Monday, 31 March 2025

In Tulunad, who, when, how and why can attain daivatva/ divinity?

 

In Tulunad, who, when, how and why can attain daivatva/ divinity?

There is no set formula for who attains divinity when, how and why in Tulunad. Generally, those who were born as human beings and had superhuman adventures, became divinity through illusion and were worshiped as gods. Superhuman adventurers like Koti-chennayas, Mudda-kalalas, Enmuru Deyu-Kelatta Perne, Kanada- Katadaras, Babbu-Tanni Maniga are deified and worshipped.

 Daivas bless the unique devotees who have worshiped the gods and disappear them and add them to their company or presence. Akka Arasu, a Jain princess who was her unique devotee, was abducted by the goddess Rakteshwari and taken into her fold. This Jain queen is worshiped as Akkacchu Deity. Similarly, there is a story of how the goddess Berentolu, who was a unique devotee of Babbu Swami , was enchanted by Daiva and added to his retinue. Berentholu, the grandmother of Babbu Swami , is also worshiped as a deity.

Oru baniyetti and Nelluraya 

Lord Bhagwati has taken her unique devotee, a Baniyetti (a woman from the mining community of Malaya) into her presence. 

This woman is deified and worshiped in the name of Oru Baniyetti. 

The Brahmin priest, who was worshiping him with great devotion, was made divine by Panjurli. He is deified and worshiped under the name Panjurli, the priest of God. Ippatajja, Kanalthaya Bhatru Bhuta, Kachche Bhatta, Brana Bhuta etc. got divinity in this way.

 

Those who have done great deeds and attained divinity

In the same way, many who have done great work to make a place for the Gods are being worshiped as deities. Karinjettaya, Adkattaya, Dei Baidyeti of sujeet , Chennigaraya,,Janu Nayka or Baidya, Dei Baideti of Kamrbhishthan, Achu Bangeti etc. were deified for such a reason.

 A Brahmin woman who used to give village/ home  medicines as a beneficence to the people is being worshiped as her Daiva called as Illathamma 

  .

Those who became divinity due to anger

There are many stories where even those who are angered by the demands of the daivas peculiar gods of Tuluvas)are worshiped as Daivas/deities. Chamundi, a Brahmin who had betrayed the Lord, was banished by the Lord and taken into His laps . He is worshiped as the universal deity.

 A Muslim man named Ali Byarry, who tried to capture the daughter of the owner of the house who had given him shelter with his magical powers, was joined by Rakteswari daiva by drowning him in water. He is deified and worshiped as Ali Bhuta or Ali Chamundi.

In Mangalore’s Urva Chilumbi, an Arab trader molests a Brahmin girl who is a devotee of the  Malaraya daiva 

Then, to protect the honor of his devotee, the Malaraya daiva vanishes the girl. As punishment, the Arab merchant disappears. These two who have disappeared are worshiped as Daivas Arabi bhuta and bramanathi bhuta   association of the same deity. Malaraya daiva 

They will disappear even if they forget what they said

Kanteri Jumadi daiva appears on Devu Poonja who forgets the said ritual and causes disaster. Later Dev Poonja also  worshiped as a sub-deity/ daiva  of Kantheri Jumadi daiva /deity. Apart from forgetting the said harake,  punishment for the Manjanalva who cut and ate the fruit of the jackfruit tree of the daiva jumadi . Kambala baffalo and Narya’s Babbu are deified and worshiped as Erubanta and Urava deities 

A deified Muslim woman, Byardi is worshiped as a Daiva 

As if ritual prohibitions were the unwritten edicts of primitive man, many transgressors have been magically deified. Byardi, a Muslim woman who went beyond the rule that women should not look at Babbarya’s kola was deified as a daiva

The two Brahmin girls who saw Ullakula daiva kola  bent from the left side of a jackfruit tree are being deified and worshiped as Nurgimadimal Durgimadimal.

 A fisher woman who saw the Arasu ( King)daiva kola was then made invisible by the Arasu daiva 

Even when there is no special reason, they fall into the sight of God and are worshiped as Gods in the presence of the respective Gods. Kunhi Bhuta, Byari Bhuta, Mapule Mapulti Bhuta, Mapulti Dhoomavati Brana Bhuta and Mani Bhuta, Daru Kundaya etc. are being worshiped as divinity without reason due to the sight of God and the presence of other gods.

British Subhedara worshiped as Kannada Beera daiva - Dr Lakshmi G prasad ,

Many Kannadigas are worshiped as deities in Tulu Nadu. Bachcha Nayaka Thimmanna Nayaka Baisu Nayaka Kannada Beera Kannada Bhuta, Kannada Yane Lurusha Bhuta and many others are deities of Kannada origin. A British Subhedara also  gets deity for some reason and is worshiped as a deity named Kannada Beera.

© Dr Lakshmi G prasad 

While taking daiva from one place to his house, a policeman dies in the man’s lap due to some reason. He is deified and worshiped as Police Theyam.

 Pilichamundi Deity Maveri Tirtha  / holy bath enjoins all the thieves, policemen, bee sellers, Shanu bhoga ,Senava Patela Gurikara, etc. to join her. All these are worshiped as consorts or retinue deities of Pilichamundi.

Stories are prevalent in many places where those who have disappeared due to the grace or demand of the gods join the presence of the respective Daivas s and are worshiped as Daivas. 

What was he here before becoming a divinity? Good or bad doesn’t matter. These are the powers that protects us after becoming Daivas. 

All Daivas have equal respect and devotional worship. This is typical of Tulu culture. People of all castes and creeds are worshiped here as deities. Also, people of all castes and creeds here believe and worship Daivas. There is a harmony of caste votes in the deity worship here. So it is a great form of worship that is a model for the world.

Article: Dr. Lakshmi G Prasad,

Author KARAVALIYA SAAVIRADONDU DAIVAGALU   Tulu Researcher, Kannada Lecturer Government PU College Batarayanapur, Bangalore Mobile 9480516684 

ಮನೆ ಮದ್ದಿಗೂ ಅಡ್ಡ ಪರಿಣಾಮ ಇರುತ್ತದೆಯೇ ?

 ಮನೆ ಮದ್ದಿಗೂ ಅಡ್ಡ ಪರಿಣಾಮ ಇರುತ್ತದೆಯೇ ?

"ಪ್ರಾಚೀನವಾದುದೆಲ್ಲವೂ ಶ್ರೇಷ್ಠವಲ್ಲ" ಕಾಳಿದಾಸನ ಮಾತನ್ನು ನೆನಪಿಸುವ ನನ್ನ 
ಅನುಭವ ಕಥನ ಇಲ್ಲಿದೆ 

2019-20 ರಲ್ಲಿ ನಾವೆಲ್ಲ ಕೊರೋನ ಭಯದಿಂದ ತತ್ತರಿಸಿದ್ದೆವು
ಅವರಿಗೆಷಕೋವಿಡ್ ಪಾಸಿಟಿವ್ ಇವರಿಗೆ ಪಾಸಿಟಿವ್,ಅಲ್ಲಿ ಸಾವು ಇಲ್ಲಿ ಸಾವು ಎಲ್ಲೂ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ 
ಈ ಸುದ್ದಿಗಳನ್ನು ಕೇಳಿ ಕೊರೋನ ಬಂದವರಿಗಿಂತ ನಾನೇ ಹೆದರಿದ್ದೆ 
ಜೊತೆಗೆ ಕ್ವಾರಂಟೈನ್ ನ ಭಯ
ಅದಕ್ಕಾಗಿ  ಡಾ ಗಿರಿಧರ್ ಕಜೆ ಸೇರಿದಂತೆ ಅವರಿವರು ಹೇಳಿದ ಎಲ್ಲ ಮನೆ ಮದ್ದು ಕಷಾಯಗಳ ಮಾಡಿ ಕುಡಿದಿದ್ದೆ.ದಿನಾಲೂ ತುಳಸಿ ಅಮೃತ ಬಳ್ಳಿ ಕಾಳು ಮೆಣಸು ಹಾಕಿ ಕಷಾಯ ಮಾಡಿ ಕುಡಿಯುತ್ತಿದ್ದೆ.ಪತಂಜಲಿ ಸೇರಿದಂತೆ ಯಾವ್ಯಾವುದೋ ಆಯುರ್ವೇದದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನಲಾದ ಔಷಧಿಗಳನ್ನು ಸೇವಿಸಿದೆ.ಡಾ.ಗಿರಿಧರ ಕಜೆ ಅನ್ವೇಷಣೆಯ ಸಾಥ್ಮ್ಯ,ಭೌಮ್ಯ ಎಂಬ ಎರಡು ಆಯುರ್ವೇದ ಟ್ಯಾಬ್ಲೆಟ್ ಗಳನ್ನೂ ಅವರ ಸಲಹೆಯಂತೆ ಸೇವಿಸಿದೆ
ಇಷ್ಟೆಲ್ಲಾ ಆದರೂ ನನಗೆ ಕೋವಿಡ್ ಸೋಂಕು ತಗುಲಿತು 
ವಿಪರೀತ ಜ್ವರ ತಲೆನೋವು ನಿಶ್ಶಕ್ತಿ ಯಿಂದ ವಿಕ್ರಮ ಹಾಸ್ಪಿಟಲ್ ಗೆ ಹೋಗಿ ಪರೀಕ್ಷೆ ಮಾಡಿದಾಗ ಡಿ ಡೈಮರ್ ಟೆಸ್ಟ್ ನಲ್ಲಿ ರಕ್ತ ಹೆಪ್ಪುಗಟ್ಟುತ್ತಿರುವುದು ತಿಳಿಯಿತು 
ಹೃದಯಾಘಾತವೋ ಬ್ರೈನ್ ಹೆಮರೇಜ್ ಆಗುವ ಸಾಧ್ಯತೆ ಇದ್ದ ಕಾರಣ ದಾಖಲಾಗಿ ಚಿಕಿತ್ಸೆ ಪಡೆದೆ.ಗುಣಮುಖಳಾಗಿ ಮನೆಗೆ ಬಂದೆ
ಇದಾಗಿ ಸ್ವಲ್ಪ ಸಮಯದಲ್ಲಿ ಕೋವಾಕ್ಸಿನ್ ಅನ್ನೂ ತಗೊಂಡೆ
ಇಷ್ಟೆಲ್ಲಾ ಆಗಿಯೂ ಮತ್ತೆ ಎರಡು ಬಾರಿ ಕೋವಿಡ್ ಸೋಂಕು ತಗುಲಿ ಚಿಕಿತ್ಸೆ ಪಡೆಯಬೇಕಾಗಿ ಬಂತು

ಅಂತೂ ಕೋವಿಡ್ ದೂರವಾಯಿತು,ನಾನು ಬಚಾವಾದೆ ಎಂದು ಕೊಂಡೆ

ಆಗ ಕಾಣಿಸಿಕೊಂಡದ್ದು ಮೈ ಕೈ ನೋವು
ಒಂದಿನ ಎಡಗಾಲು ನೋವು ‌ಮರುದಿನ ಬಲಗಾಲು ನೋವು ಮತ್ತೊಂದಿನ ಕೈ ನೋವು..
ಮಾಟ ಮಾಡಿದಾಗ ಗಿಣಿಯ ಕಾಲು  ಮುರಿದಾಗ ಮಾಡಿಸಿಕೊಂಡವನಿಗೆ ಕಾಲು ನೋವಾಗಿ ಬೊಬ್ಬೆ ಹೊಡೆಯುತ್ತಾರೆ,ಗಿಣಿಕೈ ಮುರಿದಾಗ ಈತನ ಕೈ ಕತ್ತು ಮುರಿದಾಗ ಈತನ ಕತ್ತು ನೋವಾಗುತ್ತದೆ ಎಂದೆಲ್ಲ ಕೇಳಿರ್ತೀವಲ್ಲ.. ಹಾಗೆಯೇ ನನ್ನ ನೋವು ಒಂದೊಂದು ಕಡೆ ಕಾಣಿಸುತ್ತಿತ್ತು
ನನ್ನ ಅಮ್ಮನಿಗೆ ಮಾತ್ರವಲ್ಲ ಆ ನೋವು ತಾಳಲಾರದೇ ಇದ್ದಾಗ ನನಗೂ ಕೂಡ ಯಾರಾದರೂ ಮಾಟ ಮಾಡಿರಬಹುದೇನೋ ಎಂದು ಅನಿಸಿತ್ತು.
ಈ ನಡುವೆ ಒಂದು ದಿನ ಕಾಲೇಜಿನಿಂದ ಬಂದಾಗ ವಿಪರೀತ ಎಡ ತೋಳು ನೋವು
ಡೋಲೋ ಅಲ್ಟ್ರಾ ಸೆಟ್ ಸೇರಿದಂತೆ ಯಾವ ನೋವು ನಿವಾರಕಕ್ಕೂ ಕಡಿಮೆ ಆಗಲಿಲ್ಲ.ಆಗ ಫಾರ್ಟಿಸ್ ಹಾಸ್ಪಿಟಲ್ ಗೆ ಹೋಗಿ ಆರ್ಥೋ ಡಾಕ್ಟರ್ ಡಾ ಅನಿಲ್ ಅವರ ಭೇಟಿ ಆದೆ.
ಅವರು x ray ಮಾಡಿ ನೋಡಿ ಇದು ಮಸಲ್ ಪೈನ್  ಎಂದು ಔಷಧಿ ನೀಡಿದರು 
ಕೆಲವು ದಿನ ಕಡಿಮೆ ಆದ ಹಾಗೆ ಅನಿಸಿತು 
ಮತ್ತೆ ಪುನಃ ಜೋರಾಯಿತು 
ಮತ್ತೆ ಡಾ.ಅನಂತ ಪದ್ಮನಾಭರಲ್ಲಿ ಹೋದೆ.ಅವರು ಕೊಟ್ಟ ಮದ್ದು ಕೆಲ ದಿನಗಳ ಕಾಲ ಕೆಲಸ ಮಾಡಿಯಾದರೂ ಮತ್ತೆ ಹೆಚ್ಚಾಗಿ ಕಾಲು ನೆಲದಲ್ಲಿ ಊರಲು ಆಗದಷ್ಟು ನೋವು ಶುರು ಆಯಿತು 
ಕಾಲು ಊರಿರರೆ ಕಾಲು ಮಡಿಚಿಕೊಳ್ಳುವ ಸಮಸ್ಯೆ ಕಾಣಿಸಿತು
ಆಗ ಡಾ.ಅನಿಲ್ ಅವರನ್ನು ಭೇಟಿ ಮಾಡಲು ಸಾಧ್ಯವಾಗದೆ
ಇನ್ನೋರ್ವ ಆರ್ಥೋ ಡಾಕ್ಟರ್ ಕುಶಾಲ್ ಅವರ ಬಳಿ ಹೋದೆ.ಅವರು ಕಾಲಿನ ACL tear ಆಗಿರಬಹುದು ಎಂದು ಸಂಶಯಿಸಿ ಕಾಲಿನ ಎಂ ಆರ್ ಐ ಸ್ಕಾನಿಂಗ್ ಮಾಡಿಸಲು ಹೇಳಿದರು..
ಎಂ ಆರ್ ಐ ಸ್ಕಾನಿಂಗ್ ನಲ್ಲಿ ಕಾಲಿನ ACL tear ಆಗಿದ್ದು ಕನ್ಫರ್ಮ್ ಆಯಿತು ಆಗ ಕಾಲಿಗೆ ಲಾಂಗ್ ನೀ ಬೆಲ್ಟ್ ಧರಿಸಲು ಹೇಳಿ ಎರಡುವಾರ ಬೆಡ್ ರೆಸ್ಟ್. ಮಾಡಲು ತಿಳಿಸಿದರು
ಎರಡು ವಾರ ಆದಾಗ ACL tear ಆದದ್ದು ಮತ್ತೆ ಸ್ವಲೂ ಬೆಸೆದು ಕಾಲು ಮಡಿಚಿಕೊಳ್ಳುವ ಸಮಸ್ಯೆ ಸ್ವಲ್ಪ  ಮಟ್ಟಿಗೆ ಪರಿಹಾರ ಆಯಿತು 
ಆದರೆ ನೋವಿನ ಸಮಸ್ಯೆ ಪರಿಹಾರ ಆಗಲಿಲ್ಲ .ದೇಹದ ಎಲ್ಲಾ ಜಾಯಿಂಟ್ ಗಳು ಮಾತ್ರವಲ್ಲ ‌‌.ಎಲ್ಲ ಮಸಲ್ ಗಳಲ್ಲಿ ಕೂಡ ತೀವ್ರ ಸ್ವರೂಪದ ನೋವು 
ನನಗೆ ಬೆನ್ನು ಹೆಗಲಿಗೆ ಸೊಳ್ಳೆ ಏನಾದರೂ ಕಚ್ಚಿ ತುರಿಕೆ ಆದರೆ ತುರಿಸಲು ಕೈ ಹಿಂದೆ ಹೋಗುತ್ತಿರಲಿಲ್ಲ,ನಾನು ಹಸುಗಳು ಮಾಡುವಂತೆ ಬೆನ್ನನ್ನು ಗೋಡೆಗೆ ಉಜ್ಜಿ ಶಮನಗೊಳಿಸುತ್ತಿದ್ದೆ..ಈಗ ಇದನ್ನು ನೆನೆದಾಗ ನನಗೆ ನಗು ಬರುತ್ತದೆ ಆದರೆ ನನ್ನ ಪರಿಸ್ಥಿತಿ ದೇವರಿಗೆ ಪ್ರೀತಿ

16/01/2023 ರಂದು ನಮ್ಮ ಕಾಲೇಜು ಡೇ‌.ನಿರೂಪಣೆ ನನ್ನದು.ಹಾಗಾಗಿ ಕಾರ್ಯಕ್ರಮದ ಪಟ್ಟಿ ಇರುವ ಫೈಲ್ ಒಂದನ್ನು ಎಡಗೈಯಲ್ಲಿ ಒಂದೆರಡು ಗಂಟೆ ಹಿಡಿದುಕೊಂಡಿದ್ದು ನೆಪವಾಗಿ ಮನೆಗೆ ಬರುವಷ್ಟರಲ್ಲಿ ಕೈ ಅಲುಗಾಡಿಸಲು ಆಗದಷ್ಟು ನೋವು.ಈ 
ನೋವಿನಿಂದ ನಿದ್ರೆ ಇಲ್ಲದೆ ಇನ್ನಿತರ ಸಮಸುಗಳೂ ಉಲ್ಭಣಿಸಿದವು.
ಮತ್ತೆ ವಿಕ್ರಂ ಹಾಸ್ಪಿಟಲ್ ( ಈಗ ಮಣಿಪಾಲ್ ಆಗಿದೆ) ಗೆ ದಾಖಲಾದೆ.
ನನ್ನ ನೋವಿನ ಬಗ್ಗೆ ಪರೀಕ್ಷೆ ಮಾಡಿದ ಡಾ.ಜಯಚಂರ್ರನ್
ಏನೇನೋ ಟೆಸ್ಟ್ ಗಳನ್ನು ಮಾಡಿಸಿದರು.ಅದರಲ್ಲಿ rheumatoid arthritis factor ಇರುವುದು ಕನ್ಫರ್ಮ್ ಆಯಿತು 
ಅಂತೂ ನೋವಿಗೆ ಕಾರಣ ತಿಳಿಯಿತು.ನಾನು arthritis ಎಂದರೆ ಮೂಳೆ ಸವೆತ ಎಂದು ತಿಳಿದಿದ್ದೆ
ಆದರೆ Rheumatoid arthritis ಎನ್ನುವುದು auto immuno  ಸಮಸ್ಯೆ 
ನಮ್ಮ ದೇಹದಲ್ಲಿ ರೋಗಾಣುಗಳನ್ನು ಎದುರಿಸಿ ಹಿಮ್ಮೆಟ್ಟಿಸುವ ರಕ್ಷಣಾ ವ್ಯವಸ್ಥೆ ಇರುತ್ತದೆ.ಈ ರೋಗ ನಿರೋಧಕ ಶಕ್ತಿ ‌ಹೆಚ್ಚಾದಾಗ ಇಲ್ಲದೇ ಇರುವ ರೋಗಾಣು ವಿರುದ್ಧ ಹೋರಾಡಲು ಸಜ್ದಾಗಿ ನಿಂತು ನಮ್ಮ ಜೀವ ಕೋಶಗಳನ್ನೆ ಹಾಳುಮಾಡುತ್ತದೆ
ಗಂಟು ಗಂಟುಗಳಲ್ಲಿ ನೋವು ಊತ ಶುರುವಾಗುತ್ತದೆ 
ಇದಕ್ಕೆ ಇಮ್ಯುನಿಟಿ /ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವುದೊಂದೇ ಪರಿಹಾರ 
ಇದರ ಚಿಕಿತ್ಸೆಗಾಗಿ ಡಾ.ಜಯ ಚಂದ್ರನ್ ಅವರ ಸಲಹೆಯಂತೆ ರುಮ್ಯಾಟಾಲಜಿಸ್ಟ್ ಡಾ.ಪ್ರಶಾಂತ್ ಅವರನ್ನು ಭೇಟಿಯಾಗಿ ಚಿಕಿತ್ಸೆ ಪಡೆದೆ
Rhumatoid arthrits ಗೆ ಸ್ಟಿರಾಯ್ಡ ಬೇಸ್ಡ್ ಔಷಧ ಕೊಡುತ್ತಾರೆ
ಸ್ಟಿರಾಯ್ಡ  ಬಹಳ‌ಬಹಳ ಕೆಟ್ಟದೆಂದು ಹೇಳುದು ಕೇಳಿದ್ದೆ
ಹಾಗಾಗಿ ಸ್ವಲೂ ಸಮಯ ತಗೊಂಡು ನೋವು ಕಡಿಮೆ ಆದಾಗ ನಿಲ್ಲಿಸಿದೆ 
ಮತ್ತೆ ನೋವು ತೀವ್ರಗೊಂಡು ಮತ್ತೆ ಡಾ.ಪ್ರಶಾಂತ್ ಬಳಿಗೆ ಹೋಗಿ ಚಿಕಿತ್ಸೆ ಪಡೆಯುತ್ತಿರುವೆ
ಈ ನಡುವೆ ನಮ್ಮ ಸಂಬಂಧಿಕರೂ ಆಗಿರುವ ಖ್ಯಾತ ವೈದ್ಯರಾದ ಡಾ.ರಾಮ ಪ್ರಕಾಶ್ ಅವರನ್ನು ಭೇಟಿ ಮಾಡಿ ಸಲ‌ಹೆ ಪಡೆದೆ.ಅವರ ಸಲಹೆಯಂತೆ ಡಾ.ಸಜ್ಜನ್ ಶೆಣೈ ಅವರನ್ನು ಭೇಟಿಯಾದೆ.ನಾನು ಪಡೆಯುತ್ತಿರುವ ಚಿಕಿತ್ಸೆ ಸರಿಯಾಗಿದೆ.ಎಂದು ಅವರೂ ತಿಳಿಸಿದರು
ಆರಂಭದಲ್ಲಿ 40mg ಸ್ಟಿರಾಯ್ಡ ಬೇಸ್ಡ್ ಟ್ಯಾಬ್ಲೆಟ್ ತಗಳ್ಳಬೇಕಾಗಿತ್ತು.
ನೋವು ಕಡಿಮೆಯಾದಂತೆ ಇದರ ಪ್ರಮಾಣವನ್ನು ವೈದ್ಯರು ಕಡಿಮೆ ಮಾಡಿದ್ದು ಈಗ ವಾರಕ್ಕೆ ಒಂದು ದಿನ 5mg ತಗೊಳ್ಳುತ್ತಿರುವೆ
ನೋವು ಸುಮಾರಾಗಿ ತಹಬದಿಗೆ ಬಂದಿದೆ
ನನ್ನ ಪರ್ಸನಲ್ ಕೆಲಸದ ಜೊತೆಗೆ ಕಾಲೇಜಿನ ಅಧ್ಯಪನ ಪರೀಕ್ಷೆ ಮೌಲ್ಯಮಾಪನ ಮಾಡುವಷ್ಟು ಹುಷಾರಾಗಿದ್ದೇನೆ
ಈ ನಡುವೆ ಆಯುರ್ವೇದ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ವಿಚಾರಿಸಿದಾಗ ಆಯುರ್ವೇದ ದಲ್ಲಿ ಕೂಡ Rheumatoid arthritis/ಸಂಧಿವಾತಕ್ಕೆ ಸ್ಟಿರಾಯ್ಡ ಬೇಸ್ಡ್ ಔಷಧವೇ ಇರುವುದು ಎಂದು ತಿಳಿಯಿತು 
ಹಾಗಾಗಿ ಸಾಕಷ್ಟು ಪರೀಕ್ಷೆ ಗೆ ಒಳಪಟ್ಟ ಅಲೋಪತ ಔಷಧವೇ ಬೆಟರ್ ಅನಿಸಿ ಡಾ.ಪ್ರಶಾಂತ್ ಬಾಫ್ನ ಅವರಲ್ಲಿಯೇ ಚಿಕಿತ್ಸೆ ಮುಂದುವರಿಸಿ ಈಗ ಹುಷಾರಾಗಿರುವೆ
ಇದರ ಜೊತೆಗೆ ಇನ್ನೊಂದು ವಿಚಾರ ತಿಳಿಸುವೆ 
3/52023ರಂದು ನನ್ನ ಜಾತಕದಂತೆ ಶುಕ್ರಾರ್ಕ ಸಂಧಿ ಇತ್ತು.ನನ್ನ ಜಾತಕ ದಲ್ಲಿ 
ಶುಕ್ರ ಮತ್ತು ರವಿ ದ್ವಿ ದ್ವಾದಶದಲ್ಲಿ ದ್ವಾದಶದಲ್ಲಿ ಇದ್ದು ವ್ಮಮ ಸ್ಥಾನದಲ್ಲಿ  ನೀಚ ಸ್ಥಾನ ಗತನಾದ ರವಿ ಗ್ರಹ ಇದೆ 
ಶುಕ್ರ ದೆಸೆ ಮುಗಿದು ರವಿ ದೆಸೆ ಆರಂಭ ಆಗುವ ಸಂಧಿ ಕಾಲದಲ್ಲಿ ನನಗೆ ಸಂಧಿವಾತ ಸೇರಿದಂತೆ ನಾನಾ ಆರೋಗ್ಯ ಸಮಸ್ಯೆ ಗಳು ಕಾಣಿಸಿದ್ದು ಕಾಕತಾಳೀಯವೋ ಸಂಧಿ ದೋಷವೋ ಗೊತ್ತಿಲ್ಲ..ಈ ಬಗ್ಗೆ ಇದಮಿತ್ಥಂ ಹೇಳುದು ಕಷ್ಟ 
ಅದು ಮೂಢನಂಬಿಕೆಯಾ ನಿಜ ನಂಬಿಕೆಯೋ ಗೊತ್ತಿಲ್ಲ 
ಅದೇನೇ ಇರಲಿ ಸಂಧಿ ಶಾಂತಿ ಮಾಡಿಸುವುದರಿಂದ ಒಳಿತೇ ಹೊರತು ಕೆಡುಕೇನಿದೆ ಎಂದು ಅದನ್ನು ಸಕಾಲದಲ್ಲಿ ಮಾಡಿಸಿದೆ/(ಈ ಬಗ್ಗೆ ಇನೂಬರೆಯಲಿದೆ ಸಮಯ ಸಿಕ್ಕಾಗ ಬರೆಯುವೆ )
ಜೊತೆಗೆ ರವಿಗೆ ಬಲ ಕೊಡುವ ಹರಳನ್ನು ಧರಿಸಿದೆ 
ಇದರ ಫಲವೋ ನನ್ನ ಅದೃಷ್ಟವೋ ವೈದ್ಯರ ಕೈ ಗುಣವೋ ಔಷಧ ಪರಿಣಾಮ ಬೀರಿ ನನ್ನ ನೋವಿನ ಸಮಸ್ಯೆಯನ್ನು ಪರಿಹರಿಸಿದ್ದು ಸತ್ಯವಾದುದು
ಈ ಬಗ್ಗೆ ಮಾತನಾಡುವಾಗ ವೈದ್ಯರು ನೀವು immunity booster ಗಳನ್ನು ತಗೊಂಡಿದ್ದೀರಾ ಎಂದು ಕೇಳಿದ್ದರು 
ಆಗ ಇಲ್ಲ ಎಂದು ಹೇಳಿದ್ದೆ
ಆದರೆ ನಂತರ ನಾನು ಕೊರೋನ ಬಾರದಂತೆ ತಗೊಂಡ ಕಷಾಯ ಆಯುರ್ವೇದ ಔಷಧಿಗಳೂ ummunity booster ಗಳೇ ಅಲ್ವ ಎಂದು ನೆನಪಾಯಿತು 
ಬಹುಶಃ ಇವುಗಳ ಬಳಕೆಯಿಂದ ನನಗೆ ಆಟೋ ಇಮ್ಯುನೋ ಡಿಸೀಸ್ ಆಗಿರುವ Rheumatoid arthritis ಬಂತೋ ಏನೋ ಗೊತ್ತಿಲ್ಲ 
ಡಾ.ಶ್ರೀಧರ್ ಅವರು ಮನೆ ಮದ್ದು ಕಷಾಯ ಆಯುರ್ವೇದ ಔಷಧಿಗಳಿಗೂ ಸೈಡ್ ಎಫೆಕ್ಟ್ ಇದೆ ಎಂದು ಬರೆದಿದ್ದರು . ಅದನ್ನು ಓದಿದಾಗ ನನಗೆ ಈ ವಿಚಾರ ನೆನಪಾಯಿತು 
ಅನೇಕ ಜನರಂತೆ ನಾನು ಕೂಡಾ ಮನೆ ಮದ್ದು ಆಯುರ್ವೇದ ಔಷಧಿಗಳಲ್ಲಿ ಅಡ್ಡ ಪರಿಣಾಮಗಳಿಲ್ಲ ಎಂದು ತಪ್ಪಾಗಿ ಭಾವಿಸಿದ್ದೆ 
ಎಲ್ಲ ಔಷಧಗಳಿಗೂ ಅಡ್ಡ ಪರಿಣಾಮಗಳಿರುತ್ತವೆ ಹಾಗಾಗಿ ನಾವು ಆಯಾಯ ಪದ್ದತಿಯ ಪರಿಣತ ವೈದ್ಯರ ಸಲಹೆ ಪಡೆದೇ ಚಿಕಿತ್ಸೆ ಪಡೆಯುವುದು ಒಳ್ಳೆಯದು 


ಡಾ.ಲಕ್ಷ್ಮೀ ಜಿ ಪ್ರಸಾದ 
ಕನ್ನಡ ಉಪನ್ಯಾಸಕರು 
ಸರ್ಕಾರಿ ಪದವಿ ಪೂರ್ವ ಕಾಲೇಜು 
ಬೆಂಗಳೂರು 


 

ಕುಲೆ/ ಪ್ರೇತ ಮದುವೆ

 ಕುಲೆ /ಪ್ರೇತ ಮದುವೆ

ಇತ್ತೀಚೆಗೆ ಯಾರೋ ಒಬ್ಬರು ಪ್ರೇತ ಮದುವೆಗೆ ವಧು ಬೇಕಾಗಿದೆ ಎಂದು ಜಾಹೀರಾತು ನೀಡಿದ್ದು ಅನೇಕರ ನಗುವಿಗೆ ಅನೇಕರ ಜಿಜ್ಞಾಸೆಗೆ ಕಾರಣವಾಗಿದೆ 

 ಕುಲೆ ಮದುವೆ / ಪ್ರೇತ ಮದು ೆ ತುಳುವರಲ್ಲಿ ಈಗಲೂ ಪ್ರಚಲಿತವಿರುವ ಗತಿಸಿದ ಆತ್ಮಗಳ ನಡುವೆ ನಡೆಸುವ ಮದುವೆ ಆಗಿದೆ .

ಒಂದು ಮನೆಯಲ್ಲಿ ವಿವಾಹ ಪೂರ್ವದಲ್ಲಿ ಗಂಡು ಅಥವಾ ಹೆಣ್ಣು ಮರಣಿಸಿದ್ದರೆ ಅವರು ಅತೃಪ್ತ ಆತ್ಮಗಳಾಗಿ ಅವರ ಅಣ್ಣ ತಮ್ಮ ಅಕ್ಕ ತಂಗಿಯರನ್ನು ಕಾಡುತ್ತವೆ ಎಂಬ ನಂಬಿಕೆ ಇದೆ 

ಈ ಉಪದ್ರ ಪರಿಹಾರಕ್ಕಾಗಿ ಗತಿಸಿದ ಆತ್ಮಗಳ ನಡುವೆ ವಿವಾಹ ಮಾಡುತ್ತಾರೆ.

ಗತಿಸಿದ ಆತ್ಮಗಳಿಗೆ ಮದುವೆ ಮಾಡುವ ಪದ್ಧತಿ 
 ಕೇವಲ ತುಳುವರಲ್ಲಿ ಮಾತ್ರ ಇರುವುದಲ್ಲ .ವಿಶ್ವದ ಹಲವೆಡೆ ಪ್ರಚಲಿತ ಇದೆ


ಚೀನಾ, ತೈವಾನ್ , ಕೊರಿಯಾ, ಏಷ್ಯಾ ದ ಪೂರ್ವ ಈಶಾನ್ಯ ದೇಶಗಳಲ್ಲಿಯೂ ಈ ಪ್ರೇತ ಮದುವೆ / ghost marriage ಪ್ರಚಲಿತ ಇದೆ.
ಚೀನಾದಲ್ಲಿ ಗತಿಸಿದ ಹೆಣ್ಣು ಮತ್ತು ಗಂಡಿಗೆ ghost marriage / ಪ್ರೇತ ಮದುವೆ ಮಾಡುತ್ತಾರೆ . ಇದಕ್ಕಾಗಿ ಅವರ ದೇಹಗಳು ಬೇಕಾಗುತ್ತದೆ.ಹಾಗಾಗಿ  ಸತ್ತ  ಗಂಡಿನ ಅಂತ ಯ ಸಂಸ್ಕಾರ ಮಾಡುವಾಗಲೇ ಅದಕ್ಕೂ ಮೊದ ೇ  ಸತ್ತಿದ್ದ ಹೆಣ್ಣಿನ ಗೋರಿಯ ಬಳಿಗೆ ಹೋಗಿ  ಮದುವೆಯನ್ನೂ  ಮಾಡುತ್ತಾರೆ .ನಂತರ ಮಾಡುವುದೂ ಇದೆಯಂತೆ.


ತೈವಾನ್ ನಲ್ಲಿ ಗತಿಸಿದ ಹೆಣ್ಣು ಮತ್ತು ಜೀವಂತ ಗಂಡಿನ ನಡುವೆ ವಿವಾಹ ಮಾಡುತ್ತಾರೆ
ಇದಕ್ಕಾಗಿ ಕೆಂಪು ಲಕೋಟೆಯಲ್ಲಿ   ಗತಿಸಿದ ಹೆಣ್ಣಿನ ಫೋಟೋ ಅಥವಾ ಕೂದಲು ಇರಿಸಿ ವಿವಿಧ ಉಡುಗೊರೆಗಳನ್ನು ತುಂಬಿ ಜನರು ಓಡಾಡುವ ಜಾಗದಲ್ಲಿ ಇರಿಸುತ್ತಾರೆ.ಇದನ್ನು ಯಾರಾದರೂ ಗಂಡಸರು , ಗಂಡು ಮಕ್ಕಳು ಹೆಕ್ಕಿದರೆ ,ತೆಗೆದು ನೋಡಿದರೆ ಆತ ಆ ಗತಿಸಿದ ಹೆಣ್ಣು ಆತ್ಮ ಕ್ಕೆ ವರನಾಗುತ್ತಾನೆ.ಅದಕ್ಕಾಗಿ ಕೆಂಪು ಲಕೋಟೆಯನ್ನು ಮುಟ್ಟಬಾರದು ಎಂದು ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಹಿರಿಯರು ಹೇಳಿಕೊಡುತ್ತಾರೆ
ಕೆಂಪು ಲಕೋಟೆಯನ್ನು ಎತ್ತಿದ ನಂತರ ಆ ಆತ್ಮ ವನ್ನು ಮದುವೆಯಾಗದೆ ಇರಬೇಕಾದರೆ ದೊಡ್ಡ ಪ್ರಮಾಣದ ಉಡುಗೊರೆಗಳನ್ನು ಹೆಣ್ಣಿನ ಮನೆಯವರಿಗೆ ನೀಡಬೇಕಾಗುತ್ತದೆ 
ಮದುವೆಗೆ ಒಪ್ಪಿದರೆ ಸರಳವಾದ ವಿವಾಹ ಸಮಾರಂಭ ಏರ್ಪಡಿಸಿ ಸಾಂಪ್ರದಾಯಿಕ ಇತರ ಮದುವೆಯಂತೆ ಈ ಆತ್ಮದ ಜೊತೆಗೆ ಮದುವೆ ನಡೆಯುತ್ತದೆ.ಅಲ್ಲಿಗೆ ಬಂಧನ ಮುಕ್ತಿ ಆಗುತ್ತದೆ 
ಎರಡು ಮೂರು ಬಾರಿ ಈ ರೀತಿಯ ಮದುವೆ ಆದವರೂ ಇದ್ದಾರೆ 
ಈ ರೀತಿಯ ಗತಿಸಿದ ಆತ್ಮಗಳಿಗೆ ವಧು ವರರನ್ನು ಹುಡುಕಿ ಕೊಡುವ ವ್ವವಹಾರ ನಡೆಸುವವರೂ ಅಲ್ಲಿ ಇದ್ದಾರೆ 
ಚೀನಾದಲ್ಲಿ ಸತ್ತ ಗಂಡು ಮತ್ತು ಹೆಣ್ಣಿನ ಮದುವೆಗಾಗಿ ಗೋರಿಯಿಂದ ದೇಹವನ್ನು ತೆಗೆಯುತ್ತಾರೆ.ಇದಕ್ಕಾಗಿ ದೇಹವನ್ನು ಗೋರಿಯಿಂದ ಕದಿಯುವವರೂ ಇದ್ದಾರೆ ಅದಕ್ಕಾಗಿ ಚೀನಾ ದೇಶ ಈ ಗತಿಸಿದ ಆತ್ಮಗಳ ಮದುವೆಯನ್ನು ಈಗ ನಿಷೇಧ ಮಾಡಿದೆ.
ಕೋರಿಯದಲ್ಲಿ ಪ್ರೇಮಿಗಳು ವಿವಾಹ ಪೂರ್ವದಲ್ಲಿ ಸತ್ತರೆ ಆಗ ಅವರ ನಡುವೆ ವಿವಾಹ ಮಾಡಿಸುತ್ತಾರೆ.ಗಂಡು ಹೆಣ್ಣು ಇಬ್ಬರೂ ಸತ್ತರೆ ಎರಡೂ ಗತಿಸಿದ ಆತ್ಮಗಳ ನಡುವೆ ವಿವಾಹ ಮಾಡುತ್ತಾರೆ.ಪ್ರೇಮಿಗಳಲ್ಲಿ ಗಂಡು ಅಥವಾ ಹೆಣ್ಣು ಸತ್ತರೆ ಉಳಿದ ಗಂಡು ಅಥವಾ ಹೆಣ್ಣಿಗೆ ಗತಿಸಿದ ಆತ್ಮದೊಂದಿಗೆ ವಿವಾಹ ಮಾಡುತ್ತಾರೆ 
ಇದನ್ನು ಮೂಢನಂಬಿಕೆ ಎಂದು ಹೇಳುವವರೂ ಇದ್ದಾರೆ.ಯಾವುದನ್ನು ನಂಬಿಕೆ, ಮೂಢನಂಬಿಕೆ ಎನ್ನುವುದು.ಗತಿಸಿದ ಆತ್ಮಗಳಿಗೆ ಅಂತ್ಯೇಷ್ಟಿ ಸಂಸ್ಕಾರ ಎಲ್ಲ ಜಾತಿ ಧರ್ಮಗಳಲ್ಲೂ ಅವರದ್ದೇ ಆದ ವಿಧಾನದಲ್ಲಿ ಮಾಡುತ್ತಾರೆ.ಹಾಗೆಯೇ ಪ್ರೇತ ಮದುವೆ/ ghost marriage ಕೂಡ 

ತುಳುವರಲ್ಲಿ ಮೂರು ವಿಧದ ವಿವಾಹ ಸಂಸ್ಕಾರಗಳು ಇವೆ.ಕೈಧಾರೆ,ಬುಡುಧಾರೆ ಮತ್ತು ಕುಲೆ ಮದುವೆ 

ಮದುವೆಗೆ ಮೊದಲೇ ಗತಿಸಿದ ಆತ್ಮಗಳ ನಡುವೆ ನಡೆಸುವ ವಿವಾಹವೇ ಕುಲೆ( ಪ್ರೇತ) ಮದುವೆ

ಧರ್ಮಧಾರೆ
ಹಿರಿಯರು ಕುಲ ಗೋತ್ರ ನೋಡಿ ನಿಶ್ಚಯಮಾಡಿದ ಸಾಂಪ್ರದಾಯಿಕ ವಿವಾಹ ಇದು.
ಈ ಮದುವೆಯ ಮುಖ್ಯ ಭಾಗ ಧಾರೆ ಎರೆಯುವುದು. ಇದನ್ನು ಧರ್ಮಧಾರೆ ಎಂದು ಕರೆಯುತ್ತಾರೆ. ಸೊನ್ನೆಯ ಮತ್ತು ಗುರುಮಾರ್ಲರ ಧರ್ಮಧಾರೆಯನ್ನು ಹೀಗೆ ವರ್ಣಿಸಿದ್ದಾರೆ.
ಸೇಸೆಗು ಮೂಜಿ ಸುತ್ತು ಬಲಿ ಬರ್ಪಾಯೆರ್
ದಾರೆದ ಮಂಟಪೊಡು ಕುಲ್ಲಾಯೆರ್
ಎಡ್ಡೆ ಮುರ್ತೊಡು ಎಡ್ಡೆ ವೇಲ್ಯಗಳಿಗೆಡು
ಮಾಯದ ಸೊನ್ನೆಗುಲಾ ಗುರುಮಾರ್ಲೆರೆಗುಲಾ
ಧರ್ಮಧಾರೆ ದಂಗಾಯೆರ್
ಕೈಮುಟ್ಟು ಕೈದಾರೆ ತೀರ್ತೆರ್
ಮೈಮುಟ್ಟು ಮೈ ಸೇಸೆ ತೀರ್ತೆರ್ 48 
(ಸೇಸೆಗೆ ಮೂರು ಸುತ್ತು ಬರಿಸಿದರು
ಧಾರೆ ಮಂಟಪದಲ್ಲಿ ಕುಳ್ಳಿರಿಸಿದರು
ಒಳ್ಳೆ ಮುಹೂರ್ತದಲ್ಲಿ ಒಳ್ಳೆ ವೇಳೆ ಗಳಿಗೆಯಲ್ಲಿ
ಮಾಯದ ಸೊನ್ನೆಗೂ ಗುರುಮಾರ್ಲರಿಗೂ
ಧರ್ಮಧಾರೆ ಎರೆದರು
ಕೈ ಮುಟ್ಟಿ ಕೈಧಾರೆ ಪೂರೈಸಿದರು
ಮೈಮುಟ್ಟಿ ಮೈ ಸೇಸೆ ಪೂರೈಸಿದರು)
ತುಳುವರಲ್ಲಿ ರಾತ್ರಿ ಧಾರೆ ಇದ್ದುದಾಗಿಯೂ, ರಾತ್ರಿ ಊಟದ ನಂತರ ಧಾರೆ ಎರೆದು ಬೆಳಗಿನ ಜಾವದ ಹೊತ್ತಿನಲ್ಲಿ ಬೊಳ್ಳೆರೆ ಮಾಣಿ ಎಂಬ ಹಕ್ಕಿ ಕೂಗುವ ಹೊತ್ತಿನಲ್ಲಿ ಧಾರೆ ಮಾಡಿ ಹೆಣ್ಣೊಪ್ಪಿಸಿ ಕೊಟ್ಟರು ಎಂಬ ವಿವರಣೆ ಅನೇಕ ಪಾಡ್ದನಗಳಲ್ಲಿ ಕಂಡುಬರುತ್ತದೆ.
ಮುಡಾಯಿ ಬೊಳ್ಳಿ ಉದಿಪುನ
ಬೊಳ್ಳೆರೆ ಮಾಣಿಗದ ಸೊರ ಕೇಣ್ಣಾಗ ಕೈ ಮುಟ್ಟು ಕೈದಾರೆ
ಮೈ ಮುಟ್ಟು ಮೆಯಾದೇಸೆ ಆವೊಡು 
(ಮೂಡುದಿಕ್ಕಿನಲ್ಲಿ ಬೆಳ್ಳಿ ಉದಯಿಸುವಾಗ
ಬೊಳ್ಳೆರೆ ಮಾಣಿಗ ಹಕ್ಕಿ ಕೂಗುವಾ ಸ್ವರ ಕೇಳಿಸುವಾಗ
ಗಂಡು ಹೆಣ್ಣಿನ ಕೈ ಮುಟ್ಟಿ ಕೈ ಧಾರೆ
ಮೈ ಮುಟ್ಟಿ ಮೈ ಸೇಸೆ ಆಗಬೇಕು)
ಇದೇ ರೀತಿಯ ವರ್ಣನೆ ಕೊರಗ ತನಿಯ, ಬಾಲೆ ಮಾಡೆದಿ ಮೊದಲಾದ ಪಾಡ್ದನಗಳಲ್ಲಿದೆ. ಬಾಲೆ ಮಾಡೆದಿಯ ಧಾರೆಯ ವರ್ಣನೆ ಹೀಗಿದೆ:
ವಣಸ್ ಬಲ್ಮಣ ಆಂಡ್
ಬೊಳ್ಳಿ ತೋಜಿದ್ ಬೊಳ್ಳಿರಾನಾಗ
ಬೊಳೆರಿ ಮಾಣಿಗ ಸೊರದನಿ ಕೊರ್ನಾಗ
ಆಣ್‍ಗ್‍ಲಾ ಪೊಣ್ಣ್‍ಗ್‍ಲಾ ಕೈ ಮುಟ್ಟುಧಾರೆ
ಮೈಮುಟ್ಟು ದೇಸೆ ಆಂಡ್
ಧಾರೆ ಆದು ಪೊಣ್ಣ ಒಚ್ಚದ್ ಕೊರಿಯೆರ್ 50
(ಊಟ ಸಮ್ಮಾನ ಆಯಿತು
ಬೆಳ್ಳಿ ಕಾಣಿಸಿ ಬೆಳಕಾದಾಗ
ಬೊಳ್ಳೆರಿ ಮಾಣಿಗ ಹಕ್ಕಿ ಕೂಗಿದಾಗ
ಗಂಡು-ಹೆಣ್ಣಿಗೆ ಕೈ ಮುಟ್ಟಿ ಕೈಧಾರೆ
ಮೈಮುಟ್ಟಿ ಸೇಸೆ ಆಯಿತು
ಧಾರೆ ಆಗಿ ಹೆಣ್ಣು ಒಪ್ಪಿಸಿಕೊಟ್ಟರು)
ತುಳುಪಾಡ್ದನಗಳಲ್ಲಿ ಎಲ್ಲಿಯೂ ಕೂಡ ಮಾಂಗಲ್ಯಧಾರಣೆಯ ಪ್ರಸ್ತಾಪ ಕಂಡುಬಂದಿಲ್ಲ. ಪ್ರಾಚೀನ ತುಳುವರಲ್ಲಿ ಮಂಗಲಸೂತ್ರದ ಕಲ್ಪನೆ ಇರಲಿಲ್ಲ ಎಂದು ಇದರಿಂದ ತಿಳಿದುಬರುತ್ತದೆ.
 

2 ಬುಡುದಾರೆ ಮದುವೆ (ಕೈ ಪತ್ತವುನು ಮದಿಮೆ)
ತುಳುನಾಡಿನಲ್ಲಿ ಗಂಡ ಸತ್ತ ಹೆಣ್ಣಿಗೆ ಅಥವಾ ಗಂಡನಿಂದ ಬೇರೆಯಾದ ಹೆಣ್ಣಿಗೆ ಎರಡನೆಯ ಮದುವೆಯ ಹಕ್ಕಿದೆ. ಮೊದಲ ಮದುವೆಯನ್ನು ಕೈಧಾರೆ ಎಂದು ಹೇಳಿದರೆ, ಎರಡನೆಯ ಮದುವೆಯನ್ನು ಬುಡುಧಾರೆ ಎಂದು ಹೇಳುತ್ತಾರೆ. ಈ ಮದುವೆಯನ್ನು ಕೈ ಪತ್ತವುನು ಅಂದರೆ ಕೈ ಹಿಡಿಯುವುದು ಎಂದು ಹೆಚ್ಚಾಗಿ ಹೇಳುತ್ತಾರೆ. ಈ ಮದುವೆ ಬಹಳ ಸರಳವಾಗಿರುತ್ತದೆ. ಈ ಮದುವೆಯನ್ನು ರಾತ್ರಿಯ ಹೊತ್ತಿನಲ್ಲೇ ಮಾಡುತ್ತಾರೆ. ರಾತ್ರಿಯ ಹೊತ್ತು ಹೆಣ್ಣಿನ ಮನೆಗೆ ದಿಬ್ಬಣ ಹೋಗಿ ಒಂದು ಸೀರೆಯನ್ನು ಅಡ್ಡವಾಗಿ ಹಿಡಿಯುತ್ತಾರೆ. ಸೀರೆಯ ಒಂದು ಬದಿಯಲ್ಲಿ ಗಂಡು, ಇನ್ನೊಂದು ಬದಿಯಲ್ಲಿ ಹೆಣ್ಣನ್ನು ನಿಲ್ಲಿಸಿ ಗುರಿಕಾರರು ಕೈ ಕೈ ಹಿಡಿಸುತ್ತಾರೆ.
ಸಿರಿಯು ಕೊಡ್ಸರಾಳ್ವನನ್ನು ಮರುವಿವಾಹವಾಗುವ ಕಥಾನಕ ಸತ್ಯನಾಪುರದ ಸಿರಿಪಾಡ್ದನದಲ್ಲಿದೆ.
ರಡ್ಡು ದಿನ ಕರಿದ್ ಮೂಜಿ ದಿನೊಟು ಕೊಟ್ರಾಡಿ ಗುತ್ತು ಕೊಡ್ಸರಾಳ್ವೆರ
ಮದಿಮಾಯ ಆಯಿತ ಸಿಂಗಾರ ಆವೊಂದು
ಬೋಳ ಮಲ್ಲಿಗೆಗ್ ಜತ್ತ್ ಪಯಣ ಪತ್ತೊಂಡೆರ್
ಕೊಡ್ಸರಾಳ್ವೆರೆಗ್ ಬಹು ಬಿರ್ದ್‍ದ ತಮ್ಮನ ಬಲಿಮನ ಮನ್ತೆರ್
ಸತ್ಯಮಾಲೋಕಂದ ಬಾಲೆಕ್ಕೆ ಸಿರಿನ್ ಮದಿಮೆ ಮಂಗಲ ಮನ್ತ್‍ದ್
ಪೊನ್ನು ಒಟ್ಟಿದ್ ಕೊರ್ದು ಎಡ್ದೆ ವರ ಕೊರ್ದು
ದಿಬ್ಬಣ ಜಪುಡಿಯೆರ್ ಬೋಳಮಲ್ಲಿಗೆ ಚತ್ತಲು 
(ಎರಡು ಮೂರು ದಿನಗಳಲ್ಲಿ ಕೊಟ್ರಾಡಿ ಗುತ್ತು ಕೊಡ್ಸರಾಳ್ವರು
ಮದುಮಗನ ಅಲಂಕಾರ ಮಾಡಿಕೊಂಡು
ಬೋಳಮಲ್ಲಿಗೆಗೆ ಇಳಿದು ಪ್ರಯಾಣ ಮಾಡಿದರು
ಕೊಡ್ಸರಾಳ್ವರಿಗೆ ಬಹಳ ವೈಭವ ಸಮ್ಮಾನ ಮಾಡಿದರು
ಸತ್ಯನಾಪುರದ ಬಾಲೆಕ್ಕೆ ಸಿರಿಯನ್ನು ಮದುವೆ ಮಾಡಿ
ಹೆಣ್ಣೊಪ್ಪಿಸಿ ಕೊಟ್ಟರು ಒಳ್ಳೆ ವರ ಕೊಟ್ಟು
ದಿಬ್ಬಣ ಇಳಿಸಿದರು ಬೋಳಮಲ್ಲಿಗೆ ಅರಸರು)
ಇಲ್ಲಿ ಸಿರಿಗೆ ಮರು ಮದುವೆ ಮಾಡಿಸಿದ್ದರ ವರ್ಣನೆ ಇದೆ 
ಕುಲೆ ಮದಿಮೆ/ ಗತಿಸಿದ ಆತ್ಮಗಳ ಮದುವೆ 
ಇದು ಗತಿಸಿದ ಆತ್ಮಗಳ ನಡುವೆ ನಡೆಸುವ ಮದುವೆ ಆಗಿದೆ 
ಕೈ ಧಾರೆ ಮದುವೆಯ ಎಲ್ಲ ಪದ್ಧತಿ ಗಳೂ ಇದರಲ್ಲಿ ಇರುತ್ತದೆ.ಮದುವೆಗೆ ಮೊದಲು ಸತ್ತ ಹೆಣ್ಣಿಗೂ ಗಂಡಿಗೂ ಕುಲ ಗೋತ್ರ ಅನುಸಾರವಾಗಿ ಲಗ್ನ ನಿಶ್ಚಯ ಆಗುತ್ತದೆ

 

ಕುಲೆ ಮದಿಮೆ 

ಕೈ ಧಾರೆ ಮದುವೆಯ ಎಲ್ಲ ಪದ್ಧತಿ ಗಳೂ ಇದರಲ್ಲಿ ಇರುತ್ತದೆ.ಮದುವೆಗೆ ಮೊದಲು ಸತ್ತ ಹೆಣ್ಣಿಗೂ ಗಂಡಿಗೂ ಕುಲ ಗೋತ್ರ ಅನುಸಾರವಾಗಿ ಲಗ್ನ ನಿಶ್ಚಯ ಆಗುತ್ತದೆ 
ಮದು ಮಗ ಮದು ಮಗಳ ಬದಲಿಗೆ ಹಿಂಗಾರವನ್ನು ಇರಿಸುತ್ತಾರೆ. ಬಾಳೆ ಎಲೆ ಅಡಿಕೆ ತೆಂಗಿನಕಾಯಿ ಕಾಯಿ ಇರಿಸಿಯೂ ಮಾಡುತ್ತಾರೆ 
ಕೆಲವೆಡೆ ಬಾಳೆ ಕಂಬವನ್ನು ಇರಿಸುವುದೂ ಇದೆ.
ಬಾಳೆ ಕಂಬಕ್ಕೆ ವಧು ವರರ ಅಲಂಕಾರ ಮಾಡಿ ಹಾರ ಹಾಕಿ ಧಾರೆ ಎರೆದು ಮಂಗಲ ಸೂತ್ರವನ್ನು ಕಟ್ಟುತ್ತಾರೆ.
ಸೊನ್ನೆ ಮತ್ತು ಗುರುಮಾರ್ಲರ ಅವಳಿ ಮಕ್ಕಳಾದ ಅಬ್ಬಗ ದಾರಗೆಯರು  ವಿವಾಹ ಪೂರ್ವದಲ್ಲಿ ಸಾವನ್ನಪ್ಪಿರುತ್ತಾರೆ.ಇವರಿಗೆ ಇವರಂತೆಯೇ ಅವಳಿಗಾಗಿ ಹುಟ್ಟಿ ವಿವಾಹ ಪೂರ್ವದಲ್ಲಿ ಸಾವನ್ನಪ್ಪಿದ ಇಬ್ಬರನ್ನು ಹುಡುಕಿ ಮರಣೋತ್ತರ ವಿವಾಹ/ ಕುಲೆ ಮದುವೆ ಮಾಡಿಸಿದ್ದರ ಉಲ್ಲೇಖ ಸಿರಿ ಪಾಡ್ದನದಲ್ಲಿದೆ 


 ಇದನ್ನು ಮೂಢನಂಬಿಕೆ ಎಂದು ಹೇಳುವವರೂ ಇದ್ದಾರೆ.ಯಾವುದನ್ನು ನಂಬಿಕೆ, ಮೂಢನಂಬಿಕೆ ಎನ್ನುವುದು.ಗತಿಸಿದ ಆತ್ಮಗಳಿಗೆ ಅಂತ್ಯೇಷ್ಟಿ ಸಂಸ್ಕಾರ ಎಲ್ಲ ಜಾತಿ ಧರ್ಮಗಳಲ್ಲೂ ಅವರದ್ದೇ ಆದ ವಿಧಾನದಲ್ಲಿ ಇದೆ.ಹಾಗೆಯೇ  ಇದೂ ಕೂಡ ಒಂದು.

ಎಲ್ಲವೂ ಅವರವರ ಭಾವಕ್ಕೆ ನಂಬಿಕೆಗೆ ಬಿಟ್ಟದ್ದು.

ಕುಲೆ ಮದಿಮೆ ಚಿತ್ರ ಕೃಪೆ  ನಮ್ಮ ಬಂಟ್ವಾಳ 

 

 

ಫೇಲಿನ ಕಹಿಯೂ ರ್ಯಾಂಕಿನ ಸಿಹಿಯೂ..

 ಹೌದು.ನಾನು ಪಿಯುಸಿಯಲ್ಲಿ ಫೇಲ್ ಆಗಿದ್ದೆ

.ನಾನು ಪಿಯು ಓದಿದ ಮಂಗಳೂರು ಸರ್ಕಾರಿ ಪಿಯು ಕಾಲೇಜಿನಲ್ಲಿ ( ಈಗಿನ ವಿಶ್ವ ವಿದ್ಯಾಲಯ ಕಾಲೇಜು) ನಮ್ಮ ತರಗತಿಯಲ್ಲಿನ ಎಲ್ಲರೂ ಹತ್ತನೆಯ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದವರೇ ಆಗಿದ್ದರು.ಎಲ್ಲರೂ ಕನ್ನಡ ಮಾಧ್ಯಮದಲ್ಲಿ ಓದಿದವರೇ ಆಗಿದ್ದೆವು
ಇಲ್ಲಿನ ಉಪನ್ಯಾಸಕರೋ ಸಾಕ್ಷಾತ್ ಇಂಗ್ಲೆಂಡಿನಿಂದ ಉದುರಿದವರ ಹಾಗೆ ಇದ್ದರು.ಒಂದಕ್ಷರ ಕನ್ನಡದಲ್ಲಿ ವಿವರಿಸುತ್ತಿರಲಿಲ್ಲ.ಕ್ಲಾಸ್ ಟೆಸ್ಟ್ ಬಿಡಿ.ಮಧ್ಯಾವದಿ ಪರೀಕ್ಷೆ ,ಪೂರ್ವ ಸಿದ್ಧತಾ ಪರೀಕ್ಷೆ ಕೂಡ ಮಾಡುತ್ತಿರಲಿಲ್ಲ.ನಾವು ನೇರವಾಗಿ ಅಂತಿಮ ಪರೀಕ್ಷೆಯನ್ನು ಎದುರಿಸಿದ್ದೆವು.ಪ್ರಥಮ ಪಿಯುಸಿಯಲ್ಲಿ ಬಹುಶಃ  ಮಕ್ಕಳ ಸಂಖ್ಯೆ ಕಡಿಮೆಯಾದರೆ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ಹೆಚ್ಚು ಕಡಿಮೆ ಎಲ್ಲರನ್ನು ಪಾಸ್ ಮಾಡ್ತಿದ್ದರು.ಸೆಕೆಂಡ್ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ 1% ಫಲಿತಾ ಂ ಶ ಕೂಡಾ ಇರುತ್ತಿರಲಿಲ್ಲ.ಇಷ್ಟು ಕಡಿಮೆ ಫಲಿತಾಂಶ ಬಂದರೂ ಈ ಉಪನ್ಯಾಸಕರನ್ನು ಹೇಳುವವರು ಕೇಳುವವರು ಯಾರೂ ಇರಲಿಲ್ವೆ? ನನಗೀಗಲೂ ಈ ವಿಚಾರ ಅರ್ಥ ಆಗುತ್ತಿಲ್ಲ
ಈಗ  40% ಕಡಿಮೆ ಫಲಿತಾಂಸ ಬಂದವರಿಗೆ ಭಡ್ತಿ ಕೊಡುವುದಿಲ್ಲ.ಅವರನ್ನು ಕರೆದು ವಿಚಾರಿಸುತ್ತಾರೆ.ಕಾರಣ ಕೇಳ್ತಾರೆ ಒಟ್ಟಿನಲ್ಲಿ ಉಪನ್ಯಾಸಕರು ಬೇಜವಾಬ್ದಾರಿ ಮಾಡುವಂತಿಲ್ಲ
ಆಗ ಇವ್ಯಾವುದೂ ಇರಲಿಲ್ವಾ? ಇರಲಿ ಇಲ್ಲದೇ ಇರಲಿ..ಇವರಿಗೆ ಆತ್ಮ ಸಾಕ್ಷಿ ಚುಚ್ಚುತ್ತಿರಲಲ್ವಾ? ಇಷ್ಟು ಸಂಬಳ ಪಡೆದು ಎಲ್ಲ ಮಕ್ಕಳೂ ಫೇಲಾದಾಗ ಇವರಿಗೆ ಏನೂ ಅನಿಸುತ್ತಿರಲಿಲ್ವಾ? 
ಬಹುಶಃ ಇದೇ ಕಾರಣಕ್ಕೆ ನನ್ನ ಪಿಯು ಉಪನ್ಯಾಸಕರಲ್ಲಿ ಸಂಸ್ಕೃತ ಉಪನ್ಯಾಸಕರಾದ ಡಾ.ಲಕ್ಷ್ಮೀ ನಾರಾಯಣ ಭಟ್ಟರ ಹೊರತಾಗಿ ಇತರರ ಬಗ್ಗೆ ನನಗೆ ಒಂದಿನಿತೂ ಭಕ್ತಿ ಗೌರವ ಉಳಿದಿಲ್ಲ
ನಾನೇನೋ ಹೇಗೋ ಗೈಡ್ ಓದಿ ಮತ್ತೆ ಪರೀಕ್ಷೆ ಕಟ್ಟಿ ಪಾಸಾದೆ ನಂತರ ಮುಂದೆ ಓದಿದೆ
ಆದರೆ ಎಲ್ಲರ ಬದುಕಿನಲ್ಲಿಯೂ ಇದು ಸಾಧ್ಯವೇ ? ಹುಡುಗಿಯರು ಫೇಲಾದ ತಕ್ಷಣವೇ ಹೆತ್ತವರು ಮದುವೆ ಮಾಡಿ ಕೈತೊಳ್ಕೊಂಡು ಬಿಡ್ತಾರೆ.ಹುಡುಗರು ಯಾವುದಾದರೂ ಗ್ಯಾರೇಜಿನಲ್ಲೋ ಇನ್ನೆಲ್ಲೋ ಕೆಲಸಕ್ಕೆ ಸೇರ್ತಾರೆ.ನನ್ನ ಪಿಯು ಸಹಪಾಠಿಗಳಲ್ಲಿ ಒಬ್ಬ( ಹೆಸರು ಸರಿಯಾಗಿ ನೆನಪಿಲ್ಲ..ರಮೇಶ್ ಇರಬೇಕು) ಹತ್ತನೆಯ ತರಗತಿಯಲ್ಲಿ 92% ಅಂಕಗಳನ್ನು ಪಡೆದಿದ್ದ.ಪಿಯುನಲ್ಲಿ ಐದು ವಿಷಯಗಳಲ್ಲಿ ಫೇಲಾಗಿದ್ದ.ನಂತರ ಗ್ಯಾರೇಜ್ ಕೆಲಸಕ್ಕೆ ಸೇರಿದನಾದರೂ ಇದೇ ನೋವಿನಲ್ಲಿ ಆತ್ಮ ಹತ್ಯೆ ಮಾಡಿಕೊಂಡಿದ್ದ
ಆಗ ಫೇಲಾದರೆ ಆ ವಿಷಯ ಬಿಟ್ಟು ಅರ್ಟ್ಸ್ ತಗೊಂಡು ನೇರವಾಗಿ ಪರೀಕ್ಷೆ ಕಟ್ಟಿ ಪಾಸಾಗಬೇಕಿದ್ದರೆ 25 ವರ್ಷ ಆಗಬೇಕೆಂಬ ನಿಯಮವಿತ್ತು
ವಿಜ್ಞಾನ ತಗೊಂಡು ಫೇಲಾಗಿ ಮತ್ತೆ ಕಟ್ಟಿಯೂ ಪಾಸಾಗಲಾಗದಿದ್ದರೆ ಅವರ ಕಲಿಕೆ ಪೂರ್ಣ ನಿಂತು ಹೋದ ಹಾಗೆಯೇ..
ಕರ್ನಾಟಕದ ವಿದ್ಯಾರ್ಥಿಗಳಿಗಾಗಿದ್ದರೆ ಹತ್ತನೆಯ ತರಗತಿಯಲ್ಲಿ ಡಿಪ್ಲೋಮ ಮಾಡಿ ನಂತರ ಇಂಜನಿಯರಿಂಗ್ ಮಾಡಿ ಯಶಸ್ಸು ಪಡೆಯುವ ಅವಕಾಶವಿತ್ತು.ಆದರೆ ಇದನ್ನು ನಮಗೆ ಯಾವ ಉಪನ್ಯಾಸಕರೂ ಮಾಹಿತಿ ನೀಡಿರಲಿಲ್ಲ.
ಇನ್ನು ಕೇರಳದ ಗಡಿನಾಡು ಕಾಸರಗೋಡಿನ ಮಕ್ಕಳಾದ ನಮಗೆ ಡಿಪ್ಲೋಮ ಕೂಡ ಗಗನ ಕುಸುಮವೇ ಸರಿ
ಕೇವಲ ಹತ್ತು ಡಿಪ್ಲೋಮ ಸೀಟುಗಳು ಗಡಿನಾಡ ಕನ್ನಡಿಗರಿಗೆ ಇತ್ತು.ಮಂಗಳೂರಿನ ಕೆಪಿಸಿ ? ಡಿಪ್ಲೋಮಾ ಕಾಲೇಜಿನಲ್ಲಿ ಒಂದು ಸೀಟು ಗಡಿನಾಡ ಕನ್ನಡಿಗರಿಗೆ ಇದ್ದದ್ದು
ಅದು ಯಾರಿಗಾದರೂ ಒಬ್ಬರಿಗೆ ಸಿಕ್ತಿತ್ತು.ಉಳಿದ ಒಂಬತ್ತು  ಹುಬ್ಬಳ್ಳಿ ದಾರವಾಡ ಮೊದಲಾದೆಡೆ ಇತ್ತು
ಅದೂ ಟೈಲರಿಂಗ್ ಮತ್ತು ಫ್ಯಾಶನಿಂಗ್ ಟೆಕ್ನಾಲಜಿ ಇತ್ಯಾದಿಗಳಲ್ಲಿ ಕೊಡುತ್ತಿದ್ದರು
ನಾನೂ ಡಿಪ್ಲೋಮಕ್ಕೆ ಟ್ರೈ ಮಾಡಿದ್ದೆ.ನನಗೂ ಸಿಕ್ಕಿರಲಿಲ್ಲ
ಫೇಲಾದ ಸುದ್ಧಿ ತಗೊಂಡು ಬಂದಾಗ ನನಗೆ ಮನೆಯಲ್ಲಿ ಬೈಗಳ ಸುರಿಮಳೆ.ಅದು ತನಕ ಜಾಣೆ ಎಂಬ ಕಾರಣಕ್ಕೆ ನನಗೆ ಹೊಗಳಿಕೆ ಸಿಗುತ್ತಿತ್ತು.
ಮನೆಯಲ್ಲಿ ಬೈದಾಗ ಹಠ ಬಂತು.ಇದೇ ಮೊದಲು ಮತ್ತು ಕೊನೆ..ಎಂದಿಗೂ ಫೇಲಾಗಲಾರೆ ಎಂದು ನಿರ್ಧರಿಸಿದೆ

ಬೇರೆಯವರೆಡೆ ಒಂದು ಬೆರಳು ತೋರುಿಸುವಾಗ ನಮ್ಮ ಕಡೆ ನಾಲ್ಕು ಬೆರಳುಗಳನ್ನು ತೋರಿಸುತ್ತಿದೆ 

ಹಾಗಾಗಿ ಅವರಿವರನ್ನು ದೂಷಿಸುವ ಬದಲು ನಾನೇ ಓದಲು ನಿಶ್ಚಯ ಮಾಡಿದೆ..
ಅದೇ ಕ್ಷಣದಿಂದ ಹಗಲು ರಾತ್ರಿ ಓದಿದೆ.ಅರ್ಥ ಆಗದ್ದನ್ನು ಹಾಗೆಯೇ ಬಾಯಿಪಾಠ ಮಾಡಿದೆ.ಮರು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಪಾಸಾದೆ
ನಂತರ ವಿಜ್ಞಾನ ಬಿಟ್ಟು ಆರ್ಟ್ಸ್ ನಲ್ಲಿ ಪದವಿ ಮಾಡಬೇಕೆಂದುಕೊಂಡೆ
ಅದಕ್ಕಾಗಿ ಕೆನರಾ ಕಾಲೇಜಿಗೆ ತಂದೆ ಜೊತೆಗೆ ಹೋಗಿ ಸೀಟು ಕೇಳಿದೆ.ಆಗ ಎಷ್ಟೋ ಡೊನೇಷನ್ ಕೇಳಿದರು.ಆಗ ನನ್ನ ತಂದೆ ನಮಗೆ ಎರಡು ಖಂಡಿ ಅಡಿಕೆ ಆಗುದು.ಅಷ್ಟು ಡೊನೇಷನ್ ಸಾಧ್ಯವಿಲ್ಲ.ಕಡಿಮೆ ಮಾಡಿ ಎಂದು ಕೇಳಿದರು.ಆಗ ಅಲ್ಲಿನ ಪ್ರಿನ್ಸಿಪಾಲ್ ( ಉಪಾಧ್ಯಾಯ?) ಎರಡು ಖಂಡಿಯೋ ಇಪ್ಪತ್ತು ಖಂಡಿಯಾ ಎಂದು ಗದರಿ ಅವಹೇಳನ ಮಾಡಿ ಮಾತನಾಡಿದರು
ಬಸವನ ಕೋಪ ದವಡೆಗೆ ಮೂಲ ಅಲ್ವೇ.ನಾವೇನೂ ಹೇಳದೆಯೇ ಹಿಂತಿರುಗಿದೆವು.ಕಷ್ಟವಾದರೂ ಅವರು ಕೇಳಿದಷ್ಟು ದುಡ್ಡು ಹೊಂದಿಸಿ ಪದವಿಗೆ ಕೆನರಾ ಕಾಲೇಜಿನಲ್ಲಿ ಸೇರಿಸಲು ನನ್ನ ತಂದೆ ತಾಯಿ ಸಿದ್ದವಿದ್ದರು.ಆದರೆ ನನ್ನ ತಂದೆಯನ್ನು ಅಧಿಕಾರದ ಅಮಲಿನಿಂದ ವಿನಾಕಾರಣ ಗದರಿ ಅವಹೇಳನ ಮಾಡಿದ ಪ್ರಿನ್ಸಿಪಾಲ್ ಇರುವ ಆ ಕಾಲೇಜಿಗೆ ಹೋಗಲು ನನಗೆ ಇಷ್ಟವಿರಲಿಲ್ಲ
ಮುಂದೇನು ? ಎಂಬ ಯೋಚನೆಯಲ್ಲಿದ್ದಾಗ ದೊಡ್ಡ ತಮ್ಮ ಈಶ್ವರ ಭಟ್ ನ ಹತ್ತನೆಯ ತರಗತಿ ಫಲಿತಾಂಸ ಬಂತು.ಅವನಿಗೆ ಪಿಯುಸಿ ಸೀಟಿಗಾಗಿ ಉಜಿರೆಗೆ ಹೋಗಿ ನಮ್ಮ ಸಂಬಂಧಿಕರಾದ ಫಿಸಿಕ್ಸ್ ಉಪನ್ಯಸಾಕರಾಗಿದ್ದ ಗಣಪಯ್ಯರನ್ನು ನನ್ನ ಅಣ್ಣ ಕೃಷ್ಣ ಭಟ್ ವಾರಣಾಸಿ ಹೋಗಿ ಭೇಟಿಯಾದ
ಬಹಳ ಪ್ರೀತಿಯಿಂದ ಗಣಪಯ್ಯ ತಮ್ಮ ಈಶ್ವರನಿಗೆ ಸೀಟು ಕೊಡಿಸಿದರು
ನಂತರ ಮನೆ ಮಂದಿ ಬಗ್ಗೆ ವಿಚಾರಿಸಿದಾಗ ಅಣ್ಣ ನನ್ನ ಬಗ್ಗೆ ಹೇಳಿದ.ಆಗ ಗಣಪಯ್ಯನವರು ಅವರಾಗಿಯೇ ಅವಳನ್ನೂ ಇಲ್ಲಿಯೇ ಡಿಗ್ರಿಗೆ ಸೇರಿಸುವ ಕರಕೊಂಡು ಬಾ ಎಂದರು
ಹಾಗೆ ಮರು ದಿನ ನಾನು ತಂದೆಯ ಜೊತೆಗೆ ಹೋದೆ.ನಾನು Arts ಕೇಳಿದೆ.ಆಗ ಗಣಪಯ್ಯವನರು ಸಯನ್ಸ್ ಓದಿದರೆ ಕೆಲಸಕ್ಕೆಲ್ಲ ಒಳ್ಳೆಯದು.ಇಲ್ಲಿ ಒಳ್ಳೆಯ ಉಪನ್ಯಾಸಕರಿದ್ದಾರೆ ಸಮಸ್ಯೆ ಆಗಲಾರದು ಎಂದು ಹೇಳಿ ಬಿಎಸ್ಸಿಗೆ ಸೇರಿಸಿದರು.ಆರ್ಟ್ಸೇ ಬೇಕೆಂದು ಹಠ ಹಿಡಿಯುತ್ತಿದ್ದರೆ ಅದನ್ನೇ ಕೊಡಿಸುತ್ತಿದ್ದರೋ ಏನೋ..ನಾನು ಹಟ ಹಿಡಿಯದೆ ಬಿಎಸ್ಸಿಗೇ ಸೇರಿದೆ
ಪಿಯುಸಿಯಲ್ಲಿ ಸರಿಯಾಗಿ ಪಾಠವಿಲ್ಲದೆ ಅರ್ಥ ಆಗದೇ ಇದ್ದ ಕಾರಣ ಬಿಎಸ್ಸಿ ಯ ಕಲಿಕೆ ಕೂಡ ಕಷ್ಟ ಎನಿಸಿತು ನನಗೆ.ಜೊತೆಗೆ ಆರೋಗ್ಯ ಸಮಸ್ಯೆ ಕೂಡ ಬಂತು
ಮೊದಲ ವರ್ಷದ ಫಲಿತಾಂಸ ಬಂದಾಗ ವಿಪರೀತ ಆತಂಕ.ಫಲಿತಾಂಶ ಬೋರ್ಡ್ ನಲ್ಲಿ ಹಾಕಿದ್ದರು
ನಮ್ಮ‌ಮೆಸ್ ನ ಸಮೀಪದ ವಸಂತಿ‌ಅಮ್ಮನ ಮಗಳ ಹೇಮ ನಮಗಿಂತ ಒಂದು ವರ್ಷ ಸೀನಿಯರ್ ಆಗಿದ್ದು( ಇವರಬಗ್ಗೆ ದೊಡ್ಡವರ ದಾರಿಯಲ್ಲಿ ಬರೆಯಲಿಕ್ಕಿದೆ) ಒಂದೊಂದೇ ವಿಷಯ ನೋಡಬೇಕು‌.ಪಾಸಾದವರ ರಿಜಿಸ್ಟರ್ಡ್ ನಂಬರ್ ಇರುತ್ತದೆ ಎಂದಿದ್ದರು
ಹಾಗೆ ಮೊದಲಿಗೆ ನನಗೆ ಬಹಳ ಕಷ್ಟ ಎನಿಸಿದ್ದ ಫಿಸಿಕ್ಸ್ ನೋಡಿದೆ..ಅಯ್ಯೋ..ಅದರಲ್ಲಿ ನನ್ನ ರಿಜಿಸ್ಟ ರ್ ನಂಬರಿಲ್ಲ
ಕೆಮೆಷ್ಟ್ರಿ ನೋಡಿದೆ ಅದರಲ್ಲೂ ಇಲ್ಲ.ಗಣಿತ ನೋಡಿದೆ ಅದರಲ್ಲೂ ಇಲ್ಲ.ಅಳು ಉಕ್ಕಿ ಬಂದು ಕಣ್ಣನೀರು ತುಂಬಿ ಕಣ್ಷು ಮಸುಕಾಗಿತ್ತು.ಒರಸಿಕೊಂಡು‌ ಇಂಗ್ಲಿಷ್ ನೋಡಿದೆ ಅದರಲ್ಲೂ ಇಲ್ಲ.ಕೊನೆಗೆ ಸಂಸ್ಕೃತ ನೋಡಿದೆ..ಹಾ..ಅದರಲ್ಲೂ ನನ್ನ ನಂಬರಿಲ್ಲ
ದೇವರೇ..ಬಿಎಸ್ಸಿ ಮೊದಲ ವರ್ಷದ ಎಲ್ಲ ಐದೂ ವಿಷಯಗಳಲ್ಲಿ ಫೇಲ್ ಆದೆ..ಮುಂದೆ ಇವನ್ನು ಪಾಸಾಗುದು ಹೇಗೆ..ಇನ್ನೂ ಎರಡು ವರ್ಷ ಇದೆಯಲ್ಲ..ಬಹುಶಃ ಆಗಿನ ನನ್ನ ಸ್ಥಿತಿ ದೇವರಿಗೇ ಪ್ರೀತಿ
ಇಡೀ ಜಗತ್ತು ಗರಗರನೆ ತಿರುಗಿದ ಅನುಭವ
ಹೇಳಲಿಕ್ಕಾದ ಸಂಕಟ..ಭಯ ಆತಂಕ..ಎಲ್ಲ ವಿಷಯಗಳಲ್ಲಿ ಫೇಲಾದದ್ದನ್ನು ತಂದೆ ತಾಯಿಗೆ ಹೇಳುದಾದರೂ ಹೇಗೆ ? ನನ್ನ‌ಮೇಲೆ ನಂಬಿಕೆ ಇರಿಸಿ ಸೀಟು ಕೊಡಿಸಿದ ಗಣಪಯ್ಯರ ಮುಖವನ್ನು ನೋಡುದಾದರೂ ಹೇಗೆ?
ಆ ಕ್ಷಣಕ್ಕೆ ಆ ಕಟ್ಟಡ ಕುಸಿದು ನಾನದರ ಅಡಿಗೆ ಬಿದ್ದು ಸತ್ತಿದ್ದರೆ ಎಷ್ಟು ಒಳ್ಳೆಯದೆನಿಸಿತ್ತು
ಭೂಕಂಪ ಆಗಿ ನಾನಿದ್ದ ಭೂಮಿ ಬಿರಿದು ಅದರಡಿಯಲ್ಲಿ ನಾನು ಹೂತು ಹೋಗಬೇಕೆನಿಸಿತು
ನಾವಂದುಕೊಂಡ ಹಾಗೆಲ್ಲ ಆಗಬೇಕಲ್ಲ..ಅಳಿಸಿ ನಗಿಸಿ ಚಂದ ನೋಡುವವ ಮೇಲೆ ಇದ್ದಾನಲ್ಲ..ಏನು‌ಮಾಡುದು.
ಬಹಳ ಸೋತ ಹೆಜ್ಜೆ ಇಟ್ಟು ಕೊಂಡು ತರಗತಿಗೆ ಹೋಗದೆ ನಾವಾಗ ಇದ್ದ ಬಾಡಿಗೆ ಮನೆಗೆ ಹೊರಟೆ
ಮರುದಿನವೇ ಖಾಲಿ ಮಾಡಿ ಮನೆಗೆ ಹೋಗುವುದೆಂದು ನಿರ್ಧರಿಸಿದೆ‌‌.ನನಗೆ ಬಿಎಸ್ಸಿ ಪಾಸ್ ಮಾಡಲು ಅಸಾಧ್ಯ ಎನಿಸಿತ್ತು‌.ನಾನು ಶಕ್ತಿ ಮೀರಿ ಓದಿ ಬರೆದಿದ್ದೆ.ಆದರೂ ಪಾಸಾಗಿಲ್ಲ.ಹಾಗಾಗಿ ಅಪ್ಪ ಅಮ್ಮ‌ಕಷ್ಟ ಪಟ್ಟು ದುಡಿದ ದುಡ್ಡನ್ನು ಕಾಲೇಜು ಫೀಸಿಗೆ ಕಟ್ಟಿ ವ್ಯರ್ಥ ಮಾಡುದೇಕೆ ಎನಿಸಿತ್ತು.ಆ ಕ್ಷಣದಲ್ಲೂ ನಾನು arts ತಗೊಂಡಿದರೆ ಪಾಸಾಗಿರುತ್ತಿದ್ದೆನೋ ಏನೋ ಎಂದೆನಿಸಿತ್ತು
ಹೀಗೆ ಏನೋನೋ ಯೋಚಿಸುತ್ತಾ ತಲೆ ಕೆಟ್ಟು ಕಾಲೇಜು ಮೆಟ್ಟಲಿಳಯುತ್ತಿರುವಾಗ ಯಾರೋ ಎದುರು ಬಂದು ಢಿಕ್ಕಿಯಾದೆ..ಯಾರೆಂದೂ ಮುಖ ಎತ್ತಿ ನೋಡದೆ sorry ಹೇಳಿ ಮುಂದಡಿಯಿಟ್ಟೆ.
ಆಗ ಲಕ್ಷ್ಮೀ ಎಂತ..ಕ್ಲಾಸಿಂಗೆ ಹೋವುತ್ತಿಲ್ಲೆಯ? ಎಂಬ ಗಣಪಯ್ಯರ ಮಾತು ಕೇಳಿತು.ನೋಡಿದರೆ ನಾನು ಢಿಕ್ಕಿ ಹೊಡೆದದ್ದು ಅವರಿಗೇ
ಅಳುದು ಯಾಕೆ ? ಎಂತ ಆಯಿತು ಎಂದು ನನ್ನ‌ಮುಖ ನೋಡಿ ಕೇಳಿದರು.ನಾನು ಅಳುತ್ತಾ ಕಷ್ಟ ಪಟ್ಟು ಎಲ್ಲ ವಿಷಯಗಳಲ್ಲಿ ಫೇಲಾದ ವಿಚಾರ ಹೇಳಿದೆ..ಯಾರೇಳಿದ್ದು.ನೀನು ಎಲ್ಲ ವಿಷಯಗಳಲ್ಲೂ  ಪಾಸ್..ನಾನು ಬೆಳಗ್ಗೆಯೇ  ರಿಸಲ್ಟ್ ನೋಡಿದ್ದೇನೆ ಎಂದರು.ಆಗ ಇಲ್ಲ..ಫಿಸಿಕ್ಸ್ ,ಕೆಮೆಸ್ಟ್ರಿ ಮ್ಯಾತ್ಸ್ ಇಂಗ್ಲೀಷ್ ಸಂಸ್ಕೃತ ಗಳಫಲಿತಾಂಶ ಪಟ್ಟಿಯಲ್ಲಿ ನನ್ನ ರಿಜಿಸ್ಟರ್ ನಂಬರಿಲ್ಲ ಎಂದೆ
ಎಲ್ಲದರಲ್ಲಿ ಪಾಸಾದವರ ಪಟ್ಟಿ ಬೇರೆ ಇದೆ.ಎಲ್ಲದರಲ್ಲಿ ಪಾಸಾಗದೆ ಇರುವವರ ಫಲಿತಾಂಶ ಉಳಿದವುಗಳಲ್ಲಿ ಇರುತ್ತದೆ ಎಂದರು
ಓ.ನನಗದು ಗೊತ್ತಿರಲಿಲ್ಲ.ಅವರಲ್ಲಿ ಏನೂ ಹೇಳದೆ ಮತ್ತೆ ಫಲಿತಾಂಶ ಹಾಕಿದ ಬೋರ್ಡ್ ಬಳಿ ಹೋದೆ‌
ಹೌದು ಅಲ್ಲಿ ಎಲ್ಲ ಸಬ್ಜೆಕ್ಟ್ ಪಾಸಾದವರ ರಿಜಿಸ್ಟರ್ ಸಂಖ್ಯೆಗಳನ್ನು ಹಾಕಿದ್ದರು.ನನ್ನ ನಂಬರ್ ಅದರಲ್ಲಿ ಇತ್ತು 
ಸಧ್ಯ..ನಾನು ಪಾಸ್ ಎಂಬುದೇ ನನಗೆ ಬೆಟ್ಟದಷ್ಟು ದೈರ್ಯ ಬಂತು.ನಂತರದ ಎರಡು ವರ್ಷ ಕೂಡ ಒಂದೇ ಒಂದು ವಿಷಯದಲ್ಲಿ ಫೇಲಾಗದೆ ಪಾಸ್ ಆದೆ
ಆದರೆ ಒಳ್ಳೆಯ ಅಂಕ ಗಳಿಸಲಾಗಲಿಲ್ಲ.ಮುಂದೆ ಸಂಸ್ಕೃತ ಎಂಎಗೆ ಸೇರಿದೆ .ಇಲ್ಲೂ ನನ್ನ‌ಕಲಿಕೆಯ ಹಾದಿ ಸುಲಭದ್ದಾಗಿರಲಿಲ್ಲ.ಪದವಿಯಲ್ಲಿ ಐಚ್ಛಿಕ ವಿಷಯವಾಗಿ ಸಂಸ್ಕೃತವನ್ನು ಕಲಿತು ರ‌್ಯಾಂಕ್ ಪಡೆದ ರಮಿತಾ ಶ್ರಿದೇವಿ  ,ನನ್ನಂತೆಯೇ ಬಿಎಸ್ಸಿ ಓದಿದ್ದಲ್ಲದೆ  ಉತ್ತಮ ಅಂಕ ಗಳಿಸಿದ್ದ ನೀತಾ ನಾಯಕ್ ,ಈಶ್ವರ ಪ್ರಸಾದ್ ಜಾಣರಾದ ವಿನ ತಾ ,ಅವಿನಾಶ್ ,ಗಜಾನನ ಮರಾಠೆ ಕಮಲಾಯಿನಿ ಮೊದಲಾದವರನ್ನು ಅಂಕ ಗಳಿಕೆಯಲ್ಲಿ ಹಿಂದಿಕ್ಕಿ ಮುಂದೆ ಹೋಗುದು ಸುಲಭದ ಮಾತಾಗಿರಲಿಲ್ಲ
ಹಾಗಾಗಿ ದಿನಕ್ಕೆ ಸುಮಾರು ಎಂಟು ಗಂಟೆ ಓದಿದೆ.ಎರಡು ವರ್ಷ ತಪಸ್ಸಿನಂತೆ ಕಲಿತೆ.ಪರಿಣಾಮವಾಗಿ ಮೊದಲ ರ‌್ಯಾಂಕ್ ಬಂತು
ಇಂತಹದ್ದೊಂದು ಯಶಸ್ಸಿಗಾಗಿ ಏಳು ವರ್ಷಗಳಿಂದ ಕಾದಿದ್ದೆ
ಹತ್ತನೆಯ ತರಗತಿಯ ನಂತರ ಮತ್ತೆ ಉತ್ತಮ ಅಂಕ ಗಳಿಸಿದ್ದು ನಾನು ಎಂಎ ಯಲ್ಲಿಯೇ..

ಮೊದಲ rank ಬಂದ ಗ ಸಂತಸ ತಡೆಯಲಾಗದೆ ಅತ್ತಿದ್ದೆ

ನಾನು ಎರಡು ಬಾರಿ ಕನ್ನಡ ಎಂಎ ಮಾಡಿದ್ದು ಎರಡನೆಯ ಕನ್ನಡ ಎಂಎಯಲ್ಲಿ 77% ಅಂಕ ಗಳಿಸಿದ್ದೆ ಮತ್ತು ನಾಲ್ಕನೆಯ ರ‌್ಯಾಂಕ್ ಕೂಡ ಬಂದಿತ್ತು. ಕನ್ನಡ ಶಾಸನ ಮತ್ತು ಲಿಪಿ ಶಾಸ್ತ್ರ ಡಿಪ್ಲೊಮಾದಲ್ಲಿ ಕೂಡ ಮೊದಲ ರ್ಯಾಂಕ್ ಪಡೆದಿದ್ದೆ
ಆದರೆ ಸಂಸ್ಕೃತ ಎಂಎಯಲ್ಲಿ ಸವೆಸಿದ ಹಾದಿ ಎದುರಿಸಿದ ಸವಾಲುಗಳು ಬಹಳ ಕಷ್ಟದ್ದಿತ್ತು
ಹಾಗಾಗಿಯೋ ಏನೋ ಆಗ ರ‌್ಯಾಂಕ್ ಬಂದಾಗಿನ ಸಂಭ್ರಮ ಮುಂದೆ ಕನ್ನಡದಲ್ಲಿ ರ‌್ಯಾಂಕ್ ಪಡೆದಾಗ ಆಗಲೀ ,ಎರಡು ಡಾಕ್ಟರೇಟ್ ಪದವಿಗಳನ್ನು ಪಡೆದಾಗ ಆಗಲೀ ಉಂಟಾಗಲಿಲ್ಲ

ಈಗ ನಾನು ಸರ್ಕಾರಿ ಪಿಯು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿರುವೆ.ಲೇಖಕಿಯಾಗಿಯೂ ಹೆಸರು ಗಳಿಸಿರುವೆ.ಆದರೆ ನಾನು ನನ್ನ ವೃತ್ತಿ ಬಗ್ಗೆ ಸದಾ ಎಚ್ಚರದಿಂದ ಇರುವೆ ನನ್ನ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸುತ್ತೇನೆ 
 

 ಡಾ.ಲಕ್ಷ್ಮೀ ಜಿ ಪ್ರಸಾದ್

ಕಾಂತಾರ ಪ್ರೀಕ್ವೆಲ್ ನಲ್ಲಿ ಕಾಂತಾರ ಪಂಜುರ್ಲಿ ಯ ಉದ್ಭವದ ಕಥೆ ಹೇಳ್ತಾರಂತೆ

 ಕಾಂತಾರ ಪ್ರೀಕ್ವೆಲ್ ನಲ್ಲಿ ಕಾಂತಾರ ಪಂಜುರ್ಲಿ ಯ ಉದ್ಭವದ ಕಥೆ ಹೇಳ್ತಾರಂತೆ ,ಈ ಪಂಜುರ್ಲಿಯ ಕಥೆ ಏನು ಎಂದು ನನ್ನಲ್ಲಿ ಅನೇಕರು ಕೇಳಿದ್ದಾರೆ 

ಕಾಂತಾರ ಪ್ರೀಕ್ವೆಲ್ ಬಿಡುಗಡೆ ಮಾಡಿದ ಟೀಸರ್ ನಲ್ಲಿ ರಿಷಭ್ ಶೆಟ್ಟಿಯವರ ನೋಟ ಅದ್ಭುತವಾಗಿದೆ.ಒಂದೆಡೆ ಶಿವನಂತೆ ತ್ರಿಶೂಲ ಧಾರಣೆ ಮತ್ತೊಂದೆಡೆ ಪರಶುರಾಮನಂತೆ ಕೊಡಲಿ,ಕಿವಿಗೆ ಹಂದಿಯ ದಾಡೆಯನ್ನು ಹೋಲುವ ಓಲೆ  ಧರಿಸಿದ ದೈವ ಸ್ವರೂಪಿ ಯಾಗಿ ಕಾಣ್ತಾ ಇದ್ದಾರೆ.ಇವರು ಯಾವ ಕಥೆ ತೋರಿಸುವರು ಎಂದು ಇದಮಿತ್ಥಂ ಹೇಳಲು ಸಾಧ್ಯವಿಲ್ಲ .ಒಂದಿನಿತು ಊಹಿಸಬಹುದು ಅಷ್ಟೇ .

ಯಾವುದೇ ಕಥೆಯನ್ನಾದರೂ ಅವರು ಅತ್ಯದ್ಭುತವಾಗಿ ರೋಚಕವಾಗಿ ತೆರೆಯಲ್ಲಿ ತೋರಿಸಬಲ್ಲರು.. ಹಾಗಾಗಿ ನಾನೂ ಕೂಡಾ ಕಾಂತಾರ ಪ್ರೀಕ್ವೆಲ್ ಬಿಡುಗಡೆ ಆಗುವುದನ್ನು ಕಾಯ್ತಾ ಇದ್ದೇನೆ 

 

ಯಾಕೆಂದರೆ ದೈವಗಳಿಗೆ ಸಂಬಂಧಿಸಿದಂತೆ ಅನೇಕ ಕಥಾನಕಗಳು ಐತಿಹ್ಯಗಳು ಪ್ರಚಲಿತವಿರುತ್ತದೆ 

ಪಂಜುರ್ಲಿ ದೈವದ ಕುರಿತಾಗಿ ಅನೇಕ ಕಥಾನಕಗಳು ಇವೆ ‌ಆ ಕಥಾನಕಗಳಲ್ಲಿ ಕಾಂತಾರ ಪಂಜುರ್ಲಿ ಎಂಬ ದೈವದ ಕಥೆಯೂ ಇದೆ ಒಂದೊಂದಾಗಿ ಬರೆದು ತಿಳಿಸುವೆ.

 

 1ಕಾಂತಾರ ಪಂಜುರ್ಲಿ 

 

ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರದಲ್ಲಿ ಕಾಂತಾರೇಶ್ವರ ದೇವಾಲಯ ಇದೆ ಇಲ್ಲಿ ದೇವರ ಬಲ ಭಾಗದಲ್ಲಿ ನೆಲೆಯಾಗಿರುವ ಎರಡು ಪಂಜುರ್ಲಿ ದೈವಗಳಿಗೆ ಆರಾಧನೆ ಇದೆ ಹಾಗಾಗಿ ಎರಡು ಮೊಗಗಳು ಇವೆ 

ಕಾಂತಾರ ಪಂಜುರ್ಲಿ ಕುರಿತು ವಿಶಿಷ್ಟ ಕಥಾನಕ ಇದೆ.

ಕಾಂತಾರೊಡು ಕಾಂತಾವರ ದೇವೆರೆ

ಬಲಭಾಗೊಡು ಕಲ್ಲ ಪಂಜಿಯಾದ್ ಉದ್ಯಬೆಂದೆ
ದೇವೆರೆಗ್ ರಥ ಇಜ್ಜಿಂದ್ ತೆರಿದು
ಪುತ್ತಿಗೆ ಸೋಮನಾಥೇಶ್ವರ ದೇವೆರೆನಾಡೆ ಪೋದೆ
ಸೋಮನಾಥೇಶ್ವರ ದೇವೆರೆ ರಥನು ಕೊಣತ್ತೆ
ಕಾಂತಾವರೊಡು ಕಾಂತೇಶ್ವರ ದೇವೆರೆನ
ರಥೋತ್ಸವದ ಪೊರ್ಲುನು ತೂವೊಂಡೆ


ಕನ್ನಡ ಅನುವಾದ 
ಕಾಂತಾರದಲ್ಲಿ ಕಾಂತಾವರ ದೇವರ
ಬಲ ಭಾಗದಲ್ಲಿ ಕಲ್ಲ ಹಂದಿಯಾಗಿ ಉದಿಸಿದೆ
ದೇವರಿಗೆ ರಥ ಇಲ್ಲವೆಂದು ತಿಳಿದು
ಪುತ್ತಿಗೆ ಸೋಮನಾಥ ದೇವರಲ್ಲಿಗೆ ಹೋದೆ
ಸೋಮನಾಥ ದೇವರ ರಥವನ್ನು ತಂದು
ಕಾಂತಾವರದಲ್ಲಿ ಕಾಂತೇಶ್ವರ ದೇವರ
ರಥೋತ್ಸವದ ಚೆಲುವನ್ನು ನೋಡಿಕೊಂಡೆ ..

ಕಾರ್ಕಳ ತಾಲೂಕಿನ ಕಾಂತಾವರದ ಕಾಂತಾರೇಶ್ವರ ದೇವರ ಬಲಭಾಗದಲ್ಲಿ  ಮಾಯವಾಗಿ    ಕಲ್ಲ ಹಂದಿಯಾಗಿ ನಿಂತ  ಕಾಂತಾರ ಪಂಜುರ್ಲಿ ದೈವದ ಬಗ್ಗೆ ವಿಶಿಷ್ಟವಾದ ಐತಿಹ್ಯವಿದೆ.ಈ ಪಾಡ್ದನದ ಕಥೆಯನ್ನು ಶೇಖರ ಪರವರು ತಿಳಿಸಿದ್ದಾರೆ
ಕಾರ್ಕಳ ತಾಲೂಕಿನ ಕಾಂತಾವರವನ್ನು ಆಡುಮಾತಿನಲ್ಲಿ ಕಾಂತಾರ ಎನ್ನುತ್ತಾರೆ.ಕಾಂತಾರ ಎಂದರೆ ಕಾಡು ಎಂದರ್ಥ ಮೊದಲು ಈ ಪ್ರದೇಶ ಕಾಡು ಆಗಿತ್ತು .ಈಗಲೂ ಇದು ಹಳ್ಳಿಯಾಗಿ ಉಳಿದಿದೆ
ಇಲ್ಲಿಗೆ ಸಮೀಪದಲ್ಲಿ ಕೊಂಚಾಡಿ ಎಂಬಲ್ಲಿ ಪ್ರತಿವರ್ಷ ಪಂಜುರ್ಲಿ ದೈವದ ಕೋಲ ನಡೆಯುತ್ತದೆ .
ಒಂದು ವರ್ಷ ಕೋಲ ನೋಡಲು ಕುರಿ ಗುತ್ತಿನ ಹಿರಿಯರು ಹೋಗುತ್ತಾರೆ.ಕೋಲ ನೋಡಿ ಹಿಂತಿರುಗುವಾಗ ದೈವವು ಓರ್ವ ಬ್ರಾಹ್ಮಣ ಮಾಣಿಯ ರೂಪದಲ್ಲಿ ಹಿಂಬಾಲಿಸುತ್ತದೆ.ಮನೆ ಸಮೀಪಿಸಿದಾಗ ಕಾಣದಾಗುತ್ತದೆ.ನಂತರ ಕುರಿ ಗುತ್ತಿನ ಹಿರಿಯರ  ಕನಸಿನಲ್ಲಿ ಕಾಣಿಸಿಕೊಂಡು ತನ್ನನ್ನು ಆರಾಧಿಸಬೇಕೆಂದು ಹೇಳುತ್ತದೆ.
ಎಚ್ಚರಗೊಂಡ ನಂತರ ಅವರು ತನಗೆ ದೈವವನ್ನು ಪಾಲಿಸಲು ಸಾಧ್ಯವಿಲ್ಲ.ಹಾಗಾಗಿ ಕಾಂತಾವರ ದೇವರಲ್ಲಿ ಜಾಗ ಕೇಳು ಎಂದು ಅರಿಕೆ ಮಾಡುತ್ತಾರೆ.ದೈವವು ಕಾಂತಾವರ ದೇವರ ಬಲಿ ಹೋಗದಂತೆ ದಕ್ಷಿಣ ದಿಕ್ಕಿನಲ್ಲಿ ತಡೆಯುತ್ತದೆ

.ನಂತರ ದೇವಾಲಯದ ಒಳಬಾಗದಲ್ಲಿ ಒಂದು ಹಂದಿ ಮರಿಯಾಗಿ ಕಾಣಿಸಿಕೊಳ್ಳುತ್ತದೆ.ಈ ಹಂದಿಮರಿಯನ್ನು ಸಾಕಲು ಒಂದು ಮೊಯಿಲಿಗಳ ಕುಟುಂಬಕ್ಕೆ ನೀಡುತ್ತಾರೆ.ಅ ಹಂದಿಮರಿ ದಟ್ಟ ಪುಷ್ಟವಾಗಿ ಬೆಳೆಯುತ್ತದೆ.ಅಕ್ಕ ಪಕ್ಕದವರ ಗದ್ದೆಗೆ ಹೋಗಿ ಕದ್ದು ಬೆಳೆಯನ್ನು ತಿಂದು ಹಾಳು ಮಾಡುತ್ತದೆ.ಆಗ ಕೋಪಗೊಂಡ ಮೊಯಿಲಿಯವರ ಕುಟುಂಬದವರು ಆ ಹಂದಿಮರಿಯನ್ನು ಕೊಂದು ತಿನ್ನುತ್ತಾರೆ.ಆಗ ಕೋಪಗೊಂಡ ದೈವವು ಎಂಟು ಜನ ಮೊಯಿಲಿ ಕಟುಂಬದ ಸಹೋದರರನ್ನು ಕೊಲ್ಲುತ್ತದೆ
ನಂತರ ಊರವರೆಲ್ಲ ಸೇರಿ ಕಾಂತಾವರ ದೇವರ ಬಲಭಾಗದಲ್ಲಿ ಸ್ಥಾನ ಕಟ್ಟಿಸಿ ದೈವಕ್ಕೆ ಕೋಲ ಕೊಟ್ಟು ಆರಾಧಿಸಿ ಕೋಪವನ್ನು ತಣಿಸುತ್ತಾರೆ.
ಹಾಗೆ ಇಲ್ಲಿ ಹಂದಿಮರಿಯ ರೂಪದಲ್ಲಿ ಕಾಣಿಸಿಕೊಂಡ ದೈವ ಕಾಂತಾರ ಪಂಜುರ್ಲಿ ಎಂದು ಕರೆಸಿಕೊಳ್ಳುತ್ತದೆ.ತಾನು ಕಲ್ಲ ಪಂಜಿ/ ಹಂದಿಯಾಗಿ ಕಾಂತಾವರ ಬಲ ಭಾಗದಲ್ಲಿ ನಿಂತೆ ಎಂದು ದೈವ ನುಡಿಯುತ್ತದೆ.

 

ಇಲ್ಲಿ ಆರಾಧಿಸಲ್ಪಡುವ ದೈವ ಅಣ್ಣಪ್ಪ ಪಂಜುರ್ಲಿ ಎಂದು ಇಲ್ಲಿನ ತಂತ್ರಿಗಳಾದ ಕೃಷ್ಣ ಮೂರ್ತಿ ಭಟ್ ತಿಳಿಸಿದ್ದಾರೆ.ಇಲ್ಲಿನ ಚಿತ್ರವನ್ನವರು ಕಳುಹಿಸಿದ್ದು ಅದರಲ್ಲಿ ಎರಡು ಹಂದಿಯ ಮೊಗಗಳಿವೆ.
ಹಾಗಾಗಿ ಇಲ್ಲಿ ಎರಡು ಪಂಜುರ್ಲಿ ದೈವಗಳಿಗೆ ಆರಾಧನೆ ಆಗುತ್ತಿದ್ದು ಕಾಲಾಂತರದಲ್ಲಿ ಒಂದರಲ್ಲಿಯೇ ಎರಡೂ ಶಕ್ತಿಗಳು ಸಮನ್ವಯಗೊಂಡಿರುವುದು ತಿಳಿದು ಬರುತ್ತದೆ 


ಒಂದು ಅಣ್ಣಪ್ಪ ದೈವವಾದರೆ  ಇನ್ನೊಂದು ಯಾವುದೆಂಬ ಸಂದೇಹ ಉಂಟಾಗುತ್ತದೆ.ಇಲ್ಲಿ ನುಡಿಗಟ್ಟಿನಲ್ಲಿ ದೈವವು ತಾನು ಕಲ್ಲ ಪಂಜಿಯಾಗಿ ನಿಂತೆ ಎಂದಿದೆ.ಆದರೆ ಇಲ್ಲಿ ಕಲ್ಲಿನ ಮೂರ್ತಿ ಇಲ್ಲ.
ಬಹುಶಃ ಅಕ್ಕ ಪಕ್ಕದ ಗದ್ದೆಗೆ ಹೊಕ್ಕು ಹಾನಿ ಮಾಡುವ ಕಳ್ಳ ಹಂದಿಯ ರೂಪದಲ್ಲಿ ಕಾಣಿಸಿಕೊಂಡ ದೈವ 

.ಕಳುವೆ ಪಂಜಿ > ಕಳ್ಳ ಪಂಜಿ ಎಂಬುದೇ ಮೂಲ ಅರ್ಥ ಕಳೆದು ಹೋದಾಗ ಆಡು ಮಾತಿನಲ್ಲಿ    ಕಲ್ಲ ಪಂಜಿ ಎಂದಾಗಿದೆ 

  ಡಾ.ಲಕ್ಷ್ಮೀ ಜಿ ಪ್ರಸಾದ್,

ಆಧಾರ  ಕರಾವಳಿಯ ಸಾವಿರದೊಂದು ದೈವಗಳು ,

 

ಪಂಜುರ್ಲಿ ದೈವದ ಮೂಲಕ್ಕೆ ಸಂಬಂಧಿಸಿದ ಎಲ್ಲ ಕಥಾನಕಗಳಲ್ಲಿಮೂ ಬೇಟೆ ಮತ್ತು ಹಂದಿ ಮರಿ ಸಾಯುವ ಕಥೆ ಇದೆ ಸತ್ತ ನಂತರ ಉಪದ್ರ ಕಾಣಿಸುತ್ತದೆ ಹಾಗಾಗಿ ಅದು ದೈವಿಕ ಶಕ್ತಿ ಎಂದು ತಿಳಿದು ಆರಾಧನೆ ಮಾಡುತ್ತಾರೆ 

ಹಾಗಾಗಿ ಇದು ಮೂಲ ಃ ಟೊಟಾಮಿಕ್ ವರ್ಶಿಪ್ ಎಂದರೆ ಪ್ರಾಣಿ ಮೂಲ ಆರಾಧನೆ ಆಗಿದೆ 

ನಂತರ ಈ ದೈವದ ಸೆರಿಗೆಗೆ ಸಂದವರೂ ಪಂಜುರ್ಲಿ ಹೆಸರಿನೊಂದಿಗೆ ಆರಾಧನೆ ಪಡೆಯುಯ್ತಾರೆ.ಅಣ್ಣಪ್ಪ ಪಂಜುರ್ಲಿ,ದೇವರ ಪೂಜಾರಿ ಪಂಜುರ್ಲಿ ಉಂರ್ದರ ಪಂಜುರ್ಲಿ ಮೊದಲಾದ ದೈವಗಳು ಪಂಜುರ್ಲಿ ದೈವದ ಸೇರಿಗೆಗೆ ಸಂದು ಆರಾಧನೆ ಪಡೆಯುವ ಶಕ್ತಿ ಗಳಾಗಿದ್ದಾರೆ 

 

ಕೋವಿ ಶೀಲ್ಡ್ ನ ಹೃದಯಾಘಾತ ಅಥವಾ ಸಾವಿನ ಭಯ ನನಗಿಲ್ಲ

 ಕೋವಿ ಶೀಲ್ಡ್ ನ  ಹೃದಯಾಘಾತ ಅಥವಾ ಸಾವಿನ ಭಯ ನನಗಿಲ್ಲ

ಯಾಕೆಂದರೆ ನಾವೆಲ್ಲ ಬದುಕುಳಿದಿದ್ದು ಕೂಡ ಕೋವಿ ಶೀಲ್ಡ್ ನಿಂದಲೇ ಎಂಬುದನ್ನು ನಾವು ಮರೆಯಬಾರದು
2021 ರ ಆರಂಭದಲ್ಲಿ ಕೊರೋನ ಎರಡನೇ ಅಲೆ ಅಪ್ಪಳಿಸಿತ್ತು
ಮನೆ ಮನೆಗೆ  ಕೊರೋನ ಸೋಂಕು ಹರಡಿತ್ತು . ಒಂದೆಡೆ ಕೊರೋನ ಒಂದು ಸಾಮಾನ್ಯ ವೈರಸ್ ಅದೇನೂ ಮಾಡುವುದಿಲ್ಲ,ಎಲ್ಲ ಮೆಡಿಕಲ್ ಮಾಫಿಯಾ ಎಂದು ಸುದ್ದಿ ಹರಡುತ್ತಾ ಇತ್ತು.ಇದನ್ನು ನಂಬಿದ ಅನೇಕರು ಕೋವಿಡ್ ಸೋಂಕು ತಗುಲಿದಾಗ ಕೂಡ ಟೆಸ್ಟ್ ಮಾಡಿಸದೆ ಮನೆಯಲ್ಲಿಯೇ ಸ್ವಯಂ ವೈದ್ಯ ಮಾಡಿಕೊಂಡರು.ಅದೃಷ್ಟವಶಾತ್ ಅನೇಕರಿಗೆ ದೊಡ್ಡ ಸಮಸ್ಯೆ ಆಗಲಿಲ್ಲ.ಆದರೆ ಅನೇಕರಿಗೆ ಇದು ಜೀವ ಹಾನಿಯನ್ನು ಕೂಡ ಉಂಟು ಮಾಡಿತ್ತು.
ಆರಂಭದಲ್ಲಿ ಚಿಕಿತ್ಸೆ ಪಡೆದವರಲ್ಲಿ ಹೆಚ್ಚು ಕಡಿಮೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಆ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಅನೇಕರು ಸಾವನ್ನಪ್ಪಿದ್ದ ಬಗ್ಗೆ ನ್ಯೂಸ್ ನಲ್ಲಿ ನೋಡಿದ್ದೆ
ನನಗೂ ಕೊರೋನ ಸೋಂಕು ತಗುಲಿತ್ತು.ನನಗೆ ಸಕಾಲದಲ್ಲಿ ಚಿಕಿತ್ಸೆ ಸಿಕ್ಕಿದ್ದು ದೊಡ್ಡ ಸಮಸ್ಯೆ ಏನೂ ಆಗಲಿಲ್ಲ 
ಆಗ ಯಾವಾಗ ವ್ಯಾಕ್ಸಿನ್ ಬರುತ್ತದೋ ಎಂದು ಕಾಯುತ್ತಾ ಇದ್ದೆ.
ವ್ಯಾಕ್ಸಿನ್ ಹಾಕಿಸಿಕೊಂಡ ನಂತರ ಕೊರೋನ ಸಾವುಗಳು ಕಡಿಮೆ ಆಯಿತು,ಕೊರೋನ ಸೋಂಕು ಕೂಡ ದೂರವಾಯಿತು 
ನಾವೆಲ್ಲ ಕೋವಿ ಶೀಲ್ಡ್ ಪಡೆದು ಮೂರು ವರ್ಷಗಳು ಕಳೆದವು.
ಕೋವಿ ಶೀಲ್ಡ್ ಪಡೆಯುವ ಮೊದಲೇ ಕೊರೋನ ಸೋಂಕು ಹರಡುತ್ತಿರುವ ಸಮಯದಲ್ಲಿ ಅಲ್ಲಲ್ಲಿ ಹೃದಯಾಘಾತದಂತಹ ಅಸಹಜ  ಅಕಾಲಿಕ ಸಾವುಗಳ ಸುದ್ದಿ ಕೇಳುತ್ತಲೇ ಇತ್ತು.
ಅಲ್ಲದೆ ಕೊರೋನ ಸೋಂಕು ತಗುಲಿದವರಲ್ಲಿ ಅನೇಕರಿಗೆ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಾಣಿಸಿತ್ತು.ನನಗೂ ಈ ಸಮಸ್ಯೆ ಕಾಡಿತ್ತು.
ವ್ಯಾಕ್ಸಿನ್ ಎಂದರೆ ಅದೇ ರೋಗಾಣು ವನ್ನು ದುರ್ಬಲ ಗೊಳಿಸಿ ನೀಡುದು..
ಕೊರೋನ ವ್ಯಾಕ್ಸಿನ್ ಕೂಡ ಅಷ್ಟೇ 
ಕೊರೋನ ಸೋಂಕು ತಗುಲಿದವರಲ್ಲಿ ನನ್ನಂತೆ ಕೆಲವರಿಗೆ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಬಂದಂತೆ ವ್ಯಾಕ್ಸಿನ್ ತೆಗೆದುಕೊಂಡವರಿಗೂ ಬಂದಿರಬಹುದು 
ಕೋವಿ ಶೀಲ್ಡ್ ತಯಾರಿಕಾ ಸಂಸ್ಥೆ ಒಂದು ಲಕ್ಷ ಜನರಲ್ಲಿ ಇಬ್ಬರಿಗೆ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ಹೇಳಿದೆ.ಇದನ್ನು ಆರಂಭಿಕ ಹಂತದಲ್ಲಿ ಗುರುತಿಸಿದರೆ ಪ್ರಾಣಾಪಾಯದಿಂದ ಪಾರಾಗಬಹುದು.
ಕೋವಿ ಶೀಲ್ಡ್ ತೆಗೆದುಕೊಂಡ ಒಂದೆರಡು ತಿಂಗಳಲ್ಲಿ ಈ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚು ಈಗ ಮೂರು ವರ್ಷಗಳ ನಂತರ ಅದು ಕಾಡಬಹುದು ಎಂದು ನನಗನಿಸುತ್ತಿಲ್ಲ.ಒಂದೊಮ್ಮೆ ಕಾಡಿದರೂ ಲಕ್ಷದಲ್ಲಿ ಇಬ್ಬರಿಗೆ ಪ್ರಾಣಾಪಾಯ ಬರಬಹುದು.ಉಳಿದ  ತೊಂಬತ್ತೊಂಬತ್ತು ಸಾವಿರದ ಒಂಬೈನೂರ ತೊಂಬತ್ತೆಂಟು ಜನರನ್ನು  ಕೋವಿ ಶೀಲ್ಡ್ ಕೊರೋನ ಮಹಾ ಮಾರಿಯಿಂದ ಕಾಪಾಡಿದೆ 
ಹಾಗಾಗಿ ಕೋವಿ ಶೀಲ್ಡ್ ತಗೊಂಡದ್ದರ ಭಯ ನನಗಿಲ್ಲ
ಹೃದಯಾಘಾತಕ್ಕೆ ಕೋವಿ ಶೀಲ್ಡ್ ತಗೊಂಡಿರಬೇಕೆಂದಿಲ್ಲ..
ಯಮ ರಾಜನಿಗೆ ಕೊಂಡೊಯ್ಯಲು ಕಾರಣ ಬೇಕಿಲ್ಲ.ಯಾವುದೇ ಕಾರಣ ಇಲ್ಲದೆಯೂ ಕ್ಯಾನ್ಸರ್ ನಂತಹ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಸಾವು ಕೂಡ ಅಷ್ಟೇ 
ಕೋವಿ ಶೀಲ್ಡ್ ಬರುವ ಮೊಧಲೂ ಹೃದಯಾಘಾತ ಸಂಭವಿಸುತ್ತಾ ಇತ್ತು,ನನ್ನ ತಾಯಿಯವರಿಗೆ ,ಚಿಕ್ಕಪ್ಪನಿಗೆ ಅತ್ತೆಯವರಿಗೆ ಕೋವಿ ಶೀಲ್ಡ್ ಬರುವ ಎರಡು ಮೂರು ವರ್ಷಗಳ ಮೊದಲೇ ಹೃದಯಾಘಾತ ಆಗಿತ್ತು.
ಹಾಗೂ ಕೋವಿ ಶೀಲ್ಡ್ ಪಡೆದದ್ದರಿಂದಾಗಿ ಹೃದಯಾಘಾತ ಆಗುವುದಾದರೆ ಏನೂ ಮಾಡಲು ಸಾಧ್ಯವಿಲ್ಲ.ಇರುವಷ್ಟು ದಿನ ನಮ್ಮದೆಂದು ಖುಷಿ ಯಾಗಿರುವೆ ಅಷ್ಟೇ 
ಇನ್ನು ವೈಯಕ್ತಿಕವಾಗಿ ನನ್ನ ಬಗ್ಗೆ ಹೇಳುವುದಾದರೆ ನನಗೆ ಸಾವಿನ ಭಯವಿಲ್ಲ.ಜವಾಬ್ದಾರಿಯೂ ಮುಗಿದಿದೆ.ಮಗ ತನ್ನ ಕಾಲ ಮೇಲೆ ನಿಲ್ಲುವಷ್ಟು ಶಕ್ತನಾಗಿದ್ದಾನೆ
ಮನೆ , ಉದ್ಯೋಗ, ಪುಸ್ತಕ ಪ್ರಶಸ್ತಿ ಪುರಸ್ಕಾರಗಳು ಸೇರಿದಂತೆ ಬದುಕಿನಲ್ಲಿ ಅನುಭವಿಸಬೇಕೆದುಕೊಂಡ ಎಲ್ಲ ಸಂಭ್ರಮಗಳನ್ನೂ ಅನುಭವಿಸಿದ್ದೇನೆ 
ಹಾಗಾಗಿ ಒಂದೊಮ್ಮೆ ಯಮರಾಜ ಈಗಲೇ ಬಂದರೂ ಅವನನ್ನು ನಾನು ಸ್ವಾಗತಿಸುವೆ.ಇಷ್ಟು ಸಮಯ ಭೂಮಿಯಲ್ಲಿ ನನ್ನನ್ನು ಇರಲು ಬಿಟ್ಟದ್ದಕ್ಕಾಗಿ ಅವನಿಗೊಂದು ಥ್ಯಾಂಕ್ಸ್ ಹೇಳಿ ತಿರುಗಿ ನೋಡದೆ ಅವನೊಡನೆ ನಡೆವೆ..

ನನ್ನ ಇಪ್ಪತ್ತು ವರ್ಷಗಳ ಅಧ್ಯಯನ ಆಧಾರಿತ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ ಪ್ರಕಟಣೆ ಆಗುವಷ್ಟು ಸಮಯಾವಕಾಶ 

ನೀಡಿದ್ದಕ್ಕೆ ,ಮನೆ ಕಟ್ಟಿ ಒಕ್ಕಲಾಗುವ ಸಂಭ್ರಮ ವನ್ನು ಅನುಭವಿಸಲು ಬಿಟ್ಟದ್ದಕ್ಕೆ,ಮಗ ಕಾಲ ಮೇಲೆ ನಿಲ್ಲುವಷ್ಟು ಸಮಯಾವಕಾಶ ನೀಡಿದ್ದಕ್ಕೆ ಅರ್ಧ ಶತಕ ದಾಟಿದ ನ ತರವೂ ಈ ಭೂಮಿಯಲ್ಲಿ ಇರಗೊಟ್ಟಿದ್ದಕ್ಕೆ ಅವನಿಗೆ   ಂದು ಥ್ಯಾಂಕ್ಸ್ 

 ಯಾರೂ ಕೂಡ ಈ ಭೂಮಿಯಲ್ಲಿ ಶಾಶ್ವತ ಅಲ್ಲ.ಒಂದಲ್ಲ ಒಂದು ದಿನ ಸಾಯುತ್ತೇವೆ..ಹೇಗೆ ಯಾವ ಗ  ಎಂದು ಯಾರಿಗೂ ಗೊತ್ತಿಲ್ಲ..
ಹಾಗಿರುವಾಗ ಅದಕ್ಕೆ ಭಯ ಪಡುದು ಯಾಕೆ? ಎಲ್ಲರಂತೆ ನಾವು ಎಂದುಕೊಂಡು ಇರುವಷ್ಟು ಸಮಯ ಸಂತಸದಿಂದ ಬದುಕೋಣ
ಡಾ.ಲಕ್ಷ್ಮೀ ಜಿ ಪ್ರಸಾದ

ಅನುಭವ ಆಗಲು ಏನು ಮಾಡಬೇಕು ?

 ಲೇಖಲೋಕದ ಒಳಗನ್ನು ತೆರೆದು ತೋರಿಸಿದ ರಾಹುಲ್ ಹಜಾರೆ ಯವರ ಲೇಖನ ಓದುತ್ತಿದ್ದಂತೆ ನನ್ನ ಅನುಭವದ ಬುತ್ತಿಯೂ ತೆರೆದು ಕೊಂಡಿತು.

ಅನುಭವ ಆಗಲು ಏನು ಮಾಡಬೇಕು ? ಬಗ್ಗೆ

ಹೌದು..ಹೀಗೊಂದು ತಲೆಬಿಸಿ ಮಾಡ್ತಾ ಇದ್ದ ಕಾಲ ಒಂದಿತ್ತು..

 

ನಾನು ಎರಡನೆಯ ವರ್ಷ ಬಿಎಸ್ ಸಿ ಪದವಿ ಓದುತ್ತಿರುವಾಗಲೇ ನನಗೆ ಮದುವೆಯಾಯಿತು..ಚಿಕ್ಕಂದಿನಿಂದಲೂ ಬರವಣಿಗೆಯ ಹವ್ಯಾಸ ಇದ್ದ ನನ್ನ ಬರಹಗಳು ಒಂದೊಂದಾಗಿ ಹೊಸ ದಿಗಂತ ಉದಯವಾಣಿ ಮಂಗಳ ಮೊದಲಾದ ಪತ್ರಿಕೆಗಳಲ್ಲಿ ಪ್ತಕಟವಾಗತೊಡಗಿದ್ದವು..

 

ದಕ್ಷಿಣ ಕನ್ನಡದ ಹಿರಿಯ ಸಾಹಿತಿ ಗಂಗಾ ಪಾದೇಕಲ್ಲು ನನ್ನ ಗಂಡ ಪ್ರಸಾದರ ಸಂಬಂಧಿ..ಒಂದು ದಿನ ಯಾವುದೋ ಕೌಟುಂಬಿಕ ಕಾರ್ಯಕ್ರಮದಲ್ಲಿ ಭೇಟಿಯಾದವರು ನನ್ನ ಬರವಣಿಗೆಗೆ ಮೆಚ್ಚುಗೆ ಸೂಸಿ ಬರಹಕ್ಕೆ ಅನುಭವದ ತಳಹದಿ ಇದ್ದರೆ ಇನ್ನಷ್ಡು ಗಟ್ಟಿಯಾಗುತ್ತದೆ ಎಂದಿದ್ದರು

 

ಈ ಅನುಭವವನ್ನು ಪಡೆಯುವುದು ಹೇಗೆ ಎಂಬುದೊಂದು ತಲೆಬಿಸಿ ಶುರು ಆಯಿತು ನನಗೆ.ಚಿಕ್ಕಂದಿನಲ್ಲಿ ಶಾಲಾ ಪ್ರಬಂಧದಲ್ಲಿ  ಪ್ರವಾಸ ಮಾಡಿದರೆ ಬೇರೆ ಬೇರೆ ಊರಿನ ಜನರ ಸಂಸ್ಕೃತಿಯ ಪರಿಚಯ ಆಗುತ್ತದೆ.ಅನುಭವ  ದೊರೆಯುತ್ತದೆ ಎಂದು ಬರೆದಿದ್ದೆ.ಅದು ನೆನಪಾಯಿತು.

 

ನೆನಪಾಗಿಯೂ ಏನೂ ಪ್ರಯೋಜನವಿಲ್ಲದಾಯಿತು..

ಮೊದಲಿಗೆ ಪ್ರವಾಸ ಮಾಡುವಷ್ಟು ದುಡ್ಡು ನಮ್ಮಲ್ಲಿ ಇರಲಿಲ್ಲ.ಅಲ್ಲದೆ ನಾನು ವಿದ್ಯಾರ್ಥಿಯಾಗಿದ್ದು ಪ್ರವಾಸ ಹೋಗಲು ರಜೆಯದ್ದೂ ಸಮಸ್ಯೆಯೇ..ಎಲ್ಲಕ್ಕಿಂತ ಹೆಚ್ಚು ಟ್ರಾವೆಲಿಂಗ್ ಸಿಕ್ ನೆಸ್ ಇರುವ ನನಗೆ ಪ್ರವಾಸ ಬಹಳ ಪ್ರಯಾಸವಾಗಿ ಪರಿಣಮಿಸುತ್ತದೆ.ಹಾಗಾಗಿ ಪ್ರವಾಸದತ್ತ ನನಗೆ ಒಲವಿರಲಿಲ್ಲ..

 

ಆದರೆ ಹಿರಿಯ ಸಾಹಿತಿ ಗಂಗಾ ಪಾದೇಕಲ್ಲು ಅವರು ಹೇಳಿದ  ಮಾತು ಸದಾ ಕೊರೆಯುತ್ತಿತ್ತು.ಅನುಭವ ಇಲ್ಲದೆ ಬರಹ ಗಟ್ಟಿತನ ಹೊಂದುದಿಲ್ಲ ಎಂದು..

 

ಹಾಗೆಂದು ನಾನು ಪ್ರವಾಸ ಹೋಗಿಯೇ ಇಲ್ಲವೆಂದಲ್ಲ..ಸುಮಾರು 25-26 ವರ್ಷಗಳ ಮೊದಲು ನಿಜಾಮುದ್ದೀನ್ ನಲ್ಲಿ ನಡೆದ ರಾಷ್ಟ್ರ ಸೇವಿಕ ಸಂಘದ ಸಮ್ಮೇಳನದಲ್ಲಿ ಭಾಗವಹಿಸಲು ಹೋಗಿದ್ದೆ.ಹಾಗೆ ಹೋದವರೆಲ್ಲ ಅಗ್ರ ಡೆಲ್ಲಿ ಹರಿದ್ವಾರ ಹೃಷಿಕೇಶ ಕಾಶಿ ಮೊದಲಾದೆಡೆ ಮೂರು ನಾಲ್ಕು ದಿನ ಸುತ್ತಾಡಿ ಬಂದಿದ್ದೆವು

 

ಅಂತೆಯೇ ಬೆಂಗಳೂರಿನ ಎಪಿಎಸ್ ಕಾಲೆಜಿನಲ್ಲಿ ಉಪನ್ಯಾಸಕಿಯಾಗಿದ್ದಾಗ ಡಿಡಿ 1 ಚಾನೆಲ್ ನವರು ಆಯೋಜಿಸಿದ್ದ ಖೇಲ್ ಖೇಲ್ ಮೇ ಬದಲೋ ದುನಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಡೆಲ್ಲಿಗೆ ಕರೆದುಕೊಂಡು ಹೋಗಿದ್ದೆ.ಆಗಲೂ ಒಂದಿನಿತು ಸುತ್ತಾಡಿದ್ದೆವು

 

ನಂತರವೂ ಪ್ರಬಂಧ ಮಂಡನೆಗೆ ಅಹ್ವನಿತಳಾಗಿ ಭಾರತೀಯಾರ್ ಯೂನಿವರ್ಸಿಟಿ,ಗಾಂಧಿ ಗ್ರಾಮ ? ಕೊಯಂಬತ್ತೂರು ಏಲಾಗಿರಿ ಮೊದಲಾದೆಡೆ ಹೋಗಿದ್ದು ಅಲ್ಲೂ ಸುತ್ತ ಮುತ್ತ ಸ್ವಲ್ಪ ತಿರುಗಾಡಿ ಬಂದಿರುವೆ

 

ಆದರೆ ಈ ಪ್ರವಾಸಗಳು ಯಾವುವೂ ನನಗೆ ಅಂಥಹ ದೊಡ್ಡ ಅನುಭವವನ್ನು ತುಂಬಿ ಕೊಡಲಿಲ್ಲವೇನೋ ಎಂದೆನಿಸ್ತದೆ

 

ಪ್ರವಾಸಗಳು ಅನುಭವವನ್ನು ತುಂಬಿ ಕೊಡದಿದ್ದರೂ ಬದುಕು ಮೂಟೆ ಮೂಟೆಯಾಗಿ ನಾನಾವಿಧವಾದ ಅನುಭವಗಳನ್ನು ತುಂಬಿಕೊಟ್ಟಿದೆ.

ನಾನು ಮದುವೆಯ ವಂತರ ಓದಿ ಸಂಸ್ಕೃತ ಎಂಎಯಲ್ಲಿ ಮದಲ ರ್ಯಾಂಕ್ ಪಡೆದ ದಿನ ಗಂಡನ ಮನೆಯ ಯಲ್ಊಸೂತಕದ ಛಾಯೆ

 

 

ಒಂದೊಂದು ಯೂನಿವರ್ಸಿಟಿಗೆ ಸಂದರ್ಶನಕ್ಕೆ ಹೋದಾಗ ಒಂದೊಂದು ಅನುಭವ..ನನಗೆ ಪರಿಚಯವೇ ಇಲ್ಲದವರೂ ವಿನಾಕಾರಣ ದ್ವೇಷ ಕಾರುವ ಪರಿಯಂತೂ ನನಗೆ ಅಚ್ಚರಿ ತಂದಿದೆ

 

ನಾನು ಯಾರ ಸುದ್ದಿಗೂ ಹೋಗದೆ ನನ್ನದೇ ವೃತ್ರಿ ಪ್ರವೃತ್ತಿ ಯಾಗಿ ಬರವಣಿಗೆಯ ಲೋಕದಲ್ಲಿ ಇರುವವಳು

 

ಆದರೆ ಅದೇ ಕಾರಣಕ್ಕೆ ಸ್ವಕೀಯರಿಂದ ಹಾಗೂ ಪರಕೀಯರಿಂದ ಮತ್ಸರದ ನಡೆಯನ್ನು ಎದುರಿಸಿದೆ..

 

ಇನ್ನು ಪುಸ್ತಕ ಬರೆಯುವುದು ಪ್ರಕಟಿಸುವುದು ಒಂದು ಚಾಲೆಂಜ್ ಅಗಿದ್ದರೆ ಬಿಡುಗಡೆಯದೇ ಒಂದು ಅನುಭವ

 

ಕೆಲವರಿಗೆ ಬರಹಗಾರರ ಬಗ್ಗೆ ಎಷ್ಟು ಮತ್ಸರ ಅಹಸನೆ ಇದೆ ಎಂಬುದರ ಅರಿವಾಗ ಬೇಕಾದರೆ ಪುಸ್ತಕ ಬರೆದೇ ಆಗಬೇಕು..

ಬೆಂಗಳೂರು ಹವ್ಯಕ ಸಭೆಯ ಸಂಸ್ಥಾಪಕರಾದ ಮೇಣ ರಾಮಕೃಷ್ಣ ಭಟ್ ಅವರ ಸಂಸ್ಮರಣಾ ಸಮಾರಂಭದಲ್ಲಿ ನನ್ನ ದೈವಿಕ ಕಂಬಳ ಕೋಣ ಎಂಬ ಪುಸ್ತಕ ಮಲ್ಲೇಪುರಂ ವೆಂಕಟೇಶ್ ಅವರಿಂದ ಬಿಡುಗಡೆಯಾಯಿತು..ಇಲ್ಲಿನದೊಂದು ದೊಡ್ಡ ಕಥೆಯೇ ಇದೆ

 

ಇದಾದ ನಂತರ ಚೊಕ್ಕಾಡಿಯಲ್ಲಿ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳ ಹಸ್ತದಿಂದ ನನ್ನ ಐದು ಪುಸ್ತಕಗಳು ಬಿಡುಗಡೆಯಾದವು..ಇಲ್ಲಿನದು ಮತ್ತೊಂದು ಕಥೆ

ಈ ನಡುವೆ ನನ್ನ ಎರಡು ಪುಸ್ತಕಗಳು ತುಳು ಅಕಾಡೆಮಿಯಲ್ಲಿ ಕಲ್ಲಡ್ಕ ಡಾ.ಕಮಲಾ ಭಟ್ ಅವರಿಂದ ಬಿಡುಗಡೆಯಾದವು..ಅಲ್ಲಿನದೂ ಮತ್ತೊಂದು ಕಥೆ

 

2021 ರಲ್ಲಿ ನನ್ನ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕ ಮತ್ತೆ ಬೆಂಗಳೂರಿನಲ್ಲಿ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಯವರ ದಿವ್ಯ ಹಸ್ತದಿಂದ ಬಿಡುಗಡೆಯಾಯಿತು..ಈ ಬಗ್ಗೆ ಕನ್ನಡ ಪ್ರಭ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ವರದಿ ಪ್ರಕಟವಾಯಿತು.ಇಲ್ಲಿ ಸಭೆಯಲ್ಲಿದ್ದ ಯಾರೋ ಒಬ್ಬ ಮತ್ಸರಿಯ ಕುತಂತ್ರದಿಂದ ತಪ್ಪೇ ಮಾಡದ ಓರ್ವ  ಪತ್ರಕರ್ತರಿಗೆ ತುಂಬಾ ತೊಂದರೆ ಆಯಿತು..

 

ಇನ್ನು ವೃತ್ತಿ ಜೀವನದಲ್ಲೂ ನಾನಾ ಅನುಭವಗಳು..ಸಿಹಿ ಕಹಿ ಎರಡೂ ಅನುಭವಗಳೇ..

ಓದುವಾಗಲೂ ಒಂದೊಂದು ಅನುಭವ..

 

ನಾನು ಕಾಲೇಜಿಗೆ ಸೇರುವ ವರೆಗೆ ಪೋಲೀಸರನ್ನು ನೋಡಿರಲಿಲ್ಲ‌‌.ಸಿನೇಮವನ್ನೂ ಆ ವರೆಗೆ ನೋಡಿರದ ಕಾರಣ  ಪೋಲೀಸರ ಬಗ್ಗೆ ತಿಳಿದೇ ಇರಲಿಲ್ಲ..ಬೆಂಗಳೂರಿಗೆ ಬರುವವರೆಗೆ ಎಂದರೆ ನನಗೆ 35 ವರ್ಷ ಆಗುವವರೆಗೆ ನನಗೆ ಪೊಲೀಸ್ ಸ್ಟೇಶನ್ ,ಹೇಗಿರುತ್ತದೆ  ಕೋರ್ಟು ಹೇಗಿರುತ್ತದೆ ? ನ್ಯಾಯಾಧೀಶರು ಹೇಗಿರ್ತಾರೆ ಎಂಬ ಕಲ್ಪನೆಯೂ ಇರಲಿಲ್ಲ..

 

ನಿದಾನಕ್ಕೆ ಬದುಕು ಎಲ್ಲವನ್ನೂ ತೋರಿಸಿಕೊಟ್ಟಿತು. ಉಡುಪಿಯ ಬಹುಜನ ಹಿತಾಯ ವೇದಿಕೆಯ ಡಾ.ರವೀಂದ್ರನಾಥ ಶಾನುಭಾಗರಿಂದ ಅನ್ಯಾಯದ ವಿರುದ್ದ ನ್ಯಾಯಯುತವಾಗಿ ಹೋರಾಡಲು ಪ್ರೇರಣೆ ಪಡೆದೆ..

ಜಗತ್ತಿಡೀ ಅನ್ಯಾಯಕ್ಕೊಳಗಾದವರು ತುಂಬಾ ಜನ ಇದ್ದಾರೆ.ಅವರೆಲ್ಲರ ಪರ ಹೋರಾಡಲು ಸಾಧ್ಯವಿಲ್ಲದಿದ್ದರೂ ಕೊನೆಯ ಪಕ್ಷ ನನಗೆ ಕಿರುಕುಳ ಕೊಟ್ಟವರ ವಿರುದ್ಧ ಹೋರಾಡಲು ಕಲಿತೆ..

ಪೋಲೀಸರ ಭ್ರಷ್ಟಾಚಾರದ ಅರಿವಾಯಿತು..ರಕ್ಷಕರೇ ಭಕ್ಷಕರಾದರೆ ಸಾಮಾನ್ಯ ಜನರಿಗೆ ಬದುಕು ಬಹಳ ಕಷ್ಟಕರ ಎಂದೆನಿಸ್ತದೆ

ಬಸವಣ್ಣನವರು ಒಲೆ ಹತ್ತಿ ಉರಿದರೆ ನಿಲಲುಬಹುದಲ್ಲದೆ ಧರೆ ಹತ್ತಿ ಉರಿದರೆ ನಿಲಲು ಬಾರದು ಎಂದು 12 ನೆಯ ಶತಮಾನದಲ್ಲಿ ಹೇಳಿದ್ದರ ನಿಜವಾದ ಅರ್ಥ ಗೊತ್ತಾಯಿತು

 

ಕೇಳಬಾರದಂತ ಮಾತುಗಳನ್ನೂ ಆರೋಪಗಳನ್ನೂ ಎದುರಿಸಿರುವೆ,ಕನಸಲ್ಲೂ ಕಲ್ಪಿಸದಂತಹ ಪ್ರಶಸ್ತಿ ಪುರಸ್ಕಾರ ಗೌರವಗಳನ್ನೂ ಓದುಗರನ್ನೂ ಪಡೆದಿರುವೆ 

 

ಆದರೆ ಕೊಲ್ಲುವ ಪಿಶಾಚಿಗಳಿಗಿಂತ ಕಾಯುವ ದೇವರು ದೊಡ್ಡವನು..ಇನ್ನೇನು ಸೋತು ಹೋಗುವೆ ಎನ್ನುವಷ್ಟರಲ್ಲಿ ಏನೋ ಒಂದು ಬೆಳಕು ಎಲ್ಲಿಂದಲೋ  ಬಂದು ರಕ್ಷಿಸುತ್ತದೆ 

 

ಭವಿತವ್ಯಾಣಿ ದ್ವಾರಾಣಿ ಭವಂತಿ ಸರ್ವತ್ರ..ಆಗಲೇ ಬೇಕಾದವುಗಳಿಗೆ ಎಲ್ಲೆಡೆ ಬಾಗಿಲುಗಳು ಇರುತ್ತವೆ ಎಂದು ಕಾಳಿದಾಸ ಹೇಳಬೇಕಾಗಿದ್ದರೆ ಅವನಿಗೂ ಬದುಕಿನಲ್ಲಿ ಇಂತಹ  ಅಪಾರ ಅನುಭವಗಳು ಆಗಿದ್ದಿರಬೇಕು.

 

ಈಗ ಅಂದು ಗಂಗಾ ಪಾದೇಕಲ್ಲು ಅವರು ಹೇಳಿದ ಅನುಭವ ಆಗಬೇಕು ಆಗ ಬರಹ ಗಟ್ಟಿಯಾಗುತ್ತದೆ ಎಂದ ಮಾತಿನ ಸರಿಯಾದ ಅರ್ಥ ಆಗುತ್ತಿದೆ

 

ಅನುಭವ  ಎಲ್ಲೋ ಎಲ್ಲಿಂದಲೋ ಆಗುವದಲ್ಲ..ಬದುಕಿಗೆ ನಾವು ತೆರೆದುಕೊಂಡರೆ ಅದಾಗಿಯೇ ಆಗುತ್ತದೆ 

ಇನ್ನೂ ಆಗುವದ್ದು ತುಂಬಾ ಇರಬಹುದು

 

ನನ್ನ ಅನುಭವಗಳೆಲ್ಲವೂ ಕಹಿಯಾದುದಲ್ಲ..ಅದರಲ್ಕಿ ಕಹಿಗಿಂತ ಸಿಹಿಯಾದ ಸಂಭ್ರಮವೇ ಹೆಚ್ಚಿದೆ.ಕೆಲವು ಕಹಿ ಅನುಭವಗಳೂ  ಇವೆ

 

ನಾನು ಉಪನ್ಯಾಸಕಿಯಾದ ಕಾರಣ ಇರಬೇಕು..ನಾನು ಸದಾ ವಿದ್ಯಾರ್ಥಿಗಳ ಗೆಲುವನ್ನು ಸಂಭ್ರಮಿಸುತ್ತೇನೆ.ಅವರಿಗೆ ಬಾಷಣ ಪ್ರಬಂಧ ನಾಟಕ ಹೇಳಿಕೊಟ್ಟು ವೇದಿಕೆಯಲ್ಲಿ ಪ್ರಸ್ತುತ ಪಡಿಸಿ ಅವರ ಜೊತೆ ನಾನೂ ಸಂಭ್ರಮಿಸುತ್ತೆವೆ.ಪ್ರರಿ ವರ್ಷ ಹೊಸ ಹೊಸ ವಿದ್ಯಾರ್ಥಿಗಳು..ಹೊಸ ಹೊಸ ಅನುಭವಗಳು..ಇವರಿಗಾಗಿಯೇ ನಾಟಕ ಬರೆದು ನಾಟಕಗಾರ್ತಿ ಎನಿಸಿಕೊಂಡೆ..ನಾಟಕ ರಚನೆಯ ಬಗ್ಗೆ ಏನೊಂದೂ ಮಾಹಿತಿ ಇರದಿದ್ದರೂ ಏನೋ ನನಗರಿತಂತೆ ಬರೆದೆ .ನಿರ್ದೇಶನದ ಗಂಧ ಗಾಳಿ‌ಇರದಿದ್ದರೂ ಏನೋ ಒಂದು ನನಗರಿತಂತೆ ಮಕ್ಕಳಿಗೆ ಹೇಳಿಕೊಟ್ಟೆ..ಕೆಲವು ಬಹುಮಾನಗಳೂ ಬಂದವು..

 

ನನಗನಿಸಿದ್ದನ್ನು ಬರೆದು ಪತ್ರಿಕೆಗೆ ಕಳುಹಿಸಿ ಪ್ರಕಟವಾಗಿ ನಾನೂ ಒಬ್ಬ ಲೇಖಕಿ ಎನಿಸಿಕೊಂಡೆ.ನನ್ನ ಬ್ಲಾಗ್ ಬರಹಗಳ ಹೊರತಾಗಿಯೂ   ಮುನ್ನೂರರಷ್ಟು ನನ್ನ ಬರಹಗಳು ಬೇರೆ ಬೇರೆ ಪತ್ರಿಕೆಗಳಲ್ಲಿ  ವೆಬ್ ಪೋರ್ಟರ್ ಗಳಲ್ಲಿ  ಪ್ರಕಟವಾಗಿವೆ 25 ಪುಸ್ತಕಗಳೂ ಪ್ರಕಟವಾಗಿವೆ .ಬ್ಲಾಗ್ ನಲ್ಲಿ ಸಾವಿರಕ್ಕಿಂತ ಹೆಚ್ಚು ಬರಹಗಳಿವೆ

ಸುಮಾರು ಐದೂವರೆ ಲಕ್ಷ ಓದುಗರೂ ಇದ್ದಾರೆ 

ಕಣ್ಣಿಗೇ ಕಾಣಿಸದ ಸಾವಿರಾರು ಮಂದಿ ಹಿತೈಷಿಗಳಿದ್ದಾರೆ.ಅಂತೆಯೇ ಪರಿಚಯವೇ ಇಲ್ಲದಿದ್ದರೂ ದ್ವೇಷ ಸಾಧಿಸುವ ಕೆಲ ಜನರೂ ಇದ್ದಾರೆ.

ಡಾ

ಗಣೇಶಯ್ಯನರ ಕಾದಂಬರಿ ಬಳ್ಳಿ ಕಾಳಬೆಳ್ಳಿಯಲ್ಲಿ ಒಮದು ಪ್ರಮುಖ ಪಾತ್ರವಾಗಿ ಲಕ್ಷ್ಮೀ ಪೋದ್ದಾರ್ ಹೆಸರಿನ ನಿಜ ಪಾತ್ರವಾಗಿ ನನ್ನದೇ ತುಳು ಅಧ್ಯಯನದ ವಿಚಾರಗಳನ್ನು ಪ್ರಸ್ತುತ ಪಡಿಸುವ ವಿಶಿಷ್ಟ ಅನುಭವ ನನ್ನದಾಗಿದೆ 

 

ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕದ ಸಾವಿರಕ್ಕಿಂತ ಹೆಚ್ಚಿನ ಪುಟಗಳನ್ನು ತಿರುವಿ ಹಾಕುವಾಗ ಇದೆಲ್ಲ ನಾನು ಬರೆದದ್ದಾ ಎಂಬ ಅಚ್ಚರಿ ನನಗಾಗುತ್ತದೆ

 

ದೈವ ಕೃಪೆ ಎಂದರೆ ಇದೇ ಇರಬೇಕೆನಿಸುತ್ತದೆ..

ಮನುಷ್ಯ ಪ್ರಯತ್ನವನ್ನೇ ನಂಬಿದ್ದವಳು ನಾನು..ಆದರೂ ಮಂಗಳೂರು ಯೂನಿವರ್ಸಿಟಿಯ ಕನ್ನಡ ವಿಭಾಗದಲ್ಲಿ ನಡೆದ ನೇಮಕಾತಿಯ ಅಕ್ರಮ ಅನ್ಯಾಯದ ವಿರುದ್ದ ಸುಪ್ರೀಂ ಕೋರ್ಟಿನ ವರೆಗೂ ಹೋಗಿ ಸ್ಪಷ್ಟ ದಾಖಲೆ ಇದ್ದಾಗಲೂ ಸೋತ ನಂತರ ಮನುಷ್ಯ ಯತ್ನವನ್ನು ಮೀರಿದ ಏನೋ ಒಂದು ಇದೆ ಎಂಬುದು ನನ್ನ ಅರಿವಿಗೆ ಬಂದಿದೆ.ಅದು ತನಕ ನಾನು ಅದೃಷ್ಟ ದುರದೃಷ್ಟ ಎಂಬುದನ್ನು ಒಪ್ಪಿದವಳೇ ಅಲ್ಲ

ತೇನ ವಿನಾ ತೃಣಮಪಿ ನ ಚಲತಿ ಎಂಬಂತೆ ಎಲ್ಲವೂ ಅವನ ಅಣತಿಯಂತೆಯೇ ನಡೆಯುತ್ತದಾ ? 

ನನಗೆ ಗೊತ್ತಿಲ್ಲ..

ತೀರ ಸಣ್ಣ ವಯಸ್ಸಿನಲ್ಲಿಯೆ ಕ್ಯಾನ್ಸರ್ ನಂತಹ ಮಾರಕ ರೋಗಕ್ಕೆ ತುತ್ತಾಗಿ ಈ ಜಗತ್ತಿನಿಂದ ನಿರ್ಗಮಿಸಿದ ಸಹಪಾಠಿಗಳನ್ನು ಸಂಬಂಧಿಕರ  ನೆನಪಾದಾಗ ಐವತ್ತು ದಾಟಿಸಿದ ದೇವರಿಗೆ ಕೃತಜ್ಞತೆಯನ್ನು  ಅರ್ಪಿಸಬೇಕು ಎಂದು  ನೆನಪಾಗುತ್ತದೆ 

 

ಹದಿನೈದು ವರ್ಷಗಳ ಹಿಂದೆ ನನಗೆ ಸರಿಯಾದ ಕೆಲಸವಿಲ್ಲ ಎಂದು ತಲೆಕೆಡಿಸಿಕೊಂಡಿದ್ದೆ.ವಯಸ್ಸು ಮೀರುತ್ತದೆ ಎಂಬ ಆತಂಕ ಕಾಡುತ್ತಿತ್ತು.ಅಂತೂ ನಾನು ಬಯಸಿದ ಸರ್ಕಾರಿ ಕಾಲೇಜು ಉಪನ್ಯಾಸಕ ಹುದ್ದೆ ದೊರೆತು ಹದಿನೈದು ವರ್ಷಗಳಾಗುತ್ತಾ ಬಂತು.ನನ್ನ ಕನಸಿನಂತೆ ಯಥೇಚ್ಛವಾಗಿ  ಭೂತ ಕೋಲ ರೆಕಾರ್ಡ್ ಮಾಡಿ ಅಧ್ಯಯನ ಮಾಡುದಕ್ಕಾಗಿಯೇ  ಬೆಳ್ಲಾರೆ ಕಾಲೇಜನ್ನು ಆಯ್ಕೆ ಮಾಡಿದೆ 

ಅದರ ಫಲ ರೂಪವಾಗಿ  ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ ಯಶಸ್ವಿಯಾಗಿದೆ 

 

ಇನ್ನು ಹತ್ತು ವರ್ಷಗಳ ಸರ್ವಿಸ್ ಇದೆ ನಂತರ ಮತ್ತೆ ಭೂತಾರಾಧನೆಯ ಅದ್ಯಯನ ಮುಂದುವರಿಸಬೇಕೆಂದಿರುವೆ

ನಿವೃತ್ತಿಯ ನಂತರದ ಬದುಕಿಗೆ ಈಗಲೇ ಸಿದ್ಧತೆ ಮಾಡಿಕೊಂಡಿರುವೆ.ನಮ್ಮ ಊರು ಪುತ್ತೂರಿನಲ್ಲಿ ನವ ಚೇತನ ರಿಟೈರ್ ಮೆಂಟ್ ಟೌನ್ ಶಿಪ್ ನಲ್ಲೊಂದು ಮನೆ ನಮಗಾಗಿ ತೆಗೆದಿರಿಸಿರುವೆ.

 

. A resort for seniors ಆಗಿರುವ ನವ ಚೇತನದಲ್ಲಿ   ಈಗಲೂ ರಜೆಯಲ್ಲಿ ಪೇಟೆಯವೆಲ್ಲ ಜಂಜಾಟಗಳಿಂದ ಹೊರ ಬಂದು ಶಾಂತವಾಗಿ ನಾಲ್ಕು ದಿನ ಅಲ್ಲಿ ಇದ್ದು ಬರುತ್ತಿರುವೆ 

 

ಮುಂದಿನದು ದೈವ ಚಿತ್ತ..

 

ಡಾ.ಲಕ್ಷ್ಮೀ ಜಿ ಪ್ರಸಾದ್