ಸ್ವಂತ ಮನೆಯ ಕನಸಿದೆಯೇ? ನನಸಾಗಿಸುದು ಹೇಗೆ?
ಇರಲು ಒಂದು ಸ್ವಂತ ಸೂರು ಬೇಕು ಎಂಬುದು ಮಾನಪ ಜೀವಿಗಳೆಲ್ಲರ ಕನಸಾಗಿರುತ್ತದೆ.
ಆದರೆ ಎಲ್ಲರಿಗೂ ಇದು ನನಸಾಗುವುದಿಲ್ಲ.
ಮನೆ ಸ್ವಂತ ತಗೊಳ್ಳಲು ಕಟ್ಟಿಸಲು ತುಂಬಾ ದುಡ್ಡು ಬೇಕು.ಎಲ್ಲವನ್ನೂ ಸಾಲ ಮಾಡಿ ತಗೊಳ್ಳಲು ಆಗುವುದಿಲ್ಲ
25% ದಷ್ಟಾದರೂ ದುಡ್ಡು ಇರಬೇಕು
ಇದಕ್ಕಾಗಿ ನಮ್ಮಂತಹ ಮಧ್ಯಮ ವರ್ಗದ ಮಂದಿ ಬಹಳ ಶಿಸ್ತಿನ ಜೀವನ ಅಳವಡಿಸಿಕೊಳ್ಳಬೇಕಾಗುತ್ತದೆ
ಖರ್ಚು ಕಡಿಮೆ ಮಾಡಿಕೊಂಡು ಮನೆ ಕೆಲಸ ನಾವೇ ಮಾಡಿಕೊಂಡು ಕಡಿಮೆ ಬಾಡಿಗೆಯ ಸಣ್ಣ ಮನೆಯಲ್ಲಿದ್ದುಕೊಂಡು ಸರಳವಾಗಿ ಬದುಕುತ್ತಾ ಸ್ವಲ್ಪ ಸ್ವಲ್ಪವೇ ದುಡ್ಡು ಉಳಿಸಿ ಸೇವ್ ಮಾಡುತ್ತಾ ಬರಬೇಕು
ಒಂದಷ್ಟು ದುಡ್ಡು ಒಟ್ಟಾದಾಗ ಅದರ ಜೊತೆಗೆ ಬ್ಯಾಂಕ್ ನಿಂದ ಸಾಲ ಪಡೆದು ಸಣ್ಣದೊಂದು ಮನೆ ತಗೊಳ್ಳಬಹುದು
ಆಗಲೂ ಅಷ್ಟೇ..ನಮ್ಮ ಆದಾಯ ನೋಡಿಕೊಂಡು ಇಂಟೀರಿಯರ್ಸ್ ಗೆ ಖರ್ಚು ಮಾಡಬೇಕು
ಯಾರೋ ಏನೋ ಮಾಡುತ್ತಾರೆಂದೋ ಅಥವಾ ಬೇರೆಯವರ ಎದುರು ಶೋ ಮಾಡುವುದಕ್ಕಾಗಿ ಖರ್ಚು ಮಾಡಬಾರದು.
ಕಾಲ ಕಾಲಕ್ಕೆ ಸಾಲದ ಕಂತು ಕಟ್ಟಬೇಕು ಇಲ್ಲವಾದರೆ ಬಡ್ಡಿಗೆ ಬಡ್ಡಿ ಬೆಳೆದು ಮನೆ ಬ್ಯಾಂಕ್ ಪಾರಾಗಬಹುದು
ನೆನಪಿರಲಿ, ಸಾಲವನ್ನು ಬ್ಯಾಂಕ್ ನಿಂದಲೇ ಪಡೆಯಬೇಕು ನಮಗೆ ಸಾಲ ಕಟ್ಟುವ ಸಾಮರ್ಥ್ಯ ಇದ್ದರೆ ಮಾತ್ರ ಅವರು ಸಾಲ ಕೊಡ್ತಾರೆ
ಖಾಸಗಿಯವರು ಹೆಚ್ಚು ಬಡ್ಡಿಗೆ ಸಾಲ ಕೊಡ್ತಾರೆ.. ಹಿಂದೆ ಕಟ್ಟುವ ಸಾಮರ್ಥ್ಯ ಇದೆಯ ಇಲ್ಲವಾ ಎಂದು ಯೋಚನೆ ಮಾಡದೆ ಕೊಡ್ತಾರೆ
ಸಾಲ ಸಿಕ್ತು ಎಂದು ದಾಂ ದೂಂ ಖರ್ಚು ಮಾಡಿದರೆ ಹಿಂದೆ ಕೊಡುದು ಸುಲಭವಲ್ಲ
. ಎಷ್ಟು ಅಗತ್ಯ ಇದೆ ಅಷ್ಟೇ ಸಾಲ ಪಡೆಯಬೇಕು ಮತ್ತು ಅದು ಮುಗಿಯುವ ತನಕ ನಾವು ಸರಳವಾಗಿ ಹೆಚ್ಚು ಖರ್ಚು ಮಾಡದೆ ಬದುಕಿ ಸಾಲ ಹಿಂದೆ ಕೊಟ್ಟರೆ ನಮಗೊಂದು ಸ್ವಂತ ಮನೆ ಕೈ ಸೇರುತ್ತದೆ , ನಾವು ಮನೆಯ ಕನಸನ್ನು ನನಸಾಗಿಸಿದ್ದು ಹೀಗೆ..
ಮನೆ ಸ್ವಂತ ಆದ ನಂತರ ಕಾರುಗೀರು ಐ ಫೋನ್ , ಇಂಟೀರಿಯರ್ ಗಳ ಬಗ್ಗೆ ಆಲೋಚಿಸಬಹುದು
ಸಾಲಧ ಮೇಲೆ ಸಾಲ ಮಾಡಿ ಇವನ್ನೆಲ್ಲ ತಗೊಂಡರೆ ಸಾಲದ ಕಂತು ಕಟ್ಟಲು ಕಷ್ಟವಾಗಿ ಮನೆ ಬ್ಯಾಂಕ್ ಪಾಲಾಗಬಹುದು
ಎಲ್ಲದಕ್ಕು ಸರಳವಾಗಿ ಬದುಕುದು ಒಳ್ಳೆಯದು,ಆಗ ನಮ್ಮಲ್ಲಿ ಖರ್ಚು ಮಾಡಲು ಜೊತೆಗೆ ವೃದ್ದಾಪ್ಯದ ದಿನಗಳಿಗಾಗಿ ದುಡ್ಡು ಇರುತ್ತದೆ
ನನ್ನ ಕೆಲವು ವಿದ್ಯಾರ್ಥಿಗಳು ಹದಿನೈದು ಇಪ್ಪತ್ತು ಸಾವಿರ ರೂಗಳ ವೇತನದ ಕೆಲಸ ಸಿಕ್ಕ ತಕ್ಷಣವೇ ಕಾರಿನಂತ ಐಷಾರಾಮಿ ವಸ್ತುಗಳನ್ನು ಸಾಲ ಮಾಡಿ ತಗೊಳ್ಳುದನ್ನು ಗಮನಿಸಿರುವೆ
ಆಗ ಇವರಲ್ಲಿ ಮನೆ ಖರೀದಿಗೆ ದುಡ್ಡು ಉಳಿಸಲು ಹೇಗೆ ಸಾಧ್ಯ? ಈಗಿನವರ ಬಗ್ಗೆ ನನಗೆ ಅರ್ಥ ಆಗುವುದಿಲ್ಲ
No comments:
Post a Comment