Saturday, 23 January 2016

ದೊಡ್ಡವರ ಹಾದಿ -3

                             

ದೊಡ್ಡವರ ಹಾದಿ-3
ಮರೆಯಲಾಗದ ನೆನಪು ..
ಕಳೆದ ವರ್ಷ ಈ ಸಮಯದಲ್ಲಿ ನಾನು ಸೂಲಿಬೆಲೆ ಸರ್ಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ ನಿಯೋಜನೆ ಮೇಲೆ ಕೆಲಸ ಮಾಡುತಿದ್ದೆ ,ಅಲ್ಲಿಗೆ ನಾನು ಹೋದ ಕೆಲವೇ ದಿನಗಳಲ್ಲಿ ಕಾಲೇಜ್ ವಾರ್ಷಿಕೋತ್ಸವ ಸಂಪನ್ನವಾಯಿತುನಾನು ಸ್ವಲ್ಪವೇ ಸ್ವಲ್ಪ ಸಮಯಕ್ಕೆ ಅಲ್ಲಿಗೆ ಬಂದಿದ್ದರೂ ಅಲ್ಲಿನ ಪ್ರಾಂಶುಪಾಲರಾದ ಶ್ರೀಯುತ ವೇಣುಗೋಪಾಲ್ ಹಾಗೂ ಇತರ ಸಹೋದ್ಯೋಗಿಗಳು ನನಗೆ ತೋರಿದ ಪ್ರೀತಿ ವಿಶ್ವಾಸ ಮರೆಯಲಾಗದ್ದು ,ವಾರ್ಷಿಕೋತ್ಸವ ಸಿದ್ಧತಾ ತಯಾರಿ ಸಮಯದಲ್ಲಿ ತಾತ್ಕಾಲಿಕವಾಗಿ ಹೋದ ನಾನು ಸುಮ್ಮನೆ ಇದ್ದೆ ಆಗ ಪ್ರಾಂಶುಪಾಲರು "ಲಕ್ಷ್ಮಿ ಮೇಡಂ ನಿಮಗೆ ಸಾಹಿತ್ಯ ನಾಟಕಗಳ ಬಗ್ಗೆ ಅಭಿರುಚಿ ಇದೆಯಲ್ಲ ಇಲ್ಲಿ ಒಂದು ನಾಟಕ ಮಾಡಿಸಿ ಎಂದರು,ಆಗ ಸ್ವಲ್ಪ ಅರೋಗ್ಯ ಸಮಸ್ಯೆ ಇದ್ದು ನಾನು ತುಸು ಹಿಂಜರಿದಾಗ ತುಂಬು ಬೆಂಬಲವಿತ್ತು ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು ಅಲ್ಲಿನ ರಸಾಯನ ಶಾಸ್ತ್ರ ಉಪನ್ಯಾಸಕಿ ಲಕ್ಷ್ಮೀ ಮೇಡಂ ಹಾಗೂ ದೇವಯಾನಿ ಮೇಡಂ
ಅವರೆಲ್ಲರ ಬೆಂಬಲ ಹಾಗೂ ಒತ್ತಾಸೆಯಿಂದ ಅಲ್ಲಿನ ವಿದ್ಯಾರ್ಥಿಗಳಿಗೆ ನಾನು ನನ್ನ ಹಸಿರು ಕರಗಿದಾಗ ಮತ್ತು ನೀರಕ್ಕನ ಮನೆ ಕಣಿವೆ ಎಂಬ ಎರಡು ನಾಟಕಗಳನ್ನು ಹೇಳಿಕೊಟ್ಟೆ. ಸ್ವಲ್ಪವೇ ಕಾಲಾವಧಿಯಲ್ಲಿ ಎರಡೂ ನಾಟಕಗಳು ತಯಾರಾಗಿ ವೇದಿಕೆಯ ಮೇಲೆ ಬಂದವು! ನಿಜಕ್ಕೂ ನಮ್ಮ ನಿರೀಕ್ಷ್ಗೆ ಮೀರಿ ನಾಟಕ ಅದ್ಭುತವಾಗಿ ಮೂಡಿ ಬಂದಿತ್ತು !!
ನಾಟಕ, ನೃತ್ಯ ,ಸಾಹಿತ್ಯ ಯಾವುದೇ ಇರಲಿ ಅದರ ಅಭಿವ್ಯಕ್ತಿಗೆ ಸೂಕ್ತ ಬೆಂಬಲದ ಅಗತ್ಯವಿರುತ್ತದೆ ,ಆದರೆ ಹೆಚ್ಚಿನ ಶಾಲಾ ಕಾಲೇಜ್ ಗಳಲ್ಲಿ ಇದಕ್ಕೆ ಬೆಂಬಲ ಸಿಗುವುದಿಲ್ಲ
ಸಾಹಿತ್ಯ ಸಂಸ್ಕೃತಿಯ ಅಭಿರುಚಿ ಉಳ್ಳ ಪ್ರಾಂಶುಪಾಲರು ಇದ್ದಾಗ ಮಾತ್ರ ಅಲ್ಲಿನ ಮಕ್ಕಳಿಗೆ ಸಾಹಿತ್ಯ ಸಂಸ್ಕೃತಿ ಕುರಿತು ಒಲವು ಮೂಡಿಸುವ ಕಾರ್ಯಕ್ರಮಗಳು ತರಬೇತಿಗಳು ಸಿಗುತ್ತವೆ
ಇಲ್ಲವಾದಲ್ಲಿ ಆ ಸಂಸ್ಥೆಯಲ್ಲಿಯೇ ಈ ಬಗ್ಗೆ ತರಬೇತಿ ಕೊಡಬಲ್ಲ ಅರ್ಹ ಉಪನ್ಯಾಸಕರು ಇದ್ದಾಗಲೂ ವಿದ್ಯಾರ್ಥಿಗಳಿಗೆ ಏನೂ ಪ್ರಯೋಜನವಾಗುವುದಿಲ್ಲ ,ನನಗೆ ಇತ್ತೀಚಿಗೆ ಓರ್ವ ಉಪನ್ಯಾಸಕಿಯ ಪರಿಚಯವಾಯಿತು ಅದ್ಭುತ ಹಾಡುಗಾರ್ತಿ ಅವರು ನಾನು ಆಗ ಹೇಳಿದೆ "ನಿಮ್ಮ ವಿದ್ಯಾರ್ಥಿಗಳು ನಿಜಕ್ಕೂ ಅದೃಷ್ಟವಂತರು ಎಂದು ಆಗ ಅವರು ಹೇಳಿದರು ಇಲ್ಲ ಮೇಡಂ ನಮ್ಮ ಕಾಲೇಜ್ ನಲ್ಲಿ ಹಾಡು ಹಸೆ ಯಾವುದಕ್ಕೂ ಅವಕಾಶವಿಲ್ಲ ಬರಿಯ ಪಾಠ ಮಾತ್ರ ಎಂದು ! ಅವರಂಥ ಪ್ರತಿಭೆಗಳನ್ನು ಸಂಪನ್ಮೂಲವಾಗಿ ಸೂಕ್ತವಾಗಿ ಬಳಸಿಕೊಳ್ಳದ ಆ ಕಾಲೇಜ್ ಬಗ್ಗೆ ನಿಜಕ್ಕೂ ನನಗೆ ಅನುಕಂಪವಾಯಿತು
ಇಂಥವರೇ ತುಂಬಿರುವ ನಮ್ಮ ಸಮಾಜದಲ್ಲಿ ಸಾಹಿತ್ಯ ಸಂಸ್ಕೃತಿಗೆ ಪ್ರೋತ್ಸಾಹ ಕೊಡುವ ಸೂಲಿ ಬೆಲೆ ಪ್ರಿನ್ಸಿಪಾಲ್ ವೇಣು ಗೋಪಾಲ್ ಅವರಂಥವರು ಭಿನ್ನರಾಗಿ ಗೌರವಕ್ಕೆ ಪಾತ್ರರಾಗಿ ನಿಲ್ಲುತ್ತಾರೆ ಏನಂತೀರಿ ?


ಡಾ.ಲಕ್ಷ್ಮೀ ಜಿ ಪ್ರಸಾದ 
ಕನ್ನಡ ಉಪನ್ಯಾಸಕಿ 
ಸರ್ಕಾರಿ ಪದವಿ ಪೂರ್ವ ಕಾಲೇಜ್ 
ನೆಲಮಂಗಲ 
ಬೆಂಗಳೂರು ಗ್ರಾಮಾಂತರ ಜಿಲ್ಲೆ




2 comments:

  1. Replies
    1. ಒಹ್ !ಕ್ಷಮಿಸಿ ಅಂದಿನ ಕಾರ್ಯಕ್ರಮದ್ದು ವೀಡಿಯೊ ರೆಕಾರ್ಡ್ ಮಾಡಲು ಸಾಧ್ಯವಾಗಲಿಲ್ಲ ನನ್ನ ಕ್ಯಾಮರ ಕೈ ಕೊಟ್ಟಿತ್ತು ಆ ದಿನ
      ಓದಿ ಪ್ರೋತ್ಸಾಹಿಸಿದ ನಿಮಗೆ ಹೃತ್ಪೂರ್ವಕ ಕೃತಜ್ಞತೆಗಳು

      Delete