ದೊಡ್ಡವರ ದಾರಿ 75 : ಡಾ . ರಹಮತ್ ತರೀಕೆರೆ
ಜಟ್ಟಿಗ ದೈವದ ಕಥಾನಕವನ್ನು ನಾನು ನನ್ನ ಬ್ಲಾಗ್ ನಲ್ಲಿ ಆರೇಳು ವರ್ಷಗಳ ಹಿಂದೆ ಬರೆದಿದ್ದೆ.ಅದರಲ್ಲಿ ಜಟ್ಟಿಗರ ಆರಾಧನೆ ಬಗ್ಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಪ್ರೊಫೆಸರ್ ಡಾ ರಹಮತ್ ತರೀಕೆರೆ ಅವರ ಲೇಖನದ ಭಾಗವನ್ನು ಉಧ್ಧರಿಸಿದ್ದೆ.ಈ ನನ್ನ ಜುಟ್ಟಿಗೆ ದೈವಗಳ ಕುರಿತಾದ ಲೇಖನ ಡಾ ಗಣೇಶಯ್ಯನವರ ಬಳ್ಳಿ ಕಾಳು ಬೆಳ್ಳಿ ಎಂಬ ಮೆಣಸಿನ ರಾಣಿ ಚೆನ್ನ ಭೈರಾದೇವಿಯ ಕುರಿತಾದ ಐತಿಹಾಸಿಕ ಕಥಾನಕದ ಜತೆ ಕಾಲ್ಪನಿಕ ಕಥೆ ಮಿಶ್ರ ಮಾಡಿ ಬರೆದ ಕಾದಂಬರಿಗೆ ಮೂಲ ಆಕರವಾಯಿತೆಂದು ಕೆ ಎನ್ ಗಣೇಶಯ್ಯ ಅವರು ಹೇಳಿದ್ದಾರೆ.ರಹಮತ್ ತರೀಕೆರೆಯವರ ಯಾವ ಲೇಖನದಲ್ಲಿ ಜಟ್ಟಿಗರ ಆರಾಧನೆ ಬಗ್ಗೆ ಮಾಹಿತಿ ಇದೆ ಎಂದು ಕೇಳಿದ್ದರು.ಆದರೆ ನನಗೆ ರಹಮತ್ ತರೀಕೆರೆ ಅವರ ಯಾವ ಲೇಖನದಲ್ಲಿ ಜಟ್ಟಿಗರ ಆರಾಧನೆ ಕುರಿತು ಮಾಹಿತಿ ಇತ್ತು ಎಂಬುದು ನನಗೆ ನೆನಪಿರಲಿಲ್ಲ
ಅಂದಿನಿಂದ ಅವರಲ್ಲಿ ಈ ಬಗ್ಗೆ ಮಾತನಾಡಬೇಕೆಂದು ಅವರು ಫೋನ್ ನಂಬರ್ ಸಂಗ್ರಹಿಸಿ ಇರಿಸಿದ್ದೆನಾದರೂ ಮಾತನಾಡಿರಲಿಲ್ಲ
2010ರಲ್ಲಿ ನನ್ನ ಮೊದಲ ಡಾಕ್ಟರೇಟ್ ಪದವಿಯ ವೈವ( ಮೌಖಿಕ ಪರೀಕ್ಷೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯಿತು
ತುಳು ನಾಡಿನ ನಾಗಬ್ರಹ್ಮ ಮತ್ತು ಕಂಬಳ- ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬುದು ನನ್ನ ಪಿಎಚ್ ಡಿ ಮಹಾ ಪ್ರಬಂಧ.ಈ ಪ್ರಬಂಧದ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು.ಪರೀಕ್ಷರಲ್ಲಿ ಒಬ್ಬರಾದ ಡಾ
ಮಾಧವ ಪೆರಾಜೆಯವರು ನಾಗ ಮತ್ತು ಬ್ರಹ್ಮ ಬೇರೆ ಬೇರೆ ಎರಡು ಶಕ್ತಿಗಳು ಎಂದು ನಿಮಗೆ ಗೊತ್ತೇ ಆಗಿಲ್ಲ ಇತ್ಯಾದಿ ಏನೋ ಹೇಳಿದರು.ಆಗ ನಾನು ಆರಂಭದಲ್ಲೇ ನಾಗ ಮತ್ತು ಬ್ರಹ್ಮ ಬೇರೆ ಬೇರೆ ಎರಡು ಶಕ್ತಿಗಳು.ಬೆರ್ಮೆರ್ ಎಂದರೆ ಹಿರಿಯ ಎಂಬ ಪದವೇ ಸಂಸ್ಕೃತೀಕರಣಕ್ಕೆ ಒಳಗಾಗಿ ಬ್ರಹ್ಮ ಆಗಿದೆ ಎಂದು ಹೇಳಿದ್ದೇನೆ.ಅದನ್ನು ಆಧಾರ್ ಸಹಿತ ನಿರೂಪಿಸಿದ್ದೇನೆ ಎಂದು ಹೇಳಿದೆ.
ಆಗ ವೀ ಸಿ ಅವರು ಕ್ಲಿಷ್ಟ ಸಂಸ್ಕೃತ ಪದಗಳು ಸರಳವಾಗಿ ಬದಲಾಗುವುದು ಸಹಜ ಆದರೆ ಸರಳವಾದ ಬೆರ್ಮೆರ್ ಪದೇ ಬ್ರಹ್ಮ ಎಂದಾಯಿತು ಎಂದರೆ ಒಪ್ಪಲು ಸಾಧ್ಯವಿಲ್ಲ ಎಂದರು.ಆಗ ಪರೀಕ್ಷರಲ್ಲಿ ಓರ್ವರು ಆಗಿದ್ದು ರಹಮತ್ ತರೀಕೆರೆ ಅವರು ನನ್ನ ಪರ ನಿಂತು ಸರಳವಾಗಿರುವ ಪದಗಳು ಸಂಸ್ಕೃತೀಕರಣಕ್ಕೆ ಒಳಗಾಗಿ ಕ್ಲಿಷ್ಟಕರ ಪದವಾಗಿ ಬದಲಾಗಿರುವುದಕ್ಕೆ ಸನಿವಾರ>ಶನಿವಾರ ಇತ್ಯಾದಿ ಕೆಲವು ಉದಾಹರಣೆಗಳನ್ನು ನೀಡಿದರು
ನಂತರ ವೀಸಿಯವರು ನನ್ನ ವಾದವನ್ನು ಒಪ್ಪಿ ದರು.ಆದರೆ ಮಾಧವ ಪೆರಾಜೆಯವರು ನಾನು ಹಾಗೆ ಸಿದ್ಧ ಮಾಡಿಲ್ಲ ಎಂದು ವಿಷಾದಿಸಿದರು
ಆಗ ನನ್ನ ಮಾರ್ಗದರ್ಶಕರು ಹಾಗೂ ಜೊತೆ ಇದ್ದವರು ಮಾಧವ ಪೆರಾಜೆಯವರು ಹೇಳಿದ್ದನ್ನು ಒಪ್ಪಿಕೊಂಡು ಬಿಡಿ.ಇಲ್ಲವಾದರೆ ನಿಮಗೆ ಪಿಎಚ್ ಡಿ ಪದವಿ ಸಿಗಲಾರದು ಎಂದು ಹಿತ ನುಡಿದರು
ಆದರೆ ನಾನು ಆರಂಭದಿಂದಲೂ ನಾಗ ಮತ್ತು ಬ್ರಹ್ಮ ಬೇರೆ ಬೇರೆ ಎರಡು ಶಕ್ತಿಗಳು ಎಂದು ಪ್ರೂವ್ ಮಾಡುತ್ತಾ ಬಂದಿದ್ದಾರೆ.ಐದಾರು ವರ್ಷಗಳ ಕ್ಷೇತ್ರ ಕಾರ್ಯ ಮಾಡಿ ನಾಡೋಜ ಅಮೃತ ಸೋಮೇಶ್ವರ ಮತ್ತು ಇತರ ವಿದ್ವಾಂಸರೊಡನೆ ಚರ್ಚೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದೆ.ಹಾಗಾಗಿ ಪಿ ಎಚ್ ಡಿ ಪದವಿಗಾಗಿ ನಾನು ಮಾಡಿರುವುದನ್ನು ಇಲ್ಲ ಎಂದು ಹೇಳಿದ್ದನ್ನು ಒಪ್ಪಿಕೊಂಡು ಸುಮ್ಮನೇ ಇರಲು ನನ್ನಿಂದ ಸಾಧ್ಯವಿರಲಿಲ್ಲ.ಹಾಗಾಇಗಿ ನನಗೆ ಮತ್ತು ಮಾಧವ ಪೆರಾಜೆಯವರಿಗೆ ಸಾಕಷ್ಟು ಚರ್ಚೆ ನಡೆಯಿತು.ಕೊನೆಗೆ ವೀಸಿ ಗಳಾದ ಮುರಿಗೆಪ್ಪನವರೇ " ನೀವು ನಾಗ ಮತ್ತು ಬ್ರಹ್ಮ ಬೇರೆ ಬೇರೆ ಎರಡು ಶಕ್ತಿಗಳು ಎಂದು ಎಲ್ಲಿ ಬರೆದಿದ್ದೀರಿ? ಯಾವ ಪುಟದಲ್ಲಿದೆ ಎಂದು ತೋರಿಸಿ"ಎಂದರು.ಆಗ ನಾನು ಉಪಸಂಹಾರ ಭಾಗದಲ್ಲಿ ಬರೆದಿರುವುದನ್ನು ಓದಿ ಹೇಳಿದೆ.ಅಲ್ಲಿಗೆ ಚರ್ಚೆ ಮುಕ್ತಾಯ ಆಯಿತು.ನನ್ನ ಪ್ರಬಂಧ ಪಿ ಎಚ್ ಡಿ ಪದವಿ ಗೆ ಅರ್ಹವಾಗಿದೆ ಎಂದು ವೀಸಿಯವರು ಘೋಷಣೆ ಮಾಡಿದರು.
ಇಲ್ಲಿ ರಹಮತ್ ತರೀಕೆರೆ ಅವರು ಆಡುಭಾಷೆಯ ಸರಳ ಪದಗಳು ಸಂಸ್ಕೃತೀಕರಣಕ್ಕೆ ಒಳಗಾಗಿ ಕ್ಲಿಷ್ಟಕರವಾದ ಪದವಾಗಿ ಬಳಕೆಯಾಗುವ ಬಗ್ಗೆ ಮಾಹಿತಿ ಕೊಡದೇ ಇರುತ್ತಿದ್ದರೆ ನಾನು ಆಗ ದಿನ ಮೌಖಿಕ ಪರೀಕ್ಷೆಯಲ್ಲಿ ಪಾಸಾಗುವುದು ಕಷ್ಟ ಇತ್ತು
ಅಂತೂ ಮೊದಲ ಡಾಕ್ಟರೇಟ್ ಪದವಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಡೆದೆ.ನಂತರ ಪಾಡ್ದನಗಳಲ್ಲಿ ತುಳುವ ಸಂಸ್ಕೃತಿಯ ಅಭಿವ್ಯಕ್ತಿ ಎಂಬ ಮಹಾ ಪ್ರಬಂಧ ರಚಿಸಿ ಕುಪ್ಪಂ ನ ದ್ರಾವಿಡ ವಿಶ್ವವಿದ್ಯಾಲಯದ ತುಳು ವಿಭಾಗಕ್ಕೆ ಸಲ್ಲಿಸಿ ಎರಡನೇ ಡಾಕ್ಟರೇಟ್ ಪದವಿಯನ್ನು ಪಡೆದ
ಆಗ ನಡೆಸಿದ ಕ್ಷೇತ್ರ ಕಾರ್ಯದಲ್ಲಿ ಸಿಕ್ಕ ದೈವಗಳ ಕುರಿತಾದ ಪಾಡ್ದನ ಹೊಗಳಿಕೆ ಜಾನಪದ ಐತಿಹ್ಯ ಆಧಾರಿತ ಮಾಹಿತಿಯನ್ನು ಇಟ್ಟುಕೊಂಡು ವಿಶ್ಲೇಷಣೆ ಮಾಡಿ ತುಂಡು ಭೂತಗಳು - ಒಂದು ಅಧ್ಯಯನ,ದೈವಿಕ ಕಂಬಳ ಕೋಣ,ತುಳುನಾಡಿನ ಅಪೂರ್ವ ಭೂತಗಳು,ತುಳುವ ಸಂಸ್ಕಾರಗಳು ಮತ್ತು ವೃತ್ತಿ ಗಳು,ಕಂಬಳ ಕೋರಿ ನೇಮ , ಭೂತಗಳ ಅದ್ಭುತ ಜಗತ್ತು ಮೊದಲಾದ ಅನೇಕ ಪುಸ್ತಕಗಳನ್ನು ಬರೆದು ಸ್ವತಃ ಪ್ರಕಟಿಸಿದೆ.
20130ರಲ್ಲಿ ಬ್ಲಾಗ್ ನಲ್ಲಿ ಬರೆಯಲು ಆರಂಭಿಸಿದೆ.fb ಯಲ್ಲೂ ಬರೆಯುತ್ತಿದ್ದೆ
ಯಾವುದೋ ಒಂದು ಪೋಸ್ಟ್ ನ ಕಾಮೆಂಟ್ ನಲ್ಲಿ ರಹಮತ್ ತರೀಕೆರೆಯವರು ನನ್ನ ನಾಗ ಬ್ರಹ್ಮ ಮತ್ತು ಕಂಬಳ- ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬ (ಪ್ರಕಟಿತ ಪಿ ಎಚ್ ಡಿ ಮಹಾ ಪ್ರಬಂಧ) ಪುಸ್ತಕ ಬೇಕೆಂದು ಕೇಳಿದ್ದರು
ಈ ಸಮಯಕ್ಕಾಗುವಾಗ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನಡೆದ ನೇಮಕಾತಿಯಲ್ಲಿ ನಡೆದ ಅಕ್ರಮ ದಿಂದಾಗಿ ಯೂನಿವರ್ಸಿಟಿಗಳ ಬಗ್ಗೆ, ಪ್ರೊಫೆಸರ್ ಗಳು ಬಗ್ಗೆ ಒಂತರಾ ಅಸಹನೆ ಜುಗುಪ್ಸೆ ಉಂಟಾಗಿತ್ತು.ಹಾಗಾಗಿ ರಹಮತ್ ತರೀಕೆರೆ ಅವರ ಕಾಮೆಂಟ್ ಗೆ ಪ್ರತಿಕ್ರಿಯೆ ನೀಡಿರಲಿಲ್ಲ.ಪುಸ್ತಕವನ್ನೂ ಕಳುಹಿಸಿರಲಿಲ್ಲ
ಇದಾಗಿ ಕೆಲ ಸಮಯದ ನಂತರ ಎಂ ಆರ್ ಮಣಿಕಾಂತ್ ಅವರು " ರಹಮತ್ ತರೀಕೆರೆ ಅವರಿಗೆ ನಿಮ್ಮ ಪುಸ್ತಕ ಬೇಕೆಂದು ಕೇಳಿದ್ದರು.ನಿಮ್ಮಲ್ಲಿ ಕೇಳಿದ್ದರೂ ನೀವು ಕಳುಹಿಸಿಲ್ಲವಂತೆ..ದೊಡ್ಡವರು ಕೇಳಿದಾಗ ಅವರು ಕೋರಿಕೆಗೆ ಗೌರವ ಕೊಟ್ಟು ಕಳುಹಿಸಬೇಕು.ಅವರಿಗೆ ಪುಸ್ತಕ ಕಳುಹಿಸಿ ಕೊಡಿ ಎಂದು ಹೇಳಿದರು
ನಂತರ ಆ ಪುಸ್ತಕದ ಜೊತೆಗೆ ನನ್ನ ಇತರ ಪ್ರಕಟಿತ ಪುಸ್ತಕಗಳ ಒಂದೊಂದು ಪ್ರತಿಯನ್ನು ಕಳುಹಿಸಿದ್ದೆ ತಲುಪಿದಾಗ ಧನ್ಯವಾದ ಹೇಳಿದ್ದರು
ಇದಾಗಯೂ ಆರೇಳು ವರ್ಷಗಳು ಕಳೆದವು.ಮೊನ್ನೆ ಕನ್ನಡ ಕಾರ್ಯಾಗಾರಕ್ಕೆ ಬಂದಿದ್ದಾಗ ಮಾತನಾಡಿ ಒಂದು ಫೋಟೋ ಹಿಡಿದುಕೊಂಡು ಬಂದೆ
No comments:
Post a Comment