ಹಾವಿನ ಬಾಯಿಗೆವಬಡುದು ಹದ್ದಿಂಗೆ ಹಾಕುದೆಂತಕ?
ಹೆರಿಯೋರು ಒಟ್ಟಿಂಗೆ ಇದ್ದದೆ ಇಂತ ಗಾದೆ ಮಾತುಗಳ ಸುರಿಮಳೆ ಸುರಿತಾ ಇರ್ರು.ಹೆರ್ಕಿ ತುಂಬಿಸಿ ಮಡುಗುದು ನಮ್ಮಜವಾಬ್ದಾರಿ ಅಷ್ಟೇ
ಅಮ್ಮನತ್ತರೆ ಏನೋಮಾತಾಡುವಾಗ ಎಂಗಳ ಊರಿನ ಆಸ್ರಿಯ ವಿಚಾರ ಬಂತು
ಆಲ್ಲ ಮಾವನೋರಿಂಗೂ ಅವರ ಅಷ್ಷಂಗೂ ಯಾವುದೋ ಞಾಯ ಆಗಿ ಕೋರ್ಟಿಂಗೆ ಹೋ್ಇತ್ತಿದಬು.ಇದೆಲ್ಲ ಎಂಗಳಗಳಮದುವೆ ಹಿಂದಣವಿಚಾರ
ಎಲ್ಲೊರೂ ಅವರ ಕುಟುಂಬಂದ ಹೆರ ಬಹಿಷ್ಕಾರ ಹಾಕಿತ್ತಿದವು.ಅಬದರ ಕ್ಯಾರೇ ಮಾಡದ್ದೆ ಮುಂದುವರುದ್ದವು.ಅವರಲ್ಲಿ ಒಬ್ಬ ಜಡ್ಜ್ ,ಲೆಕ್ಚರ್ ಎಲ್ಲ ಆಗಿರೆಕ್ಕು.ಈಗ ರಿಟೈರ್ ಆದಿಪ್ಪಲೂ ಸಾಕು
ಆ ಸಮಯದಲ್ಲಿಮಾವನೋರ ಹೆಸರಿಲಿ ಆಸ್ತಿ ಇಪ್ಪಲಾಗ ಹೇಳಿ ಪಾಲು ಮಾಡಿದ್ದವು.ಅದರಲ್ಲಿ ಹೆಚ್ಚಿನ ಬೆಳೆ ಬೆಳವ ಭೂಮಿಬೋರ್ವೆಲ್ ಇಪ್ಪ ಜಾಗೆ ಪ್ರಸಾದ್ ಹೆಸರಿಲಿ ಇದ್ದು.
ಅವರ ರೀತಿ ಎಂಗಳುದೆ ಮನೆಂದೆ ಹರವೇ ಇದ್ದೆಯ..ಬಹುಷ್ಕಾರ ಹೇಳಿ ಆಯಿದಿಲ್ಲೆ.ಆದರೆ ಎಂಗ ಹಪದು ಬಪ್ಪದರ ಎಂದೋ ನಿಲ್ಸಿದ್ದೆಯ.ಗೌರವ ಪ್ರೊತಿಮನ್ನಣೆ ಇಲ್ಲದ್ದಲ್ಲಿಹೋಯಕ್ಕಾಗದ ಅವಶ್ಯಕತೆ ಎಂಗೊಗೆ ಎಂದಿಂಗೂ ಬಯಿಂದಿಲ್ಲೆ.
ಅಮ್ಮ ಬೆಂಗಳೂರು ಬಯಿಂದ
ಅಮ್ಮ ಒಂದು ಬಂತಕ್ಕೆ ಸಿರಿವಂತಿಕೆ ಪಡದಪ್ಪದ ಅಜ್ಜನ ಮನೆಯ ಆಸ್ತಿಯ ಪೂರ್ತಿ ದೊಡ್ಡಮ್ಮನ ಮಗಂಗೆ ಬಿಟ್ಟುಕೊಟ್ಟ.
ಎಂಗಳಲಿಎಂತಾತೂ ಹೇಳಿರೆ ಮನೆ ಮಕ್ಕದ ಹದಿನೈದು ಇಪ್ಪತ್ತು ಎಕರೆ ಜಾಗ ಖರೀದಿಸಿಸವು.ಅಣ್ಣಂದ ದೊಡ್ಡ ತಮ್ಮಂದೆ ಅಮೇರಿಕಕ್ಕೆ ಹೋಗಿ ಕೈ ತುಂಬ ದುಡುದು ದಮಸ್ವಂತ ಮನೆ ಮಾಡಿ ಸೆಟಲ್ಆದವು.ಅಕ್ಕನಮಗಸೊಸೆ ಮಗಳು ಅಳಿಯಂದೆಅಮೇರಿಕಲ್ಲಿಒಳ್ಳೆ ಕೆಲಸ ಹಿಡುದವು.ಅಕ್ಕನ ಮಗ ವಿಜ್ಞಾನಿ ಆದ.
ಎನಗೆ ಸರ್ಕಾರಿ ಕೆಲಸ ಸಿಕ್ಕಿತ್ತು.ಪ್ರಸಾದರಿಂಗೂ ಒಳ್ಳೆಯ ಕೆಲಸ
ಅಮ್ಮನ ಅಪ್ಪ ಅಜ್ಜಂಗೆ ಎನ್ನ ಅಮ್ಮಂಗೆ ದೊಸ್ಡಮ್ಮಂದೆ ಎರಡೇ ಮಕ್ಕ.ದೊಡ್ಡಮ್ಮನ ಕುಟುಂಬ ಅಜದಜನ ಒಟ್ಟಿಂಗೆ ಇತ್ತು
ಅಜ್ಜಿ ರೀರಿ ಹೋಪದ್ದದ್ದೆ ಆಸ್ತಿ ವಿವಾದ ಬಂತು
.ಅಂಬಗ ಎಂಗೊಗೆ ಬಡತನ ಎಂಗ ಐದು ಮಕ್ಕಳ ಓದುಸುಲೆ ಮದುವೆ ಮಾಡುವೆ ..ಆಸ್ತಿಯ/ ಪೈಸೆಯ ಅಗತ್ತ ಇತ್ತು
ಹಾಂಗಾಗಿ ಅರ್ಧ ಪಾಲಿಂಗಾಗಿ ಅಮ್ಮ ಕೋರ್ಟಿಗೆ ಹೋದ
ಕೋರ್ಟ್ ಕಛೇರಿ ಹೇಳಿರೆ ಗೊಂತಿದ್ದಲ್ಲ..
ಸುಮಾರು ವರ್ಷ ಮುಂದೆ ಹೋತು.ಕೊನೆಗೂ ಅಮ್ಮನ ಪರ ತೀರ್ಪು ಬಂತು.ಆ ಕಾಲಕ್ಕಪ್ಪಗ ಎಂಗ ಎಲ್ಲ ಸೆಟಲ್ ಆಯಿದೆಯ.ಇಪ್ಪ ಆಸ್ತಿಯನ್ನೇ ನೋಡಿಕೊಂಬದು ಕಷ್ಟ ಹೇಳುವ ಪರಿಸ್ಥಿತಿ ಮುಟ್ಟಿತ್ತು
ದೊಡ್ಡಮ್ಮನ ಮಗಾಣ್ಣ ಅದೇ ಭೂಮಿಲಿಯೇ ಇತ್ತಿದೆ
ಹಾಂಗೆ ಅಮ್ಮಾಸ್ತಿಯ ದಾನಪತ್ರ ಮಾಡಿ ಅಕ್ಕನ/ ದೊಡ್ಡಮ್ಮನ ಮಗಂಗೆ ಬಿಟ್ಟುಕೊಟ್ಟ.
ಇದೇ ಸಂದಿಗ್ದ ಎಂಗೊಗೂ ಈಗ ಬಯಿಂದು
ಎಂಗ ಒಳ್ಳೆಯ ಕೆಲಸ ಹಿಡುದು ಮನೆ ಕಟ್ಟಿ ಸಣ್ಣದೊಂದು ಕಮರ್ಷಿಯಲ್ ಕಾಂಫ್ಲೆಕ್ಸ್ ದೆ ಕಟ್ಟಿಕೊಂಡೆಯ
ಇನ್ನು ಎಂಗೊಗೂ ಊರಿನ ಆಸ್ತಿ ಬೇಡ.
ಈಗ ಕಾಲ ಬದಲಾಯಿದು.ಹೊಟ್ಟೆಕಿಚ್ಚಿಂದ ಗಾಳಿ ಹಾಕುತ್ತಿದ್ದ ದೊಡ್ಡ ಮಾವನವರ ಮಕ್ಕ ಬಾವಂದಿರು ದೊಡ್ಡ ಮಾವನವರ ಮಗ ಮೈದುನ ಎಲ್ಲ ಅಕಾಲಿಕಮರಣಕ್ಕೆ ಈಡಾಯಿದವು.
ತುಂಅ ಚಾಡಿ ದುರ್ಬೋಧನೆ ಮಾಡಿ ಮಾಡಿಮನೆ ಕೆಡಿಸ್ತಿದ್ದ ಸೋದರ ಅತ್ತೊಗೆಯ ಮಗಂಗೆ ಅಳಯಂದೆ ಅಕಾಲಿಕವಾಗಿ ತೀರಿ ಹೋಗಿ ನೊಂದಿದವು
ಹಾಂಗಾಗಿ ಮನೆಂದಿಗೆ ಕೇಡು ಬುದ್ದಿ ಹೇಳಿಕೊಸುವವರು ಇಲ್ಲೆ.
ಈಗ ಎಂಗ ಆಸ್ತಿಯ ಅಧಿಕೃತವಾಗಿ ರಿಕಿಸ್ಟರ್ ಮಾಡಿ ದಾನಪತ್ರದ ಮೂಲಕ ಬಿಟ್ಟುಕೊಡಕ್ಕು.ಇಲ್ಲವೇ ಹತ್ತರಣ ಬ್ಯಾರಿಗ ಈ ಹಿಂದೆ ಎಂಗಳತ್ರೆ ಆ ಹ
ಜಾಗ ಕೇಳಿದ್ದು ಅವು ಕೊಟ್ಟ ಪುಡಿಕಾಸಿಂಗೆ ಮಾರಕ್ಮು.
ಈ ವಿಷಯದ ಮಾತು ಬಪ್ಪಗ ಅಮ್ಮ ಹಾವಿಂಗೆ ಬಡುದು ಹದ್ದಿಗೆ ಹಾಕುದೆಂದಕೆ ಹೇಳಿದ.
ಇವನ ಕೈಯಿಂದ ಎಳದು ಆರಿಂಗೋ ತಿನ್ಸುವ ಎಂಗ ಇದ್ದು.ಅಪ್ಪನ ವಾರಿಸುದಾರ ಅವ..ದುಡ್ಡದ್ದಂದೆ ಆ ಭೂಮಿಲಿ
ಈ ಹಿಂದೆ ಏನೇ ಅನ್ಯಾಯ ಮಾಡಿರಲಿ..ಅದರ ಅವಕ್ಕೇ ಬಿಟ್ಟುಕೊಡಿ ಅತ್ಲಗಿ ಎಂದ
ಎನಗೂ ಸರಿ ಎನಿಸಿ ಮೈದುನನ ಮಗಳಿಂಗೆ ಫೋನ್ ಮಾಡಿ ಎಲ್ಲ ವ್ವಯಸ್ಥೆ ಮಾಡ್ಸು ಬಂದು ಸಹಿ ಮಾಡ್ತೆಯೆ ಹೇಳಿದೆ
ಅದಿರಲಿಮತ್ತೆ ಗಾದೆಗೆ ಬಪ್ಪ.ಹಾವಿನ ಬಡುದು ಹದ್ದಿಂಗೆ ಹಾಕುದೆಂದತಕೆ ಹೇಳಿರೆ ಹಾವು ತಿಂಬಲಾಗಿ ಕೆಪ್ಪೆಯನ್ನೋ ಇನ್ನೆನನ್ನೋ ಬೇಟಯಾಡಿ ಹಿಡುದಿರುತ್ತು.ಹಾವಿಂಗೆ ಬಡುದು ಅದರ ಬಿಡಿಸಿ ಅಪ್ಪಗ ಅಲ್ಲಿ ಕಾದುಕೂದುಕೊಂಡು ಇದ್ದ ಹದ್ದು ಅದರ ತೆಕ್ಕೊಂಡು ಹೋವುತ್ತು
ಹಾವಿನ ಆಹಾರವ ಅದರ ಬಾಯಿಂ ಎಳದು ತೆಗೆದು ಹದ್ದಿಗೆ ಸಿಕ್ಕುವಾಂಗೆ ಮಾಡುದೆಂತಕರ? ಕಷ್ಟಪಟ್ಟು ಹೊಂಚುಹಾಕಿ ಬೇಟೆ ಮಾಡಿ ಹಿಡುದು ಹಾವೇ ತಿನ್ಲಿ
ಭೂಮಿಉ ವಿಚಾರಕ್ಕೆ ಬಂದರೆ ಕಷ್ಟ ಪಟ್ಟು ದುಡುದೋರೇ ತಿನ್ನಲಿ.ಆರೋ ಒಪ್ಪ ಕಮ್ಮಿಗೆ ಹೊಡದು ಲಾಭಮಾಡುವಾಂಗೆ ಮಾಡುದೆಂಥಕೆ ಅಲ್ಲಾದಾ
ಬಹಳ ಒಳ್ಳೆಯ ಸಂದೇಶವ ಈ ಗಾದೆ ಕೊಡ್ತು
ನಿಂಗಳ ಕಡೆಲಿದೆ ಇದು ಬಳಕೆಲಿ ಇದ್ದಾ ತಿಳುಸಿ ಆತಾ?
ಡಾ.ಲಕ್ಷ್ಮೀ ಜಿ ಪ್ರಸಾದ್
No comments:
Post a Comment