Sunday 28 May 2017

ದೊಡ್ಡವರ ದಾರಿ: ನಮ್ಮ ಕಾರಂತ ಮಾವ ©ಡಾ ಲಕ್ಷ್ಮೀ ಜಿ ಪ್ರಸಾದ್

ನಮ್ಮ ಬದುಕಿನಲ್ಲಿ ಬಹು ದೊಡ್ಡ ಆತ್ಮೀಯತೆಯನ್ನು  ತೋರಿಸಿದವರು ನಮ್ಮ ಆತ್ಮೀಯರಾದ ನಮ್ಮ ತಂದೆ ಮನೆ ಪಕ್ಕದ ಮನೆಯ ಕಾರಂತ ಮಾವ ಎಂದೇ ನಾವು ಕರೆಯುತ್ತಾ ಇದ್ದ ಕೋಳ್ಯೂರು ಆನಂದ ಕಾರಂತರದು.ನನ್ನ ತಂದೆ ಮತ್ತು ಅವರ ನಡುವಿನ ಸ್ನೇಹ ಎಲ್ಲ ಉಪಮೆಗಳನ್ನು ಮೀರಿದ್ದು ಅದನ್ನು ಬಣ್ಣಿಸಲು ಪದಗಳಿಲ್ಲ .ಅದರಲ್ಲಿ ಹೊಟ್ಟೆಕಿಚ್ಚು ಮತ್ಸರದ ಲವಲೇಶವೂ ಇರಲಿಲ್ಲ.
1978 ರಲ್ಲಿ ಎಂದರೆ ಮೂವತ್ತೊಂಬತ್ತು ವರ್ಷಗಳ ಹಿಂದೆ ನನ್ನ ತಂದೆಯ ಹಿರಿ ಮನೆಯಲ್ಲಿ ಆಸ್ತಿ ಪಾಲಾಗಿ ಅಲ್ಲಿಂದ ಒಂದು ಪರ್ಲಾಂಗು ದೂರದಲ್ಲಿ ಕೋಳ್ಯೂರು ದೇವಾಲಯದ ಸಮೀಪ ಹೊಸ ಮನೆ ಕಟ್ಟಿ ನೆಲೆಯಾದಾಗ ಬೆಂಬಲ ಕೊಟ್ಟವರು ನಮ್ಮ ನೆರೆ ಮನೆಯವರಾದ ಆನಂದ ಕಾರಂತರು .ನಮ್ಮ ತಂದೆ ತುಂಬಾ ಮುಗ್ದ ರು ಜನರು ಸಾಕಷ್ಟು ಮೋಸ ವಂಚನೆ ಮಾಡುತ್ತಿದ್ದರೆ ನಮ್ಮ ರಕ್ಷಣೆಗೆ ನಿಂತವರು ಕಾರಂತ ಮಾವ .
ಅವರ ತೋಟದ ಪಕ್ಕದಲ್ಲಿ ನಮ್ಮ ಸಣ್ಣ ತೋಟ ಇದ್ದು ಅದರಲ್ಲಿ ಅಡಿಕೆ ತೆಂಗು ಕಳ್ಳರ ಪಾಲಾಗದೆ ಒಂದಿನಿತು ನಮಗೆ ಉಳಿದಿದ್ದರೆ ಅದಕ್ಕೆ ಕಾರಣ ಕಾರಂತ ಮಾವ.ಅವರ ಮನೆಯಿಂದಲೇ ನಮ್ಮ ತೋಟ ಗದ್ದೆ ಅವರಿಗೆ ಕಾಣಿಸುತ್ತಾ ಇತ್ತು .ಅಲ್ಲಿಂದಲೇ ಒಂದು ಅವಾಜ್ ಹಾಕಿದರೆ ಅಡಿಕೆ ತೆಂಗು‌ಕದಿಯಲು ಬಂದವರು ಓಡಿ ಹೋಗುತ್ತಿದ್ದವರು ಮತ್ತೆ ವರ್ಷ ಕಳೆದರೂ ಆ ಕಡೆಗೆ ತಲೆ ಇಟ್ಟು ಮಲಗುತ್ತಿರಲಿಲ್ಲ .
ನಮ್ಮ ತಂದೆ ಹೊಸ ಮನೆ ಕಟ್ಟ ಹೊರಟಾಗ ಒಂದು ನಯಾ ಪೈಸೆ ದುಡ್ಡು ಅವರಲ್ಲಿ ಇರಲಿಲ್ಲ. ಪೂರ್ತಿಯಾಗಿ ಸಾಲದಿಂದ ಮನೆ ಕಟ್ಟುವಾಗ ದುಡ್ಡು ಕೊರತೆಯಾಗಿ ಮನೆಗೆ ಬಾಗಿಲು ಇರಿಸಲೇ ಸಾಧ್ಯವಾಗಿರಲಿಲ್ಲ. ಇನ್ನು ಸ್ನಾನದ ಮನೆ ಕಟ್ಟುವುದು ಎಲ್ಲಿಂದ ಬಂತು ? ಈ ಸಂದರ್ಭದಲ್ಲಿ ನನ್ನ ತಂದೆ ಹಾಗೂ ಅಣ್ಣ ತಮ್ಮಂದಿರು ತೆರೆದ ಬಯಲಿನಲ್ಲಿ ಮರದ ಅಡಿಯಲ್ಲಿ ನೀರು ಕಾಸಿ ಬಿಸಿ ಮಾಡಿ ಸ್ನಾನ ಮಾಡುತ್ತಿದ್ದರು ನನ್ನ ಅಮ್ಮ ಅಕ್ಕ ನನಗೆ ಸ್ನಾನದ ಮನೆ ಇಲ್ಲದ್ದು ದೊಡ್ಡ ಸಮಸ್ಯೆ ಆಗಿತ್ತು .ಆಗ ನಮಗೆ ಬೆಂಬಲ ನೀಡಿದವರು ಆನಂದ ಕಾರಂತ ಮಾವ ಮತ್ತು ಅವರ ಮಡದು.ನಮಗೆ ಅವರ ಬಚ್ಚಲು ಮನೆಯಲ್ಲಿ ಸ್ನಾನ ಮಾಡಲು ಅವರು ತಿಳಿಸಿದರು ನಮ್ಮ ಮನೆಯಲ್ಲಿ ಸ್ವಲ್ಪ ದುಡ್ಡು ಹೊಂದಿಸಿ ಬಚ್ಚಲು ಮನೆ ಕಟ್ಟುವ ತನಕ ನಾವು ಕಾರಂತ ಮಾವನ ಮನೆಯ ಬಚ್ಚಲಯ ಮನೆಯಲ್ಲಿ ಅವರು ಕಾಯಿಸಿ ಇಟ್ಟ ನೀರಿನಲ್ಲಿ ಸ್ನಾನ ಮಾಡುತ್ತಿದ್ದೆವು ಅದಲ್ಲದೇ ಆ ಕಾಲದಲ್ಲಿ ನಮ್ಮ ಊರಿನ ಯಾರ ಮನೆಯಲ್ಲಿ ಯೂ ಶೌಚಾಲಯ ಇರಲಿಲ್ಲ. ಎಲ್ಲರೂ ಚೆಂಬು ಹಿಡಿದುಕೊಂಡು ಗುಡ್ಡೆಗೆ ಹೋಗ ಬೇಕಾಗಿತ್ತು. ಹೊಸ ಮನೆ ಕಟ್ಟಿ ಬಂದ ನಮಗೆ ಒಂದು ಅಂಗೈ ಅಗಲದಷ್ಟು ಕೂಡ ಗುಡ್ಡೆ ಅಥವಾ ಬೇರೆ ಜಾಗ ಇರಲಿಲ್ಲ ಆಗ ನಾವೆಲ್ಲರೂ ಹೋದದ್ದು ಅವರ ಗುಡ್ಡೆಗೆ.ಅವರೂ ಏನು ತುಂಬಾ ಜಾಗ ಇರುವ ಸಿರಿವಂತ ರಲ್ಲ ಆದರೆ ಅವರ ಹೃದಯ ಶ್ರೀಮಂತಿಗೆ ಯಾವುದೇ ಕೊರತೆ ಇರಲಿಲ್ಲ .ಬೇರೆ ಯಾರೇ ಆದರೂ ನಮ್ಮ ಜಾಗಕ್ಕೆ ಬರಬೇಡಿ ಎಂದು ಹೇಳುತ್ತಿದ್ದರು.ಆದರೆ ಒಂದೇ ಒಂದು ಮಾತು ಕೂಡಾ ಅವರು ಆ ಬಗ್ಗೆ ಹೇಳಿರಲಿಲ್ಲ.
ಇದಾಗಿ ಕಾಲಚಕ್ರ ತಿರುಗತೊಡಗಿತು.ನನ್ನ ಅಣ
 ಅಮೇರಿಕಕ್ಕೆ ಹೋದ ಮೇಲೆ ನಮ್ಮ ಮನೆಯ ಪರಿಸ್ಥಿತಿ ಸುಧಾರಣೆ ಆಯಿತು.ನಮ್ಮ ಮನೆಗೆ ರಸ್ತೆ ಇಲ್ಲದ್ದು ದೊಡ್ಡ ಕೊರತೆ ಆಗಿತ್ತು. ರಸ್ತೆ ಬರಬೇಕಾದರೆ ಕಾರಂತ ಮಾವ ರಸ್ತೆಗೆ ಜಾಗ ಬಿಡಬೇಕಿತ್ತು .ಬುಲ್ ಡೋಜರ್ ತಂದು ರಸ್ತೆ ಮಾಡಲು ಹೊರಟಾಗ ಎಲ್ಲರೂ ನಮಗೆ ಹೊಟ್ಟೆ ಕಿಚ್ಚಿನಿಂದ  ಅಡ್ಡಿ ಮಾಡಿದವರೇ.ಆದರೂ ಆಗಲೂ ಜಾಗ ಬಿಟ್ಟು ಕೊಟ್ಟು ಪೂರ್ಣ ಬೆಂಬಲ ನೀಡಿದವರು ಕಾರಂತ ಮಾವ ಅದರಿಂದಾಗಿ ಅವರ ಮನೆಗೂ ರಸ್ತೆ ಬಂತು ಇಂದು ನಾವುಗಳು ಈ ರಸ್ತೆಯಲ್ಲಿ ಕಾರು ಬೈಕು ಅಟೋಗಳಲ್ಲಿ ಹೋಗುವಂತಾಗಲು ಕ ಅಂದಿನ ಅವರ ಔದಾರ್ಯತೆಯೇ ಕಾರಣ.ಅವರು ಬೆಂಬಲ ಕೊಡದೆ ಇದ್ದರೆ ರಸ್ತೆ ನಿರ್ಮಾಣ ಅಸಾಧ್ಯವಾಗಿರುತ್ತಿತ್ತು.ರಸ್ತೆ ಇಲ್ಲದೇ ಇದ್ದರೆ ನನ್ನತಮ್ಮ ಹಾಗೂ ಕಾರಂತ ‌ಮಾವನ ಮಕ್ಕಳು ಕಾರು ತೆಗೆಯಲು ಸಾಧ್ಯವೇ ಇರುತ್ತಿರಲಿಲ್ಲ


 ಕಾರಂತ ಮಾವನಿಗೆ ಚಿಕ್ಕಂದಿನಿಂದಲೇ ಪೋಲಿಯೋ ಪೀಡಿತರಾದ ಅವರ ಒಂದು ಕಾಲೂ ಊನ ಗೊಂಡಿದ್ದರೂ ಅವರು ತೆಂಗಿನ ಮರ ಹತ್ತುತ್ತಾ ಇದ್ದರು .ಮೊದಲ ವರ್ಷ ನಮ್ಮ ತಂದೆಯವರಿಗೆ ಬೈ ಹುಲ್ಲಿನ ಮುಟ್ಟೆ / ಬಣವೆ ಹಾಕಲು ತಿಳಿಯದೆ ಇದ್ದಾಗ ಸ್ವತಃ ಕಾರಂತ ಮಾವನೇ ಬಂದು ನಿಂತು ಹಾಕಿಸಿಕೊಟ್ಟಿದ್ದರು.
ಆ ಮನೆಗೆ ಬಂದಾಗ ನನ್ನ ಸಣ್ಣ ತಮ್ಮ  ಗಣೇಶ ಎರಡು ತಿಂಗಳ ಸಣ್ಣ  ಮಗು.ಒಂದು ದಿನ ರಾತ್ರಿ ಹುಷಾರಿಲ್ಲದೆ ಆದಾಗ ನಡು ರಾತ್ರಿ ನಮ್ಮ ಮನೆಗೆ ಬಂದು ಔಷದ ಮಾಡಿ ಕೊಟ್ಡದ್ದು ಈಗಲೂ ನೆನಪಿದೆ .ಅದೇ ರೀತಿ ಒಂದು ದಿನ ಈ ನನ್ನ ಸಣ್ಣ ತಮ್ಮ ಎರಡು ವರ್ಷದ ಮಗು ಇದ್ದಾಗ ಮನೆಯಿಂದ ಕಾಣೆಯಾದಾಗ ಮನೆ ಮಂದಿ ಎಲ್ಲ ಗಾಭರಿಕೊಂಡು ಹುಡುಕಾಡಿದೆವು.ಆಗ ಕೂಡ ಕಾರಂತ ಮಾವ ಮತ್ತು ಅವರ ಕುಟುಂಬ ದವರೆಲ್ಲರೂ ಕಾಣೆಯಾದ ನನ್ನ ತಮ್ಮನನ್ನು ಗಾಭರಿಯಿಂದ ಹುಡುಕಾಡಿದ್ದರು.ಕೊನೆಗೆ ಹತ್ತಿರದ ಕೆರೆ ಭಾವಿ ನೋಡಿಯೂ ಮಗು ಸಿಗದೆ ಕೊನೆಗೆ ನಮ್ಮ ಅಜ್ಜನ ಮನೆಗೆ ಹೋಗುವ ದಾರಿಯಲ್ಲಿ ಅವನು ಪತ್ತೆಯಾದ ಅದು ಬೇರೆ ವಿಚಾರ.ಆದರೆ ಮನೆಯವರಂತೆಯೇ ಕಾಳಜಿ ವಹಿಸಿದ ಕಾರಂತ ಮಾವನ ಪ್ರೀತಿ ಅಪಾರವಾದುದು.

ಗಾಂಧಿಯವರ ಕಾಲಕ್ಕೆ ಎಲ್ಲೆಡೆ ಚರಕದ ಚಕ್ರ ತಿರುಗುವುದು ನಿಂತು ಹೋಯಿತು. ಆದರೆ ನಮ್ಮ ಕಾರಂತ ಮಾವ ಈಗ ಕೂಡ ಚರಕವನ್ನು ತಿರುಗಿಸಿ ಹತ್ತಿಯಿಂದ ನೂಲು ಮಾಡಿ ಉತ್ತಮ ಗುಣಮಟ್ಟದ ಜನಿವಾರ ತಯಾರಿ ಮಾಡುತ್ತಿದ್ದರು.ಇವರು ತಯಾರಿಸಿದ ತುಂಬಾ ಶುದ್ಧಾವಾಗಿದ್ದು ಉತ್ತಮ ಗುಣಮಟ್ಟ ಹೊಂದಿದ್ದು ಅವರು ತಯಾರಿಸಿದ  ಜನಿವಾರಕ್ಕೆ ಸಾಕಷ್ಟು ಬೇಡಿಕೆ ಇದೆ .
ಅವರು ರುದ್ರ ಚಮೆ ಪವಮಾನ ಮತ್ತು ದೇವರ ಪೂಜೆಯ ಮಂತ್ರಗಳನ್ನು ಊರಿನ ಎಲ್ಲರಿಗೂ ಉಚಿತವಾಗಿ ಹೇಳಿಕೊಡುತ್ತಾ ಇದ್ದರು.ಹಾಗಾಗಿ ಎಲ್ಈಲಿಗೆ ಗುರು ಸದೃಶರಾಗಿದ್ದರು .ಈಗ ಕೋಳ್ಯೂರು ದೇವಾಲಯದ ಅರ್ಚಕರಾಗಿರುವ ರವಿ ಹೊಳ್ಳರೂ ಕೂಡಾ ಇವರ ವಿದ್ಯಾರ್ಥಿ ಯೇ .
ಅವರಿಗೆ ಮೂರು ಗಂಡು ಮಕ್ಕಳು ಮತ್ತು ಒಬ್ಬಳು ‌ಮಗಳು .ನಾನು ನನ್ನ ಅಣ್ಣ ತಮ್ಮಂದಿರು ಅವರ ಜೊತೆ ಆಡಿ ಬೆಳೆದವರು.ಅಲ್ಲಿಯೇ ಪಕ್ಕದಲ್ಲಿ ದೇವಸ್ಥಾನದ ದೊಡ್ಡ ಕೆರೆ ಇದ್ದು ಬೇಸಿಗೆ ಕಾಲ ಚಳಿಗಾಲ ಮಳೆಗಾಲ ಎಂಬ ಬೇಧ ವಿಲ್ಲ ದೆ ನಾವು ಅದರಲ್ಲಿ ಈಜಾಡಿ ಆನಂದಿಸುತ್ತಾ ಇದ್ದೆವು.ಎರಡು ತೆಂಗಿನ ಕಾಯಿಯನ್ನು ಕಟ್ಟಿ ಅದರ ಸಹಾಯದಿಂದ ಈಜಲು ಕಲಿಸಿದವರೂ ನಮಗೆ ಕಾರಂತ ಮಾವನೇ.
ಕೋಳ್ಯೂರು ದೇವಾಲಯದ ಇತಿಹಾಸದ ಬಗ್ಗೆ ಕೂಡ ನನಗೆ ಮಾಹಿತಿ ನೀಡಿದವರು ಅವರೇ
ಪ್ರಸ್ತುತ ಅವರ ಅರೋಗ್ಯ ಹಾಳಾಗಿದ್ದು ಅವರು ಗುಣಮುಖರಾಗಿ ನೂರು ವರ್ಷ ಬಾಳಲಿ ಎಂದು ಹಾರೈಸುವೆ 

Thursday 25 May 2017

ದೊಡ್ಡವರ ದಾರಿ : ಎಲ್ಲರಂತವರಲ್ಲ ನನ್ನಮ್ಮ © ಡಾ ಲಕ್ಷ್ಮೀ ಜಿ ಪ್ರಸಾದ

         

ಎಲ್ಲರವರಂತಲ್ಲ ನನ್ನಮ್ಮ, ಬಾಗಿಲಿಲ್ಲದ ಮನೆಯಲ್ಲಿ ತಲೆ ಯಡಿಯಲ್ಲಿ ಕತ್ತಿ ಇಟ್ಟುಕೊಂಡು ಮಲಗಿದೆ ಧೀರೆ ನನ್ನ ಅಮ್ಮ ಹಾಗಾಗಿ ಸುಮಾರು    ದಿನಗಳಿಂದ ನನ್ನಮ್ಮ ನ ಬಗ್ಗೆ ಬರೆಯಬೇಕೆಂದು‌ಕೊಂಡಿದ್ದೆ .ನನ್ನಮ್ಮ ಶ್ರೀ ಮತಿ ಸರಸ್ವತಿ ಅಮ್ಮ ವಾರಣಾಸಿ ಮೂಲತಃ ಮೀಯಪದವು ಸಮಿಪದ ಹೊಸಮನೆ ಈಶ್ವರ ಭಟ್ ಅವರ ಎರಡನೇ ಮಗಳು . ನಮ್ಮ ಅಜ್ಜನಿಗೆ ಇದ್ದಿದ್ದು ಇಬ್ಬರು ಹೆಣ್ಣು ಮಕ್ಕಳು ಮಾತ್ರ ನನ್ನ ಅಮ್ಮ ಚಿಕ್ಕವರು ನನ್ನ ದೊಡ್ಡಮ್ಮ ಶ್ರೀ ಮತಿ ಗೌರಮ್ಮ ದೊಡ್ಡಮಗಳು
ಅಜ್ಜನಿಗೆ ಗಂಡು ಮಕ್ಕಳಿರಲಿಲ್ಲ ಜೊತೆಗೆ ಸಾಕಷ್ಟು ಶತ್ರುಗಳು ಇದ್ದರು ಆರೋಗ್ಯ ವೂ ಚೆನ್ನಾಗಿರಲಿಲ್ಲ ಹಾಗಾಗಿ ಕಲಿಕೆಯಲ್ಲಿ ನನ್ನ ಅಮ್ಮ ತುಂಬಾ ಜಾಣೆಯಾಗಿದ್ದರೂ ಮುಂದೆ ಓದಿಸದೆ ತನ್ನ ಅಕ್ಕನ ಮಗನಿಗೆ ತೀರಾ ಚಿಕ್ಕ ವಯಸ್ಸಿನಲ್ಲಿ ಎಂದರೆ ಹದಿನಾಲ್ಕು ಹದಿನೈದು ವರ್ಷದಲ್ಲೇ ಮದುವೆ ಮಾಡಿ ಕೊಟ್ಟರು.ತೀರಾ ಸಣ್ಣ ವಯಸ್ಸಿನಲ್ಲಿ ಮದುವೆಯಾದ ನನ್ನ ಅಮ್ಮ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ನಮ್ಮ ತಂದೆ ಮನೆಯವರೇನು ತೀರ ಬಡವರಲ್ಲ .ನನ್ನ ತಂದೆ ಪುರೋಹಿತ ರಾಗಿದ್ದು ಹೊಟ್ಟೆಗೆ ಬಟ್ಟೆಗೆ ಸಾಕಾಗುವಷ್ಟು ವರಮಾನವಿತ್ತು
ಆದರೂ ಅಣ್ಣ ತಮ್ಮಂದಿರು ಇಲ್ಲದ ನನ್ನ ಅಮ್ಮ ಅಲ್ಲಿ ತೀರಾ ಕಷ್ಟ ವನ್ನು  ತಿರಸ್ಕಾರವನ್ನೂ  ಎದುರಿಸಬೇಕಾಯಿತು.
ಅಂತೂ ಇಂತೂ ಅಮ್ಮ ನಿಗೆ ಇಪ್ಪತ್ತೆಂಟು ವರ್ಷವಾಗುವಾಗ ನಾವು ಐದು ಜನ ಮಕ್ಕಳು ಹುಟ್ಟಿದ್ದೆವು ಆ ಕಾಲಘಟ್ಟದಲ್ಲಿ ನಮ್ಮ ಹಿರಿಯ ಮನೆಯಲ್ಲಿ ಆಸ್ತಿ ಪಾಲು ಆಯಿತು ಅಲ್ಲಿದ್ದದ್ದು ಎಲ್ಲವೂ ನನ್ನ ತಂದೆಯವರ ಸ್ವಾರ್ಜಿತ ಆಸ್ತಿಯೇ ಆಗಿತ್ತು.ಅವರ ತಂದೆ ಎಂದರೆ ನನ್ನ ಅಜ್ಜ ತೀರಿ ಹೋಗುವಾಗ ನನ್ನ ತಂದೆಗೆ ಹದಿನಾರು ವರ್ಷ ಇಬ್ಬರು ಅಕ್ಕಂದಿರು ಒಬ್ಬಳು ತಂಗಿ ಮೂರು ಜನ ತಮ್ಮಂದಿರು ಎಲ್ಲರೂ ಚಿಕ್ಕ ವಯಸಿನವರೇ
ತಂದೆಯ ಚಿಕ್ಕ ತಮ್ಮ ನಿಗೆ  ಆಗಿನ್ನೂ ಮೂರು ವರುಷ .ನನ್ನ ತಂದೆ ಪೌರೋಹಿತ್ಯ ಮಾಡಿ ಎಲ್ಲರನ್ನೂ ಸಾಕಿದರು.ತಂದೆಯ ತಂದೆಯವರಿಗೆ ಸಣ್ಣ ತೋಟವೂ ಇತ್ತು ಆದರೆ ಅದರಿಂದ ಬರುವ ಆದಾಯದಿಂದ ದೊಡ್ಡ ಕುಟುಂಬ ವನ್ನು ಪೊರೆಯಲು ಅಸಾಧ್ಯ ವಾಗಿತ್ತು .
ನಂತರ ತಂದೆ ದುಡಿದ ದುಡ್ಡಿನಲ್ಲಿ ಸ್ವಲ್ಪ ಜಾಗ ಖರೀದಿ ಮಾಡಿದ್ದರೂ ಅದನ್ನು ಅಜ್ಜಿಯ ಹೆಸರಿನಲ್ಲಿ ಮಾಡಿದ್ದರು .
ನನ್ನ ತಂದೆ ತೀರಾ ಸಾಧು ಸ್ವಭಾವದ ಮುಗ್ದರು.
ಹಾಗಾಗಿ ಆಸ್ತಿ ಪಾಲಾಗಿ ಹಿರಿ ಮನೆ ಬಿಟ್ಟು ಹೊಸಮನೆ ಕಟ್ಟಲು ಅವರ ಕೈಯಲ್ಲಿ ಕವಡೆ ಕಾಸಿನ ದುಡ್ಡೂ ಇರಲಿಲ್ಲ. ಸ್ವಲ್ಪ ಸಹಾಯ ಅಮ್ಮನ ತಂದೆ ಅಜ್ಜನಿಂದ ಸಿಕ್ಕಿತು ಮತ್ತೆ ಸಾಲ ಮಾಡಿ ಹೇಗೋ ಒಂದು ಮನೆ ಕಟ್ಟಿ ಒಕ್ಕಲಾದರು.
ಹಾಗಾಗಲಿಲ್ಲ.
ಮೊದಲು ಹಿರಿಯ ಮನೆಯಲ್ಲಿ ಸಾಕಷ್ಟು ಇದ್ದರೂ ಕೃತಕ ಬಡತನವಿತ್ತು ಹೊಸಮನೆಗೆ ಬಂದಾಗ ನಿಜವಾದ ಬಡತನ ಉಂಟಾಯಿತು.ಜೋರಾಗಿ ಸುರಿವ ಮಳೆಗಾಲದಲ್ಲಿ ಮಮೆ ಕಟ್ಟುವಾಗಲೂ ಮುಗ್ದ ಸ್ವಭಾವದ ನನ್ನ ತಂದೆ ಸಾಕಷ್ಟು ಮೋಸ ಹೋಗಿದ್ದರು .ಅಲ್ಲದೆ ಮನೆ ಕಟ್ಟಲು ಮಾಡಿದ ಸಾಲದ ಹೊರೆ ದೊಡ್ಡದಿತ್ತು ಜೊತೆಗೆ ನಾವು ಐದು ಜನ ಮಕ್ಕಳ ವಿದ್ಯಾಭ್ಯಾಸ, ಪಾಲನೆಯ ಖರ್ಚು ಇತ್ತು

ಈ ಮನೆಯ ಹಿಂಭಾಗದಲ್ಲಿ ದೊಡ್ಡ ಬರೆ/ ಗುಡ್ಡ ಇತ್ತು ಇದು ಜರಿದು ಬಿದ್ದು ಇವರಾರು ಉಳಿಯಲಾರೆಂದು ಹೆಚ್ಚಿನ ವರು ಭಾವಿಸಿದ್ದರು .ಜೊತೆಗೆ ಅಪ್ಪನ ಮುಗ್ಧ ಸಾಧು ಗುಣದಿಂದಾಗಿ ಇವರು ಎಲ್ಲವನ್ನೂ ಕಳೆದು ಕೊಂಡ ದೇಶಾಂತರ ಹೋಗಬಹುದು ಎಂದು ಜನರು ಭಾವಿಸಿದ್ದರು

ಆದರೆ ಹಾಗಾಗಲಿಲ್ಲ. ಅನೇಕ ಸಮಸ್ಯೆ ಗಳ ಹಾಗೂ

ಬಡತನದ ನಡುವೆಯೂ ತಲೆಯೆತ್ತಿ ನಿಲ್ಲುವ ಕೆಚ್ಚು ನನ್ನ ಅಮ್ಮನಿಗಿತ್ತು .
ನನ್ನ ಅಮ್ಮ ತುಂಬಾ ಸುಂದರಿಯಾಗಿದ್ದರು .ನಾವು ಹಿರಿ ಮನೆಯಿಂದ ಪಾಲಾಗಿ ಬಂದು ಕಟ್ಟಿ ದ ಮನೆಗೆ ಬಾಗಿಲು ಇರಲಿಲ್ಲ ಬಾಗಿಲು ಮಾಡಿಸಲು ದುಡ್ಡು ಕೊರತೆ ಯಾಗಿತ್ತು.
ನಾನು ಆಗ ಅಜ್ಜನ ಮನೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದೆ .ಅಕ್ಕ ಆರನೇ ಅಥವಾ ಏಳನೆಯ ತರಗತಿಯಲ್ಲಿ ಓದುತ್ತಿದ್ದಿರಬೇಕು.ಅಕ್ಕ ಕೂಡ ತುಂಬಾ ಚೆನ್ನಾಗಿ ಇದ್ದಳು ಜೊತೆಗೆ  ವಯಸ್ಸಿಗೆ ಮೀರಿದ ಬೆಳವಣಿಗೆ ಇದ್ದು ಅವಳು ದೊಡ್ಡವಳಂತೆ ಕಾಣಿಸುತ್ತಾ ಇದ್ದಳು.
ತಂದೆ ಪುರೋಹಿತ ರಾಗಿದ್ದು ಒಂದು ಮನೆಯಲ್ಲಿ ಪೂಜೆ ಪುರಸ್ಕಾರ ಮುಗಿಸಿ ಅಲ್ಲಿಂದಲೇ ಇನ್ನೊಂದು ಕಡೆ ಹೋಗುತ್ತಾ ಇದ್ದರು .ವಾರಕ್ಕೊಮ್ಮೆ ಅಥವಾ ಹತ್ತು ದಿನಗಳಿಗೊಮ್ಮೆ ಮನೆಗೆ ಬರುತ್ತಾ ಇದ್ದರು ಆಗ ಈಗಿನಂತೆ ಬಸ್ ಸಂಚಾರ ಎಲ್ಲೆಡೆಗೆ ಇರಲಿಲ್ಲ ಹಾಗಾಗಿಯೇ ಎಲ್ಲೆಡೆಗೆ ಕಾಲ್ನಡಿಗೆಯಿಂದಲೇ ಹೋಗಬೇಕಾಗಿತ್ತು ಅಲ್ಲದೆ ದುರ್ಗಾ ಪೂಜೆ ತ್ರಿಕಾಲ ಪೂಜೆ ಆಶ್ಲೇಷಾ ಬಲಿ   ಮೊದಲಾದವು ರಾತ್ರಿಯೇ ಆಗುವ ಪೂಜೆಗಳು
ಇಂತಹ ಸಂದರ್ಭದಲ್ಲಿ ತನ್ನ ಐದು ಜನ ಮಕ್ಕಳನ್ನು ರಕ್ಷಿಸುವ ಜವಾಬ್ದಾರಿ ಯೂ ಅಮ್ಮನಿಗೇ ಇತ್ತು ಜೊತೆಗೆ ಅಪ್ರತಿಮ ಸುಂದರಿಯಾದ ಅಮ್ಮನಿಗೆ ಕಾಮುಕರ ಕಾಟವೂ ಅಷ್ಟೇ ಇತ್ತು.ಮಣ್ಣಿನ ನೀರೊಸರುವ ಬಾಗಿಲಿಲ್ಲದ ಮನೆಯಲ್ಲಿ ಎದೆಯೆತ್ತರಕ್ಕೆ ಬೆಳೆದು ನಿಂತ ಅಕ್ಕ ಚಿಕ್ಕವರಾದ ನಾನು‌ಮತ್ತು ತಮ್ಮಂದಿರ ಜೊತೆ ಚಾಪೆ ಹಾಸಿ ಹಳೆಯ ಹರಿದ ಸೀರೆಯನ್ನು ಹಾಸಿ ಹೊದ್ದು ಮಲಗುವ ಪರಿಸ್ಥಿತಿ. ಬಾಗಿಲಿಲ್ಲದ ಮನೆಯಲ್ಲಿ ಭದ್ರತೆಯೇ ಒಂದು ಪ್ರಮುಖ ಸಮಸ್ಯೆ ಆದರೆ ನನ್ನಮ್ಮ ಇದಕೆಲ್ಲ ಎದೆಗುಂದಲಿಲ್ಲ ಸದಾ ದೊಡ್ಡ ಕತ್ತಿಯೊಂದನ್ನು ತಲೆ ಅಡಿಯಲ್ಲಿ ಇಟ್ಟುಕೊಂಡು ಅಕ್ಕನನ್ನು ನಮ್ಮನ್ನು ಬಗ್ಗಲಿನಲ್ಲಿ ಮಲಗಿಸಿ ಕೊಂಡ ರಕ್ಷಣೆ ನೀಡಿದ್ದಳು .ನಮಗೆ ಆಸ್ತಿ ಪಾಲಾದಾಗ ಸ್ವಲ್ಪ ಗದ್ದೆ ತೋಟ ನಮ್ಮ ಪಾಲಿಗೆ ಬಂದಿತ್ತು.ಈ ಗದ್ದೆ ತೋಟಕ್ಕೆ ಸಮೀಪದಲ್ಲಿ ಹರಿಯುವ ತೊರೆಯಿಂದ ಪಾಲಿನ ನೀರಿನ ವ್ಯವಸ್ಥೆ ಇತ್ತು ಇಲ್ಲೂ ಜನರು ನಮ್ಮ ತಂದೆಯ ಸಾಧು ಗುಣವನ್ನು ದುರುಪಯೋಗ ಮಾಡಿಕೊಂಡು ಸರಿಯಾಗಿ ನೀರು ಬಿಡುತ್ತಿರಲಿಲ್ಲ
ಇಂತಹ ಸಂದರ್ಭದಲ್ಲಿ ಅಮ್ಮನಿಗೆ ಬೇರೆಯವರೊಂದಿಗೆ ಜಗಳಾಡುವುದು ಜಗಳಾಡಿ ನೀರು ಬಿಡಿಸಿಕೊಂಡು ಬರುವುದು ಅನಿವಾರ್ಯ ಆಗಿತ್ತು .ಗದ್ದೆಗೆ ನೀರು ಒಡ್ಡಿಸಿ ಬಂದರೆ ರಾತ್ರಿ ಹೊತ್ತಿನಲ್ಲಿ ಯಾರೋ ಹೋಗಿ ಅದನ್ನು ಕಟ್ಟಿ ಗದ್ದೆಗೆ ಬಾರದಂತೆ ಮಾಡುತ್ತಿದ್ದರು
ಹಾಗಾಗಿ ನಡು ರಾತ್ರಿ ಎದ್ದು ಟಾರ್ಚ್ ಹಿಡಿದುಕೊಂಡು ಹೋಗಿ ನೀರು ಗದ್ದೆಗೆ ಬರುತ್ತಿದೆಯಾ ಎಂದು ನೋಡಿ ಬರುತ್ತಿದ್ದರು ನನ್ನ ಅಮ್ಮ ಇಲ್ಲವಾದರೆ ನೀರಿಲ್ಲದೆ ಬೆಳೆ ಕರಡಿ ಹೋಗುತ್ತಾ ಇತ್ತು ಮೋಸ ವಂಚನೆ ಮಾಡ ಹೊರಟ ಅನೇಕ ರಲ್ಲಿ ಜಗಳಾಡಿ ನಮ್ಮನ್ನು ಪಾರು ಮಾಡುವ ಅನಿವಾರ್ಯ ಆಗಿತ್ತು.ಅಮ್ಮನ ಬದುಕಿಗಾಗಿ ಮಕ್ಕಳ ಭವಿಷ್ಯಕ್ಕಾಗಿ ಹೋರಾಡಿದ ಕಥೆ ಬರೆಯ ಹೊರಟರೆ ದೊಡ್ಡ ಕಾದಂಬರಿ ಆಗಿ ಬಿಡಬಹುದು
ಇದರಲ್ಲಿ ಒಂದು ಮುಖ್ಯ ವಾದ್ದು ಅಮ್ಮ ತನ್ನ ತಂದೆಯವರ ಎಂದರೆ ನನ್ನ ಅಜ್ಜನ  ಆಸ್ತಿ ಪಾಲಿಗಾಗಿ ಕೋರ್ಟ್ ಗೆ ಹೋಗಬೇಕಾಯಿತು .ನಾನು ಮೊದಲೇ ಹೇಳಿದಂತೆ ಇಬ್ಬರು ಹೆಣ್ಣು ಮಕ್ಕಳು ಮಾತ್ರ .ಅಜ್ಜನ ಜೊತೆಯಲ್ಲಿ ದೊಡ್ಡಮ್ಮ ನ ಕುಟುಂಬ ಇತ್ತು ,ದೊಡ್ಡಮ್ಮನ ಮನೆ ಆಸ್ತಿ ಮಾರಾಟ ಮಾಡಿದಾಗ ಸ್ವಲ್ಪ ದುಡ್ಡು ನನ್ನ ಅಮ್ಮನಿಗೆ ಕೊಟ್ಟಿದ್ದರು ಆದರೆ ಅಜ್ಜನ ಪಾಲು ಪಂಚಾಯತಿ ಪ್ರಕಾರ ಅಮ್ಮನಿಗೆ ಮತ್ತೆ ಯ
 ದುಡ್ಡು ಬರಬೆಕಿತ್ತು .ಅಜ್ಹನ ಮರಣಾನಂತರ ಇದು ವಿವಾದಕ್ಕೆ ಎಡೆಯಾಗಿ ಆಸ್ತಿ ಪಾಲಿಗಾಗಿ ಅಮ್ಮ ಕೋರ್ಟ್ ಗೆ ಹೋದರು ಅಲ್ಲಿ ಗೆದ್ದರೂ ಕೂಡ ಆದರೂ ಕೋರ್ಟ್ ನಲ್ಲಿ ಗೆಲುವು ಬರುವ ಕಾಲಕ್ಕೆ ಅಮ್ಮನಿಗೆ  ನಾವು ಮಕ್ಕಳು ಎಲ್ಲರೂ ಒಂದು ಹಂತಕ್ಕೆ ತಲುಪಿದ್ದೆವು  ಅಣ್ಣ ಮತ್ತು ಒಬ್ಬ ತಮ್ಮ ಅಮೇರಿಕಾದಲ್ಲಿ ಕೆಲಸ ಮಾಡುತ್ತಾ ಇದ್ದರು ಊರಿನಲ್ಲಿ ಬೇರೆ ಆಸ್ತಿ ಖರೀದಿಸಿದ್ದರು ಈಗ ಅಜ್ಜನ ಆಸ್ತಿ ಯ ಅಗತ್ಯ ನಮಗಾರಿಗೂ ಇರಲಿಲ್ಲ ಹಾಗಾಗಿ ಕೋರ್ಟ್ ನಲ್ಲಿ ಗೆದ್ದರೂ ಕೂಡ ನನ್ನ ಅಮ್ಮ ಗೆದ್ದ ಭೂಮಿಯನ್ನು ಪೂರ್ತಿಯಾಗಿ ತನ್ನ ಅಕ್ಕನಿಗೆ ಎಂದರೆ ನನ್ನ ದೊಡ್ಡಮ್ಮನಿಗೆ ಬಿಟ್ಟು ಕೊಟ್ಟು ಉದಾರತೆ ಮೆರೆದರು.ಇಂತಹದ್ದು ಅನೇಕ ಇವೆ. ಅದಿರಲಿ

ಅಮ್ಮ ಗದ್ದೆ ತೋಟಕ್ಕೆ ಹೋಗುವಾಗ ಮಾತ್ರವಲ್ಲ ಮನೆ ಅಂಗಳಕೆ ಇಳಿಯುವಾಗ ಕೂಡ ಕೈಯಲ್ಲಿ ಒಂದು ಕತ್ತಿಯನ್ನು ಹಿಡಿದುಕೊಂಡು ಇರುತ್ತಿದ್ದರು .ನನ್ನ ಅಕ್ಕ ಹಾಗೂ ನನಗೆ  ಗದ್ದೆ ತೋಟಕ್ಕೆ ಹೋಗುವಾಗಲೂ ಒಂದು ಕತ್ತಿ ಹಿಡಿದುಕೊಂಡು ಹೋಗಿ ಎಂದು ಸದಾ ಹೇಳುತ್ತಿದ್ದರು.ಆಗ ಅದು ಯಾಕೆಂದು ಅರ್ಥ ಮಾಡಿಕೊಳ್ಳುವ ವಯಸ್ಸು ನನ್ನದಲ್ಲ ಆದರೆ ಈಗ ಅದು ನಮ್ಮ ಭದ್ರತೆ ಗಾಗಿಯೇ ಅಮ್ಮ ಹಾಗೆ ಹೇಳುತ್ತಿದ್ದರು ಎಂದು ಅರ್ಥವಾಗಿದೆ.
ಗದ್ದೆಯಲ್ಲಿ ಭತ್ತ ಬೆಳೆಯುತ್ತಾ ಇದ್ದೆವು ಸಾಧ್ಯವಾದಷ್ಟು ಕೆಲಸವನ್ನು ಅಮ್ಮನೇ ಮಾಡುತ್ತಿದ್ದರು.ಯಾಕೆಂದರೆ ಕೆಲಸದವರಿಗೆ ಕೊಡಲು ದುಡ್ಡಿಲ್ಲ ಜೊತೆಗೆ ಮನೆ ಕಟ್ಟಲು ಮಾಡಿದ ಸಾಲ ಕಟ್ಟಬೇಕಾಗಿತ್ತು.ತಂದೆಯ ಪೌರೋಹಿತ್ಯ ಹಾಗೂ ಗದ್ದೆ ತೋಟದಿಂದ ಸಿಕ್ಕ ತುಸು ಆದಾಯದಲ್ಲಿ ಒಂದೊಂದು ಪೈಸೆಯನ್ನೂ ಜೋಡಿಸಿ ಹೇಗೋ ಮನೆ ಕಟ್ಟಲು ಮಾಡಿದ ಸಾಲವನ್ನು ತೀರಿಸಿ ಬಿಟ್ಟರು.
ಅಷ್ಟರಲ್ಲಿ ಅಕ್ಕ ಬೆಳೆದು ನಿಂತಿದ್ದಳು .ಆಗ ನಮ್ಮಲ್ಲಿ ಇನ್ನೂ ವರದಕ್ಷಿಣೆಯ ಅನಿಷ್ಟ ಪದ್ದತಿ ಇತ್ತು .ಅಕ್ಕ ತುಂಬಾ ಚಂದ ಇದ್ದರೂ ಅವಳ ಮದುವೆ ಬಗ್ಗೆ ಆತಂಕ .ಯಾರ್ಯಾರೋ ಅವಲಕ್ಕಿ ಜಗಿಯಲು ಹಲ್ಲಿಲ್ಲದ ವರನನ್ನು ಕರೆತರುವುದು .ಅಕ್ಕನಿಗೆ ಸೀರೆ ಉಡಿಸಿ ಕ್ಷೀರ ಮಾಡಿ ಬಡಿಸುವುದು ಇದು ಅನೇಕ ಬಾರಿ ನಡೆಯಿತು. ಅಕ್ಕ ಮನೆಕೆಲಸ ಸೇರಿದಂತೆ ಎಲ್ಲಾ ವಿಚಾರಗಳಲ್ಲಿ ತುಂಬಾ ಜಾಣೆಯಾಗಿದ್ದರೂ ಹೊಟ್ಟೆ ಕಿಚ್ಚಿನ ಕೆಲವರು ಅವಳಿಗೆ ಯಾವ ಕೆಲಸವೂ ತಿಳಿದಿಲ್ಲ ಎಂದು ಅಪಪ್ರಚಾರ ಬೇರೆ ಮಾಡಿದ್ದರು.ಕೊನೆಗೂ ಒಳ್ಳೆಯ ಹುಡುಗ ಸಿಕ್ಕಿ ಅಕ್ಕನ ಮದುವೆಯಾಯಿತು. ತನಗೆ ತನ್ನ ತಂದೆ ಎಂದರೆ ಅಜ್ಜ ಕೊಟ್ಟ ಚಿನ್ನದ ಆಭರಣಗಳನ್ನು ಅಮ್ಮ ಅಕ್ಕನಿಗೆ ಕೊಟ್ಟು ಯಾವುದೇ ಕೊರತೆಯಾಗದಂತೆ ನೋಡಿಕೊಂಡರು.
ಮುಂದೆ ನಮ್ಮೆಲ್ಲರ ವಿದ್ಯಾಭ್ಯಾಸ ದ ಖರ್ಚು ನನ್ನ ಮದುವೆ ಖರ್ಚು ಎಲ್ಲವನ್ನೂ ಹೇಗೋ ಚಾಣಾಕ್ಷತನದಿಂದ ನಿಭಾಯಿಸಿದರು.ನನ್ನ ಮದುವೆ ಕಾಲಕ್ಕಾಗುವಾಗ ನಮ್ಮ ಹವ್ಯಕರಲ್ಲಿ ವರ ದಕ್ಷಿಣೆ ಪದ್ದತಿ ಹೆಚ್ಚು
ಕಡಿಮೆ ಇಲ್ಲವಾಗಿತ್ತು ಈಗ ಅಮ್ಮನ ಮಕ್ಕಳು ನಾವೆಲ್ಲರೂ ತಲೆಯೆತ್ತಿ  ಸ್ವಾಭಿಮಾನ ದಿಂದ ನಡೆಯುವಂತೆ ಮಾಡಿದವರು ನನ್ನಮ್ಮ .ಈಗ ನನ್ನ ಅಣ್ಣ ಕೃಷ್ಣ ಭಟ್ ವಾರಣಾಸಿ  ಮತ್ತು ಒಬ್ಬ ತಮ್ಮ ಈಶ್ವರ ಭಟ್ ವಾರಣಾಸಿ ಸಾಫ್ಟ್ವೇರ್ ಕಂಪೆನಿಗಳಲ್ಲಿ ಕೆಲಸ ಮಾಡುತ್ತಾ ಅಮೇರಿಕಾದಲ್ಲಿ ಇದ್ದಾರೆ .ಅಕ್ಕನ ಮಗ ವಿಜ್ಞಾನಿಯಾಗಿ ಹಾರ್ವರ್ಡ್ ಯುನಿವರ್ಸಿಟಿ ಯಲ್ಲಿ ಸಂಶೋಧನೆ ಮಾಡುತ್ತಾ ಇದ್ದಾನೆ . ಅಕ್ಕನ ಸೊಸೆ ವೈದ್ಯೆಯಾಗಿದ್ದು ಅಲ್ಲಿ ಕೆಲಸ ಮಾಡುತ್ತಿದ್ದಾರೆ ಮಗಳು ಅಳಿಯನೂಅಮೇರಿಕಾದಲ್ಲಿ ಇದ್ದಾರೆ
 ನನ್ನ ಅಣ್ಣ ತಮ್ಮಂದಿರು ಅಮ್ಮನಿಗೆ ಬೇಕು ಬೇಕಾದುದನ್ನು ಎಲ್ಲವನ್ನೂ ಮಾಡಿ‌ಕೊಟ್ಟಿದ್ದಾರೆ.ಎಲ್ಲ ಸೌಲಭ್ಯಗಳನ್ನು ಮಾಡಿ ಕೊಟ್ಟಿದ್ದಾರೆ .ಹಿಂದೆ ಅಮ್ಮನನ್ನು ಜೋರು ಎಂದು ದೂಷಿಸಿದವರೇ ಮೆಚ್ಚುಗೆ ಮಾತಾಡುತ್ತಿದ್ದಾರೆ.ಕಾಲೆಳೆದವರ ಅವಮಾನ ಮಾಡಿದವರ ಎದುರು ಇಂದು ಹೆಮ್ಮೆಯಿಂದ ನಾವೆಲ್ಲರೂ   ಎದೆಯುಬ್ಬಿಸಿ ನಡೆತಯುವಂತೆ ಮಾಡಿದ್ದಾರೆ
ನನ್ನ ಅಮ್ಮ .ನನ್ನ ಅಮ್ಮ ಸದಾ ಆಶಾವಾದಿ ಯಾವುದೇ ಸಮಸ್ಯೆ ಬಂದರೂ ಕಂಗಾಲು ಆಗುತ್ತಾ ಇರಲಿಲ್ಲ ಬದಲಿಗೆ ಅದಕ್ಕೆ ಪರಿಹಾರೋಪಾಯಗಳನ್ನು ಕಂಡು ಹಿಡಿಯುತ್ತಾ ಇದ್ದರು
ಈಗ ನಮ್ಮ ತಂದೆಯವರು ತೀರಿ ಹೋಗಿದ್ದಾರೆ ಎಂಬ ನೋವು ಬಿಟ್ಟರೆ ಅಮ್ಮನಿಗೆ ಬೇರೆ ಯಾವುದೇ ರೀತಿಯ ಕೊರಗಿಲ್ಲ .ತಂದೆಯವರು ತೀರಿ ಹೋದ ನೋವಿದ್ದರೂ ಅಮ್ಮ  ಹಣೆಗೆ ಕೆಂಪು ಬೊಟ್ಟು ಇಟ್ಟು, ಮುಡಿಗೆ ಹೂ ಮುಡಿದು ಎಲ್ಲರಂತೆ ಇದ್ದಾರೆ.ಯಾವುದೇ ಗೊಡ್ಡು ಸಂಪ್ರದಾಯ ವನ್ನು ಅನುಸರಿಸದೆ ಮಹಿಳೆಯರಿಗೆ ಮಾದರಿಯಾಗಿದ್ದಾರೆ.
ನನ್ನ ಅಮ್ಮ ಉದಾರಿ ಕೂಡ .ಅನೇಕರಿಗೆ ಕಲಿಯಲು, ಚಿಕಿತ್ಸೆ ಗೆ ಸಹಾಯ ಮಾಡಿದ್ದಾರೆ.ಕೇರಳದಲ್ಲಿ ಎಲ್ಲ ಕೃಷಿಕರಿಗೆ ಅರುವತ್ತು ವರ್ಷ ದ ನಂತರ ಪಿಂಚಣಿ ಕೊಡುತ್ತಾರೆ .ಹೀಗೆ ಬಂದ ದುಡ್ಡನ್ನೂ ಅಮ್ಮ ಅಗತ್ಯ ಇರುವವರಿಗೆ ನೀಡಿದ್ದಾರೆ .ಮನೆ ಕೆಲಸಕ್ಕೆ ಬರುವವರಿಗೂ ಅವರ ಮಕ್ಕಳ ಮದುವೆ ,ಮನೆ ಕಟ್ಟುವ ಸಮಯದಲ್ಲಿ, ಅವರ ಮಕ್ಕಳ ವಿದ್ಯಾಭ್ಯಾಸ ಕ್ಕೆ ಹೀಗೆ ನಾನಾ ಸಂದರ್ಭದಲ್ಲಿ ಧನ ಸಹಾಯ ಮಾಡಿದ್ದಾರೆ
ನನ್ನ ಗಿಳಿ ಬಾಗಿಲು ಬ್ಲಾಗ್ ನಲ್ಲಿ ನೀಡಿರುವ ಹವ್ಯಕ ನುಡಿಗಟ್ಟು ಗಳ ಮಾಹಿತಿಯನ್ನು ನನಗೆ ನೀಡಿದವರು ನನ್ನ ಅಮ್ಮ
ಕಳೆದ ಜುಲೈನಲ್ಲಿ ನಾನು ಆತ್ಮ ಹತ್ಯೆಗೆ ಯತ್ನ ಮಾಡಿದ ಸಂದರ್ಭದಲ್ಲಿ ಮಾನಸಿಕವಾಗಿ ಕುಗ್ಗಿ ಹೋದಾಗ ಧೈರ್ಯ ತುಂಬಿದವರೂ ನನ್ನ ಅಮ್ಮ ಆ ಸಮಯದಲ್ಲಿ ತುಳು ಸಮ್ಮೇಳನ ಆಯೋಜನೆಯಾಗಿದ್ದು ನನ್ನನ್ನು ಸನ್ಮಾನ ಮಾಡುತ್ತೇವೆ ಬನ್ನಿ ಎಂದು ಕರೆದಿದ್ದರು .ಆದರೆ ಮಾನಸಿಕವಾಗಿ ಕುಗ್ಗಿ ಹೋಗಿದ್ದ ನನಗೆ ಅದನ್ನು ಸ್ವೀಕರಿಸುವ ಮನಸ್ಸು ಇರಲಿಲ್ಲ .ಎಲ್ಲಕಿಂತ ಹೆಚ್ಚು ಜನರನ್ನು ಹೇಗೆ ಎದುರಿಸಲಿ ಎಂಬುದೇ ನನ್ನ ಸಮಸ್ಯೆ ಆಗಿತ್ತು. ಭ್ರಷ್ಟಾಚಾರ ,ಕೊಲೆ ಮಾಡಿದವರೇ ತಲೆಯೆತ್ತಿ ಓಡಾಡುತ್ತಾರೆ ಹಾಗಿರುವಗ ನೀನು ಯಾಕೆ ಅಳುಕಬೇಕು ಇಷ್ಟಕ್ಕೂ ನೀನು ನಿನಗೆ ಹಾನಿ ಮಾಡಿಕೊಳ್ಳಲು ಹೊರಟದ್ದೇ  ಹೊರತು ಬೇರೆಯವರನ್ನು ಕೊಲ್ಲಲು ಹೊರಟಿಲ್ಲ .ತುಳು ಸಮ್ಮೇಳನಕ್ಕೆ ಹೋಗಿ ಅಲ್ಲಿ ಅವರಿಂದ ಅಭಿನಂದನೆ ಸ್ವೀಕರಿಸು.ನಾನೂ ಬರುತ್ತೇನೆ ಯಾರು ಏನು ಬೇಕಾದರೂ ಹೇಳಲಿ ತಲೆಕೆಡಿಸಿಕೊಳ್ಳಬೇಡ ಎಂದು ಧೈರ್ಯ ತುಂಬಿ ನನ್ನೊಂದಿಗೆ ಮೂಲ್ಕಿಯಲ್ಲಿ ನಡೆದ ತುಳು ಸಮ್ಮೇಳನ ಕ್ಕೆ ನನ್ನ ಜೊತೆ ಬಂದಿದ್ದಾರೆ
ಎಲ್ಲಾ ಅಮ್ಮಂದಿರೂ ತಮ್ಮ ಮಕ್ಕಳಿಗಾಗಿ ತುಂಬಾ ತ್ಯಾಗ ಮಾಡುತ್ತಾರೆ ನನ್ನ ಅಮ್ಮನೂ ಅದಕೆ ಹೊರತಲ್ಲ ಜೊತೆಗೆ ಸ್ವಾಭಿಮಾನ ದಿಂದ ಬದುಕುವುದನ್ನೂ ಆಶಾವಾದವನ್ನೂ ,ಧನಾತ್ಮಕ ಚಿಂತನೆಗಳನ್ನೂನನ್ನ ಅಮ್ಮ ನಮಗೆ   ಹೇಳಿಕೊಟ್ಟಿದ್ದಾರೆ
ಇನ್ನೂ ಸಾವಿರ ಜನ್ಮ ಇದ್ದರೂ ನಾನು ಈ ಅಮ್ಮನ ಮಗಳಾಗಿಯೇ ಹುಟ್ಟಲು ಬಯಸಿದ್ದೇನೆ
ತಕ್ಕ ಮಟ್ಟಿಗೆ ಆರೋಗ್ಯ ವಾಗಿಯೇ ಇದ್ದ ನನ್ನ ಅಮ್ಮನಿಗೆ
ವಾರದ ಹಿಂದೆ ಎದೆನೋವು ಕಾಣಿಸಿಕೊಂಡಿದ್ದು ಲಘು ಹೃದಯಾಘಾತಕ್ಕೆ ಒಳಗಾಗಿದ್ದು ಆಂಜಿಯೋಪ್ಲ್ಯಾಸ್ಟಿ ಮೂಲಕ ಮೂರು ಬ್ಲಾಕ್ ಗಳನ್ನು ಸರಿ ಪಡಿಸಿ ಮೂರು ಸ್ಟಂಟ್ಗಳನ್ನು ಅಳವಡಿಸಿದ್ದಾರೆ .ಇಲ್ಲೂ ಯಮನನ್ನು ಹಿಮ್ಮೆಟ್ಟಿಸಿ ನಮಗಾಗಿ ಬದುಕಿ ಉಳಿದಿದ್ದಾಳೆ ನನ್ನಮ್ಮ

ದೊಡ್ಡವರ ಹಾದಿ : ಬ್ಲಾಗ್ ಕನಸಿಗೆ ಇಂಬು ಕೊಟ್ಟ ಪ್ರೊ. ಮುರಳೀಧರ ಉಪಾಧ್ಯ




ಬ್ಲಾಗ್ ಬರೆಯುವ ನನ್ನ ಕನಸು(MY DREAM OF WRITING BLOG) ಮುರಳೀಧರ ಉಪಾಧ್ಯರಿಗೆ ನಾನು ಸದಾ ಋಣಿ
                          ಬ್ಲಾಗ್  ಬರೆಯುವ ನನ್ನ ಕನಸು
ನನ್ನ ಮಗ ಅರವಿಂದ ಬಹಳ ವಾಚಾಳಿ . ವಯೋ ಸಹಜವಾಗಿ ಎಲ್ಲ ವಿಷಯಗಳ ಬಗ್ಗೆ ವಿಪರೀತ ಕುತೂಹಲ . ಕಂಪ್ಯೂಟರ್  ಬಗ್ಗೆ ಇಂಟರ್ನೆಟ್ ಬಗ್ಗೆಯೂ ಯಾವಾಗಲೂ ಹರಟುತ್ತಾ ಇರುತ್ತಾನೆ. ನನಗೋ  ಕಂಪ್ಯೂಟರ್ ,ಇಂಟರ್ನೆಟ್ ಕುರಿತು  ಒಂದಿನಿತೂ ಗೊತ್ತಿರಲಿಲ್ಲ . ಆದರೆ ಬ್ಲಾಗ್,ಫೇಸ್ ಬುಕ್ ,ಟ್ವಿಟ್ಟರ್ ,ಮೊದಲಾದವುಗಳ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೆ. ಒಮ್ಮೊಮ್ಮೆ  ನನಗು ಬ್ಲಾಗ್ ಬರೆಯ ಬೇಕು ಅನಿಸುತ್ತಿತ್ತು . ಆ ಅನಿಸಿಕೆ ಹೆಚ್ಚು ದೂರ ಸಾಗುತ್ತಿರಲಿಲ್ಲ .ಯಾಕೆಂದರೆ  ನನ್ನ ಕಂಪ್ಯೂಟರ್ ಜ್ಞಾನ ದೊಡ್ಡ ಸೊನ್ನೆ ಜ಼ೊತೆಗೆ ಇಂಗ್ಲಿಷ್ ಭಾಷೆ ಮೇಲೂ ತೀರ ಎನೂ  ದೊಡ್ಡ ಹಿಡಿತ ಇರಲಿಲ್ಲ. ಬ್ಲಾಗ್  ಫೇಸ್ ಬುಕ್ ಗಳಲ್ಲಿ ಕನ್ನಡ ಬಳಕೆ ಇದೆ ಅಂತ ಗೊತ್ತಿರಲಿಲ್ಲ .
ಕಳೆದ ವರ್ಷ ಸುಮಾರು ಈ ಸಮಯದಲ್ಲಿ ಮಗ ಹಠ ಹಿಡಿದು ನನ್ನ ಮೊಬೈಲ್ ಗೆ ಇಂಟರ್ನೆಟ್  ಸಂಪರ್ಕ ಹಾಕಿಸಿದ . ಯಾವಾಗಲು ಸಂಜೆ ಶಾಲೆಯಿಂದ ಬಂಧ ತಕ್ಷಣ ನನ್ನ ಮೊಬೈಲ್ ತಗೊಂಡು ಏನೋ ಡಬ್ಲ್ಯೂ ಡಬ್ಲ್ಯೂ ಯಫ಼್. ,ಜೋನ್ಸೀನ  ಕಾಳಿ  , ಕ್ರಿಕೆಟ್ ಅದು ಇದು ನೋಡಿ ನಂಗೆ ಹೇಳುತ್ತಿದ್ದ .ನಂಗೆ ಆಸಕ್ತಿ ಇಲ್ಲದಿದ್ದರೂ ಅವನ ಉತ್ಸಾಹಕ್ಕೆ ಭಂಗ ಬರಬಾರದಂತೆ  ಹೂಂಗುಟ್ಟುತಿದ್ದೆ. ಒಂದಿವಸ ನನ್ನ ಹತ್ರ ಅಮ್ಮ ನೋಡು ಇಂಟರ್ನೆಟ್ ನಲ್ಲಿ ಇಲ್ಲದ  ವಿಚಾರವೇ ಇಲ್ಲ ಎಲ್ಲವು ಇದರಲ್ಲಿ ಸಿಗುತ್ತೆ ಅಂತ ಹೇಳಿದ. ಯಾವಾಗಲು ಹೂಂಗುತ್ತಿ ಸುಮ್ಮನಾಗುತ್ತಿದ್ದ ನಾನು ಅವನನ್ನು ಸುಮ್ಮನೆ  ಕಿಚಾಯಿಸುವುದಕ್ಕಾಗಿ  "ನಾನು ಸಿಗುತ್ತೇನ ನಿನ್ನ   ಇಂಟರ್ನೆಟ್ ನಲ್ಲಿ ?"(ಸಿಗಲು ಅಸಾಧ್ಯವೆಂದು ತಿಳಿದಿದ್ದೂ ) ಕೇಳಿದೆ .ಒನ್ದು ಕ್ಷಣ ವಿಚಲಿತನಾದ ಅವನು  ನಾನು ನೋಡುತ್ತೇನೆ ಎಂದು ಹೇಳಿ ಮೊಬೈಲ್ ತಗೊಂಡು ಏನೋ ಗುರುಟಲು ಆರಂಬಿಸಿದ . ನಾನು ಏನೋ ಸಂಜೆ ತಿಂಡಿ ತಯಾರು ಮಾಡುತ್ತಿದ್ದೆ . ಅಡುಗೆ ಕೋಣೆಗೆ ಓಡಿ ಬಂದ  ಮಗ ಅರವಿಂದ "ಅಮ್ಮಾ ಅಮ್ಮ  ನೋಡು ಇಲ್ಲಿ ನೋಡು ನೀನು ಇದರಲ್ಲಿ ಇದ್ದೀಯ "ಎಂದು ಏನೋ ಸಾಧಿಸಿದ ಗೆಲುವಿನ ಧ್ವನಿಯಲ್ಲಿ ಹೇಳಿದ . ಹೌದು !! ಅವನು ಹೇಳಿದ್ದು ನಿಜ . ಡಾ . ಲಕ್ಷ್ಮಿ ಜಿ ಪ್ರಸಾದ್ ಎಂದು ಗೂಗಲ್ ಸರ್ಚ್ ಗೆ ಹಾಕಿದಾಗ ಅದರಲ್ಲ್ಲಿ ಅಜ್ಜಿ ಭೂತ ಮತ್ತು ಕೂಜಿಲು -ಡಾ . ಲಕ್ಷ್ಮಿ ಜಿ ಪ್ರಸಾದ್  ಎಂದಿತ್ತು .   ಉಡುಪಿ ಗೋವಿಂದ  ಪೈ ಸಂಶೋಧನಾ ಕೇಂದ್ರ ಪ್ರಕಟಿಸುವ "  ತುಳುವ  " ಪತ್ರಿಕೆಯಲ್ಲಿ ಪ್ರಕಟಗೊಂಡ ನನ್ನ  ಲೇಖನವನ್ನು ತಮ್ಮ ಬ್ಲಾಗ್ ನಲ್ಲಿ ಹಾಕಿ  ನನ್ನ ಲೇಖನ ವನ್ನು ಇಂಟರ್ನೆಟ್ ಮೂಲಕವೂ  ಸಿಗುವಂತೆ  ಮಾಡಿದ್ದರು ಹಿರಿಯ ವಿಮರ್ಶಕರಾದ ಎಂ ಜಿ ಎಂ  ಕಾಲೇಜ್ ಉಪನ್ಯಾಸಕರಾದ  ಸಹೃದಯಿ  ಪ್ರೊ। ಮುರಳೀಧರ ಉಪಾಧ್ಯರು
ಇಲ್ಲಿಂದ ನನ್ನ ಬ್ಲಾಗ್ ಬರೆಯುವ ಕನಸು ಗರಿ ಬಿಚ್ಚಿಕೊಂಡಿತು . ಮೊದಲಿಗೆ  ನುಡಿ ಹಾಗು ಬರಹದ ಮೂಲಕ   ಕನ್ನಡ ಬರೆಯುವುದು ಹೇಗೆ ಎಂದು ತಿಳಿದುಕೊಂಡೆ ಜ಼ೊತೆಗೆ ಮಗನ ಸಹಾಯದಿಂದ   ಮೊಬೈಲ್ ನಲ್ಲಿ  ಇಂಟರ್ನೆಟ್ ಮೂಲಕ ಬೇಕಾದ್ದನ್ನು ಹುಡುಕಲು  ಕಲಿತೆ. ಅದಕ್ಕೆ ಸರಿಯಾಗಿ ನನಗೆ ಬೆಂಗಳೂರಿಗೆ ನಿಯೋಜನೆ ಸಿಕ್ಕಿತು. ತುಂಬಾ ಸಮಯದಿಂದ ನನ್ನ ಪತಿ ಗೋವಿಂದ ಪ್ರಸಾದ್  ಮನೆಗೊಂದು  ಕಂಪ್ಯೂಟರ್ ತರುವ  ಎಂದು ಹೇಳುತ್ತಿದ್ದರು . ಬೇಡ ಎಂದು ನಾನು ಹೇಳುತ್ತಿದ್ದೆ . ಈಗ ನಾನಾಗಿಯೇ ಕಂಪ್ಯೂಟರ್ ತರುವ ಹೇಳಿದೆ . ನಾನು ಹೇಳಿದ ದಿವಸ ಸಂಜೆಯೇ ಮನೆಗೆ  ಲೆನೆವೋ ಕಂಪ್ಯೂಟರ್  ಅನ್ನು ತಂದೇ ಬಿಟ್ಟರು ನಾನೆಲ್ಲಿ ಇನ್ನು ಮನಸ್ಸು ಬದಲಾಯಿಸಿ ಬೇಡ ಅಂತ ಹೇಳಿ ಬಿಟ್ರೆ ಅಂತ !
ಸರಿ; ಅಂತು ಮೊನ್ನೆ ಜನವರಿ 2 4  ಕ್ಕೆ ಮನೆಗೆ ಕಂಪ್ಯೂಟರ್  ತಂದ ತಕ್ಷಣವೇ ಮಗನಲ್ಲಿ ನಂಗೆ ಬ್ಲಾಗ್ ಅಕೌಂಟ್  ತೆರೆದು ಕೊಡು ಎಂದು ಹೇಳಿದೆ . ತಂದೆ ಮಗ ಸೇರಿಕೊಂಡು ಏನೋ ಮಾಡಿಕೊಂಡು ಪೇಚಾಡಿ  ನನ್ನ ಹೆಸರಿನಲ್ಲಿ   ಬ್ಲಾಗ್ ತೆರೆದು ಕೊಟ್ಟರು . ಜೊತೆಗೆ ಕಂಪ್ಯೂಟರ್ ಆನ್  ಆಫ್  ಮಾಡುವುದನ್ನು ಗೂಗಲ್ ಸರ್ಚ್ ಮೂಲಕ ಬ್ಲಾಗ್ ನೋಡಲು  ಬ್ಲಾಗ್ ಗೆ ಪ್ರವೇಶಿಸಿ ಬರೆಯುವುದನ್ನು ಹೇಳಿಕೊಟ್ಟರು . ಮೊದಲಿಗೆ  ನನ್ನ ಕುರಿತಾದ ಸಂಕ್ಷಿಪ್ತ ಮಾಹಿತಿ ಹಾಕಿದೆ . ನಂತರ ನನ್ನಲ್ಲಿರುವ ಕೆಲವು ಅಪರೂಪದ ಭೂತಗಳ ಫೋಟೋ  ಹಾಕಿದೆ .ನೀರು ಇಂಗಿಸ ಬೇಕಾದ ಅನಿವಾರ್ಯತೆಯ ಕುರಿತು ನೆಲ ಜಲ ಎಂಬ ಶೀರ್ಷಿಕೆಯಡಿಯಲ್ಲಿ ಒಂದು ಲೇಖನ ಬರೆದೆ .ಸ್ತ್ರೀ  ಸಂವೇದನೆ ಕುರಿತು ಒಂದು ಲೇಖನ ಬರೆದು ಹಾಕಿದೆ . ಈ ನಡುವೆ ಉಡುಪಿ ಗೋವಿಂದ ಪೈ ಸಂಶೋಧನಾ ಕೇಂದ್ರದ ನಿರ್ದೆಶಕರಾದ  ಹೆರಂಜೆ  ಕೃಷ್ಣ ಭಟ್ಟರನ್ನು ಸಂಪರ್ಕಿಸಿ ಮುರಳಿಧರ ಉಪಾಧ್ಯರ ಸಂಪರ್ಕ ಸಂಖ್ಯೆಯನ್ನು ಪಡೆದು  ಅವರನ್ನು ಸಂಪರ್ಕಿಸಿ ಬ್ಲಾಗ್ ಬರೆಯುವ  ನನ್ನ ಆಸಕ್ತಿಯ ಬಗ್ಗೆ ತಿಳಿಸಿದೆ ಅವರು ತುಂಬು ಮನಸಿನಿಂದ ಸೂಕ್ತ ಸಲಹೆ ನೀಡಿದರು . ಅಂತು ಇಂತೂ ಒಂದೆರಡು ಲೇಖನ ಬರೆದು  ಬ್ಲಾಗ್ ಗೆ ಹಾಕಿದ ನಂತರ ಕಂಪ್ಯೂಟರ್  ಬಳಸುವ ನನ್ನ ಅನೇಕ ಸ್ನೇಹಿತರಿಗೆ ಹಾಗು ನನ್ನ ಹಿತೈಷಿಗಳಾದ ಕೆಲವು ವಿದ್ವಾಂಸರಿಗೆ ಮೊಬೈಲ್ ಮೂಲಕ  ನಾನು ಬ್ಲಾಗ್ ಬರೆಯುತ್ತಿರುವುದನ್ನು ತಿಳಿಸಿ ಓದಿ ನೋಡಿ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಸಲಹೆ ನೀಡುವಂತೆ ವಿನಂತಿ ಮಾಡಿದೆ . ಎಲ್ಲೆರಿಂದ ನನಗೆ ತುಂಬು ಮನದ ಪ್ರೋತ್ಸಾಹ ಸಿಕ್ಕಿತು. ಮುರಳಿಧರ ಉಪಾಧ್ಯರಿಗು ಮೆಸೇಜ್ ಮಾಡಿದ್ದೆ .ಅದೇ ದಿವಸ ನನ್ನ ಬ್ಲಾಗನ್ನು ನೋಡಿ ಅವರು "ನಾನು ನಿಮ್ಮ ಬ್ಲಾಗ್ ನ ಹೊರ ಆವರಣವನ್ನು  ಚಂದ ಮಾಡಿ ಕೊಡಬಲ್ಲೆ .ನಿಮ್ಮ  ಇಮೇಲ್ ಅಡ್ರೆಸ್ ಮತ್ತು ಪಾಸ್ ವರ್ಡ್ ಕೊಡಿ . ನಂತರ ಪಾಸ್  ವರ್ಡ್ ಬದಲಾಯಿಸಿ "ಎಂದು ಮೆಸೇಜ್  ಮಾಡಿದರು.ಇಂತಹ ಸಹೃದಯತೆಯನ್ನು  ಡಾ . ಅಮೃತ ಸೋಮೆಶ್ವರರನ್ನು ಬಿಟ್ಟು  ಬೇರೆ  ಯಾರಲ್ಲೂ  ಆ ತನಕ ಕಂಡಿರಲಿಲ್ಲ ನಾನು. !
{  ಸಂಶೋಧನೆ ,ಸಾಹಿತ್ಯ ಕ್ಷೇತ್ರದಲ್ಲಿ  ಇನ್ನೂ ಅಂಬೆಗಾಲು ಇಡುತ್ತಿರುವ ನನ್ನ ಕುರಿತು ನೀವು ತೋರಿದ  ಪ್ರೀತಿ ಅಭಿಮಾನ ನನ್ನನ್ನು ನಿಬ್ಬೆರಗಾಗಿಸಿ ಮೂಕ ವಿಸ್ಮಿತಳನ್ನಾಗಿಸಿದೆ   ಸರ್ (ಮುರಳೀಧರ  ಉಪಾಧ್ಯ )! ನೀವು ನಿಜವಾಗಿಯೂ ಗ್ರೇಟ್  ಸರ್ !)  ಅವರು ಹೇಳಿದಂತೆ  ಇಮೇಲ್ ಅಡ್ರೆಸ್  ಮತ್ತು ಪಾಸು ವರ್ಡ್  ಮೆಸೇಜ್ ಮಾಡಿ ಆವರ  ಮೊಬೈಲ್ ಗೆ ಕಳುಹಿಸಿದೆ  ಫೆಬ್ರುವರಿ ೨  ರಂದು  ಮಧ್ಯಾಹ್ನ .ಅದೇ ದಿವಸ  ಸಂಜೆ ಅವುರು ನನ್ನ ಬ್ಲಾಗ್ ಅನ್ನು ನೇರ್ಪು ಗೊಳಿಸಿ ಬೇರೆ ಬ್ಲಾಗ್ಗಳಿಗೆ ಲಿಂಕ್ ಕೊಟ್ಟು  ಫೀಡ್ ಜೆಟ್ ಅಳವಡಿಸಿ  ಒಂದು ಸುಂದರವಾದ  ಚೌಕಟ್ಟು ಅನ್ನು  ಹಾಕಿ ತುಂಬಾ ಆಕರ್ಷಕವಾಗಿಸಿ  ಕೊಟ್ಟು  ನನಗೆ  ಪಾಸ್ ವರ್ಡ್  ಚೇಂಜ್ ಮಾಡಿ ಎಂದು ಜತನದಿಂದ  ಮೆಸೇಜ್ ಮಾಡಿದರು . ನನ್ನ ಬ್ಲಾಗ್ ತೆರೆದು ನೋಡಿ ರೋಮಾಂಚನವಾಯಿತು ನನಗೆ  ಅಷ್ಟು  ಚಂದ  ಮಾಡಿ ಕೊಟ್ಟಿದ್ದರು ಅವರು .ಹೀಗೆ ನನ್ನ ಬ್ಲಾಗ್ ಬರೆಯುವ ಕನಸು ನನಸಾಗಿದೆ ಗೆಳೆಯರೆ !

  ನಾನು   ಬ್ಲಾಗ್ ತೆರದು  ನಾಲ್ಕು ವರ್ಷಗಳು ಕಳೆದವು .ಸುಮಾರು ಆರುನೂರು  ಬರಹಗಳನ್ನು  ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ . ಎರಡು ಲಕ್ಷದ ಎಂಟುಸಾವಿರ  ದೇಶ ವಿದೇಶಗಳ ಜನರು ನನ್ನ ಬ್ಲಾಗನ್ನು ಇಣುಕಿ  ನೋಡಿದ್ದಾರೆ  ಅನೇಕರು  ಪ್ರೋತ್ಸಾಹಿಸಿದ್ದಾರೆ .ಭೂತಗಳ ಅದ್ಭುತ ಜಗತ್ತು ಬ್ಲಾಗ್ ಅಲ್ಲದೆ ಶಿಕ್ಷಣ ಲೋಕ ಮತ್ತು ಗಿಳಿ ಬಾಗಿಲು ಎಂಬ ಹೆಸರಿನ ಇನ್ನೂ ಎರಡು ಬ್ಲಾಗ್ ತೆರೆದು ಬರೆಯುತ್ತಿರುವೆ  ನನ್ನ ಬ್ಲಾಗಿಗೆ ಕನ್ನಡ ಬ್ಲಾಗ್ ಕೊಂಡಿಗೆ ಜೋಡಿಸಿದ್ದಲ್ಲದೆ  ನನ್ನ ಹೆಚ್ಚು ಕಡಿಮೆ ಎಲ್ಲ ಬರಹ (ಪೋಸ್ಟ್ )ಗಳನ್ನು ತಮ್ಮ  ಬ್ಲಾಗಿನಲ್ಲಿ  ಹಂಚಿಕೊಂಡು  ನನ್ನ ಬ್ಲಾಗ್ ಇಷ್ಟು ಬೇಗನೆ ಪ್ರಸಿದ್ಧಿಗೆ  ಬರುವಂತೆ  ಮಾಡಿದ್ದಾರೆ ಮುರಳೀಧರ ಉಪಾಧ್ಯರು .
ಮುರಳೀಧರ ಉಪಾಧ್ಯರಿಗೆ  ನಾನು ಸದಾ ಋಣಿ.  ಬೆಂಬಲ ನೀಡಿದ  ಓದಿ ಪ್ರೋತ್ಸಾಹಿಸಿದ ಎಲ್ಲರಿಗು ಧನ್ಯವಾದಗಳು

Wednesday 24 May 2017

ದೊಡ್ಡವರ ದಾರಿ :ಉದಾರ ಹೃದಯದ ಡಾ ಶಿಕಾರಿಪುರ ಕೃಷ್ಣ ಮೂರ್ತಿ

         

ಕೆಲವರು ತಮ್ಮ ಉದಾರ ನಡೆಯಿಂದಲೇ ದೊಡ್ಡವರಾಗಿ ಬಿಡುತ್ತಾರೆ.ಅಂತಹವರಲ್ಲಿ ನಾನು ಕಂಡ ವಿಶಿಷ್ಠವಾದ ವ್ಯಕ್ತಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ   ಡಾ.ಶಿಕಾರಿಪುರ ಕೃಷ್ಣ ಮೂರ್ತಿ.
ಇವರನ್ನು ಮೊದಲು ಭೇಟಿ ಮಾಡಿದ್ದು ನಾನು ಸಂಸ್ಕೃತ ಎಂಎ ಓದುತ್ತಿರುವಾಗ.ನಮ್ಮ ಕಟೀಲಕಾಲೇಜಿನ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಅತಿಥಿ ಉಪನ್ಯಾಸಕರಾಗಿ ಬಂದಿದ್ದರು ಅವರು. ಆ ದಿನ ಅವರು ಯಾವ ವಿಷಯಕ್ಕೆ ಸಂಬಂಧಿಸಿದಂತೆ ಉಪನ್ಯಾಸ ನೀಡಿದರೆಂಬುದು ನನಗೆ ಈಗ ಮರೆತುಹೋಗಿದೆ ಆದರೆ ಮಾತಿನ ನಡುವೆ ಅವರು ಕೃಷ್ಣ ನನ್ನು ಮ್ಯಾನುಪುಲೇಟರ್ ಎಂದು ಹೇಳಿದರು .ನಮ್ಮ ಸಂಸ್ಕೃತ ಎಂಎ ತರಗತಿಯಲ್ಲಿ ಇಪ್ಪತ್ತು ಜನ ವಿದ್ಯಾರ್ಥಿ ಗಳು ಓದುತ್ತಾ ಇದ್ದೆವುನಾವು ಬಿಟ್ಟರೆ ಎರಡನೇ ವರ್ಷದಲ್ಲಿ ಓದುತ್ತಾ ಇದ್ದವರು ಕೇವಲ ಐದು ಜನ .ಇವರಲ್ಲಿ ನನ್ನನ್ನು ಹೊರತು ಪಡಿಸಿ ಬೇರೆ ಯಾರೂ ವಿವಾಹಿತರಿರಲಿಲ್ಲ .ನನಗೆ ಎರಡನೇ ವರ್ಷ ಪದವಿ ಓದುತ್ತಿರುವಾಗಲೇ ವಿವಾಹವಾಗಿದ್ದು ಸಂಸ್ಕೃತ ಎಂಎ ಗೆ ಸೇರುವಾಗಲೇ ನಾನು ವಿವಾಹಿತಳು.ವಯಸ್ಸು ಅಲ್ಲಿ ಓದುವ ವಿದ್ಯಾರ್ಥಿ ಗಳಷ್ಟೇ ಆಗಿದ್ದರೂ ನನಗೆ ನಾನು ಉಳಿದವರಿಗಿಂತ ಪ್ರೌಢಳು ಎಂಬ ಭಾವ ಇತ್ತು ಹಾಗಾಗಿ ಸ್ವಲ್ಪ ಪ್ರೌಢಳಂತೆ ತೋರಿಸಿ ಇತರರಿಗಿಂತ ಭಿನ್ನವಾಗಿ ಕಾಣಿಸುವ ಸಲುವಾಗಿ ನಾನು ಅದೇಗೆ ಕೃಷ್ಣ ಮ್ಯಾನುಪುಲೇಟರ್ ಆಗುತ್ತಾನೆ ಎಂದು ಚರ್ಚೆಗೆ ನಿಂತೆ ಅದಕ್ಕೆ ಅವರೂ ಏನೇನೋ ಸ್ಪಷ್ಟೀಕರಣ ನೀಡಲು ಯತ್ನ ಮಾಡಿದರೂ ಅದು ಎಲ್ಲರಿಗೂ ಒಪ್ಪಿಗೆಯಾಗಲಿಲ್ಲ
ಆ ಸಮಯದಲ್ಲಿ ನನ್ನ ತಮ್ಮ ಈಶ್ವರ ಭಟ್ ಅಲೋಶಿಯಸ್ ಕಾಲೇಜಿನಲ್ಲಿ ದ್ವಿತೀಯ ವಿಜ್ಞಾನ ಪದವಿ ಓದುತ್ತಿದ್ದು ಅವನಿಗೆ ಶಿಕಾರಿಪುರ ಅವರು ಸಂಸ್ಕೃತ ಮೇಷ್ಟ್ರು ಆಗಿದ್ದರು.
ಕಟೀಲಿನಲ್ಲಿ ನಡೆದ ಚರ್ಚೆ ಬಗ್ಗೆ ತರಗತಿಯಲ್ಲಿ ಅವರು ಹೇಳಿ " ಏನೋ ಎಂಎ ಸ್ಟೂಡೆಂಟ್ಸ್ ಇಂಟರ್ನಲ್  ಅಸೆಸ್ಮೆಂಟ್ ಮಾರ್ಕ್ಸ್ ಎಲ್ಲಾ ಉಪನ್ಯಾಸಕರ ಹಿಡಿತದಲ್ಲಿ ಇರೋದ್ರಿಂದ ಏನು ಹೇಳಿದರೂ ಕೇಳಿಸ್ಕೋತಾರೆ ಅಂತ ಅಂದುಕೊಂಡು ಸಾಕಷ್ಟು ತಯಾರಿ ಇಲ್ಲದೆ ಉಪನ್ಯಾಸ ಕೊಡಲು ಹೋಗಿ ಸಿಕ್ಕಿ ಹಾಕಿಕೊಂಡೆ .ಅಲ್ಲಿ ಒಬ್ಬಾಕೆ ವಿವಾಹಿತ ವಿದ್ಯಾರ್ಥಿನಿ  ಇದ್ದರು ನನ್ನ ಲ್ಲಿ ಸಾಕಷ್ಟು ಚರ್ಚೆಮಾಡಿ ನನ್ನ ಕಂಗಾಲು ಮಾಡಿದರು ಅಂತೂ ಹೇಗೋ ಒಂದು ಸಮಜಾಯಿಸಿ ಕೊಟ್ಟು ಬಂದೆ "ಎಂದು ಹೇಳಿದರಂತೆ .ಆಗ ಆ ವಿವಾಹಿತ ವಿದ್ಯಾರ್ಥಿನಿ ನನ್ನ ಅಕ್ಕ ಎಂದು ಈಶ್ವರ ಭಟ್ ತಿಳಿಸಿದರಂತೆ
ಮತ್ತೆ ಕೂಡಾ ಅವರು ಅನೇಕ ಉನ್ನತ ಮಟ್ಟದ ಉಪನ್ಯಾಸ ನೀಡಿದ್ದರು ಆಗ ನನಗೆ ಅವರ ಪರಿಚಯವಾಯಿತು .ನಮ್ಮ  ಬಾಡಿಗೆ ಮನೆ ಅವರ ಮನೆಗೆ ಹೋಗುವ ರಸ್ತೆಯಲ್ಲಿ ಇತ್ತು ಒಂದು ದಿನ ನನ್ನ ತಮ್ಮ ಹಾಗೂ ನನ್ನ ಆಹ್ವಾನದ ಮೇರೆಗೆ   ನಮ್ಮ ಮನೆಗೂ ಬಂದಿದ್ದರು .ಅಷ್ಟು ಬಿಟ್ಟರೆ ಬೇರೇನೂ ಪರಿಚಯ ಇರಲಿಲ್ಲ.
ಅದು 1996 ನೇ ಇಸವಿಯ ಆಗಷ್ಟ್ ತಿಂಗಳು ಎರಡನೇ ವಾರ ಇರಬೇಕು.ಆ ದಿನ ಕೈಯಲ್ಲಿ ಸಿಹಿ ತಿಂಡಿ ಹಿಡಿದುಕೊಂಡು ಶಿಕಾರಿಪುರ ಕೃಷ್ಣ ಮೂರ್ತಿ ಮತ್ತು ಅವರ ಮಡದಿ ರತ್ನಕ್ಕ ನಮ್ಮ ಮನೆಗೆ ಬಂದು ಸಿಹಿ ನೀಡಿ "ಒಂದು ಸಂತೋಷ ದ ವಿಚಾರ ನಿಮ್ಮ ಎಂಎ ಫಲಿತಾಂಶ ಬಂದಿದೆ .ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದೀರಿ ಮತ್ತು ನಿಮಗೆ ಒಬ್ಬರಿಗೆ ಮಾತ್  ಡಿಸ್ಟಿಂಕ್ಷನ್ ಬಂದಿದೆ ಹಾಗಾಗಿ ಮೊದಲ ರಾಂಕ್ ಕೂಡ ನಿಮಗೇ ಬಂದಿದೆ" ಎಂದು ತಿಳಿಸಿದರು.ನನಗೆ ಸಂತಸದಲ್ಲಿ ಏನು ಹೇಳಬೇಕೋ ತಿಳಿಯಲಿಲ್ಲ .ಕೊನೆಗೂ ನನ್ನ ತಂದೆಯವರ ಕನಸು ನನಸಾಗಿತ್ತು .ನನ್ನ ತಂದೆಯವರಿಗೆತಮ್ಮ ಮಕ್ಕಳು ರಾಂಕ್ ತೆಗೆಯಬೇಕೆಂಬ ಕನಸಿತ್ತು ಅದು ನನ್ನ ಕನಸು ಕೂಡಾ ಆಗಿತ್ತು ಅಂದು ಅದು ನನಸಾಗಿತ್ತು.ಏನು ಹೇಳಬೇಕೆಂದು ತೋಚದೆ ಅತ್ತು ಬಿಟ್ಟೆ ಆ ದಿನ
ನಂತರ ನಾನು ಸಂತ ಅಲೋಶಿಯಸ್ ಕಾಲೇಜು ನಲ್ಲಿ ಉಪನ್ಯಾಸಕಿ ಯಾಗಿ ಶಿಕಾರಿಪುರ ಕೃಷ್ಣ ಮೂರ್ತಿ ಅವರ ಜೂನಿಯರ್ ಆಗಿ ಕೆಲಸ ಮಾಡಿದೆ .ಬಹು ಪ್ರತಿಷ್ಠಿತ ಕಾಲೇಜು ಸಂತ ಅಲೋಶಿಯಸ್. ಅಲ್ಲಿ ಉಪನ್ಯಾಸಕರಾಗಿ ಆಯ್ಕೆ ಆಗುವುದು ,ಸಮರ್ಪಕವಾಗಿ ಕೆಲಸ ಮಾಡುವುದು  ಸುಲಭ ಮಾತಲ್ಲ.ಮೊದಲ ದಿನವೇ ಒಂದು ಕಿವಿ ಮಾತು ಹೇಳಿದರು " ಈಗ ನಿಮ್ಮ ಮುಂದೆ ಕುಳಿತಿರುವವರು ವಿದ್ಯಾರ್ಥಿ ಗಳು ಆದರೆ ಇವರು ಮುಂದಿನ ದೊಡ್ಡ ದೊಡ್ಡ ಡಾಕ್ಟರ್, ಇಂಜಿನಿಯರ್, ಬ್ಯುಸಿನೆಸ್‌ ಮ್ಯಾನ್ ಗಳು.ಇದನ್ನು ನೀವು ಅರ್ಥ ಮಾಡಿಕೊಂಡರೆ ಸಾಕು,ಇಲ್ಲಿನ ಮಕ್ಕಳಿಗೆ ಪಾಠವನ್ನು ಮಾಡುವ ಸಾಮರ್ಥ್ಯ ನಿಮಗಿದೆ ಹಾಗಾಗಿ ಆತಂಕ ಬೇಡ "ಎಂದು ಧೈರ್ಯ ತುಂಬಿದ್ದರು.ಅವರ ಜೂನಿಯರ್ ಆಗಿ ನಾನು ತುಂಬಾ ಕಲಿತೆ ಇಂದು ನನಗೆ ಶಿಕ್ಷಕಿಯಾಗಿ ಯಶಸ್ಸು ಪಡೆಯಲು ಅವರ ಮಾರ್ಗ ದರ್ಶನ ಕೂಡ ಒಂದು ಕಾರಣವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ
ನಂತರ ನಾನು ಗರ್ಭಿಣಿ ಯಾದಾಗ   ಪ್ರಿನ್ಸಿಪಾಲ್ ಹತ್ತಿರ ಮಾತಾಡಿ  ಸುಪರ್ವಿಶನ್,ಮೌಲ್ಯಮಾಪನ ಮೊದಲಾದ ಕಾರ್ಯಗಳಿಂದ ನನಗೆ ವಿನಾಯಿತಿ ಕೊಡಿಸಿದ್ದರು.ಅವರು ಒಂದು ದಿನ ಕೂಡಾವಿಭಾಗದ ಮುಖ್ಯಸ್ಥರಾಗಿ    ಒಂದು ದಿನ ಕೂಡಾ ನನ್ನ ಮೇಲೆ ದಬ್ಬಾಳಿಕೆ ಮಾಡಿಲ್ಲ ಬದಲಿಗೆ ಅವರಿಗೆ ಸಮಾನರಾಗಿ ಕಂಡು ಗೌರವ ನೀಡಿದ್ದರು ಇಂತಹ ಹವರನ್ನು ನಾನು ಹೇಗೆ ತಾನೆ ಮರೆಯಲು ಸಾಧ್ಯ? ಸಾಮಾನ್ಯವಾಗಿ ವಿದ್ಯಾರ್ಥಿ ಗಳು ಸಿಹಿ ತಿಂಡಿಯನ್ನು ತಮ್ಮ ಗುರುಗಳಿಗೆ ಕೊಡುವ ಕ್ರಮ ಇದೆ ಆದರೆ ಇಲ್ಲಿ ಶಿಕಾರಿಪುರ ಅವರು ತಮ್ಮ ವಿದ್ಯಾರ್ಥಿನಿಗೆ ಸ್ವೀಟ್   ನೀಡಿ ಫಲಿತಾಂಶ ವನ್ನು ತಿಳಿಸಿ ತಮ್ಮ ಉದಾರತೆ ಮೆರೆದಿದ್ದರು.ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಸರ್
ಇವರು 2011 ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ ಕೂರ್ಮಾವತಾರ ಚಲನಚಿತ್ರದ ಒಂದು ಮುಖ್ಯ ಪಾತ್ರವಾದ ಗಾಂಧೀಜಿಯವರ ಪಾತ್ರವನ್ನು ಮಾಡಿದ್ದು ಇವರ ಅಭಿನಯ ಎಲ್ಲರ ಪ್ರಶಂಶೆಗೆ ಪಾತ್ರವಾಗಿದೆ ಈ ಚಲನ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಬಂದಿದೆ ಇದು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ
  © ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕಿ ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ  

Monday 22 May 2017

ದೊಡ್ಡವರ ದಾರಿ : ಮಾದರಿ ವ್ಯಕ್ತಿತ್ವದ ಡಾ.ಜಿ ಎನ್ ಭಟ್

                   

ಯಾರು ಡಾ.ಜಿ ಎನ್ ಭಟ್ ? ಕರ್ನಾಟಕದ ಸಂಸ್ಕೃತ   ವಿಶ್ವ ವಿದ್ಯಾಲಯ ಆರಂಭವಾದಾಗ ವಿ ಸಿ ಹುದ್ದೆಗೆ ಇವರ ಹೆಸರು ಉಲ್ಲೇಖವಾದಾಗ ಜನರಿಗೆ ಅವರು ಯಾರು ಅಂತ ತಿಳಿಯಿತು.
ಮಂಗಳೂರಿನಲ್ಲಿ ರುವ ಪ್ರತಿಷ್ಠಿತ ಕೆನರಾ ಕಾಲೇಜಿನ ಸಂಸ್ಕೃತ ಉಪನ್ಯಾಸಕರು ಇವರು.ವಿದ್ಯಾರ್ಥಿಗಳ ಮೆಚ್ಚಿನ ಮೇಷ್ಟ್ರು ಇವರು .ಅಷ್ಟೇ ಆಗಿದ್ದರೆ ನಾನು ಅವರ ಬಗ್ಗೆ ಬರೆಯುತ್ತಾ ಇರಲಿಲ್ಲ.
ಮಂಗಳೂರು ವಿಶ್ವವಿದ್ಯಾನಿಲಯದ ದಲ್ಲಿ ಸಂಸ್ಕೃತ ಎಂ ಎ ಓದಲು ಅವಕಾಶವಿರಲಿಲ್ಲ .ಸಂಸ್ಕೃತ ಕಲಿಯುವ ಆಸಕ್ತಿ ಇದ್ದರೂ ದೂರದ ಬೆಂಗಳೂರು, ದಾರವಾಡ ಮೈಸೂರಿಗೆ ಹೋಗಿ ಕಲಿಯವುದು ಕಷ್ಟದ ವಿಚಾರ ವಾಗಿತ್ತು .ಜೊತೆಗೆ ಇಲ್ಲಿನ ಶಾಲಾ ಕಾಲೇಜುಗಳ ಲ್ಲಿ ಸಂಸ್ಕೃತ ಕಲಿಸಲು ಅಧ್ಯಾಪಕರ ಕೊರತೆ ಕಾಡಿತ್ತು .ಅನೇಕ ಸಂಸ್ಥೆ ಗಳು ಕಲಿಸುವ ಶಿಕ್ಷಕರು ಸಿಗದ ಕಾರಣ ಸಂಸ್ಕೃತ ವನ್ನು ತೆಗೆದು ಹಾಕುತ್ತಾ ಇದ್ದರು.
ಸಂಸ್ಕೃತ ದ ಮೇಲೆ ಅಪಾರ ಅಭಿಮಾನ ಪ್ರೀತಿ ಇದ್ದ ಡಾ.ಜಿ ಎನ್ ಭಟ್ ಅವರಿಗೆ ಇದು ತುಂಬಾ ನೋವಿನ ವಿಚಾರವಾಗಿತ್ತು .ಹಾಗಾಗಿ ಕಟೀಲ ಕಾಲೇಜಿನಲ್ಲಿ ಹರ ಸಾಹಸ ಮಾಡಿ ಸಂಸ್ಕೃತ ಎಂ ಎ ತರಗತಿ ಆರಂಭಿಸಿದರು.ಐದು ವರ್ಷದ ಒಪ್ಪಂದ ದ ಮೇರೆಗೆ ಅವರು ಕಟೀಲು ಕಾಲೇಜಿಗೆ ಪ್ರಿನ್ಸಿಪಾಲ್ ಆಗಿ ಬಂದರು ಕಟೀಲು ಡಿಗ್ರಿ ಕಾಲೇಜಿನಲ್ಲಿ ಮೊದಲಿಗೆ ಸಂಸ್ಕೃತ ವನ್ನು ಐಚ್ಛಿಕ ವಿಷಯವಾಗಿ ಕಲಿಯಲು ಅವಕಾಶ ಮಾಡಿದರು.ನಂತರ ಎಂ ಎ ತರಗತಿ ಅಲ್ಲಿಯೇ ಆರಂಭ ಮಾಡಿದರು.ಸಂಸ್ಕೃತ ಎಂ ಎ ತರಗತಿ ಏನೋ ಶುರು ಆಯ್ತು ಆದರೆ ಅದನ್ನು ಓದಲು ವಿದ್ಯಾರ್ಥಿಗಳ ಕೊರತೆ ಕಾಡಿತು.ಮೊದಲ ಬ್ಯಾಚ್ ನಲ್ಲಿ ಕೇವಲ  ಜನ ವಿದ್ಯಾರ್ಥಿಗಳು. ವರ್ಷಾಂತ್ಯ ವಾಗುತ್ತಿದ್ದರೂ ಮಂಗಳೂರು ಯುನಿವರ್ಸಿಟಿ ಯಿಂದ ಸಂಸ್ಕೃತ ಎಂ ಎ ಗೆ ಅಧಿಕೃತ ಪರವಾನಗಿ ಸಿಕ್ಕಿರಲಿಲ್ಲ ಜೊತೆಗೆ ಪಠ್ಯ ಏನು ಎತ್ತ ಎಂಬ ಬಗ್ಗೆ ಯೂ ಆತಂಕ‌! ಅಂತು ಇಂತು ಅನುಮತಿ ಸಿಕ್ಕಿ ಮೊದಲ ಬ್ಯಾಚ್ ನವರು ಪರೀಕ್ಷೆ ಬರೆದರು.ಎರಡನೆಯ ವರ್ಷಕ್ಕೂ ಐದು ವಿದ್ಯಾರ್ಥಿಗಳು.
ಮೂರನೇ ಬ್ಯಾಚ್ ನಮ್ಮದು .ಅದರಲ್ಲಿ ಇಪ್ಪತ್ತು ಜನ  ವಿದ್ಯಾರ್ಥಿಗಳ ಗಳು ಇದ್ದೆವು .ಇದರಲ್ಲಿ ಅಲ್ಲಿನ ಡಿಗ್ರಿ ಕಾಲೇಜಿ ನಲ್ಲಿ ಸಂಸ್ಕೃತ ವನ್ನು ಐಚ್ಛಿಕವಗಿ ಓದಿ ಬಂದ ಅನೇಕರು ಇದ್ದರು.ಅವರನ್ನು ನೋಡಿ ಕೊನೆ ಬೆಂಚಿನ ಹುಡುಗಿಯಾಗಿದ್ದ ನಮಗೆ ಆತಂಕವಾಗದೇ ಇದ್ದೀತೆ?
ಆ ಕಾಲ ನಮಗೂ ಕಷ್ಟದ ದಿನಗಳು. ಪ್ರಸಾದ್ ಗೆ ಸರಿಯಸದ ಕೆಲಸ ಇರಲಿಲ್ಲ. ನಾನು ಸಂಸ್ಕೃತ ಎಂಎ ಗೆ ಸೇರಲು ಹೋದಾಗ ಜಿ ಎನ್ ಭಟ್ಟರನ್ನು ಮೊದಲಬಾರಿಗೆ ನೋಡಿದೆ ಆಗ ಅವರಿಗೆ ಸುಮಾರು ನಲವತ್ತು ನಲುವತ್ತೈದರ ವಯಸು .ನೋಡಲು ಚೆನ್ನಾಗಿ ಇದ್ದರು ಮಾತು ಕೂಡ ಅಷ್ಟೇ ಚಂದ  ನಾನು ಸಂಸ್ಕೃತ ಎಂಎ ಸೇರಲು ಬಂದಿರುವೆನೆಂದು ತಿಳಿಸಿದಾಗ ಅಲಂಕಾರಶಾಸ್ತ್ರ  ಮತ್ತು ವೇದಾಂತ ಮತ್ತು ಅಲಂಕಾರ ಶಾಸ್ತ್ರ ಐಚ್ಛಿಕ ವಿಷಯಗಳಿವೆ ಯಾವುದು ಬೇಕು ಎಂದು ಕೇಳಿದರು.ಆ ಎರಡೂ ಶಬ್ದಗಳ  ಹೆಸರನ್ನು ಕೂಡ ಆ ತ‌ನಕ ನಾನು ಕೇಳಿಯೇ ಇರಲಿಲ್ಲ. ಬಹಳ‌ಗಾಬರಿಯಾಯಿತು    ಆಗ ನಮಗೆ ತುಂಬಾ ಕಷ್ಟದ ಸಮಯ ಪ್ರಸಾದ್ ಇದ್ದ ಒಳ್ಳೆಯ ಕೆಲಸ ಬಿಟ್ಟು ಊರಿಗೆ ಬಂದಿದ್ದರು ಮನೆ ಮಂದಿಯಿಂದ ಓದುವುದಕ್ಕೆ ಪ್ರಬಲ ವಿರೋಧ .ಹಾಗಾಗಿ ಬೇರೆ ಮನೆ ಮಾಡುವುದು ಅನಿವಾರ್ಯವಾಗಿತ್ತು ಪ್ರಸಾದ್ ನಂತರ ಮಂಗಳೂರಿನಲ್ಲಿ ಸಣ್ಣ ಕೆಲಸಕ್ಕೆ ಸೇರಿಕೊಂಡರು.ಹಾಗಾಗ  ಸಂಸ್ಕೃತ ಎಂ ಎ ಓದಲು ಹೊರಟಾಗ ಇದ್ದಿದ್ದು ಒಳ್ಳೆಯ ಕೆಲಸ ಹಿಡಿಯುವುದು ಮಾತ್ರ .ಹಾಗಾಗಿ ಕೆಲಸ ಸಿಗಲು ಯಾವುದು ಒಳ್ಳೆಯ ದು ಎಂದು ಕೇಳಿದೆ ಆಗ ಅವರು ಅಲಂಕಾರ ಶಾಸ್ತ್ರ ತೆಗೆದುಕೊಳ್ಳಿ ಎಂದು ಹೇಳಿದರು .( ನಾನು ಮಾತ್ರ ಮುಂದೆ ವೇದಾಂತ ವನ್ನೇ ಆಯ್ಕೆ ಮಾಡಿದೆಅದು ಬೇರೆ ವಿಚಾರ)   ಶುಲ್ಕ 700ರೂ ತುಂಬ ಬೇಕಾಗಿತ್ತು ಅಷ್ಟು ದುಡ್ಡು ನಮ್ಮಲ್ಲಿ ಇರಲಿಲ್ಲ. ಆಗ ಅದನ್ನು ಅರ್ಥ ಮಾಡಿಕೊಂಡ ಅವರು ನಿಮ್ಮ ಫೀಸ್ ಅನ್ನು ನಾನು ಕಟ್ಟುತ್ತೇನೆ.ಮುಂದೆ ನೀವು ದುಡ್ಡು ಆದಾಗ ಕೊಡಿ ಎಂದು ಹೇಳಿದರು .ಮತ್ತೆ ಒಂದು ವಾರದಲ್ಲಿ ನಾವು ಹೇಗೋ ದುಡ್ಡು ಹೊಂದಿಸಿ ಅವರಿಗೆ ತಂದು ಕೊಟ್ಟೆವು.
ಈ ನಡುವೆ ಸಂಸ್ಥೆ ಬೆಳೆಯುತ್ತಾ ಇದ್ದಂತೆ ಅನೇಕ ಸಮಸ್ಯೆ ಗಳು ಹುಟ್ಟಿಕೊಂಡವು ಜಿ ಎನ್ ಭಟ್ ಅವರು ತಮಗೆ ನ್ಯಾಯಯುತವಾಗಿ ಬರಬೇಕಿದ್ದ ಭಡ್ತಿ ಗಾಗಿ ನ್ಯಾಯಾಲಯದ ಮೆಟ್ಟಿಲನ್ನು ಹತ್ತಬೇಕಾಯಿತು .ನೇರವಾ್ಇ ಇದ್ದುದನ್ನು ಇದ್ದ ಹಾಗೆ ಹೇಳುವ ನನಗೆ ಅಂತರ್ ಮೌಲ್ಯಮಾಪನ ಅಂಕ ನೀಡುವ ವಿಚಾರದಲ್ಲಿ ನನಗು ಅಲ್ಲಿನ ಉಪನ್ಯಾಸಕರಾದ ನಾಗರಾಜ್ ಅವರಿಗೂ ತಗಾದೆ ಹುಟ್ಟಿಕೊಂಡಿತು ಇಲ್ಲಿ ಪಕ್ಷ ಪಾತ ರಹಿತವಾಗಿ ಜಿ ಎನ್ ಭಟ್ ಅವರಯ ನನ್ನ ಪರವಾಗಿದ್ದರು.
ಅಂತೂ ಇಂತೂ ಸಂಸ್ಕೃತ ಎಂಎ ಯನ್ನು ಮೊದಲ ರಾಂಕ್ ಹಾಗೂ ಚಿನ್ನದ ಪದಕಗಳೊಂದಿಗೆ ಪಡೆದೆ.
ಮತ್ತೆ ಕೆಲಸದ ಹುಡುಕಾಟ.ಹತ್ತು ಜನ ಸಂಸ್ಥಾಪಕರಲ್ಲಿ  ಜಿ ಎನ್ಒ ಭಟ್ಬ್ಬ ಒಬ್ಬರಾಗಿದ್ದ ಶಾರದಾ ಶಾಲೆಯಲ್ಲಿ ಸಂಸ್ಕೃತ ಟೀಚರ್ ಕೆಲಸಕ್ಕೆ ಅರ್ಜಿ ಆಹ್ವಾನಿಸಿದ್ದು ನಾವೆಲ್ಲರೂ ಅರ್ಜಿ ಸಲ್ಲಿಸಿದೆವು.ನಾನು ರಾಂಕ್ ವಿಜೇತೆಯಾಗಿದ್ದೆ.ಆದರೆ ಆ ಕೆಲಸ ನನ್ನ ಸಹಪಾಠಿ ರಮಿತಾಳಿಗೆ ಸಿಕ್ಕಿತು .ಮುಂದಿನ ಸಲ ನಿಮಗೆ ಕೊಡಿಸುವೆ ಎಂದು ಜಿ ಎನ್ ಭಟ್ ಅವರು ಹೇಳಿದರು .ಆದರೂ ರಾಂಕ್ ಬಂದ ನನ್ನನ್ನು ಬಿಟ್ಟ ಬೇರೆಯವರಿಗೆ ಕೊಟ್ಟದ್ದು ತುಂಬಾ ನೋವಾಗಿತ್ತು ನನಗೆ.ಮುಂದೆ ಕೆಲವೇ ದಿನಗಳಲ್ಲಿ ಕಲ್ಲಡ್ಕ ಶ್ರೀ ರಾಮ ವಿದ್ಯಾಲಯದಲ್ಲಿ  ಕೆಲಸ ಸಿಕ್ತು  . ನಂತರದ ಒಂದೆರಡತ ತಿಂಗಳಲ್ಲಿ ಮಂಗಳೂರಿನ ಪ್ರತಿಷ್ಠಿತ ಕಾಲೇಜು ಸಂತ ಅಲೋಶಿಯಸ್ ಕಾಲೇಜ್ ನಲ್ಲಿ ಉಪನ್ಯಾಸಕಿ ಹುದ್ದೆ ದೊರೆಯಿತು ಮತ್ತೆಂದೂ ನಾನು ಹಿಂದೆ ನೋಡಲಿಲ್ಲ ಕೆಲವು ವರ್ಷ ಅಲ್ಲಿ ಕೆಲಸ ಮಾಡಿ 2005 ರಲ್ಲಿ ಬೆಂಗಳೂರು ಬಂದೆ 2009 ರಲ್ಲಿ ಸರಕಾರಿ ಪಿಯು ಕಾಲೇಜಿಗೆ ಕನ್ನಡದ ಉಪನ್ಯಾಸಕಿ ಯಾಗಿ ಬೆಳ್ಳಾರೆಗೆ ಬಂದೆ .ಒಳ್ಳೆಯ ಶಿಕ್ಷಕಿಯಾಗಿ, ಲೇಖಕಿಯಾಗಿ ಸಂಶೋಧಕಿಯಾಗಿ ಜನ ಗುರುತಿಸಿದರು
ಇದೆಲ್ಲದರ ಗಿಂದೆ ಒಂದು ಗುಟ್ಟು ಇದೆ ಈಗ ರಟ್ಟು ಮಾಡುವೆ .ನಾನು ಜಿ ಎನ್ ಭಟ್ ಅವರನ್ನು ನೋಡಿದ ಮೊದಲ ದಿನವೇ ನನಗೆ ಅವರಷ್ಟು    ವಯಸ್ಸ್ ಆದಾಗ ನಾನೂ ಅವರಂತೆ ಆಗಬೇಕು ಎಂದು ಕೊಂಡಿದ್ದೆ ಅವರಷ್ಟು ಸಾಧಿಸಲು ಆಗಿಲ್ಲ ಆದರೆ ಭೂತಾರಾಧನೆಯ ಅಧ್ಯಯಯನ ಕ್ಷೇತ್ರದಲ್ಲಿ  ನನ್ನದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸುವ ನಂಬಿಕೆ ಇದೆ
ಮಂಗಳೂರು ವಿಶ್ವವಿದ್ಯಾನಿಲಯದ ನೇಮಕಾತಿ ಯಲ್ಲಿ ನನಗೆ ಅನ್ಯಾಯವಾದಾಗ ಕೋರ್ಟಿಗೆ ಹೋಗಿ writ petitionಹಾಕಿ ಎಂದು ಸಲಹೆ ನೀಡಿದವರು ಕೂಡ ಅವರೇ.2012ರಲ್ಲಿ  ಕೆನರಾ ಮಹಾ ವಿದ್ಯಾಲಯ ದಲ್ಲಿ ಸಂಸ್ಕೃತ ಕುರಿತು ಅಂತರರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಹೋಗುವಾಗ ನನಗೆ ಸ್ವಲ್ಪ ಅಳುಕು ಇತ್ತು ವಿದ್ಯಾರ್ಥಿನಿಯಾಗಿದ್ದಾಗ  ಮತ್ತು ನಂತರ ಎಲ್ಲೋ ಯಾವುದೋ ಸಂಸ್ಕೃತ ಕ್ಕೆ ಸಂಬಂಧ ಪಟ್ಟ ಮೀಟಿಂಗ್ ಒಂದರಲ್ಲಿ ಜಿ ಎನ್ ಭಟ್ ಅವರು ನನ್ನ ಬಗ್ಗೆ " ಅವಳು ಯಾರು ? ಯಃಕಶ್ಚಿತ್ ಲಕ್ಷ್ಮೀ, ಮರಾಠೆ ಉಪನ್ಯಾಸಕರುನೀವೇಕೆ ಲಕ್ಷ್ಮೀ ಪರ ಮಾತನಾಡಿದಿರಿ ( ಇವರು ಎಂಎ ಮೊದಲ ಬ್ಯಾ ಚ್ ವಿದ್ಯಾರ್ಥಿಯಾಗಿದ್ದು    ಕಟೀಲಿನಲ್ಲಿ ನಮಗೆ ಉಪನ್ಯಾಸಕ ರಾಗಿದ್ದರು)  " ಎಂದು ಹೇಳಿದರಂತೆ .ಹಾಗಾಗಿ ಸುಮಾರು ಹದಿನೈದು ವರ್ಷಗಳ ಕಾಲ ನಾನು ಅವರನ್ನು ಭೇಟಿಯಾಗಿರಲಿಲ್ಲ .ಹಾಗಾಗಿ ಸೆಮಿನಾರ್ ಗೆ ಹೋಗುವಾಗ ಅಳುಕಿತ್ತು .ಆದರೆ 'ಇವಾವುದು  ಸತ್ಯವಲ್ಲ ,ಯಾರದೋ ಚಾಡಿ ಮತುಗಳು 'ಎಂದು ತಮ್ಮ ಉದಾರ ಉನ್ನತ ವ್ಯಕ್ತಿತ್ವ ದಿಂದ ತೋರಿಸಿಕೊಟ್ಟರು ಅವರು.ದೊಡ್ಡವರುಯಾಕೆ ದೊಡ್ಡವರು ಎನಿಸಿಕೊಳ್ಳುತ್ತಾರೆ ಎಂಬುದಕ್ಕೆ ಪ್ರತ್ಯಕ್ಷ ನಿದರ್ಶನ ವಾಗಿ ನನಗೆ ಕಂಡವರು ಡಾ ಜಿ ಎನ್ ಭಟ್ ಅವರು. ಸಭಾಂಗಣದಲ್ಲಿ ಹಿಂಭಾಗ ಕುಳಿತಿರುವುದನ್ನು ನೋಡಿ ಅವರನ್ನು ಅವಾಯ್ಡ್ ಮಾಡುವ ಸಲುವಾಗಿ ಎದುರಿನ ಬಾಗಿಲಿನಿಂದ ಹೋಗಿ ಜಾಗ ಇರುಬ
ವಲ್ಲಿ ಕುಳಿತೆ.ಆದಾಗ್ಯೂ ಅವರು ನಾನಿದ್ದಲ್ಲಿಗೆ ಬಂದು ಅಲ್ಲಿ ಖಾಲಿ  ಕುರ್ಚಿ ಇಲ್ಲದೆ ಇದ್ದರೂ ಬೇರೆ ಕಡೆ ಇದ್ದ ಕಾಲಿ ಕುರ್ಚಿ ತಂದು ನನ್ನ ಬಳಿ  ಹಾಕಿ ಕುಳಿತುಕೊಂಡು" ಲಕ್ಷ್ಮೀ ಒಳ್ಳೆಯ ಕೆಲಸ ಮಾಡುತ್ತಿದ್ದಿ‌ .ನಿನ್ನ ಬರಹಗಳನ್ನು ಓದುತ್ತಿರುತ್ತೇನೆ ಅದನ್ನು ಮುಂದು ವರಿಸು  .ನಿನ್ನ ಬಗ್ಗೆ    ಪ್ರಜಾವಾಣಿಯಲ್ಲಿ " ತುಳು ಜಾನಪದ ಸಂಶೋಧಕಿ - ಡಾ ಲಕ್ಷ್ಮೀ ಜಿ ಪ್ರಸಾದ ಎಂಬ    ಲೇಖನ ಓದಿರುವೆ.  ಒಳ್ಳೆಯ ಭವಿಷ್ಯ ವಿದೆ ನಿನಗೆ ಶುಭವಾಗಲಿ ಎಂದು ಹೆಳಿದರು .ಬರವಣಿಗೆ ಮುಂದುವರಿಸುಎಂದು ಹಿತ ನುಡಿದರು  ಆ ಬ್ಯುಸಿ ಕೆಲಸಗಳ ನಡುವೆಯೂ ನನ್ನ ಬಳಿಗೆ ಬಂದು ಮಾತಾಡಿದ ಪ್ರೌಢ ವ್ಯಕ್ತಿ ಯನ್ನು ನನ್ನ  ಗುರುಗಳನ್ನು. ಹೇಗೆ ತಾನೇ  ಮರೆಯಲಿ ?

Tuesday 16 May 2017

ದೊಡ್ಡವರ ದಾರಿ : ಲೇಖಕರಿಗೊಂದು ಅಸ್ತಿತ್ವ ಕೊಟ್ಟ ವಿಶ್ವ ವಾಣಿಯ ವಿಶ್ವೇಶ್ವರ ಭಟ್ ©ಡಾ ಲಕ್ಷ್ಮೀ ಜಿ ಪ್ರಸಾದ

          

ಎಂತ ಟೈಟಲ್ ನೋಡಿ ನಾನು ಬಕೆಟ್ ಹಿಡೀತಿದ್ದೇನೆ ಅಂತ ಆಲೋಚನೆ ಮಾಡಿದಿರಾ ? ಅದು ಸತ್ಯವಲ್ಲ .ಅವರು ಪತ್ರ ಕರ್ತರು ಸಂಪಾದಕರು ಎಂಬುದು ಬಿಟ್ರೆ ಅವರು ಯಾರು ಏನು ಎತ್ತ ಅಂತ ನನಗೆ ಗೊತ್ತಿಲ್ಲ ಭಟ್ ಅಂತ ಇರುವ ಕಾರಣ ಬ್ರಾಹ್ಮಣರು ಅಂತ ಊಹಿಸಬಲ್ಲೆ ಆದರೆ ಕರಾಡ ಬ್ರಾಹ್ಮಣ,ಶಿವಳ್ಳಿ ಯ ಹವ್ಯಕರ ಅಂತ ನನಗೆ ಗೊತ್ತಿಲ್ಲ ನಮಗೆ ಅದೆಲ್ಲ ಅಗತ್ಯವೂ ಇಲ್ಲ ತಿಳಿಯುವ ಆಸಕ್ತಿ ಯೂ ಇಲ್ಲ
ಆದರೆ ನನಗೆ ನಿರಂತರ ವಾಗಿ ಪತ್ರಿಕೆ ಓದಲು   ಅಪರೋಕ್ಷವಾಗಿ ಅಭ್ಯಾಸ ಮಾಡಿಸಿದವರು  ಅವರು.
ಆಗಷ್ಟೇ ವಿಜಯ ಕರ್ನಾಟಕ ಪತ್ರಿಕೆ ಆರಂಭವಾಗಿತ್ತು .ಅದರ ಸಾರಥಿ ಆಗ ವಿಶ್ವೇಶ್ವರ ಭಟ್ಟರು.ಮಂಗಳೂರಿನಲ್ಲಿ ನಮ್ಮನೆಗೆ ಸುಮಾರು ಎರಡು ತಿಂಗಳು ಬೆಳಗ್ಗೆ ನಾವು ಏಳುವ ಮೊದಲೇ ಯಾರೋ ವಿಜಯ ಕರ್ನಾಟಕ ಪತ್ರಿಕೆ ಹಾಕಿ ಹೋಗುತ್ತಿದ್ದರು .ಅದನ್ನು ಎತ್ತಿಕೊಂಡು ಪ್ರಸಾದ ಓದುತ್ತಾ ಇದ್ದರು .ಅಷ್ಟರ ತನಕ ಅವರು ಹಿಂದೂ ಬ್ಯಸಿನೆಸ್ ? ಇಕನಾಮಿಕ್ ಮೊದಲಾದ ಇಂಗ್ಲಿಷ್ ಪತ್ರಿಕೆ ತಂದು ಓದುತ್ತಾ ಇದ್ದರು .ನನಗು ಇಂಗ್ಲಿಷ್ ಗೂ ಆಗ ಎಣ್ಣೆ ಸೀಗೆ ಕಾಯಿ ಹಾಗಾಗಿ ನಾನು ಅದರತ್ತ ತಿರುಗಿ ಕೂಡ ನೋಡುತ್ತಾ ಇರಲಿಲ್ಲ. ವಿಜಯ ಕರ್ನಾಟಕ ಬರಲು ಆರಂಭಸಿದ  ಮೇಲೆ ಪ್ರಸಾದ್ ಓದಿನ ನಂತರ ನಾನೂ ಓದಲು ಶುರು ಮಾಡಿದೆ.ನಂತರ ದಿನಗಳಲ್ಲಿ ನಾನು‌ಮೊದಲು ಓದಲಾರಂಭಿಸಿದೆ .ನಂತರ ಒಂದೆರಡು ತಿಂಗಳ ನಂತರ ನಾವು ವಿಜಯ ಕರ್ನಾಟಕ ಪತ್ರಿಕೆಗೆ ಚಂದಾದಾರಾದೆವು .ಅಲ್ಲಿಂದ ಪತ್ರಿಕೆ ಯನ್ನು ನಿತ್ಯ ಓದುವ ಅಭ್ಯಾಸ ನನಗೆ ಬೆಳೆಯಿತು .ಅದಕ್ಕೆ ಅನೇಕ ಲೇಖನಗಳನ್ನು ಬರೆದೆ ಪ್ರಕಟವೂ ಆಯಿತು .
ಹೀಗೆ ಕೆಲ ವರ್ಷಗಳ ಮೊದಲು ವಿಜಯ ಕರ್ನಾಟಕ ಓದುವಾಗ ಪತ್ರಕರ್ತರು ಇ ಮೇಲ್ ,ಟ್ವಿಟರ್ ತೆರೆಯಬೇಕಾದ ಅಗತ್ಯವನ್ನು ಅವರು ಹೇಳಿದ್ದರ ಬಗ್ಗೆ ಓದಿದ್ದೆ ಹಾಗೆಯೇ ಬ್ಲಾಗ್ ಬರೆಯುವ ಬಗ್ಗೆ ಅದರಲ್ಲಿ ಓದಿದ್ದೆ.ಆದರೆ ಕಂಪ್ಯೂಟರ್ ಜ್ಞಾನ ಇಲ್ಲದ ಇಂಟರ್ನೆಟ್   ನ ಗಂಧ ಗಾಳಿ ಇಲ್ಲದ ಅವೇನೆಂದು ಅರ್ಥ ಆಗದೆ ಇದ್ದರೂ ಎಂದಾದರೊಂದು ದಿನ ದುಡ್ಡು ಬಂದಾಗ ಅವರು ಹೇಳಿದಂತೆ  ಕಂಪ್ಯೂಟರ್ ತೆಗೆದು   ಮೇಲ್ ಟ್ವಿಟರ್ ಫೇಸ್ ಬುಕ್ ಬ್ಲಾಗ್ ತೆರೆದು ಬರೆಯಬೇಕು ಎಂದು ಕೊಂಡಿದ್ದೆ .ಕೊನೆಗೂ2013 ರ ಜನವರಿಯಲ್ಲಿ ಕಂಪ್ಯೂಟರ್ ಖರೀದಿಸಿದೆವು ಪ್ರಸಾದ ಮತ್ತು  ಮಗನ ಅರವಿಂದನ ಸಹಾಯದಿಂದ ಇ ಮೇಲ್ ತೆರೆದೆ ಮುರಳೀಧರ ಉಪಾಧ್ಯಾಯರ ಸಹಾಯದಿಂದ ಬ್ಲಾಗ್ ತೆರೆದೆ.
ಈಗ ಮೂರುಬ್ಲಾಗ್ ಗಳನ್ನು ಬರೆಯುತ್ತಿರುವೆ   ದೇಶ ವಿದೇಶದ ಎರಡು ಲಕ್ಷ  ಇಪ್ಪತೈದು ಸಾವಿರಕ್ಕಿಂತ ಅಧಿಕ ಮಂದಿಗೆ ನನ್ನ ಬರಹಗಳು ಬ್ಲಾಗ್ ಮೂಲಕ ತಲುಪಿವೆ .ಫೇಸ್  ಬುಕ್  ಪೇಜ್ ಗಳ ಮೂಲಕ, ವಾಟ್ಸಪ್ ಮೂಲಕ ಎಷ್ಟು ಜನ ಓದಿದ್ದಾರೆ ಎಂಬುದಕ್ಕೆ ಲೆಕ್ಕ  ಸಿಗುವುದಿಲ್ಲ .ಮೂರು ಬ್ಲಾಗ್ ಗಳನ್ನು ಬರೆಯತ್ತಾ   ನನ್ಒಂನ ಬರಹಗಳಿಗಾಗಿಯೇ ಒಂದು ಸಣ್ಣ ಪತ್ರಿಕೆ ತೆರೆದವರಂತೆ ಖುಷಿಯಾಗಿರಲು ಮೂಲ ಕಾರಣ ವಿಶ್ವೇಶ್ವರ ಭಟ್ಟರು.ಅವರನ್ನು ಹೇಗೆ ತಾನೆ ಮರೆಯಲಿ ?ಎಷ್ಟೋ ಪತ್ರಿಕೆ ಗಳಿವೆ. ಮುಂದಾಗುವುದನ್ನು ಊಹಿಸಿ ಅವರ್ಯಾರೂ ಜನರಿಗೆ ಉಪಯೋಗವಾಗುವ ಇಂತಹ ಸಲಹೆ ಕೊಟ್ಟಿದ್ದನ್ನು ನಾನೆಲ್ಲೂ ಓದಿಲ್ಲ
ಅದೇ ರೀತಿ ಅವರ ಇನ್ನೊಂದು ದೊಡ್ಡ ಗುಣ ಬರಹಗಾರರಿಗೆ ಒಂದು ಪ್ರತ್ಯೇಕ ಅಸ್ತಿತ್ವ ಗೌರವವನ್ನು ನೀಡಿರುವುದು.ಅವರು ಅವರಿರುವ ಪತ್ರಿಕೆ ಗಳಿಗೆ ಲೇಖನ ಬರೆದ  ಲೇಖಕರ ಫೋಟೋ ಕೂಡಾ ಪ್ರಕಟಿಸುತ್ತಾ ಇದ್ದರು .ಇದನ್ನು ನೋಡಿ ಕೆಲವು ಪತ್ರಿಕೆಗಳು ಈ ಪದ್ಧತಿ ಶುರು ಮಾಡಿದವು.ಈಗ ಕೂಡ ಅನೇಕ ಪತ್ರಿಕೆ ಗಳು ಲೇಖಕರ ಪೋಟೋ ಹಾಕುವುದಿಲ್ಲ. ನಮ್ಮ ಹೆಸರನ್ನು ನಾವು ಕೊಟ್ಟಂತೆ ಹಾಕುವುದಿಲ್ಲ. ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ನವರು ಲೇಖಕರು ಡಾಕ್ಟರೇಟ್ ಪಡೆದಿದ್ದು ತಮ್ಮ ಹೆಸರಿನ ಮುಂದೆ ಡ ಎಂದು ಬರೆದಿದ್ದರೆ ಅದನ್ನು ಹಾಕುವುದಿಲ್ಲ ಉದಾಹರಣೆಗೆ ನಾನು ನನ್ನ ಹೆಸರನ್ನು ಎಲ್ಲಾ ಕಡೆ ಡಾ .ಲಕ್ಷ್ಮೀ ಜಿ ಪ್ರಸಾದ ಎಂದು ಹಾಕಿ ಲೇಖನ ಬರೆಯುವೆ ಈ ಪತ್ರಿಕೆ ಸೇರಿದಂತೆ ಹಲವು ಪತ್ರಿಕೆಗಳು ನಮ್ಮ ಲೇಖನವನ್ನು ಮಾತ್ರ ಎಡಿಟ್ ಮಾಡದೆ ನಮ್ಮ ಹೆಸರನ್ನು ಎಡಿಟ್ ಮಾಡಿ ಲಕ್ಷ್ಮೀ ಜಿ ಪ್ರಸಾದ ಎಂದು ಮಾತ್ರ ಹಾಕುತ್ತವೆ ಪೋಟೋ ಹಾಕುವುದಿಲ್ಲ ಹಾಗಿರುವಾಗ ಲೇಖಕರ ಪೋಟೋ ಉದ್ಯೋಗ, ಇ ಮೇಲ್ ಅಡ್ರೆಸ್ ಹಾಕಿ ಸಂಭಾವನೆ ನೀಡಿ ಬರಹಗಾರರಿಗೊಂದು ಗೌರವ ತಂದು ಕೊಟ್ಟ ವಿಶ್ವೇಶ್ವರ ಭಟ್ಟರನ್ನು ಹೇಗೆ ತಾನೇ  ನೆನೆಯದಿರಲು ಸಾಧ್ಯ?  ಅವರ ಬಗ್ಗೆ ಬರೆಯದೆ ಇರಲು ಹೇಗೆ ತಾನೇ   ಸಾಧ್ಯ ? ಒಂದರ್ಥದಲ್ಲಿ ಅವರು ನನ್ನ ಮಾರ್ಗದರ್ಶಿ ಹಾಗಾಗಿ ಅವರು ಪತ್ರಿಕೆ ಬದಲಾಯಿಸಿದಂತೆ ನಾನು ಅವರನ್ನು ಹಿಂಬಾಲಿಸಿ ಅವರಿರುವ ಪತ್ರಿಕೆ ಗೆ ಚಂದಾದಾರಳಾಗಿರುವೆ .ಅವರಿರುವ ಪತ್ರಿಕೆಗಳಿಗೆ ಲೇಖನ ಬರೆದಿರುವೆ . ಒಂದರ್ಥದಲ್ಲಿ ಅವರು ನನ್ನ ಲೇಖನಗಳನ್ನು ಪ್ರಕಟಿಸಿ ಬೆಂಬಲಿಸಿ ನನ್ನ ಬದುಕಿಗೆ ಅಸ್ತಿತ್ವ ತಂದು ಕೊಟ್ಟವರು ಹಾಗಾಗಿಯೇ  ಅವರನ್ನು ಈ ತನಕ ಒಮ್ಮೆ ಕೂಡಾ ಭೇಟಿ ಮಾಡದೆ ಇದ್ದರೂ ಅವರ ಬಗ್ಗೆ ಬರೆದಿರುವೆ.
ಅವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ https://kn.m.wikipedia.org/wiki/%E0%B2%B5%E0%B2%BF%E0%B2%B6%E0%B3%8D%E0%B2%B5%E0%B3%87%E0%B2%B6%E0%B3%8D%E0%B2%B5%E0%B2%B0_%E0%B2%AD%E0%B2%9F%E0%B3%8D

Friday 5 May 2017

ನನ್ನ ಪ್ರಿಯವಾದ ಭೂತಾರಾಧನಾ ಕ್ಷೇತ್ರವನ್ನು ಬಿಟ್ಟು ಬಿಡಲೇ ?©ಡಾ ಲಕ್ಷ್ಮೀ ಜಿ ಪ್ರಸಾಸ

ನನ್ನ ಪ್ರಿಯವಾದ ಭೂತಾರಾಧನಾ ಕ್ಷೇತ್ರವನ್ನು ಬಿಟ್ಟು ಬಿಡಲೇ ?

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಹಾಡು ಹಗಲಿನ ಹೊತ್ತಿನಲ್ಲಿ ಸಸೌಮಾ ಭಟ್ ಎಂಬ ಮುಗ್ಧ ಕಾಲೇಜ್ ಹುಡುಗಿಯನ್ನು ಪುತ್ತೂರು ಕಬಕ ಬಳಿ ದಾರುಣವಾಗಿ ಕೊಚ್ಚಿ ಕೊಲ್ಲಲಾಗಿತ್ತು! ಅದು ನನ್ನನ್ನು ದಿಗಿಲಿಗೀಡು ಮಾಡಿದ ಮೊದಲ ಪ್ರಕರಣ ,(ಆಗಷ್ಟೇ ನಮ್ಮ ಊರಿನಲ್ಲಿ ಹೆಣ್ಣು ಮಕ್ಕಳನ್ನು ಕಾಲೇಜ್ ಗೆ ಕಳುಹಿಸಲು ಆರಂಭ ಮಾಡಿದ್ದರು ,ಈ ಪ್ರಕರಣ ಹೆತ್ತವರನು ತಲ್ಲಣಕ್ಕೆ ಒಳಮಾಡಿತ್ತು ಈ ಪ್ರಕರಣದ ನಂತರ ಅನೇಕ ಹೆತ್ತವರು ತಮ್ಮ ಹೆಣ್ಣು ಮಕ್ಕಳನ್ನು ಹೊರಗೆ ಕಳುಹಿಸಲು ಹಿಂಜರಿದರು ,ಓದನ್ನು ನಿಲ್ಲಿಸಿ ಮದುವೆ ಮಾಡಿದರು!)

ಅಲ್ಲಿಂದ ನಂತರ ಅನೇಕ ಪ್ರಕರಣಗಳು ಇಂಥದ್ದು ನಡೆದವು ,ಉಜಿರೆಯ ಸೌಜನ್ಯ ,ಉಡುಪಿಯ ಕ್ಷಮಾ .ಶಿವಮೊಗ್ಗದ ಹುಡುಗಿ (ಹೆಸರು ನೆನಪಾಗುತ್ತಿಲ್ಲ )ದೆಹಲಿಯ ಹುಡುಗಿ ನಿರ್ಭಯ ,ಮೊನ್ನೆ ಮೊನ್ನಿನ ಕೇರಳದ ಹುಡುಗಿ ಜಿಷಾ ..ಹೀಗೆ ಈ ಪಟ್ಟಿ ಹನುಮಂತನ ಬಾಲದ ಹಾಗೆ ಬೆಳೆಯುತ್ತಲೇ ಹೋಗುತ್ತದೆ .

ಇವರೆಲ್ಲ ಅತ್ಯಾಚಾರಕ್ಕೊಳಗಾಗಿ ಹತ್ಯೆಗೊಳಗಾದವರು ,ಇನ್ನು ಅದೃಷ್ಟವಶಾತ್ ಸಾಯದೆ ಉಳಿದ ಅನೇಕರು ಇದ್ದಾರೆ.ಇನ್ನು ಅತ್ಯಾಚಾರ ಯತ್ನ ಕ್ಕೆ ಒಳಗಾದವರು ಲೈಂಗಿಕ ಕಿರುಕುಳಕ್ಕೆ ಒಳಗಾದವರು ಅಸಂಖ್ಯಾತ ಮಂದಿ ಇದ್ದಾರೆ ,

ಅತ್ಯಾಚಾರ ಮಾಡಿ ಕೊಂದವರಿಗೆ ಶಿಕ್ಷೆ ಆಗುದಿಲ್ಲ ಇನ್ನು ಉಳಿದವರಿಗೆ ಏನು ಶಿಕ್ಷೆ ಆಗುತ್ತದೆ ?
ಮೊನ್ನೆ ಬೆಂಗಳೂರಿನಲ್ಲಿ ಅತ್ಯಾಚಾರ ಯತ್ನಿಸಿದ ಒಬ್ಬನ ಮೇಲೆ ಪೋಲಿಸ್ ರು ದುಡ್ಡಿನ ಆಮಿಷಕ್ಕೆ ಒಳಗಾಗಿ ಕೇಸ್ ದಾಖಲಿಸಲಿಲ್ಲ ,ಪಿಜಿ ಮಾಲೀಕ ತನ್ನ ಪಿಜಿ ಹೆಸರು ಹಾಳಾಗುತ್ತದೆ ಎಂಬ ಕಾರಣಕ್ಕೆ ಕೇಸ್ ದಾಖಲಿಸದಂತೆ ಲಂಚ ನೀಡಿದ್ದ !
ಕೇವಲ ಐದು ಸಾವಿರ ಕೊಟ್ಟರೆ ದೂರು ದಾಖಲು ಮಾಡುವುದಿಲ್ಲ ಹಾಗಾದರೆ ಐವತ್ತು ಸಾವಿರ ಕೊಟ್ಟರೆ ದೂರು ದಾಖಲು ಆಗಿದ್ದರೂ ಬಿ ರಿಪೋರ್ಟ್ ಕೊಡಲಾರರೆ?ಆರೋಪಿ ಬಚಾವಾಗಲು ಎಷ್ಟು ಬೇಕಾದರೂ ದುಡ್ಡು ಕೊಡುತ್ತಾನೆ !ದೂರು ಕೊಟ್ಟವರ ಕಡೆಯಿಂದ ದುಡ್ಡು ಬರುವುದಿಲ್ಲ !

ಇತ್ತೀಚಿಗೆ ಈ ರೀತಿಯ ಪ್ರಕರಣಗಳಲ್ಲಿ 42 % ಸುಳ್ಳು ದೂರು ಗಳು ಎಂದು ಓದಿದೆ .ಕೇವಲ ಐದು ಸಾವಿರ ರುಪಾಯಿಗೆ ದೂರು ದಾಖಲು ಮಾಡದೇ ಇರುವಾಗ ಕೊಟ್ಟ ದೂರನ್ನು ಸುಳ್ಳು ಮಾಡುವುದು ಏನು ಕಷ್ಟದ ವಿಚಾರ !
ಹೆಚ್ಚಿನ ಪ್ರಕರಣಗಳಲ್ಲಿ ದೂರು ಕೊಡುವುದೇ ಇಲ್ಲ ಮರ್ಯಾದೆ ಗೆ ಅಂಜಿ !ದೂರು ಕೊಟ್ಟರೂ ಅದನ್ನು ಸುಳ್ಳು ಎಂದು ಹೇಳಲು ಏನೂ ಕಷ್ಟವಿಲ್ಲ ,ಯಾರೂ ಇಲ್ಲದೆ ಹೊತ್ತು ನೋಡಿಕೊಂಡೆ ಇಂಥದ್ದು ಮಾಡುತ್ತಾರೆ ಒಂದೊಮ್ಮೆ ಸಾಕ್ಷಿಗಳು ಇದ್ದರೂ ಸಾಕ್ಷ್ಯ ನುಡಿಯುದಿಲ್ಲ ತಮಗೇಕೆ ಎಂದು !
ಅದಕ್ಕೆ ಸರಿಯಾಗಿ ತಪ್ಪೆಸಗಿದಾತ ಪಾರಾಗುವ ಸಲುವಾಗಿ ದುಡ್ಡನ್ನು ನೀರಿನಂತೆ ಚೆಲ್ಲಲು ಸಿದ್ಧವಾಗಿರುತ್ತಾನೆ !
ಮತ್ತೆ ಅಲ್ಲ್ಲಿ ಬಿ ರಿಪೋರ್ಟ್ ಕೊಟ್ಟು ಸುಳ್ಳು ದೂರು ಎಂದು ಹೇಳಲು ಅಡ್ಡಿ ಏನಿದೆ ?ಶಿಕ್ಷೆಯ ಭಯವೇ ಇಲ್ಲದಿರುವಾಗ ಇಂಥ ಪ್ರಕರಣಗಳು ನಿರಂತರ ನಡೆಯುತ್ತಲೇ ಇರುತ್ತವೆ !ರಾಜಕೀಯ ಪಕ್ಷಗಳು ಇಲ್ಲೆಲ್ಲಾ ರಾಜಕೀಯ ಮಾಡುತ್ತಾ ವೋಟು ರಾಜಕಾರಣ ಮಾಡುತ್ತವೆ ಹೊರತು ಈ ಪಿಡುಗನ್ನು ಸಮೂಲ ಕಿತ್ತು ಹಾಕಬೇಕೆಂಬ ದೃಢತೆ ಯಾರಿಗೂ ಇಲ್ಲ ಯಾಕೆಂದರೆ ಅತ್ಯಾಚಾರಕ್ಕೆ ಒಳಗಾಗುವವರು ,ಕಿರುಕುಳಕ್ಕೆ ಒಳಗಾಗುವವರು ಅವರ ಮಕ್ಕಳಲ್ಲವಲ್ಲ !ಯಾರೋ ಹೆತ್ತವರು ಸಾಕಿದ ಹೆಣ್ಣು ಮಕ್ಕಳಿಗೆ ಏನಾದರೇನಂತೆ !ತಮಗೆ ವೋಟು ಬಂದರೆ ಸಾಕು !ಅಷ್ಟೇ !

ಅದು ಏನೇ ಇರಲಿ !ದೆಹಲಿಯ ನಿರ್ಭಯ ಪ್ರಕರಣ ನಡೆದಾಗಲೇ ನಾನು ಅಂದುಕೊಂಡಿದ್ದೆ ಇನ್ನು ಮುಂದೆ ಭೂತ ಕೋಲ ರೆಕಾರ್ಡ್ ಗಾಗಿ ಎಲ್ಲೆಂದರಲ್ಲಿ ರಾತ್ರಿ ಹಗಲು ಸುತ್ತುವುದನ್ನು ಬಿಡಬೇಕು ಎಂದು ,ಹಾಗಾಗಿ ರಾತ್ರಿ ರೆಕಾರ್ಡಿಂಗ್ ಗೆ ಹೋಗುದನ್ನು ಹೆಚ್ಚುಕಡಿಮೆ ನಿಲ್ಲಿಸಿದ್ದೇನೆ ,ಇನ್ನು ಹಗಲಿನ ಹೊತ್ತಿನಲ್ಲಿ ಹೋಗುವ ಬಗೆಯೂ ಇನ್ನೊಮ್ಮೆ ಆಲೋಚಿಸುವ ಹಾಗೆ ಆಗುತ್ತಿದೆ !

ಕ್ಷೇತ್ರ ಕಾರ್ಯ ಆಧಾರಿತ ತುಳು ಶೋಧನೆಯ ಹಾದಿ ಬಿಟ್ಟು ಬಿಡಲೇ ?ಇಷ್ಟಕ್ಕೂ ನಾನು ಮಾಡಿದ್ದೇನು ಮಹಾ ಇದೆ !ಮಾಡಿದ್ದಕ್ಕೂ ಸಿಕ್ಕ ಮನ್ನಣೆ ಅಷ್ಟರಲ್ಲೇ ಇದೆ !

  ಕಥೆ ಹಾಗೂ ಲೇಖನ ಬರೆಯುವ ಹವ್ಯಾಸ ನನಗೂ ಇತ್ತು .ಆದರೆ ತುಳು ಶೋಧನೆಯಲ್ಲಿ ಮುಳುಗಿ ಇವೆರಡನ್ನು ನಾನು ನಿರ್ಲಕ್ಷಿಸಿದೆ ಬಹುಶ ಇದನ್ನೇ ನಾನು ಮುಂದುವರಿಸಿದ್ದರೆ ಒಳ್ಳೆಯದಿತ್ತೋ ಏನೋ ಎಂದು ನನಗೆ ಇತ್ತೀಚಿಗೆ ಅನಿಸತೊಡಗಿದೆ !ಯಾಕೆಂದರೆ ಕಥೆ ಲೇಖನಗಳನ್ನು ಮನೆಯೊಳಗೇ  ಫ್ಯಾನ್ ಅಡಿಯಲ್ಲಿ ಆರಾಮ ಕೂತು ಬರೆಯಬಹುದು.ಅದಕ್ಕೆ ಖರ್ಚು ಕೂಡ ಇಲ್ಲ ಮೆದುಳನ್ನು ಸ್ವಲ್ಪ ಖರ್ಚು ಮಾಡಿದರೆ ಸಾಕು ! .ಒಂದಷ್ಟು ಮಾಹಿತಿ ಸಂಗ್ರಹಕ್ಕೆ ಗ್ರಂಥಾಲಯಗಳಿಗೆ ಹೋಗಬೇಕಾಗುತ್ತದೆ ಆದರೆ ಅದನು ಹಗಲಿನ ವೇಳೆಯೇ ಮಾಡಬಹುದು !

   ಆದರೆ ಭೂತಾರಾಧನೆ ಕುರಿತಾದ ಕ್ಷೇತ್ರ ಕಾರ್ಯ ಆಧಾರಿತ ಕೆಲಸಕ್ಕೆ ತುಂಬಾ ಖರ್ಚು ಕೂಡ ಇದೆ ಇದು ಸಾಕಷ್ಟು ಪರಿಶ್ರಮವನ್ನು ಕೂಡ ಬೇಡುತ್ತದೆ .ಜೊತೆಗೆ ರಾತ್ರಿ ಹಗಲೆನ್ನದೆ ಅಪರಿಚಿತ ಪ್ರದೇಶಗಳಲ್ಲಿ ಏಕಾಂಗಿಯಾಗಿ ಓಡಾಡುದು ಇಂದಿನ ದಿನಗಳಲ್ಲಿ ಅಪಾಯಕಾರಿಯಾಗಿದೆ .
ಹಾಗಾಗಿ ಅನೇಕ ಬರಿ ಯೋಚಿಸಿದ್ದೇನೆ ಈ ಕ್ಷೇತ್ರವನ್ನು ಬಿಟ್ಟು ಬಿಡಬೇಕು ಎಂದು !ಆದರೂ ಇದು ಒಂದು ಮಾಯೆಯಾಗಿ ಕಾಡುತ್ತಿದೆ ನನ್ನ !ಬಿಡಬೇಕೆಂದರೂ ಬಿಡಲು ಸಾಧ್ಯವಾಗುತ್ತಿಲ್ಲ !
ಒಂದು ಹೊಸ ಭೂತದ ಹೆಸರು ಕೇಳಿದ ತಕ್ಷಣ ಅದರ ಬಗ್ಗೆ ಪೂರ್ಣ ಮಾಹಿತಿ ಸಂಗ್ರಹ ಆಗುವ ತನಕ ಮನಸು ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ !

ಇಷ್ಟರ ತನಕ ನಿರಂತರವಾಗಿ ಕೆಲಸ ಮಾಡಿದ ನನಗೆ ಏನೂ ಮಾಡದೇ ಇರಲು ನನ್ನಿಂದ ಸಾಧ್ಯವಾಗಲಾರದು ಅದಕ್ಕಾಗಿ ಕ್ಷೇತ್ರವನ್ನು ಬದಲಾಯಿಸಬೇಕೆನ್ದುಕೊಂಡಿದ್ದೇನೆ
ಮೊನ್ನೆ ಮೇ ಒಂದರಂದು ತಿಗಳಾರಿ -ತುಳು ಲಿಪಿ ಕಲಿಯುವಾಗಲೂ ನನ್ನ ಮನಸಿನಲ್ಲಿ ಇದೇ ವಿಚಾರ ಕೊರೆಯುತ್ತಿತ್ತು .ಇದನ್ನೇ ಸರಿಯಾಗಿ ಕಲಿತು ತಿಗಳಾರಿ -ತುಳು ಲಿಪಿಯಲ್ಲಿರುವ ಕೃತಿಗಳನ್ನು ಲಿಪ್ಯಂತರ ಮಾಡುವ ಹವ್ಯಾಸವನ್ನು ಮಾಡಿಕೊಳ್ಳಲೇ ಎಂದು ಆಲೋಚಿಸುತ್ತ ಇದ್ದೇನೆ
ಒಟ್ಟಿನಲ್ಲಿ ಇಂಥ ಒಂದೊಂದೇ  ಪ್ರಕರಣವನ್ನು ಕೇಳುವಾಗಲೂ ಆತಂಕ ಹೆಚ್ಚಾಗುತ್ತಲೇ ಇದೆ.ನನ್ನ ಪ್ರಿಯವಾದ ಭೂತಾರಾಧನ ಕ್ಷೇತ್ರವನ್ನು ಬಿಟ್ಟು ಬಿಡಲೇ ?ಬಿಟ್ಟು ನಾನು ನೆಮ್ಮದಿಯಿಂದ ಸಂತಸದಿಂದ ಇರಬಲ್ಲನೆ ?ಗೊತ್ತಿಲ್ಲ ಕಾಲಾಯ ತಸ್ಮೈ ನಮಃ
ಇಷ್ಟಕ್ಕೂ ಕ್ಷೇತ್ರಕಾರ್ಯಕ್ಕೆ ಹೋಗದ ಮಾತ್ರಕ್ಕೆ ನಮಗೆ ಭದ್ರತೆ ಇದೆಯಾ ?ಮನೆಯೊಳಗೇ ಬಂದು ಅತ್ಯಾಚಾರ ಮಡಿದ ಪ್ರಕರಣಗಳ ಬಗ್ಗೆ ಕೂಡ ಓದಿದ್ದೇನೆ !ಹಾಗಂತ ತಲೆ ಗಟ್ಟಿ ಇದೆ ಅಂತ ಬಂಡೆಕಲ್ಲಿಗೆ ಹೊಡೆದು ಕೊಳ್ಳುವುದು ಅಪಾಯವಲ್ಲವೇ ?
ನಾನು ಸ್ವಾಭಾವಿಕವಾಗಿಯೇ ಚಿಕ್ಕಂದಿನಿಂದಲೂ ಧೈರ್ಯಸ್ಥೆ ,ಸಾಮನ್ಯಕ್ಕೆಲ್ಲ ಹೆದರುವವಳು ಅಲ್ಲವೇ ಅಲ್ಲ ,ಆದರೂ ಈ ವಿಚಾರದಲ್ಲಿ ಮನಸು ಆತಂಕಕ್ಕೆ ಒಳಗಾಗುತ್ತಿದೆ ಆರು ತಿಂಗಳ ಹಸುಳೆಯಿಂದ ಹಿಡಿದು 80 ವರ್ಷದ ಅಜ್ಜಿ ತನಕದ ಎಲ್ಲ ವಯೋಮಾನದ ಹೆಂಗಸರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಇದಕ್ಕೆಲ್ಲ ಕೊನೆ ಎಂದು ?
ನನ್ನ ಅಧ್ಯಯನದಲ್ಲಿ ಸಿಕ್ಕ ಮಾಹಿತಿಯನ್ನು ನನ್ನ ಬ್ಲಾಗ್ ನಲ್ಲಿ ಹಾಕಿದ್ದೇನೆ ದಯವಿಟ್ಟು ಓದಿ ನಿಮ್ಮ ಅಭಿಪ್ರಾಯ ತಿಳಿಸಿ ನನಗೆ ಅದುವೇ ಭಾಗ್ಯ
http://laxmipras.blogspot.com

ದೊಡ್ಡವರ ದಾರಿ :ಸೌಜನ್ಯತೆಯ ಸಾಕಾರ ಮೂರ್ತಿ ಡಾ. ಚಂದ್ರ ಮೌಳಿ ©ಡಾ ಲಕ್ಷ್ಮೀ ಜಿ ಪ್ರಸಾದ



ಬದುಕೆಂಬ ದೋಣಿಯ ಪಯಣದಲ್ಲಿ ನಮ್ಮನ್ನು ಮುನ್ನಡೆಸುವ ಅನೇಕ ಅಂಬಿಗರನ್ನು ನಾವು ಕಾಣುತ್ತೇವೆ.ಅದರಲ್ಲೂ ತೀವ್ರ ನೋವು ಕಾಡುವಾಗ ಅನಾರೋಗ್ಯ ಕಾಡಿದಾಗ ದೈವ ಸ್ವರೂಪಿಗಳಾಗಿ ಕಾಣುವವರು ವೈದ್ಯರು.ಒಂದಲ್ಲ ಒಂದು ಕಾರಣಕ್ಕೆ ವೂದ್ಯರನ ಸಹಾಯವನ್ನು ಪಡೆಯದೇ ಇರುವ ಮಂದಿ ಈ ಜಗತ್ತಿನಲ್ಲಿ ಒಬ್ಬಾತ ಕೂಡ ಇರಲಾರ
ಇಂತಹ ನಾರಯಣೋ ಹರಿಃ ಎಂಬಂತೆ ದೈವ ಸದೃಶರಾದ ವೈದ್ಯರಲ್ಲಿ ಕೆಲವರು ತಮ್ಮ ಅಪರೂಪದ ವ್ಯಕ್ತಿತ್ವ ದ ಕಾರಣಕ್ಕೆ ಗಮನಸೆಳೆಯುತ್ತಾರೆ.
ಅಂಥಹ ಓರ್ವ ಅಪರೂಪದ ವೈದ್ಯರ ಬಗ್ಗೆ ನಾನು ಇಲ್ಲಿ ಬರೆಯ ಹೊರಟಿರುವೆ .ಪ್ರಸ್ತುತ ಫಾರ್ಟಿಸ್ ಹಾಸ್ಪಿಟಲ್ ನಾಗರಭಾವಿಯಲ್ಲಿ ಶಸ  ಚಿಕಿತ್ಸಕರಾಗಿರುವ ಡಾ ಚಂದ್ರ ಮೌಳಿ ಇಂಗ್ಲೆಂಡ್ ನಲ್ಲಿ ಹನ್ನೆರಡು ವರ್ಷಗಳ ಕಾಲ ಶಸ್ತ್ರ ಚಿಕಿತ್ಸಕರಾಗಿದ್ದು / ಸರ್ಜನ್ ಆಗಿದ್ದು ಮರಳಿ‌ಮಣ್ಣಿಗೆ ಎಂಬಂತೆ ಭಾರತಕ್ಕೆ ಅದರಲ್ಲೂ ತಮ್ಮ ನಾಡು ಕರ್ನಾಟಕ ಕ್ಕೆ ಬಂದು ಬೆಂಗಳೂರಿನಲ್ಲಿ ನೆಲೆಸಿದವರು.
ಸುಮಾರು ಹತ್ತು ಹದಿನೈದು ವರ್ಷಗಳ ಮೊದಲು ಇವರು ರಾಜ ರಾಜೇಶ್ವರಿ ನಗರದಲ್ಲಿ ಇದ್ದ ಮಣಿಪಾಲ್ ಹಾಸ್ಪಿಟಲ್ ನಲ್ಲಿ ಮುಖ್ಯ ಶಸ್ತ್ರ ಚಿಕಿತ್ಸಾ ವೈದ್ಯ ರಾಗಿದ್ದರು. ಕೆಲ ವರ್ಷಗಳ ಹಿಂದೆ ಒಂದು ದಿನ ರಾತ್ರಿ ತೀವ್ರ ಹೊಟ್ಟೆ ನೋವು  ಕಾಡಿ ಮನೆಗೆ ಸಮೀಪದ ಈ ಮಣಿಪಾಲ್ ಆಸ್ಪತ್ರೆ ಗೆ ಹೋಗಿದ್ದೆ.ಆಗ ಆಸ್ಪತ್ರೆ ಗೆ ದಾಖಲು‌ಮಾಡಿ ಪರೀಕ್ಷೆ ಮಾಡಿದ ತಜ್ಞ ವೈದ್ಯರಾದ ಡಾ ಚಂದ್ರ ಮೌಳಿಯವರು ಎಂಡೋಸ್ಕೋಪ್ ಮಾಡಿ ಹೊಟ್ಟೆಯ ಒಳಗೆ ಏನಾದರೂ ಸಮಸ್ಯೆ ಇದೆಯಾ ನೋಡಬೇಕು ಎಂದು ಅಭಿಪ್ರಾಯವನ್ನು ತಿಳಿಸಿದರು.ಅದಕ್ಕೂ ಮೊದಲು ದೀರ್ಘ ಕಾಲದಿಂದ ಅಸಿಡಿಟಿ ಹೊಟ್ಟೆನೋವಿನ ಸಮಸ್ಯೆ ಇದ್ದ ನಾನು ಒಪ್ಪಿದೆನಾದರೂ ಎಂಡೋಸ್ಕೋಪ್ ಬಗ್ಗೆ ಭಯ ಪಟ್ಟೆ .ನಾನು ಯಾವುದಕ್ಕೆ ಹೆದರದೆ ಇದ್ದರೂ ನೋವಿಗೆ ತುಂಬಾ ಹೆದರುತ್ತೇನೆ.ಅಂತೆಯೇ ಡಾಕ್ಟರ್, ಆಸ್ಪತ್ರೆ, ಇಂಜೆಕ್ಷನ್ ,ಎಂಡೋಸ್ಕೋಪ್ ಮೊದಲಾದವುಗಳಿಗೆ ತುಂಬಾ ಭಯ ಬೀಳುತ್ತೇನೆ .ಹಾಗಾಗಿ ಎಂಡೋಸ್ಕೋಪ್ ಮಾಡಿಸಿಕೊಳ್ಳಲು ಹಿಂದೇಟು ಹಾಕಿದೆ .ಆಗ ಡಾ ಚಂದ್ರ ಮೌಳಿ ಅವರು ಧೈರ್ಯ ಹೇಳಿ ಆಪರೇಷನ್ ಥಿಯೇಟರ್ ನಲ್ಲಿಯೇ ಮಾಡುವ ನೋವಾಗದಂತೆ ಮಂಪರಿಗೆ ಕೊಡುತ್ತೇವೆ ಎಂದು ಹೇಳಿದರು.
ಸರಿ ಎಂದು ಒಪ್ಪಿದೆ .ಮರು ದಿನ ಬೆಳಗ್ಗೆಯೆ ಸಿಸ್ಟರ್ಸ್ ಬಂದು ಓಟಿ  ಡ್ರೆಸ್ ಹಾಕಿಸಿ ಅದಕ್ಕೆ ಬೇಕಾದ  ಪೂರ್ವಭಾವಿ ಜೆಕ್ಷನ್ ಔಷಧಗಳನ್ನು ಕೊಟ್ಟು ಸಿದ್ ಪಡಿಸಿ ಆಪರೇಷನ್ ಥಿಯೇಟರ್ ಗೆ ಕರೆದೊಯ್ದರು.ಎಂಡೋಸ್ಕೋಪ್ ಎಂದರೆ ಕೆಳಭಾಗದಿಂದ ಟ್ಯೂಬ್ ಹಾಕಿ ಪರೀಕ್ಷೆ ಮಾಡುದೆಂದು ನಾನು ಭಾವಿಸಿದ್ದೆ .ಆದರೆ ಆಪರೇಷನ್ ಥಿಯೇಟರ್ ಗೆ ಹೋದಮೇಲೆ ಬಾಯಿ ಮೂಲಕ ಟ್ಯೂಬ್ ಅನ್ನು ಹೊಟ್ಟೆಗೆ ಇಳಿಸಿ ಪರೀಕ್ಷೆ ಮಾಡುತ್ತಾರೆ ಎಂದು ಗೊತ್ತಾಗಿ ಗಾಭರಿಯಾದೆ .ನೋವಾಗಬಹುದು ಎಂಬ ಭಯದಿಂದ ಎಂಡೋಸ್ಕೋಪ್ ಮೂಲಕ ಪರೀಕ್ಷೆ ಮಾಡಿಸಿಕೊಳ್ಳಲು ಒಪ್ಪಲಿಲ್ಲ. ಮೊದಲು ಜೂನಿಯರ್ ಡಾಕ್ಟರ್ಸ್ ನನ್ನನ್ನು ಕನ್ವಿನ್ಸ್ ಮಾಡಲು ಯತ್ನ ಮಾಡಿದರು .ಯಾರೇನೇ ಹೇಳಿದರೂ ನಾನುನೊಪ್ಪಲಿಲ್ಲ ಕೊನೆಗೆ ಡಾ ಚಂದ್ರ ಮೌಳಿ ಅವರು ಬಂದು ಕನ್ವಿನ್ಸ್ ಮಾಡಹೊರಟರೂ ನಾನು ಕನ್ವಿನ್ಸ್ ಆಗಲಿಲ್ಲ ಹಾಗಾಗಿ ಆಪರೇಷನ್ ಥಿಯೇಟರ್ ನಿಂದ ಹಾಗೇ ಹೊರಗೆ ಬರಬೇಕಾಯಿತು .ಬೇರೆ ಯಾವುದೇ ಡಾಕ್ಟರ್ ಆಗಿದ್ದರೂ ನನಗೆ ಬೈದು ಕೈ ಕಾಲು ಕಟ್ಟಿ ಹಾಕಿ ಪರೀಕ್ಷೆ ಮಾಡುತ್ತಿದ್ದರು .ಅಥವಾ ಚಿಕಿತ್ಸೆ ನೀಡಲು ನಿರಾಕರಿಸಿ ಹೊಗೆ ಕಳಹಿಸುತ್ತಾ ಇದ್ದರು .ಆದರೆ ಬಹಳ ಸಜ್ಜಿಕೆಯ ಅವರು ಹೀಗಾಯಿತೆಂದು ಅಳುಕು ಬೇಡ ಪ್ರೀಯಾಗಿ ಮಾತಾಡಿ ಎಂದು ಮರುದಿನ ಧೈರ್ಯ ತುಂಬಿದರು .ನನ್ನ ಸಮಸ್ಯೆಗೆ ಎಂಡೋಸ್ಕೋಪ್ ಮಾಡಿ‌ ಪರೀಕ್ಷಿಸುವುದು ಅನಿವಾರ್ಯ ವಾಗಿದ್ದು .ಹಾಗಾಗಿ ಪೂರ್ತಿ ಎಚ್ಚರ ತಪ್ಪಿಸಿ ಮಾಡುತ್ತೇವೆ ಎಂದು ಭರವಸೆ ತುಂಬಿದರು‌ಅವರು .ಅವರ ಸೌಜನ್ಯ ಪೂರಿತ ನಡವಳಿಕೆ ಆತ್ಮವಿಶ್ವಾಸ ದ ಮಾತುಗಳು ನನ್ನ ಭಯವನ್ನು ಸ್ವಲ್ಪ ಮಟ್ಟಿಗೆ ಕಡಿಮೆ‌ಮಾಡಿ‌ಮತ್ತೆ ಎಂಡೋಸ್ಕೋಪ್ ಮೂಲಕ ‌ಪರೀಕ್ಷಿಸಿಕೊಳ್ಳಲು ಸಿದ್ಧಳಾದೆ
ಆಪರೇಷನ್ ಥಿಯೇಟರ್ ಗೆ ಹೋಗಿ ಚಿಕಿತ್ಸೆ ಆರಂಭಿಸುವ‌ಮೊದಲು ಪೂರ್ತಿ ಎಚ್ಚರ ತಪ್ಪಿಸಲು ಅಗುವುದಿಲ್ಲ ಆದರೆ ಹೆಚ್ಚೇನೂ ತಡೆಯಲಾಗದಷ್ಟು ನೋವಾದಂತೆ ಮಾಡುತ್ತೇನೆ ಎಂದು ಹೇಳಿದರು ಅದಾಗಲೇ ನಮಗೆ ಅವರ ಮೇಲೆ ‌ಪೂರ್ಣ ನಂಬಿಕೆ ಬಂದಿತ್ತು‌ಹಾಗೆ ಒಪ್ಪಿದೆ
ಬಾಯಿ ಮೂಲಕ ಟ್ಯೂಬ್ ಅನ್ನು‌ಇಳಿಸಿ ಪರೀಕ್ಷೆ ಮಾಡುವಾಗ ನನ್ನ ಆಸಕ್ತಿಯ ವಿಚಾರದ ಬಗ್ಗೆ ನನ್ನಲ್ಲಿ ‌ಮಾತಾಡುತ್ತಾ ಗಮನವನ್ನು ಬೇರೆಡೆಗೆ ಸೆಳೆದಿದ್ದರು ಪರೀಕ್ಷೆ ‌ಮಾಡುವಾಗ ಸ್ವಲ್ಪ ನೋವು ಹಿಂಸೆ ಆಯಿತಾದರೂ ಅವರ ಸೌಜನ್ಯ ಪೂರಿತ ನಡವಳಿಕೆ ಎದುರು ಅದು ಅದೇನೂ‌ ತಡೆಯಲಾಗದಷ್ಟು ಕಾಡಲಿಲ್ಲ‌
ಸುಮಾರು ಹದಿನೈದು ಇಪ್ಪತ್ತ ನಿಮಿಷಗಳಲ್ಲಿ ‌ಮುಗಿದು ಹೋಗಿ ಆರಾಮಾಯಿತು ಸಮಸ್ಯೆ ಯ ಮುಲ ತಿಳಿದ ಕಾರಣ ನನ್ನ ಹೊಟ್ಟೆನೋವು‌ಎರಡು ಮೂರು ದಿನಗಳಲ್ಲಿ ಪೂರ್ಣ ಗುಣವಾಗಿತ್ತು ಮತ್ತೆಂದೂ ಅ ಸಮಸ್ಯೆ ಕಾಡಲಿಲ್ಲ‌
ಡಾ ಚಂದ್ರ ‌ಮೌಳಿ‌ ಅ ಸಮಯದಲ್ಲಿ ಓರ್ವ ಬಡ ಮಹಿಳೆಯ ಹೊಟ್ಟೆ ಯಲ್ಲಿ ಬೆಳೆದಿದ್ದ ಎರಡು‌ಕೇಜಿ ಭಾರದ ದುರ್ಮಾಂಸ ತೆಗೆಯುವ ಎಂಟು ಗಂಟೆಯ ಶಸ್ತ್ರ ಚಿಕಿತ್ಸೆ‌ಮಾಡಿ ಯಶಸ್ಸು ಪಡೆದಿದ್ದರು ಆ ಮಹಿಳೆಯನ್ನು‌ ನೋಡಿಕೊಳ್ಳಲು ಯಾರೂ ಇರಲಿಲ್ಲ ‌ಪೂರ್ತಿಯಾಗಿ ಡಾ ಚಂದ್ರ ‌ಮೌಳಿ‌ ನೇತೃತ್ವದ ತಂಡ ಅವರನ್ನು ನೋಡಿಕೊಂಡು ಉಚಿತವಾಗಿ ಚಿಕಿತ್ಸೆ ನೀಡಿ ಗುಣ‌ಪಡಿಸಿದ್ದರು .ಇವರು ತೀರಾ ಅಗತ್ಯವಿಲ್ದೆ ದುಡ್ಡಿಗಾಗಿ ನಾನಾ ಪರೀಕ್ಷೆ ಗಳನ್ನು ಮಾಡಿಸುವುದಿಲ್ಲ  .ಉದಾರಿಗಳಾದ ಅವರು ನಂತರವು‌ಹಾಗೆ‌ಮುಂದುವರಿದಿರಬಹುದು.ಪ್ರಸ್ತುತ ನಾಗರಭಾವಿ fortis hospital ನಲ್ಲಿ ಪ್ರಧಾನ ಶಸ್ತ್ರ ಚಿಕಿತ್ಸಕ / ಸರ್ಜನ್ ಆಗಿದ್ದಾರೆ  ಇಂತಹ ವೈದ್ಯೋ‌ನಾರಾಣ ಹರಿಗಳ ಸಂಖ್ಯೆ ‌ಹೆಚ್ಚಾಗಲಿ‌ಎಂದು ಹಸರೈಸುವೆ ಚಿಕಿತ್ಸೆ ಪಡೆಯಲು ಧೈರ್ಯ ತುಂಬಿ‌ಗುಣ‌ಪಡಿಸಿದ ಅವರಿಗೆ ಯಾವತ್ತೂ ಆಭಾರಿಯಾಗಿದ್ದೇನೆ ಧನ್ಯವಾದಗಳು ಸರ್‌ ನಿಮಗೆ ©ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ

Wednesday 3 May 2017

ನಾಲ್ಕು ತೆಂಗಿನ ಸಸಿ ನೆಡಬೇಕಿತ್ತು © ಡಾ ಲಕ್ಷ್ಮೀ ಜಿ ಪ್ರಸಾದ

ನಾಲ್ಕು ತೆಂಗಿನ‌ಸಸಿ ನೆಡಬೇಕಿತ್ತು.
©ಡಾ ಲಕ್ಷ್ಮೀ ಜಿ ಪ್ರಸಾದ
ಅಂದು2009  ಸೆಪ್ಟೆಂಬರ್ 24 ನೆಯ ತಾರೀಖು, ನನಗೆ ತೀರದ ಸಂಭ್ರಮ. ಹಿಂದಿನ ದಿನವಷ್ಟೇ ಬೆಳ್ಳಾರೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಕನ್ನಡ ಉಪನ್ಯಾಸಕಿಯಾಗಿ ಪಿಯು ಇಲಾಖೆ ನಿರ್ದೇಶಕರ ಆದೇಶ ಪತ್ರ ದೊರೆತಿತ್ತು .ತುಳು ಸಂಸ್ಕೃತಿ ಯ ಅಧ್ಯಯನ ಕ್ಕಾಗಿ ಬೆಂಗಳೂರು ಸುತ್ತ ಮುತ್ತ ಅವಕಾಶ ಇದ್ದರೂ ಕೂಡ ಬೆಳ್ಳಾರೆಯನ್ನೆ ಅಧ್ಯಯನ ದ ದೃಷ್ಟಿಯಿಂದ ಆಯ್ಕೆ ಮಾಡಿದ್ದೆ .ನನಗೆ ಬೇಕಾದ ಸ್ಥಳದಲ್ಲಿ ಯೇ ಉದ್ಯೋಗ ಅವಕಾಶ ಸಿಕ್ಕಿದ್ದು ತುಂಬಾ ಸಂತಸ ತಂದಿತ್ತು .24 ರ ರಾತ್ರಿ ಎಂಟು ಗಂಟೆಯ ರೈಲಿಗೆ ಟಿಕೆಟ್ ಬುಕ್ ಮಾಡಿಸಿದ್ದೆ ಹಾಗಾಗಿ ಆರು ಗಂಟೆ ವೇಳೆಗೆ ಗಂಟು ಮೂಟೆ ಕಟ್ಟಿಕೊಂಡು ಮೆಜೆಸ್ಟಿಕ್ ಗೆ ಹೊರಟಿದ್ದೆ .ಮೈಸೂರು ಸೆಟಲೈಟ್ ತನಕ ಬಸ್ ಸಿಕ್ಕಿತು ಅಲ್ಲಿಗೆ ತಲುಪುವಷ್ಟರಲ್ಲಿ ಜೋರಾದ ಮಳೆ ರಸ್ತೆ ಇಡೀ ನೀರು ತುಂಬಿ ಹರಿಯತ್ತಿತ್ತು .ಅಟೋಗಳೇ ಇರಲಿಲ್ಲ ಒಂದೆರಡು ಬಂದರೂ ನಿಲ್ಲಿಸಲಿಲ್ಲ ಕೊನೆಗೂ ಒಂದು ಅಟೋ ನಿಂತಿತು ರೈಲ್ವೆ ನಿಲ್ದಾಣ ಬಿಡಲು ಹೇಳಿದೆ ಅರುವತ್ತು ರುಪಾಯಿ ಕೊಡಬೇಕು ಎಂದರು ಅರುವತ್ತೇನು ಆರುನೂರು ಹೇಳಿದ್ದರೂ ಕೊಟ್ಡು ಹೋಗುವ ಅನಿವಾರ್ಯತೆ ನನಗಿತ್ತು ಸುಮಾರು ನಲವತ್ತು ಐವತ್ತು ಮೀಟರ್ ಹಾಕಿದರೂ ಬೀಳುತ್ತಾ ಇತ್ತು ಹಾಗಾಗಿ ಒಪ್ಪಿ ಅಟೋ ಹತ್ತಿದೆ .ಅಟೋ ತುಂಬಾ ಹಳೆಯದಾಗಿತ್ತು ನೀರಿನ ಸೆಳವಿಗೆ ಅಲ್ಲಲ್ಲಿ ಆಫ್ ಆಗುತ್ತಾ ಇತ್ತು ಒಂದೆರಡು ಕಡೆ ಅಟೋವಾಲಾ ಇಳಿದು ಅಟೋ ದೂಡಿ ಸ್ಟಾರ್ಟ್ ಮಾಡಿದ್ದರು .ಆಗಲೇ ನಾನು ಅವರನ್ನು ಗಮನಿಸಿದ್ದು .ಬಿಳಿ ಗಡ್ಡದ ಸುಮಾರು ಎಪ್ಪತ ವಯಸ್ಸಿನ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರು.ಅಟೋ ಮುಂದೆ ಸಾಗುತ್ತಿದ್ದಂತೆ ಅಟೋ ಹಳತಾಗಿದೆ ಅಮ್ಮ ಹಾಗಾಗಿ ಆಗಾಗ್ಗೆ ಕೈ ಕೊಡುತ್ತಿದೆ ಎಂದು ತಮ್ಮ ಕಷ್ಟ ವನ್ನು ಹೇಳಿಕೊಂಡರು .ಆಗ ನಾನು ನೀವೇಕೆ ಈ ವಯಸ್ಸಿನಲ್ಲಿ ದುಡಿಯುತ್ತೀರಿ ಮಕ್ಕಳಿಗೆ ಕೆಲಸ ಸಿಕ್ಕಿಲ್ಲವೇ ಎಂದು ಕೇಳಿದೆ. ಆಗ ಅವರು ಒಂದು ದೊಡ್ಡ ನಿಟ್ಟುಸಿರು ಬಿಟ್ಟು " ನನಗೆ ನಾಲ್ಕು ಜನ ಗಂಡುಮಕ್ಕಳು ಎಲ್ಲರನ್ನೂ ದುಡಿದು ಅಟೋ ಓಡಿಸುತ್ತಾ ಸಾಲ ಸೋಲ ಮಾಡಿ ಓದಿಸಿದೆ ಎಲ್ಲರೂ ಒಳ್ಳೆಯ ಕೆಲಸದಲ್ಲಿ ಇದ್ದಾರೆ ಆದರೆ ನಾನು‌ಮಾಡಿದ ಸಾಲವನ್ನು ತೀರಿಸಲು ನಾನು ದುಡಿಯುತ್ತಿರುವೆ ಅವರೆಲ್ಲರೂ ಅವರವರ ಹೆಂಡತಿ ಮಕ್ಕಳೊಂದಿಗೆ ಸುಖವಾಗಿದ್ದಾರೆ ನನಗೆ ದುಡಿಯದೆ ಬೇರೆ ವಿಧಿಯಿಲ್ಲ ನಾನು ನಾಲ್ಕು ಜನ ಮಕ್ಕಳನ್ನು ಸಾಕುವ ಬದಲು ನಾಲ್ಕು ತೆಂಗಿನ ಸಸಿ ನೆಡುತ್ತಿದ್ದರೆ ಈಗ ದುಡಿದು ಮನೆಗೆ ಹೋದಾಗ ಕುಡಿಯಲು ಎಳನೀರು ಕೊಡುತ್ತಾ ಇದ್ದವು ಎಂದು ಹೇಳಿ ಕಣ್ಣೀರು ಒರಸಿಕೊಂಡರು.ನನ್ನ ಕಣ್ಣಂಚೂ ತೇವವಾಯಿತು ಅಷ್ಟರಲ್ಲಿ ರೈಲ್ವೆ ಸ್ಟೇಷನ್ ತಲುಪಿದೆವು ಇಳಿದು ದುಡ್ಡು ಕೊಟ್ಟು ನನ್ನ ಜಗತ್ತಿಗೆ ಪ್ರವೇಶ ಮಾಡಿದೆ ಇಂದು ಮತ್ತೆ ಇದು ನೆನಪಾಯಿತು ಇದು ಕಲ್ಪನೆಯಲ್ಲ ನಿಜವಾದ ಕಥೆ/ ವ್ಯತೆ ಇದು ©ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ 

Tuesday 2 May 2017

ದೊಡ್ಡವರ ದಾರಿ - ಹಿರಿಯಣ್ಣನಂತೆ ಸಂತೈಸಿದ ಉದಯ ಧರ್ಮಸ್ಥಳ©ಡಾ ಲಕ್ಷ್ಮೀ ಜಿ ಪ್ರಸಾದ


ಜೀವನ ದೇವರು ಕೊಟ್ಟ ಕೊಡುಗೆ ಬದುಕನ್ನು ಕೊನೆಗೊಳಿಸುವ ಆತ್ಮಹತ್ಯೆ ಈ  ಮಾನವ ಜಗಕ್ಕಂಟಿದ ಶಾಪ ಇದನ್ನು ಸದಾ ಪ್ರತಿಪಾದಿಸುತ್ತಲೇ ಬಂದವಳು ನಾನು .ನನ್ನ ವಿದ್ಯಾರ್ಥಿಗಳಿಗೂ ಸದಾ ಈ ಬಗ್ಗೆ ಬುದ್ಧಿವಾದ ಹೇಳುತ್ತಲೇ ಇರುತ್ತೇನೆ.
ವರ್ಷದ ಕೊನೆಯಲ್ಲಿ ಪರೀಕ್ಷೆ ಹತ್ತಿರ ಬಂದಾಗ " ನೀವೆಲ್ಕರೂ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಬೇಕೆಂಬುದೇ ನನ್ನ ಹಾರೈಕೆ,ಆದರೆ ಪ್ರತಿ ವರ್ಷ 40% ದಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ ಅವರಲ್ಲಿ ಕೆಲವರು ನೀವೂ ಸೇರಿರಬಹುದು ಹೇಳಲಾಗದು ,ಎಲ್ಲರೂ ಉತ್ತೀರ್ಣರಾಗುವವುದಿಲ್ಲ ಹಾಗೊಂದು ವೇಳೆ ನಿಮ್ಮ ಸತತ ಓದಿನ ಯತ್ಸನದ ನಂತರವೂ ಅನುತ್ತೀರ್ಣರಾದರೆ ಕಂಗಾಲಾಗಬೇಡಿ ಮತ್ತೆ ಮರು ಪರೀಕ್ಷೆ ಇದೆ ಕಟ್ಟಿ ಪಾಸ್ ಮಾಡಬಹುದು ಹಾಗೂ ಆಗದಿದ್ದರೆ ತಲೆಕೆಡಿಸಿಕೊಳ್ಳಬೇಡಿ ಅಂಕಗಳು ಮಾತ್ರ ಬದುಕಿಗೆ ಮಾನದಂಡ ವಲ್ಲ ಅದೂ ಒಂದು ಮಾನದಂಡ ಅಷ್ಟೇ ಹಾಗಾಗಿ ಒಳ್ಳೆಯ ಅಂಕ ತೆಗೆಯಲು ಯತ್ನ ಮಾಡಿ ಸಿಗದಿದ್ದರೆ ಚಿಂತಿಸಬೇಡಿ ನಿಮ್ಮೊಂದಿಗೆ ಸದಾ ನಾನಿರುತ್ತೇನೆ" ಎಂಬ ಮಾತನ್ನು ಪ್ರತಿ ವರ್ಷ ಪ್ರತಿ ತರಗತಿ ಯಲ್ಲಿ ಹೇಳುತ್ತೇನೆ. ಅನುತ್ತೀರ್ಣ ಗೊಂಡ ಮಕ್ಕಳನ್ನು ತೀರಾ ಹಿಂಸಿಸುವ ಬಗ್ಗೆ ಗೊತ್ತಾದರೆ ಅಂತ ಮಕ್ಕಳ ತಂದೆ ತಾಯಿಗಳ ನ್ನು ಕಂಡು ಅವರ ಮಕ್ಕಳ ಜೀವಕ್ಕಿಂತ ಹೆಚ್ಚು ಅಂಕಗಳು ಅಲ್ಲ ಎಂದು ಅವರಿಗೆ ಮನವರಿಕೆ ಮಾಡಿ ನನ್ನ ವಿದ್ಯಾರ್ಥಿಗಳ ಪರ ನಿಂತು ಮತ್ತೆ ಅವರು ಪರೀಕ್ಷೆ ಗೆ ಕಟ್ಟಿ ಉತ್ತೀರ್ಣರಾಗುವಂತೆ ಬೆಂಬಲ ನೀಡುತ್ತೇನೆ .ಅವರ ಓದಿಗೆ ಅನುಗುಣವಾಗಿ ಎಲ್ಲಾದರೂ ಕೆಲಸ ಇರುವುದು ಗೊತ್ತಾದರೆ ಅದನ್ನು ತಿಳಿಸಿ ಅವರಿಗೆ ಕೆಲಸ ಕೊಡಿಸಲೂ ಯತ್ನ ಮಾಡುತ್ತೇನೆ
ಇಂತಹ ನಾನು ಬೆಳ್ಳಾರೆಯ ಪ್ರಿನ್ಸಿಪಾಲ್ ಮತ್ತು ಸಹೋದ್ಯೋಗಿಗಳ ತೀವ್ರ ಕಿರುಕುಳ,ಹಾಗೂ ಸುಳ್ಯ ಪೋಲೀಸ್ ರ ನಿಷ್ಕ್ರಿಯತೆ ಬಗ್ಗೆ ನೊಂದು ಕಳೆದ ಜುಲೈ ಯಲ್ಲಿ ಆತ್ಮಹತ್ಯೆ ಗೆ ಯತ್ನಿಸಿದ್ದೆ .ಪೇಸ್ ಬುಕ್ ಹಾಗೂ ವಾಟ್ಸಪ್ ನಲ್ಲಿ ನನ್ನ ಸಾವಿನ ಕಾರಣದ ಬಗ್ಗೆ ಬರೆದ ಕಾರಣ ಅದು ಕ್ಷಣಮಾತ್ರದಲ್ಲಿ ಹರಡಿ ಸ್ನೇಹಿತರ ಸಹಾಯದಿಂದ ಬದುಕುಳಿದೆ
ಆಗಲೇ ನನಗೆ ಕಾಡಿದ್ದು ತೀವ್ರ ಕೀಳರಿಮೆ.ಸದಾ ಆತ್ಮವಿಶ್ವಾಸ ದಿಂದಿದ್ದ ನನಗೆ ಸಮಾಜವನ್ನು ಎದುರಿಸುವುದು ತುಂಬಾ ಕಷ್ಟ ಎನಿಸಿತು ಯಾರೊಂದಿಗೂ ಮುಖ ಕೊಟ್ಟು ಮಾತನಾಡಲಾರದ ಕೀಳರಿಮೆ ಬಹುಶಃ ನನ್ನ ಸಾಮಾಜಿಕ ಬದುಕು ನಿಂತೇ ಹೋಗುತ್ತದೆ ಎಂದು ಕೊಂಡಿದ್ದೆನಾನು .
ಇದಕ್ಕೆ ‌ಮೊದಲು ಭರತ್ ರಾಜ್ ಬಂಡಿಮಾರರು ಕುಡ್ಲ ತುಳು ಪತ್ರಿಕೆ ಯ ನೇತೃತ್ವದಲ್ಲಿ ಮೂಲ್ಕಿಯಲ್ಲಿ ತುಳು ಸಮ್ಮೇಳನ ಆಯೋಜಿಸಿದ್ದು " ನಿಮಗೆ ಸನ್ಮಾನ ಮಾಡುತ್ತೇವೆ ಬರಬೇಕು " ಎಂದು ಹೇಳಿದ್ದು ಅದಕ್ಕೆ ಒಪ್ಪಿದ್ದೆ ನಾನು .ನಾನು ಯಾರಲ್ಲೂ ನನಗೆ ಪ್ರಶಸ್ತಿ ಕೊಡಿ ಅಭಿನಂದನೆ ಮಾಡಿ ಎಂದು ಕೇಳುವುದಿಲ್ಲ ಅರ್ಜಿ ಸಲ್ಲಿಸುವುದೂ ಇಲ್ಲ ಒಂದೊಮ್ಮೆ ಯಾರಾದರೂ ಅವರಾಗಿಯೇ ಗುರುತಿಸಿ ಕರೆದರೆ ಅವರ ಅಭಿನಂದನೆ ಯನ್ನು ಅತ್ಯಂತ ಕೃತಜ್ಞತೆ ಯಿಂದ ಸ್ವೀಕರಿಸುತ್ತೇನೆ ಹಾಗಾಗಿ ಇವರಿಗೂ ಬರುತ್ತೇನೆ ಎಂದು ಒಪ್ಪಿದ್ದೆ
ಅದಾದ ನಂತರ ನಾನು ಆತ್ಮಹತ್ಯೆ ಗೆ ಯತ್ನ ಮಾಡಿದ್ದು ಅದಾಗಿ ಕೆಲವು ದಿನಗಳಲ್ಲಿ ತುಳು ಸಮ್ಮೇಳನ ಇತ್ತು .ನಾನು ಆತ್ಮಹತ್ಯೆ ಯಂತ ಮಹಾ ಅಪರಾಧಕ್ಕೆ ಯತ್ನ ಮಾಡಿದ ಕಾರಣ ಅವರು ನನ್ನನ್ನು ಅಭಿನಂದನೆ ಮಾಡಲಾರರು ಮೊದಲಿನ ಯೋಚನೆ ಬದಲಿಸಿರಬಹುದು ಎಂದು ಆಲೋಚಿಸಿದ್ದೆ ನಾನು
ಆದರೆ ಹಾಗಾಗಲಿಲ್ಲ ಭರತ್ ಅವರು ಆಹ್ವಾನ ಪತ್ರಿಕೆ ಕಳುಹಿಸಿ ಅಭಿನಂದನೆ ಸ್ವೀಕರಿಸಲು ಬನ್ನಿ ಎಂದು ಕರೆದರು.
ಈಗ ನಾನು ಇಕ್ಕಟ್ಟಿಗೆ ಸಿಲುಕಿದೆ .ಹೇಗೆ ಹೋಗಲಿ ? ಹೇಗೆ ಜನರಿಗೆ ಮುಖ ತೋರಲಿ ? ಜನರು ನನ್ನಲ್ಲಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತಾಡಿದರೆ ಏನು ಹೇಳಲಿ ? ಹೇಗೆ ಹೋಗಲಿ ಎಂದು.
ಮಾತಿನ ನಡುವೆ ನನ್ನ ಅಮ್ಮನಲ್ಲಿಯೂ ಹೀಗೆ ಹೇಳಿದೆ .ನನ್ನ ಅಮ್ಮ ತುಂಬಾ ಗಟ್ಟಿಗೆತ್ತಿ ,ಬಹಳ ದೃಢ ಮನಸಿನವರು .ತಕ್ಷಣವೇ " ನೀನೇನು ಬೇರೆಯವರನ್ನು ಕೊಂದಿಲ್ಲ ನಿನ್ನನ್ನು ನೀನು ಸಾಯಿಸಲು ಹೊರಟಿದ್ದೆ ಅಷ್ಟೇ ಕೊಲೆ ಮಾಡಿದವರೇ ತಲೆ ಎತ್ತಿ ತಿರುಗಾಡುತ್ತಾರೆ ನೀನು ಯಾಕೆ ಅಳುಕಬೇಕು ? ತುಳು ಸಮ್ಮೇಳನಕ್ಕೆ ಹೋಗು ಅವರು ನೀಡುವ ಸನ್ಮಾನ ಸ್ವೀಕರಿಸು ನಾನು ಜೊತೆಗೆ ಬರುತ್ತೇನೆ ಯಾರು ಏನು ಹೇಳುತ್ತಾರೆ ನೋಡುವ" ಎಂದು ಹೇಳಿ ನನ್ನಲ್ಲಿ ಆತ್ಮವಿಶ್ವಾಸ ತುಂಬುವ ಯತ್ನ ಮಾಡಿದರು.ಅಂತೂ ‌ಮನಸಿಲ್ಲದ ಮನಸಿನಲ್ಲಿ ಅಮ್ಮನ ಜೊತೆಯಲ್ಲಿ ಮೂಲ್ಕಿಯಲ್ಲಿ ನಡೆದ ತುಖು ಸಮ್ಮೇಳನಕ್ಕೆ ಹೋದೆ .ಅಲ್ಲಿಗೆ ಉದಯ ಧರ್ಮಸ್ಥಳ ಬಂದಿದ್ದರು.ಅವರನ್ನು ನನಗೆ ಮೊದಲೇ ಪರಿಚಯ ಇತ್ತು ನಮ್ನ ತುಳು ಸಂಸ್ಕೃತಿ ಕುರಿತಾದ ಅಧ್ಯಯನ ಕ್ಕೆ ಅವರು ಬೆಂಬಲ ನೀಡಿದ್ದರು ಆದರೂ ಅದಕ್ಕೆ ಸ್ವಲ್ಪ ದಿನ‌ಮೊದಲು ತಿಗಳಾರಿ ಮತ್ತು ತುಳು ಲಿಪಿ ಒಂದೇ ಎಂಬ ವಿಚಾರದಲ್ಲಿ ಅವರೊಂದಿಗೆ ಸಾಕಷ್ಟು ಚರ್ಚೆ ವಾಗ್ಯುದ್ಧ ನಡೆದಿತ್ತು .ಹಾಗಾಗಿ ಅವರನ್ನು ಕಂಡಾಗ ಇನ್ನಷ್ಟು ಕೀಳರಿಮೆಗೆ ಒಳಗಾದೆ ಆದರೆ ಅವರು ನನ್ನನ್ನು ಅವರ ಬಳಿಗೆ ಕರೆದು ಬಳಿಯಲ್ಲಿ ಕೂರಿಸಿಕೊಂಡು " ನಾನು ಕೂಡ ಈ ಹಿಂದೆ ಆತ್ಮಹತ್ಯೆ ಗೆ ಯತ್ನ ಮಾಡಿ ಮೂರು ದಿನ ಕೋಮಾದಲ್ಲಿದ್ದೆ .ನಾವು ಸತ್ಯವನ್ನು ಹೇಳಿದಾಗ ಸಮಾಜ ಅದನ್ನು ಅಪನಂಬಿಕೆ ಯಿಂದ ಕಂಡಾಗ ನಮಗೆ ಬದುಕು ಬೇಡ ಅನಿಸುವುದು ಸಹಜ ಆಗಿ ಹೋದ್ದಕ್ಕೆ ಚಿಂತಿಸಬೇಡಮ್ಮ ನಾವೆಲ್ಲರೂ ನಿಮ್ಮ ಜೊತೆಗಿದ್ದೇವೆ " ಎಂದು ಹಿರಿಯಣ್ಣನಂತೆ ನನ್ನನ್ನು ಸಂತೈಸಿದರು .ಅಲ್ಲಿಂದ ಮತ್ತೆ ನಾನು ಕೀಳರಿಮೆಯಿಂದ ಹೊರಬಂದು ಮತ್ತೆ ಹಿಂದಿನ ಆತ್ಮ ವಿಶ್ವಾಸ ವನ್ನು ಮರಳಿ ಪಡೆದೆ.ಹಿರಿಯರಾದ ಅವರು ನಿಜಕ್ಕೂ ಹಿರಿಯಣ್ಣನ ಸ್ಥಾನದಲ್ಲಿ ನಿಂತು ಆತ್ಮವಿಶ್ವಾಸ ತುಂಬಿದ ನನ್ನ ಸಂಶೋಧನಾ ಕಾರ್ಯಕ್ಕೆ ತುಂಬಾ ಬೆಂಬಲ ನೀಡಿದ ಅವರನ್ನು ಹೇಗೆ ತಾನೆ ಮರೆಯಲಿ ? ಅಂತೆಯೇ ನಾನು ಆತ್ಮಹತ್ಯೆ ಗೆ ಯತ್ನ ಮಾಡಿದ್ದರೂ ತಮ್ಮ ಹಿಂದಿನ ಯೋಜನೆಯನ್ನು ಬದಲಾಯಿಸದೆ ನನ್ನ ನ್ನು ಅಭಿನಂದನೆ ‌ಮಾಡಿದ ಕುಡ್ಲ ಪತ್ರಿಕೆ ಬಳಗದ ಭರತ್ ಬಂಡಿಮಾರ್ ಹಾಗೂ ಇತರರನ್ನು ಮರೆಯಲಾಗದು .ಅಂದು ಕಾರ್ಯಕ್ರಮ ಕ್ಕೆ ಬಂದು ನನಗೆ ಸಾಂತ್ವನ ಹೇಳಿದ ಸರೋಜಾ ಅವರೂ ಸ್ಮರಣೀಯರಾಗಿದ್ದಾರೆ ಇವರೆಲ್ಲರಿಗೆ ಯಾವ ರೀತಿಯಲ್ಲಿ ಧನ್ಯವಾದಗಳನ್ನು ಅರ್ಪಿಸಲಿ ? ತಿಳಿಯುತ್ತಾ ಇಲ್ಲ © ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ

ದೊಡ್ಡವರ ದಾರಿ- ಸೋತಾಗ ಮುಖ ತಿರುವುವ ನೆಂಟರು ಮಾತ್ರವಲ್ಲ ಸ್ನೇಹಿತರು ಕೂಡ ನಂಬಲರ್ಹರಲ್ಲ ©ಡಾ ಲಕ್ಷ್ಮೀ ಜಿ ಪ್ರಸಾದ


ಸೋತಾಗ ಮುಖ ತಿರುವುವ ಸ್ನೇಹಿತರು ನಂಬಲರ್ಹರಲ್ಲ ©ಡಾ ಲಕ್ಷ್ಮೀ ಜಿ ಪ್ರಸಾದ
ದೊಡ್ಡವರು ದೊಡ್ಡವಾಗಿ ಇದ್ದರೆ ಸಣ್ಣವರು ಆರಾಮವಾಗಿ ಬದುಕಲು ಸಾಧ್ಯವಾಗುತ್ತದೆ ದೊಡ್ಡವರು ಎನಿಸಿಕೊಂಡವರು ಚಿಕ್ಕವರಾದರೆ ಏನಾಗುತ್ತದೆ ಎಂದು ಹೇಳುವುದಕ್ಕೆ ಇದೊಂದು ಪ್ರಮಾಣವಾಗಿದೆ ಸ್ನೇಹಿತರನ್ನು ನಂಬಲು ಆಗದೆ ಇರುವ ಮನಸ್ಥಿತಿ ಉಂಟಾಗಿ ಬಿಡುತ್ತದೆ

ಪುರುಷೋತ್ತಮ್ ಅಡ್ಕಾರ್ ಭರವಸೆಯ ಯುವ ಕವಿ ಅವರ ಅನೇಕ ಕವಿತೆ/ ಹನಿಗವನಗಳು ನನಗೂ ತುಂಬಾ ಇಷ್ಟವಾಗಿವೆ ,ಈ ಕವಿತೆ ಕೂಡಾ ಇಷ್ಟ ವಾಗಿದೆ

ಸಾಮಾನ್ಯವಾಗಿ ನಾವು ಸೋತಾಗ ಸ್ನೇಹಿತರು ನಮ್ಮ ಬೆನ್ನು ತಟ್ಟಿ ಧೈರ್ಯ ತುಂಬುತ್ತಾರೆ ಈ ಬಗ್ಗೆ ಕಳೆದ ಜುಲೈ ತಿಂಗಳಲ್ಲಿ ನಾನು ಆತ್ಮಹತ್ಯೆ ಗೆ ಯತ್ನಿಸಿದ್ದಾಗ ನನಗೆ ಸ್ವಾನುಭವವಾಗಿದೆ .ಆಗ ನನಗೆ ಪೂರ್ಣ ಬೆಂಬಲ ನೀಡಿದವರು ಫೇಸ್ ಬುಕ್ ಹಾಗೂ ವಾಟ್ಸಪ್ ಗೆಳೆಯರು
ದಾನೆ ಮಂಪೊಡು ಆಯೆನ್ ಕೆರೋಡಾ ಎಂದು ಕೇಳಿದ ಸಹೃದಯಿ ಗಳೂ ಇದ್ದರು ಅವರಲ್ಲಿ, ನಾನು ಬೇಡಪ್ಪಾ ನಾವು ನ್ಯಾಯಯುತ ಹೋರಾಟ ನಡೆಸೋಣ ಎಂದು ನಾನೇ ಅನೇಕ ರನ್ನು ಸಂತೈಸಿರುವೆ ಅದು ಬೇರೆ ವಿಚಾರ
ಫೇಸ್ ಬುಕ್ ವಾಟ್ಸಪ್ ಹೊರತಾಗಿ ನೇರವಾಗಿ ಇರುವ ನನ್ನ ಸ್ನೇಹಿತರ ಸಂಖ್ಯೆ ತೀರ ಕಡಿಮೆ ಬೆರೆಳೆಣಿಕೆಯಷ್ಟು
ಅವರಲ್ಲಿ ಇಬ್ಬರು ನನ್ನ ಆತ್ಮೀಯರು ಎಂದು ನಾನು ಭಾವಿಸಿದ್ದೆ
ಒಬ್ಬಾಕೆ ಯಾವಾಗಲೂ ನನ್ನಲ್ಲಿ ಮಾತಾಡುತ್ತಾ ಇದ್ದವರು ಪೇಸ್ ಬುಕ್ ಮೆಸೆಂಜರ್ ಮೂಲಕ ನಾವು ಸದಾ ಚಾಟ್ ಮಾಡಿ ಹಾಸ್ಯ ಮಾಡಿ ನಗಾಡಿ ಮನಸು ಹಗುರ ಮಾಡಿಕೊಳ್ಳುತ್ತಾ ಇದ್ದರು ಅವರ ಸಮಸ್ಯೆ ಹೇಳಿಕೊಂಡಾಗ ನಾನು ನನಗೆ ತಿಳಿದಂತೆ ಸಮಾಧಾನ ಮಾಡಿದ್ದೆ ನನಗೂ ಅವರು ಸಹಾಯ ಮಾಡಿದ್ದರು ಅವರ ಪತಿ ಕೂಡ ನನಗೆ ಪರಿಚಿತರೇ ಸಾಕಷ್ಟು ಆತ್ಮೀಯತೆ ಇತ್ತು
ಆದರೆ ನಾನು ಆತ್ಮಹತ್ಯೆ ಗೆ ಯತ್ನಿಸಿದ ದಿನದಿಂದ ಈಕೆ ಸಂಪೂರ್ಣವಾಗಿ ಸಂಪರ್ಕ ಕಡಿದುಕೊಂಡಿದ್ದರು ಚಾಟ್ ಪೋನ್ ಯಾವುದೂ ಇಲ್ಲ ನನಗೂ ಈ ಬಗ್ಗೆ ತಲೆಕೆಡಿಸಿಕೊಳ್ಳಲು ಪುರುಸೊತ್ತು ಇರಲಿಲ್ಲ ಆದರೂ ಇತ್ತೀಚೆಗೆ ಎದುರು ಸಿಕ್ಕಾಗ ಅವರು ಎಂದಿನಂತೆ ಮಾತಾಡಿದರು ನಾನು ಎಂದಿನಂತೆ  ಹರಟಿದೆ ಕೂಡ

 ಮೊನ್ನೆ ಒಂದು ಕಾರ್ಯಕ್ರಮಕ್ಕೆ ಹೋದಾಗ ಸಭಾಂಗಣದ ಎದುರಿನಲ್ಲಿ ನನ್ನ ಎರಡನೇ ಪಿಎಚ್ ಡಿ ಮಾರ್ಗದರ್ಶಕರಾದ ನನ್ನ ಪ್ರೊಫೆಸರ್ ಡಾ ಶಿವಕುಮಾರ್ ಭರಣ್ಯ ದಂಪತಿಗಳು ಸಿಕ್ಕರು ಅವರಲ್ಲಿ ಮಾತಾಡುತ್ತಾ ಇರುವಾಗ  ಇವರ ಪತಿ ಅಲ್ಲಿಗೆ ಬಂದರು  ನಾನು ವಿಶ್ ಮಾಡಿದರೂ ಅಪರಿಚಿತರಂತೆ ವರ್ತಿಸಿದರು .ನಾನು ಬಿಡಲಿಲ್ಲ ಮಾತಿಗೆ ಎಳೆದೆ ಅದು ಬೇರೆ ವಿಚಾರ
ಆದರೆ ನನಗೆ ಅನಿಸಿದ್ದು ನಾನು ಇವರಿಗೇನಾದರೂ ಅನ್ಯಾಯ ಮಾಡಿದ್ದೆನಾ ಅಂತ? ನಾನು ದುಡುಕಿದ್ದು ತಪ್ಪುನನಗೆ ಅದರ ಅರಿವಿದೆ ಆದರೂ ನಾನು ಬೇರೆಯವರನ್ನು ಕೊಲ್ಲ ಹೊರಟಿದ್ದಲ್ಲ ನನಗೆ ನಾನು ಹಾನಿ ಮಾಡಿಕೊಂಡದ್ದು ಹಾಗಿರುವಾಗ ಇವರಿಗೇನಾಯಿತು ಅಂತ ? ಕೊಲೆ ಮಾಡಿದವರು ಮೋಸ ವಂಚನೆ ಭ್ರಷ್ಟಾಚಾರ ಮಾಡಿದವರು ತಲೆಯೆತ್ತಿ ಕೊಂಡು ಓಡಾಡುತ್ತಾರೆ ಅಂತವರ ಜೊತೆಯಲ್ಲಿ ಎಲ್ಲರೂ ಚೆನ್ನಾಗಿ ಇರುತ್ತಾರೆ ಹಾಗಿರುವಾಗ ನಾನು  ಕಳೆದು ಹೋದ ಆತ್ಮವಿಶ್ವಾಸ ವನ್ನು ಮತ್ತೆ ಗಳಿಸುವ ಯತ್ನ ಮಾಡುತ್ತಾ ಬರವಣಿಗೆ ಮುಂದುವರಿಸಿ ಆಹ್ವಾನವನ್ನು ನೀಡಿದವರ ಕಾರ್ಯಕ್ರಮ ಕ್ಕೆ ಹೋಗುವುದು ತಪ್ಪೇ ? ಸ್ನೇಹಿತರು ಎನಿಸಿಕೊಂಡ ವರು ಮುಖ ತಿರುವಿಕೊಂಡು ಹೋಗುವಂತ ಮಹಾಪರಾಧ ನನ್ನದೇ ? ಈಗ ಕಾನೂನು ಕೂಡ ಆತ್ಮಹತ್ಯೆ ಯತ್ನ ಮಾಡಿದವರೆಂದು ಆರೋಪಿ ಸ್ಥಾನದಲ್ಲಿ ನಿಲ್ಲಿಸದೆ  ಅವರಿಗೆ ಸಾಂತ್ವನದ ಅಗತ್ಯವಿದೆಯೆಂದು ಹೇಳಿದೆ ಹಾಗಿರುವಾಗ ಇವರುಗಳ ವರ್ತನೆಯೇಕೆ ಹಾಗೆ ಆಯ್ತು ? ನನಗೆ ಅರ್ಥವಾಗಿಲ್ಲ
ಅಥವಾ ಅವರುಗಳನ್ನು ನಾನು ಸ್ನೇಹಿತರು ಎಂದು ತಪ್ಪು ತಿಳಿದೆನೆ ? ಅವರ ಆತ್ಮೀಯ ನಡೆ ನುಡಿ ಕೇವಲ ತೋರಿಕೆಯದ್ದು ಆಗಿತ್ತೇ ? ಇವೆಲ್ಲವೂ ನೆನಪಾದದ್ದು ಪುರುಷೋತ್ತಮ ಅವರ ಕವನ ಓದಿದಾಗ ಹಾಗಾಗಿ ಬರೆದೆ ಹೊರತು ಯಾರನ್ನು ದೂಷಿಸುವ ನೋಯಿಸುವ ಉದ್ದೇಶ ನನಗಿಲ್ಲ ಮಾತನಾಡುವುದು ಬಿಡುವುದು ಅವರವರ ಇಷ್ಟ .ಪ್ರೀತಿ ಆತ್ಮೀಯತೆ ಯನ್ನು ಬಲವಂತವಾಗಿ ಪಡೆಯಲಾಗದು ಅಲ್ಲವೇ ? ಏನಂತೀರಿ ?

Monday 1 May 2017

ದೊಡ್ಡವರ ದಾರಿ15 ಸಹೃದಯಿ ತರುಣ ರಾಜು © ಡಾ ಲಕ್ಷ್ಮೀ ಜಿ ಪ್ರಸಾದ

ರಾಜು ಬಗ್ಗೆ ಬರೆಯಬೇಕೆಂದು ಎಂದೋ ಅಂದುಕೊಂಡಿದ್ದೆ ಅದಕ್ಕಾಗಿ ಅವರ ಭಾವ ಚಿತ್ರ ಪಡೆಯಲು ಅವರನ್ನು ಕಾಟನ್ ಪೇಟೆ ರಸ್ತೆಯಲ್ಲಿ ಅನೇಕ ಬಾರಿ ಹುಡುಕಾಡಿರುವೆ ಅವರು ಕಾಣಿಸಿಲ್ಲ ಅಥವಾ ಅವರು ವೃತ್ತಿ ಬದಲಾಯಿಸಿದ್ದು ನನಗೆ ಗುರುತಿಸಲು ಸಾಧ್ಯವಾಗಿಲ್ಲವೋ ಗೊತ್ತಿಲ್ಲ
ಕಾಟನ್ ಪೇಟೆ ಪೋಲೀಸ್ ಸ್ಟೇಷನ್ ಬಳಿ ಎದುರುಭಾಗದಲ್ಲಿ ಒಂದು ಸಣ್ಣ ಬಸ್ ಸ್ಟಪ್ ಇದೆ.ನಾನು ಅಲ್ಲೇ ಸಮೀಪದ ಕಮಲಾ ಕಾಲೇಜ್ ಆಫ್‌ಮೇನೇಜ್ಮೆಂಟ್ ಸ್ಟಡೀಸ್ ನಲ್ಲಿ  2008 ರಲ್ಲಿ ಒಂದು ವರ್ಷ ಕನ್ನಡ ಉಪನ್ಯಾಸಕಿಯಾಗಿ ಕೆಲಸಮಾಡಿದ್ದೆ .ಕಾಲೇಜಿಂದ ಹಿಂದೆ ಬರುವಾಗ ನಾವು ಬಸ್ ಗಾಗಿ ಕಾಯುವ ಬಸ್ ಸ್ಟಾಪ್ ನಲ್ಲಿ ಓರ್ವ ಸಣ್ಣ ಬಾಳೆ ಹಣ್ಣು ವ್ಯಾಪಾರಿ ಇದ್ದರು ಸುಮಾರು 23-25 ರ ಎಳೆಯ ತರುಣ ಅವರ ಹೆಸರು ರಾಜು ಎಂದು ಕೇಳಿದಾಗ ಹೇಳಿದ್ದರು
ನಾವು ( ನನ್ನ ಸ್ನೇಹಿತೆ (ಕಂಪ್ಯೂಟರ್ ಉಪನ್ಯಾಸಕಿ ನಾಗಲಕ್ಮೀ) ಜೊತೆ ಬನಶಂಕರಿ ತೃತೀಯ ಬಡಾವಣೆಗೆ ಬರುವ 45 G ಬಸ್ ಗಾಗಿ ಅಲ್ಲಿ ಕಾಯುತ್ತಾ ಇದ್ದೆವು .ಆಗ ನಾವು ಗಮನಿಸಿದ್ದು ಈ ತರುಣನ ವಿಶಿಷ್ಠವಾದ ನಡೆಯನ್ನು, ಉದಾರ ಹೃದಯ ವನ್ನು.
ಆ ರಸ್ತೆ ಜನ ನಿಬಿಡವಾಗಿದ್ದು ಏಕ ಮುಖ ರಸ್ತೆ ಯಾಗಿದೆ ಅಲ್ಲಿ ವಾಹನಗಳು ನಿರಂತರ ಸಾಗುತ್ತಲೇ ಇರುತ್ತವೆ ಸಾಮಾನ್ಯ ಜನರಿಗೂ ಅಲ್ಲಿ ರಸ್ತೆ ದಾಟುವುದು ಕಷ್ಟದ ವಿಚಾರ ಅನೇಕ ವೃದ್ಧರು ಅಂಗ ವಿಕಲರು ರಸ್ತೆ ದಾಟಲಾಗದೆ ಒದ್ದಾಡುತ್ತಾ ಇದ್ದರು ಅಂತಹವರನ್ನು ನೋಡಿದ ತಕ್ಷಣವೇ ರಾಜು ಅವರು ಎದ್ದು ಹೋಗಿ ಕೈ ಹಿಡಿದು ರಸ್ತೆ ದಾಟಿಸುತ್ತಾ ಇದ್ದರು ವಯಸ್ಸಾದವರಿಗೆ ಬಸ್ ನಂಬರ್ ನೋಡಿ ಅವರು ಹೋಗಬೇಕಾದ ಬಸ್ ಅನ್ನು ಹತ್ತಿಸುತ್ತಾ ಇದ್ದರು ಹಾಗೆ ಬಸ್ ಹತ್ತಿಸುತ್ತಾ ಇದ್ದವರಲ್ಲಿ ತೀರ ವಯಸ್ಸಾದ ಓರ್ವ ಭಿಕ್ಷುಕಿ ಕೂಡ ಇದ್ದರು ಅವರನ್ನು ಬಸ್ ಹತ್ತಿಸಿರುವುದನ್ನು ನಾನೇ ಅನೇಕ ಬಾರಿ ನೋಡಿರುವೆ ಇವರಾರು ಇವರ ಸಂಬಂಧಿಕರಾಗಲಿ ಪರಿಚಿತರಾಗಲಿ ಅಲ್ಲ ವೈಯಕ್ತಿಕ ವಾಗಿ ಅವರು ಯಾರೆಂದು ಇವರಿಗೆ ತಿಳಿದಿಲ್ಲ ಆದರೆ ಅವರು ಮಾಡುತ್ತಿದ್ದ ಸಹಾಯ ಅವರ ಉನ್ನತ ಮಟ್ಟದ ವ್ಯಕ್ತಿತ್ವ ಹಾಗೂ ಔದಾರ್ಯವನ್ನು ತೋರುತ್ತಿದ್ದವು .ಆಗ ನನಗಿನ್ನೂ ಕಂಪ್ಯೂಟರ್ ಇಂಟರ್ನೆಟ್ ಪರಿಚಯವಿರಲಿಲ್ಲ ನಂತರ 2013 ರಲ್ಲಿ ಬ್ಲಾಗ್ ಬರೆಯಲು ಆರಂಭಿಸಿದಾಗ ಬಸ್ ಸ್ಟಾಂಡ್ ಗಳಲ್ಲಿ ವೃದ್ದರು ಅಂಗವಿಕಲರು ಬಸ್ ಹತ್ತಲು  ರಸದತೆ ದಾಟಲು ಕಷ್ಟ ಪಡುವಾಗ ರಾಜು ಅವರು ನನ್ನ ಮನಪಟಲದಲ್ಲಿ ಪ್ರತ್ಯಕ್ಷರಾಗಿ ನಾನು ಅವರಂತೆಯೇ ಹೆಚ್ಚು ಅಲ್ಲದಿದ್ದರೂ ಇವರುಗಳಗೆ ನನ್ನಿಂದಾದ ಸಹಾಯ ಮಾಡಿರುವೆ .ಬದುಕಿನಲ್ಲಿ ಒಂದು ಬುಟ್ಟಿಯಲ್ಲಿ ಐವತ್ತು ಅರುವತ್ತು ಬಾಳೆ ಹಣ್ಣು ಇಟ್ಟುಕೊಂಡು ಬಸ್ ಸ್ಟಾಪ್ ಬಳಿ ಮರದ ಕೆಳಗೆ ಕುಳಿತು ಬಾಳೆ ಹಣ್ಣು ವ್ಯಾಪಾರ ಮಾಡುತ್ತಿದ್ದ ಯುವಕ ರಾಜು ಸಿರಿವಂತರಲ್ಲ ಆದರೆ ಅವರ ಹೃದಯ ಶ್ರೀಮಂತಿಕೆಗೆ ಮಿತಿಯೇ ಇಲ್ಲ ಅಭಿನಂದನೆಗಳು ರಾಜು ನಿಮ್ಮಂತವರ ಸಂಖ್ಯೆ ಕೋಟಿಯಾಗಲಿ ಎಂದು ಹಾರೈಸುವೆ 

ಕಾಲನ ವೇಗಕ್ಕೆ ಹೆಜ್ಜೆ ಹೊಂದಿಸೋಣ © ಡಾ ಲಕ್ಷ್ಮೀ ಜಿ ಪ್ರಸಾದ

ಕಾಲನ ವೇಗಕ್ಕೆ ಹೆಜ್ಜೆ ಹೊಂದಿಸಬೇಕು.

ನಿನ್ನೆ ಗಡಿನಾಡು ಹೊರನಾಡು ಬರಹಗಾರರ ಸ್ಪಂದನ ವೇದಿಕೆಯಡಿಲ್ಲಿ ಇಪ್ಪತ್ತೆರಡು ಬರಹಗಾರರ ಮೂವತ್ತೆರಡು ಪುಸ್ತಕಗಳ ಬಿಡುಗಡೆ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆಯಿತು
ನಾನು ಗಡಿನಾಡಿವಳಾಗಿದ್ದರೂ ಅಲ್ಲಿನ ಹೆಚ್ಚಿನ ಬರಹಗಾರರ ಪರಿಚಯ ನನಗಿಲ್ಲ ವಸಂತಕುಮಾರ್ ಪೆರ್ಲ ಅವರ ಪುಸ್ತಕ ಬಿಡುಗಡೆಯೂ ಇದ್ದು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು ಗಡಿನಾಡು ಹೊರನಾಡು ಬರಹಗಾರರರನ್ನು ಪರಿಚಯಮಾಡಿಕೊಳ್ಳುವ ಸಲುವಾಗಿ ನಾನು ಹೋದೆ ( ಹಾಗಾಗಿ ೆ ನಯನ ಸಭಾಂಗಣದಲ್ಲಿ ನಡೆದ ಪ್ರತಿಭೋತ್ಸವಕ್ಕೆ ಹೋಗಲಾಗಲಿಲ್ಲ) ಕಾರ್ಯಕ್ರಮ ಮುಗಿದು ಊಟದ ಹೊತ್ತಿನಲ್ಲಿ ಎಷ್ಟು ಪುಸ್ತಕಗಳು ಮಾರಾಟವಾದವು ಎಂದು ವಿಚಾರಿಸಿದೆ ,ಮೂವತ್ತು ಮೂವತ್ತ ಮೂರು ಪುಸ್ತಕಗಳು ಮಾರಾಟವಾಗಿವೆ ಎಂದು ತಿಳಿಯಿತು  ಕಾರ್ಯಕರ್ಮಕ್ಕೆ ನೂರಕ್ಕಿಂತ ಹೆಚ್ಚಿನ ಜನರು ಬಂದಿದ್ದರೂ ಮೂವತ್ತ ಮೂರು ಪುಸ್ತಕಗಳು ಪ್ರಕಟವಾಗಿದ್ದರೂ ಮಾರಾಟವಾದ ಪುಸ್ತಕಗಳು ಮೂವತ್ತಮೂರರಷ್ಟು ಮಾತ್ರವೇ
ಈ ಬಗ್ಗೆ ಅಲ್ಲಿ ಬಂದಿದ್ದ ಬೆಂಗಳೂರು ಯುನಿವರ್ಸಿಟಿ ಮೈಕ್ರೋ ಬಯೋಲಜಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ರಾದ ಶಂಕರ್ ಭಟ್ ಅವರಲ್ಲಿ ಮಾತನಾಡುವಾಗ ಈಗ ಪುಸ್ತಕಗಳನ್ನು ಓದುವವರಿಲ್ಲ ಎಂಬ ವಿಷಯ ಚರ್ಚೆಗೆ ಬಂತು . 2013 ರ  ಒಳಗೆ ನನ್ನ ಇಪ್ಪತ್ತು ಪುಸ್ತಗಳು ಪ್ರಕಟವಾಗಿವೆ ನಂತರ ಪುಸ್ತಕ ಪ್ರಕಟಿಸುವ ಸಾಹಸಕ್ಕೆ ಕೈಹಾಕಿಲ್ಲ ಪ್ರಕಟಿಸಬಾರದೆಂದೇನೂ ನನಗಿಲ್ಲ ಆದರೆ ಬ್ಲಾಗ್ ಮೂಲಕ ಬರೆಯುತ್ತಿರುವ ಕಾರಣ ಎರಡು ಲಕ್ಷಕ್ಕಿಂತ ಹೆಚ್ಚಿನ ಓದುಗರು ಓದಿದ್ದಾರೆ ಬ್ಲಾಗ್ ಎಲ್ಲರಿಗೂ ಉಚಿತವಾಗಿ ಸಿಗುತ್ತದೆ ಇದು ಪ್ರಪಂಚದ ಎಲ್ಲ ದೇಶದ ಜನರಿಗೂ ಕ್ಷಣಮಾತ್ರದಲ್ಲಿ ತಲುಪುತ್ತದೆ ಹಾಗಾಗಿ ನನಗೆ ಓದುಗರ ಕೊರತೆಯಿಲ್ಲ  ನನ್ನ ಪ್ರಕಟಿತ ಇಪ್ಪತ್ತು  ಪುಸ್ತಕಗಳಲ್ಲಿ  ಹನ್ನೆರಡನ್ನು ನಾನು ಸ್ವತಃ ಪ್ರಕಟಿಸಿದ್ದು ಸರಿಯಾಗಿ ಪುಸ್ತಕ ಬಿಡುಗಡೆ ಕೂಡ ಮಾಡದಿದ್ದರೂ ಕೂಡ ಮಾರಾಟದ ಸಮಸ್ಯೆ ನನಗೆ ಬರಲಿಲ್ಲ ನನ್ನ ಹೆಚ್ಚಿನ ಕೃತಿಗಳ ಮೂರು ನಾಲ್ಕು ಪ್ರತಿ ಮಾತ್ರ ನನ್ನಲ್ಲಿ ಉಳಿದಿವೆ ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು ಮತ್ತು ಅರಿವಿನಂಗಳದ ಸುತ್ತ ಪುಸ್ತಕ ಗಳ ಎಲ್ಲಾ ಪ್ರತಿಗಳು ಮುಗಿದು ಅಂಗಡಿಗಳಲ್ಲಿ ಹೋಗಿ ಇದ್ದ ಒಂದೆರಡು ಪ್ರತಿಗಳನ್ನು ನಾನು ಮತ್ತೆ ಖರೀದಿಸಿ ತಂದು ಇಟ್ಟು ಕೊಂಡಿರುವೆ ಆದರೂ ಈಗ ಪುಸ್ತಕ ಪ್ರಕಟಣೆಗೆ ಕೈ ಹಾಕಲು ಅಳುಕಾಗುತ್ತಿದೆ ಹಾಗಾಗಿ ಬ್ಲಾಗ್ ಅನ್ನು ಆಶ್ರಯಿಸಿರುವೆ   ಬ್ಲಾಗ್ ಇಷ್ಟು ಜನಪ್ರಿಯ ಮಾದರಿ ಎಂದು ಆರಂಭಿಸಿದಾಗ ನನಗೂ ಗೊತ್ತಿರಲಿಲ್ಲ ನಿನ್ನೆ ಶಂಕರ್  ಭಟ್ ಅವರಲ್ಲಿ ಮಾತಾಡುವಾಗ ಅವರೂ ಅದನ್ನು ಒಪ್ಪಿದರು ಬಹುಶಃ ಬರಹಗಾರರು ತಮ್ಮ ಬರಹವನ್ನು ಆಸಕ್ತರಿಗೆ ತಲುಪಿಸಲು ಬ್ಲಾಗ್ ನಂತ ಹೊಸ ದಾರಿಯನ್ನು ಅನುಸರಿಸುವುದು ಅನಿವಾರ್ಯವಾಗಿ ಬಿಡುತ್ತದೆಯೋ ಏನೋ ಎಂದು ನನಗೆ ಆಗ ಅನಿಸಿತು ಬಹುಶಃ ಕಾಲನ ಓಟಕ್ಕೆ ಸಮಾನವಾದ ವೇಗದಲ್ಲಿ ಹೆಜ್ಜೆ ಇಡುವುದು ಇಂದಿನ ಅಗತ್ಯ ಅದು ಬರಹಗಾರರಿಗೂ ಅನ್ವಯವಾಗುತ್ತದೆ ಅಲ್ಲವೇ ?
ಅಂದಹಾಗೆ ವಸಂತಕುಮಾರ್ ಪೆರ್ಲ ಅವರ  "ಏರುತ್ತೇರುತ್ತ ಶಿಖರ "ಎಂಬ ಪುಸ್ತಕ ದಲ್ಲಿ ನನ್ನ ಸುಬ್ಬಿ ಇಂಗ್ಲಿಷ್ ಕಲ್ತದು ಮತ್ತು ಇತರ ನಾಟಕಗಳು ಕೃತಿಗೆ ಅವರು ಬರೆದಬರಹ ( ಮುನ್ನುಡಿ ಬರಹ) ಕೂಡ ಇದೆ

ದೊಡ್ಡವರ ದಾರಿ -14 ನಿಷ್ಪಾಕ್ಷಿಕ ಮನೋಭಾವದ ಮೇಷ್ಟ್ರುಡಾ ಗೀತಾಚಾರ್ಯ ©ಡಾ ಲಕ್ಷ್ಮೀ ಜಿ ಪ್ರಸಾದ



ಬೆಂಗಳೂರಿಗೆ ಬಂದ ಮರುದಿನವೇ ನಡೆದ walk in interview ನಲ್ಲಿ ಕೊನೆಯ ಅಭ್ಯರ್ಥಿಯಾಗಿ ಸಂದರ್ಶನ ಎದುರಿಸಿ ಎ ಪಿ ಎಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಆಯ್ಕೆಯಾಗಿದ್ದೆ .ಕೆಲಸಕ್ಕೆ ಸೇರಿದ ದಿನವೇ ಪಿಎಚ್ ಡಿ ಮಾಡುವಂತೆ ಸಲಹೆ ನೀಡಿದವರು ಅಲ್ಲಿನ ಪ್ರಿನ್ಸಿಪಾಲ್ ಡಾ ಕೆ ಗೋಕುಲನಾಥರು ( ಅವರ ಬಗ್ಗೆ ಈ ಹಿಂದೆಯೇ ಬರೆದಿರುವೆ)
ಕೆಲಸಕ್ಕೆ ಸೀರಿದ ಕೆಲವೇ ದಿನಗಳಲ್ಲಿ ಹಂಪಿ ವಿಶ್ವ ವಿದ್ಯಾಲಯವು ಡಾಕ್ಟರೇಟ್ ಮಾಡಲು ಬಯಸುವವರಿಂದ ಅರ್ಜಿ ಅಹ್ವಾನಿಸಿತ್ತು
ಅದು ನನ್ನ ಗಮನಕ್ಕೆ ಬಂದಿರಲಿಲ್ಲ .ಆದರೂ ಅದನ್ನು ಗಮನಿಸಿದ ಡಾ ಕೆ ಗೋಕುಲನಾಥರು ನನ್ನ ನ್ನು ಕರೆದು ನೀವು ಡಾಕ್ಟರೇಟ್ ಮಾಡುವುದಾದರೆ ಹಂಪಿ ಯುನಿವರ್ಸಿಟಿ ಅರ್ಜಿ ಆಹ್ವಾನ ಮಾಡಿದೆ ಇಲ್ಲಿಯೇ ಮೂರನೇ ಅಡ್ಡರಸ್ತೆಯಲ್ಲಿ ಬಿ ಎಂ ಶ್ರೀ ಪ್ರತಿಷ್ಠಾನ ಇದೆ ಅದು ಹಂಪಿ ಯುನಿವರ್ಸಿಟಿಯ ಅಧಿಕೃತ ಅದ್ಯಯನ ಕೇಂದ್ರ ಅಲ್ಲಿಗೆ ಅರ್ಜಿ ಸಲ್ಲಿಸಿ ಎಂದು ತಿಳಿಸಿದರು
ಅವರು ಹೇಳಿದಂತೆ ಎನ್ ಆರ್ ಕಾಲೊನಿ ಮೂರನೇ ಮುಖ್ಯ ರಸ್ತೆಯ ಲ್ಲಿರುವ ಬಿ ಎಂ ಶ್ರೀ ಪ್ರತಿಷ್ಠಾನಕ್ಕೆ ಬಂದು ಅರ್ಜಿ ಪಡೆದು ಫೀಸ್ ತುಂಬಿ ಅರ್ಜಿ ಸಲ್ಲಿಸಿ ಬಂದೆ .
ಕೆವು ದಿನಗಳ ನಂತರ ಲಿಖಿತ ಪರೀಕ್ಷೆ ಮತ್ತು ಮೌಖಿಕ‌ಪರೀಕ್ಷೆ ಇರುತ್ತದೆ ಎಂದು ಅಲ್ಲಿನ ಸಿಬ್ಬಂದಿ ರಾಜಮ್ಮ ಅವರು ತಿಳಿಸಿದರು
ಹಾಗಾಗಿಯೇ ತಕ್ಷಣವೇ ಯಾವ ವಿಷಯದಲ್ಲಿ ಪಿಎಚ್ ಡಿ ಎಂದು ಮಾಡುವುದೆಂದು ಆಲೋಚಿಸಿದೆ ತುಳು ಜಾನಪದ ಸಂಶೋಧನಾ ಕೃತಿ ಗಳನ್ನು ಓದಿದೆ ಡಾ ಅಮೃತ ಸೋಮೇಶ್ವರ ಡಾ ಬಿಎ ವಿವೇಕ ರೈ ಡಾ ಸುಶೀಲ ಉಪಾಧ್ಯಾಯರ ಕೃತಿಗಳಲ್ಲಿ ನಾಗಬ್ರಹ್ಮ ದೈವದ ಕುರಿತು ಅಧ್ಯಯನ ವಾಗಬೇಕಾದ ಅಗತ್ಯವನ್ನು ತಿಳಿಸಿದ್ದು ಆ ಬಗ್ಗೆ ಯೇ ಮಾಡುವುದೆಂದು ತೀರ್ಮಾನಿಸಿದೆ ,ಲಿಖಿತ ಪರೀಕ್ಷೆಯ ಹಳೆಯ ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಬಂದು ನನ್ನದೇ ಆದ ರೀತಿಯ ತಯಾರಿ ಮಾಡಿಕೊಂಡೆ
ಅಂತೂ ಕಾಯುತ್ತಿದ್ದ ಆ ದಿನ ಬಂತು ಪರೀಕ್ಷೆ ಬರೆದೆ ಮಧ್ಯಾಹ್ನ ಮೇಲೆ ಮೂವತ್ತೈದು ಜನರಿಗೆ ಮೌಖಿಕ ಪರೀಕಗಷೆಗೆ ಬರಲು ತಿಳಿಸಿದರು
ಒಬ್ಬರಾಗಿ ಒಬ್ಬರು ಸಂದರ್ಶನ ಕೊಠಡಿಗೆ ಹೋಗುತ್ತಾ ಇದ್ದರು ಒಬ್ಬರು ಧ್ವನಿ ಕೂಡ ಕೇಳುತ್ತಾ ಇರಲಿಲ್ಲ ಹೊರ ಬಂದವರಲ್ಲಿ ಏನು ಕೇಳಿದರೆಂದು ಕೇಳಿದಾಗ ನಾವು ಆಯ್ಕೆ ಮಾಡಿದ ವಿಷಯದ ಬಗ್ಗೆ ಕೇಳಿದರು ಎಂದು ತಿಳಿಸಿದರು ಒಳಗೆ ಯಾರಿದ್ದಾರೆ ಎಂದು ಕೇಳಿದಾಗ ಡಾ ಗೀತಾಚಾರ್ಯ, ಡಾ ಮಲ್ಲೇಪುರಂ,ಬಸವರಾರಾಧ್ಯ ಇದ್ದಾರೆ ಎಂದು ಹೇಳಿದರು ಆಗಷ್ಟೇ ಬೆಂಗಳೂಇಗೆ ಬಂದಿದ್ದ ನನಗೆ ಇವರ್ಯಾರೂ ಗೊತ್ತಿರಲಿಲ್ಲ ಅಲ್ಲಿಗೆ ಬಂದ ಅಭ್ಯರ್ಥಿಗಳಲ್ಲಿ ಅನೇಕ ರಿಗೆ ಇವರುಗಳ ಪರಿಚಯವಿತ್ತು ಹಾಗಾಗಿ ನಾನು ಆಯ್ಕೆ ಆಗುವ ಬಗ್ಗೆ ನನಗೆ ನಂಬಿಕೆ ಇರಲಿಲ್ಲ .ಒಂದು ಕ್ಷಣ ಸಂದರ್ಶನ ಕ್ಕೆ ಹಾಜರಾಗುವುದು ಬೇಡ ಮನೆಗೆ ಗೋಗಿ ಬಿಡಲೇ ಎನಿಸಿತು .ಆದರೂ ಹೇಗೂ ಬಂದಿರುವೆ ಸಂದರ್ಶನ ಎದುರಿಸಿಯೇ ಹೋಗೋಣ ಎಂದು ನಿರ್ಧರಿಸಿ ನನ್ನ ಸರದಿಗೆ ಕಾದೆ ಕೊನೆಯವಳಾಗಿ ನನಗೆ ಒಳಗೆ ಬರಲು ಆಹ್ವಾನ ಬಂತು .ಯಾವ ಬಗ್ಗೆ ಡಾಕ್ಟರೇಟ್ ಮಾಡುತ್ತೀರಿ ಎಮದಾಗ ಭೂತಾರಾಧನೆ ಬಗ್ಗೆ ಎಂದು ತಿಳಿಸಿದೆ ಆಗ ಭೂತಾರಾಧನೆ ಬಗ್ಗೆ ಈಗಾಗಲೇ ಡಾ ಬಿ ಎ ವಿವೇಕ ರೈ ಡಾ ಚಿನ್ನಪ್ಪ ಗೌಡ ಮೊದಲಾದವರು ಮಾಡಿದ್ದಾರಲ್ಲ ಅದರಲ್ಲಿ ಇನ್ನೇನಿದೆ ಮಾಡಲು ಎಂದು ಡಾ ಗೀತಾಚಾರ್ಯ ( ಆಗ ಅವರು ಯಾರೆಂದು ತಿಳಿದಿರಲಿಲ್ಲ) ಕೇಳಿದಾಗ ಒಂದಿನಿತು ತಬ್ಬಿಬ್ಬುಗೊಂಡೆ.ಮತ್ತೆ ಸಾವರಿಸಿಕೊಂಡು ತುಳುನಾಡಿನಲ್ಲಿ ಅನೇಕ ಭೂತಗಳಿವೆ ಕಲ್ಲುರ್ಟಿ ಮಲರಾಯ ಪಂಜುರ್ಲಿ ಇತ್ಯಾದಿ ಇವರೆಲ್ಲರನ್ನೂ ಏಕವಚನದಲ್ಲಿ ಕಲ್ಕುಡೆ ಮಲರಾಯೆ ಎಂದು ಕರೆಯುತ್ತಾರೆ ಆದರೆ ನಾಗ ಬ್ರಹ್ಮ ನನ್ನು ನಾಗಬೆರ್ಮೆರ್ ಎಂದು ಬಹುವಚನ ಬಳಸಿ ಕರೆಯುತ್ತಾರೆ ಅಲ್ಲದೆ ಈತ ಯಕ್ಷ ಬ್ರಹ್ಮ ನೇ,ಸೃಷ್ಟಿ ಕರ್ತೃ ಬ್ರಹ್ಮ ನೇ ಭೂತ ಬ್ರಹ್ಮ ನೇ ಯಾರೆಂದು ಈ ತನಕ ತಿಳಿದಿಲ್ಲ ಈತನ ಬಗ್ಗೆ ಅಧ್ಯಯನ ವಾಗಬೇಕೆಂದು ಡಾ ಅಮೃತ ಸೋಮೇಶ್ವರ ಹಾಗೂ ಡಾ ಬಿಎ ವಿವೇಕ ರೈಗಳು ಬರೆದಿರುವ ಬಗ್ಗೆ ಪುಸ್ತಕ ದ ಹೆಸರು ಪುಟಸಂಖ್ಯೆ ತಿಳಿಸಿ ಹೇಳಿದೆ
ಸರಿ ಮುಂದೆ ಫಲಿತಾಂಶವನ್ನು ಹದಿನೈದು ದಿನಗಳಲ್ಲಿ ತಿಳಿಸುತ್ತೇವೆ ಎಂದು ಅಲ್ಲಿ ಹೇಳಿದರು
ಆಗ ಬಿ ಎಂ ಶ್ರೀ ಪ್ರತಿಷ್ಠಾನ ದ ಗೈರವ ಕಾರ್ಯದರ್ಶಿಯಾಗಿ ಇದ್ದವರು ಡಾ ಗೀತಾಚಾರ್ಯ .ಎಲ್ಲರ ಆಯ್ಕೆ ಮಲ್ಲೇಪುರಂ ವೆಂಕಟೇಶ ಮತ್ತು ಗೀತಾಚಾರ್ಯ ಕೈಯಲ್ಲಿದೆ ಎಂದು ಬಂದ ಅಭ್ಯರ್ಥಿಗಳು ಮಾತಾಡುತ್ತಾ ಇದ್ದರು .ನಾನಂತೂ ಭರವಸೆ ಕಳೆದು ಕೊಂಡಿದ್ದೆ ಅಲ್ಲದೆ ಹೊರಗೆ ಕುಳಿತ ಅಭ್ಯರ್ಥಿಗಳು ನೀವು ಒಳಗಡೆ ತುಂಬಾ ದೊಡ್ಡಕೆ ಮಾತಾಡಿದಿರಿ ಅಷ್ಟು ದೊಡ್ಡವರ ಎದುರು ಹೀಗೆ ಮಾತಾಡಿದ್ದು ಸರಿಯಲ್ಲ ಎಂದು ಬೇರೆ ಹೇಳಿದರು ನನಗೆ ಅರಿವೇ ಇಲ್ಲದೆ ಧ್ವನಿ ದೊಡ್ಡದಾಗಿರಬೇಕು
ಅಂತೂ ಪೂರ್ತಿ ಭರವಸೆ ಬಿಟ್ಟು ಮನೆಗೆ ಬಂದಿದ್ದೆ ‌ಮರುದಿನ ನಮ್ಮ ಪ್ರಿನ್ಸಿಪಾಲ್ ಗೋಕುಲನಾಥರಲ್ಲಿಯೂ ಈ ಬಗ್ಗೆ ಹೇಳಿ ಆಯ್ಕೆಯಾಗುವುದು ಕಷ್ಟ ಎಂದು ಹೇಳಿದ್ದೆ ಆಗ ಅವರು ಮಲ್ಲೇಪುರಂ ಮತ್ತು ಗೀತಾಚಾರ್ಯ ಬಹಳ ಬಿಗಿ ಆದರೆ ನಿಷ್ಪಕ್ಷಪಾತ ಧೋರಣೆಯವರು ನೀವು ನಿಜಕ್ಕೂ ಚೆನ್ನಾಗಿ ಬರೆದಿದ್ದು ಸಂದರ್ಶನ ಚೆನ್ನಾಗಿ ಮಾಡಿದ್ದರೆ ಆಯ್ಕೆ ಆಗುವಿರಿ ಎಂದು ತಿಳಿಸಿದರು .
ಹದಿನೈದು ದಿನ ಬಿಟ್ಟು ಬಿಎಂಶ್ರೀ ಪ್ರತಿಷ್ಠಾನ ಕ್ಕೆ ಫಲಿತಾಂಶ ತಿಳಿಯಲು ಹೋದೆ ಹೋಗುವಾಗ ನನಗೆ ಎದುರಾಗಿ ಜುಬ್ಬಾ ಧರಿಸಿದ ,ಸಂದರ್ಶನ ದಲ್ಲಿ ಇದ್ದ ಒಬ್ಬರು ಎದುರಾಗಿದ್ದರು ನನ್ನು ನೋಡಿ ಮುಗುಳು ನಕ್ಕರೂ ಅವರು ಯಾರೆಂದು ತಿಳಿಯದ ನಾನು ನಮಸ್ಕರಿಸಲಿಲ್ಲ
ಪ್ರತಿಷ್ಠಾನ ದ ಒಳಗೆ ಹೋಗಿ ಫಲಿತಾಂಶ ಕೇಳಿದೆ ನೀವು ಗೀತಾಚಾರ್ಯ ರನ್ನು ಕೇಳಿ ಎಂದು ಹೇಳಿದರು ಅವರು ಯಾರು ಎಂದು ಕೇಳಿದೆ ಈಗ ನಿಮ್ಮ ಎದುರು ಹೋದರಲ್ಕ ಅವರೇ ಗೀತಾಚಾರ್ಯ ಅವರು ಈ ಪ್ರತಿಷ್ಠಾನ ದ ಗೌರವ ಕಾರ್ಯದರ್ಶಿ ಎಂದು ಹೇಳಿದರು .ಸರಿ ಎಂದು ಅವರು ಕುಳಿತಲ್ಲಗೆ ಹೋಗಿ ಕೇಳಿದೆ ನೀವು ಲಕ್ಷ್ಮೀ ಅಲ್ವಾ ? ನಿಮ್ಮ ಆಯ್ಕೆ ಆಗಿದೆ ಎಂದು ಹೇಳಿ‌ ಮುಂದೆ ಮಾಡಬೇಕಾದ ಪ್ರಕ್ರಿಯೆ ಗಳ ಬಗ್ಗೆ ಮಾಹಿತಿ ನೀಡಿದರು
ಅಂತೂ ನಾನು ಯಾರ ಪರಿಚಯ ಪ್ರಭಾವ ಇಲ್ಲದಿದ್ದರೂ ಆಯ್ಕೆ ಆಗಿದ್ದೆ ಅದಕ್ಕೆ ನಿಷ್ಪಾಕ್ಷಿಕವಾಗಿ ಪ್ರತಿಭೆಯನ್ನು ಮಾನದಂಡವಾಗಿ ಸ್ವೀಕರಿಸಿ ಆಯ್ಕೆ ಮಾಡಿದ ಮಲ್ಲೇಪುರಂ ವೆಂಕಟೇಶ ಮತ್ತು ಡಾ ಗೀತಾಚಾರ್ಯ ಕಾರಣರಾಗಿದ್ದರು
ತುಳು ಸಂಶೋಧನಾ ಕ್ಷೇತ್ರ ಕ್ಕೆ ಕಾಲಿರಿಸಲು ಸಹಾಯ ಮಾಡಿದ ಇವರುಗಳಿಗೆ ಆಭಾರಿಯಾಗಿದ್ದೇನೆ ಮಲ್ಲೇಪುರಂ ಬಗ್ಗೆ ಇನ್ನೂ ಬರೆಯಲಿದೆ ಇನ್ನೊಂದು ಸರಣಿಯಲ್ಲಿ ಅವರ ಬಗ್ಗೆ ಬರೆಯುವೆ
©ಡಾ ಲಕ್ಷ್ಮೀ ಜಿ ಪ್ರಸಾದ 

ನಾನು ತುಳುನಾಡಿನವಳು © ಡಾ ಲಕ್ಷ್ಮೀ ಜಿ ಪ್ರಸಾದ



ನಾನ್ಯಾವ ನಾಡಿನವಳು ?
ಹೀಗೊಂದು ಜಿಜ್ಞಾಸೆ ಸದಾ ನನ್ನನ್ನು ಕಾಡುತ್ತಾ ಇರುತ್ತದೆ .ನನ್ನ ಊರು ಯಾವುದು ಎಂದು ಕೇಳಿದಾಗ ನಾನು ಕೊಡುವುದು ನನ್ನ ತಂದೆ ಮನೆ ಕಾಸರಗೋಡು ಜಿಲ್ಲೆಯ  ಕೋಳ್ಯೂರು ಎಂಬ ಪುಟ್ಟ ಗ್ರಾಮದ ವಾರಣಾಸಿ ಮನೆ ಬಗ್ಗೆ
ಕೇಳುವವರಲ್ಲಿ ನನ್ನ ಗಂಡನ ಮನೆ ಯಾವುದು ಎಂಬ ಕುತೂಹಲ ಕಂಡರೆ ನಾನು ಅದನ್ನು ನೇರವಾಗಿ ಹೇಳುತ್ತೇನೆ ನನ್ನ ಗಂಡ ಪ್ರಸಾದ್ ಮನೆ ಬಂಟ್ವಾಳ ತಾಲೂಕಿನ  ಕೋಡಪದವಿನ ಸರವು ಎಂಬ ಮನೆ ಇದು ನಮ್ಮ ಕುಟುಂಬದ ಮನೆಯ ಹೆಸರಲ್ಲ ನನ್ನ ಪತಿಯ ಅಜ್ಜ ಎಲ್ಲಿಂದಲೋ ಬಂದು ಕೋಡಪದವು ಸಮೀಪದ ಪಂಜಿಗದ್ದೆ ಎಂಬ ಪರಿಸರದ ಒಂದಷ್ಟು ಜಾಗ ಖರೀದಿಸಿ ನೆಲೆಯಾದವರು ಅವರು ತೀರ ಸಣ್ಣ ವಯಸ್ಸಿನಲ್ಲಿ ತೀರಿ ಹೋದ ಕಾರಣ ಅವರ ಮಕ್ಕಳಿಗೆ ಅವರ ಮೂಲ ಯಾವುದು ಎಂದು ತಿಳಿದಿಲ್ಲ ಮನೆದೇವರು ಕೂಡ ಯಾರೆಂದು ತಿಳಿದಿಲ್ಲ ಅಲ್ಲಿಂದ ಆಸ್ತಿ ಭಾಗವಾಗಿ ಅಲ್ಲಿಂದ ಎರಡು ಕಿಮೀ ದೂರದ ಸರವು ಎಂಬ ಪ್ರದೇಶದಲ್ಲಿ ಸ್ವಲ್ಪ ಜಾಗ ಪಡೆದು ನೆಲೆಯಾದವರು ನನ್ನ ಪ್ರಸಾದ ತಂದೆಯವರು ನಾನು ಮದುವೆಯಾಗಿ ಬಂದದ್ದು ಇದೇ ಮನೆಗೆ ಬಂದದ್ದು ಮಾತ್ರ ಅಲ್ಲಿ ಬದುಕಿದ್ದು ಬೆರಳೆಣಿಕೆಯಷ್ಟು ದಿನಗಳು
ಇಪ್ಪತ್ತೈದು ವರ್ಷಗಳ ಹಿಂದೆ ಮದುವೆಯಾದ ಮೇಲೆ ಓದಿಸುವ ಮನಸ್ಥಿತಿ ನಮ್ಮ ಸಮಾಜದಲ್ಲಿ ಇರಲಿಲ್ಲ ನಮ್ಮ ಕುಟುಂಬದ ಮಂದಿಯೂ ಅದಕ್ಕೆ ಹೊರತಾಗಿ ಇರಲಿಲ್ಲ ಇದೇ ಕಾರಣಕ್ಕೆ ನಾನು ಪ್ರಸಾದ ಒಂದಿಗೆ ಮನೆ ಬಿಟ್ಟು ಹೊರ ನಡೆದು ನಾನು ಓದುವ ಕಟೀಲು ಕಾಲೇಜು ಬಳಿ ಮನೆ ಮಾಡಿ ಸಂಸಾರ ಪ್ರಾರಂಭಿಸಿದೆವು ಅನೇಕ ಏಳು ಬೀಳುಗಳನ್ನೂ ಕಂಡೆವು ಅಲ್ಲಿದ್ದದ್ದು ಒಂದೇ ವರುಷ ಅಲ್ಲಿಂದ ಮತ್ತೆ ಮಂಗಳೂರಿನಲ್ಲಿ ಹತ್ತು ವರ್ಷ ಬದುಕಿದೆವು ಹೊಟ್ಟೆಪಾಡಿಗಾಗಿ ಉದ್ಯೋಗ ಅರಸುತ್ತಾ ಪ್ರಸಾದ ಬೆಂಗಳೂರಿಗೆ ಸಪ್ಟೆಂಬರ್ 2004 ರಲ್ಲಿ ಬಂದಾಗ ನಾನು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸಂಸ್ಕೃತ ಉಪನ್ಯಾಸಕಿಯಾಗಿದ್ದೆ
ಶೈಕ್ಷಣಿಕ ವರ್ಷದ ಮಡುವೆ ಕೆಲಸ ಬಿಡುವುದು ಸರಿಯಲ್ಲ ವೆಂದು ಮಾರ್ಚ್ 2005 ರ ತನಕ ಕೆಲಸದಲ್ಲಿ ಮುಂದುವರಿದು ಪ್ರಥಮ ಪಿಯುಸಿ ಮೌಲ್ಯ ಮಾಪನ ಮಾಡಿ‌ಕೊಟ್ಟು ಕಾಲೇಜು  ಮ್ಯಾಗಜೀನ್ ಕೆಲಸವನ್ನು ಮುಗಿಸಿಕೊಟ್ಟು ಗೌರವದಿಂದ ಅಲ್ಲಿಂದ ರಿಲೀವ್ ಆಗಿ ಬೆಂಗಳೂರಿಗೆ ಬಂದೆ ಬಂದ ಮರುದಿನವೇ ಎಪಿಎಸ್ ಕಾಲೇಜಿನ ಕನ್ನಡ ಉಪನ್ಯಾಸಕ ಹುದ್ದೆಗೆ walk in interview ಇದ್ದದ್ದು ಗೊತ್ತಾಗಿ ಮಗನನ್ನು ಗಾಡಿಯಲ್ಲಿ ಕೂರಿಸಕೊಂಡು ವಿಳಾಸ ಹುಡುಕುತ್ತಾ ಎನ್ ಆರ್ ಕಾಲೋನಿಗೆ ತಡವಾಗಿ ಬಂದು ಕೊನೆಯ ಅಭ್ಯರ್ಥಿಯಾಗಿ ಸಂದರ್ಶನ ಎದುರಿಸಿ ಆಯ್ಕೆಯಾದೆ
ಬನಶಂಕರಿ ತೃತೀಯ ಬಡಾವಣೆಯಲ್ಲಿ ಬಾಡಿಗೆ ಮನೆ ಹಿಡಿದಿದ್ದೆವು
ಅಲ್ಲಿಂದ 2008 ರಲ್ಲಿ ಈಗಿನ  ಅಂಗೈ ಅಗಲದ ನಮ್ಮ ಪುಟ್ಟದಾದ ಸ್ವಂತ ಮನೆಗೆ ಬಂದೆವು ಮತ್ತೆ 2009 ರಲ್ಲಿ ಬೆಳ್ಳಾರೆಗೆ ಉಪನ್ಯಾಸಕಿಯಾಗಿ ಹೋದೆ 2015 ರಲ್ಲಿ ಮತ್ತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಕಾಲೇಜಿಗೆ ವರ್ಗಾವಣೆ ಪಡೆದು ಬಂದೆ
ಹಾಗಾಗಿ ನಮಗೆ ನಾವೆಲ್ಲಿಯವರುಎಂದು ಕೇಳಿದರೆ ಒಂದಿನಿತು ತಬ್ಬಿಬ್ಬಾಗುತ್ತೇನೆ ಕೊನೆಯಲ್ಲಿ ನಾನು "ತುಳುನಾಡಿನ ವರು "  ಎನ್ನುತ್ತೇನೆ
ಯಾಕೆಂದರೆ ನನ್ನ ಮಾತೃಭಾಷೆ ಹವ್ಯಕ ಕನ್ನಡ ವೃತ್ತಿ ಕನ್ನಡ ಉಪನ್ಯಾಸಕಿಯಾಗಿ, ಆದರೂ ನನ್ನನ್ನು ಸೆಳೆದದ್ದು ತುಳು ಸಂಸ್ಕೃತಿ ಕೈ ಹಿಡಿದು ಸಲಹಿದವಳು ತುಳುವಪ್ಪೆ
ಇಷ್ಟಾಗಿಯೂ ಇತ್ತೀಚೆಗೆ ಕನ್ನಡ ಜಾನಪದ ಪರಿಷತ್ ಮೈಸೂರು ವಿಭಾಗದಿಂದ ದಕ್ಷಿಣ ಕನ್ನಡ ಜಿಲ್ಲೆಯಿಂದ ನನ್ನನ್ನು ಜಾನಪದ ಪ್ರಪಂಚ ಪ್ರಶಸ್ತಿ ಗೆ ಆಯ್ಕೆಮಾಡಿದಾಗ ಅವರು ಕಾಸರಗೋಡಿನವರು ದಕ್ಷಿಣ ಕನ್ನಡ ಜಿಲ್ಲೆಯಿಂದ ಅವರನ್ನು ಆಯ್ಕೆ ಮಾಡಿದ್ದು ಸರಿಯಲ್ಲ ಎಂದು ಆಕ್ಷೇಪ ಮಾಡಿದ್ದು ತಿಳಿಯಿತು ತಕ್ಷಣವೇ ನಾನು ದಕ್ಷಿಣ ಕನ್ನಡ ಜಿಲ್ಲೆಯ  ಬಂಟ್ವಾಳ ತಾಲೂಕಿನ  ಮದುವೆಯಾಗಿ ಬಂದ ಮನೆಯ ನನ್ನ ಪತಿ ಪ್ರಸಾದ ಮನೆ ವಿಳಾಸ ಮತ್ತು ಇನ್ನೂ ಅಲ್ಲಿಯೇ ಓಟಿನ ಹಕ್ಕು ಇರುವ ಬಗ್ಗೆ ವೋಟರ್ಸ ಕಾರ್ಡಿನ ದಾಖಲೆ ಒದಗಿಸಿ ದಾಖಲೆ ಪ್ರಕಾರ ನಾನು ದಕ್ಷಿಣ ಕನ್ನಡ ಜಿಲ್ಲೆಯ ವಳು ಆದರೆ ಮಾನಸಿಕವಾಗಿ ನಾನು ಅಲ್ಲಿಯವಳಲ್ಲ ಅವರೆಂದೂ ನನ್ನನ್ನು ಸೊಸೆಯಾಗಿ ಸ್ವೀಕರಿಸಲಿಲ್ಲ ಅದನ್ನು ತಪ್ಪು ಎಂದು ದೂಷಿಸಲಾರೆ .ಸೆರಗು ತಲೆಗೆ ಹೊದ್ದು ಬೆಳಗ್ಗೆ ಎದ್ದು ಹೊಸಿಲಿ ಬರೆದು ಮನೆಯೊಳಗೆ ಗೃಹಿಣಿಯಾಗಿರುವ ಸೊಸೆಯನ್ನು ನಿರೀಕ್ಷಿಸಿದ ಸಂಪ್ರದಾಯ ವಾದಿ ಬ್ರಾಹ್ಮಣ ಕುಟುಂಬದ ಜನ ನಡು ರಾತ್ರಿ ನಢಯುವ ಭೂತಕೋಲವನ್ನು ರೆಕಾರ್ಡ್  ಕ್ಯಾಮರಾ ಹಿಡಿದುಕೊಂಡು ಜಾತಿ ನೀತಿ ಧರ್ಮದ ಗಡಿ ದಾಟಿ ಸಾಗುವ ನನ್ನಂಥ ಟಪೋರಿಯನ್ನು ಸೊಸೆಯಾಗಿ ಹೇಗೆ ತಾನೆ ಸ್ವೀಕರಿಸಿಯಾರು ಅಲ್ಲವೇ ?
ಬೆಂಗಳೂರು ಅನ್ನವನ್ನು ಕೊಟ್ಟ ಊರು ಎಂಬ ಕೃತಜ್ಞತೆ ಇರುವುದಾದರೂ ನಾನು ಬೆಂಗಳೂರಿನವಳು ಎಂಬ ಭಾವ ನನಗಿನ್ನೂ ಬಂದಿಲ್ಲ ಬಾರದೆ ಇರುವುದನ್ನು ಹೇಗೆ ಒಪ್ಪಲಿ ?
ಹಾಗಾಗಿ ನಾನು ಎಲ್ಲಿಯವಳು ಕೇಳಿದರೆ ಇಂದಿಗೂ ಹೇಳುವುದು ನಾನು ತುಳುನಾಡಿನವಳು ಗಡಿನಾಡಿನವಳು ಎಂದು .ಬೆಳ್ಳಾರೆಯಲ್ಲಿ ನಾಲ್ಕು ವರ್ಷಗಳ ಕಾಲ ಇದ್ದ ಕಾರಣ ನಾನು ಅಲ್ಲಿಯವಳೆಂದು ಅನೇಕರು ಭಾವಿಸಿದ್ದಾರೆ ಅದು ಕೂಡ ನನಗೆ ಅನ್ನ ಕೊಟ್ಟ ಊರು ಸಂಶೋಧನೆ ಗೆ ಇಂಬು ಕೊಟ್ಟ ಊರು ನನಗೊಂದು ಅಸ್ತಿತ್ವ ತಂದು ಕೊಟ್ಟ ಬೀಡು ಎಂಬ ಕೃತಜ್ಞತೆ ನಮಗಿದೆಯಾದರೂ ನಾನು ಅಲ್ಲಿಯವಳಲ್ಲ  ಕೆಲವರು ಡೆಲ್ಲಿ,ಮುಂಬೈ ಮಧುರೆ ಚೆನೈ ಯಲ್ಲಿ ಓದಿದ ಕೆಲಸ ಮಾಡಿ ಕಾರಣಕ್ಕೆ ಹೊರನಾಡಿವರು ಎಂದು ಕರೆಯಲ್ಪಡುತ್ತಾರೆ ಹಾಗೆ ನೋಡಿದರೆ   ನಾನು ಅಂದ್ರ ಪ್ರದೇಶದ ಕುಮಪ್ಪಂನಲ್ಲಿರುವ ದ್ರಾವಿಡ ವಿಶ್ವ ವಿದ್ಯಾಲಯದ ತುಳು ವಿಭಾಗದ ಮೊದಲ ವಿದ್ಯಾರ್ಥಿನಿ ನಾನು ಎರಡನೇಯ ಡಾಕ್ಟರೇಟ್ ಪಡೆದದ್ದು ಅಲ್ಲಿಂದಲೇ ಆ ಬಗ್ಗೆ ಯೂ ನನಗೆ ಕೃತಜ್ಞತೆ ಇದೆಯೇ ಹೊರತು ನಾನು ಹೊರನಾಡಿನವಳು ಎಂದು ಕರೆಸಿಕೊಳ್ಳಲಾರೆ  ಹಾಗಾಗಿಯೇ ನಾನು ತುಳುನಾಡಿನವಳು ಎಂದು ಹೆಮ್ಮೆಯಿಂದ ಹೇಳುವೆ
ಇದೆಲ್ಲಾ ಯಾಕೆ ನೆನಪಾಯಿತೆಂದರೆ ನಿನ್ನೆವೇದಿಕೆಯಲ್ಲಿ  ವಸಂತಕುಮಾರ್ ಪೆರ್ಲ ಅವರು ಗಡಿನಾಡಿನ ಆರುನೂರು ಬರಹಗಾರರ ಒಂದು ಪಟ್ಟಿಯನ್ನು ಮಾಡಿದ್ದು ಪ್ರಕಟವಾಗಿರುವ ಬಗ್ಗೆ ತಿಳಿಸಿದರು (ಈ ಪಟ್ಟಿ ಯನ್ನು ಅವರು ಮಾಡಿಲ್ಲ ಯಾರು ಎಲ್ಲಿ ಪ್ರಕಟಿಸಿದ್ದು ಎಂಬ ಮಾಹಿತಿ ಅವರು ಹೇಳಿದ್ದು ನನಗೆ ಮರೆತು ಹೋಗಿದೆ)  ಪಟ್ಟಿಯಲ್ಲಿ ನಾನು ಸೇರದೆ ಇದ್ದ ಬಗ್ಗೆ ನನಗೆ ಈ ಹಿಂದೆಯೇ ಮಾಹಿತಿ ಇತ್ತು ಜೊತೆಗೆ ತುಳುನಾಡ ಬರಹಗಾರರ ಒಂದು ಪಟ್ಟಿ ಕೂಡ ಪ್ರಕಟವಾಗಿದ್ದು ಅದರಲ್ಲೂ ನಾನು ಸೇರಿಲ್ಲವಂತೆ
ಹಾಗಾಗಿ ನಾನೆಲ್ಲಿಯವಳು ಎಂದು ಕಾಡುತ್ತಿದ್ದ ಜಿಜ್ಞಾಸೆ ಇಂದು ಮತ್ತೆ ಕಾಡುತ್ತಿದೆ
(ಚಿತ್ರ -ತುಳುನಾಡಿನಲ್ಲಿ ದೈವವಾಗಿ ಆರಾಧಿಸಲ್ಪಡುವ ಕೆಳದಿ ಅರಸಿ ಚನ್ನಮ್ಮ ನ ಮಹಾ ಮಾಂಡಳಿಕನಾಗಿದ್ದ  ಕಾಸರಗೋಡು ತಿಮ್ಮಣ್ಣ ನಾಯಕನ ಕುರಿತಾದ ಕ್ಷೇತ್ರ ಕಾರ್ಯದ ಅಧ್ಯಯನ ದಲ್ಲಿ ಕುಂಬಳೆ ಕೋಟೆ ಗೆ ಬಂದಾಗಿನದು )
ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ