Wednesday, 24 December 2025

ಆತ್ಮ‌ಕಥೆಯ ಬಿಡಿ ಭಾಗಗಳು.. ಆತ್ಮ‌ಕಥೆಯನ್ನು ಬರೆಯದೆ ಹೇಗೆ ಇರಲಿ ?

 ಆತ್ಮ‌ಕಥೆಯ ಬಿಡಿ ಭಾಗಗಳು..

ಆತ್ಮ‌ಕಥೆಯನ್ನು ಬರೆಯದೆ ಹೇಗೆ ಇರಲಿ ? 


ಅನುದಾನ ಕೊಡುವುದಿಲ್ಲ ಎಂದಷ್ಟೇ ಹೇಳಿದ್ದರೆ ನಾನಿದನ್ನು ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲ.ಅದರ ಜೊತೆಗೆ ಹೇಳಿದ ಮಾತುಗಳು‌ ನನಗೆ ಬಹಳಷ್ಟು ತಾಗಿತ್ತು ..


ಈ ಜಗತ್ತಿಗೆ ಹೆಣ್ಣೆಂದರೆ ಎಷ್ಟು ಅಸಡ್ಡೆ !

ಆಕೆ ಗೃಹಿಣಿಯಾಗಿದ್ದರೇ ಶ್ರೇಷ್ಠ ಹೆಚ್ಚೆಂದರೆ ಶಿಕ್ಷಕಿಯಾಗಿ ಉಪನ್ಯಾಸಕಿಯಾಗಿ ಇತ್ತೀಚೆಗೆ ವೈದ್ಯರಾಗಿ ಇಂಜನಿಯರ್ ಆಗಬಹುದು ಅಷ್ಟೇ. ಇನ್ನೂ ಮಹಿಳಾ ಲೇಖಕರ ಬರವಣಿಗೆಯನ್ನು ಅಡುಗೆ ಮನೆ ಸಾಹಿತ್ಯ ಎಂದು ಹೀಗಳೆದವರೇ ಹೆಚ್ಚು ಮಂದಿ ಇದ್ದಾರೆ.ಕೆಲವರು ಎದುರಿನಿಂದ ಇನ್ನೂ ಹಲವರು ಹಿಂದಿನಿಂದ ಹೇಳಿದ್ದು ..

ಹಾಗೂ ಒಂದೊಮ್ಮೆ ಮಹಳೆಯರು ಬರೆದರೆ ಕಥೆ ಕಾದಂಬರಿ ಬರೆಯಲಷ್ಟೇ ಲಾಯಕ್ಕು.

ಇನ್ನೂ ಅಧ್ಯಯನ ಮಾಡುದಾದರೆ ಯಾರೋ ಕವಿಗಳ ಬಗ್ಗೆ ಕಾವ್ಯಗಳ ಬಗ್ಗೆ ಅಷ್ಟೇ ಹೊರತು ಕ್ಷೇತ್ರ ಕಾರ್ಯ ಆಧರಿತ ಅಧ್ಯಯನ ಮಾಡಲು ಆಕೆ ಫಿಟ್ ಅಲ್ಲ.

ಒಂದೊಮ್ಮೆ ಮಾಡಿದರೂ ಗಣನೆಗೆ ಬರುವದ್ದಲ್ಲ..ಈ ಹಿಂದೆ ಒಬ್ಬರು ತುಳು ಲೇಖಕರು ಆ ಪೊಂಜೋವು ಬರೆಯಿನೆನ್ ಎಂಕುಲು ಲೆಕ್ಕೊಗು ದೀಪುಜ್ಜ..ಆ ಹೆಂಗಸು ಬರೆದದ್ದನ್ನು ನಾವು ಗಣನೆಗೆ ತೆಗೆದುಕೊಳ್ಳುವುದಿಲ್ಕ ಎಂದಿದ್ದರು

ನಮಗೇ ತಿಳಿಯದ ದೈವಗಳ ಹೆಸರು ಇವರಿಗೆ ಹೇಗೆ ಸಿಕ್ತದೆ ಅದೆಲ್ಲ ಆಕೆಯ ಸೃಷ್ಟಿ ಎಂದವರೂ ಇದ್ದರು.ದೈವಗಳ ಕಥೆ ಬರೆದಾಗ ಅದು ಕಪೋಲ ಕಲ್ಪಿತ ಎಂದಿದವರೂ ಇದ್ದರು 

ಆಗುವುದೆಲ್ಲ ಒಳ್ಳೆಯದಕ್ಕೇ ಎಂದು ಹಿರಿಯರು ಹೇಳುದು ಸುಳ್ಳಲ್ಲ

ಇವರೆಲ್ಲರ ಟೀಕೆಗಳನ್ನು ಎದುರಿಸುತ್ತಲೇ ನಾನು ಅಧ್ಯಯನ ಮುಂದಯವರಿಸಿದೆ.

ಸಾವಿರದೊಂದು ದೈವಗಳು ಇಲ್ಲವೇ ಇಲ್ಲ ಎಂದವರಿಗೆ ದೈವಗಳ ಕೋಲದ  ಚಿತ್ರ ಎಲ್ಲಿ ಆರಾಧನೆ ಇದೆ ಮೂಲ ಕಥೆಗಳ ಬಗ್ಗೆ ದಾಖಲೆ ಇರಿಸಿ ವಿಶ್ಲೇಷಿಸು ಬರೆದೆ.

ಎಲ್ಲರಿಗೂ ಉಚಿತವಾಗಿ ಮಾಹಿತಿ ದೊರೆಯಲಿ ಎಂದು ಬ್ಲಾಗ್ ನಲ್ಲಿ ಬರೆಯತೊಡಗಿದೆ.

ಬ್ಲಾಗ್ ನಿಂದ ಬರಹ ಕದ್ದು ನನ್ನದೆಂದು ಹೇಳಿದಾಗ ನನ್ನನ್ನೇ ಅಕೆಗೆ ಹೆಸರಿನ ದಾಹ ವಿಕಿಪೀಡಿಯ ಎಂದರೆ ಎನೆಮದು ಗೊತ್ತಿಲ್ಲ ಇತ್ಯಾದಿ   ಬರೆದ ವಿಶ್ವ ನಾಥ ಬದಿಕಾನ  ಪವನಜ ಯುಬಿ‌ ಮೊದಲಾದವುಗಳು ಬರೆದಾಗ ಓದಲು ತಾನೇ ಬರೆಯುದು..ಜನಪದ ಯಾರ ಸೊತ್ತಲ್ಲ ಎಂದು ಒಂದಷ್ಟು ಧೂರ್ತರು ಕೃತಿ ಚೌರ್ಯವನ್ನು ಬೆಂಬಲಿಸಿದರು.ಆಗ ಇವುಗಳಿಂದ ಪಾಠ ಕಲಿತೆ . ಉಚಿತವಾಗಿ ಸಿಕ್ಕರೆ ಇಷ್ಟೇ ಬೆಲೆ ಎಂದು ಗೊತ್ತಾಯಿತು.

ಮಹತ್ವದ ಬರಹಗಳನ್ನು ಬ್ಲಾಗ್ ನಿಂದ ಹಿಂದೆ ತೆಗೆದೆ

1253 ದೈವಗಳ ಸಚಿತ್ರ ಮಾಹಿತಿ  ಇರುವ 1036 ಪುಟಗಳ ದೊಡ್ಡ ಗಾತ್ರದ ಗ್ರಂಥ ರಚಿಸಿ ಪ್ರಕಟಿಸಿದೆ.

ಉಚಿತವಾಗಿ ಸಿಕ್ಕಾಗ ಯಾರಿಗಾದರೂ ಓದಲು ತಾನೇ ಬರೆದದ್ದು ಯಾರ ಹೆಸರಿನಲ್ಲಿದ್ದರೇನು ? ಲೇಖಕರ ಹೆಸರು ಹಾಕದೇ ಇದ್ದರೇನು ಎಂದವರು ಕೂಡ ಮಾಹಿತಿ ಬೇಕಿದ್ದರೆ 2000₹ ಕೊಟ್ಟ ಖರೀದಿಸುದು ಅನಿವಾರ್ಯ ಆಯಿತು.

2000₹ ಬೆಲೆ ಇರಿಸಿದಾಗಲೂ ಆಕ್ಷೇಪ ಬಂತು.

ನನ್ನ ಅಧ್ಯಯನ ನನ್ನ ಪುಸ್ತಕ ಬೆಲೆ ಇರಿಸುದು ನನ್ನ ಇಷ್ಟ.ತಗೊಳ್ಳುದು ಬಿಡುದು ಅವರವರ ಇಷ್ಟ ಎಂದೆ.

ತಗೊಂಡವರು ಯಾರೂ ಇಂದಿನವರೆಗೂ ಬೆಲೆ ಜಾಸ್ತಿ ಆಯಿತು ಎಂದಿಲ್ಲ‌

ಇನ್ನೂ ಈ ಪುಸ್ತಕವನ್ನು ಜನ ಕೊಂಡುಕೊಳ್ಳಲಾರರು ಎಂದವರೂ ಇದ್ದರು.

ಈ ಪುಸ್ತಕ ಪ್ರಕಟಣೆಯ ಸಮಯದಲ್ಲಿ ನನ್ನ ಅನೇಕ ಹಿತೈಷಿಗಳು ನೀವು ಈ ಪುಸ್ತಕ ಪ್ರಕಟಣೆಗೆ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರಿಂದ ಅನುದಾನ ಕೇಳಿ.ಅವರು ಎಲ್ಲರಿಗೆ ಕೊಡ್ತಾರೆ ಎಂದು ಸಲಹೆ ನೀಡಿದ್ದರು.ಆಗ ಕೊರೋನಾ ಸಮಯ .ಹೋಗಲು ಸಾಧ್ಯವಿರಲಿಲ್ಲ

ಹಾಗಾಗಿ ಇ‌ಮೇಲ್ ಮಾಡಿದ್ದೆ

ಇ ಮೇಲ್ ನೋಡ್ತಾರೆ ಉತ್ತರಿಸುತ್ತಾರೆ ಎಂಬ ನಿರೀಕ್ಷೆ ನನಗೇನೂ ಇರಲಿಲ್ಲ 

ಆದರೂ ಮರು ಉತ್ತರ ಅವರ ಆಪ್ತ ಕಾರ್ಯದರ್ಶಿ ಯಿಂದ ಬಂತು.ಈ ಪರಿಸ್ಥಿತಿಯಲ್ಲಿ 

ಪುಸ್ತಕ ಮಾರಾಟವಾಗಲಾರದು.ವಿತರಣೆಗೆ ಮುನ್ನೂರು ಜನರ ಪಟ್ಟಿ ಇರಬೇಕು.ಮರು ಮುದ್ರಣ ಮಾಡಿದೆ ಅವಶ್ಯವಾಾದಲ್ಲಿ 500 ಪ್ರತಿ ಮರುಮದ್ರಣ ಮಾಡಬಹುದು ಇತ್ಯಾದಿ ಅಸಂಬದ್ಧ ? ಎಂದೆನಿಸಿದ ಉತ್ತರ ಬಂತು.ಅನುದಾನ‌ಕೊಡುದಿಲ್ಲ ಎಂಬ ಉತ್ತರ ಬಂದಿದ್ದರೆ ಬೇಜಾರು ಏನೂ ಇರುತ್ತಿರಲಿಲ್ಲ ಅವರ ದುಡ್ಡು ಅವರ ಇಷ್ಟ ‌.ಆದರೆ ಪುಸ್ತಕ ಮಾರಾಟ ಆಗಲಾರದು.ವಿತರಣೆಗೆ ಮುನ್ನೂರು ಜನರ ಪಟ್ಟಿ ಬೇಕು ಎಂದದ್ದು ನನಗೆ ತಾಗಿತ್ತು .ನನ್ನ 21 ವರ್ಷಗಳ ಅಧ್ಯಯನ ಗ್ರಂಥದ ಬಗ್ಗೆ ಇಷ್ಟು ಅನುಮಾನವೇ ? ಹೆಂಗಸೆಂದೇ ? ಪುಸ್ತಕ ನೋಡಿ ಮೆಚ್ಚಿದ್ದರೂಅವರೇ ಹೇಳಿದಂತೆ ಮರು ಮುದ್ರಣದಲ್ಲಿ  500 ಬಿಡಿ 50 ಪ್ರತಿಗಳನ್ನೂ ಖರೀದಿಸದ ಬಗ್ಗೆ ನನಗೆ ಇಂದಿಗೂ ಅಚ್ಚರಿ ಎನಿಸುತ್ತದೆ.ಎಲ್ಲರೂ ಹೇಳುವಂತೆ ಹೆಗ್ಗಡೆಯವರು ಇಂತಹ ಕೆಲಸಕ್ಕೆ ಅನುದಾನ ನೀಡುತ್ತಾರೆ .ಅನುದಾನ ಬಿಡಿ ಪುಸ್ತಕದ ಪ್ರತಿಗಳನ್ನು ಖರೀದಿಸದೇ ಇರಲು ಕಾರಣವೇನು ? ಅಲ್ಲಿನ ಪುಸ್ತಕ ವಿಭಾಗದ ಉಸ್ತುವಾರಿ ವಹಿಸಿರುವವರ ಕುತಂತ್ರವೇ ? ಈ ಬಗ್ಗೆ ಯಾರೋ ಏನೋ ಒಂದಷ್ಟು ಹೇಳಿದ್ದರೂ ದಾಖಲೆ ಇಲ್ಲ.ಆದರೂ ಇದಕ್ಕೂ ಮೊದಲು 2015 ರಲ್ಲಿಯೇ  ಆತ ಕಾರಣವಿಲ್ಲದೆ ಹಿಂದಿನಿಂದ ಕುತಂತ್ರ ಮಾಡಿರುವದ್ದು ಸ್ಪಷ್ಟವಾಗಿ ತಿಳಿದಿರುವ ಕಾರಣ ಆತನದೇ ಕಿತಾಪತಿ ಇರಬಹುದೆನಿಸ್ತದೆ.ಈ ಬಗ್ಗೆಯೂ ನಾನು ಇ ಮೇಲ್ ಮೂಲಕ ತಿೞಿಸಿದ್ದೆ.ಆತನಾರು ಎಂಬ ಕುತೂಹಲ ಇದೆಯಾ ? ನನ್ನ ಆತ್ಮ‌ಕಥೆಯಲ್ಲಿ ಆತನ ಹೆಸರು ಹಾಕಿ ಬರೆಯುವೆ ಖಂಡಿತಾ


ಅದಿರಲಿ ..ಮತ್ತೆ ವಿಷಯಕ್ಕೆ ಬರುವೆ 

ಆಗಷ್ಟೇ ಮನೆ ಕಟ್ಟಿದ್ದ ನಮಗೂ ಒಮ್ಮೆಲೇ ಪುಸ್ತಕ ಪ್ರಕಟಣೆಗೆ ಆರೇಳು ಲಕ್ಷ ಖರ್ಚು ಮಾಡುದು ಕಷ್ಟಕರ ಎನಿಸಿತು .ದೇವರು ದೊಡ್ಡವನು ನಮ್ಮ ಕೈ ಕೆಳಗಾಗದಂತೆ ಕಾಯ್ದನು ,ಕೊಟ್ಟವರ ಕೈ ಯಾವಾಗಲೂ ಮೇಲೆ ತಗೊಂಡವರ ಕೈ ಯಾವಾಗಲೂ ಕೆಳಗೆ.ಒಂದೊಮ್ಮೆ ಹೆಗ್ಗಡೆಯವರು ಅನುದಾನ ಕೊಡ್ತಿದ್ದರೆ ನಾವು ತಗೊಳ್ತಿದ್ದೆವು ನಮ್ಮ ಕೈ ಕೆಳಗಾಗುತ್ತಿತ್ತು ಆದರೆ ಹಾಗಾಗದಂತೆ ದೇವರೇ ಕಾಯ್ದಿರಬೇಕು ನಮ್ಮನ್ನು.

ಇಂತಹ ಸಮಯದಲ್ಲಿ ಸ್ನೇಹಿತರು pre publication offer ಕೊಡಲು ಸಲಹೆ ನೀಡಿದರು.

ಈ ಉಪಾಯ ಸಾಕಷ್ಟು ಯಶಸ್ವಿ ಆಯಿತು

ಸುಮಾರು 700 ಪುಸ್ತಕ ಪ್ತಿಂಟ್ ಗೆ ಮೊದಲೇ ಬುಕ್ ಆಯಿತು.ಆರಂಭದಲ್ಲಿ ಕಡಿಮೆಗೆ ಕೊಟ್ಟ ಕಾರಣ ನನ್ನ ಮೇಲೆ ನಂಬಿಕೆ ಇರಿಸಿ ಪುಸ್ತಕಕ್ಕೆ ಮುಂಗಡವಾಗಿ ಪಾವತಿಸಿ ಕಾದಿರಿಸಿದವರಿಗೆ ಕಡಿಮೆ ಬೆಲೆಗೆ ಸಿಕ್ತು ಕೂಡ.ನಮಗೂ ಫಂಡ್ ಬಂತು

ಮುಂದೆ ಮೊದಲ ಮುದ್ರಣದ ಪ್ರತಿಗಳು ಪುಸ್ತಕ ಬಿಡುಗಡೆಯಾದ ಕೆಲ ದಿನಗಳಲ್ಲಿ ಖಾಲಿಯಾದವು.

ಇನ್ನೇನು ಮರು ಮುದ್ರಣದತ್ತ ಯೋಚಿಸುವಷ್ಟರಲ್ಲಿ ಕಾಂತಾರ ಸಿನೆಮಾ ಬಂತು

ಪರಿಷ್ಕೃತ ಗೊಳಿಸಿ ಮಾಯ ಮತ್ತು ಜೋಗದ ಪರಿಕಲ್ಪನೆ ಸೇರಿಸಿ ಇನ್ನೂ ಒಂದಷ್ಟು ದೈವಗಳ ಮಾಹಿತಿ ಸೇರಿಸಿದಾಗ ಸೃಷ್ಟಿಯಾದ ಗ್ರಂಥ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ‌ಮೊಬೈಲ್ 9480516684

ಮೊದಲು ಪತ್ರದಲ್ಲಿ ತಿಳಿಸಿದಂತೆ ಈ ಪರಿಷ್ಕೃತ  ಮುದ್ರಣದ 500 ಪ್ರತಿಗಳನ್ನು ಖರೀದಿಸಬಹುದು ಎಂದುಕೊಂಡಿದ್ದೆ .ತಗೊಂಡಿಲ್ಲ.ಹಾಗೆಂದು ನಮಗೇನೂ ಸಮಸ್ಯೆ ಆಗಲಿಲ್ಲ ಯಾರೋ ತಗೊಂಡು ನಾವು ಉದ್ದಾರ ಆಗುತ್ತೇವೆ ಎಂದು ಅಲೋಚನೆ ಮಾಡಿ ನಾವು ಪ್ರಕಟಿಸಿದ್ದಲ್ಲ.ಆಸಕ್ತ ಜನರು ತಗೊಂಡಾರು ಎಂಬ ಭರವಸೆ ನಮಗಿತ್ತು‌.ಅದು ಹುಸಿಯಾಗಲಿಲ್ಲ.

ಈಗ ಮರು ಮುದ್ರಣದತ್ತ ದಾಪುಗಾಲು ಇಡುತ್ತಿದೆ 

ಇದರ ನಡುವೆ ಒಂದು ಗಮ್ಮತ್ತಿನ ವಿಷಯ ನಡೆಯಿತು  ಎಂತ ಗೊತ್ತುಂಟಾ?

ಲಕ್ಷಾಂತರ ಜನರಿಗೆ ದಾನ ನೀಡಿದ ನಾನಾ ದೇವಸ್ಥಾನ ದೇವಸ್ತಾನ ಗಳಿಗೆ ಕೋಟ್ಯಂತರ ರುಪಾಯಿ ಅನುದಾನ ನೀಡಿದ ವೀರೇಂದ್ರ ಹೆಗ್ಗಡೆಯವರಿಗೆ ಅವರ ಕೋರಿಕೆಯಂತೆ  ನಾನು  ಗೌರವ ಪ್ರತಿ(ಉಚಿತವಾಗಿ) ಪುಸ್ತಕವನ್ನು ನೀಡಿದ್ದೇನೆ  .

ಒಂದು ದಿನ ಅವರ ಸಹಸಯಕರಾದ ಪವನ್ ಎಂಬವರು ಕರೆ ಮಾಡಿ ಹೆಗ್ಗಡೆಯವರು ನಿಮ್ಮ ಪುಸ್ತಕ ಓದಲು ಬಯಸಿದ್ದಾರೆ ಎಲ್ಲಿ ಸಿಗುತ್ತದೆ ಎಂದು ವಿಚಾರಿಸಿದ್ದರು.ಆಗ ಈ ಪುಸ್ತಕ ಪುಸ್ತಕ ಮಳಿಗೆಗಳಲ್ಲಿ ಸಿಗುತ್ತಿರಲಿಲ್ಲ.ಹಾಗಾಗಿ ನಾವೇ ಕಳುಹಿಸ್ತೇವೆ ಎಂದು ಅಡ್ರೆಸ್ ಪಡೆದು ಗೌರವ ಪ್ರತಿ ಕಳುಹಿಸಿದೆ.ತಲುಪಿದ ನಂತರ ಪುಸ್ತಕದ ಬಗ್ಗೆ ಮೆಚ್ಚುಗೆಯ ನುಡಿ ತಿಳಿಸಿ ಪುಸ್ತಕದ ಜೊತೆಗೆ ಫೋಟೋ ವನ್ನೂ ಕಳುಹಿಸಿ ಕೊಟ್ಟಿದ್ದರು.

ಲಕ್ಷಂತರ  ಜನರಿಗೆ ದಾನ ನೀಡಿದವರಿಗೆ ಗೌರವ ಪ್ರತಿ ನೀಡಿದ ಗೌರವ ನನ್ನದಾಯಿತು .ನನ್ನ ಕೈ ಮೇಲಾಗಿಯೇ ಉಳಿಯಿತು. ಅವರು ಒಂದೊಮ್ಮೆ ಪುಸ್ತಕ ಓದಿದ ನಂತರವಾದರೂ ಮರು ಮುದ್ರಣಕ್ಕೆ ಅನುದಾನ ನೀಡಿರುತ್ತಿದ್ದರೆ ಅಥವಾ ಸವರ ಆಪ್ತ ಸಹಾಯಕರ ಪತ್ರದಲ್ಲಿ ಇರುವಂತೆ 500 ಪುಸ್ತಕ ಖರೀದಿಸುತ್ತಿದ್ದರೆ ಈ ಹೆಮ್ಮೆ ನನ್ನದಾಗಿ ಇರುತ್ತಿರಲಿಲ್ಲ

ಅದು ಸರಿ ಅವರ ಪತ್ರದಲ್ಲಿ ಒಂದು ಸಾಲು ಈವತ್ತಿಗೂ ನನಗೆ ಅರ್ಥ ಆಗುತ್ತಿಲ್ಲ.ವಿತರಣೆಗೆ ಮುನ್ನೂರು ಜನರ ಪಟ್ಟಿ ಬೇಕು ಎಂಬುದು ಆ ಸಾಲು..ಏನರ್ಥ ಈ ವಾಕ್ಯದ್ದು..ಒಂದೊಮ್ಮೆ ಅವರು ಅನುದಾನ ನೀಡಿದರೆ ಮುನ್ನೂರು ಜನರಿಗೆ ನಾವು ಕಖುಹಿಸಬೇಕೆಂದಾ ? ಯಾರಿಗೆ ವಿತರಿಸುದು ? ಯಾಕೆ ? ಅನುದಾನ ಕೊಡುದು ಪ್ರಕಟಣೆಗೆ ತಾನೇ ? ಅದಕ್ಕೆ ಮುನ್ನೂರು ಜನರ ಪಟ್ಟಿ ಯಾಕೆ ? 

ಹೆಣ್ಣು ಹೆಂಗಸು ಬರೆದ ಪುಸ್ತಕವನ್ನು ಜನ ಓದಲಾರರು.ಅದಕ್ಕೆ ಉಚಿತವಾಗಿ ವಿತರಿಸಲು ಮುನ್ನೂರು ಜನರ ಪಟ್ಟಿ ಬೇಕೆಂಬ ಭಾವ ಇದ್ದಿರಬಹುದಾ? 

ದೊಡ್ಡವರು ಏನು ಹೇಳಿದ್ದೆಂದು ನನಗೆ ಈಗಲೂ ಅರ್ಥ ಆಗುತ್ತಿಲ್ಲ ಈಗ ಮರುಮುದ್ರಣ (ಮೊದಲನೆಯದನ್ನು ಪರಿಗಣಿಸಿದರೆ ಮೂರನೆಯ ಮುದ್ರಣಕ್ಕೆ) ಸಿದ್ದವಾಗಿದೆ. ಎಲ್ಲರ ಊಹೆಯನ್ನು ಮಾತ್ರವಲ್ಲ ನನ್ನ ನಿರೀಕ್ಷೆಯನ್ನು ಕೂಡ ತಲೆಕೆಳಗು ಮಾಡಿ ಬೇಡಿಕೆಯನ್ನು ಪಡೆದಿದೆ

ಅನೇಕರು ಪುಸ್ತಕದ ಬೆಲೆ 2000₹ ಹೆಚ್ಚಾಯಿತು ಎಂದಿದ್ದರು.ಇನ್ನೂ ಕೆಲವರಿಗೆ ಪುಸ್ತಕ ಬೇಕೆಂದಿದ್ದರೂ 2000₹ ಹೊಂದಿಸುದು ಕಷ್ಟ ಆಗಿತ್ತು

ಈಗ ಈ ಸಮಸ್ಯೆ ಗೆ ಇಲ್ಲಿ ಪರಿಹಾರ ಇದೆ 

ಮರು ಮುದ್ರಣಕ್ಕೆ ಮತ್ತೆ pre publication offer ಇದೆ .ಕಡಿಮೆ ಬೆಲೆಗೆ ಉತೃಷ್ಟ ಗುಣಮಟ್ಟದ ಕನ್ನಡ ತುಳು ಮಲೆಯಾಳ ಕೊಡವ ಪರಿಸರದ 1253 ದೈವಗಳ ಮಾಹಿತಿ ಇರುವ ಪುಸ್ತಕ ಪಡೆಯಲು ಇದು ಸುವರ್ಣಾವಕಾಶ ..

ಇನ್ನೊಂದು ಸಂತಸದ ವಿಚಾರ ಏನೆಂದರೆ ಇದರ ಇಂಗ್ಲಿಷ್ ಆವೃತ್ತಿ ಕೂಡ ಪ್ರಕಟಣೆಗೆ ಸಿದ್ದವಾಗಿದೆ.ಒಂದೆರಡು ತಿಂಗಳೊಳಗೆ ಕೈಸೇರಲಿದೆ .ಇದಕ್ಕೂ pre publication offer ಲಭ್ಯವಿದೆ .

ಯಾವುದೇ ಯೂನಿವರ್ಸಿಟಿ ಸಂಘ ಸಂಸ್ಥೆಗಳ ಒಂದು ಪೈಸೆ ಅನುದಾನ ಪಡೆಯದೇ ಇಂತಹದೊಂದು ಗ್ರಂಥ ಪ್ರಕಟವಾಗಿ ಯಶಸ್ಸು ಪಡೆದುದಲ್ಲದೆ ಇಂಗ್ಲಿಷ್ ಅವತರಣಿಕೆಯೂ ಸಿದ್ದವಾಗಿ ದೆ ಎಂದರೆ ಇದು ದೈವ ದೇವರುಗಳ ಕೃಪೆ ಅಲ್ಲದೇ ಬೇರೇನೂ ಅಲ್ಲ ಎಂದು ನನಗನಿಸುತ್ತದೆ .ಇಂತಹ ಸೋಜಿಗಗಳ ಬಗ್ಗೆ ಹೇಗೆ ತಾನೇ ಬರೆಯದಿರಲಿ.ಆತ್ಮ‌ಕಥೆ ಬೆಳೆಯುತ್ತಿದೆ 

ನನ್ನಬರಹಗಳ ಅಭಿವ್ಯಕ್ತಿಯಲ್ಲಿ ಪುಸ್ತಕಕ್ಕೆ ಪ್ರಚಾರ ನೀಡುವಲ್ಲಿ ನನಗೆ ಸದಾ ಬೆಂಬಲ ನೀಡಿದ್ದು ನೇರವಾಗಿ ಎಂದೂ ನೋಡಿರದ fb ಸ್ನೇಹಿತರು.

ಹಾಗಾಗಿ ಮತ್ತೆ ನಿಮ್ಮೆಲ್ಲರ ಬೆಂಬಲ ಇರಲಿ ಎಂದು ಅಪೇಕ್ಷಿಸುವೆ - ಡಾ‌.ಲಕ್ಷ್ಮೀ ಜಿ ಪ್ರಸಾದ್, ಮೊಬೈಲ್ 9480516684:

Monday, 15 December 2025

ಆತ್ಮ‌ಕಥೆಯ ಬಿಡಿ ಭಾಗಗಳು

 ಆತ್ಮ ಕಥೆಯ ಬಿಡಿ ಭಾಗಗಳು


ಪೇಟೆಯಲ್ಲಿ ಬಾಡಿಗೆ ಮನೆಯೇ ಸಿಗುವುದಿಲ್ಲ ಎಂದಿದ್ದರು..


ಹೌದು  31 ವರ್ಷಗಳ ಹಿಂದೆ  ನಾನಿದನ್ನು ಸತ್ಯವಾಗಿಯೂ ನಂಬಿದ್ದೆ.ಬಾಡಿಗೆಗೆ ಮನೆ ಸಿಗದಿದ್ದರೇನು ಮಾಡುವುದು ಎಂದು ತುಂಬಾ ಆತಂಕಕ್ಕೆ ಒಳಗಾಗಿದ್ದೆ 

ಎರಡನೆಯ ವರ್ಷ ಪದವಿ ಓದುತ್ತಿರುವಾಗ ಮದುವೆಯಾಯಿತು‌ ಅಂತಿಮ ವರ್ಷ ಅಂತೂ ಆಡಿಕೂಡಿ ಡೋಲಾಯಮಾನ ಸ್ಥಿತಿಯಲ್ಲಿಯೇ ಕಳೆಯಿತು

ಮುಂದೇನು ? ಎಂಬ ಪ್ರಶ್ನೆ ನನ್ನೆದುರು ಬೃಹದಾಕಾರವಾಗಿ ಬೆಳೆದು ನಿಂತು ಕಾಡುತ್ತಿತ್ತು

ಬಿಎಸ್ ಸಿ ಓದುವಾಗ ಅಂತಹ ಜಾಣೆ ನಾನಾಗಿರಲಿಲ್ಲ.ಆದರೆ ಹತ್ತನೆಯ ತರಗತಿ ತನಕ ಜಾಣ ವಿದ್ಯಾರ್ಥಿನಿಯೆಂದೇ ಗುರುತಿಸಿಕೊಂಡವಳು ನಾನು

ನಂತರ ವಿಜ್ಣಾನ ನನಗೆ ಕಷ್ಟವಾಯಿತೋ ಇಂಗ್ಲಿಷ್ ಬಾರದೆ ಪಾಠ ತಲೆಗೇ ಹೋಗದೆ ಕಲಿಕೆಯಲ್ಲಿ ಹಿಂದುಳಿದೆನೋ ಗೊತ್ತಿಲ್ಲ

ಆದರೂ ಬಿಎಸ್ ಸಿಯಲ್ಲಿ ಒಂದೇ ಒಂದು ವಿಷಯದಲ್ಲಿ ಅನುತ್ತೀರ್ಣಳಾಗಿರಲಿಲ್ಲ

ಮುಂದೆ ಎಂ ಎಸ್ಸಿ ಆಗದೆಂದು ಅನಿಸಿತ್ತು.ಮತ್ತೆ ಆರ್ಟ್ಸ್ ತಗೊಂಡರೆ ರ‌್ಯಾಂಕ್ ತೆಗೆದು ಯಶಸ್ವಿಯಾದೇನೆಂಬ ಆತ್ಮವಿಶ್ವಾಸ ನನಗಿತ್ತು

ಹಾಗಾಗಿಯೇ ಕಟೀಲಿನಲ್ಲಿ ಸಂಸ್ಕೃತ ಎಂಎ ಗೆ ಸೇರಲು ನಿರ್ಧರಿಸಿದೆ

ಕೋಡ ಪದವು ಸಮೀಪದ ನಮ್ಮ ಮನೆಯಿಂದ ಕಟೀಲಿಗೆ ನಿತ್ಯ ಹೋಗಿ ಬರುವದ್ದು ಆಗದ ಮಾತು ಜೊತೆಗೆ ಉನ್ನತ ಕಲಿಕೆಗೆ ಮನೆ ಮಂದಿ ಬಂಧು ಬಳಗದವರಿಂದ ತೀವ್ರ ವಿರೋಧವಿತ್ತು

ಆದರೂ ನಾನು ನನ್ನ ಮೈದುನನಿಗೆ ' ನಾನು ಓದಿ ಒಳ್ಳೆಯ ಕೆಲಸ ಹಿಡಿದರೆ ನಮಗೆ ಆಸ್ತಿಯಲ್ಲಿ ಪಾಲು ಬೇಕಾಗಿ ಬರಲಾರದು.ಇಲ್ಲಿಯೇ ಇದ್ದು ಇರುವ ತುಂಡು ಭೂಮಿಯನ್ನು ಹಂಚಿಕೊಂಡು ತಲೆಗೆಳೆದರೆ ಕಾಲಿಗೆ ಬರದಂತಹ ಬದುಕು ಯಾಕೆ ? ಹಾಗಾಗಿ ನನ್ನ ಕಲಿಕೆಗೆ ವಿರೋಧವೇಕೆ ಎಂದಿದ್ದೆ

ಆಗಿನ ಕಾಲಘಟ್ಟ.ಹೇಳಿಕೊಡುವವರು ಅನೇಕರಿದ್ದರು

ಹಾಗಾಗಿ ವಿರೋಧ ಶಮನವಾಗಲಿಲ್ಲ.ಮನೆ ಮಂದಿ ಬಂಧು ಬಳಗವನ್ನು ಎದುರು ಹಾಕಿಕೊಂಡು ಮುಂದೆ ಓದಲು ನಿರ್ಧರಿಸಿದೆ

ಪ್ರಸಾದರನ್ನು ಒಪ್ಪಿಸಿದೆ

ಆಗ ಮೊದಲ ಬಾರಿಗೆ ಬಾಡಿಗೆ ಮನೆಗೆ ಹೋಗಬೇಕಾದ ಪ್ರಸಂಗ ಬಂತು.ಆಗ ನಮ್ಮ ನೆರೆಕರೆಯ ಮಂದಿಯ ಮಕ್ಕಳು ಮಂಗಳೂರಿನಲ್ಲಿದ್ದರು.ಅವರೆಲ್ಲ ಪೇಟೆಯಲ್ಲಿ ಬಾಡಿಗೆಗೆ ಮನೆಯೇ ಸಿಗುವುದಿಲ್ಲ ಎಂದಿದ್ದರು.ಪೇಟೆಯ ಅರಿವಿಲ್ಲದ ನಾನೂ ಇದು ಇರಬಹುದೇನೋ ಎಂದು ಭಯ ಪಟ್ಟಿದ್ದೆ

ಅದೃಷ್ಟವಶಾತ್ ನಮ್ಮ ಆದಾಯಕ್ಕೆ ಸರಿ ಹೊಂದುವ ಮಣ್ಣಿನ ಮೋಟು ಗೋಡೆಯ ಒಂದು ಕೊಠಡಿಯ ಮನೆ ನಮಗೆ ಕಟೀಲು ಸಮೀಪದ ಎಕ್ಕಾರಿನ ನಾಗವೇಣಿ ಅಮ್ಮನವರು ಒದಗಿಸಿದರು.

ನಂತರ ಒಂದು ವರ್ಷದೊಳಗೆ ಪ್ರಸಾದರಿಗೆ ಒಳ್ಳೆಯ ಕೆಲಸ ಸಿಕ್ತು. ನನ್ನ ಸೋದರ ಮಾವಂದಿರ ಪರಿಚಯದಲ್ಲಿ ಮಂಗಳೂರಿನ ವಿಜಯ ಪೆನ್ ಮಾರ್ಟ್ ( ಪೆನ್ನಿನ ಅಂಗಡಿಯ )ಶಾಮಣ್ಣನ  ಸಹಾಯದಿಂದ ಮಂಗಳೂರಿನ ವಿಜಯ ನಿವಾಸದ ಬಾಡಿಗೆ ಮನೆ ಸಿಕ್ತು 


ಮತ್ತೊಂದು ವರ್ಷದಲ್ಲಿ ಬಿಜೈ ಯಲ್ಲಿ ಶ್ರೇಯಸ್ ಅಪಾರ್ಟ್ ಮೆಂಟಿನಲ್ಲಿ ಒಂದು ಮನೆಯನ್ನು ಖರೀದಿಸಿದೆವು.

ಮುಂದೆ ಬೆಂಗಳೂರಿಗೆ ಶಿಪ್ಟ್ ಆಗುವಾಗ ಇದನ್ನು ಮಾರಾಟ ಮಾಡಿದೆವು


ಮಂಗಳೂರಿನಲ್ಲಿರುವಾಗಲೇ 2002-03 ರಲ್ಲಿ ಬೆಂಗಳೂರಿನ ಈಗಿನ ಸೈಟಿನಲ್ಲಿ ಸಣ್ಣದೊಂದು ಮನೆ ಕಟ್ಟಿಸಿದ್ದೆವು

2007 ರಿಂದ 2019 ರ ವರೆಗೆ ಅದೇ ಸಣ್ಣ ಮನೆಯಲ್ಲಿ ಇದ್ದೆವು‌ ನಂತರ ಅದನ್ನು ರಿನೊವೇಟ್ ಮಾಡಿ ಈಗಿನ ಮನೆಯ ಸ್ವರೂಪಕ್ಕೆ ತಂದೆವು.


ಇಷ್ಟಾಗಿಯೂ ಊರಲ್ಲಿ ನನಗೆ ಮನೆ ಇಲ್ಲ ಎಂಬ ಕೊರಗು ಸದಾ  ಕಾಡುತ್ತಿತ್ತು.ಹಾಗಾಗಿ ನವ ಚೇತನ ಟೌನ್ ಶಿಪ್ ನಲ್ಲಿ ಸಣ್ಣದೊಂದು ಮನೆ ತಗೊಂಡು  ಒಕ್ಕಲು ಮಾಡಿದೆವು.


ಸಧ್ಯಕ್ಕೆ ಊರ ಕಡೆ ಶಿಪ್ಟ್ ಆಗುವ ಯೋಚನೆ ಇಲ್ಲ.ಎಂದಾದರೂ ಹೋಗುವುದಾದರೆ ಇರಲಿ ಎಂದೆನಿಸ್ತು.ನವ ಚೇತನ ಟೌನ್ ಶಿಪ್ ನ ಸುವ್ಯವಸ್ಥೆ ನೋಡಿ ಖುಷಿಯಾಗಿ ತಗೊಂಡೆವು


ನಾವು ಮನೆ ಬಿಟ್ಟು ಹೊರ ನಡೆದ ನಂತರ ತಗೊಂಡ/ ಕಟ್ಟಿಸಿದ ನಾಲ್ಕನೆಯ ಮನೆ ಇದು.


ಯಾಕೋ 30  ವರ್ಷಗಳ ಹಿಂದೆ ನಮ್ಮ ನೆರೆಕರೆಯವರೊಬ್ಬರು ಪೇಟೆಯಲ್ಲಿ ಮನೆ ಬಾಡಿಗೆಗೇ ಸಿಗುವುದಿಲ್ಲ ಎಂದು ಹೆದರಿಸಿದ್ದು ನೆನಪಾಯಿತು 


ಬಾಡಿಗೆಗೆ ಮಾತ್ರವಲ್ಲ.ಇರಲು ಅಂಗೈ ಅಗಲದಷ್ಟಾದರೂ  ಮನೆ ಎಂಬ ಸ್ವಂತ ಸೂರನ್ನು ಒದಗಿಸಿದ ದೈವ ದೇವರುಗಳ ಕೃಪೆ ಅಪಾರ 🙏


 ಗಂಡ ಹೆಂಡತಿ ಇಬ್ಬರೂ ದುಡಿದು ಆಡಂಬರವಿಲ್ಲದೆ ಸರಳವಾಗಿ ಬದುಕಿದರೆ ಸಣ್ಣದೊಂದು ಮನೆ ಕಟ್ಟಿಕೊಳ್ಳುದು ತೀರ ಅಸಾಧ್ಯವಾದುದಲ್ಲ

.ಆದರೆ ಹೆಚ್ಚಿನ ಜನರು ತುಸು ಆದಾಯ ಬರುವಷ್ಟರಲ್ಲಿ ಆಡಂಬರದ ಬದುಕಿಗೆ ಮಾರು ಹೋಗಿ ಬೆಲೆಬಾಳುವ  ಕಾರು ಗೀರು ರಾಯಲ್ ಎನ್ಪೀಲ್ಡ್ ಬೈಕು ಐಫೋನ್ ಮೊದಲಾದವುಗಳ ಅಗತ್ಯವಿಲ್ಲದೇ ಇದ್ದಾಗಲೂ ಅವರಿವರಲ್ಲಿ ಇದೆ ಎಂದು ತಗೊಳ್ತಾರೆ.ಬಾಹ್ಯಾಡಂಬರದ ಶೋಕಿಯ ದೊಡ್ಡ ಬಾಡಿಗೆ ಮನೆಗೆ ಹೋಗ್ತಾರೆ .ವಿಪರೀತ ಸೀರೆ ಡ್ರೆಸ್ ಗಳನ್ನು ತಗೊಳ್ತಾರೆ ಆಗ ಅವರಲ್ಲಿ ದುಡ್ಡು ಉಳಿಯುವುದೇ ಇಲ್ಲ. 


ನನ್ನ ಕೆಲವು ವಿದ್ಯಾರ್ಥಿಗಳು 30-35,000₹ ವೇತನದ ಕೆಲಸ ಸಿಗುತ್ತಲೇ ಹೆಚ್ಚು ಬೆಲೆಯ ಕಾರು  ಐಫೋನ್ ತೆಗೆದುಕೊಳ್ಳುದನ್ನು ಗಮನಿಸಿದ್ದೇನೆ.ಹೀಗೆ ಬಾಹ್ಯಾಡಂಬರದ ವಸ್ತುಗಳ ಹಿಂದೆ ಹೋದರೆ ಇವರು ಮನೆ ತಗೊಳ್ಳಲು ದುಡ್ಡು ಉಳಿಸುದು ಹೇಗೆ ಎಂದೆನಿಸಿತ್ತು ನನಗೆ‌


ಬದಲಿಗೆ ಸಣ್ಣ ಮನೆಯಲ್ಲಿದ್ದುಕೊಂಡು ಸರಳವಾಗಿ ಬದುಕಿ ವ್ಯವಸ್ಥಿತವಾಗಿ ಉಳಿತಾಯ ಮಾಡಿಕೊಂಡು ಬಂದರೆ ಒಂದಷ್ಟು ಸಾಲ ಮಾಡಿ ಮನೆ ಕಟ್ಟಿಕೊಳ್ಳಬಹುದು‌.

ಇರಲು ಮನೆ ಆದರೆ ನಂತರ ನಿದಾನಕ್ಕೆ ಕಾರು ಗೀರಿನಂಥಹ ಆಡಂಬರದ ವಸ್ತುಗಳನ್ನು ತೆಗೆದುಕೊಳ್ಳಬಹುದು

ಇದು ನನ್ನ ಅಭಿಪ್ರಾಯ 

ಎಲ್ಲರೂ ಹೀಗೆಯೇ ಯೋಚಿಸಬೇಕಿಲ್ಲ..ಲೋಕೋ ಭಿನ್ನರುಚಿಃ ಅಲ್ಲವೇ

.ಅಂದ ಹಾಗೆ ನಾನು ಅಂದು ಹೇಳಿದ  ಕಲಿತು ಒಳ್ಳೆಯ ಕೆಲಸ ಸಿಕ್ಕರೆ ನಮಗೆ ಪಿತ್ರಾರ್ಜಿತವಾಗಿ ಬಂದ ಆಸ್ತಿಯಲ್ಲಿ ಪಾಲು ಬೇಡ ಹಂಚಿಕೊಂಡು ತುಂಡು ಮಾಡುವುದೇಕೆ ಎಂಬ ಮಾತಿಗೆ ಈಗಲೂ ಬದ್ಧಳಿದ್ದೇನೆ ,ನಾವು ಪಾಲು ತೆಗೆದುಕೊಂಡಿಲ್ಲ.

ಆತ್ಮ‌ಕಥೆಯ ಬಿಡಿ ಭಾಗಗಳು 50

 ಆತ್ಮ‌ಕಥೆಯ ಬಿಡಿ ಭಾಗಗಳು


ಯಾರೆಲ್ಲ ಸಣ್ಣಾಗಿರುವಾಗ ಬಜೆಂಟು  ಹೆಕ್ಕಿದ್ದೀರಿ? 


ಪಾಸಾದರೆ ಶಾಲೆ ಇಲ್ಲವಾದರೆ ಬಜಂಟು ಹೆಕ್ಕುವ ಖಾಯಂ ಕಾಯಕ 


ಎಪ್ರಿಲ್ ಹತ್ತರ  ಪಾಸು ಫೇಲಿನ ದಿನವೆಂಬ ಭಯ ಆತಂಕದ ದಿನ ಇದರ ನಿರ್ಧಾರ ಆಗುತ್ತಿತ್ತು‌.


ಹೌದು..ಪ್ರತಿವರ್ಷ ಎಪ್ರಿಲ್ ಹತ್ತಕ್ಕೆ ನಮ್ಮ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಶಾಲೆಯ ಬೋರ್ಡ್ ನಲ್ಲಿ ಹಾಕ್ತಿದ್ದರು.ಎಪ್ರಿಲ್  ಮೊದಲ ದಿನಾಂಕದಿಂದಲೇ ಎದೆಯಲ್ಲಿ ಅವಲಕ್ಕಿ ಕುಟ್ಟಲು ಶುರುವಾಗುತ್ತಿತ್ತು.ಪಾಸ್ ಪೇಲ್ ದಿನ ಹತ್ತಿರ ಬಂದ ಹಾಗೇ ಊಟ ತಿಂಡಿ ಸೇರುತ್ತಿರಲಿಲ್ಲ.ನಮ್ಮಂತೆಯೇ ನಮ್ಮ ಹೆತ್ತವರಿಗೂ ಇದೇ ಆತಂಕ.

ಚೆನ್ನಾಗಿ ಕಲಿಯದವರನ್ನು ಫೇಲಾದವರನ್ನು "ಹೋಗು ಬಜೆಂಟ್ ಹೆರ್ಕು " ಎಂದು ಬೈಉವ ವಾಡಿಕೆ ಇತ್ತು.ಆದರೆ ಪಾಸಾಗುತ್ತಿದ್ದ ನಾವು ಕೂಡ ಬೇಸಗೆಯಲ್ಲಿ ಬಜಂಟ್ ಹೆಕ್ಕುತ್ತಿದ್ದೆವು.

ಬಜಂಟು ಎಂದರೆ ಒಣ ಸೆಗಣಿ.ಬೇಸಗೆಯ ಸಮಯದಲ್ಲಿ ನಾವು‌ಮಕ್ಕಳೆಲ್ಲ ಗುಡ್ಡವೆಲ್ಲ ಬಜೆಂಟಿಗಾಗಿ ಹುಡುಕುತ್ತಿದ್ದೆವು.ಮೇಯಲು ಬಿಟ್ಟ ಹಸುಗಳು ಹಾಕಿದ ಒಣ ಸೆಗಣಿ ಸಿಕ್ತಾ ಇತ್ತು.

ಇದನ್ನು ಮಳೆಗಾಲದಲ್ಲಿ ಒಲೆ ಉರಿಸಲು ಬಳಸುತ್ತಾ ಇದ್ದರು.

ನಾವು ಏಳೆಂಟು ಸಮ ವಯಸ್ಸಿನ ಮಕ್ಕಳು ಒಂದೊಂದು ಗೋಣಿ ಚೀಲ ಹಿಡಿದುಕೊಂಡು ಬಜಂಟು ಹೆಕ್ಕಲು ಹೋಗುತ್ತಿದ್ದೆವು.ಅದು ನಮಗೆ ಬೇಸರ ತರುವ ಕೆಲಸವಾಗಿರಲಿಲ್ಲ.ಗುಡ್ಡಗಾಡಿನ ಚೂರಿ ಮುಳ್ಳಿನ ಹಣ್ಣ ಮುಳ್ಳಣ್ಣು ಕಿಸ್ಕಾರದ ಹಣ್ಣು ಚಬುಳಕ ಮೊದಲಾದ  ಕಾಡು ಹಣ್ಣುಗಳನ್ನು ಅಯ್ದು ತಿಂದುಕೊಂಡು ಕಾಡು ಹರಟೆ ಹೊಡೆದುಕೊಂಡು ಬಹಳ ಖುಷಿಯಿಂದ ಈ ಕೆಲಸ ಮಾಡ್ತಿದ್ದೆವು ಎಂಬುದು ಬೇರೆ ವಿಚಾರ.

ಅಕಸ್ಮಾತ್ತಾಗಿ ಐರೋಳು ಬಳ್ಳಿ ,ಕಾನಕಲ್ಲಡೆ ಕಾಯಿ ಸಿಕ್ಕರೆ ಬಹಳ ಸಂಭ್ರಮ ನಮಗೆ

ಅದರೂ ಫೇಲಾದವರು ಬಜಂಟು ಹೆಕ್ಕಲು ಲಾಯಕ್ಕು ಎಂಬ ಮಾತು ಆಗ ಇತ್ತು ಈಗ ಈ ಬಜೆಂಟಿಗೆ cow dung cake ಎಂಬ ಚಂದದ ಹೆಸರಿದೆ.ಸಿಕ್ಕಾಪಟ್ಟೆ ಬೆಲೆಯೂ ಇದೆ 


ಇರಲಿ


ಆಗೆಲ್ಲ ಫೇಲ್ ಆದರೆ ಮರು ಪರೀಕ್ಷೆ ಇರುತ್ತಿರಲಿಲ್ಲ.ಮತ್ತೆ ಒಂದು ವರ್ಷ ಅದೇ ತರಗತಿಯಲ್ಲಿ ಇರಬೇಕು.ಅದು ನಮಗೆ ಬಹಳ ಅವಮಾನಕರ ವಿಚಾರ.ಹಾಗಾಗಿ ಪಾಸಾಗದಿದ್ದರೆ ಎಂಬ ಆತಂಕ ಕಾಡುತ್ತಿತ್ತು.


ಕೆಲವೊಮ್ಮೆ ಜಾಣ ಮಕ್ಕಳಿಗೆ ಏನಾದರೂ ಆರೋಗ್ಯ ಸಮಸ್ಯೆ ಉಂಟಾಗಿ ವಾರ್ಷಿಕ ಪರೀಕ್ಷೆಗೆ ಹಾಜರಾಗಲು ಆಗದಿದ್ದರೆ ಅವರೂ ಕೂಡ ಫೇಲ್ .ನಂತರದ ಒಂದು ವರ್ಷ ಅದೇ ತರಗತಿಯಲ್ಲಿ ಕುಳಿತುಕೊಳ್ಳಬೇಕು.


ಈ ಅವಮಾನ ಸ್ವೀಕರಿಸಲು ತಯಾರಿಲ್ಲದ ಮಕ್ಕಳ ವಿದ್ಯಾಭ್ಯಾಸ ಇದೇ ಕಾರಣಕ್ಕಾಗಿ ಅಲ್ಲಿಗೇ ನಿಂತು ಹೋಗುತ್ತಿತ್ತು.


ನನಗೆ ನೆನಪಿನಲ್ಲಿರುವಂತೆ ನನ್ನ ಸಹಪಾಠಿಗಳಾಗಿದ್ದ  ಇಬ್ಬರು ಜಾಣ ವಿದ್ಯಾರ್ಥಿಗಳ ಶಿಕ್ಷಣ ಹೀಗೆ ಅರ್ಧದಲ್ಲಿಯೇ ಮೊಟಕಾಗಿತ್ತು


ಒಂದು ನನ್ನ ಬಾಲ್ಯ ಸ್ನೇಹಿತೆ ಯಶೋದಾಳದು.ಅವಳು ಎಂಟನೇ ತರಗತಿಯ ಅಂತಿಮ /ವಾರ್ಷಿಕ ಪರೀಕ್ಷೆಯಲ್ಲಿ ಒಂದೆರಡು ವಿಷಯಗಳಿಗೆ ಗೈರು ಹಾಜರಾಗಿದ್ದಳು.


ಅವಳೂ ನಾನೂ ಒಟ್ಟಿಗೆ ಕೋಳ್ಯೂರಿನಿಂದ ಕೊಡ್ಲಮೊಗರಿನ ವಾಣಿವಿಜಯ ಪ್ರೌಢಶಾಲೆಗೆ  ನಡೆದುಕೊಂಡು ಹೋಗಿ ಬರುತ್ತಿದ್ದೆವು.ಎರಡು ಗುಡ್ಡ ಹತ್ತಿ ಇಳಿಯಬೇಕು.ಸುಮಾರು ನಾಲ್ಕೈದು ಮೈಲು ನಡೆಯಬೇಕಿತ್ತು.


ಅಗಿ‌ನ್ನೂ ನನಗೆ ಸರಿಯಾಗಿ ನೆನಪಿದೆ

ಸುಮಾರು ಎಂಟು ಎಂಟೂವರೆ ಗಂಟೆ ಹೊತ್ತಿಗೆ ಅವಳು ನಮ್ಮ ಮನೆಗೆ ಬರ್ತಿದ್ದಳು.ಅವಳನ್ನೇ ಕಾಯುತ್ತಿರುವ ನಾನು ಕೂಡಲೇ ಮೆಟ್ಟಿಳಿದು ಮನೆಯ ಗದ್ದೆಯ ಬದುವಿನಲ್ಲಿ ಸಾಗಿ.ತೋಡಿನ ಸಂಕ ದಾಟಿ ಅಂಗಡಿ ಎದುರು ಎತ್ತರಕ್ಕೆ ಹತ್ತಿ ಸಾಗುತ್ತಿದ್ದೆವು.

 1986 ಮಾರ್ಚ್ ಕೊನೆಯ ವಾರ.ಪ್ರೌಢ ಶಾಲೆಯಲ್ಲಿ ಅಂತಿಮ ಪರಿಕ್ಷೆಗಳು ನಡೆಯುತ್ತಿದ್ದವು.

.ನಮಗೆ ಆಗ ಹನ್ನೆರಡು ಪರೀಕ್ಷೆಗಳಿದ್ದವು.ಕನ್ನಡ ಎರಡು ಪತ್ರಿಕೆಗಳು,ವಿಜ್ಞಾನ ಮೂರು ಪತ್ರಿಕೆಗಳು,ಗಣಿತ ಎರಡು ಪತ್ರಿಕೆಗಳು ,ಸಮಾಜ ಶಾಸ್ತ್ರ ಎರಡು ಪತ್ರಿಕೆಗಳು ,ಹಿಂದಿ ಒಂದು ಪತ್ರಿಕೆ.


ಕೊನೆಯ ಒಂದೆರಡು ಪರೀಕ್ಷೆಗಳು ಉಳಿದಿದ್ದವು

ಆ ದಿನ ಯಶೋಧಾ ಎಂಟೂವರೆ ಕಳೆದರೂ ನಮ್ಮ‌ಮನೆಗೆ ಬಂದಿರಲಿಲ್ಲ.ಅವಳ ಮನೆಯಿಂದ ಶಾಲೆಗೆ ಹೋಗುವ ದಾರಿಯಲ್ಲಿ ನಮ್ಮ ಮನೆ ಇತ್ತು.


ಅವಳು ಬಾರದ ಕಾರಣ ನಾನೇ ಅವಳ ಮನೆಗೆ ಹೋದೆ.ಅವಳು ಚಳಿಗೆ ನಡುಗುತ್ತಾ ಕಂಬಳಿ ಹೊದ್ದು ಮಲಗಿದ್ದಳು.

"ನಮ್ಮ ಯಶೋಧೆಗೆ  ಮೈಯಲ್ಲಿ ಬಿದ್ದಿದೆ( ಚಿಕನ್ ಪಾಕ್ಸ್ ) .ಅವಳು ಪರೀಕ್ಷೆಗೆ ಬರುದಿಲ್ಲ‌.ನೀನು ಹೋಗು ವಿದ್ಯಾ ,( ನನ್ನನ್ನು ಮನೆಯಲ್ಲಿ,ಊರಲಿ ವಿದ್ಯಾ ಎಂದು ಕರೆಯುತ್ತಾರೆ )ಒಂದು ವಾರ ಮನೆಗೆ ಬರಬೇಡ.ನಿನಗೂ ಹರಡುತ್ತದೆ " ಎಂದು ಹೇಳಿದರು


ಆಗ ಅಯ್ಯೋ..ಅವಳು ಫೇಲ್ ಆಗ್ತಾಳಲ್ಲ ಎಂದು ನನಗೆ ಆತಂಕ ಆಯಿತು.

ನಂತರ ಒಬ್ಬಳೇ ನಡೆದುಕೊಂಡು ಶಾಲೆಗೆ ಬಂದು ಪರೀಕ್ಷೆ ಬರೆದೆ.

ನಿರೀಕ್ಷೆಯಂತೆಯೇ ಯಶೋಧಾ ಫೇಲ್ ಆಗಿದ್ದಳು.

ಅದರ ಪರಿಣಾಮವಾಗಿ ಜಾಣೆಯಾಗಿದ್ದ ಅವಳ ಓದು ಅಲ್ಲಿಗೇ ನಿಂತಿತು.ಅವಳು ಮುಂದೆ ಓದಲಿಲ್ಲ.

ನಂತರ ದೊಡ್ಡವಳಾಗಿ ಮದುವೆಯಾದ ನಂತರ ಕಾಸಗಿಯಾಗಿ ಕಟ್ಟಿ ಎಸ್ ಎಸ್ ಎಲ್ ಸಿ ಪಿಯುಸಿ ಡಿಗ್ರಿ ಮಾಡಿದ್ದಾಳೆ.


ಇದೇ ರೀತಿಯಲ್ಲಿ ನಾನು ಒಂಬತ್ತನೇ ತರಗತಿ ಓದುತ್ತಿರುವಾಗ ರವೀಂದ್ರ ಎಂಬ ಹುಡುಗನಿಗೂ ಆರೋಗ್ಯ ಸಮಸ್ಯೆ ಬಂದು‌ಪರೀಕ್ಷೆ ಬರೆಯಲಾಗಲಿಲ್ಲ.ಫೇಲಾದ ಕಾರಣ ನಂತರ ಅವನೂ ವಿದ್ಯಾಭ್ಯಾಸ ಮುಂದುವರಿಸಲಿಲ್ಲ


ಈಗ ಒಂದರಿಂದ ಒಂಬತ್ತರ ತನಕ ಫೇಲ್ ಮಾಡುದೇ ಇಲ್ಲ.ಹಾಗಾಗಿ ನಮ್ಮಷ್ಟು ಆತಂಕ ಈಗಿನ‌ಮಕ್ಕಳಿಗೆ ಇರಲಾರದೋ ಏನೋ


ನನಗೆ ಈಗ ನಗು ಬರುವ ವಿಚಾರ ಒಂದಿದೆ.ನಾನು ಸಾಮಾನ್ಯವಾಗಿ ತರಗತಿಯಲ್ಲಿ‌ ಮೊದಲ‌ ಇಲ್ಲವೇ ಎರಡನೇ Rank ತೆಗೆಯುತ್ತಿದ್ದೆ.ನನ್ನನ್ನೂ ಫೇಲ್ ಮಾಡಿದರೆ ಮತ್ತೆ ಶಿಕ್ಷಕರು ಎಂತ ಮಾಡುದು ? ಪಾಠ ಮಾಡಲು ವಿದ್ಯಾರ್ಥಿಗಳು ಬೇಡವೇ?ಮಕ್ಕಳೇ ಇಲ್ಲದಿದ್ದರೆ ಶಾಲೆಯಲ್ಲು ಅವರೆಂತ ಬಜೆಂಟ್ ಹೆಕ್ಕುದಾ ? ಆದರೆ ನನಗೆ ಆಗ ಈ ವಿಚಾರ ಎಲ್ಲ ಗೊತ್ತಿರಲಿಲ್ಲ.ಇತರ ಸಾಮಾನ್ಯ ಮಾರ್ಕ್ಸ್ನ ವಿದ್ಯಾರ್ಥಿಗಳಂತೆ ಪಾಸ್ ಫೇಲಿನ ದಿನವನ್ನು ಆತಂಕದಿಂದ ಎದುರು ನೋಡುತ್ತಿದ್ದೆ.


ಎಪ್ರಿಲ್ ಹತ್ತನೆಯ ತಾರೀಕಿನಂದು ಎಲ್ಲ ದೇವರುಗಳೂ ನೆನಪಿಗೆ ಬರ್ತಿದ್ದರು.ಅವರನ್ನೆಲ್ಲ ನೆನೆದು ನನ್ನನ್ನು ಪಾಸು ಮಾಡಿಸು ಎಂದು ಬೇಡಿಕೊಳ್ಳುತ್ತಿದ್ದೆ

ಎಂದಿಗಿಂತ ಬೇಗನೆ ಎದ್ದು ದೇವರಿಗೆ ಹೆಚ್ಚು ಹೂ ಕೊಯ್ದು ಇಡುತ್ತಿದ್ದೆ.ನಂತರ ಸ್ನಾನ ಮಾಡಿ ದೇವರಿಗೆ ಹೊಡಾಡಿ( ನಮಸ್ಕರಿಸಿ) ಶಾಲೆಗೆ ಹೋಗುತ್ತಿದ್ದೆ.ಅಲ್ಲಿ ಬೋರ್ಡ್ ನಲ್ಲಿ ಫೇಲಾದವರ ಹೆಸರನ್ನು ಹಾಕ್ತಾ ಇದ್ದರು.

ಶಾಲೆ ಸಮೀಪಿಸಿದಂತೆಲ್ಲ‌ ಎದೆ ಇತರರಿಗೆ  ಕೇಳುವಷ್ಡು ದೊಡ್ಡದಾಗಿ ಡಬ್ ಡಬ್ ಬಡಿಯುತ್ತಾ ಇತ್ತು.ಹೇಗೋ ಹೋಗಿ ಫೇಲಾದವರ ಲಿಸ್ಟ್  ಅನ್ನು ಎರಡೆರಡು ಸಲ ಓದಿ‌ ನನ್ನ ಹೆಸರು ಅದರಲ್ಲಿ ಇಲ್ಲದಿರುವುದನ್ನು ನೋಡಿ ಖಚಿತ ಗೊಳಿಸಿ ಬದುಕಿದೆಯಾ ಬಡಜೀವವೇ..ನಾನು ಪಾಸು ಎಂದು ಕುಣಿದಾಡಿಕೊಂಡು ಮನೆಗೆ ಬರ್ತಾ ಇದ್ದೆ.ಪಾಸಾದ ಇತರರೂ ಹೀಗೇ ಸಂಭ್ರಮದಿಂದ ಜೊತೆಯಾಗುತ್ತಿದ್ದರು.

ಫೇಲ್ ಆದವರು ಬಿಕ್ಕಿ ಬಿಕ್ಕಿ ಅಳ್ತಾ ಇದ್ದದ್ದು ಈಗಲೂ ನನ್ನ ಕಣ್ಣಿಗೆ ಕಟ್ತಿದೆ.ಅವರ ಬಗ್ಗೆ ನನಗೆ ಪಾಪ ಎನಿಸುತ್ತಿತ್ತು.ಯಾಕೆಂದರೆ ಫೇಲಾದ ಮಕ್ಕಳಿಗೆ ಮನೆಯಲ್ಲು ಕೂಡ ಪೆಟ್ಡು ಕಾದಿರ್ತಾ ಇದ್ದದ್ದು ನನಗೆ ಗೊತ್ತಿತ್ತು


ಇನ್ನು ಹತ್ತನೇ ತರಗತಿಯ ಫಲಿತಾಂಸದ ದಿನದ ಬಗ್ಗೆ ಹೇಳುದೇ ಬೇಡ..ಅಷ್ಡು ಆತಂಕದ ಕ್ಷಣಗಳವು.ಆ ಬಗ್ಗೆ ಇನ್ನೊಂದಿನ ಬರೆಯುವೆ

Thursday, 30 October 2025

ಆತ್ಮ ಕಥೆಯ ಬಿಡಿ ಭಾಗಗಳು : ಯಾರೆಲ್ಲ ಸಣ್ಣಾಗಿರುವಾಗ ಬಜೆಂಟು ಹೆಕ್ಕಿದ್ದೀರಿ

 ಯಾರೆಲ್ಲ ಸಣ್ಣಾಗಿರುವಾಗ ಬಜೆಂಟು  ಹೆಕ್ಕಿದ್ದೀರಿ



ಪಾಸಾದರೆ ಶಾಲೆ ಇಲ್ಲವಾದರೆ ಬಜಂಟು ಹೆಕ್ಕುವ ಖಾಯಂ ಕಾಯಕ 


ಎಪ್ರಿಲ್ ಹತ್ತರ  ಪಾಸು ಫೇಲಿನ ದಿನವೆಂಬ ಭಯ ಆತಂಕದ ದಿನ ಇದರ ನಿರ್ಧಾರ ಆಗುತ್ತಿತ್ತು‌.


ಹೌದು..ಪ್ರತಿವರ್ಷ ಎಪ್ರಿಲ್ ಹತ್ತಕ್ಕೆ ನಮ್ಮ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಶಾಲೆಯ ಬೋರ್ಡ್ ನಲ್ಲಿ ಹಾಕ್ತಿದ್ದರು.ಎಪ್ರಿಲ್  ಮೊದಲ ದಿನಾಂಕದಿಂದಲೇ ಎದೆಯಲ್ಲಿ ಅವಲಕ್ಕಿ ಕುಟ್ಟಲು ಶುರುವಾಗುತ್ತಿತ್ತು.ಪಾಸ್ ಪೇಲ್ ದಿನ ಹತ್ತಿರ ಬಂದ ಹಾಗೇ ಊಟ ತಿಂಡಿ ಸೇರುತ್ತಿರಲಿಲ್ಲ.ನಮ್ಮಂತೆಯೇ ನಮ್ಮ ಹೆತ್ತವರಿಗೂ ಇದೇ ಆತಂಕ.

ಚೆನ್ನಾಗಿ ಕಲಿಯದವರನ್ನು ಫೇಲಾದವರನ್ನು "ಹೋಗು ಬಜೆಂಟ್ ಹೆರ್ಕು " ಎಂದು ಬೈಉವ ವಾಡಿಕೆ ಇತ್ತು.ಆದರೆ ಪಾಸಾಗುತ್ತಿದ್ದ ನಾವು ಕೂಡ ಬೇಸಗೆಯಲ್ಲಿ ಬಜಂಟ್ ಹೆಕ್ಕುತ್ತಿದ್ದೆವು.

ಬಜಂಟು ಎಂದರೆ ಒಣ ಸೆಗಣಿ.ಬೇಸಗೆಯ ಸಮಯದಲ್ಲಿ ನಾವು‌ಮಕ್ಕಳೆಲ್ಲ ಗುಡ್ಡವೆಲ್ಲ ಬಜೆಂಟಿಗಾಗಿ ಹುಡುಕುತ್ತಿದ್ದೆವು.ಮೇಯಲು ಬಿಟ್ಟ ಹಸುಗಳು ಹಾಕಿದ ಒಣ ಸೆಗಣಿ ಸಿಕ್ತಾ ಇತ್ತು.

ಇದನ್ನು ಮಳೆಗಾಲದಲ್ಲಿ ಒಲೆ ಉರಿಸಲು ಬಳಸುತ್ತಾ ಇದ್ದರು.

ನಾವು ಏಳೆಂಟು ಸಮ ವಯಸ್ಸಿನ ಮಕ್ಕಳು ಒಂದೊಂದು ಗೋಣಿ ಚೀಲ ಹಿಡಿದುಕೊಂಡು ಬಜಂಟು ಹೆಕ್ಕಲು ಹೋಗುತ್ತಿದ್ದೆವು.ಅದು ನಮಗೆ ಬೇಸರ ತರುವ ಕೆಲಸವಾಗಿರಲಿಲ್ಲ.ಗುಡ್ಡಗಾಡಿನ ಚೂರಿ ಮುಳ್ಳಿನ ಹಣ್ಣ ಮುಳ್ಳಣ್ಣು ಕಿಸ್ಕಾರದ ಹಣ್ಣು ಚಬುಳಕ ಮೊದಲಾದ  ಕಾಡು ಹಣ್ಣುಗಳನ್ನು ಅಯ್ದು ತಿಂದುಕೊಂಡು ಕಾಡು ಹರಟೆ ಹೊಡೆದುಕೊಂಡು ಬಹಳ ಖುಷಿಯಿಂದ ಈ ಕೆಲಸ ಮಾಡ್ತಿದ್ದೆವು ಎಂಬುದು ಬೇರೆ ವಿಚಾರ.

ಅಕಸ್ಮಾತ್ತಾಗಿ ಐರೋಳು ಬಳ್ಳಿ ,ಕಾನಕಲ್ಲಡೆ ಕಾಯಿ ಸಿಕ್ಕರೆ ಬಹಳ ಸಂಭ್ರಮ ನಮಗೆ

ಅದರೂ ಫೇಲಾದವರು ಬಜಂಟು ಹೆಕ್ಕಲು ಲಾಯಕ್ಕು ಎಂಬ ಮಾತು ಆಗ ಇತ್ತು ಈಗ ಈ ಬಜೆಂಟಿಗೆ cow dung cake ಎಂಬ ಚಂದದ ಹೆಸರಿದೆ.ಸಿಕ್ಕಾಪಟ್ಟೆ ಬೆಲೆಯೂ ಇದೆ 


ಇರಲಿ


ಆಗೆಲ್ಲ ಫೇಲ್ ಆದರೆ ಮರು ಪರೀಕ್ಷೆ ಇರುತ್ತಿರಲಿಲ್ಲ.ಮತ್ತೆ ಒಂದು ವರ್ಷ ಅದೇ ತರಗತಿಯಲ್ಲಿ ಇರಬೇಕು.ಅದು ನಮಗೆ ಬಹಳ ಅವಮಾನಕರ ವಿಚಾರ.ಹಾಗಾಗಿ ಪಾಸಾಗದಿದ್ದರೆ ಎಂಬ ಆತಂಕ ಕಾಡುತ್ತಿತ್ತು.


ಕೆಲವೊಮ್ಮೆ ಜಾಣ ಮಕ್ಕಳಿಗೆ ಏನಾದರೂ ಆರೋಗ್ಯ ಸಮಸ್ಯೆ ಉಂಟಾಗಿ ವಾರ್ಷಿಕ ಪರೀಕ್ಷೆಗೆ ಹಾಜರಾಗಲು ಆಗದಿದ್ದರೆ ಅವರೂ ಕೂಡ ಫೇಲ್ .ನಂತರದ ಒಂದು ವರ್ಷ ಅದೇ ತರಗತಿಯಲ್ಲಿ ಕುಳಿತುಕೊಳ್ಳಬೇಕು.


ಈ ಅವಮಾನ ಸ್ವೀಕರಿಸಲು ತಯಾರಿಲ್ಲದ ಮಕ್ಕಳ ವಿದ್ಯಾಭ್ಯಾಸ ಇದೇ ಕಾರಣಕ್ಕಾಗಿ ಅಲ್ಲಿಗೇ ನಿಂತು ಹೋಗುತ್ತಿತ್ತು.


ನನಗೆ ನೆನಪಿನಲ್ಲಿರುವಂತೆ ನನ್ನ ಸಹಪಾಠಿಗಳಾಗಿದ್ದ  ಇಬ್ಬರು ಜಾಣ ವಿದ್ಯಾರ್ಥಿಗಳ ಶಿಕ್ಷಣ ಹೀಗೆ ಅರ್ಧದಲ್ಲಿಯೇ ಮೊಟಕಾಗಿತ್ತು


ಒಂದು ನನ್ನ ಬಾಲ್ಯ ಸ್ನೇಹಿತೆ ಯಶೋದಾಳದು.ಅವಳು ಎಂಟನೇ ತರಗತಿಯ ಅಂತಿಮ /ವಾರ್ಷಿಕ ಪರೀಕ್ಷೆಯಲ್ಲಿ ಒಂದೆರಡು ವಿಷಯಗಳಿಗೆ ಗೈರು ಹಾಜರಾಗಿದ್ದಳು.


ಅವಳೂ ನಾನೂ ಒಟ್ಟಿಗೆ ಕೋಳ್ಯೂರಿನಿಂದ ಕೊಡ್ಲಮೊಗರಿನ ವಾಣಿವಿಜಯ ಪ್ರೌಢಶಾಲೆಗೆ  ನಡೆದುಕೊಂಡು ಹೋಗಿ ಬರುತ್ತಿದ್ದೆವು.ಎರಡು ಗುಡ್ಡ ಹತ್ತಿ ಇಳಿಯಬೇಕು.ಸುಮಾರು ನಾಲ್ಕೈದು ಮೈಲು ನಡೆಯಬೇಕಿತ್ತು.


ಅಗಿ‌ನ್ನೂ ನನಗೆ ಸರಿಯಾಗಿ ನೆನಪಿದೆ

ಸುಮಾರು ಎಂಟು ಎಂಟೂವರೆ ಗಂಟೆ ಹೊತ್ತಿಗೆ ಅವಳು ನಮ್ಮ ಮನೆಗೆ ಬರ್ತಿದ್ದಳು.ಅವಳನ್ನೇ ಕಾಯುತ್ತಿರುವ ನಾನು ಕೂಡಲೇ ಮೆಟ್ಟಿಳಿದು ಮನೆಯ ಗದ್ದೆಯ ಬದುವಿನಲ್ಲಿ ಸಾಗಿ.ತೋಡಿನ ಸಂಕ ದಾಟಿ ಅಂಗಡಿ ಎದುರು ಎತ್ತರಕ್ಕೆ ಹತ್ತಿ ಸಾಗುತ್ತಿದ್ದೆವು.

 1986 ಮಾರ್ಚ್ ಕೊನೆಯ ವಾರ.ಪ್ರೌಢ ಶಾಲೆಯಲ್ಲಿ ಅಂತಿಮ ಪರಿಕ್ಷೆಗಳು ನಡೆಯುತ್ತಿದ್ದವು.

.ನಮಗೆ ಆಗ ಹನ್ನೆರಡು ಪರೀಕ್ಷೆಗಳಿದ್ದವು.ಕನ್ನಡ ಎರಡು ಪತ್ರಿಕೆಗಳು,ವಿಜ್ಞಾನ ಮೂರು ಪತ್ರಿಕೆಗಳು,ಗಣಿತ ಎರಡು ಪತ್ರಿಕೆಗಳು ,ಸಮಾಜ ಶಾಸ್ತ್ರ ಎರಡು ಪತ್ರಿಕೆಗಳು ,ಹಿಂದಿ ಒಂದು ಪತ್ರಿಕೆ.


ಕೊನೆಯ ಒಂದೆರಡು ಪರೀಕ್ಷೆಗಳು ಉಳಿದಿದ್ದವು

ಆ ದಿನ ಯಶೋಧಾ ಎಂಟೂವರೆ ಕಳೆದರೂ ನಮ್ಮ‌ಮನೆಗೆ ಬಂದಿರಲಿಲ್ಲ.ಅವಳ ಮನೆಯಿಂದ ಶಾಲೆಗೆ ಹೋಗುವ ದಾರಿಯಲ್ಲಿ ನಮ್ಮ ಮನೆ ಇತ್ತು.


ಅವಳು ಬಾರದ ಕಾರಣ ನಾನೇ ಅವಳ ಮನೆಗೆ ಹೋದೆ.ಅವಳು ಚಳಿಗೆ ನಡುಗುತ್ತಾ ಕಂಬಳಿ ಹೊದ್ದು ಮಲಗಿದ್ದಳು.

"ನಮ್ಮ ಯಶೋಧೆಗೆ  ಮೈಯಲ್ಲಿ ಬಿದ್ದಿದೆ( ಚಿಕನ್ ಪಾಕ್ಸ್ ) .ಅವಳು ಪರೀಕ್ಷೆಗೆ ಬರುದಿಲ್ಲ‌.ನೀನು ಹೋಗು ವಿದ್ಯಾ ,( ನನ್ನನ್ನು ಮನೆಯಲ್ಲಿ,ಊರಲಿ ವಿದ್ಯಾ ಎಂದು ಕರೆಯುತ್ತಾರೆ )ಒಂದು ವಾರ ಮನೆಗೆ ಬರಬೇಡ.ನಿನಗೂ ಹರಡುತ್ತದೆ " ಎಂದು ಹೇಳಿದರು


ಆಗ ಅಯ್ಯೋ..ಅವಳು ಫೇಲ್ ಆಗ್ತಾಳಲ್ಲ ಎಂದು ನನಗೆ ಆತಂಕ ಆಯಿತು.

ನಂತರ ಒಬ್ಬಳೇ ನಡೆದುಕೊಂಡು ಶಾಲೆಗೆ ಬಂದು ಪರೀಕ್ಷೆ ಬರೆದೆ.

ನಿರೀಕ್ಷೆಯಂತೆಯೇ ಯಶೋಧಾ ಫೇಲ್ ಆಗಿದ್ದಳು.

ಅದರ ಪರಿಣಾಮವಾಗಿ ಜಾಣೆಯಾಗಿದ್ದ ಅವಳ ಓದು ಅಲ್ಲಿಗೇ ನಿಂತಿತು.ಅವಳು ಮುಂದೆ ಓದಲಿಲ್ಲ.

ನಂತರ ದೊಡ್ಡವಳಾಗಿ ಮದುವೆಯಾದ ನಂತರ ಕಾಸಗಿಯಾಗಿ ಕಟ್ಟಿ ಎಸ್ ಎಸ್ ಎಲ್ ಸಿ ಪಿಯುಸಿ ಡಿಗ್ರಿ ಮಾಡಿದ್ದಾಳೆ.


ಇದೇ ರೀತಿಯಲ್ಲಿ ನಾನು ಒಂಬತ್ತನೇ ತರಗತಿ ಓದುತ್ತಿರುವಾಗ ರವೀಂದ್ರ ಎಂಬ ಹುಡುಗನಿಗೂ ಆರೋಗ್ಯ ಸಮಸ್ಯೆ ಬಂದು‌ಪರೀಕ್ಷೆ ಬರೆಯಲಾಗಲಿಲ್ಲ.ಫೇಲಾದ ಕಾರಣ ನಂತರ ಅವನೂ ವಿದ್ಯಾಭ್ಯಾಸ ಮುಂದುವರಿಸಲಿಲ್ಲ


ಈಗ ಒಂದರಿಂದ ಒಂಬತ್ತರ ತನಕ ಫೇಲ್ ಮಾಡುದೇ ಇಲ್ಲ.ಹಾಗಾಗಿ ನಮ್ಮಷ್ಟು ಆತಂಕ ಈಗಿನ‌ಮಕ್ಕಳಿಗೆ ಇರಲಾರದೋ ಏನೋ


ನನಗೆ ಈಗ ನಗು ಬರುವ ವಿಚಾರ ಒಂದಿದೆ.ನಾನು ಸಾಮಾನ್ಯವಾಗಿ ತರಗತಿಯಲ್ಲಿ‌ ಮೊದಲ‌ ಇಲ್ಲವೇ ಎರಡನೇ Rank ತೆಗೆಯುತ್ತಿದ್ದೆ.ನನ್ನನ್ನೂ ಫೇಲ್ ಮಾಡಿದರೆ ಮತ್ತೆ ಶಿಕ್ಷಕರು ಎಂತ ಮಾಡುದು ? ಪಾಠ ಮಾಡಲು ವಿದ್ಯಾರ್ಥಿಗಳು ಬೇಡವೇ?ಮಕ್ಕಳೇ ಇಲ್ಲದಿದ್ದರೆ ಶಾಲೆಯಲ್ಲು ಅವರೆಂತ ಬಜೆಂಟ್ ಹೆಕ್ಕುದಾ ? ಆದರೆ ನನಗೆ ಆಗ ಈ ವಿಚಾರ ಎಲ್ಲ ಗೊತ್ತಿರಲಿಲ್ಲ.ಇತರ ಸಾಮಾನ್ಯ ಮಾರ್ಕ್ಸ್ನ ವಿದ್ಯಾರ್ಥಿಗಳಂತೆ ಪಾಸ್ ಫೇಲಿನ ದಿನವನ್ನು ಆತಂಕದಿಂದ ಎದುರು ನೋಡುತ್ತಿದ್ದೆ.


ಎಪ್ರಿಲ್ ಹತ್ತನೆಯ ತಾರೀಕಿನಂದು ಎಲ್ಲ ದೇವರುಗಳೂ ನೆನಪಿಗೆ ಬರ್ತಿದ್ದರು.ಅವರನ್ನೆಲ್ಲ ನೆನೆದು ನನ್ನನ್ನು ಪಾಸು ಮಾಡಿಸು ಎಂದು ಬೇಡಿಕೊಳ್ಳುತ್ತಿದ್ದೆ

ಎಂದಿಗಿಂತ ಬೇಗನೆ ಎದ್ದು ದೇವರಿಗೆ ಹೆಚ್ಚು ಹೂ ಕೊಯ್ದು ಇಡುತ್ತಿದ್ದೆ.ನಂತರ ಸ್ನಾನ ಮಾಡಿ ದೇವರಿಗೆ ಹೊಡಾಡಿ( ನಮಸ್ಕರಿಸಿ) ಶಾಲೆಗೆ ಹೋಗುತ್ತಿದ್ದೆ.ಅಲ್ಲಿ ಬೋರ್ಡ್ ನಲ್ಲಿ ಫೇಲಾದವರ ಹೆಸರನ್ನು ಹಾಕ್ತಾ ಇದ್ದರು.

ಶಾಲೆ ಸಮೀಪಿಸಿದಂತೆಲ್ಲ‌ ಎದೆ ಇತರರಿಗೆ  ಕೇಳುವಷ್ಡು ದೊಡ್ಡದಾಗಿ ಡಬ್ ಡಬ್ ಬಡಿಯುತ್ತಾ ಇತ್ತು.ಹೇಗೋ ಹೋಗಿ ಫೇಲಾದವರ ಲಿಸ್ಟ್  ಅನ್ನು ಎರಡೆರಡು ಸಲ ಓದಿ‌ ನನ್ನ ಹೆಸರು ಅದರಲ್ಲಿ ಇಲ್ಲದಿರುವುದನ್ನು ನೋಡಿ ಖಚಿತ ಗೊಳಿಸಿ ಬದುಕಿದೆಯಾ ಬಡಜೀವವೇ..ನಾನು ಪಾಸು ಎಂದು ಕುಣಿದಾಡಿಕೊಂಡು ಮನೆಗೆ ಬರ್ತಾ ಇದ್ದೆ.ಪಾಸಾದ ಇತರರೂ ಹೀಗೇ ಸಂಭ್ರಮದಿಂದ ಜೊತೆಯಾಗುತ್ತಿದ್ದರು.

ಫೇಲ್ ಆದವರು ಬಿಕ್ಕಿ ಬಿಕ್ಕಿ ಅಳ್ತಾ ಇದ್ದದ್ದು ಈಗಲೂ ನನ್ನ ಕಣ್ಣಿಗೆ ಕಟ್ತಿದೆ.ಅವರ ಬಗ್ಗೆ ನನಗೆ ಪಾಪ ಎನಿಸುತ್ತಿತ್ತು.ಯಾಕೆಂದರೆ ಫೇಲಾದ ಮಕ್ಕಳಿಗೆ ಮನೆಯಲ್ಲು ಕೂಡ ಪೆಟ್ಡು ಕಾದಿರ್ತಾ ಇದ್ದದ್ದು ನನಗೆ ಗೊತ್ತಿತ್ತು


ಇನ್ನು ಹತ್ತನೇ ತರಗತಿಯ ಫಲಿತಾಂಸದ ದಿನದ ಬಗ್ಗೆ ಹೇಳುದೇ ಬೇಡ..ಅಷ್ಡು ಆತಂಕದ ಕ್ಷಣಗಳವು.ಆ ಬಗ್ಗೆ ಇನ್ನೊಂದಿನ ಬರೆಯುವೆ

Saturday, 20 September 2025

ಆತ್ಮ‌ಕಥೆಯ ಬಿಡಿಭಾಗಗಳು : ಸ್ವಂತ ಕೇಸ್ ಹಾಕಲು ಧೈರ್ಯವಿಲ್ಲದ ಹೇಡಿಗಳ ಅಡ್ಡದಾರಿ

 ಹೇಡಿಗಳು ಈ ಬರಹದಬಗ್ಗೆ ಪ್ರತಿಲಿಪಿಗೆ ರಿಪೋರ್ಟ್ ಮಾಡಿವೆ,ಈ ಬಗ್ಗೆ ಲೋಕಾಯುಕ್ತಕ್ಕೂ ತಿಳಿಸ್ತೇನೆ ದೈರ್ಯ ಇದ್ದರೆ   ಕೇಸ್ ಹಾಕಲಿ...


ಮೊದಲು ನನ್ನ ಪುಸ್ತಕದಲ್ಲಿ  ಈ ಬಗ್ಗೆ ನಾನು ಬರೆದಿದ್ದೆ.ಅದರ ಬಗ್ಗೆ ಡಾ.ಚಿನ್ನಪ್ಪ ಗೌಡ ಮತ್ತು ಧನಂಜಯ ಕುಂಬಳೆ ಯೂನಿವರ್ಸಿಟಿ ವಿ ಸಿ ಗೆ ದೂರು ನೀಡಿದ್ದು ಅದರಂತೆ ನಡೆದ ಅಕ್ರಮ ಬಗ್ಗೆ ಬರೆದದ್ದರಿಂದ ಯೂನಿವರ್ಸಿಡಿಯ ಘನತೆಗೆ ದಕ್ಕೆ ಬಂದಿದೆ ಕ್ಷಮೆ ಕೇಳಬೇಕು ಇಲ್ಲವಾದರೆ ಕೇಸ್ ಹಾಕ್ತೇವೆ ಎಂದು ರಿಜಿಸ್ಟ್ರಾರ್  ಅರುಣ ಶ್ಯಾಮ್ ಅಸೊಸಿಯೇಟ್ಸ್ ಮೂಲಕ ಲೀಗಲ್ ನೋಟೀಸ್ ಕಳುಹಿಸಿದ್ದರು.ಅದರೆ 2013 ರ ನೇಮಕಾತಿಯಲ್ಲಿ ವ್ಯಾಪಕ ಅಕ್ರಮ ನಡೆದ ಬಗ್ಗೆ ಆಗ ರಿಜಿಸ್ಟ್ರಾರ್ ಆಗಿದ್ದು ಈಗ ವೀಸಿಯಾಗಿರುವ ಡಾ.ಪಿಎಸ್ ಯಡಪಡಿತ್ತಾಯರೇ ಮುಕ್ತವಾಗಿ ಒಪ್ಪಿಕೊಂಡಿದ್ದು ಈ ಕೇಸ್ ಮುಂದುವರಿಯದಂತೆ ತಡೆ ಹಿಡಿದಿದ್ದಾರೆ


ಈಗ ಇಂತಹ ಅಡ್ಡ ಮಾರ್ಗ ಹಿಡಿದಿವೆ ..ನಾಚಿಗೆ ಮಾನ ಮರ್ಯಾದಿ ಇಲ್ಲದ ಅತೃಪ್ತ ಆತ್ಮಗಳು  ಯಾರೆಂದು ಗೊತ್ತಿಲ್ಲ 

ದೈರ್ಯ ಇದ್ದರೆ ಸ್ವತಃ ಕೇಸ್ ಹಾಕಲಿ..ನಾನು ಗೆದ್ದು ಮತ್ತೆ ಬರೆಯುತ್ತೇನೆ..


ನನ್ನ ಧ್ವನಿ ಉಡುಗಿದೆ..


ಇಂತಹ ಸಾವಿರ ನೋಟೀಸ್ ಗಳನ್ನೂ ಕೇಸ್ ಗಳನ್ನೂ ಎದುರಿಸಬಲ್ಲೆ ಆದರೆ ನಮ್ಮ ಬಡ ಪ್ರತಿಭಾವಂತ ಯುವಕರಿಗೆ ಅನ್ಯಾಯವಾಗುವುದನ್ನು ಸಹಿಸಲಾಗದು.ಇದಕ್ಕೊಂದು ಅಂತಿಮ ಪರಿಹಾರ ಬೇಕೇ ಬೇಕು..ನಿಮಗಿದು ಸರಿ ಎನಿಸಿದರೆ ಶೇರ್ ಮಾಡಿ..ಒಂದಷ್ಟಾದರೂ ಜಾಗೃತಿ ಮೂಡಲಿ‌..


ಏನಿದು ವಿಷಯ..ಇಲ್ಲಿ ಓದಿ 


ಸುತ್ತ ಮುತ್ತ ಎತ್ತ ನೋಡಿದರೂ ಭ್ರಷ್ಟಾಚಾರದ ಕಂಬಂಧ ಬಾಹುಗಳು ಎಲ್ಲೆಡೆ ಹರಡಿ ಅಟ್ಟಹಾಸ ಮಾಡುತ್ತಿವೆ.ಎಫಡಿಎ  ಹಿಡಿದು ಯೂನಿವರ್ಸಿಟಿ ತನಕದ ಎಲ್ಲ ಹುದ್ದೆಗಳು 30-80 ಲಕ್ಷಗಳಿಗೆ ಬಿಕರಿಯಾಗಿದೆ.

ನಮ್ಮ‌ಬಡಮಕ್ಕಳು ಊಟ ತಿಂಡಿಯ ಪರಿವೆಯಿಲ್ಲದೆ ಓದುತ್ತಿದ್ದಾರೆ.ಯಾಕೆಂದರೆ ಚೆನ್ನಾಗಿ ಓದಿ ಮಕ್ಕಳೇ..ಉತ್ತಮ‌ಅಂಕ ಪಡೆದರೆ ನಿಮಗೆ ಒಳ್ಳೆಯ ಕೆಲಸ ಸಿಗುತ್ತದೆ ,ಸರ್ಕಾರಿ ಉದ್ಯೋಗ ಭದ್ರತೆಯನ್ನು ಕೊಡುತ್ತದೆ ಎಂಬ ಭರವಸೆಯನ್ನುಬಣ್ಣ ಬಣ್ಣದ ಕನಸನ್ನು  ನಾವು ಸದಾ ತುಂಬುತ್ತಿರುತ್ತೇವೆ

ಮೊದ ಮೊದಲು ಈ ಮಾತು ಹೇಳುವಾಗ ನನಗೂ ಈ ಬಗ್ಗೆ ತುಂಬಾ ಭರವಸೆಯಿತ್ತು

ಯಾಕೆಂದರೆ 2009 ರಲ್ಲಿ ಲಿಖಿತ ಪರೀಕ್ಷೆಯ ಮೂಲಕ ಯಾವುದೇ ದುಡ್ಡು ವಶೀಲಿ ಇಲ್ಲದೆ ಕೇವಲ ಅರ್ಹತೆಯಿಂದಲೇ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಹುದ್ದೆಯನ್ನು ಪಡೆದವಳು ನಾನು.

ಈ ನನ್ನ ಮಕ್ಕಳಂತೆಯೇ ನಾನೂ ಕೆಲಸದ ಜೊತೆಗೆ ಹಗಲು ರಾತ್ರಿ ಅಧ್ಯಯನ ಮಾಡುತ್ತಿದ್ದೆ.ನನಗೊಂದು ಕನಸಿತ್ತು.ರಾಷ್ಟ್ರಪತಿಗಳಾಗಿದ್ದ ಅಬ್ದುಲ್ ಕಲಾಂ ಅವರು ದೊಡ್ಡದಾದ ಕನಸು ಕಾಣಿರಿ ಎಂದಿದ್ದರಲ್ಲ.ಅಂತೆಯೇ ನನ್ನ‌ ಮಂಗಳೂರು  ಯೂನಿವರ್ಸಿಟಿ ಪ್ರೊಫೆಸರಾಗುವ  ಕನಸೂ ಕೂಡ ನನ್ನ ಪಾಲಿಗೆ ದೊಡ್ಡದೇ ಇರಬೇಕು.ಹಾಗಾಗಿಯೇ ಡಾ.ಅಮೃತ ಸೋಮೇಶ್ವರರರಂತಹ ಹಿರಿಯರೂ ನನಗೆ ಮಹತ್ವಾಕಾಂಕ್ಷೆ ಒಳ್ಳೆಯದಲ್ಲ ಎಂದು ಹಿತ ನುಡಿದಿದ್ದರು.ಬಹುಶಃ ಅದಾಗಲೇ ಯೂನಿವರ್ಸಿಟಿಗಳಲ್ಲಿನ ಅವ್ಯವಹಾರಗಳ ಬಗ್ಗೆ ಅವರಿಗೆ ಅವರಿವಿದ್ದಿರಬಹುದೋ ಏನೋ.ಇರುವ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ಹುದ್ದೆಯಲ್ಲಿಯೇ ತೃಪ್ತಿ ಪಡುವುದು ಒಳ್ಳೆಯದೆಂದು ಹೇಳಿರಬಹುದು.ಈ ಮಾತು ನಾನು ಮಾತ್ರ ವಲ್ಲ ನನ್ನ ಸ್ನೇಹಿತರಾದ ನನ್ನ ಜೊತೆಗೆ ಸರ್ಕಾರಿ ಪಿಯು ಕಾಲೇಜು ಕನ್ನಡ ಉಪನ್ಯಾಸಕ ಹುದ್ದೆಯನ್ನು ಪಡೆದ ಬಹುಮುಖೀ ಪ್ರತಿಭಾವಂತ ಡಾ.ಶ್ರೀಧರ ಹೆಗಡೆ ಭದ್ರನ್ ಅವರೂ ಕೇಳಿದ್ದರು‌ಅವರ ಹಿತೈಷಿಗಳು ಯಾರೋ ಅವರಿಗೆಮಹತ್ವಾಕಾಂಕ್ಷೆ ಒಳ್ಳೆಯದಲ್ಲ ಎಂದಿದ್ದ ಬಗ್ಗೆ ಮಾತಿನ ನಡುವೆ ನನ್ನಲ್ಲಿ ಒಮ್ಮೆ ಅವರು ಹೇಳಿದ್ದರು

ಪ್ರಾಧ್ಯಾಪಕರಿಗೆ ಬೇಕಾದ  ಎಲ್ಲ ಅರ್ಹತೆಯನ್ನು ಪಡೆದ ನಂತರ ಅದನ್ನು ಬಯಸುವುದು ಮಹತ್ವಾಕಾಂಕ್ಷೆ ಆಗುತ್ತದಾ ? ಏನೋ ನನಗೆ ಗೊತ್ತಿಲ್ಲ.ನನಗೆ ಅದು ಈಗಲೂ ತಪ್ಪೆನಿಸಿಲ್ಲ

2009 ರಲ್ಲಿ ಸರ್ಕಾರಿ ಉದ್ಯೋಗಕ್ಕೆನಾನು ಸೇರುವಾಗ ನನ್ನ‌ಮೊದಲ ಡಾಕ್ಟರೇಟ್ ಅಧ್ಯಯನದ ಪಿಎಚ್ ಡಿ ಮಹಾ ಪ್ರಬಂಧ ಸಲ್ಲಿಸಿ ಆಗಿತ್ತು.ಮತ್ತೆ ಸ್ವಲ್ಪ ಸಮಯದ ಒಳಗೆ ಡಾಕ್ಟರೇಟ್ ಪದವಿಯನ್ನು ಪಡೆದೆ.

ನಾನು ಬೆಳ್ಳಾರೆ ಕಾಲೇಜಿಗೆ ಸೇರಿದಾಗ ಅದು ಸುವರ್ಣ ಮಹೋತ್ಸವವನ್ನು ಆಚರಿಸುತ್ತಾ ಇತ್ತು.ಆ ಐವತ್ತು ವರ್ಷಗಳಲ್ಲಿ ಆ ಕಾಲೇಜಿನ ಮೊದಲ ಡಾಕ್ಟರೇಟ್ ಪದವಿ ಪಡೆದ ಮೊದಲ ಉಪನ್ಯಾಸಕಿ ನಾನಾಗಿದ್ದೆ.

.ಪಿಯು ಇಲಾಖೆಯಲ್ಲಿ ಉನ್ನತ ಶಿಕ್ಷಣಕ್ಕೆ ಯಾವುದೇ ಮನ್ನಣೆ ಇಲ್ಲ.ಹೆಚ್ಚಾಗಿ ಪ್ರೌಢಶಾಲೆಯಿಂದ ಭಡ್ತಿ ಬಂದ ಉಪನ್ಯಾಸಕರೇ ಇರುತ್ತಾರೆ.ಹಾಗಾಗಿ ಆಗ ಡಾಕ್ಟರೇಟ್ ಪದವಿ ಪಡೆದ ಉಪನ್ಯಾಸಕರ ಸಂಖ್ಯೆ ತೀರ ಕಡಿಮೆ ಇತ್ತು.2009 ರ ಬ್ಯಾಚ್ ನಲ್ಲಿ ಆಯ್ಕೆ ಆದವರಲ್ಲಿ  ಅನೇಕರು ಪಿಎಚ್ ಡಿ ಪದವಿಧರರಿದ್ದರು

ಇರಲಿ

ಮೊದಲ ಡಾಕ್ಟರೇಟ್ ನ‌  ಅಧ್ಯಯನ ಕನಿಷ್ಠ ಅವಧಿ  ಎರಡೂವರೆ ವರ್ಷ ಮುಗಿದ ಕೂಡಲೇ ನಾನು ಎರಡನೆಯ ಡಾಕ್ಟರೇಟ್ ಅಧ್ಯಯನಕ್ಕಾಗಿ ಕುಪ್ಪಂ ನ ದ್ರಾವಿಡ ವಿಶ್ವ ವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಅದೂ ಪ್ರಬಂಧ ಸಿದ್ದವಾಗಿತ್ತು.2012 ರಲ್ಲಿಯೇ ಪ್ರಬಂಧ ಸಲ್ಲಿಸಿದ್ದರೂ ಮೌಲ್ಯ ಮಾಪಕರ ಹಾಗೂ ಮಾರ್ಗ ದರ್ಶಕರ  ನಿರ್ಲಕ್ಷ್ಯದಿಂದಾಗಿ  ಬಹಳ‌ ತಡವಾಗಿ 2015 ರಲ್ಲಿ ಎರಡನೆಯ ಡಾಕ್ಟರೇಟ್ ಪದವಿಯನ್ನೂ ಪಡೆದೆ

ಈ ನಡುವೆ 2013 ರಲ್ಲಿ ಮಂಗಳೂರು ಯೂನಿವರ್ಸಿಟಿ ವಿವಿಧ ಬೋಧಕ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದ್ದು ನಾನೂ ಅರ್ಜಿ ಸಲ್ಲಿಸಿದ್ದೆ

ಈ ಬಾರಿ ನಾನು ಖಂಡಿತಾ ಆಯ್ಕೆ ಆಗುವೆನೆಂಬ ಆತ್ಮ ವಿಶ್ವಾಸ ನನಗಿತ್ತು.ಯಾಕೆಂದರೆ ಅರ್ಜಿ ಸಲ್ಲಿಸಿದವರಲ್ಲಿ ಅತಿ ಹೆಚ್ಚು ಅಕಾಡೆಮಿಕ್ ಫರ್ಪಾಮೆನ್ಸ್ ಇಂಡಿಕೇಟರ್ ನನಗಿತ್ತು.ನನಗೆ 1157 accademi performance indication ಪಾಯಿಂಟುಗಳಿದ್ದವುಅಲ್ಲಿ ಪ್ರೊಫೆಸರಾಗಿ ಆಯ್ಕೆ ಆದವರಿಗೆ ಕೂಡ 530 ರಷ್ಟು ಮಾತ್ರ ಇತ್ತು.ಅದಕ್ಕಿಂತ ಎರಡು ಪಟ್ಟು ಹೆಚ್ಚು ಅರ್ಹತೆ ನನಗಿತ್ತು.ನಾನು ಅರ್ಜಿ ಸಲ್ಲಿಸಿದ್ದು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ...

ನಾನು ಅದಾಗಲೇ ಎಂಎ( ಕನ್ನಡ)  73.7% - ನಾಲ್ಕನೆಯ ರ‌್ಯಾಂಕ್,ಎಂಎ( ಹಿಂದಿ) ಎಂಎ( ಸಂಸ್ಕೃತ)- ಮೊದಲ ರ‌್ಯಾಂಕ್ ,ಎಂಫಿಲ್ ಪಿಎಚ್ ಡಿ ಪದವಿ ಗಳಿಸಿದ್ದು ಎರಡನೆಯ ಪಿಎಚ್ ಡಿ ಪದವಿಗೆ ಪ್ರಬಂಧ ಸಲ್ಲಿಕೆ ಆಗಿತ್ತು.

ಅ ಸಮಯಕ್ಕಾಗುವಾಗಲೇ ನನ್ನ ಹದಿನೇಳು ಸಂಶೋಧಾನಾ ಕೃತಿಗಳು ನೂರರಷ್ಟು ಸಂಶೋಧನಾ ಬರಹಗಳು,ಮುನ್ನೂರರಷ್ಟು ಇತರ ವೈಚಾರಿಕ ಬರಹಗಳು ಪ್ರಕಟವಾಗಿದ್ದವು

ಸುಮಾರು ಇನ್ನೂರೈವತ್ತು ಅಂತರಾಷ್ಟ್ರೀಯ,ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ ಮಾಡಿದ್ದೆ

ಯುಜಿಸಿ ನಿಯಮಾವಳಿಗಳಂತೆ ಅಂಕಗಳನ್ನು ನೀಡಿದರೆ ನನಗೆ ಸಹಾಯಕ ಪ್ರಾಧ್ಯಾಪಕ ಹುದ್ದೆ ಖಂಡಿತವಾಗಿಯೂ ಸಿಗುತ್ತಿತ್ತು.ಆದರೆ ದುಡ್ಡು ಇನ್ಪ್ಲೂಯೆನ್ಸ್ ಗೆ ಒಳಗಾದ ವೀಸಿ ಯನ್ನೊಳಗೊಂಡ ಆಯ್ಕೆ ಸಮಿತಿ ಯುಜಿಸಿ ನಿಯಮಗಳನ್ನು ಮೀರಿ ತಮಗೆ ಬೇಕಾದ ಅಭ್ಯರ್ಥಿಗಳು ಕಡಿಮೆ ಅರ್ಹತೆ ಹೊಂದಿದ್ದರೂ ಅವರನ್ನೇ ಆಯ್ಕೆ ಮಾಡಿದ್ದರು.

ಕನ್ನಡ ವಿಭಾಗದಲ್ಲಿ ಜೆನರಲ್ ಮೆರಿಟ್ ಗೆ ಒಂದು ಹುದ್ದೆ ಇತ್ತು.ಅದಕ್ಕೆ ಒಂದು ಕನ್ನಡ( ಎಂಎ)66% ಎರಡು ಸಂಶೋಧನಾ ಕೃತಿ( ಅದರಲ್ಲಿ ಒಂದು ಪಿಎಚ್ ಡಿ ಪ್ರಬಂಧ) ಗಳನ್ನು ಪ್ರಕಟಿಸಿದ ಧನಂಜಯ ಕುಂಬಳೆ ಆಯ್ಕೆ ಆದರು.

ಇಲ್ಲಿ ಒಟ್ಟು ನೂರು ಅಂಕಗಳ ಸಂದರ್ಶನದಲ್ಲಿ 20 ಅಂಕಗಳು ರಿಸರ್ಚ್ ಫರ್ಫಾರ್ಮೆನ್ಸ್ ಗೆ ಮೀಸಲಾಗಿವೆ.ಇಲ್ಲಿ ಒಂದು ಸಂಶೋಧನಾ ಕೃತಿಗೆ ಐದು ಅಂತ ಮತ್ತು ಅಂತ ರಾಷ್ಟ್ರೀಯ ರಿಸರ್ಚ್ ಜರ್ನಲ್ ನಲ್ಲಿ ಪ್ರಕಟಿತ ಬರಹಕ್ಕೆ ಎರಡು ಅಂಕ,ರಾಷ್ಟ್ರೀಯ ರಿಸರ್ಚ್ ಜರ್ನಲ್ ನಲ್ಲಿ ಪ್ರಕಟಿತ ಬರಹಕ್ಕೆ ಒಂದು ಅಂಕ ಇದರ ಹೊರತಾಗಿ ಈ ವಿಭಾಗದಲ್ಲಿ ಅಂಕಗಳನ್ನು ಕೊಡುವಂತಿಲ್ಲ ಎಂದು ಯುಜಿಸಿ ಸ್ಪಷ್ಟವಾಗಿ ತಿಳಿಸಿದೆ.ಇಲ್ಲಿ ಗರಿಷ್ಠ ಅಂಕಗಳು 20

ನನ್ನದು 17 ಸಂಶೋಧನಾ ಕೃತಿಗಳು ಪ್ರಕಟವಾದ ಕಾರಣ ಗರಿಷ್ಠ 20 ಅಂಕಗಳು ಲಭಿಸಿದ್ದವು.

ಆದರೆ ಇಲ್ಲಿ ಆಯ್ಕೆಯಾದ ಧನಂಜಯ ಕುಂಬಳೆ ಅವರು ಅವರ ಅರ್ಜಿಯಲ್ಲಿ ಡಿಕ್ಲೇರ್ ಮಾಡಿರುವಂತೆ ಕೇವಲ ಎರಡು ಸಂಶೋಧನಾ ಕೃತಿಗಳು ಪ್ರಕಟವಾಗಿದ್ದು ಅದರಲ್ಲಿ ಒಂದು ಪಿಎಚ್ ಡಿ ಪ್ರಬಂಧವಾಗಿದ್ದು ಅದಕ್ಕೆ ಇನ್ನೊಂದು ಅಕಾಡೆಮಿಕ್ ವಿಭಾಗದಲ್ಲಿ ಅಂಕಗಳು ನೀಡಲ್ಪಟ್ಟಿದೆ

ಹಾಗಾಗಿ ಇಲ್ಲಿ ಅವರು ಅವರ ಒಂದು ಪುಸ್ತಕಕ್ಕೆ 5 ಅಂಕಗಳನ್ನು ಮಾತ್ರ ಪಡೆಯಲು‌ಅರ್ಹರಾಗಿದ್ದರು.ಇದನ್ನು ಪ್ರಾಥಮಿಕ ಶಾಲೆಯ ಬಾಲಕ ಕೂಡ ಲೆಕ್ಕ ಹಾಕಬಲ್ಲ. 

ಆದರೆ ಇಲ್ಲಿ ಆಯ್ಕೆ ಸಮಿತಿಯವರು ಹೆಚ್ಚಿನ ಅಂಕ ನೀಡಲು ಅವರಿಗೆ ಅರ್ಹತೆ ಇಲ್ಲದೆ ಇದ್ದಾಗಲೂ ಹೆಚ್ಚುವರಿಯಾಗಿ ಹದಿನೈದು ಅಂಕ ನೀಡಿ ಗರಿಷ್ಟ 20 ಅಂಕ ನೀಡಿದ್ದರು.

ಇಲ್ಲಿ ಅರ್ಹತೆ ಇಲ್ಲದೆ ಇದ್ದಾಗಲೂ ಅವರನ್ನು ಆಯ್ಕೆ ಮಾಡುವ ಸಲುವಾಗಿ ಹೆಚ್ಚುವರಿಯಾಗಿ ನೀಡಿದ 15 ಅಂಗಳನ್ಮು ಅವರು ಸಂದರ್ಶನದಲ್ಲಿ ಗಳಿಸಿದ ಒಟ್ಟು ಅಂಕ‌69.4 ರಿಂದ ಕಳೆದರೆ ಅವರಿಗೆ ಸಿಗಬೆಕಾಗಿದ್ದ ಅಂಕ‌54.4% 

ನನಗೆ ಸಿಕ್ಕ ಒಟ್ಟು ಅಂಕ 63.9 ಹಾಗೆಯೇ ಇರುತ್ತದೆ.ಹಾಗಾಗಿ ನಾನೇ ಹೆಚ್ಚು ಅರ್ಹಳು ಆದರೆ ದುಡ್ಡು ವಶೀಲೊಗೊಳಗಾಗಿ ಆಯ್ಕೆಸಮಿತಿ ಅಕ್ರಮವಾಗಿ ರಿಸೃಚ್ ಫರ್ಫಾರ್ಮೆನ್ಸ್ ವಿಭಾಗದಲ್ಲಿ ಅವರಿಗೆ ಹದಿನೈದು ಅಂಕ‌ ನೀಡಿದ ಕಾರಣ ನನಗೆ ಅನ್ಯಾಯ ಆಗಿದೆ

ಹಾಗೆ ಸುಪ್ರೀಂ ಕೋರ್ಟ್ ತನಕ ಹೋಗಿ ಹೋರಾಡಿದರೂ ಗೆಲ್ಲಾಗಲಿಲ್ಲ ಯಾಕೆಂದರೆ ನ್ಯಾಯಾಲಯ ನನಗೆ ಹೆಚ್ಚಿನ ಅರ್ಹತೆ  ಇಲ್ಲ ಎಂದಿಲ್ಲ‌ .ಬದಲಿಗೆ ಅರ್ಹತೆಯನ್ನು ನಿರ್ಧರಿಸುವುದು ಆಯ್ಕೆ ಸಮಿತಿ‌ ಅದರಲ್ಲಿ ತಲೆಹಾಕಲು ಕಾನೂನಿನಲ್ಲಿ ಅವಕಾಶ ಇಲ್ಲ ಎನ್ನುತ್ತದೆ

ಕಾನೂನಿನ ಈ ಪರಿಮಿತಿಯನ್ನು ತಿಳಿದೇ ಆಯ್ಕೆ ಸಮಿತಿಯವರು ಅಕ್ರಮ ಎಸಗಿ ತಮಗೆ ಬೇಕಾದವರನ್ನು ಬೇಕಾ ಬಿಟ್ಟಿ ಆಯ್ಕೆ ಮಾಡುತ್ತಾರೆ

ಆಯ್ಕೆ ಸಮಿತಿಯವರೇ ಯುಜಿಸಿ ಮಾರ್ಗದರ್ಶಕ ಸೂತ್ರಗಳನ್ನು ಉಲ್ಲಂಘಸಿ‌ ದುಡ್ಡು ವಶೀಲಿಗೆ ಒಳಗಾಗಿ ಅನರ್ಹರನ್ನು ಆಯ್ಕೆ ಮಾಡಿದರೆ ಈ ಅನ್ಯಾಯವನ್ನು ಪ್ರಶ್ನಿಸುವವರು ಯಾರು ? ಇದಕ್ಕೇನು ಪರಿಹಾರ? ಇದು ಇಂದಿಗೂ ಉತ್ತರ ಸಿಗದ ಪ್ರಶ್ನೆಯಾಗಿದೆ.

ಈ ಬಗ್ಗೆ ಸರ್ಕಾರ ಸಿಐಡಿ ಗೆ ವಹಿಸಿ ಸರಿಯಾದ ತನಿಖೆ ಮಾಡಿ ಅಕ್ರಮ ಎಸಗಿದವರ ಮೇಲೆ ಸೆಒಯಾದ ಕ್ರಮ‌ತೆಗೆದುಕೊಂಡರೆ ಸರಿ ಹೋಗಬಹುದು.

2013 ರಲ್ಲಿ ಮಂಗಳೂರು ಯೂನಿವರ್ಸಿಟಿಯಲ್ಲಿ ರಿಜಿಸ್್ಟ್ರಾರ್ ಆಗಿದ್ದು ಈಗ ಅದೇ ಯೂನಿವರ್ಸಿಟಿಯಲ್ಲಿ ವೀಸಿಗಳಾಗಿರುವ ಡಾ.ಪಿಎಸ್ ಎಡಪಡಿತ್ತಾಯರು 2013 ರಲ್ಲಿ ನಡೆದ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಅಕ್ರಮ ನಡೆದ ಬಗ್ಗೆ ಒಪ್ಪಿಕೊಳ್ಳುತ್ತಾರೆ.ಅದಕ್ಕಾಗಿಯೇ  ನೇಮಕಾತಿ ಪ್ರಕ್ರಿಯೆಯಿಂದ ಆಗಿನ ವೀಸಿಗಳಾದ ಶಿವಶಂಕರಮೂರ್ತಿಗಳು   ರಿಜಿಸ್ಟ್ರಾರ್ ಆಗಿದ್ದ ಡಾ.ಪಿಎಸ್ ಎಡಪಡಿತ್ತಾಯರನ್ನು ಹೊರಗಿರಿಸಿ ನಡೆಸಿದ ಬಗ್ಗೆಯೂ ಹೇಳಿದ್ದಾರೆ.ಆಗಿನ ವೀಸಿಗಳು ಕೆಲವು ಕ್ಲರ್ಕ್ ಹಾಗೂ ಒಬ್ಬಿಬ್ಬರು ಪ್ರಾಧ್ಯಾಪಕರನ್ನು ಇಟ್ಟುಕೊಂಡು ಅಕ್ರಮ‌ಎಸಗಿದ್ದರಂತೆ.ಅಂದಿನ ನೇಮಕಾತಿಗಳಲ್ಲಿ ಎರಡು ಕೋರ್ಟಿನಲ್ಲಿ ರದ್ದಾಗಿವೆ.ಇನ್ನೂ ಹಲವು ಪ್ರಕರಣಗಳು ನ್ಯಾಯಾಲಯದ ಮುಂದಿವೆ ಎಂದವರು ತಿಳಿಸಿದ್ದಾರೆ.

ಅಂದ ಹಾಗೆ ಅಂದಿನ ನೇಮಕಾತಿಯ ಆಯ್ಕೆ ಸಮಿತಿಯಲ್ಲಿ‌ಡಾ.ಚಿನ್ನಪ್ಪ ಗೌಡ ಮತ್ತು ಡಾ.ಸಬೀಹಾ ಭೂಮಿ ಗೌಡ ಮತ್ತಿತರರು ಇದ್ದರು


ನನ್ನ ವಿಷಯದಲ್ಲಿಯೇ ಇಷ್ಟು ಅನ್ಯಾಯವಾದಾಗ ಓದಿ ಕಲಿಯಿರಿ ಮಕ್ಕಳೇ ಒಳ್ಳೆಯ ಭವಿಷ್ಯ ಇದೆ ಎನ್ನುವಾಗ ನನ್ನ ಧ್ವನಿ ನಡುಗದೆ ಇರಲು ಸಾಧ್ಯವೇ ? ಆದರೂ ನಾನಿದನ್ನು ಮಕ್ಕಳ ಜೊತೆ ಹಂಚಿಕೊಳ್ಳುವುದಿಲ್ಲ.ಅವರ ಆತ್ಮ ವಿಶ್ವಾಸಕ್ಕೆ ಧಕ್ಕೆ ಬಂದು ನಿರಾಸೆ ಮೂಡೀತು ಎಂಬ ಆತಂಕ ನನಗೆ‌

ಇಷ್ಟರ ತನಕ ಸಂದರ್ಶನ ಇರುವಲ್ಲಿ ಮಾತ್ರ ದುಡ್ಡು ವಶೀಲಿ‌ ನಡೆಯುತ್ತದೆ ಎಂಬ ಭಾವ ಇತ್ತು.ಈಗ ಲಿಖಿತ ಪರೀಕ್ಷೆ ಇರುವಲ್ಲಿನಡೆದ ಅಕ್ರಮ ನೋಡಿ ಆಘಾತವಾಗಿದೆ.ನಮ್ಮ‌ಬಡ ಪ್ರತಿಭಾವಂತ ಮಕ್ಕಳ ಪಾಡೇನು ಎಂಬ ಆತಂಕ ಉಂಟಾಗಿದೆ


ನನಗೇನೋ ಬದುಕಲೊಂದು ಗೌರವದ ಉದ್ಯೋಗವಿದೆ.ಮಂಗಳೂರು ಯೂನಿವರ್ಸಿಟಿಗೆ ಅರ್ಜಿ ಅಲ್ಲಿಸುವ ಮೊದಲೇ ನಾನು ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕಿಯಾಗಿದ್ದೆ.ಆದರೆ ಉದ್ಯೋಗವಿಲ್ಲದ ಬಡ ಪ್ರತಿಭಾವಂತರ ಬಗ್ಗೆಯೇ ನನ್ನ ಕಾಳಜಿ..

ಈಗ ಸರ್ಕಾರ ಎಲ್ಲ‌ ಅಕ್ರಮಗಳ ಬಗ್ಗೆ ಸರಿಯಾದ ತನಿಖೆ ನಡೆಸಿ ಅದಕ್ಕೆ ಕಾರಣರಾದವ ಮೇಲೆಬಲವಾದ ಕ್ರಮ ತೆಗೆದುಕೊಂಡರೆ ಸ್ವಲ್ಪ ಪ್ರಯೋಜನವಾಗಬಹುದು 


ಇದರ ನಡುವೆ ಒಂದು ಗಮ್ಮತ್ತಿನ ವಿಚಾರ ಹೇಳಲು ಮರೆತು ಹೋಯಿತು.ಕಳೆದ ವಾರ ಮಂಗಳೂರು ಯೂನಿವರ್ಸಿಟಿಯ ಈಗಿನ ರಿಜಿಸ್ಟ್ರಾರ್( ಅವರ್ಯಾರೆಂದು ನನಗೆ ಗೊತ್ತಿಲ್ಲ) ಅವರಿಂದ ಲಾಯರ್ ಅರುಣ ಶ್ಯಾಮ್ ಅಸೋಸಿಯೇಟ್ ನ ಸುಯೋಗ ಹೇರಳೆ ಎಂಬವರ ಮೂಲಕ ಒಂದು ಲೀಗಲ್ ನೋಟೀಸ್ ಬಂದಿದೆ.ಮೇಲೆ ಹೇಳಿದ ಮಂಗಳೂರು ಯೂನಿವರ್ಸಿಯಲ್ಲಿ 2013 ರಲ್ಲಿನ ನೇಮಕಾತಿಯಲ್ಲಿ ನಡೆದ ಅಕ್ರಮದ ಬಗ್ಗೆ ,ನನಗೆ ಅನ್ಯಾಯವಾದ ಬಗ್ಗೆ ನನ್ನ ನೋವಿನ ಬಗ್ಗೆ ನನ್ನ ಕರಾವಳಿಯ ಸಾವಿರದೊಂದು ದೈವಗಳು ಕೃತಿಯ ಮನದಾಳದ ಮಾತಿನಲ್ಲಿ ಹಂಚಿಕೊಂಡಿದ್ದೆ.ಇದು ಅವರಿಗೆ ಅವಮಾನ ಆಗಿದೆಯಂತೆ.2013 ರಲ್ಲಿ ರಿಜಿಸ್ಟ್ರಾರ್ ಆಗಿದ್ದು ಈಗ ಅದೇ ಯೂನಿವರ್ಸಿಟಿಯ ವೀಸಿಗಳಾದ ಡಾ.ಸುಬ್ರಹ್ಮಣ್ಯ ಎಡಪಡಿತ್ತಾಯರು ಆಗ ನಡೆದ ಅಕ್ರಮ ಅನ್ಯಾಯಗಳನ್ನು ಮುಕ್ತವಾಗಿ ಹೇಳಿದ್ದಾರೆ.ಆದರೆ ಈಗಿನ ರಿಜಿಸ್ಟ್ರಾರಿಗೆ ಆಗ ನಡೆದದ್ದನ್ನು ಹೇಳಿದ್ದು ಅವಮಾನ ಎನಿಸಿದೆಯಂತೆ.ಬಹುಶಃ ಅವರು ಇತ್ತೀಚೆಗೆ ರಿಜಿಸ್ಟ್ರಾರ್ ಆಗಿದ್ದು ಆಗ 2013 ರಲ್ಲಿ ನಡೆದ ಅವ್ಯವಹಾರ ಅಕ್ರಮಗಳ ಬಗ್ಗೆ ಅವರಿಗೆ ತಿಳಿದಿರಲಾರರು.ಹಾಗಾಗಿ ಅವರಿಗೆ ಇರುವ ವಿಚಾರವನ್ನು ಲೀಗಲ್ ನೋಟೀಸಿನ ಉತ್ತರದಲ್ಲಿ ತಿಳಿಸಿರುವೆ.ಇನ್ನು ಇಲ್ಲಿನ ನಡೆದ ಅಕ್ರಮ ಅವ್ಯವಹಾರ ಭ್ರಷ್ಟಾಚಾರದ ಬಗ್ಗೆ ನನಗಿಂತ ಹೆಚ್ಚು ಅಧಿಕೃತವಾಗಿ ತಿಳಿದವರು ಆಗ ರಿಜಿಸ್ಟ್ರಾರ್ ಆಗಿದ್ದು ಈಗ ವೀಸಿಗಳಾಗಿರುವ ಡಾ.ಪಿ ಎಸ್ ಎಡಪಡಿತ್ತಾಯರು.ಹಾಗಾಗಿ ಅವರಲ್ಲಿ ಮಾಹಿತಿ ಪಡೆಯುವಂತೆ ಸೂಚಿಸಿರುವೆ..ಅನ್ಯಾಯ ಅಕ್ರಮಮಾಡಬಹುದು..ಹೇಳಬಾರದು ಎಂದರೆ ಹೇಗೆ ?  

ಇಂತಹ ಸಾವಿರ ನೋಟೀಸ್ ಗಳನ್ನೂ ಕೇಸ್ ಗಳನ್ನೂ ನಾನು ಎದುರಿಸಬಲ್ಲೆ ಆದರೆ ಪ್ರಾಮಾಣಿಕವಾಗಿ ಶೆಡ್ಡಿನಲ್ಲಿ ಚಿಮಿಣಿ ದೀಪದಲ್ಲಿ ಕಚ್ಚುವ ಸೊಳ್ಳೆಗಳ ಕಾಟದ ನಡುವೆಯೂ ಓದುವ ಕಲಿಯುವ ನಮ್ಮ‌ಬಡ ಮಕ್ಕಳಿಗೆ ಉದ್ಯೋಗ ಸಿಗದೆ ಅವೆಲ್ಲವೂ ಭ್ರಷ್ಟರ ಪಾಲಾದರೆ ಎಂಬ ಆತಂಕ ನನ್ನನ್ನು ನಡುಗಿಸುತ್ತಿದೆ.ನಮ್ಮ‌ ಪ್ರತಿಭಾವಂತ ಮಕ್ಕಳ ಮುಖ ನೋಡುವಾಗ ಇವರಿಗೊಂದು ಒಳ್ಳೆಯ ಕೆಲಸ ದೊರೆಯಲಿ ದೇವರೇ ಎಂದು ಪ್ರಾರ್ಥಿಸುವಂತಾಗುತ್ತಿದೆ.ಮೊದಲೆಲ್ಲ ಈ ಆತಂಕ ನನಗಿರಲಿಲ್ಲ.ನಾನು ಲಿಖಿತ ಪರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ಆಯ್ಕೆ ಆಗಿದ್ದೆನಲ್ಲ.ಹಾಗೆಯೇ ಇವರೂ ಗೆಲ್ಲವರು ಎಂಬ ದೃಢ ನಂಬಿಕೆ ನನಗಿತ್ತು.ಆದರೆ ಭ್ರಷ್ಟಾಚಾರ ಎಲ್ಲೆಡೆ ಹರಡಿದೆ.ಇದನ್ನು ಬುಡ ಸಹಿತ ಕತ್ತರಿಸಿದರೆ ಮಾತ್ರ ಭಾರತಕ್ಕೆ ಭವಿಷ್ಯವಿದೆ 

ಡಾ.ಲಕ್ಷ್ಮೀ ಜಿ ಪ್ರಸಾದ್ ,ಕನ್ನಡ ಉಪನ್ಯಾಸಕರು ಸರ್ಕಾರಿ ಪಿಯು ಕಾಲೇಜು,ಬ್ಯಾಟರಾಯನಪುರ,ಬೆಂಗಳೂರು



ಆತ್ಕಕಥೆಯ ಬಿಡಿ ಭಾಗಗಳು ಗಲ್ ನೋಟೀಸಿಗೆ ನಾನು ನೀಡಿದ ಉತ್ತರ




















 ಲೀಗಲ್ ನೋಟೀಸಿಗೆ ನಾನು ನೀಡಿದ ಉತ್ತರ









..

ಅನೇಕರು ಕುತೂಹಲದಿಂದ ಲೀಗಲ್ ನೋಟೀಸಿಗೆ ನೀವು ಲಾಯರ್ ಮೂಲಕ ಉತ್ತರ ಕೊಟ್ಟಿರಾ ? ಅಥವಾ ನೀವೇ ಉತ್ತರಿಸಿದಿರಾ? ಏನೆಂದು ಉತ್ತರಿಸಿದ್ದೀರಿ ?  ಎಂದು ಕೇಳಿದ್ದಾರೆ ,ಇದರಲ್ಲಿ ಮುಚ್ಚುಮರೆ ಮಾಡುವದ್ದು ಏನೂ ಇಲ್ಲ.ಇರುವುದನ್ನು ಇರುವ ಹಾಗೆಯೇ ಬರೆದು ಉತ್ತರಿಸಿದ್ದೆ.

ಈ ಬಗ್ಗೆ ತಿಳಿಯಲು ಆಸಕ್ತಿ ಇರುವವರಿಗಾಗಿ ಇಲ್ಲಿ ಕಾಪಿ ಪೇಸ್ಟ್ ಮಾಡಿರುವೆ,ಮುಂದಕ್ಕೆ ಲೀಗಲ್ ನೋಟೀಸ್ ಮತ್ತು ಅದಕ್ಕೆ ನೀಡಿರುವ ಉತ್ತರ ತದನಂತರದ ಹೆಜ್ಜೆಗಳು ಎಲ್ಲವೂ ಆತ್ಮಕಥೆಯಲ್ಲಿ ಸೇರಲಿವೆ.


ಅರುಣಶ್ಯಾಮ್ ಅಸೋಸಿಯೇಟ್ಸ್  ನೀಡಿದ ಲೀಗಲ್ ನೋಟೀಸಿಗೆ    ಉತ್ತರ


ನಮಸ್ಕಾರ,

ನಾನು ಡಾ.ಲಕ್ಷ್ಮೀ ಜಿ‌ ಪ್ರಸಾದ್,ಕನ್ನಡ ಪ್ರಾಧ್ಯಾಪಕರು ,ಸರ್ಕಾರಿ ಪಿಯು ಕಾಲೇಜು ಬ್ಯಾಟರಾಯನ ಪುರದ ವಿಳಾಸಕ್ಕೆ ಕೆಲ ದಿನಗಳ ಹಿಂದೆ ತಾವು ಕಳುಹಿಸಿದ ಲೀಗಲ್ ನೋಟೀಸ್ ರಿಜಿಸ್ಟರ್ಡ್ ಪೋಸ್ಟ್ ಮೂಲಕ ಬಂತು.ಒಂದು ಕ್ಷಣ ಸ್ವೀಕರಿಸಲೇ ಬೇಡವೇ ಎಂಬ ತೊಳಲಾಟ ನನ್ನನ್ನು ಕಾಡಿತು ಯಾಕೆಂದರೆ ಪಿಯು ಕಾಲೇಜಿನ ಉಪನ್ಯಾಸಕರು ಎಂದಿಗೂ ಪ್ರಾಧ್ಯಾಪಕರಾಗುವುದಿಲ್ಲ.ಎನ್ ಇ ಟಿ,ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದರೂ  ಸೇರುವಾಗ ಉಪನ್ಯಾಸಕರಾದವರು ನಿವೃತ್ತಿಯಾಗುವಾಗಲೂ ಉಪನ್ಯಾಸಕರೇ ಅಗಿರಬೇಕಾಗಿದೆ.ನಾವೆಂದಿಗೂ ಗೈಡ್ ಆಗಲು ಆಗುವುದಿಲ್ಲ.ಸಂಶೋಧನಾ ತಂಡವನ್ನು ಹದಿನಾರು ಹದಿನೇಳು ವಯಸ್ಸಿನ‌ಮಕ್ಕಳ ಜೊತೆ ಕಟ್ಟಲಾಗುವುದಿಲ್ಲ


ಇಲ್ಲಿ ಪ್ರಾಧ್ಯಾಪಕರಾಗಿ ಭಡ್ತಿ ಕೊಡುವ ಪದ್ಧತಿ ಇಲ್ಲ


ಇದೇ ಕಾರಣಕ್ಕಾಗಿ ನಾನು ಮೊದಲೇ ಸರ್ಕಾರಿ ಉದ್ಯೋಗದಲ್ಲಿದ್ದರೂ ಕೂಡ ಮಂಗಳೂರು ಯೂನಿವರ್ಸಿಟಿಯ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ


ನಾನು ಎಂಎ( ಕನ್ನಡ )77% ನಾಲ್ಕನೆಯ ರ‌್ಯಾಂಕ್ ಎಂಎ( ಸಂಸ್ಕೃತ) ಮೊದಲ ರ‌್ಯಾಂಕ್ ಎಂಎ(ಹಿಂದಿ) ಎಂಫಿಲ್ ಹಾಗೂ ಎರಡು ಡಾಕ್ಟರೇಟ್ ಪದವಿಗಳನ್ನು ಪಡೆದಿರುವೆ.ಜೊತೆಗೆ ಅರ್ಜಿ ಸಲ್ಲಿಸುವ ಸಮಯಕ್ಕಾಗುವಾಗಲೇ 250 ಕ್ಕೂಹೆಚ್ಚಿನ ಅಂತರಾಷ್ಟ್ರೀಯ ರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧ ಮಂಡನೆ ಮಾಡಿದ್ದೆ.ಆಗ ನನ್ನ 17 ಸಂಶೋಧನಾ ಕೃತಿಗಳೂ ನೂರಕ್ಕೂಹೆಚ್ಚು ಸಂಶೋದನಾ ಬರಹಗಳು ಐದು ನೂರರಷ್ಟು ಇತರ ಬರಹಗಳು ಪ್ರಕಟವಾಗಿದ್ದು ಯುಜಿಸಿ ಗೈಡ್ ಲೈನ್ ನಂತೆ ಲೆಕ್ಕ ಹಾಕಿದಾಗ 1154 ರಷ್ಟು ಶೈಕ್ಷಣಿಕ ನಿರ್ವಹಣಾಂಕ( academic performance indicators) ಗಳನ್ನು ಗಳಿಸಿದ್ದು  ಅರ್ಜಿಯಲ್ಲಿ ಡಿಕ್ಲೇರ್ ಮಾಡಿರುವೆ.


 ಶೈಕ್ಷಣಿಕ ನಿರ್ವಹಣಾಂಕಗಳನ್ನು ಆಧರಿಸಿ   ಹತ್ತು ಜನ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಿದ್ದರು‌.ನನಗೂ ಆಹ್ವಾನ ಬಂದಿತ್ತು.ನಾನೂ ಸಂದರ್ಶನಕ್ಕೆಹಾಜರಾದೆ.ಎಲ್ಲರಿಗಿಂತ ಹೆಚ್ಚು‌ ಅರ್ಹತೆಗಳಿಸಿದ್ದಕಾರಣ ನನಗೆ ಮೊದಲು ಸಂದರ್ಶನ ಇತ್ತು


ಒಟ್ಟು ನೂರು ಅಂಕಗಳಲ್ಲಿ ಇಪ್ಪತ್ತು ಅಂಕಗಳು ರಿಸರ್ಚ್ ಪರ್ಪಾರ್ಮೆನ್ಸ್ ವಿಭಾಗಕ್ಕೆ ಇತ್ತು.ಇಲ್ಲಿ ಒಂದುಸಂಶೋಧನಾ  ಪುಸ್ತಕಕ್ಕೆ ಐದು ಅಂಕ  ಒಂದು ಅಂಕ,ರಾಷ್ಟ್ರೀಯ ಸಂಶೋದನಾಪತ್ರಿಕೆಗಳಲ್ಲಿ ಪ್ರಕಟಿತ ಬರಹಕ್ಕೆ ಒಂದು ಅಂಕ ಎಂದುಯುಜಿಸಿ ನಿಗದಿ ಪಡಿಸಿದ್ದು.ಇದನ್ನುಯೂನಿವರ್ಸಿಟಿ statue of conduct interview ನಲ್ಲಿ ಯೂನಿವರ್ಸಿಟಿಯೂ ವೆಬ್ ನಲ್ಲಿ  ಹಾಕಿತ್ತು.ಸಂಶೋಧನಾ ಕೃತಿ ಮತ್ತು ಬರಹಗಳಿಗೆ ಮಾತ್ರ ಅಂಕ ನೀಡಬೇಕು ಎಂಬ ಸ್ಪಷ್ಟ ಉಲ್ಲೇಖವೂ ಯುಜಿಸಿ ಗೈಡ್ ಲೈನ್ಸ್ ನಲ್ಲಿ ಇವೆ.


ಇದರಂತೆ ನನಗೆ ಹದಿನೇಳು ಸಂಶೋಧನಾ ಪುಸ್ತಕಗಳು ಪ್ರಕಟಗೊಂಡಿರುವ ಕಾರಣ ರಿಸರ್ಚ್ ಫರ್ಪಾರ್ಮೆನ್ಸ್  ವಿಭಾಗದಲ್ಲಿ  ಗರಿಷ್ಟ 20 ಅಂಕಗಳು ದೊರೆಯಬೇಕಾಗಿತ್ತು.ದೊರೆತಿದೆ  ಕೂಡ.


ಆದರೆ ಇಲ್ಲಿ ನನ್ನ ಬದಲಿಗೆ ಆಯ್ಕೆಯಾದ ಧನಂಜಯ ಕುಂಬಳೆ ಅವರು ಅವರೇ ಅರ್ಜಿಯಲ್ಲಿ ಡಿಕ್ಲೇರ್ ಮಾಡಿಕೊಂಡಂತೆ ಅವರ ಎರಡು ಸಂಶೋಧನಾ ಕೃತಿಗಳು ಮಾತ್ರ ಪ್ರಕಟವಾಗಿದ್ದು ಒಂದು ಪಿಎಚ್ ಡಿ ಪ್ರಬಂಧವಾಗಿದೆ.ಕನ್ನಡದಲ್ಲಿ ರಾಷ್ಟ್ರೀಯಾಂತರಾಷ್ಟ್ರೀ ಸಂಶೋಧನಾ ಪತ್ರಿಕೆಗಳು ಇಲ್ಲ.ಹಾಗಾಗಿ ಲೇಖನಗಳಿಗೆ ಯಾರಿಗೂ ಅಂಕ ಸಿಗುವುದಿಲ್ಲ.


ಧನಂಜಯರ ಎರಡು ಕೃತಿಗಳಲ್ಲಿ ಒಂದು ಪಿಎಚ್ ಡಿ ಪ್ರಬಂಧವಾಗಿದ್ದು ಅದಕ್ಕೆ ಅಕಾಡೆಮಿಕ್ ವಿಭಾಗದಲ್ಲಿ ಹತ್ತು ಅಂಕಗಳನ್ನು ನೀಡಿದ್ದಾರೆ.ಹಾಗಾಗಿ ರಿಸರ್ಚ್ ಪರ್ಫಾರ್ಮೆನ್ಸ್ ವಿಭಾಗದಲ್ಲಿ ಅವರು ಕೇವಲ ಐದು ಅಂಕಕ್ಕೆ ಅರ್ಹರಿದ್ದರು


ಆದರೆ ಸಂದರ್ಶನವೆಂಬ ನಾಟಕದಲ್ಲಿ ಆಯ್ಈಕೆ ಸಮಿತಿಯವರು   ರಿಸರ್ಚ  ಫರ್ಫಾರ್ಮೆನ್ಸ್ ವಿಭಾಗದಲ್ಲಿ  ಹೆಚ್ಚುವರಿಯಾಗಿ 15 ಅಂಕಗಳನ್ನು ನೀಡಿ  ಅವರಿಗೆ ಗರಿಷ್ಠ 20 ಅಂಕಗಳನ್ನು ನೀಡಿದ್ದಾರೆ


.ಅವರು ಗಳಿಸಿದ ಒಟ್ಟು 69.4ಅಂಕಗಳಿಂದ ಇಲ್ಲಿ ಹೆಚ್ಚುವರಿಯಾಗಿ ನೀಡಿದ ಹದಿನೈದು ಅಂಕಗಳನ್ನು ಕಳೆದರೆ ಅವರಿಗೆ 54.4 ಅಂಕ ಮಾತ್ರ ಸಿಗುತ್ತದೆ.ಎಂದರೆ ಅವರು ಇಷ್ಟಕ್ಕೆ ಮಾತ್ರ ಅರ್ಹರಾಗಿದ್ದರು.ಹದಿನೈದು ಅಂಕಗಳನ್ನುಈ ವಿಭಾಗದಲ್ಲಿ ಅರ್ಹತೆ ಇಲ್ಲದೇ ಇರುವಾಗ ಕೂಡ  ಹೆಚ್ಚು ಕೊಟ್ಟು ಅವರನ್ನು ಆಯ್ಕೆ ಮಾಡಿದ್ದಾರೆ.ಇದರಿಂದಾಗಿ ನನಗೆ ಅನ್ಯಾಯವಾಗಿದೆ .ನನಗೆ 66 ಅಂಕಗಳ ನ್ನು ನೀಡಿದ್ದರು.


ಮೂರು ಸ್ನಾತಕೋತ್ತರ ಪದವಿಗಳು,ಅದರಲ್ಲಿ ಗಳಿಸಿದ ಅಂಕಗಳು,ಸಂಶೋಧನಾ ಪ್ರಕಟಣೆ,ಸಂಶೋಧನಾ ಪ್ರಬಂಧ ಮಂಡನೆ ಎಲ್ಲದರಲ್ಲೂ ನಾನೇ ಹೆಚ್ಚಿನವಳಾಗಿದ್ದರೂ ಆಯ್ಕೆಯಲ್ಲಿ ಅಕ್ರಮ ,ಅನ್ಯಾಯಗಳು ನಡೆದ ಕಾರಣ ನಾನು ಆಯ್ಕೆ ಆಗದೆ ನನಗಿಂತ ಕಡಿಮೆ ಅರ್ಹತೆಯ ಧನಂಜಯ ಕುಂಬಳೆ ಅವರು ಆಯ್ಕೆ ಆಗಿದ್ದರು


ಈ ಬಗ್ಗೆ ನಾನು ಸುಪ್ರೀಂ ಕೋರ್ಟ್ ತನಕ ಹೋಗಿದ್ದರೂ ನನಗೆ ಗೆಲವು ಸಿಗಲಿಲ್ಲ ಯಾಕೆಂದರೆ ನ್ಯಾಯಾಲಯ ನನಗೆ ಹೆಚ್ಚಿನ ಅರ್ಹತೆ ಇಲ್ಲವೆಂದಿಲ್ಲ.ಬದಲಿಗೆ ಅರ್ಹತೆಯನ್ನು ನಿರ್ಣಯಿಸುವುದು ಆಯ್ಕೆ ಸಮಿತಿ.ಅದರಲ್ಲಿ ನ್ಯಾಯಾಲಯಕ್ಕೆ ತಲೆಹಾಕಲು ಬರುವುದಿಲ್ಲ ಎಂದು ತೀರ್ಪು ನೀಡಿದೆ


ಇದು ನಮ್ಮಲ್ಲಿನ ಕಾನೂನಿನ ಪರಿಮಿತಿ  ಇರಬಹುದು.ಆದರೆ ದುಡ್ಡು influenceಗೆ ಒಳಗಾಗಿ ಯುಜಿಸಿ‌ ಮಾರ್ಗದರ್ಶಕ ಸೂತ್ರಗಳನ್ನು ಉಲ್ಲಂಘಸಿ ಹೆಚ್ಚು ಅರ್ಹರನ್ನು ಬಿಟ್ಡುಕಡಿಮೆ ಅರ್ಹರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದ್ದುಅನ್ಯಾಯ ಎಸಗಿದ್ದು  ಇದಕ್ಕೆ ಪರಿಹಾರವೇನು ? ಇದು ನನಗೆ ಮಾತ್ರವಲ್ಲ ಇಲ್ಲಿ ಸಂದರ್ಶನಕ್ಕೆ ಬಂದ ಹೆಚ್ಚು ಅರ್ಹತೆ ಇದ್ದೂ ಆಯ್ಕೆಯಾಗದವರ ಎಲ್ಲರ ಪ್ರಶ್ನೆ.ಇಂದಿಗೂ ಎಂದಿಗೂ ಉತ್ತರ ಸಿಗದ ಸಿಗಲಾರದ ಪ್ರಶ್ನೆಯಾಗಿದೆ.


ಮಂಗಳೂರು ಯೂನಿವರ್ಸಿಟಿಯಲ್ಲಿ 2013 ರಲ್ಲಿ ನಡೆದ ನೇಮಕಾತಿಯಲ್ಲಿ ವ್ಯಾಪಕ  ಅಕ್ರಮ‌ ಅವ್ಯಹಾರಗಳುಭ್ರಷ್ಟಾಚಾರ  ನಡೆದ ಬಗ್ಗೆ ಆ ಸಮಯದಲ್ಲಿ ಟಿವಿಗಳಲ್ಲಿ ಪತ್ರಿಕೆಗಳಲ್ಲಿಯೂ ಬಂದಿತ್ತು


ಆಗ ಮಂಗಳೂರು ಯೂನಿವರ್ಸಿಟಿಯ  ರಿಜಿಸ್ಟ್ರಾರ್ ಆಗಿದ್ದ ಈಗ ಅದೇ ಯೂನಿವರ್ಸಿಟಿಯ  ವೀಸಿಗಳಾಗಿರುವ ಡಾ.ಸುಬ್ರಹ್ಮಣ್ಯ ಎಡಪಡಿತ್ತಾಯರೂ ಕೂಡ  "ಆಗಿನ ವೀಸಿ‌ ಶಿವಶಂಕರ ಮೂರ್ತಿಯವರು ರಿಜಿಸ್ಟ್ರಾರನ್ನು ನೇಮಕಾತಿ ಪ್ರಕ್ರಿಯೆಯಿಂದ ಹೊರಗಿರಿಸಿ ಕೆಲ ಕ್ಲರ್ಕ್ ಹಾಗೂ ಇನ್ಯಾರನ್ನೋ ಸೇರಿಸಿಕೊಂಡು‌ ಅಲ್ಲಿ ವ್ಯಾಪಕ ಅಕ್ರಮ,ಅನ್ಯಾಯ  ಭ್ರಷ್ಟಾಚಾರವನ್ನು ಮಾಡಿ ಅರ್ಹರನ್ನು ಬಿಟ್ಟು ಅನರ್ಹರನ್ನು ಆಯ್ಕೆ ಮಾಡಿದ ಬಗ್ಗೆ" ಮುಕ್ತವಾಗಿ ತಿಳಿಸಿದ್ದಾರೆ


ಆಗಿನ ಇಬ್ಬರ ಅಕ್ರಮ ನೇಮಕಾತಿ ರದ್ದಾಗಿ .ಆಗಿನ ನೇಮಕಾತಿಯ ಅಕ್ರಮದ ಬಗ್ಗೆ ಕೋರ್ಟಿಗೆ ಹೋದವರಿಗೆ ಈ ಹುದ್ದೆಗಳು ಸಿಕ್ಕಿವೆ ಇನ್ನೂ ಅನೇಕರು ಕೋರ್ಟಿಗೆ ಹೋಗಿದ್ದು ತೀರ್ಪಿಗೆ ಕಾಯುತ್ತಿದ್ದಾರೆ ಎಂಬ ಬಗ್ಗೆಯೂ ಆಗ ರಿಜಿಸ್ಟ್ರಾರ್ ಆಗಿದ್ದ ಈಗ ವೀಸಿಗಳಾಗಿರುವ ಡಾ.ಸುಬ್ರಹ್ಮಣ್ಯ  ಎಡಪಡಿತ್ತಾಯರು ಹೇಳಿದ್ದಾರೆ


.ಈ ಬಗ್ಗೆ ದಾಖಲೆ ಬೇಕಾಗಿದ್ದರೆ ಒದಗಿಸಬಲ್ಲೆ ಆದರೆ ಅದರ ಅಗತ್ಯವೇನಿದೆ ? ತಾವು ಅಥವಾ ತಮ್ನ ಕಕ್ಷಿದಾರರು ಅವರಲ್ಲಿಯೇ ಈ ಬಗ್ಗೆ  ವಿಚಾರಿಸಬಹುದು


ಇನ್ನು ನನ್ನ ಕರಾವಳಿಯ ಪುಸ್ತಕದಲ್ಲಿ ನನಗಾದ ಅನ್ಯಾಯ ಅದರಿಂದಾದ ನನ್ನ ನೋವನ್ನು ಹಂಚಿಕೊಂಡಿದ್ದೇನೆ.ಅಲ್ಲಿ ಹಾಕಿದ ಎಲ್ಲ ವಿಚಾರಗಳೂ  ನೂರಕ್ಕೆ ನೂರು ನಿಜವಾದುದು


ಹಾಗಾಗಿ ತಮ್ಮ‌ ಕಕ್ಷಿದಾರರಾದ ರಿಜಿಸ್ಟ್ರಾರರು  ನನಗಾದ ಅನ್ಯಾಯಕ್ಕೆ  ನೈತಿಕವಾಗಿ  ವಿಷಾದ ವ್ಯಕ್ತಪಡಿಸಬಹುದಿತ್ತು..ಬದಲಿಗೆ ನನ್ನಿಂದ ಕ್ಷಮಾಪಣೆ ಬಯಸಿದ್ದು ಅಚ್ಚರಿ ತರಿಸಿದೆ


ಕ್ಷಮೆ ಯಾಚಿಸುವಂತಹ ಯಾವುದೇ ತಪ್ಪನ್ನು ನಾನು ಎಸಗಿರುವುದಿಲ್ಲ.ನಡೆದಿರುವ ಸತ್ಯದ ವಿಚಾರಗಳನ್ನು ಪುಸ್ತಕದಲ್ಲಿ ಬರೆಯುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಮಗೆ ನಮ್ಮ ಸಂವಿಧಾನ ನೀಡಿದೆ.ಅಕ್ರಮ ಮಾಡಬಹುದು.ಹೇಳಬಾರದು ಎಂದರೆ ಹೇಗೆ ? ತಮ್ಮ‌ ಕಕ್ಷಿದಾರರೇ ವಿವೇಚಿಸಲಿ


ಅಂದ ಹಾಗೆ ಮಂಗಳೂರು ಯುನಿವರ್ಸಿಟಿ ವಿರುದ್ಧ ಸುಪ್ರೀಂ ಕೋರ್ಟಿಗೆ ಹೋಗುವ ಸಲುವಾಗಿ ವಕೀಲರಾಗಿದ್ದ ತಮ್ಮನ್ನು ( ಅರುಣ ಶ್ಯಾಮರನ್ನು)ನಾನು ಸಂಪರ್ಕಿಸಿದ್ದು ತಮ್ಮ ಫೀಸ್ ಎರಡು ಲಕ್ಷ ರುಪಾಯಿ ಎಂದಿದ್ದೀರಿ ಕೂಡ


ಇಷ್ಟು ಶುಲ್ಕ ನನ್ನಿಂದ ಭರಿಸಲು ಸಾಧ್ಯವಿಲ್ಲವೆಂದು ಸ್ವಲ್ಪ ಕಡಿಮೆಗೆ ಒಪ್ಪಿದ ಪರೀಕ್ಷಿತ್ ಅಂಗಡಿ ಎಂಬ ವಕೀಲರ ಮೂಲಕ ನಾನು ಸುಪ್ರೀಂಕೋರ್ಟಿಗೆ ಹೋದೆನಾದರೂ ಜಯಗಳಿಸಲು ಸಾಧ್ಯವಾಗಿಲ್ಲ.ಇಲ್ಲೆಲ್ಲ ಹೈ ಕೋರ್ಟಿನ ತೀರ್ಪನ್ನು ಒಪ್ಪಿದ್ದರು


ಹೀಗೆ ಹೈ ಕೋರ್ಟ. ,ಡಬಲ್  ಬೆಂಚ್ ಸುಪ್ರೀಂ ಕೋರ್ಟ್ ಎಂದು ಕೋರ್ಟ್ ಕಛೇರಿಗೆ ಅಲೆಯುವ ಬದಲು ಲಾಯರುಗಳಿಗೆ ಲಕ್ಷಗಟ್ಟಲೆ ಶುಲ್ಕ ನೀಡುವ ಬದಲು ಅದನ್ನೇ ಲಂಚವಾಗಿ ನೀಡಿದ್ದರೆ ನಾನಿಂದು ಪ್ರೊಫೆಸರಾಗಿರುತ್ತಿದ್ದೆ.ಆದರೆ ಎಂದಿಗೂ ಅನ್ಯಾಯದ ಹಾದಿಯನ್ನು ತುಳಿಯದ ನನಗೆ ಅದಾಗದು  ಎಂಬುದೂ ನನ್ನ ಮನದಾಳದ ಮಾತು


ಎಲ್ಲೆಡೆ ಭ್ರಷ್ಟಾಚಾರ ನಡೆದರೆ ಬಡ ಪ್ರತಿಭಾವಂತರ ಪಾಡೇನು ? ಇದೂ ಕೂಡ ಉತ್ತರ ಸಿಗದ ಪ್ರಶ್ನೆ


ನನಗೇನೋ ಬದುಕಲು ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ವೃತ್ತಿ ಇದೆ.ಆದರೆ ಇತರ ಬಡ ಪ್ರತಿಭಾವಂತರ ಪಾಡೇನು ? ನಮ್ಮ ವಿದ್ಯಾರ್ಥಿಗಳಿಗೆ ಚೆನ್ನಾಗಿ ಓದಿ ಉತ್ತಮ ಅಂಕ ಗಳಿಸಿ ರ‌್ಯಾಂಕ್ ತೆಗೆಯಿರಿ ಒಳ್ಳೆಯ ಕೆಲಸ ಸಿಗುತ್ತದೆ ಎಂದು ಹೇಳುವಾಗೆಲ್ಲ ಸರ್ಕಾರಿ ಹುದ್ದೆಗಳ ಆಯ್ಕೆಯಲ್ಲಿ ನಡೆಯುವ ಅಕ್ರಮ ,ವ್ಯಾಪಕ ಭ್ರಷ್ಟಾಚಾರ ನೆನಪಾಗಿ ಧ್ವನಿ ಕಂಪಿಸುತ್ತದೆ


ಹಾಗಾಗಿಯೇ ನನಗಾದ ನೋವನ್ನು ನಾನು ನನ್ನ ಅಧ್ಯಯನ ಕೃತಿ ಕರಾವಳಿಯ ಸಾವಿರದೊಂದು ದೈವಗಳು ನ ಮನದಾಳದ ಮಾತಿನಲ್ಲಿ ನನ್ನ ಪುಸ್ತಕದ ಓದುಗರೊಂದಿಗೆ ಹಂಚಿಕೊಂಡಿರುವೆ


ಇದರಲ್ಲಿ ತಮ್ಮ ಕಕ್ಷಿದಾರರಿಗೆ ಏನು ತಪ್ಪು ಕಂಡಿದೆಯೋ ನನಗರಿವಾಗಿಲ್ಲ.ಬಹು಼ಶಃ ಈಗಿನ ರಿಜಿಸ್ಟ್ರಾರಿಗೆ ಹತ್ತು ವರ್ಷ ಹಿಂದೆ ನಡೆದ ನೇಮಕಾತಿಯಲ್ಲಿನ ಅಕ್ರಮ ,ವ್ಯಾಪಕ ಭ್ರಷ್ಟಾಚಾರಗಳ ಅರಿವಿಲ್ಲ ಎಂದೆನಿಸುತ್ತದೆ.ಆದರೆ ಆಗ ರಿಜಿಸ್ಟ್ರಾರ್ ಆಗಿದ್ದು ಈಗ ವೀಸಿಗಳಾಗಿರುವ ಡಾ.ಸುಬ್ರಹ್ಮಣ್ಯ ಎಡಪಡಿತ್ತಾಯರಿಗೆ ಆಗ ನಡೆದ ಅಕ್ರಮಗಳ ,ಅನ್ಯಾಯಗಳ,ವ್ಯಾಪಕ ಭ್ರಷ್ಟಾಚಾರದ  ಅರಿವಿದೆ.ಅದನ್ನವರು  ನನ್ನಲ್ಲಿ ಮಾತನಾಡುವಾಗ ಒಪ್ಪಿಕೊಂಡಿದ್ದಾರೆ ಕೂಡ.


ನಿಮ್ಮ ಕಕ್ಷಿದಾರರು ಸರ್ಕಾರದ ದುಡ್ಡಿನಲ್ಲಿ ನನ್ನ ವಿರುದ್ಧ ಕೋರ್ಟಿಗೆ ಹೋದರೆ ಇವರದೇ ಪ್ರಬಲ ಸಾಕ್ಷ್ಯವಾಗುತ್ತದೆ


ಹಾಗಾಗಿ ಮಾನ್ಯ ವೀಸಿಗಳಾದ ಡಾ.ಯಡಪಡಿತ್ತಾಯರಲ್ಲಿ ಆಗ ನಡೆದ ಭ್ರಷ್ಟಾಚಾರದ ಅನ್ಯಾಯಗಳ ಬಗ್ಗೆ  ವಿಚಾರಿಸಿ ಮುಂದುವರಿಯುವಂತೆ ತಮ್ಮ ಕಕ್ಷಿದಾರರಿಗೆ ತಿಳಿಸಿ 


ಯುನಿವರ್ಸಿಟಿಯೋ ಅಕಾಡೆಮಿಯೋ ಮಾಡಬೇಕಾಗಿದ್ದ ವ್ಯಾಪಕ ಕ್ಷೇತ್ರ ಕಾರ್ಯದ ಅಗತ್ಯವಿದ್ದ ಬಹು ಪರಿಶ್ರಮದ ಭೂತಾರಾಧನೆಯ ಅಧ್ಯಯನವನ್ನು ನಾನು ಸ್ವಂತ ಖರ್ಚಿನಿಂದ ಮಾಡಿ ಪ್ರಕಟಿಸಿದಾಗ ಓದಿದ  ಯೂನಿವರ್ಸಿಟಿಯ  ರಿಜಿಸ್ಟ್ರಾರ್ ಮೆಚ್ಚುತ್ತಿದ್ದರು..ಬಹುಶಃ ಅವರು ಮನದಾಳದ ಮಾತನ್ನು ಮಾತ್ರ ಓದಿರಬೇಕು.ಇಡೀ ಪುಸ್ತಕವನ್ನು ಅಥವಾ ಕೊನೆಯ ಪಕ್ಷ ಅದರ ಪರಿವಿಡಿಯನ್ನೂ ಓದಲಿಲ್ಲವೋ ಏನೋ..ಇರಲಿ ಯಾರದೇ ಮೆಚ್ಚುಗೆ ಅಥವಾ ದೂಷಣೆಗಾಗಿ ನಾನು ಅಧ್ಯಯನ ಮಾಡಿ ಪ್ರಕಟಿಸಿಲ್ಲ.ಇದು ನನ್ನ ಸ್ವಂತ ಆತ್ಮ ತೃಪ್ತಿಗಾಗಿ ಮಾಡಿದ್ದು.ಇದರಲ್ಲಿ ನನಗಾದ ಅನ್ಯಾಯ ನೋವನ್ನು ಹಂಚಿಕೊಳ್ಳುವ ಅಭಿವ್ಯಕ್ತಿ ಸ್ವಾತಂತ್ರ್ಯ ನನಗಿದೆ ಎಂಬುದನ್ನು ತಮ್ಮ ಕಕ್ಷಿದಾರರಿಗೆ ನೀವು ತಿಳಿಸಬೇಕಾಗಿ ಕೋರುವೆ..ಅವರು ಆಗ ರಿಜಿಸ್ಟ್ರಾರ್ ಆಗಿದ್ದ ಈಗ ವೀಸಿಗಳಾಗಿರುವ ಡಾ.ಪಿ ಎಸ್ ಯಡಪಡಿತ್ತಾಯರಲ್ಲಿ ಆಗ ನಡೆದ ಭ್ರಷ್ಟಾಚಾರದ ಬಗ್ಗೆ ವಿಚಾರಿಸಿದರೆ ಮುಕ್ತ ಮಾಹಿತಿ ಅವರಿಗೆ ಸಿಕ್ಕಿ,ನಾನು ಬರೆದದ್ದು ಸರಿಯಾಗಿದೆ ಎಂದು ಮನವರಿಕೆಯಾಗಬಹುದು ಹಾಗಾಗಿ ಅವರಲ್ಲೊಮ್ಮೆ ವಿಚಾರಿಸಲು ತಿಳಿಸಬೇಕಾಗಿ ಕೋರುವೆ 


ನನ್ನ 21 ವರ್ಷದ ಅಧ್ಯಯನದ ಫಲವಾದ , ಸಾವಿರಕ್ಕಿಂತ ಹೆಚ್ಚು ಪುಟಗಳ 1228 ದೈವಗಳ ಮಾಹಿತಿ ಇರುವ 2000₹ ಬೆಲೆಯ ಪುಸ್ತಕವನ್ನು ಖರೀದಿಸಿ ಓದಿದ್ದಕ್ಕಾಗಿ ಧನ್ಯವಾದಗಳು


ಡಾ.ಲಕ್ಷ್ಮೀ ಜಿ ಪ್ರಸಾದ್ 


ಮೊಬೈಲ್ 9480516684 

e mail : samagramahithi@gmail.com

blogs : http:// laxmipras.blogspot.com

  http:// shikshanaloka.blogspot.com

   http://laxmihavyaka.blogspot.com

Tuesday, 24 June 2025

ಆತ್ಮ‌ಕಥೆಯ ಬಿಡಿ ಭಾಗಗಳು ಅನುಭವ ಆಗಲು ಏನು ಮಾಡಬೇಕು ?

 ಆತ್ಮ‌ಕಥೆಯ ಬಿಡಿ ಭಾಗಗಳು 


ಅನುಭವ ಆಗಲು ಏನು ಮಾಡಬೇಕು ?


ಹೌದು..ಹೀಗೊಂದು ತಲೆಬಿಸಿ ಮಾಡ್ತಾ ಇದ್ದ ಕಾಲ ಒಂದಿತ್ತು..


ನಾನು ಎರಡನೆಯ ವರ್ಷ ಬಿಎಸ್ ಸಿ ಪದವಿ ಓದುತ್ತಿರುವಾಗಲೇ ನನಗೆ ಮದುವೆಯಾಯಿತು..ಚಿಕ್ಕಂದಿನಿಂದಲೂ ಬರವಣಿಗೆಯ ಹವ್ಯಾಸ ಇದ್ದ ನನ್ನ ಬರಹಗಳು ಒಂದೊಂದಾಗಿ ಹೊಸ ದಿಗಂತ ಉದಯವಾಣಿ ಮಂಗಳ ಮೊದಲಾದ ಪತ್ರಿಕೆಗಳಲ್ಲಿ ಪ್ತಕಟವಾಗತೊಡಗಿದ್ದವು..


ದಕ್ಷಿಣ ಕನ್ನಡದ ಹಿರಿಯ ಸಾಹಿತಿ ಗಂಗಾ ಪಾದೇಕಲ್ಲು ನನ್ನ ಗಂಡ ಪ್ರಸಾದರ ಸಂಬಂಧಿ..ಒಂದು ದಿನ ಯಾವುದೋ ಕೌಟುಂಬಿಕ ಕಾರ್ಯಕ್ರಮದಲ್ಲಿ ಭೇಟಿಯಾದವರು ನನ್ನ ಬರವಣಿಗೆಗೆ ಮೆಚ್ಚುಗೆ ಸೂಸಿ ಬರಹಕ್ಕೆ ಅನುಭವದ ತಳಹದಿ ಇದ್ದರೆ ಇನ್ನಷ್ಡು ಗಟ್ಟಿಯಾಗುತ್ತದೆ ಎಂದಿದ್ದರು


ಈ ಅನುಭವವನ್ನು ಪಡೆಯುವುದು ಹೇಗೆ ಎಂಬುದೊಂದು ತಲೆಬಿಸಿ ಶುರು ಆಯಿತು ನನಗೆ.ಚಿಕ್ಕಂದಿನಲ್ಲಿ ಶಾಲಾ ಪ್ರಬಂಧದಲ್ಲಿ  ಪ್ರವಾಸ ಮಾಡಿದರೆ ಬೇರೆ ಬೇರೆ ಊರಿನ ಜನರ ಸಂಸ್ಕೃತಿಯ ಪರಿಚಯ ಆಗುತ್ತದೆ.ಅನುಭವ  ದೊರೆಯುತ್ತದೆ ಎಂದು ಬರೆದಿದ್ದೆ.ಅದು ನೆನಪಾಯಿತು.


ನೆನಪಾಗಿಯೂ ಏನೂ ಪ್ರಯೋಜನವಿಲ್ಲದಾಯಿತು..

ಮೊದಲಿಗೆ ಪ್ರವಾಸ ಮಾಡುವಷ್ಟು ದುಡ್ಡು ನಮ್ಮಲ್ಲಿ ಇರಲಿಲ್ಲ.ಅಲ್ಲದೆ ನಾನು ವಿದ್ಯಾರ್ಥಿಯಾಗಿದ್ದು ಪ್ರವಾಸ ಹೋಗಲು ರಜೆಯದ್ದೂ ಸಮಸ್ಯೆಯೇ..ಎಲ್ಲಕ್ಕಿಂತ ಹೆಚ್ಚು ಟ್ರಾವೆಲಿಂಗ್ ಸಿಕ್ ನೆಸ್ ಇರುವ ನನಗೆ ಪ್ರವಾಸ ಬಹಳ ಪ್ರಯಾಸವಾಗಿ ಪರಿಣಮಿಸುತ್ತದೆ.ಹಾಗಾಗಿ ಪ್ರವಾಸದತ್ತ ನನಗೆ ಒಲವಿರಲಿಲ್ಲ..


ಆದರೆ ಹಿರಿಯ ಸಾಹಿತಿ ಗಂಗಾ ಪಾದೇಕಲ್ಲು ಅವರು ಹೇಳಿದ  ಮಾತು ಸದಾ ಕೊರೆಯುತ್ತಿತ್ತು.ಅನುಭವ ಇಲ್ಲದೆ ಬರಹ ಗಟ್ಟಿತನ ಹೊಂದುದಿಲ್ಲ ಎಂದು..


ಹಾಗೆಂದು ನಾನು ಪ್ರವಾಸ ಹೋಗಿಯೇ ಇಲ್ಲವೆಂದಲ್ಲ..ಸುಮಾರು 25-26 ವರ್ಷಗಳ ಮೊದಲು ನಿಜಾಮುದ್ದೀನ್ ನಲ್ಲಿ ನಡೆದ ರಾಷ್ಟ್ರ ಸೇವಿಕ ಸಂಘದ ಸಮ್ಮೇಳನದಲ್ಲಿ ಭಾಗವಹಿಸಲು ಹೋಗಿದ್ದೆ.ಹಾಗೆ ಹೋದವರೆಲ್ಲ ಅಗ್ರ ಡೆಲ್ಲಿ ಹರಿದ್ವಾರ ಹೃಷಿಕೇಶ ಕಾಶಿ ಮೊದಲಾದೆಡೆ ಮೂರು ನಾಲ್ಕು ದಿನ ಸುತ್ತಾಡಿ ಬಂದಿದ್ದೆವು


ಅಂತೆಯೇ ಬೆಂಗಳೂರಿನ ಎಪಿಎಸ್ ಕಾಲೆಜಿನಲ್ಲಿ ಉಪನ್ಯಾಸಕಿಯಾಗಿದ್ದಾಗ ಡಿಡಿ 1 ಚಾನೆಲ್ ನವರು ಆಯೋಜಿಸಿದ್ದ ಖೇಲ್ ಖೇಲ್ ಮೇ ಬದಲೋ ದುನಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಡೆಲ್ಲಿಗೆ ಕರೆದುಕೊಂಡು ಹೋಗಿದ್ದೆ.ಆಗಲೂ ಒಂದಿನಿತು ಸುತ್ತಾಡಿದ್ದೆವು


ನಂತರವೂ ಪ್ರಬಂಧ ಮಂಡನೆಗೆ ಅಹ್ವನಿತಳಾಗಿ ಭಾರತೀಯಾರ್ ಯೂನಿವರ್ಸಿಟಿ,ಗಾಂಧಿ ಗ್ರಾಮ ? ಕೊಯಂಬತ್ತೂರು ಏಲಾಗಿರಿ ಮೊದಲಾದೆಡೆ ಹೋಗಿದ್ದು ಅಲ್ಲೂ ಸುತ್ತ ಮುತ್ತ ಸ್ವಲ್ಪ ತಿರುಗಾಡಿ ಬಂದಿರುವೆ


ಆದರೆ ಈ ಪ್ರವಾಸಗಳು ಯಾವುವೂ ನನಗೆ ಅಂಥಹ ದೊಡ್ಡ ಅನುಭವವನ್ನು ತುಂಬಿ ಕೊಡಲಿಲ್ಲವೇನೋ ಎಂದೆನಿಸ್ತದೆ


ಪ್ರವಾಸಗಳು ಅನುಭವವನ್ನು ತುಂಬಿ ಕೊಡದಿದ್ದರೂ ಬದುಕು ಮೂಟೆ ಮೂಟೆಯಾಗಿ ನಾನಾವಿಧವಾದ ಅನುಭವಗಳನ್ನು ತುಂಬಿಕೊಟ್ಟಿದೆ.

ಒಂದೊಂದು ಯೂನಿವರ್ಸಿಟಿಗೆ ಸಂದರ್ಶನಕ್ಕೆ ಹೋದಾಗ ಒಂದೊಂದು ಅನುಭವ..ನನಗೆ ಪರಿಚಯವೇ ಇಲ್ಲದವರೂ ವಿನಾಕಾರಣ ದ್ವೇಷ ಕಾರುವ ಪರಿಯಂತೂ ನನಗೆ ಅಚ್ಚರಿ ತಂದಿದೆ


ನಾನು ಯಾರ ಸುದ್ದಿಗೂ ಹೋಗದೆ ನನ್ನದೇ ವೃತ್ರಿ ಪ್ರವೃತ್ತಿ ಯಾಗಿ ಬರವಣಿಗೆಯ ಲೋಕದಲ್ಲಿ ಇರುವವಳು


ಆದರೆ ಅದೇ ಕಾರಣಕ್ಕೆ ಸ್ವಕೀಯರಿಂದ ಹಾಗೂ ಪರಕೀಯರಿಂದ ಮತ್ಸರದ ನಡೆಯನ್ನು ಎದುರಿಸಿದೆ..


ಇನ್ನು ಪುಸ್ತಕ ಬರೆಯುವುದು ಪ್ರಕಟಿಸುವುದು ಒಂದು ಚಾಲೆಂಜ್ ಅಗಿದ್ದರೆ ಬಿಡುಗಡೆಯದೇ ಒಂದು ಅನುಭವ


ಕೆಲವರಿಗೆ ಬರಹಗಾರರ ಬಗ್ಗೆ ಎಷ್ಟು ಮತ್ಸರ ಅಹಸನೆ ಇದೆ ಎಂಬುದರ ಅರಿವಾಗ ಬೇಕಾದರೆ ಪುಸ್ತಕ ಬರೆದೇ ಆಗಬೇಕು..

ಬೆಂಗಳೂರು ಹವ್ಯಕ ಸಭೆಯ ಸಂಸ್ಥಾಪಕರಾದ ಮೇಣ ರಾಮಕೃಷ್ಣ ಭಟ್ ಅವರ ಸಂಸ್ಮರಣಾ ಸಮಾರಂಭದಲ್ಲಿ ನನ್ನ ದೈವಿಕ ಕಂಬಳ ಕೋಣ ಎಂಬ ಪುಸ್ತಕ ಮಲ್ಲೇಪುರಂ ವೆಂಕಟೇಶ್ ಅವರಿಂದ ಬಿಡುಗಡೆಯಾಯಿತು..ಇಲ್ಲಿನದೊಂದು ದೊಡ್ಡ ಕಥೆಯೇ ಇದೆ


ಇದಾದ ನಂತರ ಚೊಕ್ಕಾಡಿಯಲ್ಲಿ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳ ಹಸ್ತದಿಂದ ನನ್ನ ಐದು ಪುಸ್ತಕಗಳು ಬಿಡುಗಡೆಯಾದವು..ಇಲ್ಲಿನದು ಮತ್ತೊಂದು ಕಥೆ

ಈ ನಡುವೆ ನನ್ನ ಎರಡು ಪುಸ್ತಕಗಳು ತುಳು ಅಕಾಡೆಮಿಯಲ್ಲಿ ಕಲ್ಲಡ್ಕ ಡಾ.ಕಮಲಾ ಭಟ್ ಅವರಿಂದ ಬಿಡುಗಡೆಯಾದವು..ಅಲ್ಲಿನದೂ ಮತ್ತೊಂದು ಕಥೆ


2021 ರಲ್ಲಿ ನನ್ನ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕ ಮತ್ತೆ ಬೆಂಗಳೂರಿನಲ್ಲಿ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಯವರ ದಿವ್ಯ ಹಸ್ತದಿಂದ ಬಿಡುಗಡೆಯಾಯಿತು..ಈ ಬಗ್ಗೆ ಕನ್ನಡ ಪ್ರಭ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ವರದಿ ಪ್ರಕಟವಾಯಿತು.ಇಲ್ಲಿ ಸಭೆಯಲ್ಲಿದ್ದ ಯಾರೋ ಒಬ್ಬ ಮತ್ಸರಿಯ ಕುತಂತ್ರದಿಂದ ತಪ್ಪೇ ಮಾಡದ ಓರ್ವ  ಪತ್ರಕರ್ತರಿಗೆ ತುಂಬಾ ತೊಂದರೆ ಆಯಿತು..


ಇನ್ನು ವೃತ್ತಿ ಜೀವನದಲ್ಲೂ ನಾನಾ ಅನುಭವಗಳು..ಸಿಹಿ ಕಹಿ ಎರಡೂ ಅನುಭವಗಳೇ..

ಓದುವಾಗಲೂ ಒಂದೊಂದು ಅನುಭವ..


ನಾನು ಕಾಲೇಜಿಗೆ ಸೇರುವ ವರೆಗೆ ಪೋಲೀಸರನ್ನು ನೋಡಿರಲಿಲ್ಲ‌‌.ಸಿನೇಮವನ್ನೂ ಆ ವರೆಗೆ ನೋಡಿರದ ಕಾರಣ  ಪೋಲೀಸರ ಬಗ್ಗೆ ತಿಳಿದೇ ಇರಲಿಲ್ಲ..ಬೆಂಗಳೂರಿಗೆ ಬರುವವರೆಗೆ ಎಂದರೆ ನನಗೆ 35 ವರ್ಷ ಆಗುವವರೆಗೆ ನನಗೆ ಪೊಲೀಸ್ ಸ್ಟೇಶನ್ ,ಹೇಗಿರುತ್ತದೆ  ಕೋರ್ಟು ಹೇಗಿರುತ್ತದೆ ? ನ್ಯಾಯಾಧೀಶರು ಹೇಗಿರ್ತಾರೆ ಎಂಬ ಕಲ್ಪನೆಯೂ ಇರಲಿಲ್ಲ..


ನಿದಾನಕ್ಕೆ ಬದುಕು ಎಲ್ಲವನ್ನೂ ತೋರಿಸಿಕೊಟ್ಟಿತು. ಉಡುಪಿಯ ಬಹುಜನ ಹಿತಾಯ ವೇದಿಕೆಯ ಡಾ.ರವೀಂದ್ರನಾಥ ಶಾನುಭಾಗರಿಂದ ಅನ್ಯಾಯದ ವಿರುದ್ದ ನ್ಯಾಯಯುತವಾಗಿ ಹೋರಾಡಲು ಪ್ರೇರಣೆ ಪಡೆದೆ..

ಜಗತ್ತಿಡೀ ಅನ್ಯಾಯಕ್ಕೊಳಗಾದವರು ತುಂಬಾ ಜನ ಇದ್ದಾರೆ.ಅವರೆಲ್ಲರ ಪರ ಹೋರಾಡಲು ಸಾಧ್ಯವಿಲ್ಲದಿದ್ದರೂ ಕೊನೆಯ ಪಕ್ಷ ನನಗೆ ಕಿರುಕುಳ ಕೊಟ್ಟವರ ವಿರುದ್ಧ ಹೋರಾಡಲು ಕಲಿತೆ..

ಪೋಲೀಸರ ಭ್ರಷ್ಟಾಚಾರದ ಅರಿವಾಯಿತು..ರಕ್ಷಕರೇ ಭಕ್ಷಕರಾದರೆ ಸಾಮಾನ್ಯ ಜನರಿಗೆ ಬದುಕು ಬಹಳ ಕಷ್ಟಕರ ಎಂದೆನಿಸ್ತದೆ

ಬಸವಣ್ಣನವರು ಒಲೆ ಹತ್ತಿ ಉರಿದರೆ ನಿಲಲುಬಹುದಲ್ಲದೆ ಧರೆ ಹತ್ತಿ ಉರಿದರೆ ನಿಲಲು ಬಾರದು ಎಂದು 12 ನೆಯ ಶತಮಾನದಲ್ಲಿ ಹೇಳಿದ್ದರ ನಿಜವಾದ ಅರ್ಥ ಗೊತ್ತಾಯಿತು


ಕೇಳಬಾರದಂತ ಮಾತುಗಳನ್ನೂ ಆರೋಪಗಳನ್ನೂ ಎದುರಿಸಿರುವೆ,ಕನಸಲ್ಲೂ ಕಲ್ಪಿಸದಂತಹ ಪ್ರಶಸ್ತಿ ಪುರಸ್ಕಾರ ಗೌರವಗಳನ್ನೂ ಓದುಗರನ್ನೂ ಪಡೆದಿರುವೆ 


ಆದರೆ ಕೊಲ್ಲುವ ಪಿಶಾಚಿಗಳಿಗಿಂತ ಕಾಯುವ ದೇವರು ದೊಡ್ಡವನು..ಇನ್ನೇನು ಸೋತು ಹೋಗುವೆ ಎನ್ನುವಷ್ಟರಲ್ಲಿ ಏನೋ ಒಂದು ಬೆಳಕು ಎಲ್ಲಿಂದಲೋ  ಬಂದು ರಕ್ಷಿಸುತ್ತದೆ 


ಭವಿತವ್ಯಾಣಿ ದ್ವಾರಾಣಿ ಭವಂತಿ ಸರ್ವತ್ರ..ಆಗಲೇ ಬೇಕಾದವುಗಳಿಗೆ ಎಲ್ಲೆಡೆ ಬಾಗಿಲುಗಳು ಇರುತ್ತವೆ ಎಂದು ಕಾಳಿದಾಸ ಹೇಳಬೇಕಾಗಿದ್ದರೆ ಅವನಿಗೂ ಬದುಕಿನಲ್ಲಿ ಇಂತಹ  ಅಪಾರ ಅನುಭವಗಳು ಆಗಿದ್ದಿರಬೇಕು.


ಈಗ ಅಂದು ಗಂಗಾ ಪಾದೇಕಲ್ಲು ಅವರು ಹೇಳಿದ ಅನುಭವ ಆಗಬೇಕು ಆಗ ಬರಹ ಗಟ್ಟಿಯಾಗುತ್ತದೆ ಎಂದ ಮಾತಿನ ಸರಿಯಾದ ಅರ್ಥ ಆಗುತ್ತಿದೆ


ಅನುಭವ  ಎಲ್ಲೋ ಎಲ್ಲಿಂದಲೋ ಆಗುವದಲ್ಲ..ಬದುಕಿಗೆ ನಾವು ತೆರೆದುಕೊಂಡರೆ ಅದಾಗಿಯೇ ಆಗುತ್ತದೆ 

ಇನ್ನೂ ಆಗುವದ್ದು ತುಂಬಾ ಇರಬಹುದು


ನನ್ನ ಅನುಭವಗಳೆಲ್ಲವೂ ಕಹಿಯಾದುದಲ್ಲ..ಅದರಲ್ಕಿ ಕಹಿಗಿಂತ ಸಿಹಿಯಾದ ಸಂಭ್ರಮವೇ ಹೆಚ್ಚಿದೆ.ಕೆಲವು ಕಹಿ ಅನುಭವಗಳೂ  ಇವೆ


ನಾನು ಉಪನ್ಯಾಸಕಿಯಾದ ಕಾರಣ ಇರಬೇಕು..ನಾನು ಸದಾ ವಿದ್ಯಾರ್ಥಿಗಳ ಗೆಲುವನ್ನು ಸಂಭ್ರಮಿಸುತ್ತೇನೆ.ಅವರಿಗೆ ಬಾಷಣ ಪ್ರಬಂಧ ನಾಟಕ ಹೇಳಿಕೊಟ್ಟು ವೇದಿಕೆಯಲ್ಲಿ ಪ್ರಸ್ತುತ ಪಡಿಸಿ ಅವರ ಜೊತೆ ನಾನೂ ಸಂಭ್ರಮಿಸುತ್ತೆವೆ.ಪ್ರರಿ ವರ್ಷ ಹೊಸ ಹೊಸ ವಿದ್ಯಾರ್ಥಿಗಳು..ಹೊಸ ಹೊಸ ಅನುಭವಗಳು..ಇವರಿಗಾಗಿಯೇ ನಾಟಕ ಬರೆದು ನಾಟಕಗಾರ್ತಿ ಎನಿಸಿಕೊಂಡೆ..ನಾಟಕ ರಚನೆಯ ಬಗ್ಗೆ ಏನೊಂದೂ ಮಾಹಿತಿ ಇರದಿದ್ದರೂ ಏನೋ ನನಗರಿತಂತೆ ಬರೆದೆ .ನಿರ್ದೇಶನದ ಗಂಧ ಗಾಳಿ‌ಇರದಿದ್ದರೂ ಏನೋ ಒಂದು ನನಗರಿತಂತೆ ಮಕ್ಕಳಿಗೆ ಹೇಳಿಕೊಟ್ಟೆ..ಕೆಲವು ಬಹುಮಾನಗಳೂ ಬಂದವು..


ನನಗನಿಸಿದ್ದನ್ನು ಬರೆದು ಪತ್ರಿಕೆಗೆ ಕಳುಹಿಸಿ ಪ್ರಕಟವಾಗಿ ನಾನೂ ಒಬ್ಬ ಲೇಖಕಿ ಎನಿಸಿಕೊಂಡೆ.ನನ್ನ ಬ್ಲಾಗ್ ಬರಹಗಳ ಹೊರತಾಗಿಯೂ   ಮುನ್ನೂರರಷ್ಟು ನನ್ನ ಬರಹಗಳು ಬೇರೆ ಬೇರೆ ಪತ್ರಿಕೆಗಳಲ್ಲಿ  ವೆಬ್ ಪೋರ್ಟರ್ ಗಳಲ್ಲಿ  ಪ್ರಕಟವಾಗಿವೆ 25 ಪುಸ್ತಕಗಳೂ ಪ್ರಕಟವಾಗಿವೆ .ಬ್ಲಾಗ್ ನಲ್ಲಿ ಸಾವಿರಕ್ಕಿಂತ ಹೆಚ್ಚು ಬರಹಗಳಿವೆ

ಸುಮಾರು ಐದೂವರೆ ಲಕ್ಷ ಓದುಗರೂ ಇದ್ದಾರೆ 

ಕಣ್ಣಿಗೇ ಕಾಣಿಸದ ಸಾವಿರಾರು ಮಂದಿ ಹಿತೈಷಿಗಳಿದ್ದಾರೆ.ಅಂತೆಯೇ ಪರಿಚಯವೇ ಇಲ್ಲದಿದ್ದರೂ ದ್ವೇಷ ಸಾಧಿಸುವ ಕೆಲ ಜನರೂ ಇದ್ದಾರೆ.

ಡಾ

ಗಣೇಶಯ್ಯನರ ಕಾದಂಬರಿ ಬಳ್ಳಿ ಕಾಳಬೆಳ್ಳಿಯಲ್ಲಿ ಒಮದು ಪ್ರಮುಖ ಪಾತ್ರವಾಗಿ ಲಕ್ಷ್ಮೀ ಪೋದ್ದಾರ್ ಹೆಸರಿನ ನಿಜ ಪಾತ್ರವಾಗಿ ನನ್ನದೇ ತುಳು ಅಧ್ಯಯನದ ವಿಚಾರಗಳನ್ನು ಪ್ರಸ್ತುತ ಪಡಿಸುವ ವಿಶಿಷ್ಟ ಅನುಭವ ನನ್ನದಾಗಿದೆ 


ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕದ ಸಾವಿರಕ್ಕಿಂತ ಹೆಚ್ಚಿನ ಪುಟಗಳನ್ನು ತಿರುವಿ ಹಾಕುವಾಗ ಇದೆಲ್ಲ ನಾನು ಬರೆದದ್ದಾ ಎಂಬ ಅಚ್ಚರಿ ನನಗಾಗುತ್ತದೆ


ದೈವ ಕೃಪೆ ಎಂದರೆ ಇದೇ ಇರಬೇಕೆನಿಸುತ್ತದೆ..

ಮನುಷ್ಯ ಪ್ರಯತ್ನವನ್ನೇ ನಂಬಿದ್ದವಳು ನಾನು..ಆದರೂ ಮಂಗಳೂರು ಯೂನಿವರ್ಸಿಟಿಯ ಕನ್ನಡ ವಿಭಾಗದಲ್ಲಿ ನಡೆದ ನೇಮಕಾತಿಯ ಅಕ್ರಮ ಅನ್ಯಾಯದ ವಿರುದ್ದ ಸುಪ್ರೀಂ ಕೋರ್ಟಿನ ವರೆಗೂ ಹೋಗಿ ಸ್ಪಷ್ಟ ದಾಖಲೆ ಇದ್ದಾಗಲೂ ಸೋತ ನಂತರ ಮನುಷ್ಯ ಯತ್ನವನ್ನು ಮೀರಿದ ಏನೋ ಒಂದು ಇದೆ ಎಂಬುದು ನನ್ನ ಅರಿವಿಗೆ ಬಂದಿದೆ.ಅದು ತನಕ ನಾನು ಅದೃಷ್ಟ ದುರದೃಷ್ಟ ಎಂಬುದನ್ನು ಒಪ್ಪಿದವಳೇ ಅಲ್ಲ

ತೇನ ವಿನಾ ತೃಣಮಪಿ ನ ಚಲತಿ ಎಂಬಂತೆ ಎಲ್ಲವೂ ಅವನ ಅಣತಿಯಂತೆಯೇ ನಡೆಯುತ್ತದಾ ? 

ನನಗೆ ಗೊತ್ತಿಲ್ಲ..

ತೀರ ಸಣ್ಣ ವಯಸ್ಸಿನಲ್ಲಿಯೆ ಕ್ಯಾನ್ಸರ್ ನಂತಹ ಮಾರಕ ರೋಗಕ್ಕೆ ತುತ್ತಾಗಿ ಈ ಜಗತ್ತಿನಿಂದ ನಿರ್ಗಮಿಸಿದ ಸಹಪಾಠಿಗಳನ್ನು ಸಂಬಂಧಿಕರ  ನೆನಪಾದಾಗ ಐವತ್ತು ತಲುಪಿಸಿದ ದೇವರಿಗೆ ಕೃತಜ್ಞತೆಯನ್ನು  ಅರ್ಪಿಸಬೇಕು ಎಂದು  ನೆನಪಾಗುತ್ತದೆ 


ಹದಿನೈದು ವರ್ಷಗಳ ಹಿಂದೆ ನನಗೆ ಸರಿಯಾದ ಕೆಲಸವಿಲ್ಲ ಎಂದು ತಲೆಕೆಡಿಸಿಕೊಂಡಿದ್ದೆ.ವಯಸ್ಸು ಮೀರುತ್ತದೆ ಎಂಬ ಆತಂಕ ಕಾಡುತ್ತಿತ್ತು.ಅಂತೂ ನಾನು ಬಯಸಿದ ಸರ್ಕಾರಿ ಕಾಲೇಜು ಉಪನ್ಯಾಸಕ ಹುದ್ದೆ ದೊರೆತು ಹದಿನೈದು ವರ್ಷಗಳಾಗುತ್ತಾ ಬಂತು.ನನ್ನ ಕನಸಿನಂತೆ ಯಥೇಚ್ಛವಾಗಿ  ಭೂತ ಕೋಲ ರೆಕಾರ್ಡ್ ಮಾಡಿ ಅಧ್ಯಯನ ಮಾಡುದಕ್ಕಾಗಿಯೇ  ಬೆಳ್ಲಾರೆ ಕಾಲೇಜನ್ನು ಆಯ್ಕೆ ಮಾಡಿದೆ 

ಅದರ ಫಲ ರೂಪವಾಗಿ  ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ ಯಶಸ್ವಿಯಾಗಿದೆ 


ಇನ್ನು ಹತ್ತು ವರ್ಷಗಳ ಸರ್ವಿಸ್ ಇದೆ ನಂತರ ಮತ್ತೆ ಭೂತಾರಾಧನೆಯ ಅದ್ಯಯನ ಮುಂದುವರಿಸಬೇಕೆಂದಿರುವೆ

ನಿವೃತ್ತಿಯ ನಂತರದ ಬದುಕಿಗೆ ಈಗಲೇ ಸಿದ್ಧತೆ ಮಾಡಿಕೊಂಡಿರುವೆ.ನಮ್ಮ ಊರು ಪುತ್ತೂರಿನಲ್ಲಿ ನವ ಚೇತನ ರಿಟೈರ್ ಮೆಂಟ್ ಟೌನ್ ಶಿಪ್ ನಲ್ಲೊಂದು ಮನೆ ನಮಗಾಗಿ ತೆಗೆದಿರಿಸಿರುವೆ.


. A resort for seniors ಆಗಿರುವ ನವ ಚೇತನದಲ್ಲಿ   ಈಗಲೂ ರಜೆಯಲ್ಲಿ ಪೇಟೆಯವೆಲ್ಲ ಜಂಜಾಟಗಳಿಂದ ಹೊರ ಬಂದು ಶಾಂತವಾಗಿ ನಾಲ್ಕು ದಿನ ಅಲ್ಲಿ ಇದ್ದು ಬರುತ್ತಿರುವೆ 


ಮುಂದಿನದು ದೈವ ಚಿತ್ತ..


ಡಾ.ಲಕ್ಷ್ಮೀ ಜಿ ಪ್ರಸಾದ್