Tuesday, 16 May 2017

ದೊಡ್ಡವರ ದಾರಿ : ಲೇಖಕರಿಗೊಂದು ಅಸ್ತಿತ್ವ ಕೊಟ್ಟ ವಿಶ್ವ ವಾಣಿಯ ವಿಶ್ವೇಶ್ವರ ಭಟ್ ©ಡಾ ಲಕ್ಷ್ಮೀ ಜಿ ಪ್ರಸಾದ

          

ಎಂತ ಟೈಟಲ್ ನೋಡಿ ನಾನು ಬಕೆಟ್ ಹಿಡೀತಿದ್ದೇನೆ ಅಂತ ಆಲೋಚನೆ ಮಾಡಿದಿರಾ ? ಅದು ಸತ್ಯವಲ್ಲ .ಅವರು ಪತ್ರ ಕರ್ತರು ಸಂಪಾದಕರು ಎಂಬುದು ಬಿಟ್ರೆ ಅವರು ಯಾರು ಏನು ಎತ್ತ ಅಂತ ನನಗೆ ಗೊತ್ತಿಲ್ಲ ಭಟ್ ಅಂತ ಇರುವ ಕಾರಣ ಬ್ರಾಹ್ಮಣರು ಅಂತ ಊಹಿಸಬಲ್ಲೆ ಆದರೆ ಕರಾಡ ಬ್ರಾಹ್ಮಣ,ಶಿವಳ್ಳಿ ಯ ಹವ್ಯಕರ ಅಂತ ನನಗೆ ಗೊತ್ತಿಲ್ಲ ನಮಗೆ ಅದೆಲ್ಲ ಅಗತ್ಯವೂ ಇಲ್ಲ ತಿಳಿಯುವ ಆಸಕ್ತಿ ಯೂ ಇಲ್ಲ
ಆದರೆ ನನಗೆ ನಿರಂತರ ವಾಗಿ ಪತ್ರಿಕೆ ಓದಲು   ಅಪರೋಕ್ಷವಾಗಿ ಅಭ್ಯಾಸ ಮಾಡಿಸಿದವರು  ಅವರು.
ಆಗಷ್ಟೇ ವಿಜಯ ಕರ್ನಾಟಕ ಪತ್ರಿಕೆ ಆರಂಭವಾಗಿತ್ತು .ಅದರ ಸಾರಥಿ ಆಗ ವಿಶ್ವೇಶ್ವರ ಭಟ್ಟರು.ಮಂಗಳೂರಿನಲ್ಲಿ ನಮ್ಮನೆಗೆ ಸುಮಾರು ಎರಡು ತಿಂಗಳು ಬೆಳಗ್ಗೆ ನಾವು ಏಳುವ ಮೊದಲೇ ಯಾರೋ ವಿಜಯ ಕರ್ನಾಟಕ ಪತ್ರಿಕೆ ಹಾಕಿ ಹೋಗುತ್ತಿದ್ದರು .ಅದನ್ನು ಎತ್ತಿಕೊಂಡು ಪ್ರಸಾದ ಓದುತ್ತಾ ಇದ್ದರು .ಅಷ್ಟರ ತನಕ ಅವರು ಹಿಂದೂ ಬ್ಯಸಿನೆಸ್ ? ಇಕನಾಮಿಕ್ ಮೊದಲಾದ ಇಂಗ್ಲಿಷ್ ಪತ್ರಿಕೆ ತಂದು ಓದುತ್ತಾ ಇದ್ದರು .ನನಗು ಇಂಗ್ಲಿಷ್ ಗೂ ಆಗ ಎಣ್ಣೆ ಸೀಗೆ ಕಾಯಿ ಹಾಗಾಗಿ ನಾನು ಅದರತ್ತ ತಿರುಗಿ ಕೂಡ ನೋಡುತ್ತಾ ಇರಲಿಲ್ಲ. ವಿಜಯ ಕರ್ನಾಟಕ ಬರಲು ಆರಂಭಸಿದ  ಮೇಲೆ ಪ್ರಸಾದ್ ಓದಿನ ನಂತರ ನಾನೂ ಓದಲು ಶುರು ಮಾಡಿದೆ.ನಂತರ ದಿನಗಳಲ್ಲಿ ನಾನು‌ಮೊದಲು ಓದಲಾರಂಭಿಸಿದೆ .ನಂತರ ಒಂದೆರಡು ತಿಂಗಳ ನಂತರ ನಾವು ವಿಜಯ ಕರ್ನಾಟಕ ಪತ್ರಿಕೆಗೆ ಚಂದಾದಾರಾದೆವು .ಅಲ್ಲಿಂದ ಪತ್ರಿಕೆ ಯನ್ನು ನಿತ್ಯ ಓದುವ ಅಭ್ಯಾಸ ನನಗೆ ಬೆಳೆಯಿತು .ಅದಕ್ಕೆ ಅನೇಕ ಲೇಖನಗಳನ್ನು ಬರೆದೆ ಪ್ರಕಟವೂ ಆಯಿತು .
ಹೀಗೆ ಕೆಲ ವರ್ಷಗಳ ಮೊದಲು ವಿಜಯ ಕರ್ನಾಟಕ ಓದುವಾಗ ಪತ್ರಕರ್ತರು ಇ ಮೇಲ್ ,ಟ್ವಿಟರ್ ತೆರೆಯಬೇಕಾದ ಅಗತ್ಯವನ್ನು ಅವರು ಹೇಳಿದ್ದರ ಬಗ್ಗೆ ಓದಿದ್ದೆ ಹಾಗೆಯೇ ಬ್ಲಾಗ್ ಬರೆಯುವ ಬಗ್ಗೆ ಅದರಲ್ಲಿ ಓದಿದ್ದೆ.ಆದರೆ ಕಂಪ್ಯೂಟರ್ ಜ್ಞಾನ ಇಲ್ಲದ ಇಂಟರ್ನೆಟ್   ನ ಗಂಧ ಗಾಳಿ ಇಲ್ಲದ ಅವೇನೆಂದು ಅರ್ಥ ಆಗದೆ ಇದ್ದರೂ ಎಂದಾದರೊಂದು ದಿನ ದುಡ್ಡು ಬಂದಾಗ ಅವರು ಹೇಳಿದಂತೆ  ಕಂಪ್ಯೂಟರ್ ತೆಗೆದು   ಮೇಲ್ ಟ್ವಿಟರ್ ಫೇಸ್ ಬುಕ್ ಬ್ಲಾಗ್ ತೆರೆದು ಬರೆಯಬೇಕು ಎಂದು ಕೊಂಡಿದ್ದೆ .ಕೊನೆಗೂ2013 ರ ಜನವರಿಯಲ್ಲಿ ಕಂಪ್ಯೂಟರ್ ಖರೀದಿಸಿದೆವು ಪ್ರಸಾದ ಮತ್ತು  ಮಗನ ಅರವಿಂದನ ಸಹಾಯದಿಂದ ಇ ಮೇಲ್ ತೆರೆದೆ ಮುರಳೀಧರ ಉಪಾಧ್ಯಾಯರ ಸಹಾಯದಿಂದ ಬ್ಲಾಗ್ ತೆರೆದೆ.
ಈಗ ಮೂರುಬ್ಲಾಗ್ ಗಳನ್ನು ಬರೆಯುತ್ತಿರುವೆ   ದೇಶ ವಿದೇಶದ ಎರಡು ಲಕ್ಷ  ಇಪ್ಪತೈದು ಸಾವಿರಕ್ಕಿಂತ ಅಧಿಕ ಮಂದಿಗೆ ನನ್ನ ಬರಹಗಳು ಬ್ಲಾಗ್ ಮೂಲಕ ತಲುಪಿವೆ .ಫೇಸ್  ಬುಕ್  ಪೇಜ್ ಗಳ ಮೂಲಕ, ವಾಟ್ಸಪ್ ಮೂಲಕ ಎಷ್ಟು ಜನ ಓದಿದ್ದಾರೆ ಎಂಬುದಕ್ಕೆ ಲೆಕ್ಕ  ಸಿಗುವುದಿಲ್ಲ .ಮೂರು ಬ್ಲಾಗ್ ಗಳನ್ನು ಬರೆಯತ್ತಾ   ನನ್ಒಂನ ಬರಹಗಳಿಗಾಗಿಯೇ ಒಂದು ಸಣ್ಣ ಪತ್ರಿಕೆ ತೆರೆದವರಂತೆ ಖುಷಿಯಾಗಿರಲು ಮೂಲ ಕಾರಣ ವಿಶ್ವೇಶ್ವರ ಭಟ್ಟರು.ಅವರನ್ನು ಹೇಗೆ ತಾನೆ ಮರೆಯಲಿ ?ಎಷ್ಟೋ ಪತ್ರಿಕೆ ಗಳಿವೆ. ಮುಂದಾಗುವುದನ್ನು ಊಹಿಸಿ ಅವರ್ಯಾರೂ ಜನರಿಗೆ ಉಪಯೋಗವಾಗುವ ಇಂತಹ ಸಲಹೆ ಕೊಟ್ಟಿದ್ದನ್ನು ನಾನೆಲ್ಲೂ ಓದಿಲ್ಲ
ಅದೇ ರೀತಿ ಅವರ ಇನ್ನೊಂದು ದೊಡ್ಡ ಗುಣ ಬರಹಗಾರರಿಗೆ ಒಂದು ಪ್ರತ್ಯೇಕ ಅಸ್ತಿತ್ವ ಗೌರವವನ್ನು ನೀಡಿರುವುದು.ಅವರು ಅವರಿರುವ ಪತ್ರಿಕೆ ಗಳಿಗೆ ಲೇಖನ ಬರೆದ  ಲೇಖಕರ ಫೋಟೋ ಕೂಡಾ ಪ್ರಕಟಿಸುತ್ತಾ ಇದ್ದರು .ಇದನ್ನು ನೋಡಿ ಕೆಲವು ಪತ್ರಿಕೆಗಳು ಈ ಪದ್ಧತಿ ಶುರು ಮಾಡಿದವು.ಈಗ ಕೂಡ ಅನೇಕ ಪತ್ರಿಕೆ ಗಳು ಲೇಖಕರ ಪೋಟೋ ಹಾಕುವುದಿಲ್ಲ. ನಮ್ಮ ಹೆಸರನ್ನು ನಾವು ಕೊಟ್ಟಂತೆ ಹಾಕುವುದಿಲ್ಲ. ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ನವರು ಲೇಖಕರು ಡಾಕ್ಟರೇಟ್ ಪಡೆದಿದ್ದು ತಮ್ಮ ಹೆಸರಿನ ಮುಂದೆ ಡ ಎಂದು ಬರೆದಿದ್ದರೆ ಅದನ್ನು ಹಾಕುವುದಿಲ್ಲ ಉದಾಹರಣೆಗೆ ನಾನು ನನ್ನ ಹೆಸರನ್ನು ಎಲ್ಲಾ ಕಡೆ ಡಾ .ಲಕ್ಷ್ಮೀ ಜಿ ಪ್ರಸಾದ ಎಂದು ಹಾಕಿ ಲೇಖನ ಬರೆಯುವೆ ಈ ಪತ್ರಿಕೆ ಸೇರಿದಂತೆ ಹಲವು ಪತ್ರಿಕೆಗಳು ನಮ್ಮ ಲೇಖನವನ್ನು ಮಾತ್ರ ಎಡಿಟ್ ಮಾಡದೆ ನಮ್ಮ ಹೆಸರನ್ನು ಎಡಿಟ್ ಮಾಡಿ ಲಕ್ಷ್ಮೀ ಜಿ ಪ್ರಸಾದ ಎಂದು ಮಾತ್ರ ಹಾಕುತ್ತವೆ ಪೋಟೋ ಹಾಕುವುದಿಲ್ಲ ಹಾಗಿರುವಾಗ ಲೇಖಕರ ಪೋಟೋ ಉದ್ಯೋಗ, ಇ ಮೇಲ್ ಅಡ್ರೆಸ್ ಹಾಕಿ ಸಂಭಾವನೆ ನೀಡಿ ಬರಹಗಾರರಿಗೊಂದು ಗೌರವ ತಂದು ಕೊಟ್ಟ ವಿಶ್ವೇಶ್ವರ ಭಟ್ಟರನ್ನು ಹೇಗೆ ತಾನೇ  ನೆನೆಯದಿರಲು ಸಾಧ್ಯ?  ಅವರ ಬಗ್ಗೆ ಬರೆಯದೆ ಇರಲು ಹೇಗೆ ತಾನೇ   ಸಾಧ್ಯ ? ಒಂದರ್ಥದಲ್ಲಿ ಅವರು ನನ್ನ ಮಾರ್ಗದರ್ಶಿ ಹಾಗಾಗಿ ಅವರು ಪತ್ರಿಕೆ ಬದಲಾಯಿಸಿದಂತೆ ನಾನು ಅವರನ್ನು ಹಿಂಬಾಲಿಸಿ ಅವರಿರುವ ಪತ್ರಿಕೆ ಗೆ ಚಂದಾದಾರಳಾಗಿರುವೆ .ಅವರಿರುವ ಪತ್ರಿಕೆಗಳಿಗೆ ಲೇಖನ ಬರೆದಿರುವೆ . ಒಂದರ್ಥದಲ್ಲಿ ಅವರು ನನ್ನ ಲೇಖನಗಳನ್ನು ಪ್ರಕಟಿಸಿ ಬೆಂಬಲಿಸಿ ನನ್ನ ಬದುಕಿಗೆ ಅಸ್ತಿತ್ವ ತಂದು ಕೊಟ್ಟವರು ಹಾಗಾಗಿಯೇ  ಅವರನ್ನು ಈ ತನಕ ಒಮ್ಮೆ ಕೂಡಾ ಭೇಟಿ ಮಾಡದೆ ಇದ್ದರೂ ಅವರ ಬಗ್ಗೆ ಬರೆದಿರುವೆ.
ಅವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ https://kn.m.wikipedia.org/wiki/%E0%B2%B5%E0%B2%BF%E0%B2%B6%E0%B3%8D%E0%B2%B5%E0%B3%87%E0%B2%B6%E0%B3%8D%E0%B2%B5%E0%B2%B0_%E0%B2%AD%E0%B2%9F%E0%B3%8D

No comments:

Post a Comment