ದೊಡ್ಡವರ ದಾರಿ- ಮಂಗಳೂರಿನ ಎಸ್ ಪಿ ಯಾಗಿರುವ ಐ ಪಿಎಸ್ ಅಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ
- ©ಡಾ ಲಕ್ಷ್ಮೀ ಜಿ ಪ್ರಸಾದ
ನಿನ್ನೆ ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ದಕ್ಷ ಸಹೃದಯಿ ಪೋಲಿಸ್ ಅಧಿಕಾರಿ ರವಿ ಚೆನ್ನಣ್ಣನವರ್ ಸಂದರ್ಶನ ವೀಕ್ಷಿಸುತ್ತಾ ಇದ್ದೆ.
ಮಾತಿನ ನಡುವೆ ಅವರು " ಪೋಲೀಸ್ ಎಂದರೆ ಭಯವಲ್ಲ ಭರವಸೆ" ಎಂಬ ಮಾತು ಹೇಳಿದಾಗ ನನಗೆ ತಕ್ಷಣವೇ ನೆನಪಿಗೆ ಬಂದ ಕಣ್ಣಿಗೆ ಕಟ್ಟಿದ ವ್ಯಕ್ತಿ ಮಂಗಳೂರಿನ ಎಸ್ ಪಿ ಗುಲಾಬ್ ರಾವ್ ಭೂಷಣ ಅವರು .ರವಿ ಚನ್ನಣ್ಣನವರ್ ಈ ಮಾತು ಹೇಳಿದಾಗ ನನ್ನ ಪಕ್ಕದಲ್ಲೇ ಕುಳಿತಿದ್ದ ಮಗ ಅರವಿಂದ ಇದೆಲ್ಲಾ ಬಾಯಲ್ಲಿ ಹೇಳುತ್ತಾರೆ ಕೇಳಲು ಚೆನ್ನಾಗಿದೆ ಆದರೆ ಪೋಲಿಸ್ ರು ಹಾಗಿದ್ದಾರ ಅಮ್ಮ ? ಎಂದು ಕೇಳಿದ .
ಹೌದು ,ಬೆಳ್ಳಾರೆಯಲ್ಲಿದ್ದಾಗ ನನಗೆ ಕಿರುಕಳ ನೀಡಿದ ಪ್ರಿನ್ಸಿಪಾಲ್ ಸುಬ್ರಾಯ ಗೌಡ( ಯುಸುಗೌ) ಮತ್ತು ಕೆಲವು ಸಹೋದ್ಯೋಗಿಗಳ ಮೇಲೆ ಸುಳ್ಯ ಪೋಲೀಸ್ ಸ್ಟೇಷನ್ ನಲ್ಲಿ ದೂರು ನೀಡಿದಾಗ ನಮಗಾದ ಕಹಿ ಅನುಭವವೇ ಮಗನಿಂದ ಆ ರೀತಿಯ ಋಣಾತ್ಮಕ ಮಾತನ್ನು ಹೇಳಿಸಿತ್ತು ಎಂಬುದು ನನಗೆ ಅರ್ಥವಾಯಿತು.
ತಕ್ಷಣವೇ ನಾನು ಹೇಳಿದೆ ಒಬ್ಬಿಬ್ಬರು ಮಾಡುವ ತಪ್ಪಿಗೆ ಇಡೀ ಇಲಾಖೆಯನ್ನು ನಾವು ದೂಷಿಸಬಾರದು ಅರವಿಂದ್.
ನಮಗೆ ಅಲ್ಲಿ ಬೆಂಬಲ ನೀಡಿದ ಸರ್ಕಲ್ ಇನ್ಸ್ಪೆಕ್ಟರ್ ಸತೀಶ್ ಅವರನ್ನು ನಾವು ಮರೆಯಲಾದೀತೆ ?
ನಡುರಾತ್ರಿ ನಡೆಸುವ ಭೂತ ಕೋಲವನ್ನು ರೆಕಾರ್ಡ್ ಮಾಡಲು ಕೆಮೆರಾ ಹಿಡಿದುಕೊಂಡು ಹಳ್ಳಿಯ ಮೂಲೆ ಮೂಲೆಗಳಿಗೆ ಜಾತಿ ಧರ್ಮ ಗಳ ಹಂಗಿಲ್ಲದೆ ಹೋಗುವ ನನ್ನಂಥ ಸ್ತ್ರೀ ಯನ್ನು ಸಮಾಜದಲ್ಲಿ ಬಹಿರಂಗವಾಗಿ ಸೊಸೆ ಎಂದು ಒಪ್ಪಲು ಯಾವ ಕುಟುಂಬ ಸಿದ್ಧವಿರುತ್ತದೆ ? ಹಾಗಾಗಿಯೇ ಮನೆ ಮಂದಿಯ ಕುಟುಂಬದ ಜಾತಿ ಬಾಂಧವರ ತೀವ್ರ ವಿರೊಧದ ನಡುವೆಯೇ ಬೆಳ್ಳಾರೆಯ ಸರಕಾರಿ ಕಾಲೇಜಿಗೆ ಪಿಯು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಬಂದಾಗ ಸಮಸ್ಯೆಗಳನ್ನು ಏಕಾಂಗಿಯಾಗಿ ಎದುರಿಸಬೇಕಾಯಿತು. ಆಗಿನ್ನೂ ಅರವಿಂದ ಆರನೆಯ ತರಗತಿಯಲ್ಲಿ ಓದುವ ಹನ್ನೊಂದು ವರ್ಷದ ಎಳೆಯ ಹುಡುಗ ಹಾಗಿದ್ದರೂ ನಾನು ಎದುರಿಸುವ ಸಮಸ್ಯೆ ಗಳ ಅರಿವು ಅವನಿಗೂ ಇದ್ದಿತ್ತು.ಏಕಾಂಗಿಯಾಗಿ ಕ್ಷೇತ್ರ ಕಾರ್ಯ ಆಧಾರಿತ ಭೂತಾರಾಧನೆಯನ್ನು ಕುರಿತಾದ ಸಂಶೋಧನೆಗಾಗಿ ನಾನು ಹೊರಟಾಗ ಎದುರಿಸಿದ ಸಮಸ್ಯೆಗಳು ನೂರಾರು .ಪೂರ್ಣ ಬೆಂಬಲ ಪ್ರಸಾದ್ ( ನನ್ನ ಜೀವನ ಸಂಗಾತಿ) ಕಡೆಯಿಂದ ಇದ್ದಿತಾದರೂಅವರಿದ್ದುದು ದೂರದ ಬೆಂಗಳೂನಲ್ಲಿ .
ಸಮಸ್ಯೆಗಳು ತೀವ್ರವಾಗಿ ಕಾಡಿದಾಗ ಬದುಕು ಅಸಹನೀಯ ವೆಂದಾದಾಗನಾನು ಸ್ಥಳೀಯ ಪೋಲಿಸ್ ರ ಸಹಾಯ ಪಡೆಯಲು ಯತ್ನಿಸಿದ್ದೆನಾದರೂ ಸ್ಥಳೀಯ ಬಲಿಷ್ಠ ರ ವಿರುದ್ಧ ಹೋರಾಟ ಸುಲಭದ್ದಾಗಿರಲಿಲ್ಲ ಪೋಲಿಸ್ ರ ಸಹಾಯ ಸಿಕ್ಕಿರಲಿಲ್ಲ
ಅಂತೂ ಅನೇಕ ಸಮಸ್ಯೆಗಳ ನಡುವೆಯೂ ಬದುಕಿನಲ್ಲಿ ಗೆದ್ದೆ, ಇನ್ನೇನು ಕೆಲವು ದಿನಗಳಲ್ಲಿ ಬೆಂಗಳೂರಿಗೆ ಟ್ರಾನ್ಸ್‌ಫರ್ ಸಿಕ್ಕಿ ಪ್ರಸಾದ ಮತ್ತು ಮಗನೊಂದಿಗೆ ನೆಮ್ಮದಿಯ ಬದುಕು ಕಾಣುವೆನೆಂಬ ಸಂತಸಲ್ಲಿದ್ದಾಗಲೇ ಎದುರಾದದ್ದು ನನ್ನ ಹಿರಿಯ ಅಧಿಕಾರಿ ಪ್ರಿನ್ಸಿಪಾಲ್ ಆಗಿ ಬೆಳ್ಳಾರೆಯ ಸರ್ಕಾರಿ ಕಾಲೇಜಿಗೆ ಬಂದ ಸುಬ್ರಾಯ ಗೌಡ ಮತ್ತು ಅವರ ಕೃಪಾ ಕಟಾಕ್ಷಕ್ಕಾಗಿ ಕಾರಣವಿಲ್ಲದೆ ಕಿರಿಕುಳ ನೀಡಿದ ಕಿರಿಯ ಸಹೋದ್ಯೋಗಿಗಳ ನಿರಂತರ ಕಿರುಕುಳ. ಇಲಾಖೆಯ ಹಿರಿಯಧಿಕಾರಿಗಳಿಗೆ ಹೇಳಿದರೆ ಪ್ರಿನ್ಸಿಪಾಲ್ ಬೆಂಬಲಕ್ಕೆ ನಿಂತ ಸ್ಥಳೀಯ ರಾಜಕಾರಣಿಗಳ ಒತ್ತಡಕ್ಕೆ ಸಿಲುಕಿದ ಅವರು ನಾನು ಕೊಟ್ಟ ದೂರಿನ ಬಗ್ಗೆ ವಿಚಾರಣೆ ನಡೆಸಲು ಬರುವುದಕ್ಕೇ ಹಿಂಜರಿದಾಗ ನನಗೇನು ಮಾಡಬೇಕೆಂದು ತಿಳಿಯದೆ ಕಂಗಾಲಾದೆ.ಇಷ್ಟಕ್ಕೂ ನನ್ನದೇನು ತಪ್ಪಿರಲಿಲ್ಲ
ನನಗೆ ಡಾಕ್ಟರೇಟ್ ಬಂದಾಗ ,ನನಗೆ ಉತ್ತಮ ಶಿಕ್ಷಕಿ ಪ್ರಶಸ್ತಿ ಬಂದಾಗ ಅಭಿನಂದಿಸ ಹೊಟ ಆಗಿನ ಬೆಳ್ಳಾರೆಯ ಪ್ರಿನ್ಸಿಪಾಲ್ ಅಭಿಪ್ರಾಯ ವನ್ನು ನನ್ನ ಸಹೋದ್ಯೋಗಿಗಳು ಈ ಹಿಂದೆ ಪ್ರಶಸ್ತಿ ಪುರಸ್ಕಾರ ಪಡೆದವರನ್ನು ಅಭಿನಂದನೆ ಮಾಡಿಲ್ಲ ಹಾಗಿರುವಾಗ ಈಗ ಮಾಡುವುದು ಸರಿಯಲ್ಲ ಇನ್ನೂ ಮುಂದೆಯೂ ಯಾರಿಗೂ ಕಾಲೇಜಿನಲ್ಲಿ ಅಭಿನಂದನೆ ಮಾಡಬಾರದು ಎಂದು ಸಹೋದ್ಯೋಗಿಗಳು ವಾದಿಸಿದ್ದರು.ಆ ಬಗ್ಗೆ ಯೂ ನಾನೇನು ಪ್ರತಿಕ್ರಿಯೆ ನೀಡಿರಲಿಲ್ಲ ಇಷ್ಟಕ್ಕೂ ಯಾರಿಂದಲೂ ಸನ್ಮಾನ ಮನ್ನಣೆ ಪಡೆಯುವುದಕ್ಕಾಗಿ ನಾನು ಡಾಕ್ಟರೇಟ್ ಪದವಿ ಪಡೆದಿರಲಿಲ್ಲ ನಾನು ನನ್ನ ಸಂತೋಷಕ್ಕಾಗಿ ಮಾಡಿದ್ದೆ .ಇನ್ನೂ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆಯುವುದಕ್ಕಾಗಿ ಚೆನ್ನಾಗಿ ಪಾಠ ಮಾಡಿದ್ದಲ್ಲ ನಾನು ಪಾಠ ಮಾಡುವ ಶೈಲಿಯೇ ಹಾಗೆ ನನಗೂ ಸ್ವತಃ ಸಾಹಿತ್ಯ ರಚನೆ ನಾಟಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಇದ್ದ ಕಾರಣ ವಿದ್ಯಾರ್ಥಿಗಳಿಂದಲೂ ಅದನ್ನು ಮಾಡಿಸಿದ್ದೆ ಅಷ್ಟೇ. ಇದನ್ನು ಗುರುತಿಸಿ ಪ್ರಶಸ್ತಿ ಬಂದಿತ್ತೇ ಹೊರತು ನಾನು ಅರ್ಜಿ ಕೂಡ ಹಾಕಿರಲಿಲ್ಲ
ಹಾಗಾಗಿ ಆ ಬಗ್ಗೆ ಅಭಿನಂದನೆ ಮಾಡದೆ ಇದ್ದದ್ದು ನನಗೇನು ಅಷ್ಟು ದೊಡ್ಡ ವಿಷಯವಾಗಿ ಕಂಡಿರಲಿಲ್ಲ.
ಆದರೆ ನನಗೆ ಎರಡುಬಾರಿ ಭಾರಿ ಅವಾರ್ಡ್ ಬಂದಾಗಲೂ ಅದನ್ನು ಗುರುತಿಸದೆ ಕಾಲೇಜು ವರದಿಯಲ್ಲಿ ಕೂಡ ಸೇರಿಸದೆ ನನ್ನ ನಂತರ ನನ್ನಂತೆ ಅವಾರ್ಡ್ ಪಡೆದ ಸಹೋದ್ಯೋಗಿ ಗಳಾದ ಪ್ರಭಾಕರ ಗೌಡ ಕಿರಿಭಾಗರಿಗೆ ಪ್ರಶಸ್ತಿ ಬಂದಾಗ ಅವರನ್ನು ಕಾಲೇಜು ವತಿಯಿಂದ ಭಾರೀ ವಿಜೃಂಭಣೆಯಿಂದ ಅಭಿನಂದನೆ ಮಾಡಿದಾಗ ಕೂಡ ನನಗೆ ಅಸೂಯೆಯಾಗಲಿಲ್ಲ ಆದರೆ ಈ ಲಿಂಗ ತಾರತಮ್ಯ ಮಾತ್ರ ತಪ್ಪು ಎನಿಸಿ ತಾರತಮ್ಯ ಸರಿಯಲ್ಲ ಎಂದು ನನ್ನ ಅಭಿಪ್ರಾಯ ಹೇಳಿದ್ದೆ ಅಷ್ಟೇ, ಆಗಷ್ಟೇ ಪ್ರಿನ್ಸಿಪಾಲ್ ಪದೋನ್ನತಿ ಪಡೆದು ಬಂದ ಪ್ರಿನ್ಸಿಪಾಲ್ ಸುಬ್ರಾಯ ಗೌಡರಿಗೆ ಇದು ಬಹಳ ಉಡಾಫೆ ಎನಿಸಿತು ಪ್ರಿನ್ಸಿಪಾಲ್ ನಡೆಯನ್ನು ಸರಿಯಲ್ಲ ಎಂದ ನನ್ನ ಬಗ್ಗೆ ತೀವ್ರ ದ್ವೇಷ ಸಾಧಿಸಿದ ಅವರು ತೀವ್ರ ಸ್ವರೂಪದ ಕಿರುಕುಳ ನೀಡಿದಾಗ ಅವರೊಂದಿಗೆ ಕೆಲವು ಸಹೋದ್ಯೋಗಿಗಳು ಸೇರಿ ಕಿರುಕುಳ ನೀಡಿದಾಗ ಬದುಕಲು ಅಸಾಧ್ಯವೆನಿಸಿ ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ಸತೀಶ ಅವರಲ್ಲಿ ನನ್ನ ಸಮಸ್ಯೆ ಹೇಳಿದೆ ಸ್ಥಳೀಯ ರಾಗಿರುವ ರಾಜಕೀಯ ಬೆಂಬಲವಿರುವ ಪ್ರಿನ್ಸಿಪಾಲ್ ವಿರುಧ್ದ ದೂರು ನೀಡಲೂ ನನಗೆ ಧೈರ್ಯ ಇರಲಿಲ್ಲ .ಇನ್ಸ್ಪೆಕ್ಟರ್ ಸತೀಶ ಅವರನ್ನು ಕಂಡು ಮಾತನಾಡಿದಾಗ ಅವರ ಸೌಜನ್ಯ ಪೂರ್ವ ಕ ನಡವಳಿಕೆ ದೂರು ಕೊಡುವ ಧೈರ್ಯ ನೀಡಿತು ದೂರು ನೀಡಿ ಬಂದ ತಕ್ಷಣವೇ ಅವರಿಗೆ ಎಂ ಎಲ್ ಎ ಎಂ ಪಿಗಳಿಂದ ಕರೆ ಬಂದುದು ನನಗೆ ತಿಳಿದಿತ್ತು ಆದರೂ ಅವರು ಯಾರ ಒತ್ತಡಕ್ಕೂ ಭಾಗದೆ ಸಬ್ ಇನ್ಸ್ಪೆಕ್ಟರ್ ಅವರಲ್ಲಿ ನಾನು ನೀಡಿದ ದೂರಿನ ಬಗ್ಗೆ ವಿಚಾರಣೆ ಮಾಡಿ ಸಬ್ ಇನ್ಸ್ಪೆಕ್ಟರ್ ಅವರಿಗೆ ಹೇಳಿ ಎಫ್ ಐ ಆರ್ ಮಾಡಿದರು .
ಸಾಕಷ್ಟು ವಿಚಾರಣೆ ನಡೆಯಿತು ನನ್ನ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ನನ್ನ ಪರ ಸಾಕ್ಷಿ ನೀಡಿದ್ದರು
.ಆದರೂ ತಮ್ಮ ಜಾತಿಯ ವಿದ್ಯಾರ್ಥಿಗಳ ಮನಸಿಗೆ ಕಲ್ಮಷ ತುಂಬಿ ಅವರನ್ನು ನನಗೆ ಎದುರು ನಿಲ್ಲಿಸಿ ಶಸ್ತ್ರ ದಂತೆ ಬಳಸಲು ಯತ್ನ ಮಾಡಿದರಾದರೂ ದೊಡ್ಡ ಪ್ರಯೋಜನವೇನೂ ಅವರ ಆಗಲಿಲ್ಲ ನಂತರದ ಕೆಲವು ದಿನಗಳಲ್ಲಿ ನಾನು ನೆಲಮಂಗಲ ಕ್ಕೆ ವರ್ಗಾವಣೆ ಪಡೆದು ಬಂದೆ.
ನಾನು ಕೊಟ್ಟ ದೂರಿನ ವಿಚಾರಣೆ ನಡೆಸಿ ಪ್ರಿನ್ಸಿಪಾಲ್ ಮತ್ತು ಆರು ಜನ ಸಹೋದ್ಯೋಗಿಗಳ ಮೇಲೆ ಕೇಸ್ ದಾಖಲಿಸಲು ನಮ್ಮ ಪಿಯು ಇಲಾಖೆಯ ಮೇಲಧಿಕಾರಿಗಳ ಅನುಮತಿ ಗಾಗಿ ಪತ್ರ ಬರೆದರು.ಮತ್ತೆ ರಾಜಕೀಯ ಒತ್ತಡದ ಪ್ರಭಾವ, ಇಂದಿಗೂ ಇಲಾಖೆ ಪ್ರಿನ್ಸಿಪಾಲ್ ವಿರುದ್ಧ ಕೇಸ್ ದಾಖಲಿಸಲು ಪೋಲಿಸ್ ರು ಬರೆದ ಪತ್ರಕ್ಕೆ ಉತ್ತರಿಸಿಲ್ಲ ಅನುಮತಿಯನ್ನು ನೀಡಿಲ್ಲ
ಈ ನಡುವೆ ಸಹೃದಯ ಪೋಲಿಸ್ ಸರ್ಕಲ್ ಇನ್ಸ್ಪೆಕ್ಟರ್ ಸತೀಶ ಅವರಿಗೆ ವರ್ಗವಾಯಿತು ಈ ಸಮಯ ನೋಡಿ ರಾಜಕೀಯ ಪ್ರಭಾವ ಬಳಸಿ ನಾನು ನೀಡಿದ ದೂರಿಗೆ ಬಿ ರಿಪೋರ್ಟ್ ಆಗುವಂತೆ ಮಾಡಿದರು .
ಈ ಸಂದರ್ಭದಲ್ಲಿ ನಾನು ತುಸು ಎಡವಿದೆ ದುಡುಕಿ ಆತ್ಮ ಹತ್ಯೆಗೆ ಯತ್ನಿಸಿದೆ . ಈ ಬಗ್ಗೆ ಆತ್ಮಹತ್ಯೆ ಗೆ ಯತ್ನಿಸಿ ಎಚ್ಚರ ತಪ್ಪುತ್ತಾ ಇರುವ ಹಂತದಲ್ಲಿ ನಾನು ಪೇಸ್ ಬುಕ್ ಮತ್ತು ವಾಟ್ಸಪ್ ಗಳಲ್ಲಿ ನನ್ನ ಸಾವಿಗೆ ಕಾರಣರಾದವರ ಬಗ್ಗೆ ಸ್ಟೇಟಸ್ ಹಾಕಿದ್ದೆ .ಇದು ಕ್ಷಣ ಮಾತ್ರದಲ್ಲಿ ಹರಡಿ ನನ್ನ ಬೆಂಬಲ ಕ್ಕೆ ನಿಂತವರು ನನ್ನ ಪ್ರಾಣ ರಕ್ಷಣೆ ಮಾಡಿದವರು ನನ್ನ ಪೇಸ್ ಬುಕ್ ಸ್ನೇಹಿತರ ವಾಟ್ಸಪ್ ಸ್ನೇಹಿತರ ಬಳಗ
ಇದನ್ನು ಮಂಗಳೂರು ಪೋಲಿಸ್ ವರಿಷ್ಠ ಅಧಿಕಾರಿ ಎಸ್ ಪಿ ಯವರಾದ ಗುಲಾಬ್ ರಾವ್ ಭೂಷಣ್ ಅವರ ಗಮನಕ್ಕೂ ತಂದರು.ತಕ್ಷಣವೇ ಪ್ರತಿಕ್ರಿಯಿಸಿದ ಅವರು ನನ್ನ ಮೊಬೈಲ್ ಗೆ ಕರೆ ಮಾಡಿದ್ದರು.ನಾನು ಆಸ್ಪತ್ರೆ ಗೆ ದಾಖಲಾಗಿ ಐಸಿಯುವಿನಲ್ಲಿದ್ದಾಗ ಬಂದ ಕರೆಯನ್ನು ಸ್ವೀಕರಿದವನು ನನ ಮಗ ಅರವಿಂದ. " ದುಡುಕಬೇಡಿ ಮರು ತನಖೆ ಮಾಡಿಸುವೆ " ಎಂಬ ಭರವಸೆಯನ್ನು ಎಸ್ ಪಿ ಅವರು ನೀಡಿದ್ದರು ಗುಣಮುಖಳಾದ ನಂತರ ಅವರನ್ನು ಭೇಟಿಮಾಡಲು ತಿಳಿಸಿದ್ದರು.
ನಾನು ಹುಷಾರಾಗಿ ಆಸ್ಪತ್ರೆ ಯಿಂದ ಬಂದ ವಾರದ ನಂತರ ಅವರನ್ನು ಮಂಗಳೂರಿನ ಕಚೇರಿಯಲ್ಲಿ ಅಳುಕುತ್ತಲೇ ಭೇಟಿಯಾದೆ .ನನಗೆ ಪೋಲಿಸ್ ವ್ಯವಸ್ಥೆ ಬಗ್ಗೆ ನಂಬಿಕೆ ಹೊರಟು ಹೋಗಿತ್ತು ಆದರೂ ಅವರು ಹೇಳಿದ್ದಕ್ಕಾಗಿ ಅವರನ್ನು ಭೇಟಿ ಮಾಡಿ ನನ್ನ ಸಮಸ್ಯೆಯನ್ನು ವಿವರಿಸಿದೆ ಸಹೃದಯಿ ಯಾದ ಅವರು ನನ್ನ ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸಿ ಅರ್ಥಮಾಡಿಕೊಂಡರು .ನನಗೆ ಬದುಕುವ ಧೈರ್ಯ ತುಂಬಿದರು .ನಂತರ ಇನ್ನೊಮ್ಮೆ ೆ ಬೇಟಿಯಾದಾಗ ನನ್ನ ಮುಂದಿನ ಪುಸ್ತಕ ಬಿಡುಗಡೆ ಯಾವಾಗ ಎಂದು ಕೇಳಿ ಮತ್ತೆ ನಾನು ಬರವಣಿಗೆ ಯಲ್ಲಿ ತೊಡಗುವಂತೆ ಪ್ರೋತ್ಸಾಹ ನೀಡಿದರು.
ಮುಂದೆ ಅವರು ನನ್ನ ದೂರಿನ ಬಗ್ಗೆ ಹೆಚ್ಚಿನ ತನಿಖೆಗೆ ಆದೇಶ ನೀಡಿದ್ದು ಮತ್ತೆ ವಿಚಾರಣೆ ನಡೆಸಿದ ಇಲಾಖೆಯ ಸಬ್ ಇನ್ಸ್ಪೆಕ್ಟರ್ ಮತ್ತೆ ಪ್ರಿನ್ಸಿಪಾಲ್ ಮೇಲೆ ಕೇಸ್ ದಾಖಲಿಸಲು ನಮ್ಮ ಇಲಾಖೆಯ ಅನುಮತಿ ಕೇಳಿ ಪತ್ರ ಬರೆದಿದ್ದಾರೆ ಅದಕ್ಕೂ ಇನ್ನೂ ಉತ್ತರ ಬಂದಿಲ್ಲ
ಈ ನಡುವೆ ಪ್ರಿನ್ಸಿಪಾಲ್ ಹೈ ಕೋರ್ಟ್ ಗೆ ಕ್ರಿಮಿನಲ್ ರಿಟ್ ಪಿಟಿ಼ಶನ್ ಸಲ್ಲಿಸಿ ಪೋಲೀಸರು ಹಾಕಿದ ಎಫ್ ಐ ಆರ್ ಅನ್ನು ರದ್ದು ಪಡಿಸಲು ಕೇಳಿದ್ದಾರೆೆ ಮತ್ತೆ ನಾನು ಮತ್ತೆ ಕಾನೂನು ಹೋರಾಟ ಮುಂದವರಿಸುವೆ
ಅದು ಏನಾದರೂ ಆಗಲಿ ಯಾವುದೇ ಒತ್ತಡಕ್ಕೆ ಮಣಿಯದೆ ನನ್ನ ಸಮಸ್ಯೆ ಅರ್ಥ ಮಾಡಿಕೊಂಡ ಎಸ್ ಪಿ ಗುಲಾಬ್ ರಾವ್ ಭೂಷಣ್ ಅವರ ಸಹೃದಯತೆಯನ್ನು ನಾನೆಂದಿಗೂ ಮರೆಯಲಾರೆ
ದೊಡ್ಡವರು ದೊಡ್ಡವರಾಗದೆ ಇದ್ದರೆ ಸಣ್ಣವರ ಬದುಕು ಅಸಹನೀಯವಾಗುತ್ತದೆ ಆದರೆ ದೊಡ್ಡವರಾದ ಎಸ್ ಪಿ ಯವರು ದೊಡ್ಡವರಾಗಿಯೇ ವರ್ತಿಸಿ ನನಗೆ ಬದುಕಿನಲ್ಲಿ ಭರವಸೆ ತುಂಬಿದ್ದಾರೆ.
ನಾನು ಈ ಬಗ್ಗೆ ಬರೆಯಬೇಕು ಎಂದು ಕೊಂಡಿದ್ದೆ ಆದರೂ ಕೇಸ್ ನಡೆಯುತ್ತಿರುವಾಗ ಬೇಡ ಎನಿಸಿ ಸುಮ್ಮನಾಗಿದ್ದೆ ಆದರೆ ನಿನ್ನೆ ಇವರಂತೆಯೇ ಸಹೃದಯ ದಕ್ಷ ಅಧಿಕಾರಿ ರವಿ ಚೆನ್ನಣ್ಣನವರ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ದ ಸಂದರ್ಶನದಲ್ಲಿ " ಪೋಲಿಸ್ ಎಂದರೆ ಭಯವಲ್ಲ ಭರವಸೆ' ಎಂದು ಹೇಳಿದ ಮಾತಿಗೆ ಪ್ರತ್ಯಕ್ಷ ನಿದರ್ಶನ ವಾಗಿ ಕಾಣುತ್ತಿರುವ ಎ ಮಂಗಳೂರು ಪೋಲಿಸ್ ವರಿಷ್ಠ ಅಧಿಕಾರಿ ಎಸ್ ಪಿ ಗುಲಾಬ್ ರಾವ್ ಭೂಷಣ್ ಅವರ ಬಗ್ಗೆ ಹೇಗೆ ತಾನೆ ಬರೆಯದಿರಲಿ ಹಾಗಾಗಿ ಬರೆದಿರುವೆ , ಜೊತೆಗೆ ಸ್ಥಳೀಯ ತುಳು ಭಾಷೆ ಸಂಸ್ಕೃತಿ ಬಗ್ಗೆ ಅವರಿಗೆ ಅಪಾರ ಅಭಿಮಾನವಿದೆ ತುಳು ಭಾಷೆ ಕಲಿಸುವ ಪುಸ್ತಕ ಇದೆಯೆ ಎಂದು ನನ್ನಲ್ಲಿ ಕೇಳಿದ್ದರು ಇದೆಯಾದರೂ ನನಗೆ ಸಿಕ್ಕಿಲ್ಲ ಹಾಗಾಗಿ ಅವರಿಗೆ ತಗೊಂಡು ಹೋಗಿ ಕೊಡಲಾಗಿಲ್ಲ
ಓದಿ ನೀವೆಲ್ಲ ಬೆಂಬಲಿಸುವಿರಿ ಎಂಬ ನಂಬಿಕೆ ಇದೆ
ಧನ್ಯವಾದಗಳು- ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ
http://shikshanaloka.blogspot.com
laxmi prasad at 21:29
Share
View my complete profile
Powered by Blogger.