Wednesday 17 January 2018

ದೊಡ್ಡವರ ದಾರಿ: 30: ಮಾತೃ ಹೃದಯದ ಕರ್ಮ ಯೋಗಿ ಎಚ್ ಬಿ ಎಲ್ ರಾವ್ © ಡಾ.ಲಕ್ಷ್ಮೀ ಜಿ ಪ್ರಸಾದ



ಲಕ್ಷ್ಮೀ ನಿನ್ನನ್ನೊಮ್ಮೆ ಈ ಸೀರೆ ಉಟ್ಟು ನೋಡಬೇಕೆಂದವರು ನನ್ನ ತಂದಗೆ ಸಮಾನರಾದ ಎಚ್ ಬಿ ಎಲ್ ರಾವ್ ಅವರು.ತಂದೆ ತಾಯಿಗಳಿಗೆ ತಾವು ಕೊಟ್ಟ ಹೊಸ ಸೀರೆಯನ್ನು ಮಗಳಿಗೆ ಉಡಿಸಿ‌ ಕಣ್ತುಂಬ ನೋಡುವ ಹಂಬಲವಿರುತ್ತದೆ.ಕಳೆದ ವರ್ಷ‌ ಮುಂಬಯಿಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಭೂತಾರಾಧನೆಗ ಬಗ್ಗೆ ಪ್ರಬಂಧ ಮಂಡಿಸಲು ಹೋದಾಗ ಸನ್ಮಾನಿಸಿ ಒಂದು ಚೆಂದದ ಬೆಲೆ ಬಾಳುವ ರೇಷಿಮೆ ಸೀರೆಯನ್ನು ನನಗೆ ನೀಡಿದ್ದರು.ಅದು ಕಡಲಿನಲ್ಲಿ ದೇವಿಗೆ ಹರಿಕೆಯಾಗಿ ಬಂದು ದೇವಿಗೆ ಉಡಿಸಿದ ಸೀರೆ.ಕಟೀಲಿಗೆ ಹೋಗಿದ್ದಾಗ ಅವರಿಗೆ ಅಲ್ಲಿ ಅಸ್ರಣ್ಣರು ನೀಡಿದ್ದರು.ಅದನ್ನು ನನಗೆ ಅಭಿನಂದಿಸಿದ ಸಂದರ್ಭದಲ್ಲಿ ಎಚ್ ಬಿ ಎಲ್ ರಾವ್ ಅವರು ನನಗೆ ನೀಡಿದ್ದರು.
ನಿನ್ನೆ ಅವರ ಪ್ರಧಾನ ಸಂಪಾದನೆಯ,ಡಾ.ಕೆ ಎಲ್ ಕುಂಡಂತಾಯರ ಸಂಪಾದನೆಯ ,ನನ್ನ ಮುಸ್ಲಿಂ ಭೂತಗಳು, ಬ್ರಾಹ್ಮಣ ಭೂತಗಳು, ಕುಲೆ ಭೂತಗಳು, ಸರ್ಪ ಕೋಲ,ಕನ್ನಡಿಗ ಭೂತಗಳು, ಹನುಮಂತ ಕೋಲ ಎಂಬ ಆರು ಸಂಶೋಧನಾ ಲೇಖನಗಳು, ಮತ್ತು ನಾನು ಸಂಗ್ರಹಿಸಿದ 1435 ತುಳುನಾಡ ದೈವಗಳ ಹೆಸರಿನ ಪಟ್ಟಿ ಪ್ರಕಟವಾಗಿರುವ ಅಣಿ ಅರದಲ ಸಿಂಗಾರಕ್ಕೆ ಪುಸ್ತಕ. ಪ್ರಾಧಿಕಾರದಿಂದ ವರ್ಷದ ಅತ್ಯುತ್ತಮ ಪುಸ್ತಕ- ಪುಸ್ತಕ ಸೊಗಸು ಬಹುಮಾನ ಬಂದಿದ್ದು ಅದನ್ನು ಸ್ವೀಕರಿಸಲು ಎಚ್ ಬಿ ಎಲ್ ರಾವ್ ಬಂದಿದ್ದರು.ಹಾಗಾಗಿ ಅವರು ಕೊಟ್ಟ ಸೀರೆ ಉಟ್ಟು ಕೊಂಡು ಹೋಗಿದ್ದೆ.ಅವರ ಸಂತಸಕ್ಕೆ ಎಣೆ ಇರಲಿಲ್ಲ.
ಎರಡು ಮೂರು ವರ್ಷಗಳ ಮೊದಲು ನನ್ನ ‌ಮೊದಲ ಪಿಎಚ್ ಡಿ ಪ್ರಬಂಧ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ- ಒಂದು ವಿಶ್ಲೇಷಣಾತ್ಮಕ ಅಧ್ಯಯನ ಕೃತಿ ಪ್ರಕಟವಾಗಿದ್ದು ಅದನ್ನು ಖರೀದಿಸಿ ಓದಿದ ಎಚ್ ಬಿ ಎಲ್ ರಾವ್ ಅವರು ಪೋನ್ಅ ಮಾಡಿ ಪುಸ್ತಕ ಚೆನ್ನಾಗಿದೆ ಎಂದು ಅಭಿನಂದನೆ ತಿಳಿಸಿದ್ದರು.
ಪುಸ್ತಕ ಓದಿದ ಅನೇಕರು ಫೋನ್ ಮಾಡಿ ತಮ್ಮ ಅಭಿಪ್ರಾಯ ತಿಳಿಸುತ್ತಾರೆ.ಹಾಗಾಗಿ ನಾನು ಅವರನ್ನು ಮರೆತು ಬಿಟ್ಟಿದ್ದೆ.
ಇದಾಗಿ ಆರೇಳು  ತಿಂಗಳ ನಂತರ ‌ಮತ್ತೆ ಫೋನ್ ಮಾಡಿ ತಾನು ಮಂಗಳೂರಿಗೆ ಬರುವವರಿದ್ದು ಭೇಟಿಯಾಗುವ ಬಗ್ಗೆ ತಿಳಿಸಿದರು. ಆದರೆ ಅವರು ಬರುವ ದಿನ ಮಂಗಳೂರಿನಲ್ಲಿ ಒಂದು ಶೈಕ್ಷಣಿಕ ಕಾರ್ಯಾಗಾರದಲ್ಲಿ ಹಾಜರಿರುವುದು ನನಗೆ ಅನಿವಾರ್ಯ ವಾಗಿದ್ದ ಬಗ್ಗೆ ನಾನು ತಿಳಿಸಿದ್ದೆ.
ನಾನು ಕಾರ್ಯಾಗಾರದಲ್ಲಿ ಇದ್ದಾಗ ಅದರ ಆಯೋಜಕರೊಬ್ಬರು ನನ್ನನ್ನು ಕರೆದು ಮುಂಬಯಿಯಿಂದ ವಿದ್ವಾಂಸರೊಬ್ಬರು ನಿಮ್ಮನ್ನು ಭೇಟಿಯಾಗಲು ಬಂದಿದ್ದಾರೆ ಎಂದಾಗ ಅಚ್ಚರಿಯಾಗಿತ್ತು.
ಹೌದು ಎಚ್ ಬಿ ಎಲ್ ರಾವ್ ಅವರು ಬಂದು ಮಾತನಾಡಿಸಿ ಅವರ ಕನಸಿನ ಅಣಿ ಅರದಲ ಸಿರಿ ಸಿಂಗಾರ ಎಂಬ ಭೂತಾರಾಧನೆಗೆ ಸಂಬಂಧಿಸಿದ ಬೃಹತ್ ಗ್ರಂಥ ಹೊರತರುವ ಯೋಜನೆ ಬಗ್ಗೆ ಮಾತಾಡಿದರು.
ಇದಾದ ನಂತರ ಡಾ.ಜನಾರ್ದನ ಭಟ್ ಅವರು ನನ್ನನ್ನು ಸಂಪರ್ಕಿಸಿ ಅಣಿ ಅರದಲ ಸಿರಿ ಸಿಂಗಾರಕ್ಕೆ ಒಂದು ಲೇಖನವನ್ನು ಬರೆದು ಕೊಡಲು ತಿಳಿಸಿದರು.ಅಂತೆಯೇ ನಾನು ಸರ್ಪ ಕೋಲದ ಬಗ್ಗೆ ಲೇಖನ ಕಳಹಿಸಿದ್ದೆ.ಇದನ್ನು ಓದಿದ  ಸಂಪಾದಕರಾದಕೆ ಎಲ್ ಕುಂಡಂತಾಯರು ಪೋನ್ ಮಾಡಿ ಬೇರೆ ಬರಹಗಳನ್ನು ನೀಡಲು ಕೇಳಿದರು. ಆಗ ನಾನು ಬ್ರಾಹ್ಮಣ ಭೂತಗಳ ಬಗ್ಗೆ ಬರೆದು ಕಳುಹಿಸಿದೆ‌.ಅದನ್ನುಓದಿ ಮೆಚ್ಚಿದ ಅಣಿ ಅರದಲ ಸಿರಿ ಸಿಂಗಾರ ದ ಪ್ರಧಾನ ಸಂಪಾದಕರಾದ ಎಚ್ ಬಿ ಎಲ್ ರಾವ್ ಪೋನ್ ಮಾಡಿದರು.
ಹೀಗೆ ಅವರಲ್ಲಿ ಮಾತಾಡುತ್ತಾ ನನಗೆ ಆತ್ಮೀಯತೆ ಬೆಳೆಯಿತು.ಮೂಲತಃ ವಕೀಲರಾಗಿದ್ದ ಅವರು ನನ್ನ ವೃತ್ತಿ ಜೀವನದಲ್ಲಿ ಉಂಟಾದ  ಸಮಸ್ಯೆಗಳನ್ನು ಅರ್ಥ ಮಾಡಕೊಂಡು ಕಾನೂನಿನ ಮಾಹಿತಿ ನೀಡಿದರು.ಜೊತೆಗೆ ಮಂಗಳೂರು ಯುನಿವರ್ಸಿಟಿಯ ನೇಮಕಾತಿ ಯಲ್ಲಿ ನನಗೆ ಅನ್ಯಾಯ ವಾದ ಬಗ್ಗೆ, ಅದರ ವಿರುದ್ಧ ನಾನು ಕೋರ್ಟಿನಲ್ಲಿ ದಾವೆ ಹೂಡಿದ ಬಗ್ಗೆ ಮೆಚ್ಚುಗೆ ತಿಳಿಸಿ ಬೆಂಬಲ ನೀಡಿದ್ದರು. ಅವರು ಯಾವಾಗಲೂ ನನಗೆ ಒಂದು ಮಾತು ಹೇಳುತ್ತಾರೆ .ಲಕ್ಷ್ಮೀ ಒಂದು ತಿಳಿದುಕೋ,ಹೊಡೆದರೆ ಆನೆಗೆ ಹೊಡೆಯಬೇಕು ಇಲಿಗಲ್ಲ ಎಂದು ‌ಅದು ನನಗೆ ತುಂಬಾ ಇಷ್ಟವಾದ ಪ್ರೇರಣೆ ತುಂಬಿದ ಮಾತು ಕೂಡ.

ತಿಳಿಗೇಡಿಗಳು ಹೊಟ್ಟ ಕಿಚ್ಚಿನಿಂದಲೋ ಅಜ್ಞಾನದಿಂದಲೋ ಏನೋ ಹೇಳಿದರೆ ಅದನ್ನು ಅವಗಣನೆ ಮಾಡಲು ಅವರು ಹೇಳುತ್ತಿದ್ದರು.
ಎಚ್ ಬಿ ಎಲ್ ರಾವ್ ಬಗ್ಗೆ  ತಿಳಿಯುತ್ತಾ ಹೋದಂತೆ ನನಗೆ ಅಚ್ಚರಿ ಆಯಿತು‌ಅವರು ಸುಮಾರು 129 ಯಕ್ಷಗಾನ ಪ್ರಸಂಗಗಳನ್ನು ಸ್ವಂತ ಖರ್ಚಿನಲ್ಲಿ ಸಂಪಾದಿಸಿ ಮುದ್ರಿಸಿ ಪ್ರಕಟಮಾಡಿದ್ದಾರೆ.ಇತರೆ ಅನೇಕ ಕೃತಿಗಳು ಪ್ರಕಟಿಸಿದಗದಾರೆ.ಇವಾವೂ ಲಾಭಕ್ಕಾಗಿ ಮಾಡಿದ್ದಲ್ಲ.ಇನ್ನೂರು ಗ್ರಂಥಗಳನ್ನು ಸಂಪಾದಿಸಿ ಪ್ರಕಟಮಾಡುವುದೆಂದರೆ ಸಾಮಾನ್ಯ ವಿಚಾರವಲ್ಲ.ವೃತ್ತಿಪರ ಪ್ರಕಾಶಕರಿಗೆ ಕೂಡ ಸವಾಲಾಗಿರುವ ವಿಚಾರವಿದು.ಹಾಗಿರುವಾಗ ಎಚ್ ಬಿ ಎಲ್ ರಾವ್ ಏಕಾಂಗಿಯಾಗಿ ಇದನ್ನು ಸಾಧಿಸಿದ ಬಗ್ಗೆ  ಅವರ ಸಾಹಿತ್ಯ ಸೇವೆಯ ಬಗ್ಗೆ.  ಯಾರಿಗಾದರೂ ಮೆಚ್ಚದೆ ಇರಲು ಸಾಧ್ಯವೇ ಇಲ್ಲ.ಅಂತಹ ಅಪೂರ್ವ ಕೊಡುಗೆ ಅವರದು

ಅಣಿ ಅರದಲ ಸಿರಿ ಸಿಂಗಾರ ಹೊರತರಲು ನಾಲ್ಕು ಐದು ಲಕ್ಷ ಖರ್ಚಾಗಿದೆ.ಆದರೆ ಅದೊಂದು ತುಳು ಸಂಸ್ಕೃತಿ ಗೆ ನೀಡಿದ ದೊಡ್ಡ ಕೊಡುಗೆಯಾಗಿದೆ.ಇದು ಅವರು ಪ್ರಕಟಿಸಿದ ಇನ್ನೂರನೇ ಕೃತಿ ಅಗಿದೆ.
ಎಂಬತ್ತೈದರ ಇಳಿ ವಯಸ್ಸಿನಲ್ಲಿ ಕೂಡ ಅವರ ಕಾರ್ಯೋತ್ಸಾಹ ನೋಡಿದಾಗ ನಮಗೆ ಇಂತಹವರೂ ಇದ್ದಾರೆಯೇ ಎಂದು ಆಶ್ಚರ್ಯ ವಾಗುತ್ತದೆ.ನಮ್ಮ ಸೋಮಾರಿತನಕ್ಕೆ ನಾಚಿಕೆಯಾಗುತ್ತದೆ.
ನನ್ನ ಬಗ್ಗೆ ಅವರಿಗೆ ಅನೇಕರು ಚಾಡಿ ಹೇಳಿದ್ದರು‌.ಅವರ ಹತ್ತಿರ ವ್ಯವಹರಿಸುವಾಗ ಜಾಗ್ರತೆ.ನಿಮ್ಮ ಮೇಲೂ ದೂರು ಕೊಟ್ಟಾರು ಎಂದು ನನ್ನ ಅಧ್ಯಯನದ ಅರಿವು ಇದ್ದವರೂ, ನಾನು ನನ್ನ ಹಿತೈಷಿ ಎಂದು ಭಾವಿಸಿದವರೊಬ್ಬರು ಅವರಿಗೆ ಹೇಳಿದ್ದರಂತೆ.ಅವರು ಯಾರೆಂದು ನನಗೆ ಅವರು ಹೇಳಿಲ್ಲ ಆದರೂ ನನಗೆ ಅವರಾರು ಎಂದು ತಿಳಿಯುವ ಕುತೂಹಲ ಇದೆ.ನಾನು ಹಿತೈಷಿ ಎಂದು ನಂಬಿದವರಲ್ಲಿ ಅವರಿಗೆ ಕಿವಿ ಚುಚ್ಚಲು ಹೋದವರು ಯಾರು?.ನನಗೆ ಕ್ಷೇತ್ರ ಕಾರ್ಯದ ಅಧ್ಯಯನ ದಲ್ಲಿ ಅನೇಕರ ಪರಿಚಯವಾಗಿದ್ದಾರೆ.ಅನೇಕ ವಿದ್ವಾಂಸರ ಬೆಂಬಲ ನೀಡಿದ್ದಾರೆ.ಇವರನ್ನೆಲ್ಕ ನಾನು ನನ್ನ ಹಿತೈಷಿಗಳು ಎಂದು ಭಾವಿಸಿದ್ದೇನೆ‌.ಇವರ್ಯಾರೂ ಅಂತಹ ಕೆಲಸ ಮಾಡಲಾರರು.ನನ್ನ ಎದುರಿನಲ್ಲಿ ಚಂದಕ್ಕೆ ಮಾತಾಡುತ್ತಾ ಹಿಂದಿನಿಂದ ಕೆಟ್ಟದಾಗಿ ಬಿಂಬಿಸುತ್ತಿರುವವರು ಯಾರಿರಬಹುದು ?
ಜಗತ್ತೇ ಹಾಗೆ.ತಾವು ಬೇರೆಯವರಿಗೆ ಬೆಂಬಲ ಕೊಡದಿದ್ದರೂ ಬೇರೆಯವರು ಕೊಡುವಾಗ ಅಡ್ಡಕಾಲು ಹಾಕುತ್ತಾರೆ. ಪೂರ್ವಗ್ರಹ ಪೀಡಿತ ಮನಸುಗಳನ್ನು ಎಂದೂ ಸರಿ ಪಡಿಸಲಾರೆವು‌
ಆದರೆ ಯಾರ ಮಾತಿಗೂ ಕಿವಿಕೊಡದೆ ನನ್ನ ಅಧ್ಯಯನ ವನ್ನು ಮಾತ್ರ ನೋಡಿ ನಿರಂತರ ಬೆಂಬಲ ನೀಡುತ್ತಿದ್ದಾರೆ ಎಚ್ ಬಿ ಎಲ್ ರಾವ್ ಅವರು‌
ಅವರ ನೇರ ಸರಳ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ
ಎಚ್ ಬಿ ಎಲ್ ರಾವ್ ಅವರು ಸಂಪಾದಿಸಿ ಪ್ರಕಟಿಸಿದ ಕೃತಿಗಳು






4 comments:

  1. Admiration to an Iron Lady from a little fan

    ReplyDelete
  2. ಹಿತೈಶಿಗಳು ಹಿತಶತೃಗಳಾಗಲು ಹೆಚ್ಚಿನ ಸಮಯ ತಾಗೊಲ್ಲ,ಆದರೆ,ಅವರೆದುರಿಗೆ ಬೆಳೆಯುವುದಿದೆ ನೋಡಿ,ಅದನ್ನು ನೋಡಿ ಅವರೊಳಗೊಳಗೆ,ಕೊಳೆಯುವ ಪರಿಯಿದೆಯಲ್ಲ ಅದು ಚೆಂದ.ನೀವು ಕೇಳಿದ್ದೀರಲ್ಲ,ನಿಂದಕರಿರಬೇಕು ಹಂದಿಯಂತೆ.ಎದುರಿಗೆ ಮಾತನಾಡಲು ಅಂತಹ ಮನುಷ್ಯತ್ವ ಬೇಕು.ಅಸಾಧ್ಯ ಮೇಡಂ.ಅಸಾಧ್ಯಾವಾಗಿ ಬೆಳಿಬೇಕು.ಅಭೇದ್ಯವಾಗಿ ಬೆಳಿಬೇಕು...ಸುತ್ತ ಮುಳ್ಳಿನ ಮಧ್ಯೆ ಹೂ ಅರಳಿದರೆ ಎಷ್ಟು ಸುಂದರ ಅಲ್ವ.ನಿಮ್ಮ ಬದುಕು ನಮಗೆ,ಬೆಳಕು,ಹೆಮ್ಮೆ.ಬರೆಯುತಿರಿ,ಬೆಳಗುತಿರಿ...

    ReplyDelete