ದೊಡ್ಡವರ ದಾರಿ: 27 - ಸ್ವ ಸಾಮರ್ಥ್ಯದಿಂದ ಉತ್ತುಂಗಕ್ಕೇರಿದ ಡಾ.ವೆರೋನಿಕಾ ಜೂಡಿ ಕಾರ್ಲೋ ಪಿಂಟೋ
ಕ್ರಿಸ್ಮಸ್ ಹಬ್ಬ ಬಂದಾಗ ತಕ್ಷಣಕ್ಕೆ ನೆನಪಾದವರು ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ಮಾದರಿ ಮಹಿಳೆ ಜೂಡಿ ಮೇಡಂ.( ಡಾ.ವೆರೋನಿಕಾ ಜೂಡಿ ಕಾರ್ಲೋ ಪಿಂಟೋ)ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ನನಗೆ ಜೂಡಿ ಮೇಡಂ ಅವರ ಪರಿಚಯ ಆಯಿತು.1996 ನೇ ಇಸವಿಯಲ್ಲಿ ನನ್ನ ಸಂಸ್ಕೃತ ಎಂಎ ಪದವಿ ಮುಗಿದಿತ್ತು.ಫಲಿತಾಂಶ ಬತುವ ಮೊದಲೇ ಶ್ರೀ ರಾಮ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕೆಲಸ ಸಿಕ್ಕಿತ್ತು. ಆದರೆ ಆಗ ನಮ್ಮ ಮನೆ ಮಂಗಳೂರಿನಲ್ಲಿ ಇತ್ತು.ಅಷ್ಟು ದೂರದಿಂದ ಕಲ್ಲಡ್ಕಕ್ಕೆ ಹೋಗಿ ಬರುವುದು ಬಹಳವೇ ಕಷ್ಟದ ವಿಚಾರವಾಗಿತ್ತು.ಆದರೂ ಕೆಲಸ ಬೇಕೇ ಬೇಕು ಎಂಬ ಛಲದಿಂದ ಕೆಲಸಕ್ಕೆ ಹೋಗಿ ಬರುತ್ತಿದ್ದೆ.ಅಲ್ಲಿ ಸೇರಿದ ಎರಡು ಮೂರು ತಿಂಗಳಲ್ಲಿ ನನ್ನ ಎಂಎ ಫಲಿತಾಂಶ ಬಂತು.ಮೊದಲ ರ‍್ಯಾಂಕ್ ಕೂಡ ಬಂತು.ಆ ಸಮಯದಲ್ಲಿ ಶಿಕ್ಷಕ ದಿನಾಚರಣೆ ಕೂಡ ಬಂತು.ಸಾಮಾನ್ಯವಾಗಿ ಶಿಕ್ಷಕ ದಿನಾಚರಣೆಯಂದು ಸಾಧಕ ಶಿಕ್ಷಕರನ್ನು ಗುರುತಿಸುವ ಸಂಪ್ರದಾಯ ಎಲ್ಲೆಡೆ ಇರುತ್ತದೆ.ಹಾಗಾಗಿ ನನ್ನನ್ನು ಕರೆದು ಒಂದು ಹೂ ಗುಚ್ಛ ನೀಡಿ ಗುರುತಿಸಿಯಾರು ಎಂದು ನಾನು ಭಾವಿಸಿದ್ದೆ.ಆದರೆ ಅಂತಹದ್ದೇನೂ ನಡೆಯಲಿಲ್ಲ. ಸ್ತ್ರೀ ಯರ ಸಾಧನೆಯನ್ನು ಗುರುತಿಸಲು ಅಪಾರ ಔದಾರ್ಯ ಬೇಕು.
ಇದಾಗಿ ಸ್ವಲ್ಪ ಸಮಯದಲ್ಲಿ ಮಂಗಳೂರಿನ ಪ್ರಖ್ಯಾತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕಿಯಾಗಿದ್ದ ಶಶಿಕಲಾ ಅವರಿಗೆ ಅವರ ಸ್ವಂತ ಊರಿನಲ್ಲಿ ಕೆಲಸ ಸಿಕ್ಕು ಅಲ್ಲಿಒಂದು ಸಂಸ್ಕೃತ ಹುದ್ದೆ ಖಾಲಿಯಾಗುವ ಬಗ್ಗೆ ಅವರು ತಿಳಿಸಿದರು.ತಕ್ಷಣವೇ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ.ಶಿಕಾರಿಪುರ ಕೃಷ್ಣ ಮೂರ್ತಿ ಯವರನ್ನು ಕಂಡು ,ಕಾಲೇಜಿಗೆ ಹೋಗಿ ಆಗ ಪ್ರಾಂಶುಪಾಲರಾಗಿದ್ದ ಪ್ರಶಾಂತ್ ಮಾಡ್ತಾ ಅವರಿಗೆ ಅರ್ಜಿ ಸಲ್ಲಿಸಿದೆ.ನನ್ನ ಬಗ್ಗೆ ಅಪಾರ ಪ್ರೀತಿ ಅಭಿಮಾನ ಹೊಂದಿದ್ದ ಶಿಕಾರಿಪುರ ಅವರು ಯಾವುದೇ ಸಂದರ್ಶನ ಮಾಡದೆ ನೇರವಾಗಿ ಆಯ್ಕೆ ಮಾಡಿದರು.
ಮರುದಿನವೇ ಕೆಲಸಕ್ಕೆ ಹಾಜರಾಗಿ ವರದಿಮಾಡಿಕೊಳ್ಳಲು ಪ್ರಾಂಶುಪಾಲರು ತಿಳಿಸಿದರು.ಅಂತೆಯೇ ಮರುದಿನ ಹೋದೆ.ಅಲ್ಲಿ ಸಂಸ್ಕೃತ ವಿಭಾಗ ಮತ್ತು ಹಿಂದಿ ವಿಭಾಗ ಒಟ್ಟಿಗೆ ಒಂದು ಕೊಠಡಿಯಲ್ಲಿ ಇತ್ತು.
ಆ ದಿನ ಶಿಕಾರಿಪುರ ಕೃಷ್ಣ ಮೂರ್ತಿಯವರು ರಜೆ ಹಾಕಿದ್ದರು.ದೇಶದಲ್ಲಿ ಅತ್ಯುತ್ತಮ ಐದು ಕಾಲೇಜುಗಳಲ್ಲಿ ಒಂದಾಗಿರುವ ಅಲೋಶಿಯಸ್ ಕಾಲೇಜು ಬಹಳ ಪ್ರತಿಷ್ಠಿತ ಸಂಸ್ಥೆ. ನನಗೋ ಮೂರು ನಾಲ್ಕು ತಿಂಗಳು ಕಲ್ಲಡ್ಕ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡಿದ ಅನುಭವ ಬಿಟ್ಟರೆ ಕಾಲೇಜಿನಲ್ಲಿ ಪಾಠ ಮಾಡಿದ ಅನುಭವ ಇರಲಿಲ್ಲ. ಹಾಗಾಗಿ ನಾನು ತೀರಾ ಆತಂಕಕ್ಕೆ ಒಳಗಾಗಿದ್ದೆ.ಹತ್ತು ಹದಿನೈದು ಎಕ್ಕರೆ ಜಾಗದಲ್ಲಿ ಹರಡಿರುವ ಈ ಸಂಸ್ಥೆಯಲ್ಲಿ ಕೊಠಡಿ ಹುಡುಕುವುದು ಕೂಡ ಸಾಹಸದ ವಿಚಾರ.ಹಾಗಾಗಿ ನನಗೆ ಎಲ್ಲಿ ಹೋಗಬೇಕು, ಏನು ಮಾಡಬೇಕೆಂದು ತಿಳಿಯದೆ ದಿಕ್ಕು ತೋಚದೆ ಕಂಗಾಲಾಗಿ ನಿಂತಿದ್ದೆ.ಆಗ ನನ್ನ ಆತಂಕವನ್ನು ಗಮನಿಸಿದವರು.ಅಲ್ಲಿನ ಹಿಂದಿ ಉಪನ್ಯಾಸಕಿ ಜೂಡಿ ಮೇಡಂ. "ಗಾಭರಿಯಾಗಬೇಡಿ,ನೀವೊಬ್ಬ ರ‍್ಯಾಂಕ್ ವಿಜೇತೆ ಎಂಬುದನ್ನು ನೆನಪಿಸಿಕೊಳ್ಳಿ.ಧೈರ್ಯವಾಗಿ ತರಗತಿಗೆ ಹೋಗಿ "ಎಂದು ಹೇಳಿ ನಾನು ಹೋಗ ಬೆಕಾದ ತರಗತಿಯ ಕೊಠಡಿ ಸಂಖ್ಯೆ ತಿಳಿಸಿದರು..ಆ ಸಂಖ್ಯೆಯ ಕೊಠಡಿ ಎಲ್ಲಿದೆಯೆಂದು ಓರ್ವ ವಿದ್ಯಾರ್ಥಿಯಲ್ಲಿ ಕೇಳಿದಾಗ ಆತ ತೋರಿಸಿದ ದಾರಿಯಲ್ಲಿ ಹೋದಾಗ ಗಂಡಸರ ಟಾಯ್ಲೆಟ್ ಸಿಕ್ಕಿತ್ತು. ಆಗ ಅವನು ತಪ್ಪು ದಾರಿ ಹೇಳಿ ತಮಾಷೆ ನೋಡುತ್ತಿದ್ದಾನೆಂದು ತಿಳಿಯಿತು.ಮತ್ತೆ ಹೋದ ದಾರಿಯಲ್ಲಿ ಹಿಂದೆ ಬಂದಾಗ ಜೂಡಿ ಮೇಡಂ ಎದುರಾಗಿ ನನಗೆ ತರಗತಿ ಎಲ್ಲಿದೆ ಎಂಬುದು ಗೊತ್ತಾಗಿಲ್ಲ ಎಂದು ತಿಳಿದು ನನ್ನ ಜೊತೆಗೆ ಬಂದು ವಿದ್ಯಾರ್ಥಿಗಳಿಗೆ ನನ್ನ ಪರಿಚಯವನ್ನು ಮಾಡಿ ಕೊಟ್ಟರು.
ಮಕ್ಕಳು ಅಲೋಶಿಯಸ್ ನಲ್ಲಿದ್ದರೂ ಮಕ್ಕಳೇ,ಸರ್ಕಾರಿ ಕಾಲೇಜಿನಲ್ಲಿ ಇದ್ದರೂ ಮಕ್ಕಳೇ,ಸಹಜವಾಗಿ ಮಕ್ಕಳೊಂದಿಗೆ ಬೆರೆತರೆ ಪ್ರೀತಿಯಿಂದ ಮಾತನಾಡಿದರೆ ಎಳೆಗರುಗಳಂತೆ ನಮಗೆ ಪ್ರೀತಿ ತೋರುತ್ತಾರೆ.ನಮ್ಮನ್ನು ಹಿಂಬಾಲಿಸುತ್ತಾರೆ.ಹಾಗಾಗಿ ನನಗೆ ಮಕ್ಕಳ ಮನಸು ಗೆಲ್ಲುವುದು ಅಷ್ಟೇನೂ ಕಷ್ಟದ ವಿಚಾರವಾಗಲಿಲ್ಲ.ಆದರೂ ವಿದ್ಯಾರ್ಥಿಗಳಿಗೆ ನನ್ನ ಬಗ್ಗೆ ಗೌರವ ಮೂಡಲು ನಾನು ರ‍್ಯಾಂಕ್ ವಿಜೇತೆ ,ಹಾಗೂ ಲೇಖಕಿ ಎಂದು ಪರಿಣಾಮಕಾರಿಯಾಗಿ ಜೂಡಿ ಮೇಡಂ ನನ್ನನ್ನು ಪರಿಚಯಿಸಿರುವುದೇ ಕಾರಣವಾಗಿತ್ತು ಎಂಬುದು ಕೂಡ ಮುಖ್ಯವಾದುದು.
ನಾನಲ್ಲಿ ಸೇರಿದ ಒಂದು ತಿಂಗಳ ಒಳಗೆ ಕಾಲೇಜು ಡೇ ಆಯಿತು.ಅಲ್ಲಿ ಕಾಲೇಜು ಡೇಯಲ್ಲಿ ಸಾಧನೆ ಮಾಡಿದ ಉಪನ್ಯಾಸಕರನ್ನು ಗೌರವಿಸುವ ಪದ್ಧತಿ ಇತ್ತು. ಆಗ ಅಲ್ಲಿನ ನನಗೆ ರ‍್ಯಾಂಕ್ ಬಂದಿರುವ ಬಗ್ಗೆ ಪ್ರಾಂಶುಪಾಲರಿಗೆ ತಿಳಿಸಿ ಕಾಲೇಜು ಡೇ ಯಲ್ಲಿ ಗೌರವಿಸುವಂತೆ ಜೂಡಿ ಮೇಡಂ ಮಾಡಿದರು.ವಾಸ್ತವವಾಗಿ ನಾನು ಆ ಕಾಲೇಜಿಗೆ ಸೇರುವ ಮೊದಲೇ ನನ್ನ ಫಲಿತಾಂಶ ಬಂದಿದ್ದು ರ‍್ಯಾಂಕ್ ಕೂಡ ಘೋಷಣೆ ಆಗಿತ್ತು. ಹಾಗಾಗಿ ನನ್ನನ್ನು ಗುರುತಿಸುವ ಅಗತ್ಯವೇನೂ ಇರಲಿಲ್ಲ. ಆದರೆ ಅರ್ಹತೆಯನ್ನು ಗುರುತಿಸುವ ಉದಾರತೆ ಜೂಡಿ ಮೇಡಂ ಅವರಲ್ಲಿ ಇತ್ತು.ಸ್ವಲ್ಪ ಸಮಯದಲ್ಲಿಯೇ ನನಗೆ ಅವರು ತುಂಬಾ ಆತ್ಮೀಯರಾದರು.ಅವರು ನನ್ನನ್ನು ಅವರ ಪರಿಚಿತರಿಗೆ ಪರಿಚಯಿಸುವಾಗಲೆಲ್ಲ ಲಕ್ಷ್ಮೀ ತುಂಬಾ ಪ್ರತಿಭಾವಂತೆ,ಮೊದಲ ರ‍್ಯಾಂಕ್ ಪಡೆದಿದ್ದಾರೆ. ಜೊತೆಗೆ ಒಳ್ಳೆಯ ಬರಹಗಾರ್ತಿ ಎಂದು ಹೇಳುತ್ತಿದ್ದರು.ಇದು ನನ್ನಲ್ಲಿ ಅಪಾರ ಆತ್ಮವಿಶ್ವಾಸ ಬೆಳೆಯಲು ಕಾರಣವಾಯಿತು.
ಅಲ್ಲಿ ಸಂಸ್ಕೃತಕ್ಕೆ ಅರೆಕಾಲಿಕ ತಾತ್ಕಾಲಿಕ ಹುದ್ದೆ ಇತ್ತು. ಹಾಗಾಗಿ ನನಗೆ ಕೆಲಸ ಖಾಯಂ ಆಗಲು ಕಷ್ಟವಿತ್ರು.ಅಂತಹ ಸಂದರ್ಭದಲ್ಲಿ ನನಗೆ ಹಿಂದಿ ಎಂಎ ಮಾಡುವಂತೆ ಜೂಡಿ ಮೇಡಂ ನನಗೆ ಸಲಹೆ ನೀಡಿದರು.ಹಾಗಾಗಿ ನಾನು ಹಿಂದಿ ಎಂಎ ಗೆ ಖಾಸಗಿಯಾಗಿ ಕಟ್ಟಿದೆ.ನನಗೆ ಅರ್ಥವಾಗದ ವಿಷಯಗಳನ್ನು ಜೂಡಿ ಮೇಡಂ ನನಗೆ ತಿಳಿಸಿಕೊಟ್ಟರು.
ಸ್ವಲ್ಪ ಸಮಯಕ್ಕೆ ಸಮಾನ ಕಾರ್ಯಭಾರ ಎಂಬ ನಿಯಮ ಜಾರಿಯಾಗಿ ಅಲ್ಲಿದ್ದ ತಾತ್ಕಾಲಿಕ ಅರೆಕಾಲಿಕ ಹುದ್ದೆಯೂ ರದ್ದಾಯಿತು. ಆಗ ನಾನು ಚಿನ್ಮಯ ಹೈಸ್ಕೂಲಿನಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಸೇರಿದೆ.ಜೊತೆಗೆ ಅಲೋಷಿಯಸ್ ಸಂಜೆ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡಿದೆ. ಮತ್ತೆ ಎರಡು ಮೂರು ವರ್ಷ ಕಳೆದಾಗ ಅಲೋಶಿಯಸ್ ಪಿಯು ಕಾಲೇಜಿನಲ್ಲಿ ಒಂದು ಸಂಸ್ಕೃತ ಹುದ್ದೆ ಖಾಲಿ ಯಾಯಿತು. ಆಗ ಆಗಿನ ಪ್ರಾಂಶುಪಾಲರಾದ ಸ್ವಿಬರ್ಟ್ ಡಿ ಸಿಲ್ವಾ ಅವರು ನನಗೆ ಫೋನ್ ಮಾಡಿ ನನ್ನನ್ನು ಬರಹೇಳಿ ನನಗೆ ಅಲ್ಲಿ ಸಂಸ್ಕೃತ ಉಪನ್ಯಾಸಕಿ ಹುದ್ದೆಯನ್ನು ಸಂದರ್ಶನ ಮಾಡದೆ ನೀಡಿದರು.ಇದಕ್ಕೂ ಕಾರಣ ಜೂಡಿ ಮೇಡಂ ಮತ್ತು ಅಲೋಶಿಯಸ್ ಸಂಜೆ ಶಾಲೆಯ ಮುಖ್ಯೋಪಾಧ್ಯಾಯರಾದ ಫಾದರ್ ಪ್ರಾನ್ಸಿಸ್ ಅವರು ನನ್ನ ಬಗ್ಗೆ ತುಂಬಾ ಒಳ್ಳೆಯ ಅಭಿಪ್ರಾಯ ನೀಡಿದ್ದು ಕಾರಣವೆಂದು ನನಗೆ ಆನಂತರ ತಿಳಿಯಿತು.
ಆ ಸಮಯಕ್ಕಾಗುವಾಗ ನಾನು ಕನ್ನಡ ಎಂಎ ಪಡೆದಿದ್ದೆ.ಇದನ್ನು ಜೂಡಿ ಮೇಡಂ ಎಲ್ಲರ ಬಳಿ ಹೇಳುತ್ತಾ "ನೋಡುತ್ತಿರಿ ಲಕ್ಷ್ಮೀ ಒಂದಿನ ದೊಡ್ಡ ಸಾಧನೆ ಮಾಡುತ್ತಾರೆ" ಎಂದು ಅಭಿಮಾನದಿಂದ ಹೇಳುತ್ತಿದ್ದರು.
ಅವರ ನಿರೀಕ್ಷೆಯಂತೆ ಬಹು ದೊಡ್ಡ ಸಾಧನೆಯನ್ನು ಮಾಡಲು ನನಗೆ ಸಾಧ್ಯವಾಗಿಲ್ಲ ಆದರೂ ಮಾಡಿದ್ದಷ್ಟಕ್ಕೆ ಅವರ ಬೆಂಬಲದ,ಪ್ರೋತ್ಸಾಹದ,ಅಭಿಮಾನದ ನುಡಿಗಳು ಕೂಡ ಕಾರಣವಾಗಿದೆ ಎಂಬುದನ್ನು ನಾನು ಮರೆಯಲಾರೆ.
ಹೌದು,ಜೂಡಿ ಮೇಡಂ ಅವರಿಗೆ ಬೇರೆಯವರ ಅರ್ಹತೆಯನ್ನು ಗುರುತಿಸುವ ಉದಾರತೆ ಎಲ್ಲಿಂದ ಬಂತು ? ವಜ್ರವನ್ನು ಗುರುತಿಸಲು ವಜ್ರದ ವ್ಯಾಪಾರಿಗೆ ಮಾತ್ರ ಸಾಧ್ಯ,ಗುಜರಿ ಅಂಗಡಿಯವನಿಗೆ ವಜ್ರ ಮತ್ತು ಗಾಜಿನ ತುಂಡು ಎರಡೂ ಒಂದೇ ಆಗಿ ಕಾಣಿಸುತ್ತದೆ.
ಜೂಡಿ ಮೇಡಂ ಅಪೂರ್ವ ಪ್ರತಿಭಾವಂತರು.ಬಡಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಅವರು ಮೊದಲಿಗೆ ಟಿಸಿಎಚ್ ಮಾಡಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು.ಹದಿನೈದು ವರ್ಷಗಳ ಕಾಲ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದುಕೊಂಡು ,ಕೆಲಸ ಮಾಡುತ್ತಲೇ,ಇಬ್ಬರು ಪುಟ್ಟ ಮಕ್ಕಳ ತಾಯಿಯಾಗಿ ಸಂಸಾರವನ್ನು ನಿಭಾಯಿಸುತ್ತಲೇ ಓದಿದರು.ಬಿ ಎ ಮಾಡಿದರು.ನಂತರ ಹಿಂದಿ ಎಂಎಯನ್ನು ರ‍್ಯಾಂಕ್ ಹಾಗೂ ಸುವರ್ಣ ಪದಕಗಳೊಂದಿಗೆ ಪಡೆದರು.ಯುಜಿಸಿ ನಡೆಸುವ National eligibility for lectureship ಮತ್ತು junior fellowship ಪರೀಕ್ಷೆ ಯಲ್ಲಿ ಉತ್ತೀರ್ಣರಾದರು.
ಸ್ವಂತ ಸಾಮರ್ಥ್ಯ ದಿಂದ ಪ್ರತಿಷ್ಠಿತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕಿ ಯಾಗಿ ನಿಯುಕ್ತಿಗೊಂಡರು.ಜೊತೆಗೆ ಕೌನ್ಸಿಲಿಂಗ್ ನೀಡುವ ಬಗ್ಗೆ ತರಬೇತಿ ಪಡೆದು ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನೀಡತೊಡಗಿದರು.ಬೇರೆ ಕಡೆ ಕೌಟುಂಬಿಕ ಕೌನ್ಸಿಲಿಂಗ್ ಕೂಡ ನೀಡಿ ಅನೇಕರ ಬಾಳನ್ನು ಹಸನುಗೊಳಿಸಿದರು. ವೈಯುಕ್ತಿಕವಾಗಿ ಕೂಡ ಐವತ್ತರ ಹರೆಯದಲ್ಲಿ ಮಾನವೀಯ ಸಂಬಂಧಗಳ ಕುರಿತು ಸಂಶೋಧನಾತ್ಕ ಅಧ್ಯಯನ ಮಾಡಿ ಮಹಾ ಪ್ರಬಂಧ ಸಲ್ಲಿಸಿ ಡಾಕ್ಟರೇಟ್ ಪದವಿಯನ್ನು ಕೂಡ ಪಡೆದರು.
ತನ್ನ ವೃತ್ತಿ ಜೀವನದ ಕೊನೆಯ ಐದು ವರ್ಷಗಳ ಕಾಲ ಅತ್ಯಂತ ಪ್ರತಿಷ್ಠಿತ ಸಂತ ಅಲೋಶಿಯಸ್ ಕಾಲೇಜಿನ ಉಪಪ್ರಾಂಶುಪಾಲರಾಗಿ ಕೆಲಸ ಮಾಡಿ ಎಲ್ಲರ ಒಲವನ್ನು ಗಳಿಸಿದರು.ಸಂಸ್ಥೆಗೆ ಅನನ್ಯ ಕೊಡುಗೆಯನ್ನು ನೀಡಿದರು
ಇವರು ಉತ್ತಮ ಬರಹಗಾರ್ತಿ ಕೂಡ ಅಗಿದ್ದು ಕೊಂಕಣಿ ಭಾಷೆಯ ರಾಖ್ಣೋ ಎಂಬ ಪತ್ರಿಕೆಯ ಅಂಕಣಗಾರರು ಆಗಿದ್ದಾರೆ.ಅನೇಕ ಕಥೆಗಳನ್ನು ಬರೆದಿದ್ದು ಇವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.ಕಥಾಸಂಕಲನಗಳು ಕೂಡ ಪ್ರಕಟವಾಗಿವೆ.
ಶಾರೀರಿಕವಾಗಿ ತೀವ್ರವಾದ ನೋವಿನ ವಾತದ ಸಮಸ್ಯೆಯನ್ನು ಎದುರಿಸುತ್ತಲೇ ಇವರು ಮಾಡಿದ ಸಾಧನೆ ಅತ್ಯದ್ಭುತ ವಾದುದು.ಓರ್ವ ಮಹಿಳೆಯಾಗಿ ಯಾವುದೇ ಬೆಂಬಲವಿಲ್ಲದೆಯೆ,ಯಾರದೇ ಪ್ರಭಾವವೂ ಇಲ್ಲದೆ ಪ್ರಾಥಮಿಕ ಶಾಲೆಯಿಂದ ದೇಶದಲ್ಲಿಯೇ ಪ್ರತಿಷ್ಠಿತವಾಗಿರುವ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾಗಿ ನಿಯುಕ್ತರಾಗುವಷ್ಟರ ಮಟ್ಟಿನ ಉನ್ನತ ಮಟ್ಟಕ್ಕೆ ಏರಿದ ಇವರ ಸ್ವ ಸಾಮರ್ಥ್ಯ ,ತಾಳ್ಮೆ,,ಪರಿಶ್ರಮ, ಶ್ರದ್ಧೆ ಯಾರು ಕೂಡ ಮೆಚ್ಚುವಂಥಹಾದ್ದೇ ಆಗಿದೆ.ಎಲ್ಲಕ್ಕಿಂತ ಹೆಚ್ಚು ನನ್ನಂತಹ ಸಾಮಾನ್ಯಳನ್ನೂ ಗುರುತಿಸಿ ಉತ್ತೇಜಿಸುವ ಅವರು ಉದಾರ ಅಂತಃಕರಣಕ್ಕೆ ಸಾಟಿಯೇ ಇಲ್ಲ .
http://shikshanaloka.blogspot.in/2017/12/27.html?m=1
ಕ್ರಿಸ್ಮಸ್ ಹಬ್ಬ ಬಂದಾಗ ತಕ್ಷಣಕ್ಕೆ ನೆನಪಾದವರು ಜೂಡಿ ಮೇಡಂ.( ಡಾ.ವೆರೋನಿಕಾ ಜೂಡಿ ಕಾರ್ಲೋ ಪಿಂಟೋ)ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ನನಗೆ ಜೂಡಿ ಮೇಡಂ ಅವರ ಪರಿಚಯ ಆಯಿತು.1996 ನೇ ಇಸವಿಯಲ್ಲಿ ನನ್ನ ಸಂಸ್ಕೃತ ಎಂಎ ಪದವಿ ಮುಗಿದಿತ್ತು.ಫಲಿತಾಂಶ ಬತುವ ಮೊದಲೇ ಶ್ರೀ ರಾಮ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕೆಲಸ ಸಿಕ್ಕಿತ್ತು. ಆದರೆ ಆಗ ನಮ್ಮ ಮನೆ ಮಂಗಳೂರಿನಲ್ಲಿ ಇತ್ತು.ಅಷ್ಟು ದೂರದಿಂದ ಕಲ್ಲಡ್ಕಕ್ಕೆ ಹೋಗಿ ಬರುವುದು ಬಹಳವೇ ಕಷ್ಟದ ವಿಚಾರವಾಗಿತ್ತು.ಆದರೂ ಕೆಲಸ ಬೇಕೇ ಬೇಕು ಎಂಬ ಛಲದಿಂದ ಕೆಲಸಕ್ಕೆ ಹೋಗಿ ಬರುತ್ತಿದ್ದೆ.ಅಲ್ಲಿ ಸೇರಿದ ಎರಡು ಮೂರು ತಿಂಗಳಲ್ಲಿ ನನ್ನ ಎಂಎ ಫಲಿತಾಂಶ ಬಂತು.ಮೊದಲ ರ‍್ಯಾಂಕ್ ಕೂಡ ಬಂತು.ಆ ಸಮಯದಲ್ಲಿ ಶಿಕ್ಷಕ ದಿನಾಚರಣೆ ಕೂಡ ಬಂತು.ಸಾಮಾನ್ಯವಾಗಿ ಶಿಕ್ಷಕ ದಿನಾಚರಣೆಯಂದು ಸಾಧಕ ಶಿಕ್ಷಕರನ್ನು ಗುರುತಿಸುವ ಸಂಪ್ರದಾಯ ಎಲ್ಲೆಡೆ ಇರುತ್ತದೆ.ಹಾಗಾಗಿ ನನ್ನನ್ನು ಕರೆದು ಒಂದು ಹೂ ಗುಚ್ಛ ನೀಡಿ ಗುರುತಿಸಿಯಾರು ಎಂದು ನಾನು ಭಾವಿಸಿದ್ದೆ.ಆದರೆ ಅಂತಹದ್ದೇನೂ ನಡೆಯಲಿಲ್ಲ. ಸ್ತ್ರೀ ಯರ ಸಾಧನೆಯನ್ನು ಗುರುತಿಸಲು ಅಪಾರ ಔದಾರ್ಯ ಬೇಕು.
ಇದಾಗಿ ಸ್ವಲ್ಪ ಸಮಯದಲ್ಲಿ ಮಂಗಳೂರಿನ ಪ್ರಖ್ಯಾತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕಿಯಾಗಿದ್ದ ಶಶಿಕಲಾ ಅವರಿಗೆ ಅವರ ಸ್ವಂತ ಊರಿನಲ್ಲಿ ಕೆಲಸ ಸಿಕ್ಕು ಅಲ್ಲಿಒಂದು ಸಂಸ್ಕೃತ ಹುದ್ದೆ ಖಾಲಿಯಾಗುವ ಬಗ್ಗೆ ಅವರು ತಿಳಿಸಿದರು.ತಕ್ಷಣವೇ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ.ಶಿಕಾರಿಪುರ ಕೃಷ್ಣ ಮೂರ್ತಿ ಯವರನ್ನು ಕಂಡು ,ಕಾಲೇಜಿಗೆ ಹೋಗಿ ಆಗ ಪ್ರಾಂಶುಪಾಲರಾಗಿದ್ದ ಪ್ರಶಾಂತ್ ಮಾಡ್ತಾ ಅವರಿಗೆ ಅರ್ಜಿ ಸಲ್ಲಿಸಿದೆ.ನನ್ನ ಬಗ್ಗೆ ಅಪಾರ ಪ್ರೀತಿ ಅಭಿಮಾನ ಹೊಂದಿದ್ದ ಶಿಕಾರಿಪುರ ಅವರು ಯಾವುದೇ ಸಂದರ್ಶನ ಮಾಡದೆ ನೇರವಾಗಿ ಆಯ್ಕೆ ಮಾಡಿದರು.
ಮರುದಿನವೇ ಕೆಲಸಕ್ಕೆ ಹಾಜರಾಗಿ ವರದಿಮಾಡಿಕೊಳ್ಳಲು ಪ್ರಾಂಶುಪಾಲರು ತಿಳಿಸಿದರು.ಅಂತೆಯೇ ಮರುದಿನ ಹೋದೆ.ಅಲ್ಲಿ ಸಂಸ್ಕೃತ ವಿಭಾಗ ಮತ್ತು ಹಿಂದಿ ವಿಭಾಗ ಒಟ್ಟಿಗೆ ಒಂದು ಕೊಠಡಿಯಲ್ಲಿ ಇತ್ತು.
ಆ ದಿನ ಶಿಕಾರಿಪುರ ಕೃಷ್ಣ ಮೂರ್ತಿಯವರು ರಜೆ ಹಾಕಿದ್ದರು.ದೇಶದಲ್ಲಿ ಅತ್ಯುತ್ತಮ ಐದು ಕಾಲೇಜುಗಳಲ್ಲಿ ಒಂದಾಗಿರುವ ಅಲೋಶಿಯಸ್ ಕಾಲೇಜು ಬಹಳ ಪ್ರತಿಷ್ಠಿತ ಸಂಸ್ಥೆ. ನನಗೋ ಮೂರು ನಾಲ್ಕು ತಿಂಗಳು ಕಲ್ಲಡ್ಕ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡಿದ ಅನುಭವ ಬಿಟ್ಟರೆ ಕಾಲೇಜಿನಲ್ಲಿ ಪಾಠ ಮಾಡಿದ ಅನುಭವ ಇರಲಿಲ್ಲ. ಹಾಗಾಗಿ ನಾನು ತೀರಾ ಆತಂಕಕ್ಕೆ ಒಳಗಾಗಿದ್ದೆ.ಹತ್ತು ಹದಿನೈದು ಎಕ್ಕರೆ ಜಾಗದಲ್ಲಿ ಹರಡಿರುವ ಈ ಸಂಸ್ಥೆಯಲ್ಲಿ ಕೊಠಡಿ ಹುಡುಕುವುದು ಕೂಡ ಸಾಹಸದ ವಿಚಾರ.ಹಾಗಾಗಿ ನನಗೆ ಎಲ್ಲಿ ಹೋಗಬೇಕು, ಏನು ಮಾಡಬೇಕೆಂದು ತಿಳಿಯದೆ ದಿಕ್ಕು ತೋಚದೆ ಕಂಗಾಲಾಗಿ ನಿಂತಿದ್ದೆ.ಆಗ ನನ್ನ ಆತಂಕವನ್ನು ಗಮನಿಸಿದವರು.ಅಲ್ಲಿನ ಹಿಂದಿ ಉಪನ್ಯಾಸಕಿ ಜೂಡಿ ಮೇಡಂ. ಗಾಭರಿಯಾಗಬೇಡಿ,ನೀವೊಬ್ಬ ರ‍್ಯಾಂಕ್ ವಿಜೇತೆ ಎಂಬುದನ್ನು ನೆನಪಿಸಿಕೊಳ್ಳಿ.ಧೈರ್ಯವಾಗಿ ತರಗತಿಗೆ ಹೋಗಿ ಎಂದು ಹೇಳಿ ನಾನು ಹೋಗ ಬೆಕಾದ ತರಗತಿಯ ಕೊಠಡಿ ಸಂಖ್ಯೆ ತಿಳಿಸಿದರು..ಆ ಸಂಖ್ಯೆಯ ಕೊಠಡಿ ಎಲ್ಲಿದೆಯೆಂದು ಓರ್ವ ವಿದ್ಯಾರ್ಥಿಯಲ್ಲಿ ಕೇಳಿದಾಗ ಆತ ತೋರಿಸಿದ ದಾರಿಯಲ್ಲಿ ಹೋದಾಗ ಗಂಡಸರ ಟಾಯ್ಲೆಟ್ ಸಿಕ್ಕಿತ್ತು. ಆಗ ಅವನು ತಪ್ಪು ದಾರಿ ಹೇಳಿ ತಮಾಷೆ ನೋಡುತ್ತಿದ್ದಾನೆಂದು ತಿಳಿಯಿತು.ಮತ್ತೆ ಹೋದ ದಾರಿಯಲ್ಲಿ ಹಿಂದೆ ಬಂದಾಗ ಜೂಡಿ ಮೇಡಂ ಎದುರಾಗಿ ನನಗೆ ತರಗತಿ ಎಲ್ಲಿದೆ ಎಂಬುದು ಗೊತ್ತಾಗಿಲ್ಲ ಎಂದು ತಿಳಿದು ನನ್ನ ಜೊತೆಗೆ ಬಂದು ವಿದ್ಯಾರ್ಥಿಗಳಿಗೆ ನನ್ನ ಪರಿಚಯವನ್ನು ಮಾಡಿ ಕೊಟ್ಟರು.
ಮಕ್ಕಳು ಅಲೋಶಿಯಸ್ ನಲ್ಲಿದ್ದರೂ ಮಕ್ಕಳೇ,ಸರ್ಕಾರಿ ಕಾಲೇಜಿನಲ್ಲಿ ಇದ್ದರೂ ಮಕ್ಕಳೇ,ಸಹಜವಾಗಿ ಮಕ್ಕಳೊಂದಿಗೆ ಬೆರೆತರೆ ಪ್ರೀತಿಯಿಂದ ಮಾತನಾಡಿದರೆ ಎಳೆಗರುಗಳಂತೆ ನಮಗೆ ಪ್ರೀತಿ ತೋರುತ್ತಾರೆ.ನಮ್ಮನ್ನು ಹಿಂಬಾಲಿಸುತ್ತಾರೆ.ಹಾಗಾಗಿ ನನಗೆ ಮಕ್ಕಳ ಮನಸು ಗೆಲ್ಲುವುದು ಅಷ್ಟೇನೂ ಕಷ್ಟದ ವಿಚಾರವಾಗಲಿಲ್ಲ.ಆದರೂ ವಿದ್ಯಾರ್ಥಿಗಳಿಗೆ ನನ್ನ ಬಗ್ಗೆ ಗೌರವ ಮೂಡಲು ನಾನು ರ‍್ಯಾಂಕ್ ವಿಜೇತೆ ,ಹಾಗೂ ಲೇಖಕಿ ಎಂದು ಪರಿಣಾಮಕಾರಿಯಾಗಿ ಜೂಡಿ ಮೇಡಂ ನನ್ನನ್ನು ಪರಿಚಯಿಸಿರುವುದೇ ಕಾರಣವಾಗಿತ್ತು ಎಂಬುದು ಕೂಡ ಮುಖ್ಯವಾದುದು.
ನಾನಲ್ಲಿ ಸೇರಿದ ಒಂದು ತಿಂಗಳ ಒಳಗೆ ಕಾಲೇಜು ಡೇ ಆಯಿತು.ಅಲ್ಲಿ ಕಾಲೇಜು ಡೇಯಲ್ಲಿ ಸಾಧನೆ ಮಾಡಿದ ಉಪನ್ಯಾಸಕರನ್ನು ಗೌರವಿಸುವ ಪದ್ಧತಿ ಇತ್ತು. ಆಗ ಅಲ್ಲಿನ ನನಗೆ ರ‍್ಯಾಂಕ್ ಬಂದಿರುವ ಬಗ್ಗೆ ಪ್ರಾಂಶುಪಾಲರಿಗೆ ತಿಳಿಸಿ ಕಾಲೇಜು ಡೇ ಯಲ್ಲಿ ಗೌರವಿಸುವಂತೆ ಜೂಡಿ ಮೇಡಂ ಮಾಡಿದರು.ವಾಸ್ತವವಾಗಿ ನಾನು ಆ ಕಾಲೇಜಿಗೆ ಸೇರುವ ಮೊದಲೇ ನನ್ನ ಫಲಿತಾಂಶ ಬಂದಿದ್ದು ರ‍್ಯಾಂಕ್ ಕೂಡ ಘೋಷಣೆ ಆಗಿತ್ತು. ಹಾಗಾಗಿ ನನ್ನನ್ನು ಗುರುತಿಸುವ ಅಗತ್ಯವೇನೂ ಇರಲಿಲ್ಲ. ಆದರೆ ಅರ್ಹತೆಯನ್ನು ಗುರುತಿಸುವ ಉದಾರತೆ ಜೂಡಿ ಮೇಡಂ ಅವರಲ್ಲಿ ಇತ್ತು.ಸ್ವಲ್ಪ ಸಮಯದಲ್ಲಿಯೇ ನನಗೆ ಅವರು ತುಂಬಾ ಆತ್ಮೀಯರಾದರು.ಅವರು ನನ್ನನ್ನು ಅವರ ಪರಿಚಿತರಿಗೆ ಪರಿಚಯಿಸುವಾಗಲೆಲ್ಲ ಲಕ್ಷ್ಮೀ ತುಂಬಾ ಪ್ರತಿಭಾವಂತೆ,ಮೊದಲ ರ‍್ಯಾಂಕ್ ಪಡೆದಿದ್ದಾರೆ. ಜೊತೆಗೆ ಒಳ್ಳೆಯ ಬರಹಗಾರ್ತಿ ಎಂದು ಹೇಳುತ್ತಿದ್ದರು.ಇದು ನನ್ನಲ್ಲಿ ಅಪಾರ ಆತ್ಮವಿಶ್ವಾಸ ಬೆಳೆಯಲು ಕಾರಣವಾಯಿತು.
ಅಲ್ಲಿ ಸಂಸ್ಕೃತಕ್ಕೆ ಅರೆಕಾಲಿಕ ತಾತ್ಕಾಲಿಕ ಹುದ್ದೆ ಇತ್ತು. ಹಾಗಾಗಿ ನನಗೆ ಕೆಲಸ ಖಾಯಂ ಆಗಲು ಕಷ್ಟವಿತ್ರು.ಅಂತಹ ಸಂದರ್ಭದಲ್ಲಿ ನನಗೆ ಹಿಂದಿ ಎಂಎ ಮಾಡುವಂತೆ ಜೂಡಿ ಮೇಡಂ ನನಗೆ ಸಲಹೆ ನೀಡಿದರು.ಹಾಗಾಗಿ ನಾನು ಹಿಂದಿ ಎಂಎ ಗೆ ಖಾಸಗಿಯಾಗಿ ಕಟ್ಟಿದೆ.ನನಗೆ ಅರ್ಥವಾಗದ ವಿಷಯಗಳನ್ನು ಜೂಡಿ ಮೇಡಂ ನನಗೆ ತಿಳಿಸಿಕೊಟ್ಟರು.
ಸ್ವಲ್ಪ ಸಮಯಕ್ಕೆ ಸಮಾನ ಕಾರ್ಯಭಾರ ಎಂಬ ನಿಯಮ ಜಾರಿಯಾಗಿ ಅಲ್ಲಿದ್ದ ತಾತ್ಕಾಲಿಕ ಅರೆಕಾಲಿಕ ಹುದ್ದೆಯೂ ರದ್ದಾಯಿತು. ಆಗ ನಾನು ಚಿನ್ಮಯ ಹೈಸ್ಕೂಲಿನಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಸೇರಿದೆ.ಮತ್ತೆ ಎರಡು ಮೂರು ವರ್ಷ ಕಳೆದಾಗ ಅಲೋಶಿಯಸ್ ಪಿಯು ಕಾಲೇಜಿನಲ್ಲಿ ಒಂದು ಸಂಸ್ಕೃತ ಹುದ್ದೆ ಖಾಲಿ ಯಾಯಿತು. ಆಗ ಆಗುನ ಪ್ರಾಂಶುಪಾಲರಾದ ಸ್ವಿಬರ್ಟ್ ಡಿ ಸಿಲ್ವಾ ಅವರು ನನಗೆ ಫೋನ್ ಮಾಡಿ ನನ್ನನ್ನು ಬರಹೇಳಿ ನನಗೆ ಅಲ್ಲಿ ಸಂಸ್ಕೃತ ಉಪನ್ಯಾಸಕಿ ಹುದ್ದೆಯನ್ನು ಸಂದರ್ಶನ ಮಾಡದೆ ನೀಡಿದರು.ಇದಕ್ಕೂ ಕಾರಣ ಜೂಡಿ ಮೇಡಂ ಮತ್ತು ಅಲೋಶಿಯಸ್ ಸಂಜೆ ಶಾಲೆಯ ಮುಖ್ಯೋಪಾಧ್ಯಾಯರಾದ ಫಾದರ್ ಪ್ರಾನ್ಸಿಸ್ ಅವರು ನನ್ನ ಬಗ್ಗೆ ತುಂಬಾ ಒಳ್ಳೆಯ ಅಭಿಪ್ರಾಯ ನೀಡಿದ್ದು ಕಾರಣವೆಂದು ನನಗೆ ಆನಂತರ ತಿಳಿಯಿತು.
ಆ ಸಮಯಕ್ಕಾಗುವಾಗ ನಾನು ಕನ್ನಡ ಎಂಎ ಪಡೆದಿದ್ದೆ.ಇದನ್ನು ಜೂಡಿ ಮೇಡಂ ಎಲ್ಲರ ಬಳಿ ಹೇಳುತ್ತಾ "ನೋಡುತ್ತಿರಿ ಲಕ್ಷ್ಮೀ ಒಂದಿನ ದೊಡ್ಡ ಸಾಧನೆ ಮಾಡುತ್ತಾರೆ" ಎಂದು ಅಭಿಮಾನದಿಂದ ಹೇಳುತ್ತಿದ್ದರು.
ಅವರ ನಿರೀಕ್ಷೆಯಂತೆ ಬಹು ದೊಡ್ಡ ಸಾಧನೆವಮಾಡಲು ನನಗೆ ಸಾಧ್ಯವಾಗಿಲ್ಲ ಆದರೂ ಮಾಡಿದ್ದಷ್ಟಕ್ಕೆ ಅವರ ಬೆಂಬಲದ,ಪ್ರೋತ್ಸಾಹದ,ಅಭಿಮಾನದ ನುಡಿಗಳು ಕೂಡ ಕಾರಣವಾಗಿದೆ ಎಂಬುದನ್ನು ನಾನು ಮರೆಯಲಾರೆ.
ಹೌದು,ಜೂಡಿ ಮೇಡಂ ಅವರಿಗೆ ಬೇರೆಯವರ ಅರ್ಹತೆಯನ್ನು ಗುರುತಿಸುವ ಉದಾರತೆ ಎಲ್ಲಿಂದ ಬಂತು ? ವಜ್ರವನ್ನು ಗುರುತಿಸಲು ವಜ್ರದ ವ್ಯಾಪಾರಿಗೆ ಮಾತ್ರ ಸಾಧ್ಯ,ಗುಜರಿ ಅಂಗಡಿಯವನಿಗೆ ವಜ್ರ ಮತ್ತು ಗಾಜಿನ ತುಂಡು ಎರಡೂ ಒಂದೇ ಆಗಿ ಕಾಣಿಸುತ್ತದೆ.
ಜೂಡಿ ಮೇಡಂ ಅಪೂರ್ವ ಪ್ರತಿಭಾವಂತರು.ಬಡಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಅವರು ಮೊದಲಿಗೆ ಟಿಸಿಎಚ್ ಮಾಡಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು.ಹದಿನೈದು ವರ್ಷಗಳ ಕಾಲ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದುಕೊಂಡು ,ಕೆಲಸ ಮಾಡುತ್ತಲೇ,ಇಬ್ಬರು ಪುಟ್ಟ ಮಕ್ಕಳ ತಾಯಿಯಾಗಿ ಸಂಸಾರವನ್ನು ನಿಭಾಯಿಸುತ್ತಲೇ ಓದಿದರು.ಬಿ ಎ ಮಾಡಿದರು.ನಂತರ ಹಿಂದಿ ಎಂಎಯನ್ನು ರ‍್ಯಾಂಕ್ ಹಾಗೂ ಸುವರ್ಣ ಪದಕಗಳೊಂದಿಗೆ ಪಡೆದರು.ಯುಜಿಸಿ ನಡೆಸುವ National eligibility for lectureship ಮತ್ತು junior fellowship ಪರೀಕ್ಷೆ ಯಲ್ಲಿ ಉತ್ತೀರ್ಣರಾದರು.
ಸ್ವಂತ ಸಾಮರ್ಥ್ಯ ದಿಂದ ಪ್ರತಿಷ್ಠಿತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕಿ ಯಾಗಿ ನಿಯುಕ್ತಿಗೊಂಡರು.ಜೊತೆಗೆ ಕೌನ್ಸಿಲಿಂಗ್ ನೀಡುವ ಬಗ್ಗೆ ತರಬೇತಿ ಪಡೆದು ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನೀಡತೊಡಗಿದರು.ಬೇರೆ ಕಡೆ ಕೌಟುಂಬಿಕ ಕೌನ್ಸಿಲಿಂಗ್ ಕೂಡ ನೀಡಿ ಅನೇಕರ ಬಾಳನ್ನು ಹಸನುಗೊಳಿಸಿದರು. ವೈಯುಕ್ತಿಕವಾಗಿ ಕೂಡ ಐವತ್ತರ ಹರೆಯದಲ್ಲಿ ಮಾನವೀಯ ಸಂಬಂಧಗಳ ಕುರಿತು ಸಂಶೋಧನಾತ್ಕ ಅಧ್ಯಯನ ಮಾಡಿ ಮಹಾ ಪ್ರಬಂಧ ಸಲ್ಲಿಸಿ ಡಾಕ್ಟರೇಟ್ ಪದವಿಯನ್ನು ಕೂಡ ಪಡೆದರು.
ತನ್ನ ವೃತ್ತಿ ಜೀವನದ ಕೊನೆಯ ಐದು ವರ್ಷಗಳ ಕಾಲ ಅತ್ಯಂತ ಪ್ರತಿಷ್ಠಿತ ಸಂತ ಅಲೋಶಿಯಸ್ ಕಾಲೇಜಿನ ಉಪಪ್ರಾಂಶುಪಾಲರಾಗಿ ಕೆಲಸ ಮಾಡಿ ಎಲ್ಲರ ಒಲವನ್ನು ಗಳಿಸಿದರು.ಸಂಸ್ಥೆಗೆ ಅನನ್ಯ ಕೊಡುಗೆಯನ್ನು ನೀಡಿದರು
ಇವರು ಉತ್ತಮ ಬರಹಗಾರ್ತಿ ಕೂಡ ಅಗಿದ್ದು ಕೊಂಕಣಿ ಭಾಷೆಯ ರಾಖ್ಣೋ ಎಂಬ ಪತ್ರಿಕೆಯ ಅಂಕಣಗಾರರು ಆಗಿದ್ದಾರೆ.ಅನೇಕ ಕಥೆಗಳನ್ನು ಬರೆದಿದ್ದು ಇವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.ಕಥಾಸಂಕಲನಗಳು ಕೂಡ ಪ್ರಕಟವಾಗಿವೆ.
ಶಾರೀರಿಕವಾಗಿ ತೀವ್ರವಾದ ನೋವಿನ ವಾತದ ಸಮಸ್ಯೆಯನ್ನು ಎದುರಿಸುತ್ತಲೇ ಇವರು ಮಾಡಿದ ಸಾಧನೆ ಅತ್ಯದ್ಭುತ ವಾದುದು.ಓರ್ವ ಮಹಿಳೆಯಾಗಿ ಯಾವುದೇ ಬೆಂಬಲವಿಲ್ಲದೆಯೆ,ಯಾರದೇ ಪ್ರಭಾವವೂ ಇಲ್ಲದೆ ಪ್ರಾಥಮಿಕ ಶಾಲೆಯಿಂದ ದೇಶದಲ್ಲಿಯೇ ಪ್ರತಿಷ್ಠಿತವಾಗಿರುವ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾಗಿ ನಿಯುಕ್ತರಾಗುವಷ್ಟರ ಮಟ್ಟಿನ ಉನ್ನತ ಮಟ್ಟಕ್ಕೆ ಏರಿದ ಇವರ ಸ್ವ ಸಾಮರ್ಥ್ಯ ,ತಾಳ್ಮೆ,,ಪರಿಶ್ರಮ, ಶ್ರದ್ಧೆ ಯಾರು ಕೂಡ ಮೆಚ್ಚುವಂಥಹಾದ್ದೇ ಆಗಿದೆ.ಎಲ್ಲಕ್ಕಿಂತ ಹೆಚ್ಚು ನನ್ನಂತಹ ಸಾಮಾನ್ಯಳನ್ನೂ ಗುರುತಿಸಿ ಉತ್ತೇಜಿಸುವ ಅವರು ಉದಾರ ಅಂತಃಕರಣಕ್ಕೆ ಸಾಟಿಯೇ ಇಲ್ಲ .
No comments:
Post a Comment