ಲೀಗಲ್ ನೋಟೀಸಿಗೆ ನಾನು ನೀಡಿದ ಉತ್ತರ
..
ಅನೇಕರು ಕುತೂಹಲದಿಂದ ಲೀಗಲ್ ನೋಟೀಸಿಗೆ ನೀವು ಲಾಯರ್ ಮೂಲಕ ಉತ್ತರ ಕೊಟ್ಟಿರಾ ? ಅಥವಾ ನೀವೇ ಉತ್ತರಿಸಿದಿರಾ? ಏನೆಂದು ಉತ್ತರಿಸಿದ್ದೀರಿ ? ಎಂದು ಕೇಳಿದ್ದಾರೆ ,ಇದರಲ್ಲಿ ಮುಚ್ಚುಮರೆ ಮಾಡುವದ್ದು ಏನೂ ಇಲ್ಲ.ಇರುವುದನ್ನು ಇರುವ ಹಾಗೆಯೇ ಬರೆದು ಉತ್ತರಿಸಿದ್ದೆ.
ಈ ಬಗ್ಗೆ ತಿಳಿಯಲು ಆಸಕ್ತಿ ಇರುವವರಿಗಾಗಿ ಇಲ್ಲಿ ಕಾಪಿ ಪೇಸ್ಟ್ ಮಾಡಿರುವೆ,ಮುಂದಕ್ಕೆ ಲೀಗಲ್ ನೋಟೀಸ್ ಮತ್ತು ಅದಕ್ಕೆ ನೀಡಿರುವ ಉತ್ತರ ತದನಂತರದ ಹೆಜ್ಜೆಗಳು ಎಲ್ಲವೂ ಆತ್ಮಕಥೆಯಲ್ಲಿ ಸೇರಲಿವೆ.
ಅರುಣಶ್ಯಾಮ್ ಅಸೋಸಿಯೇಟ್ಸ್ ನೀಡಿದ ಲೀಗಲ್ ನೋಟೀಸಿಗೆ ಉತ್ತರ
ನಮಸ್ಕಾರ,
ನಾನು ಡಾ.ಲಕ್ಷ್ಮೀ ಜಿ ಪ್ರಸಾದ್,ಕನ್ನಡ ಪ್ರಾಧ್ಯಾಪಕರು ,ಸರ್ಕಾರಿ ಪಿಯು ಕಾಲೇಜು ಬ್ಯಾಟರಾಯನ ಪುರದ ವಿಳಾಸಕ್ಕೆ ಕೆಲ ದಿನಗಳ ಹಿಂದೆ ತಾವು ಕಳುಹಿಸಿದ ಲೀಗಲ್ ನೋಟೀಸ್ ರಿಜಿಸ್ಟರ್ಡ್ ಪೋಸ್ಟ್ ಮೂಲಕ ಬಂತು.ಒಂದು ಕ್ಷಣ ಸ್ವೀಕರಿಸಲೇ ಬೇಡವೇ ಎಂಬ ತೊಳಲಾಟ ನನ್ನನ್ನು ಕಾಡಿತು ಯಾಕೆಂದರೆ ಪಿಯು ಕಾಲೇಜಿನ ಉಪನ್ಯಾಸಕರು ಎಂದಿಗೂ ಪ್ರಾಧ್ಯಾಪಕರಾಗುವುದಿಲ್ಲ.ಎನ್ ಇ ಟಿ,ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದರೂ ಸೇರುವಾಗ ಉಪನ್ಯಾಸಕರಾದವರು ನಿವೃತ್ತಿಯಾಗುವಾಗಲೂ ಉಪನ್ಯಾಸಕರೇ ಅಗಿರಬೇಕಾಗಿದೆ.ನಾವೆಂದಿಗೂ ಗೈಡ್ ಆಗಲು ಆಗುವುದಿಲ್ಲ.ಸಂಶೋಧನಾ ತಂಡವನ್ನು ಹದಿನಾರು ಹದಿನೇಳು ವಯಸ್ಸಿನಮಕ್ಕಳ ಜೊತೆ ಕಟ್ಟಲಾಗುವುದಿಲ್ಲ
ಇಲ್ಲಿ ಪ್ರಾಧ್ಯಾಪಕರಾಗಿ ಭಡ್ತಿ ಕೊಡುವ ಪದ್ಧತಿ ಇಲ್ಲ
ಇದೇ ಕಾರಣಕ್ಕಾಗಿ ನಾನು ಮೊದಲೇ ಸರ್ಕಾರಿ ಉದ್ಯೋಗದಲ್ಲಿದ್ದರೂ ಕೂಡ ಮಂಗಳೂರು ಯೂನಿವರ್ಸಿಟಿಯ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ
ನಾನು ಎಂಎ( ಕನ್ನಡ )77% ನಾಲ್ಕನೆಯ ರ‌್ಯಾಂಕ್ ಎಂಎ( ಸಂಸ್ಕೃತ) ಮೊದಲ ರ‌್ಯಾಂಕ್ ಎಂಎ(ಹಿಂದಿ) ಎಂಫಿಲ್ ಹಾಗೂ ಎರಡು ಡಾಕ್ಟರೇಟ್ ಪದವಿಗಳನ್ನು ಪಡೆದಿರುವೆ.ಜೊತೆಗೆ ಅರ್ಜಿ ಸಲ್ಲಿಸುವ ಸಮಯಕ್ಕಾಗುವಾಗಲೇ 250 ಕ್ಕೂಹೆಚ್ಚಿನ ಅಂತರಾಷ್ಟ್ರೀಯ ರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧ ಮಂಡನೆ ಮಾಡಿದ್ದೆ.ಆಗ ನನ್ನ 17 ಸಂಶೋಧನಾ ಕೃತಿಗಳೂ ನೂರಕ್ಕೂಹೆಚ್ಚು ಸಂಶೋದನಾ ಬರಹಗಳು ಐದು ನೂರರಷ್ಟು ಇತರ ಬರಹಗಳು ಪ್ರಕಟವಾಗಿದ್ದು ಯುಜಿಸಿ ಗೈಡ್ ಲೈನ್ ನಂತೆ ಲೆಕ್ಕ ಹಾಕಿದಾಗ 1154 ರಷ್ಟು ಶೈಕ್ಷಣಿಕ ನಿರ್ವಹಣಾಂಕ( academic performance indicators) ಗಳನ್ನು ಗಳಿಸಿದ್ದು ಅರ್ಜಿಯಲ್ಲಿ ಡಿಕ್ಲೇರ್ ಮಾಡಿರುವೆ.
ಶೈಕ್ಷಣಿಕ ನಿರ್ವಹಣಾಂಕಗಳನ್ನು ಆಧರಿಸಿ ಹತ್ತು ಜನ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಿದ್ದರು.ನನಗೂ ಆಹ್ವಾನ ಬಂದಿತ್ತು.ನಾನೂ ಸಂದರ್ಶನಕ್ಕೆಹಾಜರಾದೆ.ಎಲ್ಲರಿಗಿಂತ ಹೆಚ್ಚು ಅರ್ಹತೆಗಳಿಸಿದ್ದಕಾರಣ ನನಗೆ ಮೊದಲು ಸಂದರ್ಶನ ಇತ್ತು
ಒಟ್ಟು ನೂರು ಅಂಕಗಳಲ್ಲಿ ಇಪ್ಪತ್ತು ಅಂಕಗಳು ರಿಸರ್ಚ್ ಪರ್ಪಾರ್ಮೆನ್ಸ್ ವಿಭಾಗಕ್ಕೆ ಇತ್ತು.ಇಲ್ಲಿ ಒಂದುಸಂಶೋಧನಾ ಪುಸ್ತಕಕ್ಕೆ ಐದು ಅಂಕ ಒಂದು ಅಂಕ,ರಾಷ್ಟ್ರೀಯ ಸಂಶೋದನಾಪತ್ರಿಕೆಗಳಲ್ಲಿ ಪ್ರಕಟಿತ ಬರಹಕ್ಕೆ ಒಂದು ಅಂಕ ಎಂದುಯುಜಿಸಿ ನಿಗದಿ ಪಡಿಸಿದ್ದು.ಇದನ್ನುಯೂನಿವರ್ಸಿಟಿ statue of conduct interview ನಲ್ಲಿ ಯೂನಿವರ್ಸಿಟಿಯೂ ವೆಬ್ ನಲ್ಲಿ ಹಾಕಿತ್ತು.ಸಂಶೋಧನಾ ಕೃತಿ ಮತ್ತು ಬರಹಗಳಿಗೆ ಮಾತ್ರ ಅಂಕ ನೀಡಬೇಕು ಎಂಬ ಸ್ಪಷ್ಟ ಉಲ್ಲೇಖವೂ ಯುಜಿಸಿ ಗೈಡ್ ಲೈನ್ಸ್ ನಲ್ಲಿ ಇವೆ.
ಇದರಂತೆ ನನಗೆ ಹದಿನೇಳು ಸಂಶೋಧನಾ ಪುಸ್ತಕಗಳು ಪ್ರಕಟಗೊಂಡಿರುವ ಕಾರಣ ರಿಸರ್ಚ್ ಫರ್ಪಾರ್ಮೆನ್ಸ್ ವಿಭಾಗದಲ್ಲಿ ಗರಿಷ್ಟ 20 ಅಂಕಗಳು ದೊರೆಯಬೇಕಾಗಿತ್ತು.ದೊರೆತಿದೆ ಕೂಡ.
ಆದರೆ ಇಲ್ಲಿ ನನ್ನ ಬದಲಿಗೆ ಆಯ್ಕೆಯಾದ ಧನಂಜಯ ಕುಂಬಳೆ ಅವರು ಅವರೇ ಅರ್ಜಿಯಲ್ಲಿ ಡಿಕ್ಲೇರ್ ಮಾಡಿಕೊಂಡಂತೆ ಅವರ ಎರಡು ಸಂಶೋಧನಾ ಕೃತಿಗಳು ಮಾತ್ರ ಪ್ರಕಟವಾಗಿದ್ದು ಒಂದು ಪಿಎಚ್ ಡಿ ಪ್ರಬಂಧವಾಗಿದೆ.ಕನ್ನಡದಲ್ಲಿ ರಾಷ್ಟ್ರೀಯಾಂತರಾಷ್ಟ್ರೀ ಸಂಶೋಧನಾ ಪತ್ರಿಕೆಗಳು ಇಲ್ಲ.ಹಾಗಾಗಿ ಲೇಖನಗಳಿಗೆ ಯಾರಿಗೂ ಅಂಕ ಸಿಗುವುದಿಲ್ಲ.
ಧನಂಜಯರ ಎರಡು ಕೃತಿಗಳಲ್ಲಿ ಒಂದು ಪಿಎಚ್ ಡಿ ಪ್ರಬಂಧವಾಗಿದ್ದು ಅದಕ್ಕೆ ಅಕಾಡೆಮಿಕ್ ವಿಭಾಗದಲ್ಲಿ ಹತ್ತು ಅಂಕಗಳನ್ನು ನೀಡಿದ್ದಾರೆ.ಹಾಗಾಗಿ ರಿಸರ್ಚ್ ಪರ್ಫಾರ್ಮೆನ್ಸ್ ವಿಭಾಗದಲ್ಲಿ ಅವರು ಕೇವಲ ಐದು ಅಂಕಕ್ಕೆ ಅರ್ಹರಿದ್ದರು
ಆದರೆ ಸಂದರ್ಶನವೆಂಬ ನಾಟಕದಲ್ಲಿ ಆಯ್ಈಕೆ ಸಮಿತಿಯವರು ರಿಸರ್ಚ ಫರ್ಫಾರ್ಮೆನ್ಸ್ ವಿಭಾಗದಲ್ಲಿ ಹೆಚ್ಚುವರಿಯಾಗಿ 15 ಅಂಕಗಳನ್ನು ನೀಡಿ ಅವರಿಗೆ ಗರಿಷ್ಠ 20 ಅಂಕಗಳನ್ನು ನೀಡಿದ್ದಾರೆ
.ಅವರು ಗಳಿಸಿದ ಒಟ್ಟು 69.4ಅಂಕಗಳಿಂದ ಇಲ್ಲಿ ಹೆಚ್ಚುವರಿಯಾಗಿ ನೀಡಿದ ಹದಿನೈದು ಅಂಕಗಳನ್ನು ಕಳೆದರೆ ಅವರಿಗೆ 54.4 ಅಂಕ ಮಾತ್ರ ಸಿಗುತ್ತದೆ.ಎಂದರೆ ಅವರು ಇಷ್ಟಕ್ಕೆ ಮಾತ್ರ ಅರ್ಹರಾಗಿದ್ದರು.ಹದಿನೈದು ಅಂಕಗಳನ್ನುಈ ವಿಭಾಗದಲ್ಲಿ ಅರ್ಹತೆ ಇಲ್ಲದೇ ಇರುವಾಗ ಕೂಡ ಹೆಚ್ಚು ಕೊಟ್ಟು ಅವರನ್ನು ಆಯ್ಕೆ ಮಾಡಿದ್ದಾರೆ.ಇದರಿಂದಾಗಿ ನನಗೆ ಅನ್ಯಾಯವಾಗಿದೆ .ನನಗೆ 66 ಅಂಕಗಳ ನ್ನು ನೀಡಿದ್ದರು.
ಮೂರು ಸ್ನಾತಕೋತ್ತರ ಪದವಿಗಳು,ಅದರಲ್ಲಿ ಗಳಿಸಿದ ಅಂಕಗಳು,ಸಂಶೋಧನಾ ಪ್ರಕಟಣೆ,ಸಂಶೋಧನಾ ಪ್ರಬಂಧ ಮಂಡನೆ ಎಲ್ಲದರಲ್ಲೂ ನಾನೇ ಹೆಚ್ಚಿನವಳಾಗಿದ್ದರೂ ಆಯ್ಕೆಯಲ್ಲಿ ಅಕ್ರಮ ,ಅನ್ಯಾಯಗಳು ನಡೆದ ಕಾರಣ ನಾನು ಆಯ್ಕೆ ಆಗದೆ ನನಗಿಂತ ಕಡಿಮೆ ಅರ್ಹತೆಯ ಧನಂಜಯ ಕುಂಬಳೆ ಅವರು ಆಯ್ಕೆ ಆಗಿದ್ದರು
ಈ ಬಗ್ಗೆ ನಾನು ಸುಪ್ರೀಂ ಕೋರ್ಟ್ ತನಕ ಹೋಗಿದ್ದರೂ ನನಗೆ ಗೆಲವು ಸಿಗಲಿಲ್ಲ ಯಾಕೆಂದರೆ ನ್ಯಾಯಾಲಯ ನನಗೆ ಹೆಚ್ಚಿನ ಅರ್ಹತೆ ಇಲ್ಲವೆಂದಿಲ್ಲ.ಬದಲಿಗೆ ಅರ್ಹತೆಯನ್ನು ನಿರ್ಣಯಿಸುವುದು ಆಯ್ಕೆ ಸಮಿತಿ.ಅದರಲ್ಲಿ ನ್ಯಾಯಾಲಯಕ್ಕೆ ತಲೆಹಾಕಲು ಬರುವುದಿಲ್ಲ ಎಂದು ತೀರ್ಪು ನೀಡಿದೆ
ಇದು ನಮ್ಮಲ್ಲಿನ ಕಾನೂನಿನ ಪರಿಮಿತಿ ಇರಬಹುದು.ಆದರೆ ದುಡ್ಡು influenceಗೆ ಒಳಗಾಗಿ ಯುಜಿಸಿ ಮಾರ್ಗದರ್ಶಕ ಸೂತ್ರಗಳನ್ನು ಉಲ್ಲಂಘಸಿ ಹೆಚ್ಚು ಅರ್ಹರನ್ನು ಬಿಟ್ಡುಕಡಿಮೆ ಅರ್ಹರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದ್ದುಅನ್ಯಾಯ ಎಸಗಿದ್ದು ಇದಕ್ಕೆ ಪರಿಹಾರವೇನು ? ಇದು ನನಗೆ ಮಾತ್ರವಲ್ಲ ಇಲ್ಲಿ ಸಂದರ್ಶನಕ್ಕೆ ಬಂದ ಹೆಚ್ಚು ಅರ್ಹತೆ ಇದ್ದೂ ಆಯ್ಕೆಯಾಗದವರ ಎಲ್ಲರ ಪ್ರಶ್ನೆ.ಇಂದಿಗೂ ಎಂದಿಗೂ ಉತ್ತರ ಸಿಗದ ಸಿಗಲಾರದ ಪ್ರಶ್ನೆಯಾಗಿದೆ.
ಮಂಗಳೂರು ಯೂನಿವರ್ಸಿಟಿಯಲ್ಲಿ 2013 ರಲ್ಲಿ ನಡೆದ ನೇಮಕಾತಿಯಲ್ಲಿ ವ್ಯಾಪಕ ಅಕ್ರಮ ಅವ್ಯಹಾರಗಳುಭ್ರಷ್ಟಾಚಾರ ನಡೆದ ಬಗ್ಗೆ ಆ ಸಮಯದಲ್ಲಿ ಟಿವಿಗಳಲ್ಲಿ ಪತ್ರಿಕೆಗಳಲ್ಲಿಯೂ ಬಂದಿತ್ತು
ಆಗ ಮಂಗಳೂರು ಯೂನಿವರ್ಸಿಟಿಯ ರಿಜಿಸ್ಟ್ರಾರ್ ಆಗಿದ್ದ ಈಗ ಅದೇ ಯೂನಿವರ್ಸಿಟಿಯ ವೀಸಿಗಳಾಗಿರುವ ಡಾ.ಸುಬ್ರಹ್ಮಣ್ಯ ಎಡಪಡಿತ್ತಾಯರೂ ಕೂಡ "ಆಗಿನ ವೀಸಿ ಶಿವಶಂಕರ ಮೂರ್ತಿಯವರು ರಿಜಿಸ್ಟ್ರಾರನ್ನು ನೇಮಕಾತಿ ಪ್ರಕ್ರಿಯೆಯಿಂದ ಹೊರಗಿರಿಸಿ ಕೆಲ ಕ್ಲರ್ಕ್ ಹಾಗೂ ಇನ್ಯಾರನ್ನೋ ಸೇರಿಸಿಕೊಂಡು ಅಲ್ಲಿ ವ್ಯಾಪಕ ಅಕ್ರಮ,ಅನ್ಯಾಯ ಭ್ರಷ್ಟಾಚಾರವನ್ನು ಮಾಡಿ ಅರ್ಹರನ್ನು ಬಿಟ್ಟು ಅನರ್ಹರನ್ನು ಆಯ್ಕೆ ಮಾಡಿದ ಬಗ್ಗೆ" ಮುಕ್ತವಾಗಿ ತಿಳಿಸಿದ್ದಾರೆ
ಆಗಿನ ಇಬ್ಬರ ಅಕ್ರಮ ನೇಮಕಾತಿ ರದ್ದಾಗಿ .ಆಗಿನ ನೇಮಕಾತಿಯ ಅಕ್ರಮದ ಬಗ್ಗೆ ಕೋರ್ಟಿಗೆ ಹೋದವರಿಗೆ ಈ ಹುದ್ದೆಗಳು ಸಿಕ್ಕಿವೆ ಇನ್ನೂ ಅನೇಕರು ಕೋರ್ಟಿಗೆ ಹೋಗಿದ್ದು ತೀರ್ಪಿಗೆ ಕಾಯುತ್ತಿದ್ದಾರೆ ಎಂಬ ಬಗ್ಗೆಯೂ ಆಗ ರಿಜಿಸ್ಟ್ರಾರ್ ಆಗಿದ್ದ ಈಗ ವೀಸಿಗಳಾಗಿರುವ ಡಾ.ಸುಬ್ರಹ್ಮಣ್ಯ ಎಡಪಡಿತ್ತಾಯರು ಹೇಳಿದ್ದಾರೆ
.ಈ ಬಗ್ಗೆ ದಾಖಲೆ ಬೇಕಾಗಿದ್ದರೆ ಒದಗಿಸಬಲ್ಲೆ ಆದರೆ ಅದರ ಅಗತ್ಯವೇನಿದೆ ? ತಾವು ಅಥವಾ ತಮ್ನ ಕಕ್ಷಿದಾರರು ಅವರಲ್ಲಿಯೇ ಈ ಬಗ್ಗೆ ವಿಚಾರಿಸಬಹುದು
ಇನ್ನು ನನ್ನ ಕರಾವಳಿಯ ಪುಸ್ತಕದಲ್ಲಿ ನನಗಾದ ಅನ್ಯಾಯ ಅದರಿಂದಾದ ನನ್ನ ನೋವನ್ನು ಹಂಚಿಕೊಂಡಿದ್ದೇನೆ.ಅಲ್ಲಿ ಹಾಕಿದ ಎಲ್ಲ ವಿಚಾರಗಳೂ ನೂರಕ್ಕೆ ನೂರು ನಿಜವಾದುದು
ಹಾಗಾಗಿ ತಮ್ಮ ಕಕ್ಷಿದಾರರಾದ ರಿಜಿಸ್ಟ್ರಾರರು ನನಗಾದ ಅನ್ಯಾಯಕ್ಕೆ ನೈತಿಕವಾಗಿ ವಿಷಾದ ವ್ಯಕ್ತಪಡಿಸಬಹುದಿತ್ತು..ಬದಲಿಗೆ ನನ್ನಿಂದ ಕ್ಷಮಾಪಣೆ ಬಯಸಿದ್ದು ಅಚ್ಚರಿ ತರಿಸಿದೆ
ಕ್ಷಮೆ ಯಾಚಿಸುವಂತಹ ಯಾವುದೇ ತಪ್ಪನ್ನು ನಾನು ಎಸಗಿರುವುದಿಲ್ಲ.ನಡೆದಿರುವ ಸತ್ಯದ ವಿಚಾರಗಳನ್ನು ಪುಸ್ತಕದಲ್ಲಿ ಬರೆಯುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಮಗೆ ನಮ್ಮ ಸಂವಿಧಾನ ನೀಡಿದೆ.ಅಕ್ರಮ ಮಾಡಬಹುದು.ಹೇಳಬಾರದು ಎಂದರೆ ಹೇಗೆ ? ತಮ್ಮ ಕಕ್ಷಿದಾರರೇ ವಿವೇಚಿಸಲಿ
ಅಂದ ಹಾಗೆ ಮಂಗಳೂರು ಯುನಿವರ್ಸಿಟಿ ವಿರುದ್ಧ ಸುಪ್ರೀಂ ಕೋರ್ಟಿಗೆ ಹೋಗುವ ಸಲುವಾಗಿ ವಕೀಲರಾಗಿದ್ದ ತಮ್ಮನ್ನು ( ಅರುಣ ಶ್ಯಾಮರನ್ನು)ನಾನು ಸಂಪರ್ಕಿಸಿದ್ದು ತಮ್ಮ ಫೀಸ್ ಎರಡು ಲಕ್ಷ ರುಪಾಯಿ ಎಂದಿದ್ದೀರಿ ಕೂಡ
ಇಷ್ಟು ಶುಲ್ಕ ನನ್ನಿಂದ ಭರಿಸಲು ಸಾಧ್ಯವಿಲ್ಲವೆಂದು ಸ್ವಲ್ಪ ಕಡಿಮೆಗೆ ಒಪ್ಪಿದ ಪರೀಕ್ಷಿತ್ ಅಂಗಡಿ ಎಂಬ ವಕೀಲರ ಮೂಲಕ ನಾನು ಸುಪ್ರೀಂಕೋರ್ಟಿಗೆ ಹೋದೆನಾದರೂ ಜಯಗಳಿಸಲು ಸಾಧ್ಯವಾಗಿಲ್ಲ.ಇಲ್ಲೆಲ್ಲ ಹೈ ಕೋರ್ಟಿನ ತೀರ್ಪನ್ನು ಒಪ್ಪಿದ್ದರು
ಹೀಗೆ ಹೈ ಕೋರ್ಟ. ,ಡಬಲ್ ಬೆಂಚ್ ಸುಪ್ರೀಂ ಕೋರ್ಟ್ ಎಂದು ಕೋರ್ಟ್ ಕಛೇರಿಗೆ ಅಲೆಯುವ ಬದಲು ಲಾಯರುಗಳಿಗೆ ಲಕ್ಷಗಟ್ಟಲೆ ಶುಲ್ಕ ನೀಡುವ ಬದಲು ಅದನ್ನೇ ಲಂಚವಾಗಿ ನೀಡಿದ್ದರೆ ನಾನಿಂದು ಪ್ರೊಫೆಸರಾಗಿರುತ್ತಿದ್ದೆ.ಆದರೆ ಎಂದಿಗೂ ಅನ್ಯಾಯದ ಹಾದಿಯನ್ನು ತುಳಿಯದ ನನಗೆ ಅದಾಗದು ಎಂಬುದೂ ನನ್ನ ಮನದಾಳದ ಮಾತು
ಎಲ್ಲೆಡೆ ಭ್ರಷ್ಟಾಚಾರ ನಡೆದರೆ ಬಡ ಪ್ರತಿಭಾವಂತರ ಪಾಡೇನು ? ಇದೂ ಕೂಡ ಉತ್ತರ ಸಿಗದ ಪ್ರಶ್ನೆ
ನನಗೇನೋ ಬದುಕಲು ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ವೃತ್ತಿ ಇದೆ.ಆದರೆ ಇತರ ಬಡ ಪ್ರತಿಭಾವಂತರ ಪಾಡೇನು ? ನಮ್ಮ ವಿದ್ಯಾರ್ಥಿಗಳಿಗೆ ಚೆನ್ನಾಗಿ ಓದಿ ಉತ್ತಮ ಅಂಕ ಗಳಿಸಿ ರ‌್ಯಾಂಕ್ ತೆಗೆಯಿರಿ ಒಳ್ಳೆಯ ಕೆಲಸ ಸಿಗುತ್ತದೆ ಎಂದು ಹೇಳುವಾಗೆಲ್ಲ ಸರ್ಕಾರಿ ಹುದ್ದೆಗಳ ಆಯ್ಕೆಯಲ್ಲಿ ನಡೆಯುವ ಅಕ್ರಮ ,ವ್ಯಾಪಕ ಭ್ರಷ್ಟಾಚಾರ ನೆನಪಾಗಿ ಧ್ವನಿ ಕಂಪಿಸುತ್ತದೆ
ಹಾಗಾಗಿಯೇ ನನಗಾದ ನೋವನ್ನು ನಾನು ನನ್ನ ಅಧ್ಯಯನ ಕೃತಿ ಕರಾವಳಿಯ ಸಾವಿರದೊಂದು ದೈವಗಳು ನ ಮನದಾಳದ ಮಾತಿನಲ್ಲಿ ನನ್ನ ಪುಸ್ತಕದ ಓದುಗರೊಂದಿಗೆ ಹಂಚಿಕೊಂಡಿರುವೆ
ಇದರಲ್ಲಿ ತಮ್ಮ ಕಕ್ಷಿದಾರರಿಗೆ ಏನು ತಪ್ಪು ಕಂಡಿದೆಯೋ ನನಗರಿವಾಗಿಲ್ಲ.ಬಹು಼ಶಃ ಈಗಿನ ರಿಜಿಸ್ಟ್ರಾರಿಗೆ ಹತ್ತು ವರ್ಷ ಹಿಂದೆ ನಡೆದ ನೇಮಕಾತಿಯಲ್ಲಿನ ಅಕ್ರಮ ,ವ್ಯಾಪಕ ಭ್ರಷ್ಟಾಚಾರಗಳ ಅರಿವಿಲ್ಲ ಎಂದೆನಿಸುತ್ತದೆ.ಆದರೆ ಆಗ ರಿಜಿಸ್ಟ್ರಾರ್ ಆಗಿದ್ದು ಈಗ ವೀಸಿಗಳಾಗಿರುವ ಡಾ.ಸುಬ್ರಹ್ಮಣ್ಯ ಎಡಪಡಿತ್ತಾಯರಿಗೆ ಆಗ ನಡೆದ ಅಕ್ರಮಗಳ ,ಅನ್ಯಾಯಗಳ,ವ್ಯಾಪಕ ಭ್ರಷ್ಟಾಚಾರದ ಅರಿವಿದೆ.ಅದನ್ನವರು ನನ್ನಲ್ಲಿ ಮಾತನಾಡುವಾಗ ಒಪ್ಪಿಕೊಂಡಿದ್ದಾರೆ ಕೂಡ.
ನಿಮ್ಮ ಕಕ್ಷಿದಾರರು ಸರ್ಕಾರದ ದುಡ್ಡಿನಲ್ಲಿ ನನ್ನ ವಿರುದ್ಧ ಕೋರ್ಟಿಗೆ ಹೋದರೆ ಇವರದೇ ಪ್ರಬಲ ಸಾಕ್ಷ್ಯವಾಗುತ್ತದೆ
ಹಾಗಾಗಿ ಮಾನ್ಯ ವೀಸಿಗಳಾದ ಡಾ.ಯಡಪಡಿತ್ತಾಯರಲ್ಲಿ ಆಗ ನಡೆದ ಭ್ರಷ್ಟಾಚಾರದ ಅನ್ಯಾಯಗಳ ಬಗ್ಗೆ ವಿಚಾರಿಸಿ ಮುಂದುವರಿಯುವಂತೆ ತಮ್ಮ ಕಕ್ಷಿದಾರರಿಗೆ ತಿಳಿಸಿ
ಯುನಿವರ್ಸಿಟಿಯೋ ಅಕಾಡೆಮಿಯೋ ಮಾಡಬೇಕಾಗಿದ್ದ ವ್ಯಾಪಕ ಕ್ಷೇತ್ರ ಕಾರ್ಯದ ಅಗತ್ಯವಿದ್ದ ಬಹು ಪರಿಶ್ರಮದ ಭೂತಾರಾಧನೆಯ ಅಧ್ಯಯನವನ್ನು ನಾನು ಸ್ವಂತ ಖರ್ಚಿನಿಂದ ಮಾಡಿ ಪ್ರಕಟಿಸಿದಾಗ ಓದಿದ ಯೂನಿವರ್ಸಿಟಿಯ ರಿಜಿಸ್ಟ್ರಾರ್ ಮೆಚ್ಚುತ್ತಿದ್ದರು..ಬಹುಶಃ ಅವರು ಮನದಾಳದ ಮಾತನ್ನು ಮಾತ್ರ ಓದಿರಬೇಕು.ಇಡೀ ಪುಸ್ತಕವನ್ನು ಅಥವಾ ಕೊನೆಯ ಪಕ್ಷ ಅದರ ಪರಿವಿಡಿಯನ್ನೂ ಓದಲಿಲ್ಲವೋ ಏನೋ..ಇರಲಿ ಯಾರದೇ ಮೆಚ್ಚುಗೆ ಅಥವಾ ದೂಷಣೆಗಾಗಿ ನಾನು ಅಧ್ಯಯನ ಮಾಡಿ ಪ್ರಕಟಿಸಿಲ್ಲ.ಇದು ನನ್ನ ಸ್ವಂತ ಆತ್ಮ ತೃಪ್ತಿಗಾಗಿ ಮಾಡಿದ್ದು.ಇದರಲ್ಲಿ ನನಗಾದ ಅನ್ಯಾಯ ನೋವನ್ನು ಹಂಚಿಕೊಳ್ಳುವ ಅಭಿವ್ಯಕ್ತಿ ಸ್ವಾತಂತ್ರ್ಯ ನನಗಿದೆ ಎಂಬುದನ್ನು ತಮ್ಮ ಕಕ್ಷಿದಾರರಿಗೆ ನೀವು ತಿಳಿಸಬೇಕಾಗಿ ಕೋರುವೆ..ಅವರು ಆಗ ರಿಜಿಸ್ಟ್ರಾರ್ ಆಗಿದ್ದ ಈಗ ವೀಸಿಗಳಾಗಿರುವ ಡಾ.ಪಿ ಎಸ್ ಯಡಪಡಿತ್ತಾಯರಲ್ಲಿ ಆಗ ನಡೆದ ಭ್ರಷ್ಟಾಚಾರದ ಬಗ್ಗೆ ವಿಚಾರಿಸಿದರೆ ಮುಕ್ತ ಮಾಹಿತಿ ಅವರಿಗೆ ಸಿಕ್ಕಿ,ನಾನು ಬರೆದದ್ದು ಸರಿಯಾಗಿದೆ ಎಂದು ಮನವರಿಕೆಯಾಗಬಹುದು ಹಾಗಾಗಿ ಅವರಲ್ಲೊಮ್ಮೆ ವಿಚಾರಿಸಲು ತಿಳಿಸಬೇಕಾಗಿ ಕೋರುವೆ
ನನ್ನ 21 ವರ್ಷದ ಅಧ್ಯಯನದ ಫಲವಾದ , ಸಾವಿರಕ್ಕಿಂತ ಹೆಚ್ಚು ಪುಟಗಳ 1228 ದೈವಗಳ ಮಾಹಿತಿ ಇರುವ 2000₹ ಬೆಲೆಯ ಪುಸ್ತಕವನ್ನು ಖರೀದಿಸಿ ಓದಿದ್ದಕ್ಕಾಗಿ ಧನ್ಯವಾದಗಳು
ಡಾ.ಲಕ್ಷ್ಮೀ ಜಿ ಪ್ರಸಾದ್
ಮೊಬೈಲ್ 9480516684
e mail : samagramahithi@gmail.com
blogs : http:// laxmipras.blogspot.com
http:// shikshanaloka.blogspot.com
http://laxmihavyaka.blogspot.com



























No comments:
Post a Comment