ಸೋತಾಗ ಮುಖ ತಿರುವುವ ಸ್ನೇಹಿತರು ನಂಬಲರ್ಹರಲ್ಲ ©ಡಾ ಲಕ್ಷ್ಮೀ ಜಿ ಪ್ರಸಾದ
ದೊಡ್ಡವರು ದೊಡ್ಡವಾಗಿ ಇದ್ದರೆ ಸಣ್ಣವರು ಆರಾಮವಾಗಿ ಬದುಕಲು ಸಾಧ್ಯವಾಗುತ್ತದೆ ದೊಡ್ಡವರು ಎನಿಸಿಕೊಂಡವರು ಚಿಕ್ಕವರಾದರೆ ಏನಾಗುತ್ತದೆ ಎಂದು ಹೇಳುವುದಕ್ಕೆ ಇದೊಂದು ಪ್ರಮಾಣವಾಗಿದೆ ಸ್ನೇಹಿತರನ್ನು ನಂಬಲು ಆಗದೆ ಇರುವ ಮನಸ್ಥಿತಿ ಉಂಟಾಗಿ ಬಿಡುತ್ತದೆ
ಪುರುಷೋತ್ತಮ್ ಅಡ್ಕಾರ್ ಭರವಸೆಯ ಯುವ ಕವಿ ಅವರ ಅನೇಕ ಕವಿತೆ/ ಹನಿಗವನಗಳು ನನಗೂ ತುಂಬಾ ಇಷ್ಟವಾಗಿವೆ ,ಈ ಕವಿತೆ ಕೂಡಾ ಇಷ್ಟ ವಾಗಿದೆ
ಸಾಮಾನ್ಯವಾಗಿ ನಾವು ಸೋತಾಗ ಸ್ನೇಹಿತರು ನಮ್ಮ ಬೆನ್ನು ತಟ್ಟಿ ಧೈರ್ಯ ತುಂಬುತ್ತಾರೆ ಈ ಬಗ್ಗೆ ಕಳೆದ ಜುಲೈ ತಿಂಗಳಲ್ಲಿ ನಾನು ಆತ್ಮಹತ್ಯೆ ಗೆ ಯತ್ನಿಸಿದ್ದಾಗ ನನಗೆ ಸ್ವಾನುಭವವಾಗಿದೆ .ಆಗ ನನಗೆ ಪೂರ್ಣ ಬೆಂಬಲ ನೀಡಿದವರು ಫೇಸ್ ಬುಕ್ ಹಾಗೂ ವಾಟ್ಸಪ್ ಗೆಳೆಯರು
ದಾನೆ ಮಂಪೊಡು ಆಯೆನ್ ಕೆರೋಡಾ ಎಂದು ಕೇಳಿದ ಸಹೃದಯಿ ಗಳೂ ಇದ್ದರು ಅವರಲ್ಲಿ, ನಾನು ಬೇಡಪ್ಪಾ ನಾವು ನ್ಯಾಯಯುತ ಹೋರಾಟ ನಡೆಸೋಣ ಎಂದು ನಾನೇ ಅನೇಕ ರನ್ನು ಸಂತೈಸಿರುವೆ ಅದು ಬೇರೆ ವಿಚಾರ
ಫೇಸ್ ಬುಕ್ ವಾಟ್ಸಪ್ ಹೊರತಾಗಿ ನೇರವಾಗಿ ಇರುವ ನನ್ನ ಸ್ನೇಹಿತರ ಸಂಖ್ಯೆ ತೀರ ಕಡಿಮೆ ಬೆರೆಳೆಣಿಕೆಯಷ್ಟು
ಅವರಲ್ಲಿ ಇಬ್ಬರು ನನ್ನ ಆತ್ಮೀಯರು ಎಂದು ನಾನು ಭಾವಿಸಿದ್ದೆ
ಒಬ್ಬಾಕೆ ಯಾವಾಗಲೂ ನನ್ನಲ್ಲಿ ಮಾತಾಡುತ್ತಾ ಇದ್ದವರು ಪೇಸ್ ಬುಕ್ ಮೆಸೆಂಜರ್ ಮೂಲಕ ನಾವು ಸದಾ ಚಾಟ್ ಮಾಡಿ ಹಾಸ್ಯ ಮಾಡಿ ನಗಾಡಿ ಮನಸು ಹಗುರ ಮಾಡಿಕೊಳ್ಳುತ್ತಾ ಇದ್ದರು ಅವರ ಸಮಸ್ಯೆ ಹೇಳಿಕೊಂಡಾಗ ನಾನು ನನಗೆ ತಿಳಿದಂತೆ ಸಮಾಧಾನ ಮಾಡಿದ್ದೆ ನನಗೂ ಅವರು ಸಹಾಯ ಮಾಡಿದ್ದರು ಅವರ ಪತಿ ಕೂಡ ನನಗೆ ಪರಿಚಿತರೇ ಸಾಕಷ್ಟು ಆತ್ಮೀಯತೆ ಇತ್ತು
ಆದರೆ ನಾನು ಆತ್ಮಹತ್ಯೆ ಗೆ ಯತ್ನಿಸಿದ ದಿನದಿಂದ ಈಕೆ ಸಂಪೂರ್ಣವಾಗಿ ಸಂಪರ್ಕ ಕಡಿದುಕೊಂಡಿದ್ದರು ಚಾಟ್ ಪೋನ್ ಯಾವುದೂ ಇಲ್ಲ ನನಗೂ ಈ ಬಗ್ಗೆ ತಲೆಕೆಡಿಸಿಕೊಳ್ಳಲು ಪುರುಸೊತ್ತು ಇರಲಿಲ್ಲ ಆದರೂ ಇತ್ತೀಚೆಗೆ ಎದುರು ಸಿಕ್ಕಾಗ ಅವರು ಎಂದಿನಂತೆ ಮಾತಾಡಿದರು ನಾನು ಎಂದಿನಂತೆ ಹರಟಿದೆ ಕೂಡ
ಮೊನ್ನೆ ಒಂದು ಕಾರ್ಯಕ್ರಮಕ್ಕೆ ಹೋದಾಗ ಸಭಾಂಗಣದ ಎದುರಿನಲ್ಲಿ ನನ್ನ ಎರಡನೇ ಪಿಎಚ್ ಡಿ ಮಾರ್ಗದರ್ಶಕರಾದ ನನ್ನ ಪ್ರೊಫೆಸರ್ ಡಾ ಶಿವಕುಮಾರ್ ಭರಣ್ಯ ದಂಪತಿಗಳು ಸಿಕ್ಕರು ಅವರಲ್ಲಿ ಮಾತಾಡುತ್ತಾ ಇರುವಾಗ ಇವರ ಪತಿ ಅಲ್ಲಿಗೆ ಬಂದರು ನಾನು ವಿಶ್ ಮಾಡಿದರೂ ಅಪರಿಚಿತರಂತೆ ವರ್ತಿಸಿದರು .ನಾನು ಬಿಡಲಿಲ್ಲ ಮಾತಿಗೆ ಎಳೆದೆ ಅದು ಬೇರೆ ವಿಚಾರ
ಆದರೆ ನನಗೆ ಅನಿಸಿದ್ದು ನಾನು ಇವರಿಗೇನಾದರೂ ಅನ್ಯಾಯ ಮಾಡಿದ್ದೆನಾ ಅಂತ? ನಾನು ದುಡುಕಿದ್ದು ತಪ್ಪುನನಗೆ ಅದರ ಅರಿವಿದೆ ಆದರೂ ನಾನು ಬೇರೆಯವರನ್ನು ಕೊಲ್ಲ ಹೊರಟಿದ್ದಲ್ಲ ನನಗೆ ನಾನು ಹಾನಿ ಮಾಡಿಕೊಂಡದ್ದು ಹಾಗಿರುವಾಗ ಇವರಿಗೇನಾಯಿತು ಅಂತ ? ಕೊಲೆ ಮಾಡಿದವರು ಮೋಸ ವಂಚನೆ ಭ್ರಷ್ಟಾಚಾರ ಮಾಡಿದವರು ತಲೆಯೆತ್ತಿ ಕೊಂಡು ಓಡಾಡುತ್ತಾರೆ ಅಂತವರ ಜೊತೆಯಲ್ಲಿ ಎಲ್ಲರೂ ಚೆನ್ನಾಗಿ ಇರುತ್ತಾರೆ ಹಾಗಿರುವಾಗ ನಾನು ಕಳೆದು ಹೋದ ಆತ್ಮವಿಶ್ವಾಸ ವನ್ನು ಮತ್ತೆ ಗಳಿಸುವ ಯತ್ನ ಮಾಡುತ್ತಾ ಬರವಣಿಗೆ ಮುಂದುವರಿಸಿ ಆಹ್ವಾನವನ್ನು ನೀಡಿದವರ ಕಾರ್ಯಕ್ರಮ ಕ್ಕೆ ಹೋಗುವುದು ತಪ್ಪೇ ? ಸ್ನೇಹಿತರು ಎನಿಸಿಕೊಂಡ ವರು ಮುಖ ತಿರುವಿಕೊಂಡು ಹೋಗುವಂತ ಮಹಾಪರಾಧ ನನ್ನದೇ ? ಈಗ ಕಾನೂನು ಕೂಡ ಆತ್ಮಹತ್ಯೆ ಯತ್ನ ಮಾಡಿದವರೆಂದು ಆರೋಪಿ ಸ್ಥಾನದಲ್ಲಿ ನಿಲ್ಲಿಸದೆ ಅವರಿಗೆ ಸಾಂತ್ವನದ ಅಗತ್ಯವಿದೆಯೆಂದು ಹೇಳಿದೆ ಹಾಗಿರುವಾಗ ಇವರುಗಳ ವರ್ತನೆಯೇಕೆ ಹಾಗೆ ಆಯ್ತು ? ನನಗೆ ಅರ್ಥವಾಗಿಲ್ಲ
ಅಥವಾ ಅವರುಗಳನ್ನು ನಾನು ಸ್ನೇಹಿತರು ಎಂದು ತಪ್ಪು ತಿಳಿದೆನೆ ? ಅವರ ಆತ್ಮೀಯ ನಡೆ ನುಡಿ ಕೇವಲ ತೋರಿಕೆಯದ್ದು ಆಗಿತ್ತೇ ? ಇವೆಲ್ಲವೂ ನೆನಪಾದದ್ದು ಪುರುಷೋತ್ತಮ ಅವರ ಕವನ ಓದಿದಾಗ ಹಾಗಾಗಿ ಬರೆದೆ ಹೊರತು ಯಾರನ್ನು ದೂಷಿಸುವ ನೋಯಿಸುವ ಉದ್ದೇಶ ನನಗಿಲ್ಲ ಮಾತನಾಡುವುದು ಬಿಡುವುದು ಅವರವರ ಇಷ್ಟ .ಪ್ರೀತಿ ಆತ್ಮೀಯತೆ ಯನ್ನು ಬಲವಂತವಾಗಿ ಪಡೆಯಲಾಗದು ಅಲ್ಲವೇ ? ಏನಂತೀರಿ ?
No comments:
Post a Comment