Saturday, 22 March 2025

ಹೊರದೇಶಕ್ಕೆ ಭೌತಿಕವಾಗಿಯೇ ಹೋಗ ಬೇಕೆಂದಿಲ್ಲ..

 ಸಿಹಿ ನೆನಪು ..


ನನ್ನಲ್ಲಿ ಅನೇಕರು " ನಿಮ್ಮ ಅಣ್ಣ ತಮ್ಮ ಅಕ್ಕನ‌ಮಕ್ಕಳೆಲ್ಲ ಅಮೇರಿಕದಲ್ಲಿದ್ದಾರಲ್ವ. ನೀವು ಹೋಗುದಿಲ್ವ ? ಎಂದು ಕೇಳಿದ್ದುಂಟು..


ನಾನು ತುಂಬಾ ವರ್ಷಗಳ ಮೊದಲೇ ನಿರ್ಧರಿಸಿದ್ದೆ..ಸೋತರೂ ಗೆದ್ದರೂ ಬಿದ್ದರೂ ಎದ್ದರೂ ಬದುಕುದು ಈ ನೆಲದಲ್ಲಿಯೇ ಎಂದು..ಅಮೇರಿಕಾದಲ್ಲಿ ಇಲ್ಲಿಗಿಂತ ಹೆಚ್ಚಿನ ವೈಭವದ ಬದುಕು ಇರಬಹುದು.ಆದರೆ ನಾನು ಓದಿದ್ದೆಲ್ಲವೂ ಇಲ್ಲಿಗೆ ಬೇಕಾದದ್ದೇ..ವಿದೇಶದಲ್ಲಿ ಹೋಗಿ ಏನು ಮಾಡಲಿ ? ಪ್ರಸಾದರಿಗೇನೋ ಒಳ್ಳೆಯ ಕೆಲಸ ಸಿಗಬಹುದಿತ್ತು ಆದರೆ ನಾನು ಹೌಸ್ ವೈಫ್ ಆಗಿಯೇ ಬದುಕಬೇಕಿತ್ತು.ನನಗೆ ನನ್ನತನವನ್ನು ಬೆಳೆಸಿಕೊಳ್ಳಲು ಸಾಧ್ಯವಿರಲಿಲ್ಲ ಅಲ್ಲದೆ ನಾವು ಹುಟ್ಟಿ ಬೆಳೆದ ಊರಿನಷ್ಡು ಬೇರೆಡೆ ನಮಗೆ ಹೊಂದಾಣಿಕೆ ಆಗಲಾರದು..ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ ಅಲ್ಲವೇ? ..ಹಾಗಾಗಿ ಇಲ್ಲಿಯೇ ಬದುಕಲು ನಿರ್ಧರಿಸಿದ್ದೆ

ಹಾಗೆಂದು ಹೊರಗಡೆ ಹೋಗಿ ಸಾಧಿಸುವುದು ತಪ್ಪೆಂದಲ್ಲ..ನನ್ನಿಂದ ಆಗದು ಎಂದಷ್ಟೇ ನನ್ನ ಭಾವ..

ಒಂದಷ್ಟು ದಿನಗಳು ಸರಿಯಾದ ಉದ್ಯೋಗವಿಲ್ಲದೆ ಅಲೆದಾಡಬೇಕಾಗಿ ಬಂದರೂ ನಂತರದ್ದೆಲ್ಲ ಪವಾಡ ಸದೃಶವಾಗಿ ನಡೆಯಿತು..


ನಾನು ಈ ತನಕ ನಮ್ಮ ದೇಶದ ಹೊರಗೆ ಕಾಲಿಟ್ಟಿಲ್ಲ ಆದರೆ online  ಮೂಲಕ ಇಪ್ಪತ್ತೊಂದು  ದೇಶಗಳ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ್ದೇನೆ ..

ಜಗತ್ತಿನ ಹೆಚ್ಚಿನ ದೇಶಗಳಲ್ಲೂ ನನ್ನ ಬ್ಲಾಗ್ http//laxmipras.blogspot.com  ಓದುಗರಿದ್ದಾರೆ ,you tube ವೀಕ್ಷಕರಿದ್ದಾರೆ‌‌.ಇತ್ತೀಚೆಗೆ ಇವುಗಳತ್ತ ಗಮನ ಕೊಡಲು ನನಗೆ ಸಮಯ ಸಿಗುತ್ತಾ ಇಲ್ಲ 

ಇಂದು ಅಂಗೈಯೊಳಗೆ ಜಗತ್ತಿದೆ ನಾವು ಬೌತಿಕವಾಗಿ ಹೋಗದಿದ್ದರೂ ಮಾನಸಿಕವಾಗಿ ದೇಶವಿದೇಶಗಳನ್ನು ಕ್ಷಣ ಮಾತ್ರದಲ್ಲಿ ಸುತ್ತಿ ಬರಬಹುದು


ಕಳೆದ ವರ್ಷ ಜರ್ಮನಿಯಲ್ಲಿ Vidushi Nandini Narayan  ಆಯೋಜಿಸಿದ ಕಾರ್ಯಕ್ರಮದಲ್ಲಿ ಅತಿಥಿಯಾಗಿ online ಮೂಲಕ ಭಾಗವಹಿಸಿದ್ದನ್ನು fb ನೆನಪಿಸಿದೆ 


Zoom ಮೂಲಕ ನಿನ್ನೆ ಜರ್ಮನಿಯಲ್ಲಿನ ರಂಗ ಮಂಥನದ ಕಾರ್ಯಕ್ರಮದಲ್ಲಿ ನಾನು ಮಹಿಳಾ ಅಸ್ಮಿತೆ ಬಗ್ಗೆ ಮಾತನಾಡಿದ್ದು ಹೀಗೆ...

ಕಾರ್ಯಕ್ರಮವನ್ನು ಇಲ್ಲಿ ವೀಕ್ಷಿಸಬಹುದು

https://m.facebook.com/story.php?story_fbid=278560237770816&id=100003660657433


No comments:

Post a Comment