ದೊಡ್ಡವರ ದಾರಿ24 - ಅನಾಥ ಮಕ್ಕಳ ಪೊರೆವ ತಾಯಿ ಪದ್ಮಾ ಭಟ್ ©ಡಾ ಲಕ್ಷ್ಮೀ ಜಿ ಪ್ರಸಾದ
ಫೇಸ್ ಬುಕ್ ನನಗೆ ಹೊರ ಜಗತ್ತಿನ ಅನೇಕ ಮಹನೀಯರನ್ನು ಪರಿಚಯಿಸಿದೆ.ಗುಡ್ಡೆಯಿಂದ ಗುಡ್ಡೆ ಅಡ್ಡ ಎಂಬಂತೆ ವಿಶಿಷ್ಠವಾದ ಸಾಧನೆ ಮಾಡಿದವರ ಬಗ್ಗೆ ನನಗೆ ತಿಳಿದದ್ದು ಫೇಸ್ ಬುಕ್ ಮೂಲಕ.ಅನೇಕರು ಪೇಸ್ ಬುಕ್ ಸೇರಿದಂತೆ ಅಂತರ್ಜಾಲ ಬಳಕೆ ಬಹಳ ಕೆಡುಕುಂಟು ಮಾಡುತ್ತದೆ ಎಂದು ಹೇಳುವುದು ಕೇಳಿದ್ದೆ.ಆದರೆ ನನಗೇನೂ ಅದು ಕೆಟ್ಟದು ಎನಿಸಿಲ್ಲ ಅದೆಲ್ಲ ನಾವು ಹೇಗೆ ಬಳಕೆ ಮಾಡುತ್ತೇವೆ ಎಂಬುದರ ಮೇಲೆ ನಿಂತಿದೆ.
Mobile: 9986014189/9844540380
Sri Satya Bharathi Ashrama vidyalaya, behind Ekadantha layout, Saibaba temple road, Challagatta)
)
ಸಾಲು ಸಾಲು ಸೈಟ್ ಗಳು, ಮನೆಯ ಮೇಲೆ ಮನೆ ಕಟ್ಟುಸುತ್ತಾ ಈ ಜನ್ಮದಲ್ಲಿ ಮಾತ್ರವಲ್ಲ ಮುಂದಿನ ಹತ್ತು ಜನ್ಮದಲ್ಲೂ ಉಂಡು ಮುಗಿಯದಷ್ಟು ಸಂಪತ್ತನ್ನು ಅಡ್ಡ ಮಾರ್ಗದಲ್ಲಿ ಅಥವಾ ನೇರ ಮಾರ್ಗದಲ್ಲಿ ಗಳಿಸಿ ಇನ್ನೂ ಇನ್ನೂ ಸಾಲದು ಸಾಲದೆಂದು ತುಂಬಿಡುವ ಜನರೇ ತುಂಬಿದ ಸ್ವಾರ್ಥಿಗಳ ಜಗತ್ತಿನಲ್ಲಿ , ತಮ್ಮ ಮನೆ ಸೈಟನ್ನು ಮಾರಾಟ ಮಾಡಿ ಅನಾಥ ಮಕ್ಕಳನ್ನು ವೃದ್ಧರನ್ನು ಪೊರೆಯುವ ಮಹತ್ಕಾರ್ಯ ಮಾಡುತ್ತಿರುವ ಪದ್ಮಾ ಭಟ್ ಬಲು ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ
ಫೇಸ್ ಬುಕ್ ನನಗೆ ಹೊರ ಜಗತ್ತಿನ ಅನೇಕ ಮಹನೀಯರನ್ನು ಪರಿಚಯಿಸಿದೆ.ಗುಡ್ಡೆಯಿಂದ ಗುಡ್ಡೆ ಅಡ್ಡ ಎಂಬಂತೆ ವಿಶಿಷ್ಠವಾದ ಸಾಧನೆ ಮಾಡಿದವರ ಬಗ್ಗೆ ನನಗೆ ತಿಳಿದದ್ದು ಫೇಸ್ ಬುಕ್ ಮೂಲಕ.ಅನೇಕರು ಪೇಸ್ ಬುಕ್ ಸೇರಿದಂತೆ ಅಂತರ್ಜಾಲ ಬಳಕೆ ಬಹಳ ಕೆಡುಕುಂಟು ಮಾಡುತ್ತದೆ ಎಂದು ಹೇಳುವುದು ಕೇಳಿದ್ದೆ.ಆದರೆ ನನಗೇನೂ ಅದು ಕೆಟ್ಟದು ಎನಿಸಿಲ್ಲ ಅದೆಲ್ಲ ನಾವು ಹೇಗೆ ಬಳಕೆ ಮಾಡುತ್ತೇವೆ ಎಂಬುದರ ಮೇಲೆ ನಿಂತಿದೆ.
ಅದಿರಲಿ.ನನಗೆ ಪೇಸ್ ಬುಕ್ ಮೂಲಕ ಪರಿಚಿತರಾಗಿನಂತರ ಬಹಳ ಆತ್ಮೀಯರಾಗಿರುವ ಪದ್ಮಾ ಭಟ್ ಅವರ ಮಹತ್ತರ ಕಾರ್ಯದ ಬಗ್ಗೆ ಇಲ್ಲಿ ಹೇಳಲು ಹೊರಟಿರುವೆ.ಅಲ್ಲೊಂದು ಇಲ್ಲೊಂದು ಪತ್ರಿಕೆಗಳಲ್ಲಿ ಅನಾಥ ಮಕ್ಕಳನ್ನು ಸಾಕಿ ಬದುಕು ಕೊಟ್ಟ ಮಹನೀಯರ ಸೇವೆಯ ಬಗ್ಗೆ ಓದಿ ಅಬ್ಬಾ ಅವರು ನಿಜಕ್ಕೂ ಗ್ರೇಟ್ ಎಂದು ಕೊಳ್ಳುತ್ತೇವೆ.ಆದರೆ ನಮ್ಮ ಸುತ್ತ ಮುತ್ತಲೂ ಅಂತಹ ಕೆಲವರು ಇದ್ದಾರೆ.ಅಂತಹವರ ಸಾಧನೆಯನ್ನು ಗುರುತಿಸಲು ಆಂತರ್ಯದ ಕಣ್ಣು ತೆರೆದಿರಬೇಕು ಅಷ್ಟೇ.
ಬೆಂಗಳೂರಿನ ನಾಗದೇವನಹಳ್ಳಿಯಲ್ಲಿ ಒಂದು ಚಿಕ್ಕ ಮನೆಯಲ್ಲಿ ವಾಸಿಸುವ ಪದ್ಮಾ ಭಟ್ ಹೆಚ್ಚಾಗಿ ಇರುವುದು ಅವರೇ ಸ್ಥಾಪಿಸಿರುವ ಸತ್ಯ ಭಾರತಿ ಆಶ್ರಮದಲ್ಲಿ.
ಪಿಯುಸಿ ಆಗಿ telecommunicationsಡಿಪ್ಲೋಮಾ ಮುಗಿಸಿ ಬೆಂಗಳೂರಿಗೆ ಬಂದು ಸಣ್ಣ ವಯಸಿನಲ್ಲಿಯೇ ಸ್ವಂತ ಇಂಡಸ್ಟ್ರಿ ಪ್ರಾರಂಭ ಮಾಡಿದ ಪದ್ಮಾ ಭಟ್ ಸಾಗಿದ ಹಾದಿ ಕಲ್ಲುಮುಳ್ಳಿನದು.ಆದರೆ ನೀಡಿದ್ದು ಅಮೃತ .
ಎಲ್ಲಾ ಸವಾಲುಗಳನ್ನು ಎದುರಿಸುತ್ತಾ ಅವರು ಮಾಡಿದ ಮಹತ್ಕಾರ್ಯ ಅತ್ಯಂತ ಶ್ಲಾಘನೀಯ. ಚಿಕ್ಕಂದಿನಲ್ಲಿ ತಮ್ಮ ಓರ್ವ ತಂಗಿಯ ಅಸಹಜ ಸಾವು,ಹಾಗೂ ತಂಗಿಯರಿಗೆ ಬೇರೆಯವರ ಮನೆಯಲ್ಲಿದ್ದು ಓದಬೇಕಾಗಿ ಬಂದ ಸಂದರ್ಭದಲ್ಲಿ ಕಾಡಿದ ಅಭದ್ರತೆ ಅವರಿಗೆ ಈ ಕಾರ್ಯ ಮಾಡಲು ಪ್ರೇರಣೆ ಎಂದು ಅವರು ಹೇಳುತ್ತಾರೆ. ಬೇರೆ ಬಡ ಹೆಣ್ಣು ಮಕ್ಕಳಿಗೆ ಅಭದ್ರತೆ ಕಾಡಬಾರದೆಂಬ ಸದುದ್ದೇಶದಿಂದ ಅವರು ಅನಾಥ ಮಕ್ಕಳ ಆಶ್ರಮ ತೆರೆದಿದ್ದಾರೆ
ಬೆಂಗಳೂರಿನ ಚಳ್ಳೆಕೆರೆಯಲ್ಲಿ ಸುಮಾರು ನಲುವತ್ತು ಅನಾಥ ಬಡ ಮಕ್ಕಳಿಗೆ ಉಚಿತ ಊಟ ವಸತಿ ಶಿಕ್ಷಣ ಒದಗಿಸುವ ಮಹತ್ಕಾರ್ಯ ಮಾಡುತ್ತಿದ್ದಾರೆ. ಜೊತೆಗೆ ಕೆಂಗೇರಿಯ ನಾಗದೇವನ ಹಳ್ಳಿಯಲ್ಲಿ ಒಂದು ಉಚಿತ ವೃದ್ಧಾಶ್ರಮವನ್ನು ನಡೆಸುತ್ತಿದ್ದಾರೆ.ಇಲ್ಲಿ ಒಂಬತ್ತು ಜನ ಹಿರಿಯರು ಇದ್ದಾರೆ.
ಇಷ್ಟಕ್ಕೂ ಪದ್ಮ ಭಟ್ ಕೋಟ್ಯಧಿಪತಿಯಲ್ಲ ,ದುಡ್ಡು ಹೆಚ್ಚಾಗಿ ಅಥವಾ ಕಪ್ಪು ಹಣವನ್ನು ಬಿಳಿ ಮಾಡಲು ಆಶ್ರಮ ತೆರೆದವರಲ್ಲ.ಯಾವುದೇ ಸರಕಾರದ ಸೌಲಭ್ಯ ಪಡೆಯುವುದಕ್ಕಾಗಿಯೂ ಇದನ್ನು ಮಾಡಿಲ್ಲ .
ಅವರ ಆಂತರ್ಯದ ಉದಾರ ಹೃದಯ ಬಡ ಮಕ್ಕಳ ಕಡೆಗಿರುವ ಒಲವೇ ಅವರನ್ನು ಈ ಮಹತ್ಕಾರ್ಯದಲ್ಲಿ ತೊಡಗಿಸಿದೆ.
ಇವರಿಗೆ ದಿನಕ್ಕೆ ಕಡಿಮೆ ಎಂದರೆ ಹನ್ನೆರಡು ಸಾವರ ರುಗಳಷ್ಟು ಖರ್ಚು ಬರುತ್ತದೆ.ಕೆಲವು ದಾನಿಗಳು ಆಗಾಗ ತಮ್ಮ ಮಕ್ಕಳ ಹುಟ್ಟು ಹಬ್ಬದ ಸಂದರ್ಭದಲ್ಲಿ ಅಥವಾ ಇನ್ ಯಾವುದೋ ಸಂದರ್ಭದಲ್ಲಿ ಇಲ್ಲಿನ ಮಕ್ಕಳಿಗೆ ಅನ್ನದಾನದ ಕಾರ್ಯ ಮಾಡುತ್ತಾರೆ.ಆದರೆ ಬೇರೆ ಯಾವುದೇ ರೀತಿಯ ಸಹಾಯ ಧನ ಸಿಗದೆ ಇರುವ ಕಾರಣ ಪದ್ಮ ಭಟ್ ಅವರೇ ಈ ಎಲ್ಲ ಖರ್ಚನ್ನು ನಿಭಾಯಿಸುತ್ತಾರೆ.ಇದಕ್ಕಾಗಿ ತನ್ನ ಒಂದು ಮನೆ ಮತ್ತು ಎರಡು ಸೈಟುಗಳನ್ನು ಮಾರಾಟ ಮಾಡಿದ್ದಾರೆ.
ಸೈಟಿನಮೇಲೆ ಸೈಟ್ ಮನೆಯ ಮೇಲೆ ಮನೆ ಕಟ್ಟುಸುತ್ತಾ ಈ ಜನ್ಮದಲ್ಲಿ ಮಾತ್ರವಲ್ಲ ಮುಂದಿನ ಹತ್ತು ಜನ್ಮದಲ್ಲೂ ಉಂಡು ಮುಗಿಯದಷ್ಟು ಸಂಪತ್ತನ್ನು ಅಡ್ಡ ಮಾರ್ಗದಲ್ಲಿ ಅಥವಾ ನೇರ ಮಾರ್ಗದಲ್ಲಿ ಗಳಿಸಿ ಇನ್ನೂ ಇನ್ನೂ ಸಾಲದು ಸಾಲದೆಂದು ತುಂಬಿಡುವ ಜನರೇ ತುಂಬಿದ ಸ್ವಾರ್ಥಿಗಳ ಜಗತ್ತಿನಲ್ಲಿ , ತಮ್ಮ ಮನೆ ಸೈಟನ್ನು ಮಾರಾಟ ಮಾಡಿ ಅನಾಥ ಮಕ್ಕಳನ್ನು ವೃದ್ಧರನ್ನು ಪೊರೆಯುವ ಮಹತ್ಕಾರ್ಯ ಮಾಡುತ್ತಿರುವ ಪದ್ಮಾ ಭಟ್ ಬಲು ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ( ಲತಿಕಾ ಭಟ್ ಎಂಬ ಇನ್ನೋರ್ವ ಫೇಸ್ ಬುಕ್ ಸ್ನೇಹಿತರು ಕೂಡ ಇಂತಹ ಮಹತ್ಕಾರ್ಯ ಆರಂಭಿಸಿದ್ದಾರೆ ).ಅವರ ಈ ಮಹತ್ಕಾರ್ಯ ದಲ್ಲಿ ನಾವೂ ಸ್ವಲ್ಪ ಅಳಿಲ ಸೇವೆ ಮಾಡಿ ಕೃತಾರ್ಥರಾಗೋಣ ಏನಂತೀರಾ ?
(ಸ್ನೇಹಿತರೇ.. ನಮ್ಮ ಮಕ್ಕಳ ಆಶ್ರಮದ ಕಟ್ಟಡದ ಮುಂಭಾಗದ 1000 ಚ ಅಡಿ ವಿಸ್ತೀರ್ಣದ ಹಾಲ್ ಪ್ರಸ್ತುತ ಶೀಟ್ ಹಾಸಿದೆ . ಪೂರ್ಣವಾಗಿ ಟೇರೆಸ್ ಮಾಡಬೇಕಿದ್ದರೆ ಮೂವತ್ತು ನಲವತ್ತು ಲಕ್ಷ ಖರ್ಚಿದೆ.
ನಿಮ್ಮಲ್ಲಿ ಯಾರಿಗಾದರೂ ಈ ಪುಣ್ಯಕಾರ್ಯದಲ್ಲಿ ಭಾಗಿಯಾಗುವ ಮನಸ್ಸಿದ್ದಲ್ಲಿ ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬಹುದು. ಖುದ್ದಾಗಿ ಭೇಟಿ ನೀಡಿಯೂ ಸಹಾಯ ಮಾಡಬಹುದು. ನಿಮ್ಮ ದೇಣಿಗೆಗೆ ಆದಾಯ ತೆರಿಗೆ ಕಾಯ್ದೆ 80g ಪ್ರಕಾರ ತೆರಿಗೆ ವಿನಾಯಿತಿ ಇದೆ.
ನಿಮ್ಮ ಸಹಕಾರದ ನಿರೀಕ್ಷೆಯಲ್ಲಿ.
..ಪದ್ಮಾ ಭಟ್
..ಪದ್ಮಾ ಭಟ್
Sri Satya Sai Mahila Charitable Trust (R)
SB a/c no..520101021856601
IFSC Code: CORP0000744
Corporation Bank, KS Town Branch
Bangalore-560060.
Web: www.srisaimahila.org
Email: smct189@gmail.com
http://shikshanaloka.blogspot.in/2017/11/24.html?m=1
)
ಧನ್ಯವಾದಗಳು ಮೇಡಂ....
ReplyDeleteನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ
_/|\_
Deleteತುಂಬಾ ತುಂಬಾ ಧನ್ಯವಾದಗಳು..ನಿಮ್ಮ ಪ್ರೋತ್ಸಾಹಕ್ಕೆ..ಆದರೆ ಅಷ್ಟೊಂದು ದೊಡ್ಡವಳಲ್ಲ ನಾನು..ಯಾಕೋ ಈ ಹೊಗಳಿಕೆ ನನಗೆ ಸ್ವಲ್ಪ ಮುಜುಗರ ತರಿಸುತ್ತಿದೆ ಲಕ್ಷ್ಮಿ ಅಕ್ಕ..ಬೇರೆ ಸಾಧಕರಿಗೆ ಹೋಲಿಸಿದರೆ ನಾನೇನೂ ಅಲ್ಲವೇ ಅಲ್ಲ..
ReplyDelete_/|\__/|\__/|\_
Delete