ನನಗೂ ಆತ್ಮವಿದೆ..ಅದಕ್ಕೂ ಒಂದು ಕಥೆ ಇದೆ .
ಕೆಲವೊಮ್ಮೆ ಅದೃಷ್ಟ ಕಾಯುತ್ತದೆ
ಪೇಟೆಯಲ್ಲಿ ಮನೆ ಕಟ್ಟುವಾಗ ಅಕ್ಕ ಪಕ್ಕದವರ ಕಿರಿ ಕಿರಿ ತುಂಬಾ ಇರುತ್ತದೆ.ನೀವು ಮನೆ ಕಟ್ಟುವಾಗ ನಿಮಗೆ ಏನೂ ಸಮಸ್ಯೆ ಆಗಿಲ್ಲವೇ? ಎಂದು ಅನೇಕರು ಕುತೂಹಲದಿಂದ ಕೇಳಿದ್ದಾರೆ.
ನಮಗೂ ಸಮಸ್ಯೆಗಳು ಬಂದಿವೆ.
ನಾವು ಮನೆ ಕಟ್ಟಲು ಗುದ್ದಲಿ ಪೂಜೆ ಮಾಡಿ ಮೇಸ್ತ್ರಿ ಕೆಲಸದವರಲ್ಲಿ ಹೇಳಿ ಪಾರಿಜಾತ ಸಂಪಿಗೆ ಮರ ಕಡಿದು ಇತರ ಗಿಡ ಬಳ್ಳಿಗಳನ್ನು ಕಡಿದು ಸಿದ್ದ ಮಾಡುತ್ತಿದ್ದರು
ಆಗ ಒಂದು ಅಚ್ಚರಿಯ ಘಟನೆ ನಡೆಯಿತು.
ಎರಡು ಕಾರು ಬಂದು ನಮ್ಮ ಮನೆ ಕೌಂಪೌಂಡ್ ಬಳಿ ಬಂದು ನಿಂತಿತು
ಅದರಿಂದ ಏಳೆಂಟು 30-35 ವರ್ಷದ ಜವ್ವನಿಗರು ಇಳಿದರು.
ಕೌಂಪೌಂಡ್ ಗೇಟಿಗೆ ನಾವು ಯಾವಾಗಲೂ ಬೀಗ ಹಾಕಿರ್ತಿದ್ದೆವು.ಆ ದಿನ ಕೂಡಾ ಬೀಗ ಹಾಕಿತ್ತು.
ಗೇಟ್ ಲಾಕ್ ತೆಗೆಯಿರಿ ಎಂದರು !
ಯಾಕೆ ಎಂದು ಕೇಳಿದೆ
ಈ ಸೈಟನ್ನು ನಮಗೆ ಮಾರಾಟ ಮಾಡಿದ್ದಾರೆ ,ನಾವು ಅಳೆಯಬೇಕು ಎಂದರು.ಅಳೆಯುವ ಟೇಪ್ ಅವರ ಕೈಯಲ್ಲಿ ಇತ್ತು.
ಇದು ನಮ್ಮಮನೆ ಇದನ್ನು ನಾವು ಯಾರಿಗೂ ಮಾರಾಟ ಮಾಡಿಲ್ಲ.ಕಳೆದ ಹತ್ತು ವರ್ಷಗಳಿಂದ ಇಲ್ಲಿ ನಾವಿದ್ಷೇವೆ ಎಂದೆ.
ಇಲ್ಲ.ಇಲ್ಲ ಇದು ನಾವು ಕೊಂಡುಕೊಂಡ ಸೈಟು ಎಂದು ಕಾಂಪೌಂಡು ಹತ್ತಿ ಒಳಬರಲು ಹೊರಟರು.
ಆಗ ನಾನು "ನೋಡಿ..ಇದು ನಿಮಗೆ ಮಾರಾಟವಾಗಿದ್ದರೆ ದಾಖಲೆ ತೋರಿಸಿ..ಸುಮ್ಮನೇ ಒಳಗೆ ಬಂದರೆ ಪೋಲೀಸ್ ಗೆ ಕರೆ ಮಾಡುತ್ತೇವೆ "ಎಂದೆ.
ನನ್ನ ದ್ವನಿ ಸ್ವಲ್ಪ ದೊಡ್ಡದೇ ..
ಗೋಡೆ ಹತ್ತಿದಾತ ಅ ಕಡೆಗೆ ಇಳಿದ.ಮತ್ತೆ ಸ್ವಲ್ಪ ದೂರ ಹೋಗಿ ಅವರವರೊಳಗೇ ಏನೋ ಗುಸುಗುಸು ಮಾತನಾಡಿಕೊಂಡರು.ಕಾರು ಹತ್ತಿ ಹೋದರು.
ಅ ವ್ಯಕ್ತಿಗಳನ್ನು ನಾನು ಆ ಪ್ರದೇಶದಲ್ಲಿ ಮೊದಲೂ ನೋಡಿರಲಿಲ್ಲ.ನಂತರ ಇಂದಿನ ತನಕ ನಾನು ನೋಡಿಲ್ಲ
ಅವದ್ಯಾರು..ಯಾಕೆ ಬಂದಿದ್ದರು ? ಇಂದಿಗೂ ಕುತೂಹಲಕರವಾಗಿಯೇ ಉಳಿದಿದೆ ನಮಗೆ.
ಈ ಪ್ರದೇಶದಲ್ಲಿ ಮನೆ ಕಟ್ಟುವಾಗ ಮೊದಲು ಸೈಟು ಮಾರಾಟ ಮಾಡಿದವರ ಮಕ್ಕಳು ಬಂದು ನಮ್ಮ ಅಜ್ಜ/ ತಂದೆಗೆ ಮೋಸ ಮಾಡಿ ನೀವುಗಳು ಕಡಿಮೆ ದುಡ್ಡಿಗೆ ಸೈಟ್ ತಗೊಂಡಿದ್ದೀರಿ.ಅ ದುಡ್ಡು ಹಿಂದೆ ಕೊಡ್ತೇವೆ.ನಮ್ಮಜಾಗ ನಮಗೆ ಕೊಡಿ ಎಂದು ಗಲಾಟೆ ಮಾಡಿ ಸ್ವಲ್ಪ ದುಡ್ಡು ವಸೂಲಿ ಮಾಡುತ್ತಾರೆ ಎಂದು ಹೇಳುದು ಕೇಳಿದ್ದೆ.
ಬಹುಶಃ ನಾವು ಹತ್ತು ವರ್ಷದಿಂದ ಅಲ್ಲಿರುವುದು ಗೊತ್ತಿಲ್ಲದೇ ಅಥವಾ ಸ್ವಲ್ಪ ಹೆಸರಿಸಿ ದುಡ್ಡು ವಸೂಲಿಗೆ ಬಂದವರೋ ಅಥವಾ ಬೇರೆ ಯಾವುದೊ ಸೈಟನ್ನು ಖರೀದಿಸಿ ಇದನ್ನು ಗೊಂದಲ ಮಾಡಿಕೊಂಡರೊ ಗೊತ್ತಿಲ್ಲ.
ಆದರೆ ಸೈಟನ್ನು ನೋಡಿ ಅಳೆಯದೇ ಯಾರಾದರೂ ಖರಿದಿಸುತ್ತಾರಾ? ಏನೋ ನನಗೆ ಗೊತ್ತಾಗುತ್ತಿಲ್ಲ.
ಅದಾಗಿ ಪಕ್ಕದ ಮನೆಯವರ ಕಿರಿಕಿರಿ ಶುರು ಆಯಿತು.
ನಮ್ಮ ಸೈಟಿನ ಎಡ ಬಾಗದ ಸೈಟಿನ ಮನೆ ಮಲ್ಲಮ್ಮ ಎಂಬವರದು.ಇವರು ಸ್ವಲ್ಪ ಕಿರಿಕ್ ಪಾರ್ಟಿ.
ಅಕ್ಕ ಪಕ್ಕ ಸದಾ ಗಲಾಟೆ.ಇವರು ಜಗಳಾಡದ ವ್ಯಕ್ತಿಗಳು ಅಲ್ಲಿರಲಿಲ್ಲ.
ನಮ್ಮ ಹತ್ತಿರ ಅಷ್ಟಾಗಿ ಜಗಳ ಮಾಡಿರಲಿಲ್ಲ.ಅದಕ್ಕೆ ಕಾರಣ ಇತ್ತು.ಅವರಿಗೆ ಸುಮಾರು ಉಚಿತವಾಗಿ ನಾವು ನೀರನ್ನು ಕೊಟ್ಟಿದ್ದೆವು
ನಂತರ cmc ನೀರು ಬಂದಾಗ ಕೂಡ ನಮ್ಮ ಜಾಗದಲ್ಲಿ ನೀರಿನ ಪೈಪ್ ಹಾಕಲು ನಾವು ಬಿಟ್ಟಿದ್ದೆವು
ಇಷ್ಟೆಲ್ಲ ಉಪಕಾರ ಪಡೆದವರು ಕೂಡಾ ನಮ್ಮ ಮನೆ ಕಟ್ಟುವಾಗ ಕಿರಿಕ್ ತೆಗೆದರು.
ಅವರು ಪೂರ್ತಿ ಸೈಟಿನಲ್ಲಿ ಮನೆ ಕಟ್ಟಿದ್ದರು.ಒಂದು ಇಂಚು ಜಾಗ ಕೂಡ ಬಿಟ್ಟಿಲ್ಲ.ನಾವು ಮೂರು ಅಡಿ ಬಿಟ್ಟು ಕಟ್ಟಿ ಎಂದು ಗಲಾಟೆ.
ನಾವು ಅಲ್ಲಿ ಬಿಟ್ಟರೆ ಇನ್ನೊಂದು ಕಡೆಯವರು ಕೂಡಾ ಬಿಡಿ ಎಂದು ಹೇಳುವುದಿಲ್ಲವೇ? ಇನ್ನೊಂದು ಕಡೆ ರಾಮ ಮೂರ್ತಿ ಎಂಬವರ ಕಮರ್ಷಿಯಲ್ ಕಾಂಪ್ಲೆಕ್ಸ್ ಇದೆ.ಅವರು ನಮ್ಮ ಕಡೆಗೆ ನಾಲ್ಕಡಿಯಷ್ಟು ಜಾಗ ಬಿಟ್ಟುಕಟ್ಟಿದ್ದರು.ಅವರದು ಡಬಲ್ ಸೈಟಾದ ಕಾರಣ ಮೂರಡಿ ಬಿಟ್ಟರೂ ಸಮಸ್ಯೆ ಆಗುವುದಿಲ್ಲ.
ನಾವು ಎರಡು ಕಡೆ ಮೂರು ಮೂರು ಅಡಿ ಬಿಟ್ಟರೆ ಉಳಿದ 24 ಅಡಿಯಲ್ಲಿ ಒಂದು ಸಣ್ಣ ಶಾಪ್ ಮತ್ತು ಒಂದು ಕಾರು ನಿಲ್ಲಿಸುವಷ್ಟು ದೊಡ್ಡ ಪಾರ್ಕಿಂಗ್ ಮಾಡಲು ಸಾಧ್ಯ ಅಷ್ಟೆ.ಮೇಲೆ ಕೂಡಾ ಎರಡು ಶಾಪ್ ಹಾಕಬಹುದು ಅಷ್ಟೇ
ಹಾಗಾಗಿ ನಾವು ಜಾಗಬಿಡಲು ತಯಾರಿರಲಿಲ್ಲ.ಹಿಂಭಗದ ಮನೆಯ ಭಾಗದಲ್ಲಿ ಮೂರಡಿ ಸುತ್ತಲೂ ಬಿಟ್ಟಿದ್ದೇವೆ.
ಎದುರು ಗಡೆ ಅಂಗಡಿ ಹಾಕಿರುವಲ್ಲಿ ಬಿಡಲಿಲ್ಲ.
ಮೊದಲು ಅವರು ಅವರ ಮನೆಯ ಕಿಟಕಿ ಇರುವಲ್ಲಿಒಂದೂವರೆ ಅಡಿ ಅಗಲ ಬಿಡಬೇಕು ಎಂದರು.
ಸರಿ ಚರ್ಚೆ ಬೇಡ ಎಂದು ಒಪ್ಪಿದೆ
ಅದರೆ ಮೇಲೆ ಮೋಲ್ಡ್ ಹಾಕಿದಾಗ ಅಲ್ಲೂ ಬಿಡಬೇಕೆಂದು ತಕರಾರು ಮಾಡಿದರು.
ನಾವು ಒಪ್ಪದ್ದಕ್ಕೆ ಬಿಬಿಎಂಪಿಗೆ ದೂರು ಕೊಟ್ಟರು.
ಬಿಬಿಎಂಪಿಯವರು ಬಂದಾಗ ಅವರು ಒಂದಿಂಚು ಕೂಡಾ ಬಿಟ್ಟಿಲ್ಲ.ನಾವ್ಯಾಕೆ ಬಿಡಬೇಕು ಎಂದು ಕೇಳಿದೆ.
ಇಬ್ಬರಿಗೂ ನೊಟಿಸ್ ಕೊಡ್ತೇವೆ ಎಂದು ಬಿಬಿಎಂಪಿಯವರು ಹೊರಟು ಹೋದರು
ಇತ್ತ ಮೇಸ್ತ್ರಿಗೆ ಅ ಕಡೆ ಅವರ ಗೋಡೆಗೆ ತಾಗದಂತೆ ಸ್ವಲ್ಪ ಜಾಗಬಿಟ್ಟು ಗೋಡೆ ಕಟ್ಟಲು ಹೇಳಿದೆ.ಅಗ ಆಕೆ ಕಟ್ಟದಂತೆ ಅಡ್ಡ ಬಂದರು.ಇದನ್ನು ನಾನು ಅರವಿಂದ್ ರೆಕಾರ್ಡ್ ಮಾಡಿದೆವು.ಅದು ಗೊತ್ತಾಗಿ ಆಕೆ ನನ್ನ ಕೈಯಿಂದ ಮೊಬೈಲ್ ಕಿತ್ತುಕೊಳ್ಳಲು ಬಂದರು.ಇದೂ ಕೂಡಾ ಅರವಿಂದ್ ನ ಮೊಬೈಲ್ ನಲ್ಲಿ ರೆಕಾರ್ಡ್ ಆಯಿತು
ದಾಖಲೆ ಸಿಕ್ಕ ತಕ್ಷಣವೇ ಹೋಗಿ ಪೋಲೀಸ್ ಸ್ಟೇಶನ್ ನಲ್ಲಿ ದೂರು ಕೊಟ್ಟೆವು.
ಕ್ರಿಮಿನಲ್ ಕೇಸ್ ಬೀಳುತ್ತದೆ ಎಂದಾಗ ಬಿಸಿ ಆಯಿತು ಆಕೆಗೆ,ಜೊತೆಗೆ ಇದ್ದ ಆಕೆಯ ಅಣ್ಣನ ಮಗನಿಗೆ
ನಂತರ ಕ್ಷಮಾಯಾಚನೆ ಪತ್ರ ಬರೆದುಕೊಟ್ಟರು.
ಮನೆಗೆ ಬಂದು ಅರ್ದ ಅಡಿ ಬಿಟ್ಡು ಗೋಡೆ ಕಟ್ಟಲು ಮೇಸ್ತ್ರಿಗೆ ಹೇಳಿದೆ.ಯಾಕೆಂದರೆ ಅವರ ಗೋಡೆಗೆ ತಾಗಿದಾಗ ಡ್ಯಾಮೇಜ್ ಅಗಿದೆ ಎಂದು ಕೋರ್ಟಿಗೆ ಹೋಗಿ ಸ್ಟೇ ತಂದರೆ ನಮ್ಮ ಕೆಲಸ ಹಾಳಾಗುತ್ತದೆ.
ಮುಂದೆ ಸಮಯ ನೋಡಿ ಅ ಗೋಡೆ ತೆಗೆದು ಹಿಂದೆಹಾಕಿ ಕಟ್ಟುದೆಂದು ನಿರ್ಧರಿಸಿದೆ.
ಅಂತೂ ಅ ಕಡೆಯ ಸಮಸ್ಯೆ ಪರಿಹಾರ ಆಗಿತ್ತು.
ನಮ್ಮ ಅದೃಷ್ಟಕ್ಕೆ ಇನ್ನೊಂದು ಕಡೆಯವರು ನಾವು ಮನೆ ಕಟ್ಟಲು ಸುರು ಮಾಡಿದ ಸಮಯದಲ್ಲಿ ವಿದೇಶಕ್ಕೆ ಮೂರು ತಿಂಗಳ ಪ್ರವಾಸ ಹೋಗಿದ್ದರು.
ಅವರು ಬರುವಷ್ಟರಲ್ಲಿ ಗೋಡೆ ಹಾಕಿ ಆಗಿತ್ತು.ಆದ ನಂತರ ಏನು ಮಾಡುದು ? ಹಾಗಾಗಿ ಅಸಮಧಾನ ಆಗಿದ್ದರೂ ಏನೂ ತೋರಿಸಿಕೊಳ್ಳಲಿಲ್ಲ.
ನಮ್ಮಕಟ್ಟಡ ಮೇಲೆ ಬಂದಾಗ ಈ ಕಡೆಯ ಮನೆಯವರಿಗೆ ಗಾಳಿ ಬೆಳಕಿಲ್ಲದೆ ಮನೆ ಕಗ್ಗತ್ತಲಾಯಿತು.ಯಾಕೆಂದರೆ ಅವರು ಒಂದಿಂಚೂ ಜಾಗ ಬಿಟ್ಟಿರಲಿಲ್ಲ.ನಾವೂ ಬಿಡದ ಕಾರಣ ಅವರಿಗೆ ಗಾಳಿ ಬೆಳಕಿಲ್ಲದಾಯಿತು.ಹಾಗಾಗಿ ಅವರು ಮನೆ ಖಾಲಿ ಮಾಡಿ ಬೇರೆಡೆ ಹೋದರು.
ಅವರು ಮನೆ ಖಾಲಿ ಮಾಡುತ್ತಲೇ ನಾವು ಗೋಡೆಯನ್ನು ತೆಗೆದು ಅರ್ಧ ಅಡಿ ಬಿಟ್ಟ ಜಾಗದಷ್ಟುಹಿಂದೆ ಹಾಕಿ ಕಟ್ಟಲು ನಿರ್ಧರಿಸಿದೆವು
ಹಗಲು ಮಾಡಿದರೆ ಯಾರಾದರೂ ನೋಡಿ ಅವರಿಗೆ ಪೋನ್ ಮೂಲಕ ಹೇಳುವ ಸಾಧ್ಯತೆ ಇತ್ತು.ಅಕೆ ಹೈ ಕೋರ್ಟ್ ನಲ್ಲಿ ಸೆಕ್ಷನ್ ಆಫೀಸರ್ ಆಗಿ ಕೆಲಸ ಮಾಡ್ತಾರೆ.ಕ್ಷಣದಲ್ಲಿ ಪೋಲಿಸ್ ಕರೆಸಿ ನಿಲ್ಲಿಸುವ ಸಾಮರ್ಥ್ಯ ಇರುವವರು.
ಹಾಗಾಗಿ ರಾತ್ರಿ ಮಾಡಲು ನಿರ್ದರಿಸಿದೆವು.ನಮ್ಮ ಮನೆ ಉಳ್ಳಾಲು ಮುಖ್ಯ ರಸ್ತೆಯಲ್ಲಿ ಇರುವ ಕಾರಣ ಅಕ್ಕ ಪಕ್ಕ ಎದುರುಗಡೆ ಅಂಗಡಿಗಳೇ ಇವೆ
ಅಂಗಡಿಗಳನ್ನು ಬಾಗಿಲು ಹಾಕಿ ಹೋಗುವ ತನಕ ಕಾದೆವು.
ರಾತ್ರಿ ಹತ್ತ ಹತ್ತೂವರೆ ಆಗುವಾಗ ಅಂಗಡಿಗಳೆಲ್ಲ ಮುಚ್ಚಿದವು
ಮತ್ತೆ ಗೋಡೆಯನ್ನು ಮೆಷಿನ್ ನಲ್ಲಿ ಕತ್ತರಿಸುವ ಒಡೆಯುವ ಕೆಲಸ ಶುರು ಮಾಡಿದರು.
ಭಯಂಕರ ಶಬ್ದ ಅದರದ್ದು.ನಮ್ಮ ಮನೆ ಹಿಂಬಾಗದ ಸೈಟಿನಲ್ಲಿ ಒಂದು ಮನೆ ಎರಡು ಸೈಟ್ ದೂರದಲ್ಲಿ ಇನ್ನೊಂದು ಮನೆ,ಅದರ ಆ ಕಡೆಗೆ ಒಂದು ಈ ಪಕ್ಕದ ಮನೆಯವರ ಅಕ್ಕನಮಗಳ ಮನೆ ,ಈ ಕಡೆ ಎದುರು ಗಡೆ ಒಂದು ಮನೆ ಇತ್ತು.
ಇಷ್ಟು ಮನೆಗಳಿಗೆ ಕಿವಿ ಮುಚ್ಚಿದರೂ ಕೇಳಿಸುವ ಕರ್ಕಶ ಶಬ್ದ ಅಗುತ್ತಿತ್ತು.
ಇಲ್ಲಿ ಹಿಂದಿನಮನೆ ಎದುರುಗಡೆಯ ಮನೆಗಳಿಗೆ ಬೆಸಿಗೆಯಲ್ಲಿ ಸಿ ಎಮ್ ಸಿ ನೀರು ಸರಿಯಾಗಿ ಬರದೇ ಇದ್ದಾಗ ಪೈಪ್ ಹಾಕಿ ನೀರು ಕೊಡುತ್ತಿದ್ದೇವೆ ನಾವು ಪ್ರತಿ ಬೇಸಿಗೆ ಬಂದಾಗ
ನಾಲ್ಕೈದು ವರ್ಷಗಳ ಮೊದಲು ಎದುರುಗಡೆ ಮನೆಯವರ ತೋಟಕ್ಕೆ ಬೆಂಕಿ ಬಿದ್ದಾಗ ಅರವಿಂದ ನೋಡಿದ್ದ ಮನೆಯವರು ಹೊರಗಡೆ ಹೊಗಿದ್ದರು.ಅಗ ಅಕ್ಕ ಪಕ್ಕದವರನ್ನು ಸೇರಿಸಿ ನೀರು ಹಾಕಿ ಬೆಂಕಿ ಹರಡದಂತೆ ಅರವಿಂದ ತಡೆದಿದ್ದ.
ಶಬ್ದ ಆದಾಗ ಏನೆಂದು ನೋಡಲು ಬಂದವರು ನಾವಿರುದನ್ನು ನೋಡಿ ಮುಲಾಜಿಗೆ ಸಿಕ್ಕಿ ಏನು ಹೇಳದೆ ಹಿಂದೆ ಹೋದರು.
ಪಕ್ಕದ ಮನೆಯವರ ಅಕ್ಕನ ಮಗಳ ಮನೆಯವರಿಗೂ ಇವರಿಗೂ ಸರಿ ಇರಲಿಲ್ಲ.ಹಾಗಾಗಿ ಅವರೂ ಮಾತನಾಡಲಿಲ್ಲ
ಅಂತೂ ಇಂತೂ ಬೆಳಗಾಗುವಷ್ಟರಲ್ಲಿ ಗೋಡೆ ಒಡೆದು ತೆಗೆದು ಹೊಸ ಗೋಡೆ ಅರ್ಧದಷ್ಟು ಕಟ್ಟಿ ಆಗಿತ್ತು.
ಅದೃಷ್ಟವಶಾತ್ ಆಕೆಗೆ ಸುದ್ದಿ ತಲುಪಲಿಲ್ಲ.ಇತ್ತ ಸಾವಕಾಶ ಗೋಡೆ ಕಟ್ಟಿದೆವು.
ಅದೃಷ್ಟವಶಾತ್ ಪ್ರತಿ ದಿನ ಬೀಟ್ ಗೆ ಬರುವ ಪೋಲೀಸ್ ಆ ದಿನ ಬಂದಿರಲಿಲ್ಲ.ಬಂದರೂ ಏನೂ ಮಾಡಲಾಗುವುದಿಲ್ಲ.ರಾತ್ರಿ ಕೆಲಸ ಮಾಡಬಾರದು ಎಂದಿಲ್ಲ.ಆದರೂ ಸದ್ದು ಬರಯವ ಕಾರಣ ತಕರಾರು ಮಾಡುತ್ತಿದ್ದರೋ ಏನೋ ..ಅದರೆ ಅ ದಿನ ಬರದೇ ಇದ್ದ ಕಾರಣ ಸಮಸ್ಯೆ ಆಗಲಿಲ್ಲ.ಅ ಗೋಡೆ ಪ್ಲಾಸ್ಟರಿಂಗ್ ಮಾಡಿರಲಿಲ್ಲ ಹಾಗಾಗಿ ದೊಡ್ಡ ಖರ್ಚು ಕೂಡ ಆಗಲಿಲ್ಲ
ಎಲ್ಲೆಡೆ ನಮ್ಮನ್ನು ದೇವರು ಕಾಪಾಡಿದ
ಇದಾಗಿ ತಿಂಗಳ ನಂತರ ಅಕೆಯ ಮಗ ಬಂದವನು ನಾವು ಗೋಡೆಯನ್ನು ಹಿಂದೆ ಹಾಕಿದ್ದು ನೋಡಿ " ಅಂಟಿ.ನಮ್ಮನ್ನ ಕೇಳದೆ ಗೋಡೆ ಕಟ್ಟಿದ್ದು ಯಾಕೆ ? " ಎಂದು ಕೇಳಿದ.
ನಮ್ಮ ಜಾಗದಲ್ಲಿ ಗೋಡೆ ಕಟ್ತೇವೆ ತೆಗೆಯುತ್ತೇವೆ..ನಿನಗ್ಯಾಕೆ ಹೇಳಬೇಕು ? ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದೆ..ಸುಮ್ಮನಾದ
ಗೋಡೆ ಕಟ್ತಾ ಇರುವಾಗಲೇ ಬಾಡಿಗೆಗೆ ಜನ ಬಂದರು.
ದೇವರ ದಯೆಯಿಂದ ಏನೂ ಸಮಸ್ಯೆಯಾಗಲಿಲ್ಲ.
No comments:
Post a Comment