Monday, 31 March 2025

ದೊಡ್ಡವರ ದಾರಿ 98 : ಶೂನ್ಯ ಕಸ ಆವರಣದ(Zero waste campus) ಪರಿಕಲ್ಪನೆಯ ನಿತಿನ್ ಮೋಹನ್ :

 ದೊಡ್ಡವರ ದಾರಿ : ಶೂನ್ಯ ಕಸ ಆವರಣದ(Zero waste campus) ಪರಿಕಲ್ಪನೆಯ ನಿತಿನ್ ಮೋಹನ್ 



ಕಳೆದ ಹತ್ತು ದಿನಗಳಲ್ಲಿ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯ ನಡೆಯುತ್ತಿವೆ.


ನನಗೆ DCE( Deputy chief examiner) ಆಗಿ ನಿಯೋಜನೆ ಮಾಡಿದ್ದರು.

ಕೆ ಆರ್ ಪುರಂ ನಿಂದ ಸುಮಾರು ಏಳು ಕಿಮೀ ದೂರದ ಬಸವನಪುರ ? ದಲ್ಲಿರುವ ಕೇಂಬ್ರಿಡ್ಜ್ ಪಿಯು ಕಾಲೇಜಿನಲ್ಲಿ ಕನ್ನಡ ಮೌಲ್ಯ ಮಾಪನ ನಡೆಯುದು ಎಂದು ಗೊತ್ತಾದಾಗ ತಲೆ ಮೇಲೆ ಬಂಡೆ ಕಲ್ಲು ಬಿದ್ದ ಅನುಭವ ಆಗಿತ್ತು

ನಮ್ಮ ಮನೆಯಿಂದ ಸುಮಾರು 30 ಕಿಮೀ ದೂರದಲ್ಲಿ ಈ ಸಂಸ್ಥೆ ಇದೆ

ದೂರಕ್ಕಿಂತ ಹೋಗುವ ದಾರಿಯಲ್ಲಿ ವಿಪರೀತ ಟ್ರಾಫಿಕ್ ಇರುವುದು ಬಹು ದೊಡ್ಡ ಸಮಸ್ಯೆ

ಆಟೋ ಕ್ಯಾಬ್ ಗಳು ಅಷ್ಟು ದೂರಕ್ಕೆ ಬರಲು ಒಪ್ಪುವುದಿಲ್ಲ

ಹಾಗಾಗಿ ಮೆಟ್ರೋದಲ್ಲಿ ಹೋಗುವ ದಾರಿ ಬಗ್ಗೆ ಮೊದಲು ಕೆ ಆರ್ ಪುರ ಸರ್ಕಾಪಿ ಪಿಯು ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂಪದಾ ಕೆರಿಮನಿಗೆ ಫೋನ್ ಮಾಡಿ ವಿಚಾರಿಸಿದೆ

ಅವರಿಗೂ ಮೊದಲಿಗೆ ಈ ಕೆಂಬ್ರಿಡ್ಜ್ ಕಾಲೇಜಿಗೆ ಹೋಗುವ ದಾರಿ ಗೊತ್ತಾಗಲಿಲ್ಲ.ನಂತರ ಯಾರಲ್ಲೋ ಕೇಳಿ ನನಗೆ ಮಾಹಿತಿ ನೀಡಿದರು

ಉಳ್ಳಾಲ ಮುಖ್ಯ ರಸ್ತೆಯಿಂದ ಬಸ್ ಮೂಲಕ ಜ್ಞಾನ ಭಾರತಿ ಮೆಟ್ರೋ ಸ್ಟೇಷನ್ ಗೆ ಹೋಗಿ ಮೆಟ್ರೋ ಹತ್ತಿ ಬೆನ್ನಿಗಾನಹಳ್ಳಿಯಲ್ಲಿ ಇಳಿದು ಅಲ್ಲಿಂದ ಹೊಸ ಕೋಟೆ ಕಡೆಗೆ ಹೋಗುವ ಬಸ್ ಹತ್ತಿ ಟಿ.ಸಿ ಪಾಳ್ಯದಲ್ಲಿ ಇಳಿದು ನಂತರ ಒಂದು ಒಂದೂವರೆ ಕಿಮೀ ನಷ್ಟು ನಡೆದುಕೊಂಡು ಕೇಂಬ್ರಿಡ್ಜ್ ಪಿಯು ಕಾಲೇಜು ತಲುಪಬೇಕಿತ್ತು.

ಆರಂಭದಲ್ಲಿ ಇದು ಆಗುವದ್ದಲ್ಲ ಎಂದೆನಿಸಿತು..

ಏನು ಮಾಡುದೆಂದು ಗೊತ್ತಾಗದೆ ತಲೆಬಿಸಿ ಆಯಿತು

ಆದದ್ದಾಗಲಿ ಎಂದು ಮೊದಲ ದಿನ ನಮ್ಮ ಯಾತ್ರಿ ನಲ್ಲಿ ಕಾರು ಬುಕ್ ಮಾಡಿದೆ.ಅದು 620₹ ತೋರಿಸಿತ್ತು ಆದರೂ ಬುಕ್ ಮಾಡಿದೆ 

ಅದೃಷ್ಟಕ್ಕೆ ಒಬ್ಬರು ಬರಲೊಪ್ಪಿದರು.

ಬೆಳಗ್ಗೆ ಏಳು ಗಂಟೆಗೆ ಹೊರಟವಳು ಒಂಬತ್ತೂವರೆ ಹೊತ್ತಿಗೆ ತಲುಪಿದೆ

ದೊಡ್ಡ ಕಾಲೇಜು ,ಪಿಯುಸಿ  ಇಂಜನಿಯರಿಂಗ್ ಕಾಲೇಜುಗಳ ಸ್ವಾಯತ್ತ ಸಂಸ್ಥೆ ಇದು..ದೊಡ್ಡ ಸ್ವಚ್ಛ  ಆವರಣ .ಶುದ್ಧ ಪರಿಸರ..

ಆದರೆ ಇದನ್ನೆಲ್ಲ ಗಮನಿಸುವ ಮನಸ್ಥಿತಿಯಲ್ಲಿ ನಾನಿರಲಿಲ್ಲ

ಕೇಂಬ್ರಿಡ್ಜ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಜೀವನ್  ಬಾಬು ಅವರು ಅಲ್ಲಿ ಲಭ್ಯವಿರುವ ಅಗತ್ಯ ವಾದ ಕೊಠಡಿಗಳು ,ನೀರು ,ಕ್ಯಾಂಟೀನ್ ,ವಾಶ್ ರೂಮ್ ಮೊದಲಾದವುಗಳ ಮಾಹಿತಿ ನೀಡಿದರು

ನಂತರ ಬೆಳಗ್ಗೆ ಮತ್ತು ಸಂಜೆ ಬೆನ್ನಿಗಾನ ಹಳ್ಳಿ ಮೆಟ್ರೋ ಸ್ಟೇಷನ್ ನಿಂದ ಪಿಕಪ್ ಮತ್ತು ಡ್ರಾಪ್ ಕೊಡಲು ಅವರ ಕಾಲೇಜು ಬಸ್ ಗಳ ವ್ಯವಸ್ಥೆ ಮಾಡಿರುವ ಬಗ್ಗೆ ತಿಳಿಸಿದರು

ಆಗ ಸ್ವಲ್ಪ ಸಮಾಧಾನ ಆಯಿತು

ಮೊದಲ ದಿನ ಹತ್ತೂವರೆ ಹನ್ನೊಂದು ಗಂಟೆಗೆ ಕಾಫಿ ಚಹಾ ವಿತರಿಸಿದರು

ಆಗ ಮೊದಲ ಬಾರಿಗೆ ಅಲ್ಲಿನ ಪರಿಸರ ಕಾಳಜಿ ವ್ಯವಸ್ಥೆ ಬಗ್ಗೆ ಗಮನಿಸಿದೆ

 ತೊಳೆದ ಸ್ವಚ್ಛ ಸ್ಟೀಲ್ ಲೋಟಗಳಲ್ಲಿ ಕಾಫಿ ಟೀ ನೀಡಿದ್ದರು.

ನಂತರ ಕ್ಯಾಂಟೀನ್ ನಲ್ಲಿ ಕೂಡ ಪ್ಲಾಸ್ಟಿಕ್ ಬಳಕೆ ಇರಲಿಲ್ಲ

ನಂತರ ನನಗೆ ಅಲ್ಲಿನ ಶೂನ್ಯ ಕಸ ಆವರಣದ ಪರಿಕಲ್ಪನೆ ಬಗ್ಗೆ ತಿಳಿಯಿತು

ಈ ಶೂನ್ಯ ಕಸ ಆವರಣದ( Zero waste campus) ನ ಪರಿಕಲ್ಪನೆ ಕೇಂಬ್ರಿಡ್ಜ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಮೋಹನ್  ಅವರ ಮಗ ನಿತಿನ್ ಮೋಹನ್  ಅವರದು

ಈಗಿನ ಬಹುತೇಕ ಯುವಕರಿಗೆ ಮೊಬೈಲ್ ಹೊರತಾಗಿ ಇತರ ವಿಷಯಗಳ ಬಗ್ಗೆ ಆಸಕ್ತಿ ಇಲ್ಲ

ಇಂತಹವರ ನಡುವೆ ನಿತಿನ್  ವಿಶಿಷ್ಟ ಎನಿಸಿದರು

ಕೇಂಬ್ರಿಡ್ಜ್ ವಿದ್ಯಾ ಸಂಸ್ಥೆ ಯ ಆವರಣದಲ್ಲಿ ಉಪಯೋಗಿಸಿ ಎಸೆವ ಪ್ಲಾಸ್ಟಿಕ್ ನ ಬಳಕೆ ಇಲ್ಲ.ಈ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟು ಅವರಲ್ಲಿ ಜಾಗೃತಿ ಮೂಡಿಸಿದ್ದಾರೆ ಎಂದು ತಿಳಿಯಿತು

ನಾನು ಸುಮಾರು ಇಪ್ಪತ್ತಮೂರು ವರ್ಷಗಳ ಹಿಂದೆ ಚಿನ್ಮಯ ಶಾಲೆಯಲ್ಲಿ ಶಿಕ್ಷಕಿ ಆಗಿದ್ದಾಗಲೇ ಉಪಯೋಗಿಸಿ ಎಸೆವ ಪ್ಲಾಸ್ಟಿಕ್ ನ ಬಳಕೆಯನ್ನು ಮಾಡದಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ದೆ.ಪ್ಲಾಸ್ಟಿಕ್ ಬಳಕೆಯನ್ನು ತೀರ ಅಗತ್ಯವಾದ ಸಂದರ್ಭ ಹೊರತು ಪಡಿಸಿ ಇತರೆಡೆ ಅನಗತ್ಯವಾಗಿ ಬಳಸದಂತೆ ಜಾಗೃತಿ ಮೂಡಿಸುವ ಯತ್ನ ಮಾಡಿದ್ದೆ

ಒಂದೊಳ್ಳೆಯ ಕೆಲಸಕ್ಕೂ ಸಾವಿರಾರು ವಿಘ್ನಗಳಿದ್ದವು.ಆದರೂ ನಾನು ಅಂದಿನಿಂದ ಇಂದಿನವರೆಗೂ ವಿದ್ಯಾರ್ಥಿಗಳಲ್ಲಿ ಜಾಗೃತಿಮೂಡಿಸುವ ಯತ್ನ ಮಾಡುತ್ತಲೇ ಬಂದಿದ್ದೇನೆ

ಹಾಗಾಗಿಯೋ ಏನೋ ನನಗೆ ಕೇಂಬ್ರಿಡ್ಜ್ ವಿದ್ಯಾ ಸಂಸ್ಥೆಯ CEO ನಿತಿನ್ ಮೋಹನ್ ಅವರ Zero waste campus ಬಹಳ ಇಷ್ಟವಾಯಿತು

ಜೊತೆಗೆಜೊತೆಗೆ ಅಷ್ಟು ದೊಡ್ಡ ಕಾಲೇಜಿನ ಪ್ರಾಂಶುಪಾಲರಾಗಿದ್ದರೂ ಒಂದಿನಿತು ಅಹಂ ಇಲ್ಲದ ಬಹಳ ಸರಳ ಸಜ್ಜನಿಕೆಯ ಜೀವನ್ ಬಾಬು  ಅವರ ವ್ಯಕ್ತಿತ್ವ ಕೂಡ ಮನ ಸೆಳೆಯಿತು

ನನಗಿಷ್ಟವಾದದ್ದರ ಬಗ್ಗೆ ಬರೆಯುದು ನನ್ನ ಹವ್ಯಾಸ..ಅಂತೆಯೇ ನಿಮಗೂ ಇಷ್ಟವಾಗಬಹುದೆಂದು ಹಂಚಿಕೊಂಡಿರುವೆ 

ಚಿತ್ರ:  ಕೇಂಬ್ರಿಡ್ಜ್ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಅರವಿಂದ ಬಾಬು ಮತ್ತು ಗಿರೀಶ್

ನಾಗ ಭೂತ - ಡಾ.ಲಕ್ಷ್ಮೀ ಜಿ ಪ್ರಸಾದ್

 ಕರಾವಳಿಯ ಸಾವಿರದೊಂದು ದೈವಗಳ/ಭೂತಗಳ ಅದ್ಭುತ ಜಗತ್ತಿನಲ್ಲಿ ಸುತ್ತಾಡಿದ ನಾನು ಅನೇಕ ರೋಮಾಂಚನಕಾರಿ ಅನುಭವಗಳನ್ನು ಪಡೆದಿದ್ದೇನೆ 

ಚೌಕಾರಿನಲ್ಲಿ ಮೂರು ಹೆಡೆಯ ನಾಗ ಭೂತದ ಫೋಟೋ ತೆಗೆದದ್ದು ಕೂಡ  ಅಂಥಹ ಒಂದು ಮೈ ನವಿರೇಳಿಸುವ ಕ್ಷಣ


ಇಲ್ಲಿ ನಾಗ ಭೂತದ ಫೋಟೋ ತೆಗೆಯಬಾರದು ,ನಾಗ ಭೂತದ ಮೇಲೆ ಕ್ಯಾಮರ ದ ಬೆಳಕು ಬಿದ್ದರೆ ಫೋಟೋ ಹಿಡಿದವರ ಕಣ್ಣು ಹೋಗುತ್ತದೆ ಎಂಬ ನಂಬಿಕೆ ಇತ್ತು .ಆಗ ನಾನು ಕ್ಯಾಮರ ದ ಫ್ಲಾಶ್ ಹಾಕದೆ ತೆಗೆಯಬಹುದೇ ಎಂದು ಭೂತದಲ್ಲಿ ಅರಿಕೆ ಮಾಡಿದೆ ,ನಾಗ ಭೂತ ಮಾತನಾಡುವುದಿಲ್ಲ ಅಲ್ಲಿದ್ದ ಅರಸಿನ ಬೂಳ್ಯವನ್ನು ನೀಡುವ ಮೂಲಕ ಸಾಂಕೇತಿಕವಾಗಿ ಅನುಮತಿ ಕೊಟ್ಟಿತು ,ಹಾಗಾಗಿ ನಾನು ಈ ಫೋಟೋ ಹಿಡಿದಿದ್ದೆ ,ದೈವದ ದಯದಿಂದ ಫ್ಲಾಶ್ ಹಾಕದೆ ಇದ್ದಾಗಲೂ ಫೋಟೋ  ಚೆನ್ನಾಗಿಯೇ ಬಂದಿದೆ .ಚೌಕಾರಿನಲ್ಲಿ ಮೂರು ದಿವಸ ಹಗಲು ರಾತ್ರಿ ಕೋಲ ಇತ್ತು ಅದಾಗಿ ಮರುದಿನವೇನಾನು ನಡಿ ಬೈಲಿಗೆ ಬಂದು ಕಂಬಳ ಕೋರಿ ನೇಮ ಎರಡು ದಿನ ಹಗಲು ರಾತ್ರಿ ರೆಕಾರ್ಡ್ ಮಾಡಿದೆ .ಅದಾದ ಮರುದಿನ ಕೈರಂಗಳ ಹತ್ತಿರ ಒಂದು ದಿವಸ ರೆಕಾರ್ಡ್ ಮಾಡಿದೆ ,ಹೀಗೆ ಸತತವಾಗಿ ಏಳು ಎಂಟು ದಿನ ಹಗಲು ರಾತ್ರಿ ಭೂತ ಕೋಲ ರೆಕಾರ್ಡ್ ಮಾಡಿದ್ದಕ್ಕೋ ಅಥವಾ ಆತಂಕಕ್ಕೋ ಗೊತ್ತಿಲ್ಲ ,ಇಲ್ಲೆಲ್ಲಾ ರೆಕಾರ್ಡ್ ಮಾಡಿ ಬರುವಷ್ಟು ಹೊತ್ತಿಗೆ ಕಣ್ಣು ಊದಿಕೊಂಡಿತ್ತು,ಜೊತೆಗೆ ನೋಟ ಅಸ್ಪಷ್ಟವಾಗಿತ್ತು ,
ಒಂದು ಕ್ಷಣ ಭಯವಾಯಿತು ,ಚೌಕಾರಿನಲ್ಲಿ ನಾಗ ಭೂತದ ಫೋಟೋ ತೆಗೆದದ್ದಕ್ಕೆ ಹೀಗೆ ಆಯಿತೇನೋ ಎಂದು !
ಮನೆಯಲ್ಲಿ ಯಾರಲ್ಲಿ ಹೇಳಲೂ ಭಯ !ಆಗದು ಎಂದಿರುವಲ್ಲಿ ಫೋಟೋ ಹಿಡಿದದ್ದು ಏಕೆ ಎಂದು ನನ್ನನ್ನೇ ಬೈದರೆ ಎಂದು !
ಆದರೆ ದೈವದ ಅನುಮತಿ ಪಡೆದೇ ಫೋಟೋ ತೆಗೆದದ್ದು ತಾನೇ ,ಹಾಗಾಗಿ ಮನದಲ್ಲೇ ನಾಗನಿಗೆ "ನನ್ನ ದೃಷ್ಟಿಯನ್ನು ಮಾತ್ರ ಕಿತ್ತುಕೊಳ್ಳ ಬೇಡ ದೇವರೇ,ನಾನೆಂದೂ ಭೂತಗಳ ಫೋಟೋಗಳನ್ನು ದುಡ್ಡು ಗಳಿಸಲು ಅಥವಾ ಇನ್ಯಾವುದೋ ಅಗ್ಗದ ಕಾರ್ಯಗಳಿಗೆ ಬಳಸುವುದಿಲ್ಲ " ಎಂದು ಬೇಡಿ ಕೊಂಡೆ !ನಂತರ ನಾಗ ಭೂತ ಕೊಟ್ಟ ಅರಸಿನ ಪ್ರಸಾದ ನನ್ನಲ್ಲಿತ್ತು ಅದನ್ನು ಹಣೆಗೆ ಹಚ್ಚಿಕೊಂಡು ಕಣ್ಣಿಗೆ ಒಂದು ತೊಟ್ಟು ತಂಬಾಲು ಬಿಟ್ಟು ನಿದ್ರೆ ಮಾಡಿದೆ ,ಮರುದಿನ ಏಳುವಾಗ ಕಣ್ಣು ಸರಿಯಾಗಿತ್ತು !

 ಚೌಕಾರು ಗುತ್ತುಗಳಲ್ಲಿ ಕಂಬಳಕೋರಿಯಂದು ಪೂಕರೆ ಹಾಕುವಾಗ ನಾಗಭೂತಕ್ಕೆ ಕೋಲವಿದೆ. ನಾಗಭೂತದ ಮುಖವರ್ಣಿಕೆ ಸರಳವಾಗಿದ್ದು, ಕಪ್ಪುಬಣ್ಣದ ಮೇಲೆ ಹಳದಿ ನಾಗಚಿಹ್ನೆಗಳನ್ನು ಬರೆಯುತ್ತಾರೆ. ತಲೆಗೆ ನಾಗನ ಹೆಡೆಯ ಆಕಾರದ ಮುಡಿಯನ್ನು ಹಿಡಿಯುತ್ತಾರೆ. ಚೌಕಾರುಗುತ್ತು ಹಾಗೂ ಅರಿಬೈಲಿನಲ್ಲಿ ನಾಗಭೂತದ ಮುಡಿಯಲ್ಲಿ ಮೂರು ಹೆಡೆಗಳಿವೆ. . ಇಚ್ಲಂಗೋಡಿನ ಕೃಷ್ಣಸರ್ಪಕೋಲದಲ್ಲಿ ಮೂರು ಹೆಡೆಯ ಮುಖವಾಡ ಧರಿಸುತ್ತಾರೆ. ಅನೇಕ ದೈವಗಳು ನಾಗ ನೊಂದಿಗೆ ಸಮೀಕರಣಗೊಂಡು ಆರಾಧಿಸಲ್ಪಡುತ್ತಿದ್ದಾರೆ ನಾಗ ಚಾಮುಂಡಿ ,ನಾಗ ರಕ್ತೇಶ್ವರಿ ನಾಗ ಪಂಜುರ್ಲಿ ಇತ್ಯಾದಿ .ಮೂವ ದೈವ ಕೂಡ ಮರಿ ನಾಗ ಎಂಬ ಅಭಿಪ್ರಾಯವಿದೆ ಆತನ ಅಭಿನಯ ಕೂಡ ನಾಗನಂತೆ ಇದೆ.ನಾಗನನ್ನು ಬೆರ್ಮೆರ್ ಜೊತೆ ಸಮೀಕರಿಸಿರುವುದು ಎಲ್ಲೆಡೆ ಕಂಡು ಬರುತ್ತಿದೆ .

 ನಾಗಬ್ರಹ್ಮ ಸಮನ್ವಯ

ನಾಗಬ್ರಹ್ಮನ ಆರಾಧನೆ ತುಳುನಾಡಿನಲ್ಲಿ ಪರಂಪರಾಗತವಾಗಿ ಬಂದ ಜಾನಪದ ನಂಬಿಕೆ. ಇಲ್ಲಿ ಸತ್ತ ನಾಗನನ್ನು ಯಾರಾದರೂ ನೋಡಿದರೆ, ಆತನು ಅದನ್ನು ಸಂಸ್ಕಾರ ಮಾಡಬೇಕೆಂಬ ನಂಬಿಕೆ ಇದೆ. ಶಾಸ್ತ್ರೋಕ್ತವಾಗಿ ಅಂತ್ಯೇಷ್ಟಿ ಸಂಸ್ಕಾರದ ಹಕ್ಕು ಸತ್ತ ವ್ಯಕ್ತಿಯ ಕುಟುಂಬ ಗೋತ್ರ ಹಾಗೂ ವಂಶದವರಿಗೆ ಇರುತ್ತದೆ. ಆದ್ದರಿಂದ ತುಳುನಾಡಿನ ಜನರು ನಾಗವಂಶದವರಿರಬೇಕು. “ಇಲ್ಲಿ ದಕ್ಷಿಣ, ಉತ್ತರ ಕನ್ನಡ, ಕರಾವಳಿ ಪ್ರದೇಶಕ್ಕೆ ನಾಗರಖಂಡವೆಂದು ಹೆಸರಿತ್ತು. ಇಲ್ಲಿ ನಾಗರೆಂಬ ಆದಿವಾಸಿಗಳು ವಾಸಿಸುತ್ತಿದ್ದರು. ಸರ್ಪಕುಲಲಾಂಛನವಾಗಿದ್ದ ಈ ಜನರಲ್ಲಿ ಸರ್ಪಾರಾಧನೆ ಒಂದು ಸ್ಥಳೀಯ ಮತಾಚಾರಣೆಯಾಗುತ್ತಿದ್ದಿರಬೇಕು” ಎಂದು ಗೋವಿಂದ ಪೈ ಹೇಳಿದ್ದಾರೆ.

ತುಳುನಾಡಿನಲ್ಲಿ ನಾಗಮಂಡಲದಲ್ಲಿ ಬಿಡಿಸಲಾಗುವ ಕೈಕಾಲುಗಳಿಲ್ಲದ ತಲೆಯ ಚಿತ್ರವನ್ನು ‘ಬ್ರಹ್ಮಯಕ್ಷ’ ಎನ್ನಲಾಗುವುದು. ಈ ಬ್ರಹ್ಮಯಕ್ಷ, ವೈದಿಕರ ಚತುರ್ಮುಖಬ್ರಹ್ಮನಲ್ಲ. ತುಳುವರು ಹೇಳುವ ಬೆರ್ಮರ್ ಇದೆಂದೂ, ಇದನ್ನು ಸಂತಾನದ ಅಧಿದೇವತೆ ಎಂದು ಹೇಳಲಾಗುತ್ತದೆ” ಎಂದು ಪ್ರೊ. ಎ.ವಿ. ನಾವಡ ಹೇಳಿದ್ದಾರೆ.

“ತುಳುನಾಡಿನ ಜನತೆ ತನ್ನ ಪೂರ್ವಜರನ್ನು ಸ್ಮರಿಸುವುದಕ್ಕೂ ನಾಗಬ್ರಹ್ಮನ ಕಲ್ಪನೆಗೂ ಸಂಬಂಧವಿದ್ದಂತಿದೆ” ಎಂದು ಬನ್ನಂಜೆ ಬಾಬು ಅಮೀನ್ ಅಭಿಪ್ರಾಯಪಟ್ಟಿದ್ದಾರೆ.34

ತುಳುನಾಡಿನ ನಾಗಬನಗಳಲ್ಲಿನ ನಾಗಶಿಲ್ಪಗಳಲ್ಲಿ ಕೆಲವು ನಾಗಬ್ರಹ್ಮನ ಪರಿಕಲ್ಪನೆಯನ್ನು ಅಭಿವ್ಯಕ್ತಿಸುತ್ತವೆ. ಎಣ್ಮೂರಿನ ಆದಿ ಗರಡಿಯ ಸಮೀಪದಲ್ಲಿರುವ ನಾಗಶಿಲ್ಪದಲ್ಲಿ ತಂಬೂರಿ ಹಿಡಿದ ನಾಗಬ್ರಹ್ಮನಿದ್ದಾನೆ. ಉಜಿರೆಯ ಕೇಲಂಗಿಮನೆಯ ಪ್ರಾಚೀನ ನಾಗಬನದಲ್ಲಿ ಸೊಂಟದ ಮೇಲ್ಭಾಗದ ಮನುಷ್ಯಾಕೃತಿಯ ತಲೆಯ ಸುತ್ತ ನಾಗಹೆಡೆಗಳಿರುವ ಸೊಂಟದ ಕೆಳಭಾಗದಲ್ಲಿ ಸರ್ಪಾಕೃತಿ ಇರುವನಾಗಶಿಲ್ಪವಿದೆ  ನಿಡಿಗಲ್ಲು ಆಲಡೆಯಲ್ಲಿ ಮೇಲ್ಭಾಗ ಮನುಷ್ಯ, ಕೆಳಭಾಗದಲ್ಲಿ ನಾಗಾಕಾರ ಶಿಲ್ಪದ ಒಂದು ಬದಿಯಲ್ಲಿದ್ದರೆ, ಹಿಂಬದಿಯಲ್ಲಿ ನಾಗಮಂಡಲದ ಪವಿತ್ರ ಬಂಧದ ರಚನೆಯಿದೆ. ಅನಂತಾಡಿ ನಾಗಬನದಲ್ಲಿ ನಾಗನಿಗೆ ಸಾಮಾನ್ಯ ಒಂದು ಕಲ್ಲು ಇದೆ. ಆದರೆ ಬ್ರಹ್ಮರೆಂದು ಹಳೆಯ ಮಣ್ಣಿನ ಮಡಿಕೆಗಳಿವೆ. ಚೌಕಾರುಗುತ್ತಿನಲ್ಲಿ ಬೆರ್ಮೆರ್ ಎಂದು ಒಂದು ಮುರಕಲ್ಲನ್ನು ಆರಾಧಿಸುತ್ತಾರೆ ಕವತ್ತಾರು ಆಲಡೆಯಲ್ಲಿ ನಾಗನಿಗೆ ಸಣ್ಣಮಂಟಪ ಇದೆ. ಇದರ ಒಳಗೆ ಹೆಡೆ ತೆರೆದ ನಾಗಶಿಲ್ಪವಿದೆ. ಅಲ್ಲಿಯೇ ಪಕ್ಕದಲ್ಲಿ ಬೆರ್ಮರ ಮಾಡ ಇದೆ. ಇದರ ಒಳಗೆ ಒಂದು ಚೌಕಾಕಾರದ ಮುರಕಲ್ಲು ಇದೆ. ಇದನ್ನೇ ‘ಬ್ರಹ್ಮ’ ಎಂದು ಹೇಳುತ್ತಾರೆ.

ಹೀಗೆ ಕೆಲವೆಡೆ ನಾಗನ ಕಲ್ಲುಗಳು, ಕೆಲವೆಡೆ ನಾಗಶಿಲ್ಪಗಳು, ಇನ್ನು ಕೆಲವೆಡೆ ನಾಗಬ್ರಹ್ಮ ಶಿಲ್ಪಗಳು ಆರಾಧನೆಗೊಳ್ಳುತ್ತವೆ. ಕೆಲವೆಡೆ ಬ್ರಹ್ಮರಿಗೆ ತೆಂಗಿನಕಾಯಿ ಮೂಲಕ ಸಂಕಲ್ಪವಿದ್ದರೆ, ಕೆಲವೆಡೆ ‘ಬ್ರಹ್ಮ’ರಿಗೆ ಕಲ್ಲುಗಳು ಇವೆ. ಗರಡಿಗಳಲ್ಲಿ ಬ್ರಹ್ಮರ ಮೂರ್ತಿಗಳಿವೆ. ಇಲ್ಲಿ ನಾಗಬೆರ್ಮೆರ್ ಎಂದು ಹೇಳುವುದಿಲ್ಲ. ಆಲಡೆಗಳಲ್ಲಿ ಬ್ರಹ್ಮಲಿಂಗೇಶ್ವರ ಎನ್ನುತ್ತಾರೆ. ಆದರೂ ಆಲಡೆಗಳಲ್ಲಿ ಆದಿ ಆಲಡೆ, ಆದಿಬ್ರಹ್ಮಸ್ಥಾನಗಳಲ್ಲಿ ಹುತ್ತದ ಬೆರ್ಮರ ಆರಾಧನೆ ಇದೆ. ಕೆಲವು ಬ್ರಹ್ಮಸ್ಥಾನಗಳಲ್ಲಿ ಹಾಗೂ ಗರಡಿಗಳಲ್ಲಿ ಕೇವಲ ಬ್ರಹ್ಮಗುಂಡ ಮಾತ್ರ ಇರುತ್ತದೆ. “ಕಲ್‍ಡ್‍ನಾಗೆ ಪುಂಚೊಡು ಸರ್ಪ ಗುಂಡೊಡು ಬೆರ್ಮೆರ್. ಕಲ್ಲಿನಲ್ಲಿ ನಾಗ, ಹುತ್ತದಲ್ಲಿ ಸರ್ಪ, ಗುಂಡದಲ್ಲಿ ಬೆರ್ಮೆರ್ ನೆಲೆಯಾಗುತ್ತಾರೆ ಎಂದು ಹೇಳಿದೆ. “ಆ ನಾಗೆರ್ಲೆನ್ ಬೆರ್ಮೆರೆನ್ ನಿರ್ಮಿಯೆರ್ ದೇವೆರ್ ಎಡದಿಕ್ಕುಡು ಬೆರ್ಮೆರ್ ಬಲದಿಕ್ಕುಡು ...” (ಆ ನಾಗಗಳನ್ನು ಬೆರ್ಮೆರನ್ನು ನಿರ್ಮಿಸಿದರು, ದೇವರ ಎಡದಿಕ್ಕಿನಲ್ಲಿ ಬೆರ್ಮರ್ ಬಲದಿಕ್ಕಿನಲ್ಲಿ ... ) ಎಂಬ ಪಾಡ್ದನದ ಹೇಳಿಕೆಯಲ್ಲಿ ನಾಗ ಮತ್ತು ಬೆರ್ಮರ್ ಬೇರೆ ಬೇರೆ ಎರಡು ಶಕ್ತಿಗಳು ಎಂದು ಹೇಳಲಾಗಿದೆ.

ಕಾಪು ಬ್ರಹ್ಮಲಿಂಗೇಶ್ವರದೇವರ ಗರ್ಭಗುಡಿಯ ಎಡಭಾಗದ ಮೂಲ ಬ್ರಹ್ಮಸ್ಥಾನವೆಂದು ಕರೆಯಲ್ಪಡುವ ಬನದಲ್ಲಿ ಬ್ರಹ್ಮನ ಉದ್ಭವ ಶಿಲೆ ಇದೆ. ಇಲ್ಲಿ ನಾಗಶಿಲೆ ಇಲ್ಲ.

ಪಡುಪೆರಾರದ ಬ್ರಹ್ಮಬಲವಾಂಡಿ ದೇವಸ್ಥಾನದ ಮೂಲಬ್ರಹ್ಮಸ್ಥಾನವೆಂದು ಹೇಳುವ ಬನದಲ್ಲಿ ಬ್ರಹ್ಮನ ಉದ್ಭವವಾದ ಕಲ್ಲು ಇದೆ. ಇಲ್ಲಿ ನಾಗನಿಗೆ ಅಸ್ತಿತ್ವವಿಲ್ಲ. ಅಲ್ಲಿ ಸ್ವಲ್ಪ ದೂರದಲ್ಲಿರುವ ನಾಗಬನ ಇತ್ತೀಚೆಗೆ ನಿರ್ಮಿಸಲ್ಪಟ್ಟುದು ಎಂದು ಅಲ್ಲಿಯವರು ಹೇಳುತ್ತಾರೆ. ಅಲ್ಲಿನ ತಂತ್ರಿಗಳ ಪ್ರಕಾರ ಅಲ್ಲಿಯ ‘ಬ್ರಹ್ಮ’ ಭೂತಬ್ರಹ್ಮ, ನಾಗಬ್ರಹ್ಮನಲ್ಲ.

ಕೋಟಿಚೆನ್ನಯರ ಪಾಡ್ದನದ ಆದಿಯಲ್ಲಿ ಬರುವ ಬೆರ್ಮರ ವರ್ಣನೆ ಅಲೌಕಿಕವಾದುದು ಆಗಿದೆ. ಆದರೆ ಆ ಬೆರ್ಮರಿಗೆ ನಾಗನ ಹೆಡೆ ಇರುವ ಬಗ್ಗೆಯಾಗಲಿ ನಾಗಬ್ರಹ್ಮ ಶಿಲ್ಪಗಳಲ್ಲಿರುವಂತೆ, ಸೊಂಟದಿಂದ ಕೆಳಭಾಗ ಸರ್ಪಾಕಾರ ಇರುವ ಬಗ್ಗೆಯಾಗಲೀ ವರ್ಣನೆ ಇಲ್ಲ. ಒಂದೆರಡು ಪಾಡ್ದನಗಳಲ್ಲಿ ಕೋಟಿಚೆನ್ನಯರಿಗೆ ಕೆಮ್ಮಲೆಯಲ್ಲಿ ಕಾಣಿಸಿದ ಬೆರ್ಮರ್ ಕುದುರೆಏರಿದ ವೀರನಾಗಿ ಚಿತ್ರಿತನಾಗಿದ್ದಾನೆ. ಹೆಚ್ಚಿನ ಪಾಡ್ದನಗಳಲ್ಲಿ ವೀಳ್ಯದೆಲೆಯಷ್ಟು ತೆಳುವಾಗಿ, ತೆಂಗಿನಮರದಷ್ಟು ಎತ್ತರವಾಗಿ, ಆಲದಷ್ಟು ಅಗಲವಾಗಿ, ಅಡಿಕೆಯಷ್ಟು ಉರುಟಾಗಿ ಕಾಣಿಸಿದ ಬ್ರಹ್ಮನ ವರ್ಣನೆ ಇದೆ. ಇಲ್ಲಿ ಬ್ರಹ್ಮನಿಗೆ ಮನುಷ್ಯನ ಆಕಾರವನ್ನು ಸೂಚಿಸಿಲ್ಲ. ಆದರೆ ಮೊದಲು ಬೆರ್ಮರ ಉದೀಪನದ ಸಂದರ್ಭದಲ್ಲಿ ವರ್ಣಿಸಲ್ಪಟ್ಟ ಬ್ರಹ್ಮನಿಗೆ ಏಳುತಲೆಯ ಸತ್ತಿಗೆ, ಹಾಗೂ ಜನಿವಾರಗಳನ್ನು ಹೇಳಿದ್ದು ಇದು ರಾಜಪುರುಷನನ್ನು ಸೂಚಿಸುತ್ತದೆ. ಎಡದಲ್ಲಿ ಕರಿಯ ಸಂಕಮಾಲ, ಬಲಬದಿಯಲ್ಲಿ ಬಿಳಿಯ ಸಂಕಮಾಲ ಇರುವ ಬಗ್ಗೆ ಹೇಳಿದೆ. ಕರಿಯ ಸಂಕಮಾಲ ಮತ್ತು ಬಿಳಿಯ ಸಂಕಮಾಲರನ್ನು ಸರ್ಪಗಳೆಂದೂ, ನಾಗರಾಜರೆಂದೂ ಪರಿಗಣಿಸಲಾಗಿದೆ. ಈ ವರ್ಣನೆಯನ್ನು ಕಪ್ಪು ಶಂಖಗಳ ಹಾಗೂ ಬಿಳಿ ಶಂಖಗಳ ಮಾಲೆ ಎಂದೂ ಕೆಲವರು ಅರ್ಥೈಸಿದ್ದಾರೆ. 

ಕಂಡೇವು ಬೀಡಿನ ಬನದಲ್ಲಿ ಕರಿಯ ಸಂಕಪಾಲ ಹಾಗೂ ಬಿಳಿಯ ಸಂಕಪಾಲರ ನಾಗಬನಗಳಿವೆ. ತುಳುನಾಡಿನ ಕೆಲವೆಡೆ ಸಂಕಪಾಲ ಸುಬ್ರಹ್ಮಣ್ಯ ದೇವಾಲಯಗಳಿವೆ. ಏನೆಕಲ್ಲು ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಗರ್ಭಗುಡಿಯಲ್ಲಿ ಒಂದು ಹುತ್ತ ಅದರ ಎದುರು ಒಂದು ನಾಗಪ್ರತಿಮೆ ಇಟ್ಟು ಶಂಖಪಾಲ ಸುಬ್ರಹ್ಮಣ್ಯನೆಂದು ಪೂಜಿಸುತ್ತಾರೆ. ಇಲ್ಲಿ ನಾಗಪ್ರತಿಮೆ ‘ಶಂಖಪಾಲ’ನನ್ನು ಪ್ರತಿನಿಧಿಸುತ್ತದೆ. (ಚಿತ್ರ 31)

ಎಡಬಲಗಳಲ್ಲಿ ಸಂಕಪಾಲರಿರುವ ವರ್ಣನೆ ಎಲ್ಲ ಪಾಡ್ದನಗಳಲ್ಲಿ ಕಾಣಿಸುವುದಿಲ್ಲ. ಸಂಕಮಾಲ/ಸಂಕಪಾಲರ ಪ್ರಸ್ತಾಪವಿರುವಲ್ಲಿ ಕೂಡ ಬೆರ್ಮೆರ್ ಮತ್ತು ಸಂಕಪಾಲರು ಬೇರೆ ಬೇರೆ ಎಂಬ ಚಿತ್ರಣವಿದೆ. ಬೆರ್ಮರ್ ಎಡಬಲದಲ್ಲಿ ಕರಿಯ ಸಂಕಪಾಲ ಮತ್ತು ಬಿಳಿಯ ಸಂಕಪಾಲರಿದ್ದಾರೆ ಎಂಬ ವರ್ಣನೆ ಇದೆಯೇ ಹೊರತು ನಾಗಬೆರ್ಮರ್ ತಾದಾತ್ಯ್ಮವಿಲ್ಲ.

ಸಿರಿಯ ಪಾಡ್ದನದಲ್ಲಿ ಬೆರ್ಮರ ಸ್ವರೂಪದ ಬಗ್ಗೆ ಮಾಹಿತಿ ಸಿಗುವುದಿಲ್ಲ. ಕಾಡಿನಲ್ಲಿರುವ ಬೆರ್ಮರನ್ನು ತಂದು ಏಳದೆ ಗುಂಡ ನಿರ್ಮಿಸುವ ಬಗ್ಗೆ ಮಾತ್ರ ಹೇಳಲಾಗಿದೆ. ಇಲ್ಲಿ ಬೆರ್ಮರಿಗೆ ರಾಜಪುರುಷನ ವರ್ಣನೆ ಕೂಡ ಇಲ್ಲ. ಬೆರ್ಮರ ಪ್ರಸ್ತಾಪವಿರುವ ಪಾಡ್ದನಗಳಲ್ಲಿ ಸಿರಿಪಾಡ್ದನ ಪ್ರಾಚೀನವಾದುದು.

ಇದರಿಂದ ಸಿರಿಪಾಡ್ದನದ ಕಾಲದಲ್ಲಿ ಬೆರ್ಮೆರಿಗೆ ಪುರುಷ ರೂಪದ ಪರಿಕಲ್ಪನೆ ಇರಲಿಲ್ಲ ಎಂದು ತಿಳಿಯುತ್ತದೆ. ಬೆರ್ಮರಿಗೆ ಗುಂಡ ಕಟ್ಟುವ ಸಂಪ್ರದಾಯ ಬಹುಶಃ ಈ ಕಾಲದಲ್ಲಿ ಆರಂಭವಾಗಿರಬೇಕು. ಕಾಡಿನಲ್ಲಿರುವ ಬೆರ್ಮೆರನ್ನು ತಂದು ಏಳದೆ ಗುಂಡ ಕಟ್ಟಿರುವ ಪ್ರಸ್ತಾಪ ಈ ಪಾಡ್ದನದಲ್ಲಿದೆ. ಕಾಡಿನಲ್ಲಿ ‘ಬೆರ್ಮೆರ್’ ಯಾವ ರೂಪದಲ್ಲಿ ಇದ್ದ? ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಕಾಡಿನಲ್ಲಿ ಪಾಳು ಬಿದ್ದ ಬ್ರಹ್ಮಸ್ಥಾನದ ಸ್ಥಳದಿಂದ ಮಣ್ಣನ್ನು ತಂದು ಗುಂಡದೊಳಗೆ ಪ್ರತಿಷ್ಠಾಪಿಸಿರಬಹುದೇ? ಇಂದಿಗೂ ಕೋಳ್ಯೂರು ಬೈಲಿನಲ್ಲಿ ಪೂಕರೆಯ ದಿನ ಒಂದು ಮುಷ್ಠಿ ಮಣ್ಣನ್ನು ಹಿಂಗಾರದೊಂದಿಗೆ ಬಾಳೆಕುಡಿಯ ಮೇಲಿಟ್ಟು ಗಣಪತಿ ಎಂದು ಸಂಕಲ್ಪಿಸುತ್ತಾರೆ. ಇಲ್ಲಿಬ್ರಹ್ಮರನ್ನು ‘ಗಣಪತಿ’ ಎಂದು ಹೇಳುತ್ತಾರೆ ಎಂದು ಅಲ್ಲಿನ ಹಿರಿಯರಾದ ನಾರಾಯಣಭಟ್ಟರು ಹೇಳುತ್ತಾರೆ. ಕೋಳ್ಯೂರಿನ ಶಂಕರನಾರಾಯಣ ದೇವಸ್ಥಾನ ಬ್ರಹ್ಮ-ವಿಷ್ಣು-ಶಿವರೆಂಬ ತ್ರಿಮೂರ್ತಿಗಳ ದೇವಸ್ಥಾನವಾಗಿದೆ. ಇಲ್ಲಿ ಬ್ರಹ್ಮನ ಬದಲಿಗೆ ಗಣಪತಿಯನ್ನೇ ಆರಾಧಿಸುವ ಪದ್ಧತಿಯಿದೆ.

ಬ್ರಹ್ಮಸ್ಥಾನಗಳು ಕಾಡಿನಲ್ಲಿ ಇರುತ್ತವೆ. ವರ್ಷದಲ್ಲಿ ಒಂದೆರಡು ಬಾರಿ ಅಲ್ಲಿಗೆ ಹೋಗಿ ಆರಾಧಿಸುತ್ತಾರೆ. ಬೆರ್ಮೆರ ಕಲ್ಲುಗಳು ಬನದಲ್ಲಿ ಇರುತ್ತದೆ. ಕಾಲಾಂತರದಲ್ಲಿ ಕಲ್ಲುಗಳ ಮೇಲೆ ಹುತ್ತ ಬೆಳೆದಾಗ, ಹುತ್ತವನ್ನು ಕೀಳುವ ಧೈರ್ಯ ಯಾರಿಗೂ ಇರುವುದಿಲ್ಲ. ಕವತ್ತಾರು ಆಲಡೆಯಲ್ಲಿ ಬ್ರಹ್ಮಲಿಂಗೇಶ್ವರ ಗರ್ಭಗುಡಿಯ ಎದುರು ಭಾಗದಲ್ಲಿ ಬ್ರಹ್ಮದೇವರ ಸಣ್ಣಗುಡಿಯೊಂದಿದ್ದು ಅದರಲ್ಲಿ ಬ್ರಹ್ಮರ ಪ್ರತೀಕವಾಗಿ ಒಂದು ಚೌಕಾಕಾರದ ಮುರಕಲ್ಲು ಇದೆ. ಇದರ ಮೇಲೆ ಈಗ ಹುತ್ತ ಬೆಳೆಯುತ್ತಿದ್ದು, ಈ ಹುತ್ತವನ್ನು ಕೀಳಬಾರದು ಎಂದು ಅಲ್ಲಿನ ಅರ್ಚಕರು ಹೇಳುತ್ತಾರೆ. 

 

ಕಾಲಾಂತರದಲ್ಲಿ ಹೀಗೆ ಬೆಳೆದ ಹುತ್ತಗಳು ನಾಗನ ಆವಾಸಸ್ಥಳಗಳಾಗುತ್ತವೆ. ತುಳುನಾಡಿನಲ್ಲಿ ನಾಗಾರಾಧನೆ ಪ್ರಚಲಿತವಿದೆ. ಇದರ ಪ್ರಭಾವದಿಂದಾಗಿ ಬ್ರಹ್ಮಸ್ಥಾನದ ಹುತ್ತಗಳಲ್ಲಿ ಬೆರ್ಮೆರ್ ಜೊತೆಗೆ ನಾಗನ ಆರಾಧನೆ ಪ್ರಾರಂಭವಾಯಿತು. ಕಾಲಾಂತರದಲ್ಲಿ ನಾಗ ಮತ್ತು ಬೆರ್ಮೆರ್ ನಡುವಿನ ಅಂತರ ಅಳಿಸಿಹೋಗಿ ನಾಗಬ್ರಹ್ಮರಿಗೆ ಏಕಾತ್ಮತೆ ಉಂಟಾಗಿದೆ ಎನ್ನಬಹುದು.

ಆಧಾರ ಗ್ರಂಥ 

ಕರಾವಳಿಯ ಸಾವಿರದೊಂದು ದೈವಗಳು:ಡಾ.ಲಕ್ಷ್ಮೀ ಜಿ ಪ್ರಸಾದ, ಮೊಬೈಲ್ 9480516684

ತುಳು ನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ:ಲೇ ಡಾ.ಲಕ್ಷ್ಮೀ ಜಿ ಪ್ರಸಾದ 

 

ಹೀಗೊಂದು ಮೋಸ ಪುರಾಣ -ಡಾ.ಲಕ್ಷ್ಮೀ ಜಿ ಪ್ರಸಾದ

 

ಹೀಗೊಂದು ಮೋಸ ಪುರಾಣ -ಡಾ.ಲಕ್ಷ್ಮೀ ಜಿ ಪ್ರಸಾದ

 


ವಿಷ್ಣು ಪುರಾಣ ಶಿವ ಪುರಾಣ ಗರುಡ ಪುರಾಣ ಹೆಸರು ಕೇಳಿದ್ದೀರಿ ಇದ್ಯಾವುದು ಮೋಸ ಪುರಾಣ ಅಂತ ತಿಳಿಯಬೇಕೆ ?ಹಾಗಾದರೆ ಸಾವಕಾಶ ಓದಿ ಇದನ್ನು

ಸಾಮಾನ್ಯವಾಗಿ ನಾನು ಯಾವುದೇ ಪ್ರಶಸ್ತಿ ಗಾಗಲಿ, ಪುಸ್ತಕ ಬಹುಮಾನಕ್ಕಾಗಲಿ ಫೆಲೋ ಶಿಪ್ ಗಾಗಲೀ ಅರ್ಜಿ ಸಲ್ಲಿಸುವುದಿಲ್ಲ .

 ಕೆಲವು ವರ್ಷಗಳ ಮೊದಲು ಕನ್ನಡ ಜಾನಪದ ಅಕಾಡೆಮಿ ಕೆಲವು ವಿಷಯಗಳ ಮೇಲೆ  ಅಧ್ಯಯನ ಮಾಡಲು ಫೆಲೋ ಶಿಪ್ ಗೆ ಅರ್ಜಿ ಆಹ್ವಾನಿಸಿತ್ತು .ಅದರಲ್ಲಿ ನನ್ನ ಆಸಕ್ತಿಯ ಒಂದೆರಡು ವಿಷಯಗಳೂ ಇದ್ದವು .ಆ ದಿನ ಅದನ್ನು ಓದಿದಾಗ ಅರ್ಜಿ ಸಲ್ಲಿಸಬೇಕು ಎಂದು ಕೊಂಡೆ .ಹಾಗೆ ಮಗನಲ್ಲಿ ಈ ಬಾರಿ ನಾನು ಫೆಲೋಶಿಪ್ ಗೆ ಅರ್ಜಿ ಸಲ್ಲಿಸುತ್ತೇನೆ ಎಂದು ಹೇಳಿದ್ದೆ
ದಿನ ಪಂಡು ಕಳೆದಾಗ .ಮತ್ಯಾಕೋ ಬೇಡ ಅನಿಸಿತ್ತು ಇಷ್ಟರ ತನಕ ನಾನು ಯಾವುದೇ ಸಂಘ ಸಂಸ್ಥೆ  ಅಕಾಡೆಮಿಗಳ  ಅನುದಾನ ಪಡೆಯದೇ ಸ್ವಂತ ಅಧ್ಯಯನ ಮಾಡಿದ್ದೇನೆ ಈಗ ಇನ್ನು ಇವೆಲ್ಲ ಕಿರಿ ಕಿರಿ ಬೇಡ ಎನ್ನಿಸಿತು ..ಹಾಗಾಗಿ ಅರ್ಜಿ ಸಲ್ಲಿಸುವ ವಿಚಾರ ಬಿಟ್ಟು ಬಿಟ್ಟಿದ್ದೆ ..
ಏನೋ ಮಾತಾಡುವಾಗ ಮಗ ಹೇಳಿದ "ಅಮ್ಮ ಈಗಾಗಲೇ ಅಲ್ಲಿ ಕೊಟ್ಟ ವಿಷಯಗಳ ಬಗ್ಗೆ ಸ್ಟಡಿ ಮಾಡಿದ್ದೀಯಲ್ಲ .ಇನ್ನು ಒಂದಷ್ಟು ಮಾಡಿ ಎಲ್ಲ ಒಟ್ಟಿಗೆ ಸೇರಿಸಿ ಬರೆದು ಸಲ್ಲಿಸಿದರೆ ಆಯಿತು ಅಲ್ವ ?ನೀನು ಯಾಕೆ ಫೆಲೋ ಶಿಪ್ ಸಿಗುತ್ತಾ ಅಂತ ಯತ್ನಿಸಬಾರದು ,ಒಂದು ಸಲ ಅರ್ಜಿ ಸಲ್ಲಿಸಿ ನೋಡು ಸಿಗುತ್ತಾ ಅಂತ ಹೇಳಿದ ..
ಹೌದಲ್ಲ ?ಅನಿಸಿತು ನನಗೆ .
ದಿನ ದಿನ ಕಳೆದ ಹಾಗೆ ನಾನು ಚಿಕ್ಕವಳಾಗುದಿಲ್ಲ ,ಮುಂದೆ ವಯಸ್ಸಾದಂತೆ  ಮೊದಲಿನಂತೆ ಅಧ್ಯಯನ ಮಾಡಲು ಸಾಧ್ಯವಾಗುತ್ತೋ ಇಲ್ಲವೋ ? ಈಗ ಒಂದು ಗುರಿ ಇದ್ದರೆ ಹೇಗೋ ಸಂಶೋಧನೆ ಮಾಡಿ ಬಿಡಬಹುದು ಜೊತೆಗೆ ಫೆಲೋ ಶಿಪ್ ಇರುವ ಕಾರಣ ಅಧ್ಯಯನಕ್ಕೆ ಆರ್ಥಿಕ ಹೊರೆ ಅಂತು ಬೀಳುದಿಲ್ಲ ..
ಹಾಗೆ ಆಲೋಚಿಸಿ ಇಂದು ಕನ್ನಡ ಜಾನಪದ ಅಕಾಡಮಿ ಗೆ ಹೋಗಿ ಅರ್ಜಿ ಸಲ್ಲಿಸಿ ಬಂದೆ .ಅಲ್ಲಿಗೆ ಹೋಗುವಾಗ ತುಸು ಅಳುಕಿತ್ತು ಅಲ್ಲಿನ ರಿಜಿಸ್ತ್ರರ್ ಹೇಗೋ ಏನೋ ಎಂದು ,
ಆದರೆ ಅಲ್ಲಿನ ರಿಜಿಸ್ಟ್ರಾರ್ ಅವರನ್ನು ಭೇಟಿ ಮಾಡಿ ಮಾತಾಡಿದ ಮೇಲೆ ನನಗೆ ಮನಸು ನಿರಾಳ  ಆಯಿತು ,ಬಹಳ ಸಜ್ಜನಿಕೆಯಿಂದ ಮಾತಾಡಿದರು .ನನ್ನ ಆರ್ಜಿ ಆಯ್ಕೆಯಾಗಿ ಫೆಲೋ ಶಿಪ್ ಸಿಗುತ್ತೋ ಇಲ್ಲವೋ ಅದು ಬೇರೆ ವಿಚಾರ ಆದರೆ ಅವರ ಸರಳತೆ ಸಹೃದಯ ಮಾತು ಇಷ್ಟವಾಯಿತುಇಲ್ಲೂ ನನಗೆ ಸಿಗಲಿಲ್ಲ ಅದು ಬೇರೆ ವಿಚಾರ 

ಅಲ್ಲಿ ಅರ್ಜಿ ಸಲ್ಲಿಸಿ ಬರುವಾಗ ನನಗೆ ತುಳು ಅಕಾಡೆಮಿ ಫೆಲೋಶಿಪ್  ಪುರಾಣ ನೆನಪಾಯಿತು 

ಸುಮಾರು 5- 6 ವರ್ಷಗಳ ಹಿಂದೆ ತುಳು ಅಕಾಡೆಮಿ ತುಳು ಅಧ್ಯಯನ ಆಸಕ್ತರಿಂದ ಫೆಲೋ ಶಿಪ್ ಗಾಗಿ ಅರ್ಜಿ ಆಹ್ವಾನಿಸಿತ್ತು ,ಪತ್ರಿಕೆಯಲ್ಲಿ ಈ ಬಗ್ಗೆ ಓದಿ ನಾನು ತುಳು ಅಕಾಡೆಮಿ   ರಿಜಿಸ್ಟ್ರಾರ್ ಗೆ ಫೋನ್ ಮಾಡಿದೆ ,ಈ ಬಗ್ಗೆ ಮಾಹಿತಿ ಕೇಳಿದೆ .ಸರಕಾರಿ ಉದ್ಯೋಗಿಗಳೂ ಅರ್ಜಿ ಸಲ್ಲಿಸಬಹುದೇ? ಎಂದು ಕೇಳಿದೆ .ಆಗ ಅವರು ಅಕಾಡೆಮಿ ಅಧ್ಯಕ್ಷರಾದ ಪಾಲ್ತಾಡಿಯವರಿಗೆ  ಫೋನ್ ಕೊಟ್ಟರು ,ಅವರು ಸರಕಾರಿ ಉದ್ಯೋಗಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದು ತಿಳಿಸಿದರು .ಇರ ಬಹುದು ಎಂದು ಕೊಂಡು ನಾನು ಸುಮ್ಮನಾದೆ .
ಸುಮಾರು ಎರಡು ಮೂರು ತಿಂಗಳ ನಂತರ ತುಳು ಅಕಾಡೆಮಿ ಫೆಲೋ ಶಿಪ್ ಗೆ ಆಯ್ಕೆ ಆದವರ ಹೆಸರುಗಳು ಪತ್ರಿಕೆಗಳಲ್ಲಿ ಬಂತು .ಅದರಲ್ಲಿ  ಬೆಳ್ಳಾರೆಸರ್ಕಾರೀ ಪ್ರಥಮ ದರ್ಜೆ ( ಶಿವರಾಮ ಕಾರಂತ) ಕಾಲೇಜ್ ನ ಹಿರಿಯ ಉಪನ್ಯಾಸಕರಾದ ಡಾ.ನರೇಂದ್ರ ರೈ ದೇರ್ಲ ಅವರ ಹೆಸರೂ ಇತ್ತು .ಅವರು ಫೆಲೋ ಶಿಪ್ ಗೆ ಅರ್ಹರೇ!ಆ ಬಗ್ಗೆ ಎರಡು ಮಾತಿಲ್ಲ ಆದರೆ ಸರ್ಕಾರೀ ಉದ್ಯೋಗಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲವೆಂದಾದ ಮೇಲೆ ಅವರಿಗೆ ಹೇಗೆ ಸಿಕ್ತು ?
ನಾನು ಎಲ್ಲೋ ಮೋಸ ಹೋದ ಬಗ್ಗೆ ತುಸು ವಾಸನೆ ಬಡಿಯಿತು .
ಮತ್ತೆ ರಿಜಿಸ್ಟ್ರಾರ್ ಚಂದ್ರ ಹಾಸ ರೈಗಳಿಗೆ ಫೋನ್ ಮಾಡಿದೆ .ಮತ್ತೆ ಯಥಾ ಪ್ರಕಾರ ಅವರು ಅಧ್ಯಕ್ಷರಾದ ಪಾಲ್ತಾಡಿ    ಕೈಗೆ ಫೋನ್ ಹಸ್ತಾಂತರಿಸಿದರು !
ಆಗ ಅವರು ಹೇಳಿದರು ಮತ್ತೆ ನಿಯಮದಲ್ಲಿ ಬದಲಾವಣೆ ಮಾಡಿದರಂತೆ !ನಾನು ಫೋನ್ ಮಾಡಿದಾಗ ಅರ್ಜಿ ಸಲ್ಲಿಸಲು ಎರಡು ದಿನ ಮಾತ್ರ ಬಾಕಿ ಇತ್ತು ಅಲ್ಲಿ ತನಕ ನಿಯಮ ಬದಲಾವಣೆ ಆಗಿರಲಿಲ್ಲ (ಮಾಡಿರಲಿಲ್ಲ !!!!!) ನಂತರ ಎರಡು ದಿನದಲ್ಲಿ ಬದಲಾವಣೆ ಆಯಿತು ಹಾಗಾದರೆ !
ಕೊಡಲು ಮನಸು ಇಲ್ಲದೇ ಇದ್ದರೆ ನಾನಾ ನೆಪಗಳು ಸಿದ್ಧವಾಗಿರುತ್ತದೆ ಇದನ್ನು ಪ್ರಶ್ನಿಸಿದರೆ ಅದು ಘೋರ ಅಪರಾದ !ಅದು ಜಗಳ ಕಂಟ ತನ ಎಂಬ ಬಿರುದು ಬೇರೆ ಸಿಗುತ್ತದೆ ಅದಕ್ಕೆ ನಾನು ಎಲ್ಲಿ ಯಾವುದೇ ಫೆಲೋಶಿಪ್ ಗೆ ಅರ್ಜಿ ಸಲ್ಲಿಸುವ ಗೋಜಿಗೆ ಹೋಗುದಿಲ್ಲ
ನನ್ನ ಮಿತಿಯಲ್ಲಿ ನನಗೆಷ್ಟು ಸಾಧ್ಯವೋ ಅಷ್ಟು ಮಾಡುತ್ತೇನೆ ..
ಆದರೆ ಜನ ಹೇಗೆಲ್ಲ ಕಾಲು ಎಳೆಯುತ್ತಾರೆ ನಮಗೆ ಗೊತ್ತಿಲ್ಲದೇ ಎಷ್ಟು ಮೋಸ ಹೋಗುತ್ತ್ತೇವೆ ಅಲ್ಲವೆ ಅಂತ ಆಶ್ಚರ್ಯ ಆಗುತ್ತದೆ .
ಇದೆ ರೀತಿ ಇನ್ನೊಂದು ವಿಷಯದಲ್ಲಿ ಮೋಸ ಹೋದದ್ದು ನನಗೆ ನೆನಪಾಗುತ್ತಿದೆ .
ಕೆಲವು ವರ್ಷಗಳ ಹಿಂದೆ ನಾನಾ ಕೆಲವು ಪುಸ್ತಕಗಳನ್ನು ನಾನೇ ಸ್ವಂತ ಪ್ರಕಟಿಸಿದ್ದೆ ,ನಂತರ 2010 ರಲ್ಲಿ ನನಗೆ ಪಿಎಚ್ ಡಿ ಪದವಿ ದೊರೆಯಿತು .
ನನ್ನ ಪಿಎಚ್ ಡಿ ಸಂಶೋಧನಾ ಪ್ರಬಂಧವನ್ನು ಯಾರಾದರೂ ಪ್ರಕಾಶಕರು ಪ್ರಕಟಿಸಿದರೆ ಒಳ್ಳೆಯದಿತ್ತು ಎಂದು ಆಲೋಚಿಸುತ್ತಿದ್ದೆ
ನನಗೆ ಈ ಕ್ಷೇತ್ರದಲ್ಲಿ ಯಾರೂ ಪರಿಚಯ ಇರಲಿಲ್ಲ ,ನನ್ನ ಪರಿಚಿತ ಸಂಶೋಧಕಿ ಒಬ್ಬರ  ಸಂಶೋಧನಾ ಮಹಾ ಪ್ರಬಂಧವನ್ನು ನವ ಕರ್ನಾಟಕ ಪಬ್ಲಿಕೇಶನ್ಸ್ ಪ್ರಕಟಿಸಿದ್ದು ನನಗೆ ತಿಳಿದಿತ್ತು
ಹಾಗೆ ಯಾವಾಗಲೋ ಅವರು ಸಿಕ್ಕಾಗ ನವಕರ್ನಾಟಕ ಪುಸ್ತಕ ಪ್ರಕಾಶಕರು ಯಾರು? ಅವರ ನಂಬರ್ ಕೊಡಲು ಸಾಧ್ಯವೇ? ಎಂದು ಕೇಳಿದೆ
ಆಗ ಅವರು ತಕ್ಷಣವೇ "ಅವರಿಗೆ ನನ್ನ ಥಿಸಿಸ್ ಪ್ರಕಟಿಸಿಯೇ ತುಂಬಾ ನಷ್ಟ ಆಯಿತಂತೆ ಅವರು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವುದೇ ಇಲ್ಲ ನನ್ನದನ್ನು ಏನೋ ಪ್ರಕಟಿಸಿದರು ಈಗ ನಷ್ಟ ಆಯಿತು ಇನ್ನು ಯಾರ ಸಂಶೋಧನಾ ಪ್ರಬಂಧ ವನ್ನು ಪ್ರಕಟಿಸುವುದೇ ಇಲ್ಲ ಎಂದು ಹೇಳಿದ್ದಾರೆ "ಎಂದು ಹೇಳಿದರು !ನಾನು ಸತ್ಯ ನಂಬಿದೆ ಇರಬಹುದು ಎಂದು !

ನಂತರ ನನ್ನ ಸಂಪ್ರಬಂಧವನ್ನು ಪ್ರಚೇತ ಬುಕ್ ಪಬ್ಲಿಷರ್ಸ್ ಪ್ರಕಟ ಮಾಡಿದರು ,ಅದು ಸಾಕಷ್ಟು ಯಶಸ್ವಿ ಅಯ್ತಿ ಕೂಡ .ನಷ್ಟ ಆಗಲಿಲ್ಲ ಬದಲಿಗೆ ಲಾಭ ತಂದು ಕೊಟ್ಟಿತ್ ತುಕೂಡ

ಈ ಪುಸ್ತಕವನ್ನು ಅವರು ನವಕರ್ನಾಟಕ ಮಳಿಗೆಗಳಲ್ಲೂ ಮಾರಾಟಕ್ಕೆ ಹಾಕಿದ್ದರು ಅಲ್ಲಿ ಕೂಡ ಸಾಕಷ್ಟು ಪುಸ್ತಕಗಳು ಮಾರಾಟವಾಗಿವೆ .


ಒಂದಿನ ನಾನು ಮಂಗಳೂರಿನ ನವಕರ್ನಾಟಕ ಮಳಿಗೆಗೆ ಹೋದೆ ಆಗ ನನ್ನ ಎದುರಿನಲ್ಲಿಯೇ ಇಬ್ಬರು ನನ್ನ ಪುಸ್ತಕವನ್ನು ಕೇಳಿದರು.ಅಲ್ಲಿ ಪುಸ್ತಕಪ್ರತಿ ಮುಗುದಿತ್ತು .ಆಗ ಅಲ್ಲಿನ ಮ್ಯಾನೇಜರ್ ಅವರು ಮೇಡಂ ನೀವು ಈ ಪುಸ್ತಕವನ್ನು ನಮ್ಮ          ನವ ಕರ್ನಾಟಕ ಪಬ್ಲಿಕೇಶನ್ ನಲ್ಲಿ ಪ್ರಕಟ ಮಾಡಬೇಕಿತ್ತು .ಇದಕ್ಕೆ ಇನ್ನೂ ಹೆಚ್ಚು ವ್ಯಾಲ್ಯೂ ಇರುತ್ತಿತ್ತು ನಿಮ್ಮ ಈ ಪುಸ್ತಕಕ್ಕೆತುಂಬಾ ಬೇಡಿಕೆ ಇದೆ ಎಂದು" ಹೇಳಿದರು ಆಗ ನಾನು ನವ ಕರ್ನಾಟಕ ದವರು ಪಿ ಎಚ್ ಡಿ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವುದಿಲ್ಲವಂತೆ !ಎಂದು ಹೇಳಿದೆ .ಹಾಗೆ ಹೇಳಿದ್ದು ಯಾರು ?ನಿಮಗೆ ಯಾರೋ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾರೆ,ನವಕರ್ನಾಟಕ ಪ್ರಕಾಶಕರು ಸಂಶೋಧನಾ ಕೃತಿಗಳಿಗೆ ಮೊದಲ ಆದ್ಯತೆ ನೀಡುತ್ತಾರೆ ಎಂದು ಹೇಳಿದರು !

ನಾನು ಮತ್ತೆ ಮೋಸ ಹೋಗಿದ್ದೆ !ಏನು ಮಾಡುದು ಹೀಗೆ ಕಾಲೆಳೆಯುವ ಮಂದಿ ಇರುತ್ತಾರೆ..ಏನುಮಾಡುವುದು !ಆದರೂ ತಕ್ಷಣಕ್ಕೆ ತೀರಾ ಸತ್ಯ ಅನಿಸುವ ಹಾಗೆ ಹೇಳಿದಾರಿ ತಪ್ಪಿಸುವ ಉಪಾಯಗಳು ಇವರಿಗೆ ಹೇಗೆ ನೆನಪಾಗುತ್ತವೆ ಅಂತ ಅಚ್ಹ್ಕಾರಿ ಆಗುತ್ತದೆ ಬಹುಶ ಇಂಥವರು ಸದಾ ಇದೆ ಮಾಡುತ್ತಿರುತ್ತಾರೆ ಹಾಗಾಗಿ ಅವರಿಗೆ ಅನಾಯಾಸವಾಗಿ ಇಂಥ ಟ್ರಿಕ್ ಗಳು ಹೊಳೆಯುತ್ತವೆ ಇರಬೇಕು
ಆಲದ ಮರ ಸೊಂಪಾಗಿ ಬೆಳೆದು ಮೃಗ ಪಕ್ಷಿಗಳಿಗೆ ಆಶ್ರಯ ನೀಡುತ್ತದೆ ನೆರಳನ್ನೂ ನೀಡುತ್ತದೆ ಆದರೆ ಬೇರೆ ಗಿಡ ಮರಗಳನ್ನು ಬೆಳೆಯಲು ಬಿಡುವುದಿಲ್ಲ ಅಂತೆಯೇ ಅನೇಕರು ಇರುತ್ತಾರೆ .ಇಂಥವರ ನಡುವೆಯೂ ಡಾ.ಅಮೃತ ಸೋಮೇಶ್ವರ ,ಡಾ,ವಾಮನ ನಂದಾವರ ,ಡಾ.ಸುಬ್ಬಣ್ಣ ರೈ ಮೊದಲಾದ ಕೆಲವು ವಿದ್ವಾಂಸರು ತಾವು ಬೆಳೆಯುವುದರೊಂದಿಗೆ ಬೇರೆಯವರನ್ನೂ ಬೆಳೆಸುತ್ತಾರೆ ಅನ್ನುವುದು ಸಂತೋಷದ ವಿಚಾರ

ಕೆಲವು ವರ್ಷಗಳ ಮೊದಲು ಬರೆದ ಬರಹವಿದು

ನನ್ನ ಪುಸ್ತಕಗಳು


 

ಭೂತಾರಾಧನೆ ದೈವಾರಾಧನೆಗೆ ಯಾರಿಂದ ಅಪಚಾರ ಆಗುತ್ತಿದೆ?

 ಭೂತಾರಾಧನೆ ದೈವಾರಾಧನೆಗೆ ಯಾರಿಂದ  ಅಪಚಾರ ಆಗುತ್ತಿದೆ?


ಮೊದಲಿಗೆ ದೈವವನ್ನು ಕಾಡಿನ ಮರದ ಕೆಳಗೆ ಕಲ್ಲು ಹಾಕಿ ನಂಬುತ್ತಿದ್ದರು.ವರ್ಷಕ್ಕೊಮ್ಮೆ ಅಲ್ಲಿಗೆ ಹೋಗಿ ಕೋಲ ಕಟ್ಟಿ ಆರಾಧನೆ ಮಾಡುತ್ತಿದ್ದರು
ದೈವಗಳಿಗೆ ಮೂರ್ತ ರೂಪ/ ಮೂರ್ತಿಗಳು ಇರಲಿಲ್ಲ
ಈಗ ಊರು ನಡುವೆ ಮನೆ ಮುಂದೆ ಕೂಡ ದೈವಸ್ಥಾನಗಳ ನಿರ್ಮಾಣ ಆಗಿದೆ, ಮೂರ್ತಿಗಳ ಪ್ರತಿಷ್ಠಾಪನೆ ಕೂಡ ಆಗಿದೆ

ಮೊದಲು ರಾತ್ರಿ ಮಾತ್ರ ಕೋಲ ಆಗುತ್ತಿತ್ತು,ಈಗ ನಡು ಮಧ್ಯಾಹ್ನ ಕೂಡ ಆಗುತ್ತಿದೆ

ಮೊದಲು ಅಡಿಕೆ ಹಾಳೆಯ ಮೊಗವನ್ನು ಸ್ಥಳದಲ್ಲಿಯೇ ತಯಾರು ಮಾಡಿ ಬಳಸುತ್ತಿದ್ದರು.ಕೇಪುಳ ಹೂ, ಪಾದೆ ಹೂವಿನಂತಹ ಕಾಡಿನಲ್ಲಿ ಸಿಗುವ ಹೂಗಳನ್ನು ಬಳಸುತ್ತಿದ್ದರು.ಆರತಿ ಮಾಡುವ ಪದ್ಧತಿ ಇರಲಿಲ್ಲ ಧೂಪ ಕರ್ಪೂರ ದ ಬಳಕೆ ಇರಲಿಲ್ಲ.ತೆಂಬರೆ ಹೊರತಾಗಿ ಬೇರೆ ವಾದ್ಯಗಳ ಬಳಕೆ ಇರಲಿಲ್ಲ .
ಸಂಪೂರ್ಣವಾಗಿ ತೆಂಗಿನ ತಿರಿಯ ಅಲಂಕಾರ ಇರುತ್ತಿತ್ತು.
ಆಯಾಯ ದೈವಗಳಿಗೆ ಅವರದ್ದೇ ಆದ ಮುಖವರ್ಣಿಕೆ ಇತ್ತು
ಯಕ್ಷಗಾನದ ನಾಟಕದ ದೇವ ದೇವತೆಗಳಂತೆ ವೇಷ ಭೂಷಣಗಳನ್ನು ಧರಿಸುತ್ತಿರಲಿಲ್ಲ.

ಈಗ ಕೆಲವು ದೈವಗಳ ಫೋಟೋ ನೋಡುವಾಗ ದೈವವಾ? ಯಕ್ಷಗಾನ/ ನಾಟಕದ ದೇವತೆಗಳು ಪಾತ್ರಗಳಾ ಎಂದು ತಿಳಿಯದಾಗಿದೆ . ಮೊದಲು ದೈವಗಳನ್ನು ಶಿವನ ಅಥವಾ ವಿಷ್ಣು ವಿನ ಅವತಾರ ಎಂದೋ ಅಂಶ ಎಂದೋ ಹೇಳುತ್ತಿರಲಿಲ್ಲ..ಈಗ ಎಲ್ಲ ದೈವಗಳೂ ಪುರಾಣ ದೇವತೆಗಳಾಗಿವೆ.ಉದಾ ತನ್ನಿ ಮಾನಿಗ ಆದಿ ಮಾಯೆಯಾಗಿ ಕೊರತಿ ಪಾರ್ವತಿ ದೇವಿಯಾಗಿ, ಉಳ್ಳಾಲ್ತಿ ದುರ್ಗೆ ಆಗಿ,ಪಿಲಿ ಭೂತ ವ್ಯಾಘ್ರ ಚಾಮುಂಡಿಯಾಗಿ, ಚಾಮುಂಡೇಶ್ವರಿ ಆಗಿ ಲೆಕ್ಕೇಸಿರಿ  ರಕ್ತೇಶ್ವರಿ ಆಗಿ  ಅಜ್ಜಿ ಭೂತ ಮಹಾ ಲಕ್ಷ್ಮೀ  ಆಗಿ
ಬೆರ್ಮೆರ್ ಬ್ರಹ್ಮ ಲಿಂಗೇಶ್ವರ ಆಗಿ ಸಮೀಕರಣಗೊಂಡಿದ್ದಾರೆ
ಇಲ್ಲಿ ಅವತಾರದ ಪರಿಕಲ್ಪನೆಯೇ ಇರಲಿಲ್ಲ..ಈಗ ಎಲ್ಲ ದೈವಗಳೂ ಅವತಾರ ಎತ್ತಿದ ಪುರಾಣ ದೇವತೆಗಳೇ ಆಗಿದ್ದಾರೆ. 
ಕಾಡಿನ ಮರದ ಅಡಿಯಲ್ಲಿ ಕಲ್ಲು ಹಾಕಿ ಆರಾಧಿಸಲ್ಪಡುತ್ತಿದ್ದ ದೈವಗಳಿಗೆ ಭವ್ಯವಾದ ಮಂದಿರಗಳು ನಿರ್ಮಾಣ ಆಗಿ  ಬ್ರಹ್ಮ ಕಲಶ ವೇದೋಕ್ತ ಹೋಮ ಹವನಗಳು ಸತ್ಯನಾರಾಯಣ ಪೂಜೆಗಳು ಆಗುತ್ತಿವೆ 
ಇವೆಲ್ಲವೂ ಬದಲಾವಣೆಯಾ ಅಥವಾ ಅಪಚಾರವಾ ?

ಈಗ ಅನೇಕ ಕಡೆ ದೈವಗಳು ಯಕ್ಷಗಾನ ಬಯಲಾಟದ ವೇಷಗಳಂತೆ ಕಾಣಿಸುತ್ತವೆ.ಪಾಡ್ದನಗಳನ್ನು ಹಾಡಲು ತಿಳಿದವರು ಸಂಖ್ಯೆ ತೀರಾ ಕಡಿಮೆ ಆಗಿದ್ದು ಬೆರಳೆಣಿಕೆಯಷ್ಟು ಮಂದಿ ಮಾತ್ರ ತಿಳಿದಿದ್ದಾರೆ
ಮೊದಲು ಪಾಡ್ದನ ಹಾಡುತ್ತಾ ಕುಣಿಯುತ್ತಿದ್ದರು ಸಿನಿಮಾ ಅಥವಾ ಇತರೆ ಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕುತ್ತಿರಲಿಲ್ಲ
ಈಗ ವಾದ್ಯಗಳಿಲ್ಲದೆ ಕೋಲವೇ ನಡೆಯುವುದಿಲ್ಲ.
ಸಾವಿರದೊಂದು ದೈವಗಳ ಕೋಲದಲ್ಲಿ ಪಾಡ್ದನ ಬಿಡಿ ಹತ್ತು ದೈವಗಳ ಹೆಸರನ್ನು ಕೂಡ ಹೇಳದೆಯೇ ಅರ್ಧ ಗಂಟೆಯಲ್ಲಿ ಮುಗಿಸುತ್ತಾರೆ

ಇವೆಲ್ಲವೂ ಬದಲಾವಣೆಯಾ ಅಥವಾ ಅಪಚಾರವಾ? ತಿಳಿದವರು ಹೇಳಬೇಕು

ಇನ್ನು ದೈವಗಳು ಯಾರೊಬ್ಬರ ಸೊತ್ತಲ್ಲ.ದೈವಗಳ ಕಥೆಯನ್ನು ದೈವಗಳ ಪಾತ್ರವನ್ನು ಸಿನಿಮಾ,ನಾಟಕ, ಯಕ್ಷಗಾನ ಬಯಲಾಟಗಳಲ್ಲಿ ತೋರಿಸಬಾರದು ಎನ್ನುವುದು ಸರಿಯಲ್ಲ.. ದೈವಗಳನ್ನು ಕೆಟ್ಟದಾಗಿ ತೋರಿಸಿ ಅವಹೇಳನ ಮಾಡಬಾರದು ಎಂದರೆ ಒಪ್ಪಿಕೊಳ್ಳಲೇ ಬೇಕಾದ ಮಾತು

ಮೊದಲು ಭಾಷಿಕವಾಗಿ ಮತ್ತು ಭೌಗೋಳಿಕವಾಗಿ ತಳುನಾಡು ದ್ವೀಪ ಸದೃಶವಾಗಿತ್ತು.ಹಾಗಾಗಿ ಇಲ್ಲಿನ ದೈವದ ಆರಾಧನೆ ಹೊರಜಗತ್ತಿಗೆ ಹೆಚ್ಚು ತೆಗೆದುಕೊಂಡಿರಲಿಲ್ಲ
ಈಗ ಪರಿಚಯ ಆಗಿದೆ
ಹಾಗಾಗಿ ದೈವಗಳು ಪಾತ್ರವಾಗಿ ಇರುವ ಸಿನಿಮಾ, ಧಾರಾವಾಹಿಗಳು ಆರಂಭವಾಗಿವೆ
ಕಾಂತಾರ ಸಿನಿಮಾಕ್ಕೆ ಮೊದಲೇ ಅನೇಕ ಸಿನಿಮಾಗಳಲ್ಲಿ,ನಾಟಕ ಯಕ್ಷಗಾನ ಬಯಲಾಟಗಳಲ್ಲಿ ದೈವಗಳು ಪಾತ್ರಗಳು ಬಂದಿವೆ
ನಾನು ಪದವಿ ಓದುತ್ತಿದ್ದ ಕಾಲದಲ್ಲಿ ಎಂದರೆ ಮೂವತ್ತು ವರ್ಷಗಳ ಹಿಂದೆಯೇ ಛದ್ಮವೇಷ ಸ್ಪರ್ಧೆಯಲ್ಲಿ ಭೂತಕೋಲವನ್ನು ಮಾಡಿದ್ದರು.ಆಗ ಈಗಿನಂತೆ ಮೊಬೈಲ್,face book , WhatsApp ಗಳು ಇರಲಿಲ್ಲ
ವಿರೋಧವೂ ಬಂದಿರಲಿಲ್ಲ

ದೈವಗಳನ್ನು ಅವಹೇಳನಕಾರಿಯಾಗಿ ದೈವದ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ಸಿನಿಮಾ ಧಾರಾವಾಹಿ, ನಾಟಕ, ಯಕ್ಷಗಾನ ಬಯಲಾಟಗಳಲ್ಲಿ ದೈವಗಳ ಪಾತ್ರವನ್ನು ತಂದರೆ ಅದು ದೈವಾರಾಧನೆಗೆ ಹೇಗೆ ಅಪಚಾರ ಆಗುತ್ತದೆ? ಎಂದು ನನಗಂತೂ ಗೊತ್ತಾಗುತ್ತಿಲ್ಲ
ಇನ್ನು ಕಾಂತಾರ ಸಿನಿಮಾಕ್ಕೆ ಸಂಬಂಧಿಸಿದಂತೆ ಶಿವನ ತಾಯಿ ಕೆಟ್ಟ ಪದಗಳನ್ನು ಬಳಸಿ ಬೈದಿದ್ದಾರೆ,ಹಿಡಿಸೂಡಿಯಲ್ಲಿ ಹೊಡೆದಿದ್ದಾರೆ.ದೈವ ಕಟ್ಟುವವರಿಗೆ ಹೀಗೆ ಮಾಡುವಂತಿಲ್ಲ‌ಇದು ಅಪಚಾರ ಎಂದು ದಯಾನಂದ ಕತ್ತಲಸಾರ್ ಹೇಳಿದ್ದು ನೋಡಿದೆ
ಕಾಂತಾರ ಸಿನಿಮಾದಲ್ಲಿ ಶಿವನ ಪಾತ್ರ ಮಾಡಿದ ರಿಷಭ್ ಶೆಟ್ಟಿಯವರು ದೈವವನ್ನು ಕಟ್ಟಿಲ್ಲ.ದೈವದ ಅಭಿನಯ ಮಾತ್ರ ಮಾಡಿದ್ದು.ಸಿನೇಮದ ಕಥೆಯಲ್ಲಿ ಕೂಡ ಶಿವ  ಬೇಜವಾಬ್ದಾರಿಯಿಂದ ಉಂಡಾಡಿ ಗುಂಡನಂತೆ ಇದ್ದಾಗ ತಾಯಿಯಿಂದ ಬೈಗುಳ ಪೆಟ್ಟು ತಿಂದಿರ್ತಾನೆ ,ಭೂತಕಟ್ಟಲು ದೀಕ್ಷೆ ಪಡೆದು ನಂತರವಲ್ಲ.ಹಾಗಾಗಿ ಇದು ಅರ್ಥ ರಹಿತ ಆರೋಪ.
ಕಾಂತಾರ ಸಿನಿಮಾದಲ್ಲಿ ಎಲ್ಲೂ  ದೈವಾರಾಧನೆಗೆ ಅಪಚಾರವಾಗಿಲ್ಲ.ಹಾಗಿರುವಾಗ ಕಾಂತಾರ ಫ್ರೀಕ್ವೆಲ್ ನಲ್ಲಿ ದೈವಾರಾಧನೆಯನ್ನು ತೋರಿಸಬಾರದು ಎನ್ನುವುದು ಸರಿಯಲ್ಲ..
ಭೂತಕೋಲದಲ್ಲಿ ಕೂಡ ಆಯಾಯ ದೈವಗಳ ಅಭಿನಯ ಇದೆ.ಇದೊಂದು ಧಾರ್ಮಿಕ ರಂಗಭೂಮಿ ಕೂಡ
ಇದನ್ನು  ಇತರ ಮಾಧ್ಯಮಗಳಲ್ಲಿ ಬಳಸಬಾರದು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ..ದೈವಗಳ ಪಾವಿತ್ರ್ಯಕ್ಕೆ, ಘನತೆಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಬಹುದು.ಒಂದೊಮ್ಮೆ ದೈವಗಳು ಅವಹೇಳನ ಇದ್ದರೆ ವಿರೋಧಿಸಬಹು ಅಷ್ಟೇ..ಅದು ಬಿಟ್ಟು ಮಾಡಬಾರದು ಎಂದು ತಾಕೀತು ಮಾಡುವ ಹಕ್ಕು ಯಾರಿಗೂ ಇಲ್ಲ.. ಅದನ್ನು ಕೇಳುವವರೂ ಇರಲಾರರು
ಇನ್ನು ವಿತ್ತಂಡ ವಾದ ಮಾಡುವುದಾದರೆ ದೈವ ಕಟ್ಟುವವರು ಇತರ ಕೆಲಸ ಮಾಡುವುದು ಸರಿಯಲ್ಲ.. ಅಲ್ಲಿ ಮೇಲಧಿಕಾರಿಗಳು ಬೈಯುದಿಲ್ಲವೇ? ಎನ್ನಬಹುದು . ದುಡ್ಡಿಗಾಗಿ ಇತರ ಕೆಲಸ ಮಾಡುವುದು ತಪ್ಪು ಎನ್ನಬಹುದು ಅದೇ ರೀತಿಯಲ್ಲಿ ಮೈಕ್ ಹಿಡಿದು ಭಾಷಣ ಮಾಡುವುದೂ ಸರಿಯಲ್ಲ.ಸಂಘ ಸಂಸ್ಥೆ ಅಕಾಡೆಮಿಗಳ ಅಧ್ಯಕ್ಷರಾಗಿ ಅಧಿಕಾರ ಪಡೆಯುವುದು ಸರಿಯಲ್ಲ. ಎಂದು ವಿತ್ತಂಡ ವಾದ ಮಾಡಬಹುದು.

ಈ ಹಿಂದೆ 2016 ರಲ್ಲಿ  ಹಿರಿಯರಾದ ಎಚ್ ಬಿ ಎಲ್ ರಾಯರು ದೈವಗಳ ಅಣಿ ಅರದಳ ವೇಷ ಭೂಷಣಗಳ ಸಾಕ್ಷ್ಯ ಚಿತ್ರ ಮಾಡಿ ಕಾರ್ಯಾಗಾರ ಮಾಡಿ ಪುಸ್ತಕ ಪ್ರಕಟಿಸಲು ಹೊರಟಾಗ ಕೂಡ ತೀವ್ರ ವಿರೋಧ ಬಂದಿತ್ತು.ಅವರದನ್ನೆಲ್ಲ ಲೆಕ್ಕಿಸದೆ ಕಾರ್ಯಾಗಾರ ಮಾಡಿ ಭೂತಾರಾಧನೆಯ ಅಣಿ ವೈವಿಧ್ಯಗಳ ,ವೇಷ ಭೂಷಣ ಗಳು ವಿವಿಧ ರೀತಿಯ ಮುಖ ವರ್ಣಿಕೆಗಳನ್ನು ಹಾಕಿಸಿ ಫೋಟೋ ತೆಗೆದು ದಾಖಲಿಸಿ ಪ್ರಕಟಿಸಿದೆ ಗ್ರಂಥ ಅಣಿ ಅರದಳ ಸಿರಿ ಸಿಂಗಾರ ಈಗ ಭೂತಾರಾಧನೆಯ ಪರಿಕರಗಳು ಕುರಿತಾಗಿ ಸಚಿತ್ರ ಮಾಹಿತಿ ಇರುವ ರೆಫರೆನ್ಸ್ ಗ್ರಂಥವಾಗಿದೆ

ಇದು ಹೀಗೆಯೇ ಮುಂದುವರೆದರೆ ದೈವಗಳ ಕೋಲದ ವೀಡಿಯೊ ಮಾಡಬಾರದು, ಫೋಟೋ ತೆಗೆಯಬಾರದು, ಭೂತ ಕಟ್ಟುವವರ ಹೊರತಾಗಿ ಇತರರು ಅಧ್ಯಯನ ಮಾಡಬಾರದು,ಪುಸ್ತಕ ಬರೆಯಬಾರದು, ಉಪನ್ಯಾಸ ನೀಡಬಾರದು, ಕೊನೆಗೆ ಹೊರಗಿನವರು ನೋಡಲೂ ಬಾರದು ಎಂದು ಹೇಳಿಯಾರು..

ಡಾ.ಲಕ್ಷ್ಮೀ ಜಿ ಪ್ರಸಾದ
ಲೇ : ಕರಾವಳಿಯ ಸಾವಿರದೊಂದು ದೈವಗಳು

Mobile 9480516684

ಭೂತಕೋಲ ಎಂದರೇನು

 ತುಳುನಾಡಿನ ಭೂತಾರಾಧನೆ/ದೈವಾರಾಧನೆ ವಿಶಿಷ್ಟ ಆರಾಧನಾ ಪದ್ಧತಿ.

ಇಲ್ಲಿನ ತುಳು ಭೂತ ಪದಕ್ಕೆ ಕನ್ನಡ ಸಂಸ್ಕೃತ ಶಬ್ದಕೋಶದಲ್ಲಿ ಅರ್ಥ ಹುಡುಕಬಾರದು.ಅದರಲ್ಲಿ ಭೂತ ಪ್ರೇತ ಪಿಶಾಚಿ ಶಿವ ಗಣ ಇತ್ಯಾದಿ ಅರ್ಥಗಳಿವೆ
ಆದರೆ ತುಳುವರ ಭೂತಗಳು ಪ್ರೇತ ಪಿಶಾಚಿಗಳಲ್ಲ.ಇವರು ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಮಣ್ಣಿನ ಸತ್ಯಗಳು ಎಂದು ಕರೆದುಕೊಳ್ಳುವ ಶಕ್ತಿಗಳು ಇವರು .
ಪೂತಂ ಎಂದರೆ ಪವಿತ್ರವಾದ ಶಕ್ತಿ ಎಂಬ ಪದವೇ ಕಾಲಾಂತರದಲ್ಲಿ ಬೂತ ಆಗಿ ಭೂತ ಆಗಿರುವ ಸಾಧ್ಯತೆ ಇದೆ.ಕೊಡವರಲ್ಲಿ ಭೂತಾರಾಧನೆ ಪ್ರಚಲಿತವಿದ್ದು ಅವರು ಅದನ್ನು ಪೂದ ತೆರೆ ಎನ್ನುತ್ತಾರೆ ಇಲ್ಲಿ ಬೂತ > ಪೂದ ಆಗಿದೆ
ಅಥವಾ ಈ ಆರಾಧ್ಯ ಶಕ್ತಿಗಳು ಈ ಹಿಂದೆ ಈ ಮಣ್ಣಿನಲ್ಕಿ ಹುಟ್ಟಿ ಕಾರಣಾಂತರಗಳಿಂದ ದೈವತ್ವ ಪಡೆದವರಾಗಿದ್ದಾರೆ ಹಾಗಾಗಿ ಈ ಹಿಂದೆ ಇದ್ದವರು ಎಂಬ ಅರ್ಥದಲ್ಲೂ ಭೂತ ಪದ ಬಳಕೆಗೆ ಬಂದಿರಬಹುದು ಎಂದು ಡಾ.ಅಮೃತ ಸೋಮೇಶ್ವರರು ಹೇಳಿದ್ದಾರೆ
ಭೂತ ,ದೈವ ತೆಯ್ಯಂ ,ದೇವರು ಎಲ್ಲವೂ ಒಂದೇ ಅರ್ಥವನ್ನು ಕೊಡುವ ಪದಗಳು
ಕನ್ನಡ ಪರಿಸರದಲ್ಲಿ ದೈವ ಎಂಬ ಪದ ಬಳಕೆ ಹೆಚ್ಚು ಪ್ರಚಲಿತವಿತ್ತು.ಮಲೆಯಾಳದಲ್ಲಿ ತೆಯ್ಯಂ ಎನ್ನುತ್ತಾರೆ ಕೊಡವರು ಪೂದ ಎನ್ನುತ್ತಾರೆ ತುಳವರು ಭೂತ,ದೈವ ಎರಡೂ ಪದಗಳ ಬಳಕೆ ಮಾಡಿದ್ದಾರೆ

ಆಯಾಯ ದೈವಗಳಿಗೆ ಅವರವರದ್ದೇ ಆದ ಪಾಡ್ದನ,ಸಂಧಿ ಬೀರ , ನುಡಿಗಟ್ಟು ಮುಖ ವರ್ಣಿಕೆ ,ಮೊಗ ಆಯ ಧ ವೇಷ ಭೂಷಣಗಳು ಇರುತ್ತವೆ ಇವನ್ನು ಧರಿಸಿ ನರ್ತಿಸಿ ಆಯಾಯ ದೈವಗಳಿಗೆ ಆರಾಧನೆ ಮಾಡುವುದನ್ನು ಭೂತ ಕೋಲ ಎಂದು ಕರೆಯುತ್ತಾರೆ 

ಕೋಲ ಎಂಬುದಕ್ಕೆ ಪ್ರತಿಕೃತಿ ಎಂಬ ಅರ್ಥವೂ ಇದೆ 

ಇದರಲ್ಲಿ ಹದಿನಾರು ಕಟ್ಟುಗಳು/ ರೀತಿ ರಿವಾಜುಗಳು / ಹಂತಗಳು ಇರುತ್ತವೆ

ಇದನ್ನು ಪದಿವಾಜಿ ಕಟ್ಟು ಕಟ್ಟಲೆಗಳು ಎಂದು ಕರೆಯುತ್ತಾರೆ 

ಇನ್ನು ತುಳುನಾಡಿನಲ್ಲಿ ಯಾರಿಗೆ ಯಾವಾಗ ಹೇಗೆ ಯಾಕೆ ದೈವತ್ವ ಪ್ರಾಪ್ತಿಯಾಗುತ್ತದೆ ಎಂಬುದಕ್ಕೆ ಸಿದ್ಧ ಸೂತ್ರವಿಲ್ಲ.ಸಾಮಾನ್ಯವಾಗಿ ಎಲ್ಲರಂತೆ ಮಾನವರಾಗಿ ಹುಟ್ಡಿ ಅತಿಮಾನುಷ ಸಾಹಸ ಮೆರೆದವರು ಮಾಯಕಕ್ಕೆ ಸಂದು ದೈವತ್ವ ಪಡೆದು ದೈವಗಳಾಗಿ ಆರಾಧನೆ ಪಡೆದಿದ್ದಾರೆ ,

ಕೋಟಿ -ಚೆನ್ನಯರು,ಮುದ್ದ -ಕಳಲರು ಎಣ್ಮೂರು ದೆಯ್ಯು -ಕೇಲತ್ತ ಪೆರ್ನೆ,ಕಾನದ- ಕಟದರು ಕೋಟೆದ ಬಬ್ಬು- ತನ್ನಿ ಮಾಣಿಗ ಮೊದಲಾದ ಅತಿಮಾನುಷ ಸಾಹಸಿಗಳು  ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ.ಕೋಟಿಚೆನ್ನಯ,ಕಾನದ ಕಟದ,ಮುದ್ದ ಕಳಲ, ಎಣ್ಮೂರು ದೆಯ್ಯು ಕೇಲತ್ತ ಪೆರ್ನೆ,ಕಾಂತಾ ಬಾರೆ ಬೂದಾಬಾರೆಮೊದಲಾದವರು ಈ ರೀತಿಯಲ್ಲಿ ದೈವತ್ವವನ್ನು ಪಡೆದ ಶೂರರು 
ಪ್ರಧಾನ ದೈವಗಳನ್ನು ನೆಲೆಗೊಳಿಸಿ, ಅನನ್ಯ ಭಕ್ತಿಯಿಂದ ಆರಾಧನೆ ಮಾಡಿದ ಅನೇಕರು ಅದೇ ದೈವದ ಸಾನ್ನಿಧ್ಯ ಸೇರಿ ದೈವತ್ವವನ್ನು ಪಡೆದು ಆರಾಧಿಸಲ್ಪಡುತ್ತಾರೆ
ವೀರಭದ್ರನನ್ನು ಹಿರಿಯಡ್ಕದಲ್ಲಿ ನೆಲೆಗೊಳಿಸಿ ಆರಾಧಿಸಿದ ಅಡ್ಕತ್ತಾಯ ಎಂಬ ಬ್ರಾಹ್ಮಣ ದೈವವಾಗಿ ಆರಾಧನೆ ಪಡೆಯುತ್ತಾರೆ
ಸುಜೀರ್ ನಲ್ಲಿ ವೈದ್ಯನಾಥ ದೈವ ಆರಾಧನೆ ಶುರು ಮಾಡಿದ ಜಾನು ಬಐದ್ಯರಉ ದೈವತ್ವವನ್ನು ಪಡೆದು ಆರಾಧಿಸಲ್ಪಡುತ್ತಾರೆ
ತನ್ನನ್ನು ಅನನ್ಯ ಭಕ್ತಿಯಿಂದ ಆರಾಧನೆ ಮಾಡಿದ ಅಕ್ಕ ಅರಸು ಎಂಬ ಸ್ತ್ರೀ ಯನ್ನು ಮಾಯ ಮಾಡಿ ಲೆಕ್ಕೇಸಿರಿ ದೈವವು ತನ್ನ ಸೇರಿಗೆಗೆ ಸೇರಿಸಿ ದೈವತ್ವವನ್ನು ದಯಪಾಲಿಸುತ್ತದೆ
ಬದಿಯಡ್ಕ ಸಮೀಪದ ಕಾರಿಂಜೇಶ್ಶರ ದೇವಾಲಯವನ್ನು ಕಟ್ಟಿದ ಕಾರಿಂಜೆತ್ತಾಯ ಎಂಬ ಬ್ರಾಹ್ಮಣ ದೈವತ್ವವನ್ನು ಪಡೆದು ಆರಾಧಿಸಲ್ಪಡುತ್ತಾರೆ
ಚಿಕ್ಕ ಮಗಳೂರಿನ ಬೈಲ ಕುಪ್ಪೆ ಎಂಬಲ್ಲಿ ದೇವರ ಪೂಜಾರಿ ಪಂಜುರ್ಲಿ ಎಂಬ ದೈವದ ಆರಾಧನೆ ಇರುವ ಬಗ್ಗೆ ರೂಪೇಶ್ ಪೂಜಾರಿಯವರು ತಿಳಿಸಿದ್ದಾರೆ.ಈ ದೈವ ಮೂಲತಃ ಓರ್ವ ಬ್ರಾಹ್ಮಣ ಅರ್ಚಕ, ಪಂಜುರ್ಲಿ ದೈವವನ್ನು ಅನನ್ಯ ಭಕ್ತಿಯಿಂದ ಆರಾಧನೆ ಮಾಡುತ್ತಿದ್ದರು.ಕಾಲಾಂತರದಲ್ಲಿ ಪಂಜುರ್ಲಿ ದೈವದ ಅನುಗ್ರಹಕ್ಕೆ ಪಾತ್ರರಾಗಿ ದೈವತ್ವ ಪಡೆದು ದೇವರ ಪೂಜಾರಿ ಪಂಜುರ್ಲಿ ಎಂಬ ಹೆಸರಿನಲ್ಲಿ ಆರಾಧಿಸಲ್ಪಡುತ್ತಾರೆ.
ಇಂತಹದ್ದೇ ಒಂದು ವಿಶಿಷ್ಟ ಕಾರಣದಿಂದ ದೈವತ್ವವನ್ನು ಪಡೆದ ದೈವ ಕೊಂಡೇಲ್ತಾಯ


ಇನ್ನು ತುಳುನಾಡಿನಲ್ಲಿ ಎಷ್ಟು ದೈವಗಳಿಗೆ ಆರಾಧನೆ ಇದೆ ಎಂಬುದೊಂದು ಪ್ರಶ್ನೆ.ಇದಕ್ಕೆ ಇದಮಿತ್ಥಂ ಎಂದು ಉತ್ತರಿಸುವುದು ಕಷ್ಟ.

ತುಳು ಸಂಸ್ಕೃತಿ‌ ಕುರಿತು ಅಧ್ಯಯನ‌ಮಾಡಿದ ಡಾ
ಬಿ ಎ ವಿವೇಕ ರೈಗಳು 260 ದೈವಗಳ ಹೆಸರನ್ನು ಸಂಗ್ರಹಿಸಿ‌ಅವರ ಪಿಎಚ್ ಡಿ ನಿಬಂಧ ತುಳು ಜನಪದ ಸಾಹಿತ್ಯ ದಲ್ಲಿ ನೀಡಿದ್ದಾರೆ.ಇದನ್ನು ಪರಿಷ್ಕರಿಸಿ ಡಾ.ಚಿನ್ನಪ್ಪ ಗೌಡರು ಅವರ ಪಿಎಚ್ ಡಿ ನಿಬಂಧ ಭೂತಾರಾಧನೆ- ಒಂದು ಜಾನಪದೀಯ ಅಧ್ಯಯನದಲ್ಲಿ ಮುನ್ನೂರು ದೈವಗಳ ಹೆಸರಿನ ಪಟ್ಟಿ ನೀಡಿದ್ದಾರೆ.ರಘುನಾಥ ವರ್ಕಾಡಿಯವರು 404 ದೈವಗಳ ಹೆಸರನ್ನು ಸಂಗ್ರಹಿಸಿದ್ದಾರೆ ಅದರಲ್ಲಿ ಡಾ.ಚಿನ್ನಪ್ಪ ಗೌಡರು ಸಂಗ್ರಹಿಸಿದ ಹೆಸರುಗಳು ಸೇರಿದೆ
ಈ 404 ಸೇರಿದಂತೆ ನನಗೆ 2364 ದೈವಗಳ ಹೆಸರುಗಳು ಸಿಕ್ಕಿವೆ ,

1253 ದೈವಗಳ ಮಾಹಿತಿಯೂ ಸಿಕ್ಕಿದ್ದು  ಕರಾವಳಿಯ ಸಾವಿರದೊಂದು ದೈವಗಳು ಕೃತಿಯಲ್ಲಿ ನನ್ನ ಅರಿವಿಗೆ ನಿಲುಕಿದಂತೆ ನೀಡಿದ್ದೇನೆ


ಇಲ್ಲಿ ಯಾರು ಹೇಗೆ ಯಾಕೆ ದೈವತ್ವವನ್ನು ಪಡೆಯುತ್ತಾರೆ ಎಂಬುದಕ್ಕೆ ಒಂದು ಸಿದ್ಧ ಸೂತ್ರವಿಲ್ಲ
.ಹಿಂದು‌,ಮುಸ್ಲಿಂ ,ಜೈನ ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಜಾತಿ ಮತಗಳ ಜನರು ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ.ಎಲ್ಲ ಜಾತಿ‌ಮತಗಳ ಜನರೂ  ಇಲ್ಲಿನ ದೈವಗಳ ಆರಾಧನೆ ಮಾಡುತ್ತಾರೆ.ಇಲ್ಲಿ ದೈವಗಳಾಗುವ ಮೊದಲು ಇವರು ಏನಾಗಿದ್ದರು ಯಾರಾಗಿದ್ದರು ?ಎಂಬುದು ಗಣನೆಗೆ ಬರುವುದಿಲ್ಲ.ದೈವಗಳಾದ ನಂತರ ಇವರು ನಮ್ಮನ್ನು ಕಾಯುವ ಶಕ್ತಿಗಳು.ಎಲ್ಲ ದೈವಗಳಿಗೂ ಸಮಾನ ಆದರ, ಗೌರವ ,ಭಕ್ತಿಯ ಆರಾಧನೆ‌.ಹೀಗೆ ಜಾತಿ ಮತಗಳ ಸಾಮರಸ್ಯ ತುಳು ಸಂಸ್ಕೃತಿಯ ವೈಶಿಷ್ಟ್ಯ .

ತುಳುನಾಡಿನಲ್ಲಿ  ದೈವತ್ವ ಪಡೆಯುವ ಅರ್ಹತೆಯನ್ನು ಪಡೆದವರು ಪಡೆದ ಅಂತಿಮ  ಜನ್ಮವೇ ಜೋಗ. ಜೋಗ ಬಿಟ್ಟು ನಂತರ ದೈವ ಆಗುತ್ತಾರೆ .

 


ಡಾ.ಲಕ್ಷ್ಮೀ ಜಿ ಪ್ರಸಾದ್
ಲೇಖಕರು ಕರಾವಳಿಯ ಸಾವಿರದೊಂದು ದೈವಗಳು
ಕನ್ನಡ ಉಪನ್ಯಾಸಕಿ ಸರ್ಕಾರಿ ಪಿಯು ಕಾಲೇಜು 
ಬೆಂಗಳೂರು
ಮೊಬೈಲ್ 9480516684

ನನ್ನ ತಂದೆಯವರ ಬಗ್ಗೆ ಏನು ಹೇಳಲಿ‌?

 ನನ್ನ ತಂದೆಯವರ ಬಗ್ಗೆ ಏನು ಹೇಳಲಿ‌?

ನಾನು ಅಳುವುದನ್ನು ಮರೆತು ನೋಡುತ್ತಾ ನಿಂತಿದ್ದೆ...
ಶರಣರ ಬಾಳನ್ನು ‌ಮರಣದಲ್ಲಿ ಕಾಣು ಎಂಬ ಮಾತಿಗೆ ನಿದರ್ಶನವಾದರು ಅವರು.
 

2012ರ ಮಳೆಗಾಲದ ಒಂದು ದಿನ
ಧೋ ಎಂದು ಮಳೆ ಸುರಿಯುವ ಸದ್ದಿಗೆ ಗಾಢ ನಿದ್ರೆ ಆವರಿಸಿತ್ತು. ನಿರಂತರವಾಗಿ  ಮೊಬೈಲ್‌ ಪೋನ್ ರಿಂಗಾಗುತ್ತಾ ಇತ್ತು.ಕೊನೆಗೂ ಹೇಗೋ ಕಣ್ಣು ತೆರೆದು ಕರೆ ಸ್ವೀಕರಿಸಿದೆ.ಆ ಕಡೆಯಿಂದ ಅಕ್ಕನ ಧ್ವನಿ ಕೇಳಿಸಿತು

 

ನಡುರಾತ್ರಿ ಒಂದೂವರೆ ಗಂಟೆಗೆ ಅಕ್ಕ ಫೋನ್ ನೋಡಿ ಮೊದಲೇ ದುರಂತದ ಸೂಚನೆ ಸಿಕ್ಕಿ ಮನಸು ಅಳುಕಿತ್ತು.ತಂದೆಗೆ ಸೀರಿಯಸ್ ನೀನು ಆದಷ್ಟು ಬೇಗ ಮನೆಗೆ ಬಾ ಎಂದು ಹೇಳಿ ಅಕ್ಕ ಫೋನ್ ಕತ್ತರಿಸಿದಳು.ಅವಳ ಧ್ವನಿ ನಡುಗುತ್ತಾ ಇತ್ತು ಅದರಿಂದಲೇ ತಂದೆಯವರು ಬದುಕಿರಲಾರರು ಎಂದು ಅನಿಸಿತು.ಆದರೂ ಒಂದು ದೂರದ ಆಸೆಯಿಂದ ತಂದೆ ಮನೆಗೆ ಫೋನ್ ಮಾಡಿದೆ.ಪೋನೆತ್ತಿದ ಸೀಮಾ( ತಮ್ಮನ ಮಡದಿ) ತಂದೆಯವರನ್ನು ಆಸ್ಪತ್ರೆ ಯಿಂದ ಮನೆಗೆ ಕರೆ ತರುತ್ತಿದ್ದಾರೆ ಎಂದು ತಿಳಿಸಿದಾಗ ತಂದೆಯವರು ಇನ್ನಿಲ್ಲ ಎಂಬ ವಾಸ್ತವ ಅರಿವಾಗಿ ದುಃಖ ಉಮ್ಮಳಿಸಿ ಬಂತು.
ರಾತ್ರಿ ಹನ್ನೊಂದು ಗಂಟೆಗೆ ನಾನು ಮಲಗುವ ಮೊದಲು ಮನೆಗೆ ಪೋನ್ ಮಾಡಿದ್ದೆ.ತಂದೆಯವರೇ ಫೋನ್ ಎತ್ತಿದ್ದರು.ಹೇಗಿದ್ದೀರಿ ? ಎಂದು ಕುಶಲ ವಿಚಾರಿಸಿದಾಗ ಆರಾಮಿದ್ದೇನೆ ಸ್ವಲ್ಪ ಧೂಳಿಗೆ ಕಫ ಆಗಿದೆ ಎಂದು ಹೇಳಿ ಉಪ್ಪರಿಗೆ ಮೇಲೆ ಟಿವಿನೋಡುತ್ತಿದ್ದ ಅಮ್ಮನನ್ನು ಕರೆದು ಪೋನ್ ನೀಡಿದ್ದರು.ಅಮ್ಮನ ಹತ್ತಿರ ಹತ್ತು ನಿಮಿಷ ಮಾತನಾಡಿ ನಾನು ಮಲಗಿದ್ದೆ.
ಅಮ್ಮ ಮಲಗಲೆಂದು ಬಾಗಿಲು ಹಾಕಿ ಚಾವಡಿಗೆ ಬರುವಾಗ ತಂದೆ ಕೆಮ್ಮುತ್ತಾ ಇದ್ದರು.ಆ ದಿನ ಅಡಿಕೆಯನ್ನು ಆಯುವ ಕೆಲಸ ಮಾಡಿದ ಕಾರಣ ಅಡಿಕೆ ಧೂಳಿಗೆ ಕೆಮ್ಮು ಬಂದಿದೆ ಎಂದು ತಿಳಿದು ಅಮ್ಮ ಕಫದ ಸಿರಪ್ ಅನ್ನು ನೀಡಿದರು ಕೆಮ್ಮು ಕಡಿಮೆಯಾಯಿತು.ಸ್ವಲ್ಪ ಉಸಿರು ಕಟ್ಟಿದ ಹಾಗೆ ಆಗುತ್ತದೆ ಎಂದು ಹೇಳಿದಾಗ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಸಮಿಪದ ವೈದ್ಯರಾದ ಐಕೆ ಭಟ್ಟರ ಮನೆಗೆ ಹೊರಟ.ನಮ್ಮ ಮನೆ ಹಿಂಭಾಗದ ಸಣ್ಣ ಗುಡ್ಡೆ ಯ ದಾರಿಯಲ್ಲಿ ಕಾರು ಹತ್ತುತ್ತಿದ್ದಂತೆ ತಮ್ಮ ತಂದೆಯವರಲ್ಲಿ ಏನಾಗುತ್ತಿದೆ ಎಂದು ಕೇಳಿದಾಗ ಏನಾಗಿಲ್ಲ ಆರಾಮಿದ್ದೇನೆ ಎಂದು ತಿಳಿಸಿ ಕಾರಿನ ಹಿಂಭಾಗಕ್ಕೆ ಒರಗಿ ತಂದೆಯವರು ನಿದ್ರೆಗೆ ಜಾರಿದ್ದರು.ನಿದ್ರೆಯಲ್ಲಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎಪ್ಪತ್ತ ಮೂರು ವರ್ಷದ ಅವರು ನೋವು ನರಳಿಕೆ ಒಂದಿನಿತೂ ಇಲ್ಲದ ಸುಖಮರಣ  ಪಡೆದಿದ್ದರು. ಇದು ಅವರು ಬಾಳಿದ ಸರಳ ಪ್ರಾಮಾಣಿಕ ನಿಸ್ವಾರ್ಥ ಬದುಕಿಗೆ ಹಿಡಿದ ಕೈಗನ್ನಡಿಯಾಗಿತ್ತು.ಶರಣರಬಾಳನ್ನು ಮರಣದಲ್ಲಿ ನೋಡು ಎಂಬ ಗಾದೆಮಾತಿಗೆ ನಿದರ್ಶನವಾಗಿದ್ದರು ಅವರು.ಯಾರೊಬ್ಬರಿಗೂ ಒಂದಿನಿತು ನೋವು ಮಾಡಿದವರಲ್ಲ .ಮೋಸ ವಂಚನೆ ಏನೆಂದೇ ತಿಳಿಯದ ಮುಗ್ದ ಸ್ವಭಾವ ಅವರದು.ಬಿಳಿಯಾದದ್ದೆಲ್ಲಾ ಹಾಲೆಂದು ನಂಬುವ ಅವರಿಗೆ ಅನೇಕರು ಮೋಸ ಮಾಡಿದ್ದರು. ಅವರಿಂದ ಸಹಾಯ ಪಡೆದವರೇ ಹಿಂದಿನಿಂದ ದ್ರೋಹ ಮಾಡಿದ್ದರೂ ಅವರನ್ನು ಉದಾರವಾಗಿ ಕ್ಷಮಿಸಿವರು ನನ್ನ ತಂದೆ.ಕಷ್ಟದಲ್ಲಿ ಇರುವರನ್ನು ಕಂಡರೆ ಅಪಾರ ಅನುಕಂಪ ತನಗಾದ ಸಹಾಯ ಮಾಡುತ್ತಿದ್ದರು.


ಸ್ನೇಹಿತೆ ವಿದ್ಯಾ ಮತ್ತು ಅವರ ಪತಿಯ ಸಹಾಯದಿಂದ ಒಂದು ಕಾರನ್ನು ಬಾಡಿಗೆಗೆ ಹಿಡಿದು ಸುರಿವ ಮಳೆಯ ಕಾರ್ತ್ತಗಲಿನಲ್ಲಿ ಮಗನೊಂದಿಗೆ ಬೆಳ್ಳಾರೆಯಿಂದ ತಂದೆ ಮನೆ ಕೋಳ್ಯೂರಿಗೆ ಹೊರಟೆ.ದಾರಿಯಲ್ಲಿ ಅಕ್ಕ ಭಾವನನ್ನೂ ಹತ್ತಿಸಿಕೊಂಡು ಮನೆ ತಲುಪುವಾಗ ಬೆಳಗಿನಜಾವ ಐದೂವರೆ ಆಗಿತ್ತು. ಬೆಳಕು ಹರಿಯುವಮುನ್ನವೇ ಸುದ್ದಿ ತಿಳಿದು ಸಂಬಂಧಿಕರು ಊರವರು ತಂದೆಯ ಶಿಷ್ಯ ವರ್ಗದವರು ಬಂದು ಸೇರಿದ್ದರು.
ನನ್ನ ತಂದೆ ವಾರಣಾಸಿ ನಾರಾಯಣ ಭಟ್ಟರು ಪುರೋಹಿತ ರಾಗಿದ್ದರು. ಹವ್ಯಕರಲ್ಲಿ ಪುರೋಹಿರಿಗೆ ಗುರುಗಳ ಸ್ಥಾನಮಾನವಿದೆ.ಆದ್ದರಿಂದ ತಂದೆಯವರಿಗೆ ಅಪಾರ ಶಿಷ್ಯವರ್ಗದವರು ಇದ್ದರುಅವರಲ್ಲಿ ಅನೇಕ ಮಂದಿ ಡಾಕ್ಟರ್ ಗಳು, ಇಂಜಿನಿಯರ್‌ಗಳು, ಬ್ಯುಸಿನೆಸ್‌ ಮ್ಯಾನ್ಗಳು ಹೀಗೆ ನಾನಾ ವೃತ್ತಿಯ ಹಿರಿ ಕಿರಿಯರುಇದ್ದರು..ನನ್ನ ತಂದೆಯವರನ್ನು ಕಿರಿಯರೆಲ್ಲರೂ ಭಟ್ಟಮಾವ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ನನ್ನ ತಂದೆಯ ಶಿಷ್ಯ ವರ್ಗದವರು ತಂದೆಯವರಿಗೆ ಮನೆ ಮಂದಿಯಂತೆ ಆತ್ಮೀಯ ರಾಗಿದ್ದರು. ತಂದೆಯ ಸರಳ ಮುಗ್ದ ವ್ಯಕ್ತಿತ್ವ ಎಲ್ಲರನ್ನೂ ಹತ್ತಿರ ತಂದಿತ್ತು.
ಮನೆ ಅಂಗಳಕ್ಕೆ ಕಾಲಿಡುತ್ತಲೇ ತಂದೆಯ ನೆನಪು ಬಂದು ದುಃಖ ಉಮ್ಮಳಿಸಿ ಬಂದು ಅಳುತ್ತಲೇ ಮನೆ ಒಳಗೆ ಪ್ರವೇಶ ಮಾಡಿದೆ.ತಂದೆಯ ಶಿಷ್ಯ ವರ್ಗದವರು ತುಂಬಾ ಮಂದಿ ತಂದೆಯವರ ದೇಹದ  ಕಾಲಬದಿಯಲ್ಲಿ ಕುಳಿತು ಅಳುತ್ತಾ ಇದ್ದರು.ಅವರಲ್ಲಿ ಕೆಲವರು ಡಾಕ್ಟರ್ ಗಳೂ ಇದ್ದರು.ದಿನನಿತ್ಯ ಸಾವು ನೋವುಗಳನ್ನು ನೋಡುವ ದೊಡ್ಡ ದೊಡ್ಡ ಡಾಕ್ಟರ್ ಗಳೂ ಅಳುವಂತೆ ಮಾಡಿದ್ದ ನನ್ನ ತಂದೆಯ ಔನ್ನತ್ಯಕ್ಕೆ ಬೆರಗಾಗಿ ನಾನು ಅಳುವುದನ್ನು ಮರೆತು ಅವರೆಲ್ಲ ಅಳುವುದನ್ನು ನೋಡುತ್ತಾ ನಿಂತಿದ್ದೆ.
ನನ್ನ ತಂದೆಯವರು ಪುರೋಹಿತರಾಗಿದ್ದರೂ ನಮಗೆ ಮನೆಯಲ್ಲಿ ಯಾವುದೇ ಕಟ್ಟು ಕಟ್ಟಳೆ ವಿಧಿಸಿರಲಿಲ್ಲ.ನಮಗೆ ಬೇಕಾದುದನ್ನು ಓದುವ ವೇಷಭೂಷಣ ಧರಿಸುವ ಸ್ವಾತಂತ್ರ್ಯ ಇತ್ತು.ಜೀವನ ಇಡೀ ಮಕ್ಕಳ ಏಳಿಗೆಗಾಗಿ ದುಡಿದ ಅವರುಒಂದು ದಿನ ಕೂಡ ತಾನು ದುಡಿದು ತಂದು ಹಾಕಿದ್ದೇನೆ ತನ್ನ ದುಡ್ಡು ದುಡಿಮೆ ಎಂದು ಹೇಳಿಲ್ಲ.
ಮಕ್ಕಳು ಪ್ರಥಮ ಸ್ಥಾನ ಪಡೆಯಬೇಕು ಎಂದು ಅವರ ಆಸೆಯಾಗಿತ್ತು.
ಪ್ರತಿ ಸಲ ಮಾರ್ಕ್ಸ್ ಕಾರ್ಡ್ ಸಿಕ್ಕಿದಾಗ"ಫಸ್ಟಾ .?ಎಂದು ಕೇಳುತ್ತಿದ್ದರು. ಅಲ್ಲವೆಂದಾದರೂ ಬೈಯುತ್ತಿರಲಿಲ್ಲ  ಮಾತಾಡದೆ ಸಹಿ ಹಾಕಿಕೊಡುತ್ತಿದ್ದರು.ಮೊದಲ ಸ್ಥಾನ ಗಳಿಸಿದ್ದರೆ ತುಂಬಾ ಸಂತೋಷ ಪಡುತ್ತಿದ್ದರು.ನಾನು ಸಂಸ್ಕೃತ ಎಂಎ ಯಲ್ಲಿ ಮೊದಲ ರಾಂಕ್ ಗಳಿಸಿದಾಗ ಸ್ವರ್ಗ ಸಿಕ್ಕಂತೆ ಸಂಭ್ರಮಿಸಿದ್ದರು
ತೀರಾ ಕಷ್ಟ ಇದ್ದಾಗಲೂ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಓದಿಸಿದರು.ಹೆಚ್ಚಾಗಿ ಎಲ್ಲೆಡೆ ಬರಿಗಾಲಿನಲ್ಲಿ ನಡೆದುಕೊಂಡೇ ಹೋಗುತ್ತಿದ್ದರು.ಒಂದು ದಿನ‌ಕೂಡ ಹುಷಾರಿಲ್ಲವೆಂದು ಮಲಗಿರಲಿಲ್ಲ
ಸಾಯುವ ದಿನ ಕೂಡ ರಾತ್ರಿ ಹನ್ನೊಂದು ಗಂಟೆಯ ವರೆಗೆ ಅಡಿಕೆ ಆಯುವಕೆಲಸ ಮಾಡಿದ್ದರು.ಆರೋಗ್ಯ ವಾಗಿದ್ದ ಅವರು ಹೀಗೆ ಯಾವುದೇ ಸೂಚನೆ ಇಲ್ಲದೆ ಮರಣವಪ್ಪಬಹುದು ಎಂದು ನಾವ್ಯಾರೂ ಊಹಿಸಿರಲಿಲ್ಲ.ಮಕ್ಕಳೆಲ್ಲ ಒಳ್ಳೆಯ ಕೆಲಸ ಹಿಡಿದು ಸಮೃದ್ದವಾಗಿದ್ದಾಗ ಅವರು ದೇವನೆಡೆಗೆ ಸದ್ದಿಲ್ಲದೆ ನಡೆದಿದ್ದರು.ದಿನನಿತ್ಯ ‌ಮಲಗುವ ಮೊದಲು ದೇವರಲ್ಲಿ ಅವರು ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ...ಅನಾಯಾಸವಾದ ಮರಣವನ್ನು ದೈನ್ಯ ರಹಿತವಾದ ಜೀವನವನ್ನು ಕೊಡು ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಇದ್ದರು .ದೇವರು ಅವರ ಪ್ರಾರ್ಥನೆ ಯನ್ನು ಮನ್ನಿಸಿ ಅದನ್ನು ಅವರಿಗೆ ಕರುಣಿಸಿದ್ದ.
( ನನ್ನ ‌ಮಗನ ಉಪನಯನದ ಸಂದರ್ಭದಲ್ಲಿ ತೆಗೆದ ಚಿತ್ರದಲ್ಲಿ ಉಪನಯನ ಮಾಡಿಸಿದ ನನ್ನ ತಂದೆಯವರು ನಮ್ಮ ಜೊತೆಗೆ ಇದ್ದಾರೆ)
ಡಾ.ಲಕ್ಷ್ಮೀ ಜಿ ಪ್ರಸಾದ್


 


 

 

 

ತುಳು ಸಂಸ್ಕೃತಿಯ ಹೊನ್ನ ಕಿರೀಟಕ್ಕೆ ಇರಿಸಿದ ನವಿಲುಗರಿ

 ಡಾ. ನಾ. ಮೊಗಸಾಲೆ ಅವರು ನನ್ನ ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಮಾಜಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಎಂಬ ಸಂಶೋಧನಾ ಗ್ರಂಥಕ್ಕೆ ಬರೆದ ಬೆನ್ನುಡಿ ಇದು 

ತುಳು ಸಂಸ್ಕೃತಿಯ ಹೊನ್ನ ಕಿರೀಟಕ್ಕೆ ಇರಿಸಿದ ನವಿಲುಗರಿ 
ಡಾ.ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) . ಅ ವರು ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ವಾರಣಾಸಿ ಮೂಲದವರು. ತಂದೆ ವೇದಮೂರ್ತಿ ನಾರಾಯಣ ಭಟ್ಟರು  ವಿದ್ವಾಂಸರೆಂದು ಪ್ರಸಿದ್ಧರು. ತನ್ನ ಮನೆತನವು ವೈದಿಕಾಚರಣೆಯನ್ನೇ ಹೊಂದಿದ್ದರೂ, ಕುಟುಂಬದಲ್ಲಿ ದೈವದ ಆರಾಧನೆಯನ್ನು ಮಾಡುತ್ತಿರುವುದೇಕೆ ಎಂಬ ಕುತೂಹಲವೇ ಡಾ. ಲಕ್ಷ್ಮೀ ಪ್ರಸಾದ್ ಅವರಿಗೆ ಪ್ರೇರಣೆಯಾಗಿ ಅವರು ಈ ಕುರಿತಾದ ಸಂಶೋಧನೆಗೆ ಇಳಿದರು.

ಇದರಿಂದ ಕರಾವಳಿ ಕರ್ನಾಟಕದ ಅಂದರೆ ಅವಿಭಜಿತ ದ.ಕ.ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಮತ್ತು ಕೊಡಗನ್ನೂ ಒಳಗೊಂಡಂತೆ ದೈವರಾಧನೆಯ ಆಶಯ ಆಕೃತಿಯನ್ನು ನಿರಂತರ ಸಂಶೋಧಿಸಲು ಅವರು ಮುಂದಾದರು. ಈ ನಿರಂತರತೆ ಇಪ್ಪತ್ತೊಂದು  ವರುಷಗಳ ಕಾಲ ನಡೆದುದರ ಪರಿಣಾಮವಾಗಿ ಈ ಮೇಲಿನ ಪ್ರದೇಶಗಳಲ್ಲಿ ಒಟ್ಟು ಎರಡು ಸಾವಿರದ ನೂರ ಐವತ್ತನಾಲ್ಕು  ದೈವಗಳು ಆರಾಧಿಸಲ್ಪಡುತ್ತವೆ ಎನ್ನುವ ಸತ್ಯ ಗೋಚರಿಸಿತು.

ಹಿರಿಯ ಜಾನಪದ ತಜ್ಞರೂ ವಿದ್ವಾಂಸರೂ ಆಗಿರುವ ಪ್ರೊ| ಬಿ.ಎ.ವಿವೇಕ ರೈ ಅವರು ತಮ್ಮ ಮಹಾಪ್ರಬಂಧದಲ್ಲಿ (1985) ಇನ್ನೂರ ಹದಿನೇಳು ದೈವಗಳನ್ನು ಗುರುತಿಸಿದ್ದರೆ,  ಇನ್ನೋರ್ವ ಜಾನಪದ ವಿದ್ವಾಂಸ ಪ್ರೊ| ಚಿನ್ನಪ್ಪಗೌಡರು ತಮ್ಮ ಮಹಾಪ್ರಬಂಧದಲ್ಲಿ (1990) ಮುನ್ನೂರು ದೈವಗಳ ಅಸ್ತಿತ್ವವನ್ನು ಕಂಡರಿಸಿದ್ದಾರೆ.. ಮುಂದೆ ರಘುನಾಥ ವರ್ಕಾಡಿಯವರು ತಮ್ಮ ‘ಕಂಡಂಬಾರು ಮಲರಾಯ’ ಕೃತಿಯಲ್ಲಿ (2014) ನಾಲ್ಕು ನೂರ ಏಳು ದೈವಗಳನ್ನು ಉಲ್ಲೇಖಿಸಿದರು.

ಆಮೇಲೆ ಈ ಬಗ್ಗೆ ಸಂಶೋಧನೆ ನಡೆದದ್ದು ಕಡಿಮೆ ಅಥವಾ ಈ ಅರಿವಿನಲ್ಲೆ ಗಿರಕಿ ಹೊಡೆದದ್ದೇ ಹೆಚ್ಚು. ಆದರೆ ಡಾ. ಲಕ್ಷ್ಮಿ ಪ್ರಸಾದ್ ಅವರ ಆಸಕ್ತಿ ಅಥವಾ ಜಿಜ್ಞಾಸೆಯು ತಾವು ರಚಿಸಿದ ಮಹಾಪ್ರಬಂಧದ ಹೊತ್ತಿಗೆ (2007) ಸಾವಿರದ ನಾಲ್ಕು ನೂರ ಮೂವತ್ತೈದು ದೈವಗಳ ಕ್ಷೇತ್ರ ಕಾರ್ಯದ ತನಕ ಹಬ್ಬಿತು. ಇದೀಗ ಅವರು ಎರಡು ಸಾವಿರದ ನೂರ ಐವತ್ತನಾಲ್ಕು  ದೈವಗಳನ್ನು ಸಾಕ್ಷಿ ಸಮೇತ ಗುರುತಿಸಿ ನಾಡು ಬೆರಗಾಗುವಂತೆ ಮಾಡಿದ್ದಾರೆ.

ತುಳು ಸಂಸ್ಕೃತಿಯ ಪ್ರಧಾನ ಅಂಗವಾಗಿ ದೈವಾರಾಧನೆ ಇದೆ. ಅದು ಇಲ್ಲದ ತುಳು ಸಂಸ್ಕೃತಿಯೇ ಇಲ್ಲ ಎನ್ನುವುದು ಅದರ ಪಾರಮ್ಯ. ನಂಬಿಕೆಯ ಆಧಾರದ ಮೇಲೆ ನಿಂತಿರುವ ಈ ಆರಾಧಾನ ಪದ್ಧತಿಯು ಶತಮಾನಗಳ ಪರಂಪರೆಯುಳ್ಳದ್ದು. ಇಂಥ ಸಂಸ್ಕೃತಿಯ ಬೇರುಗಳ ಆಳಕ್ಕೆ ಇಳಿದು ಚಿನ್ನವನ್ನು ಅಗೆದು ತೆಗೆದು ಪುಟಕ್ಕಿಡುವ ಹಾಗೆ ಮಾಡುವ ಕೆಲಸವು ಸಂಕೀರ್ಣವೂ, ಸಂಕಷ್ಟದ್ದೂ ಹೌದು, ಹಾಗೆಯೇ ಪುರುಷರಿಗಷ್ಟೇ ಸೀಮಿತ ಎನ್ನುವಂತಿದ್ದ ಈ ಸಂಶೋಧನೆಯನ್ನು  ಮಹಿಳೆಯರು ಮಾಡಬಹುದೆನ್ನುವಂತೆ ಡಾ.ಲಕ್ಷ್ಮೀ ಪ್ರಸಾದರು ಮಾಡಿ ತೋರಿಸಿದ್ದಾರೆ.

ಇದಕ್ಕೆ ಅವರು ಹುಟ್ಟಿದ ಗಂಡು ಮೆಟ್ಟಿನ ನೆಲದ ಪ್ರಭಾವ ಎಷ್ಟು ಕಾರಣವೋ ಅಷ್ಟೇ ಅವರ ಗಂಡೆದೆಯೂ ಕೂಡಾ!  ಡಾ. ಲಕ್ಷ್ಮೀ ಪ್ರಸಾದ್ ಅವರು ಕನ್ನಡ,ಹಿಂದಿ ಮತ್ತು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವೀಧರರು. ಒಂದು  ಎಂ.ಫಿಲ್ ಪದವಿ  ಹಾಗೂ ಎರಡು ಪಿ.ಹೆಚ್.ಡಿಯ ಗರಿಯೂ ಅವರ ಸಾಧನೆಗೆ ದಕ್ಕಿದೆ. ಸಂಸ್ಕೃತ ಎಂ.ಎಯಲ್ಲಿ ಪ್ರಥಮ ರರ‌್ಯಾಂಕ್ ಪಡೆದಿರುವ ಅವರು ಕನ್ನಡ ಎಂ.ಎ.ಯಲ್ಲಿ ನಾಲ್ಕನೇ ರ‌್ಯಾಂಕಿಗೂ ಭಾಜನರಾಗಿದ್ದಾರೆ.

ಬದುಕನ್ನು ಅಧ್ಯಯನ ,ಅಧ್ಯಾಪನ ಮತ್ತು ಸಂಶೋಧನೆಗಳಿಗೆ  ಮೀಸಲಿಟ್ಟಿರುವ ಅವರ ಈ ಇಪ್ಪತ್ತಮೂರನೆಯ   ಕೃತಿ ಅವರ ಮಹಾತ್ವಾಕಾಂಕ್ಷೆಯ ಶಿಖರ.

ಸರಕಾರದ ಆಶ್ರಯವಿಲ್ಲದೆ, ಅಕಾಡಮಿಗಳ ಪ್ರೋತ್ಸಾಹವಿಲ್ಲದೆಯೇ  ತನಗೆ ತಾನೇ ಸ್ವಯಂ ಭೂವಾಗಿ ನಡೆಸಿದ ಈ ಕ್ಷೇತ್ರ ಕಾರ್ಯ ಅಪರೂಪದಲ್ಲಿ ಅಪರೂಪದ್ದು.

ಭೂತ ಕಟ್ಟುವ ಜನಾಂಗದವರಿಂದ ಮತ್ತು ಇನ್ನಿತರ ಸಂಸ್ಕೃತಿ ಚಿಂತಕರ ಮೂಲದ ಐತಿಹ್ಯಗಳಿಂದ ಸಂಗ್ರಹಿಸಲ್ಪಟ್ಟ ಅವರ ಸಂಶೋಧನೆಯಲ್ಲಿ ಆಯ್ದ ಸಾವಿರದ ಇನ್ನೂರ ಏಳು  ದೈವಗಳ ಮಾಹಿತಿಗಳನ್ನು ಈ ಗ್ರಂಥದಲ್ಲಿ ಅವರು ಅನಾವರಣಗೊಳಿಸಿದ್ದಾರೆ.

ಇದು ತುಳು ಸಂಸ್ಕೃತಿಯ ಹೊನ್ನ ಕಿರೀಟಕ್ಕೆ ಇಟ್ಟ ನವಿಲಗರಿ.

ಇದು ‘ಪಿಂತಿಲ್ಲ ಮುಂತಿಲ್ಲ’ ಎನ್ನುವ ಜಾನಪದ ಸಂಶೋಧನೆಯ ಆಚಾರ್ಯಕೃತಿಯಾಗಿದ್ದು ‘ಅಯ್ಯಯ್ಯ ಎಂಚ ಪೊರ್ಲಾಂಡ್‍ಂದ್ ತುಳುವರು ಮೈಯುಬ್ಬಿ ಹೇಳಬೇಕಣ್ಣ’ ಎನ್ನುವುದನ್ನು ಈ ಕಾಲದಲ್ಲಿ ಅನುರಣಿಸಲು ಕಾರಣವಾಗಿರುವ ವಿಸ್ಮಯ.

******

ಕರಾವಳಿಯ ಸಾವಿರದೊಂದು ದೈವಗಳು ಅನುಕ್ರಮಣಿಕೆ  ಪ್ರಸ್ತಾವನೆ :
 1 ಅಕ್ಕಚ್ಚು 

2- ಅಕ್ಕ ಬೋಳಾರಿಗೆ

 3-4ಅಕ್ಕೆರ್ಲು- ಅಂಬೆರ್ಲು 

5 ಅಗ್ನಿ ಕೊರತಿ

 6-9  ಅಗ್ನಿ ಭೈರವನ್ ಮತ್ತು ಪರಿವಾರ  

10-11 ಅಚ್ಚು ಮತ್ತು ಮೆಚ್ಚು ಬಂಗೇತಿಯರು 12-14  ಅಜ್ಜಮ್ಮ ದೇವರು ಮತ್ತು ಪರಿವಾರ  15-16 ಅಜ್ಜ ಬಳಯ  ಮತ್ತು ಮಾಮಿ ಕುಲೆ 17-23  ಅಜ್ಜಿ ಭೂತ , ಕೂಜಿಲು ಮತ್ತು ಇತರ ದೈವಗಳು

 24 ಅಜ್ಜಿ ಬೆರೆಂತೊಲು

 25-26  ಅಜ್ಜೆರ್ ಭಟ್ರು ಮತ್ತು ಅಜ್ಜೆರ್ ಪರಿವಾರ 

27 ಅಡ್ಯಲಾಯ 

28 ಅಡ್ಯಂತಾಯ

 29 ಅಡಿ ಮಣಿತ್ತಾಯ

 30-31   ಅಣ್ಣ ತಮ್ಮ ದೈವಗಳು/ಅತ್ತಾವರದ ದೈವಗಳು 

32-33   ಅಣ್ಣೋಡಿ ಕುಮಾರ- ಕಿನ್ಯಂಬು 

34   ಗುಟ್ಟು ಬಿಟ್ಟು ಕೊಡದ ಅಬ್ಬೆ ಜಲಾಯ 35-36  ಅರಬ್ಬಿ ಭೂತ  ಮತ್ತು ಬ್ರಾಂದಿ ( ಬ್ರಾಹ್ಮಣತಿ‌) 

37 -40  ಅರಸು ಬಂಗಾಡಿತ್ತಾಯ ಮತ್ತು ಸೇರಿಗೆ ದೈವಗಳು 

41 ಅಸುರಾಳನ್/ ಅಸುಳಾನುಂ ಮಕ್ಕಳು 

42-43  ಅಂಗಕ್ಕಾರನ್ ಮತ್ತು  ಮರುಟೋಳನ್

 44  ಅಂಗಾರ ಬಾಕುಡ

 45 ಅಂಮಣ ಬನ್ನಾಯ 

46-47  ಅಂಕೆ- ಉಮ್ಮಯ 

48 ಆಚಾರಿ ಭೂತ 

49  ಆಟಕಾರ್ತಿ 

50   ಆಟಿ ಕಳೆಂಜ 

51-53  ಆದಿ ವೇಡನ್ ಮತ್ತು ಪರಿವಾರ.

 54 ಇಡಲದಜ್ಜಿ 

  55  ಇಷ್ಟಜಾವದೆ 

 56 ಉಗ್ಗೆದಲ್ತಾಯ  

57- 60 ಉಮ್ಮಲ್ತಿ ,ಉಮ್ಮಲಾಯ,ಬೆಮ್ಮಲ್ತಿ ಬೆಮ್ಮಲಾಯ 

 61 ಉಪ್ರಝಾಸ್ಸಿ

  62 ಉಚ್ಚಬಲಿ ತೆಯ್ಯಂ

 63-64 ಉರವ ಎರುಬಂಟ 

65-88 ಉಳ್ಳಾಕುಲು   ಮತ್ತು ಉಳ್ಳಾಲ್ತಿ ದೈವಗಳು 

89-90 ಎರು ಶೆಟ್ಟಿ( ಮಲೆ ಮುದ್ದ)

 91-92  ಎಂಬ್ರಾನ್ ದೇವ- ಐಪ್ಪಳ್ಳಿ

 93-99 ಏಲುವೆರ್ ಸಿರಿಕುಲು

 100 ಒಕ್ಕು ಬಲ್ಲಾಳ 

101-102 ಒರು ಬಾಣಿಯೆತ್ತಿ ,ನೆಲ್ಲೂರಾಯ   103- 105 ಓಣಂ ದೈವಗಳು

 106 ಓಟೆಚರಾಯ 

107: ಕಟ್ಟು ಎಡ್ತುನ್ ಕುಟ್ಟಿ ‌

108 ಕಟ್ಟದಲ್ತಾಯ ‌

109-110 ಕಡವಿನ ಕುಂಞ ಮತ್ತು ಕಳವಿನ ಚಿಕ್ಕ 111-112 ಕಡಂಬಳಿತ್ತಾಯ/,ಕೊಡಂಬಿಲ್ತಾಯ ಮತ್ತು ಮಲ್ಯೋಡಿತ್ತಾಯ  

113 -114 ಕನಪಾಡಿತ್ತಾಯ, ಮಗ್ರಂದಾಯ ಮತ್ತು ಪಂಬದ 

 115 ಕನ್ನಡ ಕಲ್ಕುಡ

 116   ಕನ್ನಡ ಬೀರ 

117  ಕನ್ನಡ ಭೂತ

 118-119 ಕನ್ನಲಾಯ ಮತ್ತು ಸ್ವಾಮಿ ನಂದೆದಿ 120 ಕನಿಯತಿ 

121 ಕಪ್ಪಣ ಸ್ವಾಮಿ  

122 ಕರಣಿಕ / ಕಾರ್ಯಸ್ಥನ್ ತೆಯ್ಯಂ 

 123-124 ಕರಿಯಣ್ಣ ನಾಯಕ, ಕೋಟಿ ನಾಯಕ 

125 ಕರಿಯ ಮಲ್ಲಯ್ಯ  

126-133 ಕರಿಂತಿರಿ ನಾಯರ್ ,ಪುಲಿಯೂರ್ ಕಾಳಿ ಮತ್ತು ಪುಲಿ ದೈವಗಳು  

134 -135 ಕರ್ನಗೆ ಮತ್ತು ಮಲಾರ್ ಜುಮಾದಿ 136-137  ಕಲಿಯಾಟ ಅಜ್ಜಪ್ಪ, ಕಾಟಾಳ ಬೊಳ್ತು 

138-139 ಅಲಿಖಿತ ಇತಿಹಾಸ ಸಾರುವ ಕಲ್ಕುಡ ಕಲ್ಲುರ್ಟಿ ದೈವಗಳು 

 140  ಕಂಡನಾರ ಕೇಳನ್ 

141  ಕಂರ್ಭಿ ಬೈದ್ಯೆದಿ 

142  ಕಾಜಿಗಾರ್ತಿ 

143-153  ಕಾಡ್ಯನಾಟದ ದೈವಗಳು 

 154- 155  ಕಾಡೆದಿ  ಮತ್ತು ಕಾಡ್ತಿಯಮ್ನ 156-157 ಅತಿಕಾರೆ ಬೆಳೆಯನ್ನು ತಂದ ಕಾನದ ಕಟದರು 

158-160 ಕಾನಲ್ತಾಯ ಮತ್ತು ಪರಿವಾರ ದೈವಗಳು 

161-162 ಕಾಯರ್ತಾಯ ಮಾದ್ರಿತ್ತಾಯ 163-167 ಕಾರಿ ಕಬಿಲ ದೈವಗಳು  

168 ಕಾಳರಾತ್ರಿ 

 169-172 ಕಾಳರಾಹು,ಕಳರ್ಕಾಯಿ ,ಕುಮಾರ ಸ್ವಾಮಿ‌ ಕನ್ಯಾಕುಮಾರಿ  

173-178  ಕಾಂತಾ ಬಾರೆ ,ಬೂದಾ ಬಾರೆ , ಅಚು ಬೈದ್ಯೆತಿ ,ಪುಲ್ಲ ಪೆರ್ಗಡ್ತಿ ,ಉಳ್ಳಾಯ ,ಸಾರಮಾನ್ಯ ದೈವಗಳು   

179 ಕಾಂತು ನೆಕ್ರಿ ಭೂತ 

180  ಕಿನ್ನಿದಾರು 

181 ಕೀಳು ದೈವ 

182-183 ಮದುಮಕ್ಕಳ ರೂಪದಲ್ಲಿ ಕಂಗೊಳಿಸುವ ಕುಕ್ಕೆತ್ತಿ ಬಳ್ಳು ದೈವಗಳು  

184-185 ಕುಜುಂಬ ಕಾಂಜವ ಮತ್ತು ಕಾಚು ಕುಜುಂಬ  ದೈವಗಳು 

186-187  ಕುಟ್ಟಿಚ್ಚಾತ್ತನ್  ಮತ್ತು ಪಮ್ಮಚ್ಚು 188  ಕುಡಿ ವೀರನ್ 

 189  ಕುದುರೆತ್ತಾಯ / ಕುದುರೆ ಮುಖ ದೈವ ‌ 190-191  ಕುರವ ಮತ್ತು ಸತ್ಯಂಗಳದ ಕೊರತಿ 192  ಕುರುವಾಯಿ ದೈವ ‌

193- 199   ಕುಲೆ ಭೂತಗಳು – ತುಳುನಾಡಿನ ವಿಶಿಷ್ಟ ದೈವಗಳು

 ‌200 ಕುಂಞಮ್ಮ ಆಚಾರ್ದಿ

 ‌201   ಕುಂಞಾಳ್ವ ಬಂಟ ‌

202   ಕುಂಞಿ ಭೂತ

 ‌203 ಕುಂಞಿ ರಾಮ ಕುರಿಕ್ಕಳ್ 

204 -208  ಕುಂಜಿರಾಯ ದೈವಗಳು 

209-210 ಕುಂಜಿ ಮತ್ತು ಅಂಗಾರ ದೈವಗಳು 211  ಕುಂಜೂರಂಗಾರ

 ‌212 ಕುಂಟಲ್ದಾಯ ‌

213-214  ಕುಂಟುಕಾನ  ಮತ್ತು ಕೊರವ ದೈವಗಳು ‌

215-216 ಕುಂಡ – ಮಲ್ಲು ದೈವಗಳು 

 217  ಕುಂಡೋದರ 

218–221  ಕೆಂಚಣ್ಣ ಕರಿಯಣ್ಣ ಪಾಪಣ್ಣ ಮತ್ತು ಲಕ್ಷ್ಮೀ ನರಸಿಂಹ 

222-223  ಕೇಚ ರಾವುತ ಮತ್ತು ರೇವಂತ  ‌224  ಕೇತುರ್ಲಾಯ 

 225  ಕೊಟ್ಟೆದಲ್ತಾಯ 

226-228  ಕೊಡಮಣಿತ್ತಾಯ,ವೈದ್ಯನಾಥ ,ಕುಡುಮದಾಯ ಮತ್ತು ಕುಕ್ಕಿನಂತಾಯ ದೈವಗಳು 

239 ಕೊನ್ನೊಟ್ಟು ಕಡ್ತ ‌

230-231   ತುಳುನಾಡಿನ ಜನಾನುರಾಗಿ ದೈವ ಕೊರಗ ತನಿಯ  ಮತ್ತು  ಮೈರೆ ಕೊರತಿ  ‌

232  ಕೊರತಿ  ‌

233  ಕೊಲ್ಲಿ ಕುಮಾರ ಮತ್ತು ಕೊಲ್ಯತ್ತಾಯ 234-235  ಕೊಂಡಾಣದ ಬಂಟ ಮತ್ತು ತಂಕರು ಮೂಲ್ಯೆದಿ 

236: ಅಪ್ರತಿಮ ವೀರ ಕೋಚು ಮಲ್ಲಿ  

237-239  ತುಳುನಾಡು ಬೆಳಗಿದ ಅವಳಿ ವೀರರು : ಕೋಟಿ ಚೆನ್ನಯರು ಮತ್ತು ದೇಯಿ ಬೈದ್ಯೆತಿ  ‌

240-241  ಅಪ್ರತಿಮ ಸಾಹಸಿ ಕೋಟೆದ ಬಬ್ಬು ಮತ್ತು ಕಚ್ಚೂರ ಮಾಲ್ದಿ

 ‌242:  ಕೋಟ್ರ ಗುತ್ತಿನ ಬಬ್ಬು  ‌

243-244  ಕೋಟೆರಾಯ ಮತ್ತು ಕೋಟೇಶ್ವರ ದೈವಗಳು 

245   ಕೋರಚ್ಚನ್  ‌

246   ಕೋಲು ಭಂಡಾರಿ 

247    ಕೋಳೆಯಾರ ಮಾಮ

 248  ಗಣಪತಿ ಕೋಲ 

249  ಗಂಗೆ ನಾಡಿ ಕುಮಾರ ,( ಓಡಿಲ್ತಾಯ) 250-251  ಗಂಡ ಗಣಗಳು ಮತ್ತು ಡೆಂಜಿ ಪುಕ್ಕೆ  

252  ಗಂಧರ್ವ ದೈವಗಳು 

253    ಗಿಳಿರಾಮ

 254   ಗಿಳಿರಾವಂತ 

255-256  ಗಿರಾವು ಮತ್ತು ಕೊಡೆಕಲ್ಲಾಯ 257  ಗುರು ಕಾರ್ನವೆರ್ 

 258  ಗುರುನಾಥನ್ 

 259-275 ಗುಳಿಗ ಮತ್ತು ಸೇರಿಗೆ  ದೈವಗಳು  276-300  ಚಾಮುಂಡಿ ಮತ್ತು ಸೇರಿಗೆ ದೈವಗಳು 

 301-302 ಚಾವುಂಡೇಶ್ವರ ಮತ್ತು ಚಂಡಿಕೇಶ್ವರ  

303 -313   ಚಿಕ್ಕು/ ಚಿಕ್ಕಮ್ಮ  ಪರಿವಾರ ದೈವಗಳು  

314-318′ ಐವರು  ಚಿನಿಕಾರ/ಚೀನೀ ಭೂತಗಳು 

319 ಚೆನ್ನಿಗರಾಯ 

320-322′ ಚೆಮ್ಮರತಿಮತ್ತು ಪಡೆವೀರನ್ ದೈವಗಳು 

323  ಜಟಾಧಾರಿ  

324  -334  ಜಟ್ಟಿಗ  ದೈವಗಳು (ಜೈನ ಜಟ್ಟಿಗ ಕೋಟೆ ಜಟ್ಟಿಗ ನೆತ್ರಾಣಿ ಜಟ್ಟಿಗ ಹೊಗೆವಡ್ಡಿ ಜಟ್ಟಿಗ ಅರಮನೆ ಜಟ್ಟಿಗ ಇತ್ಯಾದಿ) 

 335-337 ಜಮೆಯ- ಜಮಯತಿ ,ಬಡೆದಿ ದೈವಗಳು 

338  ಜಂಗ ಬಂಟ 

339 ಜಾನು ನಾಯ್ಕ   

 340  ಜಾರಂದಾಯ 

341-342  ಜಾಲ ಬೈಕಾಡ್ತಿ/ ಜಾಲ ಕೊರತಿ ಮತ್ರು ಅಂಗಾಡಿ ಕೊರತಿ ದೈವಗಳು  

343   ಪನ್ನೆ ಬೀಡಿನ ಜಾಲ್ಸೂರಾಯ

 344-345  ಇರ್ವೆರ್ ಜೋಕುಲು ದೈವೊಲು 346 ಜೈನ ಗುಜ್ಜಾರ್ಲು 

347  ಜೈನ ಭೂತ  

348  ತಪ್ಪೇದಿ/ ತಪ್ಪೆದಿ  

349 ತನ್ನಿಮಾಣಿಗ   

350-352  ತಂತ್ರಿಗಣಗಳು 

353 ತಿಮ್ಮಣ್ಣ ನಾಯಕ 

354 -356ತೆಕ್ಕನ್ ಕರಿಯಾತನ್, ಕನ್ನಿಕ್ಕೊರುಮಗನ್ ಮತ್ತು ಕೈಕೋಲನ್ ತೆಯ್ಯಂ 357 ತೋಡ ಕುಕ್ಕಿನಾರ್  

358  ದಾರಮ್ಮ ಬಳ್ಳಾಲ್ತಿ  

359-362  ದಾರು ಕುಂದಯ ದೈವಗಳು  

363   ದೀಪದ ಮಾಣಿ 

364-365   ದುಗ್ಗಲಾಯ ಮತ್ತು ಸುತ್ತು ಕೋಟೆ ಚಾಮುಂಡಿ  

366   ದೂಮ 

367  ದೂಧುರ್ಮ / ದೂರ್ದುಮ  

368-369  ದೆಸಿಲು ಮತ್ತು ಕಿಲಮರತ್ತಾಯ ದೈವಗಳು

 370 ದೇಬೆ ದೈವ 

 371-372   ದೇರೆ ಮತ್ತು  ಮಾನಿ ದೈವಗಳು 373 ದೇವಾನು ಪಂಬೆದಿಯಮ್ಮ

 374 ದೇಯಿ ಬೈದೆತಿ 

375-376 ದೇಸಿಂಗ ಉಳ್ಳಾಕುಲು ಮತ್ತು ,ಕೋಟೆದಾರ್  

377–380; ದೈವ ಸಾದಿಗೆ ಒಲಿಪ್ರಾಂಡಿ , ,ದೈವನ ಮುಟ್ನಾಯೆ ,ಅಡ್ಯೊಲ್ತಾಯೆ 

381   ದೈವಂತಿ 

382-396 ಧೂಮಾವತಿ ಮತ್ತು ಸೇರಿಗೆ ದೈವಗಳು  

397 -400 ನಂದಿ ಹೆಸರಿನ ದೈವಗಳು  

401-404  ನರಿ ತೆಯ್ಯಂ,ನರಿ ಪೂದ ಮತ್ತು ಸೇರಿಗೆ ದೈವಗಳು  

405-406  ನಂದಿಗೆನ್ನಾಯ ಮತ್ತು ಬ್ರಾಣ ಭೂತ 

407-409  ನಾಗ ಕನ್ನಿಕೆ  ಮತ್ತು ನಾಗರಾಜರು  410   ನಾಗ ಬ್ರಹ್ಮ  

411 ನಾಗ ಭೂತ  

412-418    ನಾಗ ಬ್ರಹ್ಮ ಮಂಡಲದ ದೈವಗಳು 

419-420 ನಾರಳ್ತಾಯ ಮತ್ತು ಭೂತರಾಜ  421  ನಾಲ್ಕೈತಾಯ 

422-423  ನೀಚ ತನಿಯ ಮತ್ತು ಒಂಟಿ ಕಾಲಿನ ಬಬ್ಬರ್ಯ  

424-425 ನುರ್ಗಿ‌ಮದಿಮಾಲ್ ಮತ್ತು ದುರ್ಗಿ ಮದಿಮಾಲ್  

426   ನೇರಳತ್ತಾಯ 

427-428   ನೈದಾಲ ಪಾಂಡಿ  ಮತ್ತು ಮಹೇಶ್ವರನ್ ದೈವಗಳು 

429 ಪಟ್ಟಾರ್ ತೆಯ್ಯಂ 

430 ಪಟ್ಟೋರಿತ್ತಾಯ 

431 ಪಡೆ ಬೀರ ಕಣ್ಣಂಡ ದೊಡ್ಡಯ್ಯ  

432-433 ಪಡ್ಕಂತಾಯ ಮತ್ತು  ಗೆಂಡಕೇತ್ರಾಯ

 434 ಪತ್ತೊಕ್ಕೆಲು ಜನನಂದ ದೈವ 

435-436 :ಪನಯಾರ್  ಮತ್ತು ಸಂಪ್ರದಾಯ ದೈವ 

437:ಪಯ್ಯ ಬೈದ್ಯ 

438-443’ಪಯ್ಯಂಬಿಲ್ ಚಂದು ತಚ್ಚೋಳಿ ಒದೆನನ್ ಮತ್ತು ಪರಿವಾರ 

444-445  ಪರವ  ಮತ್ತು ಪರಿವಾರ ನಾಯಕ 446 ಪಂಜಿ ಭೂತ  

447  -466 ಪಂಜುರ್ಲಿ ಮತ್ತು ಸೇರಿಗೆ ದೈವಗಳು 

467 ಪಾಣರಾಟ 

468 ಪಿಲಿ ಭೂತ  

469 -471  ಪುದರ್ ಚಿನ್ನ ಬಂಟ ಮತ್ತು  ಪಿಲೆ ಪೆಲತ್ತಿ ದೈವಗಳು 

472  ಪುದ  ಮತ್ತು ಪೋತಾಳ‌ 

473- 490 ಪುರಾಣ ದೇವತೆಗಳು ಮತ್ತು ಭೂತ ತೆಯ್ಯಂ ಗಳು 

491-501 ತುಳುನಾಡಿನ ಪುರುಷ ಭೂತಗಳು  502  ಪುಲಂದಾಯ ಬಂಟ 

503 ಪುಲಿಮರಂಞ ತೊಂಡನ್  

504 -511   ಪುಲಿಯೂರ್ ಕಾಳಿ  ಪುಳ್ಳಿಕರಂಕಾಳಿ,ಕರಿಂತಿರಿ ನಾಯರ್ ಮತ್ತು ಐವರು ಹುಲಿ ದೈವಗಳು 

512  ಪೆರಿಯಾಟ್ ಕಂಡನ್  

513  ಪೆರುಂಬಳಯಚ್ಚನ್ 

514  ಪೊಟ್ಟನ್  515-  521 ಪೊನ್ನಂಗಾಲತಮ್ಮೆ  ಮತ್ತು ಆರು  ಸಹೋದರರು 

522 ಪೊನ್ವಾನ್ ತೊಂಡಚ್ಚನ್ 

523-525 ಪೊಸಮಹರಾಯ ,ಉಳ್ಳಾಲ್ತಿಯರು ಮತ್ತು ಮಾಡ್ಲಾಯಿ  

526 -536 ಪೋಲೀಸ್,  ಕಳ್ಳ ,ಶಾನುಭಾಗ,ಪಟೇಲ, ಗುರಿಕ್ಕಾರ,ತಿಗಮಾರೆರ್ ,ಬಲಾಯಿಮಾರೆರ್,ಸೇನವ ,ಕಡೆಂಜು ಬಂಟ,ಬಂಕಿನಾಯ್ಕ  ದೈವಗಳು 

537 ಪೋಲೀಸ್ ತೆಯ್ಯಂ 

 538-539 ಬಚ್ಚನಾಯಕ 

540 -544 5ಬಬ್ಬರ್ಯ ಮತ್ತು ಸೇರಿಗೆ ದೈವಗಳು  

545-548 ಬಲವಾಂಡಿ ,ಕಂಡೆತ್ತಾಯ , ಉಳ್ಳಾಯ ,ಕುರಿಯಾಡಿತ್ತಾಯ 

549  ಬಲ್ಲ ಮಂಜತ್ತಾಯ

 550-555 ಬಲ್ಲಾಳ ಬಲ್ಲಾಳ್ತಿ ಮತ್ತು ಇತರ ದೈವಗಳು 

556 ಬಲೀಂದ್ರ  

557  ಬಸ್ತಿನಾಯಕ

 558 ಬಂಕಿ ನಾಯ್ಕ  

559 ಬಂಡಿ ರಾಮ‌ .

560 ಬಾಕುಡತಿ

 561 ಬಾಲೆ ಕನ್ಯಾಪು 

562 -606 ಬ್ರಾಹ್ಮಣ ಮೂಲದ ದೈವಗಳು 607 ಬಿರ್ಮಣಾಚಾರಿ  

608-609   ಬಿಲ್ಲಾರ ಬಿಲ್ಲಾರ್ತಿ ದೈವಗಳು 

610 ಕುಂಬಳೆ ಸಿಮೆಯ ಪಟ್ಟದ ದೈವ ಬೀರಣ್ಣಾಳ್ವ 

611 ಬೀರ್ನಾಚಾರಿ 

612-614 ಬೂಡು ಬೊಮ್ಮಯ್ಯ ಮತ್ತು ಕತ್ತಲೆ ಬೊಮ್ಮಯ್ಯ,ಪಟ್ಟಂತರಸು  

615-616 ಬೆರ್ಮೆರ್,ಕಂಬೆರ್ಲು ಮತ್ತು ಹಕ್ಕೆರ್ಲು  

617-618 ಬೆಲೆಟಂಗರಜ್ಜ ಮತ್ತು ತಂಗಡಿ 619-620 ಬೇಡವ ಮತ್ತು ಬೇಟೆಗಾರ ದೈವಗಳು 

621 ಬೊಟ್ಟಿ ಭೂತ

 622 -625:ಬೋವ ದೈವಗಳು .

 626 ಬೈನಾಟಿ 

 627   ಬೈಸು ನಾಯಕ 

628-690 ಭಗವತಿ ದೈವಗಳು 

691 ಭಟಾರಿ ದೈವ   

692-694   ಭದ್ರಕಾಳಿ ,ಭದ್ರಕಾಳಿ ಭಗವತಿ ಮತ್ತು ವಣ್ಣಾತಿ ದೈವ 

695 – 696  ಭದ್ರಕಾಳಿಮತ್ತು ಬೊಳ್ಳಿ ಬಿಲ್ ಅಯ್ಯಪ್ಪ  

697-698 ಭಂಡಾರಿ ಮತ್ತು ಪಿಲಡ್ಕತ್ತಾಯ‌ 699 ಮಡಿಕತ್ತಾಯ 

700-701 ಮದನಕ್ಕೆ ದೈಯಾರ್ ,ಕಳಿಗೋಂಕು ಮಾಬೀರರು 

702-703′  ಮದಂಗಲ್ಲಾಯ ಮತ್ತು  ಕಡಂಗಲ್ಲಾಯ  

704-705 ಮದಿಮಾಯ ಮದಿಮಾಲ್ 706 ಮನಕ್ಕಡನ್ ಗುರುಕ್ಕಳ್  

707 ಮನಕ್ಕೊಟ್ಟ್ ಅಮ್ಮ 

708- 716 ಮನ್ಸರ  ದೈವಗಳು 

717 ಮರಾಂಗಣೆ 

718;ಮರುತಿಯೋಡನ್ ಕುರಿಕ್ಕಳ್ 

719-720  ಮಲಯಾಳ ಬ್ರಹ್ಮ ಮತ್ತು ಮಲ್ಯಾಳ ಭಟ್ರು  

721 ಮಲರಾಯ 

722  ಮಲೆಕುಡಿಯರ ಅಯ್ಯಪ್ಪ  

723-726: ಮಲೆ ತಮ್ಮಚ್ಚ ಮತ್ತು ಪರಿವಾರ  727 ಮಲೆರಾಯ ಮತ್ತು ಪರಿವಾರ   

728 ಮಲೆಸಾವಿರ ದೈವ 

729-730 ಮಂಗಳೆರ್ ಮತ್ತು  ಗುರು ಮಂಗೞೆರ್  

731-733 ಮಂತ್ರ ಗಣ ಮಂತ್ರ ದೇವತೆ ಮಂತ್ರ ಮೂರ್ತಿ ದೈವಗಳು 

734 ಮಂದ್ರಾಯ 

735 ಮಹಾಕಾಳಿ 

736  ಮಾಂಕಾಳಿ ದೈವಗಳು 

737-741  ಮಾಯಂದಾಲ್ ಮತ್ತು ಪರಿವಾರ   742-743  ಮಾಯೊಲು ಮಾಯೊಲಜ್ಜಿ. 744-757 ಮಾರಿ ಭೂತಗಳು 

758-760 ಮಾಲಿಂಗ ರಾಯ ದಂಡಪ್ಪ ನಾಯಕ ಮಂಞ ನಾಯಕ ದೈವಗಳು‌ 

761 ಮಾಸ್ತಿಯಮ್ಮ  

762-763  ಮಿತ್ತೂರು ನಾಯರ್ ದೈವಗಳು 764 ಮಿಲಿಟ್ರಿ ಅಜ್ಜ  

765 ಮೀನು ಗಾರ್ತಿ 

766  -780  ಮುಗೇರ ದೈವಗಳು 

 781 ಮುಡದೇರ್ ಕಾಳ ಭೈರವ  

782-784  ಮುತ್ತಪ್ಪನ್ ,ತಿರುವಪ್ಪನ್ ,ಮೂಲಂಪೆತ್ತಮ್ಮ 

785  ಮುತ್ತು ಮಾರಿಯಮ್ಮ  

 786 ಮುನಿಸ್ವಾಮಿ ದೈವ 

787 ಮುವ್ವೆ ಮೂವ,ಮೂವಿಗೆ ವಾತೆ  

788-813 ಮುಸ್ಲಿಂ ಮೂಲದ ದೈವಗಳು 

 814  ಮೂಜಿಲ್ನಾಯ  

815-816  ಮೂಡೊಟ್ನಾರ್,ಪಡುವೆಟ್ನಾರ್  817  ಮೂರಿಲು 

818  ಮೂರ್ತಿಲ್ಲಾಯ 

818-900 ಮೂಲ ಪುರುಷ ದೈವಗಳು  

901-1055 ಮೆಕ್ಕೆ ಕಟ್ಟಿನ ಉರುಗಳು

  1056-1057  ಮೇರ ಮೇತಿಯರು

 1058  ಮೇಲಂಟಾಯ 

 1059  ಮೈಯೊಂದಿ 

1060   ಮೈಸಂದಾಯ 

1061-1066  ಮೋಂದಿ ಕೋಲ‌ 

1067 -1117 ಯಕ್ಷ ಯಕ್ಷಿಯರು ಮತ್ತು ಶ್ರೀಲಂಕಾದ  ಯಕುಮ ಕೋಲ‌  

1118-1119  ರಕ್ತೇಶ್ವರಿ ಮತ್ತು ಬವನೊ 1120  ರಾಜನ್ ದೈವಗಳು

 1121-1123  ವಣ್ಣಾತನ್ ವಯನಾಡು ಕುಲವನ್,ಕಣ್ಣನ್  

1124 ವಡ್ಡಮರಾಯ

 1125-1126  ವಿದೇಶೀ ಕಾಫ್ರೀ ದೈವಗಳು 1127-1128 ವಿಷ್ಣು ಮೂರ್ತಿ ಮತ್ತು ಪಾಲಂದಾಯಿ ಕಣ್ಣನ್ 

1129-1130  ವೀರಭದ್ರ/ ವೈರಜಾತ್,ವೀರನ್  1131-1134 ವೀರ ವಿಕ್ರಮೆರ್ ಮತ್ತು ಇರ್ವೆರ್ ಬೈದ್ಯೆರ್ 

1135  ವೆಳ್ಳು ಕುರಿಕ್ಕಳ್ 

1136  ವೇಟಕ್ಕೊರುಮಗನ್ 

1137  ವೈದ್ಯಾಚಾರ್ಯ/ ವೈದ್ಯರಾಜನ್ 

 1138  ಶಂಕರ ಬಡವಣ

 1139-1141 ಶಾಸ್ತಾವು,ಕರಿ ಭೂತ,ಕೋಮಾಳಿ 

1142  ಶಿರಾಡಿ ಭೂತ. 

1143  ಶಿವರಾಯ  

1144  ಶ್ರೀಮಂತಿ ದೈವ 

1145-1146 ಸತ್ಯ ಮಾಗಣ್ತಿ ಮತ್ತು ಕಲ್ಲು ದೈವ  1147-1151  ಬಾಕುಡರ ಸರ್ಪಕೋಲದ ದೈವಗಳು 

1152  ಸರ್ಪಂಕಳಿ 

1153  ಸರ್ಪಂತುಳ್ಳಲ್

 1154  ಸಂನ್ಯಾಸಿ ಮಂತ್ರ ದೇವತೆ 

1155 ಸಾದಿಕರಾಯ ಮತ್ತು ಹಾದಿಕಾರಾಯ  1156  ಸಾರ ಮಾಂಕಾಳಿ 

1157 ಸ್ವಾಮಿ ದೈವ  

1158-1165  ಸೀತಾಯುಂ ಮಕ್ಕಳುಂ,ದೈವತಾರ್ ಮತ್ತು ಪರಿವಾರ

 1166  ಸುಬ್ಬರಾಯ 

1167 ಸೋಣದ ಜೋಗಿ 

1168 ಸೋಣದಜ್ಜಿ/ ತಡ್ಯದಜ್ಜಿ 

 1169  ಹನುಮಂತ/ ಸಾರ ಪುಲ್ಲಿದಾರ್ ದೈವ 1170 ಹಳ್ಳತ್ತಾಯ ಮತ್ತು ಅಲ್ನತ್ತಾಯ  

1171  ಹಳೆಯಮ್ಮ 

1172-1181  ಹಾಯ್ಗುಳಿ ಮತ್ತು ಪರಿವಾರ  1182-1201  ಹಿರಿಯಾಯ ದೈವಗಳು 1202 -1203  ಹುಲಿ ಮತ್ತು ಹಸರ ತಿಮ್ಮ  1204  ಹೊಸಮ್ಮ , 

1205 ಹೊಸಳಿಗಮ್ಮ 

1206-1207   ಹೌಟಲ್ದಾಯ  ಮತ್ತು ಮಾಳದ ಕೊರಗ 
 ಅನುಬಂಧ:
1 ತುಳು ಕಲಿಕಾ ಪಠ್ಯ 2 ತಿಗಳಾರಿ( ತುಳು) ಲಿಪಿ- ಒಂದು ವಿಶ್ಲೇಷಣಾತ್ಮಕ‌ ಅಧ್ಯಯನ  3 ಭೂತಾರಾಧನೆ ಮತ್ತು ಯಕ್ಷಗಾನ- ಒಂದು ತೌಲನಿಕ ನೋಟ   4 ತುಳುವ ಸಂಸ್ಕಾರಗಳು 5 ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು‌ 6 ತುಳು ಭೂತಗಳ ನಡುವೆ ಗೌತಮ‌ ಬುದ್ಧನೂ ಇದ್ದ  7 ಸಾಂಸ್ಕೃತಿಕ‌ ಪದ ಕೋಶ  8  ಕ್ಷೇತ್ರ ಕಾರ್ಯದ ವಿವರ

* ಕರಾವಳಿಯ ಸಾವಿರದೊಂದು ದೈವಗಳು ಕೃತಿಗಾಗಿ ಸಂಪರ್ಕಿಸಬಹುದು 
9480516684- ಡಾ.ಲಕ್ಷ್ಮೀ ಜಿ ಪ್ರಸಾದ್ 



 

ಮರವಂತೆಯಲ್ಲಿ ಸುರಾಲಿನ ಅರಸರು ಆರಾಧಿಸಿದ ಪಂಜುರ್ಲಿ ದೈವದ ಮಾಹಿತಿ

 ಮರವಂತೆಯಲ್ಲಿ ಸುರಾಲಿನ ಅರಸರು ಆರಾಧಿಸಿದ ಪಂಜುರ್ಲಿ ದೈವದ ಮಾಹಿತಿ 

ಹೌಂದೇರಾಯನ ವಾಲಗ ಎಂಬ ಜನಪದ ಕುಣಿತ ಒಂದು ಉಡುಪಿ ಕುಂದಾಪುರ ಕಡೆ ಪ್ರಚಲಿತವಿದೆ .ಈತ ಓರ್ವ ಅರಸ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ .ಈ ಕುಣಿತ ಬಗ್ಗೆ 

ಹೌಂದೇರಾಯನ ಕುಣಿತಕ್ಕೆ ಪ್ರಾಚೀನ ಇತಿಹಾಸವಿದೆ. ಹೌಂದೇರಾಯ ಎಂಬ ತುಂಡರಸ ಜೈನರಾಜರಿಗೆ ಸಾಮಂತನಾಗಿ ಬಾರಕೂರು ಸಂಸ್ಥಾನ ಆಳುತ್ತಿದ್ದ. ಆತನ ಆಳ್ವಿಕೆ ಜನಪರವಾಗಿತ್ತು. ಕಲಾಪ್ರಿಯನಾದ ಆತನಿಗೆ ಹೊಗಳಿಕೆ ಅಂದ್ರೆ ತುಂಬಾ ಇಷ್ಟ. ಆತನ ಹೊಗಳುವಿಕೆಗೆ ಬುದ್ಧಿವಂತ ಕರಾವಳಿ ಜನ ರೂಪಿಸಿದ ಕುಣಿತವೇ ಹೌಂದೇರಾಯನ ಕುಣಿತ. ಹೊಗಳಿಕೆಯ ಹಾಡು ನತ್ಯ ನೋಡಿದ ಹೌಂದೇರಾಯ ಇದನ್ನು ಕಡ್ಡಾಯಗೊಳಿಸಿದ. ರಾಜನನ್ನು ದೇವರೆಂದು ಕಾಣುವ ಜನರಿಂದಾಗಿ ಹೌಂದೇರಾಯನ ಕಾಲಾನಂತರವು ಕಲಾಪ್ರಕಾರ ಮುಂದುವರಿದುಕೊಂಡು ಬಂತು. ಹೌಂದೇರಾಯನ ಓಲಗ ಎಂದು ಸಹ ಕರೆಯಲ್ಪಡುವ ಈ ಹಾಡು-ನತ್ಯದಲ್ಲಿ 6 ಭಾಗಗಳಿವೆ. ಓಲಗ ಸಂಧಿ, ಬ್ಯಾಂಟಿ ಸಂಧಿ(ಬೇಟೆಯ ಹಾಡು), ಕೋಡಂಗಿ ಸಂಧಿ, ಶಿವರಾಮ ಸಂಧಿ, ಕೋಲಾಟದ ಸಂಧಿ, ಅರ್ಪಿತ ಸಂಧಿ ಎಂದು ವಿಂಗಡಿಸಲಾಗಿದೆ. ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಈ ಅಪರೂಪದ ಕಲಾಪ್ರಕಾರ ಈಗ ಅವಸಾನದ ಅಂಚಿನಲ್ಲಿದೆ. ಇದನ್ನು ಉಳಿಸಿ ಬೆಳೆಸೆಬೇಕೆಂಬ ಆಶಯದಿಂದ ಸಂಸ್ಥೆಯನ್ನು ಹುಟ್ಟು ಹಾಕಿದ್ದೇವೆ. ಯೂತ್ ಹಾಸ್ಟೆಲ್ಸ್ ಆಫ್ ಇಂಡಿಯಾ ನಡೆಸಿದ ಐಲ್ಯಾಂಡ್ ಎಕ್ಸ್‌ಪಿಡಿಶನ್ 2009ರಲ್ಲಿ ಹೌಂದೇರಾಯನ ಕುಣಿತ ಪ್ರದರ್ಶನಗೊಂಡು ಸಾರ್ವತ್ರಿಕ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಗುರುಮಾರುತಿ ಹೌಂದೇರಾಯನ ಜಾನಪದ ನತ್ಯ ತಂಡದ ಅಧ್ಯಕ್ಷರಾದ ಗುಂಡು ಪೂಜಾರಿ ಹೇಳುತ್ತಾರೆ.

 

 ಈ ಹೌಂದೇರಾಯ  ಅರಸನಿಗೆ ಸಂಬಂಧಿಸಿದಂತೆ ಐತಿಹ್ಯವೊಂದು ಪಂಜುರ್ಲಿ ದೈವದ ಮೂಲಕ್ಕೆ  ಸಂಬಂಧಿಸಿ ಪ್ರಚಲಿತವಿದೆ.

ಉಡುಪಿ ಜಿಲ್ಲೆಯಲ್ಲಿ ಸೂರಾಲು ಅರಮನೆ ಈಗಲೂ ಇದೆ.ಇಲ್ಲಿಗೆ ಸಂಬಂಧಿಸಿದಂತೆ ಕಪ್ಪಣ್ಣ ಸ್ವಾಮಿ ಎಂಬ ದೈವಕ್ಕೂ ಈ ಪರಿಸರದಲ್ಲಿ ಆರಾಧನೆ ಇದೆ 

ಸೂರಾಲಿನಲ್ಲಿ ಸುರಪುರ ಅರಸರ ಒಂದು ಕವಲು ಸ್ಥಳೀಯವಾಗಿ ಆಡಳಿತ ನಡೆಸುತ್ತಿತ್ತು.ಇತಿಹಾಸದಲ್ಲಿ ಇವರನ್ನು ತೊಳಹರು ಎಂದು ಗುರುತಿಸಲಾಗಿದೆ 

 

ಸುರಪುರದ ಅರಸರು ತಿರುಪತಿಯನ್ನು ರಕ್ಷಣೆ ಮಾಡುವ ಜವಾಬ್ದಾರಿಯನ್ನು ಹೊತ್ತಿದ್ದರು
ಸುರಪುರ ಅರಸರ ಒಂದು ಕವಲು ಸುರಾಲ ಅರಸರಾಗಿದ್ದರು  .ಸುರಾಲಿನ ಅರಸರಲ್ಲಿ ಹೌಂದೇರಾಯನೆಂಬಾತ ತಿರುಪತಿಯ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿದ್ದನು

ಈ ಅರಸನ  ಕಾಲದಲ್ಲಿ ನಡೆದ    ವಿದ್ಯಮಾನವಿದು

 ಒಂದು ದಿನ ಹೌಂದೆರಾಯ ತಿರುಪತಿಯಿಂದ ಸುರಾಲಿಗೆ ಬರುತ್ತಾನೆ  

.ದಾರಿಮಧ್ಯೆ ವಿಶ್ರಾಂತಿಗಾಗಿ ಬೀಡು ಬಿಟ್ಟಿದ್ದಾಗ ಒಂದು ಬಿಳಿ ಹಂದಿಮರಿ ಕಾಣಿಸುತ್ತದೆ .ಹೌಂದೆರಾಯ ಮತ್ತವನ ಪರಿವಾರದವರು ಅದನ್ನು ಬೇಟೆಯಾಡಿ ಕೊಂದು ತಿನ್ನುತ್ತಾರೆ.

ನಂತರ ಅವರಿಗೆ ಅನೇಕ ಅನಿಷ್ಟಗಳಾಗುತ್ತದೆ.ಕಷ್ಟ ಕಾರ್ಪಣ್ಯಗಳನ್ನು ಎದುರಿಸುತ್ತಾರೆ 

.ಆಗ ಜ್ಯೋತಿಷರಲ್ಲಿ ಕೇಳಿದಾಗ ಆ ಬಿಳಿ ಹಂದಿ ಮರಿಯು ವರಾಹ ರೂಪಿ ವಿಷ್ಣುವಿನ ಅಂಶವನ್ನು ಪಡೆದಿದ್ದ ದೈವಿಕ ಶಕ್ತಿ.

 

ಅದನ್ನು ಕೊಂದದ್ದು ತಪ್ಪು.ಅದರ ಪರಿಹಾರಾರ್ಥವಾಗಿ ದೇವಾಲಯ ಕಟ್ಟಿಸಿ ಆರಾಧಿಸಬೇ ು ಎಂದು ಕಂಡು ಬರುತ್ತದೆ.ಹಾಗೆ 

ಹೌಂದೆ ರಾಯ ಸುರಾಲಿಗೆ ಬಂದ ನಂತರ ಮರವಂತೆಯಲ್ಲಿ ವರಾಹ ರೂಪಿ ದೇವರನ್ನು ಪ್ರತಿಷ್ಠಾಪಿಸಿ  ಆರಾಧನೆ ಮಾಡುತ್ತಾನೆ ಎಂಬ ಐತಿಹ್ಯವನ್ನು ಶ್ರೀವತ್ಸ ಪ್ರದ್ಯುಮ್ನ ಅವರು ತಿಳಿಸಿದ್ದಾರೆ.

ಹೌಂದೇರಾಯ ಓರ್ವ ತುಂಡರಸನಾಗಿದ್ದು ಜೈನರಸರ ಸಾಮಂತನಾಗಿ ಬಾರಕೂರನ್ನು ಆಳ್ವಿಕೆ ಮಾಡುತ್ತಿದ್ದ ಎಂಬ ಐತಿಹ್ಯವಿದೆ 

ಈತ ತಿರುಪತಿಗೆ ಹೋಗಿ ಹಿಂತಿರುಗಿ ಬರುವಾಗ ಈ ಘಟನೆ ನಡೆದಿರಬಹುದು.

ಪ್ರಸ್ತುತ ಮರವಂತೆಯಲ್ಲಿ ಒಂದು ವರಾಹ ದೇವಸ್ಥಾನ ಇದೆ ಇದನ್ನು ಓರ್ವ ಮಹಾರಾಜ ಯಾವುದೋ ಹತ್ಯೆಯ ದೋಷ ಪರಿಹಾರಕ್ಕಾಗಿ ಕಟ್ಟಿಸಿದ ಆದ್ದರಿಂದ ಇದನ್ನು ಮಹಾರಾಜ ಸ್ವಾಮಿ ವರಾಹ ದೇವಸ್ಥಾನ ಎಂದು ಕರೆಯುತ್ತಾರೆ 

ಬಹುಶಃ ಹಂದಿ ಮರಿಯ ಹತ್ಯೆ ಯ ನಂತರ ದೋಷಗಳು ಕಾಣಿಸಿದ್ದು ಅದರ ಪರಿಹಾರಕ್ಕಾಗಿ ಕಟ್ಟಿಸಿದ್ದು ಇರಬಹುದು 

 

 

ಪುರಾಣ ಮೂಲದ ಕಥಾನಕದಲ್ಲಿ ಈಶ್ವರ ದೇವರು ಹಂದಿ ಮರಿಯನ್ನು ಬೇಟೆ ಆಡಿದ ಕಥೆ ಇದೆ .ಕಾಂತಾರ ಪಂಜುರ್ಲಿ ಕಥೆಯಲ್ಲೂ ಹಂದಿ ಮರಿಯನ್ನು ಕೊಂದ ಕಥಾನಕ ಇದೆ ಸುರ ಪುರದ ಹೌಂದೇ ರಾಯನ ಕಥಾನಕದಲ್ಲು ಹಂದಿ ಬೇಟೆಯ ಕಥೆ ಇದೆ 

ಹಂದಿ ಮರಿಯನ್ನು ಕೊಂದ ನಂತರ ಕಷ್ಟಗಳು ಎದುರಾಗಿ ನಂತರ ಅದನ್ನು ದೈವವಾಗಿ ಆರಾಧನೆ ಮಾಡುದು ಕಂಡು ಬರುತ್ತದೆ 

ಡಾ.ಲಕ್ಷ್ಮೀ ಜಿ ಪ್ರಸಾದ 

ಲೇ : ಕರಾವಳಿಯ ಸಾವಿರದೊಂದು ದೈವಗಳು

Mobile  9480516684

ಹೌಂದೇರಾಯ ಆರಾಧಿಸಿದ ಪಂಜುರ್ಲಿ ಅಲ್ಲದೆ ಅನೇಕ ಪಂಜುರ್ಲಿ ದೈವಗಳಿವೆ

ನನಗೆ ಸಿಕ್ಕ ಪಂಜುರ್ಲಿ ಗಳ ಹೆಸರು ಮತ್ತು ಕಾಂತಾರ ಪಂಜುರ್ಲಿ ಯ ಕಥಾನಕವನ್ನು ನಾನು ಇಲ್ಲಿ ನೀಡಿರುವೆ

1 ಅಂಗಣತ್ತಾಯ ಪಂಜುರ್ಲಿ                   

 2 ಅಂಬುಟಾಡಿ ಪಂಜುರ್ಲಿ            ‌‌‌‌‌‌        

3 ಅಂಬೆಲ ಪಂಜುರ್ಲಿ 

4 ಅಣ್ಣಪ್ಪ ಪಂಜುರ್ಲಿ                        

5  ಅಬ್ಬಕ್ಕ ಪಂಜುರ್ಲಿ                            

6 ಅಬ್ಬೇಡಿ ಪಂಜುರ್ಲಿ.

7 ಅನಿತ್ತ ಪಂಜುರ್ಲಿ                   ‌‌‌‌‌‌           

8 ಅರದ್ದರೆ ಪಂಜುರ್ಲಿ    ‌‌‌‌                       

9 ಅಲೇರ ಪಂಜರ್ಲಿ.

10 ಉಂರ್ದರ ಪಂಜುರ್ಲಿ                  

 ‌11 ಉಡ್ಪಿದ ಪಂಜುರ್ಲಿ                          

12 ಉಬಾರ ಪಂಜುರ್ಲಿ

13  ಉರಿಮರ್ಲೆ ಪಂಜುರ್ಲಿ                    

14 ಎಣ್ಮಡಿತ್ತಾಯ ಪಂಜುರ್ಲಿ. ‌‌‌‌‌‌                   

 15 ಐನೂರ ಪಂಜುರ್ಲಿ 

16 ಒರ್ತೆ? ವರ್ತೆ ಪಂಜುರ್ಲಿ                                

17 ಒರಿ ಪಂಜುರ್ಲಿ   ‌‌‌‌‌‌                         ‌   ‌ ‌    ‌‌‌‌ 

 18 ಒರಿ ಮರ್ಲೆ ಪಂಜುರ್ಲಿ

19 ಒರಿ ಬಂಟೆ ಪಂಜುರ್ಲಿ 

 20  ಕಟ್ಟೆದಲ್ತಾಯ ಪಂಜುರ್ಲಿ. 

22 ಕಡಬದ ಪಂಜುರ್ಲಿ

22  ಕಡೆಕ್ಕಾರ ಪಂಜುರ್ಲಿ

 23 ಕರ್ಪುದ ಪಂಜುರ್ಲಿ  

25 ಕಲ್ಲುರ್ಟಿ ಪಂಜುರ್ಲಿ 

24 ಕಲ್ಯದ ಪಂಜುರ್ಲಿ 

26 ಕಾಡಬೆಟ್ಟುದ ಪಂಜುರ್ಲಿ

 27 ಕಾಡ್ಯ ಪಂಜುರ್ಲಿ

28 ಕುಂಜಿರಂಗರ ಪಂಜುರ್ಲಿ

29 ಕುಕ್ಕುಡು ಬೈದಿನ ಪಂಜುರ್ಲಿ 

30 ಕುಕ್ಕುಲ ಪಂಜುರ್ಲಿ

31  ಕುಂತಾ/ ಟಾಳ ಪಂಜುರ್ಲಿ 

32  ಕುಡುಮೊದ ಪಂಜುರ್ಲಿ 

33 ಕುಪ್ಪೆ ಪಂಜುರ್ಲಿ

34  ಕುಪ್ಪೆಟ್ಟು  ಪಂಜುರ್ಲಿ. 

 35  ಕುಮಾರೆ ಪಂಜುರ್ಲಿ  

 36 ಕೂಳೂರು ಪಂಜುರ್ಲಿ‌

  37 ಕೆಂಪರ್ನ ಪಂಜುರ್ಲಿ

 38 ಕೆಂಪೆರ್ಲ ಪಂಜುರ್ಲಿ 

  39  ಕೊಡ ಪಂಜುರ್ಲಿ

40 ಕೆಂಪೊಡಿ ಪಂಜುರ್ಲಿ 

41_ಕೊರಗ ಪಂಜುರ್ಲಿ

42  ಕೊರಿಯೆಲ ಪಂಜುರ್ಲಿ 

43  ಕೊಟ್ಯದ ಪಂಜುರ್ಲಿ

 44 ಕೋಟೆ ಪಂಜುರ್ಲಿ 

45ಕೋಡಿ ಪಂಜುರ್ಲಿ 

46ಕೋರೆದಾಂಡ್ ಪಂಜುರ್ಲಿ

47  ಗುತ್ತಿ ಪಂಜುರ್ಲಿ  

48  ಗೂಡು ಪಂಜುರ್ಲಿ.

 49 ಗ್ರಾಮ ಪಂಜುರ್ಲಿ

40   ಗಿಡಿರಾವಂತ ಪಂಜುರ್ಲಿ  

51 ಚಾವಡಿದ ಪಂಜುರ್ಲಿ 

52ಜಾಗೆದ ಪಂಜುರ್ಲಿ

53 ಜಾಲುದ ಪಂಜುರ್ಲಿ

‌54 ಜುಂಬುರ್ಲಿ 

55  ಜೋಡು ಪಂಜುರ್ಲಿ

 56 ತೆಳಾರ ಪಂಜುರ್ಲಿ ‌

57 ದಾಸಪ್ಪ ಪಂಜುರ್ಲಿ

‌58ದೆಂದೂರ ಪಂಜುರ್ಲಿ

59  ದೇವರ ಪೂಜಾರಿ ಪಂಜುರ್ಲಿ‌

 60 ನಾಂಜ ಪಂಜುರ್ಲಿ‌

61ನಾಗ ಪಂಜುರ್ಲಿ

62  ನಾಡ ಪಂಜುರ್ಲಿ

 63 ನೆಲಕ್ಕೈ ಪಂಜುರ್ಲಿ. 

64ಪಂಜಣತ್ತಾಯ ಪಂಜುರ್ಲಿ

65 ಪಂಜಿಕ್ಕಲ್ಲು ಪಂಜುರ್ಲಿ

‌‌66 ಪಂಜುರ್ಲಿ ಗುಳಿಗ

 67ಪಟ್ಟದ ಪಂಜುರ್ಲಿ.

68 ಪಣಂಬೂರು ಪಂಜುರ್ಲಿ

 ‌69 ಪ್ರಧಾನಿ ಪಂಜುರ್ಲಿ

 ‌70ಪಾತಾಳ ಪಂಜುರ್ಲಿ

71 ಪಾರೆಂಕಿ ಪಂಜುರ್ಲಿ  

72 ಪೊಟ್ಟ ಪಂಜುರ್ಲಿ  

73 ಬಗ್ಗು ಪಂಜುರ್ಲಿ

74ಬಂಟ ಪಂಜುರ್ಲಿ‌ 

75ಬಡ್ಡಗುಡ್ಡೆದ ಪಂಜುರ್ಲಿ

 76 ಬೂಡು ಪಂಜುರ್ಲಿ

77 ಬೋಳಾರ ಪಂಜುರ್ಲಿ‌‌

78 ಬೈಕಾಡ್ತಿ ಪಂಜುರ್ಲಿ  

79 ಬೈಲ ಪಂಜುರ್ಲಿ‌

80  ಭಂಡಾರದ ಪಂಜುರ್ಲಿ‌

 81 ಮಟ್ಟಾರು  ಪಂಜುರ್ಲಿ

  82 ಮನ ಪಂಜುರ್ಲಿ

83  ಮನಿಪ್ಪನ ಪಂಜುರ್ಲಿ‌

 84 ಮರಾಠ ಪಂಜುರ್ಲಿ  

85 ಮಿಂಚು ಕಣ್ಣಿನ ಪಂಜುರ್ಲಿ

86 ಮಿತ್ತೊಟ್ಟಿ ಪಂಜುರ್ಲಿ  

87ಮುಗೇರ ಪಂಜುರ್ಲಿ 

88 ಮುಳ್ಳು ಪಂಜುರ್ಲಿ

89  ಮೂಡ್ಕೆರಿ ಪಂಜುರ್ಲಿ  

90 ಮೈಯಾರ್ಗೆ ಪಂಜುರ್ಲಿ

 91 ರಕ್ತ ಪಂಜುರ್ಲಿ

92 ರುದ್ರ ಪಂಜುರ್ಲಿ 

93  ಲತ್ತಂಡೆ ಪಂಜುರ್ಲಿ

 ‌94  ವರ್ಣರ ಪಂಜುರ್ಲಿ

95  ವಿಷ್ಣು ಪಂಜುರ್ಲಿ ‌

96  ಶಗ್ರಿತ್ತಾಯ ಪಂಜುರ್ಲಿ  

97ಸ್ಪಟಿಕದ ಪಂಜುರ್ಲಿ

98  ಸಾನದ ಪಂಜುರ್ಲಿ

 99ಸಾರಾಳ ಪಂಜುರ್ಲಿ 

100  ಸುಳ್ಳಮಲೆ ಪಂಜುರ್ಲಿ

101ಸೇಮಿಕಲ್ಲ ಪಂಜುರ್ಲಿ

‌‌102  ಹುಮ್ಮದ ಪಂಜುರ್ಲಿ  

 103 ಕಾಂತಾರ ಪಂಜುರ್ಲಿ 

 


 

ಅನೇಕರು ಪಂಜುರ್ಲಿ ದೈವದ ಮೂಲದ  ಮಾಹಿತಿಯನ್ನು ಕೇಳ್ತಿದ್ದಾರೆ.ಮೂಲ ಪಂಜುರ್ಲಿ ಯಾವುದೆಂದು ಕೇಳಿದ್ದಾರೆ.ಅದಕ್ಕೆ ಉತ್ತರಿಸುವ ಯತ್ನ ಇಲ್ಲಿ ಮಾಡಿದ್ದೇನೆ.

 

ಪಂಜುರ್ಲಿ ಎಂಬುದು ಒಂದು ದೈವವಲ್ಲ.ಪಂಜುರ್ಲಿ ಹೆಸರಿನಲ್ಲಿ ಅನೇಕ ಶಕ್ತಿಗಳಿಗೆ ಆರಾಧನೆ ಇದೆ 

 

ಆಯಾಯ ಪ್ರದೇಶಕ್ಕೆ ಹೊಂದಿಕೊಂಡು ಅಣ್ಣಪ್ಪ ಪಂಜುರ್ಲಿ, ಮಲಾರ ಪಂಜುರ್ಲಿ, ಒರ್ತೆ  ಪಂಜುರ್ಲಿ, ವರ್ಣಾರ ಪಂಜುರ್ಲಿ, ಪೊಟ್ಟ  ಪಂಜುರ್ಲಿ ಇತ್ಯಾದಿ ಹೆಸರುಗಳನ್ನು ಪಡೆದು ಆರಾಧನೆ ಪಡೆಯುತ್ತದೆ

ಆದರೆ ಪಂಜುರ್ಲಿ ಎಂಬ ಒಂದು ಹೆಸರು ಇದ್ದ ಮಾತ್ರಕ್ಕೆ ಎಲ್ಲವೂ ಪಂಜುರ್ಲಿ ಆರಾಧನೆ ಎಂದು ಹೇಳಲು ಸಾಧ್ಯವಿಲ್ಲ .ಪಂಜುರ್ಲಿ ಎಂಬ ಹೆಸರು ಇದ್ದರೂ ಅದೇ ಹೆಸರಿನಲ್ಲಿ ಬೇರೆ ಬೇರೆ ದೈವಗಳಿಗೆ ಆರಾಧನೆ ನಡೆಯುತ್ತಿರುವುದು ಕಂಡು ಬರುತ್ತಿದೆ. ಉದಾಹರಣೆಗೆ ಹೇಳುದಾದರೆ ಅಣ್ಣಪ್ಪ   ಪಂಜುರ್ಲಿ ದೈವವಲ್ಲ ಪಂಜುರ್ಲಿ ಸೇರಿಗೆಗೆ ಸಂದ ಅಣ್ಣಪ್ಪ ಎಂಬಾತನೇ ಅಣ್ಣಪ್ಪ ದೈವವಾಗಿ ನೆಲೆ ನಿಂತಿದ್ದಾನೆ. ಸೇಮಿ ಕಲ್ಲ ಪಂಜುರ್ಲಿಕೂಡ ಪಂಜುರ್ಲಿ ದೈವವಲ್ಲ ಸಿರಿಯ ಶಾಪಕ್ಕೆ ಒಳಗಾಗಿ ದೈವತ್ವ ಪಡೆದಾತ ಸೇಮಿ ಕಲ್ಲ ಪಂಜುರ್ಲಿ ಎಂದು ಆರಾಧಿಸಲ್ಪಡುತ್ತಿರುವುದು ಕಂಡು ಬರುತ್ತಿದೆ. ಹೀಗೆ ಒಂದೇ ಪಂಜುರ್ಲಿ ಎಂಬಹೆಸರಿನಲ್ಲಿ ಅನೇಕ ದೈವಗಳು ಆರಾಧನೆ ಪಡೆಯುತ್ತಿವೆ.

 

ನೂರ ಮೂರು  ಪಂಜುರ್ಲಿ  ದೈವಗಳ ಹೆಸರುಗಳು ಸಿಕ್ಕಿವೆ. ಇವೆಲ್ಲ ಒಂದೇ ದೈವ ಪಂಜುರ್ಲಿಯ ಭಿನ್ನ ಭಿನ್ನ ಹೆಸರುಗಳಲ್ಲ. ಕೆಲವು ಪಂಜುರ್ಲಿಯ ಪ್ರಾದೇಶಿಕ ಹೆಸರುಗಳು. ಹಲವಾರು ಪಂಜುರ್ಲಿ ದೈವದ ಸೇರಿಗೆಗೆ ಸಂದ ದೈವಗಳು.ಅಣ್ಣಪ್ಪ ಪಂಜುರ್ಲಿ‌,ಉಂರ್ದರ ಪಂಜುರ್ಲಿ, ತೇಳಾರ ಪಂಜುರ್ಲಿ ,ಕುಪ್ಪೆಟ್ಟು ಪಂಜುರ್ಲಿ,ದೇವರ ಪೂಜಾರಿ ಪಂಜುರ್ಲಿ‌ ,ಶಗ್ರಿತ್ತಾಯ ಪಂಜುರ್ಲಿ ಮೊದಲಾದವು ಪಂಜುರ್ಲಿ ದೈವ ಹೆಸರುಗಳಲ್ಲ. ಇವು  ಕಾರಣಾಂತರಗಳಿಂದ ಪಂಜುರ್ಲಿ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುವ ದೈವಗಳು‌.

 

ಇಪ್ಪತ್ತು ಪಂಜುರ್ಲಿ ದೈವಗಳ ಮಾಹಿತಿ ನನ್ನ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥದಲ್ಲಿದೆ 103 ಪಂಜುರ್ಲಿ ದೈವಗಳ ಹೆಸರು ಸಿಕ್ಕಿದೆ 

 

ತುಳುನಾಡಿನ ಕೆಲವು ಭೂತಗಳು ಪ್ರಾಣಿ ಮೂಲ ವನ್ನು ಹೊಂದಿವೆ. ಜಗತ್ತಿನಾದ್ಯಂತ ಪ್ರಾಣಿಗಳ ಆರಾಧನೆ (totemic/ totemism/worship ) ಪ್ರಚಲಿತವಿದೆ. ಕ್ರೂರ ಪ್ರಾಣಿಗಳಿಂದ ಪ್ರಾಣ ರಕ್ಷಣೆಗಾಗಿ  ಹಾಗೂ  ಬೆಳೆ ರಕ್ಷಣೆಗಾಗಿ, ಪ್ರಾಣಿ ಆರಾಧನೆ ಪ್ರಾರಂಭವಾಗಿರಬಹುದು ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.

ಪಂಜುರ್ಲಿ ಭೂತ ಮೂಲತಃ ಪ್ರಾಣಿ ಮೂಲ ದೈವ .ಇದು ವಿಶ್ವದೆಲ್ಲೆಡೆ ಇರುವ ಟೊಟಾಮಿಕ್ ವರ್ಶಿಪ್ 

ತುಳುನಾಡಿನಹೆಚ್ಚಿನ ಭಾಗವನ್ನು ಪಶ್ಚಿಮ ಘಟ್ಟ ಆವರಿಸಿಕೊಂಡಿದೆ. ಆದ್ದರಿಂದ ಇಲ್ಲಿ ಸಹಜವಾಗಿಯೇ ಹಂದಿಗಳ ಕಾಟ ಹೆಚ್ಚು. ಬೆಳೆಯನ್ನು ಹಾಳು ಮಾಡುವ ಹಂದಿಗಳಿಂದ ರಕ್ಷಣೆ ಪಡೆಯುವ ಸಲುವಾಗಿ ಪಂಜುರ್ಲಿ (ಪಂಜಿ(ಹಂದಿ ) ಕುರ್ಲೆ (ಮರಿ ) ಆರಾಧನೆ ಪ್ರಾರಂಭವಾಗಿದೆ.

 

ತುಳುನಾಡಿನ ಭೂತಾರಾಧನೆ ಮೇಲೆ ಪುರಾಣಗಳು ಅಪಾರವಾದ ಪ್ರಭಾವವನ್ನು ಬೀರಿವೆ. ಆದ್ದರಿಂದ ಹೆಚ್ಚಿನ ದೈವ ಕಥಾನಕಗಳು ಪುರಾಣದ ಕಥೆಗಳೊಂದಿಗೆ ಪುರಾಣದ ದೇವರುಗಳೊಂದಿಗೆ ತಳಕು ಹಾಕಿಕೊಂಡಿದೆ. ಅಂತೆಯೇ ಪಂಜುರ್ಲಿ ಭೂತಕ್ಕೆ ಕೂಡ  ಪುರಾಣ ಮೂಲದ ಕಥಾನಕ ಸೇರಿಕೊಂಡಿದೆ 

 

ಕಾಂತಾರ ಪಂಜುರ್ಲಿ 

 

ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರದಲ್ಲಿ ಕಾಂತಾರೇಶ್ವರ ದೇವಾಲಯ ಇದೆ ಇಲ್ಲಿ ದೇವರ ಬಲ ಭಾಗದಲ್ಲಿ ನೆಲೆಯಾಗಿರುವ ಎರಡು ಪಂಜುರ್ಲಿ ದೈವಗಳಿಗೆ ಆರಾಧನೆ ಇದೆ ಹಾಗಾಗಿ ಎರಡು ಮೊಗಗಳು ಇವೆ 

ಕಾಂತಾರ ಪಂಜುರ್ಲಿ ಕುರಿತು ವಿಶಿಷ್ಟ ಕಥಾನಕ ಇದೆ.

ಕಾಂತಾರೊಡು ಕಾಂತಾವರ ದೇವೆರೆ

ಬಲಭಾಗೊಡು ಕಲ್ಲ ಪಂಜಿಯಾದ್ ಉದ್ಯಬೆಂದೆ
ದೇವೆರೆಗ್ ರಥ ಇಜ್ಜಿಂದ್ ತೆರಿದು
ಪುತ್ತಿಗೆ ಸೋಮನಾಥೇಶ್ವರ ದೇವೆರೆನಾಡೆ ಪೋದೆ
ಸೋಮನಾಥೇಶ್ವರ ದೇವೆರೆ ರಥನು ಕೊಣತ್ತೆ
ಕಾಂತಾವರೊಡು ಕಾಂತೇಶ್ವರ ದೇವೆರೆನ
ರಥೋತ್ಸವದ ಪೊರ್ಲುನು ತೂವೊಂಡೆ


ಕನ್ನಡ ಅನುವಾದ 
ಕಾಂತಾರದಲ್ಲಿ ಕಾಂತಾವರ ದೇವರ
ಬಲ ಭಾಗದಲ್ಲಿ ಕಲ್ಲ ಹಂದಿಯಾಗಿ ಉದಿಸಿದೆ
ದೇವರಿಗೆ ರಥ ಇಲ್ಲವೆಂದು ತಿಳಿದು
ಪುತ್ತಿಗೆ ಸೋಮನಾಥ ದೇವರಲ್ಲಿಗೆ ಹೋದೆ
ಸೋಮನಾಥ ದೇವರ ರಥವನ್ನು ತಂದು
ಕಾಂತಾವರದಲ್ಲಿ ಕಾಂತೇಶ್ವರ ದೇವರ
ರಥೋತ್ಸವದ ಚೆಲುವನ್ನು ನೋಡಿಕೊಂಡೆ ..

ಕಾರ್ಕಳ ತಾಲೂಕಿನ ಕಾಂತಾವರದ ಕಾಂತಾರೇಶ್ವರ ದೇವರ ಬಲಭಾಗದಲ್ಲಿ  ಮಾಯವಾಗಿ    ಕಲ್ಲ ಹಂದಿಯಾಗಿ ನಿಂತ  ಕಾಂತಾರ ಪಂಜುರ್ಲಿ ದೈವದ ಬಗ್ಗೆ ವಿಶಿಷ್ಟವಾದ ಐತಿಹ್ಯವಿದೆ.ಈ ಪಾಡ್ದನದ ಕಥೆಯನ್ನು ಶೇಖರ ಪರವರು ತಿಳಿಸಿದ್ದಾರೆ
ಕಾರ್ಕಳ ತಾಲೂಕಿನ ಕಾಂತಾವರವನ್ನು ಆಡುಮಾತಿನಲ್ಲಿ ಕಾಂತಾರ ಎನ್ನುತ್ತಾರೆ.ಕಾಂತಾರ ಎಂದರೆ ಕಾಡು ಎಂದರ್ಥ ಮೊದಲು ಈ ಪ್ರದೇಶ ಕಾಡು ಆಗಿತ್ತು .ಈಗಲೂ ಇದು ಹಳ್ಳಿಯಾಗಿ ಉಳಿದಿದೆ
ಇಲ್ಲಿಗೆ ಸಮೀಪದಲ್ಲಿ ಕೊಂಚಾಡಿ ಎಂಬಲ್ಲಿ ಪ್ರತಿವರ್ಷ ಪಂಜುರ್ಲಿ ದೈವದ ಕೋಲ ನಡೆಯುತ್ತದೆ .
ಒಂದು ವರ್ಷ ಕೋಲ ನೋಡಲು ಕುರಿ ಗುತ್ತಿನ ಹಿರಿಯರು ಹೋಗುತ್ತಾರೆ.ಕೋಲ ನೋಡಿ ಹಿಂತಿರುಗುವಾಗ ದೈವವು ಓರ್ವ ಬ್ರಾಹ್ಮಣ ಮಾಣಿಯ ರೂಪದಲ್ಲಿ ಹಿಂಬಾಲಿಸುತ್ತದೆ.ಮನೆ ಸಮೀಪಿಸಿದಾಗ ಕಾಣದಾಗುತ್ತದೆ.ನಂತರ ಕುರಿ ಗುತ್ತಿನ ಹಿರಿಯರ  ಕನಸಿನಲ್ಲಿ ಕಾಣಿಸಿಕೊಂಡು ತನ್ನನ್ನು ಆರಾಧಿಸಬೇಕೆಂದು ಹೇಳುತ್ತದೆ.
ಎಚ್ಚರಗೊಂಡ ನಂತರ ಅವರು ತನಗೆ ದೈವವನ್ನು ಪಾಲಿಸಲು ಸಾಧ್ಯವಿಲ್ಲ.ಹಾಗಾಗಿ ಕಾಂತಾವರ ದೇವರಲ್ಲಿ ಜಾಗ ಕೇಳು ಎಂದು ಅರಿಕೆ ಮಾಡುತ್ತಾರೆ.ದೈವವು ಕಾಂತಾವರ ದೇವರ ಬಲಿ ಹೋಗದಂತೆ ದಕ್ಷಿಣ ದಿಕ್ಕಿನಲ್ಲಿ ತಡೆಯುತ್ತದೆ

.ನಂತರ ದೇವಾಲಯದ ಒಳಬಾಗದಲ್ಲಿ ಒಂದು ಹಂದಿ ಮರಿಯಾಗಿ ಕಾಣಿಸಿಕೊಳ್ಳುತ್ತದೆ.ಈ ಹಂದಿಮರಿಯನ್ನು ಸಾಕಲು ಒಂದು ಮೊಯಿಲಿಗಳ ಕುಟುಂಬಕ್ಕೆ ನೀಡುತ್ತಾರೆ.ಅ ಹಂದಿಮರಿ ದಟ್ಟ ಪುಷ್ಟವಾಗಿ ಬೆಳೆಯುತ್ತದೆ.ಅಕ್ಕ ಪಕ್ಕದವರ ಗದ್ದೆಗೆ ಹೋಗಿ ಕದ್ದು ಬೆಳೆಯನ್ನು ತಿಂದು ಹಾಳು ಮಾಡುತ್ತದೆ.ಆಗ ಕೋಪಗೊಂಡ ಮೊಯಿಲಿಯವರ ಕುಟುಂಬದವರು ಆ ಹಂದಿಮರಿಯನ್ನು ಕೊಂದು ತಿನ್ನುತ್ತಾರೆ.ಆಗ ಕೋಪಗೊಂಡ ದೈವವು ಎಂಟು ಜನ ಮೊಯಿಲಿ ಕಟುಂಬದ ಸಹೋದರರನ್ನು ಕೊಲ್ಲುತ್ತದೆ
ನಂತರ ಊರವರೆಲ್ಲ ಸೇರಿ ಕಾಂತಾವರ ದೇವರ ಬಲಭಾಗದಲ್ಲಿ ಸ್ಥಾನ ಕಟ್ಟಿಸಿ ದೈವಕ್ಕೆ ಕೋಲ ಕೊಟ್ಟು ಆರಾಧಿಸಿ ಕೋಪವನ್ನು ತಣಿಸುತ್ತಾರೆ.
ಹಾಗೆ ಇಲ್ಲಿ ಹಂದಿಮರಿಯ ರೂಪದಲ್ಲಿ ಕಾಣಿಸಿಕೊಂಡ ದೈವ ಕಾಂತಾರ ಪಂಜುರ್ಲಿ ಎಂದು ಕರೆಸಿಕೊಳ್ಳುತ್ತದೆ.ತಾನು ಕಲ್ಲ ಪಂಜಿ/ ಹಂದಿಯಾಗಿ ಕಾಂತಾವರ ಬಲ ಭಾಗದಲ್ಲಿ ನಿಂತೆ ಎಂದು ದೈವ ನುಡಿಯುತ್ತದೆ.

 

ಇಲ್ಲಿ ಆರಾಧಿಸಲ್ಪಡುವ ದೈವ ಅಣ್ಣಪ್ಪ ಪಂಜುರ್ಲಿ ಎಂದು ಇಲ್ಲಿನ ತಂತ್ರಿಗಳಾದ ಕೃಷ್ಣ ಮೂರ್ತಿ ಭಟ್ ತಿಳಿಸಿದ್ದಾರೆ.ಇಲ್ಲಿನ ಚಿತ್ರವನ್ನವರು ಕಳುಹಿಸಿದ್ದು ಅದರಲ್ಲಿ ಎರಡು ಹಂದಿಯ ಮೊಗಗಳಿವೆ.
ಹಾಗಾಗಿ ಇಲ್ಲಿ ಎರಡು ಪಂಜುರ್ಲಿ ದೈವಗಳಿಗೆ ಆರಾಧನೆ ಆಗುತ್ತಿದ್ದು ಕಾಲಾಂತರದಲ್ಲಿ ಒಂದರಲ್ಲಿಯೇ ಎರಡೂ ಶಕ್ತಿಗಳು ಸಮನ್ವಯಗೊಂಡಿರುವುದು ತಿಳಿದು ಬರುತ್ತದೆ 


ಒಂದು ಅಣ್ಣಪ್ಪ ದೈವವಾದರೆ  ಇನ್ನೊಂದು ಯಾವುದೆಂಬ ಸಂದೇಹ ಉಂಟಾಗುತ್ತದೆ.ಇಲ್ಲಿ ನುಡಿಗಟ್ಟಿನಲ್ಲಿ ದೈವವು ತಾನು ಕಲ್ಲ ಪಂಜಿಯಾಗಿ ನಿಂತೆ ಎಂದಿದೆ.ಆದರೆ ಇಲ್ಲಿ ಕಲ್ಲಿನ ಮೂರ್ತಿ ಇಲ್ಲ.
ಬಹುಶಃ ಅಕ್ಕ ಪಕ್ಕದ ಗದ್ದೆಗೆ ಹೊಕ್ಕು ಹಾನಿ ಮಾಡುವ ಕಳ್ಳ ಹಂದಿಯ ರೂಪದಲ್ಲಿ ಕಾಣಿಸಿಕೊಂಡ ದೈವ 

.ಕಳುವೆ ಪಂಜಿ > ಕಳ್ಳ ಪಂಜಿ ಎಂಬುದೇ ಮೂಲ ಅರ್ಥ ಕಳೆದು ಹೋದಾಗ ಆಡು ಮಾತಿನಲ್ಲಿ    ಕಲ್ಲ ಪಂಜಿ ಎಂದಾಗಿದೆ 

  ಡಾ.ಲಕ್ಷ್ಮೀ ಜಿ ಪ್ರಸಾದ್,

ಆಧಾರ  ಕರಾವಳಿಯ ಸಾವಿರದೊಂದು ದೈವಗಳು ,

 

ಪಂಜುರ್ಲಿ ದೈವದ ಮೂಲಕ್ಕೆ ಸಂಬಂಧಿಸಿದ ಎಲ್ಲ ಕಥಾನಕಗಳಲ್ಲಿಮೂ ಬೇಟೆ ಮತ್ತು ಹಂದಿ ಮರಿ ಸಾಯುವ ಕಥೆ ಇದೆ ಸತ್ತ ನಂತರ ಉಪದ್ರ ಕಾಣಿಸುತ್ತದೆ ಹಾಗಾಗಿ ಅದು ದೈವಿಕ ಶಕ್ತಿ ಎಂದು ತಿಳಿದು ಆರಾಧನೆ ಮಾಡುತ್ತಾರೆ 

ಹಾಗಾಗಿ ಇದು ಮೂಲ ಃ ಟೊಟಾಮಿಕ್ ವರ್ಶಿಪ್ ಎಂದರೆ ಪ್ರಾಣಿ ಮೂಲ ಆರಾಧನೆ ಆಗಿದೆ 

ನಂತರ ಈ ದೈವದ ಸೆರಿಗೆಗೆ ಸಂದವರೂ ಪಂಜುರ್ಲಿ ಹೆಸರಿನೊಂದಿಗೆ ಆರಾಧನೆ ಪಡೆಯುಯ್ತಾರೆ.ಅಣ್ಣಪ್ಪ ಪಂಜುರ್ಲಿ,ದೇವರ ಪೂಜಾರಿ ಪಂಜುರ್ಲಿ ಉಂರ್ದರ ಪಂಜುರ್ಲಿ ಮೊದಲಾದ ದೈವಗಳು ಪಂಜುರ್ಲಿ ದೈವದ ಸೇರಿಗೆಗೆ ಸಂದು ಆರಾಧನೆ ಪಡೆಯುವ ಶಕ್ತಿ ಗಳಾಗಿದ್ದಾರೆ 

 

 

ಕಾಂತಾರ ಫ್ರೀಕ್ವೆಲ್ ನಲ್ಲಿ ಕಾಂತಾರ ಪಂಜುರ್ಲಿ ಯ ಉದ್ಭವದ ಕಥೆ ಹೇಳ್ತಾರಂತೆ ,ಈ ಪಂಜುರ್ಲಿಯ ಕಥೆ ಏನು ಎಂದು ನನ್ನಲ್ಲಿ ಅನೇಕರು ಕೇಳಿದ್ದಾರೆ 

ದೈವಗಳಿಗೆ ಸಂಬಂಧಿಸಿದಂತೆ ಅನೇಕ ಕಥಾನಕಗಳು ಐತಿಹ್ಯಗಳು ಪ್ರಚಲಿತವರುತ್ತದೆ ಹಾಗಾಗಿ ರಿಷಭ್ ಶೆಟ್ಟಿಯವರು ಯಾವ ಕಥೆ ತೋರಿಸುತ್ತಾರೆ ಎಂದು ಹೇಳಲಾಗದು.

ಪಂಜುರ್ಲಿ ದೈವದ ಕುರಿತಾಗಿ ಅನೇಕ ಕಥಾನಕಗಳು ಇವೆ ‌ಆ ಕಥಾನಕಗಳಲ್ಲಿ ಕಾಂತಾರ ಪಂಜುರ್ಲಿ ಎಂಬ ದೈವದ ಕಥೆಯೂ ಇದೆ ಒಂದೊಂದಾಗಿ ಬರೆದು ತಿಳಿಸುವೆ


 

 

 1 ಗಣಾಮಣಿ ಮಂಜುರ್ಲಿ 

ಕೈಲಾಸ ಪರ್ವತದಲ್ಲಿ ಈಶ್ವರದೇವರು ಬೇಟೆಗೆ ಹೊರಡುವಾಗ ಪಾರ್ವತಿ ದೇವಿಯೂ ಹೊರಡುತ್ತಾರೆ. ಗಂಡಸರು ಹೋಗುವಲ್ಲಿ ಹೆಂಗಸರು ಬರಬಾರದು ಎಂದು ಹೇಳಿದರೂ ಪಾರ್ವತಿ ದೇವಿ ಹಠಮಾಡುತ್ತಾಳೆ. ಆಗ ಈಶ್ವರದೇವರು “ನೀನು ನೋಡಿದ್ದನ್ನು ನೋಡಿದೆ ಎನ್ನಬಾರದು ಕೈ ತೋರಿ ಕೇಳಬಾರದು” ಎಂಬ ಶರತ್ತು ವಿಧಿಸಿ ಕರೆದೊಯ್ಯುತ್ತಾರೆ. ಕಾಡಿನಲ್ಲಿ ಗುಜ್ಜಾರ ಮತ್ತು ಕಾಳಿ ಎಂಬ ಎರಡು ಹಂದಿಗಳ ಐದು ಮರಿಗಳು ಈಶ್ವರನ ನಂದನ ಕೆರೆಯಲ್ಲಿ ಹೊರಳಾಡುತ್ತಿರುತ್ತವೆ. ಈಶ್ವರ ಗುಜ್ಜಾರನಿಗೆ ಬಾಣ ಬಿಡುತ್ತಾನೆ. ಕಾಳಿ ಓಡುತ್ತದೆ. ಆ ಐದು ಮರಿಗಳಲ್ಲಿ ಒಂದನ್ನು ಹಠ ಮಾಡಿ ಪಾರ್ವತಿ ಕೈಲಾಸಕ್ಕೆ ತೆಗೆದುಕೊಂಡು ಹೋಗಿ ಪ್ರೀತಿಯಿಂದ ಸಾಕುತ್ತಾರೆ. ಅದನ್ನು ಮಾಳಿಗೆಯಲ್ಲಿ ದುಂಡು ಸಂಕೋಲೆಯಲ್ಲಿ ಕಟ್ಟಿ ಹಾಕುತ್ತಾರೆ. ಕೈಲಾಸದಲ್ಲಿ ಒಂದು ಸಮಾರಾಧನೆಯ ದಿವಸ ಈ ಹಂದಿಮರಿ ಬಿಡಿಸಿಕೊಂಡು ಊಟದ ಎಲೆಗಳಿಗೆ ಬಾಯಿ ಹಾಕುತ್ತದೆ. ಈಶ್ವರ ದೇವರಿಗೆ ಸಿಟ್ಟು ಬಂದು ‘ನೀನು ಕೈಲಾಸದಲ್ಲಿರಬಾರದು. ಭೂಮಿಗಿಳಿದು ದೈವವಾಗಿರಬೇಕು’ ಎಂದು ವರ ಕೊಡುತ್ತಾರೆ. 

ಬ್ರಾಹ್ಮಣರೂಪದಲ್ಲಿ ಭೂಮಿಗಿಳಿದು, ಗಣಾಮಣಿಯಾಗಿ, ಘಟ್ಟ ಇಳಿದು ನೆಲ್ಯಾಡಿ ಬೀಡಿಗೆ ಬರುತ್ತಾನೆ.ಅಣ್ಣಪ್ಪ ಪಂಜ ರ್ಲಿ ಎಂಬ ಹೆಸರಿನಲ್ಲಿ ಆರಾಧಾನೆ ಪಡೆಯುತ್ತದೆ ಇದು ಪಂಜುರ್ಲಿಯ ಪುರಾಣ ಮೂಲ ಕಥೆ. 

 

ಇದೇ ಕಥೆ ಯ ಇನ್ನೊಂದು ಪಾಠ ಹೀಗಿದೆ 

ಪಾರ್ವತಿ ದೇವಿಯು ಕಾಡಿನಿಂದ ತಂದು ಸಾಕಿದ ಹಂದಿ ಗುಜ್ಜಾರ ಬಹಳ ಬಲಿಷ್ಠ ವಾಗಿ ಬೆಳೆಯುತ್ತದೆ.ಕಟ್ಟಿ ಹಾಕಿದ ಸಂಕೋಲೆ ಕಡಿದುಕೊಂಡು ಊರವರ ತೋಟಕ್ಕೆ ನುಗ್ಗಿ ಬೆಳೆ ಹಾಳು ಮಾಡುತ್ತದೆ.ಆಗ ಊರವರು ಬಂದು ದೂರು ಹೇಳುತ್ತಾರೆ ಆಗ ಈಶ್ವರ ದೇವರು ಈ ಹಂದಿ ಮರಿಯನ್ನು ಬೇಟೆ ಆಡಲು ಹೋಗುತ್ತಾರೆ.ಎಷ್ಟೇ ಯತ್ನ ಮಾಡಿದರೂ ಅದು ಸಿಗುವುದಿಲ್ಲ.ಕೊನೆಗೆ ತಾನಾಗಿ ಬಂದು ಈಶ್ವರ ಧಳದೇವರ ಪಾದಕ್ಕೆ ಶರಣಾಗುತ್ತದೆ ಆಗ ಈಶ್ವರ ದೇವರು ಅದರ ಮೇಲೆ ಬಾಣ ಬಿಡುತ್ತಾರೆ 

ಆಗ ಅದು ನೋವಿನಿಂದ ಅತ್ತುಕೊಂಡುಪಾರ್ವತಿ ದೇವಿಯ ಬಳಿ ಬಂದು ಪ್ರಾಣ ಬಿಡುತ್ತದೆ.ಆಗ ಪಾರ್ವತಿ ದೇವಿ ದುಃಖ ಪಡುತ್ತಾರೆ ಆಗ ಈಶ್ವರ ದೇವರು ಆ ಹಂದಿ ಮರಿಗೆ ಜೀವ ಕಲೆ ಕೊಟ್ಟು ಗಣಾಮಣಿ ಯಾಗಿ ಭೂಲೋಕಕ್ಕೆ ಹೋಗಿ ಧರ್ಮ ರಕ್ಷಣೆ ಮಾಡು ಎಂದು ಹೇಳುತ್ತಾನೆಹಾಗೆ ಆ ಹಂದಿ ಮರಿ ಪಂಜುರ್ಲಿ ದೈವವಾಗಿ ಘಟ್ಟ ಇಳಿದು ತುಳುನಾಡಿಗೆ ಬಂದು  ದುಷ್ಟರನ್ನು ಶಿಕ್ಷಿಸಿ ಶಿಷ್ಟರ ರಕ್ಷಣೆ ಮಾಡಿ ಆರಾಧನೆಯನ್ನು ಪಡೆಯುತ್ತದೆ

 

ಅಣ್ಣಪ್ಪ ಪಂಜುರ್ಲಿ 
                                                    
              ತುಳು ನಾಡಿನಲ್ಲಿ ಅಣ್ಣಪ್ಪ ಬಹಳ ಪ್ರಸಿದ್ಧವಾದ ದೈವತ .ಅಣ್ಣಪ್ಪ ದೈವದ ಕುರಿತಾದ ಪಾಡ್ದನಗಳು ಲಭ್ಯವಿವೆ ಆದ್ರೆ ಅವುಗಳ ಸಮರ್ಪಕ ಅಧ್ಯಯನ ಇನ್ನೂ ಆಗಿಲ್ಲ .ಪಾಡ್ದನದ ಕಥಾನಕ ಹೀಗಿದೆ .
ದೇವಪುರದಲ್ಲಿ ದೇವ ಚಂದ್ರ ಬಾಳಿದ ಕಾಲದಲ್ಲಿ ಮೂಡನಕ್ಕೆಸೂರ್ಯನಾರಾಯಣ ದೇವರು ,ಪಡುವಣಕ್ಕೆ ಚಂದ್ರ ನಾಲ್ಕು ದಿಕ್ಕಿನಲಿ ನಾರಾಯಣ ದೇವರು ಮೂರೂ ಲೋಕದಲ್ಲಿ ಈಶ್ವರ ದೇವರು ಉದಿಸಿದ ಕಾಲದಲ್ಲಿ ನಾಲ್ಕು ಮಠ ಉಂಟಾಯಿತು .ನಾಲ್ಕು ಮಠಕ್ಕೆ ಒಬ್ಬ ಜೋಗಿ ಭಿಕ್ಷೆ ಬೇಡಿಕೊಂಡು ಇದ್ದನು .ನಾಲ್ಕು ಮಠಕ್ಕೆ ಮೀರಿದ ಸತ್ಯದರ್ಮ ಎಲ್ಲಿದೆ ಎಂದು ನೋಡಲು ನಾಲ್ಕು ಮಠ ಬಿಟ್ಟು ಮೂಡಣ ಕುಡುಮಕ್ಕೆ ಬರುತ್ತಾನೆ .ಅಲ್ಲಿ ಹಿಂದಿನ ನೆಲ್ಯಾಡಿ ಬೀಡು ಇತ್ತು ಅಲ್ಲಿ ಬಿರ್ಮಣ ಬಲ್ಲಾಳ ಅಮ್ಮು ಬಲ್ಲಾಳ್ತಿ ಇದ್ದರು .ಹನ್ನೆರಡು ವರ್ಷದ ಆಪತ್ತಿನಲ್ಲಿ ನಡೆಯಲು ನಿಲ್ಲಲೂ ಆಗದು ಬಿರ್ಮಣ ಬಲ್ಲಾಳರಿಗೆ .ಆಗ ತುಳಸಿ ಮಂಟಪದಲ್ಲಿ ನಿಂತ ಜೋಗಿ ಜಗನಂದ ಪುರುಷನು ಅಯ್ಯಾ ಅಮ್ಮು ಬಲ್ಲಾಳ್ತಿ ನನಗೆ ದಾನ ಕೊಡಿರಿ ಎಂದು ಕರೆದು ಹೇಳುತ್ತಾನೆ .
ಆಗ ಬಿರ್ಮಣ ಬಲ್ಲಾಳರಿಗೆ ಎದ್ದು ನಿಲ್ಲಲಾಗುವುದಿಲ್ಲ ಏನು ದಾನ ಕೊಡಲಿ ಎಂದು ಅಮ್ಮು ಬಲ್ಲಾಳ್ತಿ ಹೇಳಲು ನನಗೆ ದಾನ ಕೊಡಿ ಆಗ ನಿಮ್ಮ ಕಷ್ಟ ಕಳೆಯುತ್ತದೆ ಎಂದು ಹೇಳುತ್ತಾನೆ .ಅಂತೆ ಅವಳು ಅವನಿಗೆ ದಾನ ಕೊಡುತ್ತಾಳೆ.ಬಿರ್ಮಣ ಬಲ್ಲಾಳರ ಆಪತ್ತು ದೂರವಾಗಿ ಎದ್ದು ಬಂದು ಯಾರಯ್ಯ  ನೀನು? ಎಂದು ಕೇಳಲು “ಇದೊಂದು ಬೀಡಿನಲ್ಲಿ ದಾನ ಧರ್ಮ ನಡೆಯಬೇಕು ,ನಿಮ್ಮ ಧರ್ಮಕ್ಕೆ ನಾನು ಇಲ್ಲಿ ನಿಲ್ಲುವೆ ಎಂದು ಜೋಗಿ ಜಗನಂದ ಪುರುಷ ಹೇಳುತ್ತಾನೆ .

ಹೀಗೆ ಅಲ್ಲಿ ದಾನ ಧರ್ಮ ನಡೆಯುತ್ತಿರುವಾಗ ನಡು ಮಧ್ಯಾಹ್ನದ ಹೊತ್ತಿಗೆ  ಕಾಶಿ ಕದ್ರಿ ಮಠದಿಂದ ನಾಲ್ಕು ಒಕ್ಕಲು ಇಬ್ಬರು ಭಟ್ಟರು ಬರುತ್ತಾರೆ .ಇದೊಂದು ಬೀಡಿನಲ್ಲಿ ದಾನ ಧರ್ಮ ನಮ್ಮ ಅತಿಥ್ಯ ಸ್ವೀಕರಿಸಬೇಕು ಎಂದು ಹೇಳುವಾಗ ಮಧ್ಯಾಹ್ನ ದೇವರಿಗೆ ಪೂಜೆ ಆಗದೆ ನಾವು ಊಟ ಮಾಡಲಾರೆವು ,ದೇವರ ಶಿವ ಲಿಂಗ ಇಲ್ಲದೆ ನಾವು ಊಟ ಮಾಡೆವು ಎಂದು ಹೇಳುತ್ತಾರೆ .
ಅಯ್ಯಯೋ ದೋಷವೇ ಅಯ್ಯಯ್ಯೋ ಪಾಪವೇ ನಾನು ದೇವರನ್ನು ಎಲ್ಲಿಂದ ತರುವುದು ಎಂದು ದುಃಖಿಸಲು ಜೋಗಿ ಜಗನಂದ ಪುರುಷನು ನೀವು ಕೈಗೆ ನೀರು ಕೊಡಿರಿ ,ಎಲೆ ಹಾಕಿರಿ ಅಷ್ಟರಲ್ಲಿ ನಾನು ದೇವರನ್ನು ತರುವೆ ಎಂದು ಗಿಡುಗನ ರೂಪ ತಾಳಿ ಕದ್ರಿಗೆ ಬರುತ್ತಾನೆ .
ಅಲ್ಲಿ ಕದ್ರಿ ಮಂಜುನಾಥನಲ್ಲಿ ನಾನಿರುವ ಕುಡುಮಕ್ಕೆ ಬರಬೇಕು ಎಂದು ಕೇಳಿದಾಗ ಆತ ಬರುವುದಿಲ್ಲ ಎನ್ನುತಾನೆ .ಆಗ ಕೋಪ ಗೊಂಡ ಜೋಗಿ ಪುರುಷ ದೇವರ ಅರ್ಧ ಭಾಗ ಶಿವಲಿಂಗದಲ್ಲಿ ಹಿಡಿದು “ಅಯ್ಯಾ ಸ್ವಾಮಿ ಕೇಳಿರಿ ಅರ್ಧ ಜೀವ ಕದ್ರಿಯಲ್ಲಿ ಉಳಿದರ್ಧ ಮೂಡಣ ಕುಡುಮಕ್ಕೆ ಬರಬೇಕು ಎಂದು ಹೇಳಿ ದೇವರನ್ನು ತೆಗೆದುಕೊಂಡು ಕುಡುಮಕ್ಕೆ ತರುತ್ತಾನೆ ,ಇಲ್ಲಿ ದೇವರು ನಾನು ಬರಲಾರೆ ಆದ್ರೆ ನನ್ನ ಒಂದು ನಕ್ಷತ್ರ ಲಿಂಗ ಏಳನೆಯ ಕೆರೆಯಲ್ಲಿದೆ ಅಲ್ಲಿಂದ ತೆಗೆದುಕೊಂಡು ಆಣತಿ ಇಡುತ್ತಾನೆ ಅಲ್ಲಿಂದ ಮುಳುಗು ಹಾಕಿ ತೆಗದುಕೊಂಡು ಕುಡುಮಕ್ಕೆ ಹೋಗುತ್ತಾನೆ ಎಂಬ ಪಾಟಾಂತರ ಇದೆ
ಮುಂದೆ ಆತ ಅಣ್ಣಪ್ಪ ದೈವವಾಗಿ ಧರ್ಮವನ್ನು ನೆಲೆ ಗೊಳಿಸುತ್ತಾನೆ .
ಹೆಚ್ಚಾಗಿ ಅಣ್ಣಪ್ಪ ಪಂಜುರ್ಲಿಯೊಂದಿಗೆ ಸಮನ್ವಯ ಗೊಂಡು ಆರಾಧಿಸಲ್ಪಡುತ್ತಾನೆ.
ಅಲೌಕಿಕ ನೆಲೆಯನ್ನು ಹೊರತು ಪಡಿಸಿದರೆ ಅಣ್ಣಪ್ಪ ಯಾರು ?ಎಂಬ ಪ್ರಶ್ನೆಗೆ ಇದಮಿತ್ಥಂ ಎಂಬ ಉತ್ತರ ಸಿಗುವುದಿಲ್ಲ .
ಅನಾರೋಗ್ಯದಿಂದ ಆಶಕ್ತರಾಗಿದ್ದ ಬಲ್ಲಾಳರಲ್ಲಿ ನೆಲೆ ಪಡೆದ ಜೋಗಿ ಪುರುಷ ನಂತರ ಅವರಿಗೆ ಎಲ್ಲ ಕಾರ್ಯಗಳಲ್ಲಿಯೂ ಬಲ ಗೈ ಬಂಟನಂತೆ ಸಹಾಯಕನಾಗಿರ ಬಹುದು.ತ ಮ್ಮ ನೆಚ್ಚಿನ ಸಹಾಯಕ ನಾಥ ಸಂಪ್ರದಾಯದ ಅನುಯಾಯಿಯಾಗಿರುಅವ ಅಣ್ಣಪ್ಪನಿಗಾಗಿಯೇ ಆತನ ಇಷ್ಟ ದೈವ ಕದಿರೆಯಮಂಜುನಾಥನನ್ನು ಇಲ್ಲೂ ಪ್ರತಿಷ್ಟಾಪಿಸಿರ ಬಹುದು .
ಕನ್ನಡ ಯಾನೆ ಪುರುಷ ಭೂತ ಪಾದ್ದನದಲ್ಲಿ ಇಬ್ಬರು ಜೋಗಿ ಪುರುಷರು (ಜೋಗಿ ಜಗನಂದ ಪುರುಷರು )ಕಲ್ಲೆಂಬಿ ಪೆರ್ಗಡೆ ಬೀದಿಗೆ ಹೋಗಿ ಕಾರಣಿಕ ತೋರುವ ವಿಚಾರ ಇದೆ .ಇವರಿಬ್ಬರು ಉಲ್ಲಾಕುಳುಗಳ ಪ್ರಧಾನಿ ಎಂಬಂತೆ ಆರಧಿಸಲ್ಪಡುತ್ತಾರೆ.
ನೆಲ್ಯಾಡಿ ಜೈನ ಬೀಡು .ಅವರಲ್ಲಿ ಶಿವನನ್ನು ಆರಾಧಿಸುವ ಸುವ ಸಂಪ್ರದಾಯವಿಲ್ಲ .ಹಾಗಿದ್ದರೂ ಅಲ್ಲಿ ಪ್ರಸಿದ್ಧವಾದ ಶಿವನ /ಮಂಜುನಾಥನ ದೇವಾಲಯವಿದೆ .ಇದನ್ನು ಕಟ್ಟಿಸಿದವರಾರು?ಅಥವ ಅದಕ್ಕೆ ಪ್ರೇರಣೆ ಯಾರು ?ಎಂದು ಯೋಚಿಸಿದಾಗ “ಜೋಗಿಗಳು ಶೈವ ಮತಾವಲಂಭಿಗಳು ,ಪಾದ್ದನದಲಿ ಕೂಡ ಜೋಗಿ ಪುರುಷ ತಂದದ್ದೆಂದು ಇದೆಯಾದ್ದರಿಂದ ಆ ಜೋಗಿ ಪುರುಷಣೆ ಇದಕ್ಕೆ ಕಾರಣ ಕರ್ತ  ಅಥವಾ ಪ್ರೇರಕ ಆಗಿರಬಹುದು.ಮಂಜು ನಾಥ ಎಂಬ ಹೆಸರು ಕೂಡಾ ನಾಥ ಸಂಪ್ರದಾಯದ ಮತ್ಸ್ಯೆಂದ್ರ ನಾಥನನನ್ನು ದ್ಯೋತಿಸುತ್ತದೆ ಎಂದು ಕದವ ಶಂಭು ಶರ್ಮ ,ಡಾ.ಎಸ್ ನಾಗರಾಜು ಮೊದಲಾದ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ .ದೇವಸ್ಥಾನವನ್ನು ಕಟ್ಟಿಸಿದ ಮಹತ್ಕಾರ್ಯ ಮಾಡಿದವರು ದೈವತ್ವವನ್ನು ಪಡೆದು ಆರಾಧಿಸಲ್ಪಡುವುದು ತುಳು ಸಂಸ್ಕೃತಿಯಲ್ಲಿ ಅಲ್ಲಲ್ಲಿ ಕಂಡು ಬರುವ ವಿಚಾರ /ಕಾರಿಂಜೆತ್ತಾಯ,ಚೆನ್ನಿಗರಾಯ ,ಅಚ್ಚು ಬಂಗೇತಿ,ಅಡ್ಕತ್ತಾಯ ಮೊದಲಾದವರು ದೇವಾಲಯ ಕಟ್ಟಿಸಿದ ಕಾರಣದಿಂದಲೇ ದೈವಾನುಗ್ರಹ ಪಡೆದು ದೈವಿಕತೆಯನ್ನು ಪಡೆದು ಆರಾಧಿಸಲ್ಪಡುತ್ತಿದ್ದಾರೆ.
ಅದೇ ರೀತಿ ಜೋಗಿ ಪುರಷ ಕೂಡ  ಅಣ್ಣಪ್ಪ ಎಂಬ ಹೆಸರಿನಲ್ಲಿ ದೈವತ್ವವನ್ನು ಪಡೆದಿರಬಹುದು.ಇದಲ್ಲದೆ ಅಣ್ಣಪ್ಪ ಮೂಲತಃ ಒಬ್ಬ ಸ್ಥಾನಿಕ ಬ್ರಾಹ್ಮಣ ಎಂಬ ಐತಿಹ್ಯ ಕೂಡ ಇದೆ.ಬಲ್ಲಾಳರಿಗೆ ಬಲ ಗೈಯಂತೆ/ ಮನೆಮಗನಂತೆ ಇದ್ದ  ಕೃಷ್ಣ ಭಟ್ಟ ಎಂಬಾತನನ್ನು ಹೊಟ್ಟೆಕಿಚ್ಚಿನಿಂದ ಯಾರೋ  ಅವಲಕ್ಕಿಯೊಂದಿಗೆ ಪೀಲೆಯನ್ನು ಬೆರೆಸಿ ನೀಡಿದರು .ದುರಂತವನ್ನಪ್ಪಿದ .ಆತನಿಗೆ ಕೂಡ ಅಣ್ಣಪ್ಪ ದೈವದೊಂದಿಗೆ ಆರಾಧನೆ ಇದೆ ಎಂಬ ಐತಿಹ್ಯ ಇರುವ ಬಗ್ಗೆ ಹಿರಿಯರಾದ ಶ್ರೀ ಆನಂದ ಕಾರಂತ ,ಶ್ರೀ ಪರಮೇಶ್ವರ ಭಟ್ ಮೊದಲಾದವರು ತಿಳಿಸಿದ್ದಾರೆ ..ಆತನೇ ಅಣ್ಣಪ್ಪ ದೈವವೇ ಅಥವಾ ಆತ ಅಣ್ಣಪ್ಪ ದೈವದ ಸನ್ನಿಧಿಗೆ ಸೇರಿರುವ ದೈವತವೆ ಎಂಬ ಬಗ್ಗೆ ಮಾಹಿತಿ ಇಲ್ಲ
ಧರ್ಮಸ್ಥಳದಲ್ಲಿ ಅಣ್ಣಪ್ಪ ಬೆಟ್ಟಕ್ಕೆ ಸ್ತ್ರೀಯರಿಗೆ ಪ್ರವೇಶವಿಲ್ಲ .ಬಹುಶ ಇದರ ಅನುಸರಣೆಯೋ ಏನೋ ?ಕೆಲವೆಡೆ ಅಣ್ಣಪ್ಪ ದೈವದ ನೇಮಕ್ಕೆ ಸ್ತ್ರೀಯರಿಗೆ ನಿಷೇಧ ಇದೆ ಆದರೆ ಕೆಲವೆಡೆ ಗಳಲ್ಲಿ ಅಣ್ಣಪ್ಪ ದೈವದ ಕೋಲ ಆಗುವಾಗ ಸ್ತ್ರೀಯರಿಗೆ ಪ್ರವೇಶ ಇದೆ .
ಜಾನಪದ ಕಥಾನಕಗಳು ಮೌಖಿಕ ಸಂಪ್ರದಾಯದಲ್ಲಿ ತಲೆಮಾರಿನಿಂದ ತಲೆಮಾರಿಗೆ ಹರಿದು ಬರುವಾಗ ಅನೇಕ ಪಾಠ ಭೇದ ಗಳು  ಉಂಟಾಗುತ್ತವೆ ,ಅದರಲ್ಲಿನ ಮೂಲ ಆಶಯ ವನ್ನು ಗುರುತಿಸಿ ಅಧ್ಯಯನ ಮಾಡಬೇಕಾಗಿದೆ .
ಆಧಾರ ಗ್ರಂಥಗಳು
1.ಡಾ,ಅಮೃತ ಸೋಮೇಶ್ವರ .ತುಳುಜಾನಪದ ಕೆಲವು ನೋಟಗಳು ,
                              ಮತ್ತು ತುಳು ಪಾಡ್ದನ ಸಂಪುಟ
2 ಡಾ..ವಿವೇಕ ರೈ,ತುಳುಜನಪದ ಸಾಹಿತ್ಯ (ಪಿಎಚ್,ಡಿ ಮಹಾ ಪ್ರಬಂಧ ).
                               ಮತ್ತು ಪುಟ್ಟು ಬಳಕೆಯ ಪಾಡ್ದನಗಳು
3 ಡಾ.ಚಿನ್ನಪ್ಪ ಗೌಡ ,ಭೂತಾರಾಧನೆ –ಒಂದು ಜಾನಪದೀಯ ಅಧ್ಯಯನ
4 ಡಾ.ಗಣೇಶ ಅಮೀನ್ ಸಂಕಮಾರ್ ,ನುಡಿಸಿಂಗಾರ
5 ಕಡವ ಶಂಭು ಶರ್ಮ  ನಾಥ ಸಂಪ್ರದಾಯ
5ಮೌಖಿಕ ಮಾಹಿತಿಗಳು ನೀಡಿದವರು 1 ಪರಮೇಶ್ವರ ಭಟ್ (ಸು 70 ವರ್ಷ ),ಕೆಯ್ಯೂರು2  ಶ್ರೀ ಆನಂದ ಕಾರಂತ (ಸು 75 ವರ್ಷ ) ಕೋಳ್ಯೂರು

ಈ ಬಗ್ಗೆ ಹೆಚ್ಚಿನ ಮಾಹಿತಿ ಇದ್ದವರು ತಿಳಿಸಬೇಕಾಗಿ ವಿನಂತಿ

ಒರಿ ಮರ್ಲ ಪಂಜುರ್ಲಿ 
ಧರ್ಮಸ್ಥಳದಲ್ಲಿ ಅಣ್ಣಪ್ಪ ದೈವದ ಪರಿವಾರ ದೈವ ಉರಿಮರ್ಲ. ಈ ದೈವವನ್ನು ಒರಿಮರ್ಲೆ (ಒಬ್ಬ ಮರುಳ) ಎಂದು ಕೂಡ ಕರೆಯುತ್ತಾರೆ.ನ್ಯಾಯಾನ್ಯಾಯದ ಪ್ರಶ್ನೆಯನ್ನು ಪರಿಹರಿಸಲು ಸಾಧ್ಯವಾಗದೆ ಇದ್ದಾಗ ಜನರು ದೇವರ ಮೊರೆ ಹೋಗುತ್ತಾರೆ .ಅನ್ಯಾಯಕ್ಕೊಳಗಾದವರು "ನ್ಯಾಯಾನ್ಯಾಯವನ್ನು ದೇವರು ನೋಡಿಕೊಳ್ಳಲಿ" ಎಂದು ಹರಿಕೆ ಹೇಳಿಕೊಳ್ಳುತ್ತಾರೆ  
 ಧರ್ಮಸ್ಥಳ ಮಂಜುನಾಥ ದೇವರಿಗೆ ಆಣೆ ಹಾಕುವುದು ಎಂಬ ಪದ್ಧತಿ ಪ್ರಚಲಿತ ಇದೆ .ಮಂಜುನಾಥ ಒಂದು ಆಣೆಯನ್ನು ಕೂಡಾ ಬಿಡಲಾರ ಎಂಬ ನಂಬಿಕೆ ಜನರಿಗಿದೆ.
ಧರ್ಮಸ್ಥಳದ ಮಂಜುನಾಥ ದೇವರ ಮೇಲೆ ಆಣೆ ಇಟ್ಟು ತಪ್ಪಿ ನಡೆದು, ವಾಕ್ ದೋಷಕ್ಕೆ ಒಳಗಾದವರಿಗೆ ಹುಚ್ಚು ಹಿಡಿಸಿ ಧರ್ಮಸ್ಥಳಕ್ಕೆ ಕರೆತರುವ ಕಾರ್ಯವನ್ನು ಉರಿಮರ್ಲ ದೈವ ಮಾಡುತ್ತದೆ. ಈ ದೈವಕ್ಕೆ ಎರಡು ಬೆಳ್ಳಿಯ ಕಣ್ಣು ಹಾಗೂ ಮೂಗು ಇರುವ ವಿಶಿಷ್ಟ ಮುಖವಾಡವಿದೆ. ಈ ದೈವವನ್ನು ಸ್ತ್ರೀರೂಪಿ ಎಂದು ಭಾವಿಸಲಾಗಿದೆ. ಈ ದೈವದ ಪಾಡ್ದನ, ಐತಿಹ್ಯಗಳು ಲಭ್ಯವಾಗಿಲ್ಲ.
ಆದರೆ ಒರಿ ಮರ್ಲ ಎಂದರೆ ಒಬ್ಬ ಹುಚ್ಚ ಎಂಬ ಅರ್ಥವನ್ನು ನೋಡುವಾಗ ವಾಸ್ತವದಲ್ಲಿ ಒಬ್ಬ ಮಾನಸಿಕ ಅಸ್ವಸ್ಥ (ಮರ್ಲ ?!) ಕಾರಣಾಂತರಗಳಿಂದ ದುಂತವನ್ನಪ್ಪಿ ದೈವತ್ವವನ್ನು ಪಡೆದು ಪಂಜುರ್ಲಿ ದೈವದ ಸೇರಿಗೆಗೆ ಸಂದು ಆರಧಿಸಲ್ಪತ್ತಿರುವ ಸಾಧ್ಯತೆ ಇದೆ ಎಂದು ತೋರುತ್ತದೆ .ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗದ ಕರಣ ಏನೊಂದೂ ಹೇಳುವುದು ಕಷ್ಟಕರ .ಈ ಬಗ್ಗೆ ಅಧ್ಯಯನ ನಡೆಯಬೇಕಾದ ಅಗತ್ಯವಿದೆ .

ಸೇಮಿ ಕಲ್ಲ ಪಂಜುರ್ಲಿ 

 


 

                                                ಚಿತ್ರ ಕೃಪೆ :ಧರ್ಮ ದೈವ


ಹೆಸರಿನಲ್ಲಿ ಪಂಜುರ್ಲಿ ಎಂದು ಇದ್ದರೂ ಕ್ಷೇಮಕಲ್ಲ /ಸೇಮಿ ಕಲ್ಲ ಪಂಜುರ್ಲಿ, ಪಂಜುರ್ಲಿ ದೈವವಲ್ಲ .ಪಂಜುರ್ಲಿಯ ಸೇರಿಗೆ ದೈವ ಕೂಡ ಅಲ್ಲ
ಪ್ರಧಾನ ದೈವದ ಸೇರಿಗೆಯಾಗಿ ಅನೇಕ ದೈವಗಳಿಗೆ ಆರಾಧನೆ ಇರುತ್ತದೆ .ಸಾಮಾನ್ಯವಾಗಿ ಸೇರಿಗೆ ದೈವಗಳು ಪ್ರಧಾನ ದೈವದ ಆಗ್ರಹ ಅಥವಾ ಅನುಗ್ರಹ ಪಡೆದು ದೈವತ್ವ ಪಡೆದ ಶಕ್ತಿಗಳಾಗಿರುತ್ತವೆ
ಹೀಗೆ ಸತ್ಯನಾಪುರದ ಸಿರಿಯ ಆಗ್ರಹಕ್ಕೆ ತುತ್ತಾಗೆ ದೈವತ್ವ ಪಡೆದ ದೈವ ಕ್ಷೇಮಿಕಲ್ಲ ಪಂಜುರ್ಲಿ .ಸತ್ಯನಾಪುರದ ರಾಜ ಬೆರ್ಮ ಆಳ್ವನಿಗೆ ಹುಟ್ಟಿದ ಮಗು ಸಾಯುತ್ತದೆ. ಹೆಂಡತಿಯೂ ಸಾಯುತ್ತಾಳೆ. ಬೇರೆ ಸಂತಾನವಿಲ್ಲದ ವೃದ್ಧ ಅರಸ ಬೆರ್ಮ ಆಳ್ವನಿಗೆ ‘ಮುಂದೆ ತನ್ನ ರಾಜ್ಯಕ್ಕೆ ದಿಕ್ಕಿಲ್ಲ’ ಎಂದು ಚಿಂತೆಯಾಗಿ ದುಃಖಿಸುತ್ತಾನೆ. ಅವನ ಕಣ್ಣೀರು ಅವನ ಕುಲದೈವ ಲಂಕೆಲೋಕನಾಡಿನ ಬೆರ್ಮರ ಪಾದಕ್ಕೆ ಸಂಪಿಗೆ ಹೂವಿನ ರಾಶಿಯಾಗಿ ಬೀಳುತ್ತದೆ.

ಆಗ ಬೆರ್ಮೆರ್ ಬಡಬ್ರಾಹ್ಮಣನ ರೂಪ ಧರಿಸಿ, ಬೆರ್ಮ ಆಳ್ವನಲ್ಲಿಗೆ ಬಂದು ‘ಲಂಕೆಲೋಕನಾಡಿನ ಆದಿ ಆಲಡೆ, ಕಾಡು-ಪೊದೆ ಬಳ್ಳಿಯಿಂದ ಸುತ್ತುವರಿದು ಪಾಳು ಬಿದ್ದಿದೆ. ಅದರ ಜೀರ್ಣೋದ್ಧಾರ ಮಾಡಿದರೆ ನಿನ್ನ ಸಮಸ್ಯೆ ಸರಿಹೋಗುತ್ತದೆ’ ಎಂದು ಹೇಳುತ್ತಾನೆ. ಅಂತೆಯೇ ಬೆರ್ಮ ಆಳ್ವ ಹೋಗಿ ಲಂಕೆಲೋಕನಾಡಿನ ‘ಬೆರ್ಮೆರ’ ಪ್ರಾರ್ಥನೆಯನ್ನು ಮಾಡಿ ಕಾಡಿನಲ್ಲಿರುವ ಬೆರ್ಮೆರನ್ನು ತಂದು ಏಳದೆ ಗುಂಡ ಗುಡಿ ಕಟ್ಟಿಸುತ್ತೇನೆ ಎಂದು ಹರಿಕೆ ಹೇಳುತ್ತಾನೆ. ಆಗ ಪ್ರಸಾದರೂಪದಲ್ಲಿ ಸಿಕ್ಕ ಹಿಂಗಾರದ ಹಾಳೆಯ ಮೇಲಿನ ಗಂಧದ ಗುಳಿಗೆ ಹೆಣ್ಣುಮಗುವಾಗುತ್ತದೆ.
ಆ ಮಗುವನ್ನು ದೇವರ ವರವೆಂದು ಭಾವಿಸಿ ಬೆರ್ಮ ಆಳ್ವ ಆ ಮಗುವಿಗೆ ‘ಬಾಲೆಕ್ಕೆ ಸಿರಿ’ ಎಂದು ಹೆಸರಿಟ್ಟು ಸಾಕುತ್ತಾನೆ. ಮುಂದೆ ಬಸ್ರೂರು ಬತ್ತಕೇರಿ ಅರಮನೆಯ ಕಾಂತುಪೂಂಜರ ಜೊತೆ ಅವಳ ಮದುವೆಯಾಗುತ್ತದೆ. ಮುಂದೆ ಕಾಂತುಪೂಂಜ ಸೂಳೆ ಸಿದ್ದುವಿನ ಸಹವಾಸ ಮಾಡುತ್ತಾನೆ. ಸಿರಿ ಗರ್ಭಿಣಿಯಾಗುತ್ತಾಳೆ. ಅವಳ ಸೀಮಂತಕ್ಕೆ, ತೆಗೆದ ಸೀರೆಯನ್ನು ಸೂಳೆ ಸಿದ್ದು ಉಟ್ಟು ನೆರಿಗೆ ಹಾಳು ಮಾಡುತ್ತಾಳೆ. ಈ ಬಗ್ಗೆ ಬೆರ್ಮೆರ್ ಸಿರಿಗೆ ಸೂಚನೆ ನೀಡಿರುತ್ತಾರೆ.

 ಆದ್ದರಿಂದ ಆ ಸೀರೆಯನ್ನು ತಿರಸ್ಕರಿಸಿ ತನ್ನ ಅಜ್ಜ ತಂದ ಸೀರೆಯನ್ನು ಉಡುತ್ತಾಳೆ. ಎಲ್ಲರ ಎದುರು ತನ್ನ ಮರ್ಯಾದೆ ತೆಗೆದಳೆಂದು ಕಾಂತುಪೂಂಜ ಸಿರಿಯೊಡನೆ ಕೋಪಿಸುತ್ತಾನೆ. ಮುಂದೆ ಅವಳು ಮಗುವನ್ನು ಹೆತ್ತಾಗಲೂ ನೋಡಲು ಬರುವುದಿಲ್ಲ. ಬೆರ್ಮ ಆಳ್ವ ಸತ್ತಾಗಲೂ ಬರುವುದಿಲ್ಲ. ಕಾಂತುಪೂಂಜನ ಪಿತೂರಿಯಿಂದಾಗಿ ಬೆರ್ಮ ಆಳ್ವನ ಅರಮನೆ, ರಾಜ್ಯ ದಾಯಾದಿಗಳ ಪಾಲಾಗುತ್ತದೆ.
 ಸಿರಿ ತನ್ನ ಮಗು ಕುಮಾರ ಹಾಗೂ ಕೆಲಸದ ಹೆಂಗಸು ದಾರುವಿನೊಂದಿಗೆ ಬಸ್ರೂರು ಬತ್ತಕೇರಿ ಅರಮನೆಗೆ ಬಂದು ಬರ (ವಿಚ್ಛೇದ)ವನ್ನು ಕೇಳುತ್ತಾಳೆ. ಮುಂದೆ ಅರಮನೆ ಉರಿದು ಹೋಗುವಂತೆ ಶಾಪ ಕೊಟ್ಟು ಅಲ್ಲಿಂದ ದೇಶಾಂತರ ಹೋಗುತ್ತಾಳೆ
ಸಂಜೆ ಹೊತ್ತು ಕಂತುವುದರ ಒಳಗೆ ತನ್ನ ರಾಜ್ಯದ ಗದುಯನ್ನು ದಾಟಿ ಹೋಗಬೇಕೆಂದು ಕಾಂತು ಪೂಂಜ ಹೇಳುತ್ತಾನೆ .
ಅಂತೆಯೇ ದಾರುವಿನೊಂದಿಗೆ ತೊಟ್ಟಿಲ ಮಗುವನ್ನು ಹಿಡಿದುಕೊಂಡು ಬರುವಾಗ ದಾರಿಯಲ್ಲಿ ಗಾಳಿ ಕೊಂತ್ಯಮ್ಮ ದೇವರು ಸಿಗುತ್ತಾರೆ .
ಸಿರಿಗೆ ರಸ ಬಾಲೆ ಹಣ್ಣು ಹಾಲು ತಂದು ಕೊಡುತ್ತಾಳೆ .ಮತ್ತೆ ಅವಳಲ್ಲಿ ನನ್ನ ಮಗ ವೀರ ಭದ್ರ ಕುಮಾರ ಬರುವ ಮೊದಲು ಇಲ್ಲಿಂದ ಹೋಗು ಅವನು ಕಂಡರೆ ನಿನ್ನನ್ನು ಬಿಡಲಾರ ,ಅವನು ಸಿಕ್ಕರೆ ಅವನನ್ನು ನಿನ್ನ ಮಗನ ಹಾಗೆ ಭಾವಿಸಿ ಅವನ ತಪ್ಪನ್ನು ಕ್ಷಮಿಸಬೇಕು ಎಂದು ಹೇಳುತ್ತಾರೆ .ಆಯಿತು ಎಂದು ಹೇಳುತ್ತಾಳೆ ಸಿರಿ
ಅಲ್ಲಿಂದ ಮುಂದೆ ಹೋಗುವಾಗ ವೀರ ಭದ್ರ ಕುಮಾರ ಹಿಮ್ಬಾಲಿಸ್ಕೊಂದು ಬಂದು ಅಡ್ಡ ಕಟ್ಟುತ್ತಾನೆ .ಅವಳತಲೆ ಕೂದಲಿಗೆ ಕೈ ಹಾಕುತ್ತಾನೆ .ಆಗ


ಓ ಮುಟ್ಟಡ ಮುಟ್ಟಡ ಪಂಡೆರ್ ಬಾಲೆಕ್ಕೆ ಸಿರಿಯೇ
ಓ ಪನ್ನಲ ಪತ್ತಿನಕೇಂಡಿಜೆ ಪಂಡೆರ್ ಆರಾಂಡ ಆನಿಗಯ್ ಯೇ
ಓ ಒಲಿಪ್ಪಾಲ ಉದೆಟ್ ಲ ನೆದಿಪ್ಪಾಲ ಕಲ್ಲುಲ ಪಾದೆಲ ನೆಗೆಪ್ಪುಲಾಯೆ

ನನ್ನನ್ನು ಮುಟ್ಟ ಬೇಡ ಮುಟ್ಟ ಬೇಡ ಎಂದು ಸಿರಿ ಹೇಳುತ್ತಾಳೆ .ಅವಳ ಮಾತನ್ನು ಲಕ್ಷಿಸದೆ ಮುಂದುವರಿದ ಅವನಿಗೆ ಶಾಪ ಕೊಟ್ಟು ಹೊಳೆಯಲ್ಲಿ ಪಾದೆ ಕಲ್ಲಾಗುವಂತೆಮಾಡುತ್ತಾಳೆ .ಮುಂದೆ ಅವನ ತಾಯಿಗೆ ಕೊಟ್ಟ ಮಾತು ನೆನಪಾಗಿ ಆತನಿಗೆ ದೈವತ್ವ ನೀಡಿ ಕ್ಷೇಮ ಕಲ್ಲು ಪಂಜುರ್ಲಿ ಎಂಬ ಹೆಸರಿನಲ್ಲಿ ಆರಾಧನೆ ಪಡೆ ಎಂದು ಹೇಳುತ್ತಾಳೆ .

ಹೀಗೆ ಸಿರಿರ್ಯ ಅನುಗ್ರಹದಿಂದ ದೈವತ್ವ ಪಡೆದ ವೀರ ಭದ್ರ ಕುಮಾರ ಕ್ಷೇಮ ಕಲ್ಲ ಪಂಜುರ್ಲಿ ದೈವವಾಗಿ ನೆಲೆ ನಿಲ್ಲುತ್ತಾನೆ .

ಡಾ.ಲಕ್ಷ್ಮೀ ಜಿ ಪ್ರಸಾದ 

ಲೇ : ಕರಾವಳಿಯ ಸಾವಿರದೊಂದು ದೈವಗಳು 

ಮಬೈಲ್ 9480516684:

 

 

ಭೂತಾರಾಧನೆಯಲ್ಲಿ ಜಾತಿ‌ಮತ ಧರ್ಮಗಳ ಸಾಮರಸ್ಯ- ಡಾ.ಲಕ್ಷ್ಮೀ ಜಿ ಪ್ರಸಾದ್

                                


ತುಳುವರ ಭೂತ ಕನ್ನಡದ ಭೂತವಲ್ಲ.ತುಳುವಿನ ಭೂತ ಪದಕ್ಕೆ ಕನ್ನಡದ ಭೂತ ಎಂಬ ಪದಕೆ ಇರುವಂತೆ ಭೂತ ಪ್ರೇತ ಪಿಶಾಚಿ ಎಂಬ ಕೆಟ್ಟ ಅರ್ಥವಿಲ್ಲ.ತುಳುವರ ಭೂತಗಳು ಜನರನ್ನು ಹೆದರಿಸಿ ಬೆದರಿಸಿ ಕಾಡುವ ಕೆಟ್ಟ ,ಕ್ಷುದ್ರ ಶಕ್ತಿಗಳಲ್ಲ .ತುಳುವರ ಭೂತ ಪದ ದೇವತಾ ವಾಚಿ ಪದ .ದುಷ್ಟ ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಸತ್ಯದ ಶಕ್ತಿಗಳು ಇವು.
 

 The Tulu word bhuta may be orginated from Sanskrit word ‘putam’, which means purified. In Hindu mythology, Lord Vishnu is also referred as ‘putam’. So, one interpretation could be that over centuries the word ‘putam’ changed into ‘puto’, then to ‘buto’, and finally become ‘bhuta’.
In Tulu tradition, there is no fixed path to become a bhuta or daiva. Most of the bhutas are basically humans who — blessed with extraordinary powers or having done remarkable work, like questioning social evils — transform into bhutas after death. Ordinary people can also become a bhuta, if they happen to be blessed by their bhuta.

Bhuta kola is a  devine spirit worship is an ancient ritual form of worship of Tuluvas in Tulunadu (undivided dakshina kannada district including udupi and kasaragodu ) which having singing paddana and a special devine dance .Theyyam in kerala  and Bhuta kola in Tulunadu are the same type of  purified spirit worship /devine worship

ಸಂಸ್ಕೃತ ಮೂಲದ ಪೂತಮ್ ಎಂದರೆ ಪವಿತ್ರವಾದದ್ದು ಎಂಬ ಪದವೇ ಕಾಲಾಂತರದಲ್ಲಿ ವರ್ಣ ವ್ಯತ್ಯಯ ಗೊಂಡು ಸಂಸ್ಕೃತೀಕರಣಕ್ಕೊಳಗಾಗಿ ಬೂತೊ>ಭೂತೋ>ಭೂತ ಆಗಿರಬಹುದು .ಕೊಡವರು ಇಂದಿಗೂ ಭೂತವನ್ನು ಪೂದ ಎಂದೇ ಕರೆಯುತ್ತಾರೆ.ತುಳುವಿನಲ್ಲಿ ಪೂ >ಭೂ ಆದರೆ ಕೊಡವರಲ್ಲಿ ತ>ದ ಆಗಿ ವರ್ಣ ಬದಲಾವಣೆ ಆಗಿದೆ ಇದೆ.ಅಥವ ತುಳು ಭೂತಗಳಲ್ಲಿ ಹೆಚ್ಚಿನವರು ಅಸಾಮಾನ್ಯ ಸಾಹಸ ಮರೆದು ದುರಂತವನ್ನಪ್ಪಿ ಮಾಯವಾಗಿ ದೈವತ್ವ ಪಡೆದ ಸಾಂಸ್ಕೃತಿಕ ನಾಯಕರೇ ಆಗಿದ್ದಾರೆ.ಆದ್ದರಿಂದ ಹಿಂದೆ ಇದ್ದವರು ಎಂಬ ಅರ್ಥದಲ್ಲಿಯೂ ಭೂತ ಪದ ಬಳಕೆಗೆ ಬಂದಿರುವ ಸಾಧ್ಯತೆ ಇದೆ
ಇತಿಹಾಸ, ರಾಜಕೀಯ, ಸಂಸ್ಕøತಿ, ಸಾಮಾಜಿಕ, ಜಾನಪದ ಸೇರಿದಂತೆ ಎಲ್ಲ ವಿಚಾರಗಳು ಕೂಡ ತುಳುನಾಡಿನಲ್ಲಿ ದುರಂತ ಮತ್ತು ದೈವತ್ವದೊಂದಿಗೆ ತಳುಕು ಹಾಕಿಕೊಂಡಿದೆ.

.ತುಳುನಾಡಿನಲ್ಲಿ ದೈವತ್ವ ಪಡೆದು ಭೂತ ವಾಗಿ ಆರಾಧಿಸಲ್ಪಡುವುದು ಒಂದು ವಿಶಿಷ್ಟ ಸಂಸ್ಕೃತಿ .ಇಲ್ಲಿ ಭೂತತ್ವವನ್ನು ಯಾವುದೇ ಜಾತಿ ಭೇದ ಇರುವುದಿಲ್ಲ ಅಂತೆಯೇ ಧರ್ಮದ ಗಡಿ ಕೂಡಾ ಇದಕ್ಕಿಲ್ಲ .ಉಲ್ಲಾಳದಲ್ಲಿ ಭೂತ ಮಸೀದಿಗೆ ಭೇಟಿ ಕೊಡುವ ಸಂಪ್ರದಾಯ ಇದೆ. ಅದೇ ರೀತಿ ಕೆಲವೆಡೆ ಭೂತ ಮುಸ್ಲಿಂ ಕ್ರಿಸ್ಚಿ ಯನ್ ವ್ಯಕ್ತಿಗಳನ್ನು ಉದ್ದೇಶಿಸಿ ಕರೆದು ಗೌರವಿಸುವ ಪದ್ಧತಿ ಇದೆ .ತೊಕ್ಕೊಟು ಸಮೀಪ ಭೂತ “ಅಂತಂತೋನಿ “ಎಂದು ಕರೆಯುವ ಬಗ್ಗೆ ಭೂತ ಕಟ್ಟುವ ಕಲಾವಿದರಾದ ಅಪ್ಪಣ್ಣ ಅವರು ತಿಳಿಸಿದ್ದಾರ 

ಇಲ್ಲಿ ಬ್ರಾಹ್ಮಣರೂ ಭೂತವಾಗಿದ್ದಾರೆ.ಚಾಮುಂಡಿ,ಭಟ್ಟಿ ಭೂತ ,ಕಚ್ಚೆ ಭಟ್ಟ , ನಾರಳತ್ತಾಯ ಮೊದಲಾದ ಭೂತ ಗಳು ಬ್ರಾಹ್ಮಣ ಮೂಲದ ದೈವತಗಳು .


                                     ನೆಲ್ಲಿತ್ತಾಯ

ರಾಮ ಶೆಟ್ಟಿ ಎಂಬ ವೀರ ಶೈವ ಲಿಂಗಾಯತ ವ್ಯಕ್ತಿ ನೆತ್ತರು ಮುಗಳಿ ಎಂಬ ಭೂತವಾಗಿದ್ದಾನೆ .

ನೈದಾಲ ಪಾಂಡಿ ಕೂಡ ಮೂಲತಃ ಲಿಂಗಾಯತನಾಗಿ ಪರಿವರ್ತಿತನಾದ ರಾಜ ಕುಮಾರ . . ಅಚ್ಚುಬಂಗೇತಿ, ಅಕ್ಕಚ್ಚು ಭೂತ, ಬೊಟ್ಟಿ ಭೂತಗಳು ಮೂಲತಃ ಜೈನ ಧರ್ಮದವರಾಗಿದ್ದಾರೆ.

ಕ್ರಿಶ್ಚಿಯನ್ ತೆಯ್ಯಂಗೆ ಆರಾಧನೆ ಇರುವ ಬಗ್ಗೆ ಕೇಳು ಮಾಸ್ತರ್ ಅಗಲ್ಪಾಡಿ ಅವರು ತಿಳಿಸಿದ್ದಾರೆ . ಅಂತೆಯೇ ತುಳುನಾಡಿನ ಅನೇಕ ಮುಸ್ಲಿಂ ಮೂಲದ ವ್ಯಕ್ತಿಗಳು ದೈವತ್ವಕ್ಕೇರಿ ಆರಾಧಿಸಲ್ಪಡುತ್ತಿದ್ದಾರೆ.


 

                 ಆಲಿ ಭೂತ
ಬಬ್ಬರ್ಯ, ,ಬ್ಯಾರ್ದಿ ಭೂತ, ಬ್ಯಾರಿ ಭೂತ,ಮಾಪುಲೇ ಮಾಪುಳ್ತಿ ಭೂತೊಳು ,ಮಾಪುಳ್ತಿ ಧೂಮಾವತಿ ಮೊದಲಾದವರು ಮುಸ್ಲಿಂ ಮೂಲದ ದೈವತಗಳು. ಹೀಗೆ ಆಲಿ ಭೂತ ಕೂಡಾ ಮುಸ್ಲಿಂ ಮೂಲದ ದೈವ .ಭೂತಗಳಾದ ನಂತರ ಇವರು ಹಿಂದೆ ಯಾರಾಗಿದ್ದರು ಎಂಬ ಪ್ರಶ್ನೆಯೇ ಇರುವುದಿಲ್ಲ .ಎಲ್ಲ ದೈವಗಳೂ ಸಮಾನ .ಎಲ್ಲ ದೈವಗಳಿಗೂ ಒಂದೇ ರೀತಿಯ ಗೌರವ ,ಭಕ್ತಿಯ ನೆಲೆ .ಇದು ತುಳು ನಾಡಿನ ವೈಶಿಷ್ಟ್ಯ .

 

                                      ಕನ್ನಡ ಬೀರ -ತುಳುವರ ದೈವವಾದ ಬ್ರಿಟಿಶ್ ಸುಬೇದಾರ
 

                                                                ಕನ್ನಡ ಭೂತ

ತುಳುನಾಡಿನಲ್ಲಿ ದೈವತ್ವವನ್ನು ಪಡೆದವರೆಲ್ಲ ಹಿಂದುಗಳು, ತುಳುನಾಡಿನವರೇ ಆಗಬೇಕಿಲ್ಲ. ಅನೇಕ ಕನ್ನಡ ಮೂಲದ ವ್ಯಕ್ತಿಗಳು. ತುಳುನಾಡಿನಲ್ಲಿ ಭೂತ ಗಳಾಗಿ ಆರಾಧಿಸಲ್ಪಡುತ್ತಿದ್ದಾರೆ ಕನ್ನಡ ಬೀರ, ಬಚ್ಚನಾಯಕ, ಬೈಸು ನಾಯಕ, ಕರಿಯಣ್ಣ ನಾಯಕ, ಕಚ್ಚೆ ಭಟ್ಟ, ಕನ್ನಡ ಭೂತ, ಕನ್ನಡ ಭೂತ ಯಾನೆ ಪುರುಷ ಭೂತ,ಕನ್ನಡಿಗ ಭೂತ ಮೊದಲಾದವರು ಮೂಲತಃ ಕನ್ನಡ ಭಾಷಿಗರು ಆಗಿದ್ದವರು

ತುಳು ನಾಡಿನಲ್ಲಿ ಯಾರಿಗೆ ಹೇಗೆ ಯಾವಾಗ ದೈವತ್ವ ಪ್ರಾಪ್ತಿಯಾಗುತ್ತದೆ ಹೇಳುವುದಕ್ಕೆ ಒಂದು ಸಿದ್ಧ ಸೂತ್ರವಾಗಲಿ ನಿಯಮವಾಗಲಿ ಏನೂ ಇಲ್ಲ .ದುರಂತವನ್ನಪ್ಪಿದ ಅಸಹಾಯ ಶೂರರು ಮಾತ್ರ ಭೂತಗಳಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ .ಮನುಷ್ಯ ಮೂಲದಿಂದ ಭೂತ ಸ್ಥಿತಿಗೇರಿದವರು ಎಲ್ಲರೂ ಮೂಲತಃ ಸಾತ್ವಿಕರೂ, ಸದ್ಧರ್ಮಿಗಳೂ, ಸಾಧ್ವಿಗಳೂ, ಶೂರರೂ ಎನ್ನುವಂತಿಲ್ಲ. ಅಂಥಹ ಉದಾತ್ತ ಚರಿತರು ವಿರಳವಾಗಿ ಕೆಲವರಿರಬಹುದು. ವಿಶೇಷಗುಣಗಳಿಲ್ಲದ ತೀರಾ ಸಾಮಾನ್ಯರೂ ಬೇರೆಬೇರೆ ಕಾರಣಗಳಿಂದ ದೈವತ್ವವನ್ನು ಪಡೆದಿದ್ದಾರೆ. ಆಕಸ್ಮಿಕ ಮರಣಕ್ಕೆ ಗುರಿಯಾದವರು ದೈವಗಳ ಕಾರಣೀಕಗಳು ಸೇರಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ.ಪ್ರಧಾನ ಭೂತ ಗಳಾದ ಉಲ್ಲಾಕುಳು ಶಿರಾಡಿ ,ಮಲರಾಯಿ ,ಬಬ್ಬರ್ಯ ,ಪಂಜುರ್ಲಿ ,ಮೊದಲಾದ ಭೂತ ಗಳ ಅನುಗ್ರಹದಿಂದ ಅನೇಕರು ಸೇರಿಗೆ ದೈವಗಳಾಗಿದ್ದಾರೆ.ಅಂತೆಯೇ ಈ ಭೂತ ಗಳ ಆಗ್ರಹಕ್ಕೆ ತುತ್ತಾಗಿಯೂ ಅನೇಕರಿಗೆ ದೈವತ್ವ ಲಭಿಸಿದೆ
ತುಳುನಾಡಿನ ಲ್ಲಿ ಎಷ್ಟು ಭೂತಗಳಿಗೆ ಆರಾಧನೆ ಇದೆ ಎಂಬ ಬಗ್ಗೆ ಇಷ್ಟೇ ಎಂಬ ಇದಮಿತ್ಥಂ ಉತ್ತರಿಸಲು ಸಾಧ್ಯವಿಲ್ಲ
ಈ ಬಗ್ಗೆ ಡಾ.ಚಿನ್ನಪ್ಪ ಗೌಡು ಸುಮಾರು ನಾನ್ನೂರು ಭೂತ ಗಳಿಗೆ ಅರಾಧನೆ ಇದೆ ಎಂದಿದ್ದಾರೆ ಅವರು ಸುಮಾರು ಮುನ್ನೂರು ಭೂತಗಳ ಹೆಸರನ್ನು ಸಂಗ್ರಹಿಸಿದ್ದಾರೆ


ಅದರೆ ನನಗೆ ಎರಡುಸಾವಿರದ ಮುನ್ನೂರ  ಅರು ವತ್ತು ಭೂತಗಳ ಹೆಸರುಗಳು ಸಿಕ್ಕಿವೆ, 

1253 ದೈವಗಳ ಮಾಹಿತಿ ಯನ್ನು ನನ್ನ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥದಲ್ಲಿ ನೀಡಿದ್ದೇನೆ 
ಹಾಗಾಗಿ ದಕ್ಷಿಣ ಕನ್ನಡ ಉಡುಪಿ ಕಾಸರಗೋಡು ಕೊಡಗು ಪರಿಸರದಲ್ಲಿ ಆರಾದನೆ ಗೊಳ್ಳುವ ಎಲ್ಲ ಭೂತಗಳನ್ಮು ಲೆಕ್ಕ ಹಾಕಿದರೆ ಒಂದೂವ ೆ ಸಾವಿರಕ್ಕೂ ಹೆಚ್ಚು ಭೂತ ಗಳಿಗೆ ಆರಾಧನೆ ಇದೆ ಎಂದು ನಿಶ್ಚಿತವಾಗಿ ಹೇಳಬಹುದು

(ಸೂಚನೆ:ನನ್ನ ಎಲ್ಲ ಬರಹಗಳಿಗೆ ಕಾಪಿ ರೈಟ್ಸ್ ಇದೆ )

©ಡಾ.ಲಕ್ಷ್ಮೀ ಜಿ ಪ್ರಸಾದ 

ಕನ್ನಡ ಉಪನ್ಯಾಸಕರು 

ಸರ್ಕಾರಿ ಪದವಿ ಪೂರ್ವ ಕಾಲೇಜು 

ಬೆಂಗಳೂರು 

ಮೊಬೈಲ್ 9480516684

ತೌಳವ ಅವತಾರ ಯಾರದು

 ಕಾಲ ಎಲ್ಲರ ಕಾಲನ್ನೂ ಎಳೆಯುತ್ತದೆ..

ಭೂತಾರಾಧನೆ ಯಲ್ಲಿ ಜಾತಿ ಯತ ಧರ್ಮಗಳ ಸಾಮರಸ್ಯ ಇದೆ ಆದರೆ ಇತ್ತೀಚೆಗೆ   ಬ್ರಾಹ್ಮಣರ ವಿರುದ್ಧ ತುಳುವರನ್ನು ಎತ್ತಿಕಟ್ಟು ಸಾಮರ ್ಯ  ಹಾಳು ಮಾಡುವ ಕೆಲಸವ ್ನು ಕೆಲವರು ಮಾಡುತ್ತಿದ್ದಾರೆ . ಇದಕ್ಕೆ ಮೂಲ  ಕಾರಣ  ಮತ್ಸರವೇ ಆಗಿದೆ ಜೊತೆಗೆ ಕೀಳರಿಮೆಯೂ ಕಾರಣವಾಗಿರಬಹುದು 

Face book ನಲ್ಲಿ ತೌಳವ ( Taulava) ಎಂಬ ಫೇಕ್ ಹೆಸರಿನಲ್ಲಿ ಆಧಾರ ರಹಿತವಾಗಿ ಪೋಸ್ಟ್ ಹಾಕಿ ಸಾಮಾಜಿಕ ಶಾಂತಿ ಕದಡುವ ಕೆಲಸ  ಮಾಡುತ್ತಿದ್ದರಾರೆ ಅವರು ಯಾರರೆಂದು ನನಗೆ ಗೊತ್ತಿಲ್ಲ.ಆದರೆ ಅಂತಹದೇ ಕಟ್ಟುಕಥೆ ಹೇಳಿದ ವ್ಯಕ್ತಿಯೊಬ್ಬಲ ನೆನಪಾಯಿತು 

ನನ್ನನ್ನು ಸೇರಿದಂತೆ ತುಳು ಸಂಶೋಧಕರ ಬಗ್ಗೆ ,ಲೇಖಕರ  ಬಗ್ಗೆ ಆಧಾರ ರಹಿತವಾಗಿ ಅವಹೇಳನಕಾರಿಯಾಗಿ ಟಿವಿಯಲ್ಲಿ ಮಾತನಾಡಿದ ವ್ಯಕ್ತಿಗೆ ಅವರ ದೋಷಗಳನ್ನು ಆಧಾರ ಸಹಿತವಾಗಿ ಎತ್ತಿ ತೋರಿಸಿದರೆ ಬಹಳ ತಾಗುತ್ತದೆ ..ಆಗ ಜಾತಿ ನೆನಪಾಗುತ್ತದೆ,ನನ್ನಂತಹ ಶೋಷಿತ ಸಮುದಾಯವರು ಅಧ್ಯಕ್ಷ ಸ್ಥಾನ ಪಡೆಯಬಾರದೇ? ಇತ್ಯಾದಿ ಆತ್ಮ ಗ್ಲಾನಿಯ ಅನುಕಂಪ ಪಡೆಯುವ ಮಾತು ಬರುತ್ತದೆ..


ನನ್ನ ಪ್ರಕಾರ ದೈವ ಕಟ್ಟುವವರು ಮಾತ್ರವಲ್ಲ ಯಾರೂ ಕೂಡ ಯಾವುದೇ ವೃತ್ತಿಯನ್ನು ಮಾಡಬಹುದು,ಸಂಘ ಸಂಸ್ಥೆ ಅಕಾಡೆಮಿಗಳ ಅಧ್ಯಕ್ಷರೂ ಆಗಬಹುದು
ಅಂತೆಯೇ ನನ್ನ ಪ್ರಕಾರ 
ದೈವಾರಾಧನೆ ಬಗ್ಗೆ ಅಧ್ಯಯನ ಮಾಡುವುದು ಬರೆಯುವುದು ಸಿನಿಮಾ ನಾಟಕಗಳಲ್ಲಿ ಯಕ್ಷಗಾನ ಬಯಲಾಟಗಳಲ್ಲಿ ಗೌರವಯುತವಾಗಿ ತೋರಿಸುವುದು ನನ್ನ ಪ್ರಕಾರ ತಪ್ಪಲ್ಲ.. ಒಂದೊಮ್ಮೆ ಇದನ್ನು  ತಪ್ಪು ಎಂದು  ದೈವ ಕಟ್ಟುವವರು ಹೇಳುವುದಾದರೆ ದೈವ ಕಟ್ಟುವವರು ಕೂಡ ಪ್ರಾಚೀನ ಸಂಪ್ರದಾಯವನ್ನು ಮೀರಬಾರದು ,ಬೇರೆ ವೃತ್ತಿ ಮಾಡುವಂತಿಲ್ಲ,ವೃತ್ತಿಯ ನೇಮ ನಿಷ್ಠೆ ಗಳಂತೆ ಇರಬೇಕು  ಇತರರಿಂದ ಬೈಗುಳ ತಿನ್ನುವಂತಿಲ್ಲ‌.ಇತರ ವೃತ್ತಿ ಮಾಡಿದರೆ ಮೇಲಧಿಕಾರಿಗಳ ಬೈಗುಳ ಕೇಳಬೇಕು ,ಆದೇಶ ಪಾಲನೆ ಮಾಡಬೇಕು.ಹಾಗಾಗಿ ಹಿಂದಿನ ಕಾಲದಲ್ಲಿ ಇರುವಂತೆ ಇತರರು  ನಡೆದುಕೊಳ್ಳಬೇಕು  ಎನ್ನುವುದಾದರೆ ದೈವ ಕಟ್ಟುವವರು ಕೂಡ ಹಾಗೆಯೇ ಇರಬೇಕು.ಸಂಘ ಕಟ್ಟಿ ಅನ್ಯರ ಮೇಲೆ ದಬ್ಬಾಳಿಕೆ ಮಾಡುವುದು,ಸಂಘ ಸಂಸ್ಥೆ ಅಕಾಡೆಮಿಗಳ ಅಧ್ಯಕ್ಷರಾಗಿ ಅಧಿಕಾರ ಪಡೆಯುವುದು ಕೂಡ ತಪ್ಪು ಎಂಬುದು ನನ್ನ ವಾದ‌‌..

ಇಲ್ಲ..ಎಲ್ಲ ಹಿಂದಿನ ಕಾಲದಲ್ಲಿ ಇರುವಂತೆ ಇರಲು ಸಾಧ್ಯವಿಲ್ಲ ಬದಲಾವಣೆ ತಡೆಯಲು ಅಸಾಧ್ಯ ಎಂದಾದರೆ ದೈವಾರಾಧನೆ ಕುರಿತಾದ ಅಧ್ಯಯನವನ್ನು ಬರವಣಿಗೆಯನ್ನೂ ವಿರೋಧಿಸಬಾರದು.. ತನಗೆ ಬೇಕಾದಲ್ಲಿ ಆಧುನಿಕ ವಿಚಾರಧಾರೆ ಅನ್ವಯ..ಸಂಪ್ರದಾಯ ಮೀರಬಹುದು ಇತರರು ಮೀರಬಾರದು ಎಂಬ ಇಬ್ಬಗೆಯ ನಿಲುವನ್ನು ನಾನು ವಿರೋಧಿಸುತ್ತೇನೆ 
ಇದು ಪ್ರಜಾಪ್ರಭುತ್ವದ ದೇಶ.. ಇಲ್ಲಿ ಯಾರೂ ಯಾವುದೇ ಸಂಘ ಸಂಸ್ಥೆ ಅಕಾಡೆಮಿ ಗಳ ಅಧ್ಯಕ್ಷರಾಗಿ ಬಹುದು ಅರ್ಹತೆ ಇದ್ದರೆ.. ಆದರೆ ನನ್ನನ್ನು ಸೇರಿದಂತೆ ಯಾರನ್ನೂ ಕೂಡಾ ಅವಹೇಳನ ಮಾಡುವ ಹಕ್ಕು ಯಾರಿಗೂ ಇಲ್ಲ.. ಅಕಾಡೆಮಿ ಅಧ್ಯಕ್ಷರಿಗೂ ಇಲ್ಲ..ದೈವ ಕಟ್ಟುವವರಿಗೂ ಇಲ್ಲ.ಶೋಷಿತ ಸಮುದಾಯದವರಿಗೂ ಇಲ್ಲ..

ನಾನು ಯಾರ ಸುದ್ದಿಗೂ ಹೋಗುವುದಿಲ್ಲ.. ಅದನ್ನು ದೌರ್ಬಲ್ಯ ಎಂದು ಭಾವಿಸಿ ಕಿರುಕುಳ ಕೊಟ್ಟರೆ ಸುಮ್ಮನಿರುವುದೂ ಇಲ್ಲ..ಈ ವ್ಯಕ್ತಿ ಒಮ್ಮೆ ವಾಟ್ಸಪ್ ಗ್ರೂಪಿನ ಲ್ಲಿ ನನ್ನ ಬಗ್ಗೆ ಅವಹೇಳನಕಾರಿಯಾಗಿ ಬರೆದ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದೆ.ನಂತರ ಸುಮಾರು ಸಮಯ ನನ್ನ ಸುದ್ದಿಗೆ ಆತ ಬಂದಿರಲಿಲ್ಲ..
ನಂತರ ಒಮ್ಮೆ ಫೋನ್ ಮಾಡಿ ತುಳು ಭಾಷೆಗೆ ಸ್ವಂತ ಲಿಪಿ ಇದೆ ಎಂದು ಸುಳ್ಳು ಹೇಳಬೇಕು ಎಂದಾಗ ಒಪ್ಪಿರಲಿಲ್ಲ..ಸುಳ್ಳೆ ಹೇಳಬೇಕೆಂದು ಅಕಾಡೆಮಿ ಅಧ್ಯಕ್ಷ ಬಿಡಿ ರಾಷ್ಟ್ರಾಧ್ಯಕ್ಷರೇ ಹೇಳಿದರೂ ಒಪ್ಪಲಾಗದು ಎಂದಿದ್ದೆ..

ಇದಾಗಿ ನನ್ನ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ ಬಿಡುಗಡೆಯಾಗಿ ಸಾಕಷ್ಟು ಪ್ರಸಿದ್ಧಿ ಪಡೆದಾಗ ಮತ್ತೆ ಅನೇಕರಿಗೆ ನಂಜು ಕೆದರಲು ಆರಂಭ ಆಯಿತು.. ತಮಗೆ ಅಸಾಧ್ಯವಾದದ್ದನ್ನು ಅಥವಾ ತಾವು ಮಾಡಿದ್ದನ್ನು ಇತರರು ಮಾಡಿದರೆ ಅನೇಕರಿಗೆ ಸಹಿಸಲು ಆಗುವುದಿಲ್ಲ..

ಗ್ರಂಥದಲ್ಲಿ ಬಳಸಿದ ಪದ ಒಂದರ ಬಗ್ಗೆ ಫೋನ್ ಮಾಡಿ ದಬ್ಬಾಳಿಕೆ ಮಾಡಲು ಹೊರಟಾಗ  "ಭೂತ ಕಟ್ಟುವ ಪರಂಪರೆಯ ವಿದ್ವಾಂಸರು" ಎಂಬ ಪದ ಬಳಕೆ  ಅವಮಾನ ಎನಿಸಿದರೆ ಕೋರ್ಟ್ ಗೆ ಹೋಗಿ ಪುಸ್ತಕ ಬ್ಯಾನ್ ಮಾಡ್ಸಿ ಎಂದಿದ್ದೆ ..

ಇದಾಗಿ ಇತ್ತೀಚೆಗೆ ಕಂಬಳ ಕುರಿತಾದ ಬಿಟಿವಿ ಯ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಚರ್ಚೆಯ ವಿಷಯ ಬಿಟ್ಟು ತುಳು ಸಂಶೋಧಕರ ಬಗ್ಗೆ ಬರಹಗಾರರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು.ವಿಷಯಕ್ಕೆ ಸಂಬಂಧ ಪಡದಿದ್ದರೂ ಮೇಲ್ವರ್ಗದವರು ( ಬ್ರಾಹ್ಮಣರು?)ಕೆಳ ವರ್ಗದವರ ಮಕ್ಕಳಿಗೆ ಕೂರ ,ಬೊಗ್ರ ,ಬೊಗ್ಗಿ ,ತುಕ್ರ ,ಇತ್ಯಾದಿ ನಾಯಿ ಹೆಣ್ಣು ನಾಯಿ ಇತ್ಯಾದಿ ಕೀಳಾದ ಹೆಸರು ಇಡುತ್ತಿದ್ದರು ಎಂದು  ಆಧಾರ್ ರಹಿತವಾಗಿ ,ಸಮಾಜದ ಸ್ವಾಸ್ಥ್ಯ ಕದಡುವ ಹೇಳಿಕೆ ನೀಡಿದ್ದರು.ಅದರ ರೆಕಾರ್ಡ್ ಸೇವ್ ಮಾಡಿದ ನನ್ನ ಮಗ  ಜಾತಿ ನಿಂದನೆ ಮತ್ತು ಸಾಮಾಜಿಕ ಸ್ವಾಸ್ಥ್ಯ ಕದಡುವ ಕೇಸ್ ದಾಖಲಿಸುವ ಎಂದಿದ್ದ ಆಗ ಈಗ ಬೇಡ ,ಎಲ್ಲ 
ದಾಖಲೆಗಳನ್ನು ತೆಗೆದಿರಿಸೋಣ..ನೇರವಾಗಿ ನನ್ನ ಹೆಸರು ಹೇಳಿ ಅವಹೇಳ ಮಾಡಿದರೆ  ಇವೆಲ್ಲವನ್ನೂ ಸೇರಿಸಿದೂರು ನೀಡಿ ಕೇಸ್ ಹಾಕಿ ಹೋರಾಡೋಣ ಎಂದು ಹೇಳಿ ಪೆಂಡಿಂಗ್ ಇರಿಸಿದ್ದೆ . ವಾಟ್ಸಪ್ ಗ್ರೂಪಿನಲ್ಲಿ ಬರೆದಿದ್ದುದರ ದಾಖಲೆ, ಫೋನ್ ಮಾಡಿದ್ದರ ಫೋನ್ ಕಾಲ್ ರೆಕಾರ್ಡ್ ಕೂಡ ಇದೆ.ತುಳು ರಾಜ್ಯಕ್ಕಾಗಿ ಅಲ್ಲಲ್ಲಿ ಬಾಂಬ್ ಬ್ಲಾಸ್ಟ್ ಮಾಡಬೇಕು, ಗಲಾಟೆ ಮಾಡಬೇಕು ಎಂದ ಆಡಿಯೋ ರೆಕಾರ್ಡ್ ಕೂಡ ಇದೆ , ಪತ್ರಿಕೆಯಲ್ಲಿ ಪ್ರಕಟವಾದ ವರದಿ ಕೂಡ ಇದೆ..

ದೈವ ದೇವರು ಯಾರೊಬ್ಬರ ಸೊತ್ತೂ ಅಲ್ಲ..ದೈವ ಕಟ್ಟುವವರ ಸೊತ್ತು ಕೂಡ ಅಲ್ಲ.ರಕ್ಷಣಾ ವೇದಿಕೆ ಇರಬಹುದು ಇನ್ಯಾವುದೋ ಸಂಘಟನೆ ಇರಬಹುದು, ಅವಹೇಳನಕಾರಿಯಾಗಿ ಬರೆದರೆ ಚಿತ್ರಿಸಿದರೆ ವಿರೋಧಿಸಬಹುದೇ ಹೊರತು ಅಪಚಾರವಾಗದಂತೆ ಬರೆದರೆ ಯಾರಿಗೂ ಕೇಳುವ ಹಕ್ಕು ಇಲ್ಲ 
ಅದರ ಅಧ್ಯಯನ ಮಾಡಿ ಬರೆಯಲು ಯಾರ  ಅನುಮತಿ ಬೇಕಾಗಿಲ್ಲ . ಮೂಲಕ್ಕೆ ಧಕ್ಕೆಯಾಗದಂತೆ ಸಿನಿಮಾ ನಾಟಕಗಳಲ್ಲಿ ಯಕ್ಷಗಾನ ಬಯಲಾಟಗಳಲ್ಲಿ ತರುವುದು ಕೂಡ ತಪ್ಪಲ್ಲ.. ಭಕ್ತಿ ಗೀತೆ ಬರೆಯುವುದೂ ತಪ್ಪಲ್ಲ.. ಇದನ್ನು ಮಾಡಬಾರದು ಎನ್ನುವ ಹಕ್ಕು ಯಾರಿಗೂ ಇಲ್ಲ.. ಅದು ಭಾರತದ ಸಂವಿಧಾನ ನಮಗೆ ಕೊಟ್ಟ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು..

ಮುಂದಿನದನ್ನು ದೈವ ದೇವರುಗಳು ನೋಡಿಕೊಳ್ಳುವರು ಎಂಬ ದೃಢವಾದ ನಂಬಿಕೆ ನನಗಿದೆ

What will happen to those who disappear in Tulunadu

 What will happen to those who disappear in Tulunadu

Tulu Nadu’s daiva/Deity worship is a unique cult performance art, religious worship practice. People of all castes including Hindus, Muslims, Jains and Christians are worshiped as Daivas(peculiar deities of Tuluvas).- Dr Lakshmi G Prasad 

Tulu Nadu’s Deity worship is a unique cult performance art, religious worship practice. People of all castes including Hindus, Muslims, Jains and Christians are worshiped as Daivas ( peculiar Gods/deities. of Tuluvas)

People of all castes worship the deities here. What were they here before they became Daivas? It doesn’t matter who it was. These are the spirits who protects us after becoming Daivas

All Daivas (Gods) are treated with equal respect, reverence and devotion. Thus harmony of caste votes is a feature of Tulu culture. 

After the movie Kantara, the question that haunts many people’s minds is what happens to those who disappeared?

The question asked by my colleague Maths lecturer Manjula is what happens to those who disappeared in Tulunad? Many people who have seen the movie Kantara have asked me the same question. I have tried to answer this simply. Disappearance in Tulu culture is not death, nor tragedy, but mere disappearance, dissolution, or non-existence. Here it is said to be Salludu (Mayakog or Mayog Sandune) to Mayaka. It means entering into the presence of Daiva

Maya and Joga mean salvation and final birth. Tulu have no concept of salvation. But this is the concept corresponding to salvation. There is a difference between Moksha in the Puranic concept and attribution to Mayaka. Joga is not just this birth. That is the final birth. Those who appear in Joga will stand to our rescue as Daivas/gods in Maaya.

Koraga Taniya (Koragajja) when his mother was calling him and searching for him, “Mother don’t search for me. So far I have appeared in Joga. Next I will stand in Maya. There is a reference in the Paddanada that if Koraga Taniya is called, he will come and protect the children , cows, crops etc.

Similarly, before the death of Koti and Chennaiyya, the three kings of Ballala will be called and we will give up Joga and join Mayaka, all three of you should be united. They say come and worship us, we will protect you.

(Also Read: Dr Lakshmi G prasad's karavaliya saaviradond daivagalu ( ‘One Thousand and One Gods of the Coast’) with information on 1253 Daivas/Gods of Tulunadu.) 

Only those who appear in Joga attain divinity. Joga means final birth. In the Jain concept it is called Charama Deha Dharana who later become Tirthankaras.

Shankaracharya Madhvacharya etc. who took the final birth attain moksha. Eligibility for salvation has to be earned through births and births.

Adhikari tu vidhivadadditata veda vedangatvena adhigatarthakhila asmin janmani janmantare wa kamya nishidda varjana? Puraskritam nitya naimittika praschittopasananushtanena nitantah nirmala svantah pramata etc. the qualification required to attain salvation is said. 

Joga is the final birth attained by those who qualify for divinity in Tulunad. After giving up Joga, he becomes a Daiva ( a peculiar god.)

Who is eligible and how? What are the qualifications required or acquired for this? So far there has been no discussion about that. Perhaps God’s mercy is the ultimate decisive force.

Mayaka or moksha in this concept is not to become one with that daiva  but to become another Daiva with the same power as that god is to become the benevolent forces that protect the people as a polite guardian evil teacher. 

This is what we call attainment of divinity or attainment of divinity. This daiva is recognized as the daiva or parivara daiva of that daiva who has obtained the sannidya of that daava. 

So when Maya disappears, there is no ablution ceremony, there is no last rites. Instead there is worship of Daiva( peculiar Tuluvas  God). Because they are not dead. Instead, he joins the presence of Daiva and becomes Daiva Himself.

.Dr Lakshmi G Prasad 
Author: Karavaliya saviradondu daivagalu book 
Mobile :9480516684

ದೈವ ಕಟ್ಟಿದವರೂ ಮಾಯವಾಗುತ್ತಾರೆಯೇ ? ಮಾಯವಾದವರು ಏನಾಗುತ್ತಾರೆ ?ಮಾಯ ಆಗುದೆಂದರೇನು ? ಇಲ್ಲಿದೆ ಮಾಹಿತಿ

 ದೈವ ಕಟ್ಟಿದವರೂ  ಮಾಯವಾಗುತ್ತಾರೆಯೇ ? ಮಾಯವಾದವರು ಏನಾಗುತ್ತಾರೆ ?ಮಾಯ ಆಗುದೆಂದರೇನು ?  ಇಲ್ಲಿದೆ ಮಾಹಿತಿ 

  ಆಧಾರ ಕರಾವಳಿಯ ಸಾವಿರದೊಂದು ದೈವಗಳು‌, ಲೇ ಡಾ.ಲಕ್ಷ್ಮಿ ಜಿ ಪ್ರಸಾದ ಮೊಬೈಲ್ 9480516684 

ದೈವದ ಕಳದಲ್ಲಿ ಗಾಯಗೊಳ್ಳುವ ಕೋರಚ್ಚನ್ ಎಂಬ ದೈವ ಪಾತ್ರಿ ದೈವತ್ವ  ಪಡೆದು ದೈವವಾಗಿ ಆರಾಧಿಸಲ್ಪಡುತ್ತಾನೆ.  ದೈವ ಕಟ್ಟಿದಾಗ  ಮಾಯ ಹೊಂದಿದ  ಫಣಿಯನ್ ದೈವತ್ವ ಪಡೆದು ಆರಾಧನೆ ಪಡೆಯುತ್ತಾನೆ‌.

 

ಸುಳ್ಯ ಉತ್ತರ ಕೊಡಗು ಪರಿಸರಲ್ಲಿ ಅಜ್ಜಿ ಭೂತದೊಡನೆ ಕೂಜಿಲು ಹೆಸರಿನ ಎರಡು ದೈವಗಳಿಗೆ ಆರಾಧನೆ ಇದೆ.ಈ ದೈವಗಳ ಕೋಲದ ಕೊನೆಯಲ್ಲಿ ಸೇರಿದ ಜನರೆಲ್ಲ ಸೇರಿ ಕೈ ಕೈ ಹಿಡಿದು ದೈವಗಳ ಸುತ್ತ ಭದ್ರವಾಗಿ ಕೋಟೆ ಕಟ್ಟಿ ನಿಲ್ಲುತ್ತಾರೆ.

ಆಗ ದೈವಗಳು ಇವರ ಕೈಯಿಂದ ತಪ್ಪಿಸಿಕೊಂಡು ಹೊರ ಹೋಗಲು ಪ್ರಯತ್ನ ಪಡುತ್ತವೆ.ಜನರು ಬಿಡುವುದಿಲ್ಲ.

 

ಒಂದೊಮ್ಮೆ ಈ ಕೂಜಿಲು  ದೈವಗಳು  ಜನರು ಕಟ್ಟಿದ ಕೋಟೆಯಿಂದ ತಪ್ಪಿಸಿಕೊಂಡು ಹೊರ ಹೋದರೆ ಮತ್ತೆ ಹಿಂದೆ ಬರುವುದಿಲ್ಲ.ಕಾಡಿನೊಳಗೆ ಹೋಗಿ‌ ಮಾಯವಾಗುತ್ತಾರೆ ಎಂಬ ಐತಿಹ್ಯವಿದೆ.

 

ಮೊದಲು ಹದಿನಾರು ಕೂಜಿಲು ದೈವಗಳಿಗೆ ಕೋಲ ಇತ್ತು.ಕೋಟೆ ತಪ್ಪಿಸಿಕೊಂಡು ಒಬ್ಬೊಬ್ಬರೇ ಹೊರ ಹೋಗಿ ಮಾಯವಾಗಿ ಇಬ್ಬರು ಮಾತ್ರ ಉಳಿದಿದ್ದಾರೆ ಹಾಗಾಗಿ ಈಗ ಎರಡು ಕೂಜಿಲು ದೈವಗಳಿಗೆ ಕೋಲ ಕಟ್ಟಿ ಆರಾಧಿಸುತ್ತಾರೆ.ತಮ್ಮ ಮನೆಯ ಹಿರಿಯರಲ್ಲೊಬ್ಬರು ಹೀಗೆ ಮಾಯಕ ಹೊಂದಿದ್ದಾರೆ ಎಂದು‌ ಭೂತ ಕಟ್ಟುವ ಹಿರಿಯ ಕಲಾವಿದರಾದ ಪೂವಪ್ಪರು ನನ್ನಲ್ಲಿ ಮಾತನಾಡುವಾಗ ಹೇಳಿದ್ದರು.

 

ಇದೇ ರೀತಿಯ ಅಚರಣೆ ಹಾಗೂ ನಂಬಿಕೆಗಳು ವರ್ಣಾರ ಪಂಜುರ್ಲಿ,ದುಗಲಾಯ,ಸುತ್ತು ಕೋಟೆ ಚಾಮುಂಡಿ ದೈವಗಳ ಬಗ್ಗೆಯೂ ಇದೆ 

 

ತಮ್ಮ  ಊರು ಹೊಸಬೆಟ್ಟಿನಲ್ಲಿ  ರಾವು ಗುಳಿಗ ಆವೇಶ ಬಂದು ಗೋಳಿ‌ಮರವನ್ನು ಏರಿ ಮಾಯವಾದ ಬಗ್ಗೆ ಹೊಸಬೆಟ್ಟಿನ ಗಣೇಶ್ ರಾಮ್ ಅವರು ತಿಳಿಸಿದ್ದಾರೆ ಮಾಯವಾದದ್ದಕ್ಕೆ ಸಾಕ್ಷಿಯಾಗಿ ಮರದ ಕೆಳಗೆ ದೈವದ ಗಗ್ಗರ ಸಿಕ್ಕಿತಂತೆ ,

 

ನಂತರ ಇಲ್ಲಿ ರಾವು ಗುಳಿಗನ ಕೋಲವನ್ನು ನಿಲ್ಲಿಸಿದರಂತೆ.ಆದರೆ ಪದೇ ಪದೇ ಆ ಊರಿನಲ್ಲಿ ಅಪಘಾತಗಳಾಗಲು ಶುರುವಾಗಿ ನಂತರ ಪುನಃ ಈ ದೈವವನ್ನು ಕಟ್ಟಿ ಕೋಲ ಕೊಟ್ಟು ಆರಾಧಿಸಲು ಶುರು ಮಾಡಿದ್ದಾರೆ 

ಅದೇ ರೀತಿ ಸುಳ್ಯ

ಸುಳ್ಯದ ದೇಂಗೋಡಿಯ ಜಾಲಾಟದಲ್ಲಿ ಬಹಳ ಉಗ್ರ ಸ್ವರೂಪದ ದೈವ ಜಂಗ ಬಂಟ  ಆವೇಶದಿಂದ ಓಡಿ ಮಾಯವಾಗುತ್ತದೆ ಬಿದಿರು ಮೆಳೆಯ ತುದಿಯಲ್ಲಿ ಗಗ್ಗರ ಸಿಲುಕಿಕೊಂಡು ಸಿಕ್ಕಿತೆಂಬ ಮಾಹಿತಿಯನ್ನು ಈ ಮನೆಯ ನಿತಿನ್ ಅವರು ತಿಳಿಸಿದ್ದಾರೆ,

ಇಲ್ಲಿ ಕಾಡಿನೊಳಗೆ ಹೋಗಿ ಮಾಯವಾದದ್ದು ಕೂಜಿಲು ದೈವ ಎಂದು ಕೂಡ ಹೇಳುತ್ತಾರೆ 

 

ಕೂಜಿಲು ದೈವ ಕಟ್ಟಿರುವವರಲ್ಲಿ ಒಬ್ಬಾತ ತಮ್ಮ ಮನೆಯಲ್ಲಿ ಮಾಯವಾದದ್ದೆಂಬ ಐತಿಹ್ಯ ಇರುವುದನ್ನು ದೀಪಕ ಮುರುಡಿತ್ತಾಯರು ತಿಳಿಸಿದ್ದಾರೆ.ಈ ಕಾರಣದಿಂದ ಅಲ್ಲಿ ಸುಮಾರು ಸಮಯ ಕೂಜಿಲು ದೈವಗಳ ಕೋಲವನ್ನು ನಿಲ್ಲಿಸಿದ್ದರಂತೆ 

ಇತ್ತೀಚೆಗೆ ಸುಳ್ಯದಲ್ಲಿ ಹನ್ನೊಂದು ಕೊರಗ ತನಿಯ ದೈವಗಳ ಕೋಲ ಆಗುವಾಗ ಹನ್ನೆರಡನೆಯ ಕೊರಗ ತನಿಯ ದೈವ ಕಾಣಿಸಿಕೊಂಡು ಅದೃಶ್ಯವಾಗಿದೆ ಸಾಕ್ಷಿಯಾಗಿ ಆ ದೈವ ಧರಿಸಿದ್ದ ಮುಟ್ಟಾಳೆ ಇತ್ತು ಎಂಬ  ಬಗ್ಗೆ ಕೇಳಿದ್ದೆ.

© ಡಾ‌ಲಕ್ಷ್ಮೀ ಜಿ ಪ್ರಸಾದ್ ಲೇ :,ಕರಾವಳಿಯ ಸಾವಿರದೊಂದು ದೈವಗಳು‌,ಮೊಬೈಲ್ : 9480516684 

ಇಲ್ಲೆಲ್ಲ‌ ಮಾಯವಾದವರು ಏನಾದರು ಎಂಬುದಕ್ಕೆ ಸ್ಪಷ್ಟ ಮಾಹಿತಿ ಸಿಗುವುದಿಲ್ಲ.ಆದರೆ ದೈವದ ಅನುಗ್ರಹಕ್ಕೆ ಪಾತ್ರರಾದ ಇವರುಗಳು ಅಯಾಯ ದೈವವದ ಸಾನ್ನಿಧ್ಯಕ್ಕೆ ಸೇರಿ ದೈವಗಳೇ ಆಗಿರುತ್ತಾರೆ 

ಯಾಕೆಂದರೆ  ಅನೇಕ ವ್ಯಕ್ತಿಗಳನ್ನು ದೈವಗಳು ಮಾಯ ಮಾಡಿ ತಮ್ಮ ಸೇರಿಗೆಗೆ ಸೇರಿಸಿಕೊಂಡ ವಿಚಾರ ಅನೇಕ ದೈವಗಳ ಕಥೆಯಲ್ಲಿದೆ.ನನಗೆ ಸಿಕ್ಕವನ್ನೆಲ್ಲ 1238 ದೈವಗಳ ಮಾಹಿತಿ ಇರುವ ನನ್ನ ಕರಾವಳಿಯ ಸಾವಿರದೊಂದು ದೈವಗಳು ಕೃತಿಯಲ್ಕಿ ದಾಖಲಿಸಿದ್ದೇನೆ ಕಾಂತಾರದಂತಹ ಸಾವಿರ ಸಿನೇಮಗಳಿಗೆ ಸಾಕಾಗುವಷ್ಟು ಕಥಾನಕಗಳು ಇದರಲ್ಲಿದೆ 

ಮಾಯ ಆಗುವುದರೆ ಇಲ್ಲವಾಗುವುದಲ್ಲ.ಹಾಗಾಗಿ ಮಾಯವಾದವರ ಪತ್ನಿ ವಿಧವೆ ಎಂದು ಪರಿಗಣಿಸಲ್ಪಡುವುದಿಲ್ಲ.ಆಕೆಗೆ ಅಪಾರ ಗೌರವ ಇರುತ್ತದೆ ಎಂಬ ಮಾಹಿತಿ ಹಿರಿಯರಾದ ದೈವ ಕಟ್ಟುವ ಕಲಾವಿದರಾದ ಪೂವಪ್ಪ ಅವರು ನೀಡಿದ್ದಾರೆ .ಹಾಗಾಗಿ ಮಾಯವಾಗಿ ದೈವತ್ವವ ಪಡೆದವರಿಗೆ ಇತರರಿಗೆ ಮಾಡುವಂತೆ ಅಂತ್ಯ ಸಂಸ್ಕಾರ ಮಾಡುವುದಲ್ಲ.ಅವರಿಗೆ ದೈವದ ರೀತಿಯಲ್ಲಿ ತಂಬಿಲ ಕೋಲ ಕೊಟ್ಟು ಆರಾಧಿಸುತ್ತಾರೆ ಮಾಯವಾದವರ ಮನೆ ಮಂದಿಗೆ ಅಶೌಚದ ಆಚರಣೆಯೂ ಇರುವುದಿಲ್ಲ. 

 

ಮಾಯಕ ಹೊಂದಿದವರ ಮನೆ ಮಂದಿ ಸಂಸಾರದ ಗತಿ ಏನು ಎಂಬುದೊಂದು ಪ್ರಶ್ನೆ ಅನೇಕರಿಗೆ ಕಾಡಿದೆ

ಈ ಭೂಮಿಯಲ್ಲಿ ಯಾರೂ ಶಾಶ್ವತರಲ್ಲ.ಎಲ್ಲರನ್ನೂ ಹೆತ್ತ ತಾಯಿಯಂತೆ ಪೊರೆಯುವ ದೈವ ದೇವರುಗಳು ಈ ಮನೆಮಂದಿಯನ್ನೂ ಸಲಹುವರು ಎಂದಷ್ಟೇ ಹೇಳಬಲ್ಲೆ.ಮಾಯಕ ಹೊಂದಿದವರು ಜನನ ಮರಣ ಚಕ್ರದಿಂದ/ ಭವ ಬಂಧನದಿಂದ ಪಾರಾಗಿ‌ ಶಿಷ್ಟ ಜನರ ರಕ್ಷಣೆ ಮಾಡುವ ಶಕ್ತಿಗಳಾಗಿ ನೆಲೆನಿಲ್ಲುತ್ತಾರೆ 

 

ಇನ್ನು ಕಾಂತಾರ ಸಿನೇಮದ ಕಥೆ ದಂತ ಕಥೆ ಎಂದಿದ್ದಾರೆ.ನಾನಿಲ್ಲಿ ಹೇಳಿದ ಕಥಾನಕಗಳೂ ಕೂಡ ದಂತ ಕಥೆಗಳೇ..ಇವು ಯಾವುದೋ ಕಾಲದಲ್ಲಿ ನಡೆದಿರಬಹುದಾದ ಘಟನೆಗಳು ಮೌಖಿಕವಾಗಿ ಹರಡಿದ ಕಥಾನಕಗಳು 

ಕಾಂತಾರದ ದಂತ ಕಥೆ ಯಾವುದೋ ಕಾಲ ಘಟ್ಟದಲ್ಲಿ ನಡೆದದ್ದೇ ಆಗಿದ್ದರೆ ಅಲ್ಲಿ ದೈವ ಕಟ್ಟಿದಾಗ ಮಾಯವಾಗುವ  ತಂದೆ ಮಗ  ಇಬ್ಬರೂ ಕೂಡ ಪಂಜುರ್ಲಿ ದೈವದ ಸಾನ್ನಿಧ್ಯಕ್ಕೆ ಸೇರಿದ ಸೇರಿಗೆ ದೈವಗಳೇ ಆಗಿರುತ್ತಾರೆ

ಹಾಗಾಗಿಯೇ ಅವರಿಬ್ಬರು ಮಾಯಕವಾದ ಸ್ಥಳದಲ್ಲಿ ತಂದೆ ಮಗನ  ಸಮಾಗಮವನ್ನು ತೋರಿಸಿರಬಹುದು.  ಗುರುವ ಸತ್ತಾಗ ಅಳುವ ಧ್ವನಿ ಪಂಜುರ್ಲಿ ದೈವದ ಸಾನ್ನಿಧ್ಯ ಸೇರಿ ಸೇರಿಗೆ ದೈವವಾದ  ಗುರುವನ ಚಿಕ್ಕಪ್ಪನದು ಎಂದು ಅರ್ಥೈಸಬಹುದು ಅಥವಾ ತನ್ನ ಅನನ್ಯ ಭಕ್ತ ಗುರುವನ ಸಾವಿಗೆ ದುಃಖಿಸಿದ ಪಂಜುರ್ಲಿಯದೆಂದೂ ಅರ್ಥೈಸಬಹುದು. ಇದು ಸಿನೇಮ ಹಾಗಾಗಿ ಈ ಭಾಗ ಕಲ್ಪನೆಯಾಗಿರಲೂ ಸಾಧ್ಯವಿದೆ 

ಹೀಗೆ ಮಾಯ ಎಂದರೆ ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ಅದೃಶ್ಯವಾಗಲು ಸಾಧ್ಯವೇ ? ಎಂಬುದೊಂದು ಪ್ರಶ್ನೆ..

 

falling to 5 th dimention ಎಂದರೆ ಜನರು ನೋಡುತ್ತಿದ್ದಂತೆಯೇ ವ್ಯಕ್ತಿಗಳು ಅದೃಶ್ಯವಾದ ಸುಮಾರು 163 ಪ್ರಕರಣಗಳು ದಾಖಲಾಗಿವೆ.ಇವು‌ ಮೆಟ ಫಿಸಿಕ್ಸ್ ನಲ್ಲಿ ಬರುತ್ತವೆ.ಉದ್ದ ಅಗಲ ಎತ್ತರ ಕಾಲ ಎಂಬ ನಾಲ್ಕು dimension ನಲ್ಲಿ ನಾವು ಬದುಕುತ್ತಿದ್ದೇವೆ.ಇದನ್ನು ಮೀರಿದ ಐದನೆಯ dimension ಗೆ ಹೋದ ವ್ಯಕ್ತಿ ವಸ್ತು ಅದೃಶ್ಯವಾಗುತ್ತದೆ ಎಂಬ ವಿಚಾರವನ್ನು ಉಜಿರೆಯ ಚಲಿಸುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದ ಫಿಸಿಕ್ಸ್ ಪ್ರೊಫೆಸರ್ ಕೇಶವರು ನಾವು ವಿದ್ಯಾರ್ಥಿಗಳಾಗಿದ್ದಾಗ ಹೇಳಿದ್ದರು

 

ಅಂತೆಯೇ ಕಪ್ಪು ರಂಧ್ರ/ black holes ಗಳು ಇವೆಯಂತೆ ಇವುಗಳನ್ನು ಪ್ರವೇಶ ಮಾಡಿದ ಬೆಳಕು ಕೂಡ ಹೊರಬರುವುದಿಲ್ಲ‌ ಅಷ್ಟು ಹೆಚ್ಚಿನ ಗುರುತ್ವಾಕರ್ಷಣ ಬಲ ಇರುತ್ತದೆಯಂತೆ

ಇದಲ್ಲದೆ ಬರ್ಮುಡಾ ಟ್ರ್ತಾಂಗಲ್ ನ ಕುರಿತಾಗಿ ಅನೇಕ ಐತಿಹ್ಯಗಳಿವೆ.ಈ ಪ್ರದೇಶವನ್ನು ಸಮೀಪಿಸಿದ ಹಡಗು ವಿಮಾನ ಎಲ್ಲವೂ ಅದೃಶ್ಯವಾಗಿವೆ.ಇವನ್ನು ಪತ್ತೆ ಮಾಡಲು ಹೋದವರೂ ನಾಪತ್ತೆಯಾಗಿದ್ದಾರಂತೆ

 

ಅಂತೆಯೇ ದೈವ ಕಟ್ಟಿದ ಕಲಾವಿದರಲ್ಲೂ ವಿಶೇಷ ಶಕ್ತಿಯ ಅವೇಶವಾಗಿ / ಶಕ್ತಿ ಉತ್ತೇಜನಗೊಂಡು  ಇಂತಹ ಪವಾಡಗಳು ನಡೆಯಬಾರದೆಂದೇನೂ ಇಲ್ಲ.

ನಮಗೆ ಗೊತ್ತಿಲ್ಲದೇ ಇರುವ ಅನೇಕ ವಿಚಾರಗಳಿವೆ.ಗೊತ್ತಿಲ್ಲದೇ ಇರುವುದನ್ನು ಗೊತ್ತಿಲ್ಕ ಎನ್ನಬಹುದೇ ಹೊರತು ಇಲ್ಲವೇ ಇಲ್ಲ ಎನ್ನಲಾಗದು 

ಕಳೆದ ಇಪ್ಪತ್ತೊಂದು ವರ್ಷಗಳ ಕ್ಷೇತ್ರ ಕಾರ್ಯ ಅಧ್ಯಯನದಲ್ಲಿ ಇಂತಹ ಅನೇಕ ಕೌತುಕದ ಅಧ್ಯಯನ ಯೋಗ್ಯ ವಿಚಾರಗಳಿವೆ.ವಿಶಿಷ್ಟ ಕಥಾನಕಗಳು ಸಿಕ್ಕಿವೆ

ಇನ್ನು ತುಳುನಾಡಿನಲ್ಲಿ ಎಷ್ಟು ದೈವಗಳಿಗೆ ಆರಾಧನೆ ಇದೆ ಎಂಬುದೊಂದು ಪ್ರಶ್ನೆ.ಇದಕ್ಕೆ ಇದಮಿತ್ಥಂ ಎಂದು ಉತ್ತರಿಸುವುದು ಕಷ್ಟ.ತುಳು ಸಂಸ್ಕೃತಿ‌ ಕುರಿತು ಅಧ್ಯಯನ‌ಮಾಡಿದ ಡಾ

ಬಿ ಎ ವಿವೇಕ ರೈಗಳು 260 ದೈವಗಳ ಹೆಸರನ್ನು ಸಂಗ್ರಹಿಸಿ‌ಅವರ ಪಿಎಚ್ ಡಿ ನಿಬಂಧ ತುಳು ಜನಪದ ಸಾಹಿತ್ಯ ದಲ್ಲಿ ನೀಡಿದ್ದಾರೆ.ಇದನ್ನು ಪರಿಷ್ಕರಿಸಿ ಡಾ.ಚಿನ್ನಪ್ಪ ಗೌಡರು ಅವರ ಪಿಎಚ್ ಡಿ ನಿಬಂಧ ಭೂತಾರಾಧನೆ- ಒಂದು ಜಾನಪದೀಯ ಅಧ್ಯಯನದಲ್ಲಿ ಮುನ್ನೂರು ದೈವಗಳ ಹೆಸರಿನ ಪಟ್ಟಿ ನೀಡಿದ್ದಾರೆ.ರಘುನಾಥ ವರ್ಕಾಡಿಯವರು 404 ದೈವಗಳ ಹೆಸರನ್ನು ಸಂಗ್ರಹಿಸಿದ್ದಾರೆ ಅದರಲ್ಲಿ ಡಾ.ಚಿನ್ನಪ್ಪ ಗೌಡರು ಸಂಗ್ರಹಿಸಿದ ಹೆಸರುಗಳು ಸೇರಿದೆ

ಈ 404 ಸೇರಿದಂತೆ ನನಗೆ 2330 ದೈವಗಳ ಹೆಸರುಗಳು ಸಿಕ್ಕಿವೆ ,1238 ದೈವಗಳ ಮಾಹಿತಿಯೂ ಸಿಕ್ಕಿದ್ದು  ಕರಾವಳಿಯ ಸಾವಿರದೊಂದು ದೈವಗಳು ಕೃತಿಯಲ್ಲಿ ನನ್ನ ಅರಿವಿಗೆ ನಿಲುಕಿದಂತೆ ನೀಡಿದ್ದೇನೆ 

ಇದು. ಅಂತಿಮವಲ್ಲ.ಈವತ್ತಷ್ಟೇ ಸಂಜೀವ ನೆರಿಯ ಅವರು ಕಲ್ಲ ಮುದರ ಎಂಬ ಎರಡು ದೈವಗಳ ಐತಿಹ್ಯಗಳನ್ನು ತಿಳಿಸಿದ್ದು ಈ ಎರಡು ದೈವಗಳ. ಹೆಸರು ಕೂಡ ಈವತ್ತಷ್ಟೇ ಸಿಕ್ಕಿದೆ.ಈ ಪುಸ್ತಕ ಪ್ರಕಟಣೆಯ ನಂತರ ಕುಂಜಾರತಜ್ಜಿ ಭಟ್ಯೆದಿ ಕರ್ತಜ್ಜ,ಸಂಪಿಗೆತ್ತಾಯ ಸೇರಿದಂತೆ ಹದಿನೈದು ದೈವಗಳ ಮಾಹಿತಿ ಸಿಕ್ಕಿದೆ ,ಏಕಲವ್ಯ ಜುಮಾದಿ ಹನುಮಾನ್ ಪಂಜುರ್ಲಿ  ಕೆಮ್ಮಟೆ ಪಂಜುರ್ಲಿ ಮೊದಲಾದ ಹೆಸರುಗಳನ್ನು ಇತ್ತೀಚೆಗೆ ಕದ್ರಿ ನವನೀತ ಶೆಟ್ಟಿಯವರು ನೀಡಿದ್ದಾರೆ

ಹಾಗಾಗಿ ಇಲ್ಲಿ ಎಷ್ಟು ದೈವಗಳಿಗೆ ಆರಾಧನೆ ಇದೆ ಎಂದು ಇದಮಿತ್ಥಂ ಹೇಳಲು ಸಾಧ್ಯವಿಲ್ಲ.© ಡಾ‌ಲಕ್ಷ್ಮೀ ಜಿ ಪ್ರಸಾದ್

ನನಗೆ ಸಿಕ್ಕ ಮಾಹಿತಿಯನ್ನು ನನ್ನ ಜ್ಞಾನದ ಪರಿಧಿಯೊಳಗೆ ಸಂಶೋಧನಾ  ಅಧ್ಯಯನದ ವಿಧಾನಗಳ ತಳಹದಿಯಲ್ಲಿ ಸಂಕ್ಷಿಪ್ತವಾಗಿ ವಿಶ್ಲೇಷಣೆ ಮಾಡಿದ್ದೇನೆ‌.ಇದರಲ್ಲಿನ ದೈವಗಳ ಕಥೆಗಳು ನನ್ನ ಕಲ್ಪನೆಯ  ಸೃಷ್ಟಿಯಲ್ಲ.

ಪ್ರಚಲಿತ ಪಾಡ್ದನ ಐತಿಹ್ಯಗಳ ಮೂಲಕ ವಕ್ತೃಗಳ ಮೂಲಕ ಸಿಕ್ಕ ಮಾಹಿತಿಗಳು ಇವು.ಸಂಗ್ರಹ ಮತ್ತು ವಿಶ್ಲೇಷಣೆ ಮಾತ್ರ ನನ್ನದು ಇದರಲ್ಲಿರುವ ಮಾಹಿತಿಯೇ ಅಂತಿಮವಲ್ಲ.ಒಂದು ದೈವಕ್ಕೆ ಸಂಬಂಧಿಸಿದಂತೆ ಅನೇಕ ಪಾಡ್ದನ ಐತಿಹ್ಯಗಳಿರುತ್ತವೆ‌.ಇವುಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ..ನನಗೆ ಸಿಕ್ಕಿದ್ದನ್ನು ಒಟ್ಟು ಮಾಡಿ ಅಧ್ಯಯನದ ತಳಹದಿಯಲ್ಲಿ ವಿಶ್ಲೇಷಿಸಿ ಬರೆದಿರುವೆ‌.ಇದಕ್ಕೆ ಅನೇಕರು ಸಹಕಾರ ನೀಡಿದ್ದಾರೆ 

ಇದು ಅನೇಕ  ವಿದ್ವಾಂಸರ ಮೆಚ್ಚುಗೆಯನ್ನು ಕೂಡಾ ಪಡೆದಿದೆ.

 ತಿರುಗಿ ನೋಡಿದಾಗ ನನಗೇ ಇದೆಲ್ಲವನ್ನು ನಾನು ಬರೆದೆನೇ ? ಎಂದು ಸೋಜಿಗವಾಗುತ್ತದೆ.ಓರ್ವ ಸಾಮಾನ್ಯ ಉಪನ್ಯಾಸಕಿಯಾದ ನನಗೆ ಇದು ಅಸಾಧ್ಯದ ವಿಚಾರ.ದೈವ ದೇವರುಗಳೇ ಕೈಹಿಡಿದು ಬರೆಸಿದ್ದಾರೆ ಎಂದು ನನಗನಿಸುತ್ತದೆ

ನೀನೊಲಿದರೆ ಕೊರಡು ಕೊನರುವುದಯ್ಯ ಎಂದು ಶರಣ ಶ್ರೇಷ್ಠರಾದ ಬಸವಣ್ಣನವರು  ಹೇಳಿದಂತೆ ದೈವ ಕಾರುಣ್ಯದಿಂದಲೇ ಇದು ಸಾಧ್ಯವಾಗಿದೆ ಎಂದಷ್ಟೇ ಹೇಳಬಲ್ಲೆ

 

ಆಧಾರ : ಕರಾವಳಿಯ ಸಾವಿರದೊಂದು ದೈವಗಳು 

ಡಾ.ಲಕ್ಷ್ಮೀ ಜಿ ಪ್ರಸಾದ್ 

ಮೊಬೈಲ್: 9480516684