ಆತ್ಮಕಥೆಯ ಬಿಡಿ ಭಾಗಗಳು..
ಆತ್ಮಕಥೆಯನ್ನು ಬರೆಯದೆ ಹೇಗೆ ಇರಲಿ ?
ಅನುದಾನ ಕೊಡುವುದಿಲ್ಲ ಎಂದಷ್ಟೇ ಹೇಳಿದ್ದರೆ ನಾನಿದನ್ನು ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲ.ಅದರ ಜೊತೆಗೆ ಹೇಳಿದ ಮಾತುಗಳು ನನಗೆ ಬಹಳಷ್ಟು ತಾಗಿತ್ತು ..
ಈ ಜಗತ್ತಿಗೆ ಹೆಣ್ಣೆಂದರೆ ಎಷ್ಟು ಅಸಡ್ಡೆ !
ಆಕೆ ಗೃಹಿಣಿಯಾಗಿದ್ದರೇ ಶ್ರೇಷ್ಠ ಹೆಚ್ಚೆಂದರೆ ಶಿಕ್ಷಕಿಯಾಗಿ ಉಪನ್ಯಾಸಕಿಯಾಗಿ ಇತ್ತೀಚೆಗೆ ವೈದ್ಯರಾಗಿ ಇಂಜನಿಯರ್ ಆಗಬಹುದು ಅಷ್ಟೇ. ಇನ್ನೂ ಮಹಿಳಾ ಲೇಖಕರ ಬರವಣಿಗೆಯನ್ನು ಅಡುಗೆ ಮನೆ ಸಾಹಿತ್ಯ ಎಂದು ಹೀಗಳೆದವರೇ ಹೆಚ್ಚು ಮಂದಿ ಇದ್ದಾರೆ.ಕೆಲವರು ಎದುರಿನಿಂದ ಇನ್ನೂ ಹಲವರು ಹಿಂದಿನಿಂದ ಹೇಳಿದ್ದು ..
ಹಾಗೂ ಒಂದೊಮ್ಮೆ ಮಹಳೆಯರು ಬರೆದರೆ ಕಥೆ ಕಾದಂಬರಿ ಬರೆಯಲಷ್ಟೇ ಲಾಯಕ್ಕು.
ಇನ್ನೂ ಅಧ್ಯಯನ ಮಾಡುದಾದರೆ ಯಾರೋ ಕವಿಗಳ ಬಗ್ಗೆ ಕಾವ್ಯಗಳ ಬಗ್ಗೆ ಅಷ್ಟೇ ಹೊರತು ಕ್ಷೇತ್ರ ಕಾರ್ಯ ಆಧರಿತ ಅಧ್ಯಯನ ಮಾಡಲು ಆಕೆ ಫಿಟ್ ಅಲ್ಲ.
ಒಂದೊಮ್ಮೆ ಮಾಡಿದರೂ ಗಣನೆಗೆ ಬರುವದ್ದಲ್ಲ..ಈ ಹಿಂದೆ ಒಬ್ಬರು ತುಳು ಲೇಖಕರು ಆ ಪೊಂಜೋವು ಬರೆಯಿನೆನ್ ಎಂಕುಲು ಲೆಕ್ಕೊಗು ದೀಪುಜ್ಜ..ಆ ಹೆಂಗಸು ಬರೆದದ್ದನ್ನು ನಾವು ಗಣನೆಗೆ ತೆಗೆದುಕೊಳ್ಳುವುದಿಲ್ಕ ಎಂದಿದ್ದರು
ನಮಗೇ ತಿಳಿಯದ ದೈವಗಳ ಹೆಸರು ಇವರಿಗೆ ಹೇಗೆ ಸಿಕ್ತದೆ ಅದೆಲ್ಲ ಆಕೆಯ ಸೃಷ್ಟಿ ಎಂದವರೂ ಇದ್ದರು.ದೈವಗಳ ಕಥೆ ಬರೆದಾಗ ಅದು ಕಪೋಲ ಕಲ್ಪಿತ ಎಂದಿದವರೂ ಇದ್ದರು
ಆಗುವುದೆಲ್ಲ ಒಳ್ಳೆಯದಕ್ಕೇ ಎಂದು ಹಿರಿಯರು ಹೇಳುದು ಸುಳ್ಳಲ್ಲ
ಇವರೆಲ್ಲರ ಟೀಕೆಗಳನ್ನು ಎದುರಿಸುತ್ತಲೇ ನಾನು ಅಧ್ಯಯನ ಮುಂದಯವರಿಸಿದೆ.
ಸಾವಿರದೊಂದು ದೈವಗಳು ಇಲ್ಲವೇ ಇಲ್ಲ ಎಂದವರಿಗೆ ದೈವಗಳ ಕೋಲದ ಚಿತ್ರ ಎಲ್ಲಿ ಆರಾಧನೆ ಇದೆ ಮೂಲ ಕಥೆಗಳ ಬಗ್ಗೆ ದಾಖಲೆ ಇರಿಸಿ ವಿಶ್ಲೇಷಿಸು ಬರೆದೆ.
ಎಲ್ಲರಿಗೂ ಉಚಿತವಾಗಿ ಮಾಹಿತಿ ದೊರೆಯಲಿ ಎಂದು ಬ್ಲಾಗ್ ನಲ್ಲಿ ಬರೆಯತೊಡಗಿದೆ.
ಬ್ಲಾಗ್ ನಿಂದ ಬರಹ ಕದ್ದು ನನ್ನದೆಂದು ಹೇಳಿದಾಗ ನನ್ನನ್ನೇ ಅಕೆಗೆ ಹೆಸರಿನ ದಾಹ ವಿಕಿಪೀಡಿಯ ಎಂದರೆ ಎನೆಮದು ಗೊತ್ತಿಲ್ಲ ಇತ್ಯಾದಿ ಬರೆದ ವಿಶ್ವ ನಾಥ ಬದಿಕಾನ ಪವನಜ ಯುಬಿ ಮೊದಲಾದವುಗಳು ಬರೆದಾಗ ಓದಲು ತಾನೇ ಬರೆಯುದು..ಜನಪದ ಯಾರ ಸೊತ್ತಲ್ಲ ಎಂದು ಒಂದಷ್ಟು ಧೂರ್ತರು ಕೃತಿ ಚೌರ್ಯವನ್ನು ಬೆಂಬಲಿಸಿದರು.ಆಗ ಇವುಗಳಿಂದ ಪಾಠ ಕಲಿತೆ . ಉಚಿತವಾಗಿ ಸಿಕ್ಕರೆ ಇಷ್ಟೇ ಬೆಲೆ ಎಂದು ಗೊತ್ತಾಯಿತು.
ಮಹತ್ವದ ಬರಹಗಳನ್ನು ಬ್ಲಾಗ್ ನಿಂದ ಹಿಂದೆ ತೆಗೆದೆ
1253 ದೈವಗಳ ಸಚಿತ್ರ ಮಾಹಿತಿ ಇರುವ 1036 ಪುಟಗಳ ದೊಡ್ಡ ಗಾತ್ರದ ಗ್ರಂಥ ರಚಿಸಿ ಪ್ರಕಟಿಸಿದೆ.
ಉಚಿತವಾಗಿ ಸಿಕ್ಕಾಗ ಯಾರಿಗಾದರೂ ಓದಲು ತಾನೇ ಬರೆದದ್ದು ಯಾರ ಹೆಸರಿನಲ್ಲಿದ್ದರೇನು ? ಲೇಖಕರ ಹೆಸರು ಹಾಕದೇ ಇದ್ದರೇನು ಎಂದವರು ಕೂಡ ಮಾಹಿತಿ ಬೇಕಿದ್ದರೆ 2000₹ ಕೊಟ್ಟ ಖರೀದಿಸುದು ಅನಿವಾರ್ಯ ಆಯಿತು.
2000₹ ಬೆಲೆ ಇರಿಸಿದಾಗಲೂ ಆಕ್ಷೇಪ ಬಂತು.
ನನ್ನ ಅಧ್ಯಯನ ನನ್ನ ಪುಸ್ತಕ ಬೆಲೆ ಇರಿಸುದು ನನ್ನ ಇಷ್ಟ.ತಗೊಳ್ಳುದು ಬಿಡುದು ಅವರವರ ಇಷ್ಟ ಎಂದೆ.
ತಗೊಂಡವರು ಯಾರೂ ಇಂದಿನವರೆಗೂ ಬೆಲೆ ಜಾಸ್ತಿ ಆಯಿತು ಎಂದಿಲ್ಲ
ಇನ್ನೂ ಈ ಪುಸ್ತಕವನ್ನು ಜನ ಕೊಂಡುಕೊಳ್ಳಲಾರರು ಎಂದವರೂ ಇದ್ದರು.
ಈ ಪುಸ್ತಕ ಪ್ರಕಟಣೆಯ ಸಮಯದಲ್ಲಿ ನನ್ನ ಅನೇಕ ಹಿತೈಷಿಗಳು ನೀವು ಈ ಪುಸ್ತಕ ಪ್ರಕಟಣೆಗೆ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರಿಂದ ಅನುದಾನ ಕೇಳಿ.ಅವರು ಎಲ್ಲರಿಗೆ ಕೊಡ್ತಾರೆ ಎಂದು ಸಲಹೆ ನೀಡಿದ್ದರು.ಆಗ ಕೊರೋನಾ ಸಮಯ .ಹೋಗಲು ಸಾಧ್ಯವಿರಲಿಲ್ಲ
ಹಾಗಾಗಿ ಇಮೇಲ್ ಮಾಡಿದ್ದೆ
ಇ ಮೇಲ್ ನೋಡ್ತಾರೆ ಉತ್ತರಿಸುತ್ತಾರೆ ಎಂಬ ನಿರೀಕ್ಷೆ ನನಗೇನೂ ಇರಲಿಲ್ಲ
ಆದರೂ ಮರು ಉತ್ತರ ಅವರ ಆಪ್ತ ಕಾರ್ಯದರ್ಶಿ ಯಿಂದ ಬಂತು.ಈ ಪರಿಸ್ಥಿತಿಯಲ್ಲಿ
ಪುಸ್ತಕ ಮಾರಾಟವಾಗಲಾರದು.ವಿತರಣೆಗೆ ಮುನ್ನೂರು ಜನರ ಪಟ್ಟಿ ಇರಬೇಕು.ಮರು ಮುದ್ರಣ ಮಾಡಿದೆ ಅವಶ್ಯವಾಾದಲ್ಲಿ 500 ಪ್ರತಿ ಮರುಮದ್ರಣ ಮಾಡಬಹುದು ಇತ್ಯಾದಿ ಅಸಂಬದ್ಧ ? ಎಂದೆನಿಸಿದ ಉತ್ತರ ಬಂತು.ಅನುದಾನಕೊಡುದಿಲ್ಲ ಎಂಬ ಉತ್ತರ ಬಂದಿದ್ದರೆ ಬೇಜಾರು ಏನೂ ಇರುತ್ತಿರಲಿಲ್ಲ ಅವರ ದುಡ್ಡು ಅವರ ಇಷ್ಟ .ಆದರೆ ಪುಸ್ತಕ ಮಾರಾಟ ಆಗಲಾರದು.ವಿತರಣೆಗೆ ಮುನ್ನೂರು ಜನರ ಪಟ್ಟಿ ಬೇಕು ಎಂದದ್ದು ನನಗೆ ತಾಗಿತ್ತು .ನನ್ನ 21 ವರ್ಷಗಳ ಅಧ್ಯಯನ ಗ್ರಂಥದ ಬಗ್ಗೆ ಇಷ್ಟು ಅನುಮಾನವೇ ? ಹೆಂಗಸೆಂದೇ ? ಪುಸ್ತಕ ನೋಡಿ ಮೆಚ್ಚಿದ್ದರೂಅವರೇ ಹೇಳಿದಂತೆ ಮರು ಮುದ್ರಣದಲ್ಲಿ 500 ಬಿಡಿ 50 ಪ್ರತಿಗಳನ್ನೂ ಖರೀದಿಸದ ಬಗ್ಗೆ ನನಗೆ ಇಂದಿಗೂ ಅಚ್ಚರಿ ಎನಿಸುತ್ತದೆ.ಎಲ್ಲರೂ ಹೇಳುವಂತೆ ಹೆಗ್ಗಡೆಯವರು ಇಂತಹ ಕೆಲಸಕ್ಕೆ ಅನುದಾನ ನೀಡುತ್ತಾರೆ .ಅನುದಾನ ಬಿಡಿ ಪುಸ್ತಕದ ಪ್ರತಿಗಳನ್ನು ಖರೀದಿಸದೇ ಇರಲು ಕಾರಣವೇನು ? ಅಲ್ಲಿನ ಪುಸ್ತಕ ವಿಭಾಗದ ಉಸ್ತುವಾರಿ ವಹಿಸಿರುವವರ ಕುತಂತ್ರವೇ ? ಈ ಬಗ್ಗೆ ಯಾರೋ ಏನೋ ಒಂದಷ್ಟು ಹೇಳಿದ್ದರೂ ದಾಖಲೆ ಇಲ್ಲ.ಆದರೂ ಇದಕ್ಕೂ ಮೊದಲು 2015 ರಲ್ಲಿಯೇ ಆತ ಕಾರಣವಿಲ್ಲದೆ ಹಿಂದಿನಿಂದ ಕುತಂತ್ರ ಮಾಡಿರುವದ್ದು ಸ್ಪಷ್ಟವಾಗಿ ತಿಳಿದಿರುವ ಕಾರಣ ಆತನದೇ ಕಿತಾಪತಿ ಇರಬಹುದೆನಿಸ್ತದೆ.ಈ ಬಗ್ಗೆಯೂ ನಾನು ಇ ಮೇಲ್ ಮೂಲಕ ತಿೞಿಸಿದ್ದೆ.ಆತನಾರು ಎಂಬ ಕುತೂಹಲ ಇದೆಯಾ ? ನನ್ನ ಆತ್ಮಕಥೆಯಲ್ಲಿ ಆತನ ಹೆಸರು ಹಾಕಿ ಬರೆಯುವೆ ಖಂಡಿತಾ
ಅದಿರಲಿ ..ಮತ್ತೆ ವಿಷಯಕ್ಕೆ ಬರುವೆ
ಆಗಷ್ಟೇ ಮನೆ ಕಟ್ಟಿದ್ದ ನಮಗೂ ಒಮ್ಮೆಲೇ ಪುಸ್ತಕ ಪ್ರಕಟಣೆಗೆ ಆರೇಳು ಲಕ್ಷ ಖರ್ಚು ಮಾಡುದು ಕಷ್ಟಕರ ಎನಿಸಿತು .ದೇವರು ದೊಡ್ಡವನು ನಮ್ಮ ಕೈ ಕೆಳಗಾಗದಂತೆ ಕಾಯ್ದನು ,ಕೊಟ್ಟವರ ಕೈ ಯಾವಾಗಲೂ ಮೇಲೆ ತಗೊಂಡವರ ಕೈ ಯಾವಾಗಲೂ ಕೆಳಗೆ.ಒಂದೊಮ್ಮೆ ಹೆಗ್ಗಡೆಯವರು ಅನುದಾನ ಕೊಡ್ತಿದ್ದರೆ ನಾವು ತಗೊಳ್ತಿದ್ದೆವು ನಮ್ಮ ಕೈ ಕೆಳಗಾಗುತ್ತಿತ್ತು ಆದರೆ ಹಾಗಾಗದಂತೆ ದೇವರೇ ಕಾಯ್ದಿರಬೇಕು ನಮ್ಮನ್ನು.
ಇಂತಹ ಸಮಯದಲ್ಲಿ ಸ್ನೇಹಿತರು pre publication offer ಕೊಡಲು ಸಲಹೆ ನೀಡಿದರು.
ಈ ಉಪಾಯ ಸಾಕಷ್ಟು ಯಶಸ್ವಿ ಆಯಿತು
ಸುಮಾರು 700 ಪುಸ್ತಕ ಪ್ತಿಂಟ್ ಗೆ ಮೊದಲೇ ಬುಕ್ ಆಯಿತು.ಆರಂಭದಲ್ಲಿ ಕಡಿಮೆಗೆ ಕೊಟ್ಟ ಕಾರಣ ನನ್ನ ಮೇಲೆ ನಂಬಿಕೆ ಇರಿಸಿ ಪುಸ್ತಕಕ್ಕೆ ಮುಂಗಡವಾಗಿ ಪಾವತಿಸಿ ಕಾದಿರಿಸಿದವರಿಗೆ ಕಡಿಮೆ ಬೆಲೆಗೆ ಸಿಕ್ತು ಕೂಡ.ನಮಗೂ ಫಂಡ್ ಬಂತು
ಮುಂದೆ ಮೊದಲ ಮುದ್ರಣದ ಪ್ರತಿಗಳು ಪುಸ್ತಕ ಬಿಡುಗಡೆಯಾದ ಕೆಲ ದಿನಗಳಲ್ಲಿ ಖಾಲಿಯಾದವು.
ಇನ್ನೇನು ಮರು ಮುದ್ರಣದತ್ತ ಯೋಚಿಸುವಷ್ಟರಲ್ಲಿ ಕಾಂತಾರ ಸಿನೆಮಾ ಬಂತು
ಪರಿಷ್ಕೃತ ಗೊಳಿಸಿ ಮಾಯ ಮತ್ತು ಜೋಗದ ಪರಿಕಲ್ಪನೆ ಸೇರಿಸಿ ಇನ್ನೂ ಒಂದಷ್ಟು ದೈವಗಳ ಮಾಹಿತಿ ಸೇರಿಸಿದಾಗ ಸೃಷ್ಟಿಯಾದ ಗ್ರಂಥ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684
ಮೊದಲು ಪತ್ರದಲ್ಲಿ ತಿಳಿಸಿದಂತೆ ಈ ಪರಿಷ್ಕೃತ ಮುದ್ರಣದ 500 ಪ್ರತಿಗಳನ್ನು ಖರೀದಿಸಬಹುದು ಎಂದುಕೊಂಡಿದ್ದೆ .ತಗೊಂಡಿಲ್ಲ.ಹಾಗೆಂದು ನಮಗೇನೂ ಸಮಸ್ಯೆ ಆಗಲಿಲ್ಲ ಯಾರೋ ತಗೊಂಡು ನಾವು ಉದ್ದಾರ ಆಗುತ್ತೇವೆ ಎಂದು ಅಲೋಚನೆ ಮಾಡಿ ನಾವು ಪ್ರಕಟಿಸಿದ್ದಲ್ಲ.ಆಸಕ್ತ ಜನರು ತಗೊಂಡಾರು ಎಂಬ ಭರವಸೆ ನಮಗಿತ್ತು.ಅದು ಹುಸಿಯಾಗಲಿಲ್ಲ.
ಈಗ ಮರು ಮುದ್ರಣದತ್ತ ದಾಪುಗಾಲು ಇಡುತ್ತಿದೆ
ಇದರ ನಡುವೆ ಒಂದು ಗಮ್ಮತ್ತಿನ ವಿಷಯ ನಡೆಯಿತು ಎಂತ ಗೊತ್ತುಂಟಾ?
ಲಕ್ಷಾಂತರ ಜನರಿಗೆ ದಾನ ನೀಡಿದ ನಾನಾ ದೇವಸ್ಥಾನ ದೇವಸ್ತಾನ ಗಳಿಗೆ ಕೋಟ್ಯಂತರ ರುಪಾಯಿ ಅನುದಾನ ನೀಡಿದ ವೀರೇಂದ್ರ ಹೆಗ್ಗಡೆಯವರಿಗೆ ಅವರ ಕೋರಿಕೆಯಂತೆ ನಾನು ಗೌರವ ಪ್ರತಿ(ಉಚಿತವಾಗಿ) ಪುಸ್ತಕವನ್ನು ನೀಡಿದ್ದೇನೆ .
ಒಂದು ದಿನ ಅವರ ಸಹಸಯಕರಾದ ಪವನ್ ಎಂಬವರು ಕರೆ ಮಾಡಿ ಹೆಗ್ಗಡೆಯವರು ನಿಮ್ಮ ಪುಸ್ತಕ ಓದಲು ಬಯಸಿದ್ದಾರೆ ಎಲ್ಲಿ ಸಿಗುತ್ತದೆ ಎಂದು ವಿಚಾರಿಸಿದ್ದರು.ಆಗ ಈ ಪುಸ್ತಕ ಪುಸ್ತಕ ಮಳಿಗೆಗಳಲ್ಲಿ ಸಿಗುತ್ತಿರಲಿಲ್ಲ.ಹಾಗಾಗಿ ನಾವೇ ಕಳುಹಿಸ್ತೇವೆ ಎಂದು ಅಡ್ರೆಸ್ ಪಡೆದು ಗೌರವ ಪ್ರತಿ ಕಳುಹಿಸಿದೆ.ತಲುಪಿದ ನಂತರ ಪುಸ್ತಕದ ಬಗ್ಗೆ ಮೆಚ್ಚುಗೆಯ ನುಡಿ ತಿಳಿಸಿ ಪುಸ್ತಕದ ಜೊತೆಗೆ ಫೋಟೋ ವನ್ನೂ ಕಳುಹಿಸಿ ಕೊಟ್ಟಿದ್ದರು.
ಲಕ್ಷಂತರ ಜನರಿಗೆ ದಾನ ನೀಡಿದವರಿಗೆ ಗೌರವ ಪ್ರತಿ ನೀಡಿದ ಗೌರವ ನನ್ನದಾಯಿತು .ನನ್ನ ಕೈ ಮೇಲಾಗಿಯೇ ಉಳಿಯಿತು. ಅವರು ಒಂದೊಮ್ಮೆ ಪುಸ್ತಕ ಓದಿದ ನಂತರವಾದರೂ ಮರು ಮುದ್ರಣಕ್ಕೆ ಅನುದಾನ ನೀಡಿರುತ್ತಿದ್ದರೆ ಅಥವಾ ಸವರ ಆಪ್ತ ಸಹಾಯಕರ ಪತ್ರದಲ್ಲಿ ಇರುವಂತೆ 500 ಪುಸ್ತಕ ಖರೀದಿಸುತ್ತಿದ್ದರೆ ಈ ಹೆಮ್ಮೆ ನನ್ನದಾಗಿ ಇರುತ್ತಿರಲಿಲ್ಲ
ಅದು ಸರಿ ಅವರ ಪತ್ರದಲ್ಲಿ ಒಂದು ಸಾಲು ಈವತ್ತಿಗೂ ನನಗೆ ಅರ್ಥ ಆಗುತ್ತಿಲ್ಲ.ವಿತರಣೆಗೆ ಮುನ್ನೂರು ಜನರ ಪಟ್ಟಿ ಬೇಕು ಎಂಬುದು ಆ ಸಾಲು..ಏನರ್ಥ ಈ ವಾಕ್ಯದ್ದು..ಒಂದೊಮ್ಮೆ ಅವರು ಅನುದಾನ ನೀಡಿದರೆ ಮುನ್ನೂರು ಜನರಿಗೆ ನಾವು ಕಖುಹಿಸಬೇಕೆಂದಾ ? ಯಾರಿಗೆ ವಿತರಿಸುದು ? ಯಾಕೆ ? ಅನುದಾನ ಕೊಡುದು ಪ್ರಕಟಣೆಗೆ ತಾನೇ ? ಅದಕ್ಕೆ ಮುನ್ನೂರು ಜನರ ಪಟ್ಟಿ ಯಾಕೆ ?
ಹೆಣ್ಣು ಹೆಂಗಸು ಬರೆದ ಪುಸ್ತಕವನ್ನು ಜನ ಓದಲಾರರು.ಅದಕ್ಕೆ ಉಚಿತವಾಗಿ ವಿತರಿಸಲು ಮುನ್ನೂರು ಜನರ ಪಟ್ಟಿ ಬೇಕೆಂಬ ಭಾವ ಇದ್ದಿರಬಹುದಾ?
ದೊಡ್ಡವರು ಏನು ಹೇಳಿದ್ದೆಂದು ನನಗೆ ಈಗಲೂ ಅರ್ಥ ಆಗುತ್ತಿಲ್ಲ ಈಗ ಮರುಮುದ್ರಣ (ಮೊದಲನೆಯದನ್ನು ಪರಿಗಣಿಸಿದರೆ ಮೂರನೆಯ ಮುದ್ರಣಕ್ಕೆ) ಸಿದ್ದವಾಗಿದೆ. ಎಲ್ಲರ ಊಹೆಯನ್ನು ಮಾತ್ರವಲ್ಲ ನನ್ನ ನಿರೀಕ್ಷೆಯನ್ನು ಕೂಡ ತಲೆಕೆಳಗು ಮಾಡಿ ಬೇಡಿಕೆಯನ್ನು ಪಡೆದಿದೆ
ಅನೇಕರು ಪುಸ್ತಕದ ಬೆಲೆ 2000₹ ಹೆಚ್ಚಾಯಿತು ಎಂದಿದ್ದರು.ಇನ್ನೂ ಕೆಲವರಿಗೆ ಪುಸ್ತಕ ಬೇಕೆಂದಿದ್ದರೂ 2000₹ ಹೊಂದಿಸುದು ಕಷ್ಟ ಆಗಿತ್ತು
ಈಗ ಈ ಸಮಸ್ಯೆ ಗೆ ಇಲ್ಲಿ ಪರಿಹಾರ ಇದೆ
ಮರು ಮುದ್ರಣಕ್ಕೆ ಮತ್ತೆ pre publication offer ಇದೆ .ಕಡಿಮೆ ಬೆಲೆಗೆ ಉತೃಷ್ಟ ಗುಣಮಟ್ಟದ ಕನ್ನಡ ತುಳು ಮಲೆಯಾಳ ಕೊಡವ ಪರಿಸರದ 1253 ದೈವಗಳ ಮಾಹಿತಿ ಇರುವ ಪುಸ್ತಕ ಪಡೆಯಲು ಇದು ಸುವರ್ಣಾವಕಾಶ ..
ಇನ್ನೊಂದು ಸಂತಸದ ವಿಚಾರ ಏನೆಂದರೆ ಇದರ ಇಂಗ್ಲಿಷ್ ಆವೃತ್ತಿ ಕೂಡ ಪ್ರಕಟಣೆಗೆ ಸಿದ್ದವಾಗಿದೆ.ಒಂದೆರಡು ತಿಂಗಳೊಳಗೆ ಕೈಸೇರಲಿದೆ .ಇದಕ್ಕೂ pre publication offer ಲಭ್ಯವಿದೆ .
ಯಾವುದೇ ಯೂನಿವರ್ಸಿಟಿ ಸಂಘ ಸಂಸ್ಥೆಗಳ ಒಂದು ಪೈಸೆ ಅನುದಾನ ಪಡೆಯದೇ ಇಂತಹದೊಂದು ಗ್ರಂಥ ಪ್ರಕಟವಾಗಿ ಯಶಸ್ಸು ಪಡೆದುದಲ್ಲದೆ ಇಂಗ್ಲಿಷ್ ಅವತರಣಿಕೆಯೂ ಸಿದ್ದವಾಗಿ ದೆ ಎಂದರೆ ಇದು ದೈವ ದೇವರುಗಳ ಕೃಪೆ ಅಲ್ಲದೇ ಬೇರೇನೂ ಅಲ್ಲ ಎಂದು ನನಗನಿಸುತ್ತದೆ .ಇಂತಹ ಸೋಜಿಗಗಳ ಬಗ್ಗೆ ಹೇಗೆ ತಾನೇ ಬರೆಯದಿರಲಿ.ಆತ್ಮಕಥೆ ಬೆಳೆಯುತ್ತಿದೆ
ನನ್ನಬರಹಗಳ ಅಭಿವ್ಯಕ್ತಿಯಲ್ಲಿ ಪುಸ್ತಕಕ್ಕೆ ಪ್ರಚಾರ ನೀಡುವಲ್ಲಿ ನನಗೆ ಸದಾ ಬೆಂಬಲ ನೀಡಿದ್ದು ನೇರವಾಗಿ ಎಂದೂ ನೋಡಿರದ fb ಸ್ನೇಹಿತರು.
ಹಾಗಾಗಿ ಮತ್ತೆ ನಿಮ್ಮೆಲ್ಲರ ಬೆಂಬಲ ಇರಲಿ ಎಂದು ಅಪೇಕ್ಷಿಸುವೆ - ಡಾ.ಲಕ್ಷ್ಮೀ ಜಿ ಪ್ರಸಾದ್, ಮೊಬೈಲ್ 9480516684:

No comments:
Post a Comment