Monday 1 May 2017

ದೊಡ್ಡವರ ದಾರಿ -14 ನಿಷ್ಪಾಕ್ಷಿಕ ಮನೋಭಾವದ ಮೇಷ್ಟ್ರುಡಾ ಗೀತಾಚಾರ್ಯ ©ಡಾ ಲಕ್ಷ್ಮೀ ಜಿ ಪ್ರಸಾದ



ಬೆಂಗಳೂರಿಗೆ ಬಂದ ಮರುದಿನವೇ ನಡೆದ walk in interview ನಲ್ಲಿ ಕೊನೆಯ ಅಭ್ಯರ್ಥಿಯಾಗಿ ಸಂದರ್ಶನ ಎದುರಿಸಿ ಎ ಪಿ ಎಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಆಯ್ಕೆಯಾಗಿದ್ದೆ .ಕೆಲಸಕ್ಕೆ ಸೇರಿದ ದಿನವೇ ಪಿಎಚ್ ಡಿ ಮಾಡುವಂತೆ ಸಲಹೆ ನೀಡಿದವರು ಅಲ್ಲಿನ ಪ್ರಿನ್ಸಿಪಾಲ್ ಡಾ ಕೆ ಗೋಕುಲನಾಥರು ( ಅವರ ಬಗ್ಗೆ ಈ ಹಿಂದೆಯೇ ಬರೆದಿರುವೆ)
ಕೆಲಸಕ್ಕೆ ಸೀರಿದ ಕೆಲವೇ ದಿನಗಳಲ್ಲಿ ಹಂಪಿ ವಿಶ್ವ ವಿದ್ಯಾಲಯವು ಡಾಕ್ಟರೇಟ್ ಮಾಡಲು ಬಯಸುವವರಿಂದ ಅರ್ಜಿ ಅಹ್ವಾನಿಸಿತ್ತು
ಅದು ನನ್ನ ಗಮನಕ್ಕೆ ಬಂದಿರಲಿಲ್ಲ .ಆದರೂ ಅದನ್ನು ಗಮನಿಸಿದ ಡಾ ಕೆ ಗೋಕುಲನಾಥರು ನನ್ನ ನ್ನು ಕರೆದು ನೀವು ಡಾಕ್ಟರೇಟ್ ಮಾಡುವುದಾದರೆ ಹಂಪಿ ಯುನಿವರ್ಸಿಟಿ ಅರ್ಜಿ ಆಹ್ವಾನ ಮಾಡಿದೆ ಇಲ್ಲಿಯೇ ಮೂರನೇ ಅಡ್ಡರಸ್ತೆಯಲ್ಲಿ ಬಿ ಎಂ ಶ್ರೀ ಪ್ರತಿಷ್ಠಾನ ಇದೆ ಅದು ಹಂಪಿ ಯುನಿವರ್ಸಿಟಿಯ ಅಧಿಕೃತ ಅದ್ಯಯನ ಕೇಂದ್ರ ಅಲ್ಲಿಗೆ ಅರ್ಜಿ ಸಲ್ಲಿಸಿ ಎಂದು ತಿಳಿಸಿದರು
ಅವರು ಹೇಳಿದಂತೆ ಎನ್ ಆರ್ ಕಾಲೊನಿ ಮೂರನೇ ಮುಖ್ಯ ರಸ್ತೆಯ ಲ್ಲಿರುವ ಬಿ ಎಂ ಶ್ರೀ ಪ್ರತಿಷ್ಠಾನಕ್ಕೆ ಬಂದು ಅರ್ಜಿ ಪಡೆದು ಫೀಸ್ ತುಂಬಿ ಅರ್ಜಿ ಸಲ್ಲಿಸಿ ಬಂದೆ .
ಕೆವು ದಿನಗಳ ನಂತರ ಲಿಖಿತ ಪರೀಕ್ಷೆ ಮತ್ತು ಮೌಖಿಕ‌ಪರೀಕ್ಷೆ ಇರುತ್ತದೆ ಎಂದು ಅಲ್ಲಿನ ಸಿಬ್ಬಂದಿ ರಾಜಮ್ಮ ಅವರು ತಿಳಿಸಿದರು
ಹಾಗಾಗಿಯೇ ತಕ್ಷಣವೇ ಯಾವ ವಿಷಯದಲ್ಲಿ ಪಿಎಚ್ ಡಿ ಎಂದು ಮಾಡುವುದೆಂದು ಆಲೋಚಿಸಿದೆ ತುಳು ಜಾನಪದ ಸಂಶೋಧನಾ ಕೃತಿ ಗಳನ್ನು ಓದಿದೆ ಡಾ ಅಮೃತ ಸೋಮೇಶ್ವರ ಡಾ ಬಿಎ ವಿವೇಕ ರೈ ಡಾ ಸುಶೀಲ ಉಪಾಧ್ಯಾಯರ ಕೃತಿಗಳಲ್ಲಿ ನಾಗಬ್ರಹ್ಮ ದೈವದ ಕುರಿತು ಅಧ್ಯಯನ ವಾಗಬೇಕಾದ ಅಗತ್ಯವನ್ನು ತಿಳಿಸಿದ್ದು ಆ ಬಗ್ಗೆ ಯೇ ಮಾಡುವುದೆಂದು ತೀರ್ಮಾನಿಸಿದೆ ,ಲಿಖಿತ ಪರೀಕ್ಷೆಯ ಹಳೆಯ ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಬಂದು ನನ್ನದೇ ಆದ ರೀತಿಯ ತಯಾರಿ ಮಾಡಿಕೊಂಡೆ
ಅಂತೂ ಕಾಯುತ್ತಿದ್ದ ಆ ದಿನ ಬಂತು ಪರೀಕ್ಷೆ ಬರೆದೆ ಮಧ್ಯಾಹ್ನ ಮೇಲೆ ಮೂವತ್ತೈದು ಜನರಿಗೆ ಮೌಖಿಕ ಪರೀಕಗಷೆಗೆ ಬರಲು ತಿಳಿಸಿದರು
ಒಬ್ಬರಾಗಿ ಒಬ್ಬರು ಸಂದರ್ಶನ ಕೊಠಡಿಗೆ ಹೋಗುತ್ತಾ ಇದ್ದರು ಒಬ್ಬರು ಧ್ವನಿ ಕೂಡ ಕೇಳುತ್ತಾ ಇರಲಿಲ್ಲ ಹೊರ ಬಂದವರಲ್ಲಿ ಏನು ಕೇಳಿದರೆಂದು ಕೇಳಿದಾಗ ನಾವು ಆಯ್ಕೆ ಮಾಡಿದ ವಿಷಯದ ಬಗ್ಗೆ ಕೇಳಿದರು ಎಂದು ತಿಳಿಸಿದರು ಒಳಗೆ ಯಾರಿದ್ದಾರೆ ಎಂದು ಕೇಳಿದಾಗ ಡಾ ಗೀತಾಚಾರ್ಯ, ಡಾ ಮಲ್ಲೇಪುರಂ,ಬಸವರಾರಾಧ್ಯ ಇದ್ದಾರೆ ಎಂದು ಹೇಳಿದರು ಆಗಷ್ಟೇ ಬೆಂಗಳೂಇಗೆ ಬಂದಿದ್ದ ನನಗೆ ಇವರ್ಯಾರೂ ಗೊತ್ತಿರಲಿಲ್ಲ ಅಲ್ಲಿಗೆ ಬಂದ ಅಭ್ಯರ್ಥಿಗಳಲ್ಲಿ ಅನೇಕ ರಿಗೆ ಇವರುಗಳ ಪರಿಚಯವಿತ್ತು ಹಾಗಾಗಿ ನಾನು ಆಯ್ಕೆ ಆಗುವ ಬಗ್ಗೆ ನನಗೆ ನಂಬಿಕೆ ಇರಲಿಲ್ಲ .ಒಂದು ಕ್ಷಣ ಸಂದರ್ಶನ ಕ್ಕೆ ಹಾಜರಾಗುವುದು ಬೇಡ ಮನೆಗೆ ಗೋಗಿ ಬಿಡಲೇ ಎನಿಸಿತು .ಆದರೂ ಹೇಗೂ ಬಂದಿರುವೆ ಸಂದರ್ಶನ ಎದುರಿಸಿಯೇ ಹೋಗೋಣ ಎಂದು ನಿರ್ಧರಿಸಿ ನನ್ನ ಸರದಿಗೆ ಕಾದೆ ಕೊನೆಯವಳಾಗಿ ನನಗೆ ಒಳಗೆ ಬರಲು ಆಹ್ವಾನ ಬಂತು .ಯಾವ ಬಗ್ಗೆ ಡಾಕ್ಟರೇಟ್ ಮಾಡುತ್ತೀರಿ ಎಮದಾಗ ಭೂತಾರಾಧನೆ ಬಗ್ಗೆ ಎಂದು ತಿಳಿಸಿದೆ ಆಗ ಭೂತಾರಾಧನೆ ಬಗ್ಗೆ ಈಗಾಗಲೇ ಡಾ ಬಿ ಎ ವಿವೇಕ ರೈ ಡಾ ಚಿನ್ನಪ್ಪ ಗೌಡ ಮೊದಲಾದವರು ಮಾಡಿದ್ದಾರಲ್ಲ ಅದರಲ್ಲಿ ಇನ್ನೇನಿದೆ ಮಾಡಲು ಎಂದು ಡಾ ಗೀತಾಚಾರ್ಯ ( ಆಗ ಅವರು ಯಾರೆಂದು ತಿಳಿದಿರಲಿಲ್ಲ) ಕೇಳಿದಾಗ ಒಂದಿನಿತು ತಬ್ಬಿಬ್ಬುಗೊಂಡೆ.ಮತ್ತೆ ಸಾವರಿಸಿಕೊಂಡು ತುಳುನಾಡಿನಲ್ಲಿ ಅನೇಕ ಭೂತಗಳಿವೆ ಕಲ್ಲುರ್ಟಿ ಮಲರಾಯ ಪಂಜುರ್ಲಿ ಇತ್ಯಾದಿ ಇವರೆಲ್ಲರನ್ನೂ ಏಕವಚನದಲ್ಲಿ ಕಲ್ಕುಡೆ ಮಲರಾಯೆ ಎಂದು ಕರೆಯುತ್ತಾರೆ ಆದರೆ ನಾಗ ಬ್ರಹ್ಮ ನನ್ನು ನಾಗಬೆರ್ಮೆರ್ ಎಂದು ಬಹುವಚನ ಬಳಸಿ ಕರೆಯುತ್ತಾರೆ ಅಲ್ಲದೆ ಈತ ಯಕ್ಷ ಬ್ರಹ್ಮ ನೇ,ಸೃಷ್ಟಿ ಕರ್ತೃ ಬ್ರಹ್ಮ ನೇ ಭೂತ ಬ್ರಹ್ಮ ನೇ ಯಾರೆಂದು ಈ ತನಕ ತಿಳಿದಿಲ್ಲ ಈತನ ಬಗ್ಗೆ ಅಧ್ಯಯನ ವಾಗಬೇಕೆಂದು ಡಾ ಅಮೃತ ಸೋಮೇಶ್ವರ ಹಾಗೂ ಡಾ ಬಿಎ ವಿವೇಕ ರೈಗಳು ಬರೆದಿರುವ ಬಗ್ಗೆ ಪುಸ್ತಕ ದ ಹೆಸರು ಪುಟಸಂಖ್ಯೆ ತಿಳಿಸಿ ಹೇಳಿದೆ
ಸರಿ ಮುಂದೆ ಫಲಿತಾಂಶವನ್ನು ಹದಿನೈದು ದಿನಗಳಲ್ಲಿ ತಿಳಿಸುತ್ತೇವೆ ಎಂದು ಅಲ್ಲಿ ಹೇಳಿದರು
ಆಗ ಬಿ ಎಂ ಶ್ರೀ ಪ್ರತಿಷ್ಠಾನ ದ ಗೈರವ ಕಾರ್ಯದರ್ಶಿಯಾಗಿ ಇದ್ದವರು ಡಾ ಗೀತಾಚಾರ್ಯ .ಎಲ್ಲರ ಆಯ್ಕೆ ಮಲ್ಲೇಪುರಂ ವೆಂಕಟೇಶ ಮತ್ತು ಗೀತಾಚಾರ್ಯ ಕೈಯಲ್ಲಿದೆ ಎಂದು ಬಂದ ಅಭ್ಯರ್ಥಿಗಳು ಮಾತಾಡುತ್ತಾ ಇದ್ದರು .ನಾನಂತೂ ಭರವಸೆ ಕಳೆದು ಕೊಂಡಿದ್ದೆ ಅಲ್ಲದೆ ಹೊರಗೆ ಕುಳಿತ ಅಭ್ಯರ್ಥಿಗಳು ನೀವು ಒಳಗಡೆ ತುಂಬಾ ದೊಡ್ಡಕೆ ಮಾತಾಡಿದಿರಿ ಅಷ್ಟು ದೊಡ್ಡವರ ಎದುರು ಹೀಗೆ ಮಾತಾಡಿದ್ದು ಸರಿಯಲ್ಲ ಎಂದು ಬೇರೆ ಹೇಳಿದರು ನನಗೆ ಅರಿವೇ ಇಲ್ಲದೆ ಧ್ವನಿ ದೊಡ್ಡದಾಗಿರಬೇಕು
ಅಂತೂ ಪೂರ್ತಿ ಭರವಸೆ ಬಿಟ್ಟು ಮನೆಗೆ ಬಂದಿದ್ದೆ ‌ಮರುದಿನ ನಮ್ಮ ಪ್ರಿನ್ಸಿಪಾಲ್ ಗೋಕುಲನಾಥರಲ್ಲಿಯೂ ಈ ಬಗ್ಗೆ ಹೇಳಿ ಆಯ್ಕೆಯಾಗುವುದು ಕಷ್ಟ ಎಂದು ಹೇಳಿದ್ದೆ ಆಗ ಅವರು ಮಲ್ಲೇಪುರಂ ಮತ್ತು ಗೀತಾಚಾರ್ಯ ಬಹಳ ಬಿಗಿ ಆದರೆ ನಿಷ್ಪಕ್ಷಪಾತ ಧೋರಣೆಯವರು ನೀವು ನಿಜಕ್ಕೂ ಚೆನ್ನಾಗಿ ಬರೆದಿದ್ದು ಸಂದರ್ಶನ ಚೆನ್ನಾಗಿ ಮಾಡಿದ್ದರೆ ಆಯ್ಕೆ ಆಗುವಿರಿ ಎಂದು ತಿಳಿಸಿದರು .
ಹದಿನೈದು ದಿನ ಬಿಟ್ಟು ಬಿಎಂಶ್ರೀ ಪ್ರತಿಷ್ಠಾನ ಕ್ಕೆ ಫಲಿತಾಂಶ ತಿಳಿಯಲು ಹೋದೆ ಹೋಗುವಾಗ ನನಗೆ ಎದುರಾಗಿ ಜುಬ್ಬಾ ಧರಿಸಿದ ,ಸಂದರ್ಶನ ದಲ್ಲಿ ಇದ್ದ ಒಬ್ಬರು ಎದುರಾಗಿದ್ದರು ನನ್ನು ನೋಡಿ ಮುಗುಳು ನಕ್ಕರೂ ಅವರು ಯಾರೆಂದು ತಿಳಿಯದ ನಾನು ನಮಸ್ಕರಿಸಲಿಲ್ಲ
ಪ್ರತಿಷ್ಠಾನ ದ ಒಳಗೆ ಹೋಗಿ ಫಲಿತಾಂಶ ಕೇಳಿದೆ ನೀವು ಗೀತಾಚಾರ್ಯ ರನ್ನು ಕೇಳಿ ಎಂದು ಹೇಳಿದರು ಅವರು ಯಾರು ಎಂದು ಕೇಳಿದೆ ಈಗ ನಿಮ್ಮ ಎದುರು ಹೋದರಲ್ಕ ಅವರೇ ಗೀತಾಚಾರ್ಯ ಅವರು ಈ ಪ್ರತಿಷ್ಠಾನ ದ ಗೌರವ ಕಾರ್ಯದರ್ಶಿ ಎಂದು ಹೇಳಿದರು .ಸರಿ ಎಂದು ಅವರು ಕುಳಿತಲ್ಲಗೆ ಹೋಗಿ ಕೇಳಿದೆ ನೀವು ಲಕ್ಷ್ಮೀ ಅಲ್ವಾ ? ನಿಮ್ಮ ಆಯ್ಕೆ ಆಗಿದೆ ಎಂದು ಹೇಳಿ‌ ಮುಂದೆ ಮಾಡಬೇಕಾದ ಪ್ರಕ್ರಿಯೆ ಗಳ ಬಗ್ಗೆ ಮಾಹಿತಿ ನೀಡಿದರು
ಅಂತೂ ನಾನು ಯಾರ ಪರಿಚಯ ಪ್ರಭಾವ ಇಲ್ಲದಿದ್ದರೂ ಆಯ್ಕೆ ಆಗಿದ್ದೆ ಅದಕ್ಕೆ ನಿಷ್ಪಾಕ್ಷಿಕವಾಗಿ ಪ್ರತಿಭೆಯನ್ನು ಮಾನದಂಡವಾಗಿ ಸ್ವೀಕರಿಸಿ ಆಯ್ಕೆ ಮಾಡಿದ ಮಲ್ಲೇಪುರಂ ವೆಂಕಟೇಶ ಮತ್ತು ಡಾ ಗೀತಾಚಾರ್ಯ ಕಾರಣರಾಗಿದ್ದರು
ತುಳು ಸಂಶೋಧನಾ ಕ್ಷೇತ್ರ ಕ್ಕೆ ಕಾಲಿರಿಸಲು ಸಹಾಯ ಮಾಡಿದ ಇವರುಗಳಿಗೆ ಆಭಾರಿಯಾಗಿದ್ದೇನೆ ಮಲ್ಲೇಪುರಂ ಬಗ್ಗೆ ಇನ್ನೂ ಬರೆಯಲಿದೆ ಇನ್ನೊಂದು ಸರಣಿಯಲ್ಲಿ ಅವರ ಬಗ್ಗೆ ಬರೆಯುವೆ
©ಡಾ ಲಕ್ಷ್ಮೀ ಜಿ ಪ್ರಸಾದ 

No comments:

Post a Comment