Monday 1 May 2017

ಕಾಲನ ವೇಗಕ್ಕೆ ಹೆಜ್ಜೆ ಹೊಂದಿಸೋಣ © ಡಾ ಲಕ್ಷ್ಮೀ ಜಿ ಪ್ರಸಾದ

ಕಾಲನ ವೇಗಕ್ಕೆ ಹೆಜ್ಜೆ ಹೊಂದಿಸಬೇಕು.

ನಿನ್ನೆ ಗಡಿನಾಡು ಹೊರನಾಡು ಬರಹಗಾರರ ಸ್ಪಂದನ ವೇದಿಕೆಯಡಿಲ್ಲಿ ಇಪ್ಪತ್ತೆರಡು ಬರಹಗಾರರ ಮೂವತ್ತೆರಡು ಪುಸ್ತಕಗಳ ಬಿಡುಗಡೆ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆಯಿತು
ನಾನು ಗಡಿನಾಡಿವಳಾಗಿದ್ದರೂ ಅಲ್ಲಿನ ಹೆಚ್ಚಿನ ಬರಹಗಾರರ ಪರಿಚಯ ನನಗಿಲ್ಲ ವಸಂತಕುಮಾರ್ ಪೆರ್ಲ ಅವರ ಪುಸ್ತಕ ಬಿಡುಗಡೆಯೂ ಇದ್ದು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು ಗಡಿನಾಡು ಹೊರನಾಡು ಬರಹಗಾರರರನ್ನು ಪರಿಚಯಮಾಡಿಕೊಳ್ಳುವ ಸಲುವಾಗಿ ನಾನು ಹೋದೆ ( ಹಾಗಾಗಿ ೆ ನಯನ ಸಭಾಂಗಣದಲ್ಲಿ ನಡೆದ ಪ್ರತಿಭೋತ್ಸವಕ್ಕೆ ಹೋಗಲಾಗಲಿಲ್ಲ) ಕಾರ್ಯಕ್ರಮ ಮುಗಿದು ಊಟದ ಹೊತ್ತಿನಲ್ಲಿ ಎಷ್ಟು ಪುಸ್ತಕಗಳು ಮಾರಾಟವಾದವು ಎಂದು ವಿಚಾರಿಸಿದೆ ,ಮೂವತ್ತು ಮೂವತ್ತ ಮೂರು ಪುಸ್ತಕಗಳು ಮಾರಾಟವಾಗಿವೆ ಎಂದು ತಿಳಿಯಿತು  ಕಾರ್ಯಕರ್ಮಕ್ಕೆ ನೂರಕ್ಕಿಂತ ಹೆಚ್ಚಿನ ಜನರು ಬಂದಿದ್ದರೂ ಮೂವತ್ತ ಮೂರು ಪುಸ್ತಕಗಳು ಪ್ರಕಟವಾಗಿದ್ದರೂ ಮಾರಾಟವಾದ ಪುಸ್ತಕಗಳು ಮೂವತ್ತಮೂರರಷ್ಟು ಮಾತ್ರವೇ
ಈ ಬಗ್ಗೆ ಅಲ್ಲಿ ಬಂದಿದ್ದ ಬೆಂಗಳೂರು ಯುನಿವರ್ಸಿಟಿ ಮೈಕ್ರೋ ಬಯೋಲಜಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ರಾದ ಶಂಕರ್ ಭಟ್ ಅವರಲ್ಲಿ ಮಾತನಾಡುವಾಗ ಈಗ ಪುಸ್ತಕಗಳನ್ನು ಓದುವವರಿಲ್ಲ ಎಂಬ ವಿಷಯ ಚರ್ಚೆಗೆ ಬಂತು . 2013 ರ  ಒಳಗೆ ನನ್ನ ಇಪ್ಪತ್ತು ಪುಸ್ತಗಳು ಪ್ರಕಟವಾಗಿವೆ ನಂತರ ಪುಸ್ತಕ ಪ್ರಕಟಿಸುವ ಸಾಹಸಕ್ಕೆ ಕೈಹಾಕಿಲ್ಲ ಪ್ರಕಟಿಸಬಾರದೆಂದೇನೂ ನನಗಿಲ್ಲ ಆದರೆ ಬ್ಲಾಗ್ ಮೂಲಕ ಬರೆಯುತ್ತಿರುವ ಕಾರಣ ಎರಡು ಲಕ್ಷಕ್ಕಿಂತ ಹೆಚ್ಚಿನ ಓದುಗರು ಓದಿದ್ದಾರೆ ಬ್ಲಾಗ್ ಎಲ್ಲರಿಗೂ ಉಚಿತವಾಗಿ ಸಿಗುತ್ತದೆ ಇದು ಪ್ರಪಂಚದ ಎಲ್ಲ ದೇಶದ ಜನರಿಗೂ ಕ್ಷಣಮಾತ್ರದಲ್ಲಿ ತಲುಪುತ್ತದೆ ಹಾಗಾಗಿ ನನಗೆ ಓದುಗರ ಕೊರತೆಯಿಲ್ಲ  ನನ್ನ ಪ್ರಕಟಿತ ಇಪ್ಪತ್ತು  ಪುಸ್ತಕಗಳಲ್ಲಿ  ಹನ್ನೆರಡನ್ನು ನಾನು ಸ್ವತಃ ಪ್ರಕಟಿಸಿದ್ದು ಸರಿಯಾಗಿ ಪುಸ್ತಕ ಬಿಡುಗಡೆ ಕೂಡ ಮಾಡದಿದ್ದರೂ ಕೂಡ ಮಾರಾಟದ ಸಮಸ್ಯೆ ನನಗೆ ಬರಲಿಲ್ಲ ನನ್ನ ಹೆಚ್ಚಿನ ಕೃತಿಗಳ ಮೂರು ನಾಲ್ಕು ಪ್ರತಿ ಮಾತ್ರ ನನ್ನಲ್ಲಿ ಉಳಿದಿವೆ ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು ಮತ್ತು ಅರಿವಿನಂಗಳದ ಸುತ್ತ ಪುಸ್ತಕ ಗಳ ಎಲ್ಲಾ ಪ್ರತಿಗಳು ಮುಗಿದು ಅಂಗಡಿಗಳಲ್ಲಿ ಹೋಗಿ ಇದ್ದ ಒಂದೆರಡು ಪ್ರತಿಗಳನ್ನು ನಾನು ಮತ್ತೆ ಖರೀದಿಸಿ ತಂದು ಇಟ್ಟು ಕೊಂಡಿರುವೆ ಆದರೂ ಈಗ ಪುಸ್ತಕ ಪ್ರಕಟಣೆಗೆ ಕೈ ಹಾಕಲು ಅಳುಕಾಗುತ್ತಿದೆ ಹಾಗಾಗಿ ಬ್ಲಾಗ್ ಅನ್ನು ಆಶ್ರಯಿಸಿರುವೆ   ಬ್ಲಾಗ್ ಇಷ್ಟು ಜನಪ್ರಿಯ ಮಾದರಿ ಎಂದು ಆರಂಭಿಸಿದಾಗ ನನಗೂ ಗೊತ್ತಿರಲಿಲ್ಲ ನಿನ್ನೆ ಶಂಕರ್  ಭಟ್ ಅವರಲ್ಲಿ ಮಾತಾಡುವಾಗ ಅವರೂ ಅದನ್ನು ಒಪ್ಪಿದರು ಬಹುಶಃ ಬರಹಗಾರರು ತಮ್ಮ ಬರಹವನ್ನು ಆಸಕ್ತರಿಗೆ ತಲುಪಿಸಲು ಬ್ಲಾಗ್ ನಂತ ಹೊಸ ದಾರಿಯನ್ನು ಅನುಸರಿಸುವುದು ಅನಿವಾರ್ಯವಾಗಿ ಬಿಡುತ್ತದೆಯೋ ಏನೋ ಎಂದು ನನಗೆ ಆಗ ಅನಿಸಿತು ಬಹುಶಃ ಕಾಲನ ಓಟಕ್ಕೆ ಸಮಾನವಾದ ವೇಗದಲ್ಲಿ ಹೆಜ್ಜೆ ಇಡುವುದು ಇಂದಿನ ಅಗತ್ಯ ಅದು ಬರಹಗಾರರಿಗೂ ಅನ್ವಯವಾಗುತ್ತದೆ ಅಲ್ಲವೇ ?
ಅಂದಹಾಗೆ ವಸಂತಕುಮಾರ್ ಪೆರ್ಲ ಅವರ  "ಏರುತ್ತೇರುತ್ತ ಶಿಖರ "ಎಂಬ ಪುಸ್ತಕ ದಲ್ಲಿ ನನ್ನ ಸುಬ್ಬಿ ಇಂಗ್ಲಿಷ್ ಕಲ್ತದು ಮತ್ತು ಇತರ ನಾಟಕಗಳು ಕೃತಿಗೆ ಅವರು ಬರೆದಬರಹ ( ಮುನ್ನುಡಿ ಬರಹ) ಕೂಡ ಇದೆ

No comments:

Post a Comment