ರಾಜು ಬಗ್ಗೆ ಬರೆಯಬೇಕೆಂದು ಎಂದೋ ಅಂದುಕೊಂಡಿದ್ದೆ ಅದಕ್ಕಾಗಿ ಅವರ ಭಾವ ಚಿತ್ರ ಪಡೆಯಲು ಅವರನ್ನು ಕಾಟನ್ ಪೇಟೆ ರಸ್ತೆಯಲ್ಲಿ ಅನೇಕ ಬಾರಿ ಹುಡುಕಾಡಿರುವೆ ಅವರು ಕಾಣಿಸಿಲ್ಲ ಅಥವಾ ಅವರು ವೃತ್ತಿ ಬದಲಾಯಿಸಿದ್ದು ನನಗೆ ಗುರುತಿಸಲು ಸಾಧ್ಯವಾಗಿಲ್ಲವೋ ಗೊತ್ತಿಲ್ಲ
ಕಾಟನ್ ಪೇಟೆ ಪೋಲೀಸ್ ಸ್ಟೇಷನ್ ಬಳಿ ಎದುರುಭಾಗದಲ್ಲಿ ಒಂದು ಸಣ್ಣ ಬಸ್ ಸ್ಟಪ್ ಇದೆ.ನಾನು ಅಲ್ಲೇ ಸಮೀಪದ ಕಮಲಾ ಕಾಲೇಜ್ ಆಫ್‌ಮೇನೇಜ್ಮೆಂಟ್ ಸ್ಟಡೀಸ್ ನಲ್ಲಿ 2008 ರಲ್ಲಿ ಒಂದು ವರ್ಷ ಕನ್ನಡ ಉಪನ್ಯಾಸಕಿಯಾಗಿ ಕೆಲಸಮಾಡಿದ್ದೆ .ಕಾಲೇಜಿಂದ ಹಿಂದೆ ಬರುವಾಗ ನಾವು ಬಸ್ ಗಾಗಿ ಕಾಯುವ ಬಸ್ ಸ್ಟಾಪ್ ನಲ್ಲಿ ಓರ್ವ ಸಣ್ಣ ಬಾಳೆ ಹಣ್ಣು ವ್ಯಾಪಾರಿ ಇದ್ದರು ಸುಮಾರು 23-25 ರ ಎಳೆಯ ತರುಣ ಅವರ ಹೆಸರು ರಾಜು ಎಂದು ಕೇಳಿದಾಗ ಹೇಳಿದ್ದರು
ನಾವು ( ನನ್ನ ಸ್ನೇಹಿತೆ (ಕಂಪ್ಯೂಟರ್ ಉಪನ್ಯಾಸಕಿ ನಾಗಲಕ್ಮೀ) ಜೊತೆ ಬನಶಂಕರಿ ತೃತೀಯ ಬಡಾವಣೆಗೆ ಬರುವ 45 G ಬಸ್ ಗಾಗಿ ಅಲ್ಲಿ ಕಾಯುತ್ತಾ ಇದ್ದೆವು .ಆಗ ನಾವು ಗಮನಿಸಿದ್ದು ಈ ತರುಣನ ವಿಶಿಷ್ಠವಾದ ನಡೆಯನ್ನು, ಉದಾರ ಹೃದಯ ವನ್ನು.
ಆ ರಸ್ತೆ ಜನ ನಿಬಿಡವಾಗಿದ್ದು ಏಕ ಮುಖ ರಸ್ತೆ ಯಾಗಿದೆ ಅಲ್ಲಿ ವಾಹನಗಳು ನಿರಂತರ ಸಾಗುತ್ತಲೇ ಇರುತ್ತವೆ ಸಾಮಾನ್ಯ ಜನರಿಗೂ ಅಲ್ಲಿ ರಸ್ತೆ ದಾಟುವುದು ಕಷ್ಟದ ವಿಚಾರ ಅನೇಕ ವೃದ್ಧರು ಅಂಗ ವಿಕಲರು ರಸ್ತೆ ದಾಟಲಾಗದೆ ಒದ್ದಾಡುತ್ತಾ ಇದ್ದರು ಅಂತಹವರನ್ನು ನೋಡಿದ ತಕ್ಷಣವೇ ರಾಜು ಅವರು ಎದ್ದು ಹೋಗಿ ಕೈ ಹಿಡಿದು ರಸ್ತೆ ದಾಟಿಸುತ್ತಾ ಇದ್ದರು ವಯಸ್ಸಾದವರಿಗೆ ಬಸ್ ನಂಬರ್ ನೋಡಿ ಅವರು ಹೋಗಬೇಕಾದ ಬಸ್ ಅನ್ನು ಹತ್ತಿಸುತ್ತಾ ಇದ್ದರು ಹಾಗೆ ಬಸ್ ಹತ್ತಿಸುತ್ತಾ ಇದ್ದವರಲ್ಲಿ ತೀರ ವಯಸ್ಸಾದ ಓರ್ವ ಭಿಕ್ಷುಕಿ ಕೂಡ ಇದ್ದರು ಅವರನ್ನು ಬಸ್ ಹತ್ತಿಸಿರುವುದನ್ನು ನಾನೇ ಅನೇಕ ಬಾರಿ ನೋಡಿರುವೆ ಇವರಾರು ಇವರ ಸಂಬಂಧಿಕರಾಗಲಿ ಪರಿಚಿತರಾಗಲಿ ಅಲ್ಲ ವೈಯಕ್ತಿಕ ವಾಗಿ ಅವರು ಯಾರೆಂದು ಇವರಿಗೆ ತಿಳಿದಿಲ್ಲ ಆದರೆ ಅವರು ಮಾಡುತ್ತಿದ್ದ ಸಹಾಯ ಅವರ ಉನ್ನತ ಮಟ್ಟದ ವ್ಯಕ್ತಿತ್ವ ಹಾಗೂ ಔದಾರ್ಯವನ್ನು ತೋರುತ್ತಿದ್ದವು .ಆಗ ನನಗಿನ್ನೂ ಕಂಪ್ಯೂಟರ್ ಇಂಟರ್ನೆಟ್ ಪರಿಚಯವಿರಲಿಲ್ಲ ನಂತರ 2013 ರಲ್ಲಿ ಬ್ಲಾಗ್ ಬರೆಯಲು ಆರಂಭಿಸಿದಾಗ ಬಸ್ ಸ್ಟಾಂಡ್ ಗಳಲ್ಲಿ ವೃದ್ದರು ಅಂಗವಿಕಲರು ಬಸ್ ಹತ್ತಲು ರಸದತೆ ದಾಟಲು ಕಷ್ಟ ಪಡುವಾಗ ರಾಜು ಅವರು ನನ್ನ ಮನಪಟಲದಲ್ಲಿ ಪ್ರತ್ಯಕ್ಷರಾಗಿ ನಾನು ಅವರಂತೆಯೇ ಹೆಚ್ಚು ಅಲ್ಲದಿದ್ದರೂ ಇವರುಗಳಗೆ ನನ್ನಿಂದಾದ ಸಹಾಯ ಮಾಡಿರುವೆ .ಬದುಕಿನಲ್ಲಿ ಒಂದು ಬುಟ್ಟಿಯಲ್ಲಿ ಐವತ್ತು ಅರುವತ್ತು ಬಾಳೆ ಹಣ್ಣು ಇಟ್ಟುಕೊಂಡು ಬಸ್ ಸ್ಟಾಪ್ ಬಳಿ ಮರದ ಕೆಳಗೆ ಕುಳಿತು ಬಾಳೆ ಹಣ್ಣು ವ್ಯಾಪಾರ ಮಾಡುತ್ತಿದ್ದ ಯುವಕ ರಾಜು ಸಿರಿವಂತರಲ್ಲ ಆದರೆ ಅವರ ಹೃದಯ ಶ್ರೀಮಂತಿಕೆಗೆ ಮಿತಿಯೇ ಇಲ್ಲ ಅಭಿನಂದನೆಗಳು ರಾಜು ನಿಮ್ಮಂತವರ ಸಂಖ್ಯೆ ಕೋಟಿಯಾಗಲಿ ಎಂದು ಹಾರೈಸುವೆ

No comments:
Post a Comment