Saturday, 17 May 2025

ದೊಡ್ಡವರ ದಾರಿ : 75 ಎಲ್ಲ ಇದ್ದೂ ಇರದುದರ ಕುರಿತು ಕೊರಗುವವರಿಗೆ ದಾರಿ ದೀಪ: ನಮ್ಮ ಹೆಮ್ಮೆಯ ವಿಶಿಷ್ಟ ಓದುಗ ಮಿತ್ರರಾದ ಡಿ ನಿತ್ಯಾನಂದ

 ದೊಡ್ಡವರ ದಾರಿ : 75 

ಎಲ್ಲ ಇದ್ದೂ ಇರದುದರ ಕುರಿತು ಕೊರಗುವವರಿಗೆ ದಾರಿ ದೀಪ: 

ನಮ್ಮ ಹೆಮ್ಮೆಯ ವಿಶಿಷ್ಟ ಓದುಗ ಮಿತ್ರರಾದ

ಡಿ ನಿತ್ಯಾನಂದ 



ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ 


ನಿತ್ಯಾನಂದ ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಯುವಕ..ಅದರಲ್ಲೇನು ವಿಶೇಷ..ಸ್ನಾತಕೋತ್ತರ ಪದವಿ ಪಡೆದ  ನೂರಾರು ಮಂದಿ ಇದ್ದಾರೆ ಎನ್ನುವಿರಾ ? 

ಹಾಗಾದರೆ ನಿತ್ಯಾನಂದನ ವಿಶೇಷತೆ ಬಗ್ಗೆ ತಿಳಿಯೋಣ 

ಚಿದಾನಂದ ಹುಟ್ಟುವಾಗಲೇ ದೈಹಿಕ ನ್ಯೂನತೆಯನ್ನು ಹೊಂದಿದ ತರುಣ 

ಕೈಕಾಲುಗಳಲ್ಲಿ ಬಲವಿಲ್ಲ..ಬಾಯಿ ದವಡೆಗಳೂ ದುರ್ಬಲ..ಮಾತೂ ಕೂಡ ತೀರ ಅಸ್ಪಷ್ಟ ..

ಊಟ ತಿಂಡಿಯಿಂದ ಹಿಡಿದು ಎಲ್ಲದಕ್ಕೂ ತಾಯಿಯ ಆಶ್ರಯ ಬೇಕೇ ಬೇಕು...ಆದರೆ ನ್ಯೂನತೆ ಇರುವುದು ದೇಹಕ್ಕೆ ಮಾತ್ರ ‌‌‌..ಮನಸಿಗಲ್ಲ ಎಂಬುದನ್ನು ಪ್ರೂವ್ ಮಾಡಿದ ಯುವಕ 

ದೈಹಿಕ ನ್ಯೂನತೆಯನ್ನು ಮೆಟ್ಟಿ ನಿಂತು ಓದಿ ಸಮಾಜ ಶಾಸ್ತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಇವರಿಗೆ ತುಂಬಾ ಓದುವ ಹವ್ಯಾಸವಿದೆ ನನ್ನ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕವನ್ನು ಓದಲು ಬಯಸಿ ತನ್ನ ತಾಯಿ ಪರಿಮಳಾ ಅವರ ಮೂಲಕ ನನ್ನನ್ನು ಸಂಪರ್ಕಿಸಿದರು.

ಅವರ ಆಸಕ್ತಿ ನೋಡಿ ನಾನು ಒಂದು ಪ್ರತಿ ಕಳುಹಿಸಿದೆ ..ಪುಸ್ತಕ ತಲುಪಿದಾಗ ಅವರಿಗಾದ ಖುಷಿ ಅಪರಿಮಿತ ಅದು ವರ್ಣನಾತೀತ..ನನ್ನ ಎರಡು ದಶಕಗಳ ಅಧ್ಯಯನ ಸಾರ್ಥಕ ಅನಿಸುದು ಇಂತಹ ಕ್ಷಣಗಳಲ್ಲಿಯೇ..

ಎಲ್ಲ ಇದ್ದೂ ಇರದುದರ ಕುರಿತು  ಕೊರಗುವ ನಮಗೆ ದಾರಿದೀಪವಾಗಿದ್ದಾರೆ ನಿತ್ಯಾನಂದ .

ಮಗನ ನಗುವಿಗಾಗಿಯೇ ಬದುಕಿರುವ ತಾಯಿ ಪರಿಮಳಾ ಅವರು ಕೂಡ ಶ್ಲಾಘ್ಯರು 

ನಿತ್ಯಾನಂದರ ಜೀವನೋತ್ಸಾಹದ ಬಗ್ಗೆ ತಿಳಿಯುವ ಅಸಕ್ತಿ ಇರುವವರಿಗಾಗಿ ನಿತ್ಯಾನಂದನ ಬಗ್ಗೆ  ಜಿ ಎಂ ಶಿರಹಟ್ಟಿಯವರ ಪ್ರಕಟಿತ ಬರಹವನ್ನು ಜೊತೆಗೆ ಇರಿಸಿದ್ದೇನೆ


ನೆನಪಿನ ಹಳ್ಳಿಯ ನೆಲದಲ್ಲಿ...


* ಜಿ. ಎಂ. ಶಿರಹಟ್ಟಿ


ತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತರಾಗಿದ್ದ ಅ ಸಮಾಜಶಾಸ್ತ್ರಜ್ಞ, ಮಾ , ಮಾನವಶಾಸ್ತ್ರದ ಅಧ್ವರ್ಯು , 20. 2. 2 (16.11.1916-30.11.1999) ಅವರ ಪ್ರಸಿದ್ಧ ಕೃತಿ 'ದಿ ರಿಮೆಂಬರ್ಡ್ ವಿಲೇಜ್' ('ನೆನಪಿನ ಹಳ್ಳಿ'). ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ, ಮಿದುಳಿನ ಹಾನಿಯೆಂದಾಗಿ ಯಿಂದಾಗಿ ಕೈಕಾಲುಗಳು ನಿಷ್ಕ್ರಿಯವಾಗಿರುವ 33 ವರ್ಷದ ಯುವಕನೊಬ್ಬ ಇದನ್ನು ಓದೆ, ಆ ಹಳ್ಳಿಯನ್ನು (ಆಗಿನ ರಾಮಪುರ – ಈಗಿನ ಕೊಡಗಹಳ್ಳಿ) ಒಮ್ಮೆ ನೋಡಲೇಬೇಕೆಂದು ಉತ್ಕಟವಾಗಿ ಅಪೇಕ್ಷೆಪಟ್ಟ, ಈ ಆಸಕ್ತಿಯು ಹೆಚ್ಚಾಗಿ 'ದಿ ರಿಮೆಂಬರ್ಡ್ ವಿಲೇಜ್' ಪುಸ್ತಕದ ಕನ್ನಡ ಅನುವಾದ 'ನೆನಪಿನ ಹಳ್ಳಿ'ಯನ್ನು ಪಡೆದು ಓದುತ್ತ ಓದುತ್ತ ಆತ ಅಪೂರ್ವ ಆನಂದ ಪಡೆದ. ಪರಾವಲಂಬಿಯಾಗಿರುವ ಈ ಯುವಕ ಅಮ್ಮನ ಆಸರೆಯಿಂದ 'ನೆನಪಿನ ಹಳ್ಳಿ'ಗೆ ಹೋಗಿ ಅಲೆದಾಡಿ ಶ್ರೀನಿವಾಸ ಅವರ ನೆನಪಿನ ಸ್ಥಳಗಳನ್ನೆಲ್ಲ ನೋಡಿದ. ಅಮ್ಮನಿಗೆ ಹೇಳಿ ಬರೆಸಿದ ಆತನ ಅನುಭವ ಕಥನ.


ಇದನ್ನು ಓದುವ ಮುಂಚೆ ಈ ಯುವಕನ ಬಗ್ಗೆ ತಿಳಿದುಕೊಳ್ಳಬೇಕು. ಡಿ. ನಿತ್ಯಾನಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರ. ಮಿದುಳಿನ ಹಾನಿಯಿಂದಾಗಿ ಕೈಕಾಲುಗಳು ನಿಷ್ಕ್ರಿಯವಾಗಿವೆ. ಮಾತನಾಡಲು ಬರುವುದಿಲ್ಲ. ಬರೆಯುವಾಗಲೂ ಬೆರಳುಗಳು ಬೇಗ ಸಹಕಾರ ನೀಡುವುದಿಲ್ಲ. ಏನು ಬೇಕಾದರೂ ಬರವಣಿಗೆಯ ಮೂಲಕವೇ ಎಲ್ಲರ ಜೊತೆ (ಅದೂ ಅಸ್ಪಷ್ಟವಾಗಿ) ಮಾತನಾಡುತ್ತಾನೆ. ಅವನೇ ಬರೆದು ಹೇಳಿದ್ದನ್ನು ಆತನ ತಾಯಿ ಪರಿಮಳಾ ಹೇಳುತ್ತಾರೆ; 'ನನ್ನ ದೈಹಿಕ ಸ್ಥಿತಿ ಪರವಾಗಿಲ್ಲ. ಭಾವನೆಗಳಿವೆ, ಕನಸುಗಳಿವೆ. ಅಮ್ಮ, ಅಣ್ಣ, ಅಪ್ಪ, ಅಜ್ಜಿ, ಓಹ್! ಎಷ್ಟೊಂದು ಪ್ರೀತಿ ನನ್ನನ್ನು ಸುತ್ತುವರಿದಿದೆ. ಸದ್ಯ ನನಗೆ ಕಿವಿ ಚೆನ್ನಾಗಿ ಕೇಳಿಸುತ್ತಿದೆ.'


ಶ್ರೀನಿವಾಸ ಅವರು ಇದ್ದ ಮನೆಯ ಎದುರು


ದೈಹಿಕವಾಗಿ ನಿಷ್ಕ್ರಿಯನಾಗಿರುವ ಯುವಕನೊಬ್ಬ ಪ್ರಸಿದ್ಧ ಹಳ್ಳಿಯೊಂದನ್ನು ತಿರುಗಾಡಿ ನೋಡಿದಾಗ ಅದೊಂದು ಬದಲಾಗುತ್ತಿರುವ ಗ್ರಾಮವಾಗಿತ್ತು. ನೋಡಿದ ಗ್ರಾಮಕ್ಕಿಂತ ಪುಸ್ತಕದಲ್ಲಿ ಓದಿದ, ತನ್ನ ಸ್ಮೃತಿಪಟಲದಲ್ಲಿದ್ದ ಹಳ್ಳಿಯನ್ನೇ ಆ ಯುವಕ ಮತ್ತೆಮತ್ತೆ ನೆನಪಿಸಿಕೊಳ್ಳತೊಡಗಿದ.


The Remembered Village


ತನ್ನ 75 ತಾಯಿಯನ್ನೇ ಅವಲಂದಸಿದ್ದಾನ. ಆರ್. ಶಾಮಭಟ್ಟ ಅವರು ಅನುವಾದಿಸಿದ 'ನೆನಪಿನ ಹಳ್ಳಿ' ಪುಸ್ತಕ ನಿತ್ಯಾನಂದನ ಕೈಸೇರಿತು. ಮುಂದೊಂದು ದಿನ ಆತ ಅಣ್ಣ-ಅಮ್ಮನ ಸಹಾಯದಿಂದ ರಾಮಪುರಕ್ಕೆ ಕಾಲಿಟ್ಟ. ಒಂದೆರಡು ವಾರಗಳ ಮೊದಲು ಆತನ ಸಮಾಜಶಾಸ್ತ್ರದ ವಿದ್ಯಾರ್ಥಿ ಗೆಳೆಯರು ಶ್ರೀನಿವಾಸರ ರಾಮಪುರಕ್ಕೆ ಈಗಿರುವ ರಾಮಪುರಕ್ಕೂ ಆಗಿರುವ ಎಲ್ಲ ಬದಲಾವಣೆಗಳ ಅಧ್ಯಯನ ಮಾಡಲು ಸಲಹೆ ನೀಡಿದ್ದರು.


ರಾಮಪುರ ತಲುಪಿದಾಗ ನಿತ್ಯಾನಂದ ಹಾಗೂ ಅವನ ತಾಯಿ, ಅಣ್ಣನವರನ್ನು ಸ್ವಾಗತಿಸಿದವರು ಊರಿನ ಹಿರಿಯರಾದ ಜವರೇಗೌಡರು. ಆಗಿನ ರಾಮಪುರವೇ ಈಗ ಮಾರ್ಪಾಡಾದ ಕೊಡಗಹಳ್ಳಿ


ಎಂಬುದು ನಿತ್ಯಾನಂದನಿಗೆ ಮನವರಿಕೆಯಾಯಿತು. ಸಮಾಜಶಾಸ್ತ್ರ ವಿದ್ಯಾರ್ಥಿಯಾಗಿದ್ದುದರಿಂದ ಈ ಸಾಮಾಜಿಕ ಬದಲಾವಣೆಯ ಚಿತ್ರಣವನ್ನು ತಿಳಿಯಲು ಬಹಳ ಹೊತ್ತು ಹಿಡಿಯಲಿಲ್ಲ. ಕುತೂಹಲ ತಣಿಸುವ ಉತ್ತರ ಶ್ರೀನಿವಾಸರ ಹಳ್ಳಿಯಲ್ಲಿ ದೊರೆಯತೊಡಗಿತು. ಶ್ರೀನಿವಾಸ ಅವರು ವಾಸಿ ವಾಸಿಸುತ್ತಿದ್ದ ಮನೆ, ಅವರು ಉಪಯೋಗಿಸುತ್ತಿದ್ದ ಕೊಠಡಿ, ಅವರ ಪುಸ್ತಕದಲ್ಲಿರುವ ಕುಳ್ಳೇಗೌಡರ ಮನೆ, ದೇವಾಲಯ, ಹಳೆಯ ಕಾಲದ ಮನೆ - ಬಾಗಿಲುಗಳು - ಎಲ್ಲ ಕಡೆ ಅಲೆದಾಡಿ ನೋಡಿ ನಿತ್ಯಾನಂದ ಆನಂದಿಸಿದ. ಜವರೇಗೌಡರ ತಂದೆ, ಅವರ ಅಣ್ಣ ರಾಮೇಗೌಡರ ಜೊತೆಗೆ ಶ್ರೀನಿವಾಸರ ಒಡನಾಟ, ಹಳ್ಳಿಯ ಆಚಾರ-ವಿಚಾರ, ಬದುಕಿನ ಚಿತ್ರ ಇವೆಲ್ಲವುಗಳ ಮಾಹಿತಿಯನ್ನು ಜವರೇಗೌಡರಿಂದ ಪಡೆದ. ನಿತ್ಯಾನಂದನ ಚೈತನ್ಯ ಕಂಡು ಗೌಡರು ಬೆರಗಾದರು. ದೈಹಿಕವಾಗಿ ನಿಷ್ಕ್ರಿಯನಾದ ಯುವಕನೊಬ್ಬನ ಹುಮ್ಮಸ್ಸು, ಕೌತುಕಗಳನ್ನು ಕಂಡು ಬೆರಗಾದರು.


ನಿತ್ಯಾನಂದ ತಿರುಗಿಬಂದ ನಂತರ ಮನಸ್ಸಿನ ಆಗುಹೋಗುಗಳನ್ನೆಲ್ಲ ತನ್ನ ತಾಯಿಯ ಮೂಲಕ ಬರೆದು ಗೆಳೆಯರಿಗೆ ತಿಳಿಸತೊಡಗಿದ. ಗೆಳೆಯರೊಂದಿಗೆ ಸುಮಾರು ಛಾಯಾಚಿತ್ರಗಳನ್ನು ಹಂಚಿಕೊಂಡ, ತನ್ನ ಮನದ ಭಾವನೆಗಳನ್ನು, ಯೋಜನೆಗಳನ್ನು ಬರಹದಲ್ಲಿಡಲು ಅಸಮರ್ಥನಾದಾಗ ತಾಯಿಯ ಎದುರು ದುಃಖಿಸತೊಡಗಿದ. ಆತ ಅಸ್ಪಷ್ಟವಾಗಿ ಬರೆದುದನ್ನು ತಾಯಿ ಸರಿಯಾಗಿ ಬರೆದು ಇಡತೊಡಗಿದರು.


ನಿತ್ಯಾನಂದ ತನ್ನ ಅಸ್ಪಷ್ಟ ಬರಹವೊಂದರಲ್ಲಿ ಹೀಗೆ ಬರೆದಿದ್ದಾನೆ: 'ಭಗವಂತ ತುಂಬ ದಯಾಮಯಿ, ಕರುಣಾಳು. ಒಂದೆಡೆ ಬಾಗಿಲು ಮುಚ್ಚಿದರೆ ಮತ್ತೊಂದೆಡೆ ತೆಗೆದೇ ಇರುತ್ತಾನೆ. ನನಗೆ ಮಾತನಾಡಲು ಬರುವದಿಲ್ಲ. ಆದರೂ ಓದುವ, ಅರ್ಥೈಸುವ, ಚಿಂತಿಸುವ, ಅಸ್ಪಷ್ಟವಾಗಿ ಬರೆಯುವ ಹಾಗೂ ಅಮ್ಮನೊಂದಿಗೆ ಎಲ್ಲವನ್ನೂ ಕೊಟ್ಟಿದ್ದಾನೆ. ನನ್ನ ಜೀವನದ ಒಡನಾಡಿ, ನನ್ನನ್ನು ತಿಳಿದುಕೊಂಡು, ನನ್ನ ಭಾವನೆಗಳಿಗೆ, ನನ್ನ ಬೇಕು-ಬೇಡಗಳಿಗೆ ಸ್ಪಂದಿಸುವ ಅಮ್ಮನನ್ನು ಕೊಟ್ಟಿದ್ದಾನೆ. ಈ ಅಮ್ಮನ ಜೊತೆಗೆ ನೆನಪಿನ ಹಳ್ಳಿಗೆ ಬಂದುದು ಭಗವಂತನ ಕೃಪೆ.'


ಪ್ರೊ. ಎಂ. ಎನ್. ಶ್ರೀನಿವಾಸರು ಇದ್ದಾಗಿನ ರಾಮಪುರ ಹಾಗೂ ಈಗಿನ ಬದಲಾದ ರಾಮಪುರ ಎಂಬ ಹೋಲಿಕೆಯ ಅಧ್ಯಯನದತ್ತ ಈಗ ನಿತ್ಯಾನಂದನ ಒಲವು. ಶ್ರೀನಿವಾಸರ ನೆನಪಿನಲ್ಲಿ ಉಳಿದು ಬೆಳಗಿದ ಅವರ ಹಳ್ಳಿಯು ನಿತ್ಯಾನಂದನಂತಹ ಯುವಕರನ್ನೂ ಪರವಶರನ್ನಾಗಿ ಮಾಡಿದೆ. ಆ 'ನೆನಪಿನ ಹಳ್ಳಿ'ಯು ಇನ್ನೂ ನೆನಪಿನಾಳದಲ್ಲಿ ಉಳಿದಿದೆ ಹಾಗೂ ಉಳಿಯುತ್ತದೆ.


(ಲೇಖಕರು ದೂರದರ್ಶನದ ಮಾಜಿ ನಿರ್ದೇಶಕರು)

No comments:

Post a Comment