Saturday, 31 May 2025

ಕಟೀಲಿನ ಊಟವೂ ಸಂಸ್ಕೃತ ಪಾಠವೂ

 ಕಟೀಲಿನ ಊಟವೂ ಸಂಸ್ಕೃತ ಪಾಠವೂ

ಬಡವರಿಗೆ ಕೊಡುವ ಸೌಲಭ್ಯಗಳನ್ನು ಬಿಟ್ಟಿ ಭಾಗ್ಯ ಎಂದು ಕೀಳಾಗಿ ಆಡಿಕೊಳ್ಳುವವರನ್ನು ಕಂಡಾಗ ನೆನಪಾದದ್ದು ಇದು 

ಈಶಾವಾಸ್ಯಮಿದಂ ಸರ್ವಮ್
ತೇನ ತ್ಯಕ್ತೇನ ಭುಂಜೀತಾಃ

ಈ ಜಗತ್ತು ದೇವರದು..ಅವನು ಉಂಡು ಬಿಟ್ಟದ್ದನ್ನು ನಾವು ಉಣ್ಣುತ್ತೇವೆ

ನಾವೆಲ್ಲರೂ ಭಗವಂತನ ಬಿಟ್ಟಿಯನ್ನೇ ತಿಂದು ಬದುಕುವುದು.ಅಗತ್ಯವಿರುವವರಿಗೆ ಉಚಿತ ಅಕ್ಕಿ ಇತರ ಸೌಲಭ್ಯಗಳನ್ಮು ನೀಡುವುದರಲ್ಲಿ ತಪ್ಪಿಲ್ಲ..ಎಲ್ಲರಿಗೂ ಕೊಡುವುದು ಅಸಾಧ್ಯ.
ಹಾಗಾಗಿ ಕಡು ಬಡವರು ಯಾರೆಂದು ಗುರುತಿಸಿ ಕೊಡಬೇಕು‌.ಆಗ ಅದು ಬೊಕ್ಕಸಕ್ಕೂ ಹೊರೆಯಾಗಲಾರದು.
ಭ್ರಷ್ಟಾಚಾರವನ್ನು ನಿಯಂತ್ರಿಸಿದರೆ ಇದು ಅಸಾಧ್ಯವೂ ಅಲ್ಲ

ನಾನೂ ಕಟೀಲಿನ ಉಚಿತ ಊಟ ಉಂಡು ಕಲಿತವಳೇ..

ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ಅನುಭವಗಳಿವು

1994 ರ ಅಗಸ್ಟ್ ನಲ್ಲಿ ಕಟೀಲಿನಲ್ಲಿ ಸಂಸ್ಕೃತ ಎಂಎಗೆ ಸೇರಿದ್ದೆ.ಅದಾಗಲೇ ನನಗೆ ಪ್ರಸಾದರೊಂದಿಗೆ ಮದುವೆಯಾಗಿ ಒಂದೂವರೆ ವರ್ಷವಾಗಿತ್ತು

ನನ್ನ ಕಲಿಕೆಗೆ ಮನೆ ಮಂದಿಯಿಂದ ತೀವ್ರ ವಿರೋಧ ಬಂದಕಾರಣ ಎಲ್ಲರನ್ನೂ ಎದುರು ಹಾಕಿಕೊಂಡು ಕಟೀಲಿನಲ್ಲಿ ಸಂಸ್ಕೃತ ಎಂಎ ಗೆ ಸೇರಿದ್ದೆ

ಕಟೀಲು ಕಾಲೇಜು ಪ್ರಿನ್ಸಿಪಾಲರಾಗಿದ್ದ ಡಾ.ಜಿ ಎನ್ ಭಟ್ ಅವರಿಂದಾಗಿ ಎಕ್ಕಾರಿನ ನಾಗವೇಣಿ‌ ಅಮ್ಮ ನಮಗೊಂದು ಬಾಡಿಗೆ ಮನೆ ಒದಗಿಸಿದ್ದರು.ಅದು ಮೋಟು ಗೋಡೆಯ ಮಣ್ಣಿನ‌ಮನೆ

ಪೂರ್ತಿ ಒರಳೆ ಹತ್ತಿದ ಮನೆ.ನಮಗೋ ನಮ್ಮ ಆದಾಯಕ್ಕೆ ಒಂದು ಮನೆಯಂತಹದ್ದು ಸಿಕ್ಕಿದರೆ ಸಾಕಿತ್ತು

ಬೆಂಗಳೂರಿನಲ್ಲಿದ್ದ ಕೆಲಸವನ್ನು ಬಿಟ್ಟು ಪ್ರಸಾದ್ ಊರಿಗೆಬಂದಿದ್ದರು.ನಂತರ ನನ್ನ ಕಲಿಕೆಯ ಕಾರಣಕ್ಕೆ ಮನೆಯಲ್ಲಿ ವಿವಾದ ಉಂಟಾದಾಗ ಮತ್ತೆ ಮಂಗಳೂರಿನ ವೆಟರ್ನರಿ ಶಾಪೊಂದರಲ್ಲಿ ತಿಂಗಳಿಗೆ 800₹ ವೇತನಕ್ಕೆ ಅರೆಕಾಲಿಕ ಕೆಲಸಕ್ಕೆ ಸೇರಿದ್ದರು

ಕಟೀಲಿನಿಂದ ಮಂಗಳೂರಿಗೆ ಹೋಗಿಬರಲು ತಿಂಗಳಿಗೆ 300₹ ಖರ್ಚಾಗುತ್ತಿತ್ತು.ಉಳಿದ ಐದು ನೂರು ರುಪಾಯಿಗಳಲ್ಲಿ ಮನೆ ಬಾಡಿಗೆ ಕಟ್ಟಿಉಳಿದ ಊಟ ತಿಂಡಿಯಖರ್ಚನ್ನು ನಿಭಾಯಿಸಬೇಕಿತ್ತು

ನಮ್ಮ‌ ಅದೃಷ್ಟಕ್ಕೆ ಎಕ್ಕಾರಿನ ಮನೆಯನ್ನು ನಾಗವೇಣಿ‌ ಅಮ್ಮ 150₹ ಬಾಡಿಗೆಗೆ ಕೊಟ್ಟರು.

800₹ ನಲ್ಲಿ 30+-150=450  ಕಳೆದು ಉಳಿದ 350 ರಲ್ಲಿ ಇಡೀ ತಿಂಗಳು ಕಳೆಯಬೇಕಿತ್ತು.ಅದರಲ್ಲಿ ದಿನಕ್ಕೆ ಒಂದೂವರೆ ರುಪಾಯಿಯಂತೆ ತಿಂಗಳಿಗೆ  37.50₹ ನನಗೆ ಎಕ್ಕಾರಿನಿಂದ ಕಟೀಲಿಗೆ ಹೋಗಿ ಬರಲು ಬಸ್ಸಿಗೆ ಖರ್ಚಾಗುತ್ತಿತ್ತು.

ಈ ಕಷ್ಟಕಾಲದಲ್ಲಿ ನನಗೆ ಸಹಾಯಕ್ಕೆ ಬಂದದ್ದು ಕಟೀಲಿನ ಮಧ್ಯಾಹ್ನದ ಊಟ

ಕಟೀಲು ವಿದ್ಯಾ ಸಂಸ್ಥೆಯಲ್ಲಿ ಓದುವ ಎಲ್ಲ ಮಕ್ಕಳಿಗೂ ಉಚಿತ ಊಟದ ವ್ಯವಸ್ಥೆ ಇತ್ತು

ಇದಲ್ಲದೆ ಕಟೀಲು ದೇವಾಲಯದಲ್ಲಿಯೂ ನಮಗೆ ಊಟ ಮಾಡಲು ಅವಕಾಶವಿತ್ತು.ಸಂಸ್ಕೃತ ಓದುತ್ತಿದ್ದವರಲ್ಲಿ ಒಬ್ಬಿಬ್ಬರನ್ನು ಹೊರತು ಪಡಿಸಿದರೆ ಉಳಿದವರೆಲ್ಲರೂ ಬ್ರಾಹ್ಮಣರಾಗಿದ್ದು ದೇವಾಲಯದಲ್ಲಿನ ಬ್ರಾಹ್ಮಣರ ಪಂಕ್ತಿಗೆ ಹೋಗಬಹುದಿತ್ತು.ನಿತ್ಯವೂ ಪಾಯಸದ ಊಟ.ಆಗಾಗ ಯಾರಾದರೂ ಚಂಡಿಕಾ ಹೋಮವನ್ನೋ ಇನ್ನೇನೋ ವಿಶೇಷ ಪೂಜೆಗಳಿದ್ದರೆ ಪಾಯಸ ಮಾತ್ರವಲ್ಲದೆ ಹೋಳಿಗೆ ಲಾಡು ಮೊದಲಾದ ಸಿಹಿ ಭಕ್ಷ್ಯಗಳೂ ಇರುತ್ತಿದ್ದವು.ಜೊತೆಗೆ ನಮಗೆ ಎರಡು ರುಪಾಯಿ ಐದು ರುಪಾಯಿ ಊಟ ದಕ್ಷಿಣೆ ಸಿಗುತ್ತಿತ್ತು.ವಾರಕ್ಕೊಂದಾದರೂ ಇಂತಹ ಊಟ ದಕ್ಷಿಣೆ ಸಿಗುತ್ತಿತ್ತು.ನಮಗೆ ಬಹಳ ಖುಷಿ ಆಗುತ್ತಿತ್ತು.ಆಗಿನ ಐದು ರುಪಾಯಿಗೆ ತುಂಬಾ ಬೆಲೆ ಇತ್ತು.ಸಂಸ್ಕೃತ ಓದಲು ಬಂದ ನಾವ್ಯಾರೂ ಸಿರಿವಂತರಾಗಿರಲಿಲ್ಲ.ಒಂದೇ ದೋಣಿಯ ಪಯಣಿಗರಾಗಿದ್ದೆವು.ಹಾಗಾಗಿ ಚಂಡಿಕಾ ಹೋಮ‌ಇದ್ದ ದಿನ ನಮಗಾಗುತ್ತಿದ್ದ ಸಂತೋಷ ವರ್ಣನಾತೀತ

ಅದರೆ ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ.ಈ ಮಧ್ಯಾಹ್ನದ ಊಟದ ವ್ಯವಸ್ಥೆ ನಮಗೆ ಬಹಳಷ್ಟು ಉಪಕಾರ ಮಾಡಿತ್ತು.ಒಂದು ಹೊತ್ತು ಹೊಟ್ಟೆ ತುಂಬಾ ಉಣ್ಣುದಕ್ಕೆ ಅಡ್ಡಿ ಇರಲಿಲ್ಲ.ಅಲ್ಲಿ ಅಸ್ರಣ್ಣರು ಮತ್ತಿತರರು ನಮಗೆ ಒತ್ತಾಯ ಮಾಡಿ ಪಾಯಸ ಇನ್ನಿತರ ಊಟದ ವಸ್ತುಗಳನ್ನು ಬಡಿಸುತ್ತಿದ್ದರು.ಅವರ ಪ್ರೀತಿಯನ್ನು ಮರೆಯಲಾಗದು

ಕಟೀಲಿನ ಸಾರಿನ ಪರಿಮಳ ನೆನಪಾದರೆ ನನಗೆ ಮನೆಯಲ್ಕಿ ಮಾಡಿದ ಸಾರು ಸಾಂಬಾರಿನ ರುಚಿ ಪೇಲವೆನಿಸುತ್ತದೆ.ಅಲ್ಲಿ ಒಂದು ಉಪ್ಪಿನಕಾಯಿ ರೀತಿಯ ವ್ಯಂಜನ ಬಡಿಸುತ್ತಿದ್ದರು.ಅದ್ಭುತ ರುಚಿ ಅದು.ಅಷ್ಟು ರುಚಿಯಾದ ವಸ್ತುವನ್ನು ನಾನು ಬೇರೆಲ್ಲೂ ತಿಂದಿಲ್ಲ.ಇನ್ನು ಪ್ರತಿ ಶುಕ್ರವಾರ ಗಂಜಿ ಪ್ರಸಾದ ಇರುತ್ತಿತ್ತು.ಇದನ್ನು ಗೋದಿಯಿಂದ ಹಾಲು ಹಾಕಿ ಬೇಯಿಸಿ ತಯಾರಿಸುತ್ತಿದ್ದರೆಂದು ನೆನಪು.ಬಹಳ ರುಚಿಯಾದ ಗಂಜಿ ಇದು.ಇದಕ್ಕಾಗಿ ಶುಕ್ರವಾರ ಆಗುವುದನ್ನೇ ನಾನು ಕಾಯುತ್ತಿದ್ದೆ

ದೇವಾಲಯದ ಊಟದ ಸಮಯ ಒಂದೇ  ೀತಿ ಇರುತ್ತಿರಲಿಲ್ಲ.ಶುಕ್ರವಾರ ತಡ ಆಗುತ್ತಿತ್ತು.ನಮ್ಮ ಉಪನ್ಯಾಸಕರಾದ ಪದ್ಮನಾಭ ಮರಾಠೆ ಮತ್ತು ನಾಗರಾಜರೂ ದೇವಾಲಯಕ್ಕೆ ಊಟಕ್ಕೆ ಬರುತ್ತಿದ್ದರು.ಹಾಗಾಗಿ ಉಟದ ಸಮಯಕ್ಕೆ ಸರಿಯಾಗಿ ಪಾಠದ ಸಮಯ ಹೊಂದಾಣಿಕೆ ಆಗುತ್ತಿತ್ತು.ಕೆಲವೊಮ್ಮೆ ಹೊಟ್ಟೆ ಬಿರಿವಷ್ಟು ಉಂಡ ದಿನ ನಮಗೆ ತರಗತಿಗೆ ಹೋಗಲು ಇಷ್ಟವಿರುತ್ತಿರಲಿಲ್ಲ.ಅಂತಹ ಸಂದರ್ಭದಲ್ಲಿ ನಮ್ಮನ್ನು ಬಿಟ್ಡು ಬಿಡುತ್ತಿದ್ದರು‌.ನಾನುಮನೆಗೆ ಬಂದು ಗಡದ್ದಾಗಿ ನಿದ್ರೆ ಹೊಡೆಯುತ್ತಿದ್ದೆ

ನಾನು ಬಿಎಸ್ಸಿ ಮಾಡಿ ನಂತರ ಸಂಸ್ಕೃತ ಎಂಎ ಗೆ ಸೇರಿದ್ದು. ವಿಜ್ಞಾನ ದ ಕಷ್ಟದ ಪಾಠಗಳು ಶಿಸ್ತನ್ನು ಬಯಸುವ ಪ್ರಯೋಗ ತರಗತಿಗಳಿಂದ ನಾನು ಸೋತು ಸುಣ್ಣವಾಗಿದ್ದೆ.ನಂತರ ಎಂಎ ಗೆ ಸೇರಿದಾಗ ಕಲಿಕೆ ಎಷ್ಟು ಸುಲಭದ್ದು ಎನಿಸಿತ್ತು.ಡಾ.ಕೆ ನಾರಾಯಣ ಭಟ್ಟರು ಅದ್ವಿತೀಯ ವಿದ್ವಾಂಸರು‌.ಪ್ರಗಲ್ಭ ಪಂಡಿತರು.ಅವರ ಪಾಠ ಕೇಳುದೊಂದು ಭಾಗ್ಯವೇ ಸರಿ..ಜೊತೆಗೆ ಪದ್ಮನಾಭ ಮರಾಠೆಯವರು ಆಗಷ್ಟೇ ಎಂ ಎ ಮುಗಿಸಿದ ಎಳೆಯರಾಗಿದ್ದರೂ ಪಾಂಡಿತ್ಯಕ್ಕೆ ಕೊರತೆ ಇರಲಿಲ್ಲ.ಡಾ.ಜಿ ಎನ್ ಭಟ್ಟರೂ ಅದ್ವಿತೀಯ ವಿದ್ವಾಂಸರು.ಆದರೆ ಅಲಂಕಾರ ಶಾಸ್ತ್ರ( ಕಾವ್ಯ ಮೀಮಾಂಸೆ) ಪಾಠ ಮಾಡುತ್ತಿದ್ದರು.ವೇದಾಂತವನ್ನು ಐಚ್ಛಿಕ ವಿಷಯವಾಗಿ ತಗೊಂಡಿದ್ದ ಕಾರಣ ನನಗೆ ಕಾವ್ಯ ಮೀಮಾಂಸೆ ಇರಲಿಲ್ಲ.ಹಾಗಾಗಿ ಡಾ.ಜಿ ಎನ್ ಭಟ್ಟರ ಪಾಠ ಕೇಳುವ ಅವಕಾಶ ನನಗಿರಲಿಲ್ಲ

ಬಹುಶಃ ಇಲ್ಲಿನ ಉತ್ತಮ ಉಪನ್ಯಾಸಕರಿಂದಾಗಿ ಸಂಸ್ಕೃತವನ್ನು ನಾನು ಬಹಳಷ್ಟು ಇಷ್ಟ ಪಟ್ಟು ಕಲಿತೆ.ಪದವಿಯಲ್ಲಿ ಐಚ್ಛಿಕ ವಿಷಯವಾಗಿ ಸಂಸ್ಕೃತ ಕಲಿತು Rank ಪಡೆದಿದ್ದ ರಮಿತಾ ಶ್ರೀದೇವಿ‌ ಮೊದಲಾದವರು ನನ್ನ ಸಹಪಾಠಿಗಳಾಗಿದ್ದರು.ಪದವಿಯಲ್ಲಿ ಎರಡು ವರ್ಷ ದ್ವಿತೀಯ ಭಾಷೆಯಾಗಿ ಸಂಸ್ಕೃತ ಕಲಿತ ನನಗೆ ಎಂಎ ಯಲ್ಲಿ ಈ Rank ವಿಜೇತರ ಜೊತೆಗಿನ ಸ್ಪರ್ಧೆ ಸುಲಭದ್ದಾಗಿರಲಿಲ್ಲ.ಆದರೆ ನಾನು ಓದಿ Rank ತೆಗೆದು ಒಳ್ಳೆಯ ಕೆಲಸವನ್ನು ಗಳಿಸಲೇ ಬೇಕೆಂದು ನಿರ್ಧರಿಸಿ ಎಂಎ ಗೆ ಸೇರಿದವಳು.ಹಾಗಾಗಿ ದಿನಕ್ಕೆ ಕಡಿಮೆ ಎಂದರೂ ಎಂಟು ಗಂಟೆ ಓದುತ್ತಿದ್ದೆ.ಆದ್ದರಿಂದ ನನಗೆ ಮೊದಲ Rank ಪಡೆಯಲು ಸಾಧ್ಯವಾಯಿತು

ಇಂದಿಗೂ ನಾನೇನಾದರೂ ನನ್ನ ಭಾಷಣ ಚಂದ ಆದರೆ ಅದಕ್ಕೆ ಕಾರಣ ಇಲ್ಲಿನ ಸಂಸ್ಕೃತ ಕಲಿಕೆ ಮತ್ತು ಉಪನ್ಯಾಸಕರು‌.ನಮ್ಮಲ್ಲಿ ಸೆಮಿನಾರ್ ಮಾಡಿಸಿ ಹೊರ ಜಗತ್ತನ್ನು ಸಮರ್ಥವಾಗಿ ಎದುರಿಸಿ ಗೆಲ್ಲವಂತೆ ನಮ್ಮನ್ನು ತಯಾರು .ಮಾಡಿದ್ದರು.

ಪ್ರಸಾದರ ವೇತನದಲ್ಲಿ ನಮಗೆ ಒಂದು ಹೊತ್ತು ಮಾತ್ರ ಊಟ ಮಾಡಲು ಸಾಧ್ಯವಿತ್ತು

ಆದರೆ ಕಟೀಲಿನ ಮದ್ಯಾಹ್ನದ ಊಟ ಎರಡು ಹೊತ್ತೂ ಊಟ ಸಿಗುವಂತೆ ಮಾಡಿತ್ತು.ಮತ್ತು ಅದು ಬಹಳ ರುಚಿಕರವಾದ ಊಟ ಕೂಡ.ಹಾಗಾಗಿ ನಾನು ಕಟೀಲಿನಲ್ಲಿ ಎರಡು ವರ್ಷ ಹೊಟ್ಟೆ ತುಂಬಾ ಉಂಡದ್ದನ್ನೂ ಪಾಠ ಕೇಳಿದ್ದನ್ನೂ ಜೀವನವಿಡೀ ಮರೆಯಲಾಗದು.

ನಾನು ಎರಡನೇ ವರ್ಷ ಎಂಎಗೆ ಬರುವಷ್ಟರಲ್ಲಿ ಪ್ರಸಾದರಿಗೆ ಮಂಗಳೂರಿನಲ್ಲಿ ಒಳ್ಳೆಯ ಕೆಲಸ ಸಿಕ್ಕಿತ್ತು.ಹಾಗಾಗಿ ಮುಂದೆ ಅಂತಹ ಸಮಸ್ಯೆ ಏನೂ ಆಗಲಿಲ್ಲ

ಉಚಿತ ಊಟ ತಿಂಡಿಗಳು ಮಕ್ಕಳನ್ನು ಹಾಳು ಮಾಡುವುದಿಲ್ಲ

ಬದಲಿಗೆ ಮಕ್ಕಳೆಡೆಗಿನ ಉದಾರತೆ ತರಗತಿಗೆ ಹಾಜರಾಗದೇ ಇದ್ದರೂ ಪರೀಕ್ಷೆ ಬರೆಯಲು ಬಿಡುವುದು,ಫಲಿತಾಂಶಕ್ಕಾಗಿ ತೀರಾ ಉದಾರವಾಗಿ‌ಮೌಲ್ಯ ಮಾಪನ ಮಾಡುದು.ಪಾಸ್ ಮಾಡುದು ಶಿಕ್ಷಣದ ಗುಣಮಟ್ಟ ಕುಸಿಯಲು ಕಾರಣವಾಗಿದೆ

ಉಚಿತ ಉಟ ಕೊಟ್ಟರೆ ಹಾಳಾಗುವುದಾದರೆ ನಾವೆಲ್ಲ ಹಾಳಾಗಿ ಎಕ್ಕುಟ್ಟಿ ಹೋಗಿರುತ್ತಿದ್ದೆವು

ಆದರೆ ನಾವ್ಯಾರೂ ಉಚಿತ ಊಟ ಸಿಕ್ಕ ಕಾರಣಕ್ಕೆ ಹಾಳಾಗಿಲ್ಲ.ನನ್ನ ಸಹಪಾಠಿಗಳೆಲ್ಲರೂ ಅವರವರ ಕ್ಷೇತ್ರದಲ್ಲಿ ಯಶಸ್ವಿಯಾಗಿದ್ದಾರೆ.ಅವಿನಾಶ ಪುತ್ತೂರಿನಲ್ಲಿ ಸರಸ್ವತಿ ವಿದ್ಯಾಮಂದಿರ ಎಂಬ ವಿದ್ಯಾ ಸಂಸ್ಥೆಯನ್ನು ನಡೆಸುತ್ತಿದ್ದಾರೆ.ಗಜಾನನ ಮರಾಠೆ ,ರಮೇಶ ಆಚಾರ್ಯ ಡಾ.ಈಶ್ವರ ಪ್ರಸಾದ್  ಕಮಲಾಯಿನಿಯರು ಉತ್ತಮ ಶಿಕ್ಷಕ/ ಉಪನ್ಯಾಸಕರಾಗಿ ಹೆಸರು ಗಳಿಸಿದ್ದಾರೆ

ರಮಿತಾ ಭಾಷೆಯೇ ತಿಳಿಯದ ಊರು ವಯನಾಡಿನ ಮಲೆಯಾಳ ಕಲಿತು ತನ್ನದೇ ಅದ ಸಣ್ಣ ಉದ್ಯಮ‌ ನಡೆಸುತ್ತಿದ್ದಾರೆ.

ನನ್ನ ಸಹಪಾಠಿ ನೀತಾ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ.ಆದರೆ ಮುಂದೆ ತುಂಬಾ ಓದಿ ಉತ್ತಮ ಕೆಲಸದಲ್ಲಿದ್ದಾರೆ ಎಂದು ಕೇಳಿರುವೆ.

ಉಚಿತ ಊಟ ಬಡ ಮಕ್ಕಳಿಗೆ ಅಗತ್ಯವಾಗಿ ನೀಡಬೇಕಾದದ್ದೇ..ಆದರೆ ಪಾಠಕ್ಕಿಂತ ಊಟ ಉಪಾಹಾರ ಹಾಲು ಮೊಟ್ಟೆ ಸಕಾಲದಲ್ಲಿ ಬೇಯಿಸಿ ಕೊಡುವ ಕೆಲಸದಲ್ಲಿ ಮುಳುಗಿ ಹೋಗುವ ಶಿಕ್ಷಕರಿಗೆ ಪಾಠ ಮಾಡಲು ಸಮಯವಿಲ್ಲದಂತಾಗಬಾರದು ಅಷ್ಟೇ..

ದಿನೇ ದಿನೇ ಶಿಕ್ಷಣ ಮಟ್ಟ ಕುಸಿಯುತ್ತಿದೆ.ಮೊದಲು ಕಾಗುಣಿತ ಗೊತ್ತಿಲ್ಲದ ಹತ್ತನೆಯ ತರಗತಿಯಮಕ್ಕಳು ಪಾಸಾಗಿ ಪಿಯು ಗೆ ಬರುತ್ತಿದ್ದರೆ ಈಗ ಅಕ್ಷರ ಮಾಲೆಯ ಬರವಣಿಗೆಯನ್ನೇ ಅರಿಯದವರು ಬರುತ್ತಿದ್ದಾರೆ.ಸರಳ ವಾಕ್ಯಗಳನ್ನು ಮಾಡಲು ಬರೆಯಲು ತಿಳಿಯದವೇ ಹೆಚ್ಚಾಗಿದ್ದಾರೆ

ಊಟ ತಿಂಡಿ ಹಾಲು ಹಣ್ಣು ನೀಡುವಷ್ಟೇ ಕಾಳಜಿಯಲ್ಲಿ ಗುಣ ಮಟ್ಟದ ಶಿಕ್ಷಣವನ್ನು ನೀಡುವ ಅಗತ್ಯವಿದೆ ಎಂದು ನನಗನಿಸುತ್ತದೆ

ಯಾವುದೇ ಉಚಿತ ಕೊಡುಗೆ ತಪ್ಪಲ್ಲ ಆದರೆ ಅದು ನಿಜಕ್ಕೂ ಅಗತ್ಯ ಇರುವವರಿಗೆ ಮಾತ್ರ ಸಿಗಬೇಕು.ಇಲ್ಲವಾದರೆ ದೇಶ ದಿವಾಳಿಯಂಚಿಗೆ ತಲುಪಬಹುದು 

- ಡಾ.ಲಕ್ಷ್ಮೀ  ಜಿ ಪ್ರಸಾದ್

Friday, 23 May 2025

ಆತ್ಮ‌ಕಥೆಯ ಬಿಡಿ ಭಾಗಗಳು : ಕಟೀಲಿನ ಉಚಿತ ಊಟವೂ ಸಂಸ್ಕೃತ ಪಾಠವೂ

 ಆತ್ಮ‌ಕಥೆಯ ಬಿಡಿ ಭಾಗಗಳು : ಕಟೀಲಿನ  ಉಚಿತ ಊಟವೂ ಸಂಸ್ಕೃತ  ಪಾಠವೂ..

ಈಶಾವಾಸ್ಯಮಿದಂ ಸರ್ವಮ್

ತೇನ ತ್ಯಕ್ತೇನ ಭುಂಜೀತಾಃ

ಈ ಜಗತ್ತು ದೇವರದು..ಅವನು ಉಂಡು ಬಿಟ್ಟದ್ದನ್ನು ನಾವು ಉಣ್ಣುತ್ತೇವೆ

ಬಡವರಿಗೆ ಕೊಡುವ ಸೌಲಭ್ಯಗಳನ್ನು ಬಿಟ್ಟಿ ಭಾಗ್ಯ ಎಂದು ಕೀಳಾಗಿ ಆಡಿಕೊಳ್ಳುವವರನ್ನು ಕಂಡಾಗ ನೆನಪಾದದ್ದಿದು.

ನಾವೆಲ್ಲರೂ ಭಗವಂತನ ಬಿಟ್ಟಿಯನ್ನೇ ತಿಂದು ಬದುಕುವುದು.ಅಗತ್ಯವಿರುವವರಿಗೆ ಉಚಿತ ಅಕ್ಕಿ ಇತರ ಸೌಲಭ್ಯಗಳನ್ಮು ನೀಡುವುದರಲ್ಲಿ ತಪ್ಪಿಲ್ಲ..ಎಲ್ಲರಿಗೂ ಕೊಡುವುದು ಅಸಾಧ್ಯ.

ಹಾಗಾಗಿ ಕಡು ಬಡವರು ಯಾರೆಂದು ಗುರುತಿಸಿ ಕೊಡಬೇಕು‌.ಆಗ ಅದು ಬೊಕ್ಕಸಕ್ಕೂ ಹೊರೆಯಾಗಲಾರದು.

ಭ್ರಷ್ಟಾಚಾರವನ್ನು ನಿಯಂತ್ರಿಸಿದರೆ ಇದು ಅಸಾಧ್ಯವೂ ಅಲ್ಲ

ನಾನೂ ಕಟೀಲಿನ ಉಚಿತ ಊಟ ಉಂಡು ಕಲಿತವಳೇ..

ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ಅನುಭವಗಳಿವು

1994 ರ ಅಗಸ್ಟ್ ನಲ್ಲಿ ಕಟೀಲಿನಲ್ಲಿ ಸಂಸ್ಕೃತ ಎಂಎಗೆ ಸೇರಿದ್ದೆ.ಅದಾಗಲೇ ನನಗೆ ಪ್ರಸಾದರೊಂದಿಗೆ ಮದುವೆಯಾಗಿ ಒಂದೂವರೆ ವರ್ಷವಾಗಿತ್ತು

ನನ್ನ ಕಲಿಕೆಗೆ ಮನೆ ಮಂದಿಯಿಂದ ತೀವ್ರ ವಿರೋಧ ಬಂದಕಾರಣ ಎಲ್ಲರನ್ನೂ ಎದುರು ಹಾಕಿಕೊಂಡು ಕಟೀಲಿನಲ್ಲಿ ಸಂಸ್ಕೃತ ಎಂಎ ಗೆ ಸೇರಿದ್ದೆ

ಕಟೀಲು ಕಾಲೇಜು ಪ್ರಿನ್ಸಿಪಾಲರಾಗಿದ್ದ ಡಾ.ಜಿ ಎನ್ ಭಟ್ ಅವರಿಂದಾಗಿ ಎಕ್ಕಾರಿನ ನಾಗವೇಣಿ‌ ಅಮ್ಮ ನಮಗೊಂದು ಬಾಡಿಗೆ ಮನೆ ಒದಗಿಸಿದ್ದರು.ಅದು ಮೋಟು ಗೋಡೆಯ ಮಣ್ಣಿನ‌ಮನೆ

ಪೂರ್ತಿ ಒರಳೆ ಹತ್ತಿದ ಮನೆ.ನಮಗೋ ನಮ್ಮ ಆದಾಯಕ್ಕೆ ಒಂದು ಮನೆಯಂತಹದ್ದು ಸಿಕ್ಕಿದರೆ ಸಾಕಿತ್ತು

ಬೆಂಗಳೂರಿನಲ್ಲಿದ್ದ ಕೆಲಸವನ್ನು ಬಿಟ್ಟು ಪ್ರಸಾದ್ ಊರಿಗೆಬಂದಿದ್ದರು.ನಂತರ ನನ್ನ ಕಲಿಕೆಯ ಕಾರಣಕ್ಕೆ ಮನೆಯಲ್ಲಿ ವಿವಾದ ಉಂಟಾದಾಗ ಮತ್ತೆ ಮಂಗಳೂರಿನ ವೆಟರ್ನರಿ ಶಾಪೊಂದರಲ್ಲಿ ತಿಂಗಳಿಗೆ 800₹ ವೇತನಕ್ಕೆ ಅರೆಕಾಲಿಕ ಕೆಲಸಕ್ಕೆ ಸೇರಿದ್ದರು

ಕಟೀಲಿನಿಂದ ಮಂಗಳೂರಿಗೆ ಹೋಗಿಬರಲು ತಿಂಗಳಿಗೆ 300₹ ಖರ್ಚಾಗುತ್ತಿತ್ತು.ಉಳಿದ ಐದು ನೂರು ರುಪಾಯಿಗಳಲ್ಲಿ ಮನೆ ಬಾಡಿಗೆ ಕಟ್ಟಿಉಳಿದ ಊಟ ತಿಂಡಿಯಖರ್ಚನ್ನು ನಿಭಾಯಿಸಬೇಕಿತ್ತು

ನಮ್ಮ‌ ಅದೃಷ್ಟಕ್ಕೆ ಎಕ್ಕಾರಿನ ಮನೆಯನ್ನು ನಾಗವೇಣಿ‌ ಅಮ್ಮ 150₹ ಬಾಡಿಗೆಗೆ ಕೊಟ್ಟರು.

800₹ ನಲ್ಲಿ 30+-150=450  ಕಳೆದು ಉಳಿದ 350 ರಲ್ಲಿ ಇಡೀ ತಿಂಗಳು ಕಳೆಯಬೇಕಿತ್ತು.ಅದರಲ್ಲಿ ದಿನಕ್ಕೆ ಒಂದೂವರೆ ರುಪಾಯಿಯಂತೆ ತಿಂಗಳಿಗೆ  37.50₹ ನನಗೆ ಎಕ್ಕಾರಿನಿಂದ ಕಟೀಲಿಗೆ ಹೋಗಿ ಬರಲು ಬಸ್ಸಿಗೆ ಖರ್ಚಾಗುತ್ತಿತ್ತು.

ಈ ಕಷ್ಟಕಾಲದಲ್ಲಿ ನನಗೆ ಸಹಾಯಕ್ಕೆ ಬಂದದ್ದು ಕಟೀಲಿನ ಮಧ್ಯಾಹ್ನದ ಊಟ

ಕಟೀಲು ವಿದ್ಯಾ ಸಂಸ್ಥೆಯಲ್ಲಿ ಓದುವ ಎಲ್ಲ ಮಕ್ಕಳಿಗೂ ಉಚಿತ ಊಟದ ವ್ಯವಸ್ಥೆ ಇತ್ತು

ಇದಲ್ಲದೆ ಕಟೀಲು ದೇವಾಲಯದಲ್ಲಿಯೂ ನಮಗೆ ಊಟ ಮಾಡಲು ಅವಕಾಶವಿತ್ತು.ಸಂಸ್ಕೃತ ಓದುತ್ತಿದ್ದವರಲ್ಲಿ ಒಬ್ಬಿಬ್ಬರನ್ನು ಹೊರತು ಪಡಿಸಿದರೆ ಉಳಿದವರೆಲ್ಲರೂ ಬ್ರಾಹ್ಮಣರಾಗಿದ್ದು ದೇವಾಲಯದಲ್ಲಿನ ಬ್ರಾಹ್ಮಣರ ಪಂಕ್ತಿಗೆ ಹೋಗಬಹುದಿತ್ತು.ನಿತ್ಯವೂ ಪಾಯಸದ ಊಟ.ಆಗಾಗ ಯಾರಾದರೂ ಚಂಡಿಕಾ ಹೋಮವನ್ನೋ ಇನ್ನೇನೋ ವಿಶೇಷ ಪೂಜೆಗಳಿದ್ದರೆ ಪಾಯಸ ಮಾತ್ರವಲ್ಲದೆ ಹೋಳಿಗೆ ಲಾಡು ಮೊದಲಾದ ಸಿಹಿ ಭಕ್ಷ್ಯಗಳೂ ಇರುತ್ತಿದ್ದವು.ಜೊತೆಗೆ ನಮಗೆ ಎರಡು ರುಪಾಯಿ ಐದು ರುಪಾಯಿ ಊಟ ದಕ್ಷಿಣೆ ಸಿಗುತ್ತಿತ್ತು.ವಾರಕ್ಕೊಂದಾದರೂ ಇಂತಹ ಊಟ ದಕ್ಷಿಣೆ ಸಿಗುತ್ತಿತ್ತು.ನಮಗೆ ಬಹಳ ಖುಷಿ ಆಗುತ್ತಿತ್ತು.ಆಗಿನ ಐದು ರುಪಾಯಿಗೆ ತುಂಬಾ ಬೆಲೆ ಇತ್ತು.ಸಂಸ್ಕೃತ ಓದಲು ಬಂದ ನಾವ್ಯಾರೂ ಸಿರಿವಂತರಾಗಿರಲಿಲ್ಲ.ಒಂದೇ ದೋಣಿಯ ಪಯಣಿಗರಾಗಿದ್ದೆವು.ಹಾಗಾಗಿ ಚಂಡಿಕಾ ಹೋಮ‌ಇದ್ದ ದಿನ ನಮಗಾಗುತ್ತಿದ್ದ ಸಂತೋಷ ವರ್ಣನಾತೀತ

ಅದರೆ ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ.ಈ ಮಧ್ಯಾಹ್ನದ ಊಟದ ವ್ಯವಸ್ಥೆ ನಮಗೆ ಬಹಳಷ್ಟು ಉಪಕಾರ ಮಾಡಿತ್ತು.ಒಂದು ಹೊತ್ತು ಹೊಟ್ಟೆ ತುಂಬಾ ಉಣ್ಣುದಕ್ಕೆ ಅಡ್ಡಿ ಇರಲಿಲ್ಲ.ಅಲ್ಲಿ ಅಸ್ರಣ್ಣರು ಮತ್ತಿತರರು ನಮಗೆ ಒತ್ತಾಯ ಮಾಡಿ ಪಾಯಸ ಇನ್ನಿತರ ಊಟದ ವಸ್ತುಗಳನ್ನು ಬಡಿಸುತ್ತಿದ್ದರು.ಅವರ ಪ್ರೀತಿಯನ್ನು ಮರೆಯಲಾಗದು

ಕಟೀಲಿನ ಸಾರಿನ ಪರಿಮಳ ನೆನಪಾದರೆ ನನಗೆ ಮನೆಯಲ್ಕಿ ಮಾಡಿದ ಸಾರು ಸಾಂಬಾರಿನ ರುಚಿ ಪೇಲವೆನಿಸುತ್ತದೆ.ಅಲ್ಲಿ ಒಂದು ಉಪ್ಪಿನಕಾಯಿ ರೀತಿಯ ವ್ಯಂಜನ ಬಡಿಸುತ್ತಿದ್ದರು.ಅದ್ಭುತ ರುಚಿ ಅದು.ಅಷ್ಡು ರುಚಿಯಾದ ವಸ್ತುವನ್ನು ನಾನು ಬೇರೆಲ್ಲೂ ತಿಂದಿಲ್ಲ.ಇನ್ನು ಪ್ರತಿ ಶುಕ್ರವಾರ ಗಂಜಿ ಪ್ರಸಾದ ಇರುತ್ತಿತ್ತು.ಇದನ್ನು ಗೋದಿಯಿಂದ ಹಾಲು ಹಾಕಿ ಬೇಯಿಸಿ ತಯಾರಿಸುತ್ತಿದ್ದರೆಂದು ನೆನಪು.ಬಹಳ ರುಚಿಯಾದ ಗಂಜಿ ಇದು.ಇದಕ್ಕಾಗಿ ಶುಕ್ರವಾರ ಆಗುವುದನ್ನೇ ನಾನು ಕಾಯುತ್ತಿದ್ದೆ

ದೇವಾಲಯದ ಉಟದ ಸಮಯ ಒಂದೇ ಇರುತ್ತಿರಲಿಲ್ಲ.ಶುಕ್ರವಾರ ತಡ ಆಗುತ್ತಿತ್ತು.ನಮ್ಮ ಉಪನ್ಯಾಸಕರಾದ ಪದ್ಮನಾಭ ಮರಾಠೆ ಮತ್ತು ನಾಗರಾಜರೂ ದೇವಾಲಯಕ್ಕೆ ಊಟಕ್ಕೆಬರುತ್ತಿದ್ದರು.ಹಾಗಾಗಿ ಉಟದ ಸಮಯಕ್ಕೆ ಸರಿಯಾಗಿ ಪಾಠದ ಸಮಯ ಹೊಂದಾಣಿಕೆ ಆಗುತ್ತಿತ್ತು.ಕೆಲವೊಮ್ಮೆ ಹೊಟ್ಟೆ ಬಿರಿವಷ್ಟು ಉಂಡ ದಿನ ನಮಗೆ ತರಗತಿಗೆ ಹೋಗಲು ಇಷ್ಟವಿರುತ್ತಿರಲಿಲ್ಲ.ಅಂತಹ ಸಂದರ್ಭದಲ್ಲಿ ನಮ್ಮನ್ನು ಬಿಟ್ಡು ಬಿಡುತ್ತಿದ್ದರು‌.ನಾನುಮನೆಗೆ ಬಂದು ಗಡದ್ದಾಗಿ ನಿದ್ರೆ ಹೊಡೆಯುತ್ತಿದ್ದೆ

ನಾನು ಬಿಎಸ್ಸಿ ಮಾಡಿ ನಂತರ ಸಂಸ್ಕೃತ ಎಂಎ ಗೆ ಸೇರಿದ್ದು.ವಿಜ್ಣಾನದ ಕಷ್ಟದ ಪಾಠಗಳು ಶಿಸ್ತನ್ನು ಬಯಸುವ ಪ್ರಯೋಗ ತರಗತಿಗಳಿಂದ ನಾನು ಸೋತು ಸುಣ್ಣವಾಗಿದ್ದೆ.ನಂತರ ಎಂಎ ಗೆ ಸೇರಿದಾಗ ಕಲಿಕೆ ಎಷ್ಟು ಸುಲಭದ್ದು ಎನಿಸಿತ್ತು.ಡಾ.ಕೆ ನಾರಾಯಣ ಭಟ್ಟರು ಅದ್ವಿತೀಯ ವಿದ್ವಾಂಸರು‌.ಪ್ರಗಲ್ಭ ಪಂಡಿತರು.ಅವರ ಪಾಠ ಕೇಳುದೊಂದು ಭಾಗ್ಯವೇ ಸರಿ..ಜೊತೆಗೆ ಪದ್ಮನಾಭ ಮರಾಠೆಯವರು ಆಗಷ್ಟೇ ಎಂ ಎ ಮುಗಿಸಿದ ಎಳೆಯರಾಗಿದ್ದರೂ ಪಾಂಡಿತ್ಯಕ್ಕೆ ಕೊರತೆ ಇರಲಿಲ್ಲ.ಡಾ.ಜಿ ಎನ್ ಭಟ್ಟರೂ ಅದ್ವಿತೀಯ ವಿದ್ವಾಂಸರು.ಆದರೆ ಅಲಂಕಾರ ಶಾಸ್ತ್ರ( ಕಾವ್ಯ ಮೀಮಾಂಸೆ) ಪಾಠ ಮಾಡುತ್ತಿದ್ದರು.ವೇದಾಂತವನ್ನು ಐಚ್ಛಿಕ ವಿಷಯವಾಗಿ ತಗೊಮಡಿದ್ದ ಕಾರಣ ನನಗೆ ಕಾವ್ಯ ಮೀಮಾಂಸೆ ಒರಲಿಲ್ಲ.ಹಾಗಾಗಿ ಡಾ.ಜಿ ಎನ್ ಭಟ್ಟರ ಪಾಠ ಕೇಳುವ ಅವಕಾಶ ನನಗಿರಲಿಲ್ಲ

ಬಹುಶಃ ಇಲ್ಲಿನ ಉತ್ತಮ ಉಪನ್ಯಾಸಕರಿಂದಾಗಿ ಸಂಸ್ಕೃತವನ್ನು ನಾನು ಬಹಳಷ್ಟು ಇಷ್ಟ ಪಟ್ಟು ಕಲಿತೆ.ಪದವಿಯಲ್ಲಿ ಐಚ್ಛಿಕ ವಿಷಯವಾಗಿ ಸಂಸ್ಕೃತ ಕಲಿತು Rank ಪಡೆದಿದ್ದ ರಮಿತಾ ಶ್ರೀದೇವಿ‌ ಮೊದಲಾದವರು ನನ್ನ ಸಹಪಾಠಿಗಳಾಗಿದ್ದರು.ಪದವಿಯಲ್ಲಿ ಎರಡು ವರ್ಷ ದ್ವಿತೀಯ ಭಾಷೆಯಾಗಿ ಸಂಸ್ಕೃತ ಕಲಿತ ನನಗೆ ಎಂಎ ಯಲ್ಲಿ ಈ Rank ವಿಜೇತರ ಜೊತೆಗಿನ ಸ್ಪರ್ಧೆ ಸುಲಭದ್ದಾಗಿರಲಿಲ್ಲ.ಆದರೆ ನಾನು ಓದಿ Rank ತೆಗೆದು ಒಳ್ಳೆಯ ಕೆಲಸವನ್ನು ಗಳಿಸಲೇ ಬೇಕೆಂದು ನಿರ್ಧರಿಸಿ ಎಂಎ ಗೆ ಸೇರಿದವಳು.ಹಾಗಾಗಿ ದಿನಕ್ಕೆ ಕಡಿಮೆ ಎಂದರೂ ಎಂಟು ಗಂಟೆ ಓದುತ್ತಿದ್ದೆ.ಆದ್ದರಿಂದ ನನಗೆ ಮೊದಲ Rank ಪಡೆಯಲು ಸಾಧ್ಯವಾಯಿತು

ಇಂದಿಗೂ ನಾನೇನಾದರೂ ನನ್ನ ಭಾಷಣ ಚಂದ ಆದರೆ ಅದಕ್ಕೆ ಕಾರಣ ಇಲ್ಲಿನ ಸಂಸ್ಕೃತ ಕಲಿಕೆ ಮತ್ತು ಉಪನ್ಯಾಸಕರು‌.ನಮ್ಮಲ್ಲಿ ಸೆಮಿನಾರ್ ಮಾಡಿಸಿ ಹೊರ ಜಗತ್ತನ್ನು ಸಮರ್ಥವಾಗಿ ಎದುರಿಸಿ ಗೆಲ್ಲವಂತೆ ನಮ್ಮನ್ನು ತಯಾರು .ಮಾಡಿದ್ದರು.

ಪ್ರಸಾದರ ವೇತನದಲ್ಲಿ ನಮಗೆ ಒಂದು ಹೊತ್ತು ಮಾತ್ರ ಊಟ ಮಾಡಲು ಸಾಧ್ಯವಿತ್ತು

ಆದರೆ ಕಟೀಲಿನ ಮದ್ಯಾಹ್ನದ ಊಟ ಎರಡು ಹೊತ್ತೂ ಊಟ ಸಿಗುವಂತೆ ಮಾಡಿತ್ತು.ಮತ್ತು ಅದು ಬಹಳ ರುಚಿಕರವಾದ ಊಟ ಕೂಡ.ಹಾಗಾಗಿ ನಾನು ಕಟೀಲಿನಲ್ಲಿ ಎರಡು ವರ್ಷ ಹೊಟ್ಟೆ ತುಂಬಾ ಉಂಡದ್ದನ್ನೂ ಪಾಠ ಕೇಳಿದ್ದನ್ನೂ ಜೀವನವಿಡೀ ಮರೆಯಲಾಗದು.

ನಾನು ಎರಡನೇ ವರ್ಷ ಎಂಎಗೆ ಬರುವಷ್ಟರಲ್ಲಿ ಪ್ರಸಾದರಿಗೆ ಮಂಗಳೂರಿನಲ್ಲಿ ಒಳ್ಳೆಯ ಕೆಲಸ ಸಿಕ್ಕಿತ್ತು.ಹಾಗಾಗಿ ಮುಂದೆ ಅಂತಹ ಸಮಸ್ಯೆ ಏನೂ ಆಗಲಿಲ್ಲ

ಉಚಿತ ಊಟ ತಿಂಡಿಗಳು ಮಕ್ಕಳನ್ನು ಹಾಳು ಮಾಡುವುದಿಲ್ಲ

ಬದಲಿಗೆ ಮಕ್ಕಳೆಡೆಗಿನ ಉದಾರತೆ ತರಗತಿಗೆ ಹಾಜರಾಗದೇ ಇದ್ದರೂ ಪರೀಕ್ಷೆ ಬರೆಯಲು ಬಿಡುವುದು,ಫಲಿತಾಂಶಕ್ಕಾಗಿ ತೀರಾ ಉದಾರವಾಗಿ‌ಮೌಲ್ಯ ಮಾಪನ ಮಾಡುದು.ಪಾಸ್ ಮಾಡುದು ಶಿಕ್ಷಣದ ಗುಣಮಟ್ಟ ಕುಸಿಯಲು ಕಾರಣವಾಗಿದೆ

ಉಚಿತ ಉಟ ಕೊಟ್ಟರೆ ಹಾಳಾಗುವುದಾದರೆ ನಾವೆಲ್ಲ ಹಾಳಾಗಿ ಎಕ್ಕುಟ್ಟಿ ಹೋಗಿರುತ್ತಿದ್ದೆವು

ಆದರೆ ನಾವ್ಯಾರೂ ಉಚಿತ ಊಟ ಸಿಕ್ಕ ಕಾರಣಕ್ಕೆ ಹಾಳಾಗಿಲ್ಲ.ನನ್ನ ಸಹಪಾಠಿಗಳೆಲ್ಲರೂ ಅವರವರ ಕ್ಷೇತ್ರದಲ್ಲಿ ಯಶಸ್ವಿಯಾಗಿದ್ದಾರೆ.ಅವಿನಾಶ ಪುತ್ತೂರಿನಲ್ಲಿ ಸರಸ್ವತಿ ವಿದ್ಯಾಮಂದಿರ ಎಂಬ ವಿದ್ಯಾ ಸಂಸ್ಥೆಯನ್ನು ನಡೆಸುತ್ತಿದ್ದಾರೆ.ಗಜಾನನ ಮರಾಠೆ ,ರಮೇಶ ಆಚಾರ್ಯ ಡಾ.ಈಶ್ವರ ಪ್ರಸಾದ್  ಕಮಲಾಯಿನಿಯರು ಉತ್ತಮ ಶಿಕ್ಷಕ/ ಉಪನ್ಯಾಸಕರಾಗಿ ಹೆಸರು ಗಳಿಸಿದ್ದಾರೆ

ರಮಿತಾ ಭಾಷೆಯೇ ತಿಳಿಯದ ಊರು ವಯನಾಡಿನ ಮಲೆಯಾಳ ಕಲಿತು ತನ್ನದೇ ಅದ ಸಣ್ಣ ಉದ್ಯಮ‌ನಡೆಸುತ್ತಿದ್ದಾರೆ.

ನನ್ನ ಸಹಪಾಠಿ ನೀತಾ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ.ಆದರೆ ಮುಂದೆ ತುಂಬಾ ಓದಿ ಉತ್ತಮ ಕೆಲಸದಲ್ಲಿದ್ದಾರೆ ಎಂದು ಕೇಳಿರುವೆ.

ಉಚಿತ ಊಟ ಬಡ ಮಕ್ಕಳಿಗೆ ಅಗತ್ಯವಾಗಿ ನೀಡಬೇಕಾದದ್ದೇ..ಆದರೆ ಪಾಠಕ್ಕಿಂತ ಊಟ ಉಪಾಹಾರ ಹಾಲು ಮೊಟ್ಟೆ ಸಕಾಲದಲ್ಲಿ ಬೇಯಿಸಿ ಕೊಡುವ ಕೆಲಸದಲ್ಲಿ ಮುಳುಗಿ ಹೋಗುವ ಶಿಕ್ಷಕರಿಗೆ ಪಾಠ ಮಾಡಲು ಸಮಯವಿಲ್ಲದಂತಾಗಬಾರದು ಅಷ್ಟೇ..

ದಿನೇ ದಿನೇ ಶಿಕ್ಷಣ ಮಟ್ಟ ಕುಸಿಯುತ್ತಿದೆ.ಮೊದಲು ಕಾಗುಣಿತ ಗೊತ್ತಿಲ್ಲದ ಹತ್ತನೆಯ ತರಗತಿಯಮಕ್ಕಳು ಪಾಸಾಗಿ ಪಿಯು ಗೆ ಬರುತ್ತಿದ್ದರೆ ಈಗ ಅಕ್ಷರ ಮಾಲೆಯ ಬರವಣಿಗೆಯನ್ನೇ ಅರಿಯದವರು ಬರುತ್ತಿದ್ದಾರೆ.ಸರಳವಾಕ್ಯಗಳನ್ನು ಮಾಡಲು ಬರೆಯಲು ತಿಳಿಯದವೇ ಹೆಚ್ಚಾಗಿದ್ದಾರೆ

ಊಟ ತಿಂಡಿ ಹಾಲು ಹಣ್ಣು ನೀಡುವಷ್ಟೇ ಕಾಳಜಿಯಲ್ಲಿ ಗುಣ ಮಟ್ಟದ ಶಿಕ್ಷಣವನ್ನು ನೀಡುವ ಅಗತ್ಯವಿದೆ ಎಂದು ನನಗನಿಸುತ್ತದೆ

- ಡಾ.ಲಕ್ಷ್ಮೀ  ಜಿ ಪ್ರಸಾದ್

Saturday, 17 May 2025

ದೊಡ್ಡವರ ದಾರಿ : 75 ಎಲ್ಲ ಇದ್ದೂ ಇರದುದರ ಕುರಿತು ಕೊರಗುವವರಿಗೆ ದಾರಿ ದೀಪ: ನಮ್ಮ ಹೆಮ್ಮೆಯ ವಿಶಿಷ್ಟ ಓದುಗ ಮಿತ್ರರಾದ ಡಿ ನಿತ್ಯಾನಂದ

 ದೊಡ್ಡವರ ದಾರಿ : 75 

ಎಲ್ಲ ಇದ್ದೂ ಇರದುದರ ಕುರಿತು ಕೊರಗುವವರಿಗೆ ದಾರಿ ದೀಪ: 

ನಮ್ಮ ಹೆಮ್ಮೆಯ ವಿಶಿಷ್ಟ ಓದುಗ ಮಿತ್ರರಾದ

ಡಿ ನಿತ್ಯಾನಂದ 

ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ 

ನಿತ್ಯಾನಂದ ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಯುವಕ..ಅದರಲ್ಲೇನು ವಿಶೇಷ..ಸ್ನಾತಕೋತ್ತರ ಪದವಿ ಪಡೆದ  ನೂರಾರು ಮಂದಿ ಇದ್ದಾರೆ ಎನ್ನುವಿರಾ ? 

ಹಾಗಾದರೆ ನಿತ್ಯಾನಂದನ ವಿಶೇಷತೆ ಬಗ್ಗೆ ತಿಳಿಯೋಣ 

ಚಿದಾನಂದ ಹುಟ್ಟುವಾಗಲೇ ದೈಹಿಕ ನ್ಯೂನತೆಯನ್ನು ಹೊಂದಿದ ತರುಣ 

ಕೈಕಾಲುಗಳಲ್ಲಿ ಬಲವಿಲ್ಲ..ಬಾಯಿ ದವಡೆಗಳೂ ದುರ್ಬಲ..ಮಾತೂ ಕೂಡ ತೀರ ಅಸ್ಪಷ್ಟ ..

ಊಟ ತಿಂಡಿಯಿಂದ ಹಿಡಿದು ಎಲ್ಲದಕ್ಕೂ ತಾಯಿಯ ಆಶ್ರಯ ಬೇಕೇ ಬೇಕು...ಆದರೆ ನ್ಯೂನತೆ ಇರುವುದು ದೇಹಕ್ಕೆ ಮಾತ್ರ ‌‌‌..ಮನಸಿಗಲ್ಲ ಎಂಬುದನ್ನು ಪ್ರೂವ್ ಮಾಡಿದ ಯುವಕ 

ದೈಹಿಕ ನ್ಯೂನತೆಯನ್ನು ಮೆಟ್ಟಿ ನಿಂತು ಓದಿ ಸಮಾಜ ಶಾಸ್ತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಇವರಿಗೆ ತುಂಬಾ ಓದುವ ಹವ್ಯಾಸವಿದೆ ನನ್ನ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕವನ್ನು ಓದಲು ಬಯಸಿ ತನ್ನ ತಾಯಿ ಪರಿಮಳಾ ಅವರ ಮೂಲಕ ನನ್ನನ್ನು ಸಂಪರ್ಕಿಸಿದರು.

ಅವರ ಆಸಕ್ತಿ ನೋಡಿ ನಾನು ಒಂದು ಪ್ರತಿ ಕಳುಹಿಸಿದೆ ..ಪುಸ್ತಕ ತಲುಪಿದಾಗ ಅವರಿಗಾದ ಖುಷಿ ಅಪರಿಮಿತ ಅದು ವರ್ಣನಾತೀತ..ನನ್ನ ಎರಡು ದಶಕಗಳ ಅಧ್ಯಯನ ಸಾರ್ಥಕ ಅನಿಸುದು ಇಂತಹ ಕ್ಷಣಗಳಲ್ಲಿಯೇ..

ಎಲ್ಲ ಇದ್ದೂ ಇರದುದರ ಕುರಿತು  ಕೊರಗುವ ನಮಗೆ ದಾರಿದೀಪವಾಗಿದ್ದಾರೆ ನಿತ್ಯಾನಂದ .

ಮಗನ ನಗುವಿಗಾಗಿಯೇ ಬದುಕಿರುವ ತಾಯಿ ಪರಿಮಳಾ ಅವರು ಕೂಡ ಶ್ಲಾಘ್ಯರು 

ನಿತ್ಯಾನಂದರ ಜೀವನೋತ್ಸಾಹದ ಬಗ್ಗೆ ತಿಳಿಯುವ ಅಸಕ್ತಿ ಇರುವವರಿಗಾಗಿ ನಿತ್ಯಾನಂದನ ಬಗ್ಗೆ  ಜಿ ಎಂ ಶಿರಹಟ್ಟಿಯವರ ಪ್ರಕಟಿತ ಬರಹವನ್ನು ಜೊತೆಗೆ ಇರಿಸಿದ್ದೇನೆ

ನೆನಪಿನ ಹಳ್ಳಿಯ ನೆಲದಲ್ಲಿ...

* ಜಿ. ಎಂ. ಶಿರಹಟ್ಟಿ

ತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತರಾಗಿದ್ದ ಅ ಸಮಾಜಶಾಸ್ತ್ರಜ್ಞ, ಮಾ , ಮಾನವಶಾಸ್ತ್ರದ ಅಧ್ವರ್ಯು , 20. 2. 2 (16.11.1916-30.11.1999) ಅವರ ಪ್ರಸಿದ್ಧ ಕೃತಿ 'ದಿ ರಿಮೆಂಬರ್ಡ್ ವಿಲೇಜ್' ('ನೆನಪಿನ ಹಳ್ಳಿ'). ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ, ಮಿದುಳಿನ ಹಾನಿಯೆಂದಾಗಿ ಯಿಂದಾಗಿ ಕೈಕಾಲುಗಳು ನಿಷ್ಕ್ರಿಯವಾಗಿರುವ 33 ವರ್ಷದ ಯುವಕನೊಬ್ಬ ಇದನ್ನು ಓದೆ, ಆ ಹಳ್ಳಿಯನ್ನು (ಆಗಿನ ರಾಮಪುರ – ಈಗಿನ ಕೊಡಗಹಳ್ಳಿ) ಒಮ್ಮೆ ನೋಡಲೇಬೇಕೆಂದು ಉತ್ಕಟವಾಗಿ ಅಪೇಕ್ಷೆಪಟ್ಟ, ಈ ಆಸಕ್ತಿಯು ಹೆಚ್ಚಾಗಿ 'ದಿ ರಿಮೆಂಬರ್ಡ್ ವಿಲೇಜ್' ಪುಸ್ತಕದ ಕನ್ನಡ ಅನುವಾದ 'ನೆನಪಿನ ಹಳ್ಳಿ'ಯನ್ನು ಪಡೆದು ಓದುತ್ತ ಓದುತ್ತ ಆತ ಅಪೂರ್ವ ಆನಂದ ಪಡೆದ. ಪರಾವಲಂಬಿಯಾಗಿರುವ ಈ ಯುವಕ ಅಮ್ಮನ ಆಸರೆಯಿಂದ 'ನೆನಪಿನ ಹಳ್ಳಿ'ಗೆ ಹೋಗಿ ಅಲೆದಾಡಿ ಶ್ರೀನಿವಾಸ ಅವರ ನೆನಪಿನ ಸ್ಥಳಗಳನ್ನೆಲ್ಲ ನೋಡಿದ. ಅಮ್ಮನಿಗೆ ಹೇಳಿ ಬರೆಸಿದ ಆತನ ಅನುಭವ ಕಥನ.

ಇದನ್ನು ಓದುವ ಮುಂಚೆ ಈ ಯುವಕನ ಬಗ್ಗೆ ತಿಳಿದುಕೊಳ್ಳಬೇಕು. ಡಿ. ನಿತ್ಯಾನಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರ. ಮಿದುಳಿನ ಹಾನಿಯಿಂದಾಗಿ ಕೈಕಾಲುಗಳು ನಿಷ್ಕ್ರಿಯವಾಗಿವೆ. ಮಾತನಾಡಲು ಬರುವುದಿಲ್ಲ. ಬರೆಯುವಾಗಲೂ ಬೆರಳುಗಳು ಬೇಗ ಸಹಕಾರ ನೀಡುವುದಿಲ್ಲ. ಏನು ಬೇಕಾದರೂ ಬರವಣಿಗೆಯ ಮೂಲಕವೇ ಎಲ್ಲರ ಜೊತೆ (ಅದೂ ಅಸ್ಪಷ್ಟವಾಗಿ) ಮಾತನಾಡುತ್ತಾನೆ. ಅವನೇ ಬರೆದು ಹೇಳಿದ್ದನ್ನು ಆತನ ತಾಯಿ ಪರಿಮಳಾ ಹೇಳುತ್ತಾರೆ; 'ನನ್ನ ದೈಹಿಕ ಸ್ಥಿತಿ ಪರವಾಗಿಲ್ಲ. ಭಾವನೆಗಳಿವೆ, ಕನಸುಗಳಿವೆ. ಅಮ್ಮ, ಅಣ್ಣ, ಅಪ್ಪ, ಅಜ್ಜಿ, ಓಹ್! ಎಷ್ಟೊಂದು ಪ್ರೀತಿ ನನ್ನನ್ನು ಸುತ್ತುವರಿದಿದೆ. ಸದ್ಯ ನನಗೆ ಕಿವಿ ಚೆನ್ನಾಗಿ ಕೇಳಿಸುತ್ತಿದೆ.'

ಶ್ರೀನಿವಾಸ ಅವರು ಇದ್ದ ಮನೆಯ ಎದುರು

ದೈಹಿಕವಾಗಿ ನಿಷ್ಕ್ರಿಯನಾಗಿರುವ ಯುವಕನೊಬ್ಬ ಪ್ರಸಿದ್ಧ ಹಳ್ಳಿಯೊಂದನ್ನು ತಿರುಗಾಡಿ ನೋಡಿದಾಗ ಅದೊಂದು ಬದಲಾಗುತ್ತಿರುವ ಗ್ರಾಮವಾಗಿತ್ತು. ನೋಡಿದ ಗ್ರಾಮಕ್ಕಿಂತ ಪುಸ್ತಕದಲ್ಲಿ ಓದಿದ, ತನ್ನ ಸ್ಮೃತಿಪಟಲದಲ್ಲಿದ್ದ ಹಳ್ಳಿಯನ್ನೇ ಆ ಯುವಕ ಮತ್ತೆಮತ್ತೆ ನೆನಪಿಸಿಕೊಳ್ಳತೊಡಗಿದ.

The Remembered Village

ತನ್ನ 75 ತಾಯಿಯನ್ನೇ ಅವಲಂದಸಿದ್ದಾನ. ಆರ್. ಶಾಮಭಟ್ಟ ಅವರು ಅನುವಾದಿಸಿದ 'ನೆನಪಿನ ಹಳ್ಳಿ' ಪುಸ್ತಕ ನಿತ್ಯಾನಂದನ ಕೈಸೇರಿತು. ಮುಂದೊಂದು ದಿನ ಆತ ಅಣ್ಣ-ಅಮ್ಮನ ಸಹಾಯದಿಂದ ರಾಮಪುರಕ್ಕೆ ಕಾಲಿಟ್ಟ. ಒಂದೆರಡು ವಾರಗಳ ಮೊದಲು ಆತನ ಸಮಾಜಶಾಸ್ತ್ರದ ವಿದ್ಯಾರ್ಥಿ ಗೆಳೆಯರು ಶ್ರೀನಿವಾಸರ ರಾಮಪುರಕ್ಕೆ ಈಗಿರುವ ರಾಮಪುರಕ್ಕೂ ಆಗಿರುವ ಎಲ್ಲ ಬದಲಾವಣೆಗಳ ಅಧ್ಯಯನ ಮಾಡಲು ಸಲಹೆ ನೀಡಿದ್ದರು.

ರಾಮಪುರ ತಲುಪಿದಾಗ ನಿತ್ಯಾನಂದ ಹಾಗೂ ಅವನ ತಾಯಿ, ಅಣ್ಣನವರನ್ನು ಸ್ವಾಗತಿಸಿದವರು ಊರಿನ ಹಿರಿಯರಾದ ಜವರೇಗೌಡರು. ಆಗಿನ ರಾಮಪುರವೇ ಈಗ ಮಾರ್ಪಾಡಾದ ಕೊಡಗಹಳ್ಳಿ

ಎಂಬುದು ನಿತ್ಯಾನಂದನಿಗೆ ಮನವರಿಕೆಯಾಯಿತು. ಸಮಾಜಶಾಸ್ತ್ರ ವಿದ್ಯಾರ್ಥಿಯಾಗಿದ್ದುದರಿಂದ ಈ ಸಾಮಾಜಿಕ ಬದಲಾವಣೆಯ ಚಿತ್ರಣವನ್ನು ತಿಳಿಯಲು ಬಹಳ ಹೊತ್ತು ಹಿಡಿಯಲಿಲ್ಲ. ಕುತೂಹಲ ತಣಿಸುವ ಉತ್ತರ ಶ್ರೀನಿವಾಸರ ಹಳ್ಳಿಯಲ್ಲಿ ದೊರೆಯತೊಡಗಿತು. ಶ್ರೀನಿವಾಸ ಅವರು ವಾಸಿ ವಾಸಿಸುತ್ತಿದ್ದ ಮನೆ, ಅವರು ಉಪಯೋಗಿಸುತ್ತಿದ್ದ ಕೊಠಡಿ, ಅವರ ಪುಸ್ತಕದಲ್ಲಿರುವ ಕುಳ್ಳೇಗೌಡರ ಮನೆ, ದೇವಾಲಯ, ಹಳೆಯ ಕಾಲದ ಮನೆ - ಬಾಗಿಲುಗಳು - ಎಲ್ಲ ಕಡೆ ಅಲೆದಾಡಿ ನೋಡಿ ನಿತ್ಯಾನಂದ ಆನಂದಿಸಿದ. ಜವರೇಗೌಡರ ತಂದೆ, ಅವರ ಅಣ್ಣ ರಾಮೇಗೌಡರ ಜೊತೆಗೆ ಶ್ರೀನಿವಾಸರ ಒಡನಾಟ, ಹಳ್ಳಿಯ ಆಚಾರ-ವಿಚಾರ, ಬದುಕಿನ ಚಿತ್ರ ಇವೆಲ್ಲವುಗಳ ಮಾಹಿತಿಯನ್ನು ಜವರೇಗೌಡರಿಂದ ಪಡೆದ. ನಿತ್ಯಾನಂದನ ಚೈತನ್ಯ ಕಂಡು ಗೌಡರು ಬೆರಗಾದರು. ದೈಹಿಕವಾಗಿ ನಿಷ್ಕ್ರಿಯನಾದ ಯುವಕನೊಬ್ಬನ ಹುಮ್ಮಸ್ಸು, ಕೌತುಕಗಳನ್ನು ಕಂಡು ಬೆರಗಾದರು.

ನಿತ್ಯಾನಂದ ತಿರುಗಿಬಂದ ನಂತರ ಮನಸ್ಸಿನ ಆಗುಹೋಗುಗಳನ್ನೆಲ್ಲ ತನ್ನ ತಾಯಿಯ ಮೂಲಕ ಬರೆದು ಗೆಳೆಯರಿಗೆ ತಿಳಿಸತೊಡಗಿದ. ಗೆಳೆಯರೊಂದಿಗೆ ಸುಮಾರು ಛಾಯಾಚಿತ್ರಗಳನ್ನು ಹಂಚಿಕೊಂಡ, ತನ್ನ ಮನದ ಭಾವನೆಗಳನ್ನು, ಯೋಜನೆಗಳನ್ನು ಬರಹದಲ್ಲಿಡಲು ಅಸಮರ್ಥನಾದಾಗ ತಾಯಿಯ ಎದುರು ದುಃಖಿಸತೊಡಗಿದ. ಆತ ಅಸ್ಪಷ್ಟವಾಗಿ ಬರೆದುದನ್ನು ತಾಯಿ ಸರಿಯಾಗಿ ಬರೆದು ಇಡತೊಡಗಿದರು.

ನಿತ್ಯಾನಂದ ತನ್ನ ಅಸ್ಪಷ್ಟ ಬರಹವೊಂದರಲ್ಲಿ ಹೀಗೆ ಬರೆದಿದ್ದಾನೆ: 'ಭಗವಂತ ತುಂಬ ದಯಾಮಯಿ, ಕರುಣಾಳು. ಒಂದೆಡೆ ಬಾಗಿಲು ಮುಚ್ಚಿದರೆ ಮತ್ತೊಂದೆಡೆ ತೆಗೆದೇ ಇರುತ್ತಾನೆ. ನನಗೆ ಮಾತನಾಡಲು ಬರುವದಿಲ್ಲ. ಆದರೂ ಓದುವ, ಅರ್ಥೈಸುವ, ಚಿಂತಿಸುವ, ಅಸ್ಪಷ್ಟವಾಗಿ ಬರೆಯುವ ಹಾಗೂ ಅಮ್ಮನೊಂದಿಗೆ ಎಲ್ಲವನ್ನೂ ಕೊಟ್ಟಿದ್ದಾನೆ. ನನ್ನ ಜೀವನದ ಒಡನಾಡಿ, ನನ್ನನ್ನು ತಿಳಿದುಕೊಂಡು, ನನ್ನ ಭಾವನೆಗಳಿಗೆ, ನನ್ನ ಬೇಕು-ಬೇಡಗಳಿಗೆ ಸ್ಪಂದಿಸುವ ಅಮ್ಮನನ್ನು ಕೊಟ್ಟಿದ್ದಾನೆ. ಈ ಅಮ್ಮನ ಜೊತೆಗೆ ನೆನಪಿನ ಹಳ್ಳಿಗೆ ಬಂದುದು ಭಗವಂತನ ಕೃಪೆ.'

ಪ್ರೊ. ಎಂ. ಎನ್. ಶ್ರೀನಿವಾಸರು ಇದ್ದಾಗಿನ ರಾಮಪುರ ಹಾಗೂ ಈಗಿನ ಬದಲಾದ ರಾಮಪುರ ಎಂಬ ಹೋಲಿಕೆಯ ಅಧ್ಯಯನದತ್ತ ಈಗ ನಿತ್ಯಾನಂದನ ಒಲವು. ಶ್ರೀನಿವಾಸರ ನೆನಪಿನಲ್ಲಿ ಉಳಿದು ಬೆಳಗಿದ ಅವರ ಹಳ್ಳಿಯು ನಿತ್ಯಾನಂದನಂತಹ ಯುವಕರನ್ನೂ ಪರವಶರನ್ನಾಗಿ ಮಾಡಿದೆ. ಆ 'ನೆನಪಿನ ಹಳ್ಳಿ'ಯು ಇನ್ನೂ ನೆನಪಿನಾಳದಲ್ಲಿ ಉಳಿದಿದೆ ಹಾಗೂ ಉಳಿಯುತ್ತದೆ.

(ಲೇಖಕರು ದೂರದರ್ಶನದ ಮಾಜಿ ನಿರ್ದೇಶಕರು)

Thursday, 8 May 2025

ಚಿನ್ನ ಖರೀದಿಸುವುದರಲ್ಲಿ ತಪ್ಪೇನಿದೆ?- ಡಾ.ಲಕ್ಷ್ಮೀ ಜಿ ಪ್ರಸಾದ್

ಚಿನ್ನ  ಖರೀದಿಸುವುದರಲ್ಲಿ ತಪ್ಪೇನಿದೆ? 
 
ಈವತ್ತು ಅಕ್ಷಯ ತದಿಗೆ.ಈವತ್ತು ತಗೊಂಡ ಬಂಗಾರ ಅಕ್ಷಯ ಆಗುತ್ತದೆ ಎಂಬ ನಂಬಿಕೆ ಹರಡಿದೆ.ಅನೇಕರು ಹೇಳುವಂತೆ ಇದು ಬಂಗಾರದ ಆಭರಣ ಮಳಿಗೆಗಳು ಹರಡಿದ ಮೂಢನಂಬಿಕೆ 
ಮೂಢನಂಬಿಕೆಯೋ ಚಿನ್ನದ ಒಡವೆಗಳ ಮೇಲೆ ಆಸೆಯೋ ,ಬಂಗಾರದ ಒಡವೆಗಳನ್ನು ಖರೀದಿಸುವುದರಲ್ಲಿ ತಪ್ಪೇನಿದೆ?
ಇತರ ಹೂಡಿಕೆಗಳಿಗೆ ಹೋಲಿಸಿದರೆ ಚಿನ್ನ ಖರೀದಿ ಸುರಕ್ಷಿತ ಮತ್ತು ಲಾಭದಾಯಕ ಕೂಡ.
ಆಭರಣಗಳನ್ನು  ಖರೀದಿಸುವಾಗ ವೇಸ್ಟೇಜ್ ಮತ್ತು ತಯಾರಿಕಾ ವೆಚ್ಚ 10-20%ಇರುತ್ತದೆ .ಇದು ನಷ್ಟ ಎಂದು ಅನೇಕರ ಆಕ್ಷೇಪ.
ಇದು ಒಪ್ಪಿಕೊಳ್ಳುವದ್ದೆ.
ಆದರೆ ಇದರಂತಹ ಸುರಕ್ಷಿತ ವಾದ ಉಳಿತಾಯದ ದಾರಿ ಬೇರೆ ಯಾವುದು ಇದೆ? ಮತ್ತು ಅಗತ್ಯ ಬಿದ್ದಾಗ ತಕ್ಷಣವೇ ಒದಗುವ ಆಕರ ಬೇರೆ ಯಾವುದಿದೆ ?
ಈ ಸಮಸ್ಯೆಗೆ ಪರಿಹಾರವಾಗಿ 
ಆಭರಣಗಳ ಬದಲು ಚಿನ್ನದ ನಾಣ್ಯಗಳನ್ನು ಖರೀದಿಸಬಹುದು

ಮ್ಯೂಚುವಲ್ ಫಂಡ್ ಇನ್ನಿತರೆಡೆಗಳಲ್ಲಿ ಬಂಡವಾಳ ಹಾಕುದು ಲಾಭಕರ ಇರಬಹುದು ಆದರೆ ಇದರ ಬಗ್ಗೆ ನನ್ನನ್ನು  ಸೇರಿಸಿದಂತೆ ಹೆಚ್ಚಿನವರಿಗೆ ತಿಳುವಳಿಕೆ ಇರುವುದಿಲ್ಲ 
ಇನ್ನು ಸೈಟ್ ತೆಗೆಯಬೇಕಾದರೆ ತುಂಬಾ ದುಡ್ಡು ಬೇಕು 

ಬಂಗಾರದ ಒಡವೆಗಳನ್ನು ಅವರವರಲ್ಲಿ ಇರುವ ದುಡ್ಡಿಗೆ ಅನುಗುಣವಾಗಿ ಸಣ್ಣ ದೊಡ್ಡ ಒಡವೆಗಳನ್ನು ಖರೀದಿಸಬಹುದು.
ವರ್ಷ ವರ್ಷ ಒಂದೊಂದೇ ಒಡವೆಗಳನ್ನು ಖರೀದಿಸುವುದರಲ್ಲಿ ನಷ್ಟ ವಿಲ್ಲ ಯಾಕೆಂದರೆ ವರ್ಷ ವರ್ಷ ಚಿನ್ನದ ಬೆಲೆ ರಾಕೆಟ್ ಯಾನದಲ್ಲಿ ಏರುತ್ತಿದೆ.
ನನ್ನ ಮದುವೆ ಸಮಯದಲ್ಲಿ ಎಂದರೆ 1993ರಲ್ಲಿ ಚಿನ್ನದ ಬೆಲೆ ಗ್ರಾಂ ಗೆ 365₹ಇತ್ತು.ಈಗ ಇದರ  ಹದಿನೆಂಟು -ಇಪ್ಪತ್ತು ಪಟ್ಟು  ಹೆಚ್ಚು ಆಗಿದೆ 

ನಾನು ಕಳೆದ ಜುಲೈ ತಿಂಗಳಲ್ಲಿ ಎರಡು ಬಳೆಗಳನ್ನು ಗ್ರಾಂ ಗೆ 5500₹ ರಂತೆ ತಗೊಂಡಿದ್ದೆ
ಇತ್ತೀಚೆಗೆ ಮಾರ್ಚ್ ತಿಂಗಳಲ್ಲಿ ಒಂದು ಜ್ಯುವೆಲ್ಲರ್ಸ್ ನ ಪ್ರತಿನಿಧಿಗಳು ಬಂದು ಈಗ 25%ಅಡ್ವಾನ್ಸ್ ಪೇ ಮಾಡಿದರೆ ಎಪ್ರಿಲ್ 27ರಿಂದ ಮೇ ಐದರ ಒಳಗೆ ಇಂದಿನ ಬೆಲೆಗೆ ಒಡವೆ ಖರೀದಿ ಮಾಡಲು ಅವಕಾಶ ಇದೆ ಜೊತೆಗೆ ವೇಸ್ಟೇಜ್ ಮತ್ತು ಮೇಕಿಂಗ್ ಚಾರ್ಜರ್ಸ್ ನಲ್ಲಿ 25%ರಿಯಾಯತಿ ಇದೆ ಎಂದರು
ಆ ದಿನದ ಚಿನ್ನದ ಬೆಲೆ ಗ್ರಾಮಿಗೆ 6125₹ ಇತ್ತು.

ಅದಕ್ಕೆ ಆರೇಳು ತಿಂಗಳ ಮೊದಲು ನಾನು ಜುಲೈ ಲ್ಲಿ ತಗೊಂಡಿದ್ದಾಗ 5500₹  ಇತ್ತು.

ಆರೇಳು. ತಿಂಗಳಲ್ಲಿ ಗ್ರಾಮಿಗೆ 625 ₹ ಹೆಚ್ಚಾಗಿತ್ತು 
ಅಬ್ಬಾ ಅನ್ನಿಸಿತು..ಇನ್ನೂ ಹೆಚ್ಚಾದರೆ ಮುಂದೆ ಚಿನ್ನ ತಗೊಳ್ಳುದೇ ಕಷ್ಟ ಆಗಬಹುದು ಎಂದೆನಿಸಿತು 
ಮನೆಗೆ ಬಂದು ಪ್ರಸಾದರಲ್ಲಿ ಮಾತನಾಡಿ ಹೇಗೋ ಹೊಂದಾಣಿಕೆ ಮಾಡಿಕೊಂಡು ಮೂರು ಲಕ್ಷದ 25% ಎಂದರೆ 75000₹ಅಡ್ವಾನ್ಸ್ ಪೇ ಮಾಡಿದೆ 

ಒಂದೊಮ್ಮೆ ನಾವು ತಗೊಳ್ಳುವ ದಿನ ಚಿನ್ನದ ಬೆಲೆ ಇಳಿದಿದ್ದರೆ ಆ ದಿನದ ಬೆಲೆ ಎಂದಿದ್ದರು
ನಾನು ಅಡ್ವಾನ್ಸ್ ಬುಕಿಂಗ್ ಮಾಡಿದ ದಿನ ಚಿನ್ನದ ಬೆಲೆ ಗ್ರಾಮಿಗೆ 6135₹ಇತ್ತು
ಈಗ ಚಿನ್ನದ ಬೆಲೆ ಜಾಸ್ತಿ ಇದೆ ಕಡಿಮೆ ಇರುವಾಗ ನೋಡಿ ತಗೊಳ್ಳಬಹುದಲ್ವ ಎಂದು ನನ್ನ ಆತ್ಮೀಯರು ಹೇಳಿದಾಗ ನನ್ನ ಪಾಲಿಗೆ ಬರಬೇಕಾದುದನ್ನು ದೇವರು ನನಗಾಗಿ ತೆಗೆದಿರಿಸುತ್ತಾನೆ ಎಂದಿದ್ದೆ.
ಮೊನ್ನೆ ಮೇ ನಾಲ್ಕರಂದು ಹೋಗಿ ಮೂರು ಲಕ್ಷ ರುಪಾಯಿಗೆ  ಗ್ರಾಮಿಗೆ 6135₹ನಂತೆ ಒಡವೆ ತಗೊಂಡೆ.ಅದಕ್ಕೆ 25% ವೇಸ್ಟೇಜ್ ಮತ್ತು ಮೇಕಿಂಗ್ ಚಾರ್ಜರ್ಸ್ ನಲ್ಲಿ ರಿಯಾಯಿತಿ ದೊರೆಯಿತು 
ಆ ದಿನದ  ಚಿನ್ನದ ಬೆಲೆ 6585₹ ಇತ್ತು.ಜೊತೆಗೆ ವೇಸ್ಟೇಜ್ ಮತ್ತು ಮೇಕಿಂಗ್ ಚಾರ್ಜರ್ಸ್ ನಲ್ಲಿ 25ಶೇಕಡ ರಿಯಾಯಿತಿ ಇತ್ತು
ಹಾಗಾಗಿ ಪ್ರಸಾದರು ಇನ್ನೂ  ಸ್ವಲ್ಪ  ಬೇಕಿದ್ದರೆ  ತಗೋ.. ಕಾರ್ಡ್ ನಲ್ಲಿ  ಪೇ ಮಾಡಲು ಆಗುತ್ತದೆ . ಮತ್ತೆ ಹೇಗೋ ಕಾರ್ಡಿಗೆ  ದುಡ್ಡು ಹೊಂದಿಸುವ ಎಂದರು.

ಅಲ್ಲೊಂದು ಸರ 56gm ದು  ಬಹಳ ಇಷ್ಟ ಆಗಿತ್ತು ಆದರೆ ಅದರ ಬೆ ಲೆ   ಮೂರು ಲಕ್ಷ ದಾಟುತ್ತದೆ ಎಂಬ ಕಾರಣಕ್ಕೆ ಅದನ್ನು ಬಿಟ್ಟು ಬೇರೆ ತಗೊಂಡಿದ್ದೆ.
ಪ್ರಸಾದರು ಹೇಳಿದ್ದೇ ತಡ . ಅದನ್ನು ಖ ರೀದಿಸಿ ತಂದೆ.ಅದೇ ದಿನ ಬ್ಯಾಂಕ್ ಲಾಕರ್ ನಲ್ಲಿ ಇತರ ಒಡವೆಗಳ ಜೊತೆಗೆ ಸೇಫ್ ಆಗಿ ಇರಿಸಿ ಬಂದೆ

ನಾನು ಒಡವೆಗಳನ್ನು ಧರಿಸುವುದು ತೀರ ಕಡಿಮೆ.ಸೀರೆ ಚಿನ್ನದಲ್ಲಿ ದೊಡ್ಡ ಆಸಕ್ತಿ ಯೂ ಇಲ್ಲ ನನಗೆ.
ಆದರೆ ಚಿನ್ನದ ಒಂದು ಆಪದ್ಧನ ಎಂದು  ಅರಿವಾದದ್ದು ನನಗೆ ಐದು ವರ್ಷಗಳ ಮೊದಲು ಮನೆ ಕಟ್ಟಲು ಶುರು ಮಾಡಿದಾಗ..
ನನ್ನ  ಸಹೋದ್ಯೋಗಿಗಳು ಕೆಜಿ ಐಡಿ ಲೋನ್ ಗೆ ಅರ್ಜಿ ಹಾಕಿದಾಗ ನಾನು ಸುಮ್ಮನೆ ಹಾಕಿದ್ದೆ.ಅದು ಸ್ವಲ್ಪ ದುಡ್ಡು ಬಂದಿತ್ತು ಜೊತೆಗೆ ಎಲ್ ಐಸಿ ಪಾಲಿಸಿ ಮೆಚೂರ್ ಆದ ದುಡ್ಡು ಸ್ವಲ್ಪ ಬಂದಿತ್ತು.ಮನೆ ಸಾಲಕ್ಕೆ ಅರ್ಜಿ ಸಲ್ಲಿಸಿ 
ಮನೆ ಕಟ್ಟಲು ಶುರು ಮಾಡಿದ್ದೆವು.
ಪಿಲ್ಲರ್ ಹಾಕುವಷ್ಟರಲ್ಲಿ ಒಂದು ಸಣ್ಣ ತಾಂತ್ರಿಕ ಕಾರಣದಿಂದಾಗಿ ನ್ಯಾಶನಲೈಸ್ಡ್  ಬ್ಯಾಂಕ್ ನಲ್ಲಿ ಮನೆ ಸಾಲ ಸಿಗಲಿಲ್ಲ.ಖಾಸಗಿ ಬ್ಯಾಂಕ್ ಫೈನಾನ್ಸ್ ಗಳ ಸಾಲ ಬೇಡ ಎಂದೆನಿಸಿತ್ತು 
ಇಂತಹ ಸಂದರ್ಭದಲ್ಲಿ ನಮಗೆ ಸಹಾಯಕ್ಕೆ ಬಂದದ್ದು ನನಗೆ ಮದುವೆ ಸಮಯದಲ್ಲಿ ತಂದೆ ಕೊಟ್ಟ, ಚಿನ್ನ,ನಂತರ ಅಣ್ಣ ಮತ್ತು ಪ್ರಸಾದರು ತೆಗೆದು ಕೊಟ್ಟ ಚಿನ್ನದೊಡವೆಗಳು
ಲಾಕರಿಂದ ತೆಗೆದು ಬ್ಯಾಂಕ್ ಗೆ ನೀಡಿ ಅದರ ಆಧಾರದಲ್ಲಿ ಸಾಲ ತಗೊಂಡೆ.ಜೊತೆಗೆ ಎಲ್ ಐ ಸಿ ಪಾಲಿಸಿಗಳ ಮೇಲೂ ಸಾಲ ತೆಗೆದುಕೊಂಡು ಒಂದಷ್ಟು ಪರ್ಸನಲ್ ಲೋನ್ ತಗೊಂಡು ಮನೆ ಕಟ್ಟಿದೆವು
ಒಂದೆರಡು ವರ್ಷಗಳ ಒಳಗೆ ಸಕಾಲದಲ್ಲಿ ಕಂತು ಕಟ್ಟಿ ಚಿನ್ನವನ್ನು ಬಿಡಿಸಿಕೊಂಡು ಮತ್ತೆ ಬ್ಯಾಂಕ್ ಲಾಕರಿನಲ್ಲಿ ಇರಿಸಿದೆ .ಎಲ್ ಐಸಿ ಪಾಲಿಸಿ ಮೇಲಿನ ಲೋನನ್ನು ಕಟ್ಟಿದೆವು.ಪರ್ಸನಲ್ ಲೋನ್ ನ ಕಂತುಗಳೂ ಮುಗಿದಿವೆ
ವಾಸ್ತವದಲ್ಲಿ ವರ್ಷಕ್ಕೆ 59-69 gm  ಗ್ರಾಂ ಚಿನ್ನ ತೆಗೆಯಲಾಗದ ಪರಿಸ್ಥಿತಿ ನಮಗೆ ಎಂದೂ ಇರಲಿಲ್ಲ 

.ನನಗೆ ಚಿನ್ನದ ಒಡವೆಗಳ ಮೇಲೆ ಆಸಕ್ತಿ ಇರದ ಕಾರಣ ನಿಯಮಿತವಾಗಿ ತೆರೆದಿರಲಿಲ್ಲ .

ಆಗೊಮ್ಮೆ ಈಗೊಮ್ಮೆ ಒಂದೆರಡು ಸಣ್ಣ ನೆಕ್ಲೇಸ್ , ಚೈನು, ಕೆಲವು ಬಳೆಗಳನ್ನು ತೆಗೆದಿರುವೆ ಅಷ್ಟೇ 
ನಾನು ಕೆಲಸಕ್ಕೆ ಸೇರಿದಲ್ಲಿಂದ ಇಂದಿನವರೆಗೆ ನಿಯಮಿತವಾಗಿ ವರ್ಷಕ್ಕೆ 50-60gm ತೆಗೆದಿರಿಸುತ್ತಿದ್ದರೆ ಈಗ ನನ್ನಲ್ಲಿ ಕನಿಷ್ಠ ಎರಡು  ಕೆಜಿ ಚಿನ್ನದ ಒಡವೆಗಳು ಇರುತ್ತಿತ್ತು .
ಅದೃಷ್ಟವಶಾತ್ ಇದರ 25%ಆದರೂ ಇರುವದ್ದು ನನ್ನ ಪುಣ್ಯವೇ ಸರಿ ನಾನು
ನನ್ನ ಸ್ನೇಹಿತೆ ಒಬ್ಬರು ಆಗಾಗ ಗಂಡನಿಗೆ ಬೋನಸ್ ಬಂದಾಗ ಇನ್ನೇನೋ ದುಡ್ಡು ಬಂದಾಗೆಲ್ಲ ಚಿನ್ನ ತೆಗೆದಿರಿಸಿದ್ದು ನೋಡಿ ನಾನೂ ಹಾಗೆ ಮಾಡಬೇಕಿತ್ತು ಎಂದು ನನಗೆ ನಿಜಕ್ಕೂ ಅನಿಸಿತ್ತು 
ಇರಲಿ..ನನಗೆ ಇನ್ನೂ ಎಂಟು ವರ್ಷ ಸರ್ವಿಸ್ ಇದೆ ಇನ್ನಾದರೂ ವರ್ಷ ಕ್ಕೆ ಕನಿಷ್ಠ 50 gm ಆದರೂ ಚಿನ್ನ ತಗೊಳ್ಳಬೇಕು ಎಂದು ನಿರ್ಧರಿಸಿರುವೆ
ಒಡವೆ ಹಾಕಿ ಮೆರೆಯುವುದಕ್ಕಾಗಿ ಅಲ್ಲ..ಒಂದು ಆಪದ್ಧನವಾಗಿ  ಬ್ಯಾಂಕ್ ಲಾಕರಿನಲ್ಲಿ ಸುರಕ್ಷಿತ ವಾಗಿ ಇರಲಿ ಎಂದು ಅಷ್ಟೇ 
ನೆನಪಿಡಿ.. ಚಿನ್ನವನ್ನು ಮನೆಯಲ್ಲಿ ಇರಿಸುವುದು ಬಹಳ ಅಪಾಯಕಾರಿ ‌ಬ್ಯಾಂಕ್ ಲಾಕರಿನಲ್ಲಿ ಇರಿಸುವುದು ಸುರಕ್ಷಿತ 
ನಾನು ಮನೆಯಲ್ಲಿ ಬೆಲೆ ಬಾಳುವ ಏನನ್ನೂ ಇರಿಸುವುದಿಲ್ಲ.ಒಡವೆಗಳನ್ನು ಬ್ಯಾಂಕ್ ಲಾಕರಿನಲ್ಲಿ ಇರಿಸಿರುವೆ