Tuesday 20 March 2018

ದೊಡ್ಡವರ ದಾರಿ: 51ಉದಾರ ಮನಸಿನ ಮುಕುಂದರಾಜ್ ಲಕ್ಕೇನಹಳ್ಳಿ



ನನಗೆ ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ, ಅಧ್ಯಯನ ಸಂದರ್ಭದಲ್ಲಿ ಅನೇಕರು ಸಹಾಯ ಮಾಡಿದ್ದಾರೆ .ಬೆಂಬಲ ನೀಡಿದ್ದಾರೆ.ಹಾಗೆಯೇ ನನಗೆ ನಿರಂತರ ಬೆಂಬಲ ನೀಡಿದವರು ಪ್ರಸ್ತುತ  ಬೆಂಗಳೂರಿನ ಅತ್ತಿಗುಪ್ಪೆ ವಿಜಯನಗರ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿರುವ ಮುಕುಂದ ರಾಜ್ ಅವರು‌
ಅವರು ಬೆಂಬಲ ನೀಡಿದ್ದಾರೆ ಎಂಬ ಏಕೈಕ  ಕಾರಣಕ್ಕೆ ನಾನಿಲ್ಲಿ ಅವರ ಬಗ್ಗೆ ಬರೆಯಹೊರಟಿದ್ದಲ್ಲ.
ಸ್ವತಃ ನಾಟಕಕಾರರೂ ಸಾಹಿತಿಯೂ,ಚಲನ ಚಿತ್ರ ನಿರ್ಮಾಪಕರೂ  ಆಗಿರುವ ಅವರಿಗೆ ಬರವಣಿಗೆ ಬಗ್ಗೆ ಅತೀವ ಒಲವಿದೆ‌.ಅಂತೆಯೇ ಬರೆಯುವವರ ಬಗ್ಗೆಯೂ ಅಪಾರ ಅಭಿಮಾನವಿದೆ.
ನನಗೆ ಒಂದಿಷ್ಟು ಗೀಚುವ ಅಭ್ಯಾಸವಿದ್ದು ಅದನ್ನು ಬ್ಲಾಗ್‌ನಲ್ಲಿ ಬರೆದು ಫೇಸ್ ಬುಕ್ ನಲ್ಲಿ ಹಾಕುತ್ತಾ ಇರುತ್ತೇನೆ.ದೊಡ್ಡ ಅಧ್ಯಯನ ಏನೂ ಅಲ್ಲ ನನ್ನದು.ಆದರೂ ತಿರುಪತಿ ವೆಂಕಟೇಶ್ವರ ವಿಶ್ವವಿದ್ಯಾಲಯ,ದ್ರಾವಿಡ ವಿಶ್ವವಿದ್ಯಾಲಯ, ಭಾರತೀಯಾರ್ ಯುನಿವರ್ಸಿಟಿ ಸೇರಿದಂತೆ ಅನೇಕ ಯುನಿವರ್ಸಿಟಿಗಳಳ್ಳಿ ಸಂಶೋಧನಾ ಪ್ರಬಂಧ ಮಂಡನೆ ಮಾಡುವ ಅವಕಾಶ ಸಿಗುತ್ತದೆ.
ಇಲ್ಲೆಲ್ಲಪದವಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುವ ಪ್ರಾಧ್ಯಾಪಕರಿಗೆ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡನೆ ಮಾತ್ರವಲ್ಲ ಹಾಜರಾದವರಿಗೆ ಕೂಡ ಅನ್ಯ ಕಾರ್ಯ ನಿಮಿತ್ತ ರಜೆ ಸೌಲಭ್ಯ ದೊರೆಯುತ್ತದೆ.
ಆದರೆ ನಾನು ಪದವಿ ಪೂರ್ವ ಕಾಲೇಜಿನಲ್ಲಿ ಕೆಲಸ ಮಾಡುವ ಕಾರಣ ಪ್ರಬಂಧ ಮಂಡನೆ ಮಾಡಲು ಕೂಡ ನನಗೆ ಈ ಸೌಲಭ್ಯ ದೊರೆಯುವುದಿಲ್ಲ.
ಆದರೂ ಕೆಪಿಎಸ್ ಸಿ ನಿಯಮಾವಳಿ ಅನುಬಂಧ ಎರಡರಲ್ಲಿ ಇಂತಹ ಸಂದರ್ಭಗಳಲ್ಲಿ ವಿಶೇಷ ರಜೆ ನೀಡಲು ಅವಕಾಶವಿದೆ.ಆದರೆ ಪ್ರಸ್ತುತ ನನಗಿನ್ನೂ ಈ ಸೌಲಭ್ಯ ದೊರೆತಿಲ್ಲ.
ಇತ್ತೀಚೆಗೆ ನಮ್ಮ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮುಕುಂದ್ ರಾಜ್ ಅವರು ಆಗಮಿಸಿದ್ದರು.ಆಗ ಭಾಷಣದ ನಡುವೆ ಸಾಹಿತ್ಯ ಸಂಶೋಧನಾ ವಿಚಾರಗಳಲ್ಲಿ ಎಲ್ಲವನ್ನೂ ನಿಯಮವನ್ನು ನೋಡಲಾಗುವುದಿಲ್ಲ‌.ಒಂದಿನಿತು ಹೊಂದಾಣಿಕೆ ಮಾಡಿ ಬೆಂಬಲ ಕೊಡಬೇಕು.ಬರಹಗಾರರಿಗೆ ಸಾವಿಲ್ಲ‌ತನ್ನ ಸಾವಿನ ನಂತರವೂ ಬರಹಗಳ ಮೂಲಕ ಬರಹಗಾರ ಬದುಕಿಯೇ ಇರುತ್ತಾರೆ‌ಆಧ್ದರಿಂದ ಬರಹಗಾರರಿಗೆ ಸಮಾಜದಲ್ಲಿ ವಿಶೇಷ ಮನ್ನಣೆ ಎಂದು ಹೇಳಿದ್ದರು.
ಇದಾಗಿ ಕೆಲದಿನಗಳ ನಂತರ ನಾನು ಅವರಲ್ಲಿ ಮಾತನಾಡುವಾಗ ಅವರು ಮಾತಿನ ನಡುವೆ ಒಂದು ವಿಚಾರ ತಿಳಿಸಿದರು.ಹಿಂದೆ ಶಿವರುದ್ರಪ್ಪ ನವರು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದಾಗ ಅಲ್ಲಿ ಉಪನ್ಯಾಸಕರಾಗಿದ್ದ ಕಿ ರಂ ನಾಗರಾಜು ಅವರನ್ನು ಎಂ ಇ ಎಸ್ ಕಾಲೇಜಿಗೆ ಯಾವುದೋ ಕಾರ್ಯಕ್ರಮಕ್ಕೆ ಉಪನ್ಯಾಸ ನೀಡಲು ಆಹ್ವಾನಿಸಿದ್ದರು.ಈ ವಿಚಾರ ಜಿ ಎಸ್   ಶಿವರುದ್ರಪ್ಪ ಅವರಿಗೆ ಹೋಗೋ ತಿಳಿಯಿತು.
ಕಿ ರಂ ನಾಗರಾಜ್ ಅವರು ಎಂಇ ಎಸ್ ಕಾಲೇಜಿನ ಕಾರ್ಯಕ್ರಮಕ್ಕೆ ಹೋಗುವ ಸಲುವಾಗಿ ರಜೆ ಅರ್ಜಿ ಬರೆದುಕೊಟ್ಟಾಗ  ಜಿ ಎಸ್  ಶಿವರುದ್ರಪ್ಪನವರು ನೀವು ಇಲ್ಲಿ ಮಾಡುವುದು ಕನ್ನಡ ಪಾಠವೇ ,ಅಲ್ಲಿ‌ಮಾಡುವುದೂ ಕೂಡ ಅದೇ,ರಜೆ ಹಾಕುವುದು ಬೇಡ ಸುಮ್ಮನೆ ಹೋಗಿ‌ಬನ್ನಿ ಎಂದು ಅವರಿಗೆ ಹೋಗಲು ಅವಕಾಶ ಮಾಡಕೊಟ್ಟರಂತೆ.
 ಇದನ್ನು ಹೇಳುತ್ತಾ ನೀವೇನಾದರೂ ನಮ್ಮ ಕಾಲೇಜಿನಲ್ಲಿ ಇರುತ್ತದ್ದರೆ ನಿಮಗೆ ಅದೇನು ಬರೆಯಲಿಕ್ಕಿದೆ ಅದನ್ನ ಬರ್ಕೋಮ್ಮ ಅಂತಿದ್ದೆ   ನಿಮ್ಮಬದಲು ಕೆಲಸ ನಾನು ಪಾಠ  ಮಾಡುತ್ತಿದ್ದೆ ಎಂದು ಹೇಳಿದರು.
ವಾಸ್ತವದಲ್ಲಿ ಇದು ಸಾಧ್ಯವೋ ಅಸಾಧ್ಯವೋ ಅದು ಬೇರೆ ಮಾತು‌.ಆದರೆ ಬರವಣಿಗೆ ಮತ್ತು ಬರಹಗಾರರ ಬಗ್ಗೆ ಅವರಿಗಿರುರುವ ಅಭಿಮಾನ ಮಾತ್ರ ವರ್ಣನಾತೀತವಾದುದು ,ಅದಕ್ಕೆ ಅವರು ದೊಡ್ಡವರು.ಏನಂತೀರಿ?

No comments:

Post a Comment