ನಾನಾರು ?
ಹೌದು ಇದೊಂದು ಪ್ರಶ್ನೆ ನನ್ನಲ್ಲಿ ಯಾವಾಗಲೂ ಕಾಡುತ್ತದೆ ಅನೇಕರು ಕೇಳುತ್ತಾರೆ ಕೂಡ !
ಹುಟ್ಟಿದ್ದು ಬೆಳೆದದ್ದು ಕಾಸರಗೋಡಿನಪುಟ್ಟ ಗ್ರಾಮ ಕೋಳ್ಯೂರಿನಲ್ಲಿ .ಮದುವೆಯಾಗುವ ತನಕ ನನಗೆ ನಾನೆಲ್ಲಿಯವಳು ಎಂಬ ಸಮಸ್ಯೆ ಇರಲಿಲ್ಲ .ನಾನು ಗಡಿನಾಡ ಕನ್ನಡತಿ ಯಾಗಿದ್ದೆ .
ಎರಡನೇ ವರ್ಷ ಪದವಿ ಓದುತ್ತಿದ್ದಂತೆ ಪ್ರಸಾದ್ ಜೊತೆ ಮದುವೆಯಾಯಿತು .ಪ್ರಸಾದ್ ಕೆಲಸ ಮಾಡುತ್ತಿದ್ದದು ಬೆಂಗಳೂರಿನಲ್ಲಿ .ಅವರ ತಂದೆ ತಾಯಿ ಇದ್ದದ್ದು ವಿಟ್ಲ ಸಮೀಪದ ಕೋಡಪದವಿನಲ್ಲಿ .ವಿವಾಹನಂತರ ನಾನು ಓದಿದ್ದೆ ದೊಡ್ಡ ಅಕ್ಷಮ್ಯ ಅಪರಾಧವಾಯಿತು ಮನೆ ಮಂದಿ ಹಾಗೂ ಊರವರಿಗೆ.
ಬಂಧು ಬಳಗದ ಹಾಗೂ ಊರಿನ ಹಲವು ಮಂದಿ ಓದಿ ಸರ್ಕಾರಿ ಉದ್ಯೋಗದಲ್ಲಿದ್ದವರಿರು ಒಬ್ಬಾತ ವಿಟ್ಲದಲ್ಲಿ ಡಾಕ್ಟರ ಕೂಡ .ಒಬ್ಬರು ಓದಲು ಪ್ರೋತ್ಸಾಹಿಸಬೇಕಾಗಿದ್ದ ಶಿಕ್ಷಕರೂ ಇದ್ದರು !.ಓದಿನ ಮಹತ್ವ ಅರಿಯದವರೇನೂ ಆಗಿರಲಿಲ್ಲ ,ಆದರೆ ನಾನು ಓದಿ ಮೇಲೆ ಬರುವುದು ಇವರುಗಳಿಗೆ ಬೇಕಾಗಿರಲಿಲ್ಲ ,ಹೊಟ್ಟೆ ಕಿಚ್ಚಿನಿಂದ ಮನೆ ಮಂದಿಯವರನ್ನು ಉದ್ದಾರ ಮಾದುವವರಂತೆ ಅಭಿನಯಿಸಿ ಕಿಚ್ಚು ಹತ್ತಿಸಿ ಗಾಳಿ ಹಾಕಿದರು .ಹಾಗಾಗಿ ನನ್ನನ್ನು ಎಂದೂ ಈ ಊರಿನವರು ತಮ್ಮವರೆಂದು ಭಾವಿಸಿಲ್ಲ
ನಾನು ಮಾತ್ರ ನನ್ನ ತಂದೆ ತಾಯಿ ಸಹೋದರರ ಮತ್ತು ಪ್ರಸಾದ್ ಬೆಂಬಲದಿಂದ ಓದಿದೆ .
ನಂತರದ ಕೆಲಕಾಲ ಎಕ್ಕಾರಿನಲ್ಲಿ ,ಕೆಲವು ವರ್ಷ ಮಂಗಳೂರಿನಲ್ಲಿದ್ದೆವು.ಮತ್ತೆ ಉದ್ಯೋಗದ ಕಾರಣಕ್ಕೆ ಬೆಂಗಳೂರಿಗೆ ಬಂದೆವು .ದೇವರ ದಯೆ ಅಪಾರ .ಹಾಗಾಗಿ ಅಲ್ಲಿಯೂ ದೇವರು ನಮಗೆ ಅಂಗೈ ಅಗಲದಷ್ಟು ಜಾಗವನ್ನು ನಮಗಾಗಿ ತೆಗೆದು ಇಟ್ಟಿದ್ದ ,ಹಾಗಾಗಿ ಇಲ್ಲಿ ಚಿಕ್ಕದೊಂದು ಸ್ವಂತ ಮನೆ ಮಾಡಿ ತಲೆ ಮೇಲೆ ಸೂರನ್ನು ಕಟ್ಟಿಕೊಂಡೆವು.
ಇದರೆಡೆಯಲ್ಲಿ ನನಗೆ ಬೆಳ್ಳಾರೆ ಸರ್ಕಾರೀ ಪದವಿ ಪೂರ್ವ ಕಾಲೇಜ್ ನಲ್ಲಿ ನನ್ನ ಇಷ್ಟದ ಕನ್ನಡ ಉಪನ್ಯಾಸಕಿ ಕೆಲಸ ಸಿಕ್ಕಿತು.
ಆ ಕಾಲೇಜ್ ನನ್ನದೆಂದೇ ಭಾವಿಸಿ ದುಡಿಯುತ್ತಿದ್ದೇನೆ ಬೆಳ್ಳಾರೆ ಬೀಡು ,ಇತಿಹಾಸದ ವಿಚಾರಗಳ ಬಗ್ಗೆ ಸುತ್ತು ಮುತಲಿನ ದೈವಗಳ ಬಗ್ಗೆ ವಿಶೇಷ ಜಾನಪದ ಕುಣಿತಗಳ ಬಗ್ಗೆ ಅಧ್ಯಯನ ಮಾಡಿ ಅಲ್ಲಿನ ಮಕ್ಕಳಿಗೆ ತಿಳಿಸಿದೆ .ಕ್ಷೇತ್ರ ಕಾರ್ಯಕ್ಕೆ ನನ್ನ ವಿದ್ಯಾರ್ಥಿಗಳನ್ನೂ ಕರೆದೊಯ್ದು ಸಂಶೋಧನೆಯ ದಾರಿಯನ್ನು ಹೇಳಿ ಕೊಟ್ಟೆ .ಗ್ರಾಹಕ ಹಕ್ಕು ಮಾಹಿತಿ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿದೆ ,ಪ್ರತಿ ಶನಿವಾರ ಮಧ್ಯಾಹ್ನ ಮೇಲೆ ನಿಂತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಯತ್ನವನ್ನೂ ಪ್ರಾಮಾಣಿಕವಾಗಿ ಮಾಡಿದೆ
ಎರಡು ಮೂರು ವರ್ಷ ಮೊದಲು ಬೆಳ್ಳಾರೆಯ ನಮ್ಮ ಕಾಲೇಜ್ ಸಭಾಂಗಣದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಯ ವತಿಯಿಂದ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ "ತುಳು ಮಿನದನ"ನಡೆಯಿತು ,ಆಗ ನಮ್ಮ ಕಾಲೇಜ್ ನ ಪ್ರಾಂಶುಪಾಲರು ನಮ್ಮಲ್ಲಿ ಡಾ.ಲಕ್ಷ್ಮೀ ಜಿ prasad ಎಂಬ ಕನ್ನಡ ಉಪನ್ಯಾಸಕಿ ತುಳು ಸಂಸ್ಕೃತಿ ಬಗ್ಗೆ ಪಿಎಚ್ ಡಿ ಮಾಡಿದ್ದು ಆ ಬಗ್ಗೆ ತುಂಬಾ ಕೆಲಸ ಮಾಡಿದ್ದಾರೆ .ಅವರಿಗೆ ಒಂದು ಪ್ರಬಂಧ ಮಂಡನೆಗೆ ಅವಕಶ ಕೊಡಿ ಎಂದು ತುಳು ಅಕಾಡೆಮಿಯಲ್ಲಿ ಕೇಳಿದರು .ನನಗೂ ನನ್ನ ಅಧ್ಯಯನದ ಫಲಿತವನ್ನು ಸುಳ್ಯದ ತುಳು ಆಸಕ್ತ ಮಂದಿಯ ಎದುರು ಬಿತ್ತರಿಸುವ ಆಸಕ್ತಿ ಇತ್ತು ಇದರಿಂದ ಅಧ್ಯಯನಕ್ಕೆ ಹೆಚ್ಚ್ಚಿನ ಬೆಂಬಲ ದೊರಕೀತು ಎಂಬ ಭಾವನೆಯಿಂದ .
ಆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಅಮೃತ ಸೋಮೇಶ್ವರ ಅವರು ವಹಿಸಿದ್ದು ನನ್ನ ಆಸಕ್ತಿಯನ್ನು ಅವರಿಗೆ ತಿಳಿಸಿದೆ ,ಆಗ ಅವರು ಆಗಿನ ತುಳು ಅಕಾಡೆಮಿ ಅಧ್ಯಕ್ಷರಾಗಿದ್ದ ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರಿಗೆ ತಿಳಿಸಿ ನನಗೊಂದು ಅವಕಶ ನೀಡಲು ವಿನಂತಿಸಿದರು .
ಮರು ದಿನ ನನಗೆ ಪಾಲ್ತಾಡಿಯವರಿಂದ ಫೋನ್ ಬಂತು !ನಿಮ್ಮನ್ನು ಕವಿ ಗೋಷ್ಠಿಗೆ ಹಾಕಿದ್ದೇವೆ ಎಂದು !
.ಅಯ್ಯೋ ರಾಮ ದೇವರೇಒಮ್ಮೆಗೆ ಗಾಭರಿಯಾಯಿತು !ಇವರು ಸಮ್ಮೇಳನ ಮಾಡಿದ್ದಾರೆ ನನಗೆ ವೇದಿಕೆಗೆ ಏರುವ ಅವಕ್ಷಕ್ಕಾಗಿ ನಾನು ಕವಿಯಾಗಲು ಸಾಧ್ಯವೇ ?! !ನನಗೆ ಕವಿತೆ ಬರೆಯಲು ಬರುವುದಿಲ್ಲ ,ನನಗೆ ವಿಚಾರ ಮಂಡನೆಗೆ ಅವಕಾಶ ಬೇಕಾಗಿರುವುದು ಎಂದು ತಿಳಿಸಿದೆ !
ಸ್ಥಳೀಯರಿಗೆ ಅವಕಾಶವಿಲ್ಲ ,ಹೆಂಗಸರಿಗೆ ರೇಷ್ಮೆ ಸೀರೆ ಒಟ್ಟು ಮೆರೆಯಲು ವೇದಿಕೆ ಬೇಕಾದ್ದು ಬೇಕಾದರೆ ಕವಿ ಗೋಷ್ಠಿಗೆ ಬನ್ನಿ ಎಂದರು !ಎಂದು ಅವರು ಆಗ ಹೇಳಿದರು!
ಅಬ್ಬ !,ಅವಕಾಶ ನಿರಾಕರಿಸಲು ಬೇರೆ ಯಾವ ಕಾರಣವೂ ಸಿಕ್ಕದೆ ಅವರು ನನ್ನನ್ನು ಸ್ಥಳೀಯ ಳು ಎಂಬ ಕಾರಣ ನೀಡಿ ಅವಕಾಶ ನಿರಾಕರಿಸಿದ್ದರು!ಪ್ರಪಂಚದಲ್ಲಿ ಎಲ್ಲೆಡೆ ಸ್ಥಳೀಯ ರಿಗೆ ಮೊದಲ ಆದ್ಯತೆ ಇರುತ್ತದೆ .ತುಳು ಅಕಾಡೆಮಿ ಯಲ್ಲಿ ಮಾತ್ರ ಇದು ವಿರುದ್ಧ !ಯಾರೂ ಹೇಳುವವರು ಕೇಳುವವರು ಇಲ್ಲವಾದಾಗ ಏನು ಬೇಕಾದರೂ ಮಾಡಬಹುದು !
ಕಳೆದ ವರ್ಷ ನಮ್ಮಶಿಕ್ಷಣ ಇಲಾಖೆ 2009 ರಲ್ಲಿ ಆಯ್ಕೆಯಾದ ಎಲ್ಲ ಉಪನ್ಯಾಸಕರಿಗೂ ನಿಯೋಜನೆ ಮೇರೆಗೆ ಬಿಎಡ್ ಓದು ವಂತೆ ಆದೇಶ ನೀಡಿತು ,ಅದರಂತೆನನಗೆ ಬೆಂಗಳೂರಿನಕೆಂಗೇರಿಯಎಸ್,ಜೆಬಿಕಾಲೇಜ್ನ ಲ್ಲಿ ಓದಲು ಅವಕಾಶ ನೀಡಿದರು ,ನಾನು ಅಲ್ಲಿ ಓದುತ್ತಾ ಇದ್ದೇನೆ.ನನಗೆ ವೇತನ ಬೆಳ್ಳಾರೆ ಕಾಲೇಜ್ ನಲ್ಲಿಯೇ ಆಗುತ್ತಿದೆ ,ಮುಂದಿನ ತಿಂಗಳು ನನ್ನ ಓದು ಮುಗಿದು ಬೆಳ್ಳಾರೆಗೆ ಹೋಗುವವಳಿದ್ದೇನೆ.
ಕಳೆದ ವರ್ಷಸುಳ್ಯ ತಾಲೂಕಿನ ಚೊಕ್ಕಾಡಿಯಲ್ಲಿ ಸುಳ್ಯ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು ,ಸಾಹಿತ್ಯ ಸಮ್ಮೇಳನ ನಡೆಯುವಾಗ ಬೇರೆ ಬೇರೆ ಕ್ಷೆತ್ರಗಲಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವ ಸತ್ ಸಂಪ್ರದಾಯ ಅಲ್ಲಿದೆ ಹಾಗಾಗಿ ಆಗ ಸುಳ್ಯ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರು ಲಕ್ಷ್ಮಿಯವರು ಸಂಶೋಧನಾ ಕ್ಷೇತ್ರದಲ್ಲಿ ತುಂಬಾ ಕೆಲಸ ಮಾಡಿದ್ದಾರೆ 20 ಪುಸ್ತಕ ಬರೆದಿದ್ದಾರೆ ಬೆಳ್ಳಾರೆ ಇತಿಹಾಸಕ್ಕೆ ಕೊಡುಗೆ ನೀಡಿದ್ದಾರೆ ಎರಡು ಡಾಕ್ಟರೇಟ್ ಪಡೆದಿದ್ದಾರೆ (ಆಗ ನನ್ನ ಎರಡನೆಯ ಡಾಕ್ಟರೇಟ್ ಪ್ರಬಂಧ ಸಲ್ಲಿಕೆಯಾಗಿತ್ತು ಇತ್ತೀಚೆಗೆ ಸಿಕ್ಕಿತು ಕೂಡ ) ಹಾಗಾಗಿ ಅವರನ್ನು ಗುರ್ತಿಸುವ ಎಂದು ಹೇಳಿದರು ಆಗ ಚೊಕ್ಕಾಡಿಯ ಕನ್ನಡ ಸಾಹಿತ್ಯ ಸಮ್ಮೇಳನದ ಜವಾಬ್ದಾರಿ ವಹಿಸಿದ ಧುರೀಣರು ಅವರು ಇಲ್ಲಿಯವರಲ್ಲ ಅವರಿಗೇಕೆ ಇಲ್ಲಿ ಪುರಸ್ಕಾರ ಎಂದು ವಿರೋಧಿಸಿದರು!! (ಇದನ್ನು ಸುಳ್ಯ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರೆ ನನಗೆ ತಿಳಿಸಿದ್ದಾರೆ )
ನಿನ್ನೆ ಬಾಳಿಲದಲ್ಲಿ ಸುಳ್ಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು .ಇಲ್ಲಿ ಕೂಡ ನಾನು ಹೊರಗಿನವಳು ಎಂಬ ಕಾರಣ ನೀಡಿರಬಹುದು !
ಅದಕ್ಕೆ ಈಗ ನನಗೆ ಒಂದು ಸಂಶಯ ಆಗಿದೆ !ನಾನೆಲ್ಲಿಯವಳು ಎಂದು
ಎರಡು ಮೂರೂವರ್ಷ ಮೊದಲು ತುಳು ಸಾಹಿತ್ಯ ಅಕಾಡೆಮಿ ನನ್ನನ್ನು ಸ್ಥಳೀಯಳು ಎಂದು ಹೇಳಿ ನನಗೆ ಅವಕಾಶ ನಿರಾಕರಿಸಿತ್ತು ಈಗ ನಾನು ಹೊರಗಿನವಳು ಎಂದು ಕನ್ನಡ ಸಾಹಿತ್ಯ ಪರಿಷತ್ ಹೇಳುತ್ತಿದೆ !ಯಾವುದು ನಿಜ ?ಯಾವುದು ಸರಿ ?
ಒಂದೇ ವ್ಯಕ್ತಿ ಒಂದೇ ಸ್ಥಳದಲ್ಲಿ ಸ್ಥಳೀಯಳಾಗಿಯೂ ,ಹೊರಗಿನವಳಾಗಿಯೂ ಕಾಣಿಸಿಕೊಳ್ಳಲು ಸಾಧ್ಯವೇ ?ತುಳು ಅಕಾಡೆಮಿಗೆ ನಾನು ಸ್ಥಳೀಯಳು,ಕನ್ನಡ ಸಾಹಿತ್ಯ ಪರಿಷತ್ ಗೆ ಹೊರಗಿನವಳು !ಇದೆಂಥ ವೈಚಿತ್ರ್ಯ!ಇಷ್ಟಕ್ಕೂ ನಾನಿದ್ದುದು ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ಹೆಮ್ಮೆಯ ತುಳುನಾಡಿನ ಭಾಗವಾದ ಬೆಳ್ಳಾರೆಯಲ್ಲಿ!ಬಹುಶ ನೋಡಿದವರು ಹಾಕಿಕೊಂಡ ಕನ್ನಡಕ ಬೇರೆ ಬೇರೆ ಬಣ್ಣದಿಂದ ಕೂಡಿದ ಕಾರಣ ನಾನು ಸ್ಥಳೀಯ ಳಾಗಿಯೂ ಹೊರಗಿನವಳಾಗಿಯೂ ಕಾಣಿಸಿರಬೇಕು !
ಒಟ್ಟಿನಲ್ಲಿ ಕುವೆಂಪು ಅವರ ಓ ನನ್ನ ಚೇತನಾ ಕವಿತೆಯ ಆಶಯದಂತೆ ನಾನು ಅನಿಕೇತನೆ ಯಾಗಿದ್ದೇನೆ !
ನೀವು ಏನಂತೀರಿ ಈ ಬಗ್ಗೆ ?
ನಾನು ಮುಂದೆ ಆತ್ಮ ಕಥೆ ಬರೆಯಬೇಕಿಂದಿದ್ದೇನೆ,ಹಾಗಿ ನೆನಪಾದ ವಿಷಯಗಳನ್ನು ಆಗಾಗ ಬರೆಯುವ ಯತ್ನ ಮಾಡುತ್ತಿದ್ದೇನೆ ,ಅದರಲ್ಲಿ ಇದೂ ಒಂದು ಭಾಗ !
ಪ್ರಸ್ತುತ ಶಿಕ್ಷಣ ಇಲಾಖೆ ಹಾಗೂ ಇತರ ದಾಖಲೆಗಳಲ್ಲಿ ನಾನು ಬೆಳ್ಳಾರೆಯ ಉಪನ್ಯಾಸಕಿಯಾಗಿಯೇ ಇದ್ದೇನೆ
ನಾನು ಕೂಡ ಬೆಳ್ಳಾರೆ ನನ್ನ ಊರು ಎಂದೇ ಭಾವಿಸಿ ಯಾರು ಏನೇ ಅವಗಣನೆ ಮಾಡಿದರೂ ಯಾವುದೇ ತರತಮ ಬೇಧವಿಲ್ಲದೆ ಅಹರ್ನಿಶ ದುಡಿಯುತ್ತಿದ್ದೇನೆ.
ಊರು ಉಪಕಾರವರಿಯದು ಹೆಣ ಸಿಂಗಾರ ವರಿಯದು ಎಂಬ ಮಾತು ಇಲ್ಲಂತೂ ಸತ್ಯವಾಗಿದೆ
ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕಿ
ಸರ್ಕಾರಿ ಪದವಿ ಪೂರ್ವ ಕಾಲೇಜ್
ಬೆಳ್ಳಾರೆ ,ಸುಳ್ಯ ತಾಲೂಕು ,ದ.ಕ ಜಿಲ್ಲೆ
ನಾನು ಸಂಶೋಧಿಸಿದ ಬೆಳ್ಳಾರೆಯ ಮಾಸ್ತಿ ಕಲ್ಲು ಆನೆಕಟ್ಟುವ ಕಲ್ಲು ಬೀಡಿನ ಕಾವಲುಗಾರನ ಮನೆ,ಇತರ ಪ್ರಾಚ್ಯಾವಷೆಶಗಳು ಹಾಗೂ ಸುಳ್ಯ ತಾಲೂಕಿನ ವಿಶಿಷ್ಟ ಈತನಕ ಹೆಸರು ಕೂಡ ದಾಖಲಾಗಿಲ್ಲದ ದೈವಗಳು
..
No comments:
Post a Comment