Monday, 1 May 2017

ಕಾಲನ ವೇಗಕ್ಕೆ ಹೆಜ್ಜೆ ಹೊಂದಿಸೋಣ © ಡಾ ಲಕ್ಷ್ಮೀ ಜಿ ಪ್ರಸಾದ

ಕಾಲನ ವೇಗಕ್ಕೆ ಹೆಜ್ಜೆ ಹೊಂದಿಸಬೇಕು.

ನಿನ್ನೆ ಗಡಿನಾಡು ಹೊರನಾಡು ಬರಹಗಾರರ ಸ್ಪಂದನ ವೇದಿಕೆಯಡಿಲ್ಲಿ ಇಪ್ಪತ್ತೆರಡು ಬರಹಗಾರರ ಮೂವತ್ತೆರಡು ಪುಸ್ತಕಗಳ ಬಿಡುಗಡೆ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆಯಿತು
ನಾನು ಗಡಿನಾಡಿವಳಾಗಿದ್ದರೂ ಅಲ್ಲಿನ ಹೆಚ್ಚಿನ ಬರಹಗಾರರ ಪರಿಚಯ ನನಗಿಲ್ಲ ವಸಂತಕುಮಾರ್ ಪೆರ್ಲ ಅವರ ಪುಸ್ತಕ ಬಿಡುಗಡೆಯೂ ಇದ್ದು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು ಗಡಿನಾಡು ಹೊರನಾಡು ಬರಹಗಾರರರನ್ನು ಪರಿಚಯಮಾಡಿಕೊಳ್ಳುವ ಸಲುವಾಗಿ ನಾನು ಹೋದೆ ( ಹಾಗಾಗಿ ೆ ನಯನ ಸಭಾಂಗಣದಲ್ಲಿ ನಡೆದ ಪ್ರತಿಭೋತ್ಸವಕ್ಕೆ ಹೋಗಲಾಗಲಿಲ್ಲ) ಕಾರ್ಯಕ್ರಮ ಮುಗಿದು ಊಟದ ಹೊತ್ತಿನಲ್ಲಿ ಎಷ್ಟು ಪುಸ್ತಕಗಳು ಮಾರಾಟವಾದವು ಎಂದು ವಿಚಾರಿಸಿದೆ ,ಮೂವತ್ತು ಮೂವತ್ತ ಮೂರು ಪುಸ್ತಕಗಳು ಮಾರಾಟವಾಗಿವೆ ಎಂದು ತಿಳಿಯಿತು  ಕಾರ್ಯಕರ್ಮಕ್ಕೆ ನೂರಕ್ಕಿಂತ ಹೆಚ್ಚಿನ ಜನರು ಬಂದಿದ್ದರೂ ಮೂವತ್ತ ಮೂರು ಪುಸ್ತಕಗಳು ಪ್ರಕಟವಾಗಿದ್ದರೂ ಮಾರಾಟವಾದ ಪುಸ್ತಕಗಳು ಮೂವತ್ತಮೂರರಷ್ಟು ಮಾತ್ರವೇ
ಈ ಬಗ್ಗೆ ಅಲ್ಲಿ ಬಂದಿದ್ದ ಬೆಂಗಳೂರು ಯುನಿವರ್ಸಿಟಿ ಮೈಕ್ರೋ ಬಯೋಲಜಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ರಾದ ಶಂಕರ್ ಭಟ್ ಅವರಲ್ಲಿ ಮಾತನಾಡುವಾಗ ಈಗ ಪುಸ್ತಕಗಳನ್ನು ಓದುವವರಿಲ್ಲ ಎಂಬ ವಿಷಯ ಚರ್ಚೆಗೆ ಬಂತು . 2013 ರ  ಒಳಗೆ ನನ್ನ ಇಪ್ಪತ್ತು ಪುಸ್ತಗಳು ಪ್ರಕಟವಾಗಿವೆ ನಂತರ ಪುಸ್ತಕ ಪ್ರಕಟಿಸುವ ಸಾಹಸಕ್ಕೆ ಕೈಹಾಕಿಲ್ಲ ಪ್ರಕಟಿಸಬಾರದೆಂದೇನೂ ನನಗಿಲ್ಲ ಆದರೆ ಬ್ಲಾಗ್ ಮೂಲಕ ಬರೆಯುತ್ತಿರುವ ಕಾರಣ ಎರಡು ಲಕ್ಷಕ್ಕಿಂತ ಹೆಚ್ಚಿನ ಓದುಗರು ಓದಿದ್ದಾರೆ ಬ್ಲಾಗ್ ಎಲ್ಲರಿಗೂ ಉಚಿತವಾಗಿ ಸಿಗುತ್ತದೆ ಇದು ಪ್ರಪಂಚದ ಎಲ್ಲ ದೇಶದ ಜನರಿಗೂ ಕ್ಷಣಮಾತ್ರದಲ್ಲಿ ತಲುಪುತ್ತದೆ ಹಾಗಾಗಿ ನನಗೆ ಓದುಗರ ಕೊರತೆಯಿಲ್ಲ  ನನ್ನ ಪ್ರಕಟಿತ ಇಪ್ಪತ್ತು  ಪುಸ್ತಕಗಳಲ್ಲಿ  ಹನ್ನೆರಡನ್ನು ನಾನು ಸ್ವತಃ ಪ್ರಕಟಿಸಿದ್ದು ಸರಿಯಾಗಿ ಪುಸ್ತಕ ಬಿಡುಗಡೆ ಕೂಡ ಮಾಡದಿದ್ದರೂ ಕೂಡ ಮಾರಾಟದ ಸಮಸ್ಯೆ ನನಗೆ ಬರಲಿಲ್ಲ ನನ್ನ ಹೆಚ್ಚಿನ ಕೃತಿಗಳ ಮೂರು ನಾಲ್ಕು ಪ್ರತಿ ಮಾತ್ರ ನನ್ನಲ್ಲಿ ಉಳಿದಿವೆ ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು ಮತ್ತು ಅರಿವಿನಂಗಳದ ಸುತ್ತ ಪುಸ್ತಕ ಗಳ ಎಲ್ಲಾ ಪ್ರತಿಗಳು ಮುಗಿದು ಅಂಗಡಿಗಳಲ್ಲಿ ಹೋಗಿ ಇದ್ದ ಒಂದೆರಡು ಪ್ರತಿಗಳನ್ನು ನಾನು ಮತ್ತೆ ಖರೀದಿಸಿ ತಂದು ಇಟ್ಟು ಕೊಂಡಿರುವೆ ಆದರೂ ಈಗ ಪುಸ್ತಕ ಪ್ರಕಟಣೆಗೆ ಕೈ ಹಾಕಲು ಅಳುಕಾಗುತ್ತಿದೆ ಹಾಗಾಗಿ ಬ್ಲಾಗ್ ಅನ್ನು ಆಶ್ರಯಿಸಿರುವೆ   ಬ್ಲಾಗ್ ಇಷ್ಟು ಜನಪ್ರಿಯ ಮಾದರಿ ಎಂದು ಆರಂಭಿಸಿದಾಗ ನನಗೂ ಗೊತ್ತಿರಲಿಲ್ಲ ನಿನ್ನೆ ಶಂಕರ್  ಭಟ್ ಅವರಲ್ಲಿ ಮಾತಾಡುವಾಗ ಅವರೂ ಅದನ್ನು ಒಪ್ಪಿದರು ಬಹುಶಃ ಬರಹಗಾರರು ತಮ್ಮ ಬರಹವನ್ನು ಆಸಕ್ತರಿಗೆ ತಲುಪಿಸಲು ಬ್ಲಾಗ್ ನಂತ ಹೊಸ ದಾರಿಯನ್ನು ಅನುಸರಿಸುವುದು ಅನಿವಾರ್ಯವಾಗಿ ಬಿಡುತ್ತದೆಯೋ ಏನೋ ಎಂದು ನನಗೆ ಆಗ ಅನಿಸಿತು ಬಹುಶಃ ಕಾಲನ ಓಟಕ್ಕೆ ಸಮಾನವಾದ ವೇಗದಲ್ಲಿ ಹೆಜ್ಜೆ ಇಡುವುದು ಇಂದಿನ ಅಗತ್ಯ ಅದು ಬರಹಗಾರರಿಗೂ ಅನ್ವಯವಾಗುತ್ತದೆ ಅಲ್ಲವೇ ?
ಅಂದಹಾಗೆ ವಸಂತಕುಮಾರ್ ಪೆರ್ಲ ಅವರ  "ಏರುತ್ತೇರುತ್ತ ಶಿಖರ "ಎಂಬ ಪುಸ್ತಕ ದಲ್ಲಿ ನನ್ನ ಸುಬ್ಬಿ ಇಂಗ್ಲಿಷ್ ಕಲ್ತದು ಮತ್ತು ಇತರ ನಾಟಕಗಳು ಕೃತಿಗೆ ಅವರು ಬರೆದಬರಹ ( ಮುನ್ನುಡಿ ಬರಹ) ಕೂಡ ಇದೆ

ದೊಡ್ಡವರ ದಾರಿ -14 ನಿಷ್ಪಾಕ್ಷಿಕ ಮನೋಭಾವದ ಮೇಷ್ಟ್ರುಡಾ ಗೀತಾಚಾರ್ಯ ©ಡಾ ಲಕ್ಷ್ಮೀ ಜಿ ಪ್ರಸಾದ



ಬೆಂಗಳೂರಿಗೆ ಬಂದ ಮರುದಿನವೇ ನಡೆದ walk in interview ನಲ್ಲಿ ಕೊನೆಯ ಅಭ್ಯರ್ಥಿಯಾಗಿ ಸಂದರ್ಶನ ಎದುರಿಸಿ ಎ ಪಿ ಎಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಆಯ್ಕೆಯಾಗಿದ್ದೆ .ಕೆಲಸಕ್ಕೆ ಸೇರಿದ ದಿನವೇ ಪಿಎಚ್ ಡಿ ಮಾಡುವಂತೆ ಸಲಹೆ ನೀಡಿದವರು ಅಲ್ಲಿನ ಪ್ರಿನ್ಸಿಪಾಲ್ ಡಾ ಕೆ ಗೋಕುಲನಾಥರು ( ಅವರ ಬಗ್ಗೆ ಈ ಹಿಂದೆಯೇ ಬರೆದಿರುವೆ)
ಕೆಲಸಕ್ಕೆ ಸೀರಿದ ಕೆಲವೇ ದಿನಗಳಲ್ಲಿ ಹಂಪಿ ವಿಶ್ವ ವಿದ್ಯಾಲಯವು ಡಾಕ್ಟರೇಟ್ ಮಾಡಲು ಬಯಸುವವರಿಂದ ಅರ್ಜಿ ಅಹ್ವಾನಿಸಿತ್ತು
ಅದು ನನ್ನ ಗಮನಕ್ಕೆ ಬಂದಿರಲಿಲ್ಲ .ಆದರೂ ಅದನ್ನು ಗಮನಿಸಿದ ಡಾ ಕೆ ಗೋಕುಲನಾಥರು ನನ್ನ ನ್ನು ಕರೆದು ನೀವು ಡಾಕ್ಟರೇಟ್ ಮಾಡುವುದಾದರೆ ಹಂಪಿ ಯುನಿವರ್ಸಿಟಿ ಅರ್ಜಿ ಆಹ್ವಾನ ಮಾಡಿದೆ ಇಲ್ಲಿಯೇ ಮೂರನೇ ಅಡ್ಡರಸ್ತೆಯಲ್ಲಿ ಬಿ ಎಂ ಶ್ರೀ ಪ್ರತಿಷ್ಠಾನ ಇದೆ ಅದು ಹಂಪಿ ಯುನಿವರ್ಸಿಟಿಯ ಅಧಿಕೃತ ಅದ್ಯಯನ ಕೇಂದ್ರ ಅಲ್ಲಿಗೆ ಅರ್ಜಿ ಸಲ್ಲಿಸಿ ಎಂದು ತಿಳಿಸಿದರು
ಅವರು ಹೇಳಿದಂತೆ ಎನ್ ಆರ್ ಕಾಲೊನಿ ಮೂರನೇ ಮುಖ್ಯ ರಸ್ತೆಯ ಲ್ಲಿರುವ ಬಿ ಎಂ ಶ್ರೀ ಪ್ರತಿಷ್ಠಾನಕ್ಕೆ ಬಂದು ಅರ್ಜಿ ಪಡೆದು ಫೀಸ್ ತುಂಬಿ ಅರ್ಜಿ ಸಲ್ಲಿಸಿ ಬಂದೆ .
ಕೆವು ದಿನಗಳ ನಂತರ ಲಿಖಿತ ಪರೀಕ್ಷೆ ಮತ್ತು ಮೌಖಿಕ‌ಪರೀಕ್ಷೆ ಇರುತ್ತದೆ ಎಂದು ಅಲ್ಲಿನ ಸಿಬ್ಬಂದಿ ರಾಜಮ್ಮ ಅವರು ತಿಳಿಸಿದರು
ಹಾಗಾಗಿಯೇ ತಕ್ಷಣವೇ ಯಾವ ವಿಷಯದಲ್ಲಿ ಪಿಎಚ್ ಡಿ ಎಂದು ಮಾಡುವುದೆಂದು ಆಲೋಚಿಸಿದೆ ತುಳು ಜಾನಪದ ಸಂಶೋಧನಾ ಕೃತಿ ಗಳನ್ನು ಓದಿದೆ ಡಾ ಅಮೃತ ಸೋಮೇಶ್ವರ ಡಾ ಬಿಎ ವಿವೇಕ ರೈ ಡಾ ಸುಶೀಲ ಉಪಾಧ್ಯಾಯರ ಕೃತಿಗಳಲ್ಲಿ ನಾಗಬ್ರಹ್ಮ ದೈವದ ಕುರಿತು ಅಧ್ಯಯನ ವಾಗಬೇಕಾದ ಅಗತ್ಯವನ್ನು ತಿಳಿಸಿದ್ದು ಆ ಬಗ್ಗೆ ಯೇ ಮಾಡುವುದೆಂದು ತೀರ್ಮಾನಿಸಿದೆ ,ಲಿಖಿತ ಪರೀಕ್ಷೆಯ ಹಳೆಯ ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಬಂದು ನನ್ನದೇ ಆದ ರೀತಿಯ ತಯಾರಿ ಮಾಡಿಕೊಂಡೆ
ಅಂತೂ ಕಾಯುತ್ತಿದ್ದ ಆ ದಿನ ಬಂತು ಪರೀಕ್ಷೆ ಬರೆದೆ ಮಧ್ಯಾಹ್ನ ಮೇಲೆ ಮೂವತ್ತೈದು ಜನರಿಗೆ ಮೌಖಿಕ ಪರೀಕಗಷೆಗೆ ಬರಲು ತಿಳಿಸಿದರು
ಒಬ್ಬರಾಗಿ ಒಬ್ಬರು ಸಂದರ್ಶನ ಕೊಠಡಿಗೆ ಹೋಗುತ್ತಾ ಇದ್ದರು ಒಬ್ಬರು ಧ್ವನಿ ಕೂಡ ಕೇಳುತ್ತಾ ಇರಲಿಲ್ಲ ಹೊರ ಬಂದವರಲ್ಲಿ ಏನು ಕೇಳಿದರೆಂದು ಕೇಳಿದಾಗ ನಾವು ಆಯ್ಕೆ ಮಾಡಿದ ವಿಷಯದ ಬಗ್ಗೆ ಕೇಳಿದರು ಎಂದು ತಿಳಿಸಿದರು ಒಳಗೆ ಯಾರಿದ್ದಾರೆ ಎಂದು ಕೇಳಿದಾಗ ಡಾ ಗೀತಾಚಾರ್ಯ, ಡಾ ಮಲ್ಲೇಪುರಂ,ಬಸವರಾರಾಧ್ಯ ಇದ್ದಾರೆ ಎಂದು ಹೇಳಿದರು ಆಗಷ್ಟೇ ಬೆಂಗಳೂಇಗೆ ಬಂದಿದ್ದ ನನಗೆ ಇವರ್ಯಾರೂ ಗೊತ್ತಿರಲಿಲ್ಲ ಅಲ್ಲಿಗೆ ಬಂದ ಅಭ್ಯರ್ಥಿಗಳಲ್ಲಿ ಅನೇಕ ರಿಗೆ ಇವರುಗಳ ಪರಿಚಯವಿತ್ತು ಹಾಗಾಗಿ ನಾನು ಆಯ್ಕೆ ಆಗುವ ಬಗ್ಗೆ ನನಗೆ ನಂಬಿಕೆ ಇರಲಿಲ್ಲ .ಒಂದು ಕ್ಷಣ ಸಂದರ್ಶನ ಕ್ಕೆ ಹಾಜರಾಗುವುದು ಬೇಡ ಮನೆಗೆ ಗೋಗಿ ಬಿಡಲೇ ಎನಿಸಿತು .ಆದರೂ ಹೇಗೂ ಬಂದಿರುವೆ ಸಂದರ್ಶನ ಎದುರಿಸಿಯೇ ಹೋಗೋಣ ಎಂದು ನಿರ್ಧರಿಸಿ ನನ್ನ ಸರದಿಗೆ ಕಾದೆ ಕೊನೆಯವಳಾಗಿ ನನಗೆ ಒಳಗೆ ಬರಲು ಆಹ್ವಾನ ಬಂತು .ಯಾವ ಬಗ್ಗೆ ಡಾಕ್ಟರೇಟ್ ಮಾಡುತ್ತೀರಿ ಎಮದಾಗ ಭೂತಾರಾಧನೆ ಬಗ್ಗೆ ಎಂದು ತಿಳಿಸಿದೆ ಆಗ ಭೂತಾರಾಧನೆ ಬಗ್ಗೆ ಈಗಾಗಲೇ ಡಾ ಬಿ ಎ ವಿವೇಕ ರೈ ಡಾ ಚಿನ್ನಪ್ಪ ಗೌಡ ಮೊದಲಾದವರು ಮಾಡಿದ್ದಾರಲ್ಲ ಅದರಲ್ಲಿ ಇನ್ನೇನಿದೆ ಮಾಡಲು ಎಂದು ಡಾ ಗೀತಾಚಾರ್ಯ ( ಆಗ ಅವರು ಯಾರೆಂದು ತಿಳಿದಿರಲಿಲ್ಲ) ಕೇಳಿದಾಗ ಒಂದಿನಿತು ತಬ್ಬಿಬ್ಬುಗೊಂಡೆ.ಮತ್ತೆ ಸಾವರಿಸಿಕೊಂಡು ತುಳುನಾಡಿನಲ್ಲಿ ಅನೇಕ ಭೂತಗಳಿವೆ ಕಲ್ಲುರ್ಟಿ ಮಲರಾಯ ಪಂಜುರ್ಲಿ ಇತ್ಯಾದಿ ಇವರೆಲ್ಲರನ್ನೂ ಏಕವಚನದಲ್ಲಿ ಕಲ್ಕುಡೆ ಮಲರಾಯೆ ಎಂದು ಕರೆಯುತ್ತಾರೆ ಆದರೆ ನಾಗ ಬ್ರಹ್ಮ ನನ್ನು ನಾಗಬೆರ್ಮೆರ್ ಎಂದು ಬಹುವಚನ ಬಳಸಿ ಕರೆಯುತ್ತಾರೆ ಅಲ್ಲದೆ ಈತ ಯಕ್ಷ ಬ್ರಹ್ಮ ನೇ,ಸೃಷ್ಟಿ ಕರ್ತೃ ಬ್ರಹ್ಮ ನೇ ಭೂತ ಬ್ರಹ್ಮ ನೇ ಯಾರೆಂದು ಈ ತನಕ ತಿಳಿದಿಲ್ಲ ಈತನ ಬಗ್ಗೆ ಅಧ್ಯಯನ ವಾಗಬೇಕೆಂದು ಡಾ ಅಮೃತ ಸೋಮೇಶ್ವರ ಹಾಗೂ ಡಾ ಬಿಎ ವಿವೇಕ ರೈಗಳು ಬರೆದಿರುವ ಬಗ್ಗೆ ಪುಸ್ತಕ ದ ಹೆಸರು ಪುಟಸಂಖ್ಯೆ ತಿಳಿಸಿ ಹೇಳಿದೆ
ಸರಿ ಮುಂದೆ ಫಲಿತಾಂಶವನ್ನು ಹದಿನೈದು ದಿನಗಳಲ್ಲಿ ತಿಳಿಸುತ್ತೇವೆ ಎಂದು ಅಲ್ಲಿ ಹೇಳಿದರು
ಆಗ ಬಿ ಎಂ ಶ್ರೀ ಪ್ರತಿಷ್ಠಾನ ದ ಗೈರವ ಕಾರ್ಯದರ್ಶಿಯಾಗಿ ಇದ್ದವರು ಡಾ ಗೀತಾಚಾರ್ಯ .ಎಲ್ಲರ ಆಯ್ಕೆ ಮಲ್ಲೇಪುರಂ ವೆಂಕಟೇಶ ಮತ್ತು ಗೀತಾಚಾರ್ಯ ಕೈಯಲ್ಲಿದೆ ಎಂದು ಬಂದ ಅಭ್ಯರ್ಥಿಗಳು ಮಾತಾಡುತ್ತಾ ಇದ್ದರು .ನಾನಂತೂ ಭರವಸೆ ಕಳೆದು ಕೊಂಡಿದ್ದೆ ಅಲ್ಲದೆ ಹೊರಗೆ ಕುಳಿತ ಅಭ್ಯರ್ಥಿಗಳು ನೀವು ಒಳಗಡೆ ತುಂಬಾ ದೊಡ್ಡಕೆ ಮಾತಾಡಿದಿರಿ ಅಷ್ಟು ದೊಡ್ಡವರ ಎದುರು ಹೀಗೆ ಮಾತಾಡಿದ್ದು ಸರಿಯಲ್ಲ ಎಂದು ಬೇರೆ ಹೇಳಿದರು ನನಗೆ ಅರಿವೇ ಇಲ್ಲದೆ ಧ್ವನಿ ದೊಡ್ಡದಾಗಿರಬೇಕು
ಅಂತೂ ಪೂರ್ತಿ ಭರವಸೆ ಬಿಟ್ಟು ಮನೆಗೆ ಬಂದಿದ್ದೆ ‌ಮರುದಿನ ನಮ್ಮ ಪ್ರಿನ್ಸಿಪಾಲ್ ಗೋಕುಲನಾಥರಲ್ಲಿಯೂ ಈ ಬಗ್ಗೆ ಹೇಳಿ ಆಯ್ಕೆಯಾಗುವುದು ಕಷ್ಟ ಎಂದು ಹೇಳಿದ್ದೆ ಆಗ ಅವರು ಮಲ್ಲೇಪುರಂ ಮತ್ತು ಗೀತಾಚಾರ್ಯ ಬಹಳ ಬಿಗಿ ಆದರೆ ನಿಷ್ಪಕ್ಷಪಾತ ಧೋರಣೆಯವರು ನೀವು ನಿಜಕ್ಕೂ ಚೆನ್ನಾಗಿ ಬರೆದಿದ್ದು ಸಂದರ್ಶನ ಚೆನ್ನಾಗಿ ಮಾಡಿದ್ದರೆ ಆಯ್ಕೆ ಆಗುವಿರಿ ಎಂದು ತಿಳಿಸಿದರು .
ಹದಿನೈದು ದಿನ ಬಿಟ್ಟು ಬಿಎಂಶ್ರೀ ಪ್ರತಿಷ್ಠಾನ ಕ್ಕೆ ಫಲಿತಾಂಶ ತಿಳಿಯಲು ಹೋದೆ ಹೋಗುವಾಗ ನನಗೆ ಎದುರಾಗಿ ಜುಬ್ಬಾ ಧರಿಸಿದ ,ಸಂದರ್ಶನ ದಲ್ಲಿ ಇದ್ದ ಒಬ್ಬರು ಎದುರಾಗಿದ್ದರು ನನ್ನು ನೋಡಿ ಮುಗುಳು ನಕ್ಕರೂ ಅವರು ಯಾರೆಂದು ತಿಳಿಯದ ನಾನು ನಮಸ್ಕರಿಸಲಿಲ್ಲ
ಪ್ರತಿಷ್ಠಾನ ದ ಒಳಗೆ ಹೋಗಿ ಫಲಿತಾಂಶ ಕೇಳಿದೆ ನೀವು ಗೀತಾಚಾರ್ಯ ರನ್ನು ಕೇಳಿ ಎಂದು ಹೇಳಿದರು ಅವರು ಯಾರು ಎಂದು ಕೇಳಿದೆ ಈಗ ನಿಮ್ಮ ಎದುರು ಹೋದರಲ್ಕ ಅವರೇ ಗೀತಾಚಾರ್ಯ ಅವರು ಈ ಪ್ರತಿಷ್ಠಾನ ದ ಗೌರವ ಕಾರ್ಯದರ್ಶಿ ಎಂದು ಹೇಳಿದರು .ಸರಿ ಎಂದು ಅವರು ಕುಳಿತಲ್ಲಗೆ ಹೋಗಿ ಕೇಳಿದೆ ನೀವು ಲಕ್ಷ್ಮೀ ಅಲ್ವಾ ? ನಿಮ್ಮ ಆಯ್ಕೆ ಆಗಿದೆ ಎಂದು ಹೇಳಿ‌ ಮುಂದೆ ಮಾಡಬೇಕಾದ ಪ್ರಕ್ರಿಯೆ ಗಳ ಬಗ್ಗೆ ಮಾಹಿತಿ ನೀಡಿದರು
ಅಂತೂ ನಾನು ಯಾರ ಪರಿಚಯ ಪ್ರಭಾವ ಇಲ್ಲದಿದ್ದರೂ ಆಯ್ಕೆ ಆಗಿದ್ದೆ ಅದಕ್ಕೆ ನಿಷ್ಪಾಕ್ಷಿಕವಾಗಿ ಪ್ರತಿಭೆಯನ್ನು ಮಾನದಂಡವಾಗಿ ಸ್ವೀಕರಿಸಿ ಆಯ್ಕೆ ಮಾಡಿದ ಮಲ್ಲೇಪುರಂ ವೆಂಕಟೇಶ ಮತ್ತು ಡಾ ಗೀತಾಚಾರ್ಯ ಕಾರಣರಾಗಿದ್ದರು
ತುಳು ಸಂಶೋಧನಾ ಕ್ಷೇತ್ರ ಕ್ಕೆ ಕಾಲಿರಿಸಲು ಸಹಾಯ ಮಾಡಿದ ಇವರುಗಳಿಗೆ ಆಭಾರಿಯಾಗಿದ್ದೇನೆ ಮಲ್ಲೇಪುರಂ ಬಗ್ಗೆ ಇನ್ನೂ ಬರೆಯಲಿದೆ ಇನ್ನೊಂದು ಸರಣಿಯಲ್ಲಿ ಅವರ ಬಗ್ಗೆ ಬರೆಯುವೆ
©ಡಾ ಲಕ್ಷ್ಮೀ ಜಿ ಪ್ರಸಾದ 

ನಾನು ತುಳುನಾಡಿನವಳು © ಡಾ ಲಕ್ಷ್ಮೀ ಜಿ ಪ್ರಸಾದ



ನಾನ್ಯಾವ ನಾಡಿನವಳು ?
ಹೀಗೊಂದು ಜಿಜ್ಞಾಸೆ ಸದಾ ನನ್ನನ್ನು ಕಾಡುತ್ತಾ ಇರುತ್ತದೆ .ನನ್ನ ಊರು ಯಾವುದು ಎಂದು ಕೇಳಿದಾಗ ನಾನು ಕೊಡುವುದು ನನ್ನ ತಂದೆ ಮನೆ ಕಾಸರಗೋಡು ಜಿಲ್ಲೆಯ  ಕೋಳ್ಯೂರು ಎಂಬ ಪುಟ್ಟ ಗ್ರಾಮದ ವಾರಣಾಸಿ ಮನೆ ಬಗ್ಗೆ
ಕೇಳುವವರಲ್ಲಿ ನನ್ನ ಗಂಡನ ಮನೆ ಯಾವುದು ಎಂಬ ಕುತೂಹಲ ಕಂಡರೆ ನಾನು ಅದನ್ನು ನೇರವಾಗಿ ಹೇಳುತ್ತೇನೆ ನನ್ನ ಗಂಡ ಪ್ರಸಾದ್ ಮನೆ ಬಂಟ್ವಾಳ ತಾಲೂಕಿನ  ಕೋಡಪದವಿನ ಸರವು ಎಂಬ ಮನೆ ಇದು ನಮ್ಮ ಕುಟುಂಬದ ಮನೆಯ ಹೆಸರಲ್ಲ ನನ್ನ ಪತಿಯ ಅಜ್ಜ ಎಲ್ಲಿಂದಲೋ ಬಂದು ಕೋಡಪದವು ಸಮೀಪದ ಪಂಜಿಗದ್ದೆ ಎಂಬ ಪರಿಸರದ ಒಂದಷ್ಟು ಜಾಗ ಖರೀದಿಸಿ ನೆಲೆಯಾದವರು ಅವರು ತೀರ ಸಣ್ಣ ವಯಸ್ಸಿನಲ್ಲಿ ತೀರಿ ಹೋದ ಕಾರಣ ಅವರ ಮಕ್ಕಳಿಗೆ ಅವರ ಮೂಲ ಯಾವುದು ಎಂದು ತಿಳಿದಿಲ್ಲ ಮನೆದೇವರು ಕೂಡ ಯಾರೆಂದು ತಿಳಿದಿಲ್ಲ ಅಲ್ಲಿಂದ ಆಸ್ತಿ ಭಾಗವಾಗಿ ಅಲ್ಲಿಂದ ಎರಡು ಕಿಮೀ ದೂರದ ಸರವು ಎಂಬ ಪ್ರದೇಶದಲ್ಲಿ ಸ್ವಲ್ಪ ಜಾಗ ಪಡೆದು ನೆಲೆಯಾದವರು ನನ್ನ ಪ್ರಸಾದ ತಂದೆಯವರು ನಾನು ಮದುವೆಯಾಗಿ ಬಂದದ್ದು ಇದೇ ಮನೆಗೆ ಬಂದದ್ದು ಮಾತ್ರ ಅಲ್ಲಿ ಬದುಕಿದ್ದು ಬೆರಳೆಣಿಕೆಯಷ್ಟು ದಿನಗಳು
ಇಪ್ಪತ್ತೈದು ವರ್ಷಗಳ ಹಿಂದೆ ಮದುವೆಯಾದ ಮೇಲೆ ಓದಿಸುವ ಮನಸ್ಥಿತಿ ನಮ್ಮ ಸಮಾಜದಲ್ಲಿ ಇರಲಿಲ್ಲ ನಮ್ಮ ಕುಟುಂಬದ ಮಂದಿಯೂ ಅದಕ್ಕೆ ಹೊರತಾಗಿ ಇರಲಿಲ್ಲ ಇದೇ ಕಾರಣಕ್ಕೆ ನಾನು ಪ್ರಸಾದ ಒಂದಿಗೆ ಮನೆ ಬಿಟ್ಟು ಹೊರ ನಡೆದು ನಾನು ಓದುವ ಕಟೀಲು ಕಾಲೇಜು ಬಳಿ ಮನೆ ಮಾಡಿ ಸಂಸಾರ ಪ್ರಾರಂಭಿಸಿದೆವು ಅನೇಕ ಏಳು ಬೀಳುಗಳನ್ನೂ ಕಂಡೆವು ಅಲ್ಲಿದ್ದದ್ದು ಒಂದೇ ವರುಷ ಅಲ್ಲಿಂದ ಮತ್ತೆ ಮಂಗಳೂರಿನಲ್ಲಿ ಹತ್ತು ವರ್ಷ ಬದುಕಿದೆವು ಹೊಟ್ಟೆಪಾಡಿಗಾಗಿ ಉದ್ಯೋಗ ಅರಸುತ್ತಾ ಪ್ರಸಾದ ಬೆಂಗಳೂರಿಗೆ ಸಪ್ಟೆಂಬರ್ 2004 ರಲ್ಲಿ ಬಂದಾಗ ನಾನು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸಂಸ್ಕೃತ ಉಪನ್ಯಾಸಕಿಯಾಗಿದ್ದೆ
ಶೈಕ್ಷಣಿಕ ವರ್ಷದ ಮಡುವೆ ಕೆಲಸ ಬಿಡುವುದು ಸರಿಯಲ್ಲ ವೆಂದು ಮಾರ್ಚ್ 2005 ರ ತನಕ ಕೆಲಸದಲ್ಲಿ ಮುಂದುವರಿದು ಪ್ರಥಮ ಪಿಯುಸಿ ಮೌಲ್ಯ ಮಾಪನ ಮಾಡಿ‌ಕೊಟ್ಟು ಕಾಲೇಜು  ಮ್ಯಾಗಜೀನ್ ಕೆಲಸವನ್ನು ಮುಗಿಸಿಕೊಟ್ಟು ಗೌರವದಿಂದ ಅಲ್ಲಿಂದ ರಿಲೀವ್ ಆಗಿ ಬೆಂಗಳೂರಿಗೆ ಬಂದೆ ಬಂದ ಮರುದಿನವೇ ಎಪಿಎಸ್ ಕಾಲೇಜಿನ ಕನ್ನಡ ಉಪನ್ಯಾಸಕ ಹುದ್ದೆಗೆ walk in interview ಇದ್ದದ್ದು ಗೊತ್ತಾಗಿ ಮಗನನ್ನು ಗಾಡಿಯಲ್ಲಿ ಕೂರಿಸಕೊಂಡು ವಿಳಾಸ ಹುಡುಕುತ್ತಾ ಎನ್ ಆರ್ ಕಾಲೋನಿಗೆ ತಡವಾಗಿ ಬಂದು ಕೊನೆಯ ಅಭ್ಯರ್ಥಿಯಾಗಿ ಸಂದರ್ಶನ ಎದುರಿಸಿ ಆಯ್ಕೆಯಾದೆ
ಬನಶಂಕರಿ ತೃತೀಯ ಬಡಾವಣೆಯಲ್ಲಿ ಬಾಡಿಗೆ ಮನೆ ಹಿಡಿದಿದ್ದೆವು
ಅಲ್ಲಿಂದ 2008 ರಲ್ಲಿ ಈಗಿನ  ಅಂಗೈ ಅಗಲದ ನಮ್ಮ ಪುಟ್ಟದಾದ ಸ್ವಂತ ಮನೆಗೆ ಬಂದೆವು ಮತ್ತೆ 2009 ರಲ್ಲಿ ಬೆಳ್ಳಾರೆಗೆ ಉಪನ್ಯಾಸಕಿಯಾಗಿ ಹೋದೆ 2015 ರಲ್ಲಿ ಮತ್ತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಕಾಲೇಜಿಗೆ ವರ್ಗಾವಣೆ ಪಡೆದು ಬಂದೆ
ಹಾಗಾಗಿ ನಮಗೆ ನಾವೆಲ್ಲಿಯವರುಎಂದು ಕೇಳಿದರೆ ಒಂದಿನಿತು ತಬ್ಬಿಬ್ಬಾಗುತ್ತೇನೆ ಕೊನೆಯಲ್ಲಿ ನಾನು "ತುಳುನಾಡಿನ ವರು "  ಎನ್ನುತ್ತೇನೆ
ಯಾಕೆಂದರೆ ನನ್ನ ಮಾತೃಭಾಷೆ ಹವ್ಯಕ ಕನ್ನಡ ವೃತ್ತಿ ಕನ್ನಡ ಉಪನ್ಯಾಸಕಿಯಾಗಿ, ಆದರೂ ನನ್ನನ್ನು ಸೆಳೆದದ್ದು ತುಳು ಸಂಸ್ಕೃತಿ ಕೈ ಹಿಡಿದು ಸಲಹಿದವಳು ತುಳುವಪ್ಪೆ
ಇಷ್ಟಾಗಿಯೂ ಇತ್ತೀಚೆಗೆ ಕನ್ನಡ ಜಾನಪದ ಪರಿಷತ್ ಮೈಸೂರು ವಿಭಾಗದಿಂದ ದಕ್ಷಿಣ ಕನ್ನಡ ಜಿಲ್ಲೆಯಿಂದ ನನ್ನನ್ನು ಜಾನಪದ ಪ್ರಪಂಚ ಪ್ರಶಸ್ತಿ ಗೆ ಆಯ್ಕೆಮಾಡಿದಾಗ ಅವರು ಕಾಸರಗೋಡಿನವರು ದಕ್ಷಿಣ ಕನ್ನಡ ಜಿಲ್ಲೆಯಿಂದ ಅವರನ್ನು ಆಯ್ಕೆ ಮಾಡಿದ್ದು ಸರಿಯಲ್ಲ ಎಂದು ಆಕ್ಷೇಪ ಮಾಡಿದ್ದು ತಿಳಿಯಿತು ತಕ್ಷಣವೇ ನಾನು ದಕ್ಷಿಣ ಕನ್ನಡ ಜಿಲ್ಲೆಯ  ಬಂಟ್ವಾಳ ತಾಲೂಕಿನ  ಮದುವೆಯಾಗಿ ಬಂದ ಮನೆಯ ನನ್ನ ಪತಿ ಪ್ರಸಾದ ಮನೆ ವಿಳಾಸ ಮತ್ತು ಇನ್ನೂ ಅಲ್ಲಿಯೇ ಓಟಿನ ಹಕ್ಕು ಇರುವ ಬಗ್ಗೆ ವೋಟರ್ಸ ಕಾರ್ಡಿನ ದಾಖಲೆ ಒದಗಿಸಿ ದಾಖಲೆ ಪ್ರಕಾರ ನಾನು ದಕ್ಷಿಣ ಕನ್ನಡ ಜಿಲ್ಲೆಯ ವಳು ಆದರೆ ಮಾನಸಿಕವಾಗಿ ನಾನು ಅಲ್ಲಿಯವಳಲ್ಲ ಅವರೆಂದೂ ನನ್ನನ್ನು ಸೊಸೆಯಾಗಿ ಸ್ವೀಕರಿಸಲಿಲ್ಲ ಅದನ್ನು ತಪ್ಪು ಎಂದು ದೂಷಿಸಲಾರೆ .ಸೆರಗು ತಲೆಗೆ ಹೊದ್ದು ಬೆಳಗ್ಗೆ ಎದ್ದು ಹೊಸಿಲಿ ಬರೆದು ಮನೆಯೊಳಗೆ ಗೃಹಿಣಿಯಾಗಿರುವ ಸೊಸೆಯನ್ನು ನಿರೀಕ್ಷಿಸಿದ ಸಂಪ್ರದಾಯ ವಾದಿ ಬ್ರಾಹ್ಮಣ ಕುಟುಂಬದ ಜನ ನಡು ರಾತ್ರಿ ನಢಯುವ ಭೂತಕೋಲವನ್ನು ರೆಕಾರ್ಡ್  ಕ್ಯಾಮರಾ ಹಿಡಿದುಕೊಂಡು ಜಾತಿ ನೀತಿ ಧರ್ಮದ ಗಡಿ ದಾಟಿ ಸಾಗುವ ನನ್ನಂಥ ಟಪೋರಿಯನ್ನು ಸೊಸೆಯಾಗಿ ಹೇಗೆ ತಾನೆ ಸ್ವೀಕರಿಸಿಯಾರು ಅಲ್ಲವೇ ?
ಬೆಂಗಳೂರು ಅನ್ನವನ್ನು ಕೊಟ್ಟ ಊರು ಎಂಬ ಕೃತಜ್ಞತೆ ಇರುವುದಾದರೂ ನಾನು ಬೆಂಗಳೂರಿನವಳು ಎಂಬ ಭಾವ ನನಗಿನ್ನೂ ಬಂದಿಲ್ಲ ಬಾರದೆ ಇರುವುದನ್ನು ಹೇಗೆ ಒಪ್ಪಲಿ ?
ಹಾಗಾಗಿ ನಾನು ಎಲ್ಲಿಯವಳು ಕೇಳಿದರೆ ಇಂದಿಗೂ ಹೇಳುವುದು ನಾನು ತುಳುನಾಡಿನವಳು ಗಡಿನಾಡಿನವಳು ಎಂದು .ಬೆಳ್ಳಾರೆಯಲ್ಲಿ ನಾಲ್ಕು ವರ್ಷಗಳ ಕಾಲ ಇದ್ದ ಕಾರಣ ನಾನು ಅಲ್ಲಿಯವಳೆಂದು ಅನೇಕರು ಭಾವಿಸಿದ್ದಾರೆ ಅದು ಕೂಡ ನನಗೆ ಅನ್ನ ಕೊಟ್ಟ ಊರು ಸಂಶೋಧನೆ ಗೆ ಇಂಬು ಕೊಟ್ಟ ಊರು ನನಗೊಂದು ಅಸ್ತಿತ್ವ ತಂದು ಕೊಟ್ಟ ಬೀಡು ಎಂಬ ಕೃತಜ್ಞತೆ ನಮಗಿದೆಯಾದರೂ ನಾನು ಅಲ್ಲಿಯವಳಲ್ಲ  ಕೆಲವರು ಡೆಲ್ಲಿ,ಮುಂಬೈ ಮಧುರೆ ಚೆನೈ ಯಲ್ಲಿ ಓದಿದ ಕೆಲಸ ಮಾಡಿ ಕಾರಣಕ್ಕೆ ಹೊರನಾಡಿವರು ಎಂದು ಕರೆಯಲ್ಪಡುತ್ತಾರೆ ಹಾಗೆ ನೋಡಿದರೆ   ನಾನು ಅಂದ್ರ ಪ್ರದೇಶದ ಕುಮಪ್ಪಂನಲ್ಲಿರುವ ದ್ರಾವಿಡ ವಿಶ್ವ ವಿದ್ಯಾಲಯದ ತುಳು ವಿಭಾಗದ ಮೊದಲ ವಿದ್ಯಾರ್ಥಿನಿ ನಾನು ಎರಡನೇಯ ಡಾಕ್ಟರೇಟ್ ಪಡೆದದ್ದು ಅಲ್ಲಿಂದಲೇ ಆ ಬಗ್ಗೆ ಯೂ ನನಗೆ ಕೃತಜ್ಞತೆ ಇದೆಯೇ ಹೊರತು ನಾನು ಹೊರನಾಡಿನವಳು ಎಂದು ಕರೆಸಿಕೊಳ್ಳಲಾರೆ  ಹಾಗಾಗಿಯೇ ನಾನು ತುಳುನಾಡಿನವಳು ಎಂದು ಹೆಮ್ಮೆಯಿಂದ ಹೇಳುವೆ
ಇದೆಲ್ಲಾ ಯಾಕೆ ನೆನಪಾಯಿತೆಂದರೆ ನಿನ್ನೆವೇದಿಕೆಯಲ್ಲಿ  ವಸಂತಕುಮಾರ್ ಪೆರ್ಲ ಅವರು ಗಡಿನಾಡಿನ ಆರುನೂರು ಬರಹಗಾರರ ಒಂದು ಪಟ್ಟಿಯನ್ನು ಮಾಡಿದ್ದು ಪ್ರಕಟವಾಗಿರುವ ಬಗ್ಗೆ ತಿಳಿಸಿದರು (ಈ ಪಟ್ಟಿ ಯನ್ನು ಅವರು ಮಾಡಿಲ್ಲ ಯಾರು ಎಲ್ಲಿ ಪ್ರಕಟಿಸಿದ್ದು ಎಂಬ ಮಾಹಿತಿ ಅವರು ಹೇಳಿದ್ದು ನನಗೆ ಮರೆತು ಹೋಗಿದೆ)  ಪಟ್ಟಿಯಲ್ಲಿ ನಾನು ಸೇರದೆ ಇದ್ದ ಬಗ್ಗೆ ನನಗೆ ಈ ಹಿಂದೆಯೇ ಮಾಹಿತಿ ಇತ್ತು ಜೊತೆಗೆ ತುಳುನಾಡ ಬರಹಗಾರರ ಒಂದು ಪಟ್ಟಿ ಕೂಡ ಪ್ರಕಟವಾಗಿದ್ದು ಅದರಲ್ಲೂ ನಾನು ಸೇರಿಲ್ಲವಂತೆ
ಹಾಗಾಗಿ ನಾನೆಲ್ಲಿಯವಳು ಎಂದು ಕಾಡುತ್ತಿದ್ದ ಜಿಜ್ಞಾಸೆ ಇಂದು ಮತ್ತೆ ಕಾಡುತ್ತಿದೆ
(ಚಿತ್ರ -ತುಳುನಾಡಿನಲ್ಲಿ ದೈವವಾಗಿ ಆರಾಧಿಸಲ್ಪಡುವ ಕೆಳದಿ ಅರಸಿ ಚನ್ನಮ್ಮ ನ ಮಹಾ ಮಾಂಡಳಿಕನಾಗಿದ್ದ  ಕಾಸರಗೋಡು ತಿಮ್ಮಣ್ಣ ನಾಯಕನ ಕುರಿತಾದ ಕ್ಷೇತ್ರ ಕಾರ್ಯದ ಅಧ್ಯಯನ ದಲ್ಲಿ ಕುಂಬಳೆ ಕೋಟೆ ಗೆ ಬಂದಾಗಿನದು )
ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ

Sunday, 30 April 2017

ದೊಡ್ಡವರ ದಾರಿ 13 - ಭೂಷಣ್ ಗುಲಾಬ್ ಬೋರಸೆ - ಡಾ ಲಕ್ಷ್ಮೀ ಜಿ ಪ್ರಸಾದ

ದೊಡ್ಡವರ ದಾರಿ- ಮಂಗಳೂರಿನ ಎಸ್ ಪಿ ಯಾಗಿರುವ ಐ ಪಿಎಸ್ ಅಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ
- ©ಡಾ ಲಕ್ಷ್ಮೀ ಜಿ ಪ್ರಸಾದ
ನಿನ್ನೆ ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ದಕ್ಷ ಸಹೃದಯಿ ಪೋಲಿಸ್ ಅಧಿಕಾರಿ ರವಿ ಚೆನ್ನಣ್ಣನವರ್ ಸಂದರ್ಶನ ವೀಕ್ಷಿಸುತ್ತಾ ಇದ್ದೆ.
ಮಾತಿನ ನಡುವೆ ಅವರು " ಪೋಲೀಸ್ ಎಂದರೆ ಭಯವಲ್ಲ ಭರವಸೆ" ಎಂಬ ಮಾತು ಹೇಳಿದಾಗ ನನಗೆ ತಕ್ಷಣವೇ ನೆನಪಿಗೆ ಬಂದ ಕಣ್ಣಿಗೆ ಕಟ್ಟಿದ ವ್ಯಕ್ತಿ ಮಂಗಳೂರಿನ ಎಸ್ ಪಿ ಗುಲಾಬ್ ರಾವ್ ಭೂಷಣ ಅವರು .ರವಿ ಚನ್ನಣ್ಣನವರ್ ಈ ಮಾತು ಹೇಳಿದಾಗ ನನ್ನ ಪಕ್ಕದಲ್ಲೇ ಕುಳಿತಿದ್ದ ಮಗ ಅರವಿಂದ ಇದೆಲ್ಲಾ ಬಾಯಲ್ಲಿ ಹೇಳುತ್ತಾರೆ ಕೇಳಲು ಚೆನ್ನಾಗಿದೆ ಆದರೆ ಪೋಲಿಸ್ ರು ಹಾಗಿದ್ದಾರ ಅಮ್ಮ ? ಎಂದು ಕೇಳಿದ .
ಹೌದು ,ಬೆಳ್ಳಾರೆಯಲ್ಲಿದ್ದಾಗ ನನಗೆ ಕಿರುಕಳ  ನೀಡಿದ ಪ್ರಿನ್ಸಿಪಾಲ್ ಸುಬ್ರಾಯ ಗೌಡ( ಯುಸುಗೌ) ಮತ್ತು ಕೆಲವು ಸಹೋದ್ಯೋಗಿಗಳ ಮೇಲೆ ಸುಳ್ಯ  ಪೋಲೀಸ್ ಸ್ಟೇಷನ್ ನಲ್ಲಿ ದೂರು ನೀಡಿದಾಗ ನಮಗಾದ ಕಹಿ ಅನುಭವವೇ ಮಗನಿಂದ ಆ ರೀತಿಯ ಋಣಾತ್ಮಕ ಮಾತನ್ನು ಹೇಳಿಸಿತ್ತು ಎಂಬುದು ನನಗೆ ಅರ್ಥವಾಯಿತು.
ತಕ್ಷಣವೇ ನಾನು ಹೇಳಿದೆ ಒಬ್ಬಿಬ್ಬರು ಮಾಡುವ ತಪ್ಪಿಗೆ ಇಡೀ ಇಲಾಖೆಯನ್ನು ನಾವು ದೂಷಿಸಬಾರದು ಅರವಿಂದ್.
ನಮಗೆ ಅಲ್ಲಿ ಬೆಂಬಲ ನೀಡಿದ ಸರ್ಕಲ್ ಇನ್ಸ್ಪೆಕ್ಟರ್ ಸತೀಶ್ ಅವರನ್ನು ನಾವು ಮರೆಯಲಾದೀತೆ ?
ನಡುರಾತ್ರಿ ನಡೆಸುವ ಭೂತ ಕೋಲವನ್ನು ರೆಕಾರ್ಡ್ ಮಾಡಲು ಕೆಮೆರಾ ಹಿಡಿದುಕೊಂಡು ಹಳ್ಳಿಯ ಮೂಲೆ ಮೂಲೆಗಳಿಗೆ ಜಾತಿ ಧರ್ಮ ಗಳ ಹಂಗಿಲ್ಲದೆ ಹೋಗುವ ನನ್ನಂಥ ಸ್ತ್ರೀ ಯನ್ನು ಸಮಾಜದಲ್ಲಿ ಬಹಿರಂಗವಾಗಿ ಸೊಸೆ ಎಂದು ಒಪ್ಪಲು ಯಾವ ಕುಟುಂಬ ಸಿದ್ಧವಿರುತ್ತದೆ ? ಹಾಗಾಗಿಯೇ ಮನೆ ಮಂದಿಯ ಕುಟುಂಬದ ಜಾತಿ ಬಾಂಧವರ ತೀವ್ರ ವಿರೊಧದ ನಡುವೆಯೇ ಬೆಳ್ಳಾರೆಯ ಸರಕಾರಿ ಕಾಲೇಜಿಗೆ ಪಿಯು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಬಂದಾಗ ಸಮಸ್ಯೆಗಳನ್ನು ಏಕಾಂಗಿಯಾಗಿ ಎದುರಿಸಬೇಕಾಯಿತು. ಆಗಿನ್ನೂ ಅರವಿಂದ ಆರನೆಯ ತರಗತಿಯಲ್ಲಿ ಓದುವ ಹನ್ನೊಂದು ವರ್ಷದ ಎಳೆಯ ಹುಡುಗ ಹಾಗಿದ್ದರೂ ನಾನು ಎದುರಿಸುವ ಸಮಸ್ಯೆ ಗಳ ಅರಿವು ಅವನಿಗೂ ಇದ್ದಿತ್ತು.ಏಕಾಂಗಿಯಾಗಿ ಕ್ಷೇತ್ರ ಕಾರ್ಯ ಆಧಾರಿತ ಭೂತಾರಾಧನೆಯನ್ನು ಕುರಿತಾದ ಸಂಶೋಧನೆಗಾಗಿ ನಾನು ಹೊರಟಾಗ ಎದುರಿಸಿದ ಸಮಸ್ಯೆಗಳು ನೂರಾರು .ಪೂರ್ಣ ಬೆಂಬಲ ಪ್ರಸಾದ್ ( ನನ್ನ ಜೀವನ ಸಂಗಾತಿ) ಕಡೆಯಿಂದ ಇದ್ದಿತಾದರೂಅವರಿದ್ದುದು ದೂರದ ಬೆಂಗಳೂನಲ್ಲಿ .
ಸಮಸ್ಯೆಗಳು ತೀವ್ರವಾಗಿ ಕಾಡಿದಾಗ ಬದುಕು ಅಸಹನೀಯ ವೆಂದಾದಾಗನಾನು ಸ್ಥಳೀಯ ಪೋಲಿಸ್ ರ ಸಹಾಯ ಪಡೆಯಲು ಯತ್ನಿಸಿದ್ದೆನಾದರೂ ಸ್ಥಳೀಯ ಬಲಿಷ್ಠ ರ ವಿರುದ್ಧ  ಹೋರಾಟ ಸುಲಭದ್ದಾಗಿರಲಿಲ್ಲ ಪೋಲಿಸ್ ರ ಸಹಾಯ ಸಿಕ್ಕಿರಲಿಲ್ಲ
ಅಂತೂ ಅನೇಕ ಸಮಸ್ಯೆಗಳ ನಡುವೆಯೂ ಬದುಕಿನಲ್ಲಿ ಗೆದ್ದೆ, ಇನ್ನೇನು ಕೆಲವು ದಿನಗಳಲ್ಲಿ ಬೆಂಗಳೂರಿಗೆ ಟ್ರಾನ್ಸ್‌ಫರ್ ಸಿಕ್ಕಿ ಪ್ರಸಾದ ಮತ್ತು ಮಗನೊಂದಿಗೆ ನೆಮ್ಮದಿಯ ಬದುಕು ಕಾಣುವೆನೆಂಬ ಸಂತಸಲ್ಲಿದ್ದಾಗಲೇ ಎದುರಾದದ್ದು ನನ್ನ ಹಿರಿಯ ಅಧಿಕಾರಿ ಪ್ರಿನ್ಸಿಪಾಲ್ ಆಗಿ  ಬೆಳ್ಳಾರೆಯ ಸರ್ಕಾರಿ ಕಾಲೇಜಿಗೆ ಬಂದ ಸುಬ್ರಾಯ ಗೌಡ ಮತ್ತು ಅವರ ಕೃಪಾ ಕಟಾಕ್ಷಕ್ಕಾಗಿ ಕಾರಣವಿಲ್ಲದೆ ಕಿರಿಕುಳ ನೀಡಿದ ಕಿರಿಯ ಸಹೋದ್ಯೋಗಿಗಳ ನಿರಂತರ ಕಿರುಕುಳ. ಇಲಾಖೆಯ ಹಿರಿಯಧಿಕಾರಿಗಳಿಗೆ ಹೇಳಿದರೆ ಪ್ರಿನ್ಸಿಪಾಲ್ ಬೆಂಬಲಕ್ಕೆ ನಿಂತ ಸ್ಥಳೀಯ ರಾಜಕಾರಣಿಗಳ ಒತ್ತಡಕ್ಕೆ ಸಿಲುಕಿದ ಅವರು ನಾನು ಕೊಟ್ಟ ದೂರಿನ ಬಗ್ಗೆ ವಿಚಾರಣೆ ನಡೆಸಲು ಬರುವುದಕ್ಕೇ ಹಿಂಜರಿದಾಗ ನನಗೇನು ಮಾಡಬೇಕೆಂದು ತಿಳಿಯದೆ ಕಂಗಾಲಾದೆ.ಇಷ್ಟಕ್ಕೂ ನನ್ನದೇನು ತಪ್ಪಿರಲಿಲ್ಲ
ನನಗೆ ಡಾಕ್ಟರೇಟ್ ಬಂದಾಗ ,ನನಗೆ ಉತ್ತಮ ಶಿಕ್ಷಕಿ ಪ್ರಶಸ್ತಿ ಬಂದಾಗ ಅಭಿನಂದಿಸ ಹೊಟ ಆಗಿನ ಬೆಳ್ಳಾರೆಯ ಪ್ರಿನ್ಸಿಪಾಲ್ ಅಭಿಪ್ರಾಯ ವನ್ನು ನನ್ನ ಸಹೋದ್ಯೋಗಿಗಳು ಈ ಹಿಂದೆ ಪ್ರಶಸ್ತಿ ಪುರಸ್ಕಾರ ಪಡೆದವರನ್ನು ಅಭಿನಂದನೆ ಮಾಡಿಲ್ಲ ಹಾಗಿರುವಾಗ ಈಗ ಮಾಡುವುದು ಸರಿಯಲ್ಲ ಇನ್ನೂ ಮುಂದೆಯೂ ಯಾರಿಗೂ ಕಾಲೇಜಿನಲ್ಲಿ ಅಭಿನಂದನೆ ಮಾಡಬಾರದು ಎಂದು ಸಹೋದ್ಯೋಗಿಗಳು ವಾದಿಸಿದ್ದರು.ಆ ಬಗ್ಗೆ ಯೂ ನಾನೇನು ಪ್ರತಿಕ್ರಿಯೆ ನೀಡಿರಲಿಲ್ಲ ಇಷ್ಟಕ್ಕೂ ಯಾರಿಂದಲೂ ಸನ್ಮಾನ ಮನ್ನಣೆ ಪಡೆಯುವುದಕ್ಕಾಗಿ ನಾನು ಡಾಕ್ಟರೇಟ್ ಪದವಿ ಪಡೆದಿರಲಿಲ್ಲ ನಾನು ನನ್ನ ಸಂತೋಷಕ್ಕಾಗಿ ಮಾಡಿದ್ದೆ .ಇನ್ನೂ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆಯುವುದಕ್ಕಾಗಿ ಚೆನ್ನಾಗಿ ಪಾಠ ಮಾಡಿದ್ದಲ್ಲ ನಾನು ಪಾಠ ಮಾಡುವ ಶೈಲಿಯೇ ಹಾಗೆ ನನಗೂ ಸ್ವತಃ ಸಾಹಿತ್ಯ ರಚನೆ ನಾಟಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಇದ್ದ ಕಾರಣ ವಿದ್ಯಾರ್ಥಿಗಳಿಂದಲೂ ಅದನ್ನು ಮಾಡಿಸಿದ್ದೆ ಅಷ್ಟೇ. ಇದನ್ನು ಗುರುತಿಸಿ ಪ್ರಶಸ್ತಿ ಬಂದಿತ್ತೇ ಹೊರತು ನಾನು ಅರ್ಜಿ ಕೂಡ ಹಾಕಿರಲಿಲ್ಲ
ಹಾಗಾಗಿ ಆ ಬಗ್ಗೆ ಅಭಿನಂದನೆ ಮಾಡದೆ ಇದ್ದದ್ದು ನನಗೇನು ಅಷ್ಟು ದೊಡ್ಡ ವಿಷಯವಾಗಿ ಕಂಡಿರಲಿಲ್ಲ.
ಆದರೆ ನನಗೆ ಎರಡುಬಾರಿ ಭಾರಿ ಅವಾರ್ಡ್ ಬಂದಾಗಲೂ ಅದನ್ನು ಗುರುತಿಸದೆ ಕಾಲೇಜು ವರದಿಯಲ್ಲಿ ಕೂಡ ಸೇರಿಸದೆ ನನ್ನ ನಂತರ ನನ್ನಂತೆ ಅವಾರ್ಡ್ ಪಡೆದ ಸಹೋದ್ಯೋಗಿ ಗಳಾದ ಪ್ರಭಾಕರ ಗೌಡ ಕಿರಿಭಾಗರಿಗೆ ಪ್ರಶಸ್ತಿ ಬಂದಾಗ ಅವರನ್ನು ಕಾಲೇಜು ವತಿಯಿಂದ ಭಾರೀ ವಿಜೃಂಭಣೆಯಿಂದ ಅಭಿನಂದನೆ ಮಾಡಿದಾಗ ಕೂಡ ನನಗೆ ಅಸೂಯೆಯಾಗಲಿಲ್ಲ ಆದರೆ ಈ ಲಿಂಗ ತಾರತಮ್ಯ ಮಾತ್ರ ತಪ್ಪು ಎನಿಸಿ ತಾರತಮ್ಯ ಸರಿಯಲ್ಲ ಎಂದು ನನ್ನ ಅಭಿಪ್ರಾಯ ಹೇಳಿದ್ದೆ ಅಷ್ಟೇ, ಆಗಷ್ಟೇ ಪ್ರಿನ್ಸಿಪಾಲ್ ಪದೋನ್ನತಿ ಪಡೆದು ಬಂದ ಪ್ರಿನ್ಸಿಪಾಲ್ ಸುಬ್ರಾಯ ಗೌಡರಿಗೆ ಇದು ಬಹಳ ಉಡಾಫೆ ಎನಿಸಿತು ಪ್ರಿನ್ಸಿಪಾಲ್ ನಡೆಯನ್ನು ಸರಿಯಲ್ಲ ಎಂದ ನನ್ನ ಬಗ್ಗೆ ತೀವ್ರ ದ್ವೇಷ ಸಾಧಿಸಿದ ಅವರು ತೀವ್ರ ಸ್ವರೂಪದ ಕಿರುಕುಳ ನೀಡಿದಾಗ ಅವರೊಂದಿಗೆ ಕೆಲವು ಸಹೋದ್ಯೋಗಿಗಳು ಸೇರಿ ಕಿರುಕುಳ ನೀಡಿದಾಗ ಬದುಕಲು ಅಸಾಧ್ಯವೆನಿಸಿ ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ಸತೀಶ ಅವರಲ್ಲಿ ನನ್ನ ಸಮಸ್ಯೆ ಹೇಳಿದೆ ಸ್ಥಳೀಯ ರಾಗಿರುವ ರಾಜಕೀಯ ಬೆಂಬಲವಿರುವ ಪ್ರಿನ್ಸಿಪಾಲ್ ವಿರುಧ್ದ ದೂರು ನೀಡಲೂ ನನಗೆ ಧೈರ್ಯ ಇರಲಿಲ್ಲ .ಇನ್ಸ್ಪೆಕ್ಟರ್ ಸತೀಶ ಅವರನ್ನು ಕಂಡು ಮಾತನಾಡಿದಾಗ ಅವರ ಸೌಜನ್ಯ ಪೂರ್ವ ಕ ನಡವಳಿಕೆ ದೂರು ಕೊಡುವ ಧೈರ್ಯ ನೀಡಿತು ದೂರು ನೀಡಿ ಬಂದ ತಕ್ಷಣವೇ ಅವರಿಗೆ ಎಂ ಎಲ್ ಎ ಎಂ ಪಿಗಳಿಂದ ಕರೆ ಬಂದುದು ನನಗೆ ತಿಳಿದಿತ್ತು ಆದರೂ ಅವರು ಯಾರ ಒತ್ತಡಕ್ಕೂ ಭಾಗದೆ ಸಬ್ ಇನ್ಸ್ಪೆಕ್ಟರ್ ಅವರಲ್ಲಿ ನಾನು ನೀಡಿದ ದೂರಿನ ಬಗ್ಗೆ ವಿಚಾರಣೆ ಮಾಡಿ ಸಬ್ ಇನ್ಸ್ಪೆಕ್ಟರ್ ಅವರಿಗೆ ಹೇಳಿ ಎಫ್ ಐ ಆರ್ ಮಾಡಿದರು .
ಸಾಕಷ್ಟು ವಿಚಾರಣೆ ನಡೆಯಿತು ನನ್ನ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ನನ್ನ ಪರ ಸಾಕ್ಷಿ ನೀಡಿದ್ದರು
.ಆದರೂ ತಮ್ಮ ಜಾತಿಯ ವಿದ್ಯಾರ್ಥಿಗಳ ಮನಸಿಗೆ ಕಲ್ಮಷ ತುಂಬಿ ಅವರನ್ನು ನನಗೆ ಎದುರು ನಿಲ್ಲಿಸಿ ಶಸ್ತ್ರ ದಂತೆ ಬಳಸಲು ಯತ್ನ ಮಾಡಿದರಾದರೂ ದೊಡ್ಡ ಪ್ರಯೋಜನವೇನೂ ಅವರ ಆಗಲಿಲ್ಲ ನಂತರದ   ಕೆಲವು ದಿನಗಳಲ್ಲಿ ನಾನು ನೆಲಮಂಗಲ ಕ್ಕೆ ವರ್ಗಾವಣೆ ಪಡೆದು ಬಂದೆ.
ನಾನು ಕೊಟ್ಟ ದೂರಿನ ವಿಚಾರಣೆ ನಡೆಸಿ ಪ್ರಿನ್ಸಿಪಾಲ್ ಮತ್ತು ಆರು ಜನ ಸಹೋದ್ಯೋಗಿಗಳ ಮೇಲೆ ಕೇಸ್ ದಾಖಲಿಸಲು ನಮ್ಮ ಪಿಯು ಇಲಾಖೆಯ ಮೇಲಧಿಕಾರಿಗಳ ಅನುಮತಿ ಗಾಗಿ ಪತ್ರ ಬರೆದರು.ಮತ್ತೆ ರಾಜಕೀಯ ಒತ್ತಡದ ಪ್ರಭಾವ, ಇಂದಿಗೂ ಇಲಾಖೆ ಪ್ರಿನ್ಸಿಪಾಲ್ ವಿರುದ್ಧ ಕೇಸ್ ದಾಖಲಿಸಲು ಪೋಲಿಸ್ ರು ಬರೆದ ಪತ್ರಕ್ಕೆ ಉತ್ತರಿಸಿಲ್ಲ ಅನುಮತಿಯನ್ನು ನೀಡಿಲ್ಲ
ಈ ನಡುವೆ ಸಹೃದಯ ಪೋಲಿಸ್ ಸರ್ಕಲ್ ಇನ್ಸ್ಪೆಕ್ಟರ್ ಸತೀಶ ಅವರಿಗೆ ವರ್ಗವಾಯಿತು ಈ ಸಮಯ ನೋಡಿ ರಾಜಕೀಯ ಪ್ರಭಾವ ಬಳಸಿ ನಾನು ನೀಡಿದ ದೂರಿಗೆ ಬಿ ರಿಪೋರ್ಟ್ ಆಗುವಂತೆ ಮಾಡಿದರು .
ಈ ಸಂದರ್ಭದಲ್ಲಿ ನಾನು ತುಸು ಎಡವಿದೆ ದುಡುಕಿ ಆತ್ಮ ಹತ್ಯೆಗೆ ಯತ್ನಿಸಿದೆ . ಈ ಬಗ್ಗೆ ಆತ್ಮಹತ್ಯೆ ಗೆ ಯತ್ನಿಸಿ ಎಚ್ಚರ ತಪ್ಪುತ್ತಾ ಇರುವ ಹಂತದಲ್ಲಿ ನಾನು ಪೇಸ್ ಬುಕ್ ಮತ್ತು ವಾಟ್ಸಪ್ ಗಳಲ್ಲಿ ನನ್ನ ಸಾವಿಗೆ ಕಾರಣರಾದವರ ಬಗ್ಗೆ ಸ್ಟೇಟಸ್  ಹಾಕಿದ್ದೆ .ಇದು ಕ್ಷಣ ಮಾತ್ರದಲ್ಲಿ ಹರಡಿ ನನ್ನ ಬೆಂಬಲ ಕ್ಕೆ ನಿಂತವರು ನನ್ನ ಪ್ರಾಣ ರಕ್ಷಣೆ ಮಾಡಿದವರು ನನ್ನ ಪೇಸ್ ಬುಕ್ ಸ್ನೇಹಿತರ ವಾಟ್ಸಪ್ ಸ್ನೇಹಿತರ ಬಳಗ
ಇದನ್ನು ಮಂಗಳೂರು ಪೋಲಿಸ್ ವರಿಷ್ಠ ಅಧಿಕಾರಿ ಎಸ್ ಪಿ ಯವರಾದ ಗುಲಾಬ್ ರಾವ್ ಭೂಷಣ್ ಅವರ ಗಮನಕ್ಕೂ ತಂದರು.ತಕ್ಷಣವೇ ಪ್ರತಿಕ್ರಿಯಿಸಿದ ಅವರು ನನ್ನ ಮೊಬೈಲ್ ಗೆ ಕರೆ ಮಾಡಿದ್ದರು.ನಾನು ಆಸ್ಪತ್ರೆ ಗೆ ದಾಖಲಾಗಿ ಐಸಿಯುವಿನಲ್ಲಿದ್ದಾಗ ಬಂದ ಕರೆಯನ್ನು ಸ್ವೀಕರಿದವನು ನನ ಮಗ ಅರವಿಂದ. " ದುಡುಕಬೇಡಿ ಮರು ತನಖೆ  ಮಾಡಿಸುವೆ " ಎಂಬ ಭರವಸೆಯನ್ನು ಎಸ್ ಪಿ ಅವರು ನೀಡಿದ್ದರು   ಗುಣಮುಖಳಾದ ನಂತರ ಅವರನ್ನು ಭೇಟಿಮಾಡಲು ತಿಳಿಸಿದ್ದರು.
ನಾನು ಹುಷಾರಾಗಿ ಆಸ್ಪತ್ರೆ ಯಿಂದ ಬಂದ ವಾರದ ನಂತರ ಅವರನ್ನು ಮಂಗಳೂರಿನ ಕಚೇರಿಯಲ್ಲಿ ಅಳುಕುತ್ತಲೇ ಭೇಟಿಯಾದೆ .ನನಗೆ ಪೋಲಿಸ್ ವ್ಯವಸ್ಥೆ ಬಗ್ಗೆ ನಂಬಿಕೆ ಹೊರಟು ಹೋಗಿತ್ತು ಆದರೂ ಅವರು ಹೇಳಿದ್ದಕ್ಕಾಗಿ ಅವರನ್ನು ಭೇಟಿ ಮಾಡಿ ನನ್ನ ಸಮಸ್ಯೆಯನ್ನು ವಿವರಿಸಿದೆ ಸಹೃದಯಿ ಯಾದ ಅವರು ನನ್ನ ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸಿ ಅರ್ಥಮಾಡಿಕೊಂಡರು .ನನಗೆ ಬದುಕುವ ಧೈರ್ಯ ತುಂಬಿದರು .ನಂತರ ಇನ್ನೊಮ್ಮೆ ೆ  ಬೇಟಿಯಾದಾಗ ನನ್ನ  ಮುಂದಿನ ಪುಸ್ತಕ ಬಿಡುಗಡೆ ಯಾವಾಗ ಎಂದು ಕೇಳಿ ಮತ್ತೆ ನಾನು ಬರವಣಿಗೆ ಯಲ್ಲಿ ತೊಡಗುವಂತೆ ಪ್ರೋತ್ಸಾಹ ನೀಡಿದರು.
ಮುಂದೆ ಅವರು ನನ್ನ ದೂರಿನ ಬಗ್ಗೆ ಹೆಚ್ಚಿನ ತನಿಖೆಗೆ ಆದೇಶ ನೀಡಿದ್ದು ಮತ್ತೆ ವಿಚಾರಣೆ ನಡೆಸಿದ ಇಲಾಖೆಯ ಸಬ್ ಇನ್ಸ್ಪೆಕ್ಟರ್  ಮತ್ತೆ ಪ್ರಿನ್ಸಿಪಾಲ್ ಮೇಲೆ ಕೇಸ್ ದಾಖಲಿಸಲು ನಮ್ಮ ಇಲಾಖೆಯ ಅನುಮತಿ ಕೇಳಿ ಪತ್ರ ಬರೆದಿದ್ದಾರೆ ಅದಕ್ಕೂ ಇನ್ನೂ ಉತ್ತರ ಬಂದಿಲ್ಲ
ಈ ನಡುವೆ ಪ್ರಿನ್ಸಿಪಾಲ್ ಹೈ ಕೋರ್ಟ್ ಗೆ ಕ್ರಿಮಿನಲ್ ರಿಟ್ ಪಿಟಿ಼ಶನ್ ಸಲ್ಲಿಸಿ ಪೋಲೀಸರು ಹಾಕಿದ ಎಫ್ ಐ ಆರ್ ಅನ್ನು ರದ್ದು ಪಡಿಸಲು ಕೇಳಿದ್ದಾರೆೆ ಮತ್ತೆ ನಾನು‌ ಮತ್ತೆ ಕಾನೂನು ಹೋರಾಟ ಮುಂದವರಿಸುವೆ
ಅದು ಏನಾದರೂ ಆಗಲಿ ಯಾವುದೇ ಒತ್ತಡಕ್ಕೆ ಮಣಿಯದೆ ನನ್ನ ಸಮಸ್ಯೆ ಅರ್ಥ ಮಾಡಿಕೊಂಡ ಎಸ್ ಪಿ ಗುಲಾಬ್ ರಾವ್ ಭೂಷಣ್ ಅವರ ಸಹೃದಯತೆಯನ್ನು ನಾನೆಂದಿಗೂ ಮರೆಯಲಾರೆ
ದೊಡ್ಡವರು ದೊಡ್ಡವರಾಗದೆ ಇದ್ದರೆ ಸಣ್ಣವರ ಬದುಕು ಅಸಹನೀಯವಾಗುತ್ತದೆ ಆದರೆ ದೊಡ್ಡವರಾದ ಎಸ್ ಪಿ ಯವರು ದೊಡ್ಡವರಾಗಿಯೇ ವರ್ತಿಸಿ ನನಗೆ ಬದುಕಿನಲ್ಲಿ ಭರವಸೆ ತುಂಬಿದ್ದಾರೆ.
ನಾನು ಈ ಬಗ್ಗೆ ಬರೆಯಬೇಕು ಎಂದು ಕೊಂಡಿದ್ದೆ ಆದರೂ ಕೇಸ್ ನಡೆಯುತ್ತಿರುವಾಗ ಬೇಡ ಎನಿಸಿ ಸುಮ್ಮನಾಗಿದ್ದೆ ಆದರೆ ನಿನ್ನೆ ಇವರಂತೆಯೇ ಸಹೃದಯ ದಕ್ಷ ಅಧಿಕಾರಿ ರವಿ ಚೆನ್ನಣ್ಣನವರ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ದ ಸಂದರ್ಶನದಲ್ಲಿ " ಪೋಲಿಸ್ ಎಂದರೆ ಭಯವಲ್ಲ ಭರವಸೆ' ಎಂದು ಹೇಳಿದ ಮಾತಿಗೆ ಪ್ರತ್ಯಕ್ಷ ನಿದರ್ಶನ ವಾಗಿ  ಕಾಣುತ್ತಿರುವ ಎ ಮಂಗಳೂರು ಪೋಲಿಸ್ ವರಿಷ್ಠ ಅಧಿಕಾರಿ ಎಸ್ ಪಿ ಗುಲಾಬ್ ರಾವ್ ಭೂಷಣ್ ಅವರ ಬಗ್ಗೆ ಹೇಗೆ ತಾನೆ ಬರೆಯದಿರಲಿ ಹಾಗಾಗಿ ಬರೆದಿರುವೆ , ಜೊತೆಗೆ ಸ್ಥಳೀಯ ತುಳು  ಭಾಷೆ ಸಂಸ್ಕೃತಿ ಬಗ್ಗೆ ಅವರಿಗೆ ಅಪಾರ ಅಭಿಮಾನವಿದೆ ತುಳು ಭಾಷೆ ಕಲಿಸುವ ಪುಸ್ತಕ ಇದೆಯೆ ಎಂದು ನನ್ನಲ್ಲಿ ಕೇಳಿದ್ದರು ಇದೆಯಾದರೂ ನನಗೆ ಸಿಕ್ಕಿಲ್ಲ ಹಾಗಾಗಿ ಅವರಿಗೆ ತಗೊಂಡು ಹೋಗಿ ಕೊಡಲಾಗಿಲ್ಲ
 ಓದಿ ನೀವೆಲ್ಲ ಬೆಂಬಲಿಸುವಿರಿ ಎಂಬ ನಂಬಿಕೆ ಇದೆ
ಧನ್ಯವಾದಗಳು- ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ
http://shikshanaloka.blogspot.com
laxmi prasad at 21:29
Share


View my complete profile

Powered by Blogger.

Saturday, 29 April 2017

ದೊಡ್ಡವರ ದಾರಿ- ಗುಲಾಬ್ ರಾವ್ ಭೂಷಣ್

ನಿನ್ನೆ ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ದಕ್ಷ ಸಹೃದಯಿ ಪೋಲಿಸ್ ಅಧಿಕಾರಿ ರವಿ ಚೆನ್ನಣ್ಣನವರ್ ಸಂದರ್ಶನ ವೀಕ್ಷಿಸುತ್ತಾ ಇದ್ದೆ.
ಮಾತಿನ ನಡುವೆ ಅವರು " ಪೋಲೀಸ್ ಎಂದರೆ ಭಯವಲ್ಲ ಭರವಸೆ" ಎಂಬ ಮಾತು ಹೇಳಿದಾಗ ನನಗೆ ತಕ್ಷಣವೇ ನೆನಪಿಗೆ ಬಂದ ಕಣ್ಣಿಗೆ ಕಟ್ಟಿದ ವ್ಯಕ್ತಿ ಮಂಗಳೂರಿನ ಎಸ್ ಪಿ ಗುಲಾಬ್ ರಾವ್ ಭೂಷಣ ಅವರು .ರವಿ ಚನ್ನಣ್ಣನವರ್ ಈ ಮಾತು ಹೇಳಿದಾಗ ನನ್ನ ಪಕ್ಕದಲ್ಲೇ ಕುಳಿತಿದ್ದ ಮಗ ಅರವಿಂದ ಇದೆಲ್ಲಾ ಬಾಯಲ್ಲಿ ಹೇಳುತ್ತಾರೆ ಕೇಳಲು ಚೆನ್ನಾಗಿದೆ ಆದರೆ ಪೋಲಿಸ್ ರು ಹಾಗಿದ್ದಾರ ಅಮ್ಮ ? ಎಂದು ಕೇಳಿದ .
ಹೌದು ,ಬೆಳ್ಳಾರೆಯಲ್ಲಿದ್ದಾಗ ನನಗೆ ಕಿರುಕಳ  ನೀಡಿದ ಪ್ರಿನ್ಸಿಪಾಲ್ ಸುಬ್ರಾಯ ಗೌಡ( ಯುಸುಗೌ) ಮತ್ತು ಕೆಲವು ಸಹೋದ್ಯೋಗಿಗಳ ಮೇಲೆ ಸುಳ್ಯ  ಪೋಲೀಸ್ ಸ್ಟೇಷನ್ ನಲ್ಲಿ ದೂರು ನೀಡಿದಾಗ ನಮಗಾದ ಕಹಿ ಅನುಭವವೇ ಮಗನಿಂದ ಆ ರೀತಿಯ ಋಣಾತ್ಮಕ ಮಾತನ್ನು ಹೇಳಿಸಿತ್ತು ಎಂಬುದು ನನಗೆ ಅರ್ಥವಾಯಿತು.
ತಕ್ಷಣವೇ ನಾನು ಹೇಳಿದೆ ಒಬ್ಬಿಬ್ಬರು ಮಾಡುವ ತಪ್ಪಿಗೆ ಇಡೀ ಇಲಾಖೆಯನ್ನು ನಾವು ದೂಷಿಸಬಾರದು ಅರವಿಂದ್.
ನಮಗೆ ಅಲ್ಲಿ ಬೆಂಬಲ ನೀಡಿದ ಸರ್ಕಲ್ ಇನ್ಸ್ಪೆಕ್ಟರ್ ಸತೀಶ್ ಅವರನ್ನು ನಾವು ಮರೆಯಲಾದೀತೆ ?
ನಡುರಾತ್ರಿ ನಡೆತುವ ಭೂತ ಕೋಲವನ್ನು ರೆಕಾರ್ಡ್ ಮಾಡಲು ಕೆಮೆರಾ ಹಿಡಿದುಕೊಂಡು ಹಳ್ಳಿಯ ಮೂಲೆ ಮೂಲೆಗಳಿಗೆ ಜಾತಿ ಧರ್ಮ ಗಳ ಹಂಗಿಲ್ಲದೆ ಹೋಗುವ ನನ್ನಂಥ ಸ್ತ್ರೀ ಯನ್ನು ಸಮಾಜದಲ್ಲಿ ಬಹಿರಂಗವಾಗಿ ಸೊಸೆ ಎಂದು ಒಪ್ಪಲು ಯಾವ ಕುಟುಂಬ ಸಿದ್ಧವಿರುತ್ತದೆ ? ಹಾಗಾಗಿಯೇ ಮನೆ ಮಂದಿಯ ಕುಟುಂಬದ ಜಾತಿ ಬಾಂಧವರ ತೀವ್ರ ವಿರೊಧದ ನಡುವೆಯೇ ಬೆಳ್ಳಾರೆಯ ಸರಕಾರಿ ಕಾಲೇಜಿಗೆ ಪಿಯು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಬಂದಾಗ ಸಮಸ್ಯೆಗಳನ್ನು ಏಕಾಂಗಿಯಾಗಿ ಎದುರಿಸಬೇಕಾಯಿತು. ಆಗಿನ್ನೂ ಅರವಿಂದ ಆರನೆಯ ತರಗತಿಯಲ್ಲಿ ಓದುವ ಹನ್ನೊಂದು ವರ್ಷದ ಎಳೆಯ ಹುಡುಗ ಹಾಗಿದ್ದರೂ ನಾನು ಎದುರಿಸುವ ಸಮಸ್ಯೆ ಗಳ ಅರಿವು ಅವನಿಗೂ ಇದ್ದಿತ್ತು.ಏಕಾಂಗಿಯಾಗಿ ಕ್ಷೇತ್ರ ಕಾರ್ಯ ಆಧಾರಿತ ಭೂತಾರಾಧನೆಯನ್ನು ಕುರಿತಾದ ಸಂಶೋಧನೆಗಾಗಿ ನಾನು ಹೊರಟಾಗ ಎದುರಿಸಿದ ಸಮಸ್ಯೆಗಳು ನೂರಾರು .ಪೂರ್ಣ ಬೆಂಬಲ ಪ್ರಸಾದ್ ( ನನ್ನ ಜೀವನ ಸಂಗಾತಿ) ಕಡೆಯಿಂದ ಇದ್ದಿತಾದರೂಅವರಿದ್ದುದು ದೂರದ ಬೆಂಗಳೂನಲ್ಲಿ .
ಸಮಸ್ಯೆಗಳು ತೀವ್ರವಾಗಿ ಕಾಡಿದಾಗ ಬದುಕು ಅಸಹನೀಯ ವೆಂದಾದಾಗನಾನು ಸ್ತಳೀಯ ಪೋಲಿಸ್ ರ ಸಹಾಯ ಪಡೆಯಲು ಯತ್ನಿಸಿದ್ದೆನಾದರೂ ಸ್ತಳೀಯ ಬಲಿಷ್ಠ ರ ವಿರುದ್ಧ  ಹೋರಾಟ ಸುಲಭದ್ದಾಗಿರಲಿಲ್ಲ ಪೋಲಿಸ್ ರ ಸಹಾಯ ಸಿಕ್ಕಿರಲಿಲ್ಲ
ಅಂತೂ ಅನೇಕ ಸಮಸ್ಯೆಗಳ ನಡುವೆಯೂ ಬದುಕಿನಲ್ಲಿ ಗೆ್ದೆ ಇನ್ನೇನು ಕೆಲವು ದಿನಗಳಲ್ಲಿ ಬೆಂಗಳೂರಿಗೆ ಟ್ರಾನ್ಸ್‌ಫರ್ ಸಿಕ್ಕಿ ಪ್ರಸಾದ ಮತ್ತು ಮಗನೊಂದಿಗೆ ನೆಮ್ಮದಿಯ ಬದುಕು ಕಾಣುವೆನೆಂಬ ಸಂತಶಲ್ಲಿದ್ದಾಗಲೇ ಎದುರಾದದ್ದು ನನ್ನ ಹಿರಿಯ ಅಧಿಕಾರಿ ಪ್ರಿನ್ಸಿಪಾಲ್ ಆಗಿ  ಬೆಳ್ಳಾರೆಯ ಸರ್ಕಾರಿ ಕಾಲೇಜಿಗೆ ಬಂದ ಸುಬ್ರಾಯ ಗೌಡ ಮತ್ತು ಅವರ ಕೃಪಾ ಕಟಾಕ್ಷಕ್ಕಾಗಿ ಕಾರಣವಿಲ್ಲದೆ ಕಿರಿಕುಳ ನೀಡಿದ ಕಿರಿಯ ಸಹೋ್ಯೋಗಿಗಳ ನಿರಂತರ ಕಿರುಕುಳ. ಇಲಾಖಡಯ ಹಿರಿಯಧಿಕಾರಿಗಳಿಗೆ ಹೇಳಿದರೆ ಪ್ರಿನ್ಸಿಪಾಲ್ ಬೆಂಬಲಕ್ಕೆ ನಿಂತ ಸ್ಥಳೀಯ ರಾಜಕಾರಣಗಳ ಒತ್ತಡಕ್ಕೆ ಸಿಲುಕಿದ ಅವರು ನಾನು ಕೊಟ್ಟ ದೂರಿನ ಬಗ್ಗೆ ವಿಚಾರಣೆ ನಡೆಸಲು ಬರುವುದಕ್ಕೇ ಹಿಂಜರಿದಾಗ ನನಗೇನು ಮಾಡಬೇಕೆಂದು ತಿಳಿಯದೆ ಕಂಗಾಲಾದೆ.ಇಷ್ಟಕ್ಕೂ ನನ್ನದೇನು ತಪ್ಪಿರಲಿಲ್ಲ
ನನಗೆ ಡಾಕ್ಟರೇಟ್ ಬಂದಾಗ ,ನನಗೆ ಉತ್ತಮ ಶಿಕ್ಷಕಿ ಪ್ರಶಸ್ತಿ ಬಂದಾಗ ಅಭಿನಂದಿಸ ಹೊಟ ಆಗಿನ ಬೆಳ್ಳಾರೆಯ ಪ್ರಿನ್ಸಿಪಾಲ್ ಅಭಿಪ್ರಾಯ ವನ್ನು ನನ್ನ ಸಹೋದ್ಯೋಗಿಗಳು ಈ ಹಿಂದೆ ಪ್ರಶಸ್ತಿ ಪುರಸ್ಕಾರ ಪಡೆದವರನ್ನು ಅಭಿನಂದನೆ ಮಾಡಿಲ್ಲ ಹಾಗಿರುವಾಗ ಈಗ ಮಾಡುವುದು ಸರಿಯಲ್ಲ ಇನ್ನೂ ಮುಂದೆಯೂ ಯಾರಿಗೂಕಲೇಜಿನಲ್ಲಿ ಅಭಿನಂದನೆ ಮಾಡಬಾರದು ಎಂದು ಸಹೋದ್ಯೋಗಿಗಳು ವಾದಿಸಿದ್ದರು.ಆ ಬಗ್ಗೆ ಯೂ ನಾನೇನು ಪ್ರತಿಕ್ರಿಯೆ ನೀಡಿರಲಿಲ್ಲ ಇಷ್ಟಕ್ಕೂ ಯಾರಿಇಂದಲೂ ಸನ್ಮಾನ ಮನ್ನಣೆ ಪಡೆಯುವುದಕ್ಕಾಗಿ ನಾನು ಡಾಕ್ಟರೇಟ್ ಪದವಿ ಪಡೆದಿರಲಿಲ್ಲ ನಾನು ನನ್ನ ಸಂತೋಷಕ್ಕಾಗಿ ಮಾಡಿದ್ದೆ .ಇನ್ನೂ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆಯುವುದಕ್ಕಾಗಿ ಚೆನ್ನಾಗಿ ಪಾಠ ಮಾಡಿದ್ದಲ್ಲ ನಾನು ಪಾಠ ಮಾಡುವ ಶೈಲಿಯೇ ಹಾಗೆ ನನಗೂ ಸ್ವತಃ ಸಾಹಿತ್ಯ ರಚನೆ ನಾಟಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಇದ್ದ ಕಾರಣ ವಿದ್ಯಾರ್ಥಿಗಳಿಂದಲೂ ಅದನ್ನು ಮಾಡಿಸಿದ್ದೆ ಅಷ್ಟೇ. ಇದನ್ನು ಗುರುತಿಸಿ ಪ್ರಶಸ್ತಿ ಬಂದಿತ್ತೇ ಹೊರತು ನಾನು ಅರ್ಜಿ ಕೂಡ ಹಾಕಿರಲಿಲ್ಲ
ಹಾಗಾಗಿ ಆ ಬಗ್ಗೆ ಅಭಿನಂದನೆ ಮಾಡದೆ ಇದ್ದದ್ದು ನನಗೇನು ಅಷ್ಟು ದೊಡ್ಡ ವಿಷಯವಾಗಿ ಕಂಡಿರಲಿಲ್ಲ.
ಆದರೆ ನನಗೆ ಎರಡುಬಾರಿ ಭಾರಿ ಅವಾರ್ಡ್ ಬಂದಾಗಲೂ ಅದನ್ನು ಗುರುತಿಸದೆ ಕಾಲೇಜು ವರದಿಯಲ್ಲಿ ಕೂಡ ಸೇರಿಸದೆ ನನ್ನ ನಂತರ ನನ್ನಂತೆ ಅವಾರ್ಡ್ ಪಡೆದ ಸಹೋದ್ಯೋಗಿ ಗಳಾದ ಪ್ರಭಾಕರ ಗೌಡ ಕಿಎರಿಭಾಗರಿಗೆ ಪ್ರಶಸ್ತಿ ಬಂದಾಗ ಅವರನ್ನು ಕಾಲೇಜು ವತಿಯಿಂದ ಭಾರೀ ವಿಜೃಂಭಣೆಯಿಂದ ಅಭಿನಂದನೆ ಮಾಡಿದಾಗ ಕೂಡ ನನಗೆ ಅಸೂಯೆಯಾಗಲಿಲ್ಲ ಆದರೆ ಈ ಲಿಂಗ ತಾರತಮ್ಯ ಮಾತ್ರ ತಪ್ಪು ಎನಿಸಿ ತಾರತಮ್ಯ ಸರಿಯಲ್ಲ ಎಂದು ನನ್ನ ಅಭಿಪ್ರಾಯ ಹೇಳಿದ್ದೆ ಅಷ್ಟೇ, ಆಗಷ್ಟೇ ಪ್ರಿನ್ಸಿಪಾಲ್ ಪದೋನ್ನತಿ ಪಡೆದು ಬಂದ ಪ್ರಿನ್ಸಿಪಾಲ್ ಸುಬ್ರಾಯ ಗೌಡರಿಗೆ ಇದು ಬಹಳ ಉಡಾಫೆ ಎನಿಸಿತು ಪ್ರಿನ್ಸಿಪಾಲ್ ನಡೆಯನ್ನು ಸರಿಯಲ್ಲ ಎಂದ ನನ್ನ ಬಗ್ಗೆ ತೀವ್ರ ದ್ವೇಷ ಸಾಧಿಸಿದ ಅವರು ತೀವ್ರ ಸ್ವರೂಪದ ಕಿರುಕುಳ ನೀಡಿದಾಗ ಅವರೊಂದಿಗೆ ಕೆಲವು ಸಹೋದ್ಯೋಗಿಗಳು ಸೇರಿ ಕಿರುಕುಳ ನೀಡಿದಾಗ ಬದುಕಲು ಅಸಾಧ್ಯವೆನಿಸಿ ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ಸತೀಶ ಅವರಲ್ಲಿ ನನ್ನ ಸಮಸ್ಯೆ ಹೇಳಿದೆ ಸ್ಥಳೀಯ ರಾಗಿರುವ ರಾಜಕೀಯ ಬೆಂಬಲವಿರುವ ಪ್ರಿನ್ಸಿಪಾಲ್ ವಿರುಧ್ದ ದೂರು ನೀಡಲೂ ನನಗೆ ಧೈರ್ಯ ಇರಲಿಲ್ಲ .ಇನ್ಸ್ಪೆಕ್ಟರ್ ಸತೀಶ ಅವರನ್ನು ಕಂಡು ಮಾತನಾಡಿದಾಗ ಅವರ ಸೌಜನ್ಯ ಪೂರ್ವ ಕ ನಡವಳಿಕೆ ದೂರು ಕೊಡುವ ಧೈರ್ಯ ನೀಡಿತು ದೂರು ನೀಡಿ ಬಂದ ತಕ್ಷಣವೇ ಅವರಿಗೆ ಎಂ ಎಲ್ ಎ ಎಂ ಪಿಗಳಿಂದ ಕರೆ ಬಂದುದದು ನನಗೆ ತಿಳಿದಿತ್ತು ಆದರೂ ಅವರು ಯಾರ ಒತ್ತಡಕ್ಕೂ ಭಾಗದೆ ಸಬ್ ಇನ್ಸ್ಪೆಕ್ಟರ್ ಅವರಲ್ಲಿ ನಾನು ನೀಡಿದ ದೂರಿನ ಬಗ್ಗೆ ವಿಚಾರಣೆ ಮಾಡಿ ಸಬ್ ಇನ್ಸ್ಪೆಕ್ಟರ್ ಅವರಿಗೆ ಹೇಳಿ ಎಫ್ ಐ ಆರ್ ಮಾಡಿದರು .
ಸಾಕಷ್ಟು ವಿಚಾರಣೆ ನಡೆಯಿತು ನನ್ನ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ನನ್ನ ಪರ ಸಾಕ್ಷಿ ನೀಡಿದ್ದರು
.ಆದರೂ ತಮ್ಇಮ ಜಾತಿಯ ವಿದ್ಯಾರ್ಥಿಗಳ ಮನಸಿಗೆ ಕಲ್ಮಷ ತುಂಬಿ ಅವರನ್ನು ನನಗೆ ಎದುರು ನಿಲ್ಲಿಸಿ ಶಸ್ತ್ರ ದಂತೆ ಬಳಸಲು ಯತ್ನ ಮಾಡಿದರಾದರೂ ದೊಡ್ಡ ಪ್ರಯೋಜನವೇನೂ ಅವರಿಗಾಗಲಿಲ್ಲ  ಕೆಲವು ದಿನಗಳಲ್ಲಿ ನಾನು ನೆಲಮಂಗಲ ಕ್ಕೆ ವರ್ಗಾವಣೆ ಪಡೆದು ಬಂದೆ.
ನಾನು ಕೊಟ್ಟ ದೂರಿನ ವಿಚಾರಣೆ ನಡೆಸಿ ಪ್ರಿನ್ಸಿಪಾಲ್ ಮತ್ತು ಆರು ಜನ ಸಹೋದ್ಯೋಗಿಗಳ ಮೇಲೆ ಕೇಸ್ ದಾಖಲಿಸಲು ನಮ್ಮ ಪಿಯು ಇಲಾಖೆಯ ಮೇಲಧಿಕಾರಿಗಳ ಅನುಮತಿ ಗಾಗಿ ಪತ್ರ ಬರೆದರು.ಮತ್ತೆ ರಾಜಕೀಯ ಒತ್ತಡದ ಪ್ರಭಾವ, ಇಂದಿಗೂ ಇಲಾಖೆ ಪ್ರಿನ್ಸಿಪಾಲ್ ವಿರುದ್ಧ ಕೇಸ್ ದಾಖಲಿಸಲು ಪೋಲಿಸ್ ರು ಬರೆದ ಪತ್ರಕ್ಕೆ ಉತ್ತರಿಸಿಲ್ಲ ಅನುಮತಿಯನ್ನು ನೀಡಿಲ್ಲ
ಈ ನಡುವೆ ಸಹೃದಯ ಪೋಲಿಸ್ ಸರ್ಕಲ್ ಇನ್ಸ್ಪೆಕ್ಟರ್ ಸತೀಶ ಅವರಿಗೆ ವರ್ಗವಾಯಿತು ಈ ಸಮಯ ನೋಡಿ ರಾಜಕೀಯ ಪ್ರಭಾವ ಬಳಸಿ ನಾನು ನೀಡಿದ ದೂರಿಗೆ ಬಿ ರಿಪೋರ್ಟ್ ಆಗುವಂತೆ ಮಾಡಿದರು .
ಈ ಸಂದರ್ಭದಲ್ಲಿ ನಾನು ತುಸು ಎಡವಿದೆ ದುಡುಕಿ ಆತ್ಮ ಹತ್ಯೆಗೆ ಯತ್ನಿಸಿದೆ . ಈ ಬಗ್ಗೆ ಆತ್ಮಹತ್ಯೆ ಗೆ ಯತ್ನಿಸಿ ಎಚ್ಚರ ತಪ್ಪುತ್ತಾ ಇರುವ ಹಂತದಲ್ಲಿ ನಾನು ಪೇಸ್ ಬುಕ್ ಮತ್ತು ವಾಟ್ಸಪ್ ಗಳಲ್ಲಿ ನನ್ನ ಸಾವಿಗೆ ಕಾರಣರಾದವರ ಬಗ್ಗೆ ಸ್ಟೇಟಸ್  ಹಾಕಿದ್ದೆ .ಇದು ಕ್ಷಣ ಮಾತ್ರದಲ್ಲಿ ಹರಡಿ ನನ್ನ ಬೆಂಬಲ ಕ್ಕೆ ನಿಂತವರು ನನ್ನ ಪ್ರಾಣ ರಕ್ಷಣೆ ಮಾಡಿದವರು ನನ್ನ ಪೇಸ್ ಬುಕ್ ಸ್ನೇಹಿತರ ವಾಟ್ಸಪ್ ಸ್ನೇಹಿತರ ಬಳಗ
ಇದನ್ನು ಮಂಗಳೂರು ಪೋಲಿಸ್ ವರಿಷ್ಠ ಅಧಿಕಾರಿ ಎಸ್ ಪಿ ಯವರಾದ ಗುಲಾಬ್ ರಾವ್ ಭೂಷಣ್ ಅವರ ಗಮನಕ್ಕೂ ತಂದರು.ತಕ್ಷಣವೇ ಪ್ರತಿಕ್ರಿಯಿಸಿದ ಅವರು ನನ್ನ ಮೊಬೈಲ್ ಗೆ ಕರೆ ಮಾಡಿದ್ದರು.ನಾನು ಆಸ್ಪತ್ರೆ ಗೆ ದಾಖಲಾಗಿ ಐಸಿಯುವಿನಲ್ಲಿದ್ದಾಗ ಬಂದ ಕರೆಯನ್ನು ಸ್ವೀಕರಿದವನು ನನ ಮಗ ಅರವಿಂದ. " ದುಡುಕಬೇಡಿ ಮರು ತನಖೆ  ಮಾಡಿಸುವೆ " ಎಂಬ ಭರವಸೆಯನ್ನು ಎಸ್ ಪಿ ಅವರು ದರು ಗುಣಮುಖಳಾದ ನಂತರ ಅವರನ್ನು ಭೇಟಿಮಾಡಲು ದರು.
ನಾನು ಹುಷಾರಾಗಿ ಆಸ್ಪತ್ರೆ ಯಿಂದ ಬಂದ ವಾರದ ನಂತರ ಅವರನ್ನು ಮಂಗಳೂಇನ ಕಚೇರಿಯಲ್ಲಿ ಅಳುಕುತ್ತಲೇ ಭೇಟಿಯಾದೆ .ನನಗೆ ಪೋಲಿಸ್ ವ್ಯವಸ್ಥೆ ಬಗ್ಗೆ ನಂಬಿಕೆ ಹೊರಟು ಹೋಗಿತ್ತು ಆದರೂ ಅವರು ಹೇಳಿದ್ದಕ್ಕಾಗಿ ಅವರನ್ನು ಭೇಟಿ ಮಾಡಿ ನನ್ನ ಸಮಸ್ಯೆಯನ್ನು ವಿವರಿಸಿದೆ ಸಹೃದಯಿ ಯಾದ ಅವರು ನನ್ನ ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸಿ ಅರ್ಥಮಾಡಿಕೊಂಡರು .ನನಗೆ ಬದುಕುವ ಧೈರ್ಯ ತುಂಬಿದರು .ನಂತರ ಇನ್ನನೊಮ್ನ್ನೊಮೆ್ಮೆ  ಬೇಟಿಯಾದಾಗನನ್ನ  ಮುಂದಿನ ಪುಸ್ತಕ ಬಿಡುಗಡೆ ಯಾವಾಗ ಎಂದು ಕೇಳಿ ಮತ್ತೆ ನಾನು ಬರವಣಿಗೆ ಯಲ್ಲಿ ತೊಡಗುವಂತೆ ಪ್ರೋತ್ಸಾಹ ನೀಡಿದರು.
ಮುಂದೆ ಅವರು ನನ್ನ ದೂರಿನ ಬಗ್ಗೆ ಹೆಚ್ಚಿನ ತನಿಖೆಗೆ ಆದೇಶ ನೀಡಿದ್ದು ಮತ್ತೆ ವಿಚಾರಣೆ ನಡೆಸಿದ ಇಲಾಖೆಯ ಸಬ್ ಇನ್ಸ್ಪೆಕ್ಟರ್  ಮತ್ತೆ ಪ್ರಿನ್ಸಿಪಾಲ್ ಮೇಲೆ ಕೇಸ್ ದಾಖಲಿಸಲು ನಮ್ಮ ಇಲಾಖೆಯ ಅನುಮ ಕೇಳಿ ಪತ್ರ ಬರೆದಿದ್ದಾರೆ ಅದಕ್ಕೂ ಇನ್ನೂ ಉತ್ತರ ಬಂದಿಲ್ಲ
ಈ ನಡುವೆ ಪ್ರಿನ್ಸಿಪಾಲ್ ಹೈ ಕೋರ್ಟ್ ಗೆ ಕ್ರಿಮಿನಲ್ ರಿಟ್ ಪಿಟಿ಼ಶನ್ ಸಲ್ಲಿಸಿ ಪೋಲೀಸರು ಹಾಕಿದ ಎಫ್ ಐ ಆರ್ ಅನ್ನು ರದ್ದು ಪಡಿಸಲು ಕೇಳಿದೆ ಮತ್ತೆ ಕಾನೂನು ಹೋರಾಟ ಮುಂದವರಿಸುವೆ
ಅದು ಏನಾದರೂ ಆಗಲಿ ಯಾವುದೇ ಒತ್ತಡಕ್ಕೆ ಮಣಿಯದೆ ನನ್ನ ಸಮಸ್ಯೆ ಅರ್ಥ ಮಾಡಿಕೊಂಡ ಎಸ್ ಪಿ ಗುಲಾಬ್ ರಾವ್ ಭೂಷಣ್ ಅವರ ಸಹೃದಯತೆಯನ್ನು ನಾನೆಂದಿಗೂ ಮರೆಯಲಾರೆ
ದೊಡ್ಡವರು ದೊಡ್ಡವರಾಗದೆ ಇದ್ದರೆ ಸಣ್ಣವರ ಬದುಕು ಅಸಹನೀಯ ವಾಗುತದೆ ಆದರೆ ದೊಡ್ಡವರಾದ ಎಸ್ ಪಿ ಯವರು ದೊಡ್ಡವರಾಗಿಯೇ ವರ್ತಿಸಿ ನನಗೆ ಬದುಕಿನಲ್ಲಿ ಭರವಸೆ ತುಂಬಿದ್ದಾರೆ
ನಾನು ಈ ಬಗ್ಗೆ ಬರೆಯಬೇಕು ಎಂದು ಕೊಂಡಿದ್ದೆ ಆದರೂ ಕೇಸ್ ನಡೆಯುತ್ತಿರುವಾಗ ಬೇಡ ಎನಿಸಿ ಸುಮ್ಮನಾಗಿದ್ದೆ ಆದರೆ ನಿನ್ನೆ ಇವರಂತೆಯೇ ಸಹೃದಯ ದಕ್ಷ ಅಧಿಕಾರಿ ರವಿ ಚೆನ್ನಣ್ಣನವರ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ದ ಸಂದರ್ಶನದಲ್ಲಿ " ಪೋಲಿಸ್ ಎಂದರೆ ಭಯವಲ್ಲ ಭರವಸೆ' ಎಂದು ಹೇಳಿದ ಮಾತಿಗೆ ಪ್ರತ್ಯಕ್ಷ ನಿದರ್ಶನ ವಾಗಿ  ಕಾಣುತ್ತಿರುವ ಎ ಮಂಗಳೂರು ಪೋಲಿಸ್ ವರಿಷ್ಠ ಅಧಿಕಾರಿ ಎಸ್ ಪಿ ಗುಲಾಬ್ ರಾವ್ ಭೂಷಣ್ ಅವರ ಬಗ್ಗೆ ಹೇಗೆ ತಾನೆ ಬರೆಯದಿರಲಿ ಹಾಗಾಗಿ ಬರೆದಿರುವೆ ,ಓದಿ ನೀವೆಲ್ಲ ಬೆಂಬಲಿಸುವಿರಿ ಎಂಬ ನಂಬಿಕೆ ಇದೆ
ಧನ್ಯವಾದಗಳು- ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ 

Monday, 5 December 2016

ದೊಡ್ಡವರ ಹಾದಿ 12

ದೊಡ್ಡವರ ಹಾದಿ
ನನಗೆ ಇವತ್ತು ಯಲಹಂಕ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಶ್ರೀ ನಾಗರಾಜ್ ಅವರ ಒಂದು ನಡೆ ತುಂಬಾ ಇಷ್ಟ ವಾಯಿತು
ಸಾಮಾನ್ಯವಾಗಿ ಯಾರೇ ಅದರೂ ಪುಸ್ತಕ ಬರೆದರೂ ಹೊಟ್ಟೆ ಕಿಚ್ಚು ಪಟ್ಟು  ಅದರ ಬಿಡುಗಡೆಗೆ ನಾನಾ ರೀತಿಯ ಅಡ್ಡಿ ಹೇಳುವ ಮಂದಿ ನಮ್ಮ ಸುತ್ತ ಮುತ್ತ ಕಾಣುತ್ತಾರೆ
ಇಂದು ಪೀಣ್ಯ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾದ ಸುಭಾಷ್ ಮಾನೆಯವರ ದಿ ಆರ್ಟಿಸ್ಟ್ ಎಂಬ ಪುಸ್ತಕವನ್ನು ಯಲಹಂಕ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ ಪದವಿ ಪೂರ್ವ ಕಾಲೆಜು ಕನ್ನಡ ಉಪನ್ಯಾಸಕರ ಕಾರ್ಯಾಗಾರದ ಆರಂಭದಲ್ಲಿ ಸರಳವಾಗಿ ನಡೆಯಿತು ಇದು ಆರಂಭದಲ್ಲಿ ಅಲ್ಲಿನ ಪ್ರಾಂಶುಪಾಲರಿಗೆ ಗೊತ್ತಿರಲಿಲ್ಲ
ಇದಾದ ನಂತರ ಪ್ರಾಂಶುಪಾಲರಾದ ನಾಗರಾಜ್ ಅವರು‌ ತಮ್ಮ ಕೊಠಡಿಗೆ ತೆರಳಿ ಅಲ್ಲಿನ ಉಪನ್ಯಾಸಕರೊಂದಿಗೆ  ಬಂದು ಹಾರ ಹಾಕಿ ಶಾಲು ಹೊದೆಸಿ ಸುಭಾಷ್ ರಾಜಮಾನೆಯವರನ್ನು ಗೌ
ರವಿಸಿದರು
ಎಷ್ಟು ಮಂದಿಗೆ ಇಂತಹ ಉದಾರತೆ ಗುಣಗ್ರಾಹಿತ್ವ ಇದೆ ? ನಾನು ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಅನುದಾನಿತ ಕಾಲೇಜ ಇಂದ ರಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ಆಗ ನನ್ನ ‌ಮೊದಲ ಕಥಾ ಸಂಕಲನ ಮನೆಯಂಗಳದಿ ಹೂ ಮತ್ತು‌ ಅರಿವಿನಂಗಳದ ಸುತ್ತ ಎಂಬ ಎರಡು ಪುಸ್ತಕಗಳು ಮುದ್ರಣಗೊಂಡವು ಅದರ ಬಿಡುಗಡೆಯನ್ನು ಕಾಲೆಜು ವಾರ್ಷಿಕೋತ್ಸವ ದಂದು ಮಾಡಲು ಕನ್ನಡ ವಿಭಾಗದ ಮುಖ್ಯಸ್ಥ ರು ನಿರಾಕರಿಸಿ ತಾವೆಷ್ಟು ಸಣ್ಣವರು ಎಂದು ತೋರಿಸಿ ಕೊಟ್ಟಿದ್ದರು
ಇದೇ ರೀತಿ ನನ್ನ ಮೂರನೇ ‌ಪುಸ್ತಕ ದೈವಿಕ ಕಂಬಳ ಕೋಣ ಹಾಗು ಇತರ ಕೆಲವು‌ಹವ್ಯಕರ ಪುಸ್ತಕಗಳುಹವ್ಯಕ‌ಮಹಾ ಸಭೆಯ ಸಂಸ್ಥಾಪರಾದ ರಾಮಕೃಷ್ಣ ಭಟ್ ಅವರ ಸಂಸ್ಕರಣಾ ಕಾರ್ಯ ಕ್ರಮದಲ್ಲಿ ಅಗಿತ್ತು‌ಮನಸಿಲ್ಲದೆ ಮಾಡಿದ ಪುಸ್ತಕ ಬಿಡುಗಡೆ ಕಾರ್ಯಕ್ರಮ ದಲ್ಲಿ ಶಾಲು ಹೊದೆಸಿ ಸನ್ಮಾನಿಸುವುದು ಬಿಡಿ  ಯಾರೊಬ್ಬ ಲೆಖಕರನ್ನು‌ ಕೂಡ ವೇದಿಕೆಗೆ‌ಕರೆದು ಪರಿಚಯಿಸಿರಲಿಲ್ಲ
ಇನ್ನು ನನ್ನ ‌ಪಾಡ್ದನ ಸಂಪುಟ, ತುಳುವ ಸಂಸ್ಕಾರಗಳು, ಕಂಬಳ ಕೋರಿ ನೇಮ ,ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು,ಪಾಡ್ದನಗಳಲ್ಲಿ ಸ್ತ್ರೀ ಎಂಬ ಐದು ಸಂಶೋಧನಾ ‌ಕ್ರತಿಗಳ ಬಿಡುಗಡೆ ಚೊಕ್ಕಾಡಿ ಹವ್ಯಕ ಸಭೆಯಲ್ಲಿ ಅಯಿತು ಅದರದ್ದು ಒಂದು ದೊಡ್ಡ ಕಥೆಯೆ ಇದೆ ಇನ್ನೊಂದು ದಿನ ಅ ಬಗ್ಗೆ ಬರೆಯುತ್ತೇನೆ
ಅದೇ ರೀತಿ ‌ಕೆಲ ವರ್ಷಗಳ ಹಿಂದೆ‌ಪುಸ್ತಕ ಪ್ರೀತಿಯ ಶ್ರೀನಿವಾಸ ರಾಜು ಅವರ ಕುರಿತಾದ ಕಾರ್ಯಕ್ರಮ ಬಿ ಎಂ ಶ್ರೀ ಪ್ರತಿಷ್ಠಾನ ದಲ್ಲಿ ಅಯೋಜನೆ ಅಗಿತ್ತು  ಅ ಸಂದರ್ಭದಲ್ಲಿ ನನ್ನ ಒಂದು ಸಂಶೋಧನ ಕೃತಿ ಮುದ್ರಣವಾಗಿ ಪ್ರಕಟಣೆಗೆ ಸಿದ್ದವಾಗಿತ್ತು ನಾನು ಬಿಎಂ ಶ್ರೀ ಸಂಶೋಧನಾ ‌ಕೇಂದ್ರದ ಅಜೀವ ಸದಸ್ಯೆ ಹಾಗೂ ಅಲ್ಲಿನ ಹಳೆಯ ವಿದ್ಯಾರ್ಥಿ ನಿಯಾಗಿದ್ದು ಆ ಕಾರ್ಯಕ್ರಮ ದಲ್ಲಿ ನನ್ನ ಪುಸ್ತಕ ಬಿಡುಗಡೆ ಮಾಡುವಂತೆ ಪ್ರತಿಷ್ಠಾನ ದ ಅಧ್ಯಕ್ಷರಿಗೆ ಕೇಳಿದ್ದೆ ಸಮಯಾಭಾವದ ನೆಪ‌ಮಾಡಿ ನಿರಾಕರಿಸಿದ್ದರು
 ಆ ಪುಸ್ತಕ ಗಳ ಬಿಡುಗಡೆ ತುಳು ಸಾಹಿತ್ಯ ಅಕಾಡೆಮಿ ಯಲ್ಲಿ ಆಗಿದ್ದು ಲೆಖಕಿಯನ್ನು ಗೌರವಿಸುವ ಉದಾರತೆ ಅವರಲ್ಲು ಇರಲಿಲ್ಲ ಹಾಗಾಗಿಯೆ
ಇಂತಹ ಸಂಕುಚಿತ ಮನೋಭಾವ ದವರೇ ತುಂಬಿದ ಜನರ ನಡುವೆ  ಯಲಹಂಕ ಕಾಲೆಜು ‌ಪ್ರಾಂಶುಪಾಲರಾದ ನಾಗರಾಜ್ ಅವರ ಸಜ್ಜನಿಕೆ ಉದಾರತೆ ಗುಣ ಪಕ್ಷಪಾತ ಗುಣ ವಿಶಿಷ್ಟ ಎನಿಸುತ್ತದೆ
ಇಂತವರು ಹೆಚ್ಚಾಗಲಿ ಇವರ‌ನಡೆ ಎಲ್ಲರಿಗೆ ಮಾದರಿಯಾಗಲಿ ಏನು ಹೇಳುತ್ತೀರಿ ಈ ಬಗ್ಗೆ ? 

Sunday, 3 July 2016

ದೊಡ್ಡವರ ಹಾದಿ 9 ಹೀಗೂ ಉಂಟು !

ಹೀಗೂ ಉಂಟು !
ಈವತ್ತು ಇಬ್ಬರು ಯುವ ಸಂಶೋಧಕಿಯರ ಪರಿಚಯ ಆಯಿತು .ಪಿಎಚ್ ಡಿ ಅಧ್ಯಯನ ಕ್ಕಾಗಿ ಯೂನಿವರ್ಸಿಟಿ ಯೊಂದರಲ್ಲಿ ನೋಂದಣಿ ಮಾಡಿದ್ದರು (ಅವರ ಹೆಸರು ಮತ್ತು ಯೂನಿವರ್ಸಿಟಿ ಹೆಸರನ್ನು ಅವರ ಭವಿಷ್ಯಕ್ಕೆ ತೊಂದರೆಯಾಗಬರದೆಂಬ ಉದ್ದೇಶದಿಂದ ಗೌಪ್ಯವಾಗಿತ್ತಿದ್ದೇನೆ)ಅವರಲ್ಲೊಬ್ಬರು ಅವರ ಅನುಭವವನ್ನು ಹೇಳಿದಾಗ ಹೀಗೂ ಉಂಟೆ ಎಂದೆನಿಸಿತು !ಅವರು ತಮ್ಮ ಅಧ್ಯಯನಕ್ಕಾಗಿ ಬೆಂಗಳೂರಿನ ಓರ್ವ ಉಪನ್ಯಾಸಕಿ ,ಪಿಎಚ್ ಡಿ ಪದವೀದರೆಯನ್ನು ಭೇಟಿ ಮಾಡಿದ್ದರಂತೆ ,ಆ ಉಪನ್ಯಾಸಕಿ ಪ್ರಸಿದ್ಧ ಸಾಹಿತಿಯೂ ಆಗಿದ್ದು ಅವರ ಕೃತಿಗಳ ಪಾತ್ರಗಳ ಬಗ್ಗೆ ಇವರು ಮಾಹಿತಿ ಕೇಳಿ ತಮ್ಮ ಅಧ್ಯಯನದ ವಿಚಾರದಲ್ಲಿ ಸಲಹೆ ಕೇಳಿದರು .ಅಷ್ಟಕ್ಕೇ ಆ ಉಪನ್ಯಾಸಕಿ ನನ್ನ ನಂಬರ್ ಯಾರು ಕೊಟ್ಟದ್ದು ನಿಮಗೆ ನನ್ನ ವಿಳಾಸ ಎಲ್ಲಿಂದ ಪಡೆದಿರಿ ನಿಮ್ಮನ್ನು ಇಲ್ಲಿ ಬರಲು ಯಾರು ಹೇಳಿದರು ?ಎಲ್ಲವನ್ನು ನಾವು ಹೇಳಿ ಕೊಡಲು ಆಗುತ್ತಾ ?ಬೇಕಾದರೆ ಓದಿ ಕಲಿಯಿರಿ ಇತ್ಯಾದಿಯಾಗಿ ಏಕ್ಧಂ ಬೈದು ಮಾತಾಡಿದರಂತೆ !
ಈ ಹಿಂದೆ ನನ್ನ ಸಹೋದ್ಯೋಗಿ ಮಿತ್ರರಾಗಿದ್ದ ಓರ್ವ ಉಪನ್ಯಾಸಕಿ  ಹೀಗೆ ಮಾತಿನ ನಡುವೆ "ಅವರು ಅದಕ್ಕೆ ಹಿಂದೆ ಕೆಲಸ ಮಾಡಿದ ಕಾಲೇಜ್ ಉಪನ್ಯಾಸಕಿ ಒಬ್ಬರ ಬಗ್ಗೆ  ಹೇಳಿದ ವಿಚಾರ ಒಂದು ಇಲ್ಲಿ ನನಗೆ ನೆನಪಾಗುತ್ತಿದೆ .ಅವರು ಕೆಲಸ ಮಾಡುತ್ತಿದ್ದ ಕಾಲೇಜ್ ನಲ್ಲಿ ಓರ್ವ ಉಪನ್ಯಾಸಕಿ ಪಿಎಚ್ ಡಿ ಮಾಡಿದ್ದು ಗೈಡ್ ಕೂಡ ಆಗಿದ್ದರಂತೆ .ಅವರ ಬಾಲಿ ಪಿಎಚ್ ಡಿ ಮಾಡುವ ಆಸಕ್ತಿ ಇರುವ ಅನೇಕ ವಿದ್ಯಾರ್ಥಿಗಳು ಬರುತ್ತಿದ್ದರಂತೆ .ಆಗ ಅವರು ಅವರನ್ನು ಹೀಗೆ ಬೈದು ಮಾತಾಡಿ ಹೀಯಾಳಿಸುತ್ತಿದ್ದರಂತೆ.ಯಾವುದೇ ವಿಚಾರ ತಗೊಂಡು ಬಂದು ಈ ಬಗ್ಗೆ ಪಿಎಚ್ ಡಿ ಮಾಡ ಬಹುದೇ ಎಂದು ಕೇಳಿದರೆ ಅದರ ಬಗ್ಗೆ ಏನು ಮಾಡುದು ನಡೀರಿ ಎಂದು ಬೈಯುತ್ತಿದ್ದರಂತೆ !
ಇವರುಗಳು  ಬೈಯುವ ಬದಲು ಯಾವ ವಿಷಯ ಆಯ್ಕೆ ಮಾಡಿದರೆ ಒಳ್ಳೆಯದು ?ಯಾವುದರ ಅಗತ್ಯ ಇದೇ ?ಯಾವ ರೀತಿ ಅಧ್ಯಯನ ಮಾಡಬೇಕು ?ಏನು ಯಾವ ಪುಸ್ತಕ ಓದಬೇಕು ಎಂದು ಮಾರ್ಗ ದರ್ಶನ ನೀಡಿ ಇವರುಗಳು ಹಿರಿತನ ಮೆರೆಯಬೇಕಿತ್ತು ಆದರೆ ಇವರು ಯುವ ಸಂಶೋಧಕರನ್ನು ಬೈದು ಹೀಗಳೆದು ತಮ್ಮ ದೊ(ದ)ಡ್ಡತನ  ಪ್ರದರ್ಶಿಸುವುದು ಸರಿಯೇ ?
ನನಗೂ ಅನೇಕ ಮಂದಿ ಪಿಎಚ್ ಡಿ ಮಾಡುವ ಬಗ್ಗೆ ,ಸಂಶೋಧನಾ ಪ್ರಬಂಧ ಸಿದ್ಧ ಪಡಿಸುವ ಬಗ್ಗೆ ಬೇರೆ ಬೇರೆ ವಿಷಯಗಳ ಬಗ್ಗೆ ,ಲೇಖನ ಪುಸ್ತಕ ಪ್ರಕಟಣೆಯ ಬಗ್ಗೆ ಮಾಹಿತಿ ಕೇಳುತ್ತಿರುತ್ತಾರೆ ,ನಾನು ಎಲ್ಲರಿಗೂ ನನಗೆ ಗೊತ್ತಿರುವ ವಿಚಾರ ಹೇಳಿದ್ದೇನೆ ಹೊರತು ಯಾರನ್ನೂ ಹೀಗಳೆದು ಮಾತಾಡಿಲ್ಲ .
ಸಂಶೋಧನಾ ಪ್ರಬಂಧ ಸಿದ್ಧ ಪಡಿಸುವಾಗ ಸಾಹಿತಿಗಳ ವಿದ್ವಾಂಸರ ಭೇಟಿ ಚರ್ಚೆ ,ಪ್ರಾಥಮಿಕ ಮಾಹಿತಿ ಸಂಗ್ರಹ ಎಲ್ಲವೂ ಅನಿವಾರ್ಯವಾದ ಅಂಶಗಳು ,ನಾವು ಕೂಡ ಏಕಾ ಏಕಿ ಸಂಶೋಧಕರಾಗುವುದಿಲ್ಲ ಈ ಬಗ್ಗೆ ಹಿರಿಯರ ಮಾರ್ಗ ದರ್ಶನ ಬೇಕಾಗುತ್ತದೆ 
ನನಗಂತೂ ಡಾ.ವೆಂಕಟರಾಜ ಪುಣಿಚಿತ್ತಾಯ,ಡಾ,ಅಮೃತ ಸೋಮೇಶ್ವರ,ಪೂ ಶ್ರೀನಿವಾಸ್ ಭಟ್ ಡಿ ಜಿ ನಡ್ಕ,ಡಾ.ವೆಂಕಟಾಚಲ ಶಾಸ್ತ್ರಿ ಮೊದಲಾದ ವಿದ್ವಾಂಸರು ತಮ್ಮಲ್ಲಿರುವ ಮಾಹಿತಿ ನೀಡಿ ಮಾರ್ಗ ದರ್ಶನ ಮಾಡಿ ಪೂರ್ಣ ಬೆಂಬಲ ನೀಡಿದ್ದಾರೆ .ನಾನು ಮಾಹಿತಿ ಕೇಳಿದ ಯಾರೊಬ್ಬರೂ ಕೂಡ ನನ್ನನ್ನು ಅವಮಾನಿಸಿ ಹೀಗಳೆದು ಮಾತಾಡಿಲ್ಲ !ನನಗೆ ಪಿಎಚ್ ಡಿ ಮಾಡುವಂತೆ ಪ್ರೇರಣೆ ನೀಡಿದವರು ಡಾ.ಕೆ ಗೋಕುಲನಾಥ್  ಅವರು.
 ಅದಕ್ಕೆನನಗೆ ಮೇಲೆ ಹೇಳಿದ ಉಪನ್ಯಾಸಕಿಯರ  ವರ್ತನೆ ಬಗ್ಗೆ ಆಶ್ಚರ್ಯ ಆಗುತ್ತದೆ .