Friday, 15 December 2017

ಉದಾತ್ತ ಮನಸಿನ ಪೂಜಾ ತಿಂಡಿ ಮನೆಯ ಸದಾಶಿವ ಶೆಟ್ಟಿ - ಡಾ.ಲಕ್ಷ್ಮೀ ಜಿ ಪ್ರಸಾದ



ಬೆಂಗಳೂರು ಯುನಿವರ್ಸಿಟಿ ಕ್ವಾರ್ಟರ್ಸ್ ಬಳಿ ಉಳ್ಳಾಲು ಮುಖ್ಯ ರಸ್ತೆಯ ಆರಂಭದಲ್ಲಿ ಒಂದು ಚಿಕ್ಕ ಹೋಟೆಲ್ ಇದೆ.ಹೆಸರು ಪೂಜಾ ತಿಂಡಿ ಮನೆ.ಇದು ಇತ್ತೀಚೆಗೆ ಎರಡು ಮೂರು ತಿಂಗಳ ಮೊದಲು ಆರಂಭವಾಯಿತು.ಇಲ್ಲಿ ಶುಚಿ ರುಚಿಯಾದ ಊಟ ತಿಂಡಿಗಳು ಕೈಗೆಡಕುವ ಬೆಲೆಯಲ್ಲಿ ಲಭ್ಯವಿವೆ.ರುಚಿ ಜೊತೆಗೆ ಶುಚಿತ್ವಕ್ಕೂ ಇಲ್ಲಿ ಆದ್ಯತೆ ಕೊಡುತ್ತಾರೆ. ನನಗೆ ಇಲ್ಲಿನ ತಿಂಡಿಗಳು ಇಷ್ಟವಾಗಿವೆ.ನಾನು ಇಲ್ಲಿನ ಖಾಯಂ ಗ್ರಾಹಕಿ  .ಊಟ ತಿಂಡಿಗಳನ್ನು ಶುಚಿ ರುಚಿಯಾಗಿ ನೀಡುವ ಹಲವು ಉಪಾಹಾರ ಮಂದಿರಗಳಿವೆ. ಆದರೆ ಇಲ್ಲಿ  ನನ್ನ ಗಮನ ಸೆಳೆದದ್ದು  ಇದರ ಮಾಲಿಕರ ವ್ಯಕ್ತಿತ್ವ,ಉದಾರತೆ.
ಒಂದು ದಿನ ಶನಿವಾರ ಮಧ್ಯಾಹ್ನ ನಾನು ಪೂಜಾ ತಿಂಡಿ‌ಮನೆಗೆ ತಿಂಡಿ ಕಟ್ಟಿಸಿಕೊಂಡು ಹೋಗಲು ಬಂದಿದ್ದೆ.ಆಗ ಅಲ್ಲಿಗೆ ವಯಸ್ಸಾದ ಓರ್ವ ಭಿಕ್ಷುಕಿ ಬಂದಳು.ಅವಳಲ್ಲಿ ಊಟ ಮಾಡುತ್ತೀಯಾ ಎಂದು ಸದಾಶಿವ ಶೆಟ್ಟಿ ಅವರು ಕೇಳಿ ಅವರಿಗೆ ಅನ್ನ ಸಾಂಬಾರ್ ಕಟ್ಟಿ ಕೊಟ್ಟು ಎರಡು ಬಜ್ಜಿಯನ್ನು ಕೂಡ ನೀಡಿದರು.ಆಕೆಯ ಕೈಯಿಂದ ದುಡ್ಡು ತಗೊಂಡಿರಲಿಲ್ಕ.ಆಗ ನಾನು ನಾನು ಯಾವಾಗಲೂ ಇವರಿಗೆ ಹೀಗೆ ಉಚಿತವಾಗಿ ಊಟ ಕೊಡುತ್ತೀರಾ ಎಂದು  ಕೇಳಿದೆ.ಆಗ ಅವರು ಹೌದು,ಇವರಿಗೆ ಮಾತ್ರವಲ್ಲ, ಹೀಗೆ ವಯಸ್ಸಾಗಿ ಭಿಕ್ಷೆ ಬೇಡುವವರು ಬಂದರೆ ಅವರಿಗೆಲ್ಲರಿಗೂ ಉಚಿತವಾಗಿ ಊಟ ನೀಡುತ್ತೇವೆ ಎಂದು ಹೇಳಿದರು.ಪ್ರತಿ ದಿನ  ಕನಿಷ್ಟ ಮೂರು  ನಾಲ್ಕು  ಇಂತಹವರು ಬರುತ್ತಾರೆ.ಅವರಿಗೆಲ್ಲರಿಗೂ ಇವರು ಉಚಿತವಾಗಿ ಊಟ ನೀಡುತ್ತಾರೆ.
ನಾನು ಯಾರಿಗೂ ದುಡ್ಡಿನ ರೂಪದಲ್ಲಿ ಭಿಕ್ಷೆ ನೀಡುವುದಿಲ್ಲ. ಆದರೆ ಊಟದ ಸಮಯದಲ್ಲಿ ಬಂದ ಯಾರಿಗೇ ಆದರೂ ಊಟ ನೀಡುತ್ತೇನೆ.ಎಷ್ಟೇ ಜನ ಬಂದರೂ ನೀಡುತ್ತೇನೆ " ಎಂದವರು ಹೇಳುತ್ತಾರೆ.
ಆದರ್ಶದ ಸಾವಿರ ಮಾತುಗಳನ್ನು ಆಡಬಹುದು. ಆದರೆ ಕಾರ್ಯರೂಪಕ್ಕೆ ತರುವುದು ಕಷ್ಟದ ವಿಚಾರ. ಕಟ್ಟದ ಮೇಲೆ ಕಟ್ಟದ ಮನೆ ಮೇಲೆ ಮನೆ ,ಸೈಟ್ ಗಳ ಕೊಂಡು ಕಟ್ಟುತ್ತಾ ಹತ್ತು ತಲೆಮಾರು ಉಂಡರೂ ಕರಗದಷ್ಟು ಆಸ್ತಿ ಕೂಡಿಟ್ಟರೂ ಇನ್ನೂ ಸಾಲದೆಂದು ದುಡ್ಡಿನ ಹಿಂದೆ ಸಾಗುವ ಜನರ ನಡುವೆ ಸದಾ ಶಿವ ಶೆಟ್ಟಿ ಯವರು ತಮ್ಮ ಉದಾರತೆಯಿಂದಾಗಿ ವಿಶಿಷ್ಟರಾಗಿ ಕಾಣುತ್ತಾರೆ.

ಮೋಜು ಮಸ್ತಿ ಯಲ್ಲಿ ಮುಳುಗಿರುವ ,ಗೊತ್ತು ಗುರಿಯಿಲ್ಲದೆ ಸಾಗುತ್ತಿರುವ ಇಂದಿನ ಯುವ ಜನಾಂಗಕ್ಕೆ ಇವರೊಂದು ಮಾದರಿಯಾಗಿ ನಿಲ್ಲುತ್ತಾರೆ.

No comments:

Post a Comment