧ್ಯ ಎಂದು  ಮನೆ ಮಂದಿಗೆ ಮಾತ್ರವಲ್ಲ ನಮಗೂ ಗೊತ್ತಿತ್ತು.."ಇಷ್ಟು ಕಡಿಮೆ ಸಂಬಳದಲ್ಲಿ ಬೇರೆ ಮನೆ ಮಾಡಿ ಹೇಗೆ ಅವಳನ್ನು ಓದಿಸ್ತಾನೆ ಅವನು ? ಒಮ್ಮೆ ಮನೆ ಬಿಟ್ಟು ಹೋದರೆ ಮತ್ತೆ ಮನೆ ಸೇರಿಸುವುದಿಲ್ಲ " ಇತ್ಯಾದಿ ಮಾತುಗಳನ್ನು ನನಗೆ ಕೇಳುವ ಹಾಗೆ ಹೇಳುತ್ತಿದ್ದರು.
ಅಂತೂ ಇಂತೂ ಬಿಎಸ್ಸಿ ರಿಸಲ್ಟ್ ಬಂತು ,ಪಾಸಾಗಿದ್ದೆ ಆದರೆ ಎಂ ಎಸ್ಸಿಗೆ ಸೇರುವಷ್ಟು ಮಾರ್ಕ್ಸ್ ಇರಲಿಲ್ಲ.ಹಾಗಾಗಿ ಸಂಸ್ಕೃತ ಎಂಎ ಗೆ ಸೇರುವುದೆಂದು ಒಂದು ದಿನ  ನಿರ್ಧರಿಸಿ ಕಟೀಲಿಗೆ ಬಂದು ವಿಚಾರಿಸಿ ಹೋಗಿದ್ದೆ‌.ನನಗೆ ಸಂಸ್ಕೃತ ದಲ್ಲಿ ಒಳ್ಳೆಯ ಅಂಕಗಳು ಇದ್ದ ಕಾರಣ ಸೀಟು ಕೊಡುತ್ತೇನೆ,ಮಾರ್ಕ್ಸ್ ಕಾರ್ಡ್ ತಗೊಂಡು ಬಾ,ಎಂದು ಹೇಳಿ ಕೊನೆಯ ದಿನಾಂಕವನ್ನು ಅಲ್ಲಿ ಪ್ರಾಂಶುಪಾಲರಾಗಿದ್ದ ಡಾ.ಜಿ ಎನ್ ಭಟ್ ಅವರು ಹೇಳಿದರು.
ಇತ್ತ ಮನೆಯಲ್ಲಿ ಅಘೋಷಿತ ಕರ್ಫ್ಯೂ..ನನ್ನನ್ನು ನೋಡಿದರೆ ಉಗ್ರಗಾಮಿಯನ್ನು ನೋಡಿದ ಹಾಗೆ ಮಾಡುತ್ತಿದ್ದರು.ಮನೆಗೆ ಬಂದ ನೆಂಟರುಗಳು ಕೂಡ ಗಾಯಕ್ಕೆ ಉಪ್ಪು ಹಚ್ಚಿ ಉರಿ ಹೆಚ್ಚಾಗುವಂತೆ ಮಾಡಿತ್ತಿದ್ದರು..ಇನ್ನೇನು ಮರುದಿನ ಎಂಎಗೆ ಸೇರಲು‌ ಕೊನೆಯ ದಿನ ಎಂದಾಗ ಹಿಂದಿನ ದಿನ ಪ್ರಸಾದ್ ಹತ್ತಿರ ಹಠ ಹಿಡಿದು ಎಂಎ ಗೆ ಸೇರುವ ಸಲುವಾಗಿ ಉಜಿರೆಗೆ ಹೋಗಿ ಮಾರ್ಕ್ಸ್ ಕಾರ್ಡ್ ತಂದೆ‌..ಮುಂದಿನದನ್ನು ಈ ಹಿಂದೆಯೇ ಬರೆದಿರುವೆ.
ಇದಾಗಿ ವರ್ಷ ಗಳು ಉರುಳಿದವು.ಒಮ್ಮೆ ಮನೆ ಬಿಟ್ಟು ಹೊರ ನಡೆದರೂ ಮತ್ತೆ ರಾಜಿಯಾಯಿತು.ನಾವು ಯಾವಾಗಲಾದರೂ ಬಂದು ಹೋಗುತ್ತಿದ್ದೆವು.ನಾನು ಹಠ ಹಿಡಿದು ಓದಿ ರ‍್ಯಾಂಕ್ ತೆಗದು ಕೆಲಸಕ್ಕೆ ಸೇರಿದಾಗ ಅತ್ತೆಯವರಿಗೆ ನನ್ನ ಬಗ್ಗೆ ಮೆಚ್ಚುಗೆ ಮೂಡಿತ್ತು.
ಹೀಗೆ ಒಂದು ಬಾರಿ ಮನೆ ಹೋಗಿದ್ದಾಗ ಮಾವನವರು ಕೈತೋಟದಲ್ಲಿ ಬೆಳೆಸಿದ ಗುಂಡಗಿನ ನಾಲ್ಕೈದು ಬದನೆಕಾಯಿಗಳನ್ನು ಕೊಯ್ದು ತಂದಿಟ್ಟಿದ್ದರು.ಆಗ ಅತ್ತಿಗೆ ವೀಣಾ( ಪ್ರಸಾದ್ ತಂಗಿ) "ಅಬ್ಬೆ ಇದರ ಸುಟ್ಟು ಹಾಕಿ ಗೊಜ್ಜಿ ಮಾಡುತ್ತೀರಾ" ( ಅಮ್ಮ ಇದನ್ನು ಸುಟ್ಟು ಬದನೆ ಗೊಜ್ಜು ಮಾಡುತ್ತೀರಾ?) ( ಪ್ರಸಾದ್ ಮನೆಯಲ್ಲಿ ಮಕ್ಕಳು ತಾಯಿಗೆ ಅಬ್ಬೆ ಎಂದು ಕರೆದು ಬಹುವಚನದಲ್ಲಿ‌ಮಾತನಾಡುತ್ತಿದ್ದರು) ಎಂದು ಕೇಳಿದಳು.ಆಗ ಅತ್ತೆಯವರು ನನಗೆ ಬದನೆ ಗೊಜ್ಜು ಮಾಡಲು ಸರಿಯಾಗಿ ಗೊತ್ತಿಲ್ಲ ಎಂದು ಹೇಳಿದರು.ಆಗ ಅಲ್ಲೇ ಇದ್ದ ನಾನು "ಗೊಜ್ಜು ಮಾಡಲು ನನಗೆ ಬರುತ್ತದೆ, ನಾನು ಮಾಡಲಾ ? ಎಂದು ಕೇಳಿದೆ.ಆಗ ಅತ್ತೆ ಒಪ್ಪಿದರು.ಉಳಿದವರೆಲ್ಲ ನನ್ನತ್ತ ಒಂದು ತಿರಸ್ಕಾರದ ನೋಟ ಬೀರಿ ಎದ್ದು ಹೋದರು‌.ಬೆಸ್ನೀರು ಕೊಟ್ಟಗೆಯ( ಸ್ನಾನದ ಮನೆ) ಹಿಂಭಾಗ ನೀರು ಬಿಸಿ ಮಾಡಲು ದೊಡ್ಡದಾದ ಒಲೆ ಇತ್ತು.ಅಲ್ಲಿ ನಿಗಿ ನಿಗಿ ಕೆಂಡ ಇತ್ತು.ಎರಡು ಬದನೆಕಾಯಿಗಳನ್ನು ತೊಳೆದು ಒರಸಿ ಕೆಂಡದಲ್ಲಿ ಸುಟ್ಟು ಸಿಪ್ಪೆ ತೆಗೆದು  ಹಿಸುಕಿ,ಉಪ್ಪು,ಹುಳಿ,ಸ್ವಲ್ಪ ಬೆಲ್ಲ ಸ್ವಲ್ಪ ನೀರು ಹಾಕಿ ಕುದಿಸಿದೆ‌.ಹದ ಬಂತು ಅನಿಸಿದಾಗ ಬೆಳ್ಳುಳ್ಳಿ ಒಗ್ಗರಣೆ ಹಾಕಿದೆ ಎರಡು ಮೆಣಸು ಹುರಿದು ಹಿಸುಕಿ ಹಾಕಿ ಕದಡಿದೆ,ಘಮ್ ಅಂತ ಪರಿಮಳ ಬಂದಾಗ ಗೊಜ್ಜು ಸರಿಯಾಗಿ ಎಂದೆನಿಸಿ ಮುಚ್ಚಿ ಇಟ್ಟೆ.
ಮಧ್ಯಾಹ್ನ ಎಲ್ಲರೂ ಊಟಕ್ಕೆ ಕುಳಿತರು.ಗೊಜ್ಜು ನನಗೆ ನನಗೆ ಬೇಡ ಎಂದು ಮನೆ ಮಂದಿ ಹೇಳಿದರೂ ರುಚಿ ನೋಡಿ ಎಂದು ಅತ್ತೆ ಬಲವಂತದಿಂದ ಎಲ್ಲರ ಬಟ್ಟಲಿಗೂ ಒಂದೊಂದು ಚಮಚದಷ್ಟು ಬಳಸಿದರು.ಒಬ್ಬೊಬ್ಬರೇ ಸ್ವಲ್ಪ ನೆಕ್ಕಿ ನೋಡಿ‌ ಮತ್ತೆ ಹಾಕಿ ಕೊಂಡರು‌.ಬದನೆ ಗೊಜ್ಜು ನನಗೆ ಬಹಳ ಇಷ್ಟ ನಾನು ಹಾಕಿಕೊಂಡು ಉಂಡೆ,ಅತ್ತೆ ರುಚಿ ನೋಡಿ " ತುಂಬಾ ಲಾಯ್ಕ ಅಯಿದು( ತುಂಬಾ ಚೆನ್ನಾಗಿದೆ) ಎಂದು ನನ್ನ ಕೆಲಸದ ಬಗ್ಗೆ ಮೊದಲ ಮತ್ತು ಕನೆ ಬಾರಿಗೆ ಮೆಚ್ಚುಗೆಯ ಮಾತನಾಡಿದ್ದರು...ಈವತ್ತು ತೇಜಸ್ವಿನಿ ಪೇಸ್ ಬುಕ್ ನಲ್ಲಿ ಬದನೆ ಗೊಜ್ಜು ಮಾಡಿದ ರೀತಿಯನ್ನು ವಿವರಿಸಿ ಪೇಸ್ ಬುಕ್ ನಲ್ಲಿ ಹಾಕಿದ್ದನ್ನು ಓದುತ್ತಲೇ ನನಗೆ ಜೀವನದಲ್ಲಿ ಒಂದೇ ಒಂದು ಬಾರಿ ಅತ್ತಯವರ ಕೈಯಿಂಂದ ಪಡೆದದ್ದು ನೆನಪಾಗಿ ಇಷ್ಟೆಲ್ಲ ಬರೆದೆ 

ಬದುಕ ಬಂಡಿಯಲಿ : ಇವರಲ್ಲೊಬ್ಬಳು ಐಎಎಸ್ ಮಾಡಿ ನನ್ನ ‌ಮೇಲಧಿಕಾರಿಯಾಗಿ ಬರಲೆಂದು ಆಶಿಸುವೆ

ಇವರಲ್ಲೊಬ್ಬಳು ಐಎಎಸ್ ಮಾಡಿ ನನ್ನ ಮೇಲಧಿಕಾರಿಯಾಗಿ ಬಂದರೇ..

ಹೌದು ಒಂದೊಮ್ಮೆ ನನ್ನ ಆಶಯ ಈಡೇರಿದರೆ ಆ ಕ್ಷಣದ ನನ್ನ ಸಂತಸವನ್ನು ಅಳೆಯಲು ಯಾವ ಮಾಪಕವೂ ಇರಲಾರದು..
ನಮ್ಮ ಕಾಲೇಜಿನಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಾ ಇದೆ.ನಮಗೆ ಮೇ ಎರಡರಿಂದ ಕಾಲೇಜು ಶುರುವಾಗಿದ್ದು ಕಾಲೇಜಿಗೆ ಬಂದಾಗ ಚುರುಕಾದ ಈ ಮಕ್ಕಳನ್ನು ನಮ್ಮ ಕಾಲೇಜು ವಠಾರದಲ್ಲಿ ನೋಡಿದೆ.
ಕಟ್ಟಡದ ಗಾರೆ ಕೆಲಸಕ್ಕೆ ಬಂದ ಕಾರ್ಮಿಕರ ಮಕ್ಖಳು ಇವರು.ದೊಡ್ಡ ಮಕ್ಕಳು ಚಿಕ್ಕ ಮಕ್ಕಳನ್ನು ನೋಡಿಕೊಳ್ಳುತ್ತಾ ಇದ್ದರು.ಶಾಲೆ ಶುರುವಾದಾಗ ಇವರು ಶಾಲೆಗೆ ಹೋಗಬಹುದು ಎಂದು ಭಾವಿಸಿದ್ದೆ.ನಾವು ಉಪನ್ಯಾಸಕರು ಮುದ್ದಾದ ಈ ಮಕ್ಕಳಿಗೆ ನಾವು ತಂದಿದ್ದ ತಿಂಡಿ ತಿನಸು ಹಣ್ಣು ಬಿಸ್ಕೆಟ್ ಸ್ವಲ್ಪ ಭಾಗ ಕೊಡುತ್ತಾ ಇದ್ದೆವು.ದೊಡ್ಡ ಹುಡುಗಿಯರು ಸಣ್ಣವರಿಗೆ ತಿನ್ನಿಸಿ ತಾವೂ ತಿಂದು ಖುಷಿ ಪಡುವುದನ್ನು ನೋಡುವುದೇ ನಮಗೆ ಸಂಭ್ರಮ.ದೊಡ್ಡ ಮಕ್ಕಳೆಂದರೆ ಅಲ್ಲಿರುವವರಲ್ಲಿ ದೊಡ್ಡವರು ಅಷ್ಟೇ, ಇನ್ನೂ ಹತ್ತು ಹನ್ನೆರಡು ವರ್ಷದ ಪೋರಿಯರು ಇವರು.
ಮೇ ಇಪ್ಪತ್ತನಾಲ್ಕರಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭಗೊಂಡವು.
ಈ ಮಕ್ಕಳು ಶಾಲೆಗೆ ಹೋಗದೆ ಅಲ್ಲಿಯೇ ಚಿಕ್ಕವರನ್ನು ನೋಡಿಕೊಂಡು ಆಟವಾಡಿಕೊಂಡು ಇದ್ದರು.ಆಗ ನಾನು ಮಕ್ಕಳಲ್ಲಿ ನೀವು ಶಾಲೆಗೆ ಹೋಗುವುದಿಲ್ಲವೇ ಎಂದು ವಿಚಾರಿಸಿದೆ.ತಂಗಿಯರನ್ನು ( ಚಿಕ್ಕ ಮಕ್ಕಳು) ನೋಡಿಕೊಳ್ಳಲು ಯಾರೂ ಇಲ್ಲ ಹಾಗಾಗಿ ಶಾಲೆಗೆ ಹೋಗುತ್ತಾ ಇಲ್ಲ ಎಂದು ತಿಳಿಸಿದರು.ಇವರು ಕಳೆದ ವರ್ಷದ ತನಕ ದೂರದ ಕೊಪ್ಪಳದ ಸರ್ಕಾರಿ ಶಾಲೆಯಲ್ಲಿ ಓದಿದ್ದು ದೊಡ್ಡ ಹುಡುಗಿಯರು ಆರನೇ ತರಗತಿ ಪಾಸ್ ಆಗಿದ್ದರು. ಚಿಕ್ಕವಳು ಒಂದನೇ ತರಗತಿ ಓದಿದ್ದಳು.ಇನ್ನಿಬ್ಬರು ಒಂದೆರಡು ವರ್ಷದ ಕೈಗೂಸುಗಳು.
ಚಿಕ್ಕವರನ್ನು ನೋಡಿಕೊಳ್ಳುವುದಕ್ಕಾಗಿ ಇವರ ಓದು ನಿಂತರೆ ಹೇಗೆ ? ಏನು ಮಾಡುವುದೆಂದು ಯೋಚಿಸಿದೆ‌.ನಮ್ಮ ಕಾಲೇಜಿಗೆ ಸೇರಿದಂತೆ ಹೈಸ್ಕೂಲ್ ಮತ್ತು ಬಿ ಆರ್ ಸಿ ಕಛೇರಿ ಇದೆ. ನಾನು ಮತ್ತು ನಮ್ಮ ಕಾಲೇಜು ಉಪನ್ಯಾಸಕರಾದ ಶ್ರೀಶ ಮೇಡಂ ಮತ್ತು ಅನಿತಾ ಮೇಡಂ   ಅಲ್ಲಿ ಹೋಗಿ ಬಿಆರ್ ಸಿ ಅಧಿಕಾರಿಗಳಾದ ನರಸಿಂಹಯ್ಯ ಅವರಿಗೆ ಈ ಬಗ್ಗೆ ತಿಳಿಸಿ ಈ ಮಕ್ಕಳ ಓದಿಗೆ ಏನಾದರೂ ವ್ಯವಸ್ಥೆ ಮಾಡುವಂತೆ ಕೋರಿದೆವು.ಅವರು ತಕ್ಷಣವೇ ಅಲ್ಲಿನ ಶಿಕ್ಷಕರಾದ ಲೋಕೇಶ್ ಅವರನ್ನು ಕಳುಹಿಸಿಕೊಟ್ಟರು ‌.ಅವರು  ಬಂದು ಮಕ್ಕಳಲ್ಲಿ ಮಾತನಾಡಿ ಅಲ್ಲಿಯೇ ಕೆಲಸ ಮಾಡುತ್ತಿದ್ದ ಅವರ ಹೆತ್ತವರಿಗೆ ತಿಳುವಳಿಕೆ ನೀಡಿದರು‌.ಈ ಮಕ್ಕಳ ಹೆತ್ತವರು ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಲು ಒಪ್ಪಿದ್ದಾರೆ.ಚಿಕ್ಕ ಮಕ್ಕಳನ್ನು ಅಂಗನವಾಡಿಗೆ ಸೇರಿಸುವಂತೆ ಲೋಕೇಶ್ ಅವರು ತಿಳಿಸಿದರು.
ಈ ಮಕ್ಕಳಲ್ಲಿ ಎಲ್ಲರೂ ಅಥವಾ ಕೊನೆ ಪಕ್ಷ ಒಬ್ಬರು ಓದಿ ಮುಂದೆ  ಐಎಎಸ್ ಮಾಡಿ ನಮ್ಮ ಮೇಲಧಿಕಾರಿಯಾಗಿ ಬಂದರೆ ಹೇಗಾಗಬಹುದು ಎಂದು ಊಹಿಸಿ ಸಂಭ್ರಮಿಸಿದೆ‌.ಈ ಮಕ್ಕಳು ನಮ್ಮ ಆಶಯದಂತೆ ಓದಿ ಮುಂದೆ ಐಎಎಸ್ ಐಪಿಎಸ್ ಅಧಿಕಾರಿ ಗಳಾಗಲಿ ಎಂದು ಹಾರೈಸುವೆ
Siri Reddy Anitha G Anu Shobha Lekhana Manjula R Prasad

Friday 19 April 2019

ನನ್ನೊಳಗೂ ಒಂದು ಆತ್ಮವಿದೆ -6 ತಾಯಿ ಸರಸ್ವತಿಯ ಒಲುಮೆ ಇದ್ದರೆ ಅಮ ವಾಸ್ಯೆ ಕೂಡ ಅಮೃತದ ಫಲವನ್ನು ನೀಡಿತು !© ಡಾ.ಲಕ್ಷ್ಮೀ ಜಿ ಪ್ರಸಾದ

ನನ್ನೊಳಗೂ ಒಂದು ಆತ್ಮವಿದೆ -6

ಅಮಾವಾಸ್ಯೆ   ಶುಭಗಳಿಗೆ ಫಲವನ್ನು ನೀಡಿತು !

ಅಂದು ಬೆಳಗ್ಗೆ  ಪತಿ ಗೋವಿಂದ ಪ್ರಸಾದರೊಂದಿಗೆ ಮನೆ ಬಿಟ್ಟು ಹೊರಟಾಗ ಅಮವಾಸ್ಯೆಯಂತೆ.ಹಿಂದಿನ ದಿನ ಬಿಎಸ್ ಸಿ ಯ ಅಂಕ ಪಟ್ಟಿ ತರುವುದಕ್ಕಾಗಿ ಉಜಿರೆಗೆ ಹೋಗಿದ್ದೆ.ಅರ್ಧ ದಾರಿ ಬಿಸಿರೋಡು ತನಕ ಗೋವಿಂದ ಪ್ರಸಾದರು ಬಂದು ಬಸ್ಸು ಹತ್ತಿಸಿ ಮಂಗಳೂರು ಕಡೆಗೆ ಹೋಗಿದ್ದರು.
 ಉಜಿರೆಯ ಎಸ್ ಡಿ ಎಂ ಕಾಲೇಜಿಗೆ ಹೋಗಿ ಅಂಕ ಪಟ್ಟಿ ಪಡೆದು ಹಿಂದಿರುಗುವಷ್ಟರಲ್ಲಿ ಕತ್ತಲಾಗಿತ್ತು.ಅಕಾಲಿಕವಾಗಿ ಮಳೆ ಬಂದು ಜೋರಾಗಿ ಸುರಿಯುತ್ತಾ ಇತ್ತು.ಸುರಿವ ಮಳೆಯಲ್ಲಿ ಮನೆಯ ಒಳಗೆ ಬರಲು ಬಿಡದೆ "ಯಾರನ್ನು ಕೇಳಿ ಹೋದೆ ? ಎಂದು ದಬಾಯಿಸಿದ  ಅತ್ತೆ ಮಾವ ಮೈದುನಂದಿರು ಅಂಗಳದಲ್ಲಿಯೇ ನಿಲ್ಲಿಸಿದ್ದರು!
ಸುಮಾರು ಎರಡು ಗಂಟೆಯ ಕಾಲ ಮಳೆಯಲ್ಲಿ ಒದ್ದೆಯಾಗಿ ಚಳಿಯಲ್ಲಿ ನಡುಗುತ್ತಾ ನಿಂತಾಗ ಮಂಗಳೂರಿಗೆ ಹೋದ ಪತಿ ಗೋವಿಂದ ಪ್ರಸಾದರಯ ಹಿಂತಿರುಗಿದರು.ಅವರನ್ನು ಕೂಡ ಒಳಬರದಂತೆ ತಡೆದಾಗ ತಂದೆ ತಾಯಿ ಮಕ್ಕಳ ನಡುವಿನ ಸಹಜ ಸಲುಗೆಯಿಂದ ಒಳಗೆ ತಳ್ಳಿ ನನ್ನ ಕೈಹಿಡಿದು ಒಳಗೆ ಕರೆತಂದು ಮೈ ಒರಸಿಕೊಳ್ಳಲು ಬಟ್ಟೆ ನೀಡಿ,ಹಾಕಿಕೊಳ್ಳಲು  ಒಣಗಿದ ಬಟ್ಟೆಗಳನ್ನು ನೀಡಿದರು.ಎರಡು ಗಂಟೆಗಳ ಕಾಲ ಮಳೆಯಲ್ಲಿ ನೆನೆದ ಪ್ರಭಾವವೋ ಏನೋ ಙಗೆ  ತೀವ್ರ ಜ್ವರ! ಮನೆಯೊಳಗೆ ರಾತ್ರಿಯಿಂದ ಬೆಳಗಿನ ತನಕ ಅಪ್ಪ ಮಕ್ಕಳ ನಡುವೆ ಜಗಳ.
ಬೆಳಗಾಗುತ್ತಲೇ " ನೋಡು ನಾನು ದುಡಿದು ಎರಡು ಹೊತ್ತು ಊಟ ಹಾಕಿಸಬಲ್ಲೆ,ನನ್ನೊಂದಿಗೆ ಬರುವುದಾದರೆ ಬಾ,ಮುಂದೆ ಓದು.ಅಥವಾ ಇವರ ಶ್ರೀಮಂತಿಕೆಯನ್ನು ಅನುಭವಿಸುತ್ತಾ ಗುಲಾಮಳಂತೆ ಇರು,ಆಯ್ಕೆ ನಿನ್ನದು" ಎಂದಾಗ ಪತಿ ಗೋವಿಂದ ಪ್ರಸಾದರೊಂದಿಗೆ ಖಾಲಿ ಕೈಯಲ್ಲಿ ಉಟ್ಟ ಬಟ್ಟೆಯಲ್ಲಿ ಮನೆ ಬಿಟ್ಟು ಕಟೀಲಿಗೆ ಬಂದು ಸಂಸ್ಕೃತ ಎಂ.ಎ ಪದವಿಗೆ ಸೇರಿದೆ. ಗೋವಿಂದ ಪ್ರಸಾದರು ಮಂಗಳೂರಿನ ಮೆಡಿಕಲ್ ಶಾಪ್ ಒಂದರಲ್ಲಿ ಕೆಲಸಕ್ಕೆ ಸೇರಿದರು.ನಾವು ಮನೆ ಬಿಟ್ಟು ಹೊರಗೆ ನಡೆದ ದಿನ ಅಮವಾಸ್ಯೆಯ ದಿನವಂತೆ.ಮನೆ ಬಿಟ್ಟು ಹೊರಗೆ ನಡೆದಾಗ ದೀರ್ಘ ಕಾಲ ಮನೆ ಮಂದಿ ನಮ್ಮ ಸಂಪರ್ಕವನ್ನು ಬಿಟ್ಟಿದ್ದರು.ನಂತರ ರಾಜಿಯಾದ ಸಂದರ್ಭದಲ್ಲಿ ಅತ್ತೆಯವರು ನಮಗೆ ಈ ವಿಚಾರವನ್ನು ತಿಳಿಸಿದ್ದರು. ಮತ್ತು ಒಳ್ಳೆಯದಾಗಲಿ ಎಂದು ದೇವರಿಗೆ ತುಪ್ಪದ ದೀಪ ಉರಿಸಿದ್ದರಂತೆ ಒಳ್ಳೆಯ ಕಾರ್ಯಕ್ಕೆ ಹೊರಟಾಗ ಕೆಟ್ಟ ಗಳಿಗೆ ಕೂಡ ಶುಭವನ್ನೇ ಮಾಡುತ್ತದೆ ಎಂಬುದಕ್ಕೆ ನಾವೇ ಸಾಕ್ಷಿ.

ಮೋಟು ಗೋಡೆಯ ಒಂದು ಕೊಠಡಿಯಲ್ಲಿ ವಾಸ

ನನ್ನ  ಹೆತ್ತವರು ಕೋಟ್ಯಧಿಪತಿಗಳು ಅಲ್ಲದಿದ್ದರೂ ಹೊಟ್ಟೆಗೆ ಬಟ್ಟೆಗೆ ಕೊರತೆ ಇರಲಿಲ್ಲ.ಬಡತನದ ಬೇಗೆ ಮಕ್ಕಳಿಗೆ ತಾಗದಂತೆ ಹೆತ್ತವರು ಜಾಗ್ರತೆ ವಹಿಸಿದ್ದರು. ಕಟೀಲು ಸಮೀಪದ ಎಕ್ಕಾರಿನಲ್ಲಿ ಒಂದು ಕೋಣೆಯ  ಗೆದ್ದಲು ಹಿಡಿದ ಮೋಟು ಗೋಡೆಯ ಮನೆಯಲ್ಲಿ ಬದುಕುವುದು ನಮಗೆ ಕಷ್ಟವೆನಿಸಲಿಲ್ಲ .ನಮ್ಮ ನಡುವಿನ ಮಧುರ ಸ್ನೇಹ ಮತ್ತು ಸಾಧನೆಯ ತುಡಿತದ ಎದುರು ಕಷ್ಟಗಳು ದೊಡ್ಡದಾಗಿ ಕಾಣಿಸಲಿಲ್ಲ ‌.ಬದುಕನ್ನು ಸವಾಲಾಗಿ ಎದುರಿಸಿದೆವು

ಗ್ರಹಗತಿಗೇ ಸವಾಲು ಹಾಕಿದೆ!
1996 ರಲ್ಲಿಯೇ ಸಂಸ್ಕೃತ ಎಂ.ಎ ಪದವಿಯನ್ನು ಮೊದಲ ರ‌್ಯಾಂಕಿನೊಂದಿಗೆ ಪಡೆದರೂ ಇವರಿಗೆ ಸುಲಭದಲ್ಲಿ ಸರ್ಕಾರಿ ಉದ್ಯೋಗ ದೊರೆಯಲಿಲ್ಲ.  ಓದು ಮುಗಿದ ತಕ್ಷಣವೇ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಸಿಕ್ಕಿತಾದರೂ ಅದು ಅರೆ ಕಾಲಿಕ ಕೆಲಸವಾಗಿತ್ತು. ಎಲ್ಲಿ ಹುಡುಕಿದರೂ ಸಂಸ್ಕೃತಕ್ಕೆ ಪೂರ್ಣಕಾಲಿಕ ಖಾಯಂ ಕೆಲಸವಿಲ್ಲ.ಆಗ ಸಂತ ಅಲೋಶಿಯಸ್ ಕಾಲೇಜಿನ ಹಿಂದಿ ಉಪನ್ಯಾಸಕಿ ಹಿಂದೆ ಎಂ ಎ ಓದುವಂತೆ ಸಲಹೆ ನೀಡಿದರು. ಅದಕ್ಕೂ ಮೊದಲೇ ನಾನು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ನಡೆಸುವ ರಾಷ್ಟ್ರ ಭಾಷಾ ಪ್ರವೀಣ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದೆ.ಹಾಗಾಗಿ ಹಿಂದೆ ಎಂಎ ಓದುವುದು ಇವರಿಗೆ ಅಷ್ಟೊಂದು ಕಷ್ಟವೆನಿಸಲಿಲ್ಲ.ಕೆಲಸ ಮಾಡುತ್ತಲೇ ಪುಟ್ಟ ಮಗ ಅರವಿಂದನ ಲಾಲನೆ ಪಾಲನೆ ಮಾಡುತ್ತಲೇ ಖಾಸಗಿಯಾಗಿ ಹಿಂದಿ ಎಂಎ ಗೆ ಕಟ್ಟಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣಳಾದೆ ‌.ಅಂಕಗಳೇನೋ ಬಂತು.ಆದರೆ ಹಿಂದಿ ಭಾಷೆ ಸಾಹಿತ್ಯ ನನಗೆ ಒಲಿಯಲಿಲ್ಲ ಆಸಕ್ತಿ ಇಲ್ಲದ ಕ್ಷೇತ್ರದಲ್ಲಿ ದುಡಿಯುತ್ತಾ ಬದುಕು ಕಳೆಯುವುದು ನನಗೆ  ಸಮ್ಮತವಾಗಲಿಲ್ಲ.ಸಹೋದರ ಗಣೇಶ ಭಟ್ ಸಲಹೆಯಂತೆ ಮತ್ತೆ ಪುನಃ ಕನ್ನಡ ಎಂ.ಎ ಗೆ ಕಟ್ಟಿದೆ.ಇಲ್ಲಿ ಇವರು ತನ್ನ ಆಸಕ್ತಿಯ ಕ್ಷೇತ್ರ ಜಾನಪದವನ್ನು ಆಯ್ಕೆ ಮಾಡಿಕೊಂಡರು.ಇಲ್ಲಿಂದ ಇವರ ಬದುಕಿನ ದಿಕ್ಕು ಬದಲಾಯಿತು. ತುಳು ಸಂಸ್ಕೃತಿ ಜಾನಪದ ಇವರ ಅಧ್ಯಯನದ ವಿಚಾರವಾಯಿತು. ಮೂರು ಎಂಎ ಪದವಿಗಳನ್ನು ಎಂಫಿಲ್ ಮತ್ತು  ಎರಡು ಡಾಕ್ಟರೇಟ್ ಪದವಿಗಳನ್ನು ಪಡೆದರೂ ಇವರಿಗೆ ಜಾತಿ ದುಡ್ಡು ಪ್ರಭಾವಗಳ ವ್ಯವಸ್ಥೆಯ ನಡುವೆ ಸರ್ಕಾರಿ ಉದ್ಯೋಗ ದೊರೆಯಲಿಲ್ಲ. ‌

ವಯಸ್ಸು ನಿಲ್ಲುವುದಿಲ್ಲ.

1995 ರಲ್ಲಿ ನಾನು ಎರಡನೇ ವರ್ಷದ ಎಂಎ ಓದುತ್ತಿರುವಾಗ ಸರ್ಕಾರಿ  ಪದವಿ ಪೂರ್ವ ಕಾಲೆಜುಗಳ ಉಪನ್ಯಾಸಕ ಹುದ್ದೆಗೆ ಅರ್ಜಿ ಅಹ್ವಾನಿಸಿದ್ದರು.ಅದಾಗಿ ಯಾವುದೋ ಸಮಸ್ಯೆಯಿಂದಾಗಿ  ಹತ್ತು ವರ್ಷಗಳ ಕಾಲ ಅರ್ಜಿ ಅಹ್ವಾನಿಸಿರಲಿಲ್ಲ.ಮತ್ತೆ 2006 ರಲ್ಲಿ ಅರ್ಜಿ ಅಹ್ವಾನಿಸಿದಾಗ  ನನಗೆ  ಗರಿಷ್ಠ ವಯೋಮಿತಿ 33 ವರ್ಷ ದಾಟಿತ್ತು.ಆರಂಭದಲ್ಲಿ ತುಂಬಾ ಹತಾಶೆಗೆ ಒಳಗಾದೆ,ದುಃಖಿಸಿ ದುಃಖಿಸಿ ಅತ್ತೆ. ಮತ್ತೆ ಆತ್ಮವಿಶ್ವಾಸವನ್ನು ಬಿಡದೆ ಆಗ ಶಿಕ್ಷಣ ಸಚಿವರಾದ ಬಸವರಾಜ ಹೊರಟ್ಟಿಯವರನ್ನು ಭೇಟಿಯಾದೆ ‌.ಅದಾಗಲೇ ಪ್ರೌಢಶಾಲಾ ಶಿಕ್ಷಕರ ನೇಮಕಕ್ಕೆ ಗರಿಷ್ಠ ವಯೋಮಿತಿ 40 ವರ್ಷಕ್ಕೆ ನಿಗಧಿತವಾಗಿತ್ತು.ಪದವಿ ಕಾಲೇಜುಗಳಿಗೆ 35 ವರ್ಷಗಳು ಗರಿಷ್ಠ ವಯೋಮಿತಿಯಾಗಿತ್ತು ಶಿಕ್ಷಣ ಸಚಿವರಿಗೆ ಇದನ್ನು ಮನವರಿಕೆ ಮಾಡಿಸಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಕೂಡ ಗರಿಷ್ಠ ವಯೋಮಿತಿಯನ್ನು ಹೆಚ್ಚಿಸುವಂತೆ ಮನವಿ ಮಾಡಿದೆ.ಅದರಂತೆ ಶಿಕ್ಷಣ ಸಚಿವರು  ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಇರುವಂತೆ  ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿಗೆ ಕೂಡ ಗರಿಷ್ಠ ವಯೋಮಿತಿ  40 ವರ್ಷಗಳನ್ನು ನಿಗಧಿಪಡಿಸಿದರು.
2006 ರಲ್ಲಿ ಅರ್ಜಿ ಅಹ್ವಾನಿಸಿದಾಗ ಒಂದೇ ಒಂದು ಸಂಸ್ಕೃತ ಉಪನ್ಯಾಸಕ ಹುದ್ದೆ ಇರಲಿಲ್ಲ ‌.ಕನ್ನಡ ಉಪನ್ಯಾಸಕ ಹುದ್ದೆಗೆ ನನಗೆ ಸಂದರ್ಶನಕ್ಕೇ ಬರಲಿಲ್ಲ.
ಈಗ ನನ್ನ ಹೆತ್ತವರು ನನ್ನ ಜಾತಕ ತೋರಿಸಿ ಅನೇಕ ಜ್ಯೋತಿಷಿಗಳಲ್ಲಿ ಇವರಿಗೆ ಸರ್ಕಾರಿ ಹುದ್ದೆ ದೊರೆಯುತ್ತದೆಯೇ ?ಎಂದು ಕೇಳಿದರು.ಇವರ ಜಾತಕ ನೋಡಿದ ಎಲ್ಲರೂ ಇವರಿಗೆ ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆ ಇಲ್ಲವೆಂದೇ ಹೇಳಿದರು.ನಾನು ಆಗಲೂ ಭರವಸೆ ಕಳೆದಕೊಳ್ಳಲಿಲ್ಲ.
ಆಗಲೂ ಕೂಡ ತನ್ನ ಪ್ರಯತ್ನ ಬಿಡಲಿಲ್ಲ. ಮನೋ ಬಲದ ಮುಂದೆ ಯಾವ ಗ್ರಹಗತಿಯೂ ನಿಲ್ಲುವುದಿಲ್ಲ ಎಂದು ಮನಸ್ಸು ಗಟ್ಟಿ ಮಾಡಿಕೊಂಡೆ.
 ಪದವಿ ಪೂರ್ವ ಕಾಲೇಜು ಉಪನ್ಯಾಸಕ ಹುದ್ದೆಗೆ ಪ್ರೌಢಶಾಲಾ ಶಿಕ್ಷಕರಿಗೆ ಇರುವಂತೆ ಲಿಖಿತ ಪರೀಕ್ಷೆಯ ಮೂಲಕ ನೇಮಕಾತಿ ನಡೆಸುವಂತೆ ಮನವಿ ಮಾಡಿದೆ.ಈ ಬಗ್ಗೆ ಪತ್ರಿಕೆಯಲ್ಲಿ ಲೇಖನ ಬರೆದೆ. ಈ ಬಗ್ಗೆ ಪತ್ರಾಂದೋಲನ ಮಾಡಿದೆ.ಸಂದರ್ಶನದ ಮೂಲಕ ಆಯ್ಕೆ ಮಾಡುವಾಗ ಜಾತಿ ದುಡ್ಡು ಪ್ರಭಾವವೇ ಕೆಲಸ ಮಾಡುತ್ತದೆ‌.ಭ್ರಷ್ಟಾಚಾರದ ಕಾರಣದಿಂದ ದುಡ್ಡು ಕೊಡಲು ಅಸಮರ್ಥರಾಗುವ ,ಇನ್ಫ್ಲೂಯೆನ್ಸ್ ಇಲ್ಲದೆ ಇರುವ ಪ್ರತಿಭಾವಂತರು ಅವಕಾಶ ವಂಚಿತರಾಗುತ್ತಾರೆ.ಹಾಗಾಗಿ ಅನೇಕರು ಲಿಖಿತ ಪರೀಕ್ಷೆ ಮೂಲಕ ನೇಮಕಾತಿ ಮಾಡಬೇಕೆಂದು ಹೋರಾಟ ಮಾಡಿದೆ.ನನ್ನಂತೆಯೇ ಅನೇಕರು ಲಿಖಿತ ಪರೀಕ್ಷೆ ಅಗ ಬೇಕೆಂದು ಹೋರಾಟಮಾಡಿದ್ದರು‌..ಪರಿಣಾಮವಾಗಿ 2008 ರಲ್ಲಿ ‌ಮತ್ತೆ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಅರ್ಜಿ ಅಹ್ವಾನಿಸಿದಾಗ ಮಾಡಿದಾಗ ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡುವುದೆಂದು ತೀರ್ಮಾನವಾಯಿತು. ಅರ್ಜಿ ಆಹ್ವಾನಿಸಿದ ತಕ್ಷಣವೇ ಹಗಲು ರಾತ್ರಿ ಅಧ್ಯಯನ ಮಾಡಿದ ನಾನು ಲಿಖಿತ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದೆ. ಯಾವುದೇ ಪ್ರಭಾವ ದುಡ್ಡು ರಾಜಕೀಯವಿಲ್ಲದೆ ಪ್ರಾಮಾಣಿಕವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಹುದ್ದೆಗೆ ಆಯ್ಕೆಯಾದೆ.ನಾನು  ವಿಷಗಳಿಗೆಯಲ್ಲಿ ಹುಟ್ಟಿದ್ದೆನಂತೆ.ಆದರೆ ನಿರಂತರ  ಪ್ರಯತ್ನಕ್ಕೆ ವಿಷ ಗಳಿಗೆ ಕೂಡ ಅಮೃತದ ಫಲವನ್ನೇ ನೀಡಿತು

ಬದುಕ ಬಂಡಿಯಲಿ : ಅಮಾವಾಸ್ಯೆಯ ದಿನ ಕೂಡ ಅಮೃತದ ಫಲವನ್ನೇ ಕೊಟ್ಟಿತು

ಅಮವಾಸ್ಯೆಯ ದಿನ ಕೂಡ ಶುಭಗಳಿಗೆಯೇ ಅಯಿತು!
ಅಂದು ಬೆಳಗ್ಗೆ ಗೋವಿಂದ ಪ್ರಸಾದರೊಂದಿಗೆ ಮನೆ ಬಿಟ್ಟು ಹೊರಟಾಗ ಅಮವಾಸ್ಯೆಯಂತೆ.ಹಿಂದಿನ ದಿನ ಬಿಎಸ್ ಸಿ ಯ ಅಂಕ ಪಟ್ಟಿ ತರುವುದಕ್ಕಾಗಿ ಉಜಿರೆಗೆ ಹೋಗಿದ್ದರು.ಅರ್ಧ ದಾರಿ ಬಿಸಿರೋಡು ತನಕ ಗೋವಿಂದ ಪ್ರಸಾದರು ಬಂದು ಬಸ್ಸು ಹತ್ತಿಸಿ ಮಂಗಳೂರು ಕಡೆಗೆ ಹೋಗಿದ್ದರು.
ಉಜಿರೆಯ ಎಸ್ ಡಿ ಎಂ ಕಾಲೇಜಿಗೆ ಹೋಗಿ ಅಂಕ ಪಟ್ಟಿ ಪಡೆದು ಹಿಂದಿರುಗುವಷ್ಟರಲ್ಲಿ ಕತ್ತಲಾಗಿತ್ತು.ಅಕಾಲಿಕವಾಗಿ ಮಳೆ ಬಂದು ಜೋರಾಗಿ ಸುರಿಯುತ್ತಾ ಇತ್ತು.ಸುರಿವ ಮಳೆಯಲ್ಲಿ ಮನೆಯ ಒಳಗೆ ಬರಲು ಬಿಡದೆ "ಯಾರನ್ನು ಕೇಳಿ ಹೋದೆ ? ಎಂದು ದಬಾಯಿಸಿದ ಲಕ್ಷ್ಮೀ ಯವರ ಅತ್ತೆ ಮಾವ ಅಂಗಳದಲ್ಲಿಯೇ ನಿಲ್ಲಿಸಿದ್ದರು!
ಸುಮಾರು ಎರಡು ಗಂಟೆಯ ಕಾಲ ಮಳೆಯಲ್ಲಿ ಒದ್ದೆಯಾಗಿ ಚಳಿಯಲ್ಲಿ ನಡುಗುತ್ತಾ ನಿಂತಾಗ ಮಂಗಳೂರಿಗೆ ಹೋದ ಪತಿ ಗೋವಿಂದ ಪ್ರಸಾದರಯ ಹಿಂತಿರುಗಿದರು.ಅವರನ್ನು ಕೂಡ ಒಳಬರದಂತೆ ತಡೆದಾಗ ತಂದೆ ತಾಯಿ ಮಕ್ಕಳ ನಡುವಿನ ಸಹಜ ಸಲುಗೆಯಿಂದ ಒಳಗೆ ತಳ್ಳಿ ಲಕ್ಷ್ಮೀ ಯವರ ಕೈಹಿಡಿದು ಒಳಗೆ ಕರೆತಂದು ಮೈ ಒರಸಿಕೊಳ್ಳಲು ಬಟ್ಟೆ ನೀಡಿ,ಹಾಕಿಕೊಳ್ಳಲು  ಒಣಗಿದ ಬಟ್ಟೆಗಳನ್ನು ನೀಡಿದರು.ಎರಡು ಗಂಟೆಗಲ ಕಾಲ ಮಳೆಯಲ್ಲಿ ನೆನೆದ ಪ್ರಭಾವವೋ ಏನೋ ಲಕ್ಷ್ಮೀ ಗೆ ತೀವ್ರ ಜ್ವರ! ಮನೆಯೊಳಗೆ ರಾತ್ರಿಯಿಂದ ಬೆಳಗಿನ ತನಕ ಅಪ್ಪ ಮಕ್ಕಳ ನಡುವೆ ಜಗಳ.
ಬೆಳಗಾಗುತ್ತಲೇ " ನೋಡು ನಾನು ದುಡಿದು ಎರಡು ಹೊತ್ತು ಊಟ ಹಾಕಿಸಬಲ್ಲೆ,ನನ್ನೊಂದಿಗೆ ಬರುವುದಾದರೆ ಬಾ,ಮುಂದೆ ಓದು.ಅಥವಾ ಇವರ ಶ್ರೀಮಂತಿಕೆಯನ್ನು ಅನುಭವಿಸುತ್ತಾ ಗುಲಾಮಳಂತೆ ಇರು,ಆಯ್ಕೆ ನಿನ್ನದು ಎಂದಾಗ ಪತಿ ಗೋವಿಂದ ಪ್ರಸಾದರೊಂದಿಗೆ ಖಾಲಿ ಕೈಯಲ್ಲಿ ಉಟ್ಟ ಬಟ್ಟೆಯಲ್ಲಿ ಮನೆ ಬಿಟ್ಟು ಕಟೀಲಿಗೆ ಬಂದು ಸಂಸ್ಕೃತ ಎಂ.ಎ ಪದವಿಗೆ ಸೇರಿದರು. ಗೋವಿಂದ ಪ್ರಸಾದರು ಮಂಗಳೂರಿನ ಮೆಡಿಕಲ್ ಶಾಪ್ ಒಂದರಲ್ಲಿ ಕೆಲಸಕ್ಕೆ ಸೇರಿದರು.ಇವರು ಮನೆ ಬಿಟ್ಟು ಹೊರಗೆ ನಡೆದ ದಿನ ಅಮವಾಸ್ಯೆಯ ದಿನವಂತೆ.ಮನೆ ಬಿಟ್ಟು ಹೊರಗೆ ನಡೆದಾಗ ದೀರ್ಘ ಕಾಲ ಮನೆ ಮಂದಿ ಇವರ ಸಂಪರ್ಕವನ್ನು ಬಿಟ್ಟಿದ್ದರು.ನಂತರ ರಾಜಿಯಾದ ಸಂದರ್ಭದಲ್ಲಿ ಅತ್ತೆಯವರು ಲಕ್ಷ್ಮೀ ಗೆ ಈ ವಿಚಾರವನ್ನು ತಿಳಿಸಿದ್ದರು.ಒಳ್ಳೆಯ ಕಾರ್ಯಕ್ಕೆ ಹೊರಟಾಗ ಕೆಟ್ಟ ಗಳಿಗೆ ಕೂಡ ಶುಭವನ್ನೇ ಮಾಡುತ್ತದೆ ಎಂಬುದಕ್ಕೆ ಲಕ್ಷ್ಮೀ ಸಾಕ್ಷಿಯಾದರು.
ಮೋಟು ಗೋಡೆಯ ಒಂದು ಕೊಠಡಿಯಲ್ಲಿ ವಾಸ
ಲಕ್ಷ್ಮೀ ಯವರ ಹೆತ್ತವರು ಕೋಟ್ಯಧಿಪತಿಗಳು ಅಲ್ಲದಿದ್ದರೂ ಹೊಟ್ಟೆಗೆ ಬಟ್ಟೆಗೆ ಕೊರತೆ ಇರಲಿಲ್ಲ.ಬಡತನದ ಬೇಗೆ ಮಕ್ಕಳಿಗೆ ತಾಗದಂತೆ ಹೆತ್ತವರು ಜಾಗ್ರತೆ ವಹಿಸಿದ್ದರು. ಕಟೀಲು ಸಮೀಪದ ಎಕ್ಕಾರಿನಲ್ಲಿ ಒಂದು ಕೋಣೆಯ  ಗೆದ್ದಲು ಹಿಡಿದ ಮೋಟು ಗೋಡೆಯ ಮನೆಯಲ್ಲಿ ಬದುಕುವುದು ಲಕ್ಷ್ಮೀ ಮತ್ತು ಗೋವಿಂದ ಪ್ರಸಾದ ದಂಪತಿಗಳಿಗೆ ಕಷ್ಟವೆನಿಸಲಿಲ್ಲ .ದಂಪತಿಗಳ ನಡುವಿನ ಮಧುರ ಸ್ನೇಹ ಮತ್ತು ಸಾಧನೆಯ ತುಡಿತದ ಎದುರು ಕಷ್ಟಗಳು ದೊಡ್ಡದಾಗಿ ಕಾಣಿಸಲಿಲ್ಲ ‌.ಬದುಕನ್ನು ಸವಾಲಾಗಿ ಎದುರಿಸಿದರು.
ಗ್ರಹಗತಿಗೇ ಸವಾಲು ಹಾಕಿದರು!
1996 ರಲ್ಲಿಯೇ ಸಂಸ್ಕೃತ ಎಂ.ಎ ಪದವಿಯನ್ನು ಮೊದಲ ರ‌್ಯಾಂಕಿನೊಂದಿಗೆ ಪಡೆದರೂ ಇವರಿಗೆ ಸುಲಭದಲ್ಲಿ ಸರ್ಕಾರಿ ಉದ್ಯೋಗ ದೊರೆಯಲಿಲ್ಲ.  ಓದು ಮುಗಿದ ತಕ್ಷಣವೇ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಸಿಕ್ಕಿತಾದರೂ ಅದು ಅರೆ ಕಾಲಿಕ ಕೆಲಸವಾಗಿತ್ತು. ಎಲ್ಲಿ ಹುಡುಕಿದರೂ ಸಂಸ್ಕೃತಕ್ಕೆ ಪೂರ್ಣಕಾಲಿಕ ಖಾಯಂ ಕೆಲಸವಿಲ್ಲ.ಆಗ ಸಂತ ಅಲೋಶಿಯಸ್ ಕಾಲೇಜಿನ ಹಿಂದಿ ಉಪನ್ಯಾಸಕಿ ಹಿಂದೆ ಎಂ ಎ ಓದುವಂತೆ ಸಲಹೆ ನೀಡಿದರು. ಅದಕ್ಕೂ ಮೊದಲೇ ಲಕ್ಷ್ಮೀ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ನಡೆಸುವ ರಾಷ್ಟ್ರ ಭಾಷಾ ಪ್ರವೀಣ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.ಹಾಗಾಗಿ ಹಿಂದೆ ಎಂಎ ಓದುವುದು ಇವರಿಗೆ ಅಷ್ಟೊಂದು ಕಷ್ಟವೆನಿಸಲಿಲ್ಲ.ಕೆಲಸ ಮಾಡುತ್ತಲೇ ಪುಟ್ಟ ಮಗ ಅರವಿಂದನ ಲಾಲನೆ ಪಾಲನೆ ಮಾಡುತ್ತಲೇ ಖಾಸಗಿಯಾಗಿ ಹಿಂದಿ ಎಂಎ ಗೆ ಕಟ್ಟಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದರು ‌.ಅಂಕಗಳೇನೋ ಬಂತು.ಆದರೆ ಹಿಂದಿ ಭಾಷೆ ಸಾಹಿತ್ಯ ಅವರನ್ನು ಆಕರ್ಷಿಸಲಿಲ್ಲ.ಅಸಕ್ತಿ ಇಲ್ಲದ ಕ್ಷೇತ್ರದಲ್ಲಿ ದುಡಿಯುತ್ತಾ ಬದುಕು ಕಳೆಯುವುದು ಲಕ್ಷ್ಮೀ ಗೆ ಸಮ್ಮತವಾಗಲಿಲ್ಲ.ಸಹೋದರ ಗಣೇಶ ಭಟ್ ಸಲಹೆಯಂತೆ ಮತ್ತೆ ಪುನಃ ಕನ್ನಡ ಎಂ.ಎ ಗೆ ಕಟ್ಟಿದರು.ಇಲ್ಲಿ ಇವರು ತನ್ನ ಆಸಕ್ತಿಯ ಕ್ಷೇತ್ರ ಜಾನಪದವನ್ನು ಆಯ್ಕೆ ಮಾಡಿಕೊಂಡರು.ಇಲ್ಲಿಂದ ಇವರ ಬದುಕಿನ ದಿಕ್ಕು ಬದಲಾಯಿತು. ತುಳು ಸಂಸ್ಕೃತಿ ಜಾನಪದ ಇವರ ಅಧ್ಯಯನದ ವಿಚಾರವಾಯಿತು. ಮೂರು ಎಂಎ ಪದವಿಗಳನ್ನು ಎಂಫಿಲ್ ಮತ್ತು ಡಾಕ್ಟರೇಟ್ ಪದವಿಗಳನ್ನೂ ಪಡೆದರೂ ಇವರಿಗೆ ಜಾತಿ ದುಡ್ಡು ಪ್ರಭಾವಗಳ ವ್ಯವಸ್ಥೆಯ ನಡುವೆ ಸರ್ಕಾರಿ ಉದ್ಯೋಗ ದೊರೆಯಲಿಲ್ಲ. ‌ವಯಸ್ಸು ನಿಲ್ಲುವುದಿಲ್ಲ.
1995 ರಲ್ಲಿ ಇವರು ಎರಡನೇ ವರ್ಷದ ಎಂಎ ಓದುತ್ತಿರುವಾಗ ಸರ್ಕಾರಿ  ಪದವಿ ಪೂರ್ವ ಕಾಲೆಜುಗಳ ಉಪನ್ಯಾಸಕ ಹುದ್ದೆಗೆ ಅರ್ಜಿ ಅಹ್ವಾನಿಸಿದ್ದರು.ಅದಾಗಿ ಯಾವುದೋ ಸಮಸ್ಯೆಯಿಂದಾಗಿ  ಹತ್ತು ವರ್ಷಗಳ ಕಾಲ ಅರ್ಜಿ ಅಹ್ವಾನಿಸಿರಲಿಲ್ಲ.ಮತ್ತೆ 2006 ರಲ್ಲಿ ಅರ್ಜಿ ಅಹ್ವಾನಿಸಿದಾಗ  ಲಕ್ಷ್ಮೀಯವರಿಗೆ  ಗರಿಷ್ಠ ವಯೋಮಿತಿ 33 ವರ್ಷ ದಾಟಿತ್ತು.ಆರಂಭದಲ್ಲಿ ತುಂಬಾ ಹತಾಶೆಗೆ ಒಳಗಾದ ಇವರು ಮತ್ತೆ ಆತ್ಮವಿಶ್ವಾಸವನ್ನು ಬಿಡದೆ ಆಗ ಶಿಕ್ಷಣ ಸಚಿವರಾದ ಬಸವರಾಜ ಹೊರಟ್ಟಿಯವರನ್ನು ಭೇಟಿಯಾದರು ‌.ಅದಾಗಲೇ ಪ್ರೌಢಶಾಲಾ ಶಿಕ್ಷಕರ ನೇಮಕಕ್ಕೆ ಗರಿಷ್ಠ ವಯೋಮಿತಿ 40 ವರ್ಷಕ್ಕೆ ನಿಗಧಿತವಾಗಿತ್ತು.ಪದವಿ ಕಾಲೇಜುಗಳಿಗೆ 35 ವರ್ಷಗಳು ಗರಿಷ್ಠ ವಯೋಮಿತಿಯಾಗಿತ್ತು ಶಿಕ್ಷಣ ಸಚಿವರಿಗೆ ಇದನ್ನು ಮನವರಿಕೆ ಮಾಡಿಸಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಕೂಡ ಗರಿಷ್ಠ ವಯೋಮಿತಿಯನ್ನು ಹೆಚ್ಚಿಸುವಂತೆ ಮನವಿ ಮಾಡಿದರು‌.ಅದರಂತೆ ಶಿಕ್ಷಣ ಸಚಿವರು  ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಇರುವಂತೆ  ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿಗೆ ಕೂಡ ಗರಿಷ್ಠ ವಯೋಮಿತಿ  40 ವರ್ಷಗಳನ್ನು ನಿಗಧಿಪಡಿಸಿದರು.
2006 ರಲ್ಲಿ ಅರ್ಜಿ ಅಹ್ವಾನಿಸಿದಾಗ ಒಂದೇ ಒಂದು ಸಂಸ್ಕೃತ ಉಪನ್ಯಾಸಕ ಹುದ್ದೆ ಇರಲಿಲ್ಲ ‌.ಕನ್ನಡ ಉಪನ್ಯಾಸಕ ಹುದ್ದೆಗೆ ಇವರಿಗೆ ಸಂದರ್ಶನಕ್ಕೇ ಬರಲಿಲ್ಲ.
ಈಗ ಇವರ ಹೆತ್ತವರು ಇವರ ಜಾತಕ ತೋರಿಸಿ ಅನೇಕ ಜ್ಯೋತಿಷಿಗಳಲ್ಲಿ ಇವರಿಗೆ ಸರ್ಕಾರಿ ಹುದ್ದೆ ದೊರೆಯುತ್ತದೆಯೇ ಎಂದು ಕೇಳಿದರು.ಇವರ ಜಾತಕ ನೋಡಿದ ಎಲ್ಲರೂ ಇವರಿಗೆ ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆ ಇಲ್ಲವೆಂದೇ ಹೇಳಿದರು.ಲಕ್ಷ್ಮೀ ಆಗಲೂ ಕೂಡ ತನ್ನ ಪ್ರಯತ್ನ ಬಿಡಲಿಲ್ಲ. ಮನೋ ಬಲದ ಮುಂದೆ ಯಾವ ಗ್ರಹಗತಿಯೂ ನಿಲ್ಲುವುದಿಲ್ಲ ಎಂದು ಮನಸ್ಸು ಗಟ್ಟಿ ಮಾಡಿಕೊಂಡರು!
ಪದವಿ ಪೂರ್ವ ಕಾಲೇಜು ಉಪನ್ಯಾಸಕ ಹುದ್ದೆಗೆ ಪ್ರೌಢಶಾಲಾ ಶಿಕ್ಷಕರಿಗೆ ಇರುವಂತೆ ಲಿಖಿತ ಪರೀಕ್ಷೆಯ ಮೂಲಕ ನೇಮಕಾತಿ ನಡೆಸುವಂತೆ ಮನವಿ ಮಾಡಿದರು. ಈ ಬಗ್ಗೆ ಪತ್ರಾಂದೋಲನ ಮಾಡಿದರು‌.ಸಂದರ್ಶನದ ಮೂಲಕ ಆಯ್ಕೆ ಮಾಡುವಾಗ ಜಾತಿ ದುಡ್ಡು ಪ್ರಭಾವವೇ ಕೆಲಸ ಮಾಡುತ್ತದೆ‌.ಭ್ರಷ್ಟಾಚಾರದ ಕಾರಣದಿಂದ ದುಡ್ಡು ಕೊಡಲು ಅಸಮರ್ಥರಾಗುವ ,ಇನ್ಫ್ಲೂಯೆನ್ಸ್ ಇಲ್ಲದೆ ಇರುವ ಪ್ರತಿಭಾವಂತರು ಅವಕಾಶ ವಂಚಿತರಾಗುತ್ತಾರೆ.ಹಾಗಾಗಿ ಅನೇಕರು ಲಿಖಿತ ಪರೀಕ್ಷೆ ಮೂಲಕ ನೇಮಕಾತಿ ಮಾಡಬೇಕೆಂದು ಹೋರಾಟ ಮಾಡಿದರು.ಅದರ ಪರಿಣಾಮವಾಗಿ 2008 ರಲ್ಲಿ ‌ಮತ್ತೆ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಅರ್ಜಿ ಅಹ್ವಾನಿಸಿದಾಗ ಮಾಡಿದಾಗ ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡುವುದೆಂದು ತೀರ್ಮಾನವಾಯಿತು. ಅರ್ಜಿ ಆಹ್ವಾನಿಸಿದ ತಕ್ಷಣವೇ ಹಗಲು ರಾತ್ರಿ ಅಧ್ಯಯನ ಮಾಡಿದ ಲಕ್ಷ್ಮೀ ಲಿಖಿತ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದರು. ಯಾವುದೇ ಪ್ರಭಾವ ದುಡ್ಡು ರಾಜಕೀಯವಿಲ್ಲದೆ ಪ್ರಾಮಾಣಿಕವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಹುದ್ದೆಗೆ ಆಯ್ಕೆಯಾದರು.ಲಕ್ಷ್ಮೀ ವಿಷಗಳಿಗೆಯಲ್ಲಿ ಹುಟ್ಟಿದ್ದರಂತೆ.ಇವರ ಪ್ರಾಮಣಿಕ ಪ್ರಯತ್ನಕ್ಕೆ ವಿಷ ಗಳಿಗೆ ಕೂಡ ಅಮೃತದ ಫಲವನ್ನೇ ನೀಡಿತು.
(ಅಪೂರ್ವ ತುಳು ಸಂಶೋಧಕಿ ಡಾ.ಲಕ್ಷ್ಮೀ ಜಿ ಪ್ರಸಾದ, ಮುಂಬಯಿ ಸಾಹಿತ್ಯ ಬಳಗ ಪ್ರಕಟಿಸಿದ ಲಕ್ಷ್ಮೀ ಯವರ ಜೀವನದ ಬಗೆಗಿನ ಒಂದು ಭಾಗ )

Wednesday 17 April 2019

ನನ್ನೊಳಗೂ ಒಂದು ಆತ್ಮವಿದೆ© ಡಾ.ಲಕ್ಷ್ಮೀ ಜಿ ಪ್ರಸಾದ ನನ್ನ ‌ಮೇಲೆ ಬೇಕಾದರೆ ಮಾನನಷ್ಟ ಮೊಕದ್ದಮೆ ಹೂಡಲಿ,_5

ನನ್ನೊಳಗೂ ಒಂದು ಆತ್ಮವಿದೆ© ಡಾ.ಲಕ್ಷ್ಮೀ ಜಿ ಪ್ರಸಾದ

 ನನ್ನ ‌ಮೇಲೆ ಬೇಕಾದರೆ ಮಾನನಷ್ಟ ಮೊಕದ್ದಮೆ ಹೂಡಲಿ,_5

ನಾನು ಆತ್ಮಕಥೆ ಬರೆಯಬೇಕು,ಅದನ್ನು ನಾನು ನಿವೃತ್ತಿ ಹೊಂದುವ ದಿನ ಪ್ರಕಟಿಸಬೇಕು ಎಂದು ಕೂಡ ಆಲೋಚಿಸುತ್ತಾ ಇದ್ದೆ‌.ಆದರೆ ಬರೆಯಲು ಶುರು ಮಾಡಿರಲಿಲ್ಲ ‌ನನ್ನ ಅಮ್ಮ ಈಗಲೇ ಶುರು ಮಾಡು .ನೆನಪಾದದ್ದನ್ನು ಬರೆದಿಡುತ್ತಾ ಹೋಗು..ಅರುವತ್ತು ಆದಾಗ ಬರೆಯಹೊರಟರೆ ನೆನಪಾಗದಿದ್ದರೆ ಏನು ಮಾಡುತ್ತೀಯಾ " ಎಂದು ಆಗಾಗ ಬರೆಯಲು ಶುರು ಮಾಡು ಎಂದು ನೆನಪಿಸುತ್ತಾ ಇದ್ದರು.ಅಮ್ಮನ ಹತ್ತಿರ ಹ್ಹೂ ಅಂತ ಹೋಗುಟ್ಟುದು ಮತ್ತೆ ಅಲ್ಲೇ ಮರೆತು ಬಿಡುದು‌.ಮತ್ತೆ ಅಮ್ಮ ನೆನಪು ಮಾಡುದು ಹೀಗೆ ನಡೆಯುತ್ತಾ ಇತ್ತು.
ಎರಡು ಮೂರು ದಿನಗಳ ಹಿಂದೆ ನಾವು ಸಂಸ್ಕೃತ ಎಂಎ ಓದುವಾಗ ಇದ್ದ ಸಹಪಾಠಗಳನ್ನೆಲ್ಲ ಮನೆಗೆ ಕರೆದು ಒಂದು ದಿನ ಗಮ್ಮತ್ತಿನಿಂದ ಬಹಳ ಖುಷಿಯಿಂದ ಕಳೆಯಬೇಕೆಂದು ಕೊಂಡೆ‌.ಕಳೆದ ತಿಂಗಳು ನಮ್ಮ ಕಮರ್ಷಿಯಲ್ ಕಾಂಪ್ಲೆಕ್ಸ್ ಮತ್ತು ಮನೆ ಒಕ್ಕಲು ಬೇರೆ ಮುಹೂರ್ತ ಹತ್ತಿರದಲ್ಲಿ ಇಲ್ಲದ ಕಾರಣ  ತೀರಾ ಅರ್ಜೆಂಟಿನಲ್ಲಿ  ಫೆಬ್ರವರಿ ಹದಿನಾಲ್ಕಕ್ಕೆ ಇನ್ನೂ ಎಲ್ಲ ಮನೆ ಕೆಲಸ ಬಾಕಿ ಇರುವಂತೆಯೇ ಆಗಿತ್ತು.ಮುಂದೆ ಹಾಕುವ ಹಾಗಿರಲಿಲ್ಲ ಯಾಕೆಂದರೆ ತೀರಾ ಮುಂದೆ ತಗೊಂಡು ಹೋದರೆ ನನಗೆ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಅಂತಿಮ ಪರೀಕ್ಷೆ,ಮೌಲ್ಯ ಮಾಪನ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ,ಮೌಲ್ಯ ಮಾಪನ ಇಲೆಕ್ಷನ್ ಡ್ಯೂಟಿ ಎಲ್ಲ ಮುಗಿಯುವ ಹೊತ್ತಿಗೆ ಎಪ್ರಿಲ್ ಕಳೆದು ಬಿಡುತ್ತದೆ.ನಂತರ ಬೋರ್ ವೆಲ್ ನಲ್ಲಿ ನೀರು ಕಡಿಮೆ ಆಗಿ ಸಮಸ್ಯೆ ಆದರೆ ಎಂದು ಆತಂಕ. ಹಾಗಾಗಿ  ತೀರ ಅರ್ಜೆಂಟಿನಲ್ಲಿ ಮಾಡಿದ ಕಾರಣ ನನ್ನ ಹಳೆಯ ಸಹಪಾಠಿಗಳ ಪೋನ್ ನಂಬರ್ ಸಂಗ್ರಹಿಸಿ ಅವರನ್ನು ಸಂಪರ್ಕಿಸಿ ಮನೆ ಒಕ್ಕಲಿಗೆ ಆಹ್ವಾನಿಸಲಾಗಲಿಲ್ಲ.
ಈಗ. ಉಳಿದ. ಕೆಲಸಗಳು ಮುಗಿದಿವೆ.ಈ ಬಾರಿ ಇಲೆಕ್ಷನ್ ಡ್ಯೂಟಿ ತರಬೇತಿಗೆ ಬರಹೇಳಿದ್ದರೂ ಅಂತಿಮವಾಗಿ ಡ್ಯೂಟಿ ಹಾಕಿರಲಿಲ್ಲ .( ಸ್ವಲ್ಪ ಆರೋಗ್ಯ ಏರು ಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕಾರಣ ತರಬೇತಿಗೆ ನನಗೆ ಹಾಜರಾಗಲಿಲ್ಲ)
ಹಾಗಾಗಿ ಈಗ ಫ್ರೀ ಸಿಕ್ಕಿತ್ತು .ಹಾಗೆ ಹಳೆಯ ಸ್ನೇಹಿತರನ್ನು ಸಂಪರ್ಕಿಸಿ ನಮ್ಮ ಮನೆಗೆ ಬರಹೇಳಿ ಒಂದು ದಿನ ಅವರೊಂದಿಗೆ ಸಂತಸದಿಂದ ಕಳೆಯಬೇಕೆಂದು ಕೊಂಡಿದ್ದೆ .ಅದಕ್ಕಾಗಿ ಒಬ್ಬೊಬ್ಬರ ಫೋನ್ ನಂಬರ್ ಸಂಗ್ರಹಿಸುತ್ತಾ ಹೋದೆ.ಎಂಎ ಓದುವಾಗ ನನಗೆ ಪ್ರಿಯಳಾಗಿದ್ದ ವಿನುತಾರ ಫೋನ್ ನಂಬರ್ ಅನ್ನು ಮುರಳೀಧರ ಉಪಾಧ್ಯಾಯರ ಮೂಲಕ‌ ಪಡದೆ .
ವಿನತಾ ಹತ್ತಿರ ಮಾತನಾಡಿ ಅವರಿಂದ ಸಂಸ್ಕೃತ ಓದುತ್ತಿದ್ದಾಗ ನನಗೆ ತುಂಬಾ ಸ್ನೇಹಿತೆಯಾಗಿದ್ದ ಕಮಲಾಯನಿ ಫೋನ್ ನಂಬರ್ ಸಿಕ್ಕಿತು. ಅವರಿಗೆ ಫೋನ್ ಮಾಡಿ ಸುಮಾರು ಹೊತ್ತು ಮಾತನಾಡಿದೆ.ಕೊನೆಯಲ್ಲಿ ಅವರು " ನನಗೆ ಒಂದು ವಿಷಯ ಮಾತ್ರ ಮರೆಯಲು ಆಗುತ್ತಾ ಇಲ್ಲ..ನಿನ್ನಿಂದಾಗಿ ನನಗೆ ಎಂಎ ಯಲ್ಲಿ ಕಡಿಮೆ ಅಂಕಗಳು ಬಂದವು " ಎಂದು ಬಹಳ ನೋವಿನಿಂದ ಹೇಳಿದರು..ನನಗೆ ಆಶ್ಛರ್ಯ ಆಯಿತು..ನನ್ನಿಂದಾಗಿ ಅವರಿಗೆ ಕಡಿಮೆ ಅಂಕ ಬರಲು ಹೇಗೆ ಸಾಧ್ಯ ? ನಾನು ಮಾಡಿದ ನೋಟ್ಸ್ ಗಳನ್ನು ನಾನು ಯಾರು ಕೇಳಿದರೂ ಕೊಡುತ್ತಿದ್ದೆ.ಕಮಲಾಯನಿ ಸೇರಿದಂತೆ ಉಳಿದವರು ಕೂಡ ಅದನ್ನು ಕಾಪಿ ಮಾಡಿಕೊಳ್ಳುತ್ತಿದ್ದರು.ಮೊದಲ ವರ್ಷ ನಾನು ಕೂಡ ಬೇರೆಯವರು ಮಾಡಿದ ನೋಟ್ಸ್ ಗಳ ಸಹಾಯ ಪಡೆದಿದ್ದೆ.ಎರಡನೇ ವರ್ಷದ ಆರಂಭದಲ್ಲೇ  ಮೊದಲ ವರ್ಷದ ಫಲಿತಾಂಶ ಬಂದ ದಿನ ನಮ್ಮಲ್ಲಿ ಸಣ್ಣ ವಿವಾದ ಉಂಟಾಗಿತ್ತು.
ಮೊದಲ ವರ್ಷದ  ಪಾಠ ಪ್ರವಚನಗಳು ಮುಗಿದು ನಮಗೆ ರಿವಿಜನಲ್ ಹಾಲಿಡೇಸ್ ಕೊಟ್ಟಿದ್ದರು‌.ನಾನು ವೇದಾಂತವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದು ಆ ಬಗ್ಗೆ ಕೆಲವು ಸಂಶಯ ಉಂಟಾಗಿ ನಮಗೆ ವೇದಾಂತ ಪಾಠ ಮಾಡಿದ ಡಾ.ಕೆ ನಾರಾಯಣ ಭಟ್ ಅವರನ್ನು ಕಾಣಲು ಕಾಲೇಜಿಗೆ ಹೋದೆ.ಅವರು ಸ್ಟಾಫ್ ರೂಮಿನಲ್ಲಿ ಇದ್ದರು‌.ಇನ್ನೋರ್ವ ಉಪನ್ಯಾಸಕರಾದ ನಾಗರಾಜ ಭಟ್ ಕೂಡ ಅಲ್ಲಿಯೇ ಇದ್ದರು‌.ನಾನು  ಡಾ.ಕೆ ನಾರಾಯಣ ಭಟ್ಟರಲ್ಲಿ ಒಳಗೆ ಬರಬಹುದೇ ಎಂದು ಅನುಮತಿ ಕೇಳಿ,ಅವರು ಒಳಗೆ ಬರುವಂತೆ ಸೂಚಿಸಿದ ಮೇಲೆ ಒಳಗೆ ಹೋಗಿದ್ದೆ‌.ನನಗೆ ಉಂಟಾದ ಸಂಶಯ,ಅರ್ಥವಾಗದ ಭಾಗಗಳನ್ನು ಕೇಳಿದೆ‌.ಅವರು ಬಹಳ ತಾಳ್ಮೆಯಿಂದ ನನಗೆ ಅದನ್ನು ಹೇಳಿ ಕೊಡುತ್ತಾ ಇದ್ದರು.ಇದರ ನಡುವೆ ಅಲ್ಲಿಯೇ ಕುಳಿತಿದ್ದ ನಾಗರಾಜ ಎಂಬ ಉಪನ್ಯಾಸಕರು ಅವಿನಾಶ್ ಗೆ ತೊಂಬತ್ತು, ಗಜಾನನ ಮರಾಠೆಗೆ ಎಂಬತ್ತೈದು ,ರಮೇಶ್ ಗೆ ಎಂಬತ್ತು..ಇತ್ಯಾದಿಯಾಗಿ ಕೆಲವು ವಿದ್ಯಾರ್ಥಿಗಳಿಗೆ ಇಷ್ಟು ಅಂತರ್ ಮೌಲ್ಯ ಮಾಪನ ಅಂಕಗಳನ್ನು ನೀಡಿದ ಬಗ್ಗೆ ಡಾ.ಕೆ ನಾರಾಯಣ ಭಟ್ಟರಲ್ಲಿ ಹೇಳಿದರು.ಹುಡುಗಿಯರಿಗೆ ಕೊಟ್ಟ ಅಂಕಗಳ ಬಗ್ಗೆ ಇನ್ನೂ ಹೇಳಿರಲಿಲ್ಲ‌.ನನ್ನನ್ನು ನೋಡುತ್ತಾ ಲಕ್ಷ್ಮೀ ಗೆ ಎಪ್ಪತ್ತೆರಡು ಎಂದು ಹೇಳಿದರು. ಆಗ ನನಗೆ ತುಂಬಾ ಶಾಕ್ ಆಯ್ತು‌. ಕಿರು ಪರೀಕ್ಷೆ,ಮಧ್ಯವಾರ್ಷಿಕ ಪರೀಕ್ಷೆ, ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ಹೆಚ್ಚು ಕಡಿಮೆ ಎಲ್ಲಾ ವಿಷಯಗಳಲ್ಲೂ ನಾನು ಟಾಪರ್ ಆಗಿದ್ದೆ.ಸೆಮಿನಾರ್ ಗಳಲ್ಲಿ ಕೂಡ ನನ್ನ ಪ್ರಬಂಧ ಮಂಡನೆ ಬಗ್ಗೆ ಉಪನ್ಯಾಸಕರು ಗುಡ್ ಎಂದು ಹೇಳಿ ಮೆಚ್ಚುಗೆ ಸೂಸಿದ್ದರು.ಹಾಗಿದ್ದರೂ ನನಗೇಕೆ ಉಳಿದವರಿಗಿಂತ ಕಡಿಮೆ ಅಂಕಗಳು. ನನ್ನ ಆತಂಕವನ್ನು ಗಮನಿಸಿದ ಡಾ.ಕೆ ನಾರಾಯಣ ಭಟ್ ಅವರು
ಲಕ್ಷ್ಮೀ ಗೆ ಯಾಕೆ ಅಷ್ಟು ಕಡಿಮೆ ಅಂಕಗಳು ಬಂದಿವೆ ,ಅವಳು ಪರೀಕ್ಷೆಗಳಲ್ಲಿ ,ಸೆಮಿನಾರ್ ಹಾಗೂ ಇತರ ನಾಟಕ ಭಾಷಣ ಮೊದಲಾದುದರಲ್ಲಿ ಕೂಡ ಮುಂದೆ ಇದ್ದಾಳಲ್ಲ ? ಎಂದು ಕೇಳಿದರು.ಅವಳು ಹೇಗೂ ಥಿಯರಿಯಲ್ಲಿ ಸ್ಕೋರ್ ಮಾಡುತ್ತಾಳೆ..ಇಂಟರ್ನಲ್ ಮಾರ್ಕ್ಸ್ ಕೊಡುವುದು  ಬಿಡುವುದು ನಮ್ಮ ಇಷ್ಟ ಅಲ್ವಾ ಎಂದವರು ಹೇಳಿದರು. ಆಗ ನಾನು ಅದೇಗೆ  ನಿಮ್ಮ ಇಷ್ಟ  ಆಗುತ್ತೆ ,ಮಿಡ್ ಟರ್ಮ್ ಮತ್ತು ಪ್ರಿಪರೇಟರಿ ಪರೀಕ್ಷೆಗಳಲ್ಲಿ  ನಾವು ತೆಗೆದ ಅಂಕಗಳು ,ಸೆಮಿನಾರ್ ಹಾಗೂ ಇತರ ಪಠ್ಯೇತರ ಚಟುವಟಿಗಳನ್ನು ಆಧರಿಸಿ ಕೊಡಬೇಕಲ್ಲ ? ಎಂದು ಕೇಳಿದೆ.ಬಹುಶಃ ಆತಂಕದಿಂದ ನನ್ನ ಧ್ವನಿ ಏರಿರಬಹುದೋ ಏನೋ ಗೊತ್ತಿಲ್ಲ ‌.ಸಣ್ಣ ವಯಸ್ಸಿನಲ್ಲಿ ನನಗೆ ಸ್ವಲ್ಪ ಶೀಘ್ರ ಕೋಪದ ಸ್ವಭಾವ ಇತ್ತು ಕೂಡ. ಆದರೆ ಶಾಲಾ ಕಾಲೇಜುಗಳಲ್ಲಿ ನಾನು ಅತ್ಯುತ್ಸಾಹದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ಇದ್ದ ವಿಧೇಯ ವಿದ್ಯಾರ್ಥಿನಿ ಆಗಿದ್ದೆ.ನಾನೆಂದೂ ಉಡಾಫೆ ವರ್ತನೆ ತೋರಿರಲಿಲ್ಲ ,ಆಗ ಕೂಡ ನಾನು ಅಷ್ಟೇ ಕೇಳಿದ್ದು.ಅಷ್ಟಕ್ಕೇ ಅವರು ನನಗೆ ಗೆಟೌಟ್ ಫ್ರಂ್ ಹಿಯರ್  ,ಇಂಟರ್ನಲ್ ಮಾರ್ಕ್ಸ್ ಬಗ್ಗೆ ಚರ್ಚಿಸುತ್ತಿರುವಾಗ ನೀನು ಬಂದದ್ದೇಕೆ ? ಎಂದು ಬಹಳ ಕೆಟ್ಟದಾಗಿ ಬೈದರು‌.ಆಗ ನಾನು ಡಾ.ಕೆ ನಾರಾಯಣ ಭಟ್ ಅವರ ಅನುಮತಿ ಕೇಳಿ ಒಳಗೆ ಬಂದಿದ್ದೆ..ಗೆಟೌಟ್ ಹೇಳಲು ನಿಮಗೇನು ಹಕ್ಕಿದೆ ಎಂದು ಹೇಳಿ ನೇರವಾಗಿ ಪ್ರಿನ್ಸಿಪಾಲ್ ಡಾ.ಜಿ ಎನ್ ಭಟ್ ಅವರಲ್ಲಿ ನಾಗರಾಜ ಅವರು ನನಗೆ ಅವಮಾನಿಸಿ ಮಾತನಾಡಿದ್ದನ್ನು ಮತ್ತು ಕಡಿಮೆ ಇಂಟರ್ನಲ್ ಮಾರ್ಕ್ಸ್ ಕೊಟ್ಟದ್ದನ್ನು ತಿಳಿಸಿದೆ.ಆಯಿತು ಈ ಬಗ್ಗೆ ನಾನು ವಿಚಾರಿಸುತ್ತೇನೆ.ಯುನಿವರ್ಸಿಟಿ ನಿಯಮದ ಪ್ರಕಾರ ಎಲ್ಲರಿಗೂ ಇಂಟರ್ನಲ್ ಮಾರ್ಕ್ಸ್ ಬರುತ್ತವೆ‌.ಇಷ್ಟು ಸಣ್ಣ ವಿಷಯಕ್ಕೆಲ್ಲ ಅಪ್ಸೆಟ್ ಆಗಬಾರದು ..ಹೋಗಿ ಓದಿಕೋ ಎಂದು ಹೇಳಿ ನನ್ನನ್ನು ಸಮಾಧಾನ ಮಾಡಿ ಕಳುಹಿಸಿದರು.ಅವರ ಮೇಲೆ ನನಗೆ ತುಂಬಾ ಗೌರವ ನಂಬಿಕೆ ಇತ್ತು.ಹಾಗಾಗಿ ಮನೆಗೆ ಹೋಗಿ ನೆಮ್ಮದಿಯಿಂದ ಓದಲು ಶುರು ಮಾಡಿದೆ.ಚೆನ್ನಾಗಿ ಓದಿದೆ ಕೂಡ. ದುರದೃಷ್ಟ ಏನೆಂದರೆ ಪ್ರಥಮ ಪಿಯುಸಿ ಅಂತಿಮ ಪರೀಕ್ಷೆಯ ಹಿಂದಿನ ಎರಡು ದಿನಗಳಿಂದ  ಮಲೇರಿಯಾ ಆಗಿ ತೀವ್ರ ಜ್ವರ.ಆಗ ಕಟೀಲಿನಲ್ಲಿ ಇದ್ದ ಡಾಕ್ಟರ್ ಶಶಿಕುಮಾರ್( ಹೆಸರು ಸರಿಯಾಗಿ ನೆನಪಿಲ್ಲ) ಬಳಿಗೆ ಹೋದೆ .ಅವರು ಸೂಕ್ತ ಚಿಕಿತ್ಸೆ ನೀಡಿದರಾದರೂ ತಕ್ಷಣವೇ ಗುಣವಾಗುವ ಖಾಯಿಲೆ ಇದಲ್ಲ..ಮಂಗಳೂರಿನ ಆಸ್ಪತ್ರೆಗೆ ದಾಖಲಾಗುವುದು ಒಳ್ಳೆಯದು ಎಂದು ಹೇಳಿದರು.ಆಸ್ಪತ್ರೆಗೆ ದಾಖಲಾಗುವಷ್ಟು ದುಡ್ಡು ನಮ್ಮ ಹತ್ತಿರ ಇರಲಿಲ್ಲ ಜೊತೆಗೆ ಅಂತಿಮ ಪರೀಕ್ಷೆ ತಪ್ಪಿಸಿಕೊಂಡರೆ  ನನಗೆ ರ‍್ಯಾಂಕ್ ಬರುವ ಸಾಧ್ಯತೆ ಇರಲಿಲ್ಲ. ನಾನು ಮೊದಲ ರ‍್ಯಾಂಕ್ ತೆಗೆಯಬೇಕೆಂದು ತುಂಬಾ ಕಷ್ಟ ಪಟ್ಟು ಓದಿದ್ದೆ.
ಹಾಗಾಗಿ ಔಷಧ ತೆಗೆದುಕೊಂಡು ಪರೀಕ್ಷೆಗೆ ಹಾಜರಾದೆ.ಅದೃಷ್ಟವಶಾತ್ ಪರೀಕ್ಷೆ ಹಾಲಿನಲ್ಲಿ ‌ಮಲೇರಿಯಾದ ತೀವ್ರ ನಡುಕ ಕಾಣಿಸಿಕೊಳ್ಳಲಿಲ್ಲ.
ಪರೀಕ್ಷೆ ಮುಗಿಸಿ ಮನೆಗೆ ಹೋಗುವ ದಾರಿಯಲ್ಲಿ ತೀವ್ರ ನಡುಕ ಬಂದಿತ್ತು.ಸಾಮಾನ್ಯವಾಗಿ ‌ಮಲೇರಿಯ ಬಂದಾಗ ನಿಯಮಿತ ಸಮಯದಲ್ಲಿ ತೀವ್ರವಾದ ನಡುಕ ಉಂಟಾಗುತ್ತದೆ‌.ಮಲೇರಿಯಾ ನಿಯಂತ್ರಣಕ್ಕೆ ಬರುವ ತನಕ ಅದು ಮುಂದುವರಿಯುತ್ತದೆ.  ಮಲೇರಿಯಾಕ್ಕೆ ಕೊಡುವ ಔಷಧ ಲಿವರಿಗೆ ತೊಂದರೆ ಮಾಡುತ್ತದೆ‌ ಇದರಿಂದಾಗಿ ತುಂಬಾ ವಾಂತಿ ,ನಿಶಕ್ತಿ ಕಾಡುತ್ತದೆ ಜೊತೆಗೆ ನಡುಕದ ಪರಿಣಾಮವಾಗಿ   ತುಂಬಾ ಮೈ ಕೈ ನೋವು  .ಅಂತೂ ಮಲೇರಿಯಾ ಜೊತೆ ಸೆಣಸುತ್ತಲೇ ಪರೀಕ್ಷೆ ಎದುರಿಸಿದೆ‌.
ಮತ್ತೆ ಸ್ವಲ್ಪ ಸಮಯ ರಜೆ ಇತ್ತು..ಪ್ರಸಾದರಿಗೆ ಮಣಿಪಾಲ್ ಫೈನಾನ್ಸ್ ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಸಿಕ್ಕಿತು.. ನಮ್ಮ ಆರ್ಥಿಕ ಪರಿಸ್ಥಿತಿ ಸ್ವಲ್ಪ ಸುಧಾರಿಸಿತು‌‌. ನನ್ನ ಸೋದರಮಾವನ ವರಸೆಯ ರಾಮಣ್ಣು ಮಾವ ಅವರ ಪರಿಚಯದ ವಿಜಯಾ ಪೆನ್ ಮಾರ್ಟಿನ ಶ್ಯಾಮಣ್ಣ ಅವರಲ್ಲಿ ಮಾತಾಡಿ ಮಂಗಳೂರಿನಲ್ಲಿ ಸ್ವಲ್ಪ ಬಾಡಿಗೆ ಕಡಿಮೆ ಮಾಡಿಸಿ ಅವರ ಭಾವ ಮೈದನನ ಸುಸಜ್ಜಿತ ‌ಮನೆಯನ್ನು ನಮಗೆ ಬಾಡಿಗೆಗೆ ಕೊಡಿಸಿದರು ‌ ನಾವು ಎಕ್ಕಾರಿನ ಮೋಟು ಗೋಡೆಯ ಮಣ್ಣಿನ ಮನೆಯನ್ನು ಖಾಲಿ ಮಾಡಿ  ಕಷ್ಟಕಾಲದಲ್ಲಿ ನಮಗೆ ಆಶ್ರಯ ಕೊಟ್ಟ ಎಕ್ಕಾರಿನ ನಾಗವೇಣಿ ಅಮ್ಮ ಹಾಗೂ ಎಕ್ಕಾರಿನ ಕೊಂಕಣಿ ಅಜ್ಜನಿಗೆ ಧನ್ಯವಾದ ಹೇಳಿ ನಮಸ್ಕರಿಸಿ ಮಂಗಳೂರಿನ ವಿಜಯ ನಿವಾಸಕ್ಕೆ ಬಂದೆವು.ಇದು ಬಹಳ ಅದೃಷ್ಟ ಕೊಡುವ ಮನೆ ಎಂದು ಮನೆಯ ಓನರ್ ನ ತಮ್ಮನ ಮಡದಿ ಶೈಲಜಾ ನನಗೆ ಹೇಳಿದ್ದರು.ನಂತರ ನನಗೆ ಶೈಲಜಾ ತುಂಬಾ ಆತ್ಮೀಯರಾದರು‌

ಇತ್ತ ರಜೆ ಮುಗಿದು ಮತ್ತೆ ಕಾಲೇಜು ಶುರು ಆಯಿತು. ನಾವೆಲ್ಲ ಮೊದಲನೇ ವರ್ಷ ಎಂಎ ಇಂದ ಎರಡನೇ ವರ್ಷಕ್ಕೆ ಕಾಲಿಟ್ಟೆವು.ಇಲ್ಲಿ ಓದುತ್ತಾ ಇದ್ದ ನಾವೆಲ್ಲರೂ ಒಂದೇ ದೋಣಿಯ ಪಯಣಿಗರಾಗಿದ್ದೆವು.ಯಾರೂ ಕೂಡ ಶ್ರೀಮಂತರಾಗಿರಲಿಲ್ಲ‌..ನಾನಂತೂ ಮೊದಲ ವರ್ಷ ಎರಡು ಚೂಡಿದಾರ್ ,ಒಂದು ಸೀರೆಯಲ್ಲಿ ಕಳೆದಿದ್ದೆ.ಹೆಚ್ಚು ಕಡಿಮೆ ಎಲ್ಲರದೂ ನನ್ನದೇ ಪರಿಸ್ಥಿತಿ

ಒಂದು ಜೊತೆ ಚಪ್ಪಲಿ ಇಡೀವರ್ಷ ಬರುವಂತೆ ಜತನ ಮಾಡುತ್ತಿದ್ದೆವು.ಅದು ತುಂಡು ತುಂಡಾಗಿ ಹೊಲಿಗೆ ಹಾಕಿ ಹಾಕಿ ಇನ್ನು ಹೊಲಿಗೆ ಹಾಕಿ ಬಳಸಲು ಅಸಾಧ್ಯ ಎಂದಾದ ಮೇಲೂ ಅದನ್ನು ಎಳೆದು ಕೊಂಡು ಒಂದೆರಡು ವಾರ ನಡೆದೇ ಇನ್ನೊಂದು ಜೊತೆ ತೆಗೆದುಕೊಳ್ಳುತ್ತಿದ್ದೆವು‌.ಎಲ್ಲರೂ ಒಳ್ಳೆಯ ಅಂಕ ತೆಗೆದು ಒಳ್ಳೆಯ ಕೆಲಸ ಹಿಡಿಯಬೇಕೆಂಬ ಉದ್ದೇಶದಿಂದಲೇ ಓದಲು ಬಂದಿದ್ದೆವು.

ಎರಡನೇ ವರ್ಷದ ಪಾಠ ಪ್ರವಚನಗಳು ಆರಂಭವಾಗಿ ಒಂದು ತಿಂಗಳು ಕಳೆಯುವಷ್ಟರಲ್ಲಿ ನಮ್ಮ ಮೊದಲ ವರ್ಷದ ಫಲಿತಾಂಶ ಬಂತು..
ಯಾರಿಗೂ ಹೇಳುವಂತಹ ಒಳ್ಳೆಯ ಅಂಕಗಳು ಬಂದಿರಲಿಲ್ಲ ‌..ಅಳಿದೂರಲ್ಲಿ ಉಳಿದವನೇ ರಾಜ ಎಂಬಂತೆ ನಾನು ಮೊದಲ ಸ್ಥಾನ ಪಡೆದಿದ್ದೆ.ಅವಿನಾಶ್ ಎರಡನೇ ಸ್ಥಾನವನ್ನು ಪಡೆದಿದ್ದರು‌ ನನಗೂ ಅವರಿಗೂ ಆರೇಳು ಅಂಕಗಳ ಅಂತರ ಇತ್ತು‌.
ನನಗೆ 416/600 ಅಂಕಗಳು ಬಂದಿದ್ದವು.ಡಿಸ್ಟಿಂಕ್ಷನ್ ಗೆ ಇನ್ನೂ ನಾಲ್ಕು ಅಂಕಗಳು ಬೇಕಾಗಿದ್ದವು.ನಮಗೆಲ್ಲ ನಿರೀಕ್ಷೆಗಿಂತ ಕಡಿಮೆ  ಇಂಟರ್ನಲ್ ಮಾರ್ಕ್ಸ್ ಬಂದಿತ್ತು
. ನಮ್ಮ ಸೀನಿಯರ್ ಗಳಿಗೆ ನಮಗಿಂತ ಹೆಚ್ಚು ಅಂಕಗಳು ಬಂದಿದ್ದವು ಮತ್ತು ಅವರಿಗೆ ಇಂಟರ್ನಲ್ ಮಾರ್ಕ್ಸ್ ತುಂಬಾ ಜಾಸ್ತಿ ಕೊಟ್ಟಿದ್ದರು.ಅವರು ನಿಜವಾಗಿಯೂ ಅಷ್ಟು ಅಂಕಗಳನ್ನು ತೆಗೆಯುವಷ್ಟು ಜಾಣರಾಗಿದ್ದರೋ ಅಥವಾ ಒಳ್ಳೆಯ ಅಂಕಗಳು ಬರಲಿ ಎಂದು ನಿಯಮ ಮೀರಿ ಅವರಿಗೆ ಹೆಚ್ಚು ಇಂಟರ್ನಲ್ ಮಾರ್ಕ್ಸ್ ಕೊಟ್ಟಿದ್ದರೋ ಏನೋ ನಮಗೆ ಗೊತ್ತಿಲ್ಲ.
ನಾನು ಅಲ್ಲಿ ಸಂಸ್ಕೃತ ಎಂಎ ಗೆ ಸೇರುವಾಗ ಅಲ್ಲಿ ಸಂಸ್ಕೃತ ಕಾಲೇಜು ಶುರುವಾಗಿ ಎರಡು  ವರ್ಷ ಕಳೆದು ಮೂರನೇ ವರ್ಷಕ್ಕೆ ಕಾಲಿಟ್ಟಿತ್ತು ಅಷ್ಟೇ, ನಮ್ಮದು ಮೂರನೆಯ ಬ್ಯಾಚ್.

ನಮಗಿಂತ ಮೊದಲು ಎರಡು ಬ್ಯಾಚ್ ಗಳು ಆಗಿದ್ದವು.ನಾನು ಸೇರುವಾಗ ಎರಡನೇ ಬ್ಯಾಚಿನ ಐದು ಜನ  ಎಂಎ ಎರಡನೇ ವರ್ಷದಲ್ಲಿ ಓದುತ್ತಾ ಇದ್ದರು‌.ಮೊದಲ ಬ್ಯಾಚಿನ ನಾಲ್ಕು ಜನರ ಎಂಎ ಓದು ಆಗಷ್ಟೇ ಮುಗಿದು ಫಲಿತಾಂಶ ಬರುವ ಮೊದಲೇ ಅವರಲ್ಲಿ ಇಬ್ಬರು  ಪದ್ಮನಾಭ ಮರಾಠೆ ಮತ್ತು ನಾಗರಾಜ್  ಅವರು ಅಲ್ಲಿಯೇ ಉಪನ್ಯಾಸಕರಾಗಿ ಸೇರಿಕೊಂಡಿದ್ದು ನಮಗೆ ಉಪನ್ಯಾಸಕರಾಗಿದ್ದರು‌.ಅದು ಅವರುಗಳ ಉಪನ್ಯಾಸ ವೃತ್ತಿಯ ಆರಂಭ ಆಗಿತ್ತು‌.ಆಗಷ್ಟೇ ಎಂಎ ಮುಗಿಸಿ ಉಪನ್ಯಾಸಕರಾದ  ಅವರಿಗೆ  ವೃತ್ತಿ ಅನುಭವ ಇರಲಿಲ್ಲ.
ಇರಲಿ..ಮೊದಲ ಎರಡು ಬ್ಯಾಚಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಇಂಟರ್ನಲ್ ಮಾರ್ಕ್ಸ್ ಕೊಟ್ಟಿದ್ದು ನಮಗೆ ಕೊಟ್ಟಿಲ್ಲ ಅದರಿಂದಾಗಿ ನಮಗೆ ಕಡಿಮೆ ಅಂಕಗಳು ಬಂತು ಎಂದು ನಾಗರಾಜ್ ಅವರು ತರಗತಿಗೆ ಬಂದಾಗ ವಿದ್ಯಾರ್ಥಿಗಳೆಲ್ಲ ಗಲಾಟೆ ಮಾಡಿದರು..ಯಾಕೆಂದರೆ ಇಂಟರ್ನಲ್ ಮಾರ್ಕ್ಸ್ ಅವರು ಕೊಟ್ಟಿರ ಬೇಕು ಎಂದು ವಿದ್ಯಾರ್ಥಿಗಳು ಭಾವಿಸಿದ್ದರು‌‌.ನನಗೆ ನೂರರಲ್ಲಿ ಎಪ್ಪತ್ತೆರಡು ಅಂಕಗಳು ಇಂಟರ್ನಲ್ ಮಾರ್ಕ್ಸ್ ಬಂದಿತ್ತು.ಉಳಿದವರಿಗೆ ನನಗಿಂತ ಒಂದೆರೆಡು ಅಂಕಗಳು ಕಡಿಮೆ ಬಂದಿದ್ದವು‌.ಅದರಲ್ಲಿ ವಿಶೇಷ ಏನೂ ಇಲ್ಲ ಯಾಕೆಂದರೆ ತರಗತಿ ಪರೀಕ್ಷೆ, ಮಧ್ಯಾವಧಿ ಪರೀಕ್ಷೆ ,ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ,ಪ್ರಬಂಧ ಮಂಡನೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ನಾನು ಇತರರಿಗಿಂತ ಮುಂದೆ ಇದ್ದೆ.
ನಮಗೆ ಇಂಟರ್ನಲ್ ಮಾರ್ಕ್ಸ್ ಕಡಿಮೆ ಕೊಟ್ಟ ಕಾರಣ ನಮಗ್ಯಾರಿಗೂ ಒಳ್ಳೆಯ ಅಂಕ ಬರಲಿಲ್ಲ ಎಂದು ವಿದ್ಯಾರ್ಥಿಗಳು ನಾಗರಾಜ್ ಅವರಲ್ಲಿ ಆಕ್ಷೇಪ ಮಾಡಿದಾಗ ಅದೆಲ್ಲ ಲಕ್ಷ್ಮೀ ಯ ಅಧಿಕ ಪ್ರಸಂಗದಿಂದ ಆದದ್ದು ಎಂದು  ಉಪನ್ಯಾಸಕರಾದ ನಾಗರಾಜ್ ಅವರು ಹೇಳಿದರು.ನಾನೇನು ಮಾಡಿದ್ದೇನೆ..ಎಲ್ಲಾ ಪರೀಕ್ಷೆ ಗಳಲ್ಲೂ ಹೈಯೆಸ್ಟ್ ಸ್ಕೋರ್ ಮಾಡಿರುವ ನನಗೆ ಉಳಿದವರಿಗಿಂತ ತುಂಬಾ ಕಡಿಮೆ ಯಾಕೆ ಕೊಟ್ಟಿದ್ದೀರಿ ಎಂದು ಕೇಳಿದ್ದು ತಪ್ಪಾ ಎಂದು ಕೇಳಿದೆ ‌ಆಗ ವಿದ್ಯಾರ್ಥಿ ಗಳಲ್ಲಿ ಒಬ್ಬ( ಬಹುಶಃ ಗಜಾನನ ಮರಾಠೆ)
ಕಳ್ಳ ತಾನು ಕಳ್ಳತನ ಮಾಡಿದ್ದನ್ನು ಒಪ್ಪಿಕೊಳ್ಳುತ್ತಾನಾ ? ಎಂದು ನನ್ನನ್ನು ದೂಷಿಸಿ ಮಾತನಾಡಿದರು.ವಿದ್ಯಾರ್ಥಿಗಳೆಲ್ಲ ನನಗೆ ತಾಗುವಂತೆ ಹಂಗಿಸಿ ಮಾತನಾಡತೊಡಗಿದರು.ಆಗ ನಾನು ನಾಗಾರಾಜ್ ಅವರಲ್ಲಿ ಎರಡು ನಿಮಿಷ ಹೊರಗೆ ಹೋಗಿ ಬರಲು ಅನುಮತಿ ಕೇಳಿ ಹೊರಗೆ ಹೋದೆ.ಪ್ರಿನ್ಸಿಪಾಲ್ ಡಾ.ಕೆ ಜಿ ಎನ್ ಭಟ್ಟರಲ್ಲಿ‌ ಮತ್ತೆ ನಾಗರಾಜ್ ಅವರು " ನಮಗೆ ಇಂಟರ್ನಲ್ ಮಾರ್ಕ್ಸ್ ಕಡಿಮೆ ಕೊಟ್ಟದ್ದಕ್ಕೆ ಲಕ್ಷ್ಮೀ ಯವರ ಅಧಿಕ ಪ್ರಸಂಗ ಕಾರಣ ಎಂದು ನನಗೆ ಅವಮಾನಿಸಿದ್ದಾರೆ.ಇಂಟರ್ನಲ್ ಮಾರ್ಕ್ಸ್ ಕೊಡಲು ಯುನಿವರ್ಸಿಟಿ ಸೂಚಿಸಿದ ಗೈಡ್ ಲೈನ್ ಗಳು‌ಇವೆಯಲ್ಲ ಸರ್ ಅದರ ಪ್ರಕಾರ ತಾನೇ ಕೊಡಬೇಕು.. ನನಗೆ ಬರಬೇಕಾದಷ್ಟೇ ಅಂಕಗಳು ಬಂದಿವೆ .ಉಳಿದವರು ತರಗತಿ ಪರೀಕ್ಷೆ, ಮಧ್ಯಾವಧಿ ಪರೀಕ್ಷೆ ಹಾಗೂ ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ನನಗಿಂತ ಕಡಿಮೆ ಅಂಕಗಳನ್ನು ತೆಗೆದಿದ್ದಾರೆ.ಜೊತೆಗೆ ಸೆಮಿನಾರ್ ಗಳಲ್ಲಿ ನನಗೆ  ವೆರಿ ಗುಡ್ ಸಿಕ್ಕಿದೆ ಉಳಿದ ಯಾರಿಗೂ ಸಿಕ್ಕಿಲ್ಲ ,ಭಾಷಣ ನಾಟಕ ಸೇರಿದಂತೆ ಎಲ್ಲದರಲ್ಲೂ ನಾನು ಮುಂದಿದ್ದೆ  ಹಾಗಾಗಿ ನನಗಿಂತ ಕಡಿಮೆ ಅಂಕಗಳು ಉಳಿದವರಿಗೆ ಬಂದಿರುವುದು ಸಹಜ ತಾನೇ..ಅದಕ್ಕೆ ನಾನು ಕಾರಣ ಎಂದು ಹೇಳಿ  ನಾಗರಾಜ್ ಅವರು ನನಗೆ ಅವಮಾನಿಸಿದ್ದು ನನಗೆ ತುಂಬಾ ನೋವಾಗಿದೆ "ಎಂದು ತಿಳಿಸಿದೆ.ಆಗ ಹಿರಿಯ ಉಪನ್ಯಾಸಕರಾದ ಡಾ.ಕೆ ನಾರಾಯಣ ಭಟ್ ಕೂಡ ಅಲ್ಲಿದ್ದರು.ನನ್ನ ಎದುರೇ ಡಾ.ಜಿ ಎನ್ ಭಟ್  ಅಟೆಂಡರ್ ಮೂಲಕ ನಾಗರಾಜರನ್ನು ಬರಹೇಳಿದರು.ಏನಿದು ನಾಗರಾಜ್ ಎಂದು‌ ಡಾ. ಜಿಎನ್ ಭಟ್ ಅವರು ಕೇಳಿದಾಗ  ಅವರು "sorry sirಏನೋ ಆಗೋಯ್ತು ಬಿಟ್ಟು ಬಿಡಿ ಸರ್ " ಎಂದು ಹೇಳಿದರು. ಓದಲೆಂದು ಬಂದ ಮಕ್ಕಳಿಗೆ ಕಿರುಕುಳ ಕೊಡಬಾರದು‌‌.ಇಂಟರ್ನಲ್ ಮಾರ್ಕ್ಸ್ ಅನ್ನು ಯುನಿವರ್ಸಿಟಿ ನಿಯಮಾವಳಿ ಪ್ರಕಾರ ಎಲ್ಲರಿಗೂ ಕೊಡಿ ಎಂದು ಆವತ್ತೇ ಹೇಳಿದೆನಲ್ಲ..ಹಾಗೆ ನೀಡಿಲ್ಲವೇ ?ಎಂದು ಡಾ.ಜಿ ಎನ್ ಭಟ್ ಕೇಳಿದಾಗ " ಯುನಿವರ್ಸಿಟಿ ನಿಯಮಾವಳಿ ಪ್ರಕಾರವೇ ನೀಡಿದ್ದೇವೆ ಸರ್ " ಎಂದು ನಾಗರಾಜ್ ಉತ್ತರಿಸಿದರು‌‌.ಮತ್ತೆ ಲಕ್ಷ್ಮೀ ಇಂದ ಮಾರ್ಕ್ಸ್ ಕಡಿಮೆ ಬಂತು ಎಂದು ಯಾಕೆ ಹೇಳಿದಿರಿ ? ಎಂದು ಕೇಳಿದಾಗ ನಾಗರಾಜ್ ಮತ್ತೆ ಪುನಃ ಏನೋ ಮಾತಿಗೆ ತಪ್ಪಿ ಬಂತು ಬಿಟ್ಟು ಬಿಡಿ ಸರ್" ಎಂದು ಹೇಳಿದರು."ಸರಿಯಮ್ಮ.. ನೀನು ಕ್ಲಾಸ್ ಗೆ ಹೋಗು ಇನ್ನು ಮುಂದೆ ಇಂತಹದ್ದು ಆಗದಂತೆ ನೋಡಿಕೊಳ್ಳುತ್ತೇನೆ " ಎಂದು ಹೇಳಿ ನನ್ನನ್ನು ಕ್ಲಾಸಿಗೆ ಕಳುಹಿಸಿದರು.

ಆ ದಿನ ಸಂಜೆ ತನಕ ಎಂದಿನಂತೆ ತರಗತಿಗಳು ನಡೆದವು.ನಂತರ ನಾನು ಮನೆಗೆ ಬಂದೆ.
ಮರುದಿನ ನಾನು ತರಗತಿ ಪ್ರವೇಶ ಮಾಡುತ್ತಿದ್ದಂತೆ ಉಳಿದವರೆಲ್ಲ ಎದ್ದು ಹೊರನಡೆದರು..
ಅಂದಿನ ಮೊದಲ ತರಗತಿ ಡಾ‌ಕೆ ನಾರಾಯಣ ಭಟ್ ಅವರು ತೆಗೆದುಕೊಂಡರು‌.ತರಗತಿಯಲ್ಲಿ ನನ್ನ ಹೊರತಾಗಿ ಯಾರೂ ಇಲ್ಲದಿರುವುದನ್ನು ಗಮನಿಸಿ ಎಲ್ಲೋಗಿದ್ದಾರೆ ಇವರೆಲ್ಲ ಎಂದು ಕೇಳಿದರು‌ ಗೊತ್ತಿಲ್ಲ ಎಂದು ಹೇಳಿದೆ. ಅವರು ಎಂದಿನಂತೆ ಪಾಠ ಶುರು ಮಾಡಿದರು‌.ಡಾ ಕೆ ನಾರಾಯಣ ಭಟ್ ಅವರದು ಅಗಾಧ ಪಾಂಡಿತ್ಯ, ಕಂಚಿನ ಕಂಠ..ಅವರ ಪಾಠ ಕೇಳುವುದೊಂದು ಅವಿಸ್ಮರಣೀಯ ವಿಚಾರ‌.

ಸುಮಾರು ಅರ್ಧ ಗಂಟೆ ಕಳೆದಾಗ ಡಾ. ಜಿ ಎನ್ ಭಟ್ ನಾರಾಯಣ ಭಟ್ಟರನ್ನು ಪ್ರಿನ್ಸಿಪಾಲ್ ಚೇಂಬರ್ ಗೆ ಬರಹೇಳಿದರು..ನೀನು ನೋಟ್ಸ್ ಬರೀತಾ ಇರು ಏನೂಂತ ಕೇಳ್ಕೊಂಡು ಬರ್ತೇನೆ ಎಂದು ಹೇಳಿ ಹೋದರು.
ಸ್ವಲ್ಪ ಹೊತ್ತಿನಲ್ಲಿ ನನ್ನನ್ನು ಕೂಡ ಪ್ರಿನ್ಸಿಪಾಲ್ ಚೇಂಬರ್ ಗೆ ಬರಹೇಳಿದರು.ಪ್ರಿನ್ಸಿಪಾಲ್ ಚೇಂಬರ್ ಎದುರುಗಡೆ ನನ್ನ ಸಹಪಾಠಿಗಳು ಗಲಾಟೆ ಮಾಡುತ್ತಾ ಇದ್ದರು.ಆಗ ಇಬ್ಬರನ್ನು ಒಳ ಬರಲು ಹೇಳಿ ಡಾ.ಕಜಿ ಎನ್ ಭಟ್ ಅವರು  "ಏನು ಗಲಾಟೆ?  ನೀವ್ಯಾರೂ ಯಾಕೆ ಕ್ಲಾಸಿಗೆ ಹೋಗಿಲ್ಲ ?  ನಿನ್ನೆ ತರಗತಿಯಲ್ಲಿ ಏನಾಯಿತು? ಎಂದು ಕೇಳಿದರು.
ಆಗ ಅವರು "ನಿನ್ನೆ  ತರಗತಿಯಲ್ಲಿ  ನಾಗಾರಾಜ್ ಅವರು ಪಾಠ ಮಾಡುತ್ತಾ ಇದ್ದರು‌.ತರಗತಿಯಲ್ಲಿ ಏನೂ ಆಗಿರಲಿಲ್ಲ. ಲಕ್ಷ್ಮೀ ಅವರು ಇದ್ದಕ್ಕಿದ್ದಂತೆ ಎದ್ದು ಹೊರಗೆ ಹೋದರು.ಆಗ ಯಾಕೆ ಎಂದು ನಮಗೆ ಗೊತ್ತಾಗಲಿಲ್ಲ.ನಂತರ ನಮಗೆ " ಅವರು ನಮ್ಮ ನಾಗರಾಜ್ ಸರ್ ಮೇಲೆ ವಿನಾಕಾರಣ ದೂರು ಕೊಟ್ಟಿದ್ದಾರೆ ಎಂದು ಗೊತ್ತಾಯಿತು. ಅದಕ್ಕೆ ನಮಗೆ ಬಹಳ ಬೇಸರ ಆಗಿದೆ.ಅವರು ಕ್ಲಾಸಿಗೆ ಬಂದರೆ ನಾವು ಯಾರೂ ಕ್ಲಾಸಿಗೆ ಬರುವುದಿಲ್ಲ. ಅವರನ್ನು ಕಾಲೇಜಿನಿಂದ ತೆಗೆದು ಹಾಕಿ ಎಂದು ಹೇಳಿದರು ಹಾಗೆ ಬರೆದು ಕೊಡಿ ಎಂದು ಡಾ.ಕೆ ನಾರಾಯಣ ಭಟ್ ಅವರು ಹೇಳಿದರು..ಅದನ್ನು ಅವರಿಬ್ಬರು ಬರೆದು ಕೊಟ್ಟು ಸಹಿ ಹಾಕಿದ ರೆಂದು ನೆನಪು .ನಂತರ ಒಬ್ಬೊಬ್ಬರನ್ನಾಗಿ ಒಳ ಬರ ಹೇಳಿ " ನಿನ್ನೆ ತರಗತಿಯಲ್ಲಿ ಏನಾಯಿತು ? ಎಂದು ಕೇಳಿದರು.ಎಲ್ಲರದೂ ಒಂದೇ ಉತ್ತರ ..ತರಗತಿಯಲ್ಲಿ ಏನೂ ಆಗಿರಲಿಲ್ಲ ‌.ನಾಗರಾಜ್ ಸರ್ ಪಾಠ ಮಾಡುತ್ತಾ ಇದ್ದರು.ಲಕ್ಷ್ಮೀ ಇದ್ದಕ್ಕಿದ್ದ ಹಾಗೆ ಎದ್ದು ಹೊರಗೆ ಹೋದರು .ನಂತರ ನಾಗರಾಜ್ ಮೇಲೆ ಸುಮ್ಮನೇ ದೂರು ಕೊಟ್ಟಿದ್ದಾರೆ ಎಂದು ನಮಗೆ ತಿಳಿಯಿತು. ನಮಗೆ ತುಂಬಾ ಬೇಸರ ಆಗಿದೆ..ಅವರನ್ನು ಕಾಲೇಜಿನಿಂದ ಹೊರ ಹಾಕಿ ಎಂದು. ಆ ದಿವಸ ಕಮಲಾಯನಿ ಬಂದಿರಲಿಲ್ಲ ಎಂದು ಮೊನ್ನೆ ಅವರು ಮಾತಿನ ನಡುವೆ ಹೇಳಿದರು. ಅವರು ಬಂದಿದ್ದರೋ ಇಲ್ಲವೋ ಎಂದು ನನಗೂ ಗೊತ್ತಿಲ್ಲ,ಆದರೆ ನನಗೆ ತೀರಾ ಹತ್ತಿರ ಆಗಿದ್ದ ನೀತಾ ಕೂಡಾ ಅದೇ ಹೇಳಿಕೆ ನೀಡಿದ್ದಳು.

ಇದೆಲ್ಲ ಆದ ನಂತರ ಡಾ.ಕೆ ನಾರಾಯಣ ಭಟ್ ಅವರು " ನೀವುಗಳು ಹೇಳಿದ್ದು ಸರಿ  ಎಂದಾದರೆ ಲಕ್ಷ್ಮೀ ಯನ್ನು ಕಾಲೇಜಿನಿಂದ ತೆಗೆದು ಹಾಕುವುದಕ್ಕೆ ಅಡ್ಡಿ ಇಲ್ಲ.ಆದರೆ ನಿನ್ನೆ ನಾಗರಾಜ್ ಅನ್ನು ಪ್ರಿನ್ಸಿಪಾಲ್ ಕರೆಸಿದಾಗ ಅವರು ಏನೋ ಆಗೋಯ್ತು ಸರ್ ಬಿಟ್ಟು ಬಿಡಿ ಎಂದು ಹೇಳಿದ್ದಾರೆ.ನೀವುಗಳು ಹೇಳುವಂತೆ ತರಗತಿಯಲ್ಲಿ ಏನೂ ನಡೆಯದೇ ಇದ್ದರೆ ಅವರು" ಏನೋ ಆಗೋಯ್ತು ಬಿಟ್ಟು ಬಿಡಿ ಎಂದದ್ದು ಏನನ್ನು ? ಏನೋ ಆಗೋಗಿದೆ ಎಂದವರೇ ಒಪ್ಪಿದ್ದಾರಲ್ಲ.ಒಬ್ಬ ಹುಡುಗಿ ಮೊದಲ ವರ್ಷ ತರಗತಿಗೆ ಮೊದಲ ಸ್ಥಾನ ಬಂದಿದ್ದಾಳೆ,ಕಲಿಕೆ ಮತ್ತು ಪಠ್ಯೇತರ ಎರಡೂ ವಿಚಾರಗಳಲ್ಲಿ ಮುಂದಿದ್ದಾಳೆ .ಅವಳಿಗೆ ಮುಂದೆ ರ‍‍್ಯಾಂಕ್ ಬರಬಹುದು ಎಂಬ ಹೊಟ್ಟೆ ಕಿಚ್ಚಿಗೆ ಅವಳ ಭವಿಷ್ಯವನ್ನು ಹಾಳು ಮಾಡಲು ಹೊರಟಿದ್ದೀರ? ಏನವಳನ್ನು ಸಾಯಿಸಬೇಕೆಂದಿದ್ದೀರ?ಇಷ್ಟು ಜನ ಸುಳ್ಳೇ ಸುಳ್ಳು ಹೇಳಿ ಸುಳ್ಳು ಹೇಳಿಕೆಗೆ  ಸಹಿ ಮಾಡಿದ್ದೀರಿ‌.ನೀವು ಇಷ್ಟೂ ಜನರನ್ನು ಕಾಲೇಜಿನಿಂದ ತೆಗೆದು ಹಾಕಲು ಈ ದಾಖಲೆ ಸಾಕು.ಲಕ್ಷ್ಮೀ ಒಬ್ಬಳು ಇದ್ದರೂ ನಮ್ಮ ಕಾಲೇಜು ನಡೆಯುತ್ತದೆ. ನೀವ್ಯಾರೂ ಬೇಕಾಗಿಲ್ಲ ಎಂದು ಜೋರು ಮಾಡಿದರು..ಎಲ್ಲರೂ ಕ್ಷಮೆ ಕೇಳಿ ಹೊರಗೆ ಬಂದರು.
ತಲೆ ತಗ್ಗಿಸಿಕೊಂಡು ಬಂದು ತರಗತಿಯಲ್ಲಿ ಕುಳಿತರು.ಮತ್ತೆ ಎಂದಿನಂತೆ ತರಗತಿಗಳು ನಡೆದವು
ಮತ್ತೆ  ನಾನು ತರಗತಿ ಪರೀಕ್ಷೆ, ಮಧ್ಯಾವಧಿ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನ ಪಡೆದೆ‌ .ಮೊದಲ ವರ್ಷಕ್ಕಿಂತ ತುಂಬಾ ಹೆಚ್ಚಿನ ಪರಿಶ್ರಮ ಪಟ್ಟೆ.ದಿವಸಕ್ಕೆ ಸುಮಾರು ಎಂಟು ಗಂಟೆ ಓದಿದೆ.
ಪೂರ್ವ ಸಿದ್ದತಾ ಪರೀಕ್ಷೆ ಸನ್ನಿಹಿತವಾಯಿತು.ಈಗೊಂದು ಸಮಸ್ಯೆ ಉಂಟಾಯಿತು. ನಾನು ಮದುವೆ ಆದ ನಂತರ ಸಂಸ್ಕೃತ ಎಂಎ ಓದಿದ್ದು.ನಾನು ಚೊಚ್ಚಲ ಗರ್ಭಿಣಿಯಾದೆ.ಬಸ್ ಪ್ರಯಾಣ ಮಾಡಬಾರದೆಂದು ವೈದ್ಯ ರು ಸೂಚಿಸಿದರು.ಜೊತೆಗೆ ತೀರಾ ವಾಂತಿ ಹಿಂಸೆ.
ನಾನು ಎಂಎ ಗೆ ಸೇರುವಾಗ ಡಾ.ಕೆ ನಾರಾಯಣ ಭಟ್ ಅವರು ನಮಗೆ ಸಂಬಂಧಿಕರೆಂದು ತಿಳಿದಿರಲಿಲ್ಲ.. ಈ ಮಕ್ಕಳು ಪ್ರತಿಭಟನೆ ಮಾಡಿದ್ದು ಇತ್ಯಾದಿಗಳು ನಡೆದ ನಂತರ ಯಾವುದೋ ಕಾರಣಕ್ಕೆ ನಾನು ಅವರ ಮನೆಗೆ ಹೋಗಿದ್ದೆ.ಆಗ ಅವರ ಮಡದಿ ಜಯಕ್ಕನವರ ಮೂಲಕ ನಾವು ಸಂಬಂಧಿಕರೆಂದು ಗೊತ್ತಾಗಿತ್ತು.ಅವರು  ಬಹಳ ಸಹೃದಯಿಗಳು,ನನ್ನ ಸೀನಿಯರ್ ಗಳಾಗಿದ್ದ ಎರಡು ಮೂರು ವಿದ್ಯಾರ್ಥಿನಿಯರಿಗೆ ಏನೋ ಸಮಸ್ಯೆ ಬಂದು ಉಳಿದುಕೊಳ್ಳಲು ವ್ಯವಸ್ಥೆ ಇಲ್ಲದಾಗ ಇವರು ಅವರುಗಳಿಗೆ ಮೂರು ನಾಲ್ಕು ತಿಂಗಳ ಕಾಲ ತಮ್ಮ ಮನೆಯಲ್ಲಿ ಆಶ್ರಯ ಕೊಟ್ಟಿದ್ದರು
ಹಾಗಾಗಿ ನನಗೂ ಒಂದು ವಾರ ಅವರ ಮನೆಯಲ್ಲಿ ಆಶ್ರಯ ನೀಡಿಯಾರು ಎಂಬ ನಂಬಿಕೆಯಲ್ಲಿ ಅವರಿಗೆ ವಿಷಯ ತಿಳಿಸಿ ಸಹಾಯ ಕೇಳಿದೆ.ತುಂಬು ಮನಸಿನಿಂದ ಒಂದು ವಾರ ಅವರ ಮನೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟರು.ಪೂರ್ವ ಸಿದ್ಧತಾ ಪರೀಕ್ಷೆ ಆರಂಭವಾಗುವ ಹಿಂದಿನ ದಿನ ಕಾರಿನಲ್ಲಿ ಅವರ ಮನೆಗೆ ತಂದು ಬಿಟ್ಟು ಪ್ರಸಾದ್ ಹಿಂದೆ  ಹೋದರು..ಐದು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಬರೆದು ಮತ್ತೆ ನಾರಾಯಾಣ ಭಟ್ ದಂಪತಿಗಳ ಕಾಲು ಹಿಡಿದು  ನಮಸ್ಕರಿಸಿಸ ಧನ್ಯವಾದ ಹೇಳಿ ಕಾರಿನಲ್ಲಿ ಮನೆಗೆ ಬಂದೆ.

ಮತ್ತೆ ಒಂದು ಒಂದೂವರೆ ತಿಂಗಳು ಕಳೆದು ಎರಡನೇ ವರ್ಷದ ಸಂಸ್ಕೃತ ಎಂಎಯ ಅಂತಿಮ ಪರೀಕ್ಷೆಗಳು ಶುರುವಾದವು..ನಾನು ರ‍್ಯಾಂಕ್ ತೆಗೆಯಲೇ ಬೇಕೆಂದು ಹಠ ಕಟ್ಟಿ ಓದಿದ್ದೆ. ನನ್ನ  ದುರದೃಷ್ಟ ಇಲ್ಲಿಗೆ ನಿಲ್ಲಲಿಲ್ಲ ಮರು ದಿನ ಪರೀಕ್ಷೆ ಎನ್ನುವಾಗ  ಹಿಂದಿನ ದಿನ ಮಧ್ಯಾಹ್ನದ ಹೊತ್ತಿಗೆ ಕಿಬ್ಬೊಟ್ಟೆಯ ಲ್ಲಿ ಜೋರು ಹೊಟ್ಟೆ ನೋವು ಶುರು ಆಯಿತು.ಆಗ ನಾನು ನಾಲ್ಕು ತಿಂಗಳ ಗರ್ಭಿಣಿ.ವಾಂತಿ ಹಿಂಸೆ ನಿಂತು ಸುಧಾರಿಸಿದ್ದೆ.ಅಮ್ಮಾ ಎಂದು ಕರೆಯುವ ಕಂದನ ಕನಸನ್ನು ಕಾಣುತ್ತಿದ್ದೆ.
ಮರುದಿನ ಪರೀಕ್ಷೆ ಇದೆ ಎಂದಾಗ ಕಾಡಿದ ಹೊಟ್ಟೆ ನೋವು ಆತಂಕವನ್ನು ಉಂಟು ಮಾಡಿತ್ತು.ಹೊಟ್ಟೆ ನೋವು ಜೋರಾದಾಗ ನಾನು ಚಿಕಿತ್ಸೆ ಪಡೆಯುವ ಗೈನಕಾಲಜಿಷ್ಟ್ ಡಾ.ಮಾಲತಿ ಭಟ್ ಅವರ ಭಟ್ಸ್ ನರ್ಸಿಂಗ್ ಹೋಮಿಗೆ ಹೋದೆ.ಅವರು ಪರೀಕ್ಷಿಸಿ ರಕ್ತಸ್ರಾವ ಆಗಿಲ್ಲ ಎಂಬುದನ್ನು ದೃಢ ಮಾಡಿ ಏನಾಗಲಾರದು..ಏನಾದರೂ ಗ್ಯಾಸ್ಟ್ರಿಕ್‌ ಇರಬಹುದು ಅದಕ್ಕೆ ಔಷಧ ಕೊಡುತ್ತೇನೆ, ಸಣ್ಣ ಪ್ರಮಾಣದ ನೋವು ನಿವಾರಕ ಕೊಡುತ್ತೇನೆ ಹೆಚ್ಚು ಪವರ್ ನದ್ದು ಕೊಟ್ಟರೆ ಮಗುವಿಗೆ ತೊಂದರೆ ಆಗಬಹುದು, ಪರೀಕ್ಷೆ ಅಂತ ಹೆಚ್ಚು ಓದುವುದು ಬೇಡ,ರೆಸ್ಟ್ ತಗೊಳ್ಳಿ ಎಂದು ಹೇಳಿದರು.

ಹೊಟ್ಟೆ ನೋವು ಸ್ವಲ್ಪ ಕಡಿಮೆ ಆದ ಹಾಗೆ ಅನಿಸಿತು.ವೈದರ ಸೂಚನೆಯಂತೆ ಬಂದು ಮಲಗಿದ್ದೆ.ಆದರೆ ರಾತ್ರಿ ಎಂಟು ಗಂಟೆ ಹೊತ್ತಿಗೆ ತಡೆಯಲಾರದ ಹೊಟ್ಟೆ ನೋವು ಶುರು ಆಯಿತು. ಮತ್ತೆ ವೈದ್ಯರ ಬಳಿಗೆ ಹೋದೆ.ಅಲ್ಲಿಗೆ ತಲುಪುವವಷ್ಟರಲ್ಲಿ ಬಟ್ಟೆ ಎಲ್ಲ ಕೆಂಪಾಗಿತ್ತು.ರಕ್ತ ಸ್ರಾವ ಆಗಿ ಗಾಭರಿ ಆಗಿತ್ತು..ಅವರು ನೋಡುತ್ತಲೇ ಗರ್ಭಪಾತ ಆಗಿದೆ ಆದರೂ ಸ್ಕಾನಿಂಗ್ ಮಾಡಿ ನೊಡುವ ಎಂದು ಸ್ಕಾನಿಂಗ್ ಗೆ ಕಳುಹಿಸಿದರು.ಅಲ್ಲಿ ಗರ್ಭ ಹೋಗಿದೆ ಎಂದು ಸ್ಪಷ್ಟವಾಗಿ ತಿಳಿಯಿತು .ಅಳು ಸಂಕಟ ಉಕ್ಕಿ ಹರಿಯಿತು. ಮತ್ತೆ ಡಾ.ಮಾಲತಿ ಭಟ್  ಅವರ ಬಳಿಗೆ ಬಂದೆ. ಅವರು D&C ಮಾಡಬೇಕು ಇಲ್ಲವಾದಲ್ಲಿ ಗರ್ಭ ಕೋಶಕ್ಕೆ ಇನ್ಫೆಕ್ಷನ್ ಆಗಿ ಮುಂದೆ ಮಕ್ಕಳಾಗುವುದು ಕಷ್ಟ ಆಗ ಬಹುದು ಎಂದರು..ಈಗಲೇ D&C ಮಾಡುತ್ತೇನೆ ಒಂದು ದಿವಸ ಅಡ್ಮಿಟ್ ಆಗಿ ಇರಬೇಕು ಎಂದರು.

ಆಗ ನಾನು "ನಾಳೆ ಪರೀಕ್ಷೆಗೆ ಹೋಗದಿದ್ದರೆ ಒಂದು ವರ್ಷ ವ್ಯರ್ಥವಾಗಿ ಹೋಗುತ್ತದೆ.ನನಗೆ ರ‍‍್ಯಾಂಕ್ ತಪ್ಪಿ ಹೋಗುತ್ತದೆ "ಎಂದು ಅಳುತ್ತಾ ಹೇಳಿದೆ.ಸರಿ,ನಾಳೆ ಪರೀಕ್ಷೆ ಮುಗಿಸಿ ಬಾ.ಹೊಟ್ಟೆ ನೋವಿಗೆ ಹೈ ಪವರ್ ಪೈನ್  ಕಿಲ್ಲರ್ ಕೊಡುತ್ತೇನೆ.ಆದರೆ ತುಂಬಾ ರಕ್ತಸ್ರಾವ ಆಗುತ್ತದೆ.ಆವಾಗ ಸುಸ್ತಾಗಿ ತಲೆ ತಿರುಗಬಹುದು.ಅದಕ್ಕಾಗಿ ಆಗಾಗ ಜ್ಯೂಸ್ ಹಣ್ಣು ತೆಗೆದುಕೊಳ್ಳಬೇಕು.ಇನ್ನು ಗರ್ಭ ಹೋದ ಬಗ್ಗೆ ಚಿಂತೆ ಮಾಡಬೇಡ.ಆರು ತಿಂಗಳು ಕಳೀಲಿ ಅಷ್ಟರ ತನಕ ಜಾಗ್ರತೆ ಮಾಡಿ ಗರ್ಭ ಧರಿಸಬಾರದು.ನಂತರ ಒಂದು ವರ್ಷದಲ್ಲಿ ಮುದ್ದಾದ ಮಗುವನ್ನು ನಿನ್ನ ಹೊಟ್ಟೆಯಿಂದ ತೆಗೆದು ನಿನ್ನ ಕೈಗೆ ಕೊಡುತ್ತೇನೆ ಖಂಡಿತಾ, ಕಣ್ಣೊರೆಸಿಕೋ,ಮನೆಗೆ ಹೋಗಿ ನಾಳೆಯ ಪರೀಕ್ಷೆಗೆ ತಯಾರಿ ಮಾಡಿಕೋ.ಮೊದಲ ರ‌್ಯಾಂಕ್ ನಿನಗೇ ಬರಲಿ ಎಂದು ಹಾರೈಸಿ ನನ್ನ ಬೆನ್ನು ತಟ್ಟಿ ಕಳುಹಿಸಿದರು.
ಮನೆಗೆ ಅಳುತ್ತಾ ಬಂದೆ. ಆದರೆ ಓದಲು ಪುಸ್ತಕ ಹಿಡಿದಾಗ ಜಗತ್ತನ್ನೇ ಮರೆತೆ.

ನನ್ನೊಳಗೂ ಒಂದು ಆತ್ಮವಿದೆ© ಡಾ.ಲಕ್ಷ್ಮೀ ಜಿ ಪ್ರಸಾದ
ನನ್ನ ‌ಮೇಲೆ ಬೇಕಾದರೆ ಮಾನನಷ್ಟ ಮೊಕದ್ದಮೆ ಹೂಡಲಿ,_5
ನಾನು ಆತ್ಮಕಥೆ ಬರೆಯಬೇಕು,ಅದನ್ನು ನಾನು ನಿವೃತ್ತಿ ಹೊಂದುವ ದಿನ ಪ್ರಕಟಿಸಬೇಕು ಎಂದು ಕೂಡ ಆಲೋಚಿಸುತ್ತಾ ಇದ್ದೆ‌.ಆದರೆ ಬರೆಯಲು ಶುರು ಮಾಡಿರಲಿಲ್ಲ ‌ನನ್ನ ಅಮ್ಮ ಈಗಲೇ ಶುರು ಮಾಡು .ನೆನಪಾದದ್ದನ್ನು ಬರೆದಿಡುತ್ತಾ ಹೋಗು..ಅರುವತ್ತು ಆದಾಗ ಬರೆಯಹೊರಟರೆ ನೆನಪಾಗದಿದ್ದರೆ ಏನು ಮಾಡುತ್ತೀಯಾ " ಎಂದು ಆಗಾಗ ಬರೆಯಲು ಶುರು ಮಾಡು ಎಂದು ನೆನಪಿಸುತ್ತಾ ಇದ್ದರು.ಅಮ್ಮನ ಹತ್ತಿರ ಹ್ಹೂ ಅಂತ ಹೋಗುಟ್ಟುದು ಮತ್ತೆ ಅಲ್ಲೇ ಮರೆತು ಬಿಡುದು‌.ಮತ್ತೆ ಅಮ್ಮ ನೆನಪು ಮಾಡುದು ಹೀಗೆ ನಡೆಯುತ್ತಾ ಇತ್ತು.
ಎರಡು ಮೂರು ದಿನಗಳ ಹಿಂದೆ ನಾವು ಸಂಸ್ಕೃತ ಎಂಎ ಓದುವಾಗ ಇದ್ದ ಸಹಪಾಠಗಳನ್ನೆಲ್ಲ ಮನೆಗೆ ಕರೆದು ಒಂದು ದಿನ ಗಮ್ಮತ್ತಿನಿಂದ ಬಹಳ ಖುಷಿಯಿಂದ ಕಳೆಯಬೇಕೆಂದು ಕೊಂಡೆ‌.ಕಳೆದ ತಿಂಗಳು ನಮ್ಮ ಕಮರ್ಷಿಯಲ್ ಕಾಂಪ್ಲೆಕ್ಸ್ ಮತ್ತು ಮನೆ ಒಕ್ಕಲು ಬೇರೆ ಮುಹೂರ್ತ ಹತ್ತಿರದಲ್ಲಿ ಇಲ್ಲದ ಕಾರಣ  ತೀರಾ ಅರ್ಜೆಂಟಿನಲ್ಲಿ  ಫೆಬ್ರವರಿ ಹದಿನಾಲ್ಕಕ್ಕೆ ಇನ್ನೂ ಎಲ್ಲ ಮನೆ ಕೆಲಸ ಬಾಕಿ ಇರುವಂತೆಯೇ ಆಗಿತ್ತು.ಮುಂದೆ ಹಾಕುವ ಹಾಗಿರಲಿಲ್ಲ ಯಾಕೆಂದರೆ ತೀರಾ ಮುಂದೆ ತಗೊಂಡು ಹೋದರೆ ನನಗೆ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಅಂತಿಮ ಪರೀಕ್ಷೆ,ಮೌಲ್ಯ ಮಾಪನ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ,ಮೌಲ್ಯ ಮಾಪನ ಇಲೆಕ್ಷನ್ ಡ್ಯೂಟಿ ಎಲ್ಲ ಮುಗಿಯುವ ಹೊತ್ತಿಗೆ ಎಪ್ರಿಲ್ ಕಳೆದು ಬಿಡುತ್ತದೆ.ನಂತರ ಬೋರ್ ವೆಲ್ ನಲ್ಲಿ ನೀರು ಕಡಿಮೆ ಆಗಿ ಸಮಸ್ಯೆ ಆದರೆ ಎಂದು ಆತಂಕ. ಹಾಗಾಗಿ  ತೀರ ಅರ್ಜೆಂಟಿನಲ್ಲಿ ಮಾಡಿದ ಕಾರಣ ನನ್ನ ಹಳೆಯ ಸಹಪಾಠಿಗಳ ಪೋನ್ ನಂಬರ್ ಸಂಗ್ರಹಿಸಿ ಅವರನ್ನು ಸಂಪರ್ಕಿಸಿ ಮನೆ ಒಕ್ಕಲಿಗೆ ಆಹ್ವಾನಿಸಲಾಗಲಿಲ್ಲ.
ಈಗ. ಉಳಿದ. ಕೆಲಸಗಳು ಮುಗಿದಿವೆ.ಈ ಬಾರಿ ಇಲೆಕ್ಷನ್ ಡ್ಯೂಟಿ ತರಬೇತಿಗೆ ಬರಹೇಳಿದ್ದರೂ ಅಂತಿಮವಾಗಿ ಡ್ಯೂಟಿ ಹಾಕಿರಲಿಲ್ಲ .( ಸ್ವಲ್ಪ ಆರೋಗ್ಯ ಏರು ಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕಾರಣ ತರಬೇತಿಗೆ ನನಗೆ ಹಾಜರಾಗಲಿಲ್ಲ)
ಹಾಗಾಗಿ ಈಗ ಫ್ರೀ ಸಿಕ್ಕಿತ್ತು .ಹಾಗೆ ಹಳೆಯ ಸ್ನೇಹಿತರನ್ನು ಸಂಪರ್ಕಿಸಿ ನಮ್ಮ ಮನೆಗೆ ಬರಹೇಳಿ ಒಂದು ದಿನ ಅವರೊಂದಿಗೆ ಸಂತಸದಿಂದ ಕಳೆಯಬೇಕೆಂದು ಕೊಂಡಿದ್ದೆ .ಅದಕ್ಕಾಗಿ ಒಬ್ಬೊಬ್ಬರ ಫೋನ್ ನಂಬರ್ ಸಂಗ್ರಹಿಸುತ್ತಾ ಹೋದೆ.ಎಂಎ ಓದುವಾಗ ನನಗೆ ಪ್ರಿಯಳಾಗಿದ್ದ ವಿನುತಾರ ಫೋನ್ ನಂಬರ್ ಅನ್ನು ಮುರಳೀಧರ ಉಪಾಧ್ಯಾಯರ ಮೂಲಕ‌ ಪಡದೆ .
ವಿನುತಾ ಹತ್ತಿರ ಮಾತನಾಡಿ ಅವರಿಂದ ಸಂಸ್ಕೃತ ಓದುತ್ತಿದ್ದಾಗ ನನಗೆ ತುಂಬಾ ಸ್ನೇಹಿತೆಯಾಗಿದ್ದ ಕಮಲಾಯನಿ ಫೋನ್ ನಂಬರ್ ಸಿಕ್ಕಿತು. ಅವರಿಗೆ ಫೋನ್ ಮಾಡಿ ಸುಮಾರು ಹೊತ್ತು ಮಾತನಾಡಿದೆ.ಕೊನೆಯಲ್ಲಿ ಅವರು " ನನಗೆ ಒಂದು ವಿಷಯ ಮಾತ್ರ ಮರೆಯಲು ಆಗುತ್ತಾ ಇಲ್ಲ..ನಿನ್ನಿಂದಾಗಿ ನನಗೆ ಎಂಎ ಯಲ್ಲಿ ಕಡಿಮೆ ಅಂಕಗಳು ಬಂದವು " ಎಂದು ಬಹಳ ನೋವಿನಿಂದ ಹೇಳಿದರು..ನನಗೆ ಆಶ್ಛರ್ಯ ಆಯಿತು..ನನ್ನಿಂದಾಗಿ ಅವರಿಗೆ ಕಡಿಮೆ ಅಂಕ ಬರಲು ಹೇಗೆ ಸಾಧ್ಯ ? ನಾನು ಮಾಡಿದ ನೋಟ್ಸ್ ಗಳನ್ನು ನಾನು ಯಾರು ಕೇಳಿದರೂ ಕೊಡುತ್ತಿದ್ದೆ.ಕಮಲಾಯನಿ ಸೇರಿದಂತೆ ಎಲ್ಲರೂ ನೋಟ್ಸ್ ಅನ್ನು ಹಂಚಿಕೊಳ್ಳುತ್ತಿದ್ದರು
ಮೊದಲ ವರ್ಷ ನಾನು ಕೂಡ ಬೇರೆಯವರು ಮಾಡಿದ ನೋಟ್ಸ್ ಗಳ ಸಹಾಯ ಪಡೆದಿದ್ದೆ.ಎರಡನೇ ವರ್ಷದ ಆರಂಭದಲ್ಲೇ  ಮೊದಲ ವರ್ಷದ ಫಲಿತಾಂಶ ಬಂದ ದಿನ ನಮ್ಮಲ್ಲಿ ಸಣ್ಣ ವಿವಾದ ಉಂಟಾಗಿತ್ತು.
ಮೊದಲ ವರ್ಷದ  ಪಾಠ ಪ್ರವಚನಗಳು ಮುಗಿದು ನಮಗೆ ರಿವಿಜನಲ್ ಹಾಲಿಡೇಸ್ ಕೊಟ್ಟಿದ್ದರು‌.ನಾನು ವೇದಾಂತವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದು ಆ ಬಗ್ಗೆ ಕೆಲವು ಸಂಶಯ ಉಂಟಾಗಿ ನಮಗೆ ವೇದಾಂತ ಪಾಠ ಮಾಡಿದ ಡಾ.ಕೆ ನಾರಾಯಣ ಭಟ್ ಅವರನ್ನು ಕಾಣಲು ಕಾಲೇಜಿಗೆ ಹೋದೆ.ಅವರು ಸ್ಟಾಫ್ ರೂಮಿನಲ್ಲಿ ಇದ್ದರು‌.ಇನ್ನೋರ್ವ ಉಪನ್ಯಾಸಕರಾದ ನಾಗರಾಜ ಭಟ್ ಕೂಡ ಅಲ್ಲಿಯೇ ಇದ್ದರು‌.ನಾನು  ಡಾ.ಕೆ ನಾರಾಯಣ ಭಟ್ಟರಲ್ಲಿ ಒಳಗೆ ಬರಬಹುದೇ ಎಂದು ಅನುಮತಿ ಕೇಳಿ,ಅವರು ಒಳಗೆ ಬರುವಂತೆ ಸೂಚಿಸಿದ ಮೇಲೆ ಒಳಗೆ ಹೋಗಿದ್ದೆ‌.ನನಗೆ ಉಂಟಾದ ಸಂಶಯ,ಅರ್ಥವಾಗದ ಭಾಗಗಳನ್ನು ಕೇಳಿದೆ‌.ಅವರು ಬಹಳ ತಾಳ್ಮೆಯಿಂದ ನನಗೆ ಅದನ್ನು ಹೇಳಿ ಕೊಡುತ್ತಾ ಇದ್ದರು.ಇದರ ನಡುವೆ ಅಲ್ಲಿಯೇ ಕುಳಿತಿದ್ದ ನಾಗರಾಜ ಎಂಬ ಉಪನ್ಯಾಸಕರು ಅವಿನಾಶ್ ಗೆ ತೊಂಬತ್ತು, ಗಜಾನನ ಮರಾಠೆಗೆ ಎಂಬತ್ತೈದು ,ರಮೇಶ್ ಗೆ ಎಂಬತ್ತು..ಇತ್ಯಾದಿಯಾಗಿ ಕೆಲವು ವಿದ್ಯಾರ್ಥಿಗಳಿಗೆ ಇಷ್ಟು ಅಂತರ್ ಮೌಲ್ಯ ಮಾಪನ ಅಂಕಗಳನ್ನು ನೀಡಿದ ಬಗ್ಗೆ ಡಾ.ಕೆ ನಾರಾಯಣ ಭಟ್ಟರಲ್ಲಿ ಹೇಳಿದರು.ಹುಡುಗಿಯರಿಗೆ ಕೊಟ್ಟ ಅಂಕಗಳ ಬಗ್ಗೆ ಇನ್ನೂ ಹೇಳಿರಲಿಲ್ಲ‌.ನನ್ನನ್ನು ನೋಡುತ್ತಾ ಲಕ್ಷ್ಮೀ ಗೆ ಎಪ್ಪತ್ತೆರಡು ಎಂದು ಹೇಳಿದರು. ಆಗ ನನಗೆ ತುಂಬಾ ಶಾಕ್ ಆಯ್ತು‌. ಕಿರು ಪರೀಕ್ಷೆ,ಮಧ್ಯವಾರ್ಷಿಕ ಪರೀಕ್ಷೆ, ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ಹೆಚ್ಚು ಕಡಿಮೆ ಎಲ್ಲಾ ವಿಷಯಗಳಲ್ಲೂ ನಾನು ಟಾಪರ್ ಆಗಿದ್ದೆ.ಸೆಮಿನಾರ್ ಗಳಲ್ಲಿ ಕೂಡ ನನ್ನ ಪ್ರಬಂಧ ಮಂಡನೆ ಬಗ್ಗೆ ಉಪನ್ಯಾಸಕರು ಗುಡ್ ಎಂದು ಹೇಳಿ ಮೆಚ್ಚುಗೆ ಸೂಸಿದ್ದರು.ಹಾಗಿದ್ದರೂ ನನಗೇಕೆ ಉಳಿದವರಿಗಿಂತ ಕಡಿಮೆ ಅಂಕಗಳು. ನನ್ನ ಆತಂಕವನ್ನು ಗಮನಿಸಿದ ಡಾ.ಕೆ ನಾರಾಯಣ ಭಟ್ ಅವರು
ಲಕ್ಷ್ಮೀ ಗೆ ಯಾಕೆ ಅಷ್ಟು ಕಡಿಮೆ ಅಂಕಗಳು ಬಂದಿವೆ ,ಅವಳು ಪರೀಕ್ಷೆಗಳಲ್ಲಿ ,ಸೆಮಿನಾರ್ ಹಾಗೂ ಇತರ ನಾಟಕ ಭಾಷಣ ಮೊದಲಾದುದರಲ್ಲಿ ಕೂಡ ಮುಂದೆ ಇದ್ದಾಳಲ್ಲ ? ಎಂದು ಕೇಳಿದರು.ಅವಳು ಹೇಗೂ ಥಿಯರಿಯಲ್ಲಿ ಸ್ಕೋರ್ ಮಾಡುತ್ತಾಳೆ..ಇಂಟರ್ನಲ್ ಮಾರ್ಕ್ಸ್ ಕೊಡುವುದು  ಬಿಡುವುದು ನಮ್ಮ ಇಷ್ಟ ಅಲ್ವಾ ಎಂದವರು ಹೇಳಿದರು. ಆಗ ನಾನು ಅದೇಗೆ  ನಿಮ್ಮ ಇಷ್ಟ  ಆಗುತ್ತೆ ,ಮಿಡ್ ಟರ್ಮ್ ಮತ್ತು ಪ್ರಿಪರೇಟರಿ ಪರೀಕ್ಷೆಗಳಲ್ಲಿ  ನಾವು ತೆಗೆದ ಅಂಕಗಳು ,ಸೆಮಿನಾರ್ ಹಾಗೂ ಇತರ ಪಠ್ಯೇತರ ಚಟುವಟಿಗಳನ್ನು ಆಧರಿಸಿ ಕೊಡಬೇಕಲ್ಲ ? ಎಂದು ಕೇಳಿದೆ.ಬಹುಶಃ ಆತಂಕದಿಂದ ನನ್ನ ಧ್ವನಿ ಏರಿರಬಹುದೋ ಏನೋ ಗೊತ್ತಿಲ್ಲ ‌.ಸಣ್ಣ ವಯಸ್ಸಿನಲ್ಲಿ ನನಗೆ ಸ್ವಲ್ಪ ಶೀಘ್ರ ಕೋಪದ ಸ್ವಭಾವ ಇತ್ತು ಕೂಡ. ಆದರೆ ಶಾಲಾ ಕಾಲೇಜುಗಳಲ್ಲಿ ನಾನು ಅತ್ಯುತ್ಸಾಹದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ಇದ್ದ ವಿಧೇಯ ವಿದ್ಯಾರ್ಥಿನಿ ಆಗಿದ್ದೆ.ನಾನೆಂದೂ ಉಡಾಫೆ ವರ್ತನೆ ತೋರಿರಲಿಲ್ಲ ,ಆಗ ಕೂಡ ನಾನು ಅಷ್ಟೇ ಕೇಳಿದ್ದು.ಅಷ್ಟಕ್ಕೇ ಅವರು ನನಗೆ ಗೆಟೌಟ್ ಫ್ರಂ್ ಹಿಯರ್  ,ಇಂಟರ್ನಲ್ ಮಾರ್ಕ್ಸ್ ಬಗ್ಗೆ ಚರ್ಚಿಸುತ್ತಿರುವಾಗ ನೀನು ಬಂದದ್ದೇಕೆ ? ಎಂದು ಬಹಳ ಕೆಟ್ಟದಾಗಿ ಬೈದರು‌.ಆಗ ನಾನು ಡಾ.ಕೆ ನಾರಾಯಣ ಭಟ್ ಅವರ ಅನುಮತಿ ಕೇಳಿ ಒಳಗೆ ಬಂದಿದ್ದೆ..ಗೆಟೌಟ್ ಹೇಳಲು ನಿಮಗೇನು ಹಕ್ಕಿದೆ ಎಂದು ಹೇಳಿ ನೇರವಾಗಿ ಪ್ರಿನ್ಸಿಪಾಲ್ ಡಾ.ಜಿ ಎನ್ ಭಟ್ ಅವರಲ್ಲಿ ನಾಗರಾಜ ಅವರು ನನಗೆ ಅವಮಾನಿಸಿ ಮಾತನಾಡಿದ್ದನ್ನು ಮತ್ತು ಕಡಿಮೆ ಇಂಟರ್ನಲ್ ಮಾರ್ಕ್ಸ್ ಕೊಟ್ಟದ್ದನ್ನು ತಿಳಿಸಿದೆ.ಆಯಿತು ಈ ಬಗ್ಗೆ ನಾನು ವಿಚಾರಿಸುತ್ತೇನೆ.ಯುನಿವರ್ಸಿಟಿ ನಿಯಮದ ಪ್ರಕಾರ ಎಲ್ಲರಿಗೂ ಇಂಟರ್ನಲ್ ಮಾರ್ಕ್ಸ್ ಬರುತ್ತವೆ‌.ಇಷ್ಟು ಸಣ್ಣ ವಿಷಯಕ್ಕೆಲ್ಲ ಅಪ್ಸೆಟ್ ಆಗಬಾರದು ..ಹೋಗಿ ಓದಿಕೋ ಎಂದು ಹೇಳಿ ನನ್ನನ್ನು ಸಮಾಧಾನ ಮಾಡಿ ಕಳುಹಿಸಿದರು.ಅವರ ಮೇಲೆ ನನಗೆ ತುಂಬಾ ಗೌರವ ನಂಬಿಕೆ ಇತ್ತು.ಹಾಗಾಗಿ ಮನೆಗೆ ಹೋಗಿ ನೆಮ್ಮದಿಯಿಂದ ಓದಲು ಶುರು ಮಾಡಿದೆ.ಚೆನ್ನಾಗಿ ಓದಿದೆ ಕೂಡ. ದುರದೃಷ್ಟ ಏನೆಂದರೆ ಪ್ರಥಮ ಪಿಯುಸಿ ಅಂತಿಮ ಪರೀಕ್ಷೆಯ ಹಿಂದಿನ ಎರಡು ದಿನಗಳಿಂದ  ಮಲೇರಿಯಾ ಆಗಿ ತೀವ್ರ ಜ್ವರ.ಆಗ ಕಟೀಲಿನಲ್ಲಿ ಇದ್ದ ಡಾಕ್ಟರ್ ಶಶಿಕುಮಾರ್( ಹೆಸರು ಸರಿಯಾಗಿ ನೆನಪಿಲ್ಲ) ಬಳಿಗೆ ಹೋದೆ .ಅವರು ಸೂಕ್ತ ಚಿಕಿತ್ಸೆ ನೀಡಿದರಾದರೂ ತಕ್ಷಣವೇ ಗುಣವಾಗುವ ಖಾಯಿಲೆ ಇದಲ್ಲ..ಮಂಗಳೂರಿನ ಆಸ್ಪತ್ರೆಗೆ ದಾಖಲಾಗುವುದು ಒಳ್ಳೆಯದು ಎಂದು ಹೇಳಿದರು.ಆಸ್ಪತ್ರೆಗೆ ದಾಖಲಾಗುವಷ್ಟು ದುಡ್ಡು ನಮ್ಮ ಹತ್ತಿರ ಇರಲಿಲ್ಲ ಜೊತೆಗೆ ಅಂತಿಮ ಪರೀಕ್ಷೆ ತಪ್ಪಿಸಿಕೊಂಡರೆ  ನನಗೆ ರ‍್ಯಾಂಕ್ ಬರುವ ಸಾಧ್ಯತೆ ಇರಲಿಲ್ಲ. ನಾನು ಮೊದಲ ರ‍್ಯಾಂಕ್ ತೆಗೆಯಬೇಕೆಂದು ತುಂಬಾ ಕಷ್ಟ ಪಟ್ಟು ಓದಿದ್ದೆ.
ಹಾಗಾಗಿ ಔಷಧ ತೆಗೆದುಕೊಂಡು ಪರೀಕ್ಷೆಗೆ ಹಾಜರಾದೆ.ಅದೃಷ್ಟವಶಾತ್ ಪರೀಕ್ಷೆ ಹಾಲಿನಲ್ಲಿ ‌ಮಲೇರಿಯಾದ ತೀವ್ರ ನಡುಕ ಕಾಣಿಸಿಕೊಳ್ಳಲಿಲ್ಲ.
ಪರೀಕ್ಷೆ ಮುಗಿಸಿ ಮನೆಗೆ ಹೋಗುವ ದಾರಿಯಲ್ಲಿ ತೀವ್ರ ನಡುಕ ಬಂದಿತ್ತು.ಸಾಮಾನ್ಯವಾಗಿ ‌ಮಲೇರಿಯ ಬಂದಾಗ ನಿಯಮಿತ ಸಮಯದಲ್ಲಿ ತೀವ್ರವಾದ ನಡುಕ ಉಂಟಾಗುತ್ತದೆ‌.ಮಲೇರಿಯಾ ನಿಯಂತ್ರಣಕ್ಕೆ ಬರುವ ತನಕ ಅದು ಮುಂದುವರಿಯುತ್ತದೆ.  ಮಲೇರಿಯಾಕ್ಕೆ ಕೊಡುವ ಔಷಧ ಲಿವರಿಗೆ ತೊಂದರೆ ಮಾಡುತ್ತದೆ‌ ಇದರಿಂದಾಗಿ ತುಂಬಾ ವಾಂತಿ ,ನಿಶಕ್ತಿ ಕಾಡುತ್ತದೆ ಜೊತೆಗೆ ನಡುಕದ ಪರಿಣಾಮವಾಗಿ   ತುಂಬಾ ಮೈ ಕೈ ನೋವು  .ಅಂತೂ ಮಲೇರಿಯಾ ಜೊತೆ ಸೆಣಸುತ್ತಲೇ ಪರೀಕ್ಷೆ ಎದುರಿಸಿದೆ‌.
ಮತ್ತೆ ಸ್ವಲ್ಪ ಸಮಯ ರಜೆ ಇತ್ತು..ಪ್ರಸಾದರಿಗೆ ಮಣಿಪಾಲ್ ಫೈನಾನ್ಸ್ ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಸಿಕ್ಕಿತು.. ನಮ್ಮ ಆರ್ಥಿಕ ಪರಿಸ್ಥಿತಿ ಸ್ವಲ್ಪ ಸುಧಾರಿಸಿತು‌‌. ನನ್ನ ಸೋದರಮಾವನ ವರಸೆಯ ರಾಮಣ್ಣು ಮಾವ ಅವರ ಪರಿಚಯದ ವಿಜಯಾ ಪೆನ್ ಮಾರ್ಟಿನ ಶ್ಯಾಮಣ್ಣ ಅವರಲ್ಲಿ ಮಾತಾಡಿ ಮಂಗಳೂರಿನಲ್ಲಿ ಸ್ವಲ್ಪ ಬಾಡಿಗೆ ಕಡಿಮೆ ಮಾಡಿಸಿ ಅವರ ಭಾವ ಮೈದನನ ಸುಸಜ್ಜಿತ ‌ಮನೆಯನ್ನು ನಮಗೆ ಬಾಡಿಗೆಗೆ ಕೊಡಿಸಿದರು ‌ ನಾವು ಎಕ್ಕಾರಿನ ಮೋಟು ಗೋಡೆಯ ಮಣ್ಣಿನ ಮನೆಯನ್ನು ಖಾಲಿ ಮಾಡಿ  ಕಷ್ಟಕಾಲದಲ್ಲಿ ನಮಗೆ ಆಶ್ರಯ ಕೊಟ್ಟ ಎಕ್ಕಾರಿನ ನಾಗವೇಣಿ ಅಮ್ಮ ಹಾಗೂ ಎಕ್ಕಾರಿನ ಕೊಂಕಣಿ ಅಜ್ಜನಿಗೆ ಧನ್ಯವಾದ ಹೇಳಿ ನಮಸ್ಕರಿಸಿ ಮಂಗಳೂರಿನ ವಿಜಯ ನಿವಾಸಕ್ಕೆ ಬಂದೆವು.ಇದು ಬಹಳ ಅದೃಷ್ಟ ಕೊಡುವ ಮನೆ ಎಂದು ಮನೆಯ ಓನರ್ ನ ತಮ್ಮನ ಮಡದಿ ಶೈಲಜಾ ನನಗೆ ಹೇಳಿದ್ದರು.ನಂತರ ನನಗೆ ಶೈಲಜಾ ತುಂಬಾ ಆತ್ಮೀಯರಾದರು‌
ಇತ್ತ ರಜೆ ಮುಗಿದು ಮತ್ತೆ ಕಾಲೇಜು ಶುರು ಆಯಿತು. ನಾವೆಲ್ಲ ಮೊದಲನೇ ವರ್ಷ ಎಂಎ ಇಂದ ಎರಡನೇ ವರ್ಷಕ್ಕೆ ಕಾಲಿಟ್ಟೆವು.ಇಲ್ಲಿ ಓದುತ್ತಾ ಇದ್ದ ನಾವೆಲ್ಲರೂ ಒಂದೇ ದೋಣಿಯ ಪಯಣಿಗರಾಗಿದ್ದೆವು.ಯಾರೂ ಕೂಡ ಶ್ರೀಮಂತರಾಗಿರಲಿಲ್ಲ‌..ನಾನಂತೂ ಮೊದಲ ವರ್ಷ ಎರಡು ಚೂಡಿದಾರ್ ,ಒಂದು ಸೀರೆಯಲ್ಲಿ ಕಳೆದಿದ್ದೆ.ಹೆಚ್ಚು ಕಡಿಮೆ ಎಲ್ಲರದೂ ನನ್ನದೇ ಪರಿಸ್ಥಿತಿ
ಒಂದು ಜೊತೆ ಚಪ್ಪಲಿ ಇಡೀವರ್ಷ ಬರುವಂತೆ ಜತನ ಮಾಡುತ್ತಿದ್ದೆವು.ಅದು ತುಂಡು ತುಂಡಾಗಿ ಹೊಲಿಗೆ ಹಾಕಿ ಹಾಕಿ ಇನ್ನು ಹೊಲಿಗೆ ಹಾಕಿ ಬಳಸಲು ಅಸಾಧ್ಯ ಎಂದಾದ ಮೇಲೂ ಅದನ್ನು ಎಳೆದು ಕೊಂಡು ಒಂದೆರಡು ವಾರ ನಡೆದೇ ಇನ್ನೊಂದು ಜೊತೆ ತೆಗೆದುಕೊಳ್ಳುತ್ತಿದ್ದೆವು‌.ಎಲ್ಲರೂ ಒಳ್ಳೆಯ ಅಂಕ ತೆಗೆದು ಒಳ್ಳೆಯ ಕೆಲಸ ಹಿಡಿಯಬೇಕೆಂಬ ಉದ್ದೇಶದಿಂದಲೇ ಓದಲು ಬಂದಿದ್ದೆವು.
ಎರಡನೇ ವರ್ಷದ ಪಾಠ ಪ್ರವಚನಗಳು ಆರಂಭವಾಗಿ ಒಂದು ತಿಂಗಳು ಕಳೆಯುವಷ್ಟರಲ್ಲಿ ನಮ್ಮ ಮೊದಲ ವರ್ಷದ ಫಲಿತಾಂಶ ಬಂತು..
ಯಾರಿಗೂ ಹೇಳುವಂತಹ ಒಳ್ಳೆಯ ಅಂಕಗಳು ಬಂದಿರಲಿಲ್ಲ ‌..ಅಳಿದೂರಲ್ಲಿ ಉಳಿದವನೇ ರಾಜ ಎಂಬಂತೆ ನಾನು ಮೊದಲ ಸ್ಥಾನ ಪಡೆದಿದ್ದೆ.ಅವಿನಾಶ್ ಎರಡನೇ ಸ್ಥಾನವನ್ನು ಪಡೆದಿದ್ದರು‌ ನನಗೂ ಅವರಿಗೂ ಆರೇಳು ಅಂಕಗಳ ಅಂತರ ಇತ್ತು‌.
ನನಗೆ 416/600 ಅಂಕಗಳು ಬಂದಿದ್ದವು.ಡಿಸ್ಟಿಂಕ್ಷನ್ ಗೆ ಇನ್ನೂ ನಾಲ್ಕು ಅಂಕಗಳು ಬೇಕಾಗಿದ್ದವು.ನಮಗೆಲ್ಲ ನಿರೀಕ್ಷೆಗಿಂತ ಕಡಿಮೆ  ಇಂಟರ್ನಲ್ ಮಾರ್ಕ್ಸ್ ಬಂದಿತ್ತು
. ನಮ್ಮ ಸೀನಿಯರ್ ಗಳಿಗೆ ನಮಗಿಂತ ಹೆಚ್ಚು ಅಂಕಗಳು ಬಂದಿದ್ದವು ಮತ್ತು ಅವರಿಗೆ ಇಂಟರ್ನಲ್ ಮಾರ್ಕ್ಸ್ ತುಂಬಾ ಜಾಸ್ತಿ ಕೊಟ್ಟಿದ್ದರು.ಅವರು ನಿಜವಾಗಿಯೂ ಅಷ್ಟು ಅಂಕಗಳನ್ನು ತೆಗೆಯುವಷ್ಟು ಜಾಣರಾಗಿದ್ದರೋ ಅಥವಾ ಒಳ್ಳೆಯ ಅಂಕಗಳು ಬರಲಿ ಎಂದು ನಿಯಮ ಮೀರಿ ಅವರಿಗೆ ಹೆಚ್ಚು ಇಂಟರ್ನಲ್ ಮಾರ್ಕ್ಸ್ ಕೊಟ್ಟಿದ್ದರೋ ಏನೋ ನಮಗೆ ಗೊತ್ತಿಲ್ಲ.
ನಾನು ಅಲ್ಲಿ ಸಂಸ್ಕೃತ ಎಂಎ ಗೆ ಸೇರುವಾಗ ಅಲ್ಲಿ ಸಂಸ್ಕೃತ ಕಾಲೇಜು ಶುರುವಾಗಿ ಎರಡು  ವರ್ಷ ಕಳೆದು ಮೂರನೇ ವರ್ಷಕ್ಕೆ ಕಾಲಿಟ್ಟಿತ್ತು ಅಷ್ಟೇ, ನಮ್ಮದು ಮೂರನೆಯ ಬ್ಯಾಚ್.ನಮಗಿಂತ ಮೊದಲು ಎರಡು ಬ್ಯಾಚ್ ಗಳು ಆಗಿದ್ದವು.ನಾನು ಸೇರುವಾಗ ಎರಡನೇ ಬ್ಯಾಚಿನ ಐದು ಜನ  ಎಂಎ ಎರಡನೇ ವರ್ಷದಲ್ಲಿ ಓದುತ್ತಾ ಇದ್ದರು‌.ಮೊದಲ ಬ್ಯಾಚಿನ ನಾಲ್ಕು ಜನರ ಎಂಎ ಓದು ಆಗಷ್ಟೇ ಮುಗಿದು ಫಲಿತಾಂಶ ಬರುವ ಮೊದಲೇ ಅವರಲ್ಲಿ ಇಬ್ಬರು  ಪದ್ಮನಾಭ ಮರಾಠೆ ಮತ್ತು ನಾಗರಾಜ್  ಅವರು ಅಲ್ಲಿಯೇ ಉಪನ್ಯಾಸಕರಾಗಿ ಸೇರಿಕೊಂಡಿದ್ದು ನಮಗೆ ಉಪನ್ಯಾಸಕರಾಗಿದ್ದರು‌.ಅದು ಅವರುಗಳ ಉಪನ್ಯಾಸ ವೃತ್ತಿಯ ಆರಂಭ ಆಗಿತ್ತು‌.ಆಗಷ್ಟೇ ಎಂಎ ಮುಗಿಸಿ ಉಪನ್ಯಾಸಕರಾದ  ಅವರಿಗೆ  ವೃತ್ತಿ ಅನುಭವ ಇರಲಿಲ್ಲ.
ಇರಲಿ.."ಮೊದಲ ಎರಡು ಬ್ಯಾಚಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಇಂಟರ್ನಲ್ ಮಾರ್ಕ್ಸ್ ಕೊಟ್ಟಿದ್ದು ನಮಗೆ ಕೊಟ್ಟಿಲ್ಲ ಅದರಿಂದಾಗಿ ನಮಗೆ ಕಡಿಮೆ ಅಂಕಗಳು ಬಂತು "ಎಂದು  ಉಪನ್ಯಾಸಕ ನಾಗರಾಜ್ ಅವರು ತರಗತಿಗೆ ಬಂದಾಗ ವಿದ್ಯಾರ್ಥಿಗಳೆಲ್ಲ ಗಲಾಟೆ ಮಾಡಿದರು..ಯಾಕೆಂದರೆ ಇಂಟರ್ನಲ್ ಮಾರ್ಕ್ಸ್ ಅವರು ಕೊಟ್ಟಿರ ಬೇಕು ಎಂದು ವಿದ್ಯಾರ್ಥಿಗಳು ಭಾವಿಸಿದ್ದರು‌‌.ನನಗೆ ನೂರರಲ್ಲಿ ಎಪ್ಪತ್ತೆರಡು ಅಂಕಗಳು ಇಂಟರ್ನಲ್ ಮಾರ್ಕ್ಸ್ ಬಂದಿತ್ತು.ಉಳಿದವರಿಗೆ ನನಗಿಂತ ಒಂದೆರೆಡು ಅಂಕಗಳು ಕಡಿಮೆ ಬಂದಿದ್ದವು‌.ಅದರಲ್ಲಿ ವಿಶೇಷ ಏನೂ ಇಲ್ಲ ಯಾಕೆಂದರೆ ತರಗತಿ ಪರೀಕ್ಷೆ, ಮಧ್ಯಾವಧಿ ಪರೀಕ್ಷೆ ,ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ,ಪ್ರಬಂಧ ಮಂಡನೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ನಾನು ಇತರರಿಗಿಂತ ಮುಂದೆ ಇದ್ದೆ.
ನಮಗೆ ಇಂಟರ್ನಲ್ ಮಾರ್ಕ್ಸ್ ಕಡಿಮೆ ಕೊಟ್ಟ ಕಾರಣ ನಮಗ್ಯಾರಿಗೂ ಒಳ್ಳೆಯ ಅಂಕ ಬರಲಿಲ್ಲ ಎಂದು ವಿದ್ಯಾರ್ಥಿಗಳು ನಾಗರಾಜ್ ಅವರಲ್ಲಿ ಆಕ್ಷೇಪ ಮಾಡಿದಾಗ" ಅದೆಲ್ಲ ಲಕ್ಷ್ಮೀ ಯ ಅಧಿಕ ಪ್ರಸಂಗದಿಂದ ಆದದ್ದು "ಎಂದು  ಉಪನ್ಯಾಸಕರಾದ ನಾಗರಾಜ್ ಅವರು ಹೇಳಿದರು."ನಾನೇನು ಮಾಡಿದ್ದೇನೆ..ಎಲ್ಲಾ ಪರೀಕ್ಷೆ ಗಳಲ್ಲೂ ಹೈಯೆಸ್ಟ್ ಸ್ಕೋರ್ ಮಾಡಿರುವ ನನಗೆ ಉಳಿದವರಿಗಿಂತ ತುಂಬಾ ಕಡಿಮೆ ಯಾಕೆ ಕೊಟ್ಟಿದ್ದೀರಿ ಎಂದು ಕೇಳಿದ್ದು ತಪ್ಪಾ ?"ಎಂದು ಕೇಳಿದೆ ‌ಆಗ ವಿದ್ಯಾರ್ಥಿ ಗಳಲ್ಲಿ ಒಬ್ಬ( ಬಹುಶಃ ಗಜಾನನ ಮರಾಠೆ)
ಕಳ್ಳ ತಾನು ಕಳ್ಳತನ ಮಾಡಿದ್ದನ್ನು ಒಪ್ಪಿಕೊಳ್ಳುತ್ತಾನಾ ? ಎಂದು ನನ್ನನ್ನು ದೂಷಿಸಿ ಮಾತನಾಡಿದರು.ವಿದ್ಯಾರ್ಥಿಗಳೆಲ್ಲ ನನಗೆ ತಾಗುವಂತೆ ಹಂಗಿಸಿ ಮಾತನಾಡತೊಡಗಿದರು.ಆಗ ನಾನು ನಾಗಾರಾಜ್ ಅವರಲ್ಲಿ ಎರಡು ನಿಮಿಷ ಹೊರಗೆ ಹೋಗಿ ಬರಲು ಅನುಮತಿ ಕೇಳಿ ಹೊರಗೆ ಹೋದೆ.ಪ್ರಿನ್ಸಿಪಾಲ್ ಡಾ.ಜಿ ಎನ್ ಭಟ್ಟರಲ್ಲಿ‌ ಮತ್ತೆ ನಾಗರಾಜ್ ಅವರು "ಬೇರೆ ವಿದ್ಯಾರ್ಥಿಗಳಿಗೆ ಇಂಟರ್ನಲ್ ಮಾರ್ಕ್ಸ್ ಕಡಿಮೆ ಕೊಟ್ಟದ್ದಕ್ಕೆ ಲಕ್ಷ್ಮೀ ಯವರ ಅಧಿಕ ಪ್ರಸಂಗ ಕಾರಣ ಎಂದು ನನಗೆ ಅವಮಾನಿಸಿದ್ದಾರೆ.ಇಂಟರ್ನಲ್ ಮಾರ್ಕ್ಸ್ ಕೊಡಲು ಯುನಿವರ್ಸಿಟಿ ಸೂಚಿಸಿದ ಗೈಡ್ ಲೈನ್ ಗಳು‌ ಇವೆಯಲ್ಲ ಸರ್ ಅದರ ಪ್ರಕಾರ ತಾನೇ ಕೊಡಬೇಕು.. ನನಗೆ ಬರಬೇಕಾದಷ್ಟೇ ಅಂಕಗಳು ಬಂದಿವೆ .ಉಳಿದವರು ತರಗತಿ ಪರೀಕ್ಷೆ, ಮಧ್ಯಾವಧಿ ಪರೀಕ್ಷೆ ಹಾಗೂ ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ನನಗಿಂತ ಕಡಿಮೆ ಅಂಕಗಳನ್ನು ತೆಗೆದಿದ್ದಾರೆ.ಜೊತೆಗೆ ಸೆಮಿನಾರ್ ಗಳಲ್ಲಿ ನನಗೆ  ವೆರಿ ಗುಡ್ ಸಿಕ್ಕಿದೆ ಉಳಿದ ಯಾರಿಗೂ ಸಿಕ್ಕಿಲ್ಲ ,ಭಾಷಣ ನಾಟಕ ಸೇರಿದಂತೆ ಎಲ್ಲದರಲ್ಲೂ ನಾನು ಮುಂದಿದ್ದೆ  ಹಾಗಾಗಿ ನನಗಿಂತ ಕಡಿಮೆ ಅಂಕಗಳು ಉಳಿದವರಿಗೆ ಬಂದಿರುವುದು ಸಹಜ ತಾನೇ..ಅದಕ್ಕೆ ನಾನು ಕಾರಣ" ಎಂದು ಹೇಳಿ  ನಾಗರಾಜ್ ಅವರು ನನಗೆ ಅವಮಾನಿಸಿದ್ದು ನನಗೆ ತುಂಬಾ ನೋವಾಗಿದೆ "ಎಂದು ತಿಳಿಸಿದೆ.ಆಗ ಹಿರಿಯ ಉಪನ್ಯಾಸಕರಾದ ಡಾ.ಕೆ ನಾರಾಯಣ ಭಟ್ ಕೂಡ ಅಲ್ಲಿದ್ದರು.ನನ್ನ ಎದುರೇ ಡಾ.ಜಿ ಎನ್ ಭಟ್  ಅಟೆಂಡರ್ ಮೂಲಕ ನಾಗರಾಜರನ್ನು ಬರಹೇಳಿದರು.ಏನಿದು ನಾಗರಾಜ್ ಎಂದು‌ ಡಾ. ಜಿಎನ್ ಭಟ್ ಅವರು ಕೇಳಿದಾಗ  ಅವರು "sorry sirಏನೋ ಆಗೋಯ್ತು ಬಿಟ್ಟು ಬಿಡಿ ಸರ್ " ಎಂದು ಹೇಳಿದರು. ಓದಲೆಂದು ಬಂದ ಮಕ್ಕಳಿಗೆ ಕಿರುಕುಳ ಕೊಡಬಾರದು‌‌.ಇಂಟರ್ನಲ್ ಮಾರ್ಕ್ಸ್ ಅನ್ನು ಯುನಿವರ್ಸಿಟಿ ನಿಯಮಾವಳಿ ಪ್ರಕಾರ ಎಲ್ಲರಿಗೂ ಕೊಡಿ ಎಂದು ಆವತ್ತೇ ಹೇಳಿದೆನಲ್ಲ..ಹಾಗೆ ನೀಡಿಲ್ಲವೇ ?ಎಂದು ಡಾ.ಜಿ ಎನ್ ಭಟ್ ಕೇಳಿದಾಗ " ಯುನಿವರ್ಸಿಟಿ ನಿಯಮಾವಳಿ ಪ್ರಕಾರವೇ ನೀಡಿದ್ದೇವೆ ಸರ್ " ಎಂದು ನಾಗರಾಜ್ ಉತ್ತರಿಸಿದರು‌‌.ಮತ್ತೆ ಲಕ್ಷ್ಮೀ ಇಂದ ಮಾರ್ಕ್ಸ್ ಕಡಿಮೆ ಬಂತು ಎಂದು ಯಾಕೆ ಹೇಳಿದಿರಿ ? ಎಂದು ಕೇಳಿದಾಗ ನಾಗರಾಜ್ ಮತ್ತೆ ಪುನಃ ಏನೋ ಮಾತಿಗೆತಪ್ಪಿ ಬಂತು ಬಿಟ್ಟು ಬಿಡಿ ಸರ್" ಎಂದು ಹೇಳಿದರು."ಸರಿಯಮ್ಮ.. ನೀನು ಕ್ಲಾಸ್ ಗೆ ಹೋಗು ಇನ್ನು ಮುಂದೆ ಇಂತಹದ್ದು ಆಗದಂತೆ ನೋಡಿಕೊಳ್ಳುತ್ತೇನೆ " ಎಂದು ಹೇಳಿ ನನ್ನನ್ನು ಕ್ಲಾಸಿಗೆ ಕಳುಹಿಸಿದರು.ಆ ದಿನ ಸಂಜೆ ತನಕ ಎಂದಿನಂತೆ ತರಗತಿಗಳು ನಡೆದವು.ನಂತರ ನಾನು ಮನೆಗೆ ಬಂದೆ.
ಮರುದಿನ ನಾನು ತರಗತಿ ಪ್ರವೇಶ ಮಾಡುತ್ತಿದ್ದಂತೆ ಉಳಿದವರೆಲ್ಲ ಎದ್ದು ಹೊರನಡೆದರು..
ಅಂದಿನ ಮೊದಲ ತರಗತಿ ಡಾ‌ಕೆ ನಾರಾಯಣ ಭಟ್ ಅವರು ತೆಗೆದುಕೊಂಡರು‌.ತರಗತಿಯಲ್ಲಿ ನನ್ನ ಹೊರತಾಗಿ ಯಾರೂ ಇಲ್ಲದಿರುವುದನ್ನು ಗಮನಿಸಿ ಎಲ್ಲೋಗಿದ್ದಾರೆ ಇವರೆಲ್ಲ ಎಂದು ಕೇಳಿದರು‌ ಗೊತ್ತಿಲ್ಲ ಎಂದು ಹೇಳಿದೆ. ಅವರು ಎಂದಿನಂತೆ ಪಾಠ ಶುರು ಮಾಡಿದರು‌.ಡಾ ಕೆ ನಾರಾಯಣ ಭಟ್ ಅವರದು ಅಗಾಧ ಪಾಂಡಿತ್ಯ, ಕಂಚಿನ ಕಂಠ..ಅವರ ಪಾಠ ಕೇಳುವುದೊಂದು ಅವಿಸ್ಮರಣೀಯ ವಿಚಾರ‌.
ಸುಮಾರು ಅರ್ಧ ಗಂಟೆ ಕಳೆದಾಗ ಡಾ. ಜಿ ಎನ್ ಭಟ್ ನಾರಾಯಣ ಭಟ್ಟರನ್ನು ಪ್ರಿನ್ಸಿಪಾಲ್ ಚೇಂಬರ್ ಗೆ ಬರಹೇಳಿದರು..ನೀನು ನೋಟ್ಸ್ ಬರೀತಾ ಇರು ಏನೂಂತ ಕೇಳ್ಕೊಂಡು ಬರ್ತೇನೆ ಎಂದು ಹೇಳಿ ಹೋದರು.
ಸ್ವಲ್ಪ ಹೊತ್ತಿನಲ್ಲಿ ನನ್ನನ್ನು ಕೂಡ ಪ್ರಿನ್ಸಿಪಾಲ್ ಚೇಂಬರ್ ಗೆ ಬರಹೇಳಿದರು.ಪ್ರಿನ್ಸಿಪಾಲ್ ಚೇಂಬರ್ ಎದುರುಗಡೆ ನನ್ನ ಸಹಪಾಠಿಗಳು ಗಲಾಟೆ ಮಾಡುತ್ತಾ ಇದ್ದರು.ಆಗ ಇಬ್ಬರನ್ನು ಒಳ ಬರಲು ಹೇಳಿ ಡಾ.ಕಜಿ ಎನ್ ಭಟ್ ಅವರು  "ಏನು ಗಲಾಟೆ?  ನೀವ್ಯಾರೂ ಯಾಕೆ ಕ್ಲಾಸಿಗೆ ಹೋಗಿಲ್ಲ ?  ನಿನ್ನೆ ತರಗತಿಯಲ್ಲಿ ಏನಾಯಿತು? ಎಂದು ಕೇಳಿದರು.
ಆಗ ಅವರು "ನಿನ್ನೆ  ತರಗತಿಯಲ್ಲಿ  ನಾಗಾರಾಜ್ ಅವರು ಪಾಠ ಮಾಡುತ್ತಾ ಇದ್ದರು‌.ತರಗತಿಯಲ್ಲಿ ಏನೂ ಆಗಿರಲಿಲ್ಲ. ಲಕ್ಷ್ಮೀ ಅವರು ಇದ್ದಕ್ಕಿದ್ದಂತೆ ಎದ್ದು ಹೊರಗೆ ಹೋದರು.ಆಗ ಯಾಕೆ ಎಂದು ನಮಗೆ ಗೊತ್ತಾಗಲಿಲ್ಲ.ನಂತರ ನಮಗೆ " ಅವರು ನಮ್ಮ ನಾಗರಾಜ್ ಸರ್ ಮೇಲೆ ವಿನಾಕಾರಣ ದೂರು ಕೊಟ್ಟಿದ್ದಾರೆ ಎಂದು ಗೊತ್ತಾಯಿತು. ಅದಕ್ಕೆ ನಮಗೆ ಬಹಳ ಬೇಸರ ಆಗಿದೆ.ಅವರು ಕ್ಲಾಸಿಗೆ ಬಂದರೆ ನಾವು ಯಾರೂ ಕ್ಲಾಸಿಗೆ ಬರುವುದಿಲ್ಲ. ಅವರನ್ನು ಕಾಲೇಜಿನಿಂದ ತೆಗೆದು ಹಾಕಿ ಎಂದು ಹೇಳಿದರು ಹಾಗೆ ಬರೆದು ಕೊಡಿ ಎಂದು ಡಾ.ಕೆ ನಾರಾಯಣ ಭಟ್ ಅವರು ಹೇಳಿದರು..ಅದನ್ನು ಅವರಿಬ್ಬರು ಬರೆದು ಕೊಟ್ಟು ಸಹಿ ಹಾಕಿದರೆಂದು ನೆನಪು .ನಂತರ ಒಬ್ಬೊಬ್ಬರನ್ನಾಗಿ ಒಳ ಬರ ಹೇಳಿ " ನಿನ್ನೆ ತರಗತಿಯಲ್ಲಿ ಏನಾಯಿತು ? ಎಂದು ಕೇಳಿದರು.ಎಲ್ಲರದೂ ಒಂದೇ ಉತ್ತರ ..ತರಗತಿಯಲ್ಲಿ ಏನೂ ಆಗಿರಲಿಲ್ಲ ‌.ನಾಗರಾಜ್ ಸರ್ ಪಾಠ ಮಾಡುತ್ತಾ ಇದ್ದರು.ಲಕ್ಷ್ಮೀ ಇದ್ದಕ್ಕಿದ್ದ ಹಾಗೆ ಎದ್ದು ಹೊರಗೆ ಹೋದರು .ನಂತರ ನಾಗರಾಜ್ ಮೇಲೆ ಸುಮ್ಮನೇ ದೂರು ಕೊಟ್ಟಿದ್ದಾರೆ ಎಂದು ನಮಗೆ ತಿಳಿಯಿತು. ನಮಗೆ ತುಂಬಾ ಬೇಸರ ಆಗಿದೆ..ಅವರನ್ನು ಕಾಲೇಜಿನಿಂದ ಹೊರ ಹಾಕಿ ಎಂದು. ಆ ದಿವಸ ಕಮಲಾಯನಿ ಬಂದಿರಲಿಲ್ಲ ಎಂದು ಮೊನ್ನೆ ಅವರು ಮಾತಿನ ನಡುವೆ ಹೇಳಿದರು. ಅವರು ಬಂದಿದ್ದರೋ ಇಲ್ಲವೋ ಎಂದು ನನಗೂ ಗೊತ್ತಿಲ್ಲ,ಆದರೆ ನನಗೆ ತೀರಾ ಹತ್ತಿರ ಆಗಿದ್ದ ನೀತಾ ಕೂಡಾ ಅದೇ ಹೇಳಿಕೆ ನೀಡಿದ್ದಳು.
ಇದೆಲ್ಲ ಆದ ನಂತರ ಡಾ.ಕೆ ನಾರಾಯಣ ಭಟ್ ಅವರು " ನೀವುಗಳು ಹೇಳಿದ್ದು ಸರಿ  ಎಂದಾದರೆ ಲಕ್ಷ್ಮೀ ಯನ್ನು ಕಾಲೇಜಿನಿಂದ ತೆಗೆದು ಹಾಕುವುದಕ್ಕೆ ಅಡ್ಡಿ ಇಲ್ಲ.ಆದರೆ ನಿನ್ನೆ ನಾಗರಾಜ್ ಅನ್ನು ಪ್ರಿನ್ಸಿಪಾಲ್ ಕರೆಸಿದಾಗ ಅವರು ಏನೋ ಆಗೋಯ್ತು ಸರ್ ಬಿಟ್ಟು ಬಿಡಿ ಎಂದು ಹೇಳಿದ್ದಾರೆ.ನೀವುಗಳು ಹೇಳುವಂತೆ ತರಗತಿಯಲ್ಲಿ ಏನೂ ನಡೆಯದೇ ಇದ್ದರೆ ಅವರು" ಏನೋ ಆಗೋಯ್ತು ಬಿಟ್ಟು ಬಿಡಿ ಎಂದದ್ದು ಏನನ್ನು ? ಏನೋ ಆಗೋಗಿದೆ ಎಂದವರೇ ಒಪ್ಪಿದ್ದಾರಲ್ಲ.ಒಬ್ಬ ಹುಡುಗಿ ಮೊದಲ ವರ್ಷ ತರಗತಿಗೆ ಮೊದಲ ಸ್ಥಾನ ಬಂದಿದ್ದಾಳೆ,ಕಲಿಕೆ ಮತ್ತು ಪಠ್ಯೇತರ ಎರಡೂ ವಿಚಾರಗಳಲ್ಲಿ ಮುಂದಿದ್ದಾಳೆ .ಅವಳಿಗೆ ಮುಂದೆ ರ‍‍್ಯಾಂಕ್ ಬರಬಹುದು ಎಂಬ ಹೊಟ್ಟೆ ಕಿಚ್ಚಿಗೆ ಅವಳ ಭವಿಷ್ಯವನ್ನು ಹಾಳು ಮಾಡಲು ಹೊರಟಿದ್ದೀರ? ಏನವಳನ್ನು ಸಾಯಿಸಬೇಕೆಂದಿದ್ದೀರ?ಇಷ್ಟು ಜನ ಸುಳ್ಳೇ ಸುಳ್ಳು ಹೇಳಿ ಸುಳ್ಳು ಹೇಳಿಕೆಗೆ  ಸಹಿ ಮಾಡಿದ್ದೀರಿ‌.ನೀವು ಇಷ್ಟೂ ಜನರನ್ನು ಕಾಲೇಜಿನಿಂದ ತೆಗೆದು ಹಾಕಲು ಈ ದಾಖಲೆ ಸಾಕು.ಲಕ್ಷ್ಮೀ ಒಬ್ಬಳು ಇದ್ದರೂ ನಮ್ಮ ಕಾಲೇಜು ನಡೆಯುತ್ತದೆ. ನೀವ್ಯಾರೂ ಬೇಕಾಗಿಲ್ಲ ಎಂದು ಜೋರು ಮಾಡಿದರು..ಎಲ್ಲರೂ ಕ್ಷಮೆ ಕೇಳಿ ಹೊರಗೆ ಬಂದರು.ತಲೆ ತಗ್ಗಿಸಿಕೊಂಡು ಬಂದು ತರಗತಿಯಲ್ಲಿ ಕುಳಿತರು.ಮತ್ತೆ ಎಂದಿನಂತೆ ತರಗತಿಗಳು ನಡೆದವು
ಮತ್ತೆ  ನಾನು ತರಗತಿ ಪರೀಕ್ಷೆ, ಮಧ್ಯಾವಧಿ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನ ಪಡೆದೆ‌ .ಮೊದಲ ವರ್ಷಕ್ಕಿಂತ ತುಂಬಾ ಹೆಚ್ಚಿನ ಪರಿಶ್ರಮ ಪಟ್ಟೆ.ದಿವಸಕ್ಕೆ ಸುಮಾರು ಎಂಟು ಗಂಟೆ ಓದಿದೆ.
ಪೂರ್ವ ಸಿದ್ದತಾ ಪರೀಕ್ಷೆ ಸನ್ನಿಹಿತವಾಯಿತು.ಈಗೊಂದು ಸಮಸ್ಯೆ ಉಂಟಾಯಿತು. ನಾನು ಮದುವೆ ಆದ ನಂತರ ಸಂಸ್ಕೃತ ಎಂಎ ಓದಿದ್ದು.ನಾನು ಚೊಚ್ಚಲ ಗರ್ಭಿಣಿಯಾದೆ.ಬಸ್ ಪ್ರಯಾಣ ಮಾಡಬಾರದೆಂದು ವೈದ್ಯ ರು ಸೂಚಿಸಿದರು.ಜೊತೆಗೆ ತೀರಾ ವಾಂತಿ ಹಿಂಸೆ.
ನಾನು ಎಂಎ ಗೆ ಸೇರುವಾಗ ಡಾ.ಕೆ ನಾರಾಯಣ ಭಟ್ ಅವರು ನಮಗೆ ಸಂಬಂಧಿಕರೆಂದು ತಿಳಿದಿರಲಿಲ್ಲ.. ಈ ಮಕ್ಕಳು ಪ್ರತಿಭಟನೆ ಮಾಡಿದ್ದು ಇತ್ಯಾದಿಗಳು ನಡೆದ ನಂತರ ಯಾವುದೋ ಕಾರಣಕ್ಕೆ ನಾನು ಅವರ ಮನೆಗೆ ಹೋಗಿದ್ದೆ.ಆಗ ಅವರ ಮಡದಿ ಜಯಕ್ಕನವರ ಮೂಲಕ ನಾವು ಸಂಬಂಧಿಕರೆಂದು ಗೊತ್ತಾಗಿತ್ತು.ಅವರು  ಬಹಳ ಸಹೃದಯಿಗಳು,ನನ್ನ ಸೀನಿಯರ್ ಗಳಾಗಿದ್ದ ಎರಡು ಮೂರು ವಿದ್ಯಾರ್ಥಿನಿಯರಿಗೆ ಏನೋ ಸಮಸ್ಯೆ ಬಂದು ಉಳಿದುಕೊಳ್ಳಲು ವ್ಯವಸ್ಥೆ ಇಲ್ಲದಾಗ ಇವರು ಅವರುಗಳಿಗೆ ಮೂರು ನಾಲ್ಕು ತಿಂಗಳ ಕಾಲ ತಮ್ಮ ಮನೆಯಲ್ಲಿ ಆಶ್ರಯ ಕೊಟ್ಟಿದ್ದರು
ಹಾಗಾಗಿ ನನಗೂ ಒಂದು ವಾರ ಅವರ ಮನೆಯಲ್ಲಿ ಆಶ್ರಯ ನೀಡಿಯಾರು ಎಂಬ ನಂಬಿಕೆಯಲ್ಲಿ ಅವರಿಗೆ ವಿಷಯ ತಿಳಿಸಿ ಸಹಾಯ ಕೇಳಿದೆ.ತುಂಬು ಮನಸಿನಿಂದ ಒಂದು ವಾರ ಅವರ ಮನೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟರು.ಪೂರ್ವ ಸಿದ್ಧತಾ ಪರೀಕ್ಷೆ ಆರಂಭವಾಗುವ ಹಿಂದಿನ ದಿನ ಕಾರಿನಲ್ಲಿ ಅವರ ಮನೆಗೆ ತಂದು ಬಿಟ್ಟು ಪ್ರಸಾದ್ ಹಿಂದೆ  ಹೋದರು..ಐದು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಬರೆದು ಮತ್ತೆ ನಾರಾಯಾಣ ಭಟ್ ದಂಪತಿಗಳ ಕಾಲು ಹಿಡಿದು  ನಮಸ್ಕರಿಸಿಸ ಧನ್ಯವಾದ ಹೇಳಿ ಕಾರಿನಲ್ಲಿ ಮನೆಗೆ ಬಂದೆ.
ಮತ್ತೆ ಒಂದು ಒಂದೂವರೆ ತಿಂಗಳು ಕಳೆದು ಎರಡನೇ ವರ್ಷದ ಸಂಸ್ಕೃತ ಎಂಎಯ ಅಂತಿಮ ಪರೀಕ್ಷೆಗಳು ಶುರುವಾದವು..ನಾನು ರ‍್ಯಾಂಕ್ ತೆಗೆಯಲೇ ಬೇಕೆಂದು ಹಠ ಕಟ್ಟಿ ಓದಿದ್ದೆ. ನನ್ನ  ದುರದೃಷ್ಟ ಇಲ್ಲಿಗೆ ನಿಲ್ಲಲಿಲ್ಲ ಮರು ದಿನ ಪರೀಕ್ಷೆ ಎನ್ನುವಾಗ  ಹಿಂದಿನ ದಿನ ಮಧ್ಯಾಹ್ನದ ಹೊತ್ತಿಗೆ ಕಿಬ್ಬೊಟ್ಟೆಯ ಲ್ಲಿ ಜೋರು ಹೊಟ್ಟೆ ನೋವು ಶುರು ಆಯಿತು.ಆಗ ನಾನು ನಾಲ್ಕು ತಿಂಗಳ ಗರ್ಭಿಣಿ.ವಾಂತಿ ಹಿಂಸೆ ನಿಂತು ಸುಧಾರಿಸಿದ್ದೆ.ಅಮ್ಮಾ ಎಂದು ಕರೆಯುವ ಕಂದನ ಕನಸನ್ನು ಕಾಣುತ್ತಿದ್ದೆ.
ಮರುದಿನ ಪರೀಕ್ಷೆ ಇದೆ ಎಂದಾಗ ಕಾಡಿದ ಹೊಟ್ಟೆ ನೋವು ಆತಂಕವನ್ನು ಉಂಟು ಮಾಡಿತ್ತು.ಹೊಟ್ಟೆ ನೋವು ಜೋರಾದಾಗ ನಾನು ಚಿಕಿತ್ಸೆ ಪಡೆಯುವ ಗೈನಕಾಲಜಿಷ್ಟ್ ಡಾ.ಮಾಲತಿ ಭಟ್ ಅವರ ಭಟ್ಸ್ ನರ್ಸಿಂಗ್ ಹೋಮಿಗೆ ಹೋದೆ.ಅವರು ಪರೀಕ್ಷಿಸಿ ರಕ್ತಸ್ರಾವ ಆಗಿಲ್ಲ ಎಂಬುದನ್ನು ದೃಢ ಮಾಡಿ ಏನಾಗಲಾರದು..ಏನಾದರೂ ಗ್ಯಾಸ್ಟ್ರಿಕ್‌ ಇರಬಹುದು ಅದಕ್ಕೆ ಔಷಧ ಕೊಡುತ್ತೇನೆ, ಸಣ್ಣ ಪ್ರಮಾಣದ ನೋವು ನಿವಾರಕ ಕೊಡುತ್ತೇನೆ ಹೆಚ್ಚು ಪವರ್ ನದ್ದು ಕೊಟ್ಟರೆ ಮಗುವಿಗೆ ತೊಂದರೆ ಆಗಬಹುದು, ಪರೀಕ್ಷೆ ಅಂತ ಹೆಚ್ಚು ಓದುವುದು ಬೇಡ,ರೆಸ್ಟ್ ತಗೊಳ್ಳಿ ಎಂದು ಹೇಳಿದರು.
ಹೊಟ್ಟೆ ನೋವು ಸ್ವಲ್ಪ ಕಡಿಮೆ ಆದ ಹಾಗೆ ಅನಿಸಿತು.ವೈದರ ಸೂಚನೆಯಂತೆ ಬಂದು ಮಲಗಿದ್ದೆ.ಆದರೆ ರಾತ್ರಿ ಎಂಟು ಗಂಟೆ ಹೊತ್ತಿಗೆ ತಡೆಯಲಾರದ ಹೊಟ್ಟೆ ನೋವು ಶುರು ಆಯಿತು. ಮತ್ತೆ ವೈದ್ಯರ ಬಳಿಗೆ ಹೋದೆ.ಅಲ್ಲಿಗೆ ತಲುಪುವವಷ್ಟರಲ್ಲಿ ಬಟ್ಟೆ ಎಲ್ಲ ಕೆಂಪಾಗಿತ್ತು.ರಕ್ತ ಸ್ರಾವ ಆಗಿ ಗಾಭರಿ ಆಗಿತ್ತು..ಅವರು ನೋಡುತ್ತಲೇ ಗರ್ಭಪಾತ ಆಗಿದೆ ಆದರೂ ಸ್ಕಾನಿಂಗ್ ಮಾಡಿ ನೊಡುವ ಎಂದು ಸ್ಕಾನಿಂಗ್ ಗೆ ಕಳುಹಿಸಿದರು.ಅಲ್ಲಿ ಗರ್ಭ ಹೋಗಿದೆ ಎಂದು ಸ್ಪಷ್ಟವಾಗಿ ತಿಳಿಯಿತು .ಅಳು ಸಂಕಟ ಉಕ್ಕಿ ಹರಿಯಿತು. ಮತ್ತೆ ಡಾ.ಮಾಲತಿ ಭಟ್  ಅವರ ಬಳಿಗೆ ಬಂದೆ. ಅವರು D&C ಮಾಡಬೇಕು ಇಲ್ಲವಾದಲ್ಲಿ ಗರ್ಭ ಕೋಶಕ್ಕೆ ಇನ್ಫೆಕ್ಷನ್ ಆಗಿ ಮುಂದೆ ಮಕ್ಕಳಾಗುವುದು ಕಷ್ಟ ಆಗ ಬಹುದು ಎಂದರು..ಈಗಲೇ D&C ಮಾಡುತ್ತೇನೆ ಒಂದು ದಿವಸ ಅಡ್ಮಿಟ್ ಆಗಿ ಇರಬೇಕು ಎಂದರು.
ಆಗ ನಾನು "ನಾಳೆ ಪರೀಕ್ಷೆಗೆ ಹೋಗದಿದ್ದರೆ ಒಂದು ವರ್ಷ ವ್ಯರ್ಥವಾಗಿ ಹೋಗುತ್ತದೆ.ನನಗೆ ರ‍‍್ಯಾಂಕ್ ತಪ್ಪಿ ಹೋಗುತ್ತದೆ "ಎಂದು ಅಳುತ್ತಾ ಹೇಳಿದೆ.ಸರಿ,ನಾಳೆ ಪರೀಕ್ಷೆ ಮುಗಿಸಿ ಬಾ.ಹೊಟ್ಟೆ ನೋವಿಗೆ ಹೈ ಪವರ್ ಪೈನ್  ಕಿಲ್ಲರ್ ಕೊಡುತ್ತೇನೆ.ಆದರೆ ತುಂಬಾ ರಕ್ತಸ್ರಾವ ಆಗುತ್ತದೆ.ಆವಾಗ ಸುಸ್ತಾಗಿ ತಲೆ ತಿರುಗಬಹುದು.ಅದಕ್ಕಾಗಿ ಆಗಾಗ ಜ್ಯೂಸ್ ಹಣ್ಣು ತೆಗೆದುಕೊಳ್ಳಬೇಕು.ಇನ್ನು ಗರ್ಭ ಹೋದ ಬಗ್ಗೆ ಚಿಂತೆ ಮಾಮರುದಿವಸಡಬೇಡ.ಆರು ತಿಂಗಳು ಕಳೀಲಿ ಅಷ್ಟರ ತನಕ ಜಾಗ್ರತೆ ಮಾಡಿ ಗರ್ಭ ಧರಿಸಬಾರದು.ನಂತರ ಒಂದು ವರ್ಷದಲ್ಲಿ ಮುದ್ದಾದ ಮಗುವನ್ನು ನಿನ್ನ ಹೊಟ್ಟೆಯಿಂದ ತೆಗೆದು ನಿನ್ನ ಕೈಗೆ ಕೊಡುತ್ತೇನೆ ಖಂಡಿತಾ, ಕಣ್ಣೊರೆಸಿಕೋ,ಮನೆಗೆ ಹೋಗಿ ನಾಳೆಯ ಪರೀಕ್ಷೆಗೆ ತಯಾರಿ ಮಾಡಿಕೋ.ಮೊದಲ ರ‌್ಯಾಂಕ್ ನಿನಗೇ ಬರಲಿ ಎಂದು ಹಾರೈಸಿ ನನ್ನ ಬೆನ್ನು ತಟ್ಟಿ ಕಳುಹಿಸಿದರು.
ಮನೆಗೆ ಅಳುತ್ತಾ ಬಂದೆ. ಆದರೆ ಓದಲು ಪುಸ್ತಕ ಹಿಡಿದಾಗ ಜಗತ್ತನ್ನೇ ಮರೆತೆ.
ಆ ದಿನ ಹೇಗೆ ಪರೀಕ್ಷೆ ಬರೆದೆನೋ..ನನಗೆ ಈಗ ನೆನೆಸಿದರೂ ಆತಂಕದಿಂದ ಕೈಕಾಲು ನಡುಗುತ್ತದೆ
ಎರಡು ಮೂರು ದಪ್ಪದ ಸ್ಯಾನಿಟರಿ ಪ್ಯಾಡ್ ಕಟ್ಟಿ ಕೊಡು ಕೆಂಪು ಡ್ರೆಸ್ ಹಾಕಿಕೊಂಡು ಪರೀಕ್ಷೆ ಬರೆಯಲು ಹೊರಟೆ.ಅಕಸ್ಮಾತ್  ಬ್ಲಡ್ ಲೀಕ್ ಆದರೆ ಪಕ್ಕನೆ ಗೊತ್ತಾಗದಿರಲಿ ಎಂದು ಕೆಂಪು ಚೂಡಿದಾರ್ ಹಾಕಿಕೊಂಡಿದ್ದೆ.
ಒಂದೆಡೆ ತಡೆಯಲಾಗದ ಹೊಟ್ಟೆ ನೋವು, ಇನ್ನೊಂದೆಡೆ ತೀವ್ರ ರಕ್ತಸ್ರಾವ,  ಹೊಟ್ಟೆಯಲ್ಲಿದ್ದ ಕಂದನನ್ನು ಕಳೆದು ಕೊಂಡ ದುಃಖ, ಸುಸ್ತು  ಹೇಗೆ ಪರೀಕ್ಷೆ ಬರೆಯುವೆನೋ ಎಂದು ನನಗೂ ಗೊತ್ತಿರಲಿಲ್ಲ.. ಏನೋ ಒಂದು ಹುಚ್ಚು ಧೈರ್ಯ ಮಾಡಿ ಪರೀಕ್ಷೆಗೆ ಬರೆಯಲು ಬಂದಿದ್ದೆ..ಸುಸ್ತು ,ದುಃಖ ಆತಂಕದಿಂದ ಕೈಕಾಲುಗಳು ನಡುಗುತ್ತಿದ್ದವು
ಹೇಗೋ ಕಾಲಳೆದುಕೊಂಡು
ಪರೀಕ್ಷೆ ಹಾಲಿಗೆ ಹೋದೆ,ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕ ಮೇಲೆ ಜಗತ್ತನ್ನೇ ಮರೆತು ಉತ್ತರ ಬರೆದೆ.
ಪರೀಕ್ಷೆ ಮುಗಿಯುವಷ್ಟರಲ್ಲಿ ಬಟ್ಟೆ ಎಲ್ಲ ಒದ್ದೆಯಾಗಿ ಕೆಂಪಾಗಿತ್ತು.ಶಾಲು ಅಡ್ಡ ಹಾಕಿ ಹೇಗೋ ಹೊರಗೆ ಬಂದೆ.ಪ್ರಸಾದ್ ಕಾರಿನೊಂದಿಗೆ ಕಾಯುತ್ತಾ ಇದ್ದರು.ನೇರವಾಗಿ ಆಸ್ಪತ್ರೆಗೆ ಹೋಗಿ ದಾಖಲಾದೆ‌.D&Cಮಾಡಿದರು.ತುಂಬಾ ರಕ್ತ ಸ್ರಾವ ಅದ ಕಾರಣ ಬ್ಲಡ್ ಕೊಡಬೇಕಾಯಿತು ಅದೃಷ್ಟಕ್ಕೆ ನಂತರದ ಪರೀಕ್ಷೆಗೆ ಎರಡು ದಿನ ಸಮಯ ಇತ್ತು.
ಅಂತೂ ಇಂತೂ ಎಲ್ಲಾ ಪರೀಕ್ಷೆಗಳನ್ನು ತುಂಬಾ ಚೆನ್ನಾಗಿ ಬರೆದೆ.ಪರಿಶ್ರಮ ವ್ಯರ್ಥವಾಗಲಿಲ್ಲ.ಎರಡನೇ ವರ್ಷ ನನಗೆ ಇಂಟರ್ನಲ್ ಮಾರ್ಕ್ಸ್ ಇತರರಿಗಿಂತ ಕಡಿಮೆ ಕೊಟ್ಟಿದ್ದರು.ಆದರೂ ಎರಡನೇ ಸ್ಥಾನ ಪಡೆದ ಗಜಾನನ ಮರಾಠೆಗಿಂತ ಸುಮಾರು ಮೂವತ್ತು ಮಾರ್ಕ್ಸ್ ಹೆಚ್ಚು ಪಡೆದು ಫಸ್ಟ್‌ ರ‍್ಯಾಂಕ್ ಗಳಿಸಿದ್ದೆ.
ಇದಿಷ್ಟು ನಡೆದ ಘಟನೆ.ಮೊನ್ನೆ ಮಾತಾಡುವಾಗ ಕಮಲಾಯನಿಗೆ ಇಂಟರ್ನಲ್ ಮಾರ್ಕ್ಸ್ ತುಂಬಾ ಕಡಿಮೆ ಬಂದಿತ್ತು ಎಂದು ಹೇಳಿದರು.ಆಶ್ಚರ್ಯ ಆಯಿತು‌  ಮೊದಲ ವರ್ಷ ನನಗೆ ಹೈಯೆಸ್ಟ್ ಇಂಟರ್ನಲ್ ಮಾರ್ಕ್ಸ್ ಇದ್ದರೂ ಉಳಿದವರಿಗೆ ನನಗಿಂತ ಒಂದೆರಡು ಅಂಕಗಳು ಮಾತ್ರ ಕಡಿಮೆ ಬಂದಿದ್ದವು.ಕಮಲಾಯನಿಗೆ ತುಂಬಾ ಕಡಿಮೆ ಹೇಗೆ ಬಂತು? ನಂತರ  ವಿಷಯ ತಿಳಿಯಿತು. ಅವರಿಗೇನೋ ಸಮಸ್ಯೆ ಆಗಿ ಅವರು ಮೊದಲ ವರ್ಷ ಮಧ್ಯವಾರ್ಷಿಕ ಅಥವಾ ಪೂರ್ವ ಸಿದ್ಧತಾ ಪರೀಕ್ಷೆ ಗಳಿಗೆ ಬಂದಿರಲಿಲ್ಲ ‌ಎಂಎ ಯಲ್ಲಿ ಪ್ರತಿ ವಿಷಯಕ್ಕೆ ಇಪ್ಪತ್ತು ಅಂಕಗಳು ಇಂಟರ್ನಲ್ ಮಾರ್ಕ್ಸ್ ಇರುತ್ತವೆ.ಅದರಲ್ಲಿ ಹತ್ತು ಅಂಕಗಳನ್ನು ಮಧ್ಯವಾರ್ಷಿಕ ಮತ್ತು ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ತೆಗೆದ ಅಂಕಗಳನ್ನು ಟೋಟಲ್ ಮಾಡಿ ಅದನ್ನು ಹತ್ತರಲ್ಲಿ ಮಾಡಿ ಕೊಡುತ್ತಾರೆ. ಉಳಿದ ಹತ್ತು ಅಂಕಗಳನ್ನು ಪ್ರಬಂಧ ಮಂಡನೆ ಮತ್ತು ಪಠ್ಯೇತರ ಚಟುವಟಿಗಳ ಆಧಾರದಲ್ಲಿ ಕೊಡುತ್ತಾರೆ.ಒಂದು ಪರೀಕ್ಷೆ ಗೆ ಹಾಜರಾಗದಿದ್ದರೆ ಐದು ಅಂಕಗಳು ಹೋಗುತ್ತವೆ.ಇನ್ನುಳಿದ ಐದು ಅಂಕ ಕೂಡ ಪೂರ್ಣವಾಗಿ ಸಿಗುವುದಿಲ್ಲ ಹಾಜರಾದ ಪರೀಕ್ಷೆ ಯಲ್ಲಿ ಅರುವತ್ತು ಶೇಕಡಾ ಅಂಕ‌ಇದ್ದರೆ ಆ ಐದರಲ್ಲಿ ಮೂರು ಅಂಕ ಮಾತ್ರ ಸಿಗುತ್ತದೆ.ಪ್ರಬಂಧ ಮಂಡನೆ ಮತ್ತು ಇತರ  ಪಠ್ಯೇತರ ಚಟುವಟಿಕೆಗಳಿಗೆ ಆರರಿಂದ ಎಂಟು ಅಂಕ ನೀಡುತ್ತಾರೆ‌ ಹೀಗೆ ಐದೂ ಪತ್ರಿಕೆಗಳಲ್ಲಿ ಐದು ಅಂಕಗಳು ಹೋದಾಗ ಇಪ್ಪತ್ತೈದು ಅಂಕಗಳು ಕಡಿಮೆ ಆಗುತ್ತವೆ.ಮೊದಲ ವರ್ಷ ಕಮಲಾಯನಿ ಮತ್ತು ಎರಡನೇ ವರ್ಷ ನೀತಾ ನಾಯಕ್ ಮಧ್ಯಾವಧಿ ಅಥವಾ ಪೂರ್ವ ಸಿದ್ದತಾ ಪರೀಕ್ಷೆಗಳಿಗೆ ಹಾಜರಾಗಿಲ್ಲ ಇದರಿಂದಾಗಿ ಅವರುಗಳಿಗೆ ಉಳಿದವರಿಗಿಂತ‌ ಇಪ್ಪತ್ತೈದು ಇಂಟರ್ನಲ್ ಮಾರ್ಕ್ಸ್ ಕಡಿಮೆ ಬಂದಿರಬಹುದು.
ಆದರೆ ಇದಕ್ಕೊಂದು ಪರಿಹಾರವಿದೆ .ಸಕಾರಣ ಕೊಟ್ಟು ಮರು ಪರೀಕ್ಷೆ ಮಾಡುವಂತೆ ವಿನಂತಿ ಮಾಡಿದರೆ ಮರು ಪರೀಕ್ಷೆ ಮಾಡುತ್ತಾರೆ‌.ಆಗ ಇತರರಷ್ಟೇ ಅಂಕಗಳು ಸಿಗುತ್ತವೆ. ನಾನು ಉಜಿರೆಯಲ್ಲಿ ಎರಡನೇ ವರ್ಷ ಬಿಎಸ್ಸಿ ಪದವಿ ಓದುತ್ತಿರುವಾಗ ನನಗೆ ಮದುವೆ ಆಯಿತು.ನನ್ನ ಮದುವೆ ಹಿಂದಿನ ದಿನ ತನಕ ಪ್ರಿಪರೇಟರಿ ಪರೀಕ್ಷೆಗಳು ನಡೆಯುತ್ತಿದ್ದವು .ಮದುವೆಯ ಹಿಂದಿನ ದಿನ ಇಂಗ್ಲಿಷ್ ಪರೀಕ್ಷೆ ಇತ್ತು.ಮದುವೆ ಹಿಂದಿನ ದಿನ ತನಕದ ಪರೀಕ್ಷೆಗಳನ್ನು ನಾನು ಬರೆದಿದ್ದೆ.ಮದುವೆ ಹಿಂದಿನ ದಿನ ಬೆಳಗ್ಗೆಯೇ ಊರಿಗೆ ಹೋಗುವುದು ಅನಿವಾರ್ಯವಗಿತ್ತು‌.ಉಜಿರೆಯಿಂದ ನಮ್ಮ ‌ಮನೆಗೆ ನಾಲ್ಕು ಗಂಟೆ ಪ್ರಯಾಣದ ದೂರವಿತ್ತು.ಹಾಗಾಗಿ ಆ ಪರೀಕ್ಷೆಯನ್ನು ಕೂಡ ಬರೆದು ಮತ್ತೆ ಊರಿಗೆ ಹೋಗಲು ಸಾಧ್ಯವಿರಲಿಲ್ಲ. ಅದ್ದರಿಂದ ನಾನು  ಎರಡು ದಿನ ಮೊದಲೇ ನಮ್ಮ ಇಂಗ್ಲಿಷ್ ಉಪನ್ಯಾಸಕರಾದ ವೆಂಕಪ್ಪಯ್ಯ ಅವರಿಗೆ ಮದುವೆ ಆಹ್ವಾನ ಪತ್ರಿಕೆ ಕೊಟ್ಟು ಮದುವೆಗೆ ಬನ್ನಿ ಎಂದು ಆಹ್ವಾನಿಸಿ,ನನಗೆ ಇಂಗ್ಲಿಷ್ ಪರೀಕ್ಷೆ ಬರೆಯಲು ಆಗುತ್ತಿಲ್ಲ,ಮದುವೆಯಾದ ನಂತರ ಕಾಲೇಜಿಗೆ ಬರುತ್ತೇನೆ ನಂತರ ನನಗೆ ಮರು ಪರೀಕ್ಷೆ ಮಾಡಿ ಎಂದು ವಿನಂತಿಸಿದ್ದೆ.ಆಯಿತಮ್ಮ ಹೋಗಿ ಬಾ ಶುಭವಾಗಲಿ ಎಂದು ಹಾರೈಸಿ ನನ್ನನ್ನು ಕಳುಹಿಸಿದ್ದರು.  ಮದುವೆ ಕಳೆದು ವಾರ ಬಿಟ್ಟು ಕಾಲೇಜಿಗೆ ಬಂದಾಗ ಮರು ಪರೀಕ್ಷೆ ಮಾಡಿದ್ದರು. ಇಲ್ಲಿ ಕೂಡ ಇವರಿಬ್ಬರೂ ನನ್ನಂತೆಯೇ ಸಕಾರಣ ನೀಡಿ ಮರು ಪರೀಕ್ಷೆ ಮಾಡುವಂತೆ ಡಾ.ಜಿ ಎನ್ ಭಟ್ ಅವರಲ್ಲಿ ವಿನಂತಿಸಿದ್ದರೆ ಅವರು ಖಂಡಿವಾಗಿಯೂ ಮರು ಪರೀಕ್ಷೆ ಮಾಡುತ್ತಿದ್ದರು ‌ಇವರುಗಳು ಈ ಬಗ್ಗೆ ನಾಗರಾಜ್ ಅವರಲ್ಲಿ ಮಾತನಾಡಿರಬೇಕು.ಆಗಷ್ಟೇ ಎಂಎ ಮುಗಿಸಿ ಅಲ್ಲಿಯೇ ಉಪನ್ಯಾಸಕರಾದ ಅವರಿಗೆ ಈ ಬಗ್ಗೆ  ಮಾಹಿತಿ ಇರಲಿಲ್ಲವೋ,ಅಥವಾ ಇವರುಗಳು ಸರಿಯಾದ ಕಾರಣ ಕೊಟ್ಟು ಪತ್ರ ಮೂಲಕ ವಿನಂತಿಸಿಲ್ಲವೋ ಏನೋ ನನಗೆ ಗೊತ್ತಿಲ್ಲ. ಇವರಿಬ್ಬರಿಗೆ ಇಂಟರ್ನಲ್ ಮಾರ್ಕ್ಸ್ ಕಡಿಮೆ ಬಂದದ್ದು ಹೌದು .ಆದರೆ ಅದಕ್ಕೆ ನಾನು ಕಾರಣ ಹೇಗಾಗುತ್ತೇನೆ ?  ಇದು ಯಾರಿಗಾದರೂ ಅರ್ಥ ಆಗುವ ವಿಚಾರ..ಆಗೇನೋ ಇವರುಗಳು ವಿದ್ಯಾರ್ಥಿಗಳು,  ಆ ಅನನುಭವಿ ಉಪನ್ಯಾಸಕರು  ತನ್ನ ತಪ್ಪನ್ನು ಮುಚ್ಚಿಡಲು ನನ್ನ ಮೇಲೆ ಹಾಕಿದ್ದು ಇವರಿಗೆ ಆಗ ಅರ್ಥ ಆಗಿರಲಾರದು ಸರಿ.ಈಗ ಶಿಕ್ಷಕಿಯಾಗಿ ಇರುವ ಇವರಿಗೆ ಅರ್ಥವಾಗದೆ ಇದ್ದರೆ ಹೇಗೆ? ಅವರಿಗೆ ಅಂಕ ಕಡಿಮೆ ಬರಲು ನಾನು ಕಾರಣ ಎಂದು ಇಂದಿಗೂ ನಂಬಿದರೆ ಹೇಗೆ? ಎಲ್ಲಾದರೂ ಓರ್ವ  ವಿದ್ಯಾರ್ಥಿಯ  ಮಾತಿನಂತೆ ಇತರರಿಗೆ ಅಂಕಗಳನ್ನು ಕೊಡುವ ಪದ್ಧತಿ ಇದೆಯಾ ? ಈಗಲಾದರೂ ಇದು ಅರ್ಥವಾಗದೆ ಸುಮ್ಮನೇ ಕೊರಗಿದರೆ ಅದಕ್ಕೆ ನಾನು ಹೊಣೆಯಲ್ಲ.
‌ಡಾ.ಕೆ ನಾರಾಯಣ ಭಟ್ ಮತ್ತು ಡಾ.ಜಿಎನ್ ಭಟ್ ಬಿಟ್ಟು ಉಳಿದ ಉಪನ್ಯಾಸಕರಿಗೆ ನಾನು ನಾಗರಾಜ್ ಅವರು ನೀಡಿದ ಇಂಟರ್ನಲ್ ಮಾರ್ಕ್ಸ್ ಅನ್ನು ಪ್ರಶ್ನಿಸಿದ್ದು,ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ಬರಲು ನಾನು ಕಾರಣ ಎಂದು ಹೇಳಿದ್ದಕ್ಕೆ ಅವರ ಮೇಲೆ ಪ್ರಾಂಶುಪಾಲರಿಗೆ ದೂರು ಕೊಟ್ಟದ್ದು ಬಹಳ ಉದ್ಧಟತನ ಎನಿಸಿತ್ತು.ಹಾಗಾಗಿ ಎಂಎ  ಎರಡನೇ ವರ್ಷ ನನ್ನನ್ನು ಎಲ್ಲ ಪಠ್ಯೇತರ ಚಟುವಟಿಕೆಗಳಿಂದ ಹೊರಗಿಟ್ಟರು.ಎಂಎ ವಿದ್ಯಾರ್ಥಿಗಳಿಂದ ಒಂದು ಗಂಟೆಯ ರೇಡಿಯೋ ಪ್ರೋಗ್ರಾಂ ಕೊಟ್ಟಾಗ ಅದರಲ್ಲಿ ನಾನು ಬಿಟ್ಟು ಉಳಿದ ಎಲ್ಲರೂ ಇದ್ದರು. ಆಗ ನನಗೂ ತುಂಬಾ ಪಂಥ ಬಂತು.ನಾನು ಏಳನೇ ತರಗತಿಯಲ್ಲಿ ಇದ್ದಾಗ ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕ ರಚಿಸಿ ನಿರ್ದೇಶಿಸಿ ತಂಡ ಕಟ್ಟಿ ಅಭಿನಯಿಸಿ ಬಹುಮಾನ ಪಡೆದಿದ್ದೆ.ನಂತರ ಮೊದಲ ಬಿಎಸ್ಸಿ ಓದುತ್ತಿರುವಾಗ ಸುಮನ್ ಎಂಬ ನನ್ನ ಮೆಸ್ ಮೇಟ್ ಹುಡುಗಿಯ ಪ್ರೇರಣೆಯಿಂದ ನಾನು ಕಥೆ ಕವಿತೆಗಳನ್ನು ಬರೆಯುತ್ತಿದ್ದೆ.ಈಗ ನನ್ನನ್ನು ಬಿಟ್ಟು ಆಕಾಶವಾಣಿಗೆ ಇವರುಗಳು ಕಾರ್ಯಕ್ರಮ ಕೊಟ್ಟದ್ದು ನನಗೆ ಬರವಣಿಗೆಗೆ ಪ್ರೇರಣೆ ಆಯಿತು.ತಕ್ಷಣವೇ ಒಂದು ಕಥೆಯನ್ನು ಬರೆದು ಆಕಾಶವಾಣಿ ಮಂಗಳೂರಿಗೆ ಕಳುಹಿಸಿದೆ .ಒಂದು ವಾರದಲ್ಲೇ ನನಗೆ ಆಕಾಶವಾಣಿಯಿಂದ ಬರುವಂತೆ ಪತ್ರ ಬಂತು.ಹೋಗಿ ಓದಿದೆ.ಇವರು ನೀಡೀದ ಕಾರ್ಯ ಕ್ರಮ ಪ್ರಸಾರ ಆಗುವ ಮೊದಲು ನನ್ನ ಕಥೆ ಪ್ರಸಾರ ಆಯಿತು, ಇನ್ನೂರು ರು ದುಡ್ಡು ಕೂಡ ನನಗೆ ಸಿಕ್ಕಿತು. ಅಲ್ಲಿಂದ ತಿರುಗಿ ನೋಡಲೇ ಇಲ್ಲ, ನಿರಂತರ ಬರೆಯಲು ಶುರು ಮಾಡಿದೆ ಆಕಾಶವಾಣಿ  ಮಂಗಳೂರಿನಲ್ಲಿ ನನ್ನ ಅನೇಕ ಕಥೆಗಳು,ಭಾಷಣಗಳು ಪ್ರಸಾರವಾದವು .ಇವರುಗಳು ಉದ್ದೇಶ ಪೂರ್ವಕವಾಗಿ ಮಾಡಿದ ಅವಮಾನ ನನ್ನನ್ನು ಲೇಖಕಿಯಾಗಿ ಮಾಡಿತು ಇವಿಷ್ಟು ನಡೆದ ವಿಚಾರಗಳನ್ನು ಇದ್ದುದು ಇದ್ದ ಹಾಗೆ ಹೆಸರು ಹಾಕಿ ಬರೆದಿರುವೆ.ಬೇಕಾದರೆ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹೂಡಬಹುದು.ಅದರೆ ನನ್ನದಲ್ಲದ ತಪ್ಪಿಗೆ ನಾನು ಹೊಣೆಯಾಗಲಾರೆ ಖಂಡಿತಾ

https://shikshanaloka.blogspot.com/2019/04/5.html?m=1

ಮರುದಿವಸ ಎರಡು ಮೂರು ದಪ್ಪದ ಸ್ಯಾನಿಟರಿ ಪ್ಯಾಡ್ ಕಟ್ಟಿ ಕೊಡು ಕೆಂಪು ಡ್ರೆಸ್ ಹಾಕಿಕೊಂಡು ಪರೀಕ್ಷೆ ಬರೆಯಲು ಹೊರಟೆ.ಅಕಸ್ಮಾತ್  ಬ್ಲಡ್ ಲೀಕ್ ಆದರೆ ಪಕ್ಕನೆ ಗೊತ್ತಾಗದಿರಲಿ ಎಂದು ಕೆಂಪು ಚೂಡಿದಾರ್ ಹಾಕಿಕೊಂಡಿದ್ದೆ.
 ಒಂದೆಡೆ ತಡೆಯಲಾಗದ ಹೊಟ್ಟೆ ನೋವು, ಇನ್ನೊಂದೆಡೆ ತೀವ್ರ ರಕ್ತಸ್ರಾವ,  ಹೊಟ್ಟೆಯಲ್ಲಿದ್ದ ಕಂದನನ್ನು ಕಳೆದು ಕೊಂಡ ದುಃಖ, ಸುಸ್ತು  ಹೇಗೆ ಪರೀಕ್ಷೆ ಬರೆಯುವೆನೋ ಎಂದು ನನಗೂ ಗೊತ್ತಿರಲಿಲ್ಲ.. ಏನೋ ಒಂದು ಹುಚ್ಚು ಧೈರ್ಯ ಮಾಡಿ ಪರೀಕ್ಷೆಗೆ ಬರೆಯಲು ಬಂದಿದ್ದೆ..ಸುಸ್ತು ,ದುಃಖ ಆತಂಕದಿಂದ ಕೈಕಾಲುಗಳು ನಡುಗುತ್ತಿದ್ದವು
ಹೇಗೋ ಕಾಲಳೆದುಕೊಂಡು
ಪರೀಕ್ಷೆ ಹಾಲಿಗೆ ಹೋದೆ,ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕ ಮೇಲೆ ಜಗತ್ತನ್ನೇ ಮರೆತು ಉತ್ತರ ಬರೆದೆ.
ಪರೀಕ್ಷೆ ಮುಗಿಯುವಷ್ಟರಲ್ಲಿ ಬಟ್ಟೆ ಎಲ್ಲ ಒದ್ದೆಯಾಗಿ ಕೆಂಪಾಗಿತ್ತು.ಶಾಲು ಅಡ್ಡ ಹಾಕಿ ಹೇಗೋ ಹೊರಗೆ ಬಂದೆ.ಪ್ರಸಾದ್ ಕಾರಿನೊಂದಿಗೆ ಕಾಯುತ್ತಾ ಇದ್ದರು.ನೇರವಾಗಿ ಆಸ್ಪತ್ರೆಗೆ ಹೋಗಿ ದಾಖಲಾದೆ‌.D&Cಮಾಡಿದರು.ತುಂಬಾ ರಕ್ತ ಸ್ರಾವ ಅದ ಕಾರಣ ಬ್ಲಡ್ ಕೊಡಬೇಕಾಯಿತು ಅದೃಷ್ಟಕ್ಕೆ ನಂತರದ ಪರೀಕ್ಷೆಗೆ ಎರಡು ದಿನ ಸಮಯ ಇತ್ತು.
ಅಂತೂ ಇಂತೂ ಎಲ್ಲಾ ಪರೀಕ್ಷೆಗಳನ್ನು ತುಂಬಾ ಚೆನ್ನಾಗಿ ಬರೆದೆ.ಪರಿಶ್ರಮ ವ್ಯರ್ಥವಾಗಲಿಲ್ಲ.ಎರಡನೇ ವರ್ಷ ನನಗೆ ಇಂಟರ್ನಲ್ ಮಾರ್ಕ್ಸ್ ಇತರರಿಗಿಂತ ಕಡಿಮೆ ಕೊಟ್ಟಿದ್ದರು.ಆದರೂ ಎರಡನೇ ಸ್ಥಾನ ಪಡೆದ ಗಜಾನನ ಮರಾಠೆಗಿಂತ ಸುಮಾರು ಮೂವತ್ತು ಮಾರ್ಕ್ಸ್ ಹೆಚ್ಚು ಪಡೆದು ಫಸ್ಟ್‌ ರ‍್ಯಾಂಕ್ ಗಳಿಸಿದ್ದೆ.
ಇದಿಷ್ಟು ನಡೆದ ಘಟನೆ.ಮೊನ್ನೆ ಮಾತಾಡುವಾಗ ಕಮಲಾಯನಿಗೆ ಇಂಟರ್ನಲ್ ಮಾರ್ಕ್ಸ್ ತುಂಬಾ ಕಡಿಮೆ ಬಂದಿತ್ತು ಎಂದು ಹೇಳಿದರು.ಆಶ್ಚರ್ಯ ಆಯಿತು‌  ಮೊದಲ ವರ್ಷ ನನಗೆ ಹೈಯೆಸ್ಟ್ ಇಂಟರ್ನಲ್ ಮಾರ್ಕ್ಸ್ ಇದ್ದರೂ ಉಳಿದವರಿಗೆ ನನಗಿಂತ ಒಂದೆರಡು ಅಂಕಗಳು ಮಾತ್ರ ಕಡಿಮೆ ಬಂದಿದ್ದವು.ಕಮಲಾಯನಿಗೆ ತುಂಬಾ ಕಡಿಮೆ ಹೇಗೆ ಬಂತು? ನಂತರ ವಿಷಯ ತಿಳಿಯಿತು. ಅವರಿಗೇನೋ ಸಮಸ್ಯೆ ಆಗಿ ಅವರು ಮೊದಲ ವರ್ಷ ಮಧ್ಯವಾರ್ಷಿಕ ಅಥವಾ ಪೂರ್ವ ಸಿದ್ಧತಾ ಪರೀಕ್ಷೆ ಗಳಿಗೆ ಬಂದಿರಲಿಲ್ಲ ‌ಎಂಎ ಯಲ್ಲಿ ಪ್ರತಿ ವಿಷಯಕ್ಕೆ ಇಪ್ಪತ್ತು ಅಂಕಗಳು ಇಂಟರ್ನಲ್ ಮಾರ್ಕ್ಸ್ ಇರುತ್ತವೆ.ಅದರಲ್ಲಿ ಹತ್ತು ಅಂಕಗಳನ್ನು ಮಧ್ಯವಾರ್ಷಿಕ ಮತ್ತು ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ತೆಗೆದ ಅಂಕಗಳನ್ನು ಟೋಟಲ್ ಮಾಡಿ ಅದನ್ನು ಹತ್ತರಲ್ಲಿ ಮಾಡಿ ಕೊಡುತ್ತಾರೆ. ಉಳಿದ ಹತ್ತು ಅಂಕಗಳನ್ನು ಪ್ರಬಂಧ ಮಂಡನೆ ಮತ್ತು ಪಠ್ಯೇತರ ಚಟುವಟಿಗಳ ಆಧಾರದಲ್ಲಿ ಕೊಡುತ್ತಾರೆ.ಒಂದು ಪರೀಕ್ಷೆ ಗೆ ಹಾಜರಾಗದಿದ್ದರೆ ಐದು ಅಂಕಗಳು ಹೋಗುತ್ತವೆ.ಇನ್ನುಳಿದ ಐದು ಅಂಕ ಕೂಡ ಪೂರ್ಣವಾಗಿ ಸಿಗುವುದಿಲ್ಲ ಹಾಜರಾದ ಪರೀಕ್ಷೆ ಯಲ್ಲಿ ಅರುವತ್ತು ಶೇಕಡಾ ಅಂಕ‌ಇದ್ದರೆ ಆ ಐದರಲ್ಲಿ ಮೂರು ಅಂಕ ಮಾತ್ರ ಸಿಗುತ್ತದೆ.ಪ್ರಬಂಧ ಮಂಡನೆ ಮತ್ತು ಇತರ  ಪಠ್ಯೇತರ ಚಟುವಟಿಕೆಗಳಿಗೆ ಆರರಿಂದ ಎಂಟು ಅಂಕ ನೀಡುತ್ತಾರೆ‌ ಹೀಗೆ ಐದೂ ಪತ್ರಿಕೆಗಳಲ್ಲಿ ಐದು ಅಂಕಗಳು ಹೋದಾಗ ಇಪ್ಪತ್ತೈದು ಅಂಕಗಳು ಕಡಿಮೆ ಆಗುತ್ತವೆ.ಮೊದಲ ವರ್ಷ ಕಮಲಾಯನಿ ಮತ್ತು ಎರಡನೇ ವರ್ಷ ನೀತಾ ನಾಯಕ್ ಮಧ್ಯಾವಧಿ ಅಥವಾ ಪೂರ್ವ ಸಿದ್ದತಾ ಪರೀಕ್ಷೆಗಳಿಗೆ ಹಾಜರಾಗಿಲ್ಲ ಇದರಿಂದಾಗಿ ಅವರುಗಳಿಗೆ ಉಳಿದವರಿಗಿಂತ‌ ಇಪ್ಪತ್ತೈದು ಇಂಟರ್ನಲ್ ಮಾರ್ಕ್ಸ್ ಕಡಿಮೆ ಬಂದಿರಬಹುದು.
ಆದರೆ ಇದಕ್ಕೊಂದು ಪರಿಹಾರವಿದೆ .ಸಕಾರಣ ಕೊಟ್ಟು ಮರು ಪರೀಕ್ಷೆ ಮಾಡುವಂತೆ ವಿನಂತಿ ಮಾಡಿದರೆ ಮರು ಪರೀಕ್ಷೆ ಮಾಡುತ್ತಾರೆ‌.ಆಗ ಇತರರಷ್ಟೇ ಅಂಕಗಳು ಸಿಗುತ್ತವೆ. ನಾನು ಉಜಿರೆಯಲ್ಲಿ ಎರಡನೇ ವರ್ಷ ಬಿಎಸ್ಸಿ ಪದವಿ ಓದುತ್ತಿರುವಾಗ ನನಗೆ ಮದುವೆ ಆಯಿತು.ನನ್ನ ಮದುವೆ ಹಿಂದಿನ ದಿನ ತನಕ ಪ್ರಿಪರೇಟರಿ ಪರೀಕ್ಷೆಗಳು ನಡೆಯುತ್ತಿದ್ದವು .ಮದುವೆಯ ಹಿಂದಿನ ದಿನ ಇಂಗ್ಲಿಷ್ ಪರೀಕ್ಷೆ ಇತ್ತು.ಮದುವೆ ಹಿಂದಿನ ದಿನ ತನಕದ ಪರೀಕ್ಷೆಗಳನ್ನು ನಾನು ಬರೆದಿದ್ದೆ.ಮದುವೆ ಹಿಂದಿನ ದಿನ ಬೆಳಗ್ಗೆಯೇ ಊರಿಗೆ ಹೋಗುವುದು ಅನಿವಾರ್ಯವಗಿತ್ತು‌.ಉಜಿರೆಯಿಂದ ನಮ್ಮ ‌ಮನೆಗೆ ನಾಲ್ಕು ಗಂಟೆ ಪ್ರಯಾಣದ ದೂರವಿತ್ತು.ಹಾಗಾಗಿ ಆ ಪರೀಕ್ಷೆಯನ್ನು ಕೂಡ ಬರೆದು ಮತ್ತೆ ಊರಿಗೆ ಹೋಗಲು ಸಾಧ್ಯವಿರಲಿಲ್ಲ. ಅದ್ದರಿಂದ ನಾನು  ಎರಡು ದಿನ ಮೊದಲೇ ನಮ್ಮ ಇಂಗ್ಲಿಷ್ ಉಪನ್ಯಾಸಕರಾದ ವೆಂಕಪ್ಪಯ್ಯ ಅವರಿಗೆ ಮದುವೆ ಆಹ್ವಾನ ಪತ್ರಿಕೆ ಕೊಟ್ಟು ಮದುವೆಗೆ ಬನ್ನಿ ಎಂದು ಆಹ್ವಾನಿಸಿ,ನನಗೆ ಇಂಗ್ಲಿಷ್ ಪರೀಕ್ಷೆ ಬರೆಯಲು ಆಗುತ್ತಿಲ್ಲ,ಮದುವೆಯಾದ ನಂತರ ಕಾಲೇಜಿಗೆ ಬರುತ್ತೇನೆ ನಂತರ ನನಗೆ ಮರು ಪರೀಕ್ಷೆ ಮಾಡಿ ಎಂದು ವಿನಂತಿಸಿದ್ದೆ.ಆಯಿತಮ್ಮ ಹೋಗಿ ಬಾ ಶುಭವಾಗಲಿ ಎಂದು ಹಾರೈಸಿ ನನ್ನನ್ನು ಕಳುಹಿಸಿದ್ದರು.  ಮದುವೆ ಕಳೆದು ವಾರ ಬಿಟ್ಟು ಕಾಲಲೇಜಿಗೆ ಬಂದಾಗ ಮರು ಪರೀಕ್ಷೆ ಮಾಡಿದ್ದರು. ಇಲ್ಲಿ ಕೂಡ ಇವರಿಬ್ಬರೂ ನನ್ನಂತೆಯೇ ಸಕಾರಣ ನೀಡಿ ಮರು ಪರೀಕ್ಷೆ ಮಾಡುವಂತೆ ಡಾ.ಜಿ ಎನ್ ಭಟ್ ಅವರಲ್ಲಿ ವಿನಂತಿಸಿದ್ದರೆ ಅವರು ಖಂಡಿವಾಗಿಯೂ ಮರು ಪರೀಕ್ಷೆ ಮಾಡುತ್ತಿದ್ದರು ‌ಇವರುಗಳು ಈ ಬಗ್ಗೆ ನಾಗರಾಜ್ ಅವರಲ್ಲಿ ಮಾತನಾಡಿರಬೇಕು.ಆಗಷ್ಟೇ ಎಂಎ ಮುಗಿಸಿ ಅಲ್ಲಿಯೇ ಉಪನ್ಯಾಸಕರಾದ ಅವರಿಗೆ ಈ ಬಗ್ಗೆ  ಮಾಹಿತಿ ಇರಲಿಲ್ಲವೋ,ಅಥವಾ ಇವರುಗಳು ಸರಿಯಾದ ಕಾರಣ ಕೊಟ್ಟು ಪತ್ರ ಮೂಲಕ ವಿನಂತಿಸಿಲ್ಲವೋ ಏನೋ ನನಗೆ ಗೊತ್ತಿಲ್ಲ. ಇವರಿಬ್ಬರಿಗೆ ಇಂಟರ್ನಲ್ ಮಾರ್ಕ್ಸ್ ಕಡಿಮೆ ಬಂದದ್ದು ಹೌದು .ಆದರೆ ಅದಕ್ಕೆ ನಾನು ಕಾರಣ ಹೇಗಾಗುತ್ತೇನೆ ?  ಇದು ಯಾರಿಗಾದರೂ ಅರ್ಥ ಆಗುವ ವಿಚಾರ..ಆಗೇನೋ ಇವರುಗಳು ವಿದ್ಯಾರ್ಥಿಗಳು,  ಆ ಅನನುಭವಿ ಉಪನ್ಯಾಸಕರು  ತನ್ನ ತಪ್ಪನ್ನು ಮುಚ್ಚಿಡಲು ನನ್ನ ಮೇಲೆ ಹಾಕಿದ್ದು ಇವರಿಗೆ ಆಗ ಅರ್ಥ ಆಗಿರಲಾರದು ಸರಿ.ಈಗ ಶಿಕ್ಷಕಿಯಾಗಿ ಇರುವ ಇವರಿಗೆ ಅರ್ಥವಾಗದೆ ಇದ್ದರೆ ಹೇಗೆ? ಅವರಿಗೆ ಅಂಕ ಕಡಿಮೆ ಬರಲು ನಾನು ಕಾರಣ ಎಂದು ಇಂದಿಗೂ ನಂಬಿದರೆ ಹೇಗೆ? ಎಲ್ಲಾದರೂ ಓರ್ವ  ವಿದ್ಯಾರ್ಥಿಯ  ಮಾತಿನಂತೆ ಇತರರಿಗೆ ಅಂಕಗಳನ್ನು ಕೊಡುವ ಪದ್ಧತಿ ಇದೆಯಾ ? ಈಗಲಾದರೂ ಇದು ಅರ್ಥವಾಗದೆ ಸುಮ್ಮನೇ ಕೊರಗಿದರೆ ಅದಕ್ಕೆ ನಾನು ಹೊಣೆಯಲ್ಲ.
‌ಡಾ.ಕೆ ನಾರಾಯಣ ಭಟ್ ಮತ್ತು ಡಾ.ಜಿಎನ್ ಭಟ್ ಬಿಟ್ಟು ಉಳಿದ ಉಪನ್ಯಾಸಕರಿಗೆ ನಾನು ನಾಗರಾಜ್ ಅವರು ನೀಡಿದ ಇಂಟರ್ನಲ್ ಮಾರ್ಕ್ಸ್ ಅನ್ನು ಪ್ರಶ್ನಿಸಿದ್ದು,ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ಬರಲು ನಾನು ಕಾರಣ ಎಂದು ಹೇಳಿದ್ದಕ್ಕೆ ಅವರ ಮೇಲೆ ಪ್ರಾಂಶುಪಾಲರಿಗೆ ದೂರು ಕೊಟ್ಟದ್ದು ಬಹಳ ಉದ್ಧಟತನ ಎನಿಸಿತ್ತು.ಹಾಗಾಗಿ ಎಂಎ  ಎರಡನೇ ವರ್ಷ ನನ್ನನ್ನು ಎಲ್ಲ ಪಠ್ಯೇತರ ಚಟುವಟಿಕೆಗಳಿಂದ ಹೊರಗಿಟ್ಟರು.ಎಂಎ ವಿದ್ಯಾರ್ಥಿಗಳಿಂದ ಒಂದು ಗಂಟೆಯ ರೇಡಿಯೋ ಪ್ರೋಗ್ರಾಂ ಕೊಟ್ಟಾಗ ಅದರಲ್ಲಿ ನಾನು ಬಿಟ್ಟು ಉಳಿದ ಎಲ್ಲರೂ ಇದ್ದರು. ಆಗ ನನಗೂ ತುಂಬಾ ಪಂಥ ಬಂತು.ನಾನು ಏಳನೇ ತರಗತಿಯಲ್ಲಿ ಇದ್ದಾಗ ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕ ರಚಿಸಿ ನಿರ್ದೇಶಿಸಿ ತಂಡ ಕಟ್ಟಿ ಅಭಿನಯಿಸಿ ಬಹುಮಾನ ಪಡೆದಿದ್ದೆ.ನಂತರ ಮೊದಲ ಬಿಎಸ್ಸಿ ಓದುತ್ತಿರುವಾಗ ಸುಮನ್ ಎಂಬ ನನ್ನ ಮೆಸ್ ಮೇಟ್ ಹುಡುಗಿಯ ಪ್ರೇರಣೆಯಿಂದ ನಾನು ಕಥೆ ಕವಿತೆಗಳನ್ನು ಬರೆಯುತ್ತಿದ್ದೆ.ಈಗ ನನ್ನನ್ನು ಬಿಟ್ಟು ಆಕಾಶವಾಣಿಗೆ ಇವರುಗಳು ಕಾರ್ಯಕ್ರಮ ಕೊಟ್ಟದ್ದು ನನಗೆ ಬರವಣಿಗೆಗೆ ಪ್ರೇರಣೆ ಆಯಿತು.ತಕ್ಷಣವೇ ಒಂದು ಕಥೆಯನ್ನು ಬರೆದು ಆಕಾಶವಾಣಿ ಮಂಗಳೂರಿಗೆ ಕಳುಹಿಸಿದೆ .ಒಂದು ವಾರದಲ್ಲೇ ನನಗೆ ಆಕಾಶವಾಣಿಯಿಂದ ಬರುವಂತೆ ಪತ್ರ ಬಂತು.ಹೋಗಿ ಓದಿದೆ.ಇವರು ನೀಡೀದ ಕಾರ್ಯ ಕ್ರಮ ಪ್ರಸಾರ ಆಗುವ ಮೊದಲು ನನ್ನ ಕಥೆ ಪ್ರಸಾರ ಆಯಿತು, ಇನ್ನೂರು ರು ದುಡ್ಡು ಕೂಡ ನನಗೆ ಸಿಕ್ಕಿತು. ಅಲ್ಲಿಂದ ತಿರುಗಿ ನೋಡಲೇ ಇಲ್ಲ, ನಿರಂತರ ಬರೆಯಲು ಶುರು ಮಾಡಿದೆ ಆಕಾಶವಾಣಿ  ಮಂಗಳೂರಿನಲ್ಲಿ ನನ್ನ ಅನೇಕ ಕಥೆಗಳು,ಭಾಷಣಗಳು ಪ್ರಸಾರವಾದವು .ಇವರುಗಳು ಉದ್ದೇಶ ಪೂರ್ವಕವಾಗಿ ಮಾಡಿದ ಅವಮಾನ ನನ್ನನ್ನು ಲೇಖಕಿಯಾಗಿ ಮಾಡಿತು ಇವಿಷ್ಟು ನಡೆದ ವಿಚಾರಗಳನ್ನು ಇದ್ದುದು ಇದ್ದ ಹಾಗೆ ಹೆಸರು ಹಾಕಿ ಬರೆದಿರುವೆ.ಬೇಕಾದರೆ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹೂಡಬಹುದು.ಅದರೆ ನನ್ನದಲ್ಲದ ತಪ್ಪಿಗೆ ನಾನು ಹೊಣೆಯಾಗಲಾರೆ ಖಂಡಿತಾ

ನನ್ನೊಳಗೂ ಒಂದು ಆತ್ಮವಿದೆ

 ನನ್ನ ‌ಮೇಲೆ ಬೇಕಾದರೆ ಮಾನನಷ್ಟ ಮೊಕದ್ದಮೆ ಹೂಡಲಿ,_5

ನಾನು ಆತ್ಮಕಥೆ ಬರೆಯಬೇಕು,ಅದನ್ನು ನಾನು ನಿವೃತ್ತಿ ಹೊಂದುವ ದಿನ ಪ್ರಕಟಿಸಬೇಕು ಎಂದು ಕೂಡ ಆಲೋಚಿಸುತ್ತಾ ಇದ್ದೆ‌.ಆದರೆ ಬರೆಯಲು ಶುರು ಮಾಡಿರಲಿಲ್ಲ ‌ನನ್ನ ಅಮ್ಮ ಈಗಲೇ ಶುರು ಮಾಡು .ನೆನಪಾದದ್ದನ್ನು ಬರೆದಿಡುತ್ತಾ ಹೋಗು..ಅರುವತ್ತು ಆದಾಗ ಬರೆಯಹೊರಟರೆ ನೆನಪಾಗದಿದ್ದರೆ ಏನು ಮಾಡುತ್ತೀಯಾ " ಎಂದು ಆಗಾಗ ಬರೆಯಲು ಶುರು ಮಾಡು ಎಂದು ನೆನಪಿಸುತ್ತಾ ಇದ್ದರು.ಅಮ್ಮನ ಹತ್ತಿರ ಹ್ಹೂ ಅಂತ ಹೋಗುಟ್ಟುದು ಮತ್ತೆ ಅಲ್ಲೇ ಮರೆತು ಬಿಡುದು‌.ಮತ್ತೆ ಅಮ್ಮ ನೆನಪು ಮಾಡುದು ಹೀಗೆ ನಡೆಯುತ್ತಾ ಇತ್ತು.
ಎರಡು ಮೂರು ದಿನಗಳ ಹಿಂದೆ ನಾವು ಸಂಸ್ಕೃತ ಎಂಎ ಓದುವಾಗ ಇದ್ದ ಸಹಪಾಠಗಳನ್ನೆಲ್ಲ ಮನೆಗೆ ಕರೆದು ಒಂದು ದಿನ ಗಮ್ಮತ್ತಿನಿಂದ ಬಹಳ ಖುಷಿಯಿಂದ ಕಳೆಯಬೇಕೆಂದು ಕೊಂಡೆ‌.ಕಳೆದ ತಿಂಗಳು ನಮ್ಮ ಕಮರ್ಷಿಯಲ್ ಕಾಂಪ್ಲೆಕ್ಸ್ ಮತ್ತು ಮನೆ ಒಕ್ಕಲು ಬೇರೆ ಮುಹೂರ್ತ ಹತ್ತಿರದಲ್ಲಿ ಇಲ್ಲದ ಕಾರಣ  ತೀರಾ ಅರ್ಜೆಂಟಿನಲ್ಲಿ  ಫೆಬ್ರವರಿ ಹದಿನಾಲ್ಕಕ್ಕೆ ಇನ್ನೂ ಎಲ್ಲ ಮನೆ ಕೆಲಸ ಬಾಕಿ ಇರುವಂತೆಯೇ ಆಗಿತ್ತು.ಮುಂದೆ ಹಾಕುವ ಹಾಗಿರಲಿಲ್ಲ ಯಾಕೆಂದರೆ ತೀರಾ ಮುಂದೆ ತಗೊಂಡು ಹೋದರೆ ನನಗೆ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಅಂತಿಮ ಪರೀಕ್ಷೆ,ಮೌಲ್ಯ ಮಾಪನ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ,ಮೌಲ್ಯ ಮಾಪನ ಇಲೆಕ್ಷನ್ ಡ್ಯೂಟಿ ಎಲ್ಲ ಮುಗಿಯುವ ಹೊತ್ತಿಗೆ ಎಪ್ರಿಲ್ ಕಳೆದು ಬಿಡುತ್ತದೆ.ನಂತರ ಬೋರ್ ವೆಲ್ ನಲ್ಲಿ ನೀರು ಕಡಿಮೆ ಆಗಿ ಸಮಸ್ಯೆ ಆದರೆ ಎಂದು ಆತಂಕ. ಹಾಗಾಗಿ  ತೀರ ಅರ್ಜೆಂಟಿನಲ್ಲಿ ಮಾಡಿದ ಕಾರಣ ನನ್ನ ಹಳೆಯ ಸಹಪಾಠಿಗಳ ಪೋನ್ ನಂಬರ್ ಸಂಗ್ರಹಿಸಿ ಅವರನ್ನು ಸಂಪರ್ಕಿಸಿ ಮನೆ ಒಕ್ಕಲಿಗೆ ಆಹ್ವಾನಿಸಲಾಗಲಿಲ್ಲ.
ಈಗ. ಉಳಿದ. ಕೆಲಸಗಳು ಮುಗಿದಿವೆ.ಈ ಬಾರಿ ಇಲೆಕ್ಷನ್ ಡ್ಯೂಟಿ ತರಬೇತಿಗೆ ಬರಹೇಳಿದ್ದರೂ ಅಂತಿಮವಾಗಿ ಡ್ಯೂಟಿ ಹಾಕಿರಲಿಲ್ಲ .( ಸ್ವಲ್ಪ ಆರೋಗ್ಯ ಏರು ಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕಾರಣ ತರಬೇತಿಗೆ ನನಗೆ ಹಾಜರಾಗಲಿಲ್ಲ)
ಹಾಗಾಗಿ ಈಗ ಫ್ರೀ ಸಿಕ್ಕಿತ್ತು .ಹಾಗೆ ಹಳೆಯ ಸ್ನೇಹಿತರನ್ನು ಸಂಪರ್ಕಿಸಿ ನಮ್ಮ ಮನೆಗೆ ಬರಹೇಳಿ ಒಂದು ದಿನ ಅವರೊಂದಿಗೆ ಸಂತಸದಿಂದ ಕಳೆಯಬೇಕೆಂದು ಕೊಂಡಿದ್ದೆ .ಅದಕ್ಕಾಗಿ ಒಬ್ಬೊಬ್ಬರ ಫೋನ್ ನಂಬರ್ ಸಂಗ್ರಹಿಸುತ್ತಾ ಹೋದೆ.ಎಂಎ ಓದುವಾಗ ನನಗೆ ಪ್ರಿಯಳಾಗಿದ್ದ ವಿನುತಾರ ಫೋನ್ ನಂಬರ್ ಅನ್ನು ಮುರಳೀಧರ ಉಪಾಧ್ಯಾಯರ ಮೂಲಕ‌ ಪಡದೆ .
ವಿನತಾ ಹತ್ತಿರ ಮಾತನಾಡಿ ಅವರಿಂದ ಸಂಸ್ಕೃತ ಓದುತ್ತಿದ್ದಾಗ ನನಗೆ ತುಂಬಾ ಸ್ನೇಹಿತೆಯಾಗಿದ್ದ ಕಮಲಾಯನಿ ಫೋನ್ ನಂಬರ್ ಸಿಕ್ಕಿತು. ಅವರಿಗೆ ಫೋನ್ ಮಾಡಿ ಸುಮಾರು ಹೊತ್ತು ಮಾತನಾಡಿದೆ.ಕೊನೆಯಲ್ಲಿ ಅವರು " ನನಗೆ ಒಂದು ವಿಷಯ ಮಾತ್ರ ಮರೆಯಲು ಆಗುತ್ತಾ ಇಲ್ಲ..ನಿನ್ನಿಂದಾಗಿ ನನಗೆ ಎಂಎ ಯಲ್ಲಿ ಕಡಿಮೆ ಅಂಕಗಳು ಬಂದವು " ಎಂದು ಬಹಳ ನೋವಿನಿಂದ ಹೇಳಿದರು..ನನಗೆ ಆಶ್ಛರ್ಯ ಆಯಿತು..ನನ್ನಿಂದಾಗಿ ಅವರಿಗೆ ಕಡಿಮೆ ಅಂಕ ಬರಲು ಹೇಗೆ ಸಾಧ್ಯ ? ನಾನು ಮಾಡಿದ ನೋಟ್ಸ್ ಗಳನ್ನು ನಾನು ಯಾರು ಕೇಳಿದರೂ ಕೊಡುತ್ತಿದ್ದೆ.ಕಮಲಾಯನಿ ಸೇರಿದಂತೆ ಉಳಿದವರು ಕೂಡ ಅದನ್ನು ಕಾಪಿ ಮಾಡಿಕೊಳ್ಳುತ್ತಿದ್ದರು.ಮೊದಲ ವರ್ಷ ನಾನು ಕೂಡ ಬೇರೆಯವರು ಮಾಡಿದ ನೋಟ್ಸ್ ಗಳ ಸಹಾಯ ಪಡೆದಿದ್ದೆ.ಎರಡನೇ ವರ್ಷದ ಆರಂಭದಲ್ಲೇ  ಮೊದಲ ವರ್ಷದ ಫಲಿತಾಂಶ ಬಂದ ದಿನ ನಮ್ಮಲ್ಲಿ ಸಣ್ಣ ವಿವಾದ ಉಂಟಾಗಿತ್ತು.
ಮೊದಲ ವರ್ಷದ  ಪಾಠ ಪ್ರವಚನಗಳು ಮುಗಿದು ನಮಗೆ ರಿವಿಜನಲ್ ಹಾಲಿಡೇಸ್ ಕೊಟ್ಟಿದ್ದರು‌.ನಾನು ವೇದಾಂತವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದು ಆ ಬಗ್ಗೆ ಕೆಲವು ಸಂಶಯ ಉಂಟಾಗಿ ನಮಗೆ ವೇದಾಂತ ಪಾಠ ಮಾಡಿದ ಡಾ.ಕೆ ನಾರಾಯಣ ಭಟ್ ಅವರನ್ನು ಕಾಣಲು ಕಾಲೇಜಿಗೆ ಹೋದೆ.ಅವರು ಸ್ಟಾಫ್ ರೂಮಿನಲ್ಲಿ ಇದ್ದರು‌.ಇನ್ನೋರ್ವ ಉಪನ್ಯಾಸಕರಾದ ನಾಗರಾಜ ಭಟ್ ಕೂಡ ಅಲ್ಲಿಯೇ ಇದ್ದರು‌.ನಾನು  ಡಾ.ಕೆ ನಾರಾಯಣ ಭಟ್ಟರಲ್ಲಿ ಒಳಗೆ ಬರಬಹುದೇ ಎಂದು ಅನುಮತಿ ಕೇಳಿ,ಅವರು ಒಳಗೆ ಬರುವಂತೆ ಸೂಚಿಸಿದ ಮೇಲೆ ಒಳಗೆ ಹೋಗಿದ್ದೆ‌.ನನಗೆ ಉಂಟಾದ ಸಂಶಯ,ಅರ್ಥವಾಗದ ಭಾಗಗಳನ್ನು ಕೇಳಿದೆ‌.ಅವರು ಬಹಳ ತಾಳ್ಮೆಯಿಂದ ನನಗೆ ಅದನ್ನು ಹೇಳಿ ಕೊಡುತ್ತಾ ಇದ್ದರು.ಇದರ ನಡುವೆ ಅಲ್ಲಿಯೇ ಕುಳಿತಿದ್ದ ನಾಗರಾಜ ಎಂಬ ಉಪನ್ಯಾಸಕರು ಅವಿನಾಶ್ ಗೆ ತೊಂಬತ್ತು, ಗಜಾನನ ಮರಾಠೆಗೆ ಎಂಬತ್ತೈದು ,ರಮೇಶ್ ಗೆ ಎಂಬತ್ತು..ಇತ್ಯಾದಿಯಾಗಿ ಕೆಲವು ವಿದ್ಯಾರ್ಥಿಗಳಿಗೆ ಇಷ್ಟು ಅಂತರ್ ಮೌಲ್ಯ ಮಾಪನ ಅಂಕಗಳನ್ನು ನೀಡಿದ ಬಗ್ಗೆ ಡಾ.ಕೆ ನಾರಾಯಣ ಭಟ್ಟರಲ್ಲಿ ಹೇಳಿದರು.ಹುಡುಗಿಯರಿಗೆ ಕೊಟ್ಟ ಅಂಕಗಳ ಬಗ್ಗೆ ಇನ್ನೂ ಹೇಳಿರಲಿಲ್ಲ‌.ನನ್ನನ್ನು ನೋಡುತ್ತಾ ಲಕ್ಷ್ಮೀ ಗೆ ಎಪ್ಪತ್ತೆರಡು ಎಂದು ಹೇಳಿದರು. ಆಗ ನನಗೆ ತುಂಬಾ ಶಾಕ್ ಆಯ್ತು‌. ಕಿರು ಪರೀಕ್ಷೆ,ಮಧ್ಯವಾರ್ಷಿಕ ಪರೀಕ್ಷೆ, ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ಹೆಚ್ಚು ಕಡಿಮೆ ಎಲ್ಲಾ ವಿಷಯಗಳಲ್ಲೂ ನಾನು ಟಾಪರ್ ಆಗಿದ್ದೆ.ಸೆಮಿನಾರ್ ಗಳಲ್ಲಿ ಕೂಡ ನನ್ನ ಪ್ರಬಂಧ ಮಂಡನೆ ಬಗ್ಗೆ ಉಪನ್ಯಾಸಕರು ಗುಡ್ ಎಂದು ಹೇಳಿ ಮೆಚ್ಚುಗೆ ಸೂಸಿದ್ದರು.ಹಾಗಿದ್ದರೂ ನನಗೇಕೆ ಉಳಿದವರಿಗಿಂತ ಕಡಿಮೆ ಅಂಕಗಳು. ನನ್ನ ಆತಂಕವನ್ನು ಗಮನಿಸಿದ ಡಾ.ಕೆ ನಾರಾಯಣ ಭಟ್ ಅವರು
ಲಕ್ಷ್ಮೀ ಗೆ ಯಾಕೆ ಅಷ್ಟು ಕಡಿಮೆ ಅಂಕಗಳು ಬಂದಿವೆ ,ಅವಳು ಪರೀಕ್ಷೆಗಳಲ್ಲಿ ,ಸೆಮಿನಾರ್ ಹಾಗೂ ಇತರ ನಾಟಕ ಭಾಷಣ ಮೊದಲಾದುದರಲ್ಲಿ ಕೂಡ ಮುಂದೆ ಇದ್ದಾಳಲ್ಲ ? ಎಂದು ಕೇಳಿದರು.ಅವಳು ಹೇಗೂ ಥಿಯರಿಯಲ್ಲಿ ಸ್ಕೋರ್ ಮಾಡುತ್ತಾಳೆ..ಇಂಟರ್ನಲ್ ಮಾರ್ಕ್ಸ್ ಕೊಡುವುದು  ಬಿಡುವುದು ನಮ್ಮ ಇಷ್ಟ ಅಲ್ವಾ ಎಂದವರು ಹೇಳಿದರು. ಆಗ ನಾನು ಅದೇಗೆ  ನಿಮ್ಮ ಇಷ್ಟ  ಆಗುತ್ತೆ ,ಮಿಡ್ ಟರ್ಮ್ ಮತ್ತು ಪ್ರಿಪರೇಟರಿ ಪರೀಕ್ಷೆಗಳಲ್ಲಿ  ನಾವು ತೆಗೆದ ಅಂಕಗಳು ,ಸೆಮಿನಾರ್ ಹಾಗೂ ಇತರ ಪಠ್ಯೇತರ ಚಟುವಟಿಗಳನ್ನು ಆಧರಿಸಿ ಕೊಡಬೇಕಲ್ಲ ? ಎಂದು ಕೇಳಿದೆ.ಬಹುಶಃ ಆತಂಕದಿಂದ ನನ್ನ ಧ್ವನಿ ಏರಿರಬಹುದೋ ಏನೋ ಗೊತ್ತಿಲ್ಲ ‌.ಸಣ್ಣ ವಯಸ್ಸಿನಲ್ಲಿ ನನಗೆ ಸ್ವಲ್ಪ ಶೀಘ್ರ ಕೋಪದ ಸ್ವಭಾವ ಇತ್ತು ಕೂಡ. ಆದರೆ ಶಾಲಾ ಕಾಲೇಜುಗಳಲ್ಲಿ ನಾನು ಅತ್ಯುತ್ಸಾಹದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ಇದ್ದ ವಿಧೇಯ ವಿದ್ಯಾರ್ಥಿನಿ ಆಗಿದ್ದೆ.ನಾನೆಂದೂ ಉಡಾಫೆ ವರ್ತನೆ ತೋರಿರಲಿಲ್ಲ ,ಆಗ ಕೂಡ ನಾನು ಅಷ್ಟೇ ಕೇಳಿದ್ದು.ಅಷ್ಟಕ್ಕೇ ಅವರು ನನಗೆ ಗೆಟೌಟ್ ಫ್ರಂ್ ಹಿಯರ್  ,ಇಂಟರ್ನಲ್ ಮಾರ್ಕ್ಸ್ ಬಗ್ಗೆ ಚರ್ಚಿಸುತ್ತಿರುವಾಗ ನೀನು ಬಂದದ್ದೇಕೆ ? ಎಂದು ಬಹಳ ಕೆಟ್ಟದಾಗಿ ಬೈದರು‌.ಆಗ ನಾನು ಡಾ.ಕೆ ನಾರಾಯಣ ಭಟ್ ಅವರ ಅನುಮತಿ ಕೇಳಿ ಒಳಗೆ ಬಂದಿದ್ದೆ..ಗೆಟೌಟ್ ಹೇಳಲು ನಿಮಗೇನು ಹಕ್ಕಿದೆ ಎಂದು ಹೇಳಿ ನೇರವಾಗಿ ಪ್ರಿನ್ಸಿಪಾಲ್ ಡಾ.ಜಿ ಎನ್ ಭಟ್ ಅವರಲ್ಲಿ ನಾಗರಾಜ ಅವರು ನನಗೆ ಅವಮಾನಿಸಿ ಮಾತನಾಡಿದ್ದನ್ನು ಮತ್ತು ಕಡಿಮೆ ಇಂಟರ್ನಲ್ ಮಾರ್ಕ್ಸ್ ಕೊಟ್ಟದ್ದನ್ನು ತಿಳಿಸಿದೆ.ಆಯಿತು ಈ ಬಗ್ಗೆ ನಾನು ವಿಚಾರಿಸುತ್ತೇನೆ.ಯುನಿವರ್ಸಿಟಿ ನಿಯಮದ ಪ್ರಕಾರ ಎಲ್ಲರಿಗೂ ಇಂಟರ್ನಲ್ ಮಾರ್ಕ್ಸ್ ಬರುತ್ತವೆ‌.ಇಷ್ಟು ಸಣ್ಣ ವಿಷಯಕ್ಕೆಲ್ಲ ಅಪ್ಸೆಟ್ ಆಗಬಾರದು ..ಹೋಗಿ ಓದಿಕೋ ಎಂದು ಹೇಳಿ ನನ್ನನ್ನು ಸಮಾಧಾನ ಮಾಡಿ ಕಳುಹಿಸಿದರು.ಅವರ ಮೇಲೆ ನನಗೆ ತುಂಬಾ ಗೌರವ ನಂಬಿಕೆ ಇತ್ತು.ಹಾಗಾಗಿ ಮನೆಗೆ ಹೋಗಿ ನೆಮ್ಮದಿಯಿಂದ ಓದಲು ಶುರು ಮಾಡಿದೆ.ಚೆನ್ನಾಗಿ ಓದಿದೆ ಕೂಡ. ದುರದೃಷ್ಟ ಏನೆಂದರೆ ಪ್ರಥಮ ಪಿಯುಸಿ ಅಂತಿಮ ಪರೀಕ್ಷೆಯ ಹಿಂದಿನ ಎರಡು ದಿನಗಳಿಂದ  ಮಲೇರಿಯಾ ಆಗಿ ತೀವ್ರ ಜ್ವರ.ಆಗ ಕಟೀಲಿನಲ್ಲಿ ಇದ್ದ ಡಾಕ್ಟರ್ ಶಶಿಕುಮಾರ್( ಹೆಸರು ಸರಿಯಾಗಿ ನೆನಪಿಲ್ಲ) ಬಳಿಗೆ ಹೋದೆ .ಅವರು ಸೂಕ್ತ ಚಿಕಿತ್ಸೆ ನೀಡಿದರಾದರೂ ತಕ್ಷಣವೇ ಗುಣವಾಗುವ ಖಾಯಿಲೆ ಇದಲ್ಲ..ಮಂಗಳೂರಿನ ಆಸ್ಪತ್ರೆಗೆ ದಾಖಲಾಗುವುದು ಒಳ್ಳೆಯದು ಎಂದು ಹೇಳಿದರು.ಆಸ್ಪತ್ರೆಗೆ ದಾಖಲಾಗುವಷ್ಟು ದುಡ್ಡು ನಮ್ಮ ಹತ್ತಿರ ಇರಲಿಲ್ಲ ಜೊತೆಗೆ ಅಂತಿಮ ಪರೀಕ್ಷೆ ತಪ್ಪಿಸಿಕೊಂಡರೆ  ನನಗೆ ರ‍್ಯಾಂಕ್ ಬರುವ ಸಾಧ್ಯತೆ ಇರಲಿಲ್ಲ. ನಾನು ಮೊದಲ ರ‍್ಯಾಂಕ್ ತೆಗೆಯಬೇಕೆಂದು ತುಂಬಾ ಕಷ್ಟ ಪಟ್ಟು ಓದಿದ್ದೆ.
ಹಾಗಾಗಿ ಔಷಧ ತೆಗೆದುಕೊಂಡು ಪರೀಕ್ಷೆಗೆ ಹಾಜರಾದೆ.ಅದೃಷ್ಟವಶಾತ್ ಪರೀಕ್ಷೆ ಹಾಲಿನಲ್ಲಿ ‌ಮಲೇರಿಯಾದ ತೀವ್ರ ನಡುಕ ಕಾಣಿಸಿಕೊಳ್ಳಲಿಲ್ಲ.
ಪರೀಕ್ಷೆ ಮುಗಿಸಿ ಮನೆಗೆ ಹೋಗುವ ದಾರಿಯಲ್ಲಿ ತೀವ್ರ ನಡುಕ ಬಂದಿತ್ತು.ಸಾಮಾನ್ಯವಾಗಿ ‌ಮಲೇರಿಯ ಬಂದಾಗ ನಿಯಮಿತ ಸಮಯದಲ್ಲಿ ತೀವ್ರವಾದ ನಡುಕ ಉಂಟಾಗುತ್ತದೆ‌.ಮಲೇರಿಯಾ ನಿಯಂತ್ರಣಕ್ಕೆ ಬರುವ ತನಕ ಅದು ಮುಂದುವರಿಯುತ್ತದೆ.  ಮಲೇರಿಯಾಕ್ಕೆ ಕೊಡುವ ಔಷಧ ಲಿವರಿಗೆ ತೊಂದರೆ ಮಾಡುತ್ತದೆ‌ ಇದರಿಂದಾಗಿ ತುಂಬಾ ವಾಂತಿ ,ನಿಶಕ್ತಿ ಕಾಡುತ್ತದೆ ಜೊತೆಗೆ ನಡುಕದ ಪರಿಣಾಮವಾಗಿ   ತುಂಬಾ ಮೈ ಕೈ ನೋವು  .ಅಂತೂ ಮಲೇರಿಯಾ ಜೊತೆ ಸೆಣಸುತ್ತಲೇ ಪರೀಕ್ಷೆ ಎದುರಿಸಿದೆ‌.
ಮತ್ತೆ ಸ್ವಲ್ಪ ಸಮಯ ರಜೆ ಇತ್ತು..ಪ್ರಸಾದರಿಗೆ ಮಣಿಪಾಲ್ ಫೈನಾನ್ಸ್ ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಸಿಕ್ಕಿತು.. ನಮ್ಮ ಆರ್ಥಿಕ ಪರಿಸ್ಥಿತಿ ಸ್ವಲ್ಪ ಸುಧಾರಿಸಿತು‌‌. ನನ್ನ ಸೋದರಮಾವನ ವರಸೆಯ ರಾಮಣ್ಣು ಮಾವ ಅವರ ಪರಿಚಯದ ವಿಜಯಾ ಪೆನ್ ಮಾರ್ಟಿನ ಶ್ಯಾಮಣ್ಣ ಅವರಲ್ಲಿ ಮಾತಾಡಿ ಮಂಗಳೂರಿನಲ್ಲಿ ಸ್ವಲ್ಪ ಬಾಡಿಗೆ ಕಡಿಮೆ ಮಾಡಿಸಿ ಅವರ ಭಾವ ಮೈದನನ ಸುಸಜ್ಜಿತ ‌ಮನೆಯನ್ನು ನಮಗೆ ಬಾಡಿಗೆಗೆ ಕೊಡಿಸಿದರು ‌ ನಾವು ಎಕ್ಕಾರಿನ ಮೋಟು ಗೋಡೆಯ ಮಣ್ಣಿನ ಮನೆಯನ್ನು ಖಾಲಿ ಮಾಡಿ  ಕಷ್ಟಕಾಲದಲ್ಲಿ ನಮಗೆ ಆಶ್ರಯ ಕೊಟ್ಟ ಎಕ್ಕಾರಿನ ನಾಗವೇಣಿ ಅಮ್ಮ ಹಾಗೂ ಎಕ್ಕಾರಿನ ಕೊಂಕಣಿ ಅಜ್ಜನಿಗೆ ಧನ್ಯವಾದ ಹೇಳಿ ನಮಸ್ಕರಿಸಿ ಮಂಗಳೂರಿನ ವಿಜಯ ನಿವಾಸಕ್ಕೆ ಬಂದೆವು.ಇದು ಬಹಳ ಅದೃಷ್ಟ ಕೊಡುವ ಮನೆ ಎಂದು ಮನೆಯ ಓನರ್ ನ ತಮ್ಮನ ಮಡದಿ ಶೈಲಜಾ ನನಗೆ ಹೇಳಿದ್ದರು.ನಂತರ ನನಗೆ ಶೈಲಜಾ ತುಂಬಾ ಆತ್ಮೀಯರಾದರು‌

ಇತ್ತ ರಜೆ ಮುಗಿದು ಮತ್ತೆ ಕಾಲೇಜು ಶುರು ಆಯಿತು. ನಾವೆಲ್ಲ ಮೊದಲನೇ ವರ್ಷ ಎಂಎ ಇಂದ ಎರಡನೇ ವರ್ಷಕ್ಕೆ ಕಾಲಿಟ್ಟೆವು.ಇಲ್ಲಿ ಓದುತ್ತಾ ಇದ್ದ ನಾವೆಲ್ಲರೂ ಒಂದೇ ದೋಣಿಯ ಪಯಣಿಗರಾಗಿದ್ದೆವು.ಯಾರೂ ಕೂಡ ಶ್ರೀಮಂತರಾಗಿರಲಿಲ್ಲ‌..ನಾನಂತೂ ಮೊದಲ ವರ್ಷ ಎರಡು ಚೂಡಿದಾರ್ ,ಒಂದು ಸೀರೆಯಲ್ಲಿ ಕಳೆದಿದ್ದೆ.ಹೆಚ್ಚು ಕಡಿಮೆ ಎಲ್ಲರದೂ ನನ್ನದೇ ಪರಿಸ್ಥಿತಿ
ಒಂದು ಜೊತೆ ಚಪ್ಪಲಿ ಇಡೀವರ್ಷ ಬರುವಂತೆ ಜತನ ಮಾಡುತ್ತಿದ್ದೆವು.ಅದು ತುಂಡು ತುಂಡಾಗಿ ಹೊಲಿಗೆ ಹಾಕಿ ಹಾಕಿ ಇನ್ನು ಹೊಲಿಗೆ ಹಾಕಿ ಬಳಸಲು ಅಸಾಧ್ಯ ಎಂದಾದ ಮೇಲೂ ಅದನ್ನು ಎಳೆದು ಕೊಂಡು ಒಂದೆರಡು ವಾರ ನಡೆದೇ ಇನ್ನೊಂದು ಜೊತೆ ತೆಗೆದುಕೊಳ್ಳುತ್ತಿದ್ದೆವು‌.ಎಲ್ಲರೂ ಒಳ್ಳೆಯ ಅಂಕ ತೆಗೆದು ಒಳ್ಳೆಯ ಕೆಲಸ ಹಿಡಿಯಬೇಕೆಂಬ ಉದ್ದೇಶದಿಂದಲೇ ಓದಲು ಬಂದಿದ್ದೆವು.
ಎರಡನೇ ವರ್ಷದ ಪಾಠ ಪ್ರವಚನಗಳು ಆರಂಭವಾಗಿ ಒಂದು ತಿಂಗಳು ಕಳೆಯುವಷ್ಟರಲ್ಲಿ ನಮ್ಮ ಮೊದಲ ವರ್ಷದ ಫಲಿತಾಂಶ ಬಂತು..
ಯಾರಿಗೂ ಹೇಳುವಂತಹ ಒಳ್ಳೆಯ ಅಂಕಗಳು ಬಂದಿರಲಿಲ್ಲ ‌..ಅಳಿದೂರಲ್ಲಿ ಉಳಿದವನೇ ರಾಜ ಎಂಬಂತೆ ನಾನು ಮೊದಲ ಸ್ಥಾನ ಪಡೆದಿದ್ದೆ.ಅವಿನಾಶ್ ಎರಡನೇ ಸ್ಥಾನವನ್ನು ಪಡೆದಿದ್ದರು‌ ನನಗೂ ಅವರಿಗೂ ಆರೇಳು ಅಂಕಗಳ ಅಂತರ ಇತ್ತು‌.
ನನಗೆ 416/600 ಅಂಕಗಳು ಬಂದಿದ್ದವು.ಡಿಸ್ಟಿಂಕ್ಷನ್ ಗೆ ಇನ್ನೂ ನಾಲ್ಕು ಅಂಕಗಳು ಬೇಕಾಗಿದ್ದವು.ನಮಗೆಲ್ಲ ನಿರೀಕ್ಷೆಗಿಂತ ಕಡಿಮೆ  ಇಂಟರ್ನಲ್ ಮಾರ್ಕ್ಸ್ ಬಂದಿತ್ತು
. ನಮ್ಮ ಸೀನಿಯರ್ ಗಳಿಗೆ ನಮಗಿಂತ ಹೆಚ್ಚು ಅಂಕಗಳು ಬಂದಿದ್ದವು ಮತ್ತು ಅವರಿಗೆ ಇಂಟರ್ನಲ್ ಮಾರ್ಕ್ಸ್ ತುಂಬಾ ಜಾಸ್ತಿ ಕೊಟ್ಟಿದ್ದರು.ಅವರು ನಿಜವಾಗಿಯೂ ಅಷ್ಟು ಅಂಕಗಳನ್ನು ತೆಗೆಯುವಷ್ಟು ಜಾಣರಾಗಿದ್ದರೋ ಅಥವಾ ಒಳ್ಳೆಯ ಅಂಕಗಳು ಬರಲಿ ಎಂದು ನಿಯಮ ಮೀರಿ ಅವರಿಗೆ ಹೆಚ್ಚು ಇಂಟರ್ನಲ್ ಮಾರ್ಕ್ಸ್ ಕೊಟ್ಟಿದ್ದರೋ ಏನೋ ನಮಗೆ ಗೊತ್ತಿಲ್ಲ.
ನಾನು ಅಲ್ಲಿ ಸಂಸ್ಕೃತ ಎಂಎ ಗೆ ಸೇರುವಾಗ ಅಲ್ಲಿ ಸಂಸ್ಕೃತ ಕಾಲೇಜು ಶುರುವಾಗಿ ಎರಡು  ವರ್ಷ ಕಳೆದು ಮೂರನೇ ವರ್ಷಕ್ಕೆ ಕಾಲಿಟ್ಟಿತ್ತು ಅಷ್ಟೇ, ನಮ್ಮದು ಮೂರನೆಯ ಬ್ಯಾಚ್.ನಮಗಿಂತ ಮೊದಲು ಎರಡು ಬ್ಯಾಚ್ ಗಳು ಆಗಿದ್ದವು.ನಾನು ಸೇರುವಾಗ ಎರಡನೇ ಬ್ಯಾಚಿನ ಐದು ಜನ  ಎಂಎ ಎರಡನೇ ವರ್ಷದಲ್ಲಿ ಓದುತ್ತಾ ಇದ್ದರು‌.ಮೊದಲ ಬ್ಯಾಚಿನ ನಾಲ್ಕು ಜನರ ಎಂಎ ಓದು ಆಗಷ್ಟೇ ಮುಗಿದು ಫಲಿತಾಂಶ ಬರುವ ಮೊದಲೇ ಅವರಲ್ಲಿ ಇಬ್ಬರು  ಪದ್ಮನಾಭ ಮರಾಠೆ ಮತ್ತು ನಾಗರಾಜ್  ಅವರು ಅಲ್ಲಿಯೇ ಉಪನ್ಯಾಸಕರಾಗಿ ಸೇರಿಕೊಂಡಿದ್ದು ನಮಗೆ ಉಪನ್ಯಾಸಕರಾಗಿದ್ದರು‌.ಅದು ಅವರುಗಳ ಉಪನ್ಯಾಸ ವೃತ್ತಿಯ ಆರಂಭ ಆಗಿತ್ತು‌.ಆಗಷ್ಟೇ ಎಂಎ ಮುಗಿಸಿ ಉಪನ್ಯಾಸಕರಾದ  ಅವರಿಗೆ  ವೃತ್ತಿ ಅನುಭವ ಇರಲಿಲ್ಲ.
ಇರಲಿ..ಮೊದಲ ಎರಡು ಬ್ಯಾಚಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಇಂಟರ್ನಲ್ ಮಾರ್ಕ್ಸ್ ಕೊಟ್ಟಿದ್ದು ನಮಗೆ ಕೊಟ್ಟಿಲ್ಲ ಅದರಿಂದಾಗಿ ನಮಗೆ ಕಡಿಮೆ ಅಂಕಗಳು ಬಂತು ಎಂದು ನಾಗರಾಜ್ ಅವರು ತರಗತಿಗೆ ಬಂದಾಗ ವಿದ್ಯಾರ್ಥಿಗಳೆಲ್ಲ ಗಲಾಟೆ ಮಾಡಿದರು..ಯಾಕೆಂದರೆ ಇಂಟರ್ನಲ್ ಮಾರ್ಕ್ಸ್ ಅವರು ಕೊಟ್ಟಿರ ಬೇಕು ಎಂದು ವಿದ್ಯಾರ್ಥಿಗಳು ಭಾವಿಸಿದ್ದರು‌‌.ನನಗೆ ನೂರರಲ್ಲಿ ಎಪ್ಪತ್ತೆರಡು ಅಂಕಗಳು ಇಂಟರ್ನಲ್ ಮಾರ್ಕ್ಸ್ ಬಂದಿತ್ತು.ಉಳಿದವರಿಗೆ ನನಗಿಂತ ಒಂದೆರೆಡು ಅಂಕಗಳು ಕಡಿಮೆ ಬಂದಿದ್ದವು‌.ಅದರಲ್ಲಿ ವಿಶೇಷ ಏನೂ ಇಲ್ಲ ಯಾಕೆಂದರೆ ತರಗತಿ ಪರೀಕ್ಷೆ, ಮಧ್ಯಾವಧಿ ಪರೀಕ್ಷೆ ,ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ,ಪ್ರಬಂಧ ಮಂಡನೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ನಾನು ಇತರರಿಗಿಂತ ಮುಂದೆ ಇದ್ದೆ.
ನಮಗೆ ಇಂಟರ್ನಲ್ ಮಾರ್ಕ್ಸ್ ಕಡಿಮೆ ಕೊಟ್ಟ ಕಾರಣ ನಮಗ್ಯಾರಿಗೂ ಒಳ್ಳೆಯ ಅಂಕ ಬರಲಿಲ್ಲ ಎಂದು ವಿದ್ಯಾರ್ಥಿಗಳು ನಣಗರಾಜ್ ಅವರಲ್ಲಿ ಆಕ್ಷೇಪ ಮಾಡಿದಾಗ ಅದೆಲ್ಲ ಲಕ್ಷ್ಮೀ ಯ ಅಧಿಕ ಪ್ರಸಂಗದಿಂದ ಆದದ್ದು ಎಂದು  ಉಪನ್ಯಾಸಕರಾದ ನಾಗರಾಜ್ ಅವರು ಹೇಳಿದರು.ನಾನೇನು ಮಾಡಿದ್ದೇನೆ..ಎಲ್ಲಾ ಪರೀಕ್ಷೆ ಗಳಲ್ಲೂ ಹೈಯೆಸ್ಟ್ ಸ್ಕೋರ್ ಮಾಡಿರುವ ನನಗೆ ಉಳಿದವರಿಗಿಂತ ತುಂಬಾ ಕಡಿಮೆ ಯಾಕೆ ಕೊಟ್ಟಿದ್ದೀರಿ ಎಂದು ಕೇಳಿದ್ದು ತಪ್ಪಾ ಎಂದು ಕೇಳಿದೆ ‌ಆಗ ವಿದ್ಯಾರ್ಥಿ ಗಳಲ್ಲಿ ಒಬ್ಬ( ಬಹುಶಃ ಗಜಾನನ ಮರಾಠೆ)
ಕಳ್ಳ ತಾನು ಕಳ್ಳತನ ಮಾಡಿದ್ದನ್ನು ಒಪ್ಪಿಕೊಳ್ಳುತ್ತಾನಾ ? ಎಂದು ನನ್ನನ್ನು ದೂಷಿಸಿ ಮಾತನಾಡಿದರು.ವಿದ್ಯಾರ್ಥಿಗಳೆಲ್ಲ ನನಗೆ ತಾಗುವಂತೆ ಹಂಗಿಸಿ ಮಾತನಾಡತೊಡಗಿದರು.ಆಗ ನಾನು ನಾಗಾರಾಜ್ ಅವರಲ್ಲಿ ಎರಡು ನಿಮಿಷ ಹೊರಗೆ ಹೋಗಿ ಬರಲು ಅನುಮತಿ ಕೇಳಿ ಹೊರಗೆ ಹೋದೆ.ಪ್ರಿನ್ಸಿಪಾಲ್ ಡಾ.ಕೆ ಜಿ ಎನ್ ಭಟ್ಟರಲ್ಲಿ‌ ಮತ್ತೆ ನಾಗರಾಜ್ ಅವರು " ನಮಗೆ ಇಂಟರ್ನಲ್ ಮಾರ್ಕ್ಸ್ ಕಡಿಮೆ ಕೊಟ್ಟದ್ದಕ್ಕೆ ಲಕ್ಷ್ಮೀ ಯವರ ಅಧಿಕ ಪ್ರಸಂಗ ಕಾರಣ ಎಂದು ನನಗೆ ಅವಮಾನಿಸಿದ್ದಾರೆ.ಇಂಟರ್ನಲ್ ಮಾರ್ಕ್ಸ್ ಕೊಡಲು ಯುನಿವರ್ಸಿಟಿ ಸೂಚಿಸಿದ ಗೈಡ್ ಲೈನ್ ಗಳು‌ಇವೆಯಲ್ಲ ಸರ್ ಅದರ ಪ್ರಕಾರ ತಾನೇ ಕೊಡಬೇಕು.. ನನಗೆ ಬರಬೇಕಾದಷ್ಟೇ ಅಂಕಗಳು ಬಂದಿವೆ .ಉಳಿದವರು ತರಗತಿ ಪರೀಕ್ಷೆ, ಮಧ್ಯಾವಧಿ ಪರೀಕ್ಷೆ ಹಾಗೂ ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ನನಗಿಂತ ಕಡಿಮೆ ಅಂಕಗಳನ್ನು ತೆಗೆದಿದ್ದಾರೆ.ಜೊತೆಗೆ ಸೆಮಿನಾರ್ ಗಳಲ್ಲಿ ನನಗೆ  ವೆರಿ ಗುಡ್ ಸಿಕ್ಕಿದೆ ಉಳಿದ ಯಾರಿಗೂ ಸಿಕ್ಕಿಲ್ಲ ,ಭಾಷಣ ನಾಟಕ ಸೇರಿದಂತೆ ಎಲ್ಲದರಲ್ಲೂ ನಾನು ಮುಂದಿದ್ದೆ  ಹಾಗಾಗಿ ನನಗಿಂತ ಕಡಿಮೆ ಅಂಕಗಳು ಉಳಿದವರಿಗೆ ಬಂದಿರುವುದು ಸಹಜ ತಾನೇ..ಅದಕ್ಕೆ ನಾನು ಕಾರಣ ಎಂದು ಹೇಳಿ  ನಾಗರಾಜ್ ಅವರು ನನಗೆ ಅವಮಾನಿಸಿದ್ದು ನನಗೆ ತುಂಬಾ ನೋವಾಗಿದೆ "ಎಂದು ತಿಳಿಸಿದೆ.ಆಗ ಹಿರಿಯ ಉಪನ್ಯಾಸಕರಾದ ಡಾ.ಕೆ ನಾರಾಯಣ ಭಟ್ ಕೂಡ ಅಲ್ಲಿದ್ದರು.ನನ್ನ ಎದುರೇ ಡಾ.ಜಿ ಎನ್ ಭಟ್  ಅಟೆಂಡರ್ ಮೂಲಕ ನಾಗರಾಜರನ್ನು ಬರಹೇಳಿದರು.ಏನಿದು ನಾಗರಾಜ್ ಎಂದು‌ ಡಾ. ಜಿಎನ್ ಭಟ್ ಅವರು ಕೇಳಿದಾಗ  ಅವರು "sorry sirಏನೋ ಆಗೋಯ್ತು ಬಿಟ್ಟು ಬಿಡಿ ಸರ್ " ಎಂದು ಹೇಳಿದರು. ಓದಲೆಂದು ಬಂದ ಮಕ್ಕಳಿಗೆ ಕಿರುಕುಳ ಕೊಡಬಾರದು‌‌.ಇಂಟರ್ನಲ್ ಮಾರ್ಕ್ಸ್ ಅನ್ನು ಯುನಿವರ್ಸಿಟಿ ನಿಯಮಾವಳಿ ಪ್ರಕಾರ ಎಲ್ಲರಿಗೂ ಕೊಡಿ ಎಂದು ಆವತ್ತೇ ಹೇಳಿದೆನಲ್ಲ..ಹಾಗೆ ನೀಡಿಲ್ಲವೇ ?ಎಂದು ಡಾ.ಜಿ ಎನ್ ಭಟ್ ಕೇಳಿದಾಗ " ಯುನಿವರ್ಸಿಟಿ ನಿಯಮಾವಳಿ ಪ್ರಕಾರವೇ ನೀಡಿದ್ದೇವೆ ಸರ್ " ಎಂದು ನಾಗರಾಜ್ ಉತ್ತರಿಸಿದರು‌‌.ಮತ್ತೆ ಲಕ್ಷ್ಮೀ ಇಂದ ಮಾರ್ಕ್ಸ್ ಕಡಿಮೆ ಬಂತು ಎಂದು ಯಾಕೆ ಹೇಳಿದಿರಿ ? ಎಂದು ಕೇಳಿದಾಗ ನಾಗರಾಜ್ ಮತ್ತೆ ಪುನಃ ಏನೋ ಮಾತಿಗೆತಪ್ಪಿ ಬಂತು ಬಿಟ್ಟು ಬಿಡಿ ಸರ್" ಎಂದು ಹೇಳಿದರು."ಸರಿಯಮ್ಮ.. ನೀನು ಕ್ಲಾಸ್ ಗೆ ಹೋಗು ಇನ್ನು ಮುಂದೆ ಇಂತಹದ್ದು ಆಗದಂತೆ ನೋಡಿಕೊಳ್ಳುತ್ತೇನೆ " ಎಂದು ಹೇಳಿ ನನ್ನನ್ನು ಕ್ಲಾಸಿಗೆ ಕಳುಹಿಸಿದರು.ಆ ದಿನ ಸಂಜೆ ತನಕ ಎಂದಿನಂತೆ ತರಗತಿಗಳು ನಡೆದವು.ನಂತರ ನಾನು ಮನೆಗೆ ಬಂದೆ.
ಮರುದಿನ ನಾನು ತರಗತಿ ಪ್ರವೇಶ ಮಾಡುತ್ತಿದ್ದಂತೆ ಉಳಿದವರೆಲ್ಲ ಎದ್ದು ಹೊರನಡೆದರು..
ಅಂದಿನ ಮೊದಲ ತರಗತಿ ಡಾ‌ಕೆ ನಾರಾಯಣ ಭಟ್ ಅವರು ತೆಗೆದುಕೊಂಡರು‌.ತರಗತಿಯಲ್ಲಿ ನನ್ನ ಹೊರತಾಗಿ ಯಾರೂ ಇಲ್ಲದಿರುವುದನ್ನು ಗಮನಿಸಿ ಎಲ್ಲೋಗಿದ್ದಾರೆ ಇವರೆಲ್ಲ ಎಂದು ಕೇಳಿದರು‌ ಗೊತ್ತಿಲ್ಲ ಎಂದು ಹೇಳಿದೆ. ಅವರು ಎಂದಿನಂತೆ ಪಾಠ ಶುರು ಮಾಡಿದರು‌.ಡಾ ಕೆ ನಾರಾಯಣ ಭಟ್ ಅವರದು ಅಗಾಧ ಪಾಂಡಿತ್ಯ, ಕಂಚಿನ ಕಂಠ..ಅವರ ಪಾಠ ಕೇಳುವುದೊಂದು ಅವಿಸ್ಮರಣೀಯ ವಿಚಾರ‌.
ಸುಮಾರು ಅರ್ಧ ಗಂಟೆ ಕಳೆದಾಗ ಡಾ. ಜಿ ಎನ್ ಭಟ್ ನಾರಾಯಣ ಭಟ್ಟರನ್ನು ಪ್ರಿನ್ಸಿಪಾಲ್ ಚೇಂಬರ್ ಗೆ ಬರಹೇಳಿದರು..ನೀನು ನೋಟ್ಸ್ ಬರೀತಾ ಇರು ಏನೂಂತ ಕೇಳ್ಕೊಂಡು ಬರ್ತೇನೆ ಎಂದು ಹೇಳಿ ಹೋದರು.
ಸ್ವಲ್ಪ ಹೊತ್ತಿನಲ್ಲಿ ನನ್ನನ್ನು ಕೂಡ ಪ್ರಿನ್ಸಿಪಾಲ್ ಚೇಂಬರ್ ಗೆ ಬರಹೇಳಿದರು.ಪ್ರಿನ್ಸಿಪಾಲ್ ಚೇಂಬರ್ ಎದುರುಗಡೆ ನನ್ನ ಸಹಪಾಠಿಗಳು ಗಲಾಟೆ ಮಾಡುತ್ತಾ ಇದ್ದರು.ಆಗ ಇಬ್ಬರನ್ನು ಒಳ ಬರಲು ಹೇಳಿ ಡಾ.ಕಜಿ ಎನ್ ಭಟ್ ಅವರು  "ಏನು ಗಲಾಟೆ?  ನೀವ್ಯಾರೂ ಯಾಕೆ ಕ್ಲಾಸಿಗೆ ಹೋಗಿಲ್ಲ ?  ನಿನ್ನೆ ತರಗತಿಯಲ್ಲಿ ಏನಾಯಿತು? ಎಂದು ಕೇಳಿದರು.
ಆಗ ಅವರು "ನಿನ್ನೆ  ತರಗತಿಯಲ್ಲಿ  ನಾಗಾರಾಜ್ ಅವರು ಪಾಠ ಮಾಡುತ್ತಾ ಇದ್ದರು‌.ತರಗತಿಯಲ್ಲಿ ಏನೂ ಆಗಿರಲಿಲ್ಲ. ಲಕ್ಷ್ಮೀ ಅವರು ಇದ್ದಕ್ಕಿದ್ದಂತೆ ಎದ್ದು ಹೊರಗೆ ಹೋದರು.ಆಗ ಯಾಕೆ ಎಂದು ನಮಗೆ ಗೊತ್ತಾಗಲಿಲ್ಲ.ನಂತರ ನಮಗೆ " ಅವರು ನಮ್ಮ ನಾಗರಾಜ್ ಸರ್ ಮೇಲೆ ವಿನಾಕಾರಣ ದೂರು ಕೊಟ್ಟಿದ್ದಾರೆ ಎಂದು ಗೊತ್ತಾಯಿತು. ಅದಕ್ಕೆ ನಮಗೆ ಬಹಳ ಬೇಸರ ಆಗಿದೆ.ಅವರು ಕ್ಲಾಸಿಗೆ ಬಂದರೆ ನಾವು ಯಾರೂ ಕ್ಲಾಸಿಗೆ ಬರುವುದಿಲ್ಲ. ಅವರನ್ನು ಕಾಲೇಜಿನಿಂದ ತೆಗೆದು ಹಾಕಿ ಎಂದು ಹೇಳಿದರು ಹಾಗೆ ಬರೆದು ಕೊಡಿ ಎಂದು ಡಾ.ಕೆ ನಾರಾಯಣ ಭಟ್ ಅವರು ಹೇಳಿದರು..ಅದನ್ನು ಅವರಿಬ್ಬರು ಬರೆದು ಕೊಟ್ಟು ಸಹಿ ಹಾಕಿದ ರೆಂದು ನೆನಪು .ನಂತರ ಒಬ್ಬೊಬ್ಬರನ್ನಾಗಿ ಒಳ ಬರ ಹೇಳಿ " ನಿನ್ನೆ ತರಗತಿಯಲ್ಲಿ ಏನಾಯಿತು ? ಎಂದು ಕೇಳಿದರು.ಎಲ್ಲರದೂ ಒಂದೇ ಉತ್ತರ ..ತರಗತಿಯಲ್ಲಿ ಏನೂ ಆಗಿರಲಿಲ್ಲ ‌.ನಾಗರಾಜ್ ಸರ್ ಪಾಠ ಮಾಡುತ್ತಾ ಇದ್ದರು.ಲಕ್ಷ್ಮೀ ಇದ್ದಕ್ಕಿದ್ದ ಹಾಗೆ ಎದ್ದು ಹೊರಗೆ ಹೋದರು .ನಂತರ ನಾಗರಾಜ್ ಮೇಲೆ ಸುಮ್ಮನೇ ದೂರು ಕೊಟ್ಟಿದ್ದಾರೆ ಎಂದು ನಮಗೆ ತಿಳಿಯಿತು. ನಮಗೆ ತುಂಬಾ ಬೇಸರ ಆಗಿದೆ..ಅವರನ್ನು ಕಾಲೇಜಿನಿಂದ ಹೊರ ಹಾಕಿ ಎಂದು. ಆ ದಿವಸ ಕಮಲಾಯನಿ ಬಂದಿರಲಿಲ್ಲ ಎಂದು ಮೊನ್ನೆ ಅವರು ಮಾತಿನ ನಡುವೆ ಹೇಳಿದರು. ಅವರು ಬಂದಿದ್ದರೋ ಇಲ್ಲವೋ ಎಂದು ನನಗೂ ಗೊತ್ತಿಲ್ಲ,ಆದರೆ ನನಗೆ ತೀರಾ ಹತ್ತಿರ ಆಗಿದ್ದ ನೀತಾ ಕೂಡಾ ಅದೇ ಹೇಳಿಕೆ ನೀಡಿದ್ದಳು.
ಇದೆಲ್ಲ ಆದ ನಂತರ ಡಾ.ಕೆ ನಾರಾಯಣ ಭಟ್ ಅವರು " ನೀವುಗಳು ಹೇಳಿದ್ದು ಸರಿ  ಎಂದಾದರೆ ಲಕ್ಷ್ಮೀ ಯನ್ನು ಕಾಲೇಜಿನಿಂದ ತೆಗೆದು ಹಾಕುವುದಕ್ಕೆ ಅಡ್ಡಿ ಇಲ್ಲ.ಆದರೆ ನಿನ್ನೆ ನಾಗರಾಜ್ ಅನ್ನು ಪ್ರಿನ್ಸಿಪಾಲ್ ಕರೆಸಿದಾಗ ಅವರು ಏನೋ ಆಗೋಯ್ತು ಸರ್ ಬಿಟ್ಟು ಬಿಡಿ ಎಂದು ಹೇಳಿದ್ದಾರೆ.ನೀವುಗಳು ಹೇಳುವಂತೆ ತರಗತಿಯಲ್ಲಿ ಏನೂ ನಡೆಯದೇ ಇದ್ದರೆ ಅವರು" ಏನೋ ಆಗೋಯ್ತು ಬಿಟ್ಟು ಬಿಡಿ ಎಂದದ್ದು ಏನನ್ನು ? ಏನೋ ಆಗೋಗಿದೆ ಎಂದವರೇ ಒಪ್ಪಿದ್ದಾರಲ್ಲ.ಒಬ್ಬ ಹುಡುಗಿ ಮೊದಲ ವರ್ಷ ತರಗತಿಗೆ ಮೊದಲ ಸ್ಥಾನ ಬಂದಿದ್ದಾಳೆ,ಕಲಿಕೆ ಮತ್ತು ಪಠ್ಯೇತರ ಎರಡೂ ವಿಚಾರಗಳಲ್ಲಿ ಮುಂದಿದ್ದಾಳೆ .ಅವಳಿಗೆ ಮುಂದೆ ರ‍‍್ಯಾಂಕ್ ಬರಬಹುದು ಎಂಬ ಹೊಟ್ಟೆ ಕಿಚ್ಚಿಗೆ ಅವಳ ಭವಿಷ್ಯವನ್ನು ಹಾಳು ಮಾಡಲು ಹೊರಟಿದ್ದೀರ? ಏನವಳನ್ನು ಸಾಯಿಸಬೇಕೆಂದಿದ್ದೀರ?ಇಷ್ಟು ಜನ ಸುಳ್ಳೇ ಸುಳ್ಳು ಹೇಳಿ ಸುಳ್ಳು ಹೇಳಿಕೆಗೆ  ಸಹಿ ಮಾಡಿದ್ದೀರಿ‌.ನೀವು ಇಷ್ಟೂ ಜನರನ್ನು ಕಾಲೇಜಿನಿಂದ ತೆಗೆದು ಹಾಕಲು ಈ ದಾಖಲೆ ಸಾಕು.ಲಕ್ಷ್ಮೀ ಒಬ್ಬಳು ಇದ್ದರೂ ನಮ್ಮ ಕಾಲೇಜು ನಡೆಯುತ್ತದೆ. ನೀವ್ಯಾರೂ ಬೇಕಾಗಿಲ್ಲ ಎಂದು ಜೋರು ಮಾಡಿದರು..ಎಲ್ಲರೂ ಕ್ಷಮೆ ಕೇಳಿ ಹೊರಗೆ ಬಂದರು.ತಲೆ ತಗ್ಗಿಸಿಕೊಂಡು ಬಂದು ತರಗತಿಯಲ್ಲಿ ಕುಳಿತರು.ಮತ್ತೆ ಎಂದಿನಂತೆ ತರಗತಿಗಳು ನಡೆದವು
ಮತ್ತೆ  ನಾನು ತರಗತಿ ಪರೀಕ್ಷೆ, ಮಧ್ಯಾವಧಿ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನ ಪಡೆದೆ‌ .ಮೊದಲ ವರ್ಷಕ್ಕಿಂತ ತುಂಬಾ ಹೆಚ್ಚಿನ ಪರಿಶ್ರಮ ಪಟ್ಟೆ.ದಿವಸಕ್ಕೆ ಸುಮಾರು ಎಂಟು ಗಂಟೆ ಓದಿದೆ.
ಪೂರ್ವ ಸಿದ್ದತಾ ಪರೀಕ್ಷೆ ಸನ್ನಿಹಿತವಾಯಿತು.ಈಗೊಂದು ಸಮಸ್ಯೆ ಉಂಟಾಯಿತು. ನಾನು ಮದುವೆ ಆದ ನಂತರ ಸಂಸ್ಕೃತ ಎಂಎ ಓದಿದ್ದು.ನಾನು ಚೊಚ್ಚಲ ಗರ್ಭಿಣಿಯಾದೆ.ಬಸ್ ಪ್ರಯಾಣ ಮಾಡಬಾರದೆಂದು ವೈದ್ಯ ರು ಸೂಚಿಸಿದರು.ಜೊತೆಗೆ ತೀರಾ ವಾಂತಿ ಹಿಂಸೆ.
ನಾನು ಎಂಎ ಗೆ ಸೇರುವಾಗ ಡಾ.ಕೆ ನಾರಾಯಣ ಭಟ್ ಅವರು ನಮಗೆ ಸಂಬಂಧಿಕರೆಂದು ತಿಳಿದಿರಲಿಲ್ಲ.. ಈ ಮಕ್ಕಳು ಪ್ರತಿಭಟನೆ ಮಾಡಿದ್ದು ಇತ್ಯಾದಿಗಳು ನಡೆದ ನಂತರ ಯಾವುದೋ ಕಾರಣಕ್ಕೆ ನಾನು ಅವರ ಮನೆಗೆ ಹೋಗಿದ್ದೆ.ಆಗ ಅವರ ಮಡದಿ ಜಯಕ್ಕನವರ ಮೂಲಕ ನಾವು ಸಂಬಂಧಿಕರೆಂದು ಗೊತ್ತಾಗಿತ್ತು.ಅವರು  ಬಹಳ ಸಹೃದಯಿಗಳು,ನನ್ನ ಸೀನಿಯರ್ ಗಳಾಗಿದ್ದ ಎರಡು ಮೂರು ವಿದ್ಯಾರ್ಥಿನಿಯರಿಗೆ ಏನೋ ಸಮಸ್ಯೆ ಬಂದು ಉಳಿದುಕೊಳ್ಳಲು ವ್ಯವಸ್ಥೆ ಇಲ್ಲದಾಗ ಇವರು ಅವರುಗಳಿಗೆ ಮೂರು ನಾಲ್ಕು ತಿಂಗಳ ಕಾಲ ತಮ್ಮ ಮನೆಯಲ್ಲಿ ಆಶ್ರಯ ಕೊಟ್ಟಿದ್ದರು
ಹಾಗಾಗಿ ನನಗೂ ಒಂದು ವಾರ ಅವರ ಮನೆಯಲ್ಲಿ ಆಶ್ರಯ ನೀಡಿಯಾರು ಎಂಬ ನಂಬಿಕೆಯಲ್ಲಿ ಅವರಿಗೆ ವಿಷಯ ತಿಳಿಸಿ ಸಹಾಯ ಕೇಳಿದೆ.ತುಂಬು ಮನಸಿನಿಂದ ಒಂದು ವಾರ ಅವರ ಮನೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟರು.ಪೂರ್ವ ಸಿದ್ಧತಾ ಪರೀಕ್ಷೆ ಆರಂಭವಾಗುವ ಹಿಂದಿನ ದಿನ ಕಾರಿನಲ್ಲಿ ಅವರ ಮನೆಗೆ ತಂದು ಬಿಟ್ಟು ಪ್ರಸಾದ್ ಹಿಂದೆ  ಹೋದರು..ಐದು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಬರೆದು ಮತ್ತೆ ನಾರಾಯಾಣ ಭಟ್ ದಂಪತಿಗಳ ಕಾಲು ಹಿಡಿದು ಧನ್ಯವಾದ ಹೇಳಿ ಕಾರಿನಲ್ಲಿ ಮನೆಗೆ ಬಂದೆ.
ಮತ್ತೆ ಒಂದು ಒಂದೂವರೆ ತಿಂಗಳು ಕಳೆದು ಎರಡನೇ ವರ್ಷದ ಸಂಸ್ಕೃತ ಎಂಎಯ ಅಂತಿಮ ಪರೀಕ್ಷೆಗಳು ಶುರುವಾದವು..ನಾನು ರ‍್ಯಾಂಕ್ ತೆಗೆಯಲೇ ಬೇಕೆಂದು ಹಠ ಕಟ್ಟಿ ಓದಿದ್ದೆ. ನನ್ನ  ದುರದೃಷ್ಟ ಇಲ್ಲಿಗೆ ನಿಲ್ಲಲಿಲ್ಲ ಮರು ದಿನ ಪರೀಕ್ಷೆ ಎನ್ನುವಾಗ  ಹಿಂದಿನ ದಿನ ಮಧ್ಯಾಹ್ನದ ಹೊತ್ತಿಗೆ ಕಿಬ್ಬೊಟ್ಟೆಯ ಲ್ಲಿ ಜೋರು ಹೊಟ್ಟೆ ನೋವು ಶುರು ಆಯಿತು.ಆಗ ನಾನು ನಾಲ್ಕು ತಿಂಗಳ ಗರ್ಭಿಣಿ.ವಾಂತಿ ಹಿಂಸೆ ನಿಂತು ಸುಧಾರಿಸಿದ್ದೆ.ಅಮ್ಮಾ ಎಂದು ಕರೆಯುವ ಕಂದನ ಕನಸನ್ನು ಕಾಣುತ್ತಿದ್ದೆ.
ಮರುದಿನ ಪರೀಕ್ಷೆ ಇದೆ ಎಂದಾಗ ಕಾಡಿದ ಹೊಟ್ಟೆ ನೋವು ಆತಂಕವನ್ನು ಉಂಟು ಮಾಡಿತ್ತು.ಹೊಟ್ಟೆ ನೋವು ಜೋರಾದಾಗ ನಾನು ಚಿಕಿತ್ಸೆ ಪಡೆಯುವ ಗೈನಕಾಲಜಿಷ್ಟ್ ಡಾ.ಮಾಲತಿ ಭಟ್ ಅವರ ಭಟ್ಸ್ ನರ್ಸಿಂಗ್ ಹೋಮಿಗೆ ಹೋದೆ.ಅವರು ಪರೀಕ್ಷಿಸಿ ರಕ್ತಸ್ರಾವ ಆಗಿಲ್ಲ ಎಂಬುದನ್ನು ದೃಢ ಮಾಡಿ ಏನಾಗಲಾರದು..ಏನಾದರೂ ಗ್ಯಾಸ್ಟ್ರಿಕ್‌ ಇರಬಹುದು ಅದಕ್ಕೆ ಔಷಧ ಕೊಡುತ್ತೇನೆ, ಸಣ್ಣ ಪ್ರಮಾಣದ ನೋವು ನಿವಾರಕ ಕೊಡುತ್ತೇನೆ ಹೆಚ್ಚು ಪವರ್ ನದ್ದು ಕೊಟ್ಟರೆ ಮಗುವಿಗೆ ತೊಂದರೆ ಆಗಬಹುದು, ಪರೀಕ್ಷೆ ಅಂತ ಹೆಚ್ಚು ಓದುವುದು ಬೇಡ,ರೆಸ್ಟ್ ತಗೊಳ್ಳಿ ಎಂದು ಹೇಳಿದರು.
ಹೊಟ್ಟೆ ನೋವು ಸ್ವಲ್ಪ ಕಡಿಮೆ ಆದ ಹಾಗೆ ಅನಿಸಿತು.ವೈದರ ಸೂಚನೆಯಂತೆ ಬಂದು ಮಲಗಿದ್ದೆ.ಆದರೆ ರಾತ್ರಿ ಎಂಟು ಗಂಟೆ ಹೊತ್ತಿಗೆ ತಡೆಯಲಾರದ ಹೊಟ್ಟೆ ನೋವು ಶುರು ಆಯಿತು. ಮತ್ತೆ ವೈದ್ಯರ ಬಳಿಗೆ ಹೋದೆ.ಅಲ್ಲಿಗೆ ತಲುಪುವವಷ್ಟರಲ್ಲಿ ಬಟ್ಟೆ ಎಲ್ಲ ಕೆಂಪಾಗಿತ್ತು.ರಕ್ತ ಸ್ರಾವ ಆಗಿ ಗಾಭರಿ ಆಗಿತ್ತು..ಅವರು ನೋಡುತ್ತಲೇ ಗರ್ಭಪಾತ ಆಗಿದೆ ಆದರೂ ಸ್ಕಾನಿಂಗ್ ಮಾಡಿ ನೊಡುವ ಎಂದು ಸ್ಕಾನಿಂಗ್ ಗೆ ಕಳುಹಿಸಿದರು.ಅಲ್ಲಿ ಗರ್ಭ ಹೋಗಿದೆ ಎಂದು ಸ್ಪಷ್ಟವಾಗಿ ತಿಳಿಯಿತು .ಅಳು ಸಂಕಟ ಉಕ್ಕಿ ಹರಿಯಿತು. ಮತ್ತೆ ಡಾ.ಮಾಲತಿ ಭಟ್  ಅವರ ಬಳಿಗೆ ಬಂದೆ. ಅವರು D&C ಮಾಡಬೇಕು ಇಲ್ಲವಾದಲ್ಲಿ ಗರ್ಭ ಕೋಶಕ್ಕೆ ಇನ್ಫೆಕ್ಷನ್ ಆಗಿ ಮುಂದೆ ಮಕ್ಕಳಾಗುವುದು ಕಷ್ಟ ಆಗ ಬಹುದು ಎಂದರು..ಈಗಲೇ D&C ಮಾಡುತ್ತೇನೆ ಒಂದು ದಿವಸ ಅಡ್ಮಿಟ್ ಆಗಿ ಇರಬೇಕು ಎಂದರು.
ಆಗ ನಾನು "ನಾಳೆ ಪರೀಕ್ಷೆಗೆ ಹೋಗದಿದ್ದರೆ ಒಂದು ವರ್ಷ ವ್ಯರ್ಥವಾಗಿ ಹೋಗುತ್ತದೆ.ನನಗೆ ರ‍‍್ಯಾಂಕ್ ತಪ್ಪಿ ಹೋಗುತ್ತದೆ "ಎಂದು ಅಳುತ್ತಾ ಹೇಳಿದೆ.ಸರಿ,ನಾಳೆ ಪರೀಕ್ಷೆ ಮುಗಿಸಿ ಬಾ.ಹೊಟ್ಟೆ ನೋವಿಗೆ ಹೈ ಪವರ್ ಪೈನ್  ಕಿಲ್ಲರ್ ಕೊಡುತ್ತೇನೆ.ಆದರೆ ತುಂಬಾ ರಕ್ತಸ್ರಾವ ಆಗುತ್ತದೆ.ಆವಾಗ ಸುಸ್ತಾಗಿ ತಲೆ ತಿರುಗಬಹುದು.ಅದಕ್ಕಾಗಿ ಆಗಾಗ ಜ್ಯೂಸ್ ಹಣ್ಣು ತೆಗೆದುಕೊಳ್ಳಬೇಕು.ಇನ್ನು ಗರ್ಭ ಹೋದ ಬಗ್ಗೆ ಚಿಂತೆ ಮಾಡಬೇಡ.ಆರು ತಿಂಗಳು ಕಳೀಲಿ ಅಷ್ಟರ ತನಕ ಜಾಗ್ರತೆ ಮಾಡಿ ಗರ್ಭ ಧರಿಸಬಾರದು.ನಂತರ ಒಂದು ವರ್ಷದಲ್ಲಿ ಮುದ್ದಾದ ಮಗುವನ್ನು ನಿನ್ನ ಹೊಟ್ಟೆಯಿಂದ ತೆಗೆದು ನಿನ್ನ ಕೈಗೆ ಕೊಡುತ್ತೇನೆ ಖಂಡಿತಾ, ಕಣ್ಣೊರೆಸಿಕೋ,ಮನೆಗೆ ಹೋಗಿ ನಾಳೆಯ ಪರೀಕ್ಷೆಗೆ ತಯಾರಿ ಮಾಡಿಕೋ.ಮೊದಲ ರ‌್ಯಾಂಕ್ ನಿನಗೇ ಬರಲಿ ಎಂದು ಹಾರೈಸಿ ನನ್ನ ಬೆನ್ನು ತಟ್ಟಿ ಕಳುಹಿಸಿದರು.
ಮನೆಗೆ ಅಳುತ್ತಾ ಬಂದೆ. ಆದರೆ ಓದಲು ಪುಸ್ತಕ ಹಿಡಿದಾಗ ಜಗತ್ತನ್ನೇ ಮರೆತೆ.
ಮರುದಿವಸ ಎರಡು ಮೂರು ದಪ್ಪದ ಸ್ಯಾನಿಟರಿ ಪ್ಯಾಡ್ ಕಟ್ಟಿ ಕೊಡು ಕೆಂಪು ಡ್ರೆಸ್ ಹಾಕಿಕೊಂಡು ಪರೀಕ್ಷೆ ಬರೆಯಲು ಹೊರಟೆ.ಅಕಸ್ಮಾತ್  ಬ್ಲಡ್ ಲೀಕ್ ಆದರೆ ಪಕ್ಕನೆ ಗೊತ್ತಾಗದಿರಲಿ ಎಂದು ಕೆಂಪು ಚೂಡಿದಾರ್ ಹಾಕಿಕೊಂಡಿದ್ದೆ.

ಪರೀಕ್ಷೆ ಹಾಲಿಗೆ ಹೋದೆ,ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕ ಮೇಲೆ ಜಗತ್ತನ್ನೇ ಮರೆತು ಉತ್ತರ ಬರೆದೆ.
ಪರೀಕ್ಷೆ ಮುಗಿಯುವ ಷ್ಟರಲ್ಲಿ ಬಟ್ಟೆ ಎಲ್ಲ ಒದ್ದೆಯಾಗಿ ಕೆಂಪಾಗಿತ್ತು.ಶಾಲು ಅಡ್ಡ ಹಾಕಿ ಹೇಗೋ ಹೊರಗೆ ಬಂದೆ.ಪ್ರಸಾದ್ ಕಾರಿನೊಂದಿಗೆ ಕಾಯುತ್ತಾ ಇದ್ದರು.ನೇರವಾಗಿ ಆಸ್ಪತ್ರೆಗೆ ಹೋಗಿ ದಾಖಲಾದೆ‌.D&Cಮಾಡಿದರು.ತುಂಬಾ ರಕ್ತ ಸ್ರಾವ ಅದ ಕಾರಣ ಬ್ಲಡ್ ಕೊಡಬೇಕಾಯಿತು ಅದೃಷ್ಟಕ್ಕೆ ನಂತರದ ಪರೀಕ್ಷೆಗೆ ಎರಡು ದಿನ ಸಮಯ ಇತ್ತು.