Sunday 14 January 2024

ದೊಡ್ಡವರು ದಾರಿ 75-ಡಾ.ರಹಮತ್ ತರೀಕೆರೆ

 ದೊಡ್ಡವರ ದಾರಿ 75 : ಡಾ . ರಹಮತ್ ತರೀಕೆರೆ

ಜಟ್ಟಿಗ ದೈವದ ಕಥಾನಕವನ್ನು ನಾನು ನನ್ನ ಬ್ಲಾಗ್ ನಲ್ಲಿ ಆರೇಳು ವರ್ಷಗಳ ಹಿಂದೆ ಬರೆದಿದ್ದೆ.ಅದರಲ್ಲಿ ಜಟ್ಟಿಗರ ಆರಾಧನೆ ಬಗ್ಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಪ್ರೊಫೆಸರ್ ಡಾ ರಹಮತ್ ತರೀಕೆರೆ ಅವರ ಲೇಖನದ ಭಾಗವನ್ನು ಉಧ್ಧರಿಸಿದ್ದೆ.ಈ ನನ್ನ ಜುಟ್ಟಿಗೆ ದೈವಗಳ ಕುರಿತಾದ ಲೇಖನ ಡಾ ಗಣೇಶಯ್ಯನವರ ಬಳ್ಳಿ ಕಾಳು ಬೆಳ್ಳಿ ಎಂಬ ಮೆಣಸಿನ ರಾಣಿ ಚೆನ್ನ ಭೈರಾದೇವಿಯ ಕುರಿತಾದ ಐತಿಹಾಸಿಕ ಕಥಾನಕದ ಜತೆ ಕಾಲ್ಪನಿಕ ಕಥೆ ಮಿಶ್ರ ಮಾಡಿ ಬರೆದ ಕಾದಂಬರಿಗೆ ಮೂಲ ಆಕರವಾಯಿತೆಂದು ಕೆ ಎನ್ ಗಣೇಶಯ್ಯ ಅವರು ಹೇಳಿದ್ದಾರೆ.ರಹಮತ್ ತರೀಕೆರೆಯವರ ಯಾವ ಲೇಖನದಲ್ಲಿ ಜಟ್ಟಿಗರ ಆರಾಧನೆ ಬಗ್ಗೆ ಮಾಹಿತಿ ಇದೆ ಎಂದು ಕೇಳಿದ್ದರು.ಆದರೆ ನನಗೆ ರಹಮತ್ ತರೀಕೆರೆ ಅವರ ಯಾವ ಲೇಖನದಲ್ಲಿ ಜಟ್ಟಿಗರ ಆರಾಧನೆ ಕುರಿತು ಮಾಹಿತಿ ಇತ್ತು ಎಂಬುದು ನನಗೆ ನೆನಪಿರಲಿಲ್ಲ

ಅಂದಿನಿಂದ ಅವರಲ್ಲಿ ಈ ಬಗ್ಗೆ ಮಾತನಾಡಬೇಕೆಂದು ಅವರು ಫೋನ್ ನಂಬರ್ ಸಂಗ್ರಹಿಸಿ ಇರಿಸಿದ್ದೆನಾದರೂ ಮಾತನಾಡಿರಲಿಲ್ಲ

2010ರಲ್ಲಿ ನನ್ನ ಮೊದಲ ಡಾಕ್ಟರೇಟ್ ಪದವಿಯ ವೈವ( ಮೌಖಿಕ ಪರೀಕ್ಷೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯಿತು 

ತುಳು ನಾಡಿನ ನಾಗಬ್ರಹ್ಮ ಮತ್ತು ಕಂಬಳ- ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬುದು ನನ್ನ ಪಿಎಚ್ ಡಿ ಮಹಾ ಪ್ರಬಂಧ.ಈ ಪ್ರಬಂಧದ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು.ಪರೀಕ್ಷರಲ್ಲಿ ಒಬ್ಬರಾದ ಡಾ

ಮಾಧವ ಪೆರಾಜೆಯವರು ನಾಗ ಮತ್ತು ಬ್ರಹ್ಮ ಬೇರೆ ಬೇರೆ ಎರಡು ಶಕ್ತಿಗಳು ಎಂದು ನಿಮಗೆ ಗೊತ್ತೇ ಆಗಿಲ್ಲ ಇತ್ಯಾದಿ ಏನೋ ಹೇಳಿದರು.ಆಗ ನಾನು ಆರಂಭದಲ್ಲೇ ನಾಗ  ಮತ್ತು ಬ್ರಹ್ಮ ಬೇರೆ ಬೇರೆ ಎರಡು ಶಕ್ತಿಗಳು.ಬೆರ್ಮೆರ್ ಎಂದರೆ ಹಿರಿಯ ಎಂಬ ಪದವೇ ಸಂಸ್ಕೃತೀಕರಣಕ್ಕೆ ಒಳಗಾಗಿ ಬ್ರಹ್ಮ ಆಗಿದೆ ಎಂದು ಹೇಳಿದ್ದೇನೆ.ಅದನ್ನು ಆಧಾರ್ ಸಹಿತ ನಿರೂಪಿಸಿದ್ದೇನೆ ಎಂದು ಹೇಳಿದೆ.

ಆಗ ವೀ ಸಿ ಅವರು ಕ್ಲಿಷ್ಟ ಸಂಸ್ಕೃತ ಪದಗಳು ಸರಳವಾಗಿ ಬದಲಾಗುವುದು ಸಹಜ ಆದರೆ ಸರಳವಾದ ಬೆರ್ಮೆರ್ ಪದೇ ಬ್ರಹ್ಮ ಎಂದಾಯಿತು ಎಂದರೆ ಒಪ್ಪಲು ಸಾಧ್ಯವಿಲ್ಲ ಎಂದರು.ಆಗ ಪರೀಕ್ಷರಲ್ಲಿ ಓರ್ವರು ಆಗಿದ್ದು ರಹಮತ್ ತರೀಕೆರೆ ಅವರು ನನ್ನ ಪರ ನಿಂತು  ಸರಳವಾಗಿರುವ ಪದಗಳು ಸಂಸ್ಕೃತೀಕರಣಕ್ಕೆ ಒಳಗಾಗಿ ಕ್ಲಿಷ್ಟಕರ ಪದವಾಗಿ ಬದಲಾಗಿರುವುದಕ್ಕೆ ಸನಿವಾರ>ಶನಿವಾರ ಇತ್ಯಾದಿ ಕೆಲವು ಉದಾಹರಣೆಗಳನ್ನು ನೀಡಿದರು

ನಂತರ ವೀಸಿಯವರು ನನ್ನ ವಾದವನ್ನು ಒಪ್ಪಿ ದರು.ಆದರೆ ಮಾಧವ ಪೆರಾಜೆಯವರು ನಾನು ಹಾಗೆ ಸಿದ್ಧ ಮಾಡಿಲ್ಲ ಎಂದು ವಿಷಾದಿಸಿದರು

ಆಗ ನನ್ನ ಮಾರ್ಗದರ್ಶಕರು ಹಾಗೂ ಜೊತೆ ಇದ್ದವರು ಮಾಧವ ಪೆರಾಜೆಯವರು ಹೇಳಿದ್ದನ್ನು ಒಪ್ಪಿಕೊಂಡು ಬಿಡಿ.ಇಲ್ಲವಾದರೆ ನಿಮಗೆ ಪಿಎಚ್ ಡಿ ಪದವಿ ಸಿಗಲಾರದು ಎಂದು ಹಿತ ನುಡಿದರು

ಆದರೆ ನಾನು ಆರಂಭದಿಂದಲೂ ನಾಗ ಮತ್ತು ಬ್ರಹ್ಮ ಬೇರೆ ಬೇರೆ ಎರಡು ಶಕ್ತಿಗಳು ಎಂದು ಪ್ರೂವ್ ಮಾಡುತ್ತಾ ಬಂದಿದ್ದಾರೆ.ಐದಾರು ವರ್ಷಗಳ ಕ್ಷೇತ್ರ ಕಾರ್ಯ ಮಾಡಿ ನಾಡೋಜ ಅಮೃತ ಸೋಮೇಶ್ವರ ಮತ್ತು ಇತರ ವಿದ್ವಾಂಸರೊಡನೆ ಚರ್ಚೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದೆ.ಹಾಗಾಗಿ ಪಿ ಎಚ್ ಡಿ ಪದವಿಗಾಗಿ ನಾನು ಮಾಡಿರುವುದನ್ನು ಇಲ್ಲ ಎಂದು ಹೇಳಿದ್ದನ್ನು ಒಪ್ಪಿಕೊಂಡು ಸುಮ್ಮನೇ ಇರಲು ನನ್ನಿಂದ ಸಾಧ್ಯವಿರಲಿಲ್ಲ.ಹಾಗಾಇಗಿ ನನಗೆ ಮತ್ತು ಮಾಧವ ಪೆರಾಜೆಯವರಿಗೆ ಸಾಕಷ್ಟು ಚರ್ಚೆ ನಡೆಯಿತು.ಕೊನೆಗೆ ವೀಸಿ ಗಳಾದ ಮುರಿಗೆಪ್ಪನವರೇ " ನೀವು ನಾಗ ಮತ್ತು ಬ್ರಹ್ಮ ಬೇರೆ ಬೇರೆ ಎರಡು ಶಕ್ತಿಗಳು ಎಂದು ಎಲ್ಲಿ ಬರೆದಿದ್ದೀರಿ? ಯಾವ ಪುಟದಲ್ಲಿದೆ ಎಂದು ತೋರಿಸಿ"ಎಂದರು.ಆಗ ನಾನು ಉಪಸಂಹಾರ ಭಾಗದಲ್ಲಿ ಬರೆದಿರುವುದನ್ನು ಓದಿ ಹೇಳಿದೆ.ಅಲ್ಲಿಗೆ ಚರ್ಚೆ ಮುಕ್ತಾಯ ಆಯಿತು.ನನ್ನ ಪ್ರಬಂಧ ಪಿ ಎಚ್ ಡಿ ಪದವಿ ಗೆ ಅರ್ಹವಾಗಿದೆ ಎಂದು ವೀಸಿಯವರು ಘೋಷಣೆ ಮಾಡಿದರು.

ಇಲ್ಲಿ ರಹಮತ್ ತರೀಕೆರೆ ಅವರು ಆಡುಭಾಷೆಯ ಸರಳ ಪದಗಳು ಸಂಸ್ಕೃತೀಕರಣಕ್ಕೆ ಒಳಗಾಗಿ ಕ್ಲಿಷ್ಟಕರವಾದ ಪದವಾಗಿ ಬಳಕೆಯಾಗುವ ಬಗ್ಗೆ ಮಾಹಿತಿ ಕೊಡದೇ ಇರುತ್ತಿದ್ದರೆ ನಾನು ಆಗ ದಿನ ಮೌಖಿಕ ಪರೀಕ್ಷೆಯಲ್ಲಿ ಪಾಸಾಗುವುದು ಕಷ್ಟ ಇತ್ತು

ಅಂತೂ ಮೊದಲ ಡಾಕ್ಟರೇಟ್ ಪದವಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಡೆದೆ‌.ನಂತರ ಪಾಡ್ದನಗಳಲ್ಲಿ ತುಳುವ ಸಂಸ್ಕೃತಿಯ ಅಭಿವ್ಯಕ್ತಿ ಎಂಬ ಮಹಾ ಪ್ರಬಂಧ ರಚಿಸಿ ಕುಪ್ಪಂ ನ ದ್ರಾವಿಡ ವಿಶ್ವವಿದ್ಯಾಲಯದ ತುಳು ವಿಭಾಗಕ್ಕೆ ಸಲ್ಲಿಸಿ ಎರಡನೇ ಡಾಕ್ಟರೇಟ್ ಪದವಿಯನ್ನು ಪಡೆದ

ಆಗ ನಡೆಸಿದ ಕ್ಷೇತ್ರ ಕಾರ್ಯದಲ್ಲಿ ಸಿಕ್ಕ ದೈವಗಳ ಕುರಿತಾದ ಪಾಡ್ದನ ಹೊಗಳಿಕೆ ಜಾನಪದ ಐತಿಹ್ಯ ಆಧಾರಿತ ಮಾಹಿತಿಯನ್ನು ಇಟ್ಟುಕೊಂಡು ವಿಶ್ಲೇಷಣೆ ಮಾಡಿ ತುಂಡು ಭೂತಗಳು - ಒಂದು ಅಧ್ಯಯನ,ದೈವಿಕ ಕಂಬಳ ಕೋಣ,ತುಳುನಾಡಿನ ಅಪೂರ್ವ ಭೂತಗಳು,ತುಳುವ ಸಂಸ್ಕಾರಗಳು ಮತ್ತು ವೃತ್ತಿ ಗಳು,ಕಂಬಳ ಕೋರಿ ನೇಮ , ಭೂತಗಳ ಅದ್ಭುತ ಜಗತ್ತು ಮೊದಲಾದ ಅನೇಕ ಪುಸ್ತಕಗಳನ್ನು ಬರೆದು ಸ್ವತಃ ಪ್ರಕಟಿಸಿದೆ.

20130ರಲ್ಲಿ ಬ್ಲಾಗ್ ನಲ್ಲಿ ಬರೆಯಲು ಆರಂಭಿಸಿದೆ.fb ಯಲ್ಲೂ ಬರೆಯುತ್ತಿದ್ದೆ

ಯಾವುದೋ ಒಂದು ಪೋಸ್ಟ್ ನ ಕಾಮೆಂಟ್ ನಲ್ಲಿ ರಹಮತ್ ತರೀಕೆರೆಯವರು ನನ್ನ ನಾಗ ಬ್ರಹ್ಮ ಮತ್ತು ಕಂಬಳ- ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬ (ಪ್ರಕಟಿತ ಪಿ ಎಚ್ ಡಿ ಮಹಾ ಪ್ರಬಂಧ) ಪುಸ್ತಕ ಬೇಕೆಂದು ಕೇಳಿದ್ದರು

ಈ ಸಮಯಕ್ಕಾಗುವಾಗ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನಡೆದ ನೇಮಕಾತಿಯಲ್ಲಿ ನಡೆದ ಅಕ್ರಮ ದಿಂದಾಗಿ ಯೂನಿವರ್ಸಿಟಿಗಳ ಬಗ್ಗೆ, ಪ್ರೊಫೆಸರ್ ಗಳು ಬಗ್ಗೆ ಒಂತರಾ ಅಸಹನೆ ಜುಗುಪ್ಸೆ ಉಂಟಾಗಿತ್ತು.ಹಾಗಾಗಿ ರಹಮತ್ ತರೀಕೆರೆ ಅವರ ಕಾಮೆಂಟ್ ಗೆ ಪ್ರತಿಕ್ರಿಯೆ ನೀಡಿರಲಿಲ್ಲ.ಪುಸ್ತಕವನ್ನೂ ಕಳುಹಿಸಿರಲಿಲ್ಲ 

ಇದಾಗಿ ಕೆಲ ಸಮಯದ ನಂತರ ಎಂ ಆರ್ ಮಣಿಕಾಂತ್ ಅವರು " ರಹಮತ್ ತರೀಕೆರೆ ಅವರಿಗೆ ನಿಮ್ಮ ಪುಸ್ತಕ ಬೇಕೆಂದು ಕೇಳಿದ್ದರು.ನಿಮ್ಮಲ್ಲಿ ಕೇಳಿದ್ದರೂ ನೀವು ಕಳುಹಿಸಿಲ್ಲವಂತೆ..ದೊಡ್ಡವರು ಕೇಳಿದಾಗ ಅವರು ಕೋರಿಕೆಗೆ ಗೌರವ ಕೊಟ್ಟು ಕಳುಹಿಸಬೇಕು.ಅವರಿಗೆ ಪುಸ್ತಕ ಕಳುಹಿಸಿ ಕೊಡಿ ಎಂದು ಹೇಳಿದರು

ನಂತರ ಆ ಪುಸ್ತಕದ ಜೊತೆಗೆ ನನ್ನ ಇತರ ಪ್ರಕಟಿತ ಪುಸ್ತಕಗಳ ಒಂದೊಂದು ಪ್ರತಿಯನ್ನು ಕಳುಹಿಸಿದ್ದೆ ತಲುಪಿದಾಗ ಧನ್ಯವಾದ ಹೇಳಿದ್ದರು

ಇದಾಗಯೂ ಆರೇಳು ವರ್ಷಗಳು ಕಳೆದವು.ಮೊನ್ನೆ ಕನ್ನಡ ಕಾರ್ಯಾಗಾರಕ್ಕೆ ಬಂದಿದ್ದಾಗ ಮಾತನಾಡಿ ಒಂದು ಫೋಟೋ ಹಿಡಿದುಕೊಂಡು ಬಂದೆ 

Saturday 13 January 2024

ಆತ್ಮ ಕಥೆಯ ಬಿಡಿ ಭಾಗಗಳು: ಅನುಭವ ಆಗಲು ಏನು ಮಾಡಬೇಕು?

 ಆತ್ಮ‌ಕಥೆಯ ಬಿಡಿ ಭಾಗಗಳು 


ಅನುಭವ ಆಗಲು ಏನು ಮಾಡಬೇಕು ?


ಹೌದು..ಹೀಗೊಂದು ತಲೆಬಿಸಿ ಮಾಡ್ತಾ ಇದ್ದ ಕಾಲ ಒಂದಿತ್ತು..


ನಾನು ಎರಡನೆಯ ವರ್ಷ ಬಿಎಸ್ ಸಿ ಪದವಿ ಓದುತ್ತಿರುವಾಗಲೇ ನನಗೆ ಮದುವೆಯಾಯಿತು..ಚಿಕ್ಕಂದಿನಿಂದಲೂ ಬರವಣಿಗೆಯ ಹವ್ಯಾಸ ಇದ್ದ ನನ್ನ ಬರಹಗಳು ಒಂದೊಂದಾಗಿ ಹೊಸ ದಿಗಂತ ಉದಯವಾಣಿ ಮಂಗಳ ಮೊದಲಾದ ಪತ್ರಿಕೆಗಳಲ್ಲಿ ಪ್ತಕಟವಾಗತೊಡಗಿದ್ದವು..


ದಕ್ಷಿಣ ಕನ್ನಡದ ಹಿರಿಯ ಸಾಹಿತಿ ಗಂಗಾ ಪಾದೇಕಲ್ಲು ನನ್ನ ಗಂಡ ಪ್ರಸಾದರ ಸಂಬಂಧಿ..ಒಂದು ದಿನ ಯಾವುದೋ ಕೌಟುಂಬಿಕ ಕಾರ್ಯಕ್ರಮದಲ್ಲಿ ಭೇಟಿಯಾದವರು ನನ್ನ ಬರವಣಿಗೆಗೆ ಮೆಚ್ಚುಗೆ ಸೂಸಿ ಬರಹಕ್ಕೆ ಅನುಭವದ ತಳಹದಿ ಇದ್ದರೆ ಇನ್ನಷ್ಡು ಗಟ್ಟಿಯಾಗುತ್ತದೆ ಎಂದಿದ್ದರು


ಈ ಅನುಭವವನ್ನು ಪಡೆಯುವುದು ಹೇಗೆ ಎಂಬುದೊಂದು ತಲೆಬಿಸಿ ಶುರು ಆಯಿತು ನನಗೆ.ಚಿಕ್ಕಂದಿನಲ್ಲಿ ಶಾಲಾ ಪ್ರಬಂಧದಲ್ಲಿ  ಪ್ರವಾಸ ಮಾಡಿದರೆ ಬೇರೆ ಬೇರೆ ಊರಿನ ಜನರ ಸಂಸ್ಕೃತಿಯ ಪರಿಚಯ ಆಗುತ್ತದೆ.ಅನುಭವ  ದೊರೆಯುತ್ತದೆ ಎಂದು ಬರೆದಿದ್ದೆ.ಅದು ನೆನಪಾಯಿತು.


ನೆನಪಾಗಿಯೂ ಏನೂ ಪ್ರಯೋಜನವಿಲ್ಲದಾಯಿತು..

ಮೊದಲಿಗೆ ಪ್ರವಾಸ ಮಾಡುವಷ್ಟು ದುಡ್ಡು ನಮ್ಮಲ್ಲಿ ಇರಲಿಲ್ಲ.ಅಲ್ಲದೆ ನಾನು ವಿದ್ಯಾರ್ಥಿಯಾಗಿದ್ದು ಪ್ರವಾಸ ಹೋಗಲು ರಜೆಯದ್ದೂ ಸಮಸ್ಯೆಯೇ..ಎಲ್ಲಕ್ಕಿಂತ ಹೆಚ್ಚು ಟ್ರಾವೆಲಿಂಗ್ ಸಿಕ್ ನೆಸ್ ಇರುವ ನನಗೆ ಪ್ರವಾಸ ಬಹಳ ಪ್ರಯಾಸವಾಗಿ ಪರಿಣಮಿಸುತ್ತದೆ.ಹಾಗಾಗಿ ಪ್ರವಾಸದತ್ತ ನನಗೆ ಒಲವಿರಲಿಲ್ಲ..


ಆದರೆ ಹಿರಿಯ ಸಾಹಿತಿ ಗಂಗಾ ಪಾದೇಕಲ್ಲು ಅವರು ಹೇಳಿದ  ಮಾತು ಸದಾ ಕೊರೆಯುತ್ತಿತ್ತು.ಅನುಭವ ಇಲ್ಲದೆ ಬರಹ ಗಟ್ಟಿತನ ಹೊಂದುದಿಲ್ಲ ಎಂದು..


ಹಾಗೆಂದು ನಾನು ಪ್ರವಾಸ ಹೋಗಿಯೇ ಇಲ್ಲವೆಂದಲ್ಲ..ಸುಮಾರು 25-26 ವರ್ಷಗಳ ಮೊದಲು ನಿಜಾಮುದ್ದೀನ್ ನಲ್ಲಿ ನಡೆದ ರಾಷ್ಟ್ರ ಸೇವಿಕ ಸಂಘದ ಸಮ್ಮೇಳನದಲ್ಲಿ ಭಾಗವಹಿಸಲು ಹೋಗಿದ್ದೆ.ಹಾಗೆ ಹೋದವರೆಲ್ಲ ಅಗ್ರ ಡೆಲ್ಲಿ ಹರಿದ್ವಾರ ಹೃಷಿಕೇಶ ಕಾಶಿ ಮೊದಲಾದೆಡೆ ಮೂರು ನಾಲ್ಕು ದಿನ ಸುತ್ತಾಡಿ ಬಂದಿದ್ದೆವು


ಅಂತೆಯೇ ಬೆಂಗಳೂರಿನ ಎಪಿಎಸ್ ಕಾಲೆಜಿನಲ್ಲಿ ಉಪನ್ಯಾಸಕಿಯಾಗಿದ್ದಾಗ ಡಿಡಿ 1 ಚಾನೆಲ್ ನವರು ಆಯೋಜಿಸಿದ್ದ ಖೇಲ್ ಖೇಲ್ ಮೇ ಬದಲೋ ದುನಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಡೆಲ್ಲಿಗೆ ಕರೆದುಕೊಂಡು ಹೋಗಿದ್ದೆ.ಆಗಲೂ ಒಂದಿನಿತು ಸುತ್ತಾಡಿದ್ದೆವು


ನಂತರವೂ ಪ್ರಬಂಧ ಮಂಡನೆಗೆ ಅಹ್ವನಿತಳಾಗಿ ಭಾರತೀಯಾರ್ ಯೂನಿವರ್ಸಿಟಿ,ಗಾಂಧಿ ಗ್ರಾಮ ? ಕೊಯಂಬತ್ತೂರು ಏಲಾಗಿರಿ ಮೊದಲಾದೆಡೆ ಹೋಗಿದ್ದು ಅಲ್ಲೂ ಸುತ್ತ ಮುತ್ತ ಸ್ವಲ್ಪ ತಿರುಗಾಡಿ ಬಂದಿರುವೆ


ಆದರೆ ಈ ಪ್ರವಾಸಗಳು ಯಾವುವೂ ನನಗೆ ಅಂಥಹ ದೊಡ್ಡ ಅನುಭವವನ್ನು ತುಂಬಿ ಕೊಡಲಿಲ್ಲವೇನೋ ಎಂದೆನಿಸ್ತದೆ


ಪ್ರವಾಸಗಳು ಅನುಭವವನ್ನು ತುಂಬಿ ಕೊಡದಿದ್ದರೂ ಬದುಕು ಮೂಟೆ ಮೂಟೆಯಾಗಿ ನಾನಾವಿಧವಾದ ಅನುಭವಗಳನ್ನು ತುಂಬಿಕೊಟ್ಟಿದೆ.

ಒಂದೊಂದು ಯೂನಿವರ್ಸಿಟಿಗೆ ಸಂದರ್ಶನಕ್ಕೆ ಹೋದಾಗ ಒಂದೊಂದು ಅನುಭವ..ನನಗೆ ಪರಿಚಯವೇ ಇಲ್ಲದವರೂ ವಿನಾಕಾರಣ ದ್ವೇಷ ಕಾರುವ ಪರಿಯಂತೂ ನನಗೆ ಅಚ್ಚರಿ ತಂದಿದೆ


ನಾನು ಯಾರ ಸುದ್ದಿಗೂ ಹೋಗದೆ ನನ್ನದೇ ವೃತ್ರಿ ಪ್ರವೃತ್ತಿ ಯಾಗಿ ಬರವಣಿಗೆಯ ಲೋಕದಲ್ಲಿ ಇರುವವಳು


ಆದರೆ ಅದೇ ಕಾರಣಕ್ಕೆ ಸ್ವಕೀಯರಿಂದ ಹಾಗೂ ಪರಕೀಯರಿಂದ ಮತ್ಸರದ ನಡೆಯನ್ನು ಎದುರಿಸಿದೆ..


ಇನ್ನು ಪುಸ್ತಕ ಬರೆಯುವುದು ಪ್ರಕಟಿಸುವುದು ಒಂದು ಚಾಲೆಂಜ್ ಅಗಿದ್ದರೆ ಬಿಡುಗಡೆಯದೇ ಒಂದು ಅನುಭವ


ಕೆಲವರಿಗೆ ಬರಹಗಾರರ ಬಗ್ಗೆ ಎಷ್ಟು ಮತ್ಸರ ಅಹಸನೆ ಇದೆ ಎಂಬುದರ ಅರಿವಾಗ ಬೇಕಾದರೆ ಪುಸ್ತಕ ಬರೆದೇ ಆಗಬೇಕು..

ಬೆಂಗಳೂರು ಹವ್ಯಕ ಸಭೆಯ ಸಂಸ್ಥಾಪಕರಾದ ಮೇಣ ರಾಮಕೃಷ್ಣ ಭಟ್ ಅವರ ಸಂಸ್ಮರಣಾ ಸಮಾರಂಭದಲ್ಲಿ ನನ್ನ ದೈವಿಕ ಕಂಬಳ ಕೋಣ ಎಂಬ ಪುಸ್ತಕ ಮಲ್ಲೇಪುರಂ ವೆಂಕಟೇಶ್ ಅವರಿಂದ ಬಿಡುಗಡೆಯಾಯಿತು..ಇಲ್ಲಿನದೊಂದು ದೊಡ್ಡ ಕಥೆಯೇ ಇದೆ


ಇದಾದ ನಂತರ ಚೊಕ್ಕಾಡಿಯಲ್ಲಿ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳ ಹಸ್ತದಿಂದ ನನ್ನ ಐದು ಪುಸ್ತಕಗಳು ಬಿಡುಗಡೆಯಾದವು..ಇಲ್ಲಿನದು ಮತ್ತೊಂದು ಕಥೆ

ಈ ನಡುವೆ ನನ್ನ ಎರಡು ಪುಸ್ತಕಗಳು ತುಳು ಅಕಾಡೆಮಿಯಲ್ಲಿ ಕಲ್ಲಡ್ಕ ಡಾ.ಕಮಲಾ ಭಟ್ ಅವರಿಂದ ಬಿಡುಗಡೆಯಾದವು..ಅಲ್ಲಿನದೂ ಮತ್ತೊಂದು ಕಥೆ


2021 ರಲ್ಲಿ ನನ್ನ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕ ಮತ್ತೆ ಬೆಂಗಳೂರಿನಲ್ಲಿ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಯವರ ದಿವ್ಯ ಹಸ್ತದಿಂದ ಬಿಡುಗಡೆಯಾಯಿತು..ಈ ಬಗ್ಗೆ ಕನ್ನಡ ಪ್ರಭ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ವರದಿ ಪ್ರಕಟವಾಯಿತು.ಇಲ್ಲಿ ಸಭೆಯಲ್ಲಿದ್ದ ಯಾರೋ ಒಬ್ಬ ಮತ್ಸರಿಯ ಕುತಂತ್ರದಿಂದ ತಪ್ಪೇ ಮಾಡದ ಓರ್ವ  ಪತ್ರಕರ್ತರಿಗೆ ತುಂಬಾ ತೊಂದರೆ ಆಯಿತು..


ಇನ್ನು ವೃತ್ತಿ ಜೀವನದಲ್ಲೂ ನಾನಾ ಅನುಭವಗಳು..ಸಿಹಿ ಕಹಿ ಎರಡೂ ಅನುಭವಗಳೇ..

ಓದುವಾಗಲೂ ಒಂದೊಂದು ಅನುಭವ..


ನಾನು ಕಾಲೇಜಿಗೆ ಸೇರುವ ವರೆಗೆ ಪೋಲೀಸರನ್ನು ನೋಡಿರಲಿಲ್ಲ‌‌.ಸಿನೇಮವನ್ನೂ ಆ ವರೆಗೆ ನೋಡಿರದ ಕಾರಣ  ಪೋಲೀಸರ ಬಗ್ಗೆ ತಿಳಿದೇ ಇರಲಿಲ್ಲ..ಬೆಂಗಳೂರಿಗೆ ಬರುವವರೆಗೆ ಎಂದರೆ ನನಗೆ 35 ವರ್ಷ ಆಗುವವರೆಗೆ ನನಗೆ ಪೊಲೀಸ್ ಸ್ಟೇಶನ್ ,ಹೇಗಿರುತ್ತದೆ  ಕೋರ್ಟು ಹೇಗಿರುತ್ತದೆ ? ನ್ಯಾಯಾಧೀಶರು ಹೇಗಿರ್ತಾರೆ ಎಂಬ ಕಲ್ಪನೆಯೂ ಇರಲಿಲ್ಲ..


ನಿದಾನಕ್ಕೆ ಬದುಕು ಎಲ್ಲವನ್ನೂ ತೋರಿಸಿಕೊಟ್ಟಿತು. ಉಡುಪಿಯ ಬಹುಜನ ಹಿತಾಯ ವೇದಿಕೆಯ ಡಾ.ರವೀಂದ್ರನಾಥ ಶಾನುಭಾಗರಿಂದ ಅನ್ಯಾಯದ ವಿರುದ್ದ ನ್ಯಾಯಯುತವಾಗಿ ಹೋರಾಡಲು ಪ್ರೇರಣೆ ಪಡೆದೆ..

ಜಗತ್ತಿಡೀ ಅನ್ಯಾಯಕ್ಕೊಳಗಾದವರು ತುಂಬಾ ಜನ ಇದ್ದಾರೆ.ಅವರೆಲ್ಲರ ಪರ ಹೋರಾಡಲು ಸಾಧ್ಯವಿಲ್ಲದಿದ್ದರೂ ಕೊನೆಯ ಪಕ್ಷ ನನಗೆ ಕಿರುಕುಳ ಕೊಟ್ಟವರ ವಿರುದ್ಧ ಹೋರಾಡಲು ಕಲಿತೆ..

ಪೋಲೀಸರ ಭ್ರಷ್ಟಾಚಾರದ ಅರಿವಾಯಿತು..ರಕ್ಷಕರೇ ಭಕ್ಷಕರಾದರೆ ಸಾಮಾನ್ಯ ಜನರಿಗೆ ಬದುಕು ಬಹಳ ಕಷ್ಟಕರ ಎಂದೆನಿಸ್ತದೆ

ಬಸವಣ್ಣನವರು ಒಲೆ ಹತ್ತಿ ಉರಿದರೆ ನಿಲಲುಬಹುದಲ್ಲದೆ ಧರೆ ಹತ್ತಿ ಉರಿದರೆ ನಿಲಲು ಬಾರದು ಎಂದು 12 ನೆಯ ಶತಮಾನದಲ್ಲಿ ಹೇಳಿದ್ದರ ನಿಜವಾದ ಅರ್ಥ ಗೊತ್ತಾಯಿತು


ಕೇಳಬಾರದಂತ ಮಾತುಗಳನ್ನೂ ಆರೋಪಗಳನ್ನೂ ಎದುರಿಸಿರುವೆ,ಕನಸಲ್ಲೂ ಕಲ್ಪಿಸದಂತಹ ಪ್ರಶಸ್ತಿ ಪುರಸ್ಕಾರ ಗೌರವಗಳನ್ನೂ ಓದುಗರನ್ನೂ ಪಡೆದಿರುವೆ 


ಆದರೆ ಕೊಲ್ಲುವ ಪಿಶಾಚಿಗಳಿಗಿಂತ ಕಾಯುವ ದೇವರು ದೊಡ್ಡವನು..ಇನ್ನೇನು ಸೋತು ಹೋಗುವೆ ಎನ್ನುವಷ್ಟರಲ್ಲಿ ಏನೋ ಒಂದು ಬೆಳಕು ಎಲ್ಲಿಂದಲೋ  ಬಂದು ರಕ್ಷಿಸುತ್ತದೆ 


ಭವಿತವ್ಯಾಣಿ ದ್ವಾರಾಣಿ ಭವಂತಿ ಸರ್ವತ್ರ..ಆಗಲೇ ಬೇಕಾದವುಗಳಿಗೆ ಎಲ್ಲೆಡೆ ಬಾಗಿಲುಗಳು ಇರುತ್ತವೆ ಎಂದು ಕಾಳಿದಾಸ ಹೇಳಬೇಕಾಗಿದ್ದರೆ ಅವನಿಗೂ ಬದುಕಿನಲ್ಲಿ ಇಂತಹ  ಅಪಾರ ಅನುಭವಗಳು ಆಗಿದ್ದಿರಬೇಕು.


ಈಗ ಅಂದು ಗಂಗಾ ಪಾದೇಕಲ್ಲು ಅವರು ಹೇಳಿದ ಅನುಭವ ಆಗಬೇಕು ಆಗ ಬರಹ ಗಟ್ಟಿಯಾಗುತ್ತದೆ ಎಂದ ಮಾತಿನ ಸರಿಯಾದ ಅರ್ಥ ಆಗುತ್ತಿದೆ


ಅನುಭವ  ಎಲ್ಲೋ ಎಲ್ಲಿಂದಲೋ ಆಗುವದಲ್ಲ..ಬದುಕಿಗೆ ನಾವು ತೆರೆದುಕೊಂಡರೆ ಅದಾಗಿಯೇ ಆಗುತ್ತದೆ 

ಇನ್ನೂ ಆಗುವದ್ದು ತುಂಬಾ ಇರಬಹುದು


ನನ್ನ ಅನುಭವಗಳೆಲ್ಲವೂ ಕಹಿಯಾದುದಲ್ಲ..ಅದರಲ್ಕಿ ಕಹಿಗಿಂತ ಸಿಹಿಯಾದ ಸಂಭ್ರಮವೇ ಹೆಚ್ಚಿದೆ.ಕೆಲವು ಕಹಿ ಅನುಭವಗಳೂ  ಇವೆ


ನಾನು ಉಪನ್ಯಾಸಕಿಯಾದ ಕಾರಣ ಇರಬೇಕು..ನಾನು ಸದಾ ವಿದ್ಯಾರ್ಥಿಗಳ ಗೆಲುವನ್ನು ಸಂಭ್ರಮಿಸುತ್ತೇನೆ.ಅವರಿಗೆ ಬಾಷಣ ಪ್ರಬಂಧ ನಾಟಕ ಹೇಳಿಕೊಟ್ಟು ವೇದಿಕೆಯಲ್ಲಿ ಪ್ರಸ್ತುತ ಪಡಿಸಿ ಅವರ ಜೊತೆ ನಾನೂ ಸಂಭ್ರಮಿಸುತ್ತೆವೆ.ಪ್ರರಿ ವರ್ಷ ಹೊಸ ಹೊಸ ವಿದ್ಯಾರ್ಥಿಗಳು..ಹೊಸ ಹೊಸ ಅನುಭವಗಳು..ಇವರಿಗಾಗಿಯೇ ನಾಟಕ ಬರೆದು ನಾಟಕಗಾರ್ತಿ ಎನಿಸಿಕೊಂಡೆ..ನಾಟಕ ರಚನೆಯ ಬಗ್ಗೆ ಏನೊಂದೂ ಮಾಹಿತಿ ಇರದಿದ್ದರೂ ಏನೋ ನನಗರಿತಂತೆ ಬರೆದೆ .ನಿರ್ದೇಶನದ ಗಂಧ ಗಾಳಿ‌ಇರದಿದ್ದರೂ ಏನೋ ಒಂದು ನನಗರಿತಂತೆ ಮಕ್ಕಳಿಗೆ ಹೇಳಿಕೊಟ್ಟೆ..ಕೆಲವು ಬಹುಮಾನಗಳೂ ಬಂದವು..


ನನಗನಿಸಿದ್ದನ್ನು ಬರೆದು ಪತ್ರಿಕೆಗೆ ಕಳುಹಿಸಿ ಪ್ರಕಟವಾಗಿ ನಾನೂ ಒಬ್ಬ ಲೇಖಕಿ ಎನಿಸಿಕೊಂಡೆ.ನನ್ನ ಬ್ಲಾಗ್ ಬರಹಗಳ ಹೊರತಾಗಿಯೂ   ಮುನ್ನೂರರಷ್ಟು ನನ್ನ ಬರಹಗಳು ಬೇರೆ ಬೇರೆ ಪತ್ರಿಕೆಗಳಲ್ಲಿ  ವೆಬ್ ಪೋರ್ಟರ್ ಗಳಲ್ಲಿ  ಪ್ರಕಟವಾಗಿವೆ 25 ಪುಸ್ತಕಗಳೂ ಪ್ರಕಟವಾಗಿವೆ .ಬ್ಲಾಗ್ ನಲ್ಲಿ ಸಾವಿರಕ್ಕಿಂತ ಹೆಚ್ಚು ಬರಹಗಳಿವೆ

ಸುಮಾರು ಐದೂವರೆ ಲಕ್ಷ ಓದುಗರೂ ಇದ್ದಾರೆ 

ಕಣ್ಣಿಗೇ ಕಾಣಿಸದ ಸಾವಿರಾರು ಮಂದಿ ಹಿತೈಷಿಗಳಿದ್ದಾರೆ.ಅಂತೆಯೇ ಪರಿಚಯವೇ ಇಲ್ಲದಿದ್ದರೂ ದ್ವೇಷ ಸಾಧಿಸುವ ಕೆಲ ಜನರೂ ಇದ್ದಾರೆ.

ಡಾ

ಗಣೇಶಯ್ಯನರ ಕಾದಂಬರಿ ಬಳ್ಳಿ ಕಾಳಬೆಳ್ಳಿಯಲ್ಲಿ ಒಮದು ಪ್ರಮುಖ ಪಾತ್ರವಾಗಿ ಲಕ್ಷ್ಮೀ ಪೋದ್ದಾರ್ ಹೆಸರಿನ ನಿಜ ಪಾತ್ರವಾಗಿ ನನ್ನದೇ ತುಳು ಅಧ್ಯಯನದ ವಿಚಾರಗಳನ್ನು ಪ್ರಸ್ತುತ ಪಡಿಸುವ ವಿಶಿಷ್ಟ ಅನುಭವ ನನ್ನದಾಗಿದೆ 


ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕದ ಸಾವಿರಕ್ಕಿಂತ ಹೆಚ್ಚಿನ ಪುಟಗಳನ್ನು ತಿರುವಿ ಹಾಕುವಾಗ ಇದೆಲ್ಲ ನಾನು ಬರೆದದ್ದಾ ಎಂಬ ಅಚ್ಚರಿ ನನಗಾಗುತ್ತದೆ


ದೈವ ಕೃಪೆ ಎಂದರೆ ಇದೇ ಇರಬೇಕೆನಿಸುತ್ತದೆ..

ಮನುಷ್ಯ ಪ್ರಯತ್ನವನ್ನೇ ನಂಬಿದ್ದವಳು ನಾನು..ಆದರೂ ಮಂಗಳೂರು ಯೂನಿವರ್ಸಿಟಿಯ ಕನ್ನಡ ವಿಭಾಗದಲ್ಲಿ ನಡೆದ ನೇಮಕಾತಿಯ ಅಕ್ರಮ ಅನ್ಯಾಯದ ವಿರುದ್ದ ಸುಪ್ರೀಂ ಕೋರ್ಟಿನ ವರೆಗೂ ಹೋಗಿ ಸ್ಪಷ್ಟ ದಾಖಲೆ ಇದ್ದಾಗಲೂ ಸೋತ ನಂತರ ಮನುಷ್ಯ ಯತ್ನವನ್ನು ಮೀರಿದ ಏನೋ ಒಂದು ಇದೆ ಎಂಬುದು ನನ್ನ ಅರಿವಿಗೆ ಬಂದಿದೆ.ಅದು ತನಕ ನಾನು ಅದೃಷ್ಟ ದುರದೃಷ್ಟ ಎಂಬುದನ್ನು ಒಪ್ಪಿದವಳೇ ಅಲ್ಲ

ತೇನ ವಿನಾ ತೃಣಮಪಿ ನ ಚಲತಿ ಎಂಬಂತೆ ಎಲ್ಲವೂ ಅವನ ಅಣತಿಯಂತೆಯೇ ನಡೆಯುತ್ತದಾ ? 

ನನಗೆ ಗೊತ್ತಿಲ್ಲ..

ತೀರ ಸಣ್ಣ ವಯಸ್ಸಿನಲ್ಲಿಯೆ ಕ್ಯಾನ್ಸರ್ ನಂತಹ ಮಾರಕ ರೋಗಕ್ಕೆ ತುತ್ತಾಗಿ ಈ ಜಗತ್ತಿನಿಂದ ನಿರ್ಗಮಿಸಿದ ಸಹಪಾಠಿಗಳನ್ನು ಸಂಬಂಧಿಕರ  ನೆನಪಾದಾಗ ಐವತ್ತು ತಲುಪಿಸಿದ ದೇವರಿಗೆ ಕೃತಜ್ಞತೆಯನ್ನು  ಅರ್ಪಿಸಬೇಕು ಎಂದು  ನೆನಪಾಗುತ್ತದೆ 


ಹದಿನೈದು ವರ್ಷಗಳ ಹಿಂದೆ ನನಗೆ ಸರಿಯಾದ ಕೆಲಸವಿಲ್ಲ ಎಂದು ತಲೆಕೆಡಿಸಿಕೊಂಡಿದ್ದೆ.ವಯಸ್ಸು ಮೀರುತ್ತದೆ ಎಂಬ ಆತಂಕ ಕಾಡುತ್ತಿತ್ತು.ಅಂತೂ ನಾನು ಬಯಸಿದ ಸರ್ಕಾರಿ ಕಾಲೇಜು ಉಪನ್ಯಾಸಕ ಹುದ್ದೆ ದೊರೆತು ಹದಿನೈದು ವರ್ಷಗಳಾಗುತ್ತಾ ಬಂತು.ನನ್ನ ಕನಸಿನಂತೆ ಯಥೇಚ್ಛವಾಗಿ  ಭೂತ ಕೋಲ ರೆಕಾರ್ಡ್ ಮಾಡಿ ಅಧ್ಯಯನ ಮಾಡುದಕ್ಕಾಗಿಯೇ  ಬೆಳ್ಲಾರೆ ಕಾಲೇಜನ್ನು ಆಯ್ಕೆ ಮಾಡಿದೆ 

ಅದರ ಫಲ ರೂಪವಾಗಿ  ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ ಯಶಸ್ವಿಯಾಗಿದೆ 


ಇನ್ನು ಹತ್ತು ವರ್ಷಗಳ ಸರ್ವಿಸ್ ಇದೆ ನಂತರ ಮತ್ತೆ ಭೂತಾರಾಧನೆಯ ಅದ್ಯಯನ ಮುಂದುವರಿಸಬೇಕೆಂದಿರುವೆ

ನಿವೃತ್ತಿಯ ನಂತರದ ಬದುಕಿಗೆ ಈಗಲೇ ಸಿದ್ಧತೆ ಮಾಡಿಕೊಂಡಿರುವೆ.ನಮ್ಮ ಊರು ಪುತ್ತೂರಿನಲ್ಲಿ ನವ ಚೇತನ ರಿಟೈರ್ ಮೆಂಟ್ ಟೌನ್ ಶಿಪ್ ನಲ್ಲೊಂದು ಮನೆ ನಮಗಾಗಿ ತೆಗೆದಿರಿಸಿರುವೆ.


. A resort for seniors ಆಗಿರುವ ನವ ಚೇತನದಲ್ಲಿ   ಈಗಲೂ ರಜೆಯಲ್ಲಿ ಪೇಟೆಯವೆಲ್ಲ ಜಂಜಾಟಗಳಿಂದ ಹೊರ ಬಂದು ಶಾಂತವಾಗಿ ನಾಲ್ಕು ದಿನ ಅಲ್ಲಿ ಇದ್ದು ಬರುತ್ತಿರುವೆ 


ಮುಂದಿನದು ದೈವ ಚಿತ್ತ..


ಡಾ.ಲಕ್ಷ್ಮೀ ಜಿ ಪ್ರಸಾದ್

Sunday 7 January 2024

ಆತ್ಮ ಕಥೆಯ ಬಿಡಿ ಭಾಗಗಳು:ಅಮ್ಮಂದಿರು ಕೈಲಾಗುವಾಗಲೇ ದುಡ್ಡು ತೆಗೆದಿರಿಸಿಕೊಳ್ಳಿ

 ನನಗೂ ಆತ್ಮವಿದೆ  ಅದಕ್ಕೂ ಒಂದು ಕಥೆ ಇದೆ

ಅಮ್ಮಂದಿರೇ ಕೈ ನಡೆಯುವಾಗಲೇ ದುಡ್ಡು ನಿಮ್ಮ ಹೆಸರಿನಲ್ಲಿರಿಸಿಕೊಳ್ಳಿ- ಡಾ.ಲಕ್ಷ್ಮೀ ಜಿ ಪ್ರಸಾದ 


ತಾಯವ್ನ ಬೈಬ್ಯಾಡ ತಿಳಿಗೇಡಿ ನನತಮ್ಮ

ಬಾಳದಿನದಾಕಿ ಹಡೆದವ್ವನ ಬೈದರ

ಭಾಳ ಮರುಗ್ಯಾಳ ಮನದಾಗ ||


ಯಾರು ಇದ್ದರೂ ನನ್ನ ತಾಯವ್ವನ ಹೋಲ್ಹರು

ಸಾವಿರ ಕೊಳ್ಳಿ ಒಲಿಯಾಗ ಇದ್ದರ

ಜ್ಯೋತಿ ನಿನ್ಯಾರ ಹೋಲರ ||


ನಮ್ಮ‌ಪರಿಚಯದ  ಎಲ್ಲಮ್ಮ ಆಂಟಿ ಮಾತಿನ ನಡುವೆ  ಅವರ ಸ್ನೇಹಿತರೊಬ್ಬರ ನಡೆದ ಕಥೆಯನ್ನು  ಹೇಳಿದ್ದರು.

ಅವರ ಸ್ನೇಹಿತೆಯ ಗಂಡ ಒಳ್ಳೆಯ ಕೆಲಸದಲ್ಲಿದ್ದರು

ಒಬ್ಬ ಮಗ ಒಂದು ಮಗಳ‌ ಚಂದದ ಸಂಸಾರ

ಮಗ ಮತ್ತು ಮಗಳಿಗೆ ಸೈಟು ತೆಗೆದುಕೊಟ್ಟಿದ್ದರು

ಮಗನ ಹೆಸರಿನ ಸೈಟಿನಲ್ಲಿ ಡುಪ್ಲೆಕ್ಸ್ ಮನೆ ಕಟ್ಟಿ ಅರಾಮಾಗಿ ಬದುಕುತ್ತಿದ್ದರು.ಮಗ ಮಗಳಿಗೆ ಮದುವೆಯಾಗಿ ಸೊಸೆ ಅಳಿಯ ಬಂದರು

ಹೀಗೇ ದಿನ ಉರುಳುತ್ತಿರುವಾಗ ಒಂದು ರಾತ್ರಿ ಹೃದಯಾಘಾತ ಆಗಿ ಅಸ್ಪತ್ರೆಗೆ ತಲುಪುವ ಮೊದಲೇ ಗಂಡ ತೀರಿಕೊಂಡರು

ಮೊದಲಿನಿಂದಲೂ ದುಡ್ಡಿನ ವ್ಯವಹಾರ ಗಂಡನೇ ನೋಡಿಕೊಳ್ತಾ ಇದ್ದಿದ್ದು.ಹೆಂಡತಿಗೆ ಒಂದಿನಿತು ಹೊರಗಿನ ವ್ಯವಹಾರದ ತಿಳುವಳಿಕೆ ಇಲ್ಲ.ತಂದೆ ಸತ್ತಾಗ ಬಂದ ದುಡ್ಡೆಲ್ಲವನ್ನು ಮಗ ಅಮ್ಮನ ಸಹಿ ಹಾಕಿಸಿಕೊಂಡು ಪಡೆದ.ಇದರಿಂದಾಗಿ ಮಗಳಿಗೆ ಕೋಪ ಬಂತು.ತಾಯಿಯಕಡೆ ತಿರುಗಿ ನೋಡಲಿಲ್ಲ.

ತಂದೆ ಸತ್ತ ಕೆಲವೇ ದಿನಕ್ಕೆ ಮಗನಿಗೆ ತಾಯಿ ಭಾರವಾಗತೊಡಗಿದಳು.ಅವಳಲ್ಲಿದ್ದ ಆಭರಣಗಳನ್ನು ಚೂರಿ ತೋರಿಸಿ ಹೆದರಿಸಿ ಕಿತ್ತುಕೊಂಡು ಹೊರ ಹಾಕಿದರು.ಗಂಡ ಹೆಂಡತಿಯ ಹೆಸರಿನಲ್ಲಿ ಏನನ್ನೂ ಮಾಡಿಟ್ಟಿರಲಿಲ್ಲ.ನಂತರ ಆ ತಾಯಿ ಯಾರ್ಯಾರದೋ ಮನೆಯ ಅಡಿಗೆ ಕೆಲಸಕ್ಕೆ ಹೋಗಿ ಎಂಟು ನೂರು ರುಪಾಯಿಯ ಶೀಟಿನ ಮನೆಯಲ್ಲಿ ಬದುಕುವಂತಾಯಿತು.

ಇದೇ ರೀತಿ ಅವರ ಇನ್ನೊಂದು ಸ್ನೇಹಿತರ ಕಥೆಯೂ ಹೇಳಿದ್ದರು

ಬಹುಶಹ ಈ ಸ್ನೇಹಿತೆಗೆ ಒಂದು ಸಣ್ಣ ಸರ್ಕಾರಿ ಕೆಲಸ ಇತ್ತು.ಗಂಡ ಸಣ್ಣ ವಯಸ್ಸಿನಲ್ಲಿಯೇ ತೀರಿ ಹೋಗಿದ್ದರು.ತಂದೆ ತಾಯಿಯನ್ನು ಕಳೆದುಕೊಂಡ ಸಂಬಂಧಿಕರ ಹೆಣ್ಣು ಮಗುವನ್ನು ಮಗಳಂತೆ ಸಾಕಿ ಓದಿಸಿದರು.ತಮಗಾಗಿ ದುಡ್ಡು ಉಳಿಸಿಕೊಳ್ಳಲಿಲ್ಲ  ಅ ಸಾಕು ಮಗಳಿಗೆ ಮದುವೆಯಾಯಿತು.ಈಗ ಈ ಸಾಕುತಾಯಿಗೆ ನೆಲೆಯಿಲ್ಲದಾಯಿತು

ಅವರು ರಿಟೈರ್ಡ್ ಆದರು‌‌.ನಂತರ ಬರುವ ಪೆನ್ಷನ್ ನಲ್ಲಿ ಒಂದು ಸಣ್ಣ ಬಾಡಿಗೆ ಮನೆ ಹಿಡಿದು ಬದುಕುತ್ತಿದ್ದಾರೆ.ಇನ್ನೊಂದು ನನ್ನ ಸಂಬಂಧಿಕರದೇ ಉದಾಹರಣೆ

ಮಗಳು ಹುಟ್ಟಿ ಕಣ್ಣು ತೆರೆಯುವ ಮೊದಲೇ ಗಂಡ ತೀರಿ ಹೋಗಿದ್ದ.ಇವರೇಕೆ ಮುಂದೆ ಓದಿ ಸರಿಯಾದ ಕೆಲಸ ಹಿಡಿಯಲಿಲ್ಲ ಎಂದು ನನಗೆ ಗೊತ್ತಿಲ್ಲ.ಮಗಳು ಬಹಳ ಜಾಣೆ.ಇಂಜನಿಯರಿಂಗ್ ಓದಿ ಮದುವೆಯಾದಳು.ಅದು ಅತ್ತೆ ಮಾವ ಮೈದುನಂದಿರು ಇರುವ ಕೂಡು ಕುಟುಂಬ.ಈ ತಾಯಿಗೆ ಯಾಕೋ ಅಲ್ಲಿ ಸರಿ ಹೋಗಲಿಲ್ಲ.ನಂತರ ಪುನಃತಂದೆ ಮನೆ ಸೇರಿದರು‌ಅದೃಷ್ಟಕ್ಕೆ ಸ್ವಲ್ಪ ಪಿತ್ರಾರ್ಜಿತ ಆಸ್ತಿಯೂ ಇದೆ.ಇರಲು ತಂದೆ ಮನೆ ಇದೆ..ಹೇಗೋ ನಡೆದಿರಬಹುದು ಅವರ ಬದುಕು.

ಹೀಗೆ ಸುತ್ತ ಮುತ್ತ ಅನೇಕ ಘಟನೆಗಳ ಬಗ್ಗೆ ಕೇಳ್ತಾ ಇದ್ದೇವೆ.ತಂದೆ ತಾಯಿಯರ ಮನೆ ಆಸ್ತಿ ಪಾಸ್ತಿ ದುಡ್ಡನ್ನು ತಮ್ಮ ಹೆಸರಿಗೆ ಮಾಡಿಕೊಂಡು ನಂತರ ತಂದೆ ತಾಯಿಯರನ್ನು ನೋಡಿಕೊಳ್ಳದೆ ಇರುವ ಅನೇಕ ಮಕ್ಕಳಿದ್ದಾರೆ.ಇಂತಹ ವಿಷಯಗಳಲ್ಲಿ ಮಗಳು ಮಗನೆಂಬ ಬೇಧ ಇಲ್ಲ

ತಂದೆ ತಾಯಿಯರನ್ನು ಕೆಲಸದಾಳಿನಂತೆ ದುಡಿಸಿಕೊಳ್ಳುವ ಅವರು ಕೆಲಸ ಮಾಡಲಾಗದಷ್ಟು ಅಶಕ್ತರಾದಾಗ ಹೊರಗೆ ಹಾಕುವ ಮಗಳಂದಿರೂ ಇದ್ದಾರೆ

ಹಾಗಾಗಿ ತಂದೆ ತಾಯಂದಿರು ಸ್ವಲ್ಪ ಎಚ್ಚತ್ತುಕೊಳ್ಳಬೇಕಿದೆ.ಸರ್ವಸ್ವವನ್ನೂ ಮಕ್ಕಳಿಗೆ ಕೊಡದೆ ತಮ್ಮ ವೃದ್ಧಾಪ್ಯದ ದಿನಗಳಿಗಾಗಿ ಇರಿಸಿಕೊಳ್ಳಬೇಕು.ಮಕ್ಕಳಿಗೆ ಎಜುಕೇಶನ್ ಕೊಡಿಸಬೇಕು ಅಷ್ಟೇ..ಹಾಗೆಂದು ವಿಪರೀತ ಸಾಲ ಮಾಡಿಕೊಂಡು ಓದಿಸುವುದಲ್ಲ.ಅವರು ತೆಗೆದ ಅಂಕಗಳಿಗೆ ಯಾವುದು ಸಿಗುತ್ತದೋ ಅದನ್ನಷ್ಟೇ ಓದಿಸಬೇಕು.

ಎಷ್ಟೇ ತ್ಯಾಗ ಮಾಡಿ ಕಷ್ಟ ಪಟ್ಟು ಬೆಳೆಸಿದರೂ ಮಕ್ಕಳಿಗೆ ಆ ಬಗ್ಗೆ ಒಂದಿನಿತೂ ಕೃತಜ್ಞತೆ ಇರುವುದಿಲ್ಲ.ತಾವು ತಂದೆ ತಾಯಿಗೆ ಮಾಡಿದ್ದೇ ಹೆಚ್ಚೆಂಬ ಭಾವ ಇರುತ್ತದೆ

ಸಾಮಾನ್ಯವಾಗಿ ತಂದೆ ಇರುವ ತನಕ ಸಮಸ್ಯೆ ಅಗುದಿಲ್ಲ.ಯಾಕೆಂದರೆ ದುಡ್ಡು ಅಸ್ತಿ ಎಲ್ಲ ತಂದೆ ಹೆಸರಲ್ಲಿ ಇರುತ್ತದೆ.ತಂದೆ ತೀರಿ ಹೋದ ನಂತರ ಉಳಿಯುವ ತಾಯಿಯ ಹೆಸರಲ್ಲಿ ಯಾವುದೇ ಆಸ್ತಿಪಾಸ್ತಿ ದುಡ್ಡಿಲ್ಲದೇ ಇರುವಾಗ ಸಮಸ್ಯೆ ಶುರುವಾಗುತ್ತದೆ.ತಾಯಿ‌ ಮುಟ್ಟಿದ್ದು ಮಾತನಾಡಿದ್ದು.ಉಸಿರೆಳೆದದ್ದು ಎಲ್ಲದರಲ್ಲಿಯೂ ತಪ್ಪುಗಳು ಕಾಣಿಸುತ್ತವೆ.

ಎಷ್ಟೇ ಪ್ರೀತಿಯಿಂದ ತಮಗಾಗಿ ಏನು ಇರಿಸಿಕೊಳ್ಳದೆಯೇ ಮಕ್ಕಳನ್ನು ಸಾಕಲಿ

ವಯಸ್ಸಾದಾಗ ನನ್ನನ್ನು ಹೆತ್ತದ್ದು ಯಾಕೆ ಸಾಕಿದ್ದು ಯಾಕೆ ಓದಿಸಿದ್ದು ಯಾಕೆ ,ನಿನ್ನಿಂದಾಗಿ ನನ್ನ ಬದುಕು ಹಾಳಾಯಿತು ಎಂಬ ಮಕ್ಕಳ ಸಂಖ್ಯೆ ಹೆಚ್ಚಿದೆ


ದುಡ್ಡಿದ್ದರೆ ಇಂದು ಪೇ ಮಾಡಿ ಇರುವ ವೃದ್ಧಾಶ್ರಮಗಳಲ್ಲಿ ಆರಾಮಾಗಿ ಇರಬಹುದು.ಮಗಳು ಅಳಿಯ ಮಗ ಸೊಸೆಯಂದಿರ ಗಂಟು ಹಾಕಿದ ಮುಖ ನೋಡಿಕೊಂಡು ಬೈದರೂ ಬಡಿದರೂ ಅನುಭವಿಸಿಕೊಂಡು ಇರುವ ಅಗತ್ಯವಿಲ್ಲ.ತಮ್ಮದೇ ವಯಸ್ಸಿನ ಸ್ನೇಹಿತರ ಜೊತೆಗೆ ಆರಾಮಾಗಿ ಬದುಕಬಹುದು.

ಹಾಗಾಗಿ ಅಮ್ಮಂದಿರು ತಮಗೆ ಅರುವತ್ತು ವರ್ಷದ ನಂತರದ ಜೀವನಕ್ಕೆ ಬೇಕಾದಷ್ಟು ದುಡ್ಡನ್ನು ತಮ್ಮ ಹೆಸರಿನಲ್ಲಿಯೇ ಇರಿಸಿಕೊಳ್ಳಬೇಕು

ಮಕ್ಕಳು ಒಳ್ಳೆಯವರೇ ಆಗಿದ್ದರೂ ಅವರಿಗೆ ಭಾರವೆನಿಸಬೇಕಿಲ್ಲ.ತಮ್ಮ ಕೈಲಾದಷ್ಟು ದಿನ ಸ್ವತಂತ್ರವಾಗಿ ಬದುಕಿ ಕೈಲಾಗದಾಗ ಪೇ ಮಾಡುವ ವೃದ್ಧಾಶ್ರಮಕ್ಕೆ ಹೋಗಬಹುದು.ಅಥವಾ ಮಕ್ಕಳೇ ನೋಡಿಕೊಳ್ಳುದಾದರೆ ಅವರ ಜೊತೆಗೂ ಇರಬಹುದು.ಆದರೆ ದುಡ್ಡಿದ್ದರೆ ಬೈದರೂ ಬಡಿದರೂ ಅವರ ಜೊತೆಗೇ ಬದುಕುವ ಅನಿವಾರ್ಯತೆ ಇರುವುದಿಲ್ಲ.ಹಾಗಾಗಿ ಎಚ್ಚತ್ತುಕೊಳ್ಳಬೇಕಿದೆ.

ಇದಲ್ಲದೆ ಇತ್ತೀಚೆಗಿನ ಇನ್ನೊಂದು ಸಮಸ್ಯೆ ಮಕ್ಕಳೆಲ್ಲ ವಿದೇಶದಲ್ಲಿ ನೆಲೆಸುವದ್ದು.ಊರಿನಲ್ಲಿರುವ ವೃದ್ಧ ತಂದೆ ತಂದೆ ತಾಯಿಗೆ ಬೇಕಾದದ್ದನ್ನು ತಂದುಕೊಡುವವರಿಲ್ಲ.ಆರೋಗ್ಯ ಹಾಳಾದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವವರಿಲ್ಲದ ದುಸ್ಥಿತಿ.ಅಡುಗೆ ಮಾಡಿ ಕೊಡುವವರಿಲ್ಲ.

ಇದಕ್ಕೂ ಪೇ ಮಾಡುವ ವೃದ್ಧಾಶ್ರಮಗಳೇ ಸದ್ಯಕ್ಕೆ ಕಾಣಿಸುವ ಪರಿಹಾರ.

ನಾನಿವತ್ತು ಅಕ್ಕನ ಜೊತೆ ಮಾತನಾಡುವಾಗ ಮಕ್ಕಳು ಚೆನ್ನಾಗಿ ನೋಡಿಕೊಂಡಿರುವ ತಲೆಮಾರಿನಲ್ಲಿ ನನ್ನ ಅಮ್ಮನದೇ ಕೊನೆ ಇರಬಹುದು ಎಂದು ಹೇಳಿದೆ.

ತಮ್ಮ‌ತಮ್ಮನ ಹೆಂಡತಿ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ತಿದ್ದಾರೆ.ಅಮೇರಿಕಾದಲ್ಲಿನ ಅಣ್ಣ ಮತ್ತು ದೊಡ್ಡ ತಮ್ಮ ದುಡ್ಡು ಕಾಸಿನ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ

ಮುಂದೆ ನಮ್ಮ ಮಕ್ಕಳಿಂದ ಇದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ.ಅವರು ಚೆನ್ನಾಗಿ ನೋಡಿಕೊಂಡರೆ ನಮ್ಮ ಪುಣ್ಯ

ಆದರೆ ನಾವ್ಯಾಕೆ ಅವರಿಗೆ ಭಾರವಾಗಬೇಕು.ನಮ್ಮ‌ಕೈಲಾದಷ್ಟು ದಿನ ಸ್ವತಂತ್ರವಾಗಿದ್ದು.ಮಕ್ಕಳಿಗೂ ಸ್ವತಮತ್ರವಾಗಿ ಬದುಕಲು ಅನುವು ಮಾಡಿಕೊಡುದು ಒಳ್ಳೆಯದಲ್ವಾ? ಕೈಲಾಗದೇ ಇರುವ ಪ್ರಸಂಗ ಬಂದರೆ ಮುಂದಿನದು ನೋಡಿಕೊಂಡರಾಯಿತು.ಆದರೆ ನಾವು ರಿಟೈರ್ಮೆಮಟಿನ ನಂತರದ ಬದುಕಿಗೆ ಬೇಕಾದಷ್ಟು  ದುಡ್ಡು ಹೊಂದಿಸಿಟ್ಟಿರಬೇಕು

ಸಾಕಷ್ಟು ಲೈಫ್ ಇನ್ಷುರೆನ್ಸ್ ಮಾಡಿಸಿ ಇಡುವುದು ಒಳ್ಳೆಯದು.ತಿಂಗಳು ತಿಂಗಳು ಕಟ್ ಆಗುವಾಗ ನಮಗೇನೂ ಅದೊಂದು ಹೊರೆ ಎನಿಸುವುದಿಲ್ಲ.ಆದರೆ ಕಡ್ಡಾಯವಾಗಿ ಸೇವಿಂಗ್ ಅಗಿರುತ್ತದೆ‌.ನಮಗೆ ಅರುವತ್ತು ಎಪ್ಪತ್ತು ವರ್ಷಗಳಾಗುವಾಗ ಪಾಲಿಸಿ‌ ಮೆಚ್ಯೂರ್ ಅಗಿ ನಮಗೆ ಸಾಕಷ್ಟು ದುಡ್ಡು ಬರುತ್ತದೆ.ಜೊತೆಗೆ ಆರೋಗ್ಯ ವಿಮೆಯನ್ನೂ ಮಾಡಿಸಿರಬೇಕು.ಒಮ್ಮೆ ಆರೋಗ್ಯ ಸಮಸ್ಯೆ ಬಂದ ನಂತರೆ ಜೀವ ವಿಮೆ ಅಥವಾ ಆರೋಗ್ಯ ವಿಮೆ ಮಾಡಿಸಲು ಆಗುವುದಿಲ್ಲ.ಅದಕ್ಕಾಗಿ ಸಣ್ಣ ವಯಸ್ಸಿನಲ್ಲಿ ಆರೋಗ್ಯವಂತ ರಾಗಿ ಇರುವಾಗಲೇ ಮಾಡಿಸಿರಬೇಕು.ಜೊತೆಗೆ ಪೋಸ್ಟಲ್ ಡಿಪಾರ್ಟ್ ಮೆಂಟಿನಲ್ಲಿ ಸೇವಿಂಗ್ ಮಾಡಿಡಬಹುದು.

ಏನೇ ಆದರೂ ಅರುವತ್ತರ ನಂತರದ ಬದುಕಿಗೆ ನಮ್ಮಲ್ಲಿ ಸಾಕಷ್ಟು ದುಡ್ಡಿರಬೇಕು.


ನನ್ನ ಸ್ನೇಹಿತೆಯೊಬ್ಬಳ ತಂದೆ ತೀರಿ ಹೋಗಿ ತಾಯಿಯ ಕೈಯಲ್ಲಿ ದುಡ್ಡು ಇತ್ತು.ಮಗನಿಗೆ ಒಳ್ಳೆಯ ಕೆಲಸ ಇತ್ತು.ಈ ನನ್ನ ಸ್ನೇಹಿತೆ ಮಗಳಿಗೆ ಡೈವರ್ಸ್ ಆಗಿತ್ತು.ಅವಳ ಬಾಡಿಗೆ ಮನೆಗೆ ಹೋಗಿದ್ದಾಗ  ಬೆಂಗಳೂರಿನಲ್ಲಿ ಮನೆ ಕಟ್ಟಿಸಿಕೊಡುವ ವಿಚಾರ ಬಂತು.ಆಗಪೋನ್ ಕರೆ ಬಂದು  ನನ್ನ ಸ್ನೆಹಿತೆ ಮನೆಯ ಹೊರಗೆ ಹೋಗಿದ್ದಳು.ನಾನು ಮಾತಿ‌ ನಡುವೆ ನೀವು ಸಾಕಷ್ಟು ದುಡ್ಡು ದುಡ್ಡು ಇರಿಸಿಕೊಳ್ಳಿ ಎಂದಿದ್ದೆ.ನಂತರ ಒಂದಿನ ಅವರು ಮಾತ್ರ ನಮ್ಮನೆಗೆ ಬಂದು ಮಾತನಾಡಿದರು.ತಮ್ಮಲ್ಲಿರುವ 80% ದುಡ್ಡು ಕೊಟ್ಟರೆ ಮಾತ್ರ ಮಗಳಿಗೆ ಮನೆ ಆಗಲು ಸಾಧ್ಯ.ಆದರೆ ನಂತರ ನನ್ನ ಕೈಯಲ್ಲಿ ಹತ್ತು ಲಕ್ಷ ಉಳಿಯುತ್ತದೆ ಅಷ್ಟೇ ..ಏನು ಮಾಡುದು ಎಂದಿದ್ದರು.ಆಗ ನಾನು ಅರ್ಧಾಂಶ ಇಟ್ಟುಕೊಂಡು ಉಳಿದ ಅರ್ಧಾಂಶದಲ್ಲಿ ಸೈಟ್ ತೆಗೆಯಿರಿ.ಅದು ನಿಮ್ಮ ಹೆಸರಿನಲ್ಲಿಯೇ ಇರಲಿ‌.ನಂತರ ಸಾಲ ಮಾಡಿ ಅವರು ತಾಯಿ ಮತ್ತು ಮಗ( ನನ್ನ ಸ್ನೇಹಿತೆ ಮತ್ತು ಅವರ ಮಗ)ಮನೆ ಕಟ್ಟಿಕೊಳ್ಳಲಿ ಎಂದೆ.ಅವರು ಹಾಗೆಯೇ ಮಾಡಿದ್ದರು.ನಂತರ ಯಾಕೋ ಮಗಳ ಮನೆಯಲ್ಲಿಯೂ ಸರಿ ಹೋಗದೆ ಕೆಲ ವರ್ಷ ಗಂಡ ಕಟ್ಟಿಸಿದ್ದ ಮನೆಯಲ್ಲಿ ಅಡಿಗೆಗೆ ಕೆಲಸಕ್ಕೆ ಕೆಲಸದವರನ್ನು ಇರಿಸಿಕೊಂಡು ಸ್ವತಂತ್ರವಾಗಿ ಬದುಕಿದ್ದರು.ತೀರಾ ಓಡಾಡಲು ಆಗದೇ ಇದ್ದಾಗ ಪೈಡ್ ವೃದ್ಧಾಶ್ರಮಕ್ಕೆ ಹೋಗಿದ್ದರು.ಮಕ್ಕಳು ಅಗಾಗ ಮನೆಗೆ ಕರೆ ತರ್ತಾ ಇದ್ದರು.ಅಲ್ಲಿಗೂ ಹೋಗ್ತಾ ಇದ್ದರು.

ಅವರು ವೃದ್ಧಾಶ್ರಮವನ್ನು ಇಷ್ಟ ಪಡುತ್ತಾ ಇದ್ದರು.ಒಂದಿನ ಮಗ ಕರೆದುಕೊಂಡು ಬಂದಿರುವಾಗ ಮಗನ ಮಡಿಲಲ್ಲಿ ಪ್ರಾಣ ಬಿಟ್ಟಿದ್ದರು.


ಮಕ್ಕಳಲ್ಲೂ ನಾನು ಹೇಳುವುದಿಷ್ಟೇ..ವಯಸ್ಸಾದ ತಂದೆ ತಾಯಿಯರನ್ನು ಮಾತು ಮಾತಿಗೆ ಹಂಗಿಸಿ ಕಣ್ಣೀರು ಹಾಕುವಂತೆ ಮಾಡಬೇಡಿ.ಎಲ್ಲ ತಂದೆ ತಾಯಂದಿರೂ ತಮಗಾಗಿ ಏನೂ ಇರಿಸದೆ ಮಕ್ಕಳಿಗಾಗಿ ತಮ್ಮ ಆಸೆ ಅಕಾಂಕ್ಷೆಗಳನ್ಮು ತ್ಯಾಗ ಮಾಡಿರ್ತಾರೆ.ಲೋಪ ದೋಷಗಳಿಲ್ಲದ ಮನುಷ್ಯರಿಲ್ಲ.ನಮ್ಮಲ್ಲಿ ಇತರರಿಗಿಂತ ನೂರು ಪಟ್ಟು ಹೆಚ್ಚು ಇರ್ತದೆ.ನಮಗೆ ನಮ್ಮ ಬೆನ್ನು ಕಾಣುವುದಿಲ್ಲ ಅಷ್ಟೇ..ನಾವು ನಮ್ಮ ಮೂಗಿನ ನೇರಕ್ಕೆ ಅಲೋಚಿಸುತ್ತೇವೆ ಅಷ್ಟೇ..


ನಿಮಗೆ ಸಾಧ್ಯವಾದರೆ ನೀವೇ ಚೆನ್ನಾಗಿ ನೋಡಿಕೊಳ್ಳಿ.ಅವರಿಗೆ ತಾವು ಮಕ್ಕಳಿಗೆ ಭಾರ ಆಗಿದ್ದೇವೆ ಎಂಬ ಭಾವ ಬರದಂತೆ ನೋಡಿಕೊಳ್ಳಬೇಕು.ಆಗದೇ ಇದ್ದರೆ ಸಾಕಷ್ಟು ಸೌಲಭ್ಯಗಳಿರುವ  ಪೇ ಮಾಡುವ ವೃದ್ಧಾಶ್ರಮಗಳಿಗೆ ಸೇರಿಸಿ ಇಲ್ಲವೇ ಅವರಿಗೆ ಸ್ವತಂತ್ರವಾಗಿ ಬದುಕುವಂತೆ ವ್ಯವಸ್ಥೆ ಮಾಡಿಕೊಡಿ..ಹುಟ್ಟುವಾಗ ಆರಿಂಚು ಉದ್ದ ಇರುವ ಮಗು ಗಾಳಿಯಲ್ಲಿ ಬೆಳೆದು ಆರಡಿ ಆಗುವುದಿಲ್ಲ.ಅವರನ್ನು ಅಷ್ಟು ದೊಡ್ಡ ಮಾಡಲು ತಂದೆ ತಾಯಿ ಕಷ್ಟ ಪಟ್ಟಿರುತ್ತಾರೆ.ಮಕ್ಕಳಿಗೂ ಕರ್ತವ್ಯ ಇದೆ ಇದನ್ನು ಮರೆಯಬಾರದು.

ದೂರದಲ್ಲಿದ್ದರೆ ದಿನಕ್ಕೊಮ್ಮೆಯಾದರೂ  ತಂದೆ ತಾಯಿಯರಿಗೆ  ಅಜ್ಜ ಅಜ್ಜಿಯರಿಗೆ ಫೋನ್ ಮಾಡಿ ಊಟ ಮಾಡಿದೆಯಾ ತಿಂಡಿ ತಿಂದೆಯಾ ಎಂದು ವಿಚಾರಿಸಿ.ಹೆತ್ತವರಂತೆಯೇ ಅಜ್ಜ ಅಜ್ಜಿ ಕೂಡ ನಿಮಗಾಗಿ ತ್ಯಾಗ ಮಾಡಿರ್ತಾರೆ ಮರೆಯಬೇಡಿ..ಅವರನ್ನು ಪ್ರೀತಿಯಿಂದ ಕಾಣಿ..ಅಜ್ಜ ಅಜ್ಜಿಯರನ್ನು ಹೆತ್ತವರಂತೆಯೇ ಕಾಣಬೇಕು.ಅವರನ್ನು ನಿರ್ಲಕ್ಷ್ಯ ಮಾಡಿದರೆ ಮನದೊಳಗೆ ನೊಂದುಕೊಳ್ತಾರೆ.ಅವರ ಮನದ ನೋವಿನ ಕಾವು ನಮಗೆ ತಟ್ಟಬಹುದು..ಅವರೆಲ್ಲ ಶಾಶ್ವತರಲ್ಲ..ಬದುಕಿರುವಾಗ ಚಂದಕೆ ನೋಡಿಕೊಳ್ಳಬೇಕು.ಬದುಕಿರುವಷ್ಟೂ ದಿನ ಹಂಗಿಸಿ ಕಣ್ಣೀರು ಹಾಕಿಸಿ ನಂತರ ಬಹಲ ವೈಭವದ ಬೊಜ್ಜ ಮಾಡಿದರೆ ಏನೂ ಪ್ರಯೋಜನವಿಲ್ಲ..ಪ್ರೀತಿ ಗೌರವವನ್ನು ಬಾಯಿ ಬಿಟ್ಟು ಆಡಿ ತೋರಿಸಬೇಕು.ನಿಮ್ಮಿಂದಾಗಿಯೇ ನಾನು ಈ ಉತ್ತಮ ಸ್ಥಿತಿಗೆ ಬಂದೆ ಎಂದು ಹೆತ್ತವರಿಗೆ ಅಜ್ಜ ಅಜ್ಜಿಯರಿಗೆ ಹೇಳಬೇಕು..ಮನದಲ್ಲಿ ಪ್ತೀತಿ ಇದೆ ಎಂದರೆ ಸಾಲದು..ಒಂದು ಸೀರೆಯೋ ಶಲ್ಯವೋ ಸ್ವೆಟರೋ ತೆಗೆದುಕೊಡಬೇಕು.ಆಗ ಅವರಿಗೆ ತಮ್ಮ ಮಕ್ಕಳು ಮೊಮ್ಮಕ್ಕಳು ತಂದುಕೊಟ್ಟಿದ್ದಾರೆ ಎಂದು ತಮ್ಮ ಸರೀಕರಲ್ಲಿ ಹೇಳಿಕೊಂಡು ಹೆಮ್ಮೆ ಪಡ್ತಾರೆ..ಅವರು ಅವರಿಗಾಗಿ ಏನನ್ನೂ ಬಯಸುವುದಿಲ್ಲ.ತಮ್ಮ ಮಕ್ಕಳು ಚೆನ್ನಾಗಿ ನೋಡಿಕೊಳ್ಲುತ್ತಿದ್ದಾರೆ ಎಂದು ತೋರಿಸಲು ಇಂತಹದ್ದನ್ನು ಮನದೊಳಗೆ ಬಯಸಿರುತ್ತಾರೆ