ಹೀಗೊಂದು ಮೋಸ ಪುರಾಣ (c)ಡಾ.ಲಕ್ಷ್ಮೀ ಜಿ ಪ್ರಸಾದ
ವಿಷ್ಣು ಪುರಾಣ ಶಿವ ಪುರಾಣ ಗರುಡ ಪುರಾಣ ಹೆಸರು ಕೇಳಿದ್ದೀರಿ ಇದ್ಯಾವುದು ಮೋಸ ಪುರಾಣ ಅಂತ ತಿಳಿಯಬೇಕೆ ?ಹಾಗಾದರೆ ಸಾವಕಾಶ ಓದಿ ಇದನ್ನು
ಸಾಮಾನ್ಯವಾಗಿ ನಾನು ಯಾವುದೇ ಪ್ರಶಸ್ತಿ ಗಾಗಲಿ, ಪುಸ್ತಕ ಬಹುಮಾನಕ್ಕಾಗಲಿ ಫೆಲೋ ಶಿಪ್ ಗಾಗಲೀ ಅರ್ಜಿ ಸಲ್ಲಿಸುವುದಿಲ್ಲ .ಎರಡು ದಿನ ಮೊದಲು ಕನ್ನಡ ಜಾನಪದ ಅಕಾಡೆಮಿ ಕೆಲವು ವಿಷಯಗಳ ಮೇಲೆ ಅಧ್ಯಯನ ಮಾಡಲು ಫೆಲೋ ಶಿಪ್ ಗೆ ಅರ್ಜಿ ಆಹ್ವಾನಿಸಿತ್ತು .ಅದರಲ್ಲಿ ನನ್ನ ಆಸಕ್ತಿಯ ಒಂದೆರಡು ವಿಷಯಗಳೂ ಇದ್ದವು .ಆ ದಿನ ಅದನ್ನು ಓದಿದಾಗ ಅರ್ಜಿ ಸಲ್ಲಿಸಬೇಕು ಎಂದು ಕೊಂಡೆ .ಹಾಗೆ ಮಗನಲ್ಲಿ ಈ ಬಾರಿ ನಾನು ಫೆಲೋಶಿಪ್ ಗೆ ಅರ್ಜಿ ಸಲ್ಲಿಸುತ್ತೇನೆ ಎಂದು ಹೇಳಿದ್ದೆ
ದಿನ ಪಂಡು ಕಳೆದಾಗ .ಮತ್ಯಾಕೋ ಬೇಡ ಅನಿಸಿತ್ತು ಇಷ್ಟರ ತನಕ ನಾನು ಯಾವುದೇ ಸಂಘ ಸಂಸ್ಥೆ ಅಕಾಡೆಮಿಗಳ ಅನುದಾನ ಪಡೆಯದೇ ಸ್ವಂತ ಅಧ್ಯಯನ ಮಾಡಿದ್ದೇನೆ ಈಗ ಇನ್ನು ಇವೆಲ್ಲ ಕಿರಿ ಕಿರಿ ಬೇಡ ಎನ್ನಿಸಿತು ..ಹಾಗಾಗಿ ಅರ್ಜಿ ಸಲ್ಲಿಸುವ ವಿಚಾರ ಬಿಟ್ಟು ಬಿಟ್ಟಿದ್ದೆ ..
ನಿನ್ನೆ ಏನೋ ಮಾತಾಡುವಾಗ ಮಗ ಹೇಳಿದ "ಅಮ್ಮ ಈಗಾಗಲೇ ಅಲ್ಲಿ ಕೊಟ್ಟ ವಿಷಯಗಳ ಬಗ್ಗೆ ಸ್ಟಡಿ ಮಾಡಿದ್ದೀಯಲ್ಲ .ಇನ್ನು ಒಂದಷ್ಟು ಮಾಡಿ ಎಲ್ಲ ಒಟ್ಟಿಗೆ ಸೇರಿಸಿ ಬರೆದು ಸಲ್ಲಿಸಿದರೆ ಆಯಿತು ಅಲ್ವ ?ನೀನು ಯಾಕೆ ಫೆಲೋ ಶಿಪ್ ಸಿಗುತ್ತಾ ಅಂತ ಯತ್ನಿಸಬಾರದು ,ಒಂದು ಸಲ ಅರ್ಜಿ ಸಲ್ಲಿಸಿ ನೋಡು ಸಿಗುತ್ತಾ ಅಂತ ಹೇಳಿದ ..
ಹೌದಲ್ಲ ?ಅನಿಸಿತು ನನಗೆ .
ದಿನ ದಿನ ಕಳೆದ ಹಾಗೆ ನಾನು ಚಿಕ್ಕವಳಾಗುದಿಲ್ಲ ,ಮುಂದೆ ವಯಸ್ಸಾದಂತೆ ಮೊದಲಿನಂತೆ ಅಧ್ಯಯನ ಮಾಡಲು ಸಾಧ್ಯವಾಗುತ್ತೋ ಇಲ್ಲವೋ ? ಈಗ ಒಂದು ಗುರಿ ಇದ್ದರೆ ಹೇಗೋ ಸಂಶೋಧನೆ ಮಾಡಿ ಬಿಡಬಹುದು ಜೊತೆಗೆ ಫೆಲೋ ಶಿಪ್ ಇರುವ ಕಾರಣ ಅಧ್ಯಯನಕ್ಕೆ ಆರ್ಥಿಕ ಹೊರೆ ಅಂತು ಬೀಳುದಿಲ್ಲ ..
ಹಾಗೆ ಆಲೋಚಿಸಿ ಇಂದು ಕನ್ನಡ ಜಾನಪದ ಅಕಾಡಮಿ ಗೆ ಹೋಗಿ ಅರ್ಜಿ ಸಲ್ಲಿಸಿ ಬಂದೆ .ಅಲ್ಲಿಗೆ ಹೋಗುವಾಗ ತುಸು ಅಳುಕಿತ್ತು ಅಲ್ಲಿನ ರಿಜಿಸ್ತ್ರರ್ ಹೇಗೋ ಏನೋ ಎಂದು ,
ಆದರೆ ಅಲ್ಲಿನ ರಿಜಿಸ್ಟ್ರಾರ್ ಅವರನ್ನು ಭೇಟಿ ಮಾಡಿ ಮಾತಾಡಿದ ಮೇಲೆ ನನಗೆ ಮನಸು ನಿರಾಳ ಆಯಿತು ,ಬಹಳ ಸಜ್ಜನಿಕೆಯಿಂದ ಮಾತಾಡಿದರು .ನನ್ನ ಆರ್ಜಿ ಆಯ್ಕೆಯಾಗಿ ಫೆಲೋ ಶಿಪ್ ಸಿಗುತ್ತೋ ಇಲ್ಲವೋ ಅದು ಬೇರೆ ವಿಚಾರ ಆದರೆ ಅವರ ಸರಳತೆ ಸಹೃದಯ ಮಾತು ಇಷ್ಟವಾಯಿತು
ಅಲ್ಲಿ ಅರ್ಜಿ ಸಲ್ಲಿಸಿ ಬರುವಾಗ ನನಗೆ ತುಳು ಅಕಾಡೆಮಿ ಫೆಲೋಶಿಪ್ ಪುರಾಣ ನೆನಪಾಯಿತು
ಸುಮಾರು 5- 6 ವರ್ಷಗಳ ಹಿಂದೆ ತುಳು ಅಕಾಡೆಮಿ ತುಳು ಅಧ್ಯಯನ ಆಸಕ್ತರಿಂದ ಫೆಲೋ ಶಿಪ್ ಗಾಗಿ ಅರ್ಜಿ ಆಹ್ವಾನಿಸಿತ್ತು ,ಪತ್ರಿಕೆಯಲ್ಲಿ ಈ ಬಗ್ಗೆ ಓದಿ ನಾನು ತುಳು ಅಕಾಡೆಮಿ ರಿಜಿಸ್ಟ್ರಾರ್ ಗೆ ಫೋನ್ ಮಾಡಿದೆ ,ಈ ಬಗ್ಗೆ ಮಾಹಿತಿ ಕೇಳಿದೆ .ಸರಕಾರಿ ಉದ್ಯೋಗಿಗಳೂ ಅರ್ಜಿ ಸಲ್ಲಿಸಬಹುದೇ? ಎಂದು ಕೇಳಿದೆ .ಆಗ ಅವರು ಅಕಾಡೆಮಿ ಅಧ್ಯಕ್ಷರಾದ .... ಅವರಿಗೆ ಫೋನ್ ಕೊಟ್ಟರು ,ಅವರು ಸರಕಾರಿ ಉದ್ಯೋಗಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದು ತಿಳಿಸಿದರು .ಇರ ಬಹುದು ಎಂದು ಕೊಂದು ನಾನು ಸುಮ್ಮನಾದೆ .
ಸುಮಾರು ಎರಡು ಮೂರು ತಿಂಗಳ ನಂತರ ತುಳು ಅಕಾಡೆಮಿ ಫೆಲೋ ಶಿಪ್ ಗೆ ಆಯ್ಕೆ ಆದವರ ಹೆಸರುಗಳು ಪತ್ರಿಕೆಗಳಲ್ಲಿ ಬಂತು .ಅದರಲ್ಲಿ ಬೆಳ್ಳಾರೆಸರ್ಕಾರೀ ಪ್ರಥಮ ದರ್ಜೆ ( ಶಿವರಾಮ ಕಾರಂತ) ಕಾಲೇಜ್ ನ ಹಿರಿಯ ಉಪನ್ಯಾಸಕರಾದ ಡಾ.ನರೇಂದ್ರ ರೈ ದೇರ್ಲ ಅವರ ಹೆಸರೂ ಇತ್ತು .ಅವರು ಫೆಲೋ ಶಿಪ್ ಗೆ ಅರ್ಹರೇ!ಆ ಬಗ್ಗೆ ಎರಡು ಮಾತಿಲ್ಲ ಆದರೆ ಸರ್ಕಾರೀ ಉದ್ಯೋಗಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲವೆಂದಾದ ಮೇಲೆ ಅವರಿಗೆ ಹೇಗೆ ಸಿಕ್ತು ?
ನಾನು ಎಲ್ಲೋ ಮೋಸ ಹೋದ ಬಗ್ಗೆ ತುಸು ವಾಸನೆ ಬಡಿಯಿತು .
ಮತ್ತೆ ರಿಜಿಸ್ಟ್ರಾರ್ ಚಂದ್ರ ಹಾಸ ರೈಗಳಿಗೆ ಫೋನ್ ಮಾಡಿದೆ .ಮತ್ತೆ ಯಥಾ ಪ್ರಕಾರ ಅವರು ಅಧ್ಯಕ್ಷರಾದ ...ಯವರ ಕೈಗೆ ಫೋನ್ ಹಸ್ತಾಂತರಿಸಿದರು !
ಆಗ ಅವರು ಹೇಳಿದರು ಮತ್ತೆ ನಿಯಮದಲ್ಲಿ ಬದಲಾವಣೆ ಮಾಡಿದರಂತೆ !ನಾನು ಫೋನ್ ಮಾಡಿದಾಗ ಅರ್ಜಿ ಸಲ್ಲಿಸಲು ಎರಡು ದಿನ ಮಾತ್ರ ಬಾಕಿ ಇತ್ತು ಅಲ್ಲಿ ತನಕ ನಿಯಮ ಬದಲಾವಣೆ ಆಗಿರಲಿಲ್ಲ (ಮಾಡಿರಲಿಲ್ಲ !!!!!) ನಂತರ ಎರಡು ದಿನದಲ್ಲಿ ಬದಲಾವಣೆ ಆಯಿತು ಹಾಗಾದರೆ !
ಕೊಡಲು ಮನಸು ಇಲ್ಲದೇ ಇದ್ದರೆ ನಾನಾ ನೆಪಗಳು ಸಿದ್ಧವಾಗಿರುತ್ತದೆ ಇದನ್ನು ಪ್ರಶ್ನಿಸಿದರೆ ಅದು ಘೋರ ಅಪರಾದ !ಅದು ಜಗಳ ಕಂಟ ತನ ಎಂಬ ಬಿರುದು ಬೇರೆ ಸಿಗುತ್ತದೆ ಅದಕ್ಕೆ ನಾನು ಎಲ್ಲಿ ಯಾವುದೇ ಫೆಲೋಶಿಪ್ ಗೆ ಅರ್ಜಿ ಸಲ್ಲಿಸುವ ಗೋಜಿಗೆ ಹೋಗುದಿಲ್ಲ
ನನ್ನ ಮಿತಿಯಲ್ಲಿ ನನಗೆಷ್ಟು ಸಾಧ್ಯವೋ ಅಷ್ಟು ಮಾಡುತ್ತೇನೆ ..
ಆದರೆ ಜನ ಹೇಗೆಲ್ಲ ಕಾಲು ಎಳೆಯುತ್ತಾರೆ ನಮಗೆ ಗೊತ್ತಿಲ್ಲದೇ ಎಷ್ಟು ಮೋಸ ಹೋಗುತ್ತ್ತೇವೆ ಅಲ್ಲವೆ ಅಂತ ಆಶ್ಚರ್ಯ ಆಗುತ್ತದೆ .
ಇದೆ ರೀತಿ ಇನ್ನೊಂದು ವಿಷಯದಲ್ಲಿ ಮೋಸ ಹೋದದ್ದು ನನಗೆ ನೆನಪಾಗುತ್ತಿದೆ .
ಕೆಲವು ವರ್ಷಗಳ ಹಿಂದೆ ನಾನಾ ಕೆಲವು ಪುಸ್ತಕಗಳನ್ನು ನಾನೇ ಸ್ವಂತ ಪ್ರಕಟಿಸಿದ್ದೆ ,ನಂತರ 2010 ರಲ್ಲಿ ನನಗೆ ಪಿಎಚ್ ಡಿ ಪದವಿ ದೊರೆಯಿತು .
ನನ್ನ ಪಿಎಚ್ ಡಿ ಸಂಶೋಧನಾ ಪ್ರಬಂಧವನ್ನು ಯಾರಾದರೂ ಪ್ರಕಾಶಕರು ಪ್ರಕಟಿಸಿದರೆ ಒಳ್ಳೆಯದಿತ್ತು ಎಂದು ಆಲೋಚಿಸುತ್ತಿದ್ದೆ
ನನಗೆ ಈ ಕ್ಷೇತ್ರದಲ್ಲಿ ಯಾರೂ ಪರಿಚಯ ಇರಲಿಲ್ಲ ,ನನ್ನ ಪರಿಚಿತ ಸಂಶೋಧಕಿ ಒಬ್ಬರ ಸಂಶೋಧನಾ ಮಹಾ ಪ್ರಬಂಧವನ್ನು ನವ ಕರ್ನಾಟಕ ಪಬ್ಲಿಕೇಶನ್ಸ್ ಪ್ರಕಟಿಸಿದ್ದು ನನಗೆ ತಿಳಿದಿತ್ತು
ಹಾಗೆ ಯಾವಾಗಲೋ ಅವರು ಸಿಕ್ಕಾಗ ನವಕರ್ನಾಟಕ ಪುಸ್ತಕ ಪ್ರಕಾಶಕರು ಯಾರು? ಅವರ ನಂಬರ್ ಕೊಡಲು ಸಾಧ್ಯವೇ? ಎಂದು ಕೇಳಿದೆ
ಆಗ ಅವರು ತಕ್ಷಣವೇ "ಅವರಿಗೆ ನನ್ನ ಥಿಸಿಸ್ ಪ್ರಕಟಿಸಿಯೇ ತುಂಬಾ ನಷ್ಟ ಆಯಿತಂತೆ ಅವರು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವುದೇ ಇಲ್ಲ ನನ್ನದನ್ನು ಏನೋ ಪ್ರಕಟಿಸಿದರು ಈಗ ನಷ್ಟ ಆಯಿತು ಇನ್ನು ಯಾರ ಸಂಶೋಧನಾ ಪ್ರಬಂಧ ವನ್ನು ಪ್ರಕಟಿಸುವುದೇ ಇಲ್ಲ ಎಂದು ಹೇಳಿದ್ದಾರೆ "ಎಂದು ಹೇಳಿದರು !ನಾನು ಸತ್ಯ ನಂಬಿದೆ ಇರಬಹುದು ಎಂದು !
ನಂತರ ನನ್ನ ಸಂಪ್ರಬಂಧವನ್ನು ಪ್ರಚೇತ ಬುಕ್ ಪಬ್ಲಿಷರ್ಸ್ ಪ್ರಕಟ ಮಾಡಿದರು ,ಅದು ಸಾಕಷ್ಟು ಯಶಸ್ವಿ ಅಯ್ತಿ ಕೂಡ .ನಷ್ಟ ಆಗಲಿಲ್ಲ ಬದಲಿಗೆ ಲಾಭ ತಂದು ಕೊಟ್ಟಿತ್ ತುಕೂಡ
ಈ ಪುಸ್ತಕವನ್ನು ಅವರು ನವಕರ್ನಾಟಕ ಮಳಿಗೆಗಳಲ್ಲೂ ಮಾರಾಟಕ್ಕೆ ಹಾಕಿದ್ದರು ಅಲ್ಲಿ ಕೂಡ ಸಾಕಷ್ಟು ಪುಸ್ತಕಗಳು ಮಾರಾಟವಾಗಿವೆ .
ಒಂದಿನ ನಾನು ಮಂಗಳೂರಿನ ನವಕರ್ನಾಟಕ ಮಳಿಗೆಗೆ ಹೋದೆ ಆಗ ನನ್ನ ಎದುರಿನಲ್ಲಿಯೇ ಇಬ್ಬರು ನನ್ನ ಪುಸ್ತಕವನ್ನು ಕೇಳಿದರು.ಅಲ್ಲಿ ಪುಸ್ತಕಪ್ರತಿ ಮುಗುದಿತ್ತು .ಆಗ ಅಲ್ಲಿನ ಮ್ಯಾನೇಜರ್ ಅವರು ಮೇಡಂ ನೀವು ಈ ಪುಸ್ತಕವನ್ನು ನಮ್ಮ ನವ ಕರ್ನಾಟಕ ಪಬ್ಲಿಕೇಶನ್ ನಲ್ಲಿ ಪ್ರಕಟ ಮಾಡಬೇಕಿತ್ತು .ಇದಕ್ಕೆ ಇನ್ನೂ ಹೆಚ್ಚು ವ್ಯಾಲ್ಯೂ ಇರುತ್ತಿತ್ತು ನಿಮ್ಮ ಈ ಪುಸ್ತಕಕ್ಕೆತುಂಬಾ ಬೇಡಿಕೆ ಇದೆ ಎಂದು" ಹೇಳಿದರು ಆಗ ನಾನು ನವ ಕರ್ನಾಟಕ ದವರು ಪಿ ಎಚ್ ಡಿ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವುದಿಲ್ಲವಂತೆ !ಎಂದು ಹೇಳಿದೆ .ಹಾಗೆ ಹೇಳಿದ್ದು ಯಾರು ?ನಿಮಗೆ ಯಾರೋ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾರೆ,ನವಕರ್ನಾಟಕ ಪ್ರಕಾಶಕರು ಸಂಶೋಧನಾ ಕೃತಿಗಳಿಗೆ ಮೊದಲ ಆದ್ಯತೆ ನೀಡುತ್ತಾರೆ ಎಂದು ಹೇಳಿದರು !
ನಾನು ಮತ್ತೆ ಮೋಸ ಹೋಗಿದ್ದೆ !ಏನು ಮಾಡುದು ಹೀಗೆ ಕಾಲೆಳೆಯುವ ಮಂದಿ ಇರುತ್ತಾರೆ..ಏನುಮಾಡುವುದು !ಆದರೂ ತಕ್ಷಣಕ್ಕೆ ತೀರಾ ಸತ್ಯ ಅನಿಸುವ ಹಾಗೆ ಹೇಳಿದಾರಿ ತಪ್ಪಿಸುವ ಉಪಾಯಗಳು ಇವರಿಗೆ ಹೇಗೆ ನೆನಪಾಗುತ್ತವೆ ಅಂತ ಅಚ್ಹ್ಕಾರಿ ಆಗುತ್ತದೆ ಬಹುಶ ಇಂಥವರು ಸದಾ ಇದೆ ಮಾಡುತ್ತಿರುತ್ತಾರೆ ಹಾಗಾಗಿ ಅವರಿಗೆ ಅನಾಯಾಸವಾಗಿ ಇಂಥ ಟ್ರಿಕ್ ಗಳು ಹೊಳೆಯುತ್ತವೆ ಇರಬೇಕು
ಆಲದ ಮರ ಸೊಂಪಾಗಿ ಬೆಳೆದು ಮೃಗ ಪಕ್ಷಿಗಳಿಗೆ ಆಶ್ರಯ ನೀಡುತ್ತದೆ ನೆರಳನ್ನೂ ನೀಡುತ್ತದೆ ಆದರೆ ಬೇರೆ ಗಿಡ ಮರಗಳನ್ನು ಬೆಳೆಯಲು ಬಿಡುವುದಿಲ್ಲ ಅಂತೆಯೇ ಅನೇಕರು ಇರುತ್ತಾರೆ .ಇಂಥವರ ನಡುವೆಯೂ ಡಾ.ಅಮೃತ ಸೋಮೇಶ್ವರ ,ಡಾ,ವಾಮನ ನಂದಾವರ ,ಡಾ.ಸುಬ್ಬಣ್ಣ ರೈ ಮೊದಲಾದ ಕೆಲವು ವಿದ್ವಾಂಸರು ತಾವು ಬೆಳೆಯುವುದರೊಂದಿಗೆ ಬೇರೆಯವರನ್ನೂ ಬೆಳೆಸುತ್ತಾರೆ ಅನ್ನುವುದು ಸಂತೋಷದ ವಿಚಾರ
ಡಾ.ಲಕ್ಷ್ಮೀ ಜಿ ಪ್ರಸಾದ

No comments:
Post a Comment