ಬದುಕೆಂಬ ದೋಣಿಯ ಪಯಣದಲ್ಲಿ ನಮ್ಮನ್ನು ಮುನ್ನಡೆಸುವ ಅನೇಕ ಅಂಬಿಗರನ್ನು ನಾವು ಕಾಣುತ್ತೇವೆ.ಅದರಲ್ಲೂ ತೀವ್ರ ನೋವು ಕಾಡುವಾಗ ಅನಾರೋಗ್ಯ ಕಾಡಿದಾಗ ದೈವ ಸ್ವರೂಪಿಗಳಾಗಿ ಕಾಣುವವರು ವೈದ್ಯರು.ಒಂದಲ್ಲ ಒಂದು ಕಾರಣಕ್ಕೆ ವೂದ್ಯರನ ಸಹಾಯವನ್ನು ಪಡೆಯದೇ ಇರುವ ಮಂದಿ ಈ ಜಗತ್ತಿನಲ್ಲಿ ಒಬ್ಬಾತ ಕೂಡ ಇರಲಾರ
ಇಂತಹ ನಾರಯಣೋ ಹರಿಃ ಎಂಬಂತೆ ದೈವ ಸದೃಶರಾದ ವೈದ್ಯರಲ್ಲಿ ಕೆಲವರು ತಮ್ಮ ಅಪರೂಪದ ವ್ಯಕ್ತಿತ್ವ ದ ಕಾರಣಕ್ಕೆ ಗಮನಸೆಳೆಯುತ್ತಾರೆ.
ಅಂಥಹ ಓರ್ವ ಅಪರೂಪದ ವೈದ್ಯರ ಬಗ್ಗೆ ನಾನು ಇಲ್ಲಿ ಬರೆಯ ಹೊರಟಿರುವೆ .ಪ್ರಸ್ತುತ ಫಾರ್ಟಿಸ್ ಹಾಸ್ಪಿಟಲ್ ನಾಗರಭಾವಿಯಲ್ಲಿ ಶಸ ಚಿಕಿತ್ಸಕರಾಗಿರುವ ಡಾ ಚಂದ್ರ ಮೌಳಿ ಇಂಗ್ಲೆಂಡ್ ನಲ್ಲಿ ಹನ್ನೆರಡು ವರ್ಷಗಳ ಕಾಲ ಶಸ್ತ್ರ ಚಿಕಿತ್ಸಕರಾಗಿದ್ದು / ಸರ್ಜನ್ ಆಗಿದ್ದು ಮರಳಿಮಣ್ಣಿಗೆ ಎಂಬಂತೆ ಭಾರತಕ್ಕೆ ಅದರಲ್ಲೂ ತಮ್ಮ ನಾಡು ಕರ್ನಾಟಕ ಕ್ಕೆ ಬಂದು ಬೆಂಗಳೂರಿನಲ್ಲಿ ನೆಲೆಸಿದವರು.
ಸುಮಾರು ಹತ್ತು ಹದಿನೈದು ವರ್ಷಗಳ ಮೊದಲು ಇವರು ರಾಜ ರಾಜೇಶ್ವರಿ ನಗರದಲ್ಲಿ ಇದ್ದ ಮಣಿಪಾಲ್ ಹಾಸ್ಪಿಟಲ್ ನಲ್ಲಿ ಮುಖ್ಯ ಶಸ್ತ್ರ ಚಿಕಿತ್ಸಾ ವೈದ್ಯ ರಾಗಿದ್ದರು. ಕೆಲ ವರ್ಷಗಳ ಹಿಂದೆ ಒಂದು ದಿನ ರಾತ್ರಿ ತೀವ್ರ ಹೊಟ್ಟೆ ನೋವು ಕಾಡಿ ಮನೆಗೆ ಸಮೀಪದ ಈ ಮಣಿಪಾಲ್ ಆಸ್ಪತ್ರೆ ಗೆ ಹೋಗಿದ್ದೆ.ಆಗ ಆಸ್ಪತ್ರೆ ಗೆ ದಾಖಲುಮಾಡಿ ಪರೀಕ್ಷೆ ಮಾಡಿದ ತಜ್ಞ ವೈದ್ಯರಾದ ಡಾ ಚಂದ್ರ ಮೌಳಿಯವರು ಎಂಡೋಸ್ಕೋಪ್ ಮಾಡಿ ಹೊಟ್ಟೆಯ ಒಳಗೆ ಏನಾದರೂ ಸಮಸ್ಯೆ ಇದೆಯಾ ನೋಡಬೇಕು ಎಂದು ಅಭಿಪ್ರಾಯವನ್ನು ತಿಳಿಸಿದರು.ಅದಕ್ಕೂ ಮೊದಲು ದೀರ್ಘ ಕಾಲದಿಂದ ಅಸಿಡಿಟಿ ಹೊಟ್ಟೆನೋವಿನ ಸಮಸ್ಯೆ ಇದ್ದ ನಾನು ಒಪ್ಪಿದೆನಾದರೂ ಎಂಡೋಸ್ಕೋಪ್ ಬಗ್ಗೆ ಭಯ ಪಟ್ಟೆ .ನಾನು ಯಾವುದಕ್ಕೆ ಹೆದರದೆ ಇದ್ದರೂ ನೋವಿಗೆ ತುಂಬಾ ಹೆದರುತ್ತೇನೆ.ಅಂತೆಯೇ ಡಾಕ್ಟರ್, ಆಸ್ಪತ್ರೆ, ಇಂಜೆಕ್ಷನ್ ,ಎಂಡೋಸ್ಕೋಪ್ ಮೊದಲಾದವುಗಳಿಗೆ ತುಂಬಾ ಭಯ ಬೀಳುತ್ತೇನೆ .ಹಾಗಾಗಿ ಎಂಡೋಸ್ಕೋಪ್ ಮಾಡಿಸಿಕೊಳ್ಳಲು ಹಿಂದೇಟು ಹಾಕಿದೆ .ಆಗ ಡಾ ಚಂದ್ರ ಮೌಳಿ ಅವರು ಧೈರ್ಯ ಹೇಳಿ ಆಪರೇಷನ್ ಥಿಯೇಟರ್ ನಲ್ಲಿಯೇ ಮಾಡುವ ನೋವಾಗದಂತೆ ಮಂಪರಿಗೆ ಕೊಡುತ್ತೇವೆ ಎಂದು ಹೇಳಿದರು.
ಸರಿ ಎಂದು ಒಪ್ಪಿದೆ .ಮರು ದಿನ ಬೆಳಗ್ಗೆಯೆ ಸಿಸ್ಟರ್ಸ್ ಬಂದು ಓಟಿ ಡ್ರೆಸ್ ಹಾಕಿಸಿ ಅದಕ್ಕೆ ಬೇಕಾದ ಪೂರ್ವಭಾವಿ ಜೆಕ್ಷನ್ ಔಷಧಗಳನ್ನು ಕೊಟ್ಟು ಸಿದ್ ಪಡಿಸಿ ಆಪರೇಷನ್ ಥಿಯೇಟರ್ ಗೆ ಕರೆದೊಯ್ದರು.ಎಂಡೋಸ್ಕೋಪ್ ಎಂದರೆ ಕೆಳಭಾಗದಿಂದ ಟ್ಯೂಬ್ ಹಾಕಿ ಪರೀಕ್ಷೆ ಮಾಡುದೆಂದು ನಾನು ಭಾವಿಸಿದ್ದೆ .ಆದರೆ ಆಪರೇಷನ್ ಥಿಯೇಟರ್ ಗೆ ಹೋದಮೇಲೆ ಬಾಯಿ ಮೂಲಕ ಟ್ಯೂಬ್ ಅನ್ನು ಹೊಟ್ಟೆಗೆ ಇಳಿಸಿ ಪರೀಕ್ಷೆ ಮಾಡುತ್ತಾರೆ ಎಂದು ಗೊತ್ತಾಗಿ ಗಾಭರಿಯಾದೆ .ನೋವಾಗಬಹುದು ಎಂಬ ಭಯದಿಂದ ಎಂಡೋಸ್ಕೋಪ್ ಮೂಲಕ ಪರೀಕ್ಷೆ ಮಾಡಿಸಿಕೊಳ್ಳಲು ಒಪ್ಪಲಿಲ್ಲ. ಮೊದಲು ಜೂನಿಯರ್ ಡಾಕ್ಟರ್ಸ್ ನನ್ನನ್ನು ಕನ್ವಿನ್ಸ್ ಮಾಡಲು ಯತ್ನ ಮಾಡಿದರು .ಯಾರೇನೇ ಹೇಳಿದರೂ ನಾನುನೊಪ್ಪಲಿಲ್ಲ ಕೊನೆಗೆ ಡಾ ಚಂದ್ರ ಮೌಳಿ ಅವರು ಬಂದು ಕನ್ವಿನ್ಸ್ ಮಾಡಹೊರಟರೂ ನಾನು ಕನ್ವಿನ್ಸ್ ಆಗಲಿಲ್ಲ ಹಾಗಾಗಿ ಆಪರೇಷನ್ ಥಿಯೇಟರ್ ನಿಂದ ಹಾಗೇ ಹೊರಗೆ ಬರಬೇಕಾಯಿತು .ಬೇರೆ ಯಾವುದೇ ಡಾಕ್ಟರ್ ಆಗಿದ್ದರೂ ನನಗೆ ಬೈದು ಕೈ ಕಾಲು ಕಟ್ಟಿ ಹಾಕಿ ಪರೀಕ್ಷೆ ಮಾಡುತ್ತಿದ್ದರು .ಅಥವಾ ಚಿಕಿತ್ಸೆ ನೀಡಲು ನಿರಾಕರಿಸಿ ಹೊಗೆ ಕಳಹಿಸುತ್ತಾ ಇದ್ದರು .ಆದರೆ ಬಹಳ ಸಜ್ಜಿಕೆಯ ಅವರು ಹೀಗಾಯಿತೆಂದು ಅಳುಕು ಬೇಡ ಪ್ರೀಯಾಗಿ ಮಾತಾಡಿ ಎಂದು ಮರುದಿನ ಧೈರ್ಯ ತುಂಬಿದರು .ನನ್ನ ಸಮಸ್ಯೆಗೆ ಎಂಡೋಸ್ಕೋಪ್ ಮಾಡಿ ಪರೀಕ್ಷಿಸುವುದು ಅನಿವಾರ್ಯ ವಾಗಿದ್ದು .ಹಾಗಾಗಿ ಪೂರ್ತಿ ಎಚ್ಚರ ತಪ್ಪಿಸಿ ಮಾಡುತ್ತೇವೆ ಎಂದು ಭರವಸೆ ತುಂಬಿದರುಅವರು .ಅವರ ಸೌಜನ್ಯ ಪೂರಿತ ನಡವಳಿಕೆ ಆತ್ಮವಿಶ್ವಾಸ ದ ಮಾತುಗಳು ನನ್ನ ಭಯವನ್ನು ಸ್ವಲ್ಪ ಮಟ್ಟಿಗೆ ಕಡಿಮೆಮಾಡಿಮತ್ತೆ ಎಂಡೋಸ್ಕೋಪ್ ಮೂಲಕ ಪರೀಕ್ಷಿಸಿಕೊಳ್ಳಲು ಸಿದ್ಧಳಾದೆ
ಆಪರೇಷನ್ ಥಿಯೇಟರ್ ಗೆ ಹೋಗಿ ಚಿಕಿತ್ಸೆ ಆರಂಭಿಸುವಮೊದಲು ಪೂರ್ತಿ ಎಚ್ಚರ ತಪ್ಪಿಸಲು ಅಗುವುದಿಲ್ಲ ಆದರೆ ಹೆಚ್ಚೇನೂ ತಡೆಯಲಾಗದಷ್ಟು ನೋವಾದಂತೆ ಮಾಡುತ್ತೇನೆ ಎಂದು ಹೇಳಿದರು ಅದಾಗಲೇ ನಮಗೆ ಅವರ ಮೇಲೆ ಪೂರ್ಣ ನಂಬಿಕೆ ಬಂದಿತ್ತುಹಾಗೆ ಒಪ್ಪಿದೆ
ಬಾಯಿ ಮೂಲಕ ಟ್ಯೂಬ್ ಅನ್ನುಇಳಿಸಿ ಪರೀಕ್ಷೆ ಮಾಡುವಾಗ ನನ್ನ ಆಸಕ್ತಿಯ ವಿಚಾರದ ಬಗ್ಗೆ ನನ್ನಲ್ಲಿ ಮಾತಾಡುತ್ತಾ ಗಮನವನ್ನು ಬೇರೆಡೆಗೆ ಸೆಳೆದಿದ್ದರು ಪರೀಕ್ಷೆ ಮಾಡುವಾಗ ಸ್ವಲ್ಪ ನೋವು ಹಿಂಸೆ ಆಯಿತಾದರೂ ಅವರ ಸೌಜನ್ಯ ಪೂರಿತ ನಡವಳಿಕೆ ಎದುರು ಅದು ಅದೇನೂ ತಡೆಯಲಾಗದಷ್ಟು ಕಾಡಲಿಲ್ಲ
ಸುಮಾರು ಹದಿನೈದು ಇಪ್ಪತ್ತ ನಿಮಿಷಗಳಲ್ಲಿ ಮುಗಿದು ಹೋಗಿ ಆರಾಮಾಯಿತು ಸಮಸ್ಯೆ ಯ ಮುಲ ತಿಳಿದ ಕಾರಣ ನನ್ನ ಹೊಟ್ಟೆನೋವುಎರಡು ಮೂರು ದಿನಗಳಲ್ಲಿ ಪೂರ್ಣ ಗುಣವಾಗಿತ್ತು ಮತ್ತೆಂದೂ ಅ ಸಮಸ್ಯೆ ಕಾಡಲಿಲ್ಲ
ಡಾ ಚಂದ್ರ ಮೌಳಿ ಅ ಸಮಯದಲ್ಲಿ ಓರ್ವ ಬಡ ಮಹಿಳೆಯ ಹೊಟ್ಟೆ ಯಲ್ಲಿ ಬೆಳೆದಿದ್ದ ಎರಡುಕೇಜಿ ಭಾರದ ದುರ್ಮಾಂಸ ತೆಗೆಯುವ ಎಂಟು ಗಂಟೆಯ ಶಸ್ತ್ರ ಚಿಕಿತ್ಸೆಮಾಡಿ ಯಶಸ್ಸು ಪಡೆದಿದ್ದರು ಆ ಮಹಿಳೆಯನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ ಪೂರ್ತಿಯಾಗಿ ಡಾ ಚಂದ್ರ ಮೌಳಿ ನೇತೃತ್ವದ ತಂಡ ಅವರನ್ನು ನೋಡಿಕೊಂಡು ಉಚಿತವಾಗಿ ಚಿಕಿತ್ಸೆ ನೀಡಿ ಗುಣಪಡಿಸಿದ್ದರು .ಇವರು ತೀರಾ ಅಗತ್ಯವಿಲ್ದೆ ದುಡ್ಡಿಗಾಗಿ ನಾನಾ ಪರೀಕ್ಷೆ ಗಳನ್ನು ಮಾಡಿಸುವುದಿಲ್ಲ .ಉದಾರಿಗಳಾದ ಅವರು ನಂತರವುಹಾಗೆಮುಂದುವರಿದಿರಬಹುದು.ಪ್ರಸ್ತುತ ನಾಗರಭಾವಿ fortis hospital ನಲ್ಲಿ ಪ್ರಧಾನ ಶಸ್ತ್ರ ಚಿಕಿತ್ಸಕ / ಸರ್ಜನ್ ಆಗಿದ್ದಾರೆ ಇಂತಹ ವೈದ್ಯೋನಾರಾಣ ಹರಿಗಳ ಸಂಖ್ಯೆ ಹೆಚ್ಚಾಗಲಿಎಂದು ಹಸರೈಸುವೆ ಚಿಕಿತ್ಸೆ ಪಡೆಯಲು ಧೈರ್ಯ ತುಂಬಿಗುಣಪಡಿಸಿದ ಅವರಿಗೆ ಯಾವತ್ತೂ ಆಭಾರಿಯಾಗಿದ್ದೇನೆ ಧನ್ಯವಾದಗಳು ಸರ್ ನಿಮಗೆ ©ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ
No comments:
Post a Comment