ಆತ್ಮ ಕಥೆಯ ಬಿಡಿ ಭಾಗಗಳು.
ನನ್ನ ಮರ್ಯಾದೆ ಉಳಿಸಿದ ಶಿಷ್ಯಂದಿರು ಯಾರು ಗೊತ್ತೇ? ಈಗಲೂ ಇವರುಗಳೇ ನನ್ನ ಸಹಾಯಕ್ಕೆ ಧಾವಿಸಿ ಬರಬೇಕಿದೆ ಎಲ್ಲ ಒಟ್ಟಾಗಿ ಬನ್ನಿ.. Ashwini Ashu Venkat Aranthady ಶ್ರೀಕಾಂತ್ ಹರಿಹರಪುರ
ನನಗೂ ಇಂಗ್ಲಿಷ್ ಗೂ ಆಗಿ ಬರುದಿಲ್ಲ.ನನಗದು ಸದಾ ಕಬ್ಬಿಣದ ಕಡಲೆ
ಹಾಗಾಗಿ ಅದನ್ನು ಜಗಿದು ಹಲ್ಲು ನೋಯಿಸಿಕೊಳ್ಳುದೇಕೆ ಎಂದದನ್ನು ಕಲಿಯುವ ಪ್ರಾಮಾಣಿಕ ಯತ್ನ ಮಾಡಿಯೇ ಇಲ್ಲ
ಅಥವಾ ನನಗೆ ಭಾಷಾ ಕೌಶಲ ಸಿದ್ದಿಸುವ ರೀತಿಯಲ್ಲಿ ಕಲಿಸಿಲ್ಲ
.ನಾನು ಭಾಷಾ ಕಲಿಕೆಯಲ್ಲಿ ಹಿಂದುಳಿದವಳಾ ? ಈ ಬಗ್ಗೆ ನನಗೆ ಒಂದು ದ್ವಂದ್ವ ಕಾಡುತ್ತಿರುತ್ತದೆ
ಒಂದೊಮ್ಮೆ ಭಾಷಾ ಕಲಿಕೆಯಲ್ಲಿ ನಿದಾನಸ್ಥೆ ಆಗಿದ್ದರೆ ಸಂಸ್ಕೃತದಲ್ಲಿ ಮಾತನಾಡಲು ಸುಲಭದಲ್ಲಿ ಅಭ್ಯಾಸ ಆಗುತ್ತಿರಲಿಲ್ಲ.
ನಾನು ಸಂಸ್ಕೃತ ಎಂಎ ಪರೀಕ್ಷೆ ಬರೆದ ನಂತರ ಇರಬೇಕು.ಸಂಸ್ಕೃತ ಭಾರತಿಯವರು ಮಂಗಳೂರಿನಲ್ಲಿ ಹತ್ತು ದಿನಗಳ ಸಂಸ್ಕೃತ ಪ್ರಶಿಕ್ಷಣ ಶಿಬಿರ ಆಯೋಜಿಸಿದ್ದರು..
ಅದಕ್ಕೂ ಮೊದಲೇ ಸಂಭಾಷಣ ಶಿಬಿರದಲ್ಲಿ ಭಾಗವಹಿಸಿ ಸುಮಾರಾಗಿ ಸಂಸ್ಕೃತ ಮಾತನಾಡಲು ಕಲಿತಿದ್ದೆ.ಈ ಹತ್ತು ದಿನಗಳ ನಂತರ ಸರಿಯಾಗಿ ಸಂಸ್ಕೃತ ಮಾತನಾಡಲು ಕಲಿತೆ.
ಇದಾದ ನಂತರ ನಾನು ಅನೇಕ ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ಮಾಡಿ ಅನೇಕರಿಗೆ ಸಂಸ್ಕೃತ ಮಾತನಾಡಲು ಕಲಿಸಿದ್ದೆ.
ಕಳೆದ ಇಪ್ಪತ್ತು ವರ್ಷಗಳಿಂದ ನಾನು ಕನ್ನಡ ಉಪನ್ಯಾಸಕಿ ಯಾಗಿ ಕೆಲಸ ಮಾಡಿತ್ತಿದ್ದು ಸಂಸ್ಕೃತ ಭಾಷೆಯ ಬಳಕೆ ತಪ್ಪಿ ಹೋಗಿ ಈಗ ಮಾತನಾಡುವಾಗ ತಡವರಿಸುತ್ತೇನೆ
ಆದರೆ ಸಂಸ್ಕೃತ ವನ್ನು ಸುಲಭವಾಗಿ ಕಲಿತ ನನಗೆ ಹಿಂದಿ ಭಾಷೆ ಯಾಕೆ ಒಲಿಯಲಿಲ್ಲ ಎಂದು ಗೊತ್ತಾಗುತ್ತಿಲ್ಲ.ಹಿಂದಿ ಎಂಎ ಓದಿದ್ದು ಉತ್ತಮ ಅಂಕ ಕೂಡ ಗಳಿಸಿದ್ದೆ.
ಆದರೆ ಹಿಂದಿ ಭಾಷೆ ಮಾತನಾಡಲು ನನಗೆ ಕಷ್ಟ ಆಗುತ್ತದೆ
.
ಇನ್ನೂ ಇಂಗ್ಲಿಷ್ ಎನ್ನುದು ನನ್ನ ಪಾಲಿಗೆ ಮೃಗ ಮರೀಚಿಕೆ.
ಉಳಿದೆಲ್ಲ ವಿಷಯಗಳಲ್ಲಿ ಉತ್ತಮ ಅಂಕ ಗಳಿಸುತ್ತಿದ್ದು ಇಂಗ್ಲಿಷ್ ನಲ್ಲಿ ಫೈಲ್ ಆಗುತ್ತಿದ್ದ ನನ್ನ ಬಗ್ಗೆ ನನ್ನ ಶಾಲಾ ಶಿಕ್ಷಕರು ಗಮನ ಹರಿಸಿಲ್ಲವೇ ? ಈ ಬಗ್ಗೆ ನೆನಪಾಗುತ್ತಿಲ್ಲ.
ನಮಗೆ ಹೈ ಸ್ಕೂಲ್ ನಲ್ಲಿ ನಮಗೆ ಈರೋಡಿ ಮಾಷ್ಟ್ರು ಇಂಗ್ಲಿಷ್ ಗೆ ಇದ್ದದ್ದು.ನಾನು ನೋಟ್ಸ್ ( ಪ್ರಶ್ನೋತ್ತರ) ಬರೆಯುತ್ತಿದ್ದೆನಾ ? ಅದನ್ನೇ ಕಲಿತು ಯಾಕೆ ಉತ್ತಮ ಅಂಕ ಅಲ್ಲದಿದ್ದರೂ ಪಾಸಾಗುವಷ್ಟು ಅಂಕ ಗಳಿಸುತ್ತಿರಲಿಲ್ಲ ಎಂದು ನನಗೆ ನೆನಪಾಗುತ್ತಿಲ್ಲ.ಬಹುಶಃ ಅವರು ಬಹಳ ಸಾಧು ಸ್ವಭಾವದವರಾಗಿದ್ದರು.ಪ್ರಶ್ನೋತ್ತರ ಬರೆಯಿಸಿ ಕಲಿತು ಬಾರದೇ ಇದ್ದಾಗ ಎರಡೇಟು ಕೊಟ್ಟಿದ್ದರೆ ಕಲಿಯುತ್ತಿದ್ದೆನೋ ಏನೋ..
ನಿಜ ಹೇಳಬೇಕೆಂದರೆ ನನಗೆ is was ,ಮೊದಲಾದ prefixesಗಳ ಜ್ಞಾನ ಇರಲಿಲ್ಲ.
.ಆಗೆಲ್ಲ ಗೈಡ್ ಗಳಿದ್ದವೊ ಇಲ್ವಾ ನನಗೆ ಗೊತ್ತಿಲ್ಲ ಆದರೆ ಹಳ್ಳಿ ಶಾಲೆಯಲ್ಲಿ ಓದುವ ನಮಗೆ ಗೈಡ್ ಗಳು ಸಿಕ್ಕಿರಲಿಲ್ಲ.
ಶಾಲಾ ಕಾಲು ವಾರ್ಷಕ ಮಧ್ಯ ವಾರ್ಷಿಕ ಮುಕ್ಕಾಲು ವಾರ್ಷಿಕ ಪರೀಕ್ಷೆಗಳಲ್ಲಿ ನಾನು ಇಂಗ್ಲಿಷ್ ನಲ್ಲಿ ಪಾಸಾಗುತ್ತಿರಲಿಲ್ಲ.
ಅಂತಿಮ ಪರೀಕ್ಷೆಯಲ್ಲಿ ಒಂದಷ್ಟು ಅಂಕ ಕೊಟ್ಟು ಪಾಸ್ ಮಾಡುತ್ತಿದ್ದಿರಬಹುದು
ಹತ್ತನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಇದ್ದದ್ದು.ಇಲ್ಲಿ ಉಳಿದ ವಿಷಯಗಳಲ್ಲಿ ಉತ್ತಮ ಅಂಕ ಗಳಿಸುವ ಬಗ್ಗೆ ಆತಗಮ ವಿಶ್ವಾಸ ಇತ್ತು ನನಗೆ.
ಆದರೆ ಇಂಗ್ಲಿಷ್ ನಲ್ಲಿ ಪಾಸ್ ಆಗುವ ಭರವಸೆ ಇರಲಿಲ್ಲ ಹಾಗಾಗಿ ಫಲಿತಾಂಶದ ದಿನ ಬಹಳಷ್ಟು ಆತಂಕಕ್ಕೆ ಒಳಗಾಗಿದ್ದೆ.ಅದೃಷ್ಟವಶಾತ್ ಪಾಸ್ ಆಗಿದ್ದೆ.
ವಿಜ್ಞಾನ ದಲ್ಲಿ ಉತ್ತಮ ಅಂಕಗಳು ಬಂದಿದ್ದವು.ನನಗೂ ಆಸಕ್ತಿ ಇತ್ತು ಹಾಗಾಗಿ ಸರ್ಕಾರಿ ಕಾಲೇಜಿನಲ್ಲಿ ( ಈಗಿನ ವಿಶ್ವ ವಿದ್ಯಾಲಯ ಕಾಲೇಜು) ವಿಜ್ಞಾನ ವಿಭಾಗದಲ್ಲಿ ದಾಖಲಾತಿ ಪಡೆದೆ.
ಈ ಕಾಲೇಜಿನ ಉಪನ್ಯಾಸಕರೋ ಸಾಕ್ಷಾತ್ ಲಂಡನ್ ನಿಂದ ಉದುರಿದವರ ಹಾಗೆ ಆಡ್ತಿದ್ದರು.
ನಮ್ಮತರಗತಿಯಲ್ಲಿ 99% ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾ್ರಥಿಗಳಿದ್ದರು.ಆದರೂ ಇಲ್ಲಿನ ಉಪನ್ಯಾಸಕರು ಒಂದಕ್ಷರ ಕನ್ನಡ ದಲ್ಲಿ ಮಾತನಾಡುತ್ತಿರಲಿಲ್ಲ.ಪರಿಣಾಮ ಬಹಳ ಘೋರವಾದದ್ದು.ಹೆಚ್ಚು ಕಡಿಮೆ ಎಲ್ಲಾ ವಿದ್ಯಾರ್ಥಿಗಳು ಫೇಲ್..ನನಗೊಂದು ವಿಚಾರ ತಿಳಿಯುತ್ತಿಲ್ಲ.ಈಗ ನಾನೂ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕಿ, ನಮಗೆ 100% ಫಲಿತಾಂಶ ತರುವಂತೆ ಇಲಾಖೆಯ ಒತ್ತಡ ಇದೆ .ಸದಾ 100% ಫಲಿತಾಂಶ ತರುವ ನನಗೂ ಪ್ರತಿ ವರ್ಷ ಫಲಿತಾಂಶ ದ ಭಯ ಕಾಡುತ್ತದೆ
ಹಾಗಿರುವಾಗ 1%2% ಫಲಿತಾಂಶ ಕೂಡ ಬರದೇ ಇದ್ದಾಗ ಈ ಉಪನ್ಯಾಸಕರನ್ನು ಯಾರೂ ಕೇಳುತ್ತಿರಲಿಲ್ಲವೇ? ಇಲಾಖೆ ಕೇಳದಿದ್ದರೂ ಇವರಿಗೊಂದು ಆತ್ಮ ಸಾಕ್ಷಿ ಎಂಬುದು ಇರುತ್ತಿರಲಿಲ್ಲವೇ ?
ಫಲಿತಾಂಶ ತರಿಸಬೇಕು ಎಂಬ ಇರಾದೆ ಇಲ್ಲಿನ ಉಪನ್ಯಾಸಕರಿಗೆ ಇದ್ದ ಹಾಗೆ ನನಗನಿಸಿಲ್ಲ.
ನಾನು ದ್ವಿತೀಯ ಪಿಯುಸಿ ಓದಿದ ವರ್ಷ 1990-91 ರಲ್ಲಿ ಕ್ಲಾಸ್ ಟೆಸ್ಟ್ ಮಿಡ್ ಟರ್ಮ್ ಪ್ರಿಪರೇಟರಿ ಯಾವುದೂ ಮಾಡಿರಲಿಲ್ಲ ನೇರವಾಗಿ ನಾವು ಅಂತಿಮ ಪರೀಕ್ಷೆ ಬರೆದಿದ್ದೆವು
ಬಹುಶಃ ಪ್ರಥಮ ಪಿಯುಸಿ ಯಲ್ಲಿ ಮಧ್ಯವಾರ್ಷಿಕ ಪರೀಕ್ಷೆ ಮಾಡಿದ್ದರು
ಆಗ ಇಂಗ್ಲಿಷ್ ನಲ್ಲಿದ್ದ ಕೆಮೆಸ್ಟ್ರಿ ಪ್ರಶ್ನೆ ಪತ್ರಿಕೆಯ ಒಂದು ಪ್ರಶ್ನೆಯ ಅರ್ಥ ಕನ್ನಡದಲ್ಲಿ ಹೇಳಲು ನಾನು ಕೇಳಿದ್ದೆ.ಉಪನ್ಯಾಸಕರು ಕನ್ನಡದಲ್ಲಿ ಅರ್ಥ ಹೇಳಲು ನಿರಾಕರಿಸಿದ್ದರು.ವಾಸ್ತವದಲ್ಲಿ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಯನ್ನು ವಿಜ್ಞಾನ ವಿಷಯಗಳಲ್ಲಿ ಕೂಡ ಕನ್ನಡ ಮಾಧ್ಯಮದಲ್ಲಿ ಬರೆಯಲು ಅವಕಾಶ ಇತ್ತು.ಪ್ರಶ್ನೆ ಪತ್ರಿಕೆ ಕೂಡ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಇರುತ್ತಿತ್ತು.ಇದು ನಮಗೆ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಬರೆದಾಗಲೇ ಗೊತ್ತಾದದ್ದು.ಅದಕ್ಕೂ ಮೊದಲೇ ಹಳೆ ಪ್ರಶ್ನೆ ಪತ್ರಿಕೆ ಕೊಟ್ಟು ಬರೆಸಿ ಅಥವಾ ಓದಿಕೊಂಡು ಅಭ್ಯಾಸ ಮಾಡಲು ಕೂಡ ಹೇಳಿರಲಿಲ್ಲ.
ಈ ಉಪನ್ಯಾಸಕರು ಇಂಗ್ಲಿಷ್ ನಲ್ಲಿ ಮಾತನಾಡುತ್ತಿದ್ದ ಕಾರಣ ನಮಗೆ ಅವರಲ್ಲಿ ಮಾತನಾಡಲು ಆಗುತ್ತಿರಲಿಲ್ಲ ಪಾಠ ಅರ್ಥ ಆಗುತ್ತಿಲ್ಲ ಎಂದು ಹೇಳಲೂ ಆಗದ ಪರಿಸ್ಥಿತಿ
ಹೆಚ್ಚಿನ ವಿದ್ಯಾರ್ಥಿಗಳದೂ ನನ್ನದೇ ಪರಿಸ್ಥಿತಿ..
ಒಮ್ಮೆ ಫೇಲಾಗಿಯೂ ನಂತರ ಕಟ್ಟಿ ಹೇಗೋ ಗೈಡ್ ನೋಡಿ ಕಲಿತು ಪಾಸಾದೆ .ಮುಂದೆ ಉಜಿರೆಯಲ್ಲಿ ಬಿಎಸ್ಸಿ ಗೆ ಸೇರಿದೆ.ಇಲ್ಲಿ ಉಪನ್ಯಾಸಕರು ಕನ್ನಡ ದಲ್ಲಿ ಪಾಠ ವಿವರಿಸದೇ ಇದ್ದರೂ ತರಗತಿಯಲ್ಲಿ ಹಾಗೂ ಹೊರಗಡೆ ಕನ್ನಡದಲ್ಲಿ ಮಾತನಾಡುತ್ತಿದ್ದರು.
ಹಾಗಾಗಿ ನಮಗೆ ಇಂಗ್ಲಿಷ್ ಉಪನ್ಯಾಸಕರಾದ ಶಂಕರ ನಾರಾಯಣ ಫಿಸಿಕ್ಸ್ ಉಪನ್ಯಾಸಕರಾದ ಕೇಶವ್ ಸಂಬಂಧಿಕರೂ ಅಲ್ಲಿ ನನಗೆ ಸೀಟ್ ಕೊಡಿಸಿರುವ ಗಣಪಯ್ಯ ಮೊದಲಾದವರಲ್ಲಿ ನಮಗೆ ಮಾತನಾಡುವಷ್ಟು ಸಲುಗೆ ಇತ್ತು.
ಬಿಎಸ್ಸಿ ಯಲ್ಲಿ ನಾನುತೀರ ಉತ್ತಮ ಅಂಕ ಗಳಿಸದಿದ್ದರೂ ಯಾವುದೇ ಸೆಮಿಷ್ಟರ್ ನಲ್ಲಿ ಫೇಲಾಗಿರಲಿಲ್ಲ.
ಇಂಗ್ಲಿಷ್ ನಲ್ಲಿ ಕೂಡ 55-60 ಅಂಕ ಗಳಿಸುತ್ತಿದ್ದೆ
ಬಿಎಸ್ಸಿ ನಂತರ ನಾನು ಸಂಸ್ಕೃತ ಎಂಎ ಗೆ ಸೇರಿದ ನಂತರ ಇಂಗ್ಲಿಷ್ ನಿಂದ ಬಚಾವಾದೆ
ಸಂಸ್ಕೃತ ವನ್ನು ಸುಲಲಿತವಾಗಿ ಕಲಿತ ನನಗೆ ಇಂಗ್ಲಿಷ್ ಹಿಂದಿ ಭಾಷೆ ಯಾಕೆ ಒಲಿಯಲಿಲ್ಲ ಬಹುಶಃ ಸಂಸ್ಕೃತ ವನ್ನು ಪ್ರಶಿಕ್ಷಣ ಶಿಬಿರ ಸಂಭಾಷಣಾ ಶಿಬಿರ ದಲ್ಲಿಕಲಿಸುವಂತೆ ಈ ಭಾಷೆಗಳನ್ನು ಕಲಿಸಿದ್ದರೆ ನನ್ನಂತಹ ಲಕ್ಷಾಂತರ ವಿದ್ಯಾರ್ಥಿಗಳು ಪರಿಣತಿ ಪಡೆಯುತ್ತಿದ್ದರೆನಿಸ್ತದೆ ನನಗೆ
ಸಂಸ್ಕೃಯ ಎಂಎ ಕಲಿಯುವಾಗ ಎಲ್ಲೂ ಇಂಗ್ಲಿಷ್ ಬೇಕಾಗಿ ಬರಲಿಲ್ಲ.
ನಂತರ ಮೊದಲಿಗೆ ಶ್ರೀರಾಮ ಪ್ರಾಥಮಿಕ ಶಾಲೆ ಕಲ್ಲಡ್ಕದಲ್ಲಿ ಸಂಸ್ಕೃತ ಶಿಕ್ಷಕಿ ಆಗಿ ಸೇರಿದೆ.ನಂತರ ಸೈಂಟ್ ಅಲೋಶಿಯಸ್ ಕಾಲೇಜಿನ ಅರೆ ಕಾಲಿಕ ಸಂಸ್ಕೃತ ಉಪನ್ಯಾಸಕಿ ಯಾಗಿ ಕೆಲಸ ಸಿಕ್ತು.
ಇಲ್ಲಿ ಅನೇಕ ಕನ್ನಡೇತರ ವಿದ್ಯಾರ್ಥಿಗಳು ಇದ್ದರು.ಇವರಿಗೆ ಸಂಸ್ಕೃತ ವನ್ನು ಇಂಗ್ಲಿಷ್ ಮೂಲಕ ಹೇಳಿಕೊಡಬೇಕಾಗಿತ್ತು..
ಉಫ್..ನನ್ನ ಪರಿಸ್ಥಿತಿ ಯಾರಿಗೂ ಬೇಡ..ಗೈಡ್ ನಿಂದ ಬಾಯಿಪಾಠ ಮಾಡಿಕೊಂಡು ಹೋಗಿದ್ದು ತರಗತಿಯ ಒಳಗೆ ಹೋಗುವಾಗ ಮರೆತು ಹೋಗುತ್ತಿತ್ತು..ಸಂಸ್ಕೃತ ದಲ್ಲಿ ವಿವರಿಸಿದರೆ ಮಕ್ಕಳಿಗೆ ಅರ್ಥವಾಗುತ್ತಿರಲಿಲ್ಲ.ಕನ್ನಡದಲ್ಲಿ ವಿವರಿಸಿದರೆ ಕನ್ನಡೇತರ ಮಕ್ಕಳು ಕಣ್ಣು ಬಾಯಿ ಬಿಡ್ತಿದ್ದರು.ಆಗ ನನ್ನ ಭಯಾನಕ ಇಂಗ್ಲಿಷ್ ನಲ್ಲಿ ಪಾಠ ಮಾಡಿದ್ದೆ
ಈ ಸಮಯದ ನನ್ನ ಶಿಷ್ಯೋತ್ತಮರಲ್ಲಿ
ನನ್ನ ಹತ್ತಿರ ಸಂಬಂಧಿಕರಾದ ವೆಂಕಟೇಶ್ವರ ,ರಾಮಪ್ರಸಾದ ,ಗಣರಾಜ ಮೊದಲಾದವರು ಇದ್ದರು.ಇವರು ನನ್ನ ಮರ್ಯಾದೆಯನ್ನು ಉಳಿಸಿದವರು..ನನ್ನ ಅಮೋಘ ಇಂಗ್ಲಿಷ್ ಭಾಷೆಯ ಪಾಠದ ಬಗ್ಗೆ ಇವರೆಲ್ಲಿಯೂ ತುಟಿಕ್ ಪಿಟಕ್ ಎನ್ನದೆ ಎಲ್ಲೂ ಹೇಳದೆ ( ಹೇಳಿಲ್ಲ ಎಂದು ಭಾವಿಸಿರುವೆ ,) ನನ್ನ ಮರ್ಯಾದೆ ಉಳಿಸಿದ್ದರು ಅಷ್ಟೇ ಅಲ್ಲ ನಾನು ಚೆನ್ನಾಗಿ ಪಾಠ ಮಾಡುತ್ತೇನೆ ಎಂದು ಸುಳ್ಳು ? ಹೇಳಿ ಇಲ್ಲದೇ ಇದ್ದ ನನ್ನ ಘನತೆಯನ್ನು ಹೆಚ್ಚಿಸಿದ್ದರು.
ಒಂದೆಡೆ ಸಂಸ್ಕೃತ ಕ್ಕೆ ಸರಿಯಾದ ಉದ್ಯೋಗಾವಕಾಶ ಇಲ್ಲದಿರುದು ಇನ್ನೊಂದೆಡೆ ಇಂಗ್ಲಿಷ್ ನಲ್ಲಿ ಪಾಠ ಮಾಡಬೇಕಾದ ಅನಿವಾರ್ಯತೆ ಈ ಎರಡು ಕಾರಣಕ್ಕಾಗಿ ಸಂಸ್ಕೃತ ಬಿಟ್ಟು ಬೇರೆ ಕಲಿಯಲು ಹೊರಟೆ.
ಮೊದಲಿಗೆ ಹಿಂದಿ ಎಂಎ ಖಾಸಗಿ ಕಟ್ಟಿ ಓದಿದೆ.ಅಂಕ ಬಂದರೂ ಭಾಷೆ ಬರಲಿಲ್ಲ ಭಾಷೆ ಬರದೆ ಹಿಂದಿಮಾತೃ ಭಾಷೆಯಾಗಿರುವ ಕೊಂಕಣಿ, ಮಾರ್ವಾಡಿ ವಿದ್ಯಾರ್ಥಿಗಳ ಎದುರು ಹೋಗಿ ವಿದೂಷಕರಂತೆ ಅತಾ ಹೆ ಕರ್ತಾ ಹೆ ಎನ್ನು ವ ಸಂಗತಿ ಅಗಲಿಕ್ಕಿಲ್ಲ
ಎಂದು ಕನ್ನಡ ಎಂಎ ಓದಿದೆ..
ಅಬ್ಬಾ..ಕೊನೆಗೂ ಇಂಗ್ಲಿಷ್ ನ ಉರುಳಿಂದ ಬಚಾವಾದೆ .
ಕನ್ನಡ ಕೈ ಹಿಡಿಯಿತು. ತಲೆ ಎತ್ತಿ ಬದುಕುವಂತೆ ಗೌರವದ ಉದ್ಯೋಗವನ್ನು ಒದಗಿಸಿತು
ಇಷ್ಟಾದರೂ ಇಂಗ್ಲಿಷ್ ನನ್ನನ್ನು ಬಿಡಲಿಲ್ಲ.ಎಂಪಿಲ್ ಎರಡು ಪಿಎಚ್ ಡಿಗಳ ನಂತರವೂ ತುಳು ಸಂಸ್ಕೃತಿ ದೈವಗಳ ಅಧ್ಯಯನ ಮುಂದುವರಿಸಿದೆ.ನನ್ನ ಕುತೂಹಲ ತಣಿಸಿಕೊಳ್ಳಲು ಅಧ್ಯಯನ ಮಾಡಿದ್ದಾದರೂ ನಾನು ಕಂಡುಕೊಂಡ ವಿಚಾರವನ್ನು ಆಸಕ್ತ ಜನರಿಗೆ ತಲುಪಿಸುದಕ್ಕಾಗಿ ಲೇಖನಗಳನ್ನು ಬರೆದೆ .ಪುಸ್ತಕಗಳನ್ನು ಬರೆದೆ ಪ್ರಕಟಿಸಿದೆ.
ಈಗ ಅನೇಕ ಕನ್ನಡೇತರರು ಕರೆ ಮಾಡಿ ಮೆಸೇಜ್ ಮಾಡಿ ಈ ಬಗ್ಗೆ ಇಂಗ್ಲಿಷ್ ನಲ್ಲಿ ಬರೆಯಿರಿ ನಮಗೆ ಮಾಹಿತಿ ಬೇಕೆನ್ನಲು ಶುರು ಮಾಡಿದರು.ಜೊತೆಗೆ ಇಂಗ್ಲಿಷ್ ನಲ್ಲಿ ಭೂತಾರಾದನೆ ಬಗ್ಗೆ ಸರಿಯಾದ ಪುಸ್ತಕ ಪ್ರಕಟವಾಗಿಲ್ಲ. ಎಸಿ ಬರ್ನೆಲ್ ಬರೆದ Devil worship of Tukuvas ಪುಸ್ತಕದ ಪ್ರಭಾವದಿಂದಾಗಿ ಹೊರ ಜಗತ್ತಿಗೆ ನಮ್ಮ ಭೂತ/ ದೈವಗಳ ಬಗ್ಗೆ ತಪ್ಪು ಅಭಿಪ್ರಾಯ ಮೂಡಿದೆ.ಹಾಗಾಗಿ ಈ ಪುಸ್ತಕವನ್ನು ಇಂಗ್ಲಿಷ್ ನಲ್ಲೂ ಪ್ರಕಟಿಸಬೇಕು ಎಂದು ನಿರ್ಧರಿಸಿದೆ.ಅಶ್ವಿನಿ ಭಟ್ ಬಹಳ ಪ್ರೀಯಿಂದ ಅನುವಾದ ಮಾಡಿ ಕೊಟ್ಟರು
ಇತ್ತೀಚೆಗೆ ರಣವೀರ್ ಸಿಂಗ್ ಚಾಮುಂಡಿ ದೈವವನ್ನು female ghost ಎಂದಿದ್ದನ್ನು ಕೇಳಿದ ಮೇಲೆ ಈ ಪುಸ್ತಕವನ್ನು ಪ್ರಕಟಿಸಿ ಜನಪ್ರಿಯ ಮಾಡುವ ಅನಿವಾರ್ಯತೆ ಇದೆ ಎಂದೆನಿಸಿದೆ.ನಮ್ಮ ದೈವಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಹರಡಲೇ ಬೇಕು ಎಂಬ ನಿರ್ಧಾರಕ್ಕೆ ಬಂದೆ
ಅದರ ಫಲಿತವಾಗಿ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಮೊ 9480516684
ಈಗ ಇಂಗ್ಲಿಷ್ ನಲ್ಲಿ ಪರಿಷ್ಕೃತ ಗೊಂಡು 1259 ದೈವಗಳ ಮಾಹಿತಿ ಒಳಗೊಂಡು ಸಾವಿರದ ನೂರ ತೊಂಬತ್ತ ನಾಲ್ಕು ಪುಟಗಳ ಬೃಹತ್ ಗ್ರಂಥವಾಗಿ The Thousand and one Daivas of Karavali- A Hiistorical cultural and Analytical study ಎಂಬ ಹೆಸರಿನಲ್ಲಿ ಪ್ರಕಟ ಆಗುತ್ತಿದೆ
ಇಂಗ್ಲಿಷ್ ಬಾರದ ಹಳ್ಳಿ ಹುಡುಗಿಯ ಒಂದು ಸಾವಿರದ ನೂರ ತೊಂಬತ್ತೆರಡು ಪುಟಗಳ ಬೃಹತ್ ಗ್ರಂಥವೊಂದು ಇಂಗ್ಲಿಷ್ ನಲ್ಲಿ ಪ್ರಕಟವಾಗಿ ನಮ್ಮ ಸಂಸ್ಕೃತಿಯನ್ನು ನ್ನು ವಿಶ್ವಾದ್ಯಂತ ಹರಡಲು ಹೊರಟಿದೆ ಎಂಬುದು ನಿಜವೇ ಕನಸೇ ಎಂದೆನಿಸ್ತದೆ ನನಗೆ
ಏನೋ ಒಂದು ಹುಚ್ಚು ಧೈರ್ಯದಲ್ಲಿ ಅಶ್ವಿನಿ ಭಟ್ Ashwini Bhat ಜೊತೆಗೆ ಸೇರಿಕೊಂಡು ದೊಡ್ಡದೊಂದು ಸಾಹಸಕ್ಕೆ ಹೊರಟಿದ್ದೇವೆ
ನಿಮ್ಮೆಲ್ಲರ ಬೆಂಬಲ ಎಂದಿನಂತೆ ಇರಲಿ
ಜನ್ನ ಹೇಳಿದಂತೆ.
ಕಟ್ಟಿಯುಮೇನೋ ಪೊಸ ಭಾಸಿಂಗಮುಮ್
ಮುಡಿವ ಭೋಗಿಗಳಿಲ್ಲದೆ ಬಾಡಿ ಪೋಗದೇ?
ನನ್ನ ಇಪ್ಪತ್ತೈದು ವರ್ಷಗಳ ಪರಿಶ್ರಮ ಕ್ಕೆ ನಿಮ್ಮೆಲ್ಲರ ಬೆಂಬಲ ಇರಲಿ ಈಗ್ರಂಥದ ಬಗ್ಗೆ ನಿಮ್ಮ ಸ್ನೇಹಿತರಿಗೆ ಬಂಧು ಬಳಗದವರಿಗೆ ತಿಳಿಸಿ
ಈಗ ಈ ಗ್ರಂಥಕ್ಕೆ pre publication offer ಕೂಡ ಲಭ್ಯವಿದೆ
ಡುಂಡೀರಾಜ್ ಅವರು ಹೇಳಿದಂತೆ
ರಾವಣನ ಮಡದಿ ಮಂಡೋದರಿ.
ಪುಸ್ತಕವನ್ನು ಕೊಂಡೋದಿರಿ
ಧನ್ಯವಾದಗಳು
ಮಾತೃಶ್ರೀ ಮಾತೃಶ್ರೀ ಪ್ರಕಾಶನ ಪ್ರಕಾಶನ ಬೆಂಗಳೂರು
ಲೇಖಕರು ಡಾ.ಲಕ್ಷ್ಮೀ ಜಿ ಪ್ರಸಾದ್, ಮೊಬೈಲ್ 9480516684
Tulunada Porludisira
Tulunada Thudar
Tulunada Daivalu
Tulu Naad Baase Sanskrithi
Tulunada Daivolu
Dharma Chavadi Namma Tulunad
NaMo Tulunadu
Tulu Patherga Tulu Oripaga-Registered
Tulunaduda Gowji Gammathu
Tulunadu Marlara Mane
Tulunada Daiva Shrishti
Tulunad Daiva
Tulu Rajya
Namma Tulunadu
Karnikada Daivolu Tulunad
Kudla Tulu Pathrike K
Daivaradhakere Koota
Saramani Daivolu
Muggerkala Daivasthana Mattu Katapady
Sri Mogera Daivasthana Kodyadka
Daivabharana Padubidri
Daiva Rahu Guliga
#kolam
#daivaradhane
#daivakola
#bhutakola #kundapura
#karavali #karavalikarnataka
#daivaradane
#daiva #theyyamkannur #theyyamkasaragod
#theyyamphotography
#theyyamsofmalabar

No comments:
Post a Comment