ನಿಜವಾಗಿಯೂ ನಡೆದದ್ದೇನು?
ನಾನು ಎರಡನೇ ವರ್ಷ ಬಿಎಸ್ಸಿ ಓದುತ್ತಿರುವಾಗಲೇ ನನಗೆ ಮದುವೆ ಆಯಿತು.ಮುಂದಿನ ಓದಿನ ಕಾರಣಕ್ಕಾಗಿ ಮನೆ ಮಂದಿಯ ವಿರೋಧ ಇತ್ತು.ಹಾಗಾಗಿ ಎಲ್ಲರನ್ನೂ ಎದುರು ಹಾಕಿಕೊಂಡು ಮನೆ ಬಿಟ್ಟು ಹೊರ ನಡೆದಿದ್ದವು.
ಅನೆನ ಏಳು ಬೀಳುಗಳ ಜೊತೆಗೆ ಒಂದು ಕೆಲಸ ಹಿಡಿದು ಮನೆ ಖರೀದಿಸಿ ಮಂಗಳೂರಿನಲ್ಲಿ ನಾವು ಬದುಕುತ್ತಿದ್ದೆವು.
ಈ ನಡುವೆ ಅತ್ತೆಯವರ ಕಣ್ಣೀರಿಗೆ ಸೋತು ಮನೆ ಮಂದಿಯ ಜೊತೆಗೆ ರಾಜಿ ಮಾಡಿಕೊಂಡಿದ್ದೆವು.ಆದರೆ ಇದೆಲ್ಲ ಹೊರ ಜಗತ್ತಿನ ಕಣ್ಣಿಗೆ ಮಣ್ಣು ಹಾಕುವದ್ದು ಅಷ್ಟೇ,
ಒಳಗಿನಿಂದ ಹೊಟ್ಟೆ ಕಿಚ್ಚು ಆರೋಪಗಳು ಇದ್ದದ್ದೇ..ನಮ್ಮ ಕುಟುಂಬದಲ್ಲಿ ಓದಿ ಸರಿಯಾದ ಕೆಲಸ ಹಿಡಿದವರಿರಲಿಲ್ಲ.ಪ್ರಸಾದ್ ಮತ್ತು ನಾನು ಇಬ್ಬರೂ ಕೂಡ ಓದಿ ಒಳ್ಳೆಯ ಕೆಲಸ ಹಿಡಿದು ಮಂಗಳೂರಿನಲ್ಲಿ ಮನೆ ತಗೊಂಡದ್ದು ಉಳಿದವರ ಕಣ್ಣು ಕೆಂಪಾಗಲು ಕಾರಣವಾಗಿತ್ತು.
ನನ್ನ ಮಗನಿಗೆ ಒಂದು ಅಂದಾಜು ಎರಡು ಎರಡೂವರೆ ವರ್ಷ..ಅಗಷ್ಟೇ ಬಾಲ ಭಾಷೆಯಲ್ಲಿ ಮಾತನಾಡಲು ಕಲಿತಿದ್ದ.
ಇಂತಹ ಸಮಯದಲ್ಲಿ ನಮ್ಮ ಮನೆಯಲ್ಲಿ ನಾಗ ಪ್ರತಿಷ್ಠೆ ನಂತರ ಇನ್ನೇನೋ ಕಾರ್ಯಕ್ರಮ ಇತ್ತು.ಹಾಗಾಗಿ ಎರಡು ದಿನಗಳ ಮೊದಲೇ ಊರಿಗೆ ಹೋದೆವು.
ಕಾರ್ಯಕ್ರಮದ ಹಿಂದಿನ ದಿನವೇ ಸಂಬಂಧಿಕರು ,ಕುಟುಂಬದವರೆಲ್ಲ ಬಂದು ಸೇರಿದ್ದರು.ಎಲ್ಲರೂ ಏನೇನೋ ಕೆಲಸ ಹಚ್ಚಿಕೊಂಡು ಮರುದಿನದ ಕಾರ್ಯಕ್ರಮಕ್ಕೆ ಸಜ್ಜು ಮಾಡುತ್ತಿದ್ದರು.ನನಗೆ ಮಗನನ್ನು ಕಾಯುವುದೇ ಕೆಲಸ ಆಗಿತ್ತು.ವಿಪರೀತ ತುಂಟ.ಹಳ್ಳಿ ಅಲ್ವಾ? ಕೆರೆ ಬಾವಿಗಳಿವೆ
ಇವನೆಲ್ಲಿ ಅಲ್ಲಿ ಹೋಗಿ ಬಗ್ಗಿದರೆ ಎಂಬ ಆತಂಕ..
ಬೆಳಗ್ಗೆ ಹತ್ತು ಗಂಟೆ ಹೊತ್ತಿಗೆ ಮಕ್ಕಳೆಲ್ಲ ಆಟ ಅಡುತ್ತಿದ್ದರು.
ನನ್ನ ಮಗನೂ ಕೂಡ ಅವರ ಜೊತೆ ಇದ್ದ.ಆ ಗುಂಪಿನಲ್ಲಿ ಸ್ವಲ್ಪ ಹಿರಿಯಳಾದ ಬಾವನವರ ಮಗಳಿಗೆ ಅರವಿಂದನ ಮೇಲೆ ಒಂದು ಕಣ್ಣು ಇರುವಂತೆ ತಿಳಿಸಿ ಸ್ನಾನಕ್ಕೆ ಹೋಗಿದ್ದೆ..
ಸೋಪು ಹಚ್ಚಿಕೊಳ್ಳುವಷ್ಟರಲ್ಲಿ ಮಗ ಬೇಡಾ ಬೇಡಾ..ಅಮ್ಮಾ ಎಂದು ದೊಡ್ಡಕ್ಕೆ ಬೊಬ್ಬೆ ಹೊಡೆಯಿವುದು ಕೇಳಿಸಿತು.
ಗಾಬರಿಯಲ್ಲಿ ಹಾಗೆಯೇ ಬಟ್ಟೆ ಹಾಕಿಕೊಂಡು ಹೊರಗೆ ಅರವಿಂದ್ ಎಂತಾತು ಎಂದು ದೊಡ್ಡದಾಗಿ ಓಡಿ ಅಂಗಳಕ್ಕೆ ಬಂದೆ..ಆಗ ಒಬ್ಬರು ಹತ್ತಿರದ ನೆಂಟರು ಬಾವಿ ಕಟ್ಟೆ ಕಡೆಯಿಂದ ವೇಗವಾಗಿ ಓಡಿದ್ದು ನೋಡಿದೆ.ಮಗ ಅಲ್ಲಿ ಅಳುತ್ತಾ ಇದ್ದ.ಏನೆಂದು ಕೇಳಿದೆ.ಅವನು ತನ್ನದೇ ಬಾಲ ಭಾಷೆಯಲ್ಲಿ ಯಾರೋ ಅವನನ್ನು ಎತ್ತಿ ಬಾವಿಗೆ ಹಾಕಲು ಹೊರಟದ್ದನ್ನು ಹೇಳಿದ..
ನಂಬಲು ಅಸಾಧ್ಯವಾದ ವಿಚಾರ.. ಆದರೆ ಸಣ್ಣ ಮಗು ಸುಳ್ಳು ಹೇಳಲು ಸಾಧ್ಯವೇಇಲ್ಲ..ಹಾಗೆಂದು ಸಣ್ಣ ಮಗುವಿನ ಮಾತಿನ ಮೇಲೆ ಈ ಬಗ್ಗೆ ಯಾರನ್ನಾದರೂ ಆಕ್ಷೇಪ ಮಾಡಲು ಸಾಧ್ಯವೇ?
ನನ್ನ ಅಮ್ಮ ನನಗೆ "ನೋಡು ದಾಯಾದಿ ಮತ್ಸರ ಎಂಬುದು ಬಹಳ ಅಪಾಯಕಾರಿ.ಊರ ಕಡೆ ಬಂದರೆ ಮಗನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕು" ಎಂದು ಸದಾ ಹೇಳುತ್ತಿದ್ದರು.
ಅಲ್ಲಿ ಬಾವಿ ಕಟ್ಟೆ ಕಡೆಯಿಂದ ಓಡಿ ಬಂದವರೂ ದಾಯಾದಿಗಳೇ..ನಿಜಕ್ಕೂ ಮಗನನ್ನು ಎತ್ತಿ ಬಾವಿಗೆ ಹಾಕಲು ಹೊರಟರೇ.ಅಲ್ಲಿ ಯಾರೂ ಇರಲಿಲ್ಲ.
ಮನೆ ಮಂದಿ ಮಕ್ಕಳೆಲ್ಲ ತೆಂಕ ಜಾಲಿನಲ್ಲಿ ಇದ್ದರು.ಅಲ್ಲದೆ ಚಪ್ಪರ ಹಾಕಿ ಬದಿ ಕಟ್ಟಿದ ಕಾರಣ ಬಾವಿ ಇರುವ ಜಾಗ ಯಾರಿಗೂ ಕಾಣುವಂತೆ ಇರಲಿಲ್ಲ. ನಾನು ಸ್ನಾನಕ್ಕೆ ಹೋಗುತ್ತಲೇ ಅಡುವ ಮಕ್ಕಳ ನಡುವಿನಿಂದ ಇವನನ್ನು ಎತ್ತಿಕೊಂಡು ಹೋದರೇ..?
ಇಲ್ಲೊಂದು ಗೊಂದಲವಿದೆ.ಅರವಿಂದ ಬಾವಿಗೆ ಎತ್ತಿ ಹಾಕಲು ಹೊರಟದ್ದು ಎಂದು ಒಬ್ಬರ ಹೆಸರನ್ನು ಹೇಳಿದ್ದ.ನಾನು ಹೊರಬರುವಾಗ ನೋಡಿದ ಬಾವಿ ಕಟ್ಟೆ ಕಡೆಯಿಂದ ಓಡಿ ಬಂದ ವ್ಯಕ್ತಿ ಆ ಹೆಸರಿನವರಲ್ಲ.ಮತ್ತು ಅಡುತ್ತಿರುವ ಮಕ್ಕಳ ನಡುವಿನಿಂದ ತಿಂಡಿ ಕೊಡ್ತೇನೆ ಬಾ ಎಂದು ಎತ್ತಿಕೊಂಡು ಹೋದ ವ್ಯಕ್ತಿ ಮತ್ತು ಅಲ್ಲಿ ಓಡಿ ಬಂದ ವ್ಯಕ್ತಿ ಬೇರೆ ಬೆರೆಯವರಾಗಿದ್ದರು. .ಅದರೆ ಅರವಿಂದ ಹೆಸರು ಹೇಳಿದ ವ್ಯಕ್ತಿ ಯೇ ಅವನನ್ನು ಮಕ್ಕಳ ನಡುವಿನಿಂದ ಎತ್ತಿಕೊಂಡು ಹೋದ ಬಗ್ಗೆ ನಂತರ ನಾನು ಮಕ್ಕಳಿಂದ ಮೆಲ್ಲಗೆ ಕೇಳಿ ಕನ್ಫರ್ಮ್ ಮಾಡಿದ್ದೆ.ಹಾಗಾಗಿ ಅಲ್ಲಿ ಇಬ್ಬರು ಸೇರಿ ಇವನನ್ನು ಎತ್ತಿ ಬಾವಿಗೆ ಹಾಕಲು ಟ್ರೈ ಮಾಡಿದರೇ..ಅ ಇನ್ನೊಬ್ಬ ನಾನು ನೊಡುವ ಮೊದಲೇ ಅಲ್ಲಿಂದ ಓಡಿ ಹೋಗಿದ್ದರೇ..? ದೇವರೊಬ್ಬರಿಗೇ ಗೊತ್ತು...
ಅದೇ ಕೊನೆ..ನಾನು ಅರವಿಂದ ದೊಡ್ಡವನಾಗುವ ತನಕ ಎಲ್ಲೇ ಹೋದರೂ ಅದರಲ್ಲೂ ನಮ್ಮ ಸ್ವಂತ ಊರಿಗೆ ಹೋದರೆ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದೆ.ಸ್ನಾಕ್ಕೆ ಹೋಗುವಾಗ ಮಗನನ್ನು ಪ್ರಸಾದರ ಸುಪರ್ದಿಗೆ ಕೊಟ್ಡೇ ಹೋಗುತ್ತಿದ್ದೆ.ಯಾರಲ್ಲೂ ಹೇಳಲೂ ಆಗದ ಹೇಳದೇ ಇರಲೂ ಆಗದ ಪರಿಸ್ಥಿತಿ ಅದು..
ಮಕ್ಕಳನ್ನು ದೊಡ್ಡ ಮಾಡುವುದೆಂದರೆ ಸಣ್ಣ ಮಾತಲ್ಲ..ಅವರಾಗಿ ಬಾವಿಗೋ ಕೆರೆಗೊ ಬಿದ್ದರೂ ಬೇರೆಯವರು ಹೊಟ್ಟೆಕಿಚ್ಚಿನಿಂದ ಎತ್ತಿ ಹಾಕಿದರೂ ಅಪಾಯವೇ..
ಆಟ ಆಡುವಾಗ ಸಂಪಿಗೆ ,ಕೆರೆ ಬಾವಿಗೆ ಬಿದ್ದು ಸತ್ತ ಮಕ್ಕಳ ಬಗ್ಗೆ ಕೇಳುವಾಗೆಲ್ಲ ಈ ವಿಚಾರ ನನಗೆ ನೆನಪಾಗುತ್ತದೆ. ಹೆಚ್ಚಿನದು ಅಕಸ್ಮಿಕ ಅಗಿರಬಹುದು .ಕೆಲವೊಂದು ಯಾರೋ ಹೊಟ್ಟೆ ಕಿಚ್ಚಿನವರು ದೂಡಿ ಹಾಕಿದ್ದೂ ಇರಬಹುದು ಅಲ್ವಾ? .ದಾಯಾದಿ ಮತ್ಸರವಂತೂ ಬಹಳ ಅಪಾಯಕಾರಿ.
ಅಂದು ಭೀಮಸೇನನಿಗೆ ವಿಷದ ಲಡ್ಡು ಕೊಟ್ಟ ಕಥೆ ,ಅರಗಿನ ಮನೆಯನ್ನು ಸುಟ್ಟ ಕಥೆ ಮಹಾಭಾರತದಲ್ಲಿ ಓದಿರ್ತೇವೆ..ಅಲ್ಲಿ ಇಲ್ಲಿ ಇಂತಹ ವಿಚಾರಗಳು ನಡೆದಿರುತ್ತವೆ.
ಕಥೆಗಳೆಲ್ಲ ನೂರಕ್ಕೆ ನೂರು ಕಾಲ್ಪನಿಕವಲ್ಲ.
ಎಲ್ಲೋ ನಡೆದ ನಡೆಯಬಹುದಾದ ವಿಚಾರಗಳ ಎಳೆ ಅದರಲ್ಲಿ ಇರುತ್ತದೆ.
ಅಂದು ನಿಜಕ್ಕೂ ನಮ್ಮ ಮನೆಯಲ್ಲಿ ನಡೆದದ್ದೇನು ಎಂದು ಇಂದಿಗೂ ನನಗೆ ಗೊಂದಲದಲ್ಲಿಯೇ ಇದೆ.ಸಣ್ಣ ಮಗು ಸುಳ್ಳು ಹೇಳಲು ಸಾಧ್ಯವೇ ಇರಲಿಲ್ಲ. ಮತ್ತು ಇವನು ಕೊಸರಾಡಿದ್ದಕ್ಕೆ ಸಾಕ್ಷಿಯಾಗಿ ಅಂಗಿ ಹರಿದಿತ್ತು.ಚಡ್ಡಿ ಜಾರಿತ್ತು ಬೇಡಾ ಎಂದು .ಬೊಬ್ಬೆ ಹಾಕಿದ್ದು ನನಗೂ ಕೇಳಿಸಿಯೇ ಓಡಿ ಬಂದದ್ದು ನಾನು
No comments:
Post a Comment