ದೊಡ್ಡವರ ದಾರಿ : ಶೂನ್ಯ ಕಸ ಆವರಣದ(Zero waste campus) ಪರಿಕಲ್ಪನೆಯ ನಿತಿನ್ ಮೋಹನ್
ಕಳೆದ ಹತ್ತು ದಿನಗಳಲ್ಲಿ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯ ನಡೆಯುತ್ತಿವೆ.
ನನಗೆ DCE( Deputy chief examiner) ಆಗಿ ನಿಯೋಜನೆ ಮಾಡಿದ್ದರು.
ಕೆ ಆರ್ ಪುರಂ ನಿಂದ ಸುಮಾರು ಏಳು ಕಿಮೀ ದೂರದ ಬಸವನಪುರ ? ದಲ್ಲಿರುವ ಕೇಂಬ್ರಿಡ್ಜ್ ಪಿಯು ಕಾಲೇಜಿನಲ್ಲಿ ಕನ್ನಡ ಮೌಲ್ಯ ಮಾಪನ ನಡೆಯುದು ಎಂದು ಗೊತ್ತಾದಾಗ ತಲೆ ಮೇಲೆ ಬಂಡೆ ಕಲ್ಲು ಬಿದ್ದ ಅನುಭವ ಆಗಿತ್ತು
ನಮ್ಮ ಮನೆಯಿಂದ ಸುಮಾರು 30 ಕಿಮೀ ದೂರದಲ್ಲಿ ಈ ಸಂಸ್ಥೆ ಇದೆ
ದೂರಕ್ಕಿಂತ ಹೋಗುವ ದಾರಿಯಲ್ಲಿ ವಿಪರೀತ ಟ್ರಾಫಿಕ್ ಇರುವುದು ಬಹು ದೊಡ್ಡ ಸಮಸ್ಯೆ
ಆಟೋ ಕ್ಯಾಬ್ ಗಳು ಅಷ್ಟು ದೂರಕ್ಕೆ ಬರಲು ಒಪ್ಪುವುದಿಲ್ಲ
ಹಾಗಾಗಿ ಮೆಟ್ರೋದಲ್ಲಿ ಹೋಗುವ ದಾರಿ ಬಗ್ಗೆ ಮೊದಲು ಕೆ ಆರ್ ಪುರ ಸರ್ಕಾಪಿ ಪಿಯು ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂಪದಾ ಕೆರಿಮನಿಗೆ ಫೋನ್ ಮಾಡಿ ವಿಚಾರಿಸಿದೆ
ಅವರಿಗೂ ಮೊದಲಿಗೆ ಈ ಕೆಂಬ್ರಿಡ್ಜ್ ಕಾಲೇಜಿಗೆ ಹೋಗುವ ದಾರಿ ಗೊತ್ತಾಗಲಿಲ್ಲ.ನಂತರ ಯಾರಲ್ಲೋ ಕೇಳಿ ನನಗೆ ಮಾಹಿತಿ ನೀಡಿದರು
ಉಳ್ಳಾಲ ಮುಖ್ಯ ರಸ್ತೆಯಿಂದ ಬಸ್ ಮೂಲಕ ಜ್ಞಾನ ಭಾರತಿ ಮೆಟ್ರೋ ಸ್ಟೇಷನ್ ಗೆ ಹೋಗಿ ಮೆಟ್ರೋ ಹತ್ತಿ ಬೆನ್ನಿಗಾನಹಳ್ಳಿಯಲ್ಲಿ ಇಳಿದು ಅಲ್ಲಿಂದ ಹೊಸ ಕೋಟೆ ಕಡೆಗೆ ಹೋಗುವ ಬಸ್ ಹತ್ತಿ ಟಿ.ಸಿ ಪಾಳ್ಯದಲ್ಲಿ ಇಳಿದು ನಂತರ ಒಂದು ಒಂದೂವರೆ ಕಿಮೀ ನಷ್ಟು ನಡೆದುಕೊಂಡು ಕೇಂಬ್ರಿಡ್ಜ್ ಪಿಯು ಕಾಲೇಜು ತಲುಪಬೇಕಿತ್ತು.
ಆರಂಭದಲ್ಲಿ ಇದು ಆಗುವದ್ದಲ್ಲ ಎಂದೆನಿಸಿತು..
ಏನು ಮಾಡುದೆಂದು ಗೊತ್ತಾಗದೆ ತಲೆಬಿಸಿ ಆಯಿತು
ಆದದ್ದಾಗಲಿ ಎಂದು ಮೊದಲ ದಿನ ನಮ್ಮ ಯಾತ್ರಿ ನಲ್ಲಿ ಕಾರು ಬುಕ್ ಮಾಡಿದೆ.ಅದು 620₹ ತೋರಿಸಿತ್ತು ಆದರೂ ಬುಕ್ ಮಾಡಿದೆ
ಅದೃಷ್ಟಕ್ಕೆ ಒಬ್ಬರು ಬರಲೊಪ್ಪಿದರು.
ಬೆಳಗ್ಗೆ ಏಳು ಗಂಟೆಗೆ ಹೊರಟವಳು ಒಂಬತ್ತೂವರೆ ಹೊತ್ತಿಗೆ ತಲುಪಿದೆ
ದೊಡ್ಡ ಕಾಲೇಜು ,ಪಿಯುಸಿ ಇಂಜನಿಯರಿಂಗ್ ಕಾಲೇಜುಗಳ ಸ್ವಾಯತ್ತ ಸಂಸ್ಥೆ ಇದು..ದೊಡ್ಡ ಸ್ವಚ್ಛ ಆವರಣ .ಶುದ್ಧ ಪರಿಸರ..
ಆದರೆ ಇದನ್ನೆಲ್ಲ ಗಮನಿಸುವ ಮನಸ್ಥಿತಿಯಲ್ಲಿ ನಾನಿರಲಿಲ್ಲ
ಕೇಂಬ್ರಿಡ್ಜ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಜೀವನ್ ಬಾಬು ಅವರು ಅಲ್ಲಿ ಲಭ್ಯವಿರುವ ಅಗತ್ಯ ವಾದ ಕೊಠಡಿಗಳು ,ನೀರು ,ಕ್ಯಾಂಟೀನ್ ,ವಾಶ್ ರೂಮ್ ಮೊದಲಾದವುಗಳ ಮಾಹಿತಿ ನೀಡಿದರು
ನಂತರ ಬೆಳಗ್ಗೆ ಮತ್ತು ಸಂಜೆ ಬೆನ್ನಿಗಾನ ಹಳ್ಳಿ ಮೆಟ್ರೋ ಸ್ಟೇಷನ್ ನಿಂದ ಪಿಕಪ್ ಮತ್ತು ಡ್ರಾಪ್ ಕೊಡಲು ಅವರ ಕಾಲೇಜು ಬಸ್ ಗಳ ವ್ಯವಸ್ಥೆ ಮಾಡಿರುವ ಬಗ್ಗೆ ತಿಳಿಸಿದರು
ಆಗ ಸ್ವಲ್ಪ ಸಮಾಧಾನ ಆಯಿತು
ಮೊದಲ ದಿನ ಹತ್ತೂವರೆ ಹನ್ನೊಂದು ಗಂಟೆಗೆ ಕಾಫಿ ಚಹಾ ವಿತರಿಸಿದರು
ಆಗ ಮೊದಲ ಬಾರಿಗೆ ಅಲ್ಲಿನ ಪರಿಸರ ಕಾಳಜಿ ವ್ಯವಸ್ಥೆ ಬಗ್ಗೆ ಗಮನಿಸಿದೆ
ತೊಳೆದ ಸ್ವಚ್ಛ ಸ್ಟೀಲ್ ಲೋಟಗಳಲ್ಲಿ ಕಾಫಿ ಟೀ ನೀಡಿದ್ದರು.
ನಂತರ ಕ್ಯಾಂಟೀನ್ ನಲ್ಲಿ ಕೂಡ ಪ್ಲಾಸ್ಟಿಕ್ ಬಳಕೆ ಇರಲಿಲ್ಲ
ನಂತರ ನನಗೆ ಅಲ್ಲಿನ ಶೂನ್ಯ ಕಸ ಆವರಣದ ಪರಿಕಲ್ಪನೆ ಬಗ್ಗೆ ತಿಳಿಯಿತು
ಈ ಶೂನ್ಯ ಕಸ ಆವರಣದ( Zero waste campus) ನ ಪರಿಕಲ್ಪನೆ ಕೇಂಬ್ರಿಡ್ಜ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಮೋಹನ್ ಅವರ ಮಗ ನಿತಿನ್ ಮೋಹನ್ ಅವರದು
ಈಗಿನ ಬಹುತೇಕ ಯುವಕರಿಗೆ ಮೊಬೈಲ್ ಹೊರತಾಗಿ ಇತರ ವಿಷಯಗಳ ಬಗ್ಗೆ ಆಸಕ್ತಿ ಇಲ್ಲ
ಇಂತಹವರ ನಡುವೆ ನಿತಿನ್ ವಿಶಿಷ್ಟ ಎನಿಸಿದರು
ಕೇಂಬ್ರಿಡ್ಜ್ ವಿದ್ಯಾ ಸಂಸ್ಥೆ ಯ ಆವರಣದಲ್ಲಿ ಉಪಯೋಗಿಸಿ ಎಸೆವ ಪ್ಲಾಸ್ಟಿಕ್ ನ ಬಳಕೆ ಇಲ್ಲ.ಈ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟು ಅವರಲ್ಲಿ ಜಾಗೃತಿ ಮೂಡಿಸಿದ್ದಾರೆ ಎಂದು ತಿಳಿಯಿತು
ನಾನು ಸುಮಾರು ಇಪ್ಪತ್ತಮೂರು ವರ್ಷಗಳ ಹಿಂದೆ ಚಿನ್ಮಯ ಶಾಲೆಯಲ್ಲಿ ಶಿಕ್ಷಕಿ ಆಗಿದ್ದಾಗಲೇ ಉಪಯೋಗಿಸಿ ಎಸೆವ ಪ್ಲಾಸ್ಟಿಕ್ ನ ಬಳಕೆಯನ್ನು ಮಾಡದಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ದೆ.ಪ್ಲಾಸ್ಟಿಕ್ ಬಳಕೆಯನ್ನು ತೀರ ಅಗತ್ಯವಾದ ಸಂದರ್ಭ ಹೊರತು ಪಡಿಸಿ ಇತರೆಡೆ ಅನಗತ್ಯವಾಗಿ ಬಳಸದಂತೆ ಜಾಗೃತಿ ಮೂಡಿಸುವ ಯತ್ನ ಮಾಡಿದ್ದೆ
ಒಂದೊಳ್ಳೆಯ ಕೆಲಸಕ್ಕೂ ಸಾವಿರಾರು ವಿಘ್ನಗಳಿದ್ದವು.ಆದರೂ ನಾನು ಅಂದಿನಿಂದ ಇಂದಿನವರೆಗೂ ವಿದ್ಯಾರ್ಥಿಗಳಲ್ಲಿ ಜಾಗೃತಿಮೂಡಿಸುವ ಯತ್ನ ಮಾಡುತ್ತಲೇ ಬಂದಿದ್ದೇನೆ
ಹಾಗಾಗಿಯೋ ಏನೋ ನನಗೆ ಕೇಂಬ್ರಿಡ್ಜ್ ವಿದ್ಯಾ ಸಂಸ್ಥೆಯ CEO ನಿತಿನ್ ಮೋಹನ್ ಅವರ Zero waste campus ಬಹಳ ಇಷ್ಟವಾಯಿತು
ಜೊತೆಗೆಜೊತೆಗೆ ಅಷ್ಟು ದೊಡ್ಡ ಕಾಲೇಜಿನ ಪ್ರಾಂಶುಪಾಲರಾಗಿದ್ದರೂ ಒಂದಿನಿತು ಅಹಂ ಇಲ್ಲದ ಬಹಳ ಸರಳ ಸಜ್ಜನಿಕೆಯ ಜೀವನ್ ಬಾಬು ಅವರ ವ್ಯಕ್ತಿತ್ವ ಕೂಡ ಮನ ಸೆಳೆಯಿತು
ನನಗಿಷ್ಟವಾದದ್ದರ ಬಗ್ಗೆ ಬರೆಯುದು ನನ್ನ ಹವ್ಯಾಸ..ಅಂತೆಯೇ ನಿಮಗೂ ಇಷ್ಟವಾಗಬಹುದೆಂದು ಹಂಚಿಕೊಂಡಿರುವೆ
ಚಿತ್ರ: ಕೇಂಬ್ರಿಡ್ಜ್ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಅರವಿಂದ ಬಾಬು ಮತ್ತು ಗಿರೀಶ್
No comments:
Post a Comment